ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಕ್ಕು

ಕವಿತೆ ಹಕ್ಕು ರಜನಿ ತೋಳಾರ್ ನಿನ್ನನೆನಪುಗಳ ಶಿಖರದಮೇಲೆಮನೆಯಕಟ್ಟಿರುವೆನೀಚೂರುಚೂರುಮಾಡಿದಕನಸುಗಳಚೂರುಗಳ ಮೆಟ್ಟಿಲುನೋಡಿದಾಗಲೆಲ್ಲಾಪಾದಗಳಲ್ಲಿನೆತ್ತರು! ಮಂದಹಾಸದಮರೆಯಲ್ಲಿಬಚ್ಚಿಡುವಹನಿಗಳಕತ್ತಲಲ್ಲಿಬಿಚ್ಚಿದಾಗಹೊತ್ತಿಕೊಳ್ಳುವಹಣತೆಯಪ್ರತಿಉಸಿರಿನಲ್ಲೂನಿನ್ನದೇನಗುವಿನನೆರಳು! ನಿನ್ನಬರುವಿನಹಂಬಲವೇನಿಲ್ಲ…ಈನೆನಪುಗಳಮೇಲೆಹಕ್ಕುಕೇವಲನನ್ನದಾಗಿರಲಿಎಂಬುದೊಂದೇಛಲವು! ಹಕ್ಕುಕಾಯಿದೆಗಳಜಾತ್ರೆಗೆಜೊತೆಗೊಯ್ದುಕೊಡಿಸಿಹಾಳೆತುಂಬಾಪದಗಳಕ್ಷಣದಲ್ಲೇಕಣ್ಮರೆಯಾದೆಅಂದುಉಡುಗೊರೆಯಕೊಟ್ಟು! ಪದಗಳಬೇಡಿಯಿಂದಅಕ್ಷರಗಳಬಿಡಿಸಿಬಿತ್ತಿರುವೆಬೇಲಿಸುತ್ತಲೂನಿನ್ನನೆನಪಿನಲ್ಲಿಚಿಗುರಿಕವನವಾಗಲು!

ಹಕ್ಕು Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಜ್ಯೋತಿ ಡಿ.ಬೊಮ್ಮಾ ಎಳ್ಳು ಬೆಲ್ಲ ಜೊತೆಗೆ ಬೆಸೆದುಸಮರಸದಲ್ಲಿ ಬಾಳು ಹೊಸೆದುನೀಗಲಿ ಮನದ ಮತ್ಸರಬರುವ ಹತ್ತಿರ ಹತ್ತಿರ. ಸುಗ್ಗಿಯ ಸೊಬಗಲಿ ಹಿಗ್ಗಿನಾಭರಣಕಟ್ಟಿ ಮನೆ ಮನೆಗೂ ತಳಿರು ತೋರಣಹಾಕಿ ಮನೆ ಮುಂದೆ ರಂಗವಲ್ಲಿ ಶ್ರೀಕಾರಬಂತು ಬಂತು ಊರಿಗೆ ಹಿಗ್ಗಿನ ಹರಿಕಾರ. ನವಯುಗದ ಪಥವ ಹಿಡಿದುಉತ್ತರಾಯಣ ಪಣ್ಯಕಾಲವ ಸೇರಲುಹೊಸ ಲಯಕ್ಕೆ ಬದಲಾಯಿಸಿತು ಬದುಕು ಪಥಲಭಿಸಲಿ ಸಕಲರಿಗೂ ನೆಮ್ಮದಿ ಅನವರತ. ಎಳ್ಳು ಬೆಲ್ಲ ತಿಂದು ದೂರಾಗಲಿಮನಮನದಲ್ಲೂ ಬತ್ತಿದೊಡಕುಶಾಂತಿಯಲ್ಲಿ ನೆಟ್ಟ ಹಗೆಯ ಕನಸೂಓ ಸಂಕ್ರಾಂತಿಯೆ..ನೀ ಎಂದೆಂದಿಗೂ ಶುಭವ ಒಲಿಸು. ***************************************

Read Post »

ಕಾವ್ಯಯಾನ

ನಂಟಿನ ಗುಟ್ಟು..

ಕವಿತೆ ನಂಟಿನ ಗುಟ್ಟು.. ಜ್ಯೋತಿ ಡಿ.ಬೊಮ್ಮಾ. ನೀರೆಗೂ ಸೀರೆಗೂ ಅಂಟಿದನಂಟನ್ನು ಬಲ್ಲಿರಾ..ಪಡೆದಷ್ಟು ಹೆಚ್ಚಾಗುವ ಹಂಬಲದಗುಟ್ಟೆನು ಗಮನಿಸಿದ್ದಿರಾ.. ಅಂಚು ಸೆರಗಿನ ವರ್ಣನೆಬಣ್ಣಿಸುವದೆ ಒಂದು ಕಲೆ.ಆ ವರ್ಣ ನೆ ಮುಂದೆ ಎಷ್ಟಿದ್ದರೇನುಸೀರೆಯ ಬೆಲೆ. ಎಷ್ಟು ಕೊಂಡರು ತೀರದಮನದ ಹಂಬಲ.ಇನ್ನೊಂದು ಮತ್ತೊಂದು ಎಂದುಬಯಸುವದು ಮನ ಚಂಚಲ. ಕಂಚಿ ಪಿತಾಂಬರ ರೇಷ್ಮೆಹೆಸರಿರುವವು ಅನೇಕ.ಕೆಂಪು ಹಳದಿ ಗುಲಾಬಿಗಳಲ್ಲಿಕಂಗೊಳಿಸುವದನ್ನು ನೋಡುವದೆ ಪುಳಕ. ಮೈಗೆ ಒಪ್ಪುವಂತೆ ಉಟ್ಟುಗತ್ತಿನ ಕುಪ್ಪಸ ತೊಟ್ಟುಚಿಮ್ಮುವ ನೀರಿಗೆಗಳನ್ನೆತ್ತಿಗಾಳಿಗೆ ಹಾರುವ ಸೆರಗಿಗೆ ಪಿನ್ನಿನ ಹೂ ಮುಡಿಸಿಹಂಸ ನಡಿಗೆಯಲ್ಲಿ ನಡೆವ ನೀರೆಯೆ.. ನಿನಗೂ ಸೀರೆಗೂ ಅಂಟಿದನಂಟಿನ ಗುಟ್ಟು..ಎಂಟೆದೆ ಭಂಟರಿಗೂಬಿಡಿಸಲಾರದ ಕಗ್ಗಂಟು. ***********************

ನಂಟಿನ ಗುಟ್ಟು.. Read Post »

ಇತರೆ

ಇನ್ವಿಕ್ಟಸ್ ಮತ್ತು ಮಂಡೇಲಾ

ಲೇಖನ ಇನ್ವಿಕ್ಟಸ್ ಮತ್ತು ಮಂಡೇಲಾ ರಶ್ಮಿ ಹೆಗಡೆ ಮುಂಬೈ ಕೆಲವರ ವ್ಯಕ್ತಿತ್ವ ಹಾಗೂ ಸ್ಪೂರ್ತಿದಾಯಕ ಮಾತುಗಳು,ಸಾಧಕರ ಜೀವನಗಾಥೆಗಳು,ಕೆಲವು ಪುಸ್ತಕಗಳು,ಇನ್ನು ಕೆಲವು ಕಾವ್ಯಗಳು ನಮಗೆ ಗುರುವಾಗಿ,ಆದರ್ಶದ ಚಿಲುಮೆಗಳಾಗಿ ಜೀವನದುದ್ದಕ್ಕೂ ಪ್ರೇರೇಪಿಸುತ್ತವೆ. ಕೆಲವು ಕಾವ್ಯಗಳಂತೂ ಉತ್ಕೃಷ್ಟತೆಯ ಎಲ್ಲೆಯನ್ನು ಮೀರಿ ಬೆಳೆಯುತ್ತವೆ. ಬದುಕಿನ ಅಂಕುಡೊಂಕಿನ ದಾರಿಯಲ್ಲಿ  ಹಾದಿ ತಪ್ಪದಂತೆ ಮುನ್ನಡೆಸಿ,ಸಂಕಟದ ಸಮಯದಲ್ಲಿ ಧೈರ್ಯ,ನೆಮ್ಮದಿ ನೀಡಿ ಚಿಕಿತ್ಸೆಯ ರೂಪದಲ್ಲಿ ಕಾಪಾಡುತ್ತವೆ. ಉತ್ಕೃಷ್ಟವಾದ ಸಾಹಿತ್ಯ ಹಾಗೂ ಪುಸ್ತಕಗಳು ಮನುಷ್ಯನ ಯೋಚನಾಲಹರಿಯನ್ನೇ ಬದಲಿಸಬಲ್ಲದು. ಶಬ್ದಗಳು ಖಡ್ಗಕ್ಕಿಂತ ಹರಿತವಾದದ್ದು ಎನ್ನುವುದು ಸತ್ಯ. ಹೀಗೆಯೇ ಒಂದು ಪುಸ್ತಕ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣ ನೀಡಿದ ಗೀತೋಪದೇಶ ಆತನಿಗೆ ಶಕ್ತಿಯಾಗಿ ಯುದ್ಧದಲ್ಲಿ ಜಯಶಾಲಿಯನ್ನಾಗಿ ಮಾಡಿತ್ತು. ಅದೇ ಭಗವತ್ಗೀತೆ ಕಲಿಯುಗದಲ್ಲಿ ಮಹಾತ್ಮಾ ಗಾಂಧೀಜಿ,ಅನಿಬೆಸಂಟ್ ,ಸ್ವಾಮಿ ವಿವೇಕಾನಂದರಂಥ ಮಹಾನ್ ವ್ಯಕ್ತಿಗಳಿಗೆ ಸಾಧನೆಯತ್ತ ದಾರಿತೋರಿದ್ದು ತಿಳಿದ ವಿಷಯ. ಕನ್ನಡದ ಭಗವತ್ಗೀತೆ ಎಂದು ಕರೆಯಲ್ಪಡುವ ಡಿ ವಿ ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ವಂತೂ ಅದೆಷ್ಟು ಜನರ ಮನಸ್ಸಿಗೆ ನೆಮ್ಮದಿ ನೀಡಿದೆ ಎಂದು ಹೇಳತೀರದು. ಹೀಗೆಯೇ ಒಂದು ಕಾವ್ಯ ನೆಲ್ಸನ್ ಮಂಡೇಲಾ ಅವರ ಜೀವನಕ್ಕೆ ದಾರಿದೀಪವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ,ಬಹುಜಾತಿ ಸಮಾನತೆಯ ಬಗ್ಗೆ ಸ್ವತಃ ಶಿಕ್ಷಣ ನೀಡಿದವರು ಮಂಡೇಲಾ. ಅವರು ತಮ್ಮ ಜೀವನದ ಕಾಲುಭಾಗಕ್ಕಿಂತ ಹೆಚ್ಚು ಸಮಯವನ್ನು,ಅಂದರೆ ಸತತವಾಗಿ ಇಪ್ಪತ್ತೇಳು ವರ್ಷ ವಿವಿಧ ಜೈಲುಗಳಲ್ಲಿಯೇ ಕಳೆದರು. 1961ರಲ್ಲಿ ವರ್ಣಭೇದ ಚಳುವಳಿ ಅಡಿಯಲ್ಲಿ ಮೊದಲಬಾರಿಗೆ ಬಂಧಿತರಾದ ಮಂಡೇಲಾರನ್ನು ಖುಲಾಸೆಗೊಳಿಸಿದ್ದರೂ,ಅಕ್ರಮವಾಗಿ ದೇಶತೊರೆದರೆಂಬ ಕಾರಣಕ್ಕೆ ದೋಷಿಯನ್ನಾಗಿಸಿ 1962ರಲ್ಲಿ ಮತ್ತೆ ಬಂಧಿಸಿ ಕೇಪ್ ಟೌನ್ ಹಾಗೂ ಟೇಬಲ್ ಮೊಂಟೆನಿನ ಸಮೀಪದ “ರಾಬಿನ್ ದ್ವೀಪ ಕಾರಾಗೃಹ”ದಲ್ಲಿ ಇರಿಸಲಾಯಿತು. ಹಾಸಿಗೆಯಂಥ  ಕನಿಷ್ಠ ಸೌಲಭ್ಯಗಳೂ ಇರದ ಚಿಕ್ಕದಾದ,ಸದಾ ಒದ್ದೆಯಾಗಿರುತ್ತಿದ್ದ ಕೋಣೆ. ಜೈಲಿನ ಬಿಳಿವರ್ಣೀಯ ಅಧಿಕಾರಿಗಳಿಂದ ಸತತವಾದ ದೈಹಿಕ ಹಾಗೂ ಮಾನಸಿಕ ಕಿರುಕುಳ,ಮಲಗಲು ಒಣ ಹುಲ್ಲಿನ ಚಾಪೆ. ಕೈದಿಗಳ ಮೇಲೆ ಒತ್ತಡ ಹೇರಿ ಗಣಿ ಕೆಲಸಮಾಡಿಸಿ, ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ಆ ಕಾರಾಗೃಹದಲ್ಲಿ ಅವರು ಕಳೆದಿದ್ದು ಸತತವಾಗಿ ಹದಿನೆಂಟು ವರ್ಷಗಳು. ಆರು ತಿಂಗಳಿಗೊಮ್ಮೆ ಮಾತ್ರ ಪತ್ರ ವ್ಯವಹಾರ ನಡೆಸುವುದಷ್ಟೇ ಅಲ್ಲದೆ, ವರ್ಷಕ್ಕೆ ಒಂದೇ ದಿನ,ಅದೂ ಸಹ ಅರ್ಧ ಘಂಟೆ ಮಾತ್ರ ಆಪ್ತರನ್ನು ಭೇಟಿಯಾಗುವ ಅವಕಾಶವಿತ್ತು. ಅಷ್ಟಾದರೂ ಅವರು ಧೃತಿಗೆಡಲಿಲ್ಲ. ಜೈಲಿನಲ್ಲಿಯೇ ಸಹ ಖೈದಿಗಳಲ್ಲೂ ಸ್ಫೂರ್ತಿ ತುಂಬಿ ನಾಗರಿಕ ಅಸಹಕಾರ ಚಳುವಳಿಯನ್ನು ಮುನ್ನಡೆಸಿದರು. ಇದು ದಕ್ಷಿಣ ಆಫ್ರಿಕಾದ ಅಧಿಕಾರಿಗಳನ್ನು ರಾಬಿನ್ ದ್ವೀಪದ ಪರಿಸ್ಥಿತಿಯನ್ನು ತೀವ್ರವಾಗಿ ಸುಧಾರಿಸುವಂತೆ ಒತ್ತಾಯಿಸಿತು. ಇದೇ ಕಾರಣಕ್ಕೆ ಅವರನ್ನು “ಪೋಲ್ಸ್ ಮೂರ್” ಜೈಲಿಗೆ, ಸ್ಥಳಾಂತರಿಸಿ ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಗೃಹಬಂಧನದಲ್ಲಿಟ್ಟರು. ಜೈಲಿನಲ್ಲಿದ್ದಾಗಲೇ ಅಂಚೆ ತರಬೇತಿ ಮೂಲಕ ಆಕ್ಸ್ಫರ್ಡ್ ನ ವೋಲ್ಸಿಹಾಲ್ ನಿಂದ ಎಲ್ ಎಲ್ ಬಿ ಪದವಿ ಪಡೆದರು. ಇಪ್ಪತ್ತೇಳು ವರ್ಷಗಳ ಸಮಯ ಹೊತ್ತುರಿಯುತ್ತಿದ್ದ ಹೋರಾಟದ ಕಿಚ್ಚನ್ನು ಮನಸಿನಲ್ಲಿ ಆರಲು ಬಿಡದೆ,ಕಾಪಾಡಿಕೊಂಡು ಹೋಗುವುದು ಸುಲಭವಲ್ಲ. ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದು ಒಂದು ಕವಿತೆ  ಎಂದರೆ ಅತಿಶಯೋಕ್ತಿಯಾಗದು. ಜೈಲಿನಲ್ಲಿದ್ದಷ್ಟು ವರ್ಷ ಅವರ ಜೊತೆಯಾಗಿ,ಗುರುವಾಗಿ,ಸ್ಪೂರ್ತಿಯಾಗಿ ನಿಂತಿದ್ದು ಹದಿನೆಂಟನೇ ಶತಮಾನದ ಕವಿಯಾಗಿದ್ದ “ವಿಲಿಯಂ ಅರ್ನೆಸ್ಟ್ ಹೆನ್ಲೇ” ಅವರ ಕವನ ‘ಇನ್ವಿಕ್ಟಸ್’. ಲ್ಯಾಟಿನ್ ಭಾಷೆಯಲ್ಲಿ ಇದರರ್ಥ “ಅಜೇಯ”ಎಂದು.  ನೆಲ್ಸನ್ ಮಂಡೇಲಾರ ಜೀವನ ಚರಿತ್ರೆ ಆಧಾರಿತ ಸಿನಿಮಾಕ್ಕೂ ಸಹ ‘ಇನ್ವಿಕ್ಟಸ್’ ಎಂದೇ ಹೆಸರಿಡಲಾಗಿತ್ತು.  ಕೆಲವೇ ಸಾಲುಗಳುಳ್ಳ ಈ ಕವನ ಅವರ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು. ತಮ್ಮ ಸಹಖೈದಿಗಳೆದುರೂ ಆ ಕವನವನ್ನು ವಾಚಿಸುತ್ತಿದ್ದ ಮಂಡೇಲಾ, ಕ್ರಮೇಣವಾಗಿ ಅವರಲ್ಲಿಯೂ ಆ ಕವಿತೆಯ ಮೂಲಕ ಹೊಸ ಸ್ಪೂರ್ತಿಯನ್ನು ತುಂಬಿದ್ದರು. ಜೈಲಿನ ಕಠಿಣ ಸಮಯದಲ್ಲೂ ಹೋರಾಟದ ಕಿಚ್ಚು ಆರದಂತೆ ಕಾಪಾಡಿಕೊಂಡು ಬಂದಿದ್ದು ಅದೇ ಪದ್ಯ. ಇನ್ವಿಕ್ಟಸ್ ಕವನದ ಕೊನೆಯ ಈ ಎರೆಡು ಸಾಲುಗಳು ಆತನಿಗೆ ಅತ್ಯಂತ ಪ್ರಭಾವ ಬೀರಿದ್ದವು. “ನನ್ನ ಅದೃಷ್ಟದ ಮುಖ್ಯಸ್ಥ ನಾನು, ನನ್ನ ಆತ್ಮದ ನಾಯಕನು ನಾನು” ಎಂದು. “ಈ ಕವಿತೆಯು ನಾನು ವೈಯಕ್ತಿಕವಾಗಿ,ಪ್ರಪಂಚದಾದ್ಯಂತದ ಅನೇಕರೊಂದಿಗೆ ವ್ಯವಹರಿಸಿ,ಪಾಲಿಸಿದ ಅನುಭವ ಹಾಗೂ ಪದಗಳ ಸಂಗ್ರಹ”ಎಂದಿದ್ದರು. ಹೋರಾಡುವ ಧೈರ್ಯ ಸೋತು ಮಲಗುತ್ತಿದೆ ಎನಿಸಿದಾಗಲೆಲ್ಲ ಎಚ್ಚರಿಸಿ,ಧೈರ್ಯ ತುಂಬಿದ್ದು ಈ ಕವಿತೆ. ಒಂದು ಬರಹ ಒಬ್ಬ ವ್ಯಕ್ತಿ,,ಸಮಾಜ ಹಾಗೂ ದೇಶದ ಮೇಲೆ ಅದೆಷ್ಟು ಪರಿಣಾಮ ಬೀರಬಲ್ಲದೆಂಬುದಕ್ಕೆ ಇದೇ ಸಾಕ್ಷಿ. ಮಂಡೇಲಾ ಮುಂದೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದು ಇತಿಹಾಸ. ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರ್ಣ ಭೇದ ನೀತಿಯ ವಿರುದ್ಧ ದನಿಯೆತ್ತಿದವರು. ಆ ಚಳುವಳಿಯನ್ನು ಅಲ್ಲಿ ಮುಂದುವರೆಸಿದ ಮಂಡೇಲಾರಿಗೆ ಆದರ್ಷವಾದವರೇ ಗಾಂಧೀಜಿ. ಇಪ್ಪತ್ತೇಳು ವರ್ಷದ ಕಾರಾಗೃಹ ಶಿಕ್ಷೆ ಮುಗಿಸಿಬಂದ ಮಂಡೇಲಾ ನಗುತ್ತಾ ಹೇಳಿದ್ದೇನು ಗೊತ್ತೇ? ” ಇಪ್ಪತ್ತೇಳು ವರ್ಷದ ಸುದೀರ್ಘ ರಜೆ ಇನ್ನು ಮುಗಿಯಿತು “ಎಂದು. ಭಾರತ ರತ್ನ,ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ,ನೊಬೆಲ್ ಶಾಂತಿ ಪುರಸ್ಕಾರಗಳಂತಹ ಅನೇಕ ಗೌರವಕ್ಕೆ ಪಾತ್ರರಾದ ಮಂಡೇಲಾ 2013 ರಂದು ತಮ್ಮ ಜೀವನ ಯಾತ್ರೆ ಮುಗಿಸಿ ಇಹಲೋಕಕ್ಕೆ ಪಯಣಿಸಿದರು. ಪುಸ್ತಕಗಳು ಅತ್ಯಂತ ಶಾಂತವಾದ ಸಲಹೆಗಾರರಷ್ಟೇ ಅಲ್ಲ,ಅವು ಸ್ಥಿರವಾದ ಸ್ನೇಹಿತರು ಕೂಡ. ಜೀವನದ ಎಲ್ಲಾ ಸಂಬಂಧಗಳು ನಮ್ಮಿಂದ ದೂರವಾದಾಗ ಸದಾ ಜೊತೆಗಿರುವ ಆತ್ಮೀಯ ಬಂಧುವೆಂದರೆ ಅದು ಪುಸ್ತಕ ಮಾತ್ರ. ಹಾಗೆಯೇ ನಾಲ್ಕೇ ಸಾಲುಗಳುಳ್ಳ ಒಂದು ಕವಿತೆ ಸಾವಿರ ಅನುಭವದ ವ್ಯಕ್ತಿಗೂ ಮೀರಿ ಪ್ರಭಾವ ಬೀರಬಲ್ಲದು. ************************************************************

ಇನ್ವಿಕ್ಟಸ್ ಮತ್ತು ಮಂಡೇಲಾ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ   ವಸಾಹತುವಿನಿಂದ ಬಿಡುಗಡೆಗೆ ಭಾಷೆ ಕೊಟ್ಟವ ( ಬಸವಣ್ಣನವರ ಒಂದು ವಚನದ ಭಾಷಿಕ ವಿವೇಚನೆ ) ಕನ್ನಡ ಸಾಹಿತ್ಯ ಸಂಸ್ಕೃತದ ಪ್ರಭಾವಕ್ಕೆ ಸಿಕ್ಕು ವಸ್ತು, ರೂಪ, ಅಭಿವ್ಯಕ್ತಿಯ ಕ್ರಮದಲ್ಲಿ ಬೆಳವಣಿಗೆ ಹೊಂದಿ ಜನಸಾಮಾನ್ಯರಿಂದ ಬಹುದೂರ ನಿಂತಿದ್ದುದು ಎಲ್ಲಕಾಲದಲ್ಲಿಯೂ ಸತ್ಯವೇ ಸರಿ. ಹನ್ನೆರಡನೆಯ ಶತಮಾನದ ವಚನ ಚಳುವಳಿಯ ಸಾಹಿತ್ಯ ರೂಪ ಮತ್ತು ಅದರೊಳಗಿನ ಸಂವೇದನೆಗಳು ನೆಲದ ಬೇಡಿಕೆ, ಸದ್ಯದ ತುರ್ತಿಗೆ ಸ್ಪಂದಿಸಿ ಜನಸಾಮಾನ್ಯರ ನಾಡಿಮಿಡಿತಕ್ಕೆ ಸ್ಪಂದಿಸಿದ್ದು. ಸಂಸ್ಕೃತದ ಮಾರ್ಗ ಸಂಪ್ರದಾಯಕ್ಕೆ, ಮಹಾಕಾವ್ಯ ಪರಂಪರೆಗೆ ವಿರುದ್ಧವಾಗಿ ತನ್ನದೇ ಆದ ಕ್ರಮವನ್ನು ಕಟ್ಟಿಕೊಂಡಿರುವುದು ತಿಳಿದೇ ಇದೆ. ವಚನಗಳು ಸಾಮಾನ್ಯರಿಗೆ ಅರ್ಥವಾಗುವ ಮಟ್ಟದಲ್ಲಿರುವುದು ಅದರ ಬಹು ಮುಖ್ಯ ಅಂಶ. ಇದೇ ಮೊದಲ ಬಂಡಾಯ. ಮತ್ತು ಸಂಸ್ಕೃತಭೂಯಿಷ್ಟ ಮಾರ್ಗ ಪರಂಪರೆಗೆ ಕೊಟ್ಟ ಛಾಟಿ ಏಟಾಗಿದೆ. ವಿಷಯ ಹಸ್ತಾಂತರಕ್ಕೆ ಕಂಡುಕೊಂಡ ಸಾಹಿತ್ಯ ರೂಪ, ಬಳಸಿದ ಭಾಷೆ, ಸೂಕ್ಷ್ಮವಾದ ಪರ್ಯಾಯ ದಾರಿಯನ್ನು ನಾಡಿಗರಲ್ಲಿ ಇಂದಿಗೂ ಜಾಗೃತಗೊಳಿಸಿ ನಿಲ್ಲಿಸಿವೆ. ಪರ್ಯಾಯ ದಾರಿಯನ್ನು ಹುಟ್ಟುಹಾಕುವಲ್ಲಿ ಬಸವಣ್ಣನವರ ಪಾತ್ರ ಬಹುಮುಖ್ಯವಾದದ್ದು ಮತ್ತು ಆ ಕಾರ್ಯದ ಯಶಸ್ವಿಗೆ ಮಾರ್ಗಕ್ಕೆ ವಿರುದ್ಧವಾದ ಭಾಷೆಯನ್ನು ಬಳಸುವ ದಾರಿ ಬಸವಣ್ಣನವರ ಹಾದಿ ಓದುಗರನ್ನು ಬೆರಗಾಗಿಸುತ್ತದೆ. ಈ ವಚನವನ್ನು ಮತ್ತೊಮ್ಮೆ ಗಮನಿಸಿ. ಉಳ್ಳವರು ಶಿವಾಲಯ ಮಾಡುವರು ; ನಾನೇನ ಮಾಡವೆ ? ಬಡವನಯ್ಯಾ. ಎನ್ನ ಕಾಲೇ ಕಂಭ, ದೇಹವೇ ದೇಗುಲ, ಸಿರ ಹೊನ್ನ ಕಳಸವಯ್ಯಾ. ಕೂಡಲಸಂಗಮದೇವ, ಕೇಳಯ್ಯ; ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ೧ ಈ ವಚನ ಪ್ರಖ್ಯಾತವಾಗಿರುವುದು ‘ದೇವಾಲಯ’ಗಳ ವಿರುದ್ಧವಾಗಿ, ದೇಹವೇ ‘ದೇಗುಲ’ ಎನ್ನುವ ಗ್ರಹಿಕೆಯಿಂದ. ಸ್ಥಾವರಕ್ಕಿಂತ ಜಂಗಮ ಬಹುದೊಡ್ಡದು ಮತ್ತು ಕ್ರಿಯಾಶೀಲ, ಚಲನಶೀಲವಾದುದು ಎಂಬುದರಿಂದ. ಆ ಕಾಲದ ಪುರೋಹಿತಶಾಹಿ ಸೃಷ್ಟಿಸಿದ್ದ ವಸಾಹತುವಿನಿಂದ ಬಿಡಿಸಿಕೊಳ್ಳಲು ತಮ್ಮನ್ನು ತಾವು ಕಟ್ಟಿಕೊಳ್ಳಲು ನಿರ್ಮಿಸಿಕೊಂಡಿರುವ ಮಾರ್ಗದಿಂದ. ಇದೊಂದು ಮಹಾಮಾರ್ಗವಾಗಿ ಇಂದಿಗೂ ಜೀವಂತವಾಗಿದೆ. ಪ್ರತೀ ಕ್ಷೇತ್ರಗಳಲ್ಲಿಯೂ ಜ್ಞಾನವೆಂಬುದು ಅಮೂರ್ತ ಮತ್ತು ಸೀಮಾತೀತ. ಈ ಜ್ಞಾನವು ಭಾಷೆಯ ಮೂಲಕ ಬರುವುದೆನ್ನುವುದು. ವಸಾಹತೀಕರಣಕ್ಕೆ ಒಳಪಟ್ಟಾಗ ‘ಭಾಷೆ’ ಎನ್ನುವುದರ ಮೇಲೂ ಬಹುಸೂಕ್ಷ್ಮವಾಗಿ ಯಜಮಾನ್ಯ ಸಂಸ್ಕೃತಿಯು ಬಹುದೊಡ್ಡ ಪ್ರಭಾವ ಬೀರುತ್ತದೆ. ಕೊಟ್ಟ ಭಾಷೆಯಿಂದ ಬಿಡಿಸಿಕೊಳ್ಳುವುದು ಅಥವಾ ಅದಕ್ಕೆ ಪರ್ಯಾಯವಾದ ಭಾಷೆಯನ್ನು ಕಟ್ಟುವುದು, ಹುಟ್ಟಿಸಿಕೊಳ್ಳುವುದು ವಸಾಹತುವಿನಿಂದ ಮುಕ್ತಿರಾಗಲು ಪ್ರಮುಖವಾದ ದಾರಿಯಾಗಿದೆ. ಈ ಕೆಲಸವನ್ನು ಬಹು ಯಶಸ್ವಿಯಾಗಿ ಮತ್ತು ನೆಲದ ಕಣ್ಣಾಗಿ ಮಾಡುವಲ್ಲಿ ಬಸವಣ್ಣನವರ ಈ ವಚನ ಮಹತ್ತರವಾದ ಕಾರ್ಯ ನಿರ್ವಹಿಸಿದೆ. ಪ್ರಕೃತ ವಚನದಲ್ಲಿ ಬಸವಣ್ಣನವರಿಗಿದ್ದ ಅತೀ ಸೂಕ್ಷ್ಮ ಭಾಷಾ ಜ್ಞಾನ ಮತ್ತು ವಸಾಹತುವಿನಿಂದ ಮುಕ್ತರಾಗುವ ಹಂಬಲವಿರುವುದು ತಿಳಿಯುತ್ತದೆ. ಅವರಲ್ಲಿದ್ದ ಭಾಷಾ ಪ್ರಜ್ಞೆಯೇ ಇನ್ನೂ ಜೀವಂತವಾಗಿ ನಮ್ಮ ನಡುವೆ ಅವರನ್ನಿಟ್ಟಿರುವುದು. ವಚನದಲ್ಲಿನ ಕೆಲವು ಪದಗಳು ವಿಭಿನ್ನ ಮತ್ತು ಸೂಕ್ಷö್ಮ ಓದನ್ನು ಕೇಳುತ್ತದೆ. ಸಾಮಾನ್ಯವಾಗಿ ಎಲ್ಲರೂ ಬಳಸುವ – ಅತೀ ಮೆಚ್ಚಿರುವ ಬಸವಣ್ಣನವರ ವಚನವಿದಾದ್ದರಿಂದ ಇದರಲ್ಲಿ ವಿಶಿಷ್ಟ ಮತ್ತು ಜಾಗೃತ ಪ್ರಜ್ಞೆ ಮಾಡಿರುವ ಕಾರ್ಯವನ್ನು ನೋಡಲೇಬೇಕೆನಿಸುತ್ತದೆ.  ‘ಉಳ್ಳವರು ಶಿವಾಲಯ ಮಾಡುವರು’ ಸಾಲಿನಲ್ಲಿ  ಅಧಿಕಾರದ ಮೂಲಾಂಶವಾದ ಹಣವನ್ನು ಹೋಂದಿರುವ ಉಳ್ಳವರು ಮತ್ತು ಪೌರೋಹಿತ್ಯದ ಕೇಂದ್ರವಾದ ‘ದೇವಾಲಯ’ದ ಬಗೆಗೆ ನೇರವಾಗಿಯೇ ಮಾತುಬಂದಿದೆ. ‘ಆಲಯ’ ಎನ್ನುವುದು ಸಂಸ್ಕೃತದ ಪದವಾಗಿದ್ದು, ಸಾಮಾನ್ಯ ಸರಳ ವಾಕ್ಯದಲ್ಲಿಯೇ ಹೇಳಿದ್ದಾರೆ. ‘ನಾನೇನ ಮಾಡವೆ? ಬಡವನಯ್ಯಾ.’ ಸಾಲು ಅಸಹಾಯಕತೆಯನ್ನು ತೋಡಿಕೊಳ್ಳುವ ಹಾಗೆ ಬಂದಿದ್ದರೂ, ಕೊನೆಯ ಪದ ವಾಸ್ತವವನ್ನು ಉಳ್ಳವರ ಎದುರು ನಿಲ್ಲಿಸುವಾಗ ‘ಬಡವ’ ಎನ್ನುವ ಕನ್ನಡ ಪದವನ್ನು ಬಳಸಿದ್ದಾರೆ. ಮಾರ್ಗದ ಸಂಸ್ಕೃತ ಪದಕ್ಕೆ ವಿರುದ್ಧವಾದ ಕನ್ನಡ ಪದ ಬಳಸುವ ಮೂಲಕ ಮುಂದಿನ ಮಾತುಗಳನ್ನು ಆಡುತ್ತಿರುವುದು ಅಸಹಾಯಕತೆಯೊಂದಿಗೇ ಅದರಲ್ಲಿನ ಅನನ್ಯತೆಯನ್ನು ಸಾದರಪಡಿಸುವ ಕ್ರಮವಾಗಿದೆ. ‘ಆಲಯ’ ಪದವು ಸಂಸ್ಕೃತದ್ದಾಗಿದ್ದು ಅದಕ್ಕೆ ಪರ್ಯಾಯವಾಗಿ ಕನ್ನಡದ ‘ದೇಗುಲ’ ಎನ್ನುವುದನ್ನು, ಮತ್ತದರ ವಿನ್ಯಾಸವನ್ನು ‘ಕಾಲು’ ‘ಕಂಭ’ ‘ದೇಹ’ ಎನ್ನುವ ಕನ್ನಡ ಪದವನ್ನು ಬಳಸಿರುವುದೇ ವಿಶೇಷವಾಗಿದೆ. ಸಂಸ್ಕೃತದ ‘ಶಿರ’ ಕ್ಕೆ ವಿರುದ್ಧವಾಗಿ ಕನ್ನಡದ ‘ಸಿರ’ ಎನ್ನುವುದನ್ನೂ, ‘ಕಳಶ’ ಕ್ಕೆ ಪರ್ಯಾಯವಾಗಿ ‘ಕಲಸ’ ಎನ್ನುವ ಪದವನ್ನು ಬಳಸಿ ಕಟ್ಟಿರುವ ಪ್ರತಿಮೆ ಏಕಕಾಲದಲ್ಲಿ ಭಾಷಿಕವಾಗಿಯೂ-ಆಚರಣೆಯಲ್ಲಿಯೂ ಯಜಮಾನ್ಯ ಸಂಸ್ಕೃತಿಗೆ ವಿರುದ್ಧವಾಗಿ ಕಟ್ಟಿರುವ ಸಂಕಥನವನ್ನು ಒಡೆಯುತ್ತಿರುವ ಮಹತ್ತರವಾದ ಹಾದಿಯನ್ನು ತಿಳಿಸುತ್ತಿದೆ. ಬಸವಣ್ಣನವರ ಅಂಕಿತದಲ್ಲಿಯೂ ಮೊದಲ ಪದ ‘ಕೂಡಲ’ ಎನ್ನುವುದು ಕನ್ನಡ ಪದವೇ ಆಗಿದ್ದು ‘ದೇವ’ ಎನ್ನುವುದನ್ನು ಹೇಳುತ್ತ ಹಿಂದಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವುದನ್ನು ತಳ್ಳಿಹಾಕುವ ಹಾಗೆ ಅನಿಸುತ್ತದೆ. ಪರ್ಯಾಯ ಸಂಸ್ಕೃತಿಯ ವಕ್ತಾರರಂತಿರುವ ಬಸವಣ್ಣನವರು ಏನು ಮಾಡಬೇಕಿತ್ತೋ ಯಶಸ್ವಿಯಾಗಿ ಮೊದಲು ಭಾಷೆಯ ಮೂಲಕವೇ ಮಾಡಿಬಿಟ್ಟಿದ್ದಾರೆ. ಇಲ್ಲಿನ ‘ನಾನೇನ ಮಾಡಲಿ ಬಡವನಯ್ಯಾ’ ಎನ್ನುವ ಸಾಲು ಒಂದರ್ಥದಲ್ಲಿ ವಚನದ ವ್ಯಂಗ್ಯಧ್ವನಿಯನ್ನು ಹೊರಹೊಮ್ಮಿಸಿ ಬಸವಣ್ಣ ಹುಸಿನಗುವಂತೆನಿಸುತ್ತಿದೆ. ‘ಬಡವನಯ್ಯಾ’ ಪದವು ತನ್ನ ಅರ್ಥ ಸಾಧ್ಯತೆಯನ್ನೇ ಕುಗ್ಗಿಸಿಕೊಂಡು ಹಿನ್ನಲೆಗೆ ಉಳಿಯುವಂತೆನಿಸುತ್ತದೆ. ಕೊನೆಯ ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!’ ಸಾಲಿನಲ್ಲಿ ತಮ್ಮ ಉದ್ದೇಶವನ್ನು ವಾಚ್ಯವಾಗಿ ಸ್ಪಷ್ಟಪಡಿಸುವಲ್ಲಿ ಮತ್ತು ಯಜಮಾನ್ಯಕ್ಕೆ ನೇರವಾಗಿ ಉತ್ತರಿಸುವಲ್ಲಿ ಬಸವಣ್ಣ ಬಳಸಿರುವ, ಅನುಸರಿಸಿದ್ದ ‘ಜಂಗಮ’ ಸ್ಥಿತಿಯನ್ನು ‘ಸ್ಥಾವರ’ ಕ್ಕೆ ವಿರುದ್ಧವಾಗಿ ನಿಲ್ಲಿಸಿ ಬೆರಗಾಗಿಸುತ್ತಾರೆ. ‘ಉಂಟು’ ಮತ್ತು ‘ಇಲ್ಲ’ ಎನ್ನುವ ಎರಡು ವೈರುಧ್ಯಗಳು ಏಕಕಾಲದಲ್ಲಿ ಮತ್ತು ಒಂದಾದನಂತರ ಮತ್ತೊಂದು ಸಮಾನಾಂತರವಾಗಿ ಬಂದಿದ್ದು, ಕೊನೆಗೆ ಇಲ್ಲ ಎನ್ನುವುದು ಓದಿನ ಕೊನೆಯಲ್ಲಿ ಉಳಿಯುತ್ತದೆ. ಮತ್ತದ ಶಾಶ್ವತವಾದ ಸತ್ಯದ ಅವರ ಗ್ರಹಿಕೆಯನ್ನು ಸಾದರಪಡಿಸುತ್ತಿದೆ. ಸಂಸ್ಕೃತದ ಶಬ್ಧಗಳನ್ನೇ ಜಾಗಗಳಲ್ಲಿ ಬಳಸಿದ್ದರೆ ಪರ್ಯಾಯ ಸಂಸ್ಕೃತಿಯ ಅನಾವರಣದ ದಾರಿ ಎನ್ನುವುದನ್ನು ಮಾತನಾಡುವುದಾಗುತ್ತಲೇ ಇರಲಿಲ್ಲ. ಮತ್ತು ಇಷ್ಟೆಲ್ಲಾ ಸೂಕ್ಷ್ಮತೆ ವಚನಕ್ಕೆ ಬರುತ್ತಿರಲಿಲ್ಲವೆಂದೇ ಹೇಳಬಹುದು. ಬರಹಗಾರನೊಬ್ಬನಿಗೆ ಪ್ರಮುಖವಾದ ಎರಡು ನೆಲೆಯೆನಿಸುವುದು ‘ಆಯ್ಕೆ’ ‘ಪ್ರತ್ಯೇಕತೆ’ಗಳನ್ನು ಶೋಧಿಸುವ ಮತ್ತು ಸೃಜಿಸಿಕೊಳ್ಳುವ ಸ್ಥಿತಿ. ‘ಆಯ್ಕೆ’ಯೆನ್ನುವುದು ‘ಅಸ್ಥಿತ್ವ’ದ ಸ್ಥಿತಿ ಮತ್ತು ದಾರಿ, ಜೀವಂತವಾಗಿಡುವಲ್ಲಿ ಸ್ಥಿತಿ. ಇದನ್ನು ಕೈಗೊಳ್ಳುವ ಸಮಯದಲ್ಲಿ ಚಳುವಳಿಯ ಮುನ್ನೆಲೆಯಲ್ಲಿರುವ ನೇತಾರನೊಬ್ಬ ಅನುಸರಿಸಬೇಕಾದ ‘ಜಾಗೃತತೆ’ ಮತ್ತು ‘ನಿಖರತೆ’ ಬಸವಣ್ಣವರಲ್ಲಿದೆ. ಮತ್ತೊಂದು ‘ಪ್ರತ್ಯೇಕತೆ’ಯ ಪ್ರಶ್ನೆ ವಸಾಹತು ಸೃಜಿಸುವ ‘ಸಂಸ್ಥೆ’ಯಿಂದ ತಮ್ಮನ್ನು ಹೊರಗಿಟ್ಟು ನೋಡಿಕೊಳ್ಳುವ ಮತ್ತು ಅಂತರ ಕಾಯ್ದುಕೊಳ್ಳುವ, ಈ ಎರಡು ಕೆಲಸಗಳಿಂದ ನೇತಾರನಾಗಿ ಗುಂಪಿನ ಅಸ್ಥಿತ್ವಕ್ಕೆ ಹಾಕಿಕೊಟ್ಟ ದಾರಿಯಾಗಿ ಅವರ ಎಲ್ಲ ಉದ್ದೇಶಗಳನ್ನು ಏಕಕಾಲದಲ್ಲಿ ವಚನವು ತಿಳಿಸುತ್ತಿದೆ. ಆಳುವ ಮತ್ತು ಗಾಢ ಪ್ರಭಾವ ಇರುವ ಸಂಸ್ಕೃತಿ, ಭಾಷೆಗಳು ಒಂದು ಭ್ರಮೆಯಲ್ಲಿ ನಿಲ್ಲಿಸಿರುವುದು ಇಂದಿಗೂ ಸತ್ಯವೇ ಆಗಿದೆ. ಆದರೆ ಸೂಕ್ಷ್ಮಾವಾಗಿ ಮತ್ತು ಜಾಗೃತನಾಗಿರುವ ಲೇಖಕ, ಬರಹಗಾರ, ಚಿಂತಕ, ಸಾಮಾಜಿಕ ಹೋರಾಟಗಾರ ಆ ಭಾಷೆಗೆ ಪರ್ಯಾಯವಾಗಿ ಮತ್ತೊಂದನ್ನು ಅದೇ ಜಾಗದಲ್ಲಿ ನಿಲ್ಲಿಸುತ್ತಾನೆ. ಈ ಕಾರ್ಯವನ್ನು ಸೈದ್, ಫೂಕೋ, ಡೆರಿಡಾರೇ ಬಂದು ಕನ್ನಡದ ನೆಲದಲ್ಲಿ ಹೇಳಬೇಕಾಗಿಲ್ಲ. ಆ ಕೆಲಸವನ್ನು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ಕನ್ನಡದ ನೆಲದ ಪ್ರಜ್ಞೆ ಸಾಧಿಸಿ ತೋರಿಸಿದೆ ಎನ್ನುವುದು ಅಚ್ಚರಿಯ ಜೊತೆಗೆ ಸತ್ಯವೂ ಆಗಿದೆ. ಭಾಷೆಯೊಂದನ್ನು ಬಳಸಿ ‘ಸಂಸ್ಥೆ’ಗಳು ಭ್ರಮೆಯನ್ನು ಸೃಜಿಸಿ, ಆ ಭ್ರಮೆಯಲ್ಲಿ ಸಿಲುಕಿದವರು ಕೊನೆಗೆ ಅಲ್ಲಿಯೂ ಸಲ್ಲದ – ಇಲ್ಲಿಯೂ ನಿಲ್ಲಲಾರದ ಅತಂತ್ರ ದ್ವಂದ್ವಸ್ಥಿತಿಯನ್ನು ಸೃಷ್ಟಿಸಿ ಹಾಳುಮಾಡಿಬಿಡುತ್ತವೆ.  ಸಮಾಜಿಕ ಹೋರಾಟಗಾರ, ಬರಹಗಾರ, ಲೇಖಕ ಮತ್ತು ಚಿಂತಕನ ಜೀವದ ಮತ್ತು ಅವನ ನಡೆ, ಉದ್ದೇಶಗಳನ್ನು ಪ್ರಕೃತ ವಚನವು ಶಾಶ್ವತವಾಗಿ ಸಾರುತ್ತಿದೆ. ಒಂದು ಹೋರಾಟದ ಮುನ್ನೆಲೆಯಲ್ಲಿರುವ ವ್ಯಕ್ತಿ ‘ಜೀನಿಯಸ್’ (ತಕ್ಷಣದಲ್ಲಿ ಇದಕ್ಕೆ ಪರಿಣಾಮದ ದೃಷ್ಟಿಯಿಂದ ಪರ್ಯಾಯ ಪದವನ್ನು ಬೇಕೆಂದೇ ಬಳಸುತ್ತಿಲ್ಲ) ಎನಿಸುವುದು ವಸಾಹತು ಸೃಜಿಸಿರುವ ಅಥವಾ ಕೊಟ್ಟ ಭಾಷೆಯನ್ನೇ ಬಳಸಿ ಹೋರಡುವವರನ್ನಲ್ಲ–ಅದಕ್ಕೆ ಪ್ರತಿಸ್ಪರ್ಧಿಯಾಗಿ-ವಿರುದ್ಧವಾಗಿ ಮತ್ತೊಂದನ್ನು ತನ್ನಿಂದಲೇ ತನ್ನೊಳಗಿನಿಂದಲೇ ಸೃಜಿಸುವವರನ್ನು ಮತ್ತು ಪರಿಣಾಮಕಾರಿಯಾಗಿ ಬಳಸುವವರನ್ನು ಎನ್ನುವುದನ್ನು ತಳಿದರೆ ಕನ್ನಡದ ನೆಲದ ಅಸ್ಥಿತ್ವ ಮತ್ತು ಹೋರಾಟ ಹೆಚ್ಚು ಉಜ್ವಲವಾದದ್ದು ಎನಿಸದೆ ಇರದು. ಸಮಕಾಲೀನದಲ್ಲಿ ‘ಆಯ್ಕೆ’ ಮತ್ತು ‘ಪ್ರತ್ಯೇಕತೆ’ ಯ ಸಮಸ್ಯೆಗೆ ಬಸವಣ್ಣನವರಲ್ಲಿ ಉತ್ತರ ಸಿಕ್ಕಬಹುದೆನ್ನುವುದಂತೂ ಸತ್ಯವೇ ಆಗಿದೆ.  ಈ ವಚನಕ್ಕೆ ಬೇರೆ ಪಾಂಠಾಂತರಗಳು ಎಂ. ಆರ್. ಶ್ರೀನಿವಾಸಮೂರ್ತಿ ಯವರ ‘ವಚನ ಧರ್ಮಸಾರ.೨ಬಸವನಾಳ ಶಿವಲಿಂಗಪ್ಪನವರ ‘ಬಸವಣ್ಣನವರ ಷಟ್ ಸ್ಥಲದ ವಚನಗಳು.೩ಡಾ. ಎಸ್. ವಿದ್ಯಾಶಂಕರರ ಸಂಪಾದನೆಯ ‘ಎನ್ನ ನಾ ಹಾಡಿಕೊಂಡೆ.೪ಮತ್ತು ಡಾ. ಎಂ. ಎಂ. ಕಲಬುರ್ಗಿ ಯವರ ಸಂಪಾದನೆಯ ‘ಬವಸಯುಗದ ವಚನ ಮಹಾಸಂಪುಟ’.೫ ಪುಸ್ತಕಗಳಲ್ಲಿದೆ. ಆದರೆ ಸಂ. ಶಿ. ಭೂಸನೂರುಮಠರ ಸಂಪಾದನೆಯಲ್ಲಿರುವ ಈ ಮೇಲಿನ ವಚನದ ಪಾಠಾಂತರವು ಬಸವಣ್ಣನವರ ವ್ಯಕ್ತಿತ್ವ ಮತ್ತು ಅವರ ಹೋರಾಟದ ಬದುಕನ್ನು ಸಂಪಾದಕ ಬಹುಸೂಕ್ಷ್ಮವಾಗಿ ಗಮನಿಸಿರುವುದು ತಿಳಿದುತ್ತದೆ. ಪರಾಮರ್ಶನ ಗ್ರಂಥ : ೧. ವಚನ ಸಾಹಿತ್ಯ ಸಂಗ್ರಹ. ಸಂ. ಶಿ ಭೂಸನೂರು ಮಠ. ಮೈಸೂರು ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್. ಮೈಸೂರು. ಪು ೬೨೬ (೧೯೬೫) ೨. ವಚನಧರ್ಮಸಾರ. ಎಂ. ಆರ್. ಶ್ರೀನಿವಾಸಮೂರ್ತಿ. ಪ್ರಸಾರಾಂ, ಮೈಸೂರುವಿಶ್ವವಿದ್ಯಾನಿಲಯ. ಪು ೨೪೯ (೧೯೪೪) ೩. ಬಸವಣ್ಣನವರ ಷಟ್ ಸ್ಥಲದ ವಚನಗಳು. ಬಸವನಾಳ ಶಿವಲಿಂಗಪ್ಪ. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ. ಧಾರವಾಡ. ವ. ಸಂ ೮೨೦. ಪು ೨೧೬ (೧೯೫೪) ೪. ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು. ವ. ಸಂ ೮೨೦. ಪು ೬೪೮ (೨೦೧೨) ೫. ಬವಸಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು. ವ. ಸಂ ೮೨೧. ಪು ೭೪ (೨೦೧೬) ************************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

You cannot copy content of this page

Scroll to Top