ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ವಾಯ್.ಜೆ.ಮಹಿಬೂಬ

red heart clip art

ಹೃದಯದಲಿ ಪ್ರೀತಿ ಅಂಕುರಿಸಿದೆ ಸಸಿಯಾಗಿಸಲು ಬಾ ಸಖಿ
ಹದವಾಗಿ ಮನಬೆರೆಸಿ ಉದಯರಾಗದಿ ನೀರೆರೆಯಲು ಬಾಸಖಿ

30 Pretty Flower Images - Best Types of Flowers for Your Garden

ಅನುಮಾನ ಸಂಶಯದ ಶೆಕೆ ಬಡಿಯದಿರಲಿ ಎಲ್ಲಿಯೂ ಇದಕೆ
ನಂಬುಗೆ ವಿಶ್ವಾಸಗಳ ರೆಕ್ಕೆ-ಪುಕ್ಕಗಳಾಗಿ ವಿಹರಿಸಲು ಬಾ ಸಖಿ

ಅನುವು-ತನುವುಗಳೆ ದಿನಮಂತ್ರಗಳಾಗಲಿ ನಮ್ಮಿಬ್ಬರ‌ ಬಾಳ್ಗೆ
ನೀನಿರುವಾಗ ಹಂಗ್ಯಾತರದು ಸತ್ಕಾಲಕೆ ಹಿತವಾಗಲು ಬಾ ಸಖಿ

ಹರಾಮಿನ ಅರಮನೆ ತೊರೆದುಬಿಡು,ಕಂಬಳಿ-ದಿನದಂಬಲಿ ಸಾಕು
ತಮಕೆ ಬೆಳಕು-ಅಹಂಗೆ ವಿರಾಮ,ನಾನು ಸಂಭ್ರಮಿಸಲು ಬಾಸಖಿ

‘ಅಜಾದ್’ಬಯಸುವುದೇನಿದೆ,ಬಯಕೆಯೂ ಅರಾಮಿನಲ್ಲಿದೆ
ಸತ್ಕರಿಸಿದವನೇ ಜಗದೊಡೆಯನಿಗೆ ಕರಮುಗಿಯಲು ಬಾಸಖಿ

***********************************************************

About The Author

Leave a Reply

You cannot copy content of this page

Scroll to Top