ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಮ್ಮನೆ ಬದುಕಿಬಿಡು

ಕವಿತೆ ಸುಮ್ಮನೆ ಬದುಕಿಬಿಡು ವಿಶಾಲಾ ಆರಾಧ್ಯ ಬದುಕಿ ಬಿಡಬೇಕು ಸುಮ್ಮನೆದುಮ್ಮಾನ ಬಿಗುಮಾನವಿಲ್ಲದೆಎಲ್ಲರೊಳಗೊಂದಾಗಿಯೂತಾನೇತಾನಾಗಿ ಆಕಾಶಕ್ಕೇಕೆ ಚಪ್ಪರ ..ನಿಸರ್ಗಕ್ಕೇನು ಮದುವೆಯೇ?ಇಷ್ಟಕ್ಕೂ ಮದುವೆಗೆ ಚಪ್ಪರಬೇಕೇ ಬೇಕೆಂದವರಾರು?ಮದುವೆಗೆ ಗಂಡು ಹೆಣ್ಣಿದ್ದರೆ ಸಾಕುಬೇರೆಲ್ಲಾ ಬೇಲಿಗಳ ಕಿತ್ತು ಹಾಕು ಪ್ರಕೃತಿ ಚೈತ್ರದ ಚಿಗುರೊಡನೆಮೈನೆರೆದಾಳೆ ಚಲುವೆರೆದಾಳೆಹೆಣ್ಣಿನ ಗುಣವೇ ಈ ಮಣ್ಣಿಗೂಮೈದುಂಬಿದಾಗ ಮಿಕ್ಕಿ ಎರೆವುದುಪ್ರಕೃತಿ ಸಹಜ ! ಅದಕೇಕೆ ನಿಯಮ ***************************

ಸುಮ್ಮನೆ ಬದುಕಿಬಿಡು Read Post »

ಕಾವ್ಯಯಾನ

ಮನ ನೆಡದಾಗ

ಕವಿತೆ ಮನ ನೆಡದಾಗ ರೇಶ್ಮಾಗುಳೇದಗುಡ್ಡಾಕರ್ ನಡೆಯುತ್ತ ನಡೆಯುತ್ತಾ ನಡೆದದಾರಿಯೇ ಕಾಣಲಿಲ್ಲ ಹಿಂತಿರುಗಿನೋಡಿದಾಗ ಮುಂದಿರುವ ಗೂಢಾರಣ್ಯವುನಡಿಗೆಗೆ ಧೊಳಿಪಟವಾಗಿಅವಶೇಷವೇ ಇಲ್ಲದಂತಾಗಿತ್ತು …..! ಬದುಕಿನ ಪ್ರವಾಹಕ್ಕೆ ನಿಲ್ಲದಪಯಣ ರಭಸದಿ ಹುಡುಕುತ್ತಲೆಇತ್ತು ನೆಮ್ಮದಿಯ ದಡವದಣಿವರಿಯದ ದೇಹದ ಜೊತೆಗೆಹೆಗಲಲ್ಲಿ ಭದ್ರವಾಗಿದ್ದವು ಕನಸಿನಜೋಳಿಗೆ ಒಮ್ಮೊಮ್ಮೆ ನಿಂತಲ್ಲೇ ನಿಂತು ,ಕಾದು ,ಕಾದು , ಕೆಂಡಕಿಂತಲುಬಿಸಿಯಾಗಿ ! ಎಲ್ಲ ಬೇಗುದಿಗಳನ್ನುತನ್ನೊಳಗೆ ಸುಟ್ಟು ಬೂದಿಮಾಡಿತು …… ದಿಟ್ಟತನ ನೋಡುಗರ ಎದೆಯಲ್ಲಿಭಯದ ಬುಗುರಿಯ ಆಡಿಸಿದ್ದುಕ್ಷಣ ಮಾತ್ರದಲ್ಲಿಸಂಕೋಲೆಗಳನ್ನು ಕಿತ್ತು ಒಸೆದಮೇಲೆಹೆದರುವದು ಯಾತಕ್ಕೆ ?ಭವಿಷ್ಯ ಕ್ಕೂ ,ವಾಸ್ತವಕ್ಕೂ …..ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವುಭಯದ ಭೂತಗಳು … *******************************

ಮನ ನೆಡದಾಗ Read Post »

ಕಾವ್ಯಯಾನ

ಜೋಳದ ಹೂವು

ಕವಿತೆ ಜೋಳದ ಹೂವು ಪೂಜಾ ನಾರಾಯಣ ನಾಯಕ್ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆಜೋಳದ ಹೂವೊಂದು ಮಗುವಂತೆಮನದಿಂಗಿತವ ಕೇಳುವವರಾರೆಂದುನರಳುತಿದೆ ತನ್ನೆದೆಯ ಗೂಡಲ್ಲಿರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ ಮನದಿಂಗಿತವನರುಹಲಿ?ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?ನನ್ನೆಡಗೆ ಸುಳಿಯರಾರೂಅಯ್ಯೋ, ಇದು ನನ್ನ ವಿಧಿಯೆ? ಪಾತರಗಿತ್ತಿಗೆ ಹೇಳಲೆ?ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!ಭ್ರಮರಕ್ಕೆ ತಟ್ಟಿದೆಸೂರ್ಯಕಾಂತಿಯ ಮೋಹ!ಕಣಜವನು ಕೈಬೀಸಿ ಕರೆವೆನೆಂದರೆಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!ಯಾರ ಬಳಿ ಹೇಳಲಿ ಅಡಗಿದಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,ಗೋಗರೆಯುತಿಹೆ ಸುಯ್ಲು ಸೋರದ ಹಾಗೆನುಂಗುತಿಹೆ ಒಳಗೊಳಗೆ… ಎತ್ತಲಿಂದಲೂ ಬರರ್ಯಾಕೆ ಇತ್ತ?ಕುಸುಮ-ವಾಸನೆಯ ಕಂಪಿಲ್ಲವೆಂದೆ?ಇದ್ದರೂ ಇರಬಹುದೆ ನನ್ನೊಳಗಿನಮಧುವಿಗೆ ರುಚಿಯಿಲ್ಲವೆಂದು?ಮರುಗುತಿಹ ಹೂವು ಸೇರುವುದುಹೇಗೋ ಕೊನೆಗೆ ಮೌನದಾ ಒಡಲಸಮಾಧಾನಿಸಿಕೊಂಡು ತನ್ನೆದೆಯ ಕಡಲ… ಹೋದರೇನಂತೆ, ಹೋಗಲಿ ಬಿಡಿವಯ್ಯಾರದ ಹೂವಿನೆಡೆಗೆ ಮಧು-ಕಂಪನರಸಿನಾನರಿಯದಿಹೆನೆ, ಈ ಗೆಳೆತನದ ಗುಟ್ಟ?ಹೂವು-ದುಂಬಿಯ ಆಟವಾಮಕರಂದ ಇರುವನಕಪಾತರಗಿತ್ತಿಯ ಹುಚ್ಚು,ವಯ್ಯಾರವಿರುವನಕಭ್ರಮರದಾ ಪ್ರೇಮ,ಘಮ ಘಮಿಸುತಿರುವನಕಕಣಜದಾ ಸ್ನೇಹ!ಎಲ್ಲ ತೀರಿದ ಮೇಲೆ ಉಳಿಯುವುದೆ ಮೋಹ?ಬೇರೆ ದಾರಿಯ ಹುಡುಕಲೆಲ್ಲಸನ್ನಾಹ!!        ************************************

ಜೋಳದ ಹೂವು Read Post »

ಕಾವ್ಯಯಾನ

ದೊರೆಯ ಕಿರೀಟದ ನೀಲ ಮಣಿಯಲ್ಲಿ….

ಕವಿತೆ ದೊರೆಯ ಕಿರೀಟದ ನೀಲ ಮಣಿಯಲ್ಲಿ…. ಶ್ರೀದೇವಿ ಕೆರೆಮನೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದದೊರೆಯಲ್ಲೊಂದು ಉದಾಸೀನಅನತಿ ದೂರದಲ್ಲಿ, ಕೈ ಕಟ್ಟಿವಿಧೇಯಳಾಗಿ ನಿಂತಿದ್ದಕಪ್ಪು ಬಣ್ಣದ ನಿರಾಭರಣ ಯುವತಿಯಕಡೆಗೊಂದು ದಿವ್ಯ ನಿರ್ಲಕ್ಷ ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯಸುಂದರವಾಗಿರದ್ದು ಯಾವುದೂ ಕಣ್ಣೆದುರುಕಾಣಲೇ ಬಾರದು ಎಂಬ ಹಟಎದುರಿಗಿದ್ದ ಯುವತಿಯೋಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ ದೊರೆಯ ಅಣತಿಯಂತೆ ತಲೆ ತಗ್ಗಿಸಿಮುಖ ತಿರುವಿ ಹೊರ ಹೊರಟಾಕೆಯಕಣ್ಣಲ್ಲೊಂದು ಅಬ್ಬರಿಸುವ ಕಡಲುಉಕ್ಕಿದ ನಗೆಯಲ್ಲೊಂದು ಕಡಲಲೆಗಳನೆನಪಿಸುವ ಭೋರ್ಗರೆತ ಅದೋ…ದೊರೆ ಓಡೋಡಿ ಬಂದಿದ್ದಾನೆಈಗ ತಾನೆ ಹೊರಗೆ ಹೋದಕಪ್ಪು ಕಣ್ಣಿನ ಕಪ್ಪು ಹುಡುಗಿಗಾಗಿಆಕೆ ಅಲ್ಲೆಲ್ಲೂ ಕಾಣುತ್ತಿಲ್ಲ…ಗಾಳಿಯಲ್ಲಿ ಉಪ್ಪು ನೀರಿನ ಘಮಲುಕಿವಿಯಲ್ಲಿ ಅಲೆಗಳ ಮೊರೆತಮುಗ್ಗರಿಸಿದ ದೊರೆಯ ಎದೆಯಲ್ಲೂಎಂದೂ ಇರದ ಕಡಲ ಸೆಳೆತಕಪ್ಪು ಹುಡುಗಿಯ ಕನವರಿಕೆ ಈಗ,ದೊರೆಯ ಕಿರೀಟದ ನಡುವಲ್ಲಿಜ್ವಲಿಸುವ ನೀಲ ಮಣಿಯಲ್ಲಿಕಪ್ಪು ಕಡಲಿನ ಆರ್ಭಟ…. ****************************

ದೊರೆಯ ಕಿರೀಟದ ನೀಲ ಮಣಿಯಲ್ಲಿ…. Read Post »

ಕಾವ್ಯಯಾನ

ಗೆಳೆಯರು ಹಲವರು

ಕವಿತೆ ಗೆಳೆಯರು ಹಲವರು ಮಾಲಾ.ಮಾ.ಅಕ್ಕಿಶೆಟ್ಟಿ. ಕಲಿಸುವುದು ದಿನವೂಗೆಳೆತನ ವ್ಯಾಖ್ಯೆಗಳುವಾಟ್ಸಪ್ ಫೇಸ್ ಬುಕ್ ನಲ್ಲಿ ನೋಯಿಸುವುದು ಹೀಯಾಳಿಸುವುದುಕಡೆಗಣಿಸುವುದು ಸಲ್ಲಚೂರು ಚೂರು ಹೃದಯವನ್ನಂತೂಮಾಡಬಾರದುಗಳ ಸರಮಾಲೆಯಲ್ಲಿಸಾಲು ನಿಂತ ‘ಬಾರದುಗಳು’ ಬೇಕೇ ಬೇಕು ಹಠಒಂದು ಕಾಲದಲ್ಲಿ ಗೆಳೆತನಇರದಿರೆ ನಿರುತ್ಸಾಹಸಿಗಲಿಲ್ಲ ಅಂದುಸಿಗುತ್ತಿದೆ ಇಂದುವಾಟ್ಸಪ್ ಫೇಸ್ ಬುಕ್ ನಲ್ಲಿ ಒಂಟಿತನ, ಅಸಂತೋಷಅಶಾಂತಿಯನ್ನು ಕೊಟ್ಟದೇಣಿಗೆ ಅಂದಿನ ಗೆಳೆತನದ್ದುಸುಧಾರಿಸಿದ ಗೆಳೆತನಇಗಿಂದು ನೀಗಿಸಲುಅಸಾಧ್ಯ ಆಗಿನ ಬೇಡಿಕೆಯನ್ನುಸಾಕು ಗೆಳೆತನ ಡೋಂಗಿರೂಢಿಯಾಗಿದೆ ಅವರಿಲ್ಲದಜೀವನದ ಒಂಟಿ ಪಯಣ ವ್ಯತ್ಯಾಸವಿಲ್ಲ ಇವರಇರುವಿಕೆ ಇಲ್ಲದಿರುವಿಕೆಯಾರ್ಯಾರ ಜೀವನದಲ್ಲಿಏನು, ಕುತೂಹಲವಿಲ್ಲಆತ್ಮೀಯರಲ್ಲದವರಜೊತೆ ಉತ್ಸಾಹವೆಲ್ಲಿ ನೀರೆರೆಯಲು ಬರುವರುಸತ್ತಾಗ ಬಾಯಲ್ಲಿ ಆತ್ಮೀಯರುಹೊರತು ಡೋಂಗಿಯಲ್ಲಪಾಪ ಫೋಟೋ ಶೇರ್ಮಾಡಿ ಆರ್ ಐ ಪಿ ಹೇಳುವುದುವಾಟ್ಸಪ್ ಫೇಸ್ ಬುಕ್ ನಲ್ಲಿ ನಿರೀಕ್ಷೆಯ ಅವಶ್ಯಕತೆಯಹಂಚಿ ತುಸು ಪ್ರೀತಿಯಬೇಡಿದವರಿಗೆ ದೂರಾಗುವ ಮುಂಚೆನೆನೆಬಹುದು ಸಾವಿನಾಚೆಯೂ ****************************

ಗೆಳೆಯರು ಹಲವರು Read Post »

ಕಾವ್ಯಯಾನ

ನನ್ನ ಬೆರಳುಗಳು

ಕವಿತೆ ನನ್ನ ಬೆರಳುಗಳು ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ನನ್ನ ಬೆರಳುಗಳುಗಿಡಗಳಲ್ಲಿ ಚಿಗುರುತ್ತವೆಹವಳದಂತೆ ಕೆಂಪು ಕೆಂಪುಅರಳುತ್ತವೆ ತಾವರೆಯ ಎಸಳುಗಳಂತೆಕೊಳದಲ್ಲಿ ಮೀನುಗಳಾಗಿಉಗುರುಗಳು ಕಣ್ಣುಗಳಾಗಿಕಣ್ಣು ಮಿಟುಕಿಸದೆ ದೇವರಾಗುತ್ತವೆಮಿಂಚಿನ ಗತಿಯಲ್ಲಿ ಚಲಿಸುತ್ತವೆನಾನು ಗಾಳ ಹಾಕುತ್ತೇನೆನನ್ನದೇ ಬೆರಳುಗಳಿಗೆಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿ ಮೀನುಗಳು ನೀರು ಬಿಟ್ಟೊಡನೆಮರಳಿ ಬೆರಳುಗಳಾಗುತ್ತವೆಹವಳ ಚಿಗುರುಗಳಾದತಾವರೆ ಎಸಳುಗಳಾದಕೊಳದೊಳಗೆ ಮೀನುಗಳಾದಅನುಭವಗಳನ್ನು ಬರೆಯುತ್ತವೆದೇವರಾದದ್ದನ್ನೆ ಮರೆತುಇನ್ನೇನೋ ಹೊಸತು ಆಗಲುರೆಕ್ಕೆ ಬಿಚ್ಚಿಕೊಂಡು ಹೊರಟುಬಿಡುತ್ತವೆಹೊಸತು ಆದಾಗೆಲ್ಲ ದೇವರಾದ್ದನ್ನುಬೆರಳಾದಾಗೆಲ್ಲ ಮರೆಯುತ್ತಮರಳಿ ಹೊರಡುತ್ತವೆ ಅದಕೇ…ನನ್ನ ಕವನಗಳು ದೇವರನ್ನುಮುಟ್ಟುವುದೇ ಇಲ್ಲಇನ್ನೇನು ಬೆರಳು ಆತನನ್ನುಮುಟ್ಟಿತು ಎಂಬಷ್ಟರಲ್ಲಿಅದಕ್ಕೆ ಮುಟ್ಟು ಆಗಿರುತ್ತದೆಕವನಗಳು ಹಾಳೆಗಳಲ್ಲೇಹಳತಾಗುತ್ತವೆ ನನ್ನ ಹೃದಯಒಂದು ಮೀನಾಗಿಬಿಟ್ಟಿದೆಗಾಳ ಅವನ ಕೈಯಲ್ಲಿದೆಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿಕೊಂಡು **********************

ನನ್ನ ಬೆರಳುಗಳು Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ -9 ಕನಸು ಕಲಿಸುವ ಕವಿತೆಗಳು ಆಫೀಸ್‌ನಲ್ಲಿ ದಿನವಿಡೀ ದುಡಿದು, ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿ ಮನೆಗೆ ಬಂದಾಗ, ಬಿಸಿ ಬಿಸಿ ಕಾಫಿಯ ಜತೆಗೆ ಭಾವ ಗೀತೆ ಕೇಳುತ್ತೇನೆ. ಕುದಿದು ಕೆನೆಗಟ್ಟಿದ ಮನಸ್ಸನ್ನು ತಣಿಸಿ, ತಂಪು ಐಸ್ ಕ್ರೀಂ ಮಾಡುವ ಶಕ್ತಿ ಈ ಕವಿತೆಗಳಿಗೆ. ಹಾಡು ಕೇಳುತ್ತಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಅಂತ ಸ್ಮೃತಿ ಪಟಲದಿಂದ ಅಕ್ಷಿಪಟಲಕ್ಕೆ ಚಿತ್ರಗಳು ಪ್ರೊಜೆಕ್ಟ್ ಆಗಿ, ಕನಸುಗಳಿಗೆ ರೆಕ್ಕೆ ಮೂಡುತ್ತವೆ. ಬದುಕಿನಲ್ಲಿ ವೈಫಲ್ಯಗಳು ಹಲವು. ಆದರೂ ನೂರರಲ್ಲಿ ತೊಂಭತ್ತೊಂಭತ್ತು ಮಂದಿ ವೈಫಲ್ಯವನ್ನು ಜಿಗಿಹಲಗೆ ಮಾಡಿ ಮುಂದಕ್ಕೆ ಚಿಮ್ಮಿ ಹಾರಲು ಪ್ರಯತ್ನ ಮಾಡುತ್ತಾರೆ. ಅಂತಹ ಒಂದು ಪ್ರಯತ್ನಕ್ಕೆ ಹುಮ್ಮಸ್ಸು ಕೊಡುವ ಶಕ್ತಿ ಹಾಡುಗಳಿಗಿವೆ. ಬೇಸರವಾದಾಗಲೂ ಖುಷಿಯಾದಾಗಲೂ ಮನಸ್ಸಿಗೆ ಸಮತೋಲನ, ಸಮೋಲ್ಲಾಸ ತರುವ ಮ್ಯಾಜಿಕ್ ಕವಿತೆಗಳು ಮಾಡಬಲ್ಲವು. ಕವಿತೆಗೆ ಗೇಯತೆ ಕೂಡಿದಾಗ ಅದು ಹಾಡಿನ ಸ್ಥಿತಿ ತಲಪುತ್ತದೆ. ತಕ್ಕಮಟ್ಟಿನ ಲಯಗಾರಿಕೆ ಅದಕ್ಕೆ ಬೇಕು, ಪ್ರಾಸಗಳೂ ಗರಿಗರಿ ಚಕ್ಕುಲಿಯನ್ನು ಕುರುಕಿದ ಹಾಗೆ, ಮನಸ್ಸಿಗೆ ಆಹ್ಲಾದಕರ. ಕೆ.ಎಸ್.ನ. ಅವರ ಕವಿತೆಗಳು ಕನ್ನಡದ ಅತ್ಯುತ್ಕೃಷ್ಟ ಗಜಲ್ ಗಳು. ಪ್ರೇಮ ಹೇಗೆ ಸರ್ವಕಾಲಿಕವೋ ಹಾಗೆಯೇ ಈ ಹಾಡುಗಳು ಕೂಡ. ಕವಿತೆ ಕಟ್ಟುವಾಗ, ಕವಿತೆಗೊಂದು ವಸ್ತು, ವಾಸ್ತು ಮತ್ತು ದೇಹ ಕೊಟ್ಟು ಅದರೊಳಗೆ ಆತ್ಮಾರ್ಥ ಪ್ರತಿಷ್ಠೆ ಮಾಡುತ್ತೇವೆ. ಮೈಸೂರು ಮಲ್ಲಿಗೆಯಲ್ಲಿ ಇದಲ್ಲದೇ ಇನ್ನೊಂದು ಅದ್ಭುತ ಅಂಶವಿದೆ. ಅದು ಕವಿತೆಯ ದನಿ ( ಧ್ವನಿಯಲ್ಲ). ಕವಿತೆಯುದ್ದಕ್ಕೂ, ಈ ದನಿ ನಮ್ಮ ಜೊತೆ ಮಾತಾಡುತ್ತೆ, ಪಿಸುಗುಟ್ಟುತ್ತೆ, ಸಂವೇದನೆಯ ತಂತಿ ಮೀಂಟುತ್ತೆ. ಉದಾಹರಣೆಗೆ ಕೆ.ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಸಿರಿಗೆರೆಯ ನೀರಲ್ಲಿ ಹಾಡು, ನೋಡಿ. ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ಗುಡಿಯ ಗೋಪುರಗಳಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು ಮರೆತಾಗ ತುಟಿಗೆ ಬಾರದೆ, ಮೊಡ ಮರೆಯೊಳಗೆ ಬೆಳದಿಂಗಳು ನಿನ್ನ ಹೆಸರು ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು ಮೈಸೂರು ಮಲ್ಲಿಗೆ ಸಂಕಲನದ ಹೆಸರಲ್ಲೇ ಮಲ್ಲಿಗೆಯಿದೆ. ಮಲ್ಲಿಗೆಯೊಳಗೆ,ಆಕೆ ಇದ್ದಾಳೆ. ಆಕೆಯ ಪರಿಮಳ ಇದೆ, ಆಕೆಯ ಸೌಂದರ್ಯವಿದೆ, ಹುಡುಗಿಯ ಸೂಕ್ಷ್ಮ ಪ್ರಜ್ಞೆಗಳು, ಹುಡುಗಿಯ ನಿಷ್ಕಲ್ಮಶ ಮನಸ್ಸು, ಮಲ್ಲಿಗೆಯ ಪಕಳೆಗಳೇ ನಾಲ್ಕು ದಿಕ್ಕಿಗೆ ನೋಟ ನೆಟ್ಟ ಆಕೆಯ ಕನಸುಗಳು. ನಿಷ್ಕಲ್ಮಶ ಮನಸ್ಸು ಎನ್ನುವಾಗ, ಕೆ.ಎಸ್.ನ. ಅವರ ಕವಿತೆಯ ಇನ್ನೊಂದು ಅಂಶವನ್ನು ಸೂಚಿಸಿದ್ದೇನೆ. ಅವರ ಕವಿತೆಯ ಪ್ರೇಮ,ಆದರ್ಶ ಪ್ರೇಮ. ನಿಜ ಜೀವನದಲ್ಲಿ, ಇದು ಅಪೂರ್ವ ,ಅಪರೂಪ. ಈ ಕಾವ್ಯಧ್ವನಿ, ಸಮಾಜದ ಸಂಬಂಧಗಳೊಳಗೆ ಪೊಸಿಟಿವಿಟಿಯನ್ನು ಬಿತ್ತಿ ಬೆಳೆಸುತ್ತದೆ. ಎಷ್ಟು ಚಿಂತೆ, ಒತ್ತಡಗಳ ನಡುವೆಯೂ ಈ ಹಾಡುಗಳನ್ನು ಕೇಳಿದರೆ, ಬದುಕಿಗೆ ಬೆಳಗು ತೆರೆಯುತ್ತದೆ. ಅದೇ ಹೊತ್ತಿಗೆ, ವಿಮರ್ಶೆಯ ದೃಷ್ಟಿಯಿಂದ, ಇದು ಅವರ ಕಾವ್ಯದ ಸೋಲು ಎಂದರೂ, ಕೆ.ಎಸ್.ನ.ಅವರು ತಲೆಗೆಡಿಸದೆ, ಪ್ರೇಮಿಸಿದರು, ಬದುಕಿದರು, ಕವಿತೆಗಳಿಗೆ ಜೇವ ಕೊಟ್ಟರು. ಮೇಲಿನ ಕವಿತೆ ಕವಿಗೆ ಆತನ ಮನದನ್ನೆಯ ಕಡೆಗಿರುವ ಉತ್ಕಟ ಪ್ರೀತಿಯ ಉಲಿಕೆ.  ಈ ಕವಿತೆಯಲ್ಲಿ ಅದ್ಭುತವಾದ ಪ್ರತಿಮೆಗಳು ಇವೆ. ಈ ಕವಿತೆಯಲ್ಲಿ  ನನ್ನಅನುಭವಕ್ಕೆ ಎಟುಕಿದ ಹಲವು ಅಂಶಗಳು ಜೀವಮುಖೀ ಚೇತನದ ನಿತ್ಯರೂಪೀ ದರ್ಶನಗಳು. “ಸಿರಿಗೆರೆಯ ನೀರಲ್ಲಿ, ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು..” ಕೆರೆ ಎಂಥದ್ದು !! ಸಿರಿಗೆರೆ.. ಅಂದರೆ, ಕೆರೆತುಂಬ, ನೀರಲ್ಲ, ಸಿರಿ. ಸಿರಿ ಅಂದರೆ, ಶ್ರೀ, ಸಂಪತ್ತು. ಸಂಪತ್ತು ತುಂಬಿದ ಕೆರೆಯಲ್ಲಿ, ಶ್ರೀಮಂತಿಕೆಯ ಉಸುಕಲ್ಲಿ,ಶ್ರೀಮಂತಿಕೆಯ ನೀರ ಮೇಲೆ ಎಲೆಯತ್ತಿ.,ಅದರಿಂದ ಹೊರಗೆ ತಲೆಯೆತ್ತಿ ನಿಂತ ತಾವರೆಯ ಕೆಂಪುಬಣ್ಣದಲ್ಲಿ ಆಕೆಯ ಹೆಸರಿದೆ. ಬಣ್ಣವನ್ನು,ಇಲ್ಲಿ ಸ್ವಭಾವ,ಗುಣ ಅಂತ ತೆಗೆದುಕೊಳ್ಳಬಹುದು.  ಅಂತಹ ಶ್ರೀಮಂತಿಕೆಯೊಳಗೆ ( ಆ ಶ್ರೀಮಂತಿಕೆ, ಧನಸಂಪತ್ತೇ ಆಗಬೇಕಿಲ್ಲ, ಅದು,ವಿದ್ಯೆ ಸೌಂದರ್ಯ, ಬುಧ್ದಿ, ಇತ್ಯಾದಿ,ಎಲ್ಲವೂ ಆಗಬಹುದು) ಹುಟ್ಟಿದ ಆ ಹುಡುಗಿ,ಶ್ರೀಮಂತೆ. ತಾವರೆ ಹೂವು, ಮತ್ತು ಎಲೆಗಳ ಮೇಲೆ ನೀರು ಅಂಟಲ್ಲ. ಹೂ,ನೀರನ್ನು ಮೀರಿ ಮೇಲಕ್ಕೆ ತಲೆಯೆತ್ತಿ ನಿಲ್ಲುತ್ತೆ. ಹಾಗೆಯೇ ಕವಿಯ ಮನಸ್ಸು ಕದ್ದ ಗೆಳತಿ, ತನ್ನ ಶ್ರೀಮಂತಿಕೆಯ ಜತೆ ಅಟ್ಯಾಚ್ಮೆಂಟ್ ಇಲ್ಲದೆ, ಶ್ರೀಮಂತಿಕೆಯನ್ನು ಮೀರಿ ನಿಂತ  ಗುಣಸ್ವಭಾವವಾಗಿ, ಕವಿಗೆ ಕಾಣುತ್ತಾಳೆ,ಆಪ್ತಳಾಗುತ್ತಾಳೆ. ಇಲ್ಲಿ,ಸಿರಿ ಅನ್ನುವ ಪದಕ್ಕೆ, ಸೌಂದರ್ಯ  ಎಂಬ ಅರ್ಥ ನೀಡಿ ಈ ಮೇಲಿನ ಪ್ಯಾರಾ ಪುನಃ ಓದಿ ಕೊಂಡರೆ, ಆಹಾ, ಎಂತ ಸಿರಿವಂತ ಕವಿತಾ ಸಾಲುಗಳು !! “ಗುಡಿಯ ಗೋಪುರದಲ್ಲಿ,ಮೆರೆವ ದೀಪಗಳಲ್ಲಿ,ಬೆಳಕಾಗಿ ನಿನ್ನ ಹೆಸರು.” ಗುಡಿಯ ಗೋಪುರದಲ್ಲಿ, ಎಂದರೆ,ಎತ್ತರಕ್ಕೆ, ಎಲ್ಲರಿಗೂ ಬೆಳಕು ತಲಪುವ ಹಾಗೆ ಅನ್ನ ಬಹುದೇ?. ಗುಡಿಯೊಳಗೆ ಉರಿಯುವ ದೀಪ, ಗರ್ಭಗುಡಿಯಷ್ಟಕ್ಕೇ ಬೆಳಕು ಚೆಲ್ಲ ಬಹುದು. ಆದರೆ, ಗುಡಿಯ ಗೋಪುರದಲ್ಲಿ ಹಚ್ಚಿದ ದೀಪ,ದೂರ ದೂರಕ್ಕೆ ಬೆಳಕು ಚೆಲ್ಲುತ್ತದೆ. ಗುಡಿಯ ಗೋಪುರದಲ್ಲಿ ಬೆಳಗುವ ದೀಪಕ್ಕೆ ಗರ್ಭಗುಡಿಯ ತಡೆಗೋಡೆಗಳಿಲ್ಲ. ಸ್ವತಂತ್ರ ಅದು. ದಿಕ್ಕುಗಳ ಪ್ರತಿಬಂಧವೂ ಅದಕ್ಕಿಲ್ಲ. ಎಲ್ಲಾ ದಿಕ್ಕಿಗೂ ಸಮಪಾಲಿನ ಚೇತನವಿಸ್ತರಣೆ ಅದರದ್ದು. ಹಾಗೆಯೇ, ಬೆಳಕು ಎಂದರೆ ದಾರಿ ತೋರುವ ಪ್ರಜ್ಞೆ ಎನ್ನೋಣವೇ, ಅರಿವು ಎನ್ನೋಣವೇ. ಹೇಗಿದ್ದಾಳೆ ಹೇಳಿ! ನಮ್ಮ ಈ ಹುಡುಗಿ. ಸಕಲದಿಕ್ಕಲ್ಲೂ ದಾರಿ ತೋರುತ್ತಾಳೆ. ಎಲ್ಲಾ ನೋಟಗಳ ಅರಿವಿನ ದಾರಿಯಾಗುತ್ತಾಳೆ. “ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು.” ಕೆ ಎಸ. ನ. ಅವರ ಒಟ್ಟೂ ಕವಿತೆಗಳಲ್ಲಿ, ಹಳ್ಳಿಗಳ ಬೇರೆ ಬೇರೆ ಪಾತ್ರಗಳು, (ಜೋಯಿಸರು, ಶ್ಯಾನುಭಾಗರು, ಹೊಲ,ಬೇಲಿ, ತೊಟ್ಟಿಲು ಇತ್ಯಾದಿ) ನಮ್ಮ ಕಣ್ಣಿಗೆ ಕಟ್ಟುವಷ್ಟು ಆಪ್ತ, ರಿಯಲ್ ಪಾತ್ರಗಳು. ಚಿಕ್ಕಂದಿನಲ್ಲಿ ಕರುಗಳ ಜತೆ ಆಟವಾಡಿದ ಮಕ್ಕಳಿಗೆ ಅನನ್ಯ ಅನುಭವ ಸಿಗುತ್ತದೆ. ದನಕರು, ಮುಗ್ಧತೆಗೆ ಇನ್ನೊಂದು ಹೆಸರು. ಕರುಗಳಿಗೆ ಅಷ್ಟೇ ತುಂಟತನ. ಅಂತಹಾ ಕರುವಿನ ಕಣ್ಣುಗಳು, ಶುಧ್ದ ದರ್ಪಣಗಳ ಹಾಗೆ. ಆ ಕಣ್ಣೊಳಗೆ ಮೂಡುವ ಸಮಾಜದ ಪ್ರತಿಬಿಂಬಗಳು, ಇದ್ದದ್ದು ಇದ್ದ ಹಾಗೇ, ಚತುರ ಬುಧ್ದಿಯ ಮಾಡಿಫಿಕೇಷನ್ ಇಲ್ಲದೇ, ರೂಪುಗೊಳ್ಳುತ್ತವೆ. ಚುರುಕು ತುಂಟ, ಮುಗ್ಧ ಕಣ್ಣುಗಳಿಗೆ ಜಗತ್ತು ಸುಂದರ, ಜಗತ್ತೇ ಪ್ರೀತಿ. ಅಂತಹ ಕಣ್ಣುಗಳು ಈ ಕವಿಯ,ಹುಡುಗಿಯದ್ದು. ಆ ಕಣ್ಣುಗಳ ಮುಗ್ಧತೆಗೆ ಸ್ಪಟಿಕದ ಸ್ಪಷ್ಟತೆ, ಸೌಂದರ್ಯವೂ ಇದೆ ಅಂತ ಬೇರೆ ಹೇಳ ಬೇಕಿಲ್ಲ ತಾನೇ. “ತಾಯ ಮೊಲೆಯಲ್ಲಿ ಕರು,ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ,ನಿನ್ನ ಹೆಸರು.” ನಾನು ಚಿಕ್ಕಹುಡುಗನಾಗಿದ್ದಾಗ, ಅಮ್ಮ ಹಾಲು ಕರೆಯುತ್ತಿದ್ದಳು, ನನಗೆ ಕರು ಬಿಡುವ ಕೆಲಸ. ದನ ತನ್ನ ಮೊಲೆಯಿಂದ ಹಾಲು ಸುಲಭವಾಗಿ ಹರಿಸುವುದಿಲ್ಲ. ಮೊದಲು, ಆ ಗೋಮಾತೆಯ ಕರು, ತನ್ನ ಮುದ್ದಾದ ಮಂಡೆಯಿಂದ ಮೃದುವಾಗಿ ಕೆಚ್ಚಲಿಗೆ ಗುದ್ದುತ್ತದೆ. ಆ ಮೇಲೆ ಕರು ಹಸುವಿನ ಮೊಲೆ ಚೀಪುತ್ತೆ. ಇನ್ನೂ ಹಾಲು ಬಂದಿಲ್ಲ ಅಂದರೆ, ಅದು ತನ್ನ ಮೃದು ತಲೆಯಿಂದ ನವಿರಾಗಿ ತಾಯಿ ಕೆಚ್ಚಲಿಗೆ ಇನ್ನೂ ಗುದ್ದುತ್ತದೆ ( ಇದು ತಾಯಿಗೆ ನೋವಾಗುವಷ್ಟು ಜೋರಾಗಿ ಅಲ್ಲ) ಆಗ ದನ ತನ್ನ ಮೊಲೆಯಿಂದ ಕರುವಿಗೆ ಹಾಲೂಡುತ್ತದೆ. ಹಾಗೆ ಹಾಲು ಕುಡಿಯುವ ಕರುವಿನ ಕಟವಾಯಿಯಿಂದ ಹಾಲು ತೊಟ್ಟಿಕ್ಕುವ ಅಂದವನ್ನು ಕಂಡ  ಅದೃಷ್ಟವಂತ ನಾನು. ಆ ಹಾಲು ತಾಯಿಯ, ಮಾತೃತ್ವಕ್ಕೆ, ಮಮತೆಗೆ, ಇನ್ನೊಂದು ಹೆಸರು. ಆ ಕರುವಿನ ಬಾಯಿಯಿಂದ ತೊಟ್ಟಿಕ್ಕುವ ಹಾಲಿನಲ್ಲಿ ಕವಿಗೆ ಆಕೆ ಕಂಡರೆ, ಆ ಹುಡುಗಿಯಲ್ಲಿ, ಎಂತಹ  ಮಮತೆ.ಎಂತಹಾ ಮಡಿಲು ತುಂಬಿ ಪ್ರೀತಿ. ಇದಕ್ಕಿಂತ ಉತ್ಕೃಷ್ಟ ರೂಪಕ ಬೇಕೇ. “ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು” ಹೂಬನದ ಬಿಸಿಲಿನಲ್ಲಿ ಅನ್ನುವಾಗ ಗಮನಿಸಿ, ಬನತುಂಬಾ ಹೂಗಳು, ಅವುಗಳ ಮೇಲೆ ಚಿಗುರುಕಿರಣಗಳು, ಇದು ವಸಂತ ಭಾವ. ಪ್ರೀತಿ ಹುಟ್ಟಲು, ಪ್ರಕೃತಿಯ ಮಡಿಲು. ಗಂಡು ನವಿಲು ಸುಮ್ಮನೇ ಕುಣಿಯಲ್ಲ. ಅದು ತನ್ನ ಪ್ರೇಮಿಕೆಯನ್ನು ಪ್ರಣಯಕ್ಕೆ ಕರೆಯುವ ಬಗೆಯಿದು. ಆ ಹೆಣ್ಣು ನವಿಲೇನು ಕಡಿಮೆಯೇ. ಪರಿ ಪರಿಯಾಗಿ ಕರೆದ ಇನಿಯನಿಗೆ ಪರೀಕ್ಷೆ ಹಚ್ಚುವಾಕೆ ಅವಳು. ಗಂಡುನವಿಲು, ತನ್ನ ಜೀವಿತದಲ್ಲಿ ಸಂಗ್ರಹಿಸಿದ ಗರಿಗಳ ಸಿರಿಹೊರೆಯನ್ನು ಅರ್ಧ ಚಂದ್ರಾಕಾರವಾಗಿ ಅರಳಿಸಿ ಹೆಜ್ಜೆಯಿಡುತ್ತದೆ. ಆ ಹೆಜ್ಜೆಗಳು ಸಮತೋಲನದ ಹೆಜ್ಜೆ ( ನವಿಲಿನ ದೇಹದ ಹತ್ತು ಪಟ್ಟು ದೊಡ್ಡ ಗರಿಗಳ ಕೊಡೆ), ಗಾಂಭೀರ್ಯದ ಹೆಜ್ಜೆ. ನಿಸರ್ಗದೊಳಗಿನ ಅನ್ಯೋನ್ಯತೆಯ ಲಯ ಆ ಹೆಜ್ಜೆಗಳಿಗೆ . ಇದು ಸಂಪೂರ್ಣ ಸಮರ್ಪಣೆಯ ನೃತ್ಯ. ನೃತ್ಯಕ್ಕೆ ತನ್ನ ಸೌಂದರ್ಯವನ್ನು, ಜ್ಞಾನವನ್ನು ಜೀವವನ್ನು ಅರ್ಪಿಸಿದ ದನಿ. ಅಂತಹಾ ಸಮತೋಲನದ, ಗಾಂಭೀರ್ಯದ, ಅನ್ಯೋನ್ಯತೆಯ, ಸಮರ್ಪಣಾ ಭಾವದ, ದನಿಯಲ್ಲಿ ಕವಿಗೆ,  ಆಕೆ ಕಾಣಿಸುತ್ತಾಳೆ. “ಹೊಂದಾಳೆ ಹೂವಿನಲಿ,ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು.” ಹೂವು ಅಂತಿಂತ ಹೂವಲ್ಲ. ಹೊಂದಾಳೆ ಹೂವು. ಚಿನ್ನದ ಬಣ್ಣ ಅದಕ್ಕೆ !! ಅದರ ಪರಿಮಳ ಹೇಗಿರಬಹುದು, ಆ ಹೂ, ಗಾಳಿಯಲ್ಲಿ ತೊನೆಯುತ್ತಾ ಹರಡುವ ಪರಿಮಳ, ಉಯ್ಯಾಲೆ ಆಡುವ ಕಲ್ಪನೆ ನೋಡಿ. ಹೂವು ಉಯ್ಯಾಲೆ ಆಡುವುದಲ್ಲ, ಪರಿಮಳ ಉಯ್ಯಾಲೆ ಆಡುವುದು. ಪರಿಮಳದ ಅಲೆ ಅದು. ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ನಾಸಿಕಾಗ್ರಕ್ಕೆ ರುಚಿಸಿಕ್ಕದಷ್ಟು ಕಡಿಮೆ, ಹೀಗೆ ಪರಿಮಳದ ಅಲೆ,ಅಲೆಅಲೆಯಾಗಿ ಪಸರಿಸುವಾಗ, ರಸಿಕ ನಾಸಿಕದ ಅನುಭೂತಿಯ ಪರಿಕಲ್ಪನೆ. ಆ ಉಯ್ಯಾಲೆ, ರಸ ತರಂಗವಾಗಿ ಆಕೆ ಆಡುವ ರೂಪ ಕವಿಗೆ ಕಂಡದ್ದು, ರವಿಗೆ ಕಾಣಲೇ ಇಲ್ಲ !!  ಕವಿ ಅಷ್ಟೂ ರಸಿಕ!! ಉಯ್ಯಾಲೆ ಪುನಃ ಪುನಃ ಆವರ್ತಿಸುವ, ಆಂದೋಳಿಸುವ ಕ್ರಿಯೆ. ಪ್ರೀತಿ ಎಂಬ ಎತ್ತರ, ಮುನಿಸು ಎಂಬ ತಳಮಟ್ಟ, ಇವೆರಡರ ನಡುವೆ ತೊನೆಯುವ, ಪುನಃ ಪುನಃ ಆವರ್ತಿಸುವ ಈ ಕಗರಿಯೆಯಾಗಿ ಕವಿ,ಪ್ರೇಮಿಕೆಯನ್ನು ಕಾಣುತ್ತಾರೆ. “ಮರೆತಾಗ ತುಟಿಗೆ ಬಾರದೆ, ಮೋಡ ಮರೆಯೊಳಗೆ, ಬೆಳದಿಂಗಳು ನಿನ್ನ ಹೆಸರು “ ಈ ಎರಡು ಸಾಲುಗಳು, ಮತ್ತು ಮುಂದಿನೆರಡು ಸಾಲುಗಳು ಕವಿಯ ಮನಸ್ಸಿನ ಬಟ್ಟಲಲ್ಲಿ ಮೂಡುವ ಕಲ್ಪನೆಗಳು. ಬೆಳದಿಂಗಳ ರಾತ್ರಿಯಲ್ಲಿ, ಆಗಸದಲ್ಲಿ ಮೋಡ ಕವಿದರೆ, ಚಂದಿರ ಕಣ್ಣುಮುಚ್ಚಾಲೆ ಆಡುತ್ತಾನೆ. ಬೆಳದಿಂಗಳು, ಅಂದರೆ ಬಿಳೀ ಚಂದಿರ ಅಂತಾನೂ ಹೇಳಬಹುದು ( ತಿಂಗಳು ಎಂದರೆ ಚಂದ್ರ ಎಂಬ ಅರ್ಥ ಇದೆ) ಕವಿಯ ಪ್ರೇಮಾಗಸಕ್ಕೆ ಆಗಾಗ ಮೋಡ ಕವಿದು ಆಕೆ ಪ್ರೀತಿಯಿಂದ ಕಣ್ಣುಮುಚ್ಚಾಲೆ ಆಡುತ್ತಾಳೆ, ಈಗ ಕಂಡಳು ಅನ್ನುವಾಗ ಮರೆಯಾಗುತ್ತಾಳೆ,  ಸರಿ, ಇನ್ನು ಈಕೆ ದರ್ಶನ ಕೊಡಲ್ಲ ಅಂತ ಕವಿ ನಿರಾಶನಾದಾಗ, ಹೇಯ್ ಇಲ್ಲಿದ್ದೀನಿ ಕಣೋ! ಅಂತ ಕುಣಿಯುತ್ತಾಳೆ !. “ನೆನೆದಾಗ, ಕಣ್ಣ ಮುಂದೆಲ್ಲ, ಹುಣ್ಣಿಮೆಯೊಳಗೆ, ಹೂಬಾಣ ನಿನ್ನ ಹೆಸರು.” ಇದೂ ಕವಿಮಾನಸದಲ್ಲಿ ನಡೆಯುವ ಪ್ರೇಮಕ್ರಿಯೆ. ಕವಿ ಆಕೆಯನ್ನು ಮರೆತರೆ, ಕಾಮದೇವ ಬಿಡುತ್ತಾನೆಯೇ. ಪ್ರೀತಿಭಾವದಿಂದ, ಪ್ರಣಯಭಾವಕ್ಕೆ ದಾಟುವ ಸೂಕ್ಷ್ಮ ದಾರಿಯನ್ನು ಕವಿಗೆ ಮನ್ಮಥನ ಹೂಬಾಣ ಕಲಿಸುತ್ತದೆ. ಆ ಹೂಬಾಣದಲ್ಲಿ ಪ್ರಣಯರೂಪಿಯಾಗಿ ಆಕೆ ತನ್ನ ಇನಿಯ ಕವಿಯನ್ನು ಕಾಡುತ್ತಾಳೆ. ಹೀಗೆ, ಕೆ.ಎಸ್. ನ ಹಾಡು, ಬರೆಯುವುದಿಲ್ಲ, ಹಾಡೇ ಆಗಿ ಬಿಡುತ್ತಾರೆ. ಪ್ರೇಮದ ಅಕ್ಷರವಾಗುವುದಿಲ್ಲ, ಪ್ರೇಮಕ್ಕೆ ಉಸಿರಾಗುತ್ತಾರೆ. ಅದಕ್ಕೇ ಅವರ ರಚನೆಗಳು ಬರೇ ಕವಿತೆಗಳಲ್ಲ, ಹಾಡುಗಳು. ಸಂಗೀತ ಭಾವದ ಕಾವ್ಯ ಝರಿಗಳು. ನವ್ಯ ಕವಿತೆಗಳು ಮನಸ್ಸನ್ನು ಚಾಲೆಂಜ್ ಮಾಡಿ, ಚಿಂತನೆಗೆ ಹರಿತ ತರುವ ಕೆಲಸ ಮಾಡಿದರೆ, ಕೆ.ಎಸ್ ನ ಅವರ ಭಾವಗೀತೆಗಳು, ಮನಸ್ಸನ್ನು ನವಿರಾಗಿ ಆವರಿಸಿ, ಕನಸು ಕಟ್ಟಲು ಕಲಿಸುತ್ತವೆ. ಸ್ವಸ್ಥ, ಪ್ರೀತಿತುಂಬಿದ ಸಮಾಜವನ್ನು

Read Post »

ಕಾವ್ಯಯಾನ

ಅಬ್ಬರ

ಕವಿತೆ ಅಬ್ಬರ ಪ್ರೊ.ಕವಿತಾ ಸಾರಂಗಮಠ ಹರಿದ ಗುಡಿಸಲಲ್ಲಿಮುರಿದ ಛಾವಣಿಗಳಲ್ಲಿಹರಿದ ಬಟ್ಟೆಯುಟ್ಟುಹಸಿವು ಇಂಗಿದೆ! ನಿರಾಶ್ರಿತರು ಮುಗಿಲಿಗೆಮುತ್ತಿಗೆ ಹಾಕಿದ್ದಾರೆತುತ್ತು ಅನ್ನ ಬಟ್ಟೆಗಾಗಿಹೆಣಗುತ್ತಿದ್ದಾರೆಇಲ್ಲೊಬ್ಬನಿಗೆ ಹೊರಗೆತಿರುಗುವ ಚಿಂತೆ! ಸೀಲ್ ಡೌನ್,ಲಾಕ್ ಡೌನ್ಆಯ್ತುಪ್ರೀತಿ-ಪ್ರೇಮ ಸೀಲ್ ಡೌನ್ ಆಯಿತಾ?ಇಲ್ಲೊಬ್ಬ ಪ್ರೇಮಿ ಉಸುರುತ್ತಿಅದ್ದಾನೆ! ನೆಕ್ಕಲು ಹಳಸಿದ ಅನ್ನ ಸಿಕ್ಕರೆಸಾಕು ಬದುಕುತ್ತೇನೆಎನ್ನುತ್ತಿದ್ದಾನೆಹಸಿವಿನ ಬೆಲೆ ತಿಳಿದವಭಿಕ್ಷುಕನೂ ಇರಬಹುದು?! ಕೀಟಗಳ ಕಾಟವಿನ್ನೂ ಮುಗಿಯದೇಅಕಟಕಟಾನಿದ್ದೆಮಾಡಿ ಮಾಸಗಳೇ ಉರುಳಿವೆಎನುತಿರುವ ಇಲ್ಲೊಬ್ಬಹಾಸಿಗೆ ಪ್ರೇಮಿ! ಆಸೆ ಬಿಡದ ಜೀವಬೇಕೆಂದು ಹೊರಟೇ ಇದೆಅರಿವಿಲ್ಲಮಸಣಕೋವ್ಯಸನಕೋ? *****************************

ಅಬ್ಬರ Read Post »

ಕಾವ್ಯಯಾನ

ಮುಖಗಳು

ಕವಿತೆ ಮುಖಗಳು ಡಾ. ಅರಕಲಗೂಡು ನೀಲಕಂಠ ಮೂರ್ತಿ ವೃತ್ತಿಯಲ್ಲಿ ಎಷ್ಟೊಂದು ಮುಖಗಳುಎದುರಾಗುತ್ತವೆ…ಭಿನ್ನ ಭಿನ್ನ ಭಾವಗಳುಕವಚಗಳು ಅದೇ ಒಂದೊಮ್ಮೆ ಯಾವುದೋರಸ್ತೆಯ ಪಕ್ಕ ಕಾಯುತ್ತಿರಿಒಂದೇ ಒಂದೂ, ಕೊಸರಿಗೂ ಕಾಣದುಪರಿಚಯದ ಮುಖ!ಎಷ್ಟೊಂದು ಸೋಜಿಗ…! ಜಗತ್ತು ತುಂಬಿದೆತುಂಬಿ ತುಳುಕುತ್ತಿದೆ –ಜನರಿಂದ ಮತ್ತುಜನರನ್ನು!ಇಲ್ಲಿ ಅನಾಥರಿಗೂಇನ್ನಿತರ ಅಂಥದೇ ಅನಾಥರ ಗುರುತೂಸಿಗದು…ಬಹುಶಃ… ಇದರಿಂದಲೇ ಇಲ್ಲಿ ಎಲ್ಲವೂನಾನು, ನನ್ನದು ಮತ್ತುನನ್ನವರು…ಬಹುಶಃ… ಗೋಡೆಯ ಮೇಲೆ ಈ ದಿನದಹೊಚ್ಚ ಹೊಸ ಹೂಮಾಲೆಯಿರುವನನ್ನಪ್ಪನ ಅಮ್ಮನ ಫೋಟೋನನ್ನ ನಂತರ ಎಲ್ಲಿರುವುದೋ ಏನೋ…?ಹಾಗೆಯೇ ಎಲ್ಲ ಮುಖಗಳುನೆನಪುಗಳು… ಬಣ್ಣದ ಬ್ರಶ್ ಒಂದುಬಳಿಬಳಿದು ನಿತ್ಯ ನಿರಂತರಉದುರಿ ಮರೆಯಾಗುವ ಮುಖವಾಡಗಳು…ಮತ್ತು ಟಿಕ್ ಟಿಕ್ ಮುಳ್ಳಿನ ಸದ್ದುಗಳು, ನಡಿಗೆಗಳು… ******************************************* .

ಮುಖಗಳು Read Post »

ಇತರೆ

ಅಮ್ಮನ ಸೆರಗ ಬಿಡಿಸಿದ ಬೆರಳುಗಳು

ಅಮ್ಮನ ಸೆರಗ ಬಿಡಿಸಿದ ಬೆರಳುಗಳು ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ ಶಿಕ್ಷಕಿಯರಿಗೊಂದು ಸೆಲ್ಯೂಟ್ ಪ್ರಜ್ಞಾ ಮತ್ತಿಹಳ್ಳಿ ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ ಮಾತುಗಳಿಂದ ಸಂತೈಸುತ್ತ ಹೊರಟವರು ಅಮ್ಮನಲ್ಲದ ಆದರೆ ಅಮ್ಮನಂತೆಯೇ ಇರುವ ಅಕ್ಕೋರು. (ಟೀಚರು) ಶಾಲೆಯ ಬಾಗಿಲ ಬೀಗ ತೆಗೆದು ಚಿಲಿಪಿಲಿ ಹಿಂಡನ್ನು ಒಳಗೆ ಸಾಲಾಗಿ ಕೂರಿಸಿ, ಏರುದನಿಯಲ್ಲಿ ಅವರನ್ನೆಲ್ಲ ನಿಯಂತ್ರಿಸುತ್ತ, ಅಳುವ ಕೂಸುಗಳ ಎತ್ತಿಕೊಳ್ಳುತ್ತ, ಪುಂಡಾಟದವರ ಗದರಿಸುತ್ತ, ತಮ್ಮ ತಾಯಂದಿರಿಂದ ಸಂಭಾಳಿಸಲಾಗದೇ ಅವರನ್ನು ಸುಸ್ತು ಮಾಡುವ ಪ್ರತಿ ಮನೆಯ ಮುದ್ದು ರಕ್ಕಸರನ್ನು ಒತ್ತಟ್ಟಿಗೆ ಸೇರಿಸಿಕೊಂಡು ಬಾಲವಾಡಿ ಅಥವಾ ಶಿಶು ವಿಹಾರ ಎಂಬ ಚಿಲಿಪಿಲಿ ಕೇಂದ್ರ ನಡೆಸುವ ಸಹನೆಯ ಕಡಲೊಡತಿಯರಿಗೆ ಎಲ್ಲ ಮುದ್ದು ಮಕ್ಕಳ ವತಿಯಿಂದ ಹಾಗೂ ಪಾಲಕರ ವತಿಯಿಂದ ಶಿಕ್ಷಕರ ದಿನದ ಶುಭಾಶಯಗಳು. ಹೂಹೂವಿನ ಸೀರೆಯ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ನೀಲಿಚುಕ್ಕೆಯ ಬಳೆಗಳನ್ನು ಹಿಂದಕ್ಕೆ ಸರಿಸಿ ಕೈ ತಿರುಗಿಸುತ್ತ ಏರುದನಿಯಲ್ಲಿ ರಾಗವಾಗಿ ಹಾಡುತ್ತಿದ್ದಾರೆ. ಅಳು, ಗದ್ದಲ, ಕೇಕೆ ನಇಲ್ಲಿಸಿದ ಕಂದಮ್ಮಗಳು ಮಂತ್ರದ ಮೋಡಿಗೆ ಸಿಕ್ಕಿದ ಹಾವುಗಳಂತೆ ಬಟ್ಟಲು ಕಣ್ಣರಳಿಸಿ ತಾವೂ ಹಾಡುತ್ತಿವೆ. “ಪೊಂ ಪೊಂ ಗಾಡಿ, ಯಾರು ಬಂದಾರವ್ವ, ಮಾಮಾ ಬಂದಾನವ್ವ, ಏನ್ ತಂದಾನವ್ವ, ಹಂಡಿಯಂಥ ಹೊಟ್ಟೆ ಬಿಟ್ಕೊಂಡು ಹಾಂಗ ಬಂದಾನವ್ವ” ಹೊಟ್ಟೆಯ ಅಭಿನಯ ಮಾಡುವಾಗ ತರಗತಿಯಿಡೀ ಕ್ಕಿಕ್ಕಿಕ್ಕಿ ನಗೆಯ ಕಡಲಲ್ಲಿ ತೇಲುತ್ತದೆ. ಹಾಡುಗಳು ಹಾಗೆಯೇ ಅವ್ಯಾಹತವಾಗಿ ಮುಂದುವರೆಯುತ್ತವೆ. “ಬಾ ಬಾರೆ ಕಂದ ಬಾರೆ ಸುನಂದ ಬೇಸರ ಬಂದೈತಿ ಆಡೋಣ” ಹಾಡಿನ ಹಾದಿ ಹಿಡಿದು ಹೊರಟ ಹಸುಮನಸುಗಳೆಲ್ಲ ಮನೆ, ಅಳು, ರಗಳೆ ಮರೆತು ತರಗತಿಯಿಡೀ ಒಂದೇ ಶೃತಿಗೆ ಹದಗೊಂಡಾದ ಮೇಲೆ ಶುರುವಾಗುತ್ತದೆ “ಅ ಅಗಸ, ಆ ಆನೆ, ಇ ಇಲಿ” ಅದರ ಜೊತೆಗೆ ಒಂದು ಎರಡು ಬಾಳೆಲೆ ಹರಡು ಎಂಬ ಒಕ್ಕೊರಲಿನ ರಾಗ ಕೇಳಿದೊಡನೆ ರಸ್ತೆಯಲ್ಲಿ ಹೊರಟವರು ಕೂಡ ಒಮ್ಮೆ ತಿರುಗಿ ನೋಡುತ್ತಾರೆ. ಹೊತ್ತು ಮದ್ಯಾಹ್ನಕ್ಕೆ ತಿರುಗಿದ್ದೇ ತಿಂಡಿಯ ಸಮಯ. ಎಳೆ ಬಾಳೆ ಸುಳಿಯಂತಹ ಕೈಗಳಿಂದ ಉಪ್ಪಿಟ್ಟು, ದೋಸೆ ತಿನ್ನಲು ನೆರವಾಗುತ್ತಾರೆ ಟೀಚರ್. ಡಬ್ಬಿಯ ಮುಚ್ಚಳ ತೆಗೆದು ಕೊಡಬೇಕು. ಟಣ್ಣನೆ ಡಬ್ಬಿ ಬೀಳಿಸಿಕೊಂಡವರಿಗೆ ಎತ್ತಿ ಕೊಡಬೇಕು. ಒಂದು ಮಗುವಿಗೆ ತಿನ್ನಿಸಿ, ಒಂದಕ್ಕೆ ಬಾಯಿ ಒರೆಸಿ, ಇನ್ನೊಂದಕ್ಕೆ ಕೈ ತೊಳೆಸಿ ಮುಗಿಸುವುದರಲ್ಲಿ ಶುರುವಾಗುತ್ತದೆ ಒಂದಕ್ಕೆ ಕಾರ್ಯಕ್ರಮ. ಮತ್ತೆ ಟೀಚರ್ ಓಡಬೇಕು. ಗುಂಡಿ ಬಿಚ್ಚಿಕೊಡು, ಲಾಡಿ ಕಟ್ಟಿಕೊಡು ಇತ್ಯಾದಿ. ಅಷ್ಟರಲ್ಲಿ ಅವನು ಬಿದ್ದ, ಇವನು ಹೊಡೆದ ಇತ್ಯಾದಿ ಜಗಳ-ರಗಳೆಗಳು ಶುರು. ಯಾಕೆಂದು ಕಾರಣವೇ ಗೊತ್ತಿಲ್ಲದೇ ಒಂದು ಅಳುತ್ತದೆ, ಒಂದು ಕೂಗುತ್ತದೆ. ಚೈತ್ರ ಮಾಸದ ಮಾಮರದಂತೆ ಸದಾ ಸದ್ದಿನ ಜಾತ್ರೆ ತುಂಬಿದ ಸ್ವರ್ಗದ ತುಣುಕು ಈ ಶಿಶುವಿಹಾರ. ಅವರ ಕೈ ಹಿಡಿದು ಅಳುತ್ತ ಅಂಗಳ ಇಳಿದ ಚಿಣ್ಣರೆಲ್ಲ ಅರಿವಿನ ಅರಮನೆಯ ನೂರು ಬಾಗಿಲುಗಳ ಬೀಗ ತೆರೆದು ಜ್ಞಾನದಾರೋಗಣೆಯಲ್ಲಿ ಸೀಕರಣೆ ಸುರಿದುಂಡು ದೊಡ್ಡ ಹುದ್ದೆಗಳ ಹೂ ಮಾಲೆಗೆ ಕೊರಳೊಡ್ಡಿದ್ದಾರೆ. ಅವರ ಮಾನ-ಸನ್ಮಾನದ ಕ್ಷಣಗಳಲ್ಲಿ ತಪ್ಪದೇ ಹೆತ್ತವರ ಹೆಸರು ಹೇಳಿ, ಕಾಲಿಗೆರಗಿ, ಗದ್ಗದಗೊಳಿಸಿ ಪಿತೃಋಣ ತೀರಿಸಿದ್ದಾರೆ. ರ್ಯಾಂಕು-ಮೆಡಲು ಹಿಡಿದುಕೊಂಡಾಗಲೆಲ್ಲ ನನಗೆ ಲೆಕ್ಕ ಕಲಿಸಿದವರು, ಸಾಹಿತ್ಯ ಓದಿಸಿದವರು ಅಂತ ತಮ್ಮ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಕರ ಹೆಸರು ಹೇಳಿ ಪುಳಕಗೊಳಿಸಿ ಗುರುಋಣವನ್ನೂ ತೀರಿಸಿದ್ದಾರೆ. ಆದರೆ ತೀರಾ ಚಿಕ್ಕ ವಯಸ್ಸಿನಲ್ಲಿ ಎಲ್ಲವೂ ಮಂಜು ಮುಸುಕಿದಂತಹ ಬಾಲ್ಯದಲ್ಲಿ ನಡೆದದ್ದು ಯಾರಿಗೂ ನೆನಪಿರುವುದಿಲ್ಲ. ಆ ನಂತರ ನಮ್ಮ ತಂದೆ-ತಾಯಿಗಳು ನೀನು ಚಿಕ್ಕವನಿದ್ದಾ ಹಾಗಿದ್ದಿ, ಹೀಗಿದ್ದಿ ಅಂತೆಲ್ಲ ಹೇಳಿದ ಕತೆಗಳಿಂದ ನಮ್ಮ ನಸ್ಮರಣೆಯ ಜಗತ್ತು ತುಂಬಿಕೊಳ್ಳುವಾಗ ಈ ಬಡಪಾಯಿ ಶಿಶುವಿಹಾರದ ಶಿಕ್ಷಕಿಗೆ ಯಾವ ಪಾತ್ರವೂ ಇರುವುದಿಲ್ಲ. ಪಾಪ ಇವರೆಲ್ಲ ಸರ್ಕಾರಿ ನಿಯುಕ್ತಿ-ಸಂಬಳ-ಸವಲತ್ತುಗಳನ್ನು ಕಂಡವರಲ್ಲ. ಹೆಚ್ಚಿನ ವಿದ್ಯೆಯೂ ಇಲ್ಲದ, ದೊಡ್ಡ ಕನಸುಗಳೂ ಇಲ್ಲದ ಈ ಬಡಜೀವಿಗಳು ಯಾರಿಂದ ಏನನ್ನೂ ನಿರೀಕ್ಷಿಸದೇ ತಮ್ಮ ಹೊಟ್ಟೆಪಾಡಿನ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿರುತ್ತಾರೆ. ಶಿಕ್ಷಕ ದಿನಾಚರಣೆಯಾಗಲೀ, ಶಿಕ್ಷಣ ಇಲಾಖೆ ಕೊಡುವ ಆದರ್ಶ ಶಿಕ್ಷಕ ಪ್ರಶಸ್ತಿಯಾಗಲೀ ಇವರಿಗೆ ಬಾನೆತ್ತರದ ನಕ್ಷತ್ರ. ತಮ್ಮ ಎದುರಿಗಿನ ಮಗುವಿನಿಂದಲೂ ಇವರು ಒಂದು ದಿನವೂ ನಮಸ್ತೆ ಟೀಚರ್ ಅಂತ ಅನ್ನಿಸಿಕೊಂಡಿರುವುದಿಲ್ಲ. ಸರಿಯಾಗಿ ಮಾತಾಡಲು ಬರದಿರುವ ವಯಸ್ಸಿನಲ್ಲಿ ಎತ್ತಿ ಆಡಿಸಿದ ಈ ಅಮ್ಮನಲ್ಲದ ಅಮ್ಮಂದಿರನ್ನು ಯಾರು ಎಷ್ಟು ನೆನಪಿಟ್ಟುಕೊಂಡಿರುತ್ತಾರೆ? ಪೊಮೊಶನ್, ಟ್ರಾನ್ಸಫರ್ ಇಂತಹುದು ಏನೊಂದೂ ಇಲ್ಲದ ಅವರು ಅದೇ ನಾಲ್ಕು ಗೋಡೆಗಳ ನಡುವೆ ಚಿಣ್ಣರೆದುರು ಕುಣಿಯುತ್ತಲೇ ಮುದುಕರಾಗುತ್ತಾರೆ. ಕೆಲವು ಕಡೆ ತಾಯಿಗೆ ಕಲಿಸಿದ ಟೀಚರ್ ಮಗಳಿಗೂ ಕಲಿಸುತ್ತಾರೆ. ಅಲ್ಪ ಸಂಬಳದ, ಸವಲತ್ತು ರಹಿತ ಟೀಚರು ಅಕ್ಕರೆಯಿಂದ ಕೈ ಹಿಡಿದು ಅಕ್ಷರ ಜಗತ್ತಿಗೆ ನಮ್ಮನ್ನು ಪರಿಚಯಿಸಿದ ಜಾಗ ನಮ್ಮ ಸ್ಮರಣೆಯಲ್ಲೇ ಇರುವುದಿಲ್ಲ. ತಮ್ಮ ತಾಯಂದಿರ ಸೆರಗಲ್ಲಿ ಮುಖ ಮರೆಸಿಕೊಂಡ ಮಗುವನ್ನು ಹಗೂರಕೆ ಎತ್ತಿಕೊಂಡು ಹಾಡು, ಹಕ್ಕಿ, ಆಟ, ಪಾಠಗಳ ಕಲಿಕೆಯ ರುಚಿ ತೋರಿಸುತ್ತ ಬೆಳವಣಿಗೆ ದಾರಿಯಲ್ಲಿ ಮೊದಲ ಹೆಜ್ಜೆ ಹಾಕಿಸಿದ ತಾಣವಿದು. ಅಮ್ಮನ ಸೆರಗಿನಾಚೆಗೂ ಒಂದು ಜಗತ್ತಿರುತ್ತದೆ ಎಂಬ ಸತ್ಯವನ್ನು ಅರಿವಿನ ಆಲ್ಬಂ ದಲ್ಲಿ ಮೂಡಿಸಿದ ಜಾಗ. ಇಲ್ಲಿ ಅತ್ತು ಇವರ ಸೆರಗಲ್ಲಿ ಕಣ್ಣೊರೆಸಿಕೊಂಡ ಮಗು ಶಾಲೆ-ಕಾಲೇಜು-ವಿಶ್ವವಿದ್ಯಾಲಯ ಎಂದು ಆಕಾಶದ ಅನಂತದಲ್ಲಿ ಹಾರಾಡುತ್ತಿದ್ದರೆ ಈ ಟೀಚರ್ ಇನ್ನೂ ಇಲ್ಲೇ ಬಾ ಬಾ ಗಿಳಿಯೇ ಬಣ್ಣದ ಗಿಳಿಯೇ ಎಂದು ಕುಣಿಯುತ್ತಿದ್ದಾರೆ. ಅಳುವ ಕಂದನನ್ನು ಸೊಂಟಕ್ಕೆ ಸಿಗಿಸಿಕೊಂಡು ಗೇಟಿನ ಹತ್ತಿರ ಕರೆಯುತ್ತಿದ್ದಾರೆ. “ಬಾರೆ ಪುಟ್ಟೂ, ಶಾಲೆಗೆ ಹೋಗ್ವಾ” ಶಿಕ್ಷಕರ ಸ್ನ್ಮಾನ ಪಟ್ಟಿಯಲ್ಲಿ ಹೆಸರೇ ಇಲ್ಲದ ಆ ಎಲ್ಲ ಮುಗ್ಧ ಅಮ್ಮನಂತಹ ಶಿಕ್ಷಕಿಯರಿಗೆ ಹೃದಯ ತುಂಬಿದ ಅಕ್ಷರ ನಮನಗಳು. **********************************

ಅಮ್ಮನ ಸೆರಗ ಬಿಡಿಸಿದ ಬೆರಳುಗಳು Read Post »

You cannot copy content of this page

Scroll to Top