ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಯಾಕೆ ಬಂದೆ ಸುಮ್ಮನೆ..

ಜಯಶ್ರೀ.ಭ.ಭಂಡಾರಿ.

honeybee perched on purple flower in close up photography during daytime

ನಾನು ನನ್ನ ಕನಸಿಲ್ಲದ ಜೀವನದಲ್ಲಿ
ನನ್ನ ಪಾಡಿಗೆ ಹೆಂಗೋ ಸಾಗಿದ್ದೆ
ಆರಕ್ಕೆರದ ಮೂರಕ್ಕಿಳಿಯದ ಬದುಕ ತೇರು
ಸಂಭ್ರಮ ಸಾಂಗತ್ಯ ನನಗೀಗ ಬೇಜಾರು

ಎಲ್ಲಿಂದಲೋ ನೀ ಬಂದೆ
ನಿನ್ನ ಮೇಲೆ ಒಲವಾಗಿದೆ ಎಂದೆ
ಹೇ ಸಖಿ ಇರಲಾರೆ ನೀನಿಲ್ಲದೆ
ಎನುತ ಬುಟ್ಟಿಗಟ್ಟಲೆ ಸಂದೇಶ ರವಾನಿಸಿದೆ

ಎಂದಿಗೂ ನಿನ್ನ ನೋಡದ ನನಗೆ
ಗೆಳತಿ ಎಂದೆ ಇದ್ಯಾವ ಜನ್ಮದ ಬಂಧ
ಹೀಗೂ ಒಲವು ಅರಳಬಹುದೇ ಸಂದೇಹ
ಹೆಚ್ಚು ಹೆಚ್ಚು ಪ್ರೀತಿಸುತ ಜೊನ್ನಹನಿಯಾದೆ

ಅಪರಿಚಿತ ನಾವು ಅಪರಿಮಿತ ಪ್ರೀತಿ ಸಾಧ್ಯವೇ
ಗೆಳೆಯ ನೀ ಎಂದೆ ಗೆಳತಿಯಲ್ಲ ನಾ ಎಂದೆ
ನೀ ತುಂಬಾ ಒಳ್ಳೆಯವನೇ ಆದರೂ
ಹುಟ್ಟುತ್ತಿಲ್ಲ ನಿನ್ನ ಮೇಲೆ ಅನುರಾಗ

*************************************

About The Author

Leave a Reply

You cannot copy content of this page

Scroll to Top