ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಸರೋಜಾ ಶ್ರೀಕಾಂತ್

selective focus photography of person holding cookie

ಸುರಿದ ಬೆಳದಿಂಗಳಿಗೆ ಇರುಳೆಲ್ಲ ಮಾಯವಾಗಿದೆ ಕೇಳು ಸಖ
ಬಳಿಗೆ ಕರೆವ ಸನಿಹಕ್ಕೂ ತುಸು ನಾಚಿಕೆ ಕೇಳು ಸಖ

ರಂಗೇರಿದ ಕೆನ್ನೆಗೆ ಕಾರಣವೇ ನಿನ್ನಾಗಮನ
ಒಲವರಿತ ಮುಂಗುರುಳಿಗೆ ಸ್ಪರ್ಶದ ಸಡಗರ ಕೇಳು ಸಖ

ಸದ್ದಿಲ್ಲದ ಮೌನದೊಳಗೂ ನೂರೊಂದು ಮಾತುಗಳಿವೆ
ಕಿವಿಗಪ್ಪಳಿಸುತ್ತ ಚಿತ್ತವನ್ನೆಲ್ಲ ಅಪಹರಿಸುತ್ತಿವೆ ಕೇಳು ಸಖ

ಸೋತೆನೆನ್ನುವ ಭಾವಕ್ಕೂ ನವಿರಾದ ಮಂದಹಾಸ
ಗೆಲುವಿನ ನಗೆ ನೀ ಬೀರುವಾಗ ಸೊಗಸಿದೆ ಕೇಳು ಸಖ

ನೇಸರ ಬರುವ ಮುನ್ನವೇ ಸಂಭ್ರಮಿಸಲಿ ಮತ್ತೊಂದು ಸಲ
‘ಸರೋಜ’ಳ ಅಂತರಂಗ ಪ್ರತಿಧ್ವನಿಸುತ್ತಿದೆ ಕೇಳು ಸಖ

***********************************

About The Author

1 thought on “ಗಜಲ್”

  1. ಸುಜಾತಾ ಲಕ್ಮನೆ

    ಇದು ಗಜಲ್ ನ ನಿಯಮಕ್ಕೊಳಪಟ್ಟಿಲ್ಲ!! ಗಜಲ್ ಹೇಗೆ?

Leave a Reply

You cannot copy content of this page

Scroll to Top