ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ

ಶಪಥ

Closeup Photography of Red Plant With Water Droplets

ಹೊಸ ವರುಷಕೆ ಒಂದು
ಶಪಥವಿದೆ ಸಾಕಿ
ಮತ್ತೆಂದೂ ಎದಿರುಗೊಳ್ಳುವುದಿಲ್ಲ
ಹನಿ ಪ್ರೀತಿಗಾಗಿ
ಅಂಗಲಾಚುವುದೂ ಇಲ್ಲ
ನೀ ಸಾಗಿದ ದಾರಿಯಲ್ಲಿ
ಸಾವಿರ ಬಾರಿ ತಿರುಗಿ ತಿರಿಗಿ
ನೋಡುವುದೂ ಇಲ್ಲ

ನಿನ್ನ ನೆನಪಲಿ ಕಣ್ಣಾಲಿಗಳು
ಒಡ್ಡು ಕಟ್ಟಿ ನಿಂತರೂ,
ಥುಳುಕಿದರೂ
ತುಟಿ ಕಂಪಿಸಿದರೂ
ನಿನ್ನ ಸಂತೈಸುವಿಕೆಗೆ
ಹಾತೊರೆಯುವುದೂ ಇಲ್ಲ
ಒರಗಿದ್ದ ನಿನ್ನೆದೆಯ ನೆನೆದು
ಸಂತೈಸಿಕೊಳ್ಳುವುದು ಇಲ್ಲ
ಬಿಡು, ನಿರಾಳವಾಗಲಿ ಮನಸ್ಸು,

ಅದೆಷ್ಟೂ ಖಾಲಿತನ
ಉಸಿರು ನಿಂತ ಮೇಲೆ
ಯಾರಿಗ್ಯಾವ ಹೆಸರು?
ಹೆಣವೆಂದಷ್ಟೇ ಅಲ್ಲವೇ ಸಾಕಿ
ಈ ವರ್ಷಕೂ ಅದೇ ಶಪಥ
ನನ್ನಲ್ಲಿ ನೀನಿರುವವರೆಗೂ
ಬದುಕಬೇಕು
ಅದಮ್ಯವಾಗಿ ಪ್ರೀತಿಸಬೇಕು


About The Author

1 thought on “ಶಪಥ”

Leave a Reply

You cannot copy content of this page

Scroll to Top