ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಲೋಕದ ರವಿತೇಜ

ಕವಿತೆ ಕಾವ್ಯ ಲೋಕದ ರವಿತೇಜ ಶಿವರಂಜಿನಿ ,ಎಂಆರ್ ಶಿವಣ್ಣ ಸಾರಸ್ವತ ಅಂಗಳದಲಿಮಂದಹಾಸ ಬೀರುತಅರಳಿದಸುಂದರ ಹೂನೀವು ತಾನೆ ?ಕಾವ್ಯ ಸುಮದಿ ಘಮ ಘಮಿಸಿದನಿಮ್ಮ ಭಾವಗಳ ಐಸಿರಿಗೆಸೋತವಳು ನಾನು ತಾನೆ ? ಗೀತ ಸಂಗೀತ ಸ್ವರಗಳಲಿಸುರ ತರಂಗಗಳನೇಳಿಸಿದವರುನೀವು ತಾನೆ ?ಮನ ತುಂಬಿ ಅದರ ಗಾನ ರಸಸ್ವಾದಸವಿಯುಣುತ ಮೈಮರೆತವಳು ನಾನು ತಾನೆ ? ಗಾನ ಸರಸ್ವತಿಗೆ ಅಕ್ಷರ ಮಾಲೆಗಳ ತೊಡಿಸಿ,ಮಾಸದ ರವಿತೇಜನೀವೇ ತಾನೆ ?ನಿಮ್ಮಗೀತಿಕೆಗಳ ಮಂದಾರ ಚೆಂದವೆನಿಸಿಮಧುರ ರಾಗಗಳ ಗುನು ಗುನುಸುತಮುಗ್ಧಗೊಂಡವಳು ನಾನು ತಾನೆ? ಜನ ಮೆಚ್ಚಿದ ಜಗ ಮೆಚ್ಚಿದನಾನೂ ಮೆಚ್ಚಿದ ಕವಿ ನೀವು ತಾನೆ ?ನಿಮಗೇ ಗೊತ್ತಿರದ ಅಭಿಮಾನಿನಾನು ತಾನೆ ? ಸಂಜೆ ಮುಂಜಾನೆಗಳ ಸೊಬಗಿನಲಿಕಾವ್ಯ ಸಿರಿ ಮಂದೆಲರ ತಂಪಿನಲಿಮೆರೆವ ಕೀರ್ತಿ ಶಿಖರದ ಚೆಲುವಿನಲಿಸೃಜನಶೀಲ ಸಂಪನ್ನತೆಯಲಿ ನಿಂತವರುನೀವೆ ತಾನೆ ?ನಿಮ್ಮೊಲುಮೆಯ ಕಾವ್ಯ ಚೆಲುವಿಗೆ ಹಾರೈಸಿ,ನಾದಲೋಕದ ನಲುಮೆಯ ಹಿರಿಕವಿಗೆನಮಿಸುತಿರುವ ಕೂಸುನಾನು ತಾನೆ ?ಹಾಡ್ಬರಹಗಳ ಏರಿಳಿತಗಳಲಿಲಯಗಳ ಸಂಚಲನದಿಸಾಹಿತ್ಯ ರಂಗೇರಿಸಿನಿಮಗೆ ಸಾಟಿಯಾದವರುನೀವು ತಾನೆ ?ಅಶ್ವಮೇಧ ಯಾಗದ ಕಿಚ್ಚಿಗೆ ಬೆಚ್ಚಿಮುಖವಾಡಗಳುಗುಳುವಜ್ವಾಲೆಗಳಲಿ ನೊಂದರೂನಿಷ್ಕಪಟತೆಯ ದೊಡ್ಡ ಹೊಳೆ ಹರಿಸುವನಿಮ್ಮ ಹಿಂಬಾಲಿಸುತಿರುವೆ,ಇದು ಸರಿ ತಾನೆ.? ***************************.( ಡಾ.ದೊಡ್ಡರಂಗೇಗೌಡರ ಜನಮ ದಿನದಂದು ಅವರಿಗೆ ಬರೆದ ನುಡಿ ನಮನ)

ಕಾವ್ಯ ಲೋಕದ ರವಿತೇಜ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಂಕಣಬರಹ                             ಬದುಕಿನ ಏರಿಳಿತಗಳನು ಒಪ್ಪಿಕೊಳ್ಳುವುದು ಹೇಗೆ? ಬದುಕಿನ ರೀತಿಯೇ ಅಂಥದ್ದು. ಪ್ರತಿ ಕ್ಷಣವೂ ಹೊಸತನದಿಂದಲೇ ಕೂಡಿಕೊಂಡಿರುತ್ತದೆ.ಅದೆಷ್ಟೇ ಬೇಸರಗೊಂಡಿದ್ದರೂ ಮತ್ತೆ ಕುತೂಹಲದಿಂದ ಸೆಳೆದು ನಿಲ್ಲಿಸಬಲ್ಲ ಮಾಯಾಶಕ್ತಿ ಅದಕ್ಕಿದೆ. ರಾಶಿ ರಾಶಿ ಹೊಸ ಅನುಭವಗಳು ಮುಂದೆ ಕಾದಿವೆ ಎಂದು ಗೊತ್ತಿದ್ದರೂ ಕೆಲವೊಂದು ಸಲ ಕಷ್ಟದ ಸಾಲುಗಳು ಇನ್ನಿಲ್ಲದಂತೆ ಆವರಿಸಿ ಹಿಂಡಿ ಹಿಪ್ಪಿ ಮಾಡಿಬಿಡುತ್ತವೆ. ಪ್ರತಿ ಕಷ್ಟವೂ ವಿಶಿಷ್ಟತೆಯಿಂದ ಕಾಡುತ್ತದೆ. ಅನುಭವದ ಪಾಠವನ್ನು ಕಲಿಸಿಯೇ ಮುನ್ನಡೆಯುತ್ತದೆ. ಒಮ್ಮೊಮ್ಮೆ ದಡದಡನೆ ಓಡುವವರನ್ನು ಗಕ್ಕನೇ ನಿಲ್ಲಿಸಿ ಬಿಡುತ್ತದೆ. ಅಟ್ಟದ ಮೇಲೇರಿ ಕುಳಿತವರನ್ನು ಕೆಳಕ್ಕೆ ತಳ್ಳಿ ಬಿಡುತ್ತದೆ. ಇನ್ನು ಕೆಲವು ಸಲ ಕೌತುಕತೆಯಿಂದ ಅದರ ಮುಂದೆ ನಿಂತು ಬಿಟ್ಟ ಕಣ್ಣು ಬಿಟ್ಟಂತೆ ಪರವಶತೆಯಿಂದ ನೋಡುವಂತೆ ಮಾಡುತ್ತದೆ. ಲಗು ಬಗೆಯಿಂದ ಮೆಟ್ಟಿಲೇರಿ ಹೋಗುವವರನ್ನು ಮುಂದಕ್ಕೆ ಅಡಿ ಇಡದಂತೆ ಮಾಡುತ್ತದೆ. ಒಟ್ಟಾರೆ ಸರಳ ಮಾತಿನಲ್ಲಿ ಹೇಳುವುದಾದರೆ ಜೀವನ ಆಡಿಸಿ ನೋಡು ಬೀಳಿಸಿ ನೋಡು ಆಟ ಇದ್ದಂತೆ ಅನಿಸುವದಂತೂ ಖಚಿತ. ಜೀವನ ಎರಡು ಮುಖವುಳ್ಳ ನಾಣ್ಯವಿದ್ದಂತೆ. ಒಮ್ಮೆಲೇ ಎರಡು ಮುಖಗಳೂ ಬೀಳುವ ಸಾಧ್ಯತೆ ಇಲ್ಲ. ಆದರೆ ಎರಡೂ ಮುಖಗಳು ಬೀಳುವ ಸಾಧ್ಯತೆ ಸಮವಾಗಿರುತ್ತದೆ. ಇಲ್ಲವೇ ಕಡಿಮೆ ವ್ಯತ್ಯಾಸವಿರುತ್ತದೆ. ಒಮ್ಮೆ ಏರು ಮತ್ತೊಮ್ಮೆ ಇಳುವು.ಒಮ್ಮೆ ಗೆಲುವು ಒಮ್ಮೆ ಸೋಲು. ಒಮ್ಮೆ ಕಷ್ಟ ಮತ್ತೊಮ್ಮೆ ಸುಖ. ಮನಸ್ಸು ವಿಚಿತ್ರವಾದ ತಳಮಳಗಳಿಗೆ ಒಳಗಾದಾಗ ಬದುಕು ಭಾರವೆನಿಸುತ್ತದೆ. ಹೀಗೆ ಆದರೆ ಮುಂದೆ ಹೇಗೆ ಎನ್ನುವ ಚಿಂತೆಯ ಪ್ರಶ್ನಾರ್ಥಕ ಚಿನ್ಹೆ ನಮ್ಮ ಮುಖಕ್ಕೆ ಮುಖ ಮಾಡಿಕೊಂಡು ನಿಲ್ಲುತ್ತದೆ ಅದಕ್ಕೆ ಉತ್ತರ ನೀಡುವುದು ಹೇಗೆ? ಚೆಂದದ ಗಳಿಗೆಗಳು ಜೊತೆಗಿರುವಾಗ ಹೀಗೇ ನೂರ್ಕಾಲ ಬದುಕಬೇಕು ಅನ್ನಿಸುವುದೂ ಖಚಿತ. ಸ್ವಾರಸ್ಯಕರ ಕಥೆ ಬದುಕಿನ ಏರಿಳಿತಗಳನ್ನು ಒಪ್ಪಿಕೊಳ್ಳುವ ಕುರಿತಂತೆ ಓದಿದ ಕತೆಯೊಂದು ತುಂಬಾ ಸ್ವಾರಸ್ಯಕರವಾಗಿದೆ. ನೀವೂ ಓದಿ: ಒಮ್ಮೆ ಒಬ್ಬ ರಾಜನು ಕಮ್ಮಾರನಿಗೆ ಹೀಗೆಂದು ಆದೇಶಿಸಿದನು. “ನಾನು ಮೇಲೇರುವಾಗ ನನ್ನ ಸಂತೋಷವನ್ನು ಕೂಡಿಡುವಂತೆ ಮತ್ತು ನಾನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಾಗ ಉತ್ಸಾಹ ಚಿಮ್ಮುವಂತೆ ಒಂದು ಸೂಕ್ತಿಯಳ್ಳ ಒಂದು ಮೊಹರನ್ನು ತಯಾರಿಸಿ ಕೊಡು.”ಎಂದ. ಕಮ್ಮಾರಿನಿಗೆ ಮೊಹರು ತಯಾರಿಸುವುದೇನು ಕಷ್ಟದ ಕೆಲಸವಲ್ಲ ಆದರೆ ಕಷ್ಟ ಮತ್ತು ಸುಖದ ಕ್ಷಣಗಳಲ್ಲಿ ಎಚ್ಚರಿಕೆಯ ಸಂದೇಶವನ್ನು ನೀಡುವ ಸೂಕ್ತಿಯನ್ನು ತಯಾರಿಸುವುದು ಕಷ್ಟವೆನಿಸಿತು. ಆದ್ದರಿಂದ ಆತ ಒಬ್ಬ ಋಷಿಯ ಬಳಿ ಹೋದ. ಋಷಿಯ ಬಳಿ ನಡೆದ ಪ್ರಸಂಗವನ್ನೆಲ್ಲ ವಿವರಿಸಿದ. ರಾಜ ಸುಖದ ಕ್ಷಣಗಳಲ್ಲಿರುವಾಗ ಸಂತಸವನ್ನು ಸಮೀಕರಿಸುವಂತೆ, ದುಃಖದ ಮಡುವಿನಲ್ಲಿರುವಾಗ ಉತ್ಸಾಹದಿಂದ ಪುಟಿದೇಳುವಂತೆ ಮಾಡುವ ಯಾವ ಸಂದೇಶವನ್ನು ಮೊಹರಿನ ಮೇಲೆ ಬರೆಯಬೇಕು? ಎಂದು ಭಿನ್ನವಿಸಿಕೊಂಡ.ಋಷಿಯು ಹೀಗೆ ಹೇಳಿದನು. ಮೊಹರಿನ ಮೇಲೆ ಹೀಗೆಂದು ಬರೆ “ಇದನ್ನೂ ದಾಟಬೇಕು” ಗೆದ್ದಾಗ ಈ ಮೊಹರನ್ನು ನೋಡಿ ವಿನೀತನಾಗುತ್ತಾನೆ. ಮತ್ತು ನಿರುತ್ಸಾಹದಲ್ಲಿ ಎದೆಗುಂದಿದಾಗ ಭರವಸೆಯ ಬೆಳಕಿನ ಕಿರಣವನ್ನು ಮೂಡಿಸುತ್ತದೆ.ಹಾವು ಏಣಿಯ ಆಟದಂತಿರುವ ಬದುಕನ್ನು ಹೇಗೆ ಒಪ್ಪಿ ಅಪ್ಪಿಕೊಳ್ಳುವುದು. ಉತ್ಸಾಹದ ಚಿಲುಮೆ ಚಿಮ್ಮಿಸುವುದು ಹೇಗೆ ನೋಡೋಣ ಬನ್ನಿ. ಮನಸ್ಥಿತಿ ಅನೇಕ ಸಲ ನಮ್ಮ ಪರದಾಟಗಳಿಗೆ ಏರಿಳಿತಗಳಿಗೆ ನಮ್ಮ ಮನಸ್ಥಿತಿ ಮುಖ್ಯ ಕಾರಣವಾಗಿ ಪರಿಣಮಿಸುತ್ತದೆ. ನಾವು ಸುಖವಾಗಿ ಇರಬೇಕೆಂದರೆ ನಮ್ಮೆದುರಿಗಿನವರನ್ನು ಸುಖವಾಗಿ ಇಡುವುದು ಮುಖ್ಯ “ನಾವು ಇತರರಿಂದ ಏನನ್ನು ಬಯಸುತ್ತೇವೆಯೋ ಅದನ್ನು ಅವರಿಗೆ ಮೊದಲು ನೀಡಬೇಕು.” ಆದರೆ ನಾವು ಇvರÀರಿಂದ ಸಹಕಾರ ಪ್ರೀತಿ ಬಯಸುತ್ತೇವೆ ಆದರೆ ನೀಡುವುದಿಲ್ಲ. ಬಹುತೇಕರು ಸ್ವಾರ್ಥ ಕೇಂದ್ರಿತರಾಗಿರುತ್ತಾರೆ ಯಾವಾಗಲೂ ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಮುಂದಿನ ಹರುಷದ ಮನಗಳು ನಮಗೆ ಪ್ರಸನ್ನತೆಯನ್ನು ಮೂಡಿಸುತ್ತವೆ ಎನ್ನುವ ಪರಿಕಲ್ಪನೆಯನ್ನು ತಲೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಅಂಥ ಮನಸ್ಥಿತಿಯಿಂದ ಬಿಡುಗಡೆ ಹೊಂದುವಂತೆ ಯಾರೂದರೂ ಉಪದೇಶಿಸಿದರೆ ಅವರ ಮುಂದೆ ಕೌಲೆತ್ತಿನಂತೆ ಗೋಣು ಹಾಕಿ ಮತ್ತೆ ಅದೇ ತಾಳ ಅದೇ ರಾಗ ಎನ್ನುವಂತೆ ಇರುತ್ತಾರೆ. ಎಂಥ ಕೆಟ್ಟವನಲ್ಲೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ ಎಂದು ನಂಬಬೇಕು. ಇದು ವಾಸ್ತವ ಕೂಡ. ಪ್ರತಿಯೊಂದಕ್ಕೂ ಇತರರನ್ನು ಅವಲಂಬಿಸುವ ಮನೋಭಾವವೂ ನೋವನ್ನು ತರುವುದು. ಮನಸ್ಥಿತಿ ಎನ್ನುವುದು ಫಲವತ್ತಾದ ಮಣ್ಣು ಇದ್ದಂತೆ ಅದರಲ್ಲಿ ಏನು ಬಿತ್ತುತ್ತೇವೆಯೋ ಅದನ್ನೇ ಬೆಳೆಯುತ್ತೇವೆ. ಕೋಪ ಅಸಹನೆ ಸೇಡು ತಿರಸ್ಕಾರ ಭಯದ ಬೀಜಗಳನ್ನು ಬಿತ್ತಿದರೆ ಅದೇ ಬೆಳೆಯುವುದು. ಪರಿಸ್ಥಿತಿಯನ್ನು ನಿಭಾಯಿಸುವ ಗುಣಗಳಾದ ತಾಳ್ಮೆ ಪ್ರೀತಿ ಒಲವು ಉದಾರತೆಯನ್ನು ಬಿತ್ತಿದರೆ ಬದುಕಿನಲ್ಲಿ ಕಹಿ ಪಾಲು ಕಡಿಮೆಯಾಗಿ ಸಿಹಿ ಪಾಲು ಹೆಚ್ಚುವುದು. ವಿವೇಕ ವಿವೇಚನೆ “ವಿಶ್ವ ವಿದ್ಯಾಲಯಗಳ ಆದ್ಯ ಕರ್ತವ್ಯವೆಂದರೆ ವಿವೇಕ ವಿವೇಚನೆಯನ್ನು ಕಲಿಸುವುದು. ವ್ಯಾಪಾರವನ್ನಲ್ಲ. ಯೋಗ್ಯತೆ ಸಂಪನ್ನಶೀಲತೆಯನ್ನೇ ಹೊರತು ವಿಧಿ ವಿಧಾನವನ್ನಲ್ಲ.” ಎಂದಿದ್ದಾನೆ ವಿನ್ಸ್ಟನ್ ಚರ್ಚಿಲ್ ಯಾರು ಪ್ರತಿದಿನ ಎದುರಾಗುವ ಸನ್ನಿವೇಶಗಳನ್ನು ನಿಭಾಯಿಸುತ್ತಾರೋ ಪರಿಸ್ಥಿತಿಗಳನ್ನು ಅರ್ಥೈಸಿಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೋ ಸಾಧ್ಯವಿದ್ದಷ್ಟು ತಾಳ್ಮೆಯಿಂದ ವರ್ತಿಸುತ್ತಾರೋ ಅವರನ್ನು ವಿವೇಕಿಗಳು ಎನ್ನುತ್ತಾರೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ಬದುಕಿನ ಎಂಥ ಜಟಿಲ ಸವಾಲುಗಳಲ್ಲೇ ಆಗಲಿ ವಿವೇಕದಿಂದ ಆಯ್ಕೆ ಮಾಡುವವರು. ಯಾರು ಮೂರ್ಖತನ ಕೆಟ್ಟದ್ದು ಎಂದು ಚೆನ್ನಾಗಿ ಅರಿಯಬಲ್ಲರೋ ಅವರು ವಿವೇಕಿಗಳು. ಅತ್ಯಂತ ನಿರುತ್ಸಾಹಗೊಂಡಾಗಲೂ ಸಹನೆ ಕಳೆದುಕೊಳ್ಳದೇ ವರ್ತಿಸಬೇಕು. ಸಮಸ್ಯೆಗಳನ್ನು ಹೊಸ ದೃಷ್ಟಿಯಿಂದ ಆಲೋಚಿಸಿ ಒಳ್ಳೆಯ ಪರಿಹಾರ ಸೂಸುವುದಷ್ಟೇ ಜಾಣತನವಲ್ಲ. ಓದಿನಲ್ಲಿ ಹಿಂದೆ ಬಿದ್ದರೂ ಲೋಕಾನುಭವದಿಂದ ಚಾಕು ಚಕ್ಯತೆಯಿಂದ ಬದುಕು ನಿರ್ವಹಿಸುವುದೂ ಜಾಣತನವೇ. ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಅಂತ ಎಲ್ಲೆಲ್ಲೋ ಬಿದ್ದು ಸಾಯುವುದಲ್ಲ. ಜೀವನದಲ್ಲಿ ನೊಂದು ಸಾಯಲು ನಿರ್ಧರಿಸುವವನು ವಿವೇಕೆ ಅಲ್ಲವೇ ಅಲ್ಲ. ಆಸಕ್ತಿ ಹುಮ್ಮಸ್ಸು ಇರಿಸಿಕೊಂಡರೇ ಜಗತ್ತೇ ನಮ್ಮದು. ಇವೆರಡನ್ನು ಸದಾ ಹೋದಲೆಲ್ಲ ಹೊತ್ತೊಯ್ಯದರೆ ಏರಿಳಿತಗಳನ್ನು ಉತ್ತಮವಾಗಿ ನಿರ್ವಹಿಸಬಲ್ಲೆವು. ಸಂತಸದಿಂದ ಇರಬಲ್ಲೆವು. ಶ್ರದ್ಧೆ ಜೀವನದಲ್ಲಿ ಏನೇನು ಒಳ್ಳೆಯದು ಆಗಿದೆಯೋ ಅದರ ಹಿಂದೆ ಶ್ರದ್ಧೆಯ ಸಿಂಹಪಾಲಿದೆ. ಇಳಿಕೆಗಳನ್ನು ಏರುಗಳನ್ನಾಗಿ ಬದಲಿಸುವ ಮರದ ತಾಯಿಬೇರು ಶ್ರದ್ಧೆ ಆಗಿದೆ. “ಶ್ರದ್ಧೆ ಎಲ್ಲಿದೆಯೋ ಅಲ್ಲಿ ಧೈರ್ಯವಿದೆ.”ಶ್ರದ್ಧೆ ಇಲ್ಲದ ಬಲವಂತನೂ ಸೋಲುತ್ತಾನೆ. ಶ್ರದ್ಧೆ ಇರುವ ಕಡಿಮೆ ಬಲ ಇರುವವನು ಗೆಲ್ಲುತ್ತಾನೆ. ಬದುಕಿನ ಬಾಗಿಲಿನಾಚೆ ಏನಿದೆ ಯಾರಿಗೂ ಗೊತ್ತಿಲ್ಲ ಆದರೆ ಕೆಟ್ಟದ್ದನ್ನು ಬದಲಿಸುವ ತಾಕತ್ತು ಶ್ರದ್ಧೆಗಿದೆ. ಬೆವರ್ಲ ಸೀಲ್ಸ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. “ನೀವು ವಿಫಲರಾದಲ್ಲಿ ನಿರಾಶರಾಗಬಹುದು.ಆದರೆ ಪ್ರಯತ್ನವನ್ನೇ ಮಾಡದಿದ್ದರೆ ವಿನಾಶ ನಿಶ್ಚಿತ.”ಶ್ರದ್ಧೆ ಇಲ್ಲದವನು ಏನಾದರೂ ಆಗಲಿ ಎಂದುಕೊಳ್ಳುತ್ತಾನೆ ಶ್ರದ್ಧೆ ಇರುವವನು ಅಂದುಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾನೆ. ಅಂದರೆ ಶ್ರದ್ಧೆ ಜೀವರಸಾಯನವಿದ್ದಂತೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ. ಬದುಕಬೇಕೆನ್ನುವ ಬೆಳೆಯಬೇಕೆನ್ನುವ ಆಸೆ ಚಮತ್ಕಾರಗಳನ್ನು ಸೃಷ್ಟಿಸಬಲ್ಲದು. ಅದೃಷ್ಟವಚಿತರೆಂದು ಗುರುತಿಸಲ್ಪಡುವವರೆಲ್ಲರೂ ಜೀವನದ ಸುಳಿಗಳಲ್ಲಿ ವೈಫಲ್ಯಗಳಲ್ಲಿ ಗಂಡಾಂತರಗಳಲ್ಲಿ ಶ್ರದ್ಧೆಯಿಂದ ಮುಂದೆ ಸಾಗಿದ್ದಕ್ಕೆ ಶ್ರದ್ಧೆ ಅವರ ಕೈ ಹಿಡಿದು ಮುನ್ನಡೆಸಿತು. ಕೋಲಂಬಸ್ ಗೆ ಹೊಸ ಜಗತ್ತನ್ನು ಕಂಡು ಹಿಡಿಯುವ ದಾರಿ ಗೊತ್ತಿರಲಿಲ್ಲ. ಆದರೆ ಅವನಲ್ಲಿದ್ದ ಬಲವಾದ ಶ್ರದ್ದೆಯೇ ಅದನ್ನು ಹುಡುಕಿಕೊಟ್ಟಿತು. ಸ್ಥಿರವಿಲ್ಲದ ಹೊಯ್ದಾಟದ ಸ್ಥಿತಿಯಲ್ಲಿ ಮುನ್ನಡೆಸುವುದು ಶ್ರದ್ಧೆ ಆದ್ದರಿಂದ ಶ್ರದ್ಧಾವಂತರಾಗುವುದು ಮುಖ್ಯ. ಸಂಕೋಚ – ಬೇಸರ ಸಂಕೋಚ ಬಹುತೇಕ ಸನ್ನಿವೇಶಗಳಲ್ಲಿ ಅಡೆತಡೆಯಾಗಿ ಪರಿಣಮಿಸುತ್ತದೆ. ಬೇರೆಯವರನ್ನು ತೃಪ್ತಿ ಪಡಿಸಲು ನಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಬಾರದು ನಮ್ಮ ಬಗ್ಗೆ ನಮಗಿರುವ ಕೆಟ್ಟ ಅಭಿಪ್ರಾಯಗಳಲ್ಲಿ ಬೇರೆಯವರು ಆಪಾದಿಸಿದ್ದೇ ಹೆಚ್ಚು.ಅವುಗಳನ್ನು ನಿಜವಾಗಿಸಬಾರದು. ಬೇರೆಯವರಿಗೆ ಸಲಹೆ ನೀಡಿದಾಗ ಅವರು ಪಾಲಿಸದಿದ್ದರೆ ಬೇಸರ ಪಟ್ಟುಕೊಳ್ಳಬಾರದು.ನಾವು ಹೇಳಿದ್ದನ್ನೆಲ್ಲ ಜನ ಸ್ವೀಕರಿಸಬೇಕೆಂದು ಯೋಚಿಸುವುದು ತಪ್ಪು. ನಾವು ಹೇಳಿದ್ದರಲ್ಲಿ ವಿಷಯ ಇಲ್ಲದಿರಬಹುದು, ಇಷ್ಟವಾಗದೇ ಇರಬಹುದು. ಇಲ್ಲವೇ ಅವರಿಗೆ ಅರ್ಥವಾಗುವ ಹಾಗೆ ನಾವು ಹೇಳದೇ ಇರಬಹುದು. ತಪ್ಪು ಒಪ್ಪು ತಪ್ಪು ಮಾಡಿದಾಗ ಒಪ್ಪಿಕೊಂಡು ಬಿಡಬೇಕು. ತಪ್ಪುಗಳೇ ನಚಿತರ ಒಪ್ಪುಗಳನ್ನು ಮಾಡಲು ದಾರಿ ತೋರಿಸುತ್ತವೆ.ತಪ್ಪು ಮಾಡಿದಾಗ ನಮಗೆ ನಾವೇ ಭಯಂಕರ ಶಿಕ್ಷೆ ವಿಧಿಸಿಕೊಂಡು ಮೂಲೆಯಲ್ಲಿ ಕೂರಬಾರದು. ತಪ್ಪನ್ನು ತಿಳಿದುಕೊಂಡು ಒಳ್ಳೆಯ ದೃಷ್ಟಿಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಚಾರ್ಲಿ ಚಾಪ್ಲಿನ್ ಚಿತ್ರಗಳಲ್ಲಿ ಆತ ಎಷ್ಟೋ ಸಲ ಬೀಳುತ್ತಿರುತ್ತಾನೆ. ಏಳುತ್ತಿರುತ್ತಾನೆ ಪೈಪು ಹಿಡಿದು ಮೇಲಕ್ಕೆ ಹತ್ತಿ ಧೊಪ್ಪೆಂದು ಕೆಳಕ್ಕೆ ಬೀಳುತ್ತಾನೆ. ಅದನ್ನು ಕಂಡು ನಾವು ಬಿದ್ದು ಬಿದ್ದು ನಗುತ್ತೇವೆ. ಯಾರೋ ಬಾಳೇ ಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದಾಗ ಗೊಳ್ಳೆಂದು ನಗುತ್ತೇವೆ. ಅಂದರೆ ಇತರರ ಕಷ್ಟಗಳು ತೊಂದರೆಗಳು ನಮಗೆ ತಮಾಷೆ ಎನಿಸುತ್ತವೆ. ಆದರೆ ನಮ್ಮ ಬುಡಕ್ಕೆ ಬಂದಾಗ ನೋವು ತರುತ್ತವೆ. ಈ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಕಷ್ಟಗಳಿಗೆ ಹೆದರಿ ನಮ್ಮನ್ನು ನಾವು ಶಿಕ್ಷಿಸಿಕೊಳ್ಳುವುದು ಬೇರೆಯಲ್ಲ ಇಲಿಯನ್ನು ಓಡಿಸಲು ಮನೆಗೆ ಬೆಂಕಿ ಹಚ್ಚುವುದು ಬೇರೆಯಲ್ಲ. ಎಲ್ಲ ಏರಿಳಿತಗಳಲ್ಲೂ ಗೆದ್ದು ಬದುಕಬೇಕೆನ್ನುವ ತೀವ್ರ ಆಕಾಂಕ್ಷೆ ನಮ್ಮನ್ನು ಸಂತಸದಿ ನಗೆ ಚೆಲ್ಲಿ ಬರಮಾಡಿಕೊಳ್ಳುತ್ತದೆ. ಹಾಗಾದರೆ ಆ ತೀವ್ರ ಆಕಾಂಕ್ಷೆ ನಮ್ಮದಾಗಿಸಿಕೊಳ್ಳೋಣ ಅಲ್ಲವೇ? ********************************************* ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಮುಖಾಮುಖಿ ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ ಪರಿಚಯ ;ಚೈತ್ರಾ ಶಿವಯೋಗಿಮಠಮೂಲತಃ ಬಿಜಾಪುರದವರು. ಬೆಂಗಳೂರಿನ ನಿವಾಸಿ.ಎಂಟೆಕ್ ಪದವಿಯನ್ನು ವಿಟಿಯು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್. ಕಾರ್ಯಕ್ರಮದ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನನ್ನೊಂದಿಗೆ ನಾನು ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ. ತೀವ್ರವಾಗಿ ನನ್ನ ಮನಸ್ಸಿಗೆ ಅರ್ಥೈಸಬೇಕಾದರೆ ಅದನ್ನ ಪದಗಳಾಗಿಸಿ ನನ್ನ ಮನದಾಳಕಿಳಿಸಿಕೊಳ್ಳುತ್ತೇನೆ. ಮನೆಯನ್ನ ನಾವು ದಿನವೂ ಗುಡಿಸಿ ಶುಚಿ ಮಾಡಿದರೂ ಅದು ಮತ್ತೆ ಕಸ, ಧೂಳುಗಳಿಂದ ತುಂಬಿಕೊಳ್ಳುವುದು. ಅಂತೆಯೇ ನಮ್ಮ ಮನಸ್ಸು. ಸದ್ವಿಚಾರಗಳನ್ನ ಅದೆಷ್ಟು ಬಾರಿ ಮನಸ್ಸಿಗೆ ತಿಳಿಹೇಳಿದರೂ ಅರಿಷಡ್ವರ್ಗಗಳ ಪ್ರಭಾವ ವಲಯದಲ್ಲಿ ಸಿಲುಕಿ ಮತ್ತೆ ಕೆಡುಕಿಗೇ ತುಡಿಯುವುದು. ಕವಿತೆ, ನನ್ನ ಮನಸ್ಸಿಗೆ ನಾನೇ ಬುದ್ಧಿ ಹೇಳುವ ಮಾತುಗಳು. ಬಹುಶಃ ಇದೇ ತೊಳಲಾಟಗಳನ್ನ ಬಹುತೇಕ ಎಲ್ಲರೂ ಅನುಭವಿಸುತ್ತಾರೆ ಹಾಗಾಗಿ ನನ್ನ ಕವಿತೆಗಳು ಅವರನ್ನೂ ತಟ್ಟಿ ತಮ್ಮೊಂದಿಗೆ ತಾವು ಆಡಲಾರದ ಮಾತುಗಳನ್ನ ನನ್ನ ಕವಿತೆಗಳಲ್ಲಿ ಕಂಡರೆ ಸಾರ್ಥಕ ಭಾವ. ಕಾಣದ, ಅರಿಯದ ಯಾರಿಗೋ ಈ ಕವಿತೆಗಳು ಸಾಂತ್ವಾನವಾಗುವುವೇನೋ ಅನ್ನುವ ಆಶಾಭಾವ. ಓದಿದ ಮನಸ್ಸಿಗೆ ಅರೆಕ್ಷಣದ ಸಂತಸ, ನಿರಾಳತೆ ನೀಡಲಿ ಎನ್ನುವ ಸದುದ್ದೇಶ. ಈ ಜಗತ್ತಿನೊಂದಿಗೆ ನನ್ನ ಜಗತ್ತನ್ನ ಬೆಸೆಯುವ ತಂತು ಕವಿತೆ.   ಕವಿತೆ ಹುಟ್ಟುವ ಕ್ಷಣ ಯಾವುದು ? ನಾನು ಸ್ವಭಾವತಃ ಬಹಿರ್ಮುಖಿ ಆದರೂ ನನ್ನೊಳಗೆ ಒಬ್ಬಳು ಸೂಕ್ಷ್ಮ ಅಂತರ್ಮುಖಿ ಅಡಗಿ ಕುಳಿತ್ತಿದ್ದಾಳೆ. ಅದೆಷ್ಟೋ ಸಲ ನನಗೆ ಉಮ್ಮಳಿಸಿ ಬರುವ ಅಳು, ಆಕ್ರೋಶ,  ತಡೆಯಲಾರದಷ್ಟಾಗುವ ಖುಷಿ, ನನ್ನ ಸುತ್ತ ನಡೆಯುವ ಕೆಲವು ಘಟನೆಗಳಿಂದಾಗಿ ನನ್ನೊಳಗೇ ಹೇಳಿಕೊಳ್ಳಲಾಗದಂತಹ ತಳಮಳ. ಯಾರಿಗೆ ಹೇಳಲಿ ಎಂದು ಪರದಾಡುವಾಗಲೇ ಕವಿತೆ ಹುಟ್ಟುತ್ತದೆ. ಕೇವಲ ನನ್ನೊಳಗಿನ ನೋವು-ನಲಿವುಗಳಷ್ಟೇ ಅಲ್ಲದೆ ಸುತ್ತ ಮುತ್ತಲಿನವರ ನೋವು ನಲಿವುಗಳಿಗೆ ನನ್ನ ಸ್ಪಂದನೆಯಾದಾಗ ಹುಟ್ಟುವುದು ಕವಿತೆ. ಒಂದು ಘಟನೆ, ಒಬ್ಬ ವ್ಯಕ್ತಿ, ಒಂದು ಸಂಬಂಧ ತೀವ್ರವಾಗಿ ಕಾಡಿದಾಗ ಹುಟ್ಟುವುದು ಕವಿತೆ. ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ  ಯಾವುದು  ? ಪದೇ ಪದೇ ಕಾಡುವ ವಿಷಯ ಯಾವುದು ? ನಾನು ಹೆಚ್ಚಾಗಿ ಪ್ರಕೃತಿಯ ಕುರಿತಾಗೇ ಬರೆಯುವುದು. ಕಾಂಕ್ರೀಟ್ ಕಾಡಿನ ಏಕತಾನತೆ ಬೇಸರ ತರಿಸಿದಾಗೆಲ್ಲ ಒಂದು ಕಾಡಿಗಾದರೂ ಹೋಗಿ ಕುಳಿತುಬಿಡಬೇಕೆನ್ನುವ ಹಂಬಲ. ಹಸಿರು ನನ್ನನ್ನು ಹೆಚ್ಚು ಸೆಳೆಯುತ್ತದೆ. ಅಷ್ಟೇ ಅಲ್ಲದೆ ಪ್ರಸ್ತುತ ಕಾಲಮಾನದ ಕೆಲವು ಅಕ್ರಮಗಳು, ಮನುಷ್ಯರೇ ಮನುಷ್ಯರನ್ನ ಲೂಟಿ ಮಾಡುವುದು, ಈಗಿನ ವಿಷಮ ಸ್ಥಿತಿಯಲ್ಲಿನ ಮನಸ್ಥಿತಿಗಳು. ಮತ್ತು ಪದೆ ಪದೆ ಕಾಡುವುದು ಅಪ್ಪನ ನೆನಪುಗಳು.  ಕವಿತೆಗಳಲ್ಲಿ ಬಾಲ್ಯ,  ಹರೆಯ  ಇಣುಕಿದೆಯೇ ? ಬಾಲ್ಯ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಅಪ್ಯಾಯಮಾನ. ಹಾಗೇ ನನಗೂ ಸಹ. ನನ್ನ ಬಾಲ್ಯವೆಂದರೆ ನನ್ನ ಅಪ್ಪಾಜಿ. ಅಪ್ಪನ ಕುರಿತು ಕೆಲವು ಕವನಗಳು ಬರೆದಿರುವೆ‌‌. ನನಗೆ ಭಾಷಾಭಿಮಾನ, ಓದು-ಬರಹದ ಬಗೆಗೆ ಒಲವು ಮೂಡಿಸಿದವರೇ ಅಪ್ಪಾಜಿ. ಇನ್ನು ಸಹಜವಾಗಿ ಪ್ರೀತಿ-ಪ್ರೇಮದ ಬಗೆಗೆಯೂ ಕವನಗಳನ್ನ ಬರೆದಿರುವೆ . ನೂರು ಭಾವಗಳಲ್ಲಿ ಒಲವಿನ ರಂಗು ತುಸು ಹೆಚ್ಚೇ ಆಗಿ ಕಾಣುವ ಹರೆಯದ ಪ್ರೀತಿಯ ನವಿರು ಭಾವನೆ ಮನಸ್ಸಿನಲ್ಲಿ ಪುಳಕ ಉಂಟುಮಾಡೋದರಲ್ಲಿ ಸಂದೇಹವೇ ಇಲ್ಲ! ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಆಳುವವರು ನಿಜವಾಗಿಯೂ ಆಳುವವರಲ್ಲದೆ ಅವರು ನಮ್ಮ ಪ್ರತಿನಿಧಿಗಳಾಗಿ ಸಂವಿಧಾನ ಬದ್ಧರಾಗಿ ನಡೆದುಕೊಳ್ಳುವುದು ಅತ್ಯವಶ್ಯಕ. ಆದರೆ ಈಗ? ಬರಿ ಪಕ್ಷ, ಅವರವರ ಸ್ವಂತ ಸಿದ್ಧಾಂತಗಳು, ಜಾತಿ ರಾಜಕಾರಣ, ಧರ್ಮದ ಹೆಸರಲ್ಲಿ ರಾಜಕೀಯ, ಹಣ, ಹೆಂಡ , ವಾಮ ಮಾರ್ಗಗಳೇ ಈಗಿನ ರಾಜಕೀಯದ ಸರಕುಗಳಾಗಿವೆ. ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದ ಭಾರತ ಕೇವಲ ಧರ್ಮದ ಹೆಸರಲ್ಲಿ ಗಲಭೆಗಳೇ, ಮತ್ತು ಅದರಿಂದ ಲಾಭ ಪಡೆಯುವ ರಾಜಕಾರಣಿಗಳೇ ಹೆಚ್ಚಾಗಿ ಹೋಗಿದ್ದಾರೆ. ಇವೆಲ್ಲ ಕಾರಣಗಳಿಂದಾಗಿ ರಾಜಕೀಯದ ಬಗ್ಗೆ ಬಹಳಷ್ಟು ಜಿಗುಪ್ಸೆ ಮತ್ತು ನೀರಸ ಮನೋಭಾವನೆ! ಆದರೂ ಸಣ್ಣ ಆಶಾಭಾವನೆ ಇನ್ನೂ ಇದೆ, ಈ ರಾಜಕೀಯ ಪರಿಸ್ಥಿತಿ ಸುಧಾರಣೆ ಆಗಲಿ ಅಂತ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ದಯವಿಲ್ಲದ ಧರ್ಮ ಅವುದಯ್ಯ? ಎಲ್ಲ ಧರ್ಮಗಳೂ ಹೇಳುವುದೂ ಇದನ್ನೇ. ನನಗೆ ಪ್ರತಿಯೊಂದು ಧರ್ಮದ ಬಗ್ಗೆಯೂ ಗೌರವವಿದೆ. ಒಂದು ಅಗೋಚರ ಶಕ್ತಿ ನಮ್ಮನ್ನೆಲ್ಲ ಕಾಯುತ್ತದೆಂಬ ಅಗಾಧ ನಂಬಿಕೆ ಇದೆ. ಆತ್ಮನೊಳಗೆ, ಪರಮಾತ್ಮ ಇದ್ದಾನೆ, ನಾವು ಮನಸಾರೆ ಪ್ರಬಲ ಇಚ್ಛೆಯಿಂದ ಒಳ್ಳೆಯದನ್ನು ಬೇಡಿಕೊಂಡರೆ ಖಂಡಿತವಾಗಿಯೂ ಜಗತ್ತಿನೆಲ್ಲ ಶಕ್ತಿ ಅದರೆಡೆಗೆ ಕೆಲಸ ಮಾಡಲು ಶುರುಮಾಡುತ್ತವೆ. ಅಂತೆಯೇ ಮೂಢನಂಬಿಕೆಗಳಲ್ಲಿ ಎಳ್ಳಷ್ಟು ಆಸಕ್ತಿ ಇಲ್ಲ. ದೇವರು ಖಂಡಿತವಾಗಿಯೂ ಇದ್ದಾಳೆ. ಅದು ನಮ್ಮ ತಂದೆ, ತಾಯಿ ರೂಪದಲ್ಲಿ, ಪ್ರಕೃತಿಯಲ್ಲಿ, ನಾವು ಮಾಡುವ ಒಳ್ಳೆಯ ಕೆಲಸಗಳಲ್ಲಿ, ಪ್ರೀತಿಯಲ್ಲಿ! ಈ ಜಗದ ಚೈತನ್ಯವೇ ದೇವರು ಎಂದರೆ ತಪ್ಪಾಗಲಾರದು. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಕೃತಕತೆ, ಅಸಹಜತೆ ಮತ್ತು ಅತಿಯಾದ ಸ್ವೇಚ್ಛೆಯೇ ಹೆಚ್ಚಾಗುತ್ತಿರುವುವೆಂಬ ಭಾವ. ಮಾತು, ಕೃತಿಗಳಲ್ಲಿನ ಅತಿಯಾದ ಸ್ವೇಚ್ಛೆಯೇ ಆಧುನಿಕತೆ ಎನ್ನುವಂತಾಗಿದೆ. ಹೊಸ ವಿಚಾರಗಳನ್ನ ಹುಟ್ಟು ಹಾಕುತ್ತ, ಹಳೆಯ ಒಳಿತುಗಳನ್ನ ಉಳಿಸಿಕೊಳ್ಳುತ್ತಾ ಸಾಗಬೇಕಾಗಿದೆ. ತೆರೆದ ಮನಸ್ಸು ಮತ್ತು ಹೃದಯವೈಶಾಲ್ಯತೆಗಳು ಬಹಳ ಕಡಿಮೆಯಾಗುತ್ತಿವೆಯೇನೋ.   ನಮ್ಮ ನಿಲುವನ್ನ ಸ್ಪಷ್ಟವಾಗಿ ಹೇಳಲೂ ಹಿಂಜರಿಕೆ, ಕಾರಣ ನಮ್ಮನ್ನ ಒಂದು ಪಂಥಕ್ಕೆ ಸೀಮಿತ ಮಾಡಿಬಿಡುತ್ತಾರೆ. ಹಂಸ ಪಕ್ಷಿಯ ಹಾಗೆ ಎಲ್ಲದರಲ್ಲೂ ಒಳಿತನ್ನ ಮಾತ್ರ ತೆಗೆದುಕೊಂಡು ಕೆಡುಕನ್ನ ಬಿಡಬೇಕು. ಹಾಗೆಯೇ ಎಲ್ಲದಕ್ಕೂ ಈಗ ಹೋರಾಡಬೇಕಾದ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದರಲ್ಲಿ ನನಗೆ ಅನುಭವವೂ ಕಡಿಮೆ. ಕಾರಣ ನಾನು ಯಾವುದೇ ಒಂದೇ ಗುಂಪಿಗೆ ಸೇರದೆ, ಒಳ್ಳೆಯ ಮತ್ತು ಹೊಸ ಹೊಳಹುಗಳು ಎಲ್ಲಿರಿತ್ತವೋ ಅಲ್ಲಿ ನನ್ನ ಒಲವಿರುತ್ತದೆ. ಆದರೂ ಒಟ್ಟಾರೆಯಾಗಿ ನೋಡಿದಾಗ ಎಡ-ಬಲಗಳೆಂದು ಒಬ್ಬರ ಮೇಲೊಬ್ಬರು ಕೆಸರೆರಚಾಡುವುದು ಬಿಟ್ಟು ಕನ್ನಡ ಭಾಷಾ ಪರಂಪರೆಯನ್ನ ಮುಂದುವರಿಸಿಕೊಂಡು ಹೋಗಲು ಒಗ್ಗೂಡುವುದು ಅತ್ಯವಶ್ಯಕ.  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಬಹಳಷ್ಟು ಕೆಟ್ಟ ವಿಷಯಗಳನ್ನೇ ನಾವು ಕೇಳುತ್ತಿದ್ದರೂ, ನನ್ನ ಸುತ್ತಲು ಅಥವಾ ನನ್ನ ಸಂಪರ್ಕಕ್ಕೆ ಬಂದಿರುವ ಬಹಳಷ್ಟು ಯುವಮನಸ್ಸುಗಳು ಕನ್ನಡ ಭಾಷೆಯ ಒಲವು, ಬರಹ, ಸಂಚಾರ, ಸಹೃದಯಿತನವನ್ನ ತೋರುತ್ತಿದ್ದಾರೆ. ಇದು ಬಹಳಷ್ಟು ಆಶಾದಯಕ ಸಂಗತಿ ಮತ್ತು ಸಂತಸ, ಸಂತೃಪ್ತಿಯ ವಿಷಯ. ಈ ಯುವ ಚಿಗುರುಗಳಿಗೆ, ಹಿರಿಯ ಬೇರುಗಳು ತಮ್ಮ ಪ್ರೀತಿ, ಜ್ಞಾನವನ್ನ ಧಾರೆ ಎರೆದು ಕೈ ಹಿಡಿದು ನಡೆಸೋದು ಮತ್ತೊಂದು ಖುಷಿಯ ವಿಚಾರ. ಇಂತಹವರ ಸಂತತಿ ಹೆಚ್ಚಲಿ ಅನ್ನೋ ಆಶಯ. ತಾಂತ್ರಿಕ ಪ್ರಗತಿ, ಹೊಸ ಆವಿಷ್ಕಾರಗಳು ಕ್ಷಿಪ್ರಗತಿಯಲ್ಲಿದ್ದರೂ ಬಹಳಷ್ಟು ಸಾಮಾಜಿಕ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ. ಅತ್ಯಾಚಾರ, ಕೊಲೆಗಳ ಸಂಖ್ಯೆ ಕಡಿಮೆಯೇ ಆಗುತ್ತಿಲ್ಲ. ಇವೆಲ್ಲ ಸಮಸ್ಯೆಗಳು ಬಗೆಹರೆಯಬೇಕೆಂದರೆ ಪ್ರತಿ ಒಬ್ಬ ವ್ಯಕ್ತಿ ಮೊದಲು ತಾನು ಸರಿಯಾಗಿ ಇರಬೇಕು. ಬಸವಣ್ಣ ಹೇಳಿದಂತೆ – “ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ”.  ಅತೀ ವೇಗದ ಮುಮ್ಮುಖದ ಚಲನೆಯೊಂದಿಗೆ, ಪ್ರೀತಿ, ಪ್ರೇಮ ಅಂತಃಕರಣದ ಗುರುತ್ವಾಕರ್ಷಣೆ ನಮ್ಮನ್ನ ಹಿಡಿದಿಡಲಿ. ಸಾಹಿತ್ಯದ  ಬಗ್ಗೆ ನಿಮ್ಮ ಕನಸುಗಳೇನು ? ನನಗೆ ಎಷ್ಟು ಸಾಧ್ಯವೋ ಅಷ್ಟೂ ಓದಬೇಕೆಂಬ ಆಸೆ. “known is drop unknown is ocean” ಎನ್ನುವಂತೆ, ಓದುವ ಪುಸ್ತಕಗಳು ಇನ್ನೂ ಬಹಳಷ್ಟಿವೆ. ಜೊತೆಗೆ ಬಹಳಷ್ಟು ಬರೆಯುವ ಕನಸಿದೆ. ನಾನು ಬರೆದದ್ದೆಲ್ಲವೂ ಅತೀ ಸುಂದರ ಅನ್ನುವಂತೆ ಇರದಿರಬಹುದು, ಆದರೆ ಮೋನಚುಗೊಳಿಸುವ ಪ್ರಯತ್ನ ಸದಾ ಜಾರಿಯಲ್ಲಿರುವುದು. ಇತ್ತೀಚೆಗೆ ಆಂಗ್ಲ ಪದ್ಯಗಳನ್ನ ಕನ್ನಡಕ್ಕೆ ತರುವ ಗೀಳು ಹತ್ತಿದೆ.  ಇದನ್ನ ಜಾರಿಯಲ್ಲಿಡುವ ಆಸೆ ಮತ್ತು ಪ್ರಯತ್ನ. ಹಾಗೆಯೇ ಕಥೆಗಳನ್ನು ಸಹ ಬರೆಯುವ ಹಂಬಲವಿದೆ. ಇಷ್ಟೇ ಸಾಹಿತ್ಯದ ಬಗ್ಗೆ ನನ್ನ ಸಧ್ಯದ ಕನಸುಗಳು. ಕನ್ನಡ  ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ  ಯಾರು ? ನಾನು ಬೆಳೆದ ಪರಿಸರ ಹೆಚ್ಚಾಗಿ ಶರಣರ ಸಂಸ್ಕೃತಿ ಮತ್ತು ವೈಚಾರಿಕತೆಯ ಪ್ರಭಾವದಲ್ಲಾದ್ದರಿಂದ ಸಹಜವಾಗಿ ಅಕ್ಕನ, ಅಣ್ಣನ ವಚನಗಳು ನನ್ನನ್ನು ಚಿಂತನೆಗೆ ಹಚ್ಚುವವು ಹಾಗೂ ಹೆಚ್ಚು ಆಪ್ತ ಎನಿಸುವಂತಹವು. ನನಗೆ ಕನ್ನಡದಲ್ಲಿ ಕಾಡುವ ಕವಿ ಕುವೆಂಪು.ಬೇಂದ್ರೆಯವರ ಪದ್ಯಗಳು . ಕಾರಂತರು, ಪೂರ್ಣಚಂದ್ರ ತೇಜಸ್ವಿ. ಆಂಗ್ಲದಲ್ಲಿ ಖಲೀಲ್ ಗಿಬ್ರಾನ್ ನ ಪದ್ಯಗಳು . ಈಚೆಗೆ ಓದಿದ ಕೃತಿಗಳಾವವು? ಇತ್ತೀಚೆಗೆ ಓದಿದ ಕೃತಿಗಳೆಂದರೆ: ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ,  ಇನ್ನೂ ಕವನ ಸಂಕಲನಗಳನ್ನ ಇಡಿಯಾಗಿ ಓದುವುದಕ್ಕಿಂತ ಬಿಡಿ ಬಿಡಿಯಾಗಿ ಓದುವುದೇ ಬಹಳ ಇಷ್ಟ. ಎಂ.ಆರ್ ಕಮಲ ಅವರ ನೆತ್ತರಲ್ಲಿ ನೆಂದ ಚಂದ್ರ, ಕುವೆಂಪುರವರ ಕೊಳಲು ಈ ಕವನ ಸಂಕಲನಗಳಿಂದ ಒಂದಷ್ಟು ಕವಿತೆಗಳನ್ನ ಆಗಾಗ ಓದುತ್ತಿದ್ದೇನೆ. ಓದುವ ಪಟ್ಟಿಯಲ್ಲಿ ಇನ್ನೂ ಬಹಳಷ್ಟು ಪುಸ್ತಕಗಳ ದೊಡ್ಡ ಪಟ್ಟಿಯೇ ಇದೆ. ನಿಮಗೆ ಇಷ್ಟವಾದ ಕೆಲಸ ಯಾವುದು? ಓದು ಬರಹಗಳೊಂದಿಗೆ, ನನಗೆ ಪತಿಯೊಂದಿಗೆ ಹೊಸ ಸ್ಥಳಗಳಿಗೆ ಭೇಟಿ ಕೊಡುವುದು, ಹಳೆಯ ವಾಸ್ತುಶಿಲ್ಪದ ಕಲಾಗುಡಿಗಳಿಗೆ ಹೋಗುವುದು, ಹಸಿರು, ಕಾಡು, ಬೆಟ್ಟ, ಝರಿಗಳಿಗೆ ಹೋಗಿ ಸುತ್ತಾಡಿ ಪ್ರಕೃತಿಯನ್ನ ಮನಸಾರೆ ಸವಿಯುವುದು. ಹಾಗೆಯೇ ನನ್ನ ಪುಟಾಣಿ ಮಗಳಿಗೆ ಪದ್ಯಗಳನ್ನ ಹೇಳಿಸುವುದು ಇಷ್ಟದ ಕೆಲಸದಲ್ಲೊಂದು!  ನಿಮಗೆ ಇಷ್ಟವಾದ ಸ್ಥಳ ಯಾವುದು ? ಇಂತಹದೇ ಎಂದು ಕಡ್ಡಿ ಕೊರೆದು ಹೇಳುವುದು ಕಷ್ಟ. ಎಲ್ಲಿ ಪ್ರೀತಿ ಅಂತಃಕರಣ ತುಂಬಿರುವುದೋ, ಎಲ್ಲಿ ಅಮ್ಮ ಇರುವಳೋ, ಎಲ್ಲಿ ಹಸಿರಿರುವುದೋ ಆ ಸ್ಥಳಗಳೆಲ್ಲವೂ ಇಷ್ಟವೇ! ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ  ಸಿನಿಮಾ ಯಾವುದು? ನನಗೆ ಬಹಳ ಇಷ್ಟವಾಗುವ ಸಿನಿಮಾಗಳು ಬಹಳಷ್ಟಿವೆ. ಡಾ.ರಾಜ್ ಕುಮಾರ್ ಅವರ ಎಲ್ಲ ಸಿನಿಮಾಗಳೂ ಇಷ್ಟವಾಗುತ್ತವೆ. ಅವರ ಸಿನಿಮಾಗಳಲ್ಲಿ ಮಾನವೀಯ ಮೌಲ್ಯಗಳು, ಪ್ರೀತಿ ಇಂತಹ ಅನೇಕ ಭಾವನಾತ್ಮಕ ಅಂಶಗಳೇ ಹೆಚ್ಚು. ಇತ್ತೀಚೆಗೆ ರಮೇಶ್ ಅರವಿಂದ್ ಅವರ ಶಿವಾಜಿ ಸುರತ್ಕಲ್ ಬಹಳಷ್ಟು ರೋಮಾಂಚನಕಾರಿ ತಿರುವುಗಳ ಚಿತ್ರ ಇಷ್ಟವಾಯ್ತು. ನೀವು ಮರೆಯಲಾರದ‌ ಘಟನೆ‌ ಯಾವುದು? ನನ್ನ ತಂದೆ ಅಕಾಲದಲ್ಲಿ ಇಹವನ್ನ ತ್ಯಜಿಸಿದ ಘಟನೆ ನಾನೆಂದಿಗೂ ಮರೆಯಲಾಗದ ಅತ್ಯಂತ ನೋವಿನ ಘಟನೆ. ಹಾಗೇ ನನ್ನ ಮಗಳು ಹುಟ್ಟಿದ ದಿನ ನಾನೆಂದಿಗೂ ಮರೆಯಲಾಗದ ಅತೀ ಸಂತಸದ ಕ್ಷಣ. ಹಾಗೆಯೇ ಶಾಲಾ ಕಾಲೇಜು ದಿನಗಳಲ್ಲಿ ಕ್ಲಾಸ್ ಬಿಟ್ಟು ಹೆಚ್ಚಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ಬಹಳಷ್ಟು ನೆನಪನಲ್ಲಿರುತ್ತದೆ. ****************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಕಥಾಗುಚ್ಛ

ಮನಸೆಂಬ ಮರ್ಕಟ

ಕಥೆ ಮನಸೆಂಬ ಮರ್ಕಟ ವಾಣಿ ಸುರೇಶ್ ಕೆ. ಸ್ಕೂಟರ್ ಕೀ , ಬ್ಯಾಗನ್ನು ತೆಗೆದುಕೊಂಡು ಧಾತ್ರಿ ಟಿವಿ ನೋಡುತ್ತಿದ್ದ ಮಗಳು, ಪೇಪರ್ ಓದುತ್ತಿದ್ದ ಗಂಡ, ತಿಂಡಿ ತಿನ್ನುತ್ತಿದ್ದ ಅತ್ತೆಗೆ ಕೇಳಿಸುವಂತೆ ಜೋರಾಗಿ , ” ಇನ್ನು ಮುಂದೆ ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಅಂತ ಡಿಸೈಡ್ ಮಾಡಿದ್ದೇನೆ.ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು  ಪಾಲಿಸಿದರೆ , ನನಗೂ ಆ್ಯಂಗ್ಸೈಟಿ, ಮೈಗ್ರೇನ್‌ ಕಡಿಮೆಯಾಗತ್ತೆ. ಸಣ್ಣಪುಟ್ಟ ವಿಷಯಕ್ಕೆ ನನಗೆ ಮೆಸೇಜ್ ಮಾಡೋದು, ಫೋನ್ ಮಾಡೋದು ಮಾಡ್ಬೇಡಿ. ಫೋನನ್ನು ಸೈಲೆಂಟ್ ಮೋಡಲ್ಲಿ ಇಡ್ತಾ ಇದ್ದೇನೆ ನಾನು. ಬರ್ಲಾ, ಬೈ” ಎಂದು ಲಿಫ್ಟ್ ಹತ್ತಿದಳು.       ಸ್ಕೂಟರ್ ಓಡಿಸುತ್ತಿರುವಾಗ ಇವತ್ತು ಮೈ ಮನಸ್ಸು ಹಗುರವಾದಂತೆ ಅನಿಸಿತು ಧಾತ್ರಿಗೆ. ಗೆಳತಿ ಹರಿಣಿ ಹೇಳಿದ್ದು ಎಷ್ಟು ನಿಜ! ತರಗತಿಯಲ್ಲಿ ಪಾಠ ಮಾಡುವಾಗಲೂ ಬರುವ ಮೆಸೇಜ್ ಮತ್ತು ಕಾಲ್ ಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಬ್ಯಾಂಕ್ ಸ್ಟೇಟ್ ಮೆಂಟ್ ತಗೊಂಡು ಬಾ ಇವತ್ತೇ ಲಾಸ್ಟ್ ಡೇಟು ಅನ್ನುವ ಗಂಡ, ದೇವಸ್ಥಾನಕ್ಕೆ ಹೋಗ್ಬೇಕು ಮನೆ ಕೀ ಕಾಣಿಸ್ತಿಲ್ಲ ಅನ್ನೋ ಅತ್ತೆ, ಯಾವತ್ತೋ ಕೊಟ್ಟ ಪ್ರಾಜೆಕ್ಟ್ ವರ್ಕ್ ಮಾಡದೆ ,ಟೀಚರ್ ಕೈಯಲ್ಲಿ ಪನಿಷ್ಮೆಂಟ್ ತಗೊಂಡು ‘ ಇವತ್ತೇ ತಗೊಂಡು ಬಾ’ ಅಂತ ಮಗಳು ಕಳಿಸಿದ ಮೆಟೀರಿಯಲ್ಸ್ ಲಿಸ್ಟ್…. ಇವೆಲ್ಲಾ ಒಂದೊಂದು ಉದಾಹರಣೆ ಅಷ್ಟೇ. ನಾನು ಮಾಡಿದ್ದು ಜಾಸ್ತಿ ಆಯಿತು, ಇನ್ನು ಮುಂದೆ ಮೂವರೂ ಸ್ವಲ್ಪವಾದರೂ ಜವಾಬ್ದಾರಿ ವಹಿಸಿಕೊಳ್ಳಲಿಅಂದುಕೊಳ್ಳುತ್ತಾ ಶಾಲೆ ತಲುಪಿದಳು.      ಧಾತ್ರಿ ಮತ್ತು ಹರಿಣಿ ಹೇಗೆ ಗೆಳತಿಯರಾದರು ಎನ್ನುವುದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ!! ಧಾತ್ರಿ ಮಿತಭಾಷಿಯಾದರೆ, ಹರಿಣಿಯದ್ದು ಮಲೆನಾಡಿನ ಮಳೆಯಂಥ ಮಾತು.ಕೇಳುವ ಎರಡು ಕಿವಿಗಳಿದ್ದರೆ ಸಾಕು ಹರಿಣಿಗೆ, ಮತ್ತೇನೂ ಬೇಕಿಲ್ಲ.ಅದಕ್ಕೇನೇ ಪಾಪದ ಧಾತ್ರಿಯ ಗೆಳೆತನ ಮಾಡಿದ್ದಾಳೆ ಎಂದು ಎಲ್ಲರ ಅಭಿಪ್ರಾಯ.    ಇವತ್ತು ಫಸ್ಟ್ ಪೀರಿಯಡ್ ಫ್ರೀ ಇದ್ದುದರಿಂದ ಇವರಿಬ್ಬರೂ ಸ್ಟಾಫ್ ರೂಮಿನಲ್ಲಿದ್ದರು. ಹರಿಣಿ ಅಸಹನೆಯಿಂದ ವಾಟ್ಸಾಪ್ ನಲ್ಲಿ ಮೆಸೇಜ್ ಟೈಪ್ ಮಾಡುತ್ತಿದ್ದನ್ನು ನೋಡಿ ಧಾತ್ರಿ ನೋಟ್ ಬುಕ್ ತಿದ್ದುತ್ತಾ ಕುಳಿತಳು. ಮೆಸೇಜ್ ಕಳಿಸಿ ಧಾತ್ರಿ ಕಡೆಗೆ ತಿರುಗಿದ ಹರಿಣಿ ಮಾತಿಗೆ ಶುರು ಹಚ್ಚಿದಳು ” ನೋಡು, ನನ್ನ ಮಗಳದು ಒಂದು ವಾರದಿಂದ ಒಂದೇ ಹಠ, ನೆಟ್ ಫ್ಲಿಕ್ಸ್ ಬೇಕಂತ. ಈವಾಗ ಸೆಕೆಂಡ್ ಪಿಯುಸಿ ಅವಳು. ಹಾಳುಮೂಳು ಸೀರೀಸ್ ನೋಡಿ ಕೂತ್ರೆ ಓದೋದು ಯಾವಾಗ? ಅವಳ ಅಪ್ಪನೂ ಅವಳ್ಗೇ ಸಪೋರ್ಟು. ಏನು ಬೇಕಾದ್ರೂ ಮಾಡ್ಕೊಳ್ಳಿ ಅಂತ ಗಂಡಂಗೆ ಮೆಸೇಜ್ ಹಾಕ್ದೆ.ತಲೆ ಕೆಟ್ಟು ಹೋಗ್ತಿದೆ ನಂದು” ಧಾತ್ರಿಗೆ ಏನು ಹೇಳಬೇಕೆಂದು ತೋಚಲಿಲ್ಲ.ಅಷ್ಟರಲ್ಲಿ ಹರಿಣಿಗೊಂದು ಕಾಲ್ ಬಂತು.” ಯಾವ ಟೀ ಶರ್ಟ್? ಬ್ಲ್ಯಾಕ್ ಕಲರ್ ಯೂ.ಎಸ್ ಪೋಲೋ ನಾ? ಮೊನ್ನೆ ಇಸ್ತ್ರಿಗೆ ಕೊಟ್ಟು ನಿನ್ನ ಕಪಾಟಿನಲ್ಲಿ ಇಟ್ಟಿದ್ದೇನೆ ನೋಡು.” ಕಾಲ್ ಕಟ್ ಮಾಡಿ ಪುನಃ ಧಾತ್ರಿ ಕಡೆಗೆ ತಿರುಗಿ, ” ಇವತ್ತು ಫೈನಲ್ ಇಯರ್ ಬಿ.ಇ. ಯವರೆಲ್ಲಾ ಸೇರಿ ಪಾರ್ಟಿ ಮಾಡ್ತಾ ಇದ್ದಾರಂತೆ. ಈ ಮಹಾರಾಯ ಈವಾಗ ಎದ್ದು ಶರ್ಟು ಕಾಣಿಸ್ತಿಲ್ಲ ಅಂತೆ! ಇವರಿಗೆಲ್ಲಾ ಕೈ ಕಾಲ ಹತ್ತಿರ ಕೆಲಸ ಮಾಡಿಕೊಟ್ಟು ಅಭ್ಯಾಸ ಆಗಿಹೋಗಿದೆ.ತಲೆ ಕೆಟ್ಟು ಹೋಗ್ತಿದೆ ನಂದು!” ಅಂದಳು. ಧಾತ್ರಿ ಹೇಗೋ ಕಷ್ಟ ಪಟ್ಟು ನಗು ತಡೆದುಕೊಂಡಳು.       ಅಷ್ಟರಲ್ಲಿ ಹರಿಣಿಯ ಫೋನಿಗೆ ಠಣ್ ಅಂತ ಒಂದು ಮೆಸೇಜ್ ಬಂತು. ಧಾತ್ರಿ ನೋಟ್ಸ್ ತಿದ್ದುತ್ತಿದ್ದರೂ ಹರಿಣಿಯ ಟೈಪಿಂಗ್ ಸ್ಪೀಡ್ ನೋಡಿ ಏನೋ ಸೀರಿಯಸ್ ವಿಷಯ ಇರಬೇಕೆಂದುಕೊಂಡಳು.ಐದು ನಿಮಿಷ ಮಾತುಕತೆಯಾದ ಮೇಲೆ ಪುನಃ ಹರಿಣಿ ಇವಳ ಕಡೆ ತಿರುಗಿ , ” ನಿನ್ನೆ ನಮ್ಮನೆಯೋರು ಆಫೀಸ್ ನಿಂದ ಬರ್ತಾ ಜಲೇಬಿ ತಗೊಂಡು ಬಂದಿದ್ರು. ಮಾವ ಹೈ ಶುಗರ್ ಪೇಷಂಟ್ ಆದ್ರೂ ಎರಡು ಜಲೇಬಿ ತಿಂದ್ರು!! ಅದಕ್ಕೆ ನಮ್ಮತ್ತೆ ಸಪೋರ್ಟ್ ಬೇರೆ. ಇದನ್ನೇ ನನ್ನ ಓರಗಿತ್ತಿಗೆ ಹೇಳಿದ್ದು ಈವಾಗ.ಇವ್ರಿಗೆ ಹೆಲ್ತ್ ಅಪ್ಸೆಟ್ ಆದ್ರೆ ನಾನೇ ನೋಡಿಕೊಳ್ಬೇಕು ತಾನೇ? ನಂಗಂತೂ ತಲೆ ಕೆಟ್ಟು ಹೋಗ್ತಿದೆ ಕಣೇ.”      ಈವಾಗ ಧಾತ್ರಿ ಜೋರಾಗಿ ನಕ್ಕಳು! ಆಶ್ಚರ್ಯದಿಂದ ನೋಡುತ್ತಿದ್ದ ಹರಿಣಿಗೆ, ” ನಿನ್ನೆ ನೀನು ನನಗೆ ಒಂದು ದೊಡ್ಡ ಭಾಷಣ ಮಾಡ್ದೆ, ನಾವು ಯಾರ ಬಗ್ಗೆಯೂ ತಲೆಕೆಡಿಸಿ ಕೊಳ್ಳಬಾರದು ಅಂತ.ಇವತ್ತು ನೀನು ಮಾಡ್ತಿರೋದು ಏನು?” ಎಂದು ಕೇಳಿದಳು. ಹರಿಣಿ  “ಇನ್ನೇನು ಮಾಡ್ಲಿ ನಾನು?” ಅನ್ನುವಷ್ಟರಲ್ಲಿ ಬೆಲ್ ಹೊಡೆಯಿತು. ಮುಂದಿನ ಕ್ಲಾಸಿಗೆ ಬೇಕಾದ ಪುಸ್ತಕ ತೆಗೆದುಕೊಂಡು ಹೊರಟ ಧಾತ್ರಿಗೆ ಹರಿಣಿ, ” ನೀನು ಇವತ್ತು ಮೊಬೈಲ್ ತರಲಿಲ್ವಾ?” ಎಂದು ಕೇಳಿದಳು. ” ತಂದಿದ್ದೇನೆ. ಆದ್ರೆ ನಿನ್ನ ಭಾಷಣದಿಂದ ಪ್ರಭಾವಿತಳಾಗಿ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇನೆ.” ಎಂದು ನಗುತ್ತಾ ತರಗತಿಯ ಕಡೆಗೆ ಹೊರಟಳು. ” ಅಂತೂ ಒಬ್ಬರಾದ್ರೂ ನನ್ನ ಮಾತಿಗೆ ಬೆಲೆ ಕೊಟ್ರಲ್ಲಾ ” ಎಂದು ಗೊಣಗುತ್ತಾ ಹರಿಣಿಯೂ ಹಿಂಬಾಲಿಸಿದಳು. *******************************************

ಮನಸೆಂಬ ಮರ್ಕಟ Read Post »

ಕಾವ್ಯಯಾನ

ಬಾಳ ಬೆಳಕೇ..

ಕವಿತೆ ಬಾಳ ಬೆಳಕೇ.. ವೀಣಾ ಪಿ. ‌ ಸುಧೆಗಡಲ ಸೊಗದೊಡಲಸವಿ ಆತ್ಮ ಚೇತನದಹಾಲು ಗಲ್ಲದಹದ ಭಾವವೇ.ಹೊಳೆವ ನಕ್ಷತ್ರದಮಿನುಗು ಕಣ್ಗಳ ಮಿಂಚೇ..ಮುಗ್ಧತೆಯು ಮೈವೆತ್ತಮುದ್ದು ಮಾಟದಬೊಂಬೆಯೇ..ಬೆಳಕು ಬೃಂದಾವನದಎಳೆ ತಳಿರು ತೋರಣದ‌ಚಿಗುರೊಡೆದಹಸಿರೇ..ಹೊಸ ವರಸೆಯಭರವಸೆಯನುಮೆಲ್ಲನರಳಿ ಮುಡಿಸುವನಗೆ ಮಲ್ಲಿಗೆ ಮೃದು ದಂಡೆಯೇ..ಕತ್ತಲೆಯ ಕಾರ್ಮೋಡಕಳೆದು ಬೆಳಕಾಗುವಬೆಳ್ಳಿ ಬೆಳದಿಂಗಳೇ..ನಿನ್ನಿಂದಲೇ ಬೆಳಕು ಬಾಳ್ಗೆ… ‌ *********************************************

ಬಾಳ ಬೆಳಕೇ.. Read Post »

ಕಾವ್ಯಯಾನ

ಕವಚದಲ್ಲಿ ಭದ್ರ

ಕವಿತೆ ಕವಚದಲ್ಲಿ ಭದ್ರ ತಮ್ಮಣ್ಣ ಬೀಗಾರ ಕವಚದಲ್ಲಿ ಭದ್ರ…ಅದು ಯಾವಾಗ ಹೋಗುತ್ತದೆಅಥವಾ ಹೋಗುವುದಿಲ್ಲವೆಂದುಹೇಳುವುದು ಹೇಗೆ…ನನಗಂತೂ ಬಂದಿದೆ ಕಾಯಿಲೆಮರದ ಬೇರು ಕೊಳೆಯುವಷ್ಟುಮಳೆಯಾದರೆ ಚಿಗುರುವುದು ಯಾವಾಗ…ತಲೆಯ ತುಂಬಾ ಕೆಲಸ ತುಂಬಿಕೊಂಡಿದೆಕಿಸೆ ಖಾಲಿಯಾಗಿ ಕೈಗಳನ್ನು ಜೇಡರ ಬಲೆಕಟ್ಟಿ ಹಾಕಿದೆ…ಒಂದು ದಿನ ರಜೆ ಸಿಕ್ಕಿದರೆ ನನ್ನೊಂದಿಗಾಡುತ್ತಿದ್ದಕಂದ… ದಿನವೂ ನನ್ನೊಂದಿಗೆಕುಸ್ತಿ ಹಿಡಿಯುತ್ತಾನೆ ತಲೆ ಕೆಡಿಸುತ್ತಾನೆಅಲ್ಲಿ ಬಸ್ ನಲ್ಲಿ ಜನರಿಲ್ಲ ಅಂಗಡಿಯಲ್ಲಿಜನರಿಲ್ಲ ಹೊಟೆಲಿನಲ್ಲಿ ಜನರಿಲ್ಲಆದರೂ ಕಾಯ್ದುಕೊಂಡಿಲ್ಲ ಅಂತರರೋಗ ಹರಡುತ್ತಲೇ ಇದೆಇವಳು ಯುಟ್ಯೂಬ್ ನೋಡಿ ಮಾಡುವಹೊಸ ತಿಂಡಿ ರುಚಿಯಾಗುವುದಿಲ್ಲಮತ್ತೆ ಕಂಪನಿಯಿಂದ ಬರುವ ಮೇಲ ಎಷ್ಟುನಿಧಾನವೆಂದರೆ ನಡೆದು ಬರುವಪೋಷ್ಟಮ್ಯಾನ ಗಿಂತಲೂ ಹಿಂದೆಊರ ತುಂಬೆಲ್ಲ ಜನರಿದ್ದಾರೆಎಲ್ಲರಿಗೂ ಈಗ ಬಾಯಿಗೆ ಮಾಸ್ಕ ಕಟ್ಟಿದ್ದಾರೆಮತ್ತು ಕಣ್ಣೂ ಮಾತಾಡುತ್ತಿಲ್ಲಸಾಲದ ಕಂತು ರಸ್ತೆಯ ಹೊಂಡಮತ್ತು ಕಚೇರಿಯ ಕೆಲಸ ಹಾಗೇ ಇವೆಯಾವುದೋ ಕಾಯಿಲೆಗಳಿಗೆಲ್ಲತಡೆ ಹಾಕಿಕೊಂಡವರು…ಆರಾಮ ಇದ್ದೇವೆ ಎನ್ನುತ್ತಾರೆಎಲ್ಲರೂ ಕೋವಿಡ ಕವಚದಲ್ಲಿ ಭದ್ರಹಲವರಿಗೆ ಜೈಲು… ಕೆಲವರಿಗೆ ರಕ್ಷಣೆ… ************************************

ಕವಚದಲ್ಲಿ ಭದ್ರ Read Post »

ಕಾವ್ಯಯಾನ

ನೀವು-ನಾವು

ಕವಿತೆ ನೀವು-ನಾವು ಸಿ.ಎಚ್.ಮಧುಕುಮಾರ ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನಿಮ್ಮನ್ನು ಕೇಳುವಂತಿಲ್ಲ;ಏಕೆಂದರೆ ನೀವು ಸಿಟ್ಟುಗೊಳ್ಳುವಿರಿ. ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನೀವು ನಮ್ಮನ್ನು ಪದೇ ಪದೇ ಕೇಳಬಹುದುನಾವಾಗ ಶಾಂತವಾಗಿದ್ದರೆನಿಮ್ಮ ಆತ್ಮಕ್ಕೆ ಸ್ವರ್ಗಸುಖನಿಮ್ಮ ಮಾತಿಗೆ ಸಿಟ್ಟಾದರೆತಟ್ಟನೇದುರಹಂಕಾರಿಯ ಪಟ್ಟ ಹೊರಿಸುವಿರಿ. ನೀವು ಸದಾ ಮುಂದೆ ನಡೆಯಲು ಬಯಸುವಿರಿ; ಅದಕ್ಕೂ ಮೊದಲುಹಿಂದೆ ನಾವಿರುವುದ ಖಚಿತ ಪಡಿಸಿಕೊಳ್ಳುವಿರಿ.ನಿಮ್ಮೊಂದಿಗೆ ಹೆಜ್ಜೆ ಹಾಕುವ ಬಯಕೆಯಿದೆ,ಅದು ಯಾವತ್ತೂ ಈಡೇರದ ಬಯಕೆಯೆಂದು ತಾವು ಆಗಾಗ್ಗೆ ಧೃಢಪಡಿಸಿರುವಿರಿಆದರೂ ಪಟ್ಟು ಬಿಡದೆ ನಡೆಯುವೆವು ನಾವು! *************************************************

ನೀವು-ನಾವು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಜ್ಞಾನಪಾನ ಭಕ್ತಿ ಜ್ಞಾನಗಳನ್ನು ಪ್ರೇರಿಸುವ ಕೃತಿ ಕೃತಿಯ ಹೆಸರು : ಜ್ಞಾನಪಾನಪ್ರಕಾಶಕರು : ಶ್ರೀ ಅಯ್ಯಪ್ಪ ಭಕ್ತ ಸಭಾ , ಚೆನ್ನೈಪ್ರಕಟಣಾ ವರ್ಷ : ೨೦೨೦ಪುಟಗಳು : ೩೨ ಹದಿನಾರನೆಯ ಶತಮಾನದಲ್ಲಿ ಭಾರತದಾದ್ಯಂತ ನಡೆದ ಭಕ್ತಿ ಚಳುವಳಿಯ ಸಂದರ್ಭದಲ್ಲಿ ಮಲೆಯಾಳ ಭಕ್ತಿ ಕಾವ್ಯ ರಚನೆ ಮಾಡಿದವರಲ್ಲಿ ಪ್ರಮುಖರು ಪೂಂದಾನಂ ನಂಬೂದಿರಿ. ಕನ್ನಡದಲ್ಲಿ ರಚನೆಯಾದ ದಾಸ ಸಾಹಿತ್ಯದಷ್ಟು ವ್ಯಾಪಕವಾದ ವಸ್ತು ವೈವಿಧ್ಯಗಳಿಲ್ಲದಿದ್ದರೂ ಮಲೆಯಾಳದಲ್ಲಿ ಪೂಂದಾನಂ, ಚೆರುಶ್ಶೇರಿ ನಂಬೂದಿರಿ, ತುಂಜತ್ತ್ ಎಳುತ್ತಚ್ಛನ್, ನಾರಾಯಣ ಭಟ್ಟಾತಿರಿಪ್ಪಾಡ್ ಮೊದಲಾದ ಭಕ್ತಿ ಕವಿಗಳು ಬಹಳಷ್ಟು ಜೀವನಮೌಲ್ಯಗಳುಳ್ಳ ದೈವಭಕ್ತಿ ಪ್ರೇರಕ ಕಾವ್ಯವನ್ನು ರಚಿಸಿದ್ದಾರೆ.   ‘ಜ್ಞಾನಪಾನ'(ಪಾನ ಅಂದರೆ ಮಣ್ಣಿನಿಂದ ಮಾಡಿದ ಒಂದು ಅಲತೆಯ ಪಾತ್ರ) ಗುರುವಾಯೂರಪ್ಪನನ್ನು ಸಂಬೋಧಿಸಿ ಬರೆದ ಭಕ್ತಿ ಕಾವ್ಯ. ಮಹಾಕೃಷ್ಣ ಭಕ್ತರಾದ ಪೂಂದಾನಂ ತಮ್ಮ ಎಳೆಯ ಮಗುವಿನ ಅಕಾಲ ಮರಣದ ಸಹಿಸಲಾರದ  ದುಃಖವನ್ನು  ಈ ಕಾವ್ಯದ ಮೂಲಕ ಯೋಗವಿಶೇಷವಾಗಿ ಪರಿವರ್ತಿಸುತ್ತಾರೆ. ಮಲೆಯಾಳದ ಭಗವದ್ಗೀತೆಯೆಂದೇ ಪ್ರಾಮುಖ್ಯ ಪಡೆದ ಈ ಕಾವ್ಯದಲ್ಲಿ ಪಾನ ಎಂಬ ಹೆಸರಿನ ಛಂದಸ್ಸಿನಲ್ಲಿ ಬರೆದ ೩೬೫  ಸಾಲುಗಳಿವೆ. ಇದು ಒಂದು ದಾರ್ಶನಿಕ ಕಾವ್ಯ. ತನ್ನ ಸಾಹಿತ್ಯಕ ಗುಣ, ಸರಳ ಪದಪುಂಜಗಳು, ತಾತ್ವಿಕ ಶಕ್ತಿ ಹಾಗೂ ಆಳವಾದ ಭಕ್ತಿಯ ಗುಣಗಳನ್ನೂ ಈ ಕಾವ್ಯದಲ್ಲಿ ನಾವು ಕಾಣಬಹುದು. ಉದ್ದಕ್ಕೂ ವಿರುದ್ಧ ಪ್ರತಿಮೆಗಳನ್ನು ಬಳಸುವ ಮೂಲಕ ಕೃಷ್ಣನ  ಬ್ರಹ್ಮಾಂಡ   ಕೃತ್ಯಗಳನ್ನು ವ್ಯಯ ಕರ್ಮಜಾಲದಿಂದ ಮೇಲೆತ್ತುವ ಕೆಲಸವನ್ನು ಇಲ್ಲಿ ಕವಿ ಮಾಡಿದ್ದಾರೆ. ಕವಿ ತನ್ನ ದುಃಖಾನುಭವವನ್ನು ಭಕ್ತಿಸೌಧದ ನಿರ್ಮಾಣಕ್ಕಾಗಿ ಬಳಸಿ ಎಲ್ಲರಿಗಾಗಿ ಅದನ್ನು ಸದಾಕಾಲವೂ ತೆರೆದಿಟ್ಟಿದ್ದಾರೆ. ಉಣ್ಣಿಕೃಷ್ಣನ್ ಮನಸ್ಸಿಲ್ ಕಳಿಕ್ಕುಂಬೋಳ್ ಉಣ್ಣಿಗಳ್ ಮಟ್ಟು ವೇಣಮೋ ಮಕ್ಕಳಾಯ್’ (  ಬಾಲ ಕೃಷ್ಣನು ಮನದಿ ಆಟವಾಡುತ್ತಿರಲು/ ಎಳೆಯ ಮಕ್ಕಳು ನಮಗೆ ಬೇರೆ ಬೇಕೆ? (ಪುಟ ೨೬)ಎನ್ನುವ ಸಾಲುಗಳು ಕವಿಯ ದುಖದ ಅಗಾಧತೆಯನ್ನೂ ದೃಢವಾದ ಕೃಷ್ಣಭಕ್ತಿಯನ್ನೂ ಪ್ರಕಟಿಸುತ್ತವೆ. ಈ ಭರತಖಂಡದ ಪುಣ್ಯ ಭೂಮಿಯಲ್ಲಿ ಜನ್ಮತಳೆದ  ನಾವು ಪುಣ್ಯವಂತರೆಂದೂ ಈ ಜನ್ಮವನ್ನು ನಾವು ಸತ್ಕಾರ್ಯಗಳಿಗಾಗಿ ವಿನಿಯೋಗಿಸ ಬೇಕೆಂದೂ ಪೂಂದಾನಂ ಇಲ್ಲಿ ಹೇಳುತ್ತಾರೆ. ಕೇವಲ ಲೌಕಿಕ ಸುಖ ಭೋಗಗಳಿಗಾಗಿ ಹೆಣಗಾಡುವುದು ನಮ್ಮ ಜೀವನದ ಧ್ಯೇಯವಾಗಬಾರದು. ದೇವರ ಸಹಸ್ರನಾಮಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಅಂತರಂಗದ ಭಕ್ತಿಯಿಂದ ನಿರಂತರವಾಗಿ ನಾಮಸ್ಮರಣೆ ಮಾಡುತ್ತ ಮೋಕ್ಷಪ್ರಾಪ್ತಿಗಾಗಿ ಪ್ರಯತ್ನಿಸುವುದೇ ನಮ್ಮ ಏಕಧ್ಯೇಯವಾಗಿರಬೆಕು ಎಂದೂ ಹೇಳುತ್ತಾರೆ.    ‘ಜ್ಞಾನಪಾನ’ ಕೃತಿಯ ಭಾಷಾ ಸರಳವಾಗಿದ್ದರೂ ಅದು ಶ್ರಿಮದ್ಭಾಗವತ, ಭಜಗೋವಿಂದಂ,, ವಿವೇಕಚೂಡಾಮಣಿ ಮತ್ತು ನಾರಾಯಣೀಯಂ ಎಂಬ ಮಹತ್ವದ ಕೃತಿಗಳ ಎಲ್ಲ ಸತ್ವಗಳನ್ನು ಒಳಗೊಂಡಿದೆ. ಪೂಂದಾನಂ ಅನ್ನುವುದು ಕವಿಯ ಹೆಸರಲ್ಲ.ಅದು ಅವರ ಮನೆತನದ ಹೆಸರು. ‘ಪೂಂದಾನಂ ಇಲ್ಲಂ’  ಇರುವುದು  ಈಗಿನ ಮಲಪ್ಪುರಂ ಜಿಲ್ಲೆಯ ಪೆರಿಂದಲ್ಮಣ್ಣದಿಂದ ೮ ಕಿ.ಮೀ.ದೂರದಲ್ಲಿ. ಕಾಸರಗೋಡಿನಲ್ಲಿರುವ ಹಿರಿಯ ಅನುವಾದಕರಾದ ಎ.ನರಸಿಂಹ ಭಟ್ ಕನ್ನಡಕ್ಕೆ ಮೂಲದ ಸೌಂದರ್ಯವನ್ನು ಮತ್ತು ಕಾವ್ಯಾತ್ಮಕತೆಯನ್ನು ಉಳಿಸಿಕೊಂಡು ಬಹಳ ಸುಂದರವಾಗಿ ಅನುವಾದಿಸಿದ್ದಾರೆ. ಉದಾಹರಣೆಯಾಗಿ ಪೂಂದಾನಂ ಅವರು ಸಮಾಜದ ವಿವಿಧ ವರ್ಗಳ ಜನರನ್ನು ಚಿತ್ರಿಸುವ ಕೆಲವು ಸಾಲುಗಳ ಅನುವಾದ : ಸ್ಥಾನಮಾನಕ್ಕಾಗಿ ಬೈದಾಡಿ ಬಡಿದಾಡಿ/  ಮಾನವೆಲ್ಲವ ಕಳೆದು ಬದುಕುವರು ಕೆಲವರು/ ಮದಮತ್ಸರಾದಿಗಳ ಮನದಲ್ಲಿ ಮುದ್ರಿಸುತ/ಮತಿಹೀನರಾಗಿ ಬದುಕುವರು ಕೆಲವೆಉ/ ಕಾಮಮೋಹಿತರಾಗಿ ಕಾಮಾಕ್ಷಿಯರ ಸೇರಿ/ಕಾಮಕೇಳಿಯಲಿ ಕಾಲ ಕಳೆಯುವರು ಕೆಲವೆರು/ದೇವಾಲಯಗಳಲ್ಲಿ ಸೇವೆಗಾಗಿಯೆ ಸೇರಿ/ ವೇಷಧಾರಿಗಳಂತೆ ಬದುಕುವರು ಕೆಲವರು..     ಓದುಗರ ಅನುಕೂಲಕ್ಕಾಗಿ ಅನುವಾದಕರು ಮೂಲ ಕೃತಿಯ ಸಾಲುಗಳನ್ನು ಬಲ ಬದಿಯ ಪುಟಗಳಲ್ಲೂ ಅನುವಾದವನ್ನು ಎಡಬದಿಯ ಪುಟಗಳಲ್ಲೂ ನೀಡಿದ್ದಾರೆ. *********************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಕಾವ್ಯಯಾನ

ಮೊಬೈಲಾಯಣ

ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ ಕಳೆದುಹೋದಹಸುಳೆ ಸಿಕ್ಕಂತೆಆಪ್ತತೆಯಿಂದ ಅಪ್ಪಿ,ಕೆನ್ನೆ ಸವರಿ ಸಂಭಾಷಿಸಿದೆಮುಗುಳ್ನಗು,ಅರೆನಗು, ಚೂರುಮಾತುಹಳಹಳಿಕೆ ಪ್ರಶ್ನೆಗಳ ಖಜಾನೆ;ಸ್ವಲ್ಪ ಹಾಡಿ ಬಿಟ್ಟ ಹಾಡು,ಕಾವ್ಯ ಆಗದ ಪದಗಳ ತಂಡ,ಕಥೆ, ಚುಟುಕು,ಲಹರಿಪೆಚ್ಚುಮುಖ, ವಿಜಯದ ನಿಶಾನೆರವಾನೆಯಾದ ದಾಖಲೆ ಕಳಚಿ ಬಿದ್ದ ಕ್ಷಣಗಳುಪರಾಗಸ್ಪರ್ಶ ನಡೆಸಿವೆಮೌನದ ಮೊಗ್ಗಿಗೆ ಸುಗಂಧವನು ಕೂಡಿಸಿದೆ ನೀನೆಂಬ ಕಳಚಿಹೋದ ನಾನುಕಳಚಲಾಗದಂತೆಎದುರಾದೆವು ನುಡಿಯಲಾಗದೆಪರಿಸ್ಥಿತಿಗೆ ತುಡಿಯಲಾಗದೆ ಈಗ ಗುಂಗಿನ ಸುರಿಮಳೆಎಲ್ಲೆಲ್ಲೂ ಹೊಮ್ಮಿದಂತೆ ಜೀವಸೆಲೆಎದೆ ಒದ್ದೆಹರವಾಗಿ ಉತ್ತ ಗದ್ದೆಕವನ ಪಲ್ಲವಿಸಿಪರಿಮಳಿಸಿದ ಮುಹೂರ್ತ; ಬದುಕಿಗೆ ದೊರಕಿದಂತೆ ಅರ್ಥ ********************************************************************************************************

ಮೊಬೈಲಾಯಣ Read Post »

ಕಾವ್ಯಯಾನ

ನೋವಮೌನ-ಅನಾಥನಲಿವು

ಕವಿತೆ ನೋವಮೌನ-ಅನಾಥನಲಿವು ಮಮತ ಅರಸೀಕೆರೆ ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣುಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು ನಿಂತ ಬದುಕ ಬಂಡಿಯ ಚಲನೆಕಕ್ಷೆಯ ತಂತು ಕಡಿದು ಆಳಕ್ಕೆ ಜಾರುವಾಗಲೇ ಖಿನ್ನ ಉಪಗ್ರಹದ ಕೈಹಿಡಿದ ಭೂಮಿ ಗುರುತ್ವ ಬತ್ತಿದ ಮೈಯ ತುಂಬ ಮರಳು ಹೊತ್ತು ಸಾಗುತ್ತಲೇ ಮರುಗಿ ತಟ್ಟಾಯಿಸುವ ನದಿಯ ಅಳಲುಧುಮುಕು ಜಲಪಾತದ ಮೆರುಗು ಕಳೆದ ಖಾಲಿಬಂಡೆಗಳ ಸವರುವ ಬಳ್ಳಿ, ಹೂಜಾಲ ನವಿರು ಯಾರೊ ಬೀಸಿದ ಕಲ್ಲು ಮತ್ತಾರಿಗೊ ತಾಗಿದಂತೆ, ಕಾಲು ಕಳೆದುಕೊಂಡು ಕುಂಟುವ ನಾಯಿ ಆರ್ತತೆಸೋಲನ್ನೇ ಕನವರಿಸಿ ಸದಾ ಸವಾರಿ ಮಾಡುವ ಜೂಜು ಕುದುರೆಯ ಮೊದಲ ಬಾರಿಯ ಗೆಲುವಿನ ಕೆನೆತ *******************************************

ನೋವಮೌನ-ಅನಾಥನಲಿವು Read Post »

You cannot copy content of this page

Scroll to Top