ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಇಬ್ಬನಿಯ ಸೆರಗು

ಶಾಂತಲಾ ಮಧು

white dandelion closeup photography

ಎಲ್ಲೆಲ್ಲಿ ನೋಡಲ್ಲಿ
ಹಸಿರ ಹಾಸಿಗೆಯಲ್ಲಿ
ಬೆಟ್ಟ ಗುಡ್ಡಗಳನಪ್ಪಿ
ನಲಿದಿಹಳು ನಗುತಿಹಳು
ನಸುನಾಚಿ ದಂತಿಹಳು
ಲಾವಣ್ಯ ತೋರಿಹಳು
ಮುಟ್ಟಿದರೆ ಮಾಯೆ
ತಟ್ಟಿದರೆ ನೀರು
ಕಣ್ಣುಮುಚ್ಚಾಲೆಯವಳು

ಇಬ್ಬನಿಯಸೆರಗು
ಮುಂಜಾನೆ ಮನದನ್ನೆ
ಮೈತಬ್ಬಿ ಹಸಿರಿನಲಿ
ರವಿಯು ಸ್ಪರ್ಶಕೆ ಬರಲು
ನಾಚಿ ನೀರಾಗುವಳು
ಮನತೆರೆಸಿ ಮನಕುಣಿಸಿ
ಮೈಮರೆಸಿದಾ ಮೆರಗು
ಇಬ್ಬನಿಯ ಸೆರಗು

ಭೂಮಿ ಆಕಾಶದ
ಸವಿಯನುಂಡಿಹಳು
ಅವಳು
ಸೌಂದರ್ಯ ಸೌಜನ್ಯ
ಒಲವು ಪ್ರೀತಿಯ ಸೆರಗು
ಕ್ಷಣಿಕಬದುಕಿನ ನೆನಹು
ಇಬ್ಬನೀಯ ಸೆರಗು


About The Author

Leave a Reply

You cannot copy content of this page

Scroll to Top