ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಪಥ

ಪ್ರತಿಮಾ ಕೋಮಾರ

ತನ್ನ ಪಥವ
ಬದಲಿಸುವ ನೇಸರನು
ಪಯಣಿಸುವ ಇಂದು
ಹೊಸ ದಿಕ್ಕಿನೆಡೆಗೆ
ಇದು ಭೂವಿಯಲ್ಲಿ
ಉತ್ತರಾಯಣದ ಶುಭ ಘಳಿಗೆ 

ಬೆಳೆದ ಫಸಲುಗಳು
ಹಟ್ಟಿಯನು ತುಂಬುವವು
ಕಷ್ಟದ ಪ್ರತಿಫಲಕೆ
ನಲಿವಿನ ಹಿಗ್ಗು

ಕಾಲವೇ ಹೀಗೆ
ತಿರುಗುವುದು ಚಕ್ರದಂದದಿ
ಹಾಗೇ ದುಃಖ ದುಮ್ಮಾನಗಳು
ನಿಲ್ಲಲಾರವು ಸ್ಥಿರವಾಗಿ

ದೀಘ೯ ಕತ್ತಲು ದೀಘ೯
  ಬೆಳಕ ಹರಿಸುವುದು
ಕೊರೆಯುವ ಚಳಿಯು
ನಿಧಾನಕೆ
ಬಿಸಿಯ ಅಪ್ಪುಗೆಯ
ನೀಡುವದು

ಪ್ರಕೃತಿಯ ಪರಿವತ೯ನೆ
ಸಂಕ್ರಾಂತಿ
ಬಾಳಲೂ ಆಗಲೀ ಸ – ಕ್ರಾಂತಿ
ಹಬ್ಬಲಿ ನೋವ ಎದೆಯಲ್ಲಿ
ನಲಿವು
ಆಗಲೀ ಎಲ್ಲರ ಬದುಕು ಚಿಗುರು
ಎಳ್ಳು ಬೆಲ್ಲದ ತೆರದಿ


About The Author

2 thoughts on “ಪಥ”

  1. ಈಶ್ವರ ಮೆಡ್ಲೇರಿ, ಲಕ್ಷ್ಮೇಶ್ವರ

    ಸಂಕ್ರಮಣದ ಸಂಭ್ರಮದ ಗಳಿಗೆಗೆ
    ಪದ ಸಂಪದದ ಸಮರ್ಪಕ ಕೊಡುಗೆ

Leave a Reply

You cannot copy content of this page

Scroll to Top