ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ವಾರ್ಷಿಕ ವಿಶೇಷ

ದೀಪ್ತಿ ಭದ್ರಾವತಿ ಕವಿತೆಗಳು ಲೂಟಿಯಾದವರು ಅಗೋ ಸಿಕ್ಕಿಯೇಬಿಟ್ಟ ನಿನ್ನೆಯಷ್ಟೇ ಎಷ್ಟೆಲ್ಲ ಜನರ ಉಸಿರು ಕದ್ದು ನಡೆದವ ಇಂದಿಲ್ಲಿ ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಸದ್ದಿಲ್ಲದೆ ಮಲಗಿದ್ದಾನೆ ಸೂರೆ ಹೋದವರು ಸೂರು ಹಾರುವಂತೆ ಕಿರುಚುತ್ತಿದ್ದರೂ ಗಮನಿಸದೆ ತನ್ನದೇ ಕನಸಲೋಕದಲ್ಲಿ ಹಾಯಾಗಿ ಕನಸುಕಾಣುತ್ತಿದ್ದಾನೆ ಲೂಟಿಯಾದವರು ಇದೀಗ ಇಲ್ಲಿ ಒಳಗಡೆಗೆ ನುಗ್ಗಲಿದ್ದಾರೆ ಎಬ್ಬಿಸಿ ಇವನನ್ನು ಬೀದಿಗೆಳೆದು ತಂದು ಆರೋಪಪಟ್ಟಿಯ ಸಿದ್ದವಾಗಿಸಿ ಕಂಬಕ್ಕೆ ಕಟ್ಟಿ ಥಳಿಸಲಿದ್ದಾರೆ “ಆಳಿಗೊಂದು ಕಲ್ಲು, ತಲೆಗೊಂದು ಮಾತು” ಕನ್ನ ಹಾಕುವುದೆ ಕಾಯಕ ಎಂದುಕೊಂಡವನಿಗೆ ಯಾವುದೂ ಹೊಸತಲ್ಲ ಪ್ರತಿ ಬಾರಿ ಆತ ಮಿಡಿತ ಹೊತ್ತು ನಡೆದಾಗಲೂ ಗಲಾಟೆ ಭುಗಿಲೇಳುತ್ತದೆ ಛಾವಣಿಗಳು ಬೊಬ್ಬೆ ಹಾಕುತ್ತವೆ ಪಂಚಾಯ್ತುದಾರರು ಊರ ಒಳಗಿನ ಮೂಲೆ ಮೂಲೆಯನು ಅವನಿಗಾಗಿ ತಡಕಿಸುತ್ತಾರೆ ಅವನು ಕಣ್ಣು ತಪ್ಪಿಸಿ ಮತ್ತೆಲ್ಲಿಯೋ ದೋಚುತ್ತಾನೆ ಹುಡುಕಿ ದಣಿದವರೆಲ್ಲ “ಇನ್ನು ಬಿಡುವ ಪ್ರಶ್ನೆಯೇ ಇಲ್ಲ” ಎನ್ನುತ್ತ ಹಾಕಿದ ಬಾಗಿಲು ಮುರಿಯುತ್ತಾರೆ ಬಡಿವ ಸದ್ದಿಗೆ ಎಚ್ಚೆತ್ತ ಅವನೂ “ಕಸುಬು ಬಿಡುವುದಿಲ್ಲ” ಕಿಚಾಯಿಸುತ್ತ ನುಗ್ಗುತ್ತಾನೆ ಹೆರಿಗೆ ವಾರ್ಡಿನ ಕಿಟಕಿಯೊಳಗೆ ರೇವೆ ಇಲ್ಲಿ ಹೀಗೆ ನಾನು ಒಂಟಿ ಕೂತಿರುವಾಗಲೇನೆನಪಿನ ಹಕ್ಕಿಯೊಂದುಕಿಟಕಿಯಲಿ ಸರಳಿನಾಚೆಯಲಿನಿಂತು ಕೂಗುತ್ತದೆ. ನಕ್ಷತ್ರದ ನಡುವಿನಲ್ಲಿ ನೆರಳುಗಳನೋಡುತ್ತೇನೆ ತೇವಗೊಂಡ ಆಗಸದ ಮುಗುಳೊಂದುಒದ್ದೆ ಕಣ್ಣಿನ ಅಂಚಿನಲ್ಲಿ ನಿಂತುಗೋಲಿಯಾಡುತ್ತದೆ… ಬರಲೋ ಬೇಡವೋಗೊತ್ತಾಗದೆ ಮತ್ತದೇ ಬಿಡುಗಣ್ಣಿನಲಿಆಗಸ ನೋಡುತ್ತೇನೆ. ಅಸ್ಥಿರಗೊಂಡ ಎದೆಯ ಕವಾಟದ ಚೂರೊಂದುಮುಗ್ಗಲು ಗೋದಾಮಿನಲಿ ಸೇರಿ ನರಳುತ್ತದೆ.ಇಲ್ಲ ಬಿಡು ಭೇಟಿಯಿನ್ನು ಸಾಧ್ಯವಿಲ್ಲಹರಕು ಕನಸೊಂದು ಯಾವುದೋವಿಳಾಸ ಹುಡುಕಿ ತಿರುಗುತ್ತದೆ.. ಇನ್ನು ಆ ನೆರಳು, ನೆನಪು, ಮುಗಿದ ರೇವೆಎಲ್ಲವೂ ನನ್ನ ಕಾಲುಂಗರದ ನಡುವಿನಲಿಎದ್ದ ಕುರುಗಳಲ್ಲಿಯಾವುದೋ ಸನ್ನೆಗಾಗಿ ಕಾಯತೊಡಗುತ್ತವೆ.. ಗೋದಾಮು ಅಸಲಿಗೆ ಹೇಳುವುದು ಎನೂ ಇರಲಿಲ್ಲನಡು ಮಧ್ಯಾಹ್ನವೊಂದು ತೆವಳು ಗಾಳಿಯಲಿತೇಲುತ್ತ ಫೌಂಡೇಶಿನ ಕ್ರೀಮುಗಳಲಿಸುಕ್ಕು ಮರೆಸುವಾಗಉಗುರು ಕಚ್ಚುವುದಲ್ಲದೆಮತ್ತೇನಿರುತ್ತದೆ ಹೇಳು ತೀಡುವ ಬೆಳ್ಳಿಚಾಮರಕ್ಕೆ ಇರುಳ ಲೇಪಿಸುವಾಗಬಣ್ಣ ಹೀರಿದ ಬ್ರಶ್ಶಿನಂತೆತಿರು ತಿರುಗಿ ಮತ್ತದೇ ಕನಸುಗಳ ಒಪ್ಪ ಮಾಡುವಾಗಹಳೆಯ ಗೋದಾನಿನ ಮುಗ್ಗುಗಟ್ಟಿದಜೋಳ ಸುಮ್ಮನೆ ನಗುವಾಗಏನೆಲ್ಲ ಹೇಳುವಶಕುನದವನ ಹಾಗೇಕೆ ನಿಂತೆ ಹೇಳು ಒಣ ತುಟಿಗಳಲ್ಲಿ ಮಾತುಗಳ ಹೆಕ್ಕುವೆನೆಂಬನಿನ್ನ ಹುಂಬತನಕ್ಕೆನನ್ನ ಲಿಪ್ ಸ್ಟಿಕ್ಕಿನ ತೇರು ಹೊಳೆದದ್ದುಸುಳ್ಳಲ್ಲಸುಡುವ ಕೆಂಡ ಹಾಯ್ದ ಮಿಡತೆ ಒಳಗೊಳಗೆಕಣ್ಣಿನಲಿಕನಸು ನಕ್ಕಿದ್ದು ಖರೆಕುತ್ತಿಗೆಯಲ್ಲೊಂದು ಕರಿ ಇರುವೆಗಳಸಾಲು ಕಾಲುಗಟ್ಟಿದಗೂಟದ ಬೇಲಿಮತ್ತೆ ಮತ್ತೆ ತಡೆ ಹಿಡಿಯುತ್ತಉಗ್ಗುಗಳ ಲೋಕದಲ್ಲಿ ನನ್ನ ಉಗುಳು ನುಂಗಿಸುವಾಗ ಎಲ್ಲ ಬಲ್ಲವನಂತೆ ನಿಂತದ್ದು ನಿನ್ನದೇತಪ್ಪು ಇದೀಗ ಮಾತಾಡಬೇಡೆಂದುನಾನು ಹೇಳುವ ಸ್ಥಿತಿಯಲ್ಲಿ ಇಲ್ಲಆದರೆ ನೀನು.. ************************************

Read Post »

ಇತರೆ, ವಾರ್ಷಿಕ ವಿಶೇಷ

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ ಡಿ.ಎಸ್.ರಾಮಸ್ವಾಮಿ ಸಾಹಿತ್ಯವನ್ನು ಮುದ್ರಣ ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಂಗಾತಿಯ ಸಂಪಾದಕರು ಅಲವತ್ತುಕೊಂಡಿದ್ದಾರೆ. ಪ್ರತಿ ಭಾನುವಾರ ಎಲ್ಲ ಪತ್ರಿಕೆಗಳ ಪುರವಣಿಗಳನ್ನು ಹರಡಿಕೊಂಡು ಓದುತ್ತಿದ್ದ ಅನುಭೂತಿ ಈ ಕೋವಿಡ್ ನೆವದಿಂದಾಗಿ ಇಲ್ಲವಾದದ್ದು ನೆನಪಾಗಿ ಸಂಗಾತಿಯ ಸಂಪಾದಕರ ಆರೋಪ ಸರಿ ಅನ್ನಿಸಿತು ಕೂಡ. ಆದರೆ ಸ್ವಲ್ಪ ಕಾಲ ಯೋಚಿಸಿದ ಮೇಲೆ ಆ ಅಭಿಪ್ರಾಯ ತಾತ್ಕಾಲಿಕ ಅನ್ನಿಸುತ್ತಿದೆ. ಓದುಗರೇ ಇಲ್ಲದೆ ಪ್ರಸರಣವೇ ಇಲ್ಲದೆ ಪತ್ರಿಕೆಗಳೇ ಮುಚ್ಚುತ್ತಿರುವ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ ಅಂತೆಲ್ಲ ಕೇಳುವುದು ಹೊಟ್ಟೆ ಹಸಿದು ಸಾಯುತ್ತಿರುವನ ಮುಂದೆ ಸಂಗೀತ ನುಡಿಸಿದಂತೆ ಅನ್ನಿಸಿತು. ಈ ನಡುವೆ ಬಾಗಿಲು ಹಾಕಿಕೊಂಡ ಟಿವಿ ವಾಹಿನಿಗಳು, ಕೆಲಸ ಕಳೆದುಕೊಂಡ ಮುದ್ರಣ ಮಾಧ್ಯಮದ ಗೆಳೆಯರು ನೆನಪಾದರು. ಕೋವಿಡ್ ಎನ್ನುವುದೇ ಒಂದು ನೆವವಾಗಿ ಒಳಗೊಳಗೇ,  ಸಾಯುತ್ತಿದ್ದ ಎಷ್ಟೊಂದು ಆರ್ಥಿಕ ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ಬಾಗಿಲು ಮುಚ್ಚಿದವು. ನಿವೃತ್ತಿಯ ಸೌಲಭ್ಯವನ್ನೇ ಮೊಟಕು ಮಾಡಿದ ಸಂಸ್ಥೆಗಳಂತೆಯೇ ಹೊಸ ನಿವೃತ್ತಿಯ ಯೋಜನೆ ಪ್ರಕಟಿಸಿದ ಸಂಸ್ಥೆಗಳೂ ಇವೆ. ಸದಾ ಸರ್ವದಾ ಜಾಹೀರಾತಿನ ಆದಾಯದ ಮೇಲೇ ನಿಂತಿರುವ ಪತ್ರಿಕೆಗಳಿಗೆ ಈ ಪುರವಣಿಗಳ ನಿರ್ವಹಣೆ ಯಾವತ್ತೂ ಸವಾಲಿನದೇ….ಏನೆಲ್ಲ ಮಾಡಿಯೂ ಒಂದು ಸಂಚಿಕೆ ತಂದರೆ ಅದಕ್ಕೆ ಬರುವ ಪ್ರತಿಕ್ರಿಯೆ ಪೂರಕವಾಗಿರುವುದಿರಲಿ ಆ ಸಂಚಿಕೆಯ ಹಿಂದಿನ ಉದ್ದೇಶಗಳನ್ನು ಮರೆತು ಅಲ್ಲಿ ಒಳಗೊಂಡ ಲೇಖಕರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವವರೇ ಕಾಣುತ್ತಾರೆ. ಈ ವರ್ಷ ಕೋವಿಡ್ ದಾಳಿಯ ಪೂರ್ವದಲ್ಲಿ ಪ್ರಕಟವಾದ ಎಲ್ಲ ಪತ್ರಿಕೆಗಳ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನು ಹರಡಿಕೊಂಡು ಕೂತರೆ ಆ ಎಲ್ಲ ಪತ್ರಿಕೆಗಳೂ ವಿಶೇಷಾಂಕದ ಹೂರಣಕ್ಕಿಂತ ಜಾಹೀರಾತಿನ ಬಲ ಸಾಧಿಸುರುವುದೇ ಸಾಧನೆಯಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗೆ ತಕ್ಕನಾದ ಅವಕಾಶ ಬೇಕಾಗುವುದು ಬೌದ್ಧಿಕ ಹಸಿವೆಯ ನಿವಾರಣೆಗೆ. ಸದ್ಯದ ಸ್ಥಿತಿಯಲ್ಲಿ ಎಲ್ಲ ಸಮುದಾಯಗಳೂ ಆತಂಕ ಮತ್ತು ಭಯದಲ್ಲಿ ಇರುವಾಗ  ಮತ್ತು ಹೊಟ್ಟೆಯ ಹಸಿವೆಯನ್ನು ನೀಗಿಕೊಳ್ಳಲು ಯಾವುದಾದರೂ ಮಾರ್ಗ ಇದೆಯೇ ಎಂದು ಚಿಂತಿಸುತ್ತಿರುವಾಗ ಸಂಪಾದಕರ ಆಗ್ರಹಕ್ಕೆ ಅರ್ಥ ಇರುವಂತಿಲ್ಲ. ಏಕೆಂದರೆ ಸದ್ಯ ನಾವೆಲ್ಲರೂ ಎದುರಿಸುತ್ತಿರುವ ಮೂಲಭೂತ ಸಮಸ್ಯೆಯ ಮುಂದೆ ಸಾಹಿತ್ಯವೋ ಸಂಗೀತವೋ ಅಥವ ಸಂಸ್ಕೃತಿ ಚಿಂತನೆಯೋ ಅರ್ಥವಿಲ್ಲದ ಪ್ರಶ್ನೆಯಾಗಿಯೇ ಕಾಡುತ್ತಿದೆ…… ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ. ಲಲಿತ ಕಲೆ ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು. ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. “ಏಕಂ ಸತ್ ವಿಪ್ರಾ ಬಹುದಾ ವದಂತಿ” ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ. ಲಲಿತ ಕಲೆಗಳ ಒಂದೊಂದು ವಿಭಾಗಕ್ಕೂ ಒಂದೊಂದು ವಿಶೇಷ ಲಕ್ಷಣಗಳಿವೆ. ಪ್ರತಿ ಕಲೆಗೂ ಸಾಧನಗಳು ಬೇರೆ,ಬೇರೆ. ಸಾಹಿತಿ ತಾನು ತನ್ನ ಕಾಲದಲ್ಲಿ ನೋಡಿದ್ದನ್ನು ಅನುಭವಿಸಿದ್ದನ್ನು ಆಗಿನ ಭಾಷೆ, ಶೈಲಿ, ಸಂಪ್ರದಾಯ, ಕಟ್ಟಳೆಗಳನ್ನು ಅನುಸರಿಸಿ ದಾಖಲು ಮಾಡುತ್ತಾನೆ. ತನ್ನ ಪ್ರತಿಭೆಗೆ ತಕ್ಕ ಶಬ್ದಾರ್ಥ,ಧ್ವನಿಗಳ ಮೂಲಕ ಆ ಸಮಯದಲ್ಲಿ ಹೊಳೆದ ಸೌಂದರ್ಯವನ್ನು ಬುದ್ಧಿಯಿಂದ ಸೆರೆಹಿಡಿದು, ಧಾರಣೆಯಿಂದ ನಿಲ್ಲಿಸಿ ತನ್ನ ಕೃತಿಯಲ್ಲೊಂದು ಜಾಗವನ್ನು ಕೊಟ್ಟು ಸಲಹಿರುತ್ತಾನೆ. ಸಾಹಿತ್ಯವೆಂಬುದು ಎಲ್ಲ ಕಾಲಕ್ಕೂ ಸಹಜವಾದ, ಮಾನವ ಪ್ರಪಂಚಕ್ಕೆಲ್ಲ ಸಾಮಾನ್ಯವಾಗಿ ಹೊಂದುವ, ರಸಸೃಷ್ಟಿಯಾಗಿರುವುದರಿಂದ ಸಾಹಿತಿಯೊಬ್ಬನ ಕೃತಿ ಮುಂದೆ ಎಲ್ಲ ಕಾಲದಲ್ಲೂ ಅದನ್ನು ಸವಿಯುವವರಿಗೆ ಅಕ್ಷಯಪಾತ್ರೆಯಾಗಿ ಒದಗುತ್ತಲೇ ಇರುತ್ತದೆ, ಅದಕ್ಕೆ ಅಂಥ ತಾಕತ್ತು ಇದ್ದರೆ. ಹಾಗೇ ದೂಷಿಸುವವರಿಗೂ ಅದು ಅಕ್ಷಯಪಾತ್ರೆಯೇ ಸರಿ! ಇನ್ನು ಚಿತ್ರಕಾರ-ಚಿತ್ರಕ್ಕೆ ಬೇಕಾಗುವ ಬಣ್ಣ, ರೂಪರೇಖೆ, ಕುಂಚ, ಹಲಗೆ, ಕಾಗದ,ಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಯೋಚಿಸಿ ಯೋಜಿಸುತ್ತಾನೆ. ಸಂಗೀತವಂತೂ ನಾದ, ಶಾರೀರ, ಪಕ್ಕ ವಾದ್ಯ, ಸಾಧನೆ ಇತ್ಯಾದಿಗಳಿಂದ ಹುಲುಸುಗೊಂಡರೆ, ಶಿಲ್ಪಿ ತನ್ನ ವ್ಯವಸಾಯಕ್ಕೆ ಮಣ್ಣು, ಕಲ್ಲು, ಗಾರೆ, ಮರ, ಲೋಹ, ಬಟ್ಟೆ, ಬೆಂಡು. ಉಳಿ, ಸುತ್ತಿಗೆ, ಚಾಣ ಇತ್ಯಾದಿಗಳನ್ನು ಬಳಸಿ ತನ್ನಿಷ್ಟದ ಕೃತಿಯನ್ನು ರಚಿಸುತ್ತಾನೆ. ರಸಾಸ್ವಾದನೆ ಅದನ್ನು ಸವಿಯುವವರ ಮಟ್ಟಕ್ಕೆ ತಕ್ಕ ಆಳ ಅಗಲಗಳ ವ್ಯಾಖ್ಯೆಯನ್ನು ತುಂಬಿಕೊಡುತ್ತದೆ. ‍ಬದುಕಿನ ಅರ್ಥವನ್ನು ಬಗೆಬಗೆಯಾಗಿ ಬಗೆಯುತ್ತಲೇ ಇರುವ ಸಾಹಿತಿ-ಕಲಾವಿದರನ್ನು ಅನುಮಾನಿಸುವುದು, ಸನ್ಮಾನಿಸುವುದು, ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಅವನನ್ನು ಎತ್ತಿ ಮೆರಸುವುದು ಹಾಗೇ ಎತ್ತಿ ಎಸೆಯುವುದನ್ನೂ ಲೌಕಿಕ ಮಾಡುತ್ತಲೇ ಬಂದಿದೆ. ಟಿ.ಆರ್.ಪಿಗಳ ಕಾಲದಲ್ಲಿ ಇದು ಸಹಜವೂ, ನ್ಯಾಯವೂ ಆದುದೇ ಆಗಿದೆ! ಸಮಾಜದ ಆಶಯಕ್ಕೆ ಅಂದರೆ ಪ್ರಭುತ್ವಕ್ಕೆ ಪೂರಕವಾಗಿ ಕೃತಿ ರಚಿಸುವವನಿಗೆ ಇರುವ ಮಾನ ಮರ್ಯಾದೆಗಳು ಅದಕ್ಕೆ ವಿರೋಧಿಯಾಗಿರುವವನಿಗೆ ಸಲ್ಲುವುದು ಯಾವತ್ತೂ ವಿಳಂಬವೇ. ಏಕೆಂದರೆ ಸತ್ಯದ ಹುಡುಕುವಿಕೆಯಲ್ಲಿ ಯಾವತ್ತೂ ಪರಿಣಾಮಗಳು ತಟ್ಟಂತ ಸಿಕ್ಕ ಉದಾಹರಣೆಗಳು ಇಲ್ಲವೇ ಇಲ್ಲ. ಸತ್ಯ ಎನ್ನುವುದು ಸಿಗುತ್ತದೋ ಇಲ್ಲವೋ ಅಂಥದೊಂದು ಸತ್ಯವನ್ನು ಬೆನ್ನು ಹಿಡಿದು ಹೊರಡುವುದೇ ನಿಜಕ್ಕೂ ಅಗ್ನಿದಿವ್ಯದ ಅಸಲಿಯತ್ತು. ಉಪನಿಷತ್ತಿನಿಂದ ಓಷೋವರೆಗೂ ಈ ಇದೇ ಸತ್ಯದ ಹುಡುಕುವಿಕೆಯೇ ನಮ್ಮೆಲ್ಲ ಸಾಹಿತಿ-ಕಲಾವಿದರನ್ನೂ ಪೋಷಿಸಿದೆ, ತನ್ನ ಉದರದಲ್ಲಿಟ್ಟುಕೊಂಡು ಕಾಪಾಡಿದೆ. ತಾನು ಬದುಕಿದ್ದ ಕಾಲದಲ್ಲಿ ಅಜ್ಞಾತನಾಗಿದ್ದ ಬೋದಿಲೇರ್, ಸತ್ತ ನಂತರವೇ ತೀವ್ರ ತರದ ಚರ್ಚೆಗಳನ್ನು ಹುಟ್ಟುಹಾಕಿದ ಬ್ರೆಕ್ಟ್, ಎಂಟುನೂರು ವರ್ಷಗಳ ಹಿಂದೆ ರಚಿತವಾದರೂ ಇವತ್ತಿಗೂ ಹೊಸ ಹೊಸ ಜಿಜ್ಞಾಸೆಗಳಿಗೆ ಒಡ್ಡುವ ವಚನಗಳು, ಲಿಯಾನಾರ್ಡೊ ಡಾವಿಂಚಿಯ ಚಿತ್ರಗಳು, ಯಾವುದೋ ಉತ್ಖನನದಲ್ಲಿ ಸಿಕ್ಕುವ ಪುರಾತನರ ಜೀವನಶೈಲಿಯ ಪುರಾವೆಗಳು ಯಾವತ್ತೂ ವರ್ತಮಾನದ ಜನಜೀವನ ಆಧುನಿಕತೆಯ ಬಾಗಿಲಿನಲ್ಲಿದ್ದೂ ಹೇಗೆ ಇನ್ನೂ ತನ್ನ ಹಳೆಯ ಹೊಸಿಲಲ್ಲೇ ಏದುಸಿರು ಬಿಡುತ್ತಿದೆ ಅಂತ ಪ್ರಮಾಣೀಕರಿಸುತ್ತಲೇ ಬಂದಿವೆ. ವರ್ತಮಾನದ ಸಾಹಿತ್ಯ ನಿರ್ಮಾಪಕರನ್ನು, ಅದರಲ್ಲೂ ಪರಂಪರೆಯ ಹಂಗಿಲ್ಲದೇ ತಾನು ತಿಳಿದ ಸಂಗತಿಯೇ ದೊಡ್ಡದೆಂದು ವಾದಕ್ಕೆ ನಿಲ್ಲುವವರನ್ನು ಪರಂಪರೆಯೆಂಬ- ಬಳಸದೇ ಅಂದಗೆಟ್ಟ ಸರೋವರಕ್ಕೆ ಒಮ್ಮೆ ಕರೆದೊಯ್ದು-ಈಗಿನ ಬಹುತೇಕರು ಹೇಳುವ ಹಾಗೇ ಆ ಸರೋವರದ ನೀರು ಬಳಸುವವರಿಲ್ಲದೇ ಕೊಳಚೆಯಾಗಿ ಕೆಸರು ತುಂಬಿದೆ. ಹಸಿರು ಪಾಚಿಗಟ್ಟಿ ಹೂಳು ತುಂಬಿಕೊಂಡಿದೆ-ಅದರ ಹೂಳನ್ನೆತ್ತಿ ತೆಗೆದು ಎಸೆದು, ಸ್ವಲ್ಪ ಆಳಕ್ಕೆ ಅದನ್ನು ತೋಡಿ ವಿಸ್ತರಿಸಿ, ಎಲ್ಲೋ ಮುಚ್ಚಿ ಹೋಗಿರುವ ಜಲದ ಕಣ್ಣುಗಳನ್ನು ತೆರೆದು ಹೆಚ್ಚು ನೀರು ಬಂದು ಸೇರುವಂತೆ ಮಾಡಿದರೆ ಜೊತೆಗೇ ಕುಸಿದಿರುವ ಸೋಪಾನದ ಪಾವಟಿಗೆಗಳನ್ನು ದುರಸ್ತಿ ಮಾಡಿಸಿದರೆ ಆ ಕೊಳದ ನೀರನ್ನೇ ಆಶ್ರಯಿಸಿ ಉದ್ಯಾನವನ್ನೇ ಬೆಳಸಬಹುದು. ಉದ್ಯಾನ ನಿರ್ಮಾಣವಾದರೆ ಅಳುವ ಮಕ್ಕಳು ಆಟವಾಡಲು ಬಂದಾವು. ಹಕ್ಕಿ ಪಕ್ಷಿಗಳ ಜೊತೆಜೊತೆಗೇ ದಣಿವಾರಿಸಿಕೊಳ್ಳಲು ನಮಗೂ ಒಂದಿಷ್ಟು ತಾವು ಸಿಕ್ಕುತ್ತದೆ. ಆಗ ಆರಾಮವಾಗಿ ಕೂತು ಮುರಿದು ಕಟ್ಟಿದ ಸರೋವರದ ದಡದಲ್ಲಿ ಭಾಷೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಬಹುದು. ಅದು ಬಿಟ್ಟು ಯಾವ ಮೂಲದಿಂದ ಮನೆಯ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಅರಿವಿಲ್ಲದೇ ಬರಿದೇ ತೋಡಿ ತೋಡಿ ಬಳಸಿದರೆ ನೀರಿನ ಮಹತ್ವ ಅರಿಯುವುದಾದರೂ ಹೇಗೆ? ಭಾಷೆಯ ಸಂಗತಿ ಸಿದ್ಧಿಸುವುದಾದರೂ ಹೇಗೆ? ಸದ್ಯದ ವರ್ತಮಾನದಲ್ಲಿ ಸಾಹಿತ್ಯ ಸಂಸ್ಕೃತಿ ಭಾಷೆಗಿಂತಲೂ ಅತ್ಯಗತ್ಯವಾಗಿ ಆರ್ಥಿಕ ಚೇತರಿಕೆಗೆ ಸಹಾಯವಾಗುವ ಯೋಜನೆಗಳು ತುರ್ತಾಗಿ ಬೇಕಿವೆ. ಹೊಟ್ಟೆ ತುಂಬಿದ ನಂತರ ಉಳಿದೆಲ್ಲವನ್ನೂ ನಿಭಾಯಿಸಬಹುದು. ಆದರೆ ಬದುಕಿಗೆ ಆಸರೆಯಾಗಿ ಇಷ್ಟೂ ದಿನ ಇದ್ದ ಪರಿಕರಗಳು ಇದ್ದೂ ಇಲ್ಲದ ಹಾಗೆ ಆಗಿರುವ ಹೊತ್ತಲ್ಲಿ ಮುದ್ರಣ ಮಾಧ್ಯಮವೇನು ಬೇರೆ ಯಾರಿಗೂ ಸಾಹಿತ್ಯದ ಉಪಾಸನೆಗೆ ಸಮಯವಾಗಲೀ ವ್ಯವಧಾನವಾಗಲೀ ಇರಬೇಕೆನ್ನುವುದೇ ಅನುಚಿತ ಸಲಹೆ ಅನ್ನಿಸುತ್ತಿದೆ. *************************************

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ Read Post »

ಅಂಕಣ ಸಂಗಾತಿ, ದಿಕ್ಸೂಚಿ

   ಭಯದ ಬಗ್ಗೆ ಭಯ ಬೇಡ      ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.        ಮಕ್ಕಳು ಯಾವ ಯಾವದೆ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.         ಭಯ ಎಂದರೇನು?         ನಮ್ಮ ಶಕ್ತಿಗೆ ಮೀರಿದ ಅಸಾಂಭವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡುಗತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.         ಭಯ ಉಂಟಾಗೋದು ಯಾವಾಗ?    ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೊ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.        ಯಾವುದಕ್ಕೆ ಭಯಗೊಳ್ಳುತ್ತೆವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರೆಮದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ತರ ಭಯಗೊಳುತ್ತಾರೆ.ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವದೆಂರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.               ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಭಧಿಸಿದ್ದುಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲ್ಯಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯೊದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೊದಿಲ್ಲ.ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ಥವ್ಯಸ್ಥವಾಗುವವು ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು.ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವದು.ಭಯ ನಿವಾರಿರಿಸುವದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ ಹಿಪ್ನಾಟಿಸಂ ಮಾಡಿಕೊಳ್ಳುವದು.         ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ ವಿಭಾ ಪುರೋಹಿತ ಮುಖಾಮುಖಿ  ೧. ಕತೆ, ಕವಿತೆಗಳನ್ನ ಏಕೆ ಬರೆಯುತ್ತೀರಿ ?             ಕೆಲವು ಕಾಡುವ ವಿಷಯಗಳು ತನ್ನಷ್ಟಕ್ಕೆ ತಾನೇ ಬರೆಸಿಕೊಂಡುಬಿಡುತ್ತವೆ. ಮನದಲ್ಲಿ ಚಿಮ್ಮಿಬಂದ ತೀವ್ರ ಭಾವನೆಗಳ ಅಲೆಗಳನ್ನು ಅಕ್ಷರಗಳಲ್ಲಿ ಹಿಡಿದಿಡುವ ಕ್ರಿಯೆಯೇ ಕವಿತೆಗಳಾಗಿವೆ. ಹೀಗೇ  ಹರಿದುಬಂದ ಪ್ರಬಲ , ಸಂವೇದನೆಗಳ ಕಂತೆಗಳು ಪದಗಳೊಂದಿಗೆ ಬೆಸೆದು ಕವನಗಳಾಗಿವೆ ಜೀವನದ ಅದೇ ರುಟೀನ್ ಕೆಲಸಕ್ಕೆ ಹೋಗುವದು,ಅಡುಗೆ,ಮನೆ,ಮಕ್ಕಳು ಅಂತ ಇದರಲ್ಲೇ ಮುಳುಗಿರುತ್ತೇವೆ. ಈ ಯಾಂತ್ರಿಕತೆಯಿಂದ ಹೊರಬರಲು ಚೂರು ಚಿನಕುರುಳಿಯಂತೆ ಸಹಾಯವಾಗುತ್ತದೆ ನನ್ನ ಬರವಣಿಗೆ. ಮನಸ್ಸು ಗೆಲುವಾಗಿರುತ್ತದೆ,ಬದುಕು ಕಳೆಕಟ್ಟಿದಂತಾಗುತ್ತದೆ. ವರಕವಿ ಬೇಂದ್ರೆಯವರು ಹೇಳಿದಂತೆ- ರಸವೇ ಜೀವನ , ವಿರಸ ಮರಣ, ಸಮರಸವೇ ಜೀವನ ಎಂತಾದರೆ ಕವನ ರಚನೆಯ ಗೀಳು ಜೀವನದಲ್ಲಿ ನನಗೆ ರಸವನ್ನು ತುಂಬಿವೆ. ೨. ಕತೆ, ಕವಿತೆ ಹುಟ್ಟುವ ಕ್ಷಣ ಯಾವದು ?   ಹಿರಿಯರು ಹೇಳಿದಂತೆ ಕವಿತೆ ಹುಟ್ಟುವುದು ಎರಡೇ ಕಾರಣಕ್ಕೆ ನೋವು ಬಿಕ್ಕಲಿಕ್ಕೆ,ನಲಿವು ಹಂಚಲಿಕ್ಕೆ. ನನಗೂ ಸಹ ಈ ಎರಡೂ ಸಮಯದಲ್ಲಿ ಕವಿತೆಗಳು ಹುಟ್ಟುತ್ತವೆ. ಹಾಗೂ ಯಾರಾದರು ಅಸಹಾಯಕರನ್ನು ನೋಡಿದಾಗ ಅವರ ಪರಿಸ್ಥಿತಿಗೆ ಕಿವಿಯಾದಾಗ ಭಾವಲೋಕದಲ್ಲಿ ತೇಲಿ ನಾನೇ ಅವರ ಸ್ಥಿತಿಯಲ್ಲಿದ್ದೇನೆ ಎಂದು ( ಪರಕಾಯ ಪ್ರವೇಶ ಎನ್ನಬಹುದು) ಮನ ಕಂಬನಿಮಿಡಿಯುತ್ತದೆ,   ಕವಿತೆ, ಕತೆ ಹುಟ್ಟುತ್ತದೆ. ಕೆಲವು ಕವಿತೆಗಳು ಮಿಂಚಿನ ಹಾಗೆ ಬಂದು ಬರೆಸಿಕೊಳ್ಳುತ್ತವೆ. ಇನ್ನೂ ಕೆಲವು ಒಂದೆರಡು ದಿನ ಮನಸ್ಸಿನಲ್ಲಿ,ಬುದ್ಧಿಯಲ್ಲಿ ಮಂಥನ ಚಿಂತನಗೊಂಡು ಕವಿತೆಗಳ ನವನೀತ ರೂಪುಗೊಳ್ಳುತ್ತದೆ. ಎಷ್ಟೋಸಲ ಹೆಣ್ಣಿನ ಸಂವೇದನೆಗಳಿಗೆ ಪ್ರತಿವಾದಿಯಾಗಿ ನಿಲ್ಲುವ ಘಟನೆಗಳು ಎದುರಾದಾಗ ಕವಿತೆಗಳು ಸೃಷ್ಟಿಯಾಗಿದ್ದಿವೆ. ಎದೆತುಂಬ ಒಲವು ತುಳುಕುವಾಗ ,ನಿಸರ್ಗ ರಮ್ಯತೆಯನ್ನು ಕಂಡಾಗ,ಅಂತಃಕರಣ ಒಳಹರಿವನ್ನು ಅನುಭವಿಸಿದಾಗ ಅನೇಕ ರಚನೆಗಳು ಜನ್ಮತಳಿದಿವೆ. ೩. ನಿಮ್ಮ ಕತೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?  ಸ್ವೇದನೆಯೇ ಹೆಚ್ಚಾಗಿ ಕಂಡುಬರುತ್ತದೆ. ಸಾಮಾಜಿಕ ವ್ಯವಸ್ಥೆ, ಅಸಮಾನತೆ,ಮನುಷ್ಯನ ಹಣದ ಮೋಹ ಇವೆಲ್ಲವು ವಿಷಯವಾಗುತ್ತವೆ. ಹೆಣ್ಣಿನ ಅನಾದರ,ಅಗೌರವ ನನ್ನನ್ನು ತಲ್ಲಣಗೊಳಿಸುತ್ತವೆ. ಸದಾ ಕಾಡುವ ಪಾತ್ರಗಳು ದ್ರೌಪದಿ,ಭಾನುಮತಿ,ಕುಂತಿ….. ಇತ್ಯಾದಿ. ಪ್ರಸ್ತುತವಾಗಿ ಕಾಡುವದೇನೆಂದರೆ ದೊಡ್ಡ ದೊಡ್ಡ ನಗರಗಳಲ್ಲಿ ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಿರುವ ಹೆಣ್ಣು ಗಂಡಿಗೆ ಸರಿಸಮನಾಗಿ ದುಡಿಯುತ್ತಿದ್ದಾಗಲೂ   ವಿವಿಧ ರೀತಿಯ ಸಂಕಟಗಳನ್ನು ಅನುಭವಿಸುವದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅವಳ ಗೋಳು ಹೇಳತೀರದ್ದು. ಇದು ಒಂದು ಮುಖವಾದರೆ ಇನ್ನೊಂದು ಕಡೆ ಅನಕ್ಷರಸ್ಥರ ಗೋಳು , ಮನೆಗೆಲಸ ಮಾಡುವವರು, ಗಾರೆ ಕೆಲಸದವರು ವಿದ್ಯೆಗಳಿಸಿಲ್ಲವೆಂದು ಈ ಸಂಕಷ್ಟಗಳು ಎದುರಾಗಿವೆ ಎಂದು ಗೊಣಗುತ್ತಾ ಇರುತ್ತಾರೆ. ವ್ಯತ್ಯಾಸ     ಕಂಡುಬರುವದಿಲ್ಲ ಇಬ್ಬರೂ ನೋವಿಗೆ ಮೈ ಒಡ್ಡಿಕೊಂಡೇ ದುಡಿಯುತ್ತಾರೆ. ೪. ಕತೆ, ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೆ ?  ಖಂಡಿತವಾಗಿಯೂ ಇಣುಕಿದೆ. ಬಾಲ್ಯದ ಊರು,ಕಲಿತ ಶಾಲೆ, ಅಜ್ಜಅಜ್ಜಿ, ಗೆಳೆಯರು ಜೀವಮಾನವಿಡೀ ಮರೆಯಲಾರದ ನೆನಪಿನ ಜಾದೂಪೆಟ್ಟಿಗೆಗಳು : ತೆಗೆದರೆ ಒಂದೊಂದಾಗಿ ಹೊರಬಂದು ಹೃನ್ಮನಗಳನ್ನು ತಣಿಸುತ್ತವೆ. ಬಾಲ್ಯ ಎಲ್ಲರ ಜೀವನದ ಅದ್ಭುತ ಘಟ್ಟ.  ಓ…. ಆ ಸುಂದರ ನೆನಪುಗಳ ಸೆಳೆತ ಮನಸ್ಸಿನ ಶೂನ್ಯತೆ,ಖಿನ್ನತೆಯ ಭಾವಗಳಿಂದ ಬಡಿದೆಬ್ಬಿಸಿ ಸಂತಸ ತುಂಬುತ್ತವೆ. ಕ್ಯಾಮರಾ ಕಣ್ಣಲ್ಲಿ ಚಿತ್ರಗಳು ಶಾಶ್ವತವಾದಂತೆ ಈ ಸುಂದರ ನೆನಪುಗಳ ತೊರೆಗಳನ್ನು ನನ್ನ ಹೃದಯದಲ್ಲಿ ಹಾಗೂ ಆತ್ಮದಲ್ಲಿ ಸೆರೆಹಿಡಿದು  ಅವುಗಳಿಗೆ ಅಮರತ್ವವನ್ನು ನೀಡಿದ ಹಲವಾರು ಕವಿತೆಗಳಿವೆ. “ಹುಚ್ಚು ಖೋಡಿ ಈ ವಯಸು ಅದು ಹದಿನಾರರ ವಯಸು”  ಎಂದು ಹಾಡಿದ ಹಿರಿಯಕವಿಯ ಸಾಲುಗಳಂತೆ ನನ್ನ ಕವಿತೆಗಳು ಕೆಲವು ಸಾಕ್ಷಿಯಾಗಿವೆ. ೫. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ಪ್ರತಿಕ್ರಿಯೆ ಏನು ?   ಮೊದಲಿನಿಂದಲೂ ರಾಜಕೀಯ ನನಗೆ ನಿರಾಸಕ್ತಿಯ ವಿಷಯ. ರಾಜಕೀಯ ದೊಂಬರಾಟವನ್ನು ನಿರ್ಭಿಡೆಯಿಂದ ಬಯಲಿಗೆಳೆಯುವ ಅನೇಕ ಬರಹಗಳು ತಂಡೊಪತಂಡವಾಗಿ ಬರುತ್ತವೆ. ಆದರೂ ಇದು ಯಾವಾಗಲೂ ಹಗ್ಗಜಗ್ಗಾಟದ ಮೈದಾನವೇ ಸರಿ.ಲೋಕಕಲ್ಯಾಣಾರ್ಥವಾಗಿ  ಸೇವೆ ಮಾಡುವವರು ಈಗ ವಿರಳ. ದೇಶಭಕ್ತಿಯನ್ನು ಬಹಿರಂಗವಾಗಿ ಪ್ರದರ್ಶನ ಮಾಡುತ್ತಾ ಅಂತರಂಗದಲ್ಲಿ ಸ್ವಾರ್ಥವೇ ತುಂಬಿಕೊಂಡಿರುವರು ಹೆಚ್ಚಾಗಿದ್ದಾರೆ. ಅಪರೂಪಕ್ಕೆ ಒಂದಿಬ್ಬರು ನಿಜವಾದ ದೇಶಸೇವಕರಿದ್ದರೂ ಅವರ ಸುತ್ತ ಕಾಲೆಳೆಯುವ ಅಮೂರ್ತ ಕೈಗಳು ಬೇಕಾದಷ್ಟು ಇರುತ್ತವೆ. ಪಕ್ಷಾತೀತವಾದ ಅಪ್ಪಟ ಸೇವಾಮನೋಭಾವವುಳ್ಳ ನೇತಾರರು ಇಂದಿನ ಅಗತ್ಯ. ೬. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ?  ವಿಶ್ವದ ಸಕಲ ಚರಾಚರಗಳ ಚಲನೆಗೆ ಯಾವುದೋ ಒಂದು ಶಕ್ತಿ ಕಾರಣ . ಆ ಆಮೂರ್ತ ಅವ್ಯಕ್ತ ಅನನ್ಯ ಶಕ್ತಿಯೇ ದೇವರು ಎಂದು ನನ್ನ ಭಾವನೆ.ಶಕ್ತಿ ನಿರಂತರ ಹಾಗೇ ದೇವರು ನಿರಂತರ. ವಿಗ್ರಹ ಆರಾಧನೆಯಲ್ಲಿ ನಂಬಿಕೆಯಿಲ್ಲ.ಮೌಢ್ಯ ಆಚರಣೆಗಳಿಗೆ ವಿರೋಧವಿದೆ.  ಪ್ರೇಮ,ಜ್ಞಾನ,ಧ್ಯಾನ ಇವುಗಳ ತ್ರಿವೇಣಿಸಂಗಮವೇ ಧರ್ಮ.  ಭಾರತೀಯತೆಯೇ ಶ್ರೇಷ್ಠ ಧರ್ಮ. ೭. ಪ್ರಸ್ತುತ ಸಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನೆನಿಸುತ್ತದೆ ?   ನಾವು ಹಿಂತಿರುಗಿ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ನಮ್ಮ ಗಮನಕ್ಕೆ ಬರುವ ವಿಷಯವೆಂದರೆ ನಮ್ಮ ಪರಂಪರೆಯಲ್ಲಿ ಹಾಗೂ ಸಮಷ್ಟಿಪ್ರಜ್ಞೆಯಲ್ಲಿ ಅನೇಕ ಪುರಾತನ ವಿಚಾರಗಳು   ಪದ್ಧತಿಗಳು ನಡೆ-ನುಡಿಗಳು ತಾವೇ ತಾವಾಗಿ ಕಳಚಿ ಹೋಗಿವೆ. ಹಲವು ಹೊಸತತ್ವಗಳು ಅಸ್ತಿತ್ವಕ್ಕೆ ಬಂದಿವೆ. ” ಬದಲಾವಣೆ ಪ್ರಕೃತಿಯ ನಿಯಮ” ಅಲ್ಲವೆ ? ಇಂದು ವಿಜ್ಞಾನದ ಪ್ರಗತಿಯಿಂದಾಗಿ      ಜಗತ್ತೆಲ್ಲವೂ ಒಂದಾಗುತ್ತಿರುವ ಹಾಗೂ ಜಾಗತೀಕರಣದ ನೂತನ ಬಿರುಗಾಳಿ ಬೀಸುತ್ತಿರುವಾಗ ಹೊಸ ಚಿಂತನ,ಹೊಸ ಜೀವನಶೈಲಿ,ಹೊಸ ಆಲೋಚನೆಗಳು  ನಮ್ಮ ಬದುಕಿನಲ್ಲಿ ಹೊಸ ಸವಾಲುಗಳನ್ನು ಹುಟ್ಟಿಸುತ್ತವೆ. ಹೊಸತನದ ತೆರೆಗಳ ಅಬ್ಬರ !  ಜಾಗರೂಕತೆಯಿಂದ ಯಾವ ತತ್ವವನ್ನು ಸ್ವೀಕರಿಸಬೇಕು ? ಎಂಬ ಪ್ರಶ್ನೆಗೆ  ಉತ್ತರ ಹುಡುಕುವಾಗ ಮಹಾಮಾರಿ ಕೊರೋನಾ ಕಲಿಸಿದ ಪಾಠವನ್ನು ಮರೆಯುವಂತಿಲ್ಲ. ಪ್ರಜ್ಞಾಪೂರ್ವಕವಾಗಿ ಚಿಂತನ ಮಂಥನ ಮಾಡಿ ಹೊಸತತ್ವದಲ್ಲಿ ಯಾವುದು ಸತ್ವಹೀನವೋ  ಅದನ್ನು ಬದಿಗೊತ್ತಿ  ಪುಷ್ಟಿಯಿರುವ ತತ್ವಗಳನ್ನು ಮಾತ್ರ ಆಯ್ದುಕೊಳ್ಳಬೇಕಿದೆ. ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು, ಒಲವು ಹಾಗೂ ಗೌರವವಿದೆ. ೮. ಸಾಹಿತ್ಯವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಸುವಿರಿ ?   ಇದರ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಪಂಥ ರಾಜಕೀಯವಿದೆ ಎಂದು ಆಗಾಗ ಕೇಳಿಬರುತ್ತದೆ. ಸಾಹಿತ್ಯದ ಅಂತಃಸತ್ವವನ್ನರಿತು ಮತಿವಂತರಾಗಿ ವರ್ತಿಸಬೇಕಾಗಿದೆ. ೯. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತದೆ ?  ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ದೇಶದ ಚಲನೆ ಅವ್ಯಾಹತ. ಪಾರದರ್ಶಕತೆ ಮತ್ತು ದೂರದೃಷ್ಟಿ ಹೊಂದಿರುವ ಸಮರ್ಥ ಆಡಳಿತಗಾರರಾದರೆ ದೇಶ ಸುಗಮವಾಗಿ ನಡೆಯಬಲ್ಲದು.ಇಲ್ಲವಾದರೆ ದೇಶದ  ಪ್ರಜೆಗಳು ದುರ್ಗಮ ಸ್ಥಿತಿ ಅನುಭವಿಸಬೇಕಾಗುವದು. ೧೦. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ?  ಸತ್ವಯುತವಾದ , ಕಾಲಾತೀತವಾಗಿ ನಿಲ್ಲುವ ಸಾಹಿತ್ಯ ಸೃಷ್ಟಿಯಡೆಗೆ ತುಡಿತವಿದೆ.  ಎಲ್ಲ ಹಿರಿಯ ಸಾಹಿತಿಗಳ ಅಧ್ಯಯನ,ಹೊಸತಲೆಮಾರಿನ ಪ್ರಯೋಗಶೀಲತೆಯನ್ನು ಮನಸಲ್ಲಿಟ್ಟುಕೊಂಡು ನಮ್ಮತನವನ್ನು ಉಳಿಸಿಕೊಳ್ಳುತ್ತ ಮುಂದುವರಿಯಬೇಕಿದೆ. ಶೋಷಿತರಿಗೆ ದನಿಯಾಗುವ , ಸ್ತ್ರಿ ಸಂವೇದನೆ , ಸ್ತ್ರೀ ಪರ ಚಿಂತನೆಗೆ  ಮೆಟ್ಟಿಲಾಗುವ ದಾರಿಯತ್ತ ಸಾಗಬೇಕಿದೆ. ೧೧. ನೆಚ್ಚಿನ ಕನ್ನಡದ ಹಾಗೂ ಆಂಗ್ಲ ಸಾಹಿತಿಗಳಾರು ?  ಇಷ್ಟದಕವಿ ಜಿ.ಎಸ್. ಶಿವರುದ್ರಪ್ಪ  ಇನ್ನೂ ಹಲವಾರು ಸಾಹಿತಿಗಳು ಜಯಂತ ಕಾಯ್ಕಿಣಿ, ಚೆನ್ನವೀರ ಕಣವಿ  ಕವಯಿತ್ರಿಯರು ವೈದೇಹಿ,ಲಲಿತಾ ಸಿದ್ಧಬಸವಯ್ಯಾ ,ಮಾಲತಿ ಪಟ್ಟಣಶೆಟ್ಟಿ  ಆಂಗ್ಲ ಸಾಹಿತಿಗಳೆಂದರೆ ಜಾನ್ ಕೀಟ್ಸ ಮತ್ತು ಟಿ.ಎಸ್.ಎಲಿಯಟ್ ೧೨. ಇತ್ತೀಚೆಗೆ ಓದಿದ ಕೃತಿಗಳಾವುವು ?   ನಾರಾಯಣ.ಪಿ.ಭಟ್ಟ ಅವರ “ನೆನಪಿನ ಉಯ್ಯಾಲೆ”   ನಾಗರೇಖಾ ಗಾವ್ಕರ್ ಅವರ ” ಆಂಗ್ಲ ಸಾಹಿತ್ಯ ಲೋಕ” ೧೩.  ಇಷ್ಟವಾದ ಕೆಲಸ ಯಾವದು ?    ಕನ್ನಡೇತರರಿಗೆ ಕನ್ನಡ ಕಲಿಸುವದು, ರಂಗೋಲಿ ಹಾಕುವದು ಮತ್ತು ಅಡುಗೆ ಮಾಡುವದು. ೧೪.  ಇಷ್ಟವಾದ ಊರು ?    ಧಾರವಾಡ  ಎರಡು ಕಾರಣಗಳಿಂದ * ನನ್ನ ತವರುಮನೆ * ವರಕವಿ ಬೇಂದ್ರೆಯವರಂಥ ಮಹಾನ್ ಸಾಹಿತಿ ನೆಲೆಸಿದ್ದ ಊರು. ಹಾಗೂ ಕನ್ನಡ ಸಾರಸ್ವತಲೋಕಕ್ಕೆ ಧಾರವಾಡ ಹಲವಾರು ಮೇರು ಸಾಹಿತಿಗಳನ್ನ ನೀಡಿದಂತಹ ನೆಲ. ೧೫.  ಇಷ್ಟವಾಗುವ ಸಿನಿಮಾಗಳು ಯಾವವು ?     ಮಾಲ್ಗುಡಿ ಡೇಸ್, ಕವಿರತ್ನಕಾಳಿದಾಸ ಮತ್ತು ಫಸ್ರ‍್ಯಾಂಕ್ ರಾಜು ೧೬. ಮರೆಯಲಾರದ ಘಟನೆಗಳಾವವು ?    * ಧಾರವಾಡದಲ್ಲಿ ನಡೆದ ೮೪ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಸುಯೋಗ ಓದಗಿಬಂದಿತ್ತು. ಅಪ್ಪ,ಅಮ್ಮ ಇಬ್ಬರನ್ನೂ ಕರೆದುಕೊಂಡು ಹೋದೆ.   ವಿಶಾಲವಾದ ಸಭಾಂಗಣದ ಆಸನದ ಮೇಲೆ ಕುಳಿತೆವು. ಕರ‍್ಯಕ್ರಮ ಇನ್ನೇನು ಶುರುವಾಗಬೇಕು ಕವಿಗೋಷ್ಠಿಯ ಅಧ್ಯಕ್ಷರು,ಅತಿಥಿಗಳು ಒಬ್ಬೊಬ್ಬರಾಗಿ ಆಗಮಿಸತೊಡಗಿದರು, ನಂತರ ಕವಿಗಳ ಹೆಸರುಗಳನ್ನು ವೇದಿಕೆಗೆ ಬರಬೇಕೆಂದು ಆಹ್ವಾನಿಸುತ್ತದ್ದರು,ಆಗ ವೇದಿಕೆಯ ಮೇಲೆ ನನ್ನ ಹೆಸರು ಕರೆದ ತಕ್ಷಣ ಅಪ್ಪನ ಕಣ್ಣಲ್ಲಿ ಆನಂದಬಾಷ್ಪಗಳು ದಳದಳನೇ ಇಳಿದುಬಂದವು. ಅಪ್ಪನ ಹೆಮ್ಮೆಯ ಭಾವ  ಕಂಡು  ನನ್ನ ಮತ್ತು ಅಮ್ಮನ ಕಣ್ಣುಗಳು ಆದ್ರಗೊಂಡಿದ್ದವು. ************************************************* ********************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಇತರೆ, ವಾರ್ಷಿಕ ವಿಶೇಷ

ಅವಳೇ ಕಾರಣ…

ಲಹರಿ ಅವಳೇ ಕಾರಣ… ಸ್ಮಿತಾ ಭಟ್ ಏನೇ ಹೇಳಿ ಮಕ್ಕಳನ್ನು ಸಂಭಾಳಿಸುವ ವಿಷಯದಲ್ಲಿ ತಾಯಿಗೇ ಹೆಚ್ಚಿನ ಪ್ರಶಸ್ತಿಗಳು ಸಲ್ಲಬೇಕು.ಎಲ್ಲದಕ್ಕೂ ಅಮ್ಮಾ ಎಂದೇ ಕೂಗುವ ಕಂದಮ್ಮಗಳನ್ನು ತೃಪ್ತಿ ಪಡಿಸುವುದು ಸುಲಭದ ವಿಷಯವಂತೂ ಅಲ್ಲ. ಏಕ ಕಾಲದಲ್ಲಿ ನೂರು ಮಕ್ಕಳನ್ನು ಗಾಂಧಾರಿ ಹೇಗೆ ಸಂಭಾಳಿಸಿದಳೋ ಎಂದು, ಒಂದೇ ಮಗುವಿನ ತಾಯಿಯಾದ ನನಗೆ ಸದಾ ಕಾಡುವ ಸಂಗತಿ. “ಅಯ್ಯೋ ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ” ಈಗಿನ ಕಾಲದ ಮಕ್ಳೇ ಹಾಗೋ, ಪಾಲಕರೇ ಹಾಗೋ ಅನ್ನುವ, ಅವಕಾಶ ವಂಚಿತರಾಗದಂತೆ ಹಿರಿಯರಾಡುವ ಮಾತುಗಳು ನೇರ ತಾಕುವುದು ತಾಯಿಯನ್ನೇ. “ತಾಯಿಯಂತೆ ಕರು ನೂಲಿನಂತೆ ಸೀರೆ”ಎಂದು ಗುಣಗಾನದಲ್ಲೋ,ಅವಹೇಳನದಲ್ಲೋ , ಅನಾವರಣ ವಾಗುವುದು ಒನ್ಸ್ ಅಗೇನ್ ತಾಯಿ. ಗಂಡನ ಮನೆಯಲ್ಲಿ ಕೆಲಸ ಕಾರ್ಯ, ಅಡುಗೆ, ಸೇವೆ,ಸಹಕಾರ, ಯಾವುದರಲ್ಲಿ ವ್ಯತ್ಯಾಸ ವಾದರೂ ಅಪ್ಪನ ಮನೇಲಿ ತಾಯಿ ಏನೂ ಕಲಿಸಿಲ್ವೆನೋ ಅಂತಲೇ ರಾಗ ತೆಗೆಯುವುದು. ಒಟ್ಟಿನಲ್ಲಿ ಕೆಟ್ಟದಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವಂತೆ ತಾಯಿ ಎನ್ನುವವಳು, ಮಕ್ಕಳ ವಿಷಯದಲ್ಲಿ ಚೌತಿ ಚಂದ್ರನ ನೋಡಿದವಳಂತೆ ಬದುಕುತ್ತಿರುತ್ತಾಳೆ. ಈ ಕರೋನಾ ಕಾಲದ ಕಾರಣದಿಂದ ನಿರಂತರವಾಗಿ ಮಕ್ಕಳು ಮನೆಯಲ್ಲೇ ಕಳೆಯುವುದರಿಂದ  ಸಂಭಾಳಿಸಿವುದಂತೂ ಅತೀವ  ಕಷ್ಟದ ಕೆಲಸ. ಮತ್ತದು ತಾಯಂದಿರ ಹೆಗಲಮೇಲೆ ಸದಾ ಹೊರುವ ಹೊರೆಯಾಗಿದೆ. ಚಿಕ್ಕ ಮಕ್ಕಳಿಗೆ ಗದರಿಯಾದರೂ ಮಾತು ಕೇಳಿಸಬಹುದು. ಆದರೆ ದೊಡ್ಡ ಮಕ್ಕಳು ಹಾಗಲ್ಲ, ಅವರು ನಿರಂತರವಾಗಿ ಮನೆಯೊಳಗೇ ಇರುವದರಿಂದ ಡಿಪ್ರೆಶನ್ ಗೂ ಕೂಡಾ ಒಳಗಾಗುತ್ತಾರೆ.ಪ್ರಪಂಚಕ್ಕೆ ತರೆದು ಕೊಳ್ಳುವ ವಯಸ್ಸಾದ್ದರಿಂದ ಯಾವ ಸಮಯವನ್ನೂ ಅವರು ನಾಲ್ಕು ಗೋಡೆಯ ಮಧ್ಯೆ ಕಳೆಯಲು ಬಯಸುವುದಿಲ್ಲ.ಶಾಲೆ ಸ್ನೇಹಿತರು.ಆಟ ಓಟ ಪಾಠ ಎನ್ನುತ್ತ ಸ್ವಚ್ಛಂದವಾಗಿ ಬೆಳಯಲು ಬಯಸುತ್ತಾರೆ. ಅದು ಸರಿ ಕೂಡಾ. ಆದರೆ ಈಗ ಅನಿವಾರ್ಯವಾಗಿ ಮನೆಯಲ್ಲೇ ನಿರಂತರವಾಗಿ ಕಾಲಕಳೆಯುಬೇಕಾಗಿದೆ ಆದ್ದರಿಂದ ಹಿರಿಯರ  “ಬೇಡ””ಬೇಡ”, ಗಳೇ ಹೆಚ್ಚು ಕಿವಿಗೆ ತಾಕಿ ಎಲ್ಲದಕ್ಕೂ  ತನ್ನ ಕಟ್ಟು ಪಾಡುಗಳಿಗೆ ಒಳಪಡಿಸುತ್ತಿದ್ದಾರೆ ಅನ್ನಿಸಲು ಶುರುವಾಗುತ್ತದೆ.ಅದೆಂತಹ ಪ್ರೀತಿಯೇ ಆದರೂ ಅವಡುಗಚ್ಚಿಕೊಂಡೇ ಇದ್ದರೆ ಉಸಿರುಗಟ್ಟುವುದು ನಿಜವಾದ್ದರಿಂದ ಬಿಡುಗಡೆಯನ್ನು ಬಯಸುವ ವಯಸ್ಸೂ ಜೊತೆ ಸೇರಿ ಮುಗಿಬೀಳಲು ಶುರು ಮಾಡುತ್ತಾರೆ. ಸ್ವಲ್ಪ ತಿದ್ದು ನೋಡುವಾ ಮಕ್ಕಳನ್ನು, ಏನಿದು ಸಂಸ್ಕಾರವೇ ಇಲ್ದಾಂಗೆ ಆಡ್ತಾರೆ. ನಿನ್ನ ಅತಿಯಾದ ಮುದ್ದೇ ಕಾರಣ ಇದ್ಕೆಲ್ಲ, ಎಂದು ಹೊರನಡೆಯುವ ಅಪ್ಪಂದಿರಿಗೆ ಅಮ್ಮಂದಿರ ಕಷ್ಟ ಎಂದೂ ಅರ್ಥವಾಗುವದಿಲ್ಲ. ಅಯ್ಯೋ,, ಬಯ್ಸ್ಕೊ ಬೇಡ್ವೊ, ಅಪ್ಪನ ಹತ್ರ ಸ್ವಲ್ಪ ಹೇಳಿದ ಮಾತು ಕೇಳೋ ಎಂದು ಪಿಸು ದನಿಯಲ್ಲಿ ಅಲವತ್ತು ಕೊಳ್ಳುತ್ತಾಳೆ ಅಮ್ಮ. ನನ್ನದೇ ಮಗ ಒಂದಿನ “ಈ ಶಾಲೆ ಆದ್ರೂ ಯಾವಾಗ ಶುರುವಾಗುತ್ತೋ ಏನೋ” ನಿಮ್ಗಳ ಹತ್ರ ಬೈಸ್ಕೊಂಡು ಬೈಸ್ಕೊಂಡು ಸಾಕಾಯ್ತು ಅಂತ ಗೊಣಗುತ್ತಿದ್ದ. ಹೌದು ಹೆಚ್ಚಿನ ಮಕ್ಕಳೊಳಗೆ ಇಂತಹದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ. ಏಕತಾನತೆಯಿಂದ ಕಂಗಾಲಾಗಿದ್ದಾರೆ. ಪಾಲಕರಿಗೆ ಮಕ್ಕಳು ಇಡೀದಿನ ಮೊಬೈಲ್ ನೊಳಗೇ ಇರುತ್ತಾರೆ ಎನ್ನುವುದು ದೊಡ್ಡ ಚಿಂತೆಯಾಗಿದೆ.ಷ್ಟ್ರಿಕ್ಟ್ ಆಗಿ ಮೊಬೈಲ್ ಕೊಡದೇ ಇರೋಣ ಅಂದ್ರೆ ಓನ್ ಲೈನ್ ಕ್ಲಾಸ್ ಗಳು, ಮಕ್ಕಳು ಏನು ಮಾಡ್ತಾರೆ ಅಂತ ಕಾಯುಬೇಕಾ?! ಕೆಲಸ ಮಾಡ್ಕೋಬೇಕಾ? ಅನ್ನುವ ಸಂದಿಗ್ಧ ಅಮ್ಮನದು, ಏಕೆಂದರೆ ಏನು ಮಾಡ್ತಿದ್ದಾರೆ ಮಕ್ಕಳು ಎಂದು ನೋಡೋಕಾಗಲ್ವಾ? ಎನ್ನುವ ಸಿದ್ಧ ಪ್ರಶ್ನೆಯೊಂದು ಇರುತ್ತಾದ್ದರಿಂದ. ಹಲವು ತಾಯಂದಿರು ಅಕ್ಷರಶಃ ಕಂಗಾಲಾಗಿದ್ದಾರೆ. ತನ್ನೆಲ್ಲ ಚಟುವಟಿಕೆಗಳನ್ನು ಕಟ್ಟಿಟ್ಟು ಹತಾಶಳಾಗಿದ್ದಾಳೆ. ಮೊನ್ನೆ ಗೆಳತಿಯೊಬ್ಬಳು ಸಿಕ್ಕಿದ್ದಳು ಈ ವರ್ಷ ಏನ್ ಕಥೆನೋ ಏನೋ ಶೂನ್ಯ ಅವಧಿ ಎಂದು ಘೋಷಣೆಯನ್ನೂ ಮಾಡುತ್ತಿಲ್ಲ, ಶಾಲೆನೂ ಶುರು ಮಾಡುತ್ತಿಲ್ಲ,ಬರೀ ಅಂತೆ ಕಂತೆಗಳು. ಈ ಓನ್ ಲೈನ್ ಕ್ಲಾಸ್ ಅನ್ನೋದು ಮಕ್ಕಳಿಗೆ ಮೊಬೈಲ್ ಹಿಡ್ಕೊಂಡು ಕೂತ್ಕೋಳೊಕೆ ಒಳ್ಳೆ ಕಾರಣ ಆಗ್ಬಿಟ್ಟಿದೆ ನೋಡು. ಈ ಅತಂತ್ರ ಪರಿಸ್ಥಿತಿಯಲ್ಲಿ ನಮ್ಮ ಮನೆ ರಣರಂಗವಾಗಿದೆ ಕಣೇ. ಮಗನಿಗೆ ನನ್ನ ಕಂಡರೇ ಅಗಲ್ಲ,ಕಾರಣ ನಾನು ಮೊಬೈಲ ಕೊಡಲ್ಲ. ಎಲ್ಕದಕ್ಕೂ ಸಿರ್ ಅಂತ ಸಿಡಿದು ಬೀಳ್ತಾನೆ.ಅವರಪ್ಪ ನೀನೇ ಮೊಬೈಲ್ ಕೊಟ್ಟು ಕೊಟ್ಟು ಹಾಳ್ಮಾಡಿದ್ದೀಯಾ ಅಂತ ನನ್ನೇ ಅಂತಾರೆ. ಕೊಡದೇ ಹೋದ್ರೆ ಸೂರೇ ಕಿತ್ತು ಹೋಗುವಂತೆ ಆಡ್ತಾನೆ. ಸಲೀಸಾಗಿ ಸಿಕ್ಕೋದು ಅಮ್ಮಂದೇ ಮೊಬೈಲ್ ಅಲ್ವಾ ಮಕ್ಕಳಿಗೆ. ನಾವೇನೂ ಮೊಬೈಲ್ ಹಿಡ್ಕೊಂಡೇ ಓಡಾಡೋಕೆ ಆಗುತ್ತಾ! ಕೆಲಸದ ಗಡಿಬಿಡಿಯಲ್ಲಿ ಎಲ್ಲೋ ಒಂದ್ಕಡೆ ಇಟ್ಟು ಬಿಡ್ತೀವಿ.ಅದ್ಯಾವ್ದೋ ಗ್ಯಾಪಲಿ ಎತ್ಕೊಂಡ್ಬಿಡ್ತಾರೆ. ಬೈಸ್ಕೊಳೋದು ಮಾತ್ರ ನಾವೇ. ಏನೇನೋ ನಡಿತಿದೆ ಮಾರಾಯ್ತಿ ಮನೆಲಿ, ನಡೆದಿದ್ದೆಲ್ಲ ಹೇಳೋಕಾಗುತ್ತಾ ಹೇಳು ಎಂದು ಪಿಸುಗುಟ್ಟಿದಳು. ನೀನೇ ಸರಿಯಾಗಿ ಕಲಿಸಿಲ್ಲ ಚಿಕ್ಕಂದಿನಿಂದ. ಅದ್ಕೆ ಹೀಗಾಡ್ತಾರೆ ಮಕ್ಕಳು, ಅನ್ನುವಲ್ಲಿಗೆ ಕೊನೆಯ ಮೊಳೆಯ ಸುತ್ತಿಗೆ ಪೆಟ್ಟು ನಮಗೇ ನೋಡು, ಎನ್ನುತ್ತ ಜೊತೆಗಿದ್ದ ಬರೋಬ್ಬರಿ ಮೂರು ಘಂಟೆ ಮಕ್ಕಳನ್ನು ಸಂಭಾಳಿಸುವ ಬಗ್ಗೆಯೇ ಅಲವತ್ತು ಕೊಂಡಳೆಂದರೆ, ಅವಳು ಸಂಪೂರ್ಣ ಕಂಗಾಲಾಗಿದ್ದು ನಿಚ್ಚಳವಾಗಿ ಗೋಚರಿಸುತ್ತಿತ್ತು. ಒಂದು ಮನೆಯಲ್ಲಿ ಏನೇ ಸಂಭವಿಸಿದರೂ ಕಷ್ಟ,ಸುಖ ನೋವು ನಲಿವು. ಮಕ್ಕಳ ನಡೆ ನುಡಿ ಪ್ರತಿಯೊಂದಕ್ಕೂ ಅವಳೇ ಕಾರಣವಾಗುತ್ತಾಳೆ. ಎನ್ನುವುದು ಅಕ್ಷರಶಃ ಸತ್ಯ. ಚಿಕ್ಕವರಿದ್ದಾಗ ಹೆಣ್ಣಿಗೆ ಸ್ವಲ್ಪವೂ ಬಾದಿಸದ ವಿಷಯ ಮದುವೆಯಾಗಿ ಬಲಗಾಲಿಟ್ಟು ಹೊಸ್ತಿಲೊಳಗೆ ಹೊಕ್ಕ ದಿನದಿಂದ ಒಳಿತು, ಕೆಡುಕು,ಆಗು,ಹೋಗುಗಳೆಲ್ಲ ಅವಳ ಕಾಲ್ಗುಣದಮೇಲೆ ನಿರ್ಧಾವಾಗತೊಡಗುತ್ತವೆ. ಮಕ್ಕಳು ಹುಟ್ಟುತ್ತಿದ್ದಂತೆ ಅದು ದುಪ್ಪಟ್ಟಾಗಿ ಸಂಪೂರ್ಣ ಧರಾಶಾಹಿ ಯಾಗಿ ಬಿಡುತ್ತಾಳವಳು, ಆರೋಗ್ಯ, ಆಟ ಪಾಟ, ಗಾಯ, ಗಲಾಟೆ,ಎಲ್ಲದಕ್ಕೂ ಅವಳಲ್ಲಿ ಉಪಸ್ಥಿತಳಿರಬೇಕು.ಮತ್ತವಳೇ ಅದರ ಜವಾಬ್ದಾರಿ ಹೊರಬೇಕು,of course ಅಮ್ಮನಾದವಳು ಇದೆಲ್ಲವನ್ನೂ ನಿಭಾಯಿಸಲೇ ಬೇಕು. ಅದು ಅವಳ ಜನ್ಮ ಸಿದ್ಧ ಹಕ್ಕು ಮತ್ತು ಅವಕಾಶ. ಆದರೆ ಮಕ್ಕಳ ಹೊಟ್ಟೆನೋವಿಗೂ,ಬಿದ್ದು ತರಚಿಕೊಂಡದ್ದಕ್ಕೂ, ತಾಯಿಯನ್ನೇ ಕಾರಣವಾಗಿಸಿ ಬೈಯುವುದರ ಬಗ್ಗೆ ತಕರಾರಿದೆ. ಆದರೂ ಅವಳು “ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ” ಎನ್ನುವ ಜಾನಪದ ನುಡಿಗಟ್ಟಿನಂತೆ ಎದೆಗವಚಿಕೊಂಡೇ ಪೊರೆಯುತ್ತಾಳೆ. ತಾಯಿತಂತೆ ಸಲಹುವ ಅಪ್ಪಂದಿರೂ ಇದ್ದಾರೆ ಆದರೆ ತೀರಾ ವಿರಳ. ಅವರ ಕಷ್ಟಗಳೂ ತೇಟ್ ಅಮ್ಮನಂತೆ ಬಿಡಿ. ಅಮ್ಮನಿಗಾದರೆ ದೈವದತ್ತ ವರವಾದರೂ ಇರುತ್ತದೆ.ಆದರೆ ಇಲ್ಲಿ ಅಪ್ಪನಾದವನ ಪಜೀತಿ ನಿಜಕ್ಕೂ ಶೋಚನೀಯವೇ.. ಇನ್ನು ದಾರ್ಶನಿಕರು, ಮನೆ ಮನೆಯಲ್ಲ, ಗೃಹಿಣಿಯೇ ನಿಜವಾದ ಮನೆ, ‘ ನ ಗೃಹಂ ಗೃಹಮಿತ್ಯಾಹು ಗೃಹಿಣೀ ಗೃಹ ಮುಚ್ಯತೇ”ಎಂದಿದ್ದಾರೆ ಹೆಣ್ಣಿಲ್ಲದೇ ಒಂದು ಮನೆ ರೂಪಗೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣನ್ನು ಮಹಾಲಕ್ಷ್ಮಿ ಎಂದು ಮಡಿಲು ತುಂಬಿ ಮನೆ ಮನಗಳ ಒಳಗೆ ಬರಮಾಡಿಕೊಳ್ಳುತ್ತೇವೆ.ಒಳ್ಳೆಯ ಮನಸಿನಿಂದ ಸದಾ ಅವಳ ಪೊರೆಯ ಬೇಕು ಎನ್ನುತ್ತಾರೆ. ಹೆಣ್ಣು ಪ್ರೀತಿ, ಹೆಣ್ಣು ಸಹನಾ ಧರಿತ್ರಿ, ಎಂದೆಲ್ಲ ಹೆಣ್ಣನ್ನು ಹೊಗಳುತ್ತಾರೆ ಮತ್ತೆ ಹಲವರು ಹೇಳುತ್ತಾರೆ. ಹೆಣ್ಣಿನಿಂದಲೇ ಮಹಾ ಮಹಾ ಯುದ್ಧಗಳು ನಡೆದವು. ಹೆಣ್ಣಿನಿಂದ ಮಹಾಭಾರತವೇ ನಡೆಯಿತು. ಹೆಣ್ಣಿಂದ ರಾವಣ ಸತ್ತ. ರಾಮ ಕಾಡಿಗೆ ಹೋದ. ದಶರಥ ಜೀವವನ್ನೇ ತೊರೆದ ಅವಳು ಮಾಯೆ. ಅವಳು ಮೋಹನಾಂಗಿ, ಅವಳು ಮೋಸ,ಎಂದು. ಹೀಗೇ ಹಲವಾರು ರೀತಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಲೋಕಕ್ಕೇ ಕಾರಣವಾಗಿ ನಿಲ್ಲುತ್ತಾಳೆ ಅವಳು. ಎಲ್ಲದಕ್ಕೂ ಅವಳನ್ನು ಬೊಟ್ಟುಮಾಡಿ ಹಳಹಳಿಸುವವರಿಗೆ ಹೇಳಬೇಕಿದೆ. ನಾರಿ ಪರರುಪಕಾರಿ ನಾರಿ ಸ್ವರ್ಗಕ್ಕೆ ದಾರಿ| ನಾರಿ ಸಕಲರಿಗೆ ಹಿತಕಾರಿ|ಮುನಿದರೆ ನಾರಿಯೇ ಮಾರಿ ಸರ್ವಜ್ಞ|| ಎಂದು. ಮಕ್ಕಳ ಆರೈಕೆ,ಪಾಲನೆ, ಪೋಷಣೆಗಳಲ್ಲಿ ಕೇವಲ ಅವಳು ಮಾತ್ರ ಕಾರಣಳಾಗುವುದಿಲ್ಲ.ಮಕ್ಕಳನ್ನು ಸಂಭಾಳಿಸುವುದು ಅತ್ಯಂತ ಸೂಕ್ಷ್ಮ ಸಂವೇದಿ ವಿಚಾರ.ಅಲ್ಲಿ ಇಡೀ ಕುಟುಂಬ,ಕುಟುಂಬದ ವಾತಾವರಣವೇ ಮುಖ್ಯ ಕಾರಣವಾಗಿ ನಿಲ್ಲುತ್ತದೆ. ಆದರೆ ತಾಯಿಯಾದವಳು “ತಾಯಿಯಂತೆ ಮಗಳು ನೂಲಿನಂತೆ ಸೀರೆ” ಎನ್ನುವ ವಿಚಾರವನ್ನೂ ಮರೆಯಬಾರದು.

ಅವಳೇ ಕಾರಣ… Read Post »

ಕಾವ್ಯಯಾನ

ಹನಿಗಳು

ಕವಿತೆ ಹನಿಗಳು ನಾಗರಾಜ. ಹರಪನಹಳ್ಳಿ -1-ಮೌನವಾಗಿ ಬಿದ್ದ ದಂಡೆಯಲ್ಲಿಒಂಟಿಯಾಗಿಧ್ಯಾನಿಸುತ್ತಿದೆ ದೋಣಿಬದುಕಿನ ಯಾತ್ರೆ ಮುಗಿಸಿ -2-ಕಡಲ ಅಲೆಗಳ ಸದ್ದುಕೇಳಿಯೂ ಕೇಳದಂತೆಬಿದ್ದಿರುವ ದಂಡೆಯ ಕಂಡುಆಗಸದಲ್ಲಿ ಚಂದ್ರನಗುತ್ತಿದ್ದ -3-ಸಂಜೆ ಗತ್ತಲುದಂಡೆಯಲ್ಲಿ ನಡೆದಾಡುತ್ತಿರುವಜೋಡಿ ನೆರಳುಗಳುನಕ್ಷತ್ರಗಳು ಹಾಡುತ್ತಿರೆಮಗುಮರಳಲ್ಲಿ ಗುಬ್ಬಚ್ಚಿಗಾಗಿಮನೆ ಮಾಡುತ್ತಿತ್ತು -4-ಗಾಳಿ ಸಿಳ್ಳೆಹಾಕುತ್ತಿತ್ತುಕಡಲಲ್ಲಿ ಯಾರೋದೀಪಸಾಲು ಹಚ್ಚಿಟ್ಟಂತೆದೋಣಿಗಳುಬದುಕಿಗಾಗಿಹುಡುಕಾಡುತ್ತಿದ್ದವು ********************************

ಹನಿಗಳು Read Post »

ಕಾವ್ಯಯಾನ

ನೆನಪು

ಕವಿತೆ ನೆನಪು ಡಾ. ರೇಣುಕಾ ಅರುಣ ಕಠಾರಿ ಮಾಸಿ ಹೋದ ಕಾಗದಅದರ ಮೇಲೆ ಅಪ್ಪ ಬರೆದಿದ್ದ ಅಕ್ಷರಮಡಿಕೆಗಳ ತವರೂರೆ ಆಗಿ ನಿಂತಿತ್ತು.ಏಷ್ಟೋ ಅಕ್ಷರಗಳು ಆ ಮಡಿಚಿಟ್ಟ ರೇಖೆಯೊಳಗೆಸೇರಿಕೊಂಡು ಕಾಣಲು ಕಾಡಿಸುತ್ತಿದ್ದವು.ಎನು ಬರೆದಿರಬಹುದು! ಇದರಲ್ಲಿ ಎಂಬಕುತೂಹಲ ಮತ್ತು ತವಕ ಹೆಚ್ಚಾದವು. ಉಬ್ಬಿದ ಕಾಗದ ಅಲ್ಲಿ ಅಲ್ಲಿ ಚಲ್ಲಿದ ಶಾಹಿಅದರ ಬಣ್ಣೋ ವಿಕಾರಕ್ಕೆ ತಿರುಗಿತ್ತುಅಕ್ಷರಗಳಿಗೆ ಸ್ವಲ್ಪವೂ ನಗು ಇರಲಿಲ್ಲಕೆಳಗಿಂದ ಮೇಲೆಕ್ಕೆಮತ್ತು ಮೇಲ್ಲಿಂದ ಕೆಳಕ್ಕೆಏನೋ ಸಣ್ಣ ಸಣ್ಣ ಸಂಕೇತಗಳುಅಯೋ! ಒಂದು ತಿಳಿತಿಲ್ವಾಲ್ಲ ?ಅಂತಹಿಂದೆ ಮುಂದೆ ಕಾಗದದ ಅಕ್ಕ ಪಕ್ಕನೋಡುತ್ತಿದ್ದಾಗ,.. ಜೋಪಾನವೇ ತುಂಡಾಗಿತುಎಂದು ಮೃದು ಮನಸಿನ ಮೆಲು ದನಿನನ್ನನ್ನು ಥಟ್ಟ ಅಂತ ಎಚ್ಚರ ಮಾಡಿತು.ನನ್ನ ಪಾಲಿಗೆ ನೆನಪಾಗಿ ಇವತ್ತಿನವರೆಗೂಉಳಿದಿರುವುದು ಅದೊಂದೆ!ಅಂದ್ಲೂ ಅಜ್ಜಿನೆನಪು ಹೀಗೆ ಅಲ್ವವೇ?ಯಾವಾಗಲಾದರೂ, ಎಲ್ಲಿಯಾದರೂಯಾರಲ್ಲಾದರೂಮತ್ತೆ ಮತ್ತೆಕಣ್ಮಂದೆ ಮಾಸದೆ ಬಂದು ನಿಲ್ಲುತ್ತವೆ.ಸರಿ ಅಜ್ಜಿ ಎಂದು ಉತ್ತರಿಸಿದೆ.ಆದರೆ,.ಆ ಕಾಗದದಲ್ಲಿ ಏನಿದೆಎಂಬ ವಿಚಾರ ಮಾತ್ರ ನನಗೆ ತಿಳಿಯಲಿಲ್ಲ?ನನ್ನ ಮನಸಿನ ಕಣ್ಣಿಗೆ ಮಾತ್ರ ಕಾಣಲಿಲ್ಲವೋ?ನನ್ನ ಅರಿವುಗೆ ಬರಲಿಲ್ಲವೋ?ಗೊತ್ತಾಗಲಿಲ್ಲ. ನಿನ್ನ ಅಪ್ಪನ ಕೊನೆಯ ಕಾಗದವಿದುನನಗೆ ಕಳಸುವ ಮುನ್ನವೇ ಅವನು ಹೊರಟ.ಯುಗ ಉರಳಿದರು ನನಗೆ ಇದುಇವತ್ತಿಗೂ ಹೊಸ ಕಾಗದ.ಅಕ್ಷರ ಮಾಸಿರಬಹುದು,ಶಾಹಿ ತನ್ನ ಬಣ್ಣ ಕಳದುಕೊಂಡಿರಬಹುದುಆದರೆ,ಅವನು ಬರೆದಿರುವ ಒಂದೊಂದು ಪದವುಚೈತನ್ಯ ನೀಡುತಿವೆ, ಮತ್ತೆ ಮತ್ತೆನನ್ನ ಮಡಿಲಲ್ಲ ಜೋಗುಳದ ಲಾಲಿಮರುಕಳಿಸುತ್ತೆನನ್ನ ಆ ತಾಯಿತನ ಜೀವಂತವಾಗುವುದುಆ ಪದಗಳ ಸ್ಪರ್ಶದಿಂದ ಆದರೆ,ನಾನ ಮಾತ್ರ ಅಮೃತಳಾಗಿಹೆನು ***************************************.

ನೆನಪು Read Post »

ಕಥಾಗುಚ್ಛ

ಹೇಮಾ

ಕಥೆ ಹೇಮಾ ಎಂ.ಆರ್.ಅನಸೂಯ ವಿಜಯಾ  ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ  ಹೇಮಾ !  ” ನಮಸ್ತೆ ಮೇಡಂ “ ಹೇಮಾ, ಆರಾಮಾಗಿದೀಯಾ ,  ಹೇಗಿದಾನಮ್ಮ ನಿನ್ನ ಮಗ ? ಚೆನ್ನಾಗಿದ್ದಾನೆ  ಮಿಸ್.  ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ ಖಂಡಿತ ಬರಬೇಕು ಮೇಡಂ   ಹೌದಾ ಎಷ್ಟು ತಿಂಗಳು ಮಗುವಿಗೆ ಐದು ತಿಂಗಳು  ಮಿಸ್ ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ  ನೋಡಲು  ಬರುತ್ತೇನೆ. ಪಾಪುಗೆ ಏಳು ತಿಂಗಳಾದಾಗ  ಊರಿಗೆ ಬರ್ತಿನಿ ಮಿಸ್ ಅಜ್ಜಿಗೆ ಆಗುವುದಿಲ್ಲ. ಕಷ್ಟ ಆಗುತ್ತೆ. ಬೇಡ  ಅಂದ್ರು ಅತ್ತೆ ಹೌದಲ್ವಾ ನಿಮ್ಮತ್ತೆ ಹೇಳೋದು ಸರಿಯಾಗೇ ಇದೆ ಹೌದು  ಮಿಸ್  ನಮ್ಮತ್ತೆ ತುಂಬಾ ಒಳ್ಳೆಯವರು   ಹೇಮಾ ನೀನು ಊರಿಗೆ ಬಂದಾಗ  ಫೋನ್ ಮಾಡು ಆಯ್ತು ಮಿಸ್ . ಮಗು ಅಳುವ  ಧ್ವನಿ ಕೇಳಿಸಿತು. ಸರಿ  ಈಗ ಮಗುವನ್ನು ನೋಡು ಹೇಮಾ ಎಂದು ಹೇಳಿ ವಿಜಯಾ ಫೋನಿಟ್ಟರು. ಆದರೂ ಹೇಮಾಳ ಗುಂಗು ಮನದಲ್ಲಿ ಉಳಿಯಿತು.  ಹೇಮಾ  ವಿಜಯಾಳ  ಶಿಷ್ಯೆ. ಅವಳು ಪ್ರೌಢಶಾಲೆಯಲ್ಲಿ  ಓದುತ್ತಿದ್ದ ಕಾಲದಿಂದಲೂ  ಅವಳ ನಡೆನುಡಿಗಳು  ಇಷ್ಟ  ಮಧ್ಯಮ ವರ್ಗಕ್ಕೆ ಸೇರಿದ ಹೇಮಾ ಚುರುಕು ಹುಡುಗಿ ಹೆತ್ತತಾಯಿಯಿಲ್ಲದೆ ಅಜ್ಜಿ ತಾತನ ಆಶ್ರಯದಲ್ಲಿ ಬೆಳೆದ ಸಂಕೋಚ ಸ್ವಭಾವದ ಅವಳು ಓದಿನಲ್ಲಿ ಜಾಣೆ. ಒಮ್ಮೆ ಅವರ ಅಜ್ಜಿ ಪೋಷಕರ ಸಭೆಗೆ ಬಂದಾಗ ಅವರ ಆಜ್ಜಿ ಹೇಳಿದ್ದು ಅವರು ನೆನಪಿಗೆ ಬಂತು.  ಅವಳ ತಾಯಿಯು ಹೇಮಾಳ ತಮ್ಮನಿಗೆ ಜನ್ಟ ಕೊಟ್ಟ ನಂತರ  ತೀರಿಕೊಂಡ ದುರ್ದೈವಿ. ಹೆರಿಗೆಗಾಗಿ ತವರು ಮನೆಗೆ ಬಂದಿದ್ದರಿಂದ ಮಕ್ಕಳು ಇಲ್ಲೇ ಉಳಿದವು. ಹೇಮಾಳ ತಂದೆಯ ತಾಯಿ ತಂದೆಯರೂ ಇಲ್ಲದ ಕಾರಣ ಆ ಮಕ್ಕಳನ್ನು ಸಲಹಲು ಯಾರೂ ಮುಂದೆ ಬರಲಿಲ್ಲ. ಹೇಮಾಳ ತಾಯಿ ಒಬ್ಬಳೆ ಪ್ರೀತಿಯ ಮಗಳಾದ್ದರಿಂದ ಅವಳ ಮಕ್ಕಳಿಬ್ಬರು ಅನಾಥ ತಬ್ಬಲಿಗಳಂತೆ ಬೆಳೆಯುವುದು ಬೇಡವೆಂದು ಮಕ್ಕಳನ್ನು ತಾವೇ ಸಾಕಲು ನಿರ್ಧರಿಸಿದರು. ಹೇಮಾಳ ಇಬ್ಬರು  ಸೋದರ ಮಾವಂದಿರು ಸಹ ಒಪ್ಪಿದರು. ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿದ್ದರೂ ಸಹಾ ತಾವು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೇಮಾಳ ತಾತ ಚಿಕ್ಕ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಮೊದಲಿಗೆ ಹೇಮಾಳ ತಂದೆಯು ತಿಂಗಳಿಗೊಮ್ಮೆ ಬರುತ್ತಿದ್ದವರು ಎರಡನೆ ಮದುವೆಯಾದ ನಂತರ ಆರು ತಿಂಗಳಿಗೊಮ್ಮೆ ಬಂದಾಗ  ಮಕ್ಕಳಿಗೆ ಒಂದಿಷ್ಟು ಬಟ್ಟೆಗಳನ್ನು ಕೊಡಿಸಿ ಅವರ ಕೈಯಲ್ಲಿಷ್ಟು ಹಣ ಕೊಟ್ಟರೆ ತನ್ನ ಜವಾಬ್ದಾರಿಯು ಮುಗಿಯಿತೆಂದು ಭಾವಿಸಿದ್ದ ಮಹಾನುಭಾವ. ತಾಯಿ  ಸತ್ತ ಮೇಲೆ ತಂದೆ ಚಿಕ್ಕಪ್ಪ ಎಂಬ ಗಾದೆಗೆ ತಕ್ಕಂತಿದ್ದರು. ಮಗಳ ಮಕ್ಕಳು ಓದಿನಲ್ಲಿ ಮುಂದಿರುವುದು ಹೇಮಾಳ ಅಜ್ಜಿ ತಾತನಿಗೆ ನೆಮ್ಮದಿ. ಹೇಮಾಳಂತೂ ಅವಳಮ್ಮನ ಪಡಿಯಚ್ಚು.  ಮಗಳ ಸಾವಿನ ಸಂಕಟವನ್ನು ಇಬ್ಬರು ಮೊಮ್ಮಕ್ಕಳ ಆಟ ಪಾಠಗಳು ಮರೆಸಿದ್ದವು‌. ಇಬ್ಬರೂ ಸೋದರ ಮಾವಂದಿರಿಗೂ ತಂಗಿಯ ಮಕ್ಕಳನ್ನು ಕಂಡರೆ ಬಲು ಅಕ್ಕರೆ. ತನ್ನ ಪ್ರೀತಿಯ ಅಜ್ಜಿಯನ್ನು ಬಿಟ್ಟು ಒಂದು ದಿನವೂ ಇರಲಾರಳು ಹೇಮಾ. ಶಾಲೆಗೆ ರಜೆ ಬಂದಾಗ ಮಾವಂದಿರು “ಬಾ ಪುಟ್ಟಿ ನಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಬರುವೆಯಂತೆ”ಎಂದು ಕರೆದರೆ ಅಜ್ಜಿ ಬಂದ್ರೆ ಮಾತ್ರ  ಬರ್ತಿನಿ’ ಎಂದು ಮುದ್ದಾಗಿ ಹೇಳಿದರೆ  ಅಜ್ಜಿಗೆ ಪ್ರೀತಿಯುಕ್ಕಿ ಬರಸೆಳೆದು ಮುತ್ತಿಡುತ್ತಿದ್ದರು.  ಹೇಮಾಳಿಗೆ ತಮ್ಮನನ್ನು ಕಂಡರೆ ಬಲು ಪ್ರೀತಿ.  ಯಾವುದನ್ನೇ ಆಗಲಿ ತಮ್ಮನೊಡನೆ ಹಂಚಿಕೊಂಡು ತಿಂದರೆ ಮಾತ್ರ  ಅವಳಿಗೆ ಸಮಾಧಾನ. ಹೇಮಾಳ ಅಜ್ಮಿ ಹೇಳಿದ ಒಂದು ಪ್ರಸಂಗ ನೆನಪಿಗೆ ಬಂತು. ಆ ಸಂಗತಿಯನ್ನು ಹೇಳುತ್ತಾ ಕಣ್ತುಂಬಿ ಕೊಂಡಿದ್ದರು. ಒಮ್ಮೆ ಅವರ ಮನೆಯಿದ್ದ ಬೀದಿಯ ಮನೆ ಒಂದರಲ್ಲಿ ನಡೆದಿದ್ದು. ಚಿಕ್ಕ ಮಗುವಿನ ತಾಯಿಯೊಬ್ಬಳು ಏನೋ ಖಾಯಿಲೆಯಿಂದ ತೀರಿಕೊಂಡಿದ್ದರು. ಅದನ್ನು ಕಂಡ ಜನರು ಆ ತಬ್ಬಲಿ ಮಗುವಿನ ಬಗ್ಗೆ ಅನುಕಂಪದ ಮಾತುಗಳನ್ನಾಡುವುದನ್ನು ಕೇಳಿದ ಹೇಮಾ ‘ಅಜ್ಜಿ ಆ ಪಾಪುಗೆ ಇನ್ಮುಂದೆ ಎಷ್ಟು ಕಷ್ಟ ಆಗುತ್ತಲ್ವ ‘ಎಂದು ಕೇಳಿ ಕಣ್ಣೀರು ಹಾಕಿದ್ದಳಂತೆ. ರಾತ್ರಿ ಮಲಗುವಾಗ ಅಜ್ಜಿಯನ್ನು ತಬ್ಬಿಕೊಂಡು ‘ಅಮ್ಮ ಇಲ್ಲದಿದ್ರೂ ನೀನು ನಮ್ಮನ್ನು ಸಾಕಿ ನೋಡಿಕೊಂಡಂಗೆ ಅವರಜ್ಜಿನೂ ಹಾಕ್ತಾರೆ ಅಲ್ವಾ ಅಜ್ಜಿ’ ಎಂದು ಕೇಳಿದ್ದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದರು. ನಾವಿಲ್ಲದಿದ್ರೆ ಈ ಮಕ್ಕಳ ಗತಿ ಏನಾಗ್ತಿತ್ತೋ ಎನ್ನುತ್ತಾ ಸಂಕಟ ಪಟ್ಟಿದ್ದರು. ಅವರಿಬ್ಬರು  ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ನೆಲೆ ಕಂಡರೆ ಸಾಕೆಂಬ ಹಾರೈಕೆ ಅವರದು ಪ್ರೌಢ ಶಾಲಾ ವಿದ್ಯಾಭ್ಯಾಸದ ನಂತರವೂ ಸಹ  ಹೇಮಾ ಆಗಾಗ್ಗೆ ವಿಜಯಾ ಟೀಚರ್ ಗೆ ಫೋನ್ ಮಾಡುವುದು ಹಾಗೂ ಸಲಹೆಗಳನ್ನು ಕೇಳುತ್ತಾ ಸಂಪರ್ಕದಲ್ಲಿದ್ದಳು . ಹೇಮಾ ಈಗ ಎರಡನೆ ವರ್ಷದ  ಪದವಿ  ಓದುತ್ತಿದ್ದಳು. ಅವಳ ತಮ್ಮ ಹತ್ತನೆ ತರಗತಿಯಲ್ಲಿದ್ದ. ಅಕ್ಕತಮ್ಮಂದಿರು ವಿಜಯಾ ಟೀಚರ್  ಶಿಷ್ಯರೆ. ಇತ್ತೀಚೆಗೆ ಅವಳು ಫೋನ್ ಮಾಡಿ ಮಾತನಾಡುತ್ತ ಅವರ ಅಜ್ಜಿಗೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ತಾನು ಅವರಿಗೆ ಈಗ ಮೊದಲಿಗಿಂತ ಹೆಚ್ಚು ಸಹಾಯ ಮಾಡುತ್ತಿರುವೆ ಎಂದು ಹೇಳಿ ತಮ್ಮನ ಓದಿನ ಬಗ್ಗೆ ವಿಚಾರಿಸುತ್ತಾ ತಾನೆ ಅವನಿಗೆ ಗಣಿತವನ್ನು ಹೇಳಿಕೊಡುತ್ತಿದ್ದೇನೆ ಎಂದಿದ್ದಳು. ವಾರದ ಹಿಂದೆ ಅವಳ ತಮ್ಮ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಏಕೆ ಎಂದು ಕೇಳಲು ಅವರ ತಾತ ಜಾರಿ ಬಿದ್ದು ಫ್ರಾಕ್ಚರ್ ಆಗಿದ್ದು  ಹಾಸ್ಪಟಲ್ ಗೆ ಸೇರಿಸಿದ್ದರು. ಹಾಗಾಗಿ ಬರಲು ಆಗಲಿಲ್ಲ ಎಂದು ಹೇಳಿದ. ಹೇಮಾಳಿಗೆ ಫೋನ್ ಮಾಡಿ ಕೇಳಿದಾಗ  ಈಗ ಮನೆಗೆ  ಕರೆದುಕೊಂಡು ಬಂದಿದ್ದೇವೆ. ಮಾವಂದಿರೆ ಇಲ್ಲೇ ಇದ್ದು ಎಲ್ಲವನ್ನು ನೋಡುತ್ತಿದ್ದಾರೆ  ಎಂದಳು. ಆವರ  ತಾತ ಮನೆಯಿಂದ ಹೊರಗೆ  ಎಲ್ಲೂ ಹೋಗದೆ ಮನೆಯ ಮಟ್ಟಿಗೆ ಓಡಾಡಿಕೊಂಡಿದ್ದರು. ಗಿರಣಿಯ ಮೇಲ್ವಿಚಾರಣೆ ನಡೆಸುವುದು ಕಷ್ಟವಾದರೂ ವಿಧಿಯಿರಲಿಲ್ಲ. ಆದರೂ  ಅಜ್ಜಿಯ ಸಹಾಯದಿಂದ ಹೇಗೋ ನಿಭಾಯಿಸುತ್ತಿದ್ದರು. ಇತ್ತೀಚೆಗೆ  ಹೇಮಾಳ ಮದುವೆಯ ಮಾತನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದರು.. ಇದರಿಂದ  ಓದುವ ಆಸೆ ಬಲವಾಗಿ ಇಟ್ಟುಕೊಂಡಿದ್ದ  ಹೇಮಳಿಗೆ ಆತಂಕವು ಶುರುವಾಯಿತು.  ಕಾಲೇಜ್ ನ್ನು  ಮುಗಿಸಿ ಮನೆಗೆ ಹೋಗುವಾಗ ವಿಜಯಾ  ಟೀಚರ್  ಮನೆಗೆ ಬಂದು ತಮ್ಮ ತಾತ ತನಗೆ ಮದುವೆ  ಮಾಡಲು  ಆತುರ ಮಾಡುತ್ತಿದ್ದಾರೆಂದು ಹೇಳಿದಳು. ಇರಲಿ ಬಿಡು ಮದುವೆ ಎಂದು ಹೇಳಿದಾಕ್ಷಣ ಆಗುತ್ತಾ .ನೀನು ಮಾತ್ರ ಚೆನ್ನಾಗಿ ಓದು ಎಂದು ಸಮಾಧಾನ ಹೇಳಿದರು.ವಿಜಯ ಟೀಚರ್ ರಾತ್ರಿ ಊಟ ಮಾಡಿ  ಅಡುಗೆಮನೆ ಕೆಲಸವನ್ನು  ಮುಗಿಸಿ  ವಾರ ಪತ್ರಿಕೆಯನ್ನು ಓದುತ್ತಿದ್ದಾಗ ಮೊಬೈಲ್ ರಿಂಗ್ ಆಯಿತು. ನೋಡಿದರೆ  ಹೇಮಾಳದು. ಅತ್ತಲಿಂದ “ಮೇಡಂ . . ಬಿಕ್ಕಿ ಬಿಕ್ಕಿ ಅಳುವ ಸದ್ದು. “ಹಲೋ, ಹೇಮ  . . .  ಹಲೋ”ಎಂದರೆ ಮಾತಿಲ್ಲ ಸುಮ್ಮನೇ ಅಳುವುದು ಹಾಗೇ ಫೋನ್ ಕಟ್ ಆಯ್ತು. ಹತ್ತು ನಿಮಿಷದ ನಂತರ ಮತ್ತೆ ಫೋನ್. ಅವಳು ಫೋನ್ ಮಾಡುವಾಗ ಯಾರೊ ಬಂದಿರಬೇಕು.ಅದಕ್ಕೆ ಫೋನ್ ಕಟ್ ಆಗಿದೆಯೆನಿಸಿತು. ಮತ್ತೆ ಫೋನ್ ಬಂದಾಗ “ಹಲೋ ಹೇಮಾ,ಯಾಕಮ್ಮ ಏನಾಯ್ತು” ಮತ್ತೆ ಅಳು. ” ಹಲೋ,ಹೇಮಾ ನಾಳೆ ನಮ್ಮ ಮನೆಗೆ ಬಾ. ಅಳಬೇಡ  ಸುಮ್ನೆ ಮಲಗು” ಎನ್ನುತ್ತಿದ್ದಂತೆ ಫೋನ್ ಕಟ್. ಮತ್ತೆ  ಫೋನ್ ಬರಲಿಲ್ಲ. ಯಾರೋ ಪಕ್ಕದಲ್ಲಿರಬೇಕೆನ್ನಿಸಿತು ನಾನು ಫೋನ್ ಮಾಡಲಿಲ್ಲ.  ಮಾರನೆಯ ದಿನ ಭಾನುವಾರ ಸಂಜೆ ನಾಲ್ಕಕ್ಕೆ ಹೇಮಾ ಬಂದಳು. ತುಂಬಾ ಡಲ್ ಆಗಿದ್ದಳು. ಕಾಫಿ ಕುಡಿಯುತ್ತಾ ವಿಜಯಾ ಕೇಳಿದರು. “ಏನಾಯ್ತು ಹೇಳು ಹೇಮಾ” ಮೇಡಂ, ತಿಂಗಳು ಹಿಂದೆ ನಮ್ಮ ತಾತನಿಗೆ ಲೋ ಬಿ.ಪಿ. ಆಗಿ ಮತ್ತೆ ಹಾಸ್ಪಿಟಲ್ ಗೆ ಸೇರಿಸಿದ್ವಿ.  ಹಾಸ್ಪಿಟಲ್ ನಿಂದ ಬಂದ ದಿನದಿಂದ  ಒಂದೇ ಮಾತು ಮೇಡಂ  ಹೇಮಾಳ ಮದುವೆ ಬೇಗ ಮಾಡ್ಬೇಕು. ನಾನು ಹೆಚ್ಚು ದಿನ ಬದುಕಲ್ಲ ನಾನಿರುವಾಗಲೇ ಅವಳಿಗೆ ಒಂದು ನೆಲೆ ಕಾಣಿಸಬೇಕು  ಅದೊಂದು ಜವಾಬ್ದಾರಿಮುಗಿದ್ರೆ ನೆಮ್ಮದಿಯಾಗಿ ಪ್ರಾಣ ಬಿಡ್ತೀನಿ ಎಂದು ಹಠ ಮಾಡಿ ನಮ್ಮ ಮಾವಂದಿರನ್ನು ಒಪ್ಪಿಸಿದ್ದಾರೆ ನಂತರ ನಮ್ಮ ತಂದೆಗೂ ಫೋನ್ ಮಾಡಿ ವಿಷಯ ತಿಳಿಸಿ ಬರಲು ಹೇಳಿದ್ದಾರೆ. ಇನ್ನು ಒಂದೂವರೆ ವರ್ಷ ತಡೆದರೆ ನನ್ನ ಗ್ರಾಜುಯೇಷನ್ ಕಂಪ್ಲೀಟಾಗ್ತಿತ್ತು . ನನಗೆ ಈಗಲೆ ಮದುವೆ ಬೇಡ ಎಂದರೆ  ನೀನಿನ್ನು  ಚಿಕ್ಕ ಹುಡುಗಿ ಸುಮ್ನಿರಮ್ಮ ನಿನಗಿದೆಲ್ಲ ಅರ್ಥ ಆಗೋದಿಲ್ಲ ಎನ್ನುತ್ತಾರೆ..ಅಜ್ಜಿನೂ ಸಹಾ ನಿಮ್ಮ ತಾತ ಹೇಳಿದ ಹಾಗೆ ಕೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು ಅಂತಾರೆ . ನನಗೇನಾದ್ರೂ ಹೆಚ್ಚು ಕಡಿಮೆ ಆದರೆ ನಿನ್ನನ್ನು  ನೋಡಿ ಕೊಳ್ಳೋದು ಯಾರು? ನಿಮ್ಮಪ್ಪ ಬಂದು ಕರ್ಕೊಂಡು ಹೋಗಿ ನಿನ್ನನ್ನು ಸಾಕ್ತಾನಾ ಹೇಳು. ಆ ನಂಬಿಕೆ ನಿನಗೆ ಇದ್ಯಾ. ಒಂದು ವೇಳೆ ಕರೆದುಕೊಂಡು ಹೋದ್ರು ನಿನ್ನ ಸ್ಥಿತಿ ಎಷ್ಟರಮಟ್ಟಿಗೆ ಇರುತ್ತೆ ಅಂತ ಯೋಚನೆ ಮಾಡು ನಾವ್ಯಾರು ಶ್ರೀಮಂತರಲ್ಲ. ಅವರವರ ಸಂಸಾರಗಳೇ ಅವರಿಗೆ ಭಾರ ಆಗಿರೋ ಕಾಲದಲ್ಲಿ ನಿನ್ನನ್ನ ಒಂದು ನೆಲೆ ಮುಟ್ಟಿಸೋ ಜವಾಬ್ದಾರಿ ನನ್ನದು. ಅದನ್ನು ಮಾಡದಿದ್ರೆ ನಿನ್ನನ್ನು ಇಷ್ಟು ವರ್ಷ ಪ್ರೀತಿಯಿಂದ  ಸಾಕಿ ಸಲಹಿದ್ದಕ್ಕೆ ಏನು ಪ್ರಯೋಜನ ? ನೀನೇ ಹೇಳು. ಇನ್ನು ನಿನ್ನ ತಮ್ಮ ರಾಘು ಗಂಡು ಹುಡುಗ ಹೇಗೋ ಆಗುತ್ತೆ . ಅವನ ಬಗ್ಗೆ ಯೋಚನೆ ಮಾಡ್ಬೇಡ. ಜಾಣ ಹುಡುಗ ಚೆನ್ನಾಗಿ ಓದ್ಬಿಟ್ಟು ಕೆಲಸಕ್ಕೆ ಸೇರಿದರೆ ಮುಗೀತು. ನಮಗೆ ನಿನ್ನದೆ ಚಿಂತೆ . ಈ ಮನೆ ಬಿಟ್ರೆ ನಿನಗೆ ಎಲ್ಲೂ ಸರಿಯಾದ ಜಾಗ ಇಲ್ಲಮ್ಮ. ನೀನು ಚೆನ್ನಾಗಿದ್ರೆ ನಮಗೆ ನೆಮ್ಮದಿ ಎಂದು ಅಜ್ಜಿ ತಾತ ಹೇಳ್ತಾರೆ ಮೇಡಂ ಎಂದು ಕಣ್ಣೀರುಹಾಕಿದಳು.ನೀವಾದ್ರು ಒಂದು ಮಾತು ಹೇಳಿ ಮೇಡಂ. ನಾನು ಇನ್ನೂ ಓದ್ಬೇಕು  ಮೇಡಂ. ನಾನು ಬಿ.ಇಡಿ. ಮಾಡೋ ಆಸೆಯಿದೆ. ಮದ್ವೆ ಆದ ಮೇಲೆ ಯಾರು ಓದಿಸ್ತಾರೆ ಮೇಡಂ. ಪ್ರೀತಿಯಿಂದ  ಸಾಕಿದ ಅಜ್ಜಿ ತಾತನಿಗೆ ಹೇಗೆ ಹೇಳಿ ಒಪ್ಪಿಸಬೇಕು ಅಂತ ಗೊತ್ತಾಗ್ತಿಲ್ಲ ಎಂದು ಹೇಳುತ್ತ ಬೇಸರ ಪಟ್ಟಳು. ಜಾಣೆ ಯಾಗಿದ್ದು ಅವಳಲ್ಲಿ ಓದುವ ಆಸೆ ಅದಮ್ಯವಾಗಿತ್ತು.  ಆದರೆ ಅವರ ಅಜ್ಜಿ ತಾತ ಹೇಳೋ ಮಾತಿನಲ್ಲಿ ಸತ್ಯಾಂಶ ಇದ್ದಿದ್ದರಿಂದ” ಹೌದು ಹೇಮಾ ಅವರು ಹೇಳಿರುವುದೆಲ್ಲಾ ಸರಿಯಾಗಿದೆ. ಯೋಚನೆ ಮಾಡು. ನೀನು ಮದುವೆ ಆದ ಮೇಲೆ ನಿನ್ನ ಗಂಡನನ್ನು ಒಪ್ಪಿಸಿ ಓದಬಹುದಲ್ವ. ನಿಮ್ಮ ತಾತನಿಗೂ ಹೇಳು ಮದುವೆಯ ನಂತರವು ನೀನು ಓದು  ಮುಂದುವರಿಸಲು ಅವಕಾಶ ಕೊಡಿರಿ ಎಂದು ಕೇಳಲು. ನೋಡೋಣ. ಇನ್ನೂ ಗಂಡು ಸಿಕ್ಕಿ ಮದುವೆಯಾಗುವ ವೇಳೆಗೆ ಪದವಿಯ ಎರಡನೆ ವರ್ಷಮುಗಿಯುತ್ತೆ. ನೀನು ಅಜ್ಜಿ ತಾತ ಹೇಳಿದಂತೆ ಕೇಳು. ಒಳ್ಳೆಯದಾಗುತ್ತೆ.ಓದಿನ ಕಡೆ ಗಮನ ಕೊಡು ಎಂದು ಸಮಾಧಾನಪಡಿಸಿದರು.   ಮನೆಗೆ ಬಂದ ಹೇಮಾ ಆ ದಿನ ರಾತ್ರಿ ಮಲಗಿದ್ದ ತಾತನ ಕಾಲನ್ನು ಒತ್ತುತ್ತಾ ” ತಾತ, ನಾನೊಂದು ಮಾತು ಹೇಳ್ತಿನಿ ಸಿಟ್ಟು ಮಾಡ್ಕೋಬಾರದು”ಎಂದಳು. ಅದೇನು ಹೇಳಮ್ಮ ಎಂದಾಗ ” ಆಯ್ತು ತಾತ ಮದುವೆ ಆಗ್ತೀನಿ. ಮದುವೆ ಸೆಟ್ ಆದರೆ ಮದುವೆ ಆದ ಮೇಲೆ ಒಂದು ವರ್ಷ ಓದಕ್ಕೆ ಅವಕಾಶ ಕೊಟ್ರೆ ಡಿಗ್ರಿ ಆಗೋಗುತ್ತೆ ತಾತ.ಇದನ್ನು ನೀನು ಗಂಡಿನವರಿಗೆ ಹೇಳಿ ಒಪ್ಪಿಸು.” ಎಂದು ಕೇಳಿಕೊಂಡಾಗ ಅವಳಿಗೆ ನಿರಾಶೆ ಮಾಡಬಾರದೆಂದು ಯೋಚಿಸುತ್ತಲೆ “ಆಯ್ತು, ದೈವಿಚ್ಛೆ ಎಂಗಿದೆಯೋ ನೋಡೋಣ”ಎಂದರು  ಆಗ ಅಜ್ಜಿಯು ಸಹಾ ಓದಕ್ಕೆ ಒಪ್ಪುವಂಥ ಗಂಡನೇ ನನ್ನ ಮೊಮ್ಮಗಳಿಗೆ ಸಿಗಲಪ್ಪ ದೇವರೇ ಎಂದು ಮನಪೂರ್ವಕ ಕೇಳಿಕೊಂಡರು. ಮೊಮ್ಮಗಳಿಗೆ ಗಂಡು ನೋಡಲು ತಮ್ಮ ಇಬ್ಬರುಗಂಡು ಮಕ್ಕಳಿಗೆ ಒತ್ತಾಯ

ಹೇಮಾ Read Post »

ಕಾವ್ಯಯಾನ

ಎರಡು ಮೊಲೆ ಕರುಳ ಸೆಲೆ

ಕವಿತೆ ಎರಡು ಮೊಲೆ ಕರುಳ ಸೆಲೆ ವಿಶಾಲಾ ಆರಾಧ್ಯ ಮನುಜ ಕುಲವ ಕತ್ತಲಿಂದ ಬೆಳಕಿಗಿತ್ತತೊಡೆಯ ಸೆಲೆಯ ಮಾಯೀ ಕಣಾನವಮಾಸ ಏನೆಂದು ಬಲ್ಲೆಯಾ?ಒಂದೊಂದು ಮಾಸದಲ್ಲೂಒಂದೊಂದು ವೇದನೆಯಗ್ರಹಚಾರವ ಮೀರಿಕೆಸರ ಮುದ್ದೆಗೆ ರೂಹಿತ್ತುಗುಟುಕಿತ್ತ ಕರುಳ ಹೊಕ್ಕುಳು !ಮಾ-ನವರಂಧ್ರದ ನಿನ್ನಧರೆಗಿಳಿಸಿ ಬಸವಳಿದರೂದಣಿವರಿಯದ ಧರಣಿ ಕಣಾ ಹೆಣ್ಣು!!ಪುಣ್ಯ ಕೋಟಿ ಕಾಮಧೇನುಬೀದಿಗಿಳಿದ ಹೋರಿಬಸವನಿಗೆ ಸಮವೇನು?ಹೋಲಿಕೆಯೇ ಗೇಲಿ ಮಾತುಒಂದೇ ಕ್ಷಣ ಬಿತ್ತುವನಿನ್ನ ಗತ್ತಿಗೆಷ್ಟು ಸೊಕ್ಕು?ಒಂದು ಬಸಿರಲುಸಿರುತುಂಬಿ ಕೊಡುವಳೆಲ್ಲರಿಗೂ ಮಿಕ್ಕು!ಒಂದೇ ಕ್ಷಣ ಉರಿದಾರುವಗಂಡೇ ಕೇಳು ದಂಡಧರಣಿಯೋ ಬೂದಿಯೊಳಡಗಿದಮೌನ ಕೆಂಡ ಹಸಿ ಮಾಂಸಮುಕ್ಕುವುದುಸುಲಭ ನಿನ್ನ ದಂಡಕೆ !ಹಲವು ಕೂಸಿಗೊಬ್ಬಳೇಹಾಲನ್ನೀವ ಹೆಣ್ಣಂತೆಎರಡು ಮೊಲೆಯಿವೆಯೇ ಗಂಡಿಗೆ? *****************************

ಎರಡು ಮೊಲೆ ಕರುಳ ಸೆಲೆ Read Post »

ಇತರೆ

ಡಿ.ಎಸ್.ರಾಮಸ್ವಾಮಿ ಕವಿತೆಗಳು ಗೆ; ಕವಿತೆಯ ಮೊಳಕೆಯೊಡೆಸುತ್ತದೆನಿನ್ನದೊಂದು ನಗು, ಸಣ್ಣ ಸಂದೇಶಎಂದಂದು ನಿನ್ನನ್ನು ಮರುಳುಮಾಡುವುದಿಲ್ಲ; ಜೊತೆಗಿರದೆಯೂ ಜೊತೆಗೇ ಇರುವಾಗ.ನಟ್ಟ ನಡುವೆ ಎದ್ದು ಹೋಗುವ ಮಾತಿಗೆಖಬರಿಲ್ಲ, ಅನ್ನುವುದಕ್ಕೆ ಪುರಾವೆ ಯೊದಗಿಸಲಾರೆ, ಬದುಕ ದುರಿತದ ನಡುವೆ.ಆಡದೇ ಉಳಿದ ಮಾತುಗಳು ಎದೆ ತುಂಬಉಳಿದದ್ದಕ್ಕೆ ಸಾಕ್ಷಿ, ಕವಿತೆಯ ಸಾಲುಗಳಲ್ಲಿ ನೀನು, ಪದೇ ಪದೇ ಇಣುಕುತ್ತೀಯ, ಮುಖಾಮುಖಿ-ಯಾಗದೆಯೂ, ಒಳಗೇ ಉಳಿದ ಬೆಳಕು.ಹಂಚಿಕೊಳ್ಳುವುದಕ್ಕೇನು ಉಳಿದಿದೆ ಎನ್ನುವುದೆಲ್ಲ ಬರಿಯ ಒಣ ತರ್ಕದ ದೇಶಾವರಿ ಹೇಳಿಕೆಇಬ್ಬರಿಗಲ್ಲದೇ ಮತ್ತಾರಿಗೂ ಗೊತ್ತಾಗಬಾರದ ಸತ್ಯ.ಹೆಗಲಿಗೊರಗಿ, ಬೆರಳ ಹೆಣೆದು ಅನೂಹ್ಯ ಲೋಕಕ್ಕೆ ಜಾರಿ, ಮನಸ್ಸಲ್ಲೇ ಕೂಡಿದ್ದು, ಮಿಥುನದುದ್ರೇಕಕ್ಕಿಂತಮಿಗಿಲೆಂದು ಗೊತ್ತಾಗಿದ್ದು, ಲೌಕಿಕದ ಎಂಜಲದಾಂಪತ್ಯದ ಗೆರೆ ದಾಟದ ನೈತಿಕದ ಗೆಲುವು. ಭಾವವಿಲ್ಲದ ಕವಿತೆ ಬರಿಯ ಹೇಳಿಕೆಯಾಗುವುದುಲೋಕ ಸತ್ಯದ ಮಾತು. ನೀನು ನೆನಯುವ ಕೃಷ್ಣನನ್ನ ಕಾಡುವ ರಾಧೆ, ಬರಿಯ ಪುರಾಣವೇನಲ್ಲ ನಮ್ಮೊಳಗೇ ಉಳಿದ ಬಾಂಧವ್ಯದ ಸೂನು.ಮುಗಿಲಂಚಿಗೆ ಹೆಣೆದ ಬಣ್ಣ ಬಣ್ಣದ ಕಮಾನು!! ———– ಹೆಣ್ಣು ಮತ್ತು ಹಾಡು ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇಇವಳು ಜನಕನ ಮಗಳು ಜಾನಕಿ ಎಂದಿರಿ.ಇವಳದಲ್ಲದ ತಪ್ಪಿಗೆ ಬೆಂಕಿಗೆ ಹಾಯುವಾಗಲು ತಡೆಯದವನನ್ನು ಪುರುಷೋತ್ತಮನೆಂದಿರಿ.ತ್ರೇತಾ ಯುಗದ ತಪ್ಪನ್ನು ದ್ವಾಪರಕ್ಕೂ ಮುಟ್ಟಿಸಿ ಪಾಂಚಾಲದಲ್ಲಿ ಹುಟ್ಟಿದುದಕ್ಕೇ ಪಾಂಚಾಲಿದೃಪದನ ಮಗಳಿಗೆ ದ್ರೌಪದಿಯ ಠಸ್ಸೆಯೊತ್ತಿದಿರಿಯಾರ ಮೇಲೆ ಯಾರಿಗೂ ಹಕ್ಕೇ ಇಲ್ಲದಿದ್ದರೂಜೂಜು ಕಟ್ಟೆಯ ಸ್ವತ್ತಾಗಿಸಿ ಲಿಲಾವಿಗಿಟ್ಟುದ್ವಾಪರದ ತಪ್ಪನ್ನು ಕಲಿಗಾಲಕ್ಕೂ ತಂದಿರಿಸಿದಿರಿ ಸೀತೆಯನ್ನು ಗೆಲ್ಲುವ ಮೊದಲೇ ದಾಶರಥಿ ಕಲ್ಲಂತಾಗಿದ್ದ ಅಹಲ್ಯೆಯನ್ನು ಹೂವಾಗಿಸಿದ್ದನ್ನುಸ್ವತಃ ಮರೆತದ್ದಕ್ಕೇ ಇರಬೇಕು, ಕಿಡಿಗೇಡಿಯ ಸಣ್ಣ ಮಾತಿಗೇ ಮತ್ತೆ ಕಾಡಿಗಟ್ಟಿದ ಅವಿವೇಕಹಾಡಂತೆ ಹಾಡುತ್ತಲೇ ಕುಶಲವರು ಗೆದ್ದದ್ದು. ಉಟ್ಟ ಸೀರೆಗೆ ಕೈಯಿಟ್ಟವನನ್ನು ಸುಸ್ತಾಗಿಸಿದ್ದುಕಟ್ಟಿಕೊಂಡವರೇನಲ್ಲ, ಮಾತು ತಪ್ಪದ ಸಖನೇ,ಮುಡಿ ಕಟ್ಟುವುದಿಲ್ಲ ತೊಡೆಮುರಿದ ಹೊರತೂಎಂದವಳು ಅವಳೇನಲ್ಲ,ಯಾರದೋ ಶಪಥಕ್ಕೆಪಗಡೆಯ ದಾಳವಾದದ್ದೂ ಆಕಸ್ಮಿಕವೇನಲ್ಲ, ಯುಗ ಯುಗಗಳ ಆವರ್ತದಲ್ಲೂ ಮತ್ತೆ ವ್ಯಥೆನೆಲವಲ್ಲದೇ ನೇಗಿಲ ಮೊನೆ ಸೀಳೀತೆ ಕಲ್ಲನ್ನುಬಂಡೆಗೆ ತಾಗಿದರೆ ಹಲದ ಹಲ್ಲೂ ಮುರಿದೀತುಅದಕ್ಕೇ ಯಾವತ್ತೂ ಮಿಗದ ಬೇಟೆಯ ನೆವಕ್ಕೆಈ ಇವನ ಕೈಯ ಭರ್ಜಿ,ಈಟಿ, ತಲವಾರುಗಳು. ಯಾವುವೂ ರಕ್ಷಣೆಗೆ ಸ್ವತಃ ನಿಲ್ಲುವುದಿಲ್ಲರಕ್ತದ ಹನಿ ನೆಲಕ್ಕೆ ಬಿದ್ದರೆ ಮತ್ತೆ ಅಸುರ ಶಕ್ತಿಎದ್ದೀತೆಂಬ ಎಚ್ಚರಿಕೆಯಲ್ಲೇ ನಾಲಿಗೆಯ ಹಾಸಿಶಕ್ತಿ ರೂಪಿಣಿಯ ಕೈಯಲ್ಲಿ ಆಯುಧದ ಸಾಲುಬರಿಯ ತೋರಿಕೆಗಲ್ಲ, ಅತ್ಯಗತ್ಯದ ವೇಷ. ತೊಡದೇ ಇದ್ದರೆ ಗೊತ್ತೇ ಆಗುವುದಿಲ್ಲ ಈ ಅವಿವೇಕಿಗಳಿಗೆ. ಇವಳು ತಾಯಿ, ಮಗಳುಅಕ್ಕ ತಂಗಿಯರ ಸಂಬಂಧದಲ್ಲಿ ಸೂಕ್ಷವಾಗಿ. **************************************

Read Post »

You cannot copy content of this page

Scroll to Top