ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ತಥಾಗತನಿಗೊಂದು ಪದ್ಮ ಪತ್ರ ಭಾವಜೀವಿಯ ಭಾಷಾ ಚಮತ್ಕಾರಿಕ ಕವಿತೆಗಳು ತಥಾಗತನಿಗೊಂದು ಪದ್ಮ ಪತ್ರಕವನ ಸಂಕಲನಡಾ. ಆನಂದ ಋಗ್ವೇದಿಸಾಧನ ಪಬ್ಲಿಕೇಷನ್ ವೃತ್ತಿಯಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆ, ಚಿಟಗೇರಿಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಋಗ್ವೇದಿ ಅವರು ಪ್ರವೃತ್ತಿಯಿಂದ ಕವಿ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ, ಡಾ. ಜೋಳದರಾಶಿ ದೊಡ್ಡನಗೌಡ ನಾಟಕ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಕಟಿತ ಕೃತಿಗಳು – ‘ಜನ್ಮ ಮತ್ತು ಅನೂಹ್ಯ ಸಾಧ್ಯತೆ’ ಅವರ ಕಥಾಸಂಕಲನ. ‘ಊರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ. ಈ ಕವನಗಳ ಗುಚ್ಛದಲ್ಲಿ ನಾಲ್ಕು ಭಾಗಗಳಿವೆ; ಬಯಲು, ಬೆಳಕು, ಮೃದ್ವಂಗಿ ಮತ್ತು ಋತುಮಾನ. ಒಟ್ಟು ಅರವತ್ತೇಳು ಕವಿತೆಗಳು ಈ ಕೃತಿಯಲ್ಲಿವೆ. ಶೀರ್ಷಿಕೆ ಕವಿತೆ ‘ತಥಾಗತನಿಗೊಂದು ಪದ್ಮ ಪತ್ರ’ ವನ್ನು ನೋಡಿ. ‘ ನಿನಗೆ ಜ್ಞಾನೋದಯವಾಗಿತ್ತಂತೆ, ನಮಗೆಕನಿಷ್ಠ ಉದಯಿಸಲಿ ಹೊಸ ಬೆಳಕ ಕಿರಣತೊಯ್ಯಿಸಲಿ ನವ ವರ್ಷ ಧಾರೆಈ ಧಗೆ ಹಗೆ ಆರಿ ಆವರಿಸಲಿ ಶುದ್ಧ ಗಾಳಿಅಂತಃಕರಣದ ಹೊಂಬಾಳೆ ಎಂಬುದೂ ದೂರಾಸೆ!!’ ಸದಾಶಯದ ಸಾಲುಗಳು ಗಮನ ಸೆಳೆಯುತ್ತವೆ. ಒಂಟಿ ಹಕ್ಕಿಯ ಉಲಿಯದ ಕೊಕ್ಕು ಕವಿತೆಯಲ್ಲಿ –‘ಹಕ್ಕಿಗೆ ಬೇಕಿರುವುದು;ಕೊರಳ ಹಾಡ ಆಲಿಸುವ ಕಿವಿಕಣ್ಣ ಕನಸ ಕಾಯುವ ರೆಪ್ಪೆದಣಿದ ರೆಕ್ಕೆಯ ಸವರುವ ಬೆರಳುಸದಾ ಹಿಂಬಾಲಿಸುವ –ತನ್ನಂತಹುದೇ ನೆರಳು’ ಹಕ್ಕಿಗಳ ಕುರಿತು ಅದೆಷ್ಟು ಕವನಗಳು ಬಂದಿಲ್ಲ? ಆದರೆ ಇದು ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ‘ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು’ ಎಂಬ ಶೀರ್ಷಿಕೆಯೇ ಪ್ರತಿಮಾತ್ಮಕವಾಗಿದೆ. ಇದರ ಮಿಂಚಿನಂತಹ ಸಾಲುಗಳನ್ನು ನೋಡಿ.. ‘ ಬದುಕೆಂಬುದು;ರೆಪ್ಪೆ ತೆರೆದಾಗಿನಿಂದ ಮುಚ್ಚುವವರೆಗೆತೆರೆದ ಅಧ್ಯಾಯ!!’ ಬಯಲಿಗೆ ಬಾಗಿಲಿಲ್ಲ, ಕೊಳಲೂದುವುದೆಂದರೆ, ಯುದ್ಧ ಸೋತ ಯಶೋಧರ ಬದುಕಿನ ದಾರಿಯನ್ನು ಶೋಧಿಸುವ ಕವಿತೆಗಳು. ಅದರದೇ ಸಾಲುಗಳು ಹೇಳುವಂತೆ ‘ ಯುದ್ಧದಿ ಮಣ್ಣ ಗೆಲ್ಲಬಹುದಲ್ಲದೇಹೆಣ್ಣ ಗೆಲ್ಲಬಹುದೇ!?’ ಅಳು ಒಂದೇ ಜಗದ ಭಾಷೆ, ಲೀಲಾಂಮೃತ, ನಾಗರ ಪಂಚಮಿ, ಅಹಲ್ಯಾಗತ, ನೀರೆಯ ಸೆರಗು, ನೆಲದ ನಕ್ಷತ್ರ, ಮೃದ್ವಂಗಿ, ಭವತಾರಿಣಿ ಕವಿತೆಗಳು ಈ ಗುಚ್ಛದಲ್ಲಿ ನನಗೆ ಹೆಚ್ಚು ಇಷ್ಟವಾದ ಕವಿತೆಗಳು.ಬೆಳಕು – ಒಂದು ಗಜಲ್, ಮೃದ್ವಂಗಿ- ಬಿಡಿ ಕವಿತೆಗಳು ಇದೇ ಸಂಕಲನದಲ್ಲಿದ್ದು, ವಿಭಿನ್ನವಾಗಿವೆ. ಸ್ನೇಹಶೀಲ ಮನಸ್ಸಿನ ಕವಿ ಆನಂದ ಋಗ್ವೇದಿ ಅವರು ಇತ್ತೀಚಿನ ವರ್ಷಗಳಲ್ಲಿ ಆತ್ಮೀಯರಾದವರು. ಅವರ ಹಿಂದಿನ ಕೃತಿಗಳನ್ನು ಓದಲು ನನಗೆ ಸಿಕ್ಕಿರಲಿಲ್ಲ. ಈ ಹೊಸ ಕವನ ಸಂಕಲನದಲ್ಲಿ ಅವರು ಹೊಸ ಎತ್ತರವನ್ನು ಏರುವ ಎಲ್ಲ ಭರವಸೆಗಳನ್ನು ಮೂಡಿಸಿದ್ದಾರೆ. ಅಪಾರ ಓದು, ಸಂಶೋಧನೆ ಮತ್ತು ಪರಿಶ್ರಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಹೆಜ್ಜೆ ಗುರುತುಗಳನ್ನು ಛಾಪಿಸಿರುವ ಋಗ್ವೇದಿಯವರು ಮತ್ತಷ್ಟು ಬರೆಯುತ್ತಾ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಿಲಿ ಎಂಬ ಆಶಯ ನನ್ನದು.******************************** ಡಾ. ಅಜಿತ್ ಹರೀಶಿ

ಪುಸ್ತಕ ಪರಿಚಯ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ

ಗಝಲ್ Read Post »

ಕಾವ್ಯಯಾನ

ಪ್ರೀತಿ ಹೊನಲು

ಕವಿತೆ ಶ್ರೀವಲ್ಲಿ ಶೇಷಾದ್ರಿ ಮನದ ಮಾತಿನ್ನು ಮುಗಿದಿಲ್ಲ ನಲ್ಲಮೆಲ್ಲನೆದ್ದು ಯಾಮಾರಿಸ ಬೇಡನಿನ್ನೆದೆಯೊಳಗೊಂದು ಮುಳ್ಳಿನ ಪಕ್ಕಕೆಂಪು ಗುಲಾಬಿ ಗಂಧವಿದೆಯೆಂದುನೀ ಹೇಳದಿದ್ದರೂ ನಾ ಬಲ್ಲೆಗಂಡಸು ಹಾಗೆ ಬಲು ಗಡಸುಎಲ್ಲಿಂದ ಬಂದೀತು ನಯ ಸೊಗಸುಬೇಕೆಂದೆ ಮುಖ ಗಂಟಿಕ್ಕಿ ಮುನಿಸುಲಘು ಬಿಗು ಮುತ್ತುದುರಿದ ಮಾತುಕೋಪವಾರಿದಾಗ ಅಪರೂಪಕ್ಕೊಂದು ನಗುದೂರ ನಿಂತ ಬಾನಲ್ಲಿ ಮಿಂಚಂತೆಆಲಿ ಕಲ್ಲುಗಳ ಕಲ್ಲೆಂದರಾದೀತೆಧರೆ ತಬ್ಬಿದೊಡೆ ನೀರಾದಂತೆಪ್ರೀತಿ ಹೊನಲು ಹರಿವ ಬಾ ಇನಿಯ *************************

ಪ್ರೀತಿ ಹೊನಲು Read Post »

ಕಾವ್ಯಯಾನ

ಕಡಲು ಕರೆದ ಗಳಿಗೆ

ಕವಿತೆ ಕಡಲು ಕರೆದ ಗಳಿಗೆ ಪ್ರೇಮಶೇಖರ ಕಡಲ ತಡಿಯಲ್ಲೊಂದು ಗುಡಿಯ ಕಂಡುಮಿಂದು ಮಡಿಯಾಗಿ ದರ್ಶನಕ್ಕೆಂದುನಡೆದರೆಗುಡಿಯಲ್ಲಿ ದೇವತೆಇರಲಿಲ್ಲ. ಮರಳಲ್ಲಿ ದಿಕ್ಕುಮರೆತು ಕಾಲಾಡಿಸಿ,ಬೊಗಸೆ ತುಂಬಶಂಖಚಿಪ್ಪಿ ಆಯ್ದು,ಪುಪ್ಪುಸ ಪೂರ್ತಿಪಡುವಣದ ಗಾಳಿಯೆಳೆದು,ಕಣ್ಣತುಂಬಾ ನೀಲಿನೀಲಿಕಡಲನು ಆಹ್ವಾನಿಸಹೊರಟರೆಅಲ್ಲಿ ಕಂಡಳು ಅವಳು. ಮುಂಗುರುಳ ಹಾರಲು ಬಿಟ್ಟುಸೆರಗಿಗೂ ಸ್ವಾತಂತ್ರ್ಯ ಕೊಟ್ಟು,ಜತೆಗೆ ಮನಕೂ ರೆಕ್ಕೆ ಕಟ್ಟಿ,ಎತ್ತಿಕೋಎಂದು ಕಾಲಪ್ಪಿದ ಅಲೆಗಳಿಗೆಕವನ ಜೋಗುಳದ ಗುಟುಕು ಕೊಡುತ್ತಲೇಕಡಲಿಗೆ ಹಾಯಿಯೇರಿಸಿಯಾನ ಹೊರಡುವಸನ್ನಾಹದಲ್ಲಿದ್ದಳು.ನನಗೆ ದೇವತೆ ಸಿಕ್ಕಿದ್ದಳು. ಶತಶತಮಾನಗಳಿಗೊಮ್ಮೆ ಬರುವಸುಮುಹೂರ್ತ ಅದು.ಗಡಬಡಿಸಿ ಎದೆಗೂಡಲ್ಲಿ ಗುಡಿಕಟ್ಟಿ ದೇವತೆಯನುಪ್ರತಿಷ್ಟಾಪಿಸಿಬಿಟ್ಟೆ. ಇಂದು ನನ್ನೆದೆಯೊಂದುಅಗಾಧ ಕಡಲು,ಕಡಲಲ್ಲೊಂದುಬೆಳ್ಳನ್ನ ಬಿಳೀ ಹಾಯಿದೋಣಿ,ದೋಣಿಯಲ್ಲಿ ದೇವತೆ. ನನ್ನ ಉಸಿರೀಗ ಅನುದಿನವೂ ಅನಂತಕಾವ್ಯಯಾನ. ಪ್ರೇಮಶೇಖರ

ಕಡಲು ಕರೆದ ಗಳಿಗೆ Read Post »

ಕಾವ್ಯಯಾನ

ಮುಗಿಯದ ಪಯಣ

ಕವಿತೆ ಮುಗಿಯದ ಪಯಣ ವೀಣಾರಮೇಶ್ ಸಾವೇ ಕಾಡದಿರು ನನ್ನಮುಗಿದಿಲ್ಲ ಇನ್ನೂ ಬದುಕುವ ಹಲವುಕಾರಣ ಮನಸ್ಸಿಗಿದೆ ಇನ್ನೂ ದ್ವಂದ್ವಅರ್ಥ ಆಗದಮುಗ್ದ ಮನಸ್ಸುಗಳ ಜೊತೆ ಯುದ್ಧ ,.ಆಸೆ ಆಮಿಷಗಳಕತ್ತು ಹಿಸುಕಿ ಕಟ್ಟಬೇಕಿದೆನನ್ನ ಸೌಧಹೇಗೆ ಮುಗಿಯುವುದುನನ್ನ ಪಯಣನನ್ನ ಜೇಬಿನ್ನೂ ಭಣ ಭಣ ತಡಕಾಡಿದರೂ ಸಿಗದು ಕಾಂಚಾಣ ಪಾಪ ಪ್ರಜ್ಞೆಗಳು ಸುತ್ತುವರಿದು,ಮೋಸ,ಭ್ರಷ್ಟಾಚಾರ ದಿಕ್ಕು ತಪ್ಪಿಸಿಭಾವನೆಗಳೆಲ್ಲ ಸತ್ತು ಹೆಣವಾಗಿದೆ ನೀನು ಮತ್ತೆ ಕಾಡದಿರುಸಾವೇ, ನಾನಿಲ್ಲಿ ಸುಟ್ಟುಕರಕಲಾಗಿದ್ದೀನಿನನ್ನ ದಾರಿಗೆ ಅಡ್ಡ ಬರಬೇಡ ಎಲ್ಲದಕ್ಕೂಹೇಳುವೆ ಸಕಾರಣ

ಮುಗಿಯದ ಪಯಣ Read Post »

ಇತರೆ

ಪ್ರತಿಭಾ ಪಲಾಯನ ನಿಲ್ಲಲಿ

ಲೇಖನ ಪ್ರತಿಭಾ ಪಲಾಯನ ನಿಲ್ಲಲಿ ಭಾರತ ದೇಶವು ಇಡೀ ಜಗತ್ತಿನ ಭೂಪಟದಲ್ಲಿಯೇ ರಾರಾಜಮಾನವಾಗಿರಲು ಕಾರಣ ನಮ್ಮ ದೇಶದ  ಕಲೆ,ಸಾಹಿತ್ಯ,ಸಂಸ್ಕೃತಿ,ನಾಗರಿಕತೆ,ಸಹಬಾಳ್ವೆ, ಸಹಮತ, ಸಿರಿ ಸಂಪತ್ತು, ವಾಯುಗುಣ, ಅನೇಕಾನೇಕ ಸಂಪನ್ಮೂಲಗಳ ಆಗರವಾಗಿದ್ದರಿಂದಲೇ ಭಾರತ ಹೆಮ್ಮೆಯ ರಾಷ್ಟ್ರವಾಗಿ ಕಂಗೊಳಿಸುತ್ತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿರುವ ಶ್ರೇಷ್ಠ ಪ್ರತಿಭೆಗಳಿಂದ ದೇಶವು ಅನಾದಿಕಾಲದಿಂದಲೂ ಜಗದ್ವಿಖ್ಯಾತಿ ಪಡೆಯುತ್ತಾ ಬಂದಿದೆ.ಆರ್ಯಭಟ, ಶ್ರೀನಿವಾಸ ರಾಮಾನುಜನ್, ಸಿ.ವಿ.ರಾಮನ್,ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ರಂತಹ ಅನೇಕಾನೇಕ ಅಪ್ರತಿಮ ಪ್ರತಿಭೆಗಳು ಈ ದೇಶದ ಮಣ್ಣಿನ ಹೆಮ್ಮೆ.ಇವರಂತಹ ಲಕ್ಷಾಂತರ ಪ್ರತಿಭೆಗಳಿಗೆ ಭಾರತಮಾತೆ ದಿನೇ ದಿನೇ ಜನ್ಮಕೊಡುತ್ತಿದ್ದಾಳೆ.ಆದರೆ ಆ ಪ್ರತಿಭೆಗಳ ಸೇವೆ ನಮ್ಮ ರಾಷ್ಟಕ್ಕೆ ಅರ್ಪಿತವಾಗುತ್ತಿಲ್ಲ,ಸಿಗುತ್ತಿಲ್ಲ ಎನ್ನುವುದೊಂದು ದೊಡ್ಡ ದುರಂತವೇ ಸರಿ.  ಅಧಿಕೃತ ಸಮೀಕ್ಷೆಯೊಂದರ ಪ್ರಕಾರ “ಅಮೇರಿಕಾದ ಶೇ.೩೭ ವೈದ್ಯರು, ಶೇ.೩೩ ನಾಸಾ ವಿಜ್ಣಾನಿಗಳು, ಶೇ.೩೯ ರಷ್ಟು ಸಾಫ್ಟವೇರ್ ತಂತ್ರಜ್ಞರು ಭಾರತೀಯ ಸಂಜಾತರಾಗಿದ್ದಾರೆ” ಎಂಬ ಆಶ್ಚರ್ಯಕರ ವಿಷಯವು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ. ನಮ್ಮ ದೇಶದ ಈ ಪ್ರತಿಭೆಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವದರಿಂದಲೇ ಅಮೇರಿಕಾ ಬಲಾಢ್ಯ ರಾಷ್ಟ್ರವಾಗಿದೆ. ಅಮೇರಿಕಾ ಮಾತ್ರವಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಬಾರತೀಯ ಸಂಜಾತರು ತಮ್ಮ ಸೇವೆ ಸಲ್ಲಿಸುತ್ತಲಿದ್ದಾರೆ. ಮಹತ್ವದ ಈ ಸೇವೆ ನಮ್ಮ ದೇಶಕ್ಕೆ ಯಾಕಿಲ್ಲ ಎಂಬ ಪ್ರಶ್ನೆ ನಮ್ಮನ್ನೆಲ್ಲಾ  ಸಹಜವಾಗಿ ಕಾಡುತ್ತಿದೆಯಲ್ಲವೇ?  ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಒಂದು ಕಾರಣವಿರಬಹುದು. ಹಣದಾಸೆಗಾಗಿಯೋ ಅಥವಾ ಈ ದೇಶದಲ್ಲಿ ಪ್ರತಿಭೆಗಳಿಗೆ ಅವಕಾಶ ಇಲ್ಲವೆಂಬುದಕ್ಕಾಗಿಯೋ ಏನೋ ಪ್ರತಿಭೆಗಳ ಪಲಾಯನವಾಗುತ್ತಲೇ ಇದೆ.ವಿದೇಶಗಳಲ್ಲಿರುವ ಭಾರತೀಯ ಸಂಜಾತರು ಸ್ವದೇಶದಲ್ಲಿರುವ ತಮ್ಮ ಕುಟುಂಬಕ್ಕೆ ಹಣ ರವಾನೆ  ಮಾಡುವುದರಲ್ಲಿ ವಿಶ್ವದಲ್ಲಿಯೇ ನಂ.೧ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಇತ್ತಿಚೆಗೆ ಸಾಕ್ಷಿಸಮೇತ ಧೃಡಿಕರಿಸಿದೆ. ಈ ವರ್ಷವೊಂದರಲ್ಲಿಯೇ ೪೨೨೫ ಶತಕೋಟಿ ರೂ.ಗಳು ವಿದೇಶದಿಂದ ನಮ್ಮ ದೇಶಕ್ಕೆ ಬಂದಿದೆ ಎಂಬ ಅಂಶವನ್ನು ನೋಡಿದಾಗ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತಿಯ ದ್ಯೆತ್ಯ ಪ್ರತಿಭೆಗಳ ಪಲಾಯನ ಎಷ್ಟಿದೆ ಎಂಬುದು ಗೊತ್ತಾಗುತ್ತದೆಯಲ್ಲವೇ? ಈ ದೇಶದ ಪ್ರತಿಭೆಗಳು ಇಲ್ಲಿಯೇ ಸೇವೆ ಸಲ್ಲಿಸಿದರೆ ಭಾರತ ಶ್ರೀಮಂತ ರಾಷ್ಟ್ರವಾಗಿ, ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿದೆ.ಅಷ್ಟೇ ಅಲ್ಲ ಈ ದೇಶದ ಏಳ್ಗೆಗೆ ಸಹಕಾರ ಕೂಡಾ ಸಿಕ್ಕಂತಾಗುತ್ತದೆ.ಈ ನೆಲದ ಪ್ರತಿಭೆಗಳು  ಜಗತ್ತಿನಲ್ಲಿಯೇ ಶ್ರೇಷ್ಠರು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.    ಆದ್ದರಿಂದ ಸರ್ಕಾರಗಳು ಕೂಡಾ ಪ್ರತಿಭೆಗಳತ್ತ ಗಮನ ಹರಿಸಿ,ಇಲ್ಲಿಯೇ ಯೋಗ್ಯ ನೆಲೆಯನ್ನು ಕಂಡುಕೊಳ್ಳುವಂತೆ ಪ್ರೋತ್ಸಾಹಿಸಬೇಕಾಗಿದೆ.ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಹುಡುಕಿ, ಆರ್ಥಿಕವಾಗಿ ಹೆಚ್ಚಿನ ಸಹಾಯ, ಸಹಕಾರ ಕೊಟ್ಟು ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಪ್ರತಿಭಾ ಪಲಾಯನ ನಿಲ್ಲುತ್ತದೆ. ಅಂದಾಗ ಮಾತ್ರ ದೇಶದ ಆರ್ಥಿಕತೆ ಸದೃಢವಾಗಿ ಭಾರತವು ಬಲಾಡ್ಯ ರಾಷ್ಟವಾಗಿ ಹೊರಹೊಮ್ಮುತ್ತದೆ ಎಂಬುವದರಲ್ಲಿ ಸಂದೇಹವೇ ಇಲ್ಲ.ಇಂತಹ ಒಂದು ಪರಿಣಾಮಕಾರಿ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಕಾರ್ಯಕ್ಕೆ ಕೈ ಜೋಡಿಸೋಣ..!  ಒಗ್ಗಟ್ಟಾಗಿ ದೇಶದ ಹಿತ ಕಾಪಾಡೋಣ ಬನ್ನಿ….! ಎಲ್ಲರೂ ಒಂದಾಗೋಣ..! *********************************** ಶ್ರೀನಿವಾಸ. ಎನ್.ದೇಸಾಯಿ

ಪ್ರತಿಭಾ ಪಲಾಯನ ನಿಲ್ಲಲಿ Read Post »

ವಾರದ ಕವಿತೆ

ವಾರದ ಕವಿತೆ

ಕವಿತೆ ನಿದ್ದೆ ಬರುತ್ತಿಲ್ಲ! ಕಾತ್ಯಾಯಿನಿ ಕುಂಜಿಬೆಟ್ಟು ನಿದ್ದೆ ಬರುತ್ತಿಲ್ಲ!ಆದರೆ…ನಿದ್ದೆ ಮಾಡದಿದ್ದರೆಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡುಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆಹೊರಹಾದಿ ಅರಸುತ್ತ! ಆಗ…ಪಕ್ಕದಲ್ಲಿರುವ ಪುರುಷಾಕಾರಲಂಘಿಸಿ ರಾವಣನಾಗುತ್ತದೆನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!ಅಥವಾ…ಗುಟುರು ಹಾಕುತ್ತ ರಕ್ಕಸನಾಗುತ್ತದೆಹೊತ್ತೊಯ್ದು ಏಳುಕೋಟೆಯೊಳಗೆಬಂಧಿಸಿಡಲು! ನಿದ್ದೆಯೇ ಬಾರದಿದ್ದರೆನಾನು ಸೀತೆಯಾಗಬೇಕಾಗುತ್ತದೆ!ಆಗ…ಕನಸುಗಳನ್ನು ಹತ್ತುತಲೆಗಳಇಪ್ಪತ್ತು ಕಣ್ಣುಗಳುನೋಟದಲ್ಲೇ ಬೂದಿ ಮಾಡುತ್ತವೆಹತ್ತು ಮೂಗುಗಳು ಇಪ್ಪತ್ತು ಕಿವಿಗಳುಕಿಟಕಿ ಕಿಂಡಿಗಳಾಗಿಹೋದೆಯ ಪಿಶಾಚಿ ಎಂದರೆಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತಹತ್ತು ದಳಬಾಯಿಗಳುಕೋಟೆಯ ಮಹಾದ್ವಾರಗಳಾಗಿಅಶೋಕವನದ ಮರಗಳನ್ನುಹೊರದೂಡುತ್ತವೆಅವು ಎಲೆಗಳ ಕಣ್ಣುಗಳನ್ನುಗಾಳಿಗೆ ಮುಚ್ಚಿ ತೆರೆಯುತ್ತಕಣ್ಸನ್ನೆಯಲ್ಲೇಕೋಟೆಯ ಹೊರಗಿಂದಲೇಬಾ ಬಾ ಎಂದು ಬಳಿಕರೆಯುತ್ತವೆ ಶೋಕಿಸಲು ಅಶೋಕವನದಆ ಮರ ಇಲ್ಲವಾದರೆಸೀತೆ ಸೀತೆಯೇ ಅಲ್ಲ!ರಾಮರಾಮರಾಮರಾ… ಎನ್ನುತ್ತಶೋಕಿಸಲು ಹೆಣ್ಣಿಗೆರಾಮನಂಥದ್ದೇ ಮರವೂ ಬೇಕು… ಕಾರಣ!ರಾವಣನಂಥ ಕೋಟೆಯೂ… ಪರಿಣಾಮ! ಒಂದುವೇಳೆ ಸೀತೆಯಾಗದಿದ್ದರೆ…ಏಳುಸುತ್ತಿನ ಕೋಟೆಯಲ್ಲಿ ರಾಕ್ಷಸಸೆರೆಹಿಡಿದ ಅನಾಮಿಕ ರಾಜಕುಮಾರಿಯಂತೆಒಳಗೇ ಬಾಯ್ಬಿಟ್ಟು ರೋಧಿಸುತ್ತಆತ ಏಳು ಕಡಲಾಚೆ ಗಿಳಿಯೊಳಗೇ ತನ್ನ ಜೀವವನ್ನುಬಚ್ಚಿಟ್ಟು ಮೊಸಳೆಯಂತೆ ಕೋಟೆಬಾಗಿಲಲ್ಲೇ ನಿದ್ರಿಸುವಾಗನಿದ್ದೆಯೇ ಬಾರದ ನಾನುಇದುವರೆಗೂ ಕಣ್ಣಲ್ಲೇ ಕಂಡಿರದ ರಾಜಕುಮಾರನನ್ನುಕಾಯುತ್ತ ಕಂಬನಿಯ ಕಡಲಲ್ಲಿಬಂಡೆಯಂತೆ ಈಜುತ್ತಿರಬೇಕು!ಅಜ್ಜಿಯು ಬೊಚ್ಚುಬಾಯಲ್ಲಿ ಕಟ್ಟಿದ ದಂತಕತೆಯಲ್ಲಿ ಉಳಿಯುವ ನಾಸ್ತಿತ್ವದಅನಾಮಧೇಯ ಪಾತ್ರವದು! ನಿದ್ದೆಯೇ ಬಾರದಿದ್ದರೆ…ಏನಾದರೊಂದು ಆಗಲೇಬೇಕಾಗುತ್ತದೆ!ರಾಮಾಯಣದ ಸೀತೆಯಾದರೆಕೋಟೆಯಾಚಿನ ಅಶೋಕವನದಲ್ಲಿಇಡೀ ಲೋಕಕ್ಕೇ ಕಾಣುವ ಹಾಗೆರಾಮಾ ರಾಮಾ ಸೀತಾರಾಮಾ ಎಂದುಬಾಯ್ಬಿಟ್ಟು ಎದೆಬಡಿದು ರೋಧಿಸುತ್ತಮಹಾನಾರೀ ಪತಿವೃತಾಶಿರೋಮಣಿಯಂತೆಕೊರಳ ತಾಳಿ ಹೆರಳ ಚೂಡಾಮಣಿಯನ್ನುಪದೇ ಪದೇ ಕಣ್ಣಿಗೊತ್ತಿಕೊಳ್ಳುತ್ತಅಶೋಕವನದ ನೆರಳಲ್ಲಿಶೋಕ ಕವನವಾಗಬಹುದುಸೀತೆಯ ಕವನ!ಆದರೆ ಶೀರ್ಷಿಕೆ… ಸೀತಾಯಣವಲ್ಲ ರಾಮಾಯಣ!ರಾಮಾಯಣದ ಸೀತೆ… ಗಂಡು ವಾಲ್ಮೀಕಿನುಡಿಸಿದಂತೆ ನುಡಿಯುವ ಹೆಣ್ಣು ಸೀತೆ!ರಾಮನು ಗೆದ್ದ ಸೊತ್ತು ಸೀತೆ!ರಾಮಾ ರಾಮಾ ಅನ್ನುತ್ತಲೇ ಹೋಮಾಗ್ನಿ ಸುತ್ತಿಅಯೋಧ್ಯಾ ಪ್ರವೇಶಅಲ್ಲಿಂದ ವನಪ್ರವೇಶ… ಕಾಡ್ಗಿಚ್ಚು!ಅಲ್ಲಿಂದ ಲಂಕಾಗ್ನಿಅಗ್ನಿಯಿಂದ ಅರಮನೆಅರಮನೆಯಿಂದ ಕಾನನಕಾನನದಿಂದ ಅವನಿ..ಕಾವ್ಯದಿಂದ ಕಾವ್ಯ… !ಅಗ್ನಿ ತಪ್ಪುವುದೇ ಇಲ್ಲ! ಮಂಥರೆಯ ಜಲಪಾತ್ರೆಯಲ್ಲೇಚಂದ್ರನನ್ನು ಪಡೆದು ರಾಮಚಂದ್ರನಾದವನಿಗೆಬಾಳಿಡೀ ಸುಳ್ಳಲ್ಲೇ ನಿಜದ ಭ್ರಮೆ!ನಿದ್ದೆಯೇ ಬಾರದಿದ್ದರೆ…ಭ್ರಮಾಯಣವೇ ಶುರುವಾಗುತ್ತದೆ!ಸೀತೆ ಮಿಥಿಲೆಯ ಜನಕನ ನೇಗಿಲ ಬಾಯಿಗೆ ಸಿಕ್ಕುಕೊನೆಗೆ ರಾಮನ ಬದಿಯಲ್ಲಿ ಸ್ಥಾಪಿತ ಮೂರ್ತಿಯಾಗಿಸುಳ್ಳಲ್ಲೇ ನಿಜವಾಗುತ್ತಾಳೆ…ಅಶ್ವಮೇಧ ಯಾಗದ ಹೊಗೆಯಲ್ಲಿನಹುಷ ಯಯಾತಿ ಪುರುವಂಶದಯುದ್ಧ ಹಿಂಸೆಗಳ ನೆತ್ತರ ಪುಣ್ಯತೀರ್ಥದಲ್ಲಿಮಿಂದು ಗಂಗೆಯಾಗುತ್ತಾಳೆ! ನಿದ್ದೆಯೇ ಬರುತ್ತಿಲ್ಲ!ಓಹ್! ಏನಾಶ್ಚರ್ಯ! ಅಗ್ನಿ! ಅಗ್ನಿ!ವಾಲ್ಮೀಕಿ ರಾಮಾಯಣದಅಗ್ನಿಕುಂಡದ ಅಗ್ನಿದಿವ್ಯದಿಂದೆದ್ದ ಸೀತೆಯು…ಕುವೆಂಪು ರಾಮಾಯಣದರ್ಶನಂನಹೊಸದರ್ಶನದ ಅಗ್ನಿಯೊಳಗೆರಾಮನೊಂದಿಗೇ ಪ್ರವೇಶಿಸಿಅವನು ಅವಳು ಬೇಧವಳಿದುಎದೆಯ ಅಗ್ನಿಕುಂಡದಿಂದೆದ್ದು ಬಂದೇಬಿಟ್ಟರಲ್ಲ! ಅದ್ವೈತ! ಇನ್ನಾದರೂ ನಿದ್ದೆ ಮಾಡಬೇಕು!ಅಯ್ಯೋ! ನನ್ನ ಎದೆಯನ್ನೇ ಸೀಳಿಕೊಂಡು ಹೊರಹೊಮ್ಮುತ್ತಿದೆತುಂಬು ಬಸುರಿಯ ಅರಣ್ಯರೋಧನ!ರಾಮದೇವರೇ!ಉತ್ತರ ರಾಮಚರಿತಕ್ಕೆ ಉತ್ತರ?ಅಲ್ಲೇ ನಿಲ್ಲು ಸೀತೇ!ಹೆಣ್ಣಿನ ಪಾತ್ರವನ್ನು ಇನ್ನು ಹೆಣ್ಣೇ ಬರೆಯಬೇಕು! ***********************************

ವಾರದ ಕವಿತೆ Read Post »

ಕಾವ್ಯಯಾನ

ಸ್ಮಿತಾಭಟ್ ಕಾವ್ಯಗುಚ್ಛ

ಸ್ಮಿತಾಭಟ್ ಕಾವ್ಯಗುಚ್ಛ ನಿರಂತರ ಈಗೀಗ ಒಲವಾಗುವದಿಲ್ಲಅವನ ಮೇಲೆಮುನಿಸು ಕೂಡಾ,, ಹೇಗಿದ್ದೀ ಎಂದು ಕೇಳದಿರೂಕೇಳದೇ ಹೋದರೂಅಂತಹ ವ್ಯತ್ಯಾಸವೇನಿಲ್ಲ, ಸಿಡಿಮಿಡಿ ಬಹಳ-ದಿನ ಉಳಿಯುವುದಿಲ್ಲಪ್ರೀತಿ ಆಗಾಗ-ಹುಟ್ಟಿದ್ದು ಗೊತ್ತೇ ಆಗುವದಿಲ್ಲ. ಇಣುಕಿಣುಕಿ ನೋಡುವ ರಸಿಕತೆಯಿಲ್ಲತಿರುಗಿ ನೋಡುವ ಆತುರವೂ ಇಲ್ಲಉಪಸ್ಥಿತಿ ಅನುಪಸ್ಥಿತಿಯಲ್ಲಿಬದಲಾವಣೆ ಇಲ್ಲ. ಎತ್ತಿಟ್ಟ ಸಾಲೊಂದುಓದದೇ ಹೋಗುತ್ತಾನವ,ಬರೆಯದೇ ಇಟ್ಟ ಹಾಡಿಗೆರಾಗ ಹುಡುಕಿ ಗುನುಗಿಕೊಳ್ಳುವಾಗಕದ್ದು ಕೇಳುವ ನವಿರುಅರಿತೂ ಅರಿಯದೇ ಆತುಕೊಳ್ಳುವ ಬೆರಗು ನೀ ನನ್ನೊಳಗಿರುವದಕ್ಕೆನಾ ನಿನ್ನೊಳಗಿರುವದಕ್ಕೆಸಾಕ್ಷಿ ಆಗಾಗ ಸಿಗುತ್ತದೆಮತ್ತದು ಅಧಿಕಾರವೂಮಾತೊಗೆದು ಹೋಗುವಾಗ ಸಣ್ಣ ಮೌನಮರಳಿ ಬರುವಾಗ ಎಲ್ಲ ದಮನ ಸವೆದ ದಾರಿಯಲೂ ಗರಿಕೆತಲೆಯೆತ್ತುತ್ತಲೇ ಇರುತ್ತದೆ.ಸಂಪೂರ್ಣ ಸಮ್ಮೋಹನಗೊಂಡ ಹಾಡೊಂದುಆಗಾಗ ಅಪರಿಚಿತವಾಗುತ್ತಲೇ ಇರುತ್ತದೆ ನೋವುಗಳಿಗೆ ಒಡ್ಡಿಕೊಂಡಷ್ಟೂಗಟ್ಟಿಯಾಗುತ್ತೇವೆಂಬುದುನಾವೇ ಗೀಚಿದ ಬರಹಕ್ಕೆ ಶರಾ ಬರೆದಂತೆ. ಎಂದೂ ಮುಗಿಯದ ನರಳಿಕೆಗೆಅಳುವ ಮನಸಿಗೂ ಸಣ್ಣ ಅಸಹ‌ನೆಸಹಿಸಿದಷ್ಟೂ ಸಹನೆ ಜಾಸ್ತಿ ಹೌದುಸೀದು ಹೋಗಿದ್ದು ಮಾತ್ರ ಮನಸು.. ಶಾಂತ ಕೊಳದಲಿ ಕಲ್ಲೊಗೆದುಇಣುಕುವ ಪ್ರವೃತ್ತಿ ಇಂದು ನಿನ್ನೆಯದಲ್ಲ.ಮೌನ ಕೊಲ್ಲುವ ಹತ್ಯಾರ;ಮಾತು ಇರಿಯುವ ಹತ್ಯಾರ; ಹೂತಿಟ್ಟ ಕನಸಿಗೆ ಕಾಮನಬಿಲ್ಲು-ಕಟ್ಟುವಾಗ ದಟ್ಟ ಮೋಡ;ಸಿಗದ ನಕ್ಷತ್ರಕ್ಕೆ ದಿನವೂ ಎಣಿಕೆ,ಬಾವಿಯಲಿ ಬಿದ್ದ ಚಂದ್ರನಿಗೆ ಮುಗಿಯದ ಹರಕೆ. ಎತ್ತಿಟ್ಟುಕೊಂಡಿದ್ದೆಲ್ಲ ಆಪತ್ತಿನೊಳಗಿಲ್ಲ.ಆಪ್ತಭಾವದೊಳಗೆ ಬರದೇ ಹೋದದ್ದು!?ಸಹಿಸಿಕೊಂಡಿದ್ದೂ ಸಹಿತವಲ್ಲ.ಅಳತೆಗೋಲೇ ಇಲ್ಲದ ಅನಾದರಚುಕ್ಕಿ ಇಟ್ಟಾಗಲೇ ಮುಗಿದು ಬಿಡಬೇಕು ಸಾಲು. ಮುಳ್ಳು ಕಿತ್ತಮೇಲೂ ಚುಚ್ಚುವ ನೋವು,ಬೇಕಂತಲೇ ಹಾಕಿಸಿಕೊಂಡ ಹಚ್ಚೆ,ಅಳಿದೂ ಉಳುಯುವ ತೊಳಲಾಟಕೊಡವಿಕೊಳ್ಳಲೂ ಒಂದು ಘಟ್ಟಿತನ ಬೇಕು.. ಕೂಡುವ ದಾರಿ* ವಿಶಾಲವಾಗಿ ಹರಡಿದ ಮರದ ಬುಡದಲ್ಲಿದಾರಿಗಳು ಸಂದಿಸುತ್ತಿದ್ದವು.ನಿತ್ಯ ಬರುವವರೂ ಮರದ ಸುತ್ತ ಕುಳಿತುದಣಿವಾರಿಸಿಕೊಂಡು ಮುಂದುವರಿದುಸಾಗುತ್ತಿತ್ತು ದಾರಿ. ಎಷ್ಟೊಂದು ಸಮಸ್ಯೆ ಗಳನ್ನು ಕೇಳುತ್ತಿತ್ತುಆ ಮರ ಮತ್ತು ಅದಕ್ಕಾತುಕೊಂಡ ದಾರಿ! ನನಗಾಗಿ ಕಾಯುತ್ತಿದ್ದ ನೀನು.ನಿನಗಾಗಿಯೇ ಕಾಯುತ್ತಿದ್ದ ನಾನು.ಈ ಕೂಡುವ ದಾರಿಯಲಿ ಕೂಡದೇ ಸಾಗಿಸಂಧಿಸುವ ದಿನಗಳು ಹುಟ್ಟಿ ಕೊಳ್ಳಲೇ ಇಲ್ಲ!ಅಲ್ಲಿಯೇ ಹುಟ್ಟಿ ಗರಿ ಗೆದರಿದ ಭಾವಗಳಿಗೆಗೂಡಿನಲಿದ್ದ ಮೊಟ್ಟೆಯಷ್ಟು ಬೆಚ್ಚಗಿನ ಭಾವ. ಈಗಲ್ಲಿ ಕವಲುಗಳು ಬಹಳ ಒಡೆದಿದೆ.ಗುರುತುಗಳಿಗೆಲ್ಲ ತೇಪೆ ಹಾಕಿದಂತೆಮೆತ್ತಿಕೊಂಡ ಟಾರುಮರಕ್ಕೆ ಕೆತ್ತಿದ ಗೆರೆಗಳು ನಿಧಾನವಾಗಿ ಮುಚ್ಚಿತ್ತಿದೆ.ನೆಲಕ್ಕೆ ಅಂಟಿಕೊಂಡ ಮೊಟ್ಟೆಯ ಜೀವಸಂಧಿಸುವ ಕಾಲುದಾರಿಬೆನ್ನು ಮಾಡಿ ನಿಂತ ಭಾವವೃತ್ತವೊಂದು ಸುತ್ತುವರಿದುಎತ್ತ ಸಾಗಿದರೂಒಂದು ದಾರಿ ಚಾಚಿಕೊಳ್ಳುತ್ತದೆ. ಮತ್ತದರ ಗಮ್ಯನಡೆದೇ ಅರಿಯಬೇಕಿದೆ! ***************************************** , **************************************************

ಸ್ಮಿತಾಭಟ್ ಕಾವ್ಯಗುಚ್ಛ Read Post »

ಕಾವ್ಯಯಾನ

ತೇಜಾವತಿ ಕಾವ್ಯಗುಚ್ಚ

ತೇಜಾವತಿ ಕಾವ್ಯಗುಚ್ಚ ಕಾರಣ ಕೇಳದಿರಿ ನೀವು.. ! ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವುದುಃಖದ ಕಟ್ಟೆಯೊಡೆದುನೋವಿನ ಕೋಡಿಹರಿದುಕಂಬನಿಯ ಪ್ರವಾಹ ಹರಿದೀತು….! ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವುಮುಳ್ಳುಹಾಸಿನ ಮೇಲೆ ನಡೆದುಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…! ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವುತಮದ ಕೂಪದಲಿ ಮಿಂದುಕಣ್ಣೆದುರು ಹರಿದಾಡಿದ ನೆರಳು ಕಂಡುಮನಸು ಮತಿಭ್ರಮಣೆಗೆ ಒಳಗಾದೀತು.. ! ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವುಭರವಸೆಯ ಬೆಟ್ಟ ಕುಸಿದುನೆಮ್ಮದಿಯ ಕಣಿವೆ ಸವೆದುಕಂಡ ಕನಸುಗಳು ಕೊಚ್ಚಿ ಹೋದಾವು…! ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ ನಾನು? ಮೂಗಿಗೆ ಕಮ್ಮನೆ ಪರಿಮಳ ಬಂದೊಡನೆ ಬಾಯಲ್ಲಿ ನೀರೂರಿ ನಾಲಗೆ ಚಪ್ಪರಿಸಿ ನೆಕ್ಕುವರು…! ಉಪ್ಪಿನಕಾಯಿ ಊಟದ ರುಚಿಗಷ್ಟೇ ಹೊರತು ಊಟಕ್ಕಲ್ಲ..ಉಪ್ಪಿನಕಾಯಾಗಿ ನಾನಿಲ್ಲದಿದ್ದರೂ ಹೊಟ್ಟೆ ತುಂಬಾ ಉಣಬಹುದಲ್ಲದೆಊಟವೇ ಇಲ್ಲದಿದ್ದರೆ..?! ಉಪ್ಪಿನಕಾಯಾಗುವ ಕ್ಷಣಿಕ ಕೀರ್ತಿಗೆ ನಾನೇಕೆ ಭಾಜನವಾಗಲಿ..?ಒಪ್ಪತ್ತಿಗಾದರೂ ಊಟವಾಗಬೇಕು ನಾನುಉಂಡ ಕರುಳಿಗೆ ತೃಪ್ತಿ ನೀಡಬೇಕು ಬಹುಕಾಲದವರೆಗೆ. ರುಚಿಯೆಂದು ಅತಿಯಾಗಿ ಉಪ್ಪಿನಕಾಯನ್ನು ಸೇವಿಸಿದೆಯೋಬಿಪಿ ಏರುವುದು ಗ್ಯಾರಂಟಿ.ಜೊತೆಗೆ ಸರಣಿ ರೋಗರುಜಿನಗಳೂ ಫ್ರೀ.. ಬರಿದೇ ಊಟವಾದರೆಸ್ವಲ್ಪಮಟ್ಟಿಗಾದರೂ ಅರೋಗ್ಯ ವೃದ್ಧಿಸುವುದು ಮಿಂಚಿ ಮರೆಯಾಗುವ ಮಿಂಚುಹುಳಕ್ಕಿಂತಮಾಗಿದ ರಸಭರಿತ ಹಣ್ಣಾಗಬೇಕು ನಾನು..ನನ್ನ ಜೀವನ ಸಾರ್ಥಕವಾಗಬೇಕು ಖಗ ಮೃಗ ಹದ್ದು ಗಿಡುಗಗಳ ಕಾಟದ ಆರ್ಭಟದಲ್ಲಿಮಿಡಿಗಾಯಿ ಬಲಿಯುವುದಾದರೂ ಹೇಗೆ?ಹೌದು.. ನಾನೀಗ ಅವಿತು ಕೂರಲೇಬೇಕುಎಲೆಯ ಮರೆಯೊಳಗೆ ಅನಿವಾರ್ಯವಾಗಿ ಲೋಕಕ್ಕೆ ಕಣ್ಣಾಗಬೇಕಾದ ಹೆಣ್ಣಾಗಿರುವನಾನಂತೂ ಉಪ್ಪಿನಕಾಯಿ ಆಗಲಾರೆ ಬಿಡಿ..,ಹೂ ಹೀಚಾಗಿ ಕಾಯಾಗಿ ಬಲಿತುಮಾಗಿದ ಸತ್ವಯುತ ಹಣ್ಣಾಗಬಯಸುವೆರಸಪುರಿ ಮಾವು ನಾನು….. !

ತೇಜಾವತಿ ಕಾವ್ಯಗುಚ್ಚ Read Post »

ಕಾವ್ಯಯಾನ

ನಿನ್ನ ನಿರೀಕ್ಷೆಯಲ್ಲೇ..

ಕವಿತೆ ನಿನ್ನ ನಿರೀಕ್ಷೆಯಲ್ಲೇ.. ನೀ.ಶ್ರೀಶೈಲ ಹುಲ್ಲೂರು ಜೊತೆಯಿದ್ದವರೆಲ್ಲಹೋದರು ಮುಂದೆ ಮುಂದೆನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…ನೀನು ಬಂದೇ ಬರುವೆ ಎಂಬಭಾಷೆ ಇತ್ತಲ್ಲ ಹೇಗೂ.. ನಿರ್ಗಮಿಸಿದ ದಿನಕರಇಣುಕಿದ ಚಂದ್ರ ನೀಲಾಗಸದಿನಕ್ಷತ್ರಗಳೆಲ್ಲ ಸಾಕ್ಷಿಯಾದವುಮಿನುಗಿತು ಬೆಳ್ಳಿಚುಕ್ಕಿಯೂಹುಂಜಗಳೆಲ್ಲ ಕೂಗು ಹೊಡೆದವುಕೋಗಿಲೆಯ ಕುಹೂ ಕುಹೂಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ.. ದೇವ , ದೇವಲೋಕದಯೆ ತೋರಲಿಲ್ಲನಿಜಕ್ಕೂ ನೀ ಬರಲೇ ಇಲ್ಲಇಳೆಯಲಿ ಮೈದಳೆಯಿತುಹೊಸತು ಹೊಂಬೆಳಕುನಿನ್ನ ನೆನಪಲಿ ಮೊಳೆತುಕುಡಿಯೊಡೆದವು ಕಂಬನಿ ತುಂಬಿದೆದೆಯ ಶಿಖರಾಗ್ರದ ಮೇಲಿಂದಿಳಿದ ಕಣ್ಣಹನಿ ಕಣಿವೆಯ ದಾಟಿನೆಲವನಪ್ಪಿತು ಥಟ್ಟನೆಎದೆ ಮೇಲೊರಗಿದಸೆರಗಿಗೂ ತೇವ ಭಾಗ್ಯಆಗಲೂ ನೀನು ಬರಲಿಲ್ಲ ಆಗಸದಿ ಹೊಳೆಯತೊಡಗಿತು ಮಿಂಚು ಫಳಫಳನಡುಗತೊಡಗಿತುಭೂಮಿ ಬಾನು ಗಡ ಗಡಅಷ್ಟ ದಿಕ್ಕುಗಳಲೂಕಿವಿಗಡಚಿಕ್ಕುವ ಸದ್ದು ನೀರಿನ ಹನಿಗಳೊಂದಿಗೆಆಲಿಕಲ್ಲುಗಳ ಸುರಿಮಳೆಬಿರುಗಾಳಿಗೆ ನಡು ಮುರಿದುಕೊಂಡವು ಟೊಂಗೆಗಳುಆಗಲೂ ಸಹ ನಾನಿನ್ನ ನಿರೀಕ್ಷೆಯಲ್ಲೇ.. ಜೋರಾದ ಗಾಳಿ ಮಳೆಗೆಕಪ್ಪರಿಸಿ ಬೀಳತೊಡಗಿದವುನೆನೆದ ಗೋಡೆಗಳು ಧೊಪ್ಪನೆತುಂಬತೊಡಗಿತು ನೀರುಹೊಲ ಗದ್ದೆ ತೋಟಗಳಲ್ಲಿನದಿಗೂ ಪ್ರಳಯದ ಮಹಾಪೂರ ದೇವ,ದೇವಲೋಕದಯೆ ತೋರಲಿಲ್ಲ ಆಗಲೂ..ನನ್ನ ಕಾಲಡಿಯ ನೆಲಕುಸಿಯತೊಡಗಿತುಮೆಲ್ಲ ಮೆಲ್ಲಗೆ.. *************************************

ನಿನ್ನ ನಿರೀಕ್ಷೆಯಲ್ಲೇ.. Read Post »

You cannot copy content of this page

Scroll to Top