ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅವ್ಯಕ್ತಳ ಅಂಗಳದಿಂದ ಅವ್ಯಕ್ತ ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ ಸಿಕ್ಕಿ ದ್ಲಾ.?”. “ಅವಳ ರಿಜಿಸ್ಟರ್ ನಂಬರ್ ಏನು……?”  ಮಧ್ಯಾಹ್ನದೊತ್ತಿಗೆ ಅವಳಮ್ಮ ಫೋನ್ ಮಾಡಿದರು, ಕೆಲವೊಂದರಲ್ಲಿ ಬಹಳ ಒಳ್ಳೆ ಅಂಕ ಬಂದಿದೆ ಕನ್ನಡ ಮಾತ್ರ ಉಳಿದಿದೆ, ಧನ್ಯವಾದಗಳ ಒಂದು ಅಲೆ. ನನ್ನ ಮನದಲ್ಲಿ ಎಲ್ಲಿಲ್ಲದ ಸಂತೋಷ ಸದ್ಯ ಈ ಮಗು ಪಾರಾಗಿಬಿಟ್ಟಳು. ನಾನು ಮನೆಯೊಳಗೆ ಹೋಗಿ ಎರಡು ದ್ರಾಕ್ಷಿಗಳನ್ನು ಬಾಯಿಗೆ ಹಾಕಿ ಕೃಷ್ಣನಿಗೆ ಒಂದು ನಮಸ್ಕಾರ ಹಾಕಿ ಅಲ್ಲಿದ್ದ ಮಕ್ಕಳಿಗೆ ಪಾಠ ಮಾಡುವ ಕೆಲಸ ಮುಂದುವರಿಸಿದೆ. ಅವಳು ನನ್ನ ಬಳಿ ಬಂದ ದಿನ ಇನ್ನೂ ಹಸನಾಗಿ ಮನದಲ್ಲಿ ನನಗಿದೆ. 10ನೇ ತರಗತಿಗೆ ನನ್ನ ಬಳಿ ಕಲಿಯಲು ಬಂದವಳು ಒಂದೇ ಒಂದು ಸಾಲು ಓದಲೂ ಬಹಳ ಕಷ್ಟ.. ಅತೀ ಮುಗ್ದೆ. ತುಂಬಾ ಭಯ. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ಏನೋ ಭಯ. ಮಾತೇ ಆಡುತ್ತಿರಲಿಲ್ಲ. ‘ಹೃದಯವನ್ನೇ ಯಾರೋ  ಹಿಸುಕಿ ಬಿಟ್ಟಿದ್ದಾರೆ’ ಅನ್ನಿಸಿಬಿಟ್ಟಿತ್ತು.. ಓದಲು ಬರುವುದಿಲ್ಲ, ಬರೆಯುವ ಶೈಲಿ ಅರ್ಥವೇ ಆಗುತ್ತಿಲ್ಲ, ಹೆದರಿಕೆ ಮಿತಿಮೀರಿದ್ದು…. ಏನು ಮಾಡಲಿ ಈ ಹುಡುಗಿಗೆ ಎಂದು ಆಲೋಚಿಸುತ್ತಿದ್ದೆ. ದಿನಾ ನನ್ನ ಬಳಿ ಕೂಡಿಸಿಕೊಂಡು ಅವಳಲ್ಲಿ ಏನು ಕತೆಗಳಿವೆ ಎಂದು ವಿಶ್ಲೇಷಣೆ ಮಾಡುವುದು ನನ್ನ ಕೆಲಸವಾಗಿತ್ತು. ನನಗೆ ಸಹಕಾರ ಕೊಡಲು ಇನ್ನೂ ಮೂರು ಅದೇ ಮನೋಭಾವನೆ ಇರುವ ಹುಡುಗಿಯರು ನನ್ನ  ಬಳಿ ಬರುತ್ತಿದ್ದರು ಅವರ ಸಹಾಯದಿಂದ ಹುಡುಗಿಯ ಎಲ್ಲಾ ಲಕ್ಷಣಗಳನ್ನು ಪದರಪದರವಾಗಿ ಬಿಚ್ಚತೊಡಗಿದೆ. ಆಶ್ಚರ್ಯವೆಂದರೆ ಓದಲೇ ಬರದ ಹುಡುಗಿ ಅದು ಹೇಗೆ ಯಾವ ಮೆಂಟಲ್ ಎಬಿಲಿಟಿ ಪುಸ್ತಕದಲ್ಲಿಯೂ ವಿವರಣೆ ಇಲ್ಲದೆ ಹಾಗೆ ಬರೆಯುತ್ತಿದ್ದಾಳೆ. ನನಗೆ ಒಂದು ಕುತೂಹಲ… ಓದಲು ಬರದವಳು ಹೇಗೆ ಬರೆಯುತ್ತಾಳೆ?!  ಕೇಳಿದರೆ ಹೇಳುತ್ತಾಳೆ…. “ನನಗೆ ಬೇರೆ ಶಿಕ್ಷಕಿಯೊಬ್ಬಳು ಬೆತ್ತದಲ್ಲಿ ಬಿಡುತ್ತಿದ್ದಳು, ನನ್ನನ್ನು ಗಮನಿಸುತ್ತಲೇ ಇರಲಿಲ್ಲ…ಜಗತ್ತಿನ ಭಯಕ್ಕೆ ನಾನು ಹೇಗೋ ಬರೆಯುವುದನ್ನು ಕಲಿತೆ” ಎನ್ನುತ್ತಾಳೆ. ತನ್ನ ಮೊದಲ ಕ್ಲಾಸಿನಿಂದ ಹತ್ತನೇ ಕ್ಲಾಸಿನವರೆಗೆ ಒಂದು ಹುಡುಗಿಗೆ …..ನಿನಗೆ ಓದಲು ಬರೆಯಲು ಬರುವುದಿಲ್ಲ ಆಗೋದಿಲ್ಲ ಎಂದರೆ ಯಾರಿಗೂ ಹೇಳಿಕೊಳ್ಳಲಾಗದ ಎಷ್ಟು ಕಸಿವಿಸಿ ಪಟ್ಟಿರಬಹುದು. ನಮ್ಮ ಶೈಕ್ಷಣಿಕ ಸಮಾಜದಲ್ಲಿ ಮಕ್ಕಳು ಓದುತ್ತಿಲ್ಲ, ಬರೆಯುತ್ತಿಲ್ಲ, ಅಂಕಗಳಿಸುತ್ತಿಲ್ಲ, ಪಾಠ ಕೇಳುತ್ತಿಲ್ಲ, ಓದುತ್ತಿಲ್ಲ, ಬರೆಯುತ್ತಿಲ್ಲ, ಇತ್ಯಾದಿ, ಇತ್ಯಾದಿ…… ಕಾರಣಗಳನ್ನು ಕೊಡುವವರೇ ಹೊರತು ಕಾರಣದ ಮೂಲ ಸಮಸ್ಯೆಯನ್ನು ಹುಡುಕುವವರು ಬಹಳ ವಿರಳ . ತಂದೆ-ತಾಯಿಯೂ ಅಸಹಾಯಕರಂತೆ ಒದ್ದಾಡುವರು. ಇಲ್ಲವಾದರೆ ಮಕ್ಕಳನ್ನು ಶಿಕ್ಷಿಸುವರು…….  ಈ ಹುಡುಗಿಗೆ ಇದ್ದ ಸಮಸ್ಯೆ ‘ಅಕ್ಷರ ಜ್ಞಾನವೇ ಇಲ್ಲ’. ಅಕ್ಷರಗಳನ್ನು ಚಿತ್ರಗಳಂತೆ ಜೋಡಿಸಿ ಜೋಡಿಸಿ ಬರೆಯುತ್ತಿದ್ದಳು ಅಕ್ಷರ ಜ್ಞಾನವಿಲ್ಲದವರು ಚಿತ್ರಗಳಂತೆ ಜೋಡಿಸಿ ಅಂಕಗಳನ್ನು ಹೇಗೆ ತೆಗೆಯಬಲ್ಲರು…..ಬರುತ್ತಿದ್ದದ್ದು ಮೂರು-ನಾಲ್ಕು ಅಂಕ. ಆದರೂ ನನಗೆ ಅದು ಬಹಳ ಹೆಮ್ಮೆಯ ವಿಷಯ. ಅಕ್ಷರ ಜ್ಞಾನವಿಲ್ಲದೆ ಅಂಕ ಪಡೆದವಳು, ಅಕ್ಷರಗಳು ಬಂದಮೇಲೆ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಜೋಡಿಸಿ ಸ್ವಚ್ಛವಾಗಿ ವಾಕ್ಯ ಮಾಡಲಿಕ್ಕೆ ಕಲಿತರೆ ಅವಳು ಇನ್ನಷ್ಟು ಒಳ್ಳೆಯ ಅಂಕ ಪಡೆಯಬಹುದು…… ಒಳ್ಳೆ ಚಿತ್ರಗಾರಳು ಹಾಗಾಗಿ ಬದುಕುಳಿದಳು, ಕೂಡುವುದು- ಕಳೆಯುವುದು- ಗುಣಿಸುವುದು- ಬಾಗಿಸೋದು, ಅದೆಲ್ಲ ಆರಾಮಾಗಿ ಮಾಡ್ತಿದ್ಲು. ಹಾಗಾಗಿ, ಈ ಜನಗಳ ಮಧ್ಯದಲ್ಲಿ ಹೇಗೋ ಒಂದು ಹಂತದವರೆಗೆ ಜಸ್ಟ್ ಪಾಸ್ ಆಗಿದ್ಳು.ನನ್ನ ಮುಂದೆ ಒಂದಲ್ಲ ಹಲವಾರು ಚಾಲೆಂಜ್ ಗಳು…. ಅವಳಲ್ಲಿದ್ದ ಭಯ ಹೋಗಿಸಬೇಕು, ಅಷ್ಟೇ ಅಲ್ಲ ಹತ್ತಾರು ಜನರ ಎದುರು ಧೈರ್ಯವಾಗಿ ಸ್ಪಂದಿಸುವ ವ್ಯಕ್ತಿತ್ವ ರೂಪಿಸಬೇಕು, ಅವಳು ಸರಿಯಾದ ರೀತಿಯಲ್ಲಿ ಓದುವುದು ಬರೆಯುವುದು ಕಲಿಯಬೇಕು, ಮುಂದಿನ ಭವಿಷ್ಯಕ್ಕೆ ಒಂದು ದಾರಿ ಮಾಡಬೇಕು, ಅವಳ ನಗುವಿನ ಹಿಂದೆ ಇದ್ದ ನೋವುಗಳನ್ನು ಶಮನ ಮಾಡಬೇಕು . “ಮನಸ್ಸು ಮೆದುಳಿನ ಸರಿಯಾದ ಸ್ಪಂದನ ವಿದ್ದರೆ ಸಮಸ್ಯೆಗಳ ಅರಿವು ಅದರ ಶಮನಕ್ಕೆ ನಾಂದಿ ಯಾಗುವುದು.” **********

ಅವ್ಯಕ್ತಳ ಅಂಗಳದಿಂದ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಮೂರ್ಖರು ಕು.ಸ.ಮಧುಸೂದನ ಮೂರ್ಖರುಕೋವಿಯಿಂದ ಕ್ರಾಂತಿ ಮಾಡುತ್ತೇವೆಂದು ಹೊರಟಮೂರ್ಖ ನಕ್ಸಲರು! ಧರ್ಮದಆಧಾರದ ಮೇಲೆದೇಶ ಕಟ್ಟುತ್ತೇವೆಂದು ಹೊರಟಮೂರ್ಖಮತಾಂಧರು! ಜಾತ್ಯಾತೀತಅಂತ ಹೇಳುತ್ತಾ ಜನಗಳ ಒಡೆಯುತ್ತಿರುವ ಹುಸಿಕ್ರಾಂತಿಕಾರಿಗಳು! ಇವರುಗಳ ನಡುವೆಇದ್ಯಾವ ಶಬ್ದಗಳನ್ನೂ ಕೇಳಿರದಬಡವರುತಣ್ಣಗೆಹೊಲಗದ್ದೆಗಳಲ್ಲಿಕಾರ್ಖಾನೆಗಳಲ್ಲಿಕೆಲಸ ಮಾಡುತ್ತಾದೇಶ ಕಟ್ಟುತ್ತಿದ್ದಾರೆ ಭಾಷಣಗಳ ಬೀಕರತೆಯಿಂದ ದೂರವುಳಿದು! *********

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ಮಾಗಿಯ ಪದ್ಯ ಮಾಗಿಯ ಪದ್ಯ ಮಾಗಿಯ ಪದ್ಯ ಕೌದಿ ಕವುಚಿ ಕಂಬಳಿ ಹುಳುವಾದರೂ ಅಡಗಲೊಲ್ಲದ ಚಳಿ ಬೆಳಗಾಗ ಬರುವ ಚುರುಕು ಬಿಸಿಲಿನ ನೆನಪೇ ಬಿಸಿ ಹುಟ್ಟಿಸ ಬಲ್ಲದು ಒಳಗೆ ಉರಿ ಮುಖದ ಸೂರ್ಯ, ನಿನ್ನ ಆಗಮನ ಅದೆಷ್ಟು ಬೆಚ್ಚಗೆ , ಜಡ ಮಾಗಿಗೆ!!! *******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೋತ ಪ್ರೇಮಿ ಪ್ಯಾರಿಸುತ ಸೋತಪ್ರೇಮಿ ನಾನು ಸಹಿಸಲಾರದ ಸೋಲಿನೊಂದಿಗೆ ನಿಂತಿದ್ದೇನೆ. ನೀ ಬಿಟ್ಟು ಹೋದ ದಾರಿಯಲಿ ಒಬ್ಬಂಟಿಯಾಗಿ ಅಷ್ಟೇ…! ಇನ್ನೆಷ್ಟು ಬದುಕು ಉಳಿದಿದೆ ಕಾಲಮಾನ ದೂಡಲು…! ನಾವಿಬ್ಬರು ಕೂಡಿ ತೆಗಿಸಿದ ಫೋಟೋವನ್ನ ಕಟ್ಟಾಕಿಸಿ ಜೋಪಾನವಾಗಿ ಇಡಬಲ್ಲೆ…! ಆದರೆ ..? ನಿನ್ನ ಮೇಲಿರುವ ಪ್ರೀತಿ ಯಾವುದರಲ್ಲಿ ಇಡಲಿ…? ಇದ್ದೊಂದು ಹೃದಯ ಚುಚ್ಚಿ ನೀನೇ ಹಾಳು ಮಾಡಿದ್ದು ಆಗಿದೆ… ನಿನ್ನೆಲ್ಲ ಸೌಂದರ್ಯವನ್ನ ಕಣ್ಣಲ್ಲಿ ಜೋಪನವಾಗಿಸಿದ್ದೆ. ನೀ ಕೊಟ್ಟ ನೋವಿಗೆ ಕಣ್ಣೀರಾಗಿ ಹರಿದು ಹೋಗಿದೆ. ಹೇಳಿಹೋಗಬೇಕಿತ್ತು. ಇಲ್ಲವೇ …? ಮುನ್ಸೂಚನೆ ಕೊಟ್ಟಿದ್ದರೆ..? ನನ್ನ ಹೃದಯವನ್ನಾದರೂ ಕಲ್ಲಾಗಲು ಪ್ರೇರೇಪಿಸುತ್ತಿದ್ದೆ! ********

ಕಾವ್ಯಯಾನ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಕನ್ನಡದ ಪ್ರಸಿದ್ಧ ಗಜಲ್ ಕೃತಿಕಾರ ಶಾಂತರಸ ಹೆಂಬೆರಳುರರೂ..! ಕೆ.ಶಿವು ಲಕ್ಕಣ್ಣವರ ಕನ್ನಡದ ಪ್ರಸಿದ್ಧ ಗಜಲ್ ಕೃತಿಕಾರ ಶಾಂತರಸ ಹೆಂಬೆರಳುರರೂ..! ಹಾಗೂ ಅಪ್ಪನ ಕುರಿತ ಇವರ ಮಗಳು ಭಾರತಿ ಮೋಹನ ಕೋಟಿಯವರ ಆಲಾಪನೆಯೂ..!! ಕನ್ನಡದ ಪ್ರಸಿದ್ಧ ಗಜಲ್ ಕವಿ. ಇವರು ಕನ್ನಡದ ಹೆಸರಾಂತ ಸಾಹಿತಿ. ಇವರು ೧೯೯೨ರಲ್ಲಿ ತಮಗೆ ನೀಡಲಾಗಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಭ್ರಷ್ಟ ಸರಕಾರ, ಜನೋಪಯೋಗಿಯಗಿಲ್ಲದ ಸರಕಾರದಿಂದ ಪ್ರಶಸ್ತಿ ಪಡೆಯುವುದಿಲ್ಲವೆಂದು ಹೇಳಿ ತಿರಸ್ಕರಿಸಿದ್ದರು. ಇವರು ೨೦೦೬ರಲ್ಲಿ ಬೀದರದಲ್ಲಿ ಜರುಗಿದ ೭೩ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಅವರು ಶಾಂತರಸ ಹೆಂಬೆರಾಳರು…. ಸೆಪ್ಟೆಂಬರ್ ೭, ೧೯೨೪ ರಲ್ಲಿ ರಾಯಚೂರು ಜಿಲ್ಲೆಯ ಹೆಂಬೇರಾಳು ಹಳ್ಳಿಯಲ್ಲಿ ಜನಿಸಿದರು ಶಾಂತರಸರು… ಇವರ ತಂದೆ ಚನ್ನಬಸಯ್ಯ ಹಿರೇಮಠ ಕನ್ನಡ ಮತ್ತು ಸಂಸ್ಕೃತ ಪಂಡಿತರಾಗಿದ್ದರು… ಶಾಂತರಸ ಹಮ್‍ದರ್ದ್ ಸೊಸೈಟ್ ಆಫ್ ರಾಯಚೂರು ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ೧೯೮೧ರಲ್ಲಿ ಅದೇ ಸಂಸ್ಥೆಯ ಜೂನಿಯರ್ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾದರು. ೧೯೪೨ರ ‘ಬ್ರಿಟಿಷರೆ, ಭಾರತ ಬಿಟ್ಟು ತೊಲಗಿ’ ಅಭಿಯಾನ ನಡೆಯುತ್ತಿರುವಾಗ ಇವರು ಕವನ, ಕಥೆ ಬರೆಯಲು ಪ್ರಾರಂಭಿಸಿದ್ದು… ಇವರು ರಾಯಚೂರಿನಲ್ಲಿ “‘ಪ್ರಕಾಶನವನ್ನು ಪ್ರಾರಂಭಿಸಿದ್ದರು. ಹಲವು ಗಝಲ್, ರುಬಾಯಿ, ಫರ್ದ್ ಗಳನ್ನು ಉರ್ದುವಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.ಶಾಂತರಸರು.. ಶಾಂತರಸ ೪೬ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರು ೧೯೯೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಪಠ್ಯ ಪುಸ್ತಕ ಕಮಿಟಿಯಲ್ಲೂ ಸೇವೆ ಸಲ್ಲಿಸಿದವರು… ಇವರ ಕೃತಿಗಳು ಹೀಗಿವೆ– ೧) ಕವನ ಸಂಕಲನಗಳು– ಮಾನಸಗಳ್ಳಿ ಬಯಲು ಗಜಲ್ ಮತ್ತು ದ್ವಿಪದಿ ಸಮಗ್ರ ಕಾವ್ಯ ೨) ಕಥಾ ಸಂಕಲನಗಳು– ಬಡೇಸಾಬು ಪುರಾಣ ನಾಯಿ ಮತ್ತು ಪಿಂಚಣಿ ಸ್ವಾತಂತ್ರ್ಯ ವೀರ ಮತ್ತು ಇತರ ಕಥೆಗಳು ಉರಿದ ಬದುಕು (ಆಯ್ದ ಕಥೆಗಳು) ಸಮಗ್ರ ಕಥೆಗಳು ೩) ಕಾದಂಬರಿ– ಸಣ್ಣ ಗೌಡಸಾನಿ ೪) ಇವರು ರಚಿಸಿದ ನಾಟಕಗಳು– ಸತ್ಯಸ್ನೇಹಿ ನಂಜು ನೊರೆವಾಲು ಮರೆಯಾದ ಮಾರಮ್ಮ ಶರಣ ಬಸವೇಶ್ವರ (ರೇಡಿಯೊ ನಾಟಕ) ೫) ಜೀವನ ಚರಿತ್ರೆ– ಸಿದ್ಧರಾಮ (ಅಮರಾನಂದರೊಡನೆ ಸಹಲೇಖನ) ಆಯ್ದಕ್ಕಿ ಮಾರಯ್ಯ ದಂಪತಿಗಳು ನಾರದಗಡ್ಡೆ ಚೆನ್ನಬಸವ ಸ್ವಾಮಿಗಳು ಬಸರೀಗಿಡದ ವೀರಪ್ಪ ಕಲಬುರ್ಗಿಯ ದೊಡ್ಡಪ್ಪ ಅಪ್ಪ ೬) ಪ್ರಬಂಧಗಳು– ಬಹುರೂಪ ಉಲಿವ ಮರ ೭) ಇವರ ಸಂಶೋಧನೆಗಳು– ಬಸವಪೂರ್ವ ಯುಗದ ಶರಣರು ಮೊದಲ ವಚನಕಾರ ಮಾದಾರ ಚನ್ನಯ್ಯ ಎಡದೊರೆ ನಾಡಿನ ಅನುಭಾವಿ ಕವಿಗಳು ಬಳ್ಳಾರಿ ಜಿಲ್ಲೆಯ ಶಿವಶರಣರು ೮) ಇವರು ಸಂಪಾದಿಸಿದ ಕೃತಿಗಳು— ಸಂಗವಿಭು ವಿರಚಿತ ಮೂರು ಶತಕ ವೀರಭದ್ರ ಕವಿ ವಿರಚಿತ ಅರವತ್ತುಮೂರು ಪುರಾಣ ಕೂಡಲೂರು ಬಸವಲಿಂಗ ಶರಣರ ಸ್ವರವಚನಗಳು ಕಲ್ಲೂರು ಲಿಂಗಣ್ಣವೊಡೆಯ ವಿರಚಿತ ಬಾರಮಾಸ ೯) ಇತರೆ ಸಂಕಲನಗಳ ಸಂಪಾದನೆ– ಮುಸುಕು ತೆರೆ (ವಿವಿಧ ಲೇಖಕರ ಕಥೆ,ಕವನ, ಪ್ರಬಂಧ ಸಂಕಲನ) ಕಲ್ಯಾಣದೀಪ (ಪ್ರಬಂಧಗಳು : ಅಮರಾನಂದರೊಡನೆ) ಬೆನ್ನ ಹಿಂದಿನ ಬೆಳಕು (೨೭ ಕವಿಗಳ ಕವನ ಸಂಕಲನ) ರಸಿಕ ಚಕ್ರಿ ಹರಿಹರದೇವ (ವಿಮರ್ಶಾತ್ಮಕ ಲೇಖನಗಳು : ಡಾ|ಬಿ.ಸಿ.ಜವಳಿಯವರೊಡನೆ) ನಮನ (ಎ.ಸಿ.ದೇವೇಗೌಡರ ಸಂಭಾವನಾ ಗ್ರಂಥ : ಡಿ.ಆರ್.ಬಳೂರಗಿಯವರೊಡನೆ) ೧೦) ಇವರ ಅನುವಾದ– ಉಮರಾವ ಜಾನ ಅದಾ (ಉರ್ದು ಕಾದಂಬರಿಯ ಅನುವಾದ) ಹೀಗಿದ್ದ ಇವರಿಗೆ ಸಂದ ಪುರಸ್ಕಾರ– ಇವರ ಸತ್ಯಸ್ನೇಹಿ ನಾಟಕಕ್ಕೆ ಕರ್ನಾಟಕ ಸರಕಾರದ ಪುರಸ್ಕಾರ ಲಭಿಸಿದೆ… ಇಂತಹ ಶಾಂತರಸರು ೧೩ ಎಪ್ರಿಲ ೨೦೦೮ರಂದು ನಿಧನರಾದರು..! ಇಂತಹ ಶಾಂತರಸರ ಬಗ್ಗೆ ಅವರ ಮಗಳು ಭಾರತಿ ಮೋಹನ ಕೋಟಿಯವರ ಆಲಾಪನೆ ಹೀಗಿದೆ — ನನ್ನ ಅಪ್ಪ ಶಾಂತರಸ..! ‌ ಮಕ್ಕಳನ್ನು ಕೂಡಿಸಿಕೊಂಡು ದಿನಾ ರಾತ್ರಿ ಅರೇಬಿಯನ್‌ ನೈಟ್‌, ಶರಣರ ವಚನ, ಜೀವನ ಚರಿತ್ರಾ ಕತೆ ಹೇಳುತ್ತಾ, ಅವರು ಕೇಳುವ ಹಲವು ಪ್ರಶ್ನೆಗಳಿಗೆ ತಾಳ್ಮೆಯಿಂದ, ಪ್ರೀತಿಯಿಂದ ಉತ್ತರಿಸುತ್ತಿದ್ದ ಕವಿ ಶಾಂತರಸ ಮಕ್ಕಳೊಂದಿಗೆ ಮಕ್ಕಳಾಗಿ ಗೋಲಿ, ಬುಗರಿ, ಗಿಲ್ಲಿ ದಾಂಡು, ಕೇರಂ ಆಡತಿದ್ದರು. ತಂದೆಯೊಂದಿಗಿನ ನೆನಪುಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ ಭಾರತಿ ಮೋಹನ್‌ ಕೋಟಿ… ನನ್ನ ಅಪ್ಪ ಓಹ್‌! ಆತನ ಬಗೆಗೆ ಹೇಳೂದಂದ್ರೆ ನಾನು ಚಿಕ್ಕವಳಿದ್ದಾಗ ಆಡಲು… ಬುದ್ಧಿ ತಿಳಿದಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರಿಸಲು… ಮತ್ತ ಹದಿಹರಯದ ಹಸಿಬಿಸಿ ವಿಚಾರಗಳ ವಯೋಮಾನದಲ್ಲಿ ಮನಸ್ಸಿನಗೆ ನೂರೆಂಟು ಗೊಂದಲಗಳಿಗೆ ಉತ್ತರ ಹೇಳಲು ಪಕ್ಕದಲ್ಲಿ ಅಪ್ಪನಿದ್ದ… ಅಷ್ಟೇ ಅಲ್ಲ ಬೆಳೆದು ದೊಡ್ಡವಳಾಗಿ ನೌಕರಿ, ಸಂಸಾರ ಜಂಜಾಟದಾಗ ಇದ್ದಾಗೂ ಕೌಟುಂಬಿಕ, ಆರೋಗ್ಯ, ವೈಯಕ್ತಿಕ, ಸಾಹಿತ್ಯಿಕ ಯಾವುದೇ ವಿಷಯಗಳ ಬಗ್ಗೆ ಚರ್ಚಿಸಲು, ಸಾಂತ್ವನ ಹೇಳಲು ಅಪ್ಪ ಸದಾ ಜೊತೆಯಲ್ಲಿ ಇದ್ದ. ನನಗೆ ಆತ ಅಪ್ಪ ಅಷ್ಟೇ ಅಲ್ಲ ತೀರ ಆತ್ಮೀಯ ಸ್ನೇಹಿತ. ನನ್ನ ಆತನ ನಡುವೆ ಯಾವುದೇ ಗುಟ್ಟುಗಳಿರಲಿಲ್ಲ. ಗೊಂದಲಗೊಂಡಾಗ ಒಮ್ಮೆಮ್ಮೊ ಆತನೇ ನನ್ನ ಸಲಹೆ ಕೇಳುತಲಿದ್ದ. ಆಗ ಆತನದು ಮಗುವಿನ ಮುಗ್ಧತೆ… ನನ್ನ ಅಪ್ಪ ಅಮ್ಮನ ಅತ್ಯಂತ ಆದರ್ಶ ಗುಣ ಅಂದ್ರೆ ಅವ್ರು ಯಾವತ್ತೂ ಮಕ್ಕಳ ನಡುವೆ ತಾರತಮ್ಯ ಮಾಡಲಿಲ್ಲ. ಅಪ್ಪ ಅಂತೂ ಗಂಡು ಹೆಣ್ಣು ಅಂತ ಯಾವ ಭೇದಭಾವ ಮಾಡದೆಯೇ ನಮ್ಮನ್ನ ಬೆಳೆಸಿದರು… ನಮ್ಮನ್ನೆಲ್ಲ ಕೂಡಿಸಿಕೊಂಡು ದಿನಾ ರಾತ್ರಿ ಅರೇಬಿಯನ್‌ ನೈಟ್, ಶರಣರ ವಚನ ಜೀವನ ಚರಿತ್ರಾ ಕತೆ ಹೇಳುತ್ತಿದ್ದರು. ನಾವು ಕೇಳುವ ಹಲವು ಪ್ರಶ್ನೆಗಳಿಗೆ ತಾಳ್ಮೆಯಿಂದ ಪ್ರೀತಿಯಿಂದ ಉತ್ತರಿಸ್ತಿದ್ದ. ಊಟ, ಉಡಿಗಿ ತೊಡಿಗಿ, ವಿದ್ಯಾಭ್ಯಾಸ ಯಾವುದರಲ್ಲೂ ನಮ್ಮ ನಡುವೆ ತಾರತಮ್ಯ ಮಾಡಲಿಲ್ಲ. ನಮ್ಮ ಜೊತಿ ಗೋಲಿ, ಬುಗರಿ, ಗಿಲ್ಲಿ ದಾಂಡು, ಕೇರಂ ಆಡತಿದ್ದ. ಅಪ್ಪ ಯಾವುದೇ ಊರಿಗೆ ಹೋದ್ರೂ ಹೊರೆಯಷ್ಟು ಕಥಿ ಪುಸ್ತಕ ತರ್ತಿದ್ದ… ಮತ್ತ ಅವನ್ನ ಓದಿದ ಮ್ಯಾಲೆ ಅವುಗಳ ಬಗ್ಗೆ ನಮ್ಮ ಜೊತೆ ಚರ್ಚಿಸುತ್ತಿದ್ರು. ಭಾಳ ಅಂದ್ರ ಭಾಳ ಪ್ರೀತಿ ಮಾಡತಿದ್ದ. ಯಾವತ್ತೂ ನಮ್ಮನ್ನ ಗದರಿಸಿ ಜಬರಿಸಿ ಮಾತಾಡ್ಸಿಲ್ಲ. ಹೊಡಿಯೂದಂತೂ ದೂರವೇ ಉಳೀತು… ಸಣ್ಣ ಅಣ್ಣ ಸೆಕೆಂಡ್‌ ಪಿಯುಸಿ ಒಂದ ಪೇಪರ್‌ ಫೇಲ್‌ ಆಗಿದ್ದ. ಅಪ್ಪ ಆತನ ಕೈಯಾಗ ರೊಕ್ಕ ಕೊಟ್ಟು ‘ಹೋಗು ಎಲರೆ ನಾಲ್ಕು ದಿನ ಊರು ಅಡ್ಡಾಡಿ ಬಾ ಆಮ್ಯಾಲೆ ಮತ್ತೆ ಪರೀಕ್ಷೆ ಬರೆದು ಪಾಸು ಮಾಡ್ಕೊ’ ಅಂತ ಕಳಿಸಿದ. ಓದವ ವಿಷಯಕ್ಕ ಸ್ಟ್ರಿಕ್‌್ಟ ಇದ್ದ, ಆದ್ರ ಒತ್ತಡ ಹೇರತಿರಲಿಲ್ಲ… ಅಪ್ಪ ನಮ್ಮನ್ನ ಸಾಲೀ ಕಾಲಸೂದ್ರಾಗ ಯಾವದು ತಾರತಮ್ಯ ಮಾಡಲಿಲ್ಲ. ಏನ ಓದತೀವಿ ಅದನ್ನೇ ಓದಿಸಿದರು. ಅಪ್ಪ ಅಮ್ಮನ ಗುರಿ ನಮ್ಮನ್ನು ಓದಿಸಿ, ನೌಕರಿಗೆ ಹಚ್ಚಬೇಕು ಅಂತಿತ್ತು. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಆತ್ಮಗೌರವದಿಂದ ಬದುಕಬೇಕು ಅನ್ನೂದು ಅವರ ಉದ್ದೇಶವಾಗಿತ್ತು… ಅವರ ಆ ಸ್ವಾಂತಂತ್ರ್ಯ ಜವಾಬ್ದಾರಿ ಎರಡನ್ನೂ ಒಟ್ಟೊಟ್ಟಿಗೆ ನೀಡಿದರು ಎಂದೇ ನಾವೆಲ್ಲ ಇವೊತ್ತು ಆತ್ಮಾಭಿಮಾನದಿಂದ ಬದುಕುವಂತಾಗಿದೆ. ನಮ್ಮ ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಅವರ ಸರಳತನವೇ ಹೆಚ್ಚು ಸಹಾಯಕವಾಯಿತು… ಅವರ ಜನಪ್ರಿಯತೆಯ ನೆರಳಿನಲ್ಲಿ ನಾವ್ಯಾರೂ ಬೆಳೆಯದಂಥ ಎಚ್ಚರ ವಹಿಸಿದ್ದರು. ಸಾಹಿತ್ಯ, ಸಂಗೀತ ಕಲೆಗಳ ಬಗ್ಗೆ ಪ್ರೀತಿ ಬೆಳೆಸಿದ ಅಪ್ಪನ್ನ ಎಷ್ಟು ಸ್ಮರಿಸಿದರೂ ಸಾಲದು. ನಮ್ಮನ್ನ ಓದಿಸಬೇಕೆಂಬ ಹಟಕ್ಕೆ ಬಿದ್ದಿದ್ದರಿಂದಲೂ ಅವರು ಯಾವತ್ತೂ ಐಷಾರಾಮಿ ಜೀವನ ಆಡಲಿಲ್ಲ. ಒಂದು ಸ್ವಂತ ಮನೀನೂ ಕಟ್ಟಿಕೊಳ್ಳಲಿಲ್ಲ. ಆದ್ರೆ ನಾವು ನಾಲ್ಕು ಜನ ಮಕ್ಕಳು ಮನೆ ಕಟ್ಟಿಕೊಳ್ಳುವಂತೆ ಮಾಡಿದರು… ಶಾಲಾ ಕಾಲೇಜುಗಳಲ್ಲಿ ಸರಳತನದ ಪಾಠ ತಾವು ಬದುಕುವ ಮೂಲಕವೇ ತಿಳಿಸಿಕೊಟ್ಟರು. ಸ್ಪರ್ಧೆ ಉಡುಗೆ ತೊಡುಗೆಗಳಲ್ಲಿ ಅಲ್ಲ, ಓದು ಬರೆಯುವುದರಲ್ಲಿರಬೇಕು. ಒಮ್ಮೆ ಶಾಲೆಯಲ್ಲಿ ಮುಂದಿದ್ದರೆ ಜಾಣ್ಮೆಯ ಮುಂದೆ ಎಲ್ಲವೂ ನಗಣ್ಯವಾಗುತ್ತದೆ ಎನ್ನುವುದು ಅವರ ಅನಿಸಿಕೆಯಾಗಿತ್ತು… ನಾನು ಐದು–ಆರನೇಯ ತರಗತಿಯಲ್ಲಿದ್ದಾಗಿನಿಂದ ಅಪ್ಪನ ಪುಸ್ತಕಗಳ ಪ್ರೂಫು ತಿದ್ದುವುದು ಕಲಿತೆ . ‘ಉಮ್ರಾವ್‌ ಜಾನ್‌ ಅದಾ’ ಉರ್ದು ಕಾದಂಬರಿ ಅಪ್ಪ ಕನ್ನಡಕ್ಕೆ ಭಾಷಾಂತರಿಸಿದ್ದರ ಹಸ್ತಪ್ರತಿಯನ್ನು ನಾನು ನನ್ನ ಸಣ್ಣ ಅಣ್ಣ ಅಪ್ಪನ ಜೊತೆ ಸೇರಿ 2 ತಿಂಗಳು ಪ್ರೂಫು ನೋಡಿದ್ದೆವು. ಅಕ್ಕ ಅದನ್ನ ಫೇರ್‌ ಬರೆದಿದ್ಲು. ಚಿಕ್ಕಂದಿನಿಂದಲೇ ಪುಸ್ತಕದ ಹಸ್ತಪ್ರತಿ, ಪ್ರೂಫು ತಿದ್ದುವುದು ಭಾಷಾಜ್ಞಾನ ಪ್ರಕಟಣೆ ಇವುಗಳ ಪರಿಚಯವಾಯಿತು. ಒಂದು ಪುಸ್ತಕ ಹೊರತರುವ ಕಷ್ಟ ಸುಖಗಳ ಅನುಭವವೂ ಆಯಿತು… ಅಪ್ಪ ತಾನು ಬರೆದ ಕಥೆ, ಕವನ ಏನೇ ಇರಲಿ ಮೊದಲು ನಮ್ಮೆದುರು ಓದುತ್ತಿದ್ದ. ನಮ್ಮ ಸಲಹೆಗಳನ್ನು ಪ್ರೀತಿಯಿಂದ ಸ್ವೀಕರಿಸುತ್ತಿದ್ದ. ಅದರಿಂದ ನಮಗೊಂದು ವ್ಯಕ್ತಿತ್ವವಿದೆ. ನಮ್ಮ ಮಾತಿಗೆ ಮನ್ನಣೆ ಇದೆ ಎಂಬ ಭಾವ ಬಿತ್ತಿದರು… ಅಪ್ಪನ ಜೊತೆ ಮಾತಾಡುವುದೇ ಒಂದು ಸೊಗಸು. ನೂರಾರು ವಿಷಯಗಳ ಚರ್ಚೆ, ಹರಟೆ, ಜೋಕ್‌್ಸ ಎಲ್ಲ ನಡೀತಿತ್ತು. ಅಪ್ಪನ ಜೀವನೋತ್ಸಾಹ ಮೆಚ್ಚುವಂಥದು… ಪ್ರವಾಸ ಹೋದರಂತೂ, ಹರಟೆ, ತಮಾಷೆ, ಚರ್ಚೆ ನಡು ನಡುವೆ ಚಹಾ ಬ್ರೇಕ್‌… ಓಹ್‌ ಅವಿಸ್ಮರಣೀಯ ಘಳಿಗೆಗಳು. ಅಪ್ಪ, ಅಮ್ಮ ನಮ್ಮ ಧಾರ್ಮಿಕ ನಿಲುವು, ಬಾಳಸಂಗಾತಿಯ ಆಯ್ಕೆ ಇವುಗಳಲ್ಲಿ ಕೂಡ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ನಮ್ಮ ಮೇಲೆ ತಮ್ಮ ನಿರ್ಧಾರಗಳನ್ನು ಎಂದೂ ಹೇರಲಿಲ್ಲ. ಬಹಳ ‘ಡೆಮೊಕ್ರಟಿಕ್‌’ ನಿಲುವು ಅವರದು… ಕಿರಿಯ ಮಗಳು ಅಂತ ಅಪ್ಪನಿಗೆ ನನ್ನ ಮೇಲೆ ಹೆಚ್ಚೇ ಪ್ರೀತಿ ಎನ್ನಬಹುದು. ಅಪ್ಪ ನನ್ನ ಮನೆಯಲ್ಲಿಯೇ ಹೆಚ್ಚು ದಿನ ಕಳೆದಿರುವುದು ನನ್ನ ಹೆಮ್ಮೆಯೂ ಹೌದು. ಅಮ್ಮ ಇರುವವರೆಗೆ ಅಮ್ಮನೇ ಅಪ್ಪನ ಬರವಣಿಗೆ ಫೇರ್‌ ಮಾಡುವುದು ಪ್ರೂಫ್‌ ನೋಡುವುದು ಮಾಡತಿದ್ಲು… ಅಮ್ಮ ಹೋದ ಮೇಲೆ ನಾನೇ ಅಪ್ಪನ ಪರ್ಸನಲ್‌ ಸೆಕ್ರೆಟರಿ ಆದೆ. ‘ಸಿದ್ಧರಾಮ ಜಂಬಲದಿನ್ನಿ ಅವರ ಜೀವನ ಚರಿತ್ರೆ’, ‘ಮದಿರೆ ಮತ್ತು ಯೌವನ’, ‘ಗಝಲ್‌ ದ್ವಿಪದಿಗಳ ಸಂಕಲನ’ ಇಲ್ಲಿ ಗದುಗಿನ ನಮ್ಮ ಮನೆಯಲ್ಲಿ ಒಂದು ಸ್ವರೂಪ ಕಂಡಿದ್ದು. ನಾನೇ ಅಪ್ಪ ಹೇಳಿದಂತೆಲ್ಲ ಬರೆದು ಪ್ರಕಟಣೆಗೆ ಸಿದ್ಧ ಮಾಡಿದ್ದು, ಇವೆಲ್ಲ ನನ್ನ ಜೀವನದ ಅಮೃತ ಘಳಿಗೆ… ಅಪ್ಪನಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ. ಆಸ್ಪತ್ರೆಗೆ ಹೋಗುವುದೆಂದರೆ ಅವರಿಗೆ ಇಷ್ಟದ ಕೆಲಸವಾಗಿತ್ತು. ಯಾವುದೋ ಸಮಾರಂಭಕ್ಕೆ ಹೋಗುವಂತೆ ಡಾಕ್ಟರ್‌ ಭೇಟಿಗೆ ಶಿಸ್ತಾಗುತ್ತಿದ್ದರು. ಎಲ್ಲಿಯೇ ಹೋದರೂ ಬಣ್ಣ ಬಣ್ಣದ ಜುಬ್ಬಾ ಹಾಕ್ಕೊಂಡು ಛಂದಗೆ ತಯಾರಾಗುತ್ತಿದ್ದರು… ಅಪ್ಪ ಸುಂದರಾಂಗ, ಗ್ರೀಕ್‌ ಶಿಲ್ಪದಂತೆ ಮೂಗು, ಗುಲಾಬಿ ವರ್ಣದ ತುಂಬುತುಟಿ, ಪ್ರೀತಿ ತುಂಬಿದ ಬಟ್ಟಲುಗಣ್ಣು, ಆ ಹೊಳೆವ ಬೆಳ್ಳಿ ಕೂದಲು… ನಾವು ಅಪ್ಪನಿಗೆ ‘ನಿನಗs ಯಾರರೇ ಲೈನ ಹೊಡಿತಾರ?’ ಅಂತ ಕೇಳ್ತಿದ್ವಿ ಅಷ್ಟು ಸಲುಗೆ… ಅಷ್ಟು ಆಪ್ತ ಸ್ನೇಹಿತನಂಥ ಭಾವ ಕೊಟ್ಟಿದ್ದರು ಅಪ್ಪ… ‘ತೆರೆದ ಹೃದಯ ಶಾಸ್ತ್ರಚಿಕಿತ್ಸೆ’ ಒಂದು ಸ್ವಲ್ಪವೂ ಹೆದರಿಕೆ ಇಲ್ಲದೇ ಅಳುಕಿಲ್ಲದೇ ಮಾಡಿಸಿಕೊಂಡರು. 1997ರಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಆದ ಮ್ಯಾಲ 11 ವರುಷ ಅಪ್ಪ ಆರೋಗ್ಯಕರ ಹೃದಯದ ಜೊತೆಗೆ ಜೀವನ ನಡೆಸಿದ… ಗ್ಯಾಸ್ಟ್ರಿಕ್‌ ಸಮಸ್ಯೆ ಕಾರಣ ಅಪ್ಪ ಸುಮಾರು 25 ವರುಷಗಳ ಕಾಲ ಖಾರ, ಹುಳಿ ಇಲ್ಲದ ಸಪ್ಪನೆಯ ಊಟ ಮಾಡತಿದ್ದ. ಅಪ್ಪನಿಗಂತಲೆ ನಾನು ಸಪ್ಪನ ಪಲ್ಯೆ, ಬಿಸಿ ರೊಟ್ಟಿ ಮಾಡಿ ಕೊಡತಿದ್ದೆ. 25 ವರ್ಷ ಆತನ ಬೆಳಗಿನ ನಾಷ್ಟಾ ಅಂದ್ರ ‘ಉಪ್ಪಿಟ್ಟು’ ಅದೂ ಖಾರ ಇಲ್ದ ಇದ್ದದ್ದು… ಆತನ ಜೊತೆಗೆ ನಾವು ಮೃಷ್ಠಾನ್ನ ಭೋಜನ ಉಂಡರೂ ಅಪ್ಪ ಆ ಕಡಿ ಹೊಳ್ಳಿ ನೋಡದೆ ತನ್ನ ಪಥ್ಯದ ಊಟವನ್ನೇ ಸೇವಿಸುತ್ತಿದ್ದ. ‘ಮನುಷ್ಯಾನ ಜನ್ಮ ಭಾಳ ಪುಣ್ಯದಿಂದ ಪಡಕೊಂಡು ಬಂದದ್ದು. ಇದನ್ನ ಜತನದಿಂದ ಕಾಪಾಡಿಕೊಂಡು ಏನಾದ್ರೂ ಸಾಧನಾ ಮಾಡಿ ಹೋಗಬೇಕಮ್ಮಾ’ ಅಂತಿದ್ದ… ಕವಿ, ಕಥೆಗಾರ, ಲೇಖಕ, ಪ್ರಕಾಶಕ, ಸಹೃದಯ ಓದುಗ, ಕೇಳುಗ– ಹೀಗೆ ಅಪ್ಪ ವೈವಿಧ್ಯಮಯ ವ್ಯಕ್ತಿತ್ವದವ.

ಸ್ವಾತ್ಮಗತ Read Post »

ಅಂಕಣ ಸಂಗಾತಿ

ನಾನು ಕಂಡ ಹಿರಿಯರು

ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. ಡಾ.ಗೋವಿಂದ ಹೆಗಡೆ ಇಂದು ಫೆಬ್ರವರಿ ೮, ಹಲವು ರೀತಿಗಳಲ್ಲಿ ಕನ್ನಡದ ತೇರನ್ನು ಕಟ್ಟಿದ ಪ್ರೊ ಎಸ್ ವಿ ಪರಮೇಶ್ವರ ಭಟ್ಟರ ಜನ್ಮದಿನ. ಆ ಪ್ರಯುಕ್ತ ಕನ್ನಡದ ಕಟ್ಟಾಳುವಿಗೆ ನಮನಗಳನ್ನು ಸಲ್ಲಿಸುತ್ತ ಅವರ ನೆನಪಿನ ಈ ಬರಹ. ನಂಜುಂಡು ನಗು ಹಂಚಿದ ಪರಮೇಶ್ವರ: ಎಸ್. ವಿ. ಪಿ. (೧೯೧೪-೨೦೦೦) ೧೯೮೫-೮೯ರವರೆಗೆ , ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದಾಗ ಅಲ್ಲಿನ ತಾತಯ್ಯನವರ ವಿದ್ಯಾರ್ಥಿನಿಲಯ ‘ಅನಾಥಾಲಯ’ದಲ್ಲಿ ವಾಸವಾಗಿದ್ದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿಯ ಸೌಲಭ್ಯ ಕೊಡುವ ವಿದ್ಯಾರ್ಥಿ ನಿಲಯ ಅದು. ೧೯೮೮ರಲ್ಲಿ ಇರಬೇಕು, ಆಲಯದ ವಿದ್ಯಾರ್ಥಿ ಸಂಘದ-ಇದಕ್ಕೆ ಸಾಹಿತ್ಯ ಸಂಘ ಎಂದು ಹೆಸರು- ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳ ಕೊನೆಯಲ್ಲಿ ವಾರ್ಷಿಕೋತ್ಸವಕ್ಕೆ ಅತಿಥಿಗಳನ್ನು ಹುಡುಕುವ ಕೆಲಸದಲ್ಲಿ ನಿರತನಾಗಿದ್ದೆ. ಎಸ್ ವಿ ಪರಮೇಶ್ವರ ಭಟ್ಟರನ್ನು ಕರೆಯಬಹುದು ಎಂದು ಯಾರೋ ಸೂಚಿಸಿದರು. ಒಂದು ಸಂಜೆ ಸ್ನೇಹಿತ ಸುದರ್ಶನ್ ಜೊತೆಗೆ ಕೃಷ್ಣಮೂರ್ತಿಪುರಂ ನ ಗಣೇಶ ಟಾಕೀಸ್ ನ ಪಕ್ಕದ ರಾಮಯ್ಯರ್ ರಸ್ತೆಯಲ್ಲಿದ್ದ ಭಟ್ಟರ ಮನೆಗೆ ಹೋದೆ. ಕುಳ್ಳನೆಯ ಆಳು, ಮುಖದ ತುಂಬ ತುಂಬಿದ ನಗು, ಬಿಳಿಯ ಪಂಚೆ ಜುಬ್ಬ.. ಬಂದ ಕೆಲಸವನ್ನು ವಿಚಾರಿಸಿದ ಭಟ್ಟರು ತಮ್ಮ ಅನಾರೋಗ್ಯದ ದೆಸೆಯಿಂದಾಗಿ ಅತಿಥಿಯಾಗಿ ಬರಲು ಒಪ್ಪಲಿಲ್ಲ. ಆದರೆ ಅವರ ಪುಸ್ತಕಗಳತ್ತ ನಾವು ಕಣ್ಣು ಹಾಯಿಸಿದ್ದೇ ತಡ, ಭಟ್ಟರಿಗೆ ಹರಯ ಹಿಂದಿರುಗಿ ಬಂತು! ಅವರು ಅನುವಾದಿಸಿದ ಕಾಳಿದಾಸ ಮಹಾಸಂಪುಟ,ಹರ್ಷ ಮಹಾಸಂಪುಟ, ಭಾಸ ಮಹಾಸಂಪುಟಗಳು ಸೇರಿದಂತೆ,ಅವರು ರಚಿಸಿದ ಹೆಚ್ಚಿನ ಪುಸ್ತಕಗಳ ಬಹಳಷ್ಟು ಪ್ರತಿಗಳು ಅಲ್ಲಿದ್ದವು.. ಪುಸ್ತಕದಂಗಡಿಯಲ್ಲಿ ನಾವು ನಿಂತ ಹಾಗಿತ್ತು. ಒಂದೊಂದು ಗ್ರಂಥವನ್ನೂ ಕೈಗೆತ್ತಿಕೊಂಡು ಆ ಬಗ್ಗೆ ಕೆಲವು ವಿವರಗಳನ್ನು ನೀಡಿದರು. ಕೊನೆಯಲ್ಲಿ ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ- “ಒಂದು ಶಾಕುಂತಲವನ್ನು ಅನುವಾದಿಸಿದ್ದಕ್ಕೆ ಬಸಪ್ಪ ಶಾಸ್ತ್ರಿಗಳು ‘ಅಭಿನವ ಕಾಳಿದಾಸ’ ಎನ್ನಿಸಿಕೊಂಡರು. ಕಾಳಿದಾಸನ ಎಲ್ಲ ಕೃತಿಗಳನ್ನು ಹಾಗೆಯೇ ಹರ್ಷ, ಭಾಸನ ಎಲ್ಲ ಕೃತಿಗಳ ಸಂಪುಟಗಳನ್ನು ನಾನು ಅನುವಾದಿಸಿ ಪ್ರಕಟಿಸಿದ್ದೇನೆ. ಹಾಗಾದರೆ ನಾನು?” ಕೇವಲ ಅನುವಾದ ಎಸ್ ವಿ ಪಿ ಅವರ ಕೊಡುಗೆಯಲ್ಲ. ಕಾವ್ಯದಲ್ಲಿ ಭಟ್ಟರ ಕೊಡುಗೆ ಅಮೂಲ್ಯ. ಒಂದು ಸಾಲಿನ ಕಾವ್ಯದ ರಚನೆಯಿಂದ ಹಿಡಿದು ಎರಡು ಸಾಲಿನ ಏಳೆ , ಮೂರು ಸಾಲುಗಳ ತ್ರಿಪದಿ, ನಾಲ್ಕರ ಸಾಂಗತ್ಯ ಹೀಗೆ ವಿವಿಧ ಛಂದಸ್ಸುಗಳಲ್ಲಿ ಪ್ರಯೋಗ ಮಾಡಿದವರು ಭಟ್ಟರು. ಭಾವಗೀತೆ ವಚನಗಳಲ್ಲಿಯೂ ಅವರ ಕೊಡುಗೆ ಮೌಲಿಕವಾದದ್ದು. ಸೀಳುನೋಟ, ಮುದ್ದಣ ಕವಿಯ ಶ್ರೀರಾಮಪಟ್ಟಾಭಿಷೇಕ, ಅಕ್ಕಮಹಾದೇವಿ, ಇಂದ್ರಚಾಪ, ಗಗನಚುಕ್ಕಿ, ಉಪ್ಪುಕಡಲು,ಕಂಬಾರ, ರಾಗಿಣಿ, ಗಾಥಾಶಪ್ತಶತಿ, ಅಮರಶತಕ, ಸುರಗಿ, ಭಾವಗೀತೆ, ಅದ್ಭುತ ರಾಮಾಯಣ ಕತೆ, ಕಣ್ಣಾಮುಚ್ಚಾಲೆ, ಗೀತಗೋವಿಂದ ಮೊದಲಾದ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಅವರು ನೀಡಿದ್ದಾರೆ. ಅವರೊಬ್ಬ ಮಾದರಿ ಅಧ್ಯಾಪಕ. ಸ್ನಾತಕೋತ್ತರ ಕೇಂದ್ರದ ಪ್ರಥಮ ನಿರ್ದೇಶಕರಾಗಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಅಸ್ತಿಭಾರ ಹಾಕಿದವರು ಅವರು. ಅವರ ಸಾಂಸಾರಿಕ ಜೀವನ (ಪತ್ನಿಯ ಮಾನಸಿಕ ತೊಂದರೆಯಿಂದಾಗಿ) ಸಂಕಷ್ಟಮಯವಾಗಿತ್ತು ಎಂದು ಕೇಳಿದ್ದೇನೆ. ಎಲ್ಲ ನೋವು ನುಂಗಿ ಕಾವ್ಯದ ಅಮೃತವನ್ನು ಹಂಚಿದ ನಂಜುಂಡ ಅವರು. ‘ಶಾರದೆಯ ನೆಲದಲ್ಲಿ ನನ್ನದೂ ಸಣ್ಣ ಹೊಲವಿದೆ. ನನ್ನ ಕೈಲಾದಷ್ಟು ಮಟ್ಟಿಗೆ ಕೃಷಿ ಮಾಡಿದ್ದೇನೆ’ ಎಂದ, ನಿಜ ಅರ್ಥದ ಈ ನುಡಿ ಸೇವಕನನ್ನು ಕಂಡ ಭಾಗ್ಯ ನನ್ನದು. ‘ಸದಾಶಿವ ಗುರು’ವಿಗೆ ನಮನಗಳು. (ಸದಾಶಿವ ಗುರು-ಎಸ್.ವಿ.ಪಿ. ಅವರು ತಮ್ಮ ವಚನಗಳಲ್ಲಿ ಬಳಸಿದ ಅಂಕಿತ) *********************************

ನಾನು ಕಂಡ ಹಿರಿಯರು Read Post »

ಇತರೆ

ಲಹರಿ

ಗುಬ್ಬಿಯ ಅಳಲು ತಾರಾ ಸತ್ಯನಾರಾಯಣ “ಗುಬ್ಬಿಯ ಅಳಲು”                ನನ್ನ ಸಂಸಾರದ ಹೊಟ್ಟೆ ತುಂಬಿಸಲು ನಾನು ದೂರ ಬಹುದೂರ ಬಂದರೂ ……ಎಲ್ಲಿಯೂ ನನಗೆ ಹಣ್ಣುಗಳಿರುವ ಮರಗಳೇ ಕಾಣುತ್ತಿಲ್ಲ.ಎಲ್ಲಿ ನೋಡಿದರೂ ಬರೀ ಕಟ್ಟಡ ಕೆಲವಂತೂ ಗಗನಚುಂಬಿ ಕಟ್ಟಡಗಳು ಕೆಳಗಡೆ ನೋಡಿದರೆ ಟಾರಿನ ರಸ್ತೆಗಳು ಹೋಗಲಿ ಮನೆಗಳಿರುವ ಕಡೆಯೇ ಹೋಗೋಣವೆಂದರೆ ಅಲ್ಲೂ ಕೂಡ ಮನೆಯ ಸುತ್ತ ಮುತ್ತ ಸಿಮೆಂಟಿನಿಂದ ಕೂಡಿದ ನೆಲ. ಮನೆಯ ಮುಂಭಾಗದಲ್ಲಿ ಮನೆಯ ಹಿಂಭಾಗದಲ್ಲಿ ಗಿಡಮರಗಳಿಲ್ಲ. ಎರಡು  ಮೂರು ಅಂತಸ್ತಿನ ಮನೆಗಳು. ಮರ,ಗಿಡ,ಮಣ್ಣಿನ ನೆಲ-ಜಲ ಎಲ್ಲಾ ಮಂಗಮಾಯ               ಹಿಂದೆ ನನ್ನಮುತ್ತಾತ ಮುತ್ತಜ್ಜಿ ಅವರೊಡನೆ ನಿಧಾನಕ್ಕೆ ಹಾರುತ್ತ( ಆಗ ನಾನು ತುಂಬಾ ತುಂಬಾ ಚಿಕ್ಕ ಮರಿ )ನಾನು ಅವರ ಜೊತೆ ಬರ್ತಾಇದೆ. ಆಗ ನಮ್ಮ ಗೂಡು ಬಿಟ್ಟು ತುಂಬಾ ದೂರ ಬರ್ತಿರ್ಲಿಲ್ಲ ನಮ್ಮ ಗೂಡಿನ ಆಜು-ಬಾಜಿನಲ್ಲಿ ಅನೇಕ ತರದ ಹಣ್ಣುಗಳಿಂದ ಕೂಡಿದ ಗಿಡಮರಗಳು ಇರುತ್ತಿದ್ದವು ಗಿಡ-ಮರಗಳಲ್ಲಿ ತರಹೇವಾರಿ ಹುಳ ಹುಪ್ಪಟೆಗಳು ಸಿಕ್ಕರೆ, ಹಣ್ಣು ಕಾಯಿಗಳು ಬೇಕಾದಷ್ಟು ಸಿಗುತ್ತಿತ್ತು. ಅಲ್ಲದೆ ಅಕ್ಕ -ಪಕ್ಕದ ಮನೆಗಳ  ಮುಂದೆ ಹೋದರೆ, ಅಕ್ಕಿ ಆಯ್ದ ಭತ್ತಗಳು, ಹುಳ-ಹುಪ್ಪಟೆಗಳು ಸಿಕ್ಕರೆ,ಧವಸ-ಧಾನ್ಯವನ್ನು ಮೊರದಲ್ಲಿ ಮಾಡುತ್ತಿದ್ದರಿಂದ,ಅದರಲ್ಲಿದ್ದ ಕಸ-ಕಡ್ಡಿಗಳ ಜತೆ ಬರುತ್ತಿದ್ದ ಧಾನ್ಯವನ್ನು ಎಸೆಯುತ್ತಿದ್ದರು.   ಅದೇ ನಮಗೆ ಬೇಕಾದಷ್ಟು ಸಿಗುತ್ತಿತ್ತು. ಮನೆ ಹಿಂದೆ,ಹಿತ್ತಲಿಗೆ ಹೋದರೆ ಮುಸುರೆ ಯಲ್ಲಿರುತ್ತಿದ್ದ ಅನ್ನ, ಬೆಂದ ಬೇಳೆಕಾಳುಗಳು ನೀರು,ಯಥೇಚ್ಛವಾಗಿ ಸಿಗುತ್ತಿತ್ತು. ನಾವು ಮನೆ ಒಳಗೆ ಹೋಗಿ ಅಕ್ಕಿ ಕಾಳು ಬೇಳೆಗಳನ್ನು ತಿಂದರೂ….ನಮ್ಮನ್ನು ಯಾರು ಓಡಿಸುತ್ತಿರಲಿಲ್ಲ. ಅವರ ಮನೆಯಲ್ಲಿದ್ದ ಕನ್ನಡಿಯಲ್ಲಿ ನಮ್ಮನ್ನೆ ನೋಡಿಕೊಂಡು ಕುಕ್ಕಿ, ಚಿಲಿಪಿಲಿ ಗುಟ್ಟಿದಾಗ ಅವರಿಗೆಲ್ಲ ಅದೇನೋ ಸಂಭ್ರಮ. ಮನೆಯಲ್ಲಿ ಎಲ್ಲರೂ ನಮ್ಮನ್ನ ಇಷ್ಟಪಡುತ್ತಿದ್ದರು. ಅಲ್ಲದೆ ನಮ್ಮನ್ನು ನೋಡುತ್ತಾ ನಮ್ಮ ಮೇಲೆ ಹಾಡು ಹೇಳುತ್ತಿದ್ದರು. ಹಾ! ಯಾವ ಹಾಡು! ಗೊತ್ತಾಯ್ತು; ಬಾಬಾ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ ನಾವೆಲ್ಲ ತಿನ್ನೋಣ ಬಾ ಬಾ ಬಾ :ಅಂತ ಹೇಳ್ತಿದ್ದರು ಎಷ್ಟು ಚೆನ್ನಾಗಿತ್ತು.           ಹಕ್ಕಿಯಾ ದ ನಮಗೆ ಹಾರಲು ವಿಶೇಷ ಗುಣಗಳಿರಬೇಕು ಅವು ಯಾವುವೆಂದರೆ,ದೇಹಕ್ಕೆ ಬಳುಕುವ ಬಲ ಇರಬೇಕು. ಅಧಿಕ ಪ್ರಮಾಣದಲ್ಲಿ ಗಾಳಿ ಒದಗಬೇಕು ಅತಿವೇಗದಲ್ಲಿ ರಕ್ತ ಪರಿಚಲನೆ ನಡೆಯಬೇಕು. ಹಗುರ ಶರೀರ, ಬಲಿಷ್ಟ ಹೃದಯ, ತೀಕ್ಷ್ಣ ದೃಷ್ಟಿ ವಿಶಿಷ್ಟ ಉಸಿರಾಟ ಕ್ರಮ ಹೆಚ್ಚಿನ ಆಹಾರ ಪೂರೈಕೆ ಆಗಬೇಕು. ಈ ಎಲ್ಲದರ ಜೊತೆಗೆ ಬಲಿಷ್ಟ ರೆಕ್ಕೆಗಳಿರಬೇಕು. ಈ ಎಲ್ಲಾ ಗುಣಗಳಿಂದ ನಾವು ಮೇಲೆ ಹಾರಾಡಬಹುದು. ಮೇಲೆ ಹಾರಲು ಸಾಕಷ್ಟು ಶಕ್ತಿ ಬೇಕು ಶಕ್ತಿ ಪಡೆಯಲು ನಮ್ಮ ದೇಹದ ತೂಕದ ಅರ್ಧದಷ್ಟಾದರೂ ಶಕ್ತಿಯುತವಾದ ಆಹಾರ ತಿನ್ನಬೇಕು ನಾವು ಬೇಳೆಕಾಳುಗಳು, ಹುಳ ಹುಪ್ಪಟೆಗಳು ನೆರೆ-ತೊರೆಯಲ್ಲಿರುವ ಮೀನುಗಳು, ಅಲ್ಲದೆ ಬೆಳೆಯುತ್ತಿದ್ದ ಪೈರಿಗೆ ಹತ್ತುತ್ತಿದ್ದ ಹುಳ ಹುಪ್ಪಟೆಗಳನ್ನು ತಿನ್ನುತ್ತಿದ್ದೆವು.ಆಗ ನಮ್ಮನ್ನು ರೈತನ ಮಿತ್ರ ಎಂದೇ ಹೇಳುತ್ತಿದ್ದರು.             ಚಲನೆಯ ವಿಧದಲ್ಲಿ ಹಾರಾಟ ತುಂಬಾ ಶ್ರಮ ವಾದದ್ದು ಆದ್ದರಿಂದ ನಮ್ಮ ಹೃದಯದ ಬಡಿತ ಮನುಷ್ಯರಿಗಿಂತ ಜಾಸ್ತಿ ನಮ್ಮ (ಹಕ್ಕಿಗಳ)ಉಷ್ಣತೆ 107 ‘ಡಿಗ್ರಿ ಮೀರುತ್ತದೆ ಈ ಎಲ್ಲ ಜೈವಿಕ ಕ್ರಿಯೆಗಳು ಸುಸೂತ್ರವಾಗಿ ನಡೆಯಬೇಕಾದರೆ ನಾವು ತಿನ್ನುತ್ತಲೇ ಇರಬೇಕು ತಿನ್ನುವುದರಿಂದ ಇಂಜಿನ್ ನಂತೆ ಇರುವ ನಮ್ಮ ರೆಕ್ಕೆಗಳಿಗೆ ಶಕ್ತಿ ಬರುವುದು !ಆಗ ನಾವು ಎಲ್ಲೆಂದರಲ್ಲಿ ಹಾರಬಹುದು. ಈಗ ನಂಗೆ ಮುತ್ತಜ್ಜಿ, ಮುತ್ತಾತ,ಅಜ್ಜಿ-ತಾತನೂ ಇಲ್ಲ.ಅದು ಹೋಗಲಿ ಅಪ್ಪ ಅಮ್ಮನೂ ಇಲ್ಲ. ನನಗೆ ಹೆಂಡತಿ, ಇನ್ನೂ ಗುಟುಕುಣಿಸುವ ಮಕ್ಕಳಿದ್ದಾರೆ. ಅವರನ್ನ ಸಾಕುವ ಹೊಣೆ ನನ್ನದು.ಈಗ ನಮಗೆ ಬೇಕಾದಂತಹ ಗಿಡಮರಗಳು ಕಡಿಮೆ. ಯಾರ ಮನೆ ಮುಂದೆಯೂ ಭತ್ತವಾಗಲಿ,ಕಾಳಾಗಲೀ…. ಹುಳಹುಪ್ಪಟೆ ಗಳಾಗಲಿ ಸಿಗುತ್ತಿಲ್ಲ. ಅಲ್ಲದೆ ಹಿತ್ತಲಲ್ಲಿ ಪಾತ್ರೆ ತೊಳೆಯುವುದು ತುಂಬಾ ಕಡಿಮೆ. ಕೆಲವರ ಮನೆಯಲ್ಲಿ ಹಿತ್ತಲೇ ಇರುವುದಿಲ್ಲ ಈಗ ಎಲ್ಲರೂ ಅಂಗಡಿಯಿಂದ ಕ್ಲೀನಾಗಿರೋ ಆಹಾರ ಪದಾರ್ಥವನ್ನೇ ತರುತ್ತಾರೆ.ಇನ್ನು ಹೇಳಬೇಕೆಂದರೆ ಕೆಲವರು ready-to-eat ಪ್ಯಾಕೆಟ್ ತಂದು ಅದನ್ನು ಬಿಸಿ ಮಾಡಿ ತಿನ್ನುತ್ತಾರೆ. ಆದರೂ ಕೆಲವರು ಮನೆಗಳಲ್ಲಿ ಏನಾದರೂ ಸಿಕ್ಕೇ ಸಿಗುತ್ತದೆ ಎಂದು ಅಲ್ಲಿಗೆ ಹೋಗೋಣವೆಂದರೆ ಈಗ ಮೊಬೈಲ್ ಎಂಬ ಸಲಕರಣೆ ಬಂದು, ಬಹುತೇಕ ಎಲ್ಲರ ಮನೆಯಲ್ಲೂ ಇರುವುದರಿಂದ ಅದರಿಂದ ಬರುವ ಕ್ಷ- ಕಿರಣಗಳು ನಮ್ಮ ಉಸಿರಾಟಕ್ಕೆ(ಭಯವಾಗಿ) ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ನಾವು ಮನೆಗಳ, ಅಂಗಡಿಗಳ ಮುಂದೆ ಹೆದರಿ  ಬರುವುದೇ ಇಲ್ಲ.              ನಗರದ ಸಹವಾಸ ಬೇಡ ಹಳ್ಳಿಗೆ ಹೋಗೋಣವೆಂದರೆ ಅಲ್ಲಿಯೂ ಸುಖವಿಲ್ಲ.ರೈತ ಬೆಳೆಯುವ ಆಹಾರ ಧಾನ್ಯಗಳಿಗೆ, ಹುಳುಗಳು ಹತ್ತಬಾರದೆಂದು  ಕ್ರಿಮಿನಾಶಕ ಸಿಂಪಡಿಸುತ್ತಾರೆ. ಅವುಗಳನ್ನು ತಿಂದು,ನನ್ನ ಬಳಗದ ಅನೇಕರಿಗೆ ಆರೋಗ್ಯವೇ ಹಾಳಾಗಿದೆ. ಗಿಡ,ಮರ ಬಳ್ಳಿಗಳಲ್ಲಿ ಬಿಡುವ ಹಣ್ಣನ್ನಾ ದರೂ ತಿನ್ನೋಣ ವೆಂದರೆ,ಹಣ್ಣುಗಳು ಚೆನ್ನಾಗಿ ಬರಲೆಂದು ಬಣ್ಣವಾಗಿಕಾಣಲೆಂದು ಇಂಜಕ್ಷನ್ ಹಾಕುತ್ತಾರಂತೆ.ಅವುಗಳನ್ನು ತಿನ್ನ ಬಾರದೆಂದು ನಮಗೆ ತಿಳಿಯುವುದಿಲ್ಲ.ಮನುಷ್ಯರು ಗಳಾದರೆ ಅವುಗಳನ್ನು ಚೆನ್ನಾಗಿ ತೊಳೆದು ತಿನ್ನುತ್ತಾರೆ ನಮಗೆ ಆ ಭಾಗ್ಯ ಇಲ್ಲವಲ್ಲ !ಮೀನು ಹಿಡಿದು ತಿನ್ನೋಣವೆಂದರೆ, ನೀರು ಕಲುಷಿತಗೊಂಡಿದೆ. ಕಲುಷಿತಗೊಂಡ ನೀರಿಗೆ ಸೊಳ್ಳೆಗಳು ಬರುತ್ತದೆಂದು ನೀರಿಗೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಹಾಗಾಗಿ ನಮಗೆ ಹಳ್ಳಿಯಲ್ಲೂ ಸುಖವಿಲ್ಲ. ನಗರದಲ್ಲಿ ಕಾರ್ಖಾನೆ ಅಲ್ಲದೆ ಸಣ್ಣ ಕೈಗಾರಿಕೋದ್ಯಮದ ವರು ಕೂಡ ಅದರಲ್ಲಿ ಬರುವ ಕಲುಷಿತ ನೀರನ್ನು ನದಿಗೆ ಬಿಟ್ಟು ನೀರನ್ನು ಹಾಳು ಮಾಡುವುದರಿಂದ ಅದರಲ್ಲಿರುವ ಮೀನುಗಳು ಸಾವನ್ನಪ್ಪಿವೆ.ಹಾಗಾಗಿ ನಾವು ಸಣ್ಣ ಪುಟ್ಟ ಮೀನುಗಳನ್ನು ಅರಸಿ ಹೋಗುವುದು ಕಷ್ಟದ ಕೆಲಸವಾಗಿದೆ. ಈ ಎಲ್ಲಾ ಕಾರಣದಿಂದ ನಮ್ಮ ಸಂತತಿ ಅಳಿವಿನ ಅಂಚಿನಲ್ಲಿದೆ.ಏನೋ ನನ್ನ ಅದೃಷ್ಟಕ್ಕೆ ನನಗೆ ಗೂಡು ಕಟ್ಟಿಕೊಳ್ಳಲು ಒಂದು ದೊಡ್ಡ ಮರ ಸಿಕ್ಕಿದೆ. ಆ ಮರದ ಮೇಲೆ ಗೂಡು ಕಟ್ಟಿದ್ದೇನೆ. ನನ್ನ ಹೆಂಡತಿ ಮಕ್ಕಳು ಅಲ್ಲೇ ಇದ್ದಾರೆ ಈಗ ಮೆಟ್ರೋ ಬಂದು ಅರ್ಧದಷ್ಟು ಮರಗಳನ್ನು ಕಳೆದು ಹಾಕಿದ್ದಾರೆ ಆಗಾಗ ಉಕ್ಕಿನ ಸೇತುವೆ ಪ್ರಸ್ತಾಪವಿದೆ ಮತ್ತೆ ಪರಿಸರ !!?ಪರಿಸರ ನಾಶವಾಗುತ್ತಿದೆ.ನಾವು ಎಲ್ಲಿ ಹೋಗುವುದು? ಏನು ಮಾಡುವುದು ?ಅಯ್ಯೋನಾನು ದೂರ ಬಂದುಬಿಟ್ಟೆ. ಹೊಟ್ಟೆಗೆ ಏನು ಸಿಕ್ಕಿಲ್ಲ ನನಗೆ ತುಂಬಾ ಸುಸ್ತಾಗಿದೆ. ಈಗ ನಾನು ಹೇಗೆ ಹೋಗಲಿ?ಗೂಡು ಬಿಟ್ಟು ತುಂಬಾ ದೂರ ಬಂದು ಬಿಟ್ಟಿದ್ದೇನೆ. ನಾನು ನನ್ನ ಗೂಡಿಗೆ ಹೇಗೆ ಹೋಗಲಿ? ಕಾಗೆಯಿಂದ ಹೇಗೆ ತಪ್ಪಿಸಿಕೊಳ್ಳಲಿ? ನಾನು ಹೇಗಾದರು ತಪ್ಪಿಸಿಕೊಂಡು ನಿಧಾನವಾಗಿ ಹೋಗಲೇಬೇಕು ಹೋಗುತ್ತೇನೆ. ಆದರೆ ನಾನು ಹೋಗುವವರೆಗೂ ನಾವಿದ್ದ ಮರ ಕಡಿಯದೇ ಇರಲಿ. ಬೀಳದೆ ಇರಲಿ.ನಮ್ಮ ಸಂತತಿ ಅಳಿಯಬಾರದು! ಉಳಿಯಬೇಕು. ಓ !ದೇವರೇ; ಓ ದೇವರೇ ನಮ್ಮನ್ನು ರಕ್ಷಿಸು!!. *********

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಏಕೆ ಕಾಡುವೆ ಶಾಂತಾ ಜೆ ಅಳದಂಗಡಿ ಏಕೆ ಕಾಡುವೆ ಮಾರುದ್ದ ಒಲವಿನೋಲೆ ಬರೆದು ಹೃದಯದೊಳಗೆ ನನ್ನ ಸೆಳೆದು ತಡವಿಲ್ಲದೆ ತಾಳಿಯ ಬಿಗಿದು ದೂರವಾದೆ ಬಾಳಿಗಂತ್ಯ ಬರೆದು ಮುಗ್ಗರಿಸಿ ಸಾಗಿದೆ ನನ್ನ ಬದುಕಿಂದು ಗಾಲಿಕಳಚಿದ ಗಾಡಿ ಈ ಬಾಳು ಕಣ್ಣೆವೆಯಲೆ ಕುಳಿತು ಕಾಡುವೆ ನನ್ನ ಅಳಿಸಲಾಗದ ಪ್ರೇಮಬರಹ ಬರೆದು ಹೂ ದುಂಬಿಗಳ ಒಲವಿನಾಟದಿ ಕಾಣುವೆ ನನ್ನ ನಿನ್ನ ಅನುಬಂಧ ಏಕೆ ಸರಿದೆ ನೇಪಥ್ಯಕೆ ಅವಸರದೆ ಮನೋಮಂದಿರಕೆ ಒಡೆಯನಾಗಿದ್ದೆ ದಿಗಂತದಾಚೆಗಿರುವೆ ನನ್ನ ನಿರೀಕ್ಷೆಯಲ್ಲಿ ಬಂದೇ ಬರುವೆ ಅತಿಶೀಘ್ರದಲ್ಲಿ ರಕ್ತಧಮನಿಗಳೆ ಬಿರಿವಂಥ ಓಲೆಬರೆದೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಕವಾಯಿತು ರೇಖಾ ವಿ.ಕಂಪ್ಲಿ ಮೂಕವಾಯಿತು ಮೂಕವಾಯಿತು ಕೋಗಿಲೆ ವಸಂತನಾಗಮನವಿರದೆ ತನ್ನ ಗಾನವ ಮರೆತು ನಿನ್ನದೇ ಚಿಂತೆ ಯೊಳಗೆ…….. ಮೂಕವಾಯಿತು ವೀಣೆ ಮೀಟದ ಬೆರಳುಗಳಿರದೆ ತನ್ನ ರಾಗವ ಮರೆತು ನಿನ್ನ ಬೆರೆಯಲರಿಯದೆ…….. ಮೂಕವಾಯಿತು ಓಲೆಯೊಂದು ರವಾನಿಸುವ ಹಂಸವಿರದೆ ತನ್ನ ಪದವ ಮರೆತು ನಿನ್ನ ಅರಿಯಲಾರದೆ……. ಮೂಕವಾಯಿತು ಕನಸೊಂದು ನನಸಾಗದ ಮನಸ್ಸಿರದೆ ತನ್ನ ಊಹೆ ಮರೆತು ನಿನ್ನ ಮರೆಯಲಾರದೆ…. ಮೂಕವಾಯಿತು ಕವಿತೆ ಬರೆಯುವ ಕವಿಯೊರ್ವನಿರದೆ ತನ್ನ ಯಾನವ ಮರೆತು ನಿನ್ನ ಮನವರಿಯದೆ….. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ಚಳಿಗೆ ದಯೆಯಿಲ್ಲ. ದಾಕ್ಷಾಯಿಣಿ ವಿ ಹುಡೇದ ಈ ಚಳಿಗೆ ದಯೆಯಿಲ್ಲ… ಈ ಚಳಿಗೆ ದಯೆಯಿಲ್ಲ ;ಬೀಸಿ ತಂಗಾಳಿಮಂಜನು ಉದುರಿಸಿಪಕ್ಕೆಲುಬುಗಳಲಿ ನಡುಕ ಹುಟ್ಟಿಸಿಹೊಕ್ಕಳ ನಡು ಮಧ್ಯದಿಂದ ನಿನ್ನ ನೆನಪಿಗೆ ಆಹ್ವಾನ ನೀಡಿದೆ. ಈ ಚಳಿಗೆ ದಯೆಯಿಲ್ಲ ;ನಿನ್ನ ಬಿಸಿಯಪ್ಪುಗೆಯಬಿಸುಪಿಗೆ ಸವಾಲೊಡ್ಡಿಸೆಣಸಾಡಿ ಸೋತದ್ದಕ್ಕೀಗಸೇಡು ತೀರಿಸಿಕೊಳ್ಳುತ್ತಿದೆ,ಒಂಟಿ ಹೆಣ್ಣ ಕಣ್ಣ ಕಾಡಿದೆಅಪ್ಪಿ ನನ್ನನೇ ಬೇಡಿದೆ. ಈ ಚಳಿಗೆ ದಯೆಯಿಲ್ಲ ;ನೀನಿಲ್ಲದ ಈ ಘಳಿಗೆಗಳಲ್ಲಿಇದನ್ನೆಲ್ಲ ಎದುರಿಸುವವಿಫಲ ಯತ್ನ ನಡೆದೇ ಇದೆ ;ವ್ಹಿಸ್ಕಿ, ರಮ್ಮು, ಟಕೀಲಾಗಳ ಜೊತೆ ನಿನ್ನ ಬೆರೆಸಿ ಕುಡಿದು ಸೋತಿದ್ದೇನೆ. ಈ ಚಳಿಗೆ ದಯೆಯಿಲ್ಲ ;ಮೈ ಮೇಲೆ ದಾಳಿ ಮಾಡಿಸೊಕ್ಕಿದೆದೆಗಳ ಮೇಲೆ ಪತಾಕೆ ಹಾರಿಸಿದೆ ;ನಿನ್ನ ನೆನಪ ಮೆರವಣಿಗೆಯ ದೊಂದಿ ಹಿಡಿದಿದೆ. ಈ ಚಳಿಗೆ ದಯೆಯಿಲ್ಲ ;ವಿರಹದುರಿಗೆ ಸಿಲುಕಿದವಳ ಅಣಕಿಸಿದೆ,ಏನು ಕುಡಿದರೇನು? ಕುಡಿಯಬೇಕಿದ್ದವನನ್ನು ಕುಡಿದಿದ್ದರೆಹೀಗೆ ನಡುಗಬೇಕಿರಲಿಲ್ಲ ಎಂದು ಚಾಡಿ ಹೇಳಿದೆ. ********

ಕಾವ್ಯಯಾನ Read Post »

You cannot copy content of this page

Scroll to Top