ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಪತ್ರ

ಅಕ್ಷತಾ‌ ಜಗದೀಶ.

Concept,antardeshiya Patra Inland Letter Card On White Background Stock  Photo, Picture And Royalty Free Image. Image 85792324.

ನೋಡ ನೋಡುತ್ತಲೇ ಮರೆಯಾಯಿತು
ತಿಂಗಳಿಗೊಮ್ಮೆ ಬರುತ್ತಿದ್ದ ಪತ್ರ
ಲೇಖನಿ ಹಿಡಿದು
ಮಧುರ ಬಾಂಧವ್ಯ ನೆನೆದು
ಅಕ್ಷರ ಮಾಲೆಯೊಳು
ಸಂಬಂಧ ಪೋಣಿಸಿ ಬರೆದು
ಹತ್ತಿರ ಬೆಸೆಯುತ್ತಿದ್ದ ಪತ್ರ
ಈಗ ಕೇವಲ ನೆನಪು ಮಾತ್ರ!

ನೋವು ನಲಿವಿನಲ್ಲಿ ಜೋತೆಯಾಗಿದ್ದ
ಪತ್ರ…
ಬಂಧುಗಳೊಡನೆ ಬಾಂಧವ್ಯ ಬೆಸೆಯಲು
ಸೇತುವೆಯಾಗಿದ್ದ ಪತ್ರ..
ಅಗಾಧವಾದ ಮಾತುಗಳನು
ಮಿತಗೊಳಿಸಿ ವ್ಯಕ್ತಪಡಿಸುತ್ತಿದ್ದ
ಪತ್ರ..
ಈಗ ಕೇವಲ ನೆನಪು ಮಾತ್ರ!

ಎಷ್ಟೇ ಆಧುನಿಕತೆಯ ಉಪಕರಣ
ಬಂದರು
ಪತ್ರಕ್ಕೆ ಸರಿಸಮನಾಗಿ‌ ನಿಲ್ಲಲಾರರು
ನೆನಪುಗಳಲಿ ನೆನೆಪಾಗಿ
ನೆನಪನ್ನೇ‌ ನೆನಪಿಸುವ ಪತ್ರ
ಈಗ‌ ಕೇವಲ‌‌ ನೆನಪು ಮಾತ್ರ…

************************

About The Author

1 thought on “ಪತ್ರ”

Leave a Reply

You cannot copy content of this page

Scroll to Top