ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅಂದಿಗೂ- ಇಂದಿಗೂ

ನಾಗರೇಖಾ ಗಾಂವಕರ

ನಾನು ಹುಟ್ಟಿದಾಗ ಇದೆಲ್ಲ ಇರಲೇ ಇಲ್ಲ,
ಬಣ್ಣಬಣ್ಣದ ಅಂಗಿ ತೊಟ್ಟು,
ಕೇಕು ಚಾಕಲೇಟುಗಳ ಹಂಚಿರಲೇ ಇಲ್ಲ.

AN ANGLO-INDIAN REGENCY STYLE EXOTIC WOOD CRIB. | #1483563

ಅಡಿಯಿಡಲು ಕಲಿತಂತೆ ಕೋಳ್ಗಂಬಕ್ಕೆ ಕಟ್ಟಿದ
ಕಾಲಕುಣಿಕೆ ಬಿಚ್ಚಿ ಹೊರಗಡಿಯಿಟ್ಟಾಗ
ಚೂಪುಕಲ್ಲೊಂದು ಕಾಲ ಬಗೆದಾಗ
ಕಲ್ಲಿಗೆ ಎರಡೇಟು ಬಿಗಿದು
ಮತ್ತೆ ನಡೆದಾಗ ನನಗೆ
ಭಯವಾಗಿರಲಿಲ್ಲ, ನೋವೂ..

ಅಮ್ಮನ ಕೈ ತೊಟ್ಟಿಲ
ತೂಗಲೇ ಇಲ್ಲ.
ಜೋಗುಳವ ಅವಳಿಗೆಂದೂ
ಹಾಡಲಾಗಲೇ ಇಲ್ಲ,
ಹಗಳಿರುಳು ದುಡಿದ ಮೈ ಹಾಸಿಗೆ
ಕಂಡಾಗ ಬಿದ್ದದ್ದು, ಮರುದಿನ ಎದ್ದದ್ದು,
ಮತ್ತೆ ಬಗಲಿಗೇರಿದ್ದು,
ಅದೇ ಹರಕು ಬುಟ್ಟಿ, ಅದರಲ್ಲೆರಡು ರೊಟ್ಟಿ
ತುತ್ತಿನ ಚೀಲ ತುಂಬಬೇಕಿತ್ತಲ್ಲ
ಮತ್ತೆ ಗದ್ದೆ ಹಾಳೆಯ ಮೇಲೆ ಕಟ್ಟಿಟ್ಟ
ಹುಲ್ಲಿನ ಹೊರೆ ಅವಳಿಗಾಗೇ
ಕಾದಿರುತ್ತಿತ್ತಲ್ಲ,
ಆದರವಳ ಪ್ರೀತಿಯ ಬೆಚ್ಚನೆಯ ನೆರಳು
ಸದಾ ನನ್ನ ತಡುವುತ್ತಲೇ ಇತ್ತಲ್ಲಾ..

ನಾ ದೊಡ್ಡವಳಾದಾಗ, ಎದೆ ಮೂಡಿ ನಕ್ಕಾಗ
ಕೆನೆಮೊಸರು, ಬೆಲ್ಲ ಕೊಬ್ಬರಿ ಸಿಕ್ಕಲೇ ಇಲ್ಲ,
ಕಣ್ಣು ಕಿಸಿದು ನೋಡುವ ಗಂಡುಗಳು
ನಮ್ಮ ಸುತ್ತಲೂ ಇರಲೇಇಲ್ಲ.
ಅಣ್ಣಂದಿರು ಮಾವಂದಿರು ಎಂದೂ
ಬಂಧಕ್ಕೆ ಹೊರತಾಗಿ ನಡೆದುಕೊಳ್ಳಲೇ ಇಲ್ಲ.
ಪ್ರೀತಿಯ ಹಂಚುವುದರಲ್ಲಿ
ಜಿಪುಣತೆ ಇರಲಿಲ್ಲ.

ಗದ್ದೆ ಕೆಲಸದ ಹೆಣ್ಣಾಳು
ಮೇಲುದರಿ ಬಿಚ್ಚಿ ಸೊಂಟಕ್ಕೆ ಸುತ್ತಿ,
ಮೀನಖಂಡದವರೆಗೂ ಸೀರೆ ಎತ್ತಿ ದುಡಿವಾಗ
ಅವಳಂದವ ಯಾರೂ ಕದ್ದು
ನೋಡುತ್ತಿರಲಿಲ್ಲ ಕಾಣಬಾರದ್ದ
ಕಾಣುವ ಕಣ್ಣುಗಳು ಇರಲೇ ಇಲ್ಲ.

ಇಂದಿಗೆ ….
ಹೀಗೆಲ್ಲ ಇತ್ತೆಂದರೆ ನಂಬಲಾಗುವುದೇ ಇಲ್ಲ


About The Author

Leave a Reply

You cannot copy content of this page

Scroll to Top