ಪ್ರಸ್ತುತ
ಪಿ.ಲಂಕೇಶ್ ಹೊಸ ತಲೆಮಾರಿಗೆ ಲಂಕೇಶ್ ಹೊಸ ತಲೆಮಾರಿಗೆ ದಿನಾಂಕ: 08/03/2020, ಬೆಳಿಗ್ಗೆ: ಹತ್ತು ಗಂಟೆಗೆ ಸ್ಥಳ: ಸಿಂಗಾರಸಭಾಂಗಣ, ಡಿ.ವಿ.ಎಸ್.ಕಾಲೇಜು, ಶಿವಮೊಗ್ಗ
ಜೀವರಾಮ ಅಶ್ವಥ್ ವಾರಕ್ಕೆ ಮೂರುದಿನ ಮಡಿಯಾಗಿ , ಮಂಡಿನೋವು ತೀರಲೆಂದು ಕೋರಿಕೊಂಡಳು ಮಂಡಿಯೂರಿ ಪರಿಪರಿ ಬೇಡಿಕೊಂಡಳು ಕಡೆಗೆ ಅಮ್ಮ ತೀರಿಕೊಂಡಳು! ಬೇಡುವ ಆರ್ತನಾದ ಕೇಳಿ ನಿಂತ ಹುಡುಗ, ಬಿಕ್ಕಳಿಸೆ ಅಮ್ಮನ ತಪಸ್ಸಿಗೆ ಭಂಗವೆಂದು ಬಿಸಿಯುಸಿರು ಬಾಯೊಳಗೇ ಬಿಗಿಹಿಡಿದಿದ್ದು ದೂರದೂರಲಿ ಬಿಕ್ಕಳಿಸಿದ, ಅವಳಿಲ್ಲವೆಂದು. ಫಲಿಸಿಬಿಟ್ಟಿತೇ ಅಮ್ಮನ ಸುದೀರ್ಘ ಪ್ರಾರ್ಥನೆ? ಅಮ್ಮನೂ ಇಲ್ಲದ ಮೇಲೆ ಮಂಡಿನೋವೂ ಇಲ್ಲ. ಹಾಗೆಂದುಕೊಂಡು ಹುಡುಗ ಸುಮ್ಮನಾಗಲಿಲ್ಲ ನೋವು ತೀರಿಸುವ ಯೋಚನೆಯ ಬಿಡಲಿಲ್ಲ ಹುಡುಗನ ಇನ್ನಿಲ್ಲದೆ ಬಾಧಿಸಿ ಅಮ್ಮನ ನೋವು, ಅವಳ ಪ್ರಾರ್ಥನೆಯ ನೆನಪೆಲ್ಲವ ಬಿಗಿಹಿಡಿದ ಆಳ ಅಧ್ಯಯನ ಮಾಡಿಕೊಂಡು ತಜ್ಞನಾದ ನೋವು ನಿವಾರಿಸುವ ನಾರಾಯಣ ತಾನಾದ! ಪ್ರಾರ್ಥನೆಯ ಹರಿವಿನ ಬಗ್ಗೆ ಅವನಿಗೆ ಕುತೂಹಲ, ಕೋರಿಕೆಯ ಕಂಠವ ಆಲಿಸುವ ಕಿವಿಗಳಿರಬೇಕೆಂದು ಬೇಡುವುದಕೆ ಬೆಲೆ ಮಾನವೀಯತೆ ಒಂದೇಯೆಂದು ಬಂಡೆಗೂ ಜೀವವೆರೆಯಲು ಜೀವರಾಮನೇ ಬೇಕೆಂದು. ********
ಮೂಖವೇದನೆ ಪ್ಯಾರಿಸುತ ಮತ್ತದೇ ಮಾತು ನನ್ನನ್ನು ಮೂಗನೆಂದೇನಿಸಿದೆ ನಿನ್ನ ಕಾಲಗೆಜ್ಜೆ ಮೌನ ತಾಳಿರುವಾಗ ಪಿಸುಮಾತಿನ ಧ್ವನಿಯು ನನ್ನೆದೆಯ ಇಣುಕದಿರುವಾಗ ಗಾಳಿಯೊಳಗೆ ಪ್ರೀತಿಗಂಧವಿಲ್ಲ ಮಾತಿನ ನಡುವೆ ಪ್ರೇಮ ಸೆಳೆತವಿಲ್ಲ ಕಣ್ಣೋಟದಲ್ಲಿ ಹರಿತಮೋಹವಿಲ್ಲ ಹೂವಿನ ಸುತ್ತ ಮಕರಂಧ ಹೀರುವ ದುಂಬಿಯಂತೆ ಅಲೆಯುತ್ತಿವನನ್ನು ಮತ್ತದೇ ಮಾತು ಮೂಗನಾಗಿಸಿದೆ ಅದೆಲ್ಲವೂ ಇಲ್ಲದ ಮೇಲೆ ಮೂಗನಾಗದೆ ಮಾತಿನಿಂದ ಹೇಗೆ ಸೆಳೆಯಲಿ ನೀ ಉಟ್ಟ ಸೀರೆ ಸೆರಗಿನ ಅಂಚಿನಲ್ಲಿದ್ದ ನನ್ನೆಲ್ಲ ಕನಸುಗಳ ಚಿತ್ತಾರಗಳು ಅವಿತುಕೊಂಡಿವೆ ಮುಸ್ಸಂಜೆಯಲಿ ಮಿಂಚುಹುಳುವಿನಂತೆ ಮಿಂಚುತಿದ್ದ ನಿನ್ನ ಚಲುವೆಲ್ಲ ಸಪ್ಪೆಯಾಗಿದೆ ಈ ಪುಟ್ಟ ಹೃದಯದೊಳಗಿದ್ದ ನಿನ್ನ ಮಧುರದನಿಯ ಹರ್ಷೋಘಾರವೂ ನನ್ನಂತೆ ನಿಶ್ಚಲವಾಗಿದೆ ಇಂದು ಅದೆಲ್ಲವೂ ಸಹಜ ದೂರದಿಂದ ಅಣಿಕಿಸುವಂತೆ ಮಾರ್ಪಟ್ಟಿವೆ ಅಥವಾ… ಮಾರ್ಪಡುವಂತೆ ನೀ ಪ್ರೇರಿಪಿಸಿದೆ…! **********************
ಆದೇ ಅಪ್ಪನಂತೆ ಏಕೆ? ಜಿ.ಲೋಕೇಶ್ ನನ್ನಪ್ಪಂಥನಾಗಲು ನನಗಿಷ್ಟೂ ಇಷ್ಟವಿರಲಿಲ್ಲ ಮೌನವಾಗಿರಲು ಬಯಸುತ್ತಿದ್ದ ನನಗೆ ಹೇಳಿದ್ದೆ ಹೇಳುತ್ತಿದ್ದ ಅವನ ಮಾತುಗಳು ಸದಾ ಅವೇ ಅಕ್ಷತೆಯ ಮಂತ್ರಗಳು ಶಾಲೆಯಲ್ಲಿ ಮಗುವೊಂದು ಮರೆಯದೇ ಹೇಳುತ್ತಿದ್ದ ರಾಷ್ಟ್ರಗೀತೆಯಂತೆ ಗುಡಿಯ ಕಲ್ಲು ವಿಗ್ರಹ ಕಿವಿಯಿದ್ದರೂ ಕೇಳಿಸಿಕೊಳ್ಳದಂತೆ ನಾನು ನಿಲ್ಲುತ್ತಿದ್ದೆ ತಡೆದು ವಾಕರಿಕೆ, ಬೇಸರಿಕೆ. ಯಾವತ್ತೂ ಪ್ರತಿಕ್ರಯಿಸದೇ ನನ್ನೊಳಗೆ ಸತ್ತೇ ಹೋಗುತ್ತಿದ್ದ ಪ್ರತಿ ಹೇಳಿಕೆ ಇದ್ದಕ್ಕಿದ್ದಂತೆ ಒಂದು ದಿನ ನನ್ನಪ್ಪ ಮಾತುಗಳನ್ನು ಅನಾಥವಾಗಿಸಿ ಹೊರಟುಬಿಟ್ಟ! ಎಂಥಾ ಆಶ್ಚರ್ಯ! ನಾನೀಗ ಸಲುಹುತ್ತಿದ್ದೇನೆ ಅವನದೇ ಮಾತುಗಳನ್ನು ಯಥಾ ಪ್ರಕಾರ! ಅಪ್ಪನಂತಾಗಲು ಒಂದಿಷ್ಟು ಇಷ್ಟವಿಲ್ಲದವನಾಗಿ ಬದುಕಿದ ಮೇಲು ನನ್ನ ಮಕ್ಕಳಿಗೆ ಥೇಟ್ ಅಪ್ಪನಂತೆ ಆಗಿ! **********************************
ಯಾರು ಯಾರಿಗೆ ರೇಖಾ.ವಿ.ಕಂಪ್ಲಿ ಹೂಳುವ ಭೂಮಿಯನು ಹಾಳು ಮಾಡಿತಾ ಮನೆ ಮಠ ಮಸೀದಿ ಮಂದಿರ ಮಹಾಲ್ಗಳನು ಕಟ್ಟಿದರು….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಜಾಗತೀಕರಣದ ಜಾಗಟೆ ಮೊಳಗಿಸಿ ಜಾಗೃತಿ ಹೆಸರಲಿ ಜನಜೀನವದ ರಸವೀರಿದರು…….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಬಿರುಸು ಮಾತುಗಳ ಹುರುಪು ಹಚ್ಚುತ್ತಾ ತಮ್ಮ ತಮ್ಮ ಬೆಳೆ ಬೆಯಿಸಿಕೊಂಡರು……. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ರಂಗುರಂಗಿನ ಮಾತಿನಲಿ ಸೆಳೆಯುತ ಚಪಲದ ಉಪಟಳವ ತೀರಿಸಿಕೊಂಡರು…….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಹಣದ ಆಸೆಗೆ ಹೆಣದ ಮೇಲೆಯೂ ಹೆಗ್ಗಿಲ್ಲದೆ ಅತ್ಯಾಚಾರ ಎಸಗಿದರು………… ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. **********
ನೂರು ಜನಪದ ಹಾಡುಗಳು ಕೆ.ಶಿವು ಲಕ್ಕಣ್ಣವರ ಬೈಲೂರ ಬಸವಲಿಂಗಯ್ಯನವರ ಸಮೃದ್ಧ ಜನಪದ ಹಾಡಿನ ಕೃತಿಯೇ ‘ನೂರು ಜನಪದ ಹಾಡುಗಳು’ ಎಂಬ ಪುಸ್ತಕವು! ಪ್ರಸ್ತುತವಾಗಿ ಈ ‘ನೂರು ಜನಪದ ಹಾಡುಗಳು’ ಕೃತಿಯು ವಿಸ್ತೃತವಾಗಿ ಗರ್ಭಸೇರಲಿದ್ದ ಬೀಸೂಕಲ್ಲಿನ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು, ಚೌಡಿಕೆ ಪದಗಳು, ಕಿನ್ನರಿ ಪದಗಳು, ಹಬ್ಬದ ಹಾಡುಗಳು, ಕೋಲಾಟದ ಪದಗಳು, ಗೀಗೀ ಪದಗಳು, ಹೀಗೆಯೇ ಹತ್ತಾರು ಪ್ರಕಾರಗಳನ್ನು ಒಳಗೊಂಡಿದೆ ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು… ಒಟ್ಟಾರೆ ಜನಪದ ಹಾಡು ಅಥವಾ ಜಾನಪದವೆಂದರೆ ಹಳ್ಳಿಯ ಜನರ ಸಂಗೀತ, ರೂಪಕ, ಮಣ್ಣಿನ ವಾಸನೆಯ ಬದುಕು. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಮತ್ತು ಹಾಡುತ್ತಾರೆ. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆಯೇ ಎಲ್ಲ ಜನಪದರ ಬಾಯಿಂದ ಬಾಯಿಗೆ ಹೊರಹೊಮ್ಮುವ ಪದದ ಅಥವಾ ಹಾಡುಗಳನ್ನು ಹಾಡುತ್ತಿದ್ದರು ಮತ್ತು ಇವು ರೋಮಾಂಚಕವೂ ಹೌದು… ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜಾನಪದ ಹಾಡಿನ ರೀತಿಯಲ್ಲಿ ಹೀಗಿದೆ. “ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ… ಕೂಸು ಕಂದಯ್ಯ ಒಳ ಹೊರಗ… ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ…“ ಹೀಗೆ ಜನಪದ ಹಾಡು ತನ್ನತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗಿರುವ ಜಾನಪದ ಹಾಡಿಗೆ ವಿಶೇಷ ಸ್ಥಾನ-ಮಾನವನ್ನು ಕೊಡಲಾಗಿದೆ. ಈ ಜನಪದ ಹಾಡುಗಳಿಂದಾಗಿ ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ… ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು ಇದನ್ನೇ ಹೇಳುತ್ತದೆ ಮತ್ತು ಕಟ್ಟಿಕೊಡುತ್ತದೆ… ಒಟ್ಟಾರೆ ಜನಪದವೆಂದರೆ ಮನುಷ್ಯ ಬದುಕಿನ ಕ್ರಿಯೆಗಳು, ವಸ್ತುಗಳು, ಮನರಂಜನೆಯ ಸಾಧನಗಳು, ಮನುಷ್ಯನ ಸಂಸ್ಕಾರ, ಆರಾಧನೆ, ನಂಬಿಕೆಗಳು: ಉಡುಪುಗಳು, ಹಬ್ಬ ಹರಿದಿನಗಳು, ಇದೇ ರೀತಿಯಾಗಿ ಒಟ್ಟಾರೆ ಬದುಕಿನ ಸರ್ವ ಲಯಗಳನ್ನು ಒಳಗೊಂಡಿರುವಂತದೇ ಆಗಿದೆ… ಮನುಷ್ಯ ಜೀವಿ ತನಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಾನಪದ ಸಾಹಿತ್ಯಕ್ಕೆ ಮೊರೆಹೋಗುತ್ತಾನೆ. ಹೀಗೆಂದು ಸಾರಿಹೇಳುತ್ತದೆ ಬೈಲೂರ ಬಸವಲಿಂಗಯ್ಯ ಹಿರೇಮಠರವರ ಈ ಕೃತಿಯು ‘ನೂರು ಜನಪದ ಹಾಡುಗಳು’ ಎಂಬ ಕೃತಿಯಾಗಿದೆ… ಈಗಂತೂ ಮನುಷ್ಯ ಬಹು ಎತ್ತರಕ್ಕೆ ಬೆಳೆದಿದ್ದಾನೆ. ‘ಸಂಸ್ಕೃತಿ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಂಶೋಧನೆಯ ತೆಕ್ಕೆಯಲ್ಲೇ ತಬ್ಬಿಕೊಳ್ಳಲು ಮನುಷ್ಯ ನಿರಂತರವಾಗಿ ಹೋರಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಇಂದು ಅನೇಕಾನೇಕ ಜ್ಞಾನಶಿಸ್ತುಗಳು ಆವಿಷ್ಕಾರಗಳು ಒಡಮೂಡಿವೆ. ಇಂತಹ ಜ್ಞಾನಶಿಸ್ತುಗಳಲ್ಲಿ ಅಂತರಶಿಸ್ತೀಯ ಅಧ್ಯಯನವೂ ಒಂದು. ಈ ಶಿಸ್ತಿನ ಮೂಲಕ ವಿದ್ವಾಂಸರು ಇತರ ಜ್ಞಾನ ಶಾಖೆಗಳೊಂದಿಗೆ ಜಾನಪದ ಸಾಹಿತ್ಯದ ಅಂತರ್ ಸಂಬಂಧವನ್ನು ಗುರುತಿಸುವ ಸವಾಲುಗಳನ್ನು ಎದುರಿಸುವ ಕಾರ್ಯದಲ್ಲಿ ತೊಡಗಿರುವುದು ಈ ಸಾಹಿತ್ಯದ ಸತ್ವವಾಗಿದೆ. ಜಾನಪದ ಬಿಟ್ಟು ಬದುಕಿಲ್ಲ, ಬದುಕು ಬಿಟ್ಟು ಜಾನಪದವಿಲ್ಲ ಎಂಬುದು ಕಟು ವಾಸ್ತವ. ಈ ಸಾರವನ್ನೇ ಹೇಳುತ್ತದೆ ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಕೃತಿಯು… ಇಡೀ ವಿಶ್ವವೇ ನಮ್ಮ ದೇಶದತ್ತ ಬೆರೆಗುಗಣ್ಣಿನಿಂದ ನೋಡುವಂತೆ ನಮ್ಮ ದೇಶದಲ್ಲಿ ಜಾನಪದ ಕಲೆಗಳು ಸಮೃದ್ಧವಾಗಿದೆ. ಈಗಾಗಲೇ ಗುರುತಿಸಲ್ಪಟ್ಟ ಜಾನಪದ ಕಲೆ ನೂರಾರು ಮತ್ತು ಸಮೃದ್ಧವಾಗಿವೆ. ಇನ್ನೂ ಗುರುತಿಸಲ್ಪಡಬೇಕಾದ ಕಲೆಗಳು ಸಾವಿರಾರು. ಹೀಗಿರುವುದರಿಂದಲೇ ನಮ್ಮ ಯುವ ಜನರು ಈ ಬಗೆಗೆ ಚಿಂತಿಸಬೇಕಾಗಿದೆ. ಎಲ್ಲ ಜಾನಪದ ಕಲೆಗಳನ್ನು ದಾಖಲಿಸಬೇಕಾಗಿದೆ. ಪ್ರದರ್ಶನ ಕಲೆಗಳನ್ನು ಬದಿಗಿಟ್ಟರೂ ಹಾಡುವ ಸಾಹಿತ್ಯವೇ ಅಪಾರ ಪ್ರಮಾಣದಲ್ಲಿದೆ… ಇಂತಹ ಹಾಡುವ ಸಾಹಿತ್ಯದ ಒಂದಿಷ್ಟನ್ನಾದರೂ ಸಹೃದಯರ ಮನೆ-ಮನಸ್ಸನ್ನು ಮುಟ್ಟಿಸಬೇಕೆಂಬ ಆಸೆಯಿಂದ ಬೈಲೂರ ಬಸವಲಿಂಗಯ್ಯನವರು ತಮ್ಮ ಸಾವಿರಾರು ಜಾನಪದ ಹಾಡುಗಳಲ್ಲಿ ಆಯ್ದ ಪುಸ್ತುಕೆಯೇ ‘ನೂರು ಜನಪದ ಹಾಡುಗಳು’..! ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯನ್ನು ಜಾನಪದ ಸಂಶೋಧನ ಕೇಂದ್ರ ಭೂಷಣ ಪ್ರಕಾಶನ, ಸಪ್ತಾಪುರ, ಧಾರವಾಡ-೧ ಎಂಬ ಪ್ರಕಾಶನ ಹೊರತಂದಿದೆ… ಈ ಪ್ರಕಾಶನದ ನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠರು ಈ ಪುಸ್ತಕೆಯನ್ನು ಹೊರತಂದಿದ್ದಾರೆ… ಸರ್ಕಾರದ ಉದಾಸೀನತೆ, ವಿದ್ವಾಂಸರ ಅದೂರದೃಷ್ಟಿ, ಕಲಾವಿದರ ಅಜ್ಞಾನ ಮತ್ತು ಜನತೆಯ ಅನಾದಾರದ ಕಾರಣವಾಗಿಯೇ ಉತ್ತರ ಕರ್ನಾಟಕದ ಸಮೃದ್ಧ ಜಾನಪದ ಅವಸಾನದಂಚಿನಲ್ಲಿದೆ. ಈ ಅನಾದಾರ ದೂರವಾಗಬೇಕಿದೆ ಎಂದು ಹೇಳಿ ಈ ಬೈಲೂರ ಬಸವಲಿಂಗಯ್ಯ ಹಿರೇಮಠರವರ ‘ನೂರು ಜನಪದ ಹಾಡುಗಳು’ ಬಗೆಗಿನ ನನ್ನ ಮಾತು ಮುಗಿಸುತ್ತೇನೆ..! **********
ಗಝಲ್ ಡಾ.ಗೋವಿಂದಹೆಗಡೆ ಪ್ರಾಜ್ಞ ಎಂದುಕೊಂಡವರ ಸೋಗಲಾಡಿತನಕ್ಕೆ ನಗು ಬರುತ್ತದೆ ಬೇಲಿಯ ಮೇಲೆ ಕೂತವರ ದಿವಾಳಿತನಕ್ಕೆ ನಗು ಬರುತ್ತದೆ ಸೂರ್ಯ ಬೆಳಗುವನೆಂದರೆ ಸಾಕ್ಷಿ ಕೇಳುವರು ಇವರು ನೋಡು ತನಗೇ ತಾನು ಹುಸಿಯಾದ ಈ ಅಧಃಪತನಕ್ಕೆ ನಗು ಬರುತ್ತದೆ ರತ್ನದ ಕಾಂತಿಗೆ ಯಾರ ಶಿಫಾರಸಿನ ಹಂಗೇನಿದೆ ಹೇಳು ತಿಳಿದೂ ಬೊಗಳುವವರ ಧಾಡಸೀತನಕ್ಕೆ ನಗು ಬರುತ್ತದೆ ಕಪ್ಪುಕನ್ನಡಕ ಧರಿಸಿದರೆ ಕಣ್ಣನಷ್ಟೇ ಮರೆಸಬಹುದು ಜಗವನ್ನೇ ಯಾಮಾರಿಸುವ ಮಂಕುತನಕ್ಕೆ ನಗು ಬರುತ್ತದೆ “ನಾ ಕಂಡ ಮೊಲಕ್ಕೆ ಮೂರೇ ಕೊಂಬು” ಎಂಥ ವಾದ ‘ಜಂಗಮ’ ಅಡಿಪಾಯವಿಲ್ಲದೇ ಮಹಲೆಬ್ಬಿಸುವ ಜಾಣತನಕ್ಕೆ ನಗು ಬರುತ್ತದೆ *****
ಕೇಶವರೆಡ್ಡಿ ಹಂದ್ರಾಳ ಕೆ.ಶಿವು ಲಕ್ಕಣ್ಣವರ ಕೇಶವರೆಡ್ಡಿ ಹಂದ್ರಾಳರವರು ಅಗ್ನಿ ಶ್ರೀಧರರ ವಾರಪತ್ರಿಕೆಯಾದ ‘ಅಗ್ನಿ’ಯಲ್ಲಿ ‘ಒಕ್ಕಲ ಒನಪು’ ಅಂಕಣ ಬರೆಯುತ್ತಿದ್ದರು. ಇವರು ‘ಅಗ್ನಿ’ಗೆ ಬರೆಯಲು ಪ್ರಾರಂಭಿಸಿದ್ದು ‘ಅಗ್ನಿ’ಯ ಎರಡನೇ ಕಚೇರಿ ಶುರುವಾದ ಮೇಲೆ. ಒಟ್ಟಾರೆ ಆಗಿ ‘ಅಗ್ನಿ’ಯಲ್ಲಿಯ ಇವರ ಅಂಕಣವಾದ ‘ಒಕ್ಕಲ-ಒನಪು’ ಆ ಹೊತ್ತಿಗೆ ಭಾರಿ ಪ್ರಚಾರ ಪಡೆದುಕೊಂಡಿತ್ತು. ಅಂದರೆ ಅಷ್ಟು ಸೊಗಸಾಗಿ ‘ಮಣ್ಣಿನ ಗುಣ’ ಪಡೆದುಕೊಂಡಿತ್ತು. ಇವರೊಂದಿಗಿದ್ದ ಅನೇಕರ ಅಂಕಣಗಳೂ ಸೊಗಸಾಗಿದ್ದವು. ಅವರ ಬಗೆಗೆ ನಂತರ ಬರೆಯುತ್ತೇನೆ. ಈಗ ಕೇಶವರೆಡ್ಡಿ ಹಂದ್ರಾಳರ ಬಗೆಗೆ ಚಿಕ್ಕ ಲೇಖನದ ಮೂಲಕ ನೋಡೋಣ… ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾದ ಕೇಶವರೆಡ್ಡಿ ಹಂದ್ರಾಳ ಅವರು 22-07-1957 ರಲ್ಲಿ ಮಧುಗಿರಿ ತಾಲೂಕಿನ ಹಂದ್ರಾಳದಲ್ಲಿ ಜನಿಸಿದವರು… ಹಂದ್ರಾಳದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು 7ನೇ ತರಗತಿಯಲ್ಲಿ ರ್ಯಾಂಕ್ ಪಡೆದವರು. ನಂತರ ಬೆಂಗಳೂರಿನ ಚಿಕ್ಕಪೇಟೆಯಲ್ಲಿದ್ದ ಭಾರತೀಯ ವಿದ್ಯಾಶಾಲೆಗೆ ಸೇರಿದರು… ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಅವರ ಪರಿಚಯವಾಗಿ, ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಮುಂದೆ ಆನಂದರಾವ್ ಸರ್ಕಲ್‍ನಲ್ಲಿದ್ದ ಎಸ್.ಜೆ.ಆರ್.ಸಿ.ಯಲ್ಲಿ ಪಿ.ಯು.ಸಿ.ಗೆ ಸೇರಿಕೊಂಡರು… ಆ ಸಮಯದಲ್ಲಿ ಜೆ.ಪಿ. ಚಳವಳಿಯಲ್ಲಿ ಭಾಗವಹಿಸಿದರು. ದಲಿತ, ರೈತ ಚಳವಳಿ ಹಾಗೂ ಗೋಕಾಕ್ ಚಳವಳಿಯಲ್ಲೂ ಭಾಗವಹಿಸಿದರು… 1981ರಲ್ಲಿ ಪ್ರಥಮ ದರ್ಜೆಯಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪಾಸಾದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಅವರು ಆರು ವರ್ಷಗಳ ಕಾಲ ಉಪನ್ಯಾಸಕ ವೃತ್ತಿಯಲ್ಲಿದ್ದರು. ಆನಂತರ 1987ರಲ್ಲಿ ಕೆ.ಎ.ಎಸ್. ಪಾಸು ಮಾಡುವ ಮೂಲಕ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು… ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೇಶವರೆಡ್ಡಿ ಹಂದ್ರಾಳರವರ ಪ್ರಕಟಿತ ಕೃತಿಗಳೆಂದರೆ– ಹಂದ್ರಾಳ, ಅಂತಃಪುರ, ಬರದ ನಾಡಿನಲ್ಲಿ ಬೆಳದಿಂದಳು, ಜಡೆಗೆ ಗುಲ್ ಮೊಹರ್ ಕೈಗಳು, ಒಂದು ಹಿಡಿ ಮಣ್ಣು, ಬಾರಕ್ಕ ಬೆಳದಿಂಗಳೆ. ಈ ಕ್ಷಣದ ಬುದ್ಧ ಅವರ ಕೆಲವು ಕಥಾ ಸಂಗ್ರಹಗಳು. ಒಕ್ಕಲ ಒನಪು, ಮರೆತ ಭಾರತ- ಪ್ರಬಂಧ ಸಂಕಲನಗಳು, ಸಿನಿಮಾ, ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಬರೆದಿದ್ದಾರೆ, ನನ್ನ ಕ್ರಾಂತಿಯ ಹುಡುಗಿ ಅವರ ಕವನ ಸಂಗ್ರಹ… ಕೇಶವರೆಡ್ಡಿ ಹಂದ್ರಾಳರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಹಲವು ಗೌರವ, ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ ಮಾಸ್ತಿ ಕಥಾ ಪುರಸ್ಕಾರ, ಪುಸ್ತಕ ಸೊಗಸು ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳೂ ಲಭಿಸಿವೆ… ಕೇಶವರೆಡ್ಡಿ ಹಂದ್ರಾಳರವರ ಬಗೆಗೆ ಸಂಕ್ಷಿಪ್ತವಾಗಿ ಒಂದಷ್ಟು– ಕೇಶವರೆಡ್ಡಿ ಹಂದ್ರಾಳರವರು ಆರು ವರ್ಷ ಉಪನ್ಯಾಸಕರಾಗಿ ಕೆಲಸ ಮಾಡಿದರು. 1987ರಲ್ಲಿ ಕೆ.ಎ.ಎಸ್. ಪಾಸು ಮಾಢಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಹಾಗೂ ಉಪ ಆಯುಕ್ತರಾಗಿ ಕೆಲಸ ಮಾಡಿದರು… ಕೇಶವರೆಡ್ಡಿಯವರು ಮದ್ದೂರಿನ ಚಂದ್ರಕಲಾ ಅವರನ್ನು ಪ್ರೀತಿಸಿ ಸರಳವಾಗಿ ವಿವಾಹ ಮಾಡಿಕೊಂಡರು. ಅವರಿಗೆ ಕ್ರಾಂತಿ, ಸಿರಿವೆನ್ನೆಲು ಎಂಬ ಇಬ್ಬರು ಮಕ್ಕಳಿದ್ದಾರೆ… ಕೇಶವರೆಡ್ಡಿ ಹಂದ್ರಾಳರವರು ಸುಮಾರು 500 ಕಥೆಗಳನ್ನು ಬರೆದಿದ್ದಾರೆ… ಅವರ ಕವನ ಸಂಕಲನಗಳು ಹೀಗಿದೆ– ನನ್ನ ಕ್ರಾಂತಿಯ ಹುಡುಗಿ… ಪ್ರಬಂಧ ಸಂಕಲನಗಳು ಹೀಗಿವೆ– ಒಕ್ಕಲ ಒನಪು ರಾಜಧಾನಿಯ ರಸ್ತೆಗಳಲ್ಲಿ ಮರೆತ ಭಾರತ ನೆಲದ ಕಣ್ಣು ಅವರು ಪಡೆದ ಪ್ರಶಸ್ತಿಗಳು– ಮಾಸ್ತಿ ಕಥಾ ಪುರಸ್ಕಾರ ಪುಸ್ತಕ ಸೊಗಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2005, 2006)..! ಒಟ್ಟಾರೆಯಾಗಿ ಕೇಶವರೆಡ್ಡಿ ಹಂದ್ರಾಳರ ‘ಮಣ್ಣಿನ ಗುಣ’ದ ‘ಒಕ್ಕಲ-ಒನಪು’ ಅಂಕಣ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅದಕ್ಕೂ ಮಿಗಿಲಾಗಿ ‘ಅಗ್ನಿ’ ಬಳಗದ ಬಲು ಪ್ರೀತಿಯ ಅಂಕಣವಾಗಿತ್ತು ಎಂದು ಹೇಳುತ್ತಾ ಈ ಬರಹ ಮುಗಿಸುತ್ತೇನೆ… **********
ಅವರು ಬಂದಿದ್ದಾರೆ ಮೂಲ: ಅಲ್ಫಾನ್ಸಿನಾ ಸ್ಟಾರ್ನಿ (ಅರ್ಜೆಂಟೈನಾ) ಕನ್ನಡಕ್ಕೆ: ಕಮಲಾಕರ ಕಡವೆ ಅವರು ಬಂದಿದ್ದಾರೆ ಇಂದು ನನ್ನ ಅಮ್ಮ ಮತ್ತು ಅಕ್ಕನನ್ನ ನೋಡಲು ಬಂದಿದ್ದಾರೆ ಬಹಳ ಕಾಲ ಒಬ್ಬಂಟಿ ಇದ್ದೆ ನಾನುನನ್ನ ಕವಿತೆಯ ಜತೆ, ಗರ್ವದ ಜತೆ…ಮತ್ತೇನೂ ಇರಲಿಲ್ಲ ನನ್ನ ಹಿರಿಯಕ್ಕ, ದೊಡ್ಡವಳಾಗಿದ್ದಾಳೆ, ಕೆಂಚು ಕೂದಲವಳುಅವಳ ಕಣ್ಣ ತುಳುಕಿದೆ ಮೂಲಭೂತ ಕನಸುನಾನೆಂದೆ ಕಿರಿಯಳಿಗೆ: “ಬದುಕು ಬಲು ಸಿಹಿ.ಕೆಟ್ಟದ್ದೆಲ್ಲ ಕೊನೆಯಾಗುತ್ತದೆ. ಅಮ್ಮ ನಕ್ಕಳು, ಎಲ್ಲರ ಆಂತರ್ಯ ಅರಿತವರು ನಗುವಂತೆ;ನನ್ನ ಭುಜಗಳ ಮೇಲೆ ತನ್ನೆರಡೂ ಕೈಗಳ ಇಟ್ಟಳುನನ್ನನ್ನೇ ಕಣ್ಣುನೆಟ್ಟು ನೋಡಿದಳುನನಗೆ ಕಣ್ಣಲ್ಲಿ ನೀರು ಬಂತು. ಮನೆಯಲ್ಲೇ ಬೆಚ್ಚಗಿನ ಕೋಣೆಯಲ್ಲಿಕೂತು ಉಂಡೆವುವಸಂತದ ಮುಗಿಲು….ಅದನ್ನು ಕಾಣಲು, ಕಿಟಕಿ ತೆರೆದೆವು. ನಾವು ಸುಮ್ಮನೆ ಹಳೆಯದನೆಲ್ಲ ಮೆಲುಕುತ್ತಕೂತಿದ್ದಾಗನನ್ನ ತಂಗಿ – ಕಿರಿಯವಳು – ನಡುವೆ ಮಾತು ತೆಗೆಯುತ್ತಾಳೆ: *******
ಆಕಾಂಕ್ಷಿ ಅಶ್ವಥ್ ವ್ಯಾಪಾರಿ ಬುದ್ಧಿಯಿಲ್ಲದ ಬೀದಿವ್ಯಾಪಾರಿ ರಾಮು, ಬಂದಿರುವ ಬೀದಿಯ ಗ್ರಾಹಕರಿಗೆ ಏನು ಬೇಕೆಂದು ಕೇಳುವುದು, ಅದಕ್ಕೆ ಹಣ ಎಷ್ಟು ಎಂದು ಹೇಳಿ ಹೆಚ್ಚಿಗೆ ಹಣ ಕೊಟ್ಟವರಿಗೆ ಚಿಲ್ಲರೆ ಕೊಡುವುದರ ಹೊರತಾಗಿ ಒಂದೇ ಒಂದು ಹೆಚ್ಚಿನ ಮಾತನ್ನೂ ಆಡುವವನಲ್ಲ. ಇನ್ನು ಗಿಲೀಟಿನ ಮಾತು ಅಂದರೆ ಅವನಿಗೆ ಪರದೇಶೀ ಭಾಷೆಯೇನೋ ಅನ್ನುವಷ್ಟು ದೂರವೆನಿಸುವುದು. ನಿತ್ಯವೂ ಬಿಳಿಕೆರೆ ಸರ್ಕಲ್ಲಿನ ರಾಯರ ಮಠದ ಹಿಂಭಾಗದಲ್ಲಿ, ಬೆಳಿಗ್ಗೆ ತಳ್ಳುವ ಗಾಡಿಯಲ್ಲಿ ಇಡ್ಲಿ ಮಾರುತ್ತಾ, ಸಂಜೆ ಹೊತ್ತಿನಲ್ಲಿ ಬೇಲ್ ಪೂರಿ, ಚುರುಮುರಿ ಮಸಾಲೆ ಸೌತೆಕಾಯಿ ಮಾರುತ್ತಾ ನಿಂತಿರುತ್ತಿದ್ದ ರಾಮು, ದೂರದ ಸಕಲೇಶಪುರದಿಂದ ಬಂದಿದ್ದ ಸಂದೇಶನಿಗೆ ಆಪತ್ಬಾಂಧವನಾಗಿದ್ದ. ಸಂದೇಶ್ ಓದುವುದಕ್ಕೆಂದು ಬೆಂಗಳೂರಿಗೆ ವಲಸೆ ಬಂದವನು, ಬಿಳಿಕೆರೆ ಏರಿಯಾದ ಬಾಡಿಗೆಯ ಮನೆಯಲ್ಲಿ ವಾಸವಾಗಿದ್ದ ದಿನಗಳಿಂದಲೂ, ರೂಮಿನಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದ. ಬೆಳಿಗ್ಗೆ ಎಚ್ಚರವಾಗುವುದು ತಡವಾದಾಗ, ಪರೀಕ್ಷೆಗಳಿದ್ದ ಸಮಯದಲ್ಲಿ, ಅಡುಗೆಗೆ ಸಮಯ ಹೊಂದಿಸಲಾಗದೇ, ರಾಮುವಿನ ಗಾಡಿ ಮುಂದೆ ಹಾಜರಾಗಿ, ತಿಂಡಿ ಪ್ಯಾಕ್ ಮಾಡಿಸಿಕೊಂಡು ಬರುತ್ತಿದ್ದ. ಎಂಜಿನಿಯರಿಂಗ್ ಕಾಲೇಜಾಗಿದ್ದರಿಂದ ಲ್ಯಾಬ್ ಗಳಿದ್ದು ಸಂಜೆ ತಡವಾಗಿ ಮನೆಗೆ ಬರುವಂತಹ ದಿನಗಳಲ್ಲಿ ಬೇಲ್ ಪೂರಿಯನ್ನೋ, ಮಂಡಕ್ಕಿಯ ಚುರುಮುರಿಯನ್ನೋ ಕಟ್ಟಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದ. ಮೂರು ವರ್ಷಗಳ ತನಕ ರೂಮಿನಲ್ಲಿ ಅಡುಗೆ ಮಾಡಲಾಗದ ಬಹುತೇಕ ದಿನಗಳಲ್ಲಿ ರಾಮುವಿನ ತಳ್ಳುವ ಗಾಡಿಯ ತಟ್ಟೆಇಡ್ಲಿ, ಮಸಾಲೆ ವಡೆ, ಸಂಜೆಯ ಸ್ನ್ಯಾಕ್ ಗಳು ಸಂದೇಶನಿಗೆ ಒಂದು ರೀತಿಯ ಕಡಿಮೆ ಖರ್ಚಿನ, ಶ್ರಮರಹಿತ ಹೊಟ್ಟೆಪಾಡು ಎನ್ನುವಂತಾಗಿದ್ದವು. ರಾಮುವಿನ ತಿನಿಸುಗಳ್ಯಾವೂ ಆರೋಗ್ಯದ ಮೇಲೆ ವಕ್ರದೃಷ್ಟಿಬೀರದೇ ಇದ್ದುದರಿಂದ ಬೇರೆ ಜಾಗಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲದಾಯಿತು. ರಾಮು ಸಂಕೋಚದ ಸ್ವಭಾವದವನಾಗಿದ್ದರೂ ಅವನ ಸಣ್ಣ ವಯಸ್ಸು, ಮುಗ್ಧತೆಯನ್ನು ಕಂಡು ಜನರಿಲ್ಲದಿದ್ದ ಸಮಯದಲ್ಲಿ ಸಂದೇಶನು ತಾನೇ ಮಾತಿಗಿಳಿಯುತ್ತಿದ್ದ. “ ಏನೋ ಹುಡುಗಾ, ಇಡ್ಲಿ ವ್ಯಾಪಾರ ಮಾಡಿ ಸ್ಕೂಲ್ ಗೆ ಎಷ್ಟೊತ್ತಿಗೆ ಹೋಗ್ತೀಯೋ?” ಅಂದರೆ, ‘ಯಾಪಾರ ಮುಗಿಸಿದ್ಮೇಲೆ’ ಅಂದು ಸುಮ್ಮನಾಗಿಬಿಡುತ್ತಿದ್ದ. ಕೆಲವೊಮ್ಮೆ ಇವನ ವ್ಯಾಪಾರವೆಲ್ಲ ಮುಗಿದ ಮೇಲೆ ಗಾಡಿಗೆ ಸಾಮಾನು ತುಂಬಿಕೊಂಡು ಹೋಗಲು ಅಪರೂಪಕ್ಕೊಮ್ಮೆ ಹೆಂಗಸರೊಬ್ಬರು ಬರುತ್ತಿದ್ದುದನ್ನು ಗಮನಿಸಿದ್ದ ಸಂದೇಶ, ಹುಡುಗನ ಅಮ್ಮ ಎಂಬುದನ್ನು ತಿಳಿದು ‘ಸ್ಕೂಲ್ ಗೆ ಹೋಗುವ ವಯಸ್ಸಿನ ಹುಡುಗನ್ನ ವ್ಯಾಪಾರಕ್ಕೆ ನಿಲ್ಲಿಸಿದೀರಿ, ಸಂಜೆಯೂ ವ್ಯಾಪಾರದಲ್ಲೇ ಇರ್ತಾನೆ. ಸರಿಯಾಗಿ ಓದ್ತಾನಾ ಏನು?’ ಎಂದು ಕೇಳಿದ್ದಕ್ಕೆ ಅಮ್ಮ ಮಗ ಇಬ್ಬರೂ ಮುಖ ನೋಡುತ್ತಾ ಹೌದೆನ್ನುವಂತೆ ಕತ್ತು ಅಲ್ಲಾಡಿಸಿದ್ದರು. ಸಂದೇಶನಿಗೆ ಯಾಕೋ ಅನುಮಾನವೆನಿಸಿತು. ಒಂದು ಸಂಜೆ ಚುರುಮುರಿ ತೆಗೆದುಕೊಂಡು ಬೇರೆ ಗ್ರಾಹಕರಾರೂ ಇಲ್ಲದ್ದನ್ನು ಕಂಡ ಸಂದೇಶ, ರಾಮುವಿನ ಬಗ್ಗೆ ಸ್ವಲ್ಪ ವಿಚಾರಿಸಿದ. ಅಷ್ಟರಲ್ಲಿ ರಾಮುವೂ ಸಹ ಸಂಕೋಚ ಸರಿಸಿ ಸಂದೇಶನೊಂದಿಗೆ ಮಾತನಾಡುವಷ್ಟು ಹೊಂದಿಕೊಂಡಿದ್ದ. “ಹೇ ರಾಮು, ನೀನ್, ನನ್ನ ಸೋಮಾರಿ ಮಾಡ್ತಿದ್ದೀಯೇನೋ ಅನಿಸ್ತಿದೆ ಕಣೋ” ಇನ್ನೂ ಎರಡು ವರ್ಷ ಕಾಲೇಜು ಇದೆ, ಅಷ್ಟರಲ್ಲಿ ನಾನು ಅಡುಗೆ ಮಾಡಿಕೊಳ್ಳೋದೇ ನಿಲ್ಲಿಸಿಬಿಡ್ತೀನೇನೋ ಅನ್ಸತ್ತೆ, ಕೆಲವು ಸಾರ್ತಿ” ಅನ್ನುತ್ತಾ ಹಾಗೆಯೇ ಪಕ್ಕದಲ್ಲಿ ನಿಂತು ಮೊಣಕೈಯಿಂದ ಮೆಲ್ಲನೆ ನೂಕಿದ. “ಓ, ನೀವೇನ್ ಸಂದೇಶಣ್ಣ ಅಪರೂಪಕ್ಕೆ ಬರೋವ್ರು, ಬಸ್ಸಿಗೆ ಹೋಗುವ ಎಷ್ಟೊಂದ್ ಜನ ರೆಗ್ಯುಲರ್ ಕಸ್ಟಮರಿದಾರೆ ಗೊತ್ತಾ? ಸಂಜೆನೂ ಪರಾಠ, ರಾಗಿಮುದ್ದೆ ತರ ಅಡುಗೆ ಮಾಡಿದ್ರೆ ಅವರಿಗೆ ಅನುಕೂಲ ಅಂತಾರೆ” ಅಂದು ತನ್ನ ಕೆಲಸದಲ್ಲಿ ತೊಡಗಿದ. “ಹೌದೇನೋ, ವ್ಯಾಪಾರ ಜೋರಾಗಿ ಆಗ್ತಿದೆ ಅನ್ನು ಮತ್ತೆ… ಹಂಗಂತ ಓದೋ ಕಡೆ ಗಮನ ಬಿಟ್ಟು ಬರೀ ದುಡ್ಡು ನೋಡೋ ತರ ಆಗಬೇಡ ಮತ್ತೆ” ಎಂದಿದ್ದಕ್ಕೆ ರಾಮು, “ಎಲ್ಲಣ್ಣಾ, ಆರನೇ ಕ್ಲಾಸಿಗೇ ಸ್ಕೂಲ್ ನಿಲ್ಸಾಯ್ತು, ಈ ಕೆಲಸದಲ್ಲಿ ನಿಲ್ಲೋಕೇಂತ” ಅಂದ. ಸಂದೇಶನ ಅನುಮಾನ ನಿಜವಾಗಿತ್ತು. ಏನೆಂದು ವಿಚಾರಿಸಿದರೆ, ಅವರ ಅಮ್ಮನ ಮನೆಯಲ್ಲಿ ಬಡತನ, ಕನಕಪುರದ ಕಡೆ ದಿನಗೂಲಿ ಕೆಲಸ ಮಾಡಿಕೊಂಡು ಕಾಲೋನಿಯೊಂದರ ಸಣ್ಣ ಮನೆಯಲ್ಲಿ ವಾಸವಾಗಿದ್ದವರು. ಅಪ್ಪ ಹೊಸೂರಿನ ಕಡೆಯಿಂದ ಕೆಲಸಕ್ಕೆಂದು ಬಂದಿದ್ದು, ರಾಮುವಿನ ಅಜ್ಜನಿಗೆ ಸ್ವಲ್ಪ ಪರಿಚಯವಾದ್ದರಿಂದ ಮಗಳನ್ನು ಮದುವೆ ಮಾಡಿದ್ದನಂತೆ. ರಾಮು ಆನಂತರ ಒಬ್ಬಳು ತಂಗಿ ಇದ್ದು, ಮದುವೆಯಾಗಿ ಹತ್ತು ವರ್ಷವಾಗುವಷ್ಟರಲ್ಲಿ ಅಪ್ಪ ಎಲ್ಲಿಯೋ ಹೋಗಿ ವಾಪಸಾಗಲಿಲ್ಲವಂತೆ. ಸಂಸಾರದ ಜವಾಬ್ದಾರಿ ಹೊತ್ತ ಅಮ್ಮ, ಸರ್ಕಾರಿ ಶಾಲೆಯಲ್ಲಿದ್ದ ರಾಮುವನ್ನೂ ತಂಗಿಯನ್ನೂ ಕರೆದುಕೊಂಡು ಬೆಂಗಳೂರು ಸೇರಿದರೆಂದು ಹೇಳಿದ. ರಾಯರ ಮಠದ ಸ್ವಲ್ಪ ದೂರದಲ್ಲಿದ್ದ ಸಣ್ಣ ಬೀದಿಯಲ್ಲಿ ಕಡಿಮೆ ಬಾಡಿಗೆಯ ಮನೆ ಹಿಡಿದು, ಕೆಲಸಕ್ಕೆಂದು ಹುಡುಕುವಾಗ ಮಠದ ಆವರಣವನ್ನು ಗುಡಿಸುವ, ನಿತ್ಯ ಮುಂಬಾಗಿಲು ತೊಳೆಯುವ ಕೆಲಸವಾಗಿ, ಆನಂತರ ಮೂರ್ನಾಲ್ಕು ಮನೆ ಕೆಲಸಗಳನ್ನೂ ಮಾಡಿಕೊಳ್ಳುತ್ತಿದ್ದ ಅಮ್ಮ ಹೇಗೋ ದಿನ ದೂಡುತ್ತಿದ್ದರು. ಮಠದ ಹಿಂದಿನ ಬಸ್ ನಿಲ್ದಾಣದಲ್ಲಿ ತರಕಾರಿ ಮಾರಾಟ ಮಾಡುವ ಹೆಂಗಸರೊಬ್ಬರ ಸಲಹೆಯಂತೆ, ಬಸ್ ಸ್ಟಾಂಡಿಗೆ ಬರುವ ಅನೇಕರಿಂದ ಬೆಳಗಿನ ತಿಂಡಿಯ ವ್ಯಾಪಾರ ಹೊಳೆದಿತ್ತಂತೆ. ತಕ್ಕಮಟ್ಟಿಗೆ ಅಡುಗೆ ಗೊತ್ತಿದ್ದ ರಾಮುವಿನ ಅಮ್ಮ ತಟ್ಟೆಇಡ್ಲಿ ವ್ಯಾಪಾರಕ್ಕೆ ಮುಂದಾಗಿ, ಆವರಣ ಗುಡಿಸುವ ಹೆಂಗಸಿನ ಅಡುಗೆ ವ್ಯಾಪಾರವನ್ನು ಯಾರಾದರೂ ಮೆಚ್ಚಿಯಾರೇ ಎಂದುಕೊಂಡು, ವ್ಯಾಪಾರ ನಿಭಾಯಿಸುವ ಹೊಣೆ ರಾಮುವಿಗೆ ಬಂದಾಯಿತು. ಆ ಬಗ್ಗೆ ನೋವು ಬಚ್ಚಿಕೊಂಡು ಅಭಿಮಾನದಲ್ಲಿ, ಅಮ್ಮನ ಸಂಪಾದನೆಗೆ ಕಡಿಮೆಯಿಲ್ಲದಂತೆ ಬೆಳಗಿನ ಹಾಗೂ ಸಂಜೆಯ ಮೂರ್ನಾಲ್ಕು ಗಂಟೆಗಳಲ್ಲಿ ಸಂಪಾದಿಸಿಕೊಂಡು ತಂಗಿಯನ್ನು ಓದಲು ಕಳಿಸ್ತಿದ್ದಾರೆ. ಸಂದೇಶನಿಗೆ ಕೇಳಿದ್ದು ಪಿಚ್ಚೆನಿಸಿದರೂ ಬದುಕಿನ ಅನಿವಾರ್ಯತೆಗಳು ಒಬ್ಬೊಬ್ಬರಿಗೆ ಒಂದೊಂದು ರೀತಿ ಎಂದುಕೊಂಡು ಸಣ್ಣ ಬೇಸರದಿಂದಲೇ ಬೆನ್ನುತಟ್ಟಿದ. ‘ನಮ್ಮಮ್ಮ “ಬೆಟ್ಟದ ಹೂವು” ಸಿನಿಮಾ ನೋಡಿ ನನಗೆ ರಾಮು ಅಂತ ಹೆಸರಿಟ್ಟಿದ್ದಂತೆ ಸಂದೇಶಣ್ಣಾ’ ಅನ್ನುತ್ತಾ ಪುನೀತ್ ರಾಜಕುಮಾರರ ಬಾಲ್ಯದ ಚಿತ್ರವೊಂದನ್ನು ಗಾಡಿಯ ತುದಿಯಲ್ಲಂಟಿಸಿರುವುದು ತೋರಿಸಿಸುವಾಗ ಅವನ ಕಣ್ಣುಗಳ ಹೊಳಪು, ಕಷ್ಟದ ಬದುಕಾದರೂ ಚೈತನ್ಯಕ್ಕೆ ಕುಂದಿಲ್ಲ ಎನಿಸುವಂತಿತ್ತು. ಸಂದೇಶನ ಮೂರನೇ ವರ್ಷದ ಕಾಲೇಜು ಮುಗಿದು ರಜೆಗೆ ಊರಿಗೆ ಹೋಗಿದ್ದಾಗ, ಬಿಳಿಕೆರೆ ಸರ್ಕಲ್ಲಿನಲ್ಲೊಂದು ಹೊಸ ಫಲಹಾರ ಭವನ ತಲೆಯೆತ್ತಿತ್ತು. “ಶ್ರೀ ರಾಘವೇಂದ್ರ ಭವನ, ಸಸ್ಯಾಹಾರಿ” ಎನ್ನುವ ಸಣ್ಣ ಅಕ್ಷರಗಳ ನಾಮಫಲಕದಲ್ಲಿ, ಬಾಳೆ ಎಲೆಗಳ ದೊಡ್ಡ ಚಿತ್ರದಲ್ಲಿ ತಟ್ಟೆಇಡ್ಲಿ, ಉದ್ದಿನ ವಡೆಗಳು ತಾಜಾತನವನ್ನು ಹೊರಹೊಮ್ಮುತ್ತಿರುವಂತೆ ಕಾಣುತ್ತಿದ್ದವು. ರಾಯರ ಮಠದ ಹಿಂಭಾಗದ ಬಿಳಿಕೆರೆ ಬಸ್ ಸ್ಟಾಂಡಿಗೆ ಕಾಣುವಂತೆ ಹೊಸ ಎಸ್ಆರ್ ಬಿ ಮಳಿಗೆಯು, ರಾಮುವಿನ ತಳ್ಳುವ ಗಾಡಿಯ ನಿಲ್ದಾಣಕ್ಕೆ ನೂರು ಅಡಿಯಷ್ಟು ದೂರದಲ್ಲಿದ್ದಿತ್ತು. ಅಲ್ಲಿಯತನಕ ಅಷ್ಟೇನೂ ಜೋರು ವ್ಯಾಪಾರವಿಲ್ಲದಿದ್ದರೂ, ನಿತ್ಯವೂ ತಪ್ಪದಂತೆ ವ್ಯಾಪಾರಕ್ಕೆ ಬರುತ್ತಿದ್ದ ರಾಮುವಿಗೆ ಈಗ ಹೊಚ್ಚ ಹೊಸ ಎಸ್ ಆರ್ ವಿ ಭವನದ ಅಡುಗೆ ಕೋಣೆಯಿಂದ ಬರುವ ತಾಜಾ ಚಟ್ನಿಯ ಘಮಲು, ಉದ್ದಿನ ವಡೆ ಕರಿಯುವ, ನರುಗಂಪಿನ ಡಿಕಾಕ್ಷನ್ ಕಾಫಿಯ ಸುವಾಸನೆ, ಮಿರುಗುವ ಹೊಸ ಟೇಬಲ್ಲುಗಳು, ಬಾಳೆ ಎಲೆಯ ಹಸಿರು ಹಿನ್ನೆಲೆಯಲ್ಲಿ ಬಿಳಿಯ ತಟ್ಟೆಇಡ್ಲಿಯ ಮೇಲೆ ಹೊಂದಿಕೆಯಾಗುವಂತಹ ತಿಳಿ ಕೇಸರಿ ಬಣ್ಣದ ಚಟ್ನಿ, ಇವೆಲ್ಲಾ ಆಕರ್ಷಣೆಗಳನ್ನೂ ಎದುರಿಸಬೇಕಾದ ಸವಾಲು ಕಾದಿತ್ತು. ಯಾವಾಗಲೋ ಬಣ್ಣ ಬಳಿದಂತೆ ಕಾಣುವ ನಾಲ್ಕು ಸೈಕಲ್ ಚಕ್ರದ ತಳ್ಳುವ ಗಾಡಿಯ ಮೇಲೆ ಹಬೆಯನ್ನು ಹೊಮ್ಮುವ ಒಂದು ಪಾತ್ರೆ, ಇಡ್ಲಿ ಬಡಿಸುವ ಪ್ಲಾಸ್ಟಿಕ್ ತಟ್ಟೆ ಅದರ ಮೇಲೊಂದು ಒಣಗಿದ ಮುತ್ತುಗದ ಎಲೆ, ಕುಡಿಯುವ ನೀರು ತುಂಬಿರಿಸಿದ್ದ ಮೂರು ಪ್ಲಾಸ್ಟಿಕ್ ಜಗ್ಗುಗಳು, ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುವ ಮೈಸೂರು ಅರಮನೆಯ ಮುಂದೆ ಝೀರೋ ವ್ಯಾಟ್ ಬಲ್ಬಿನಂತಾಯಿತು. ಆದರೂ ಧೃತಿಗೆಡದವನಂತೆ ತನ್ನ ಪಾಡಿಗೆ ತಾನು ಮಾಮೂಲಿನ ಜಾಗದಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದ ರಾಮುವಿಗೆ ಒಂದೆರಡು ವಾರಗಳಲ್ಲಿ ಎಸ್.ಆರ್ ಬಿ ಯ ವತಿಯಿಂದ ಒಂದು ನೋಟೀಸ್ ಬಂತು. ವ್ಯಾಪಾರದ ಪ್ರಮಾಣ ಕ್ಷೀಣಿಸಿದ್ದಕ್ಕೆ ತಕ್ಕಂತೆ ತಟ್ಟೆಇಡ್ಲಿ, ಮಸಾಲೆ ವಡೆಗಳ ಪ್ರಮಾಣವನ್ನೂ ಕಡಿಮೆ ಮಾಡಿಕೊಂಡಿದ್ದ ರಾಮು ಮೊದಲಿನಂತೆ ಹತ್ತೂವರೆಯ ಬಸ್ಸು ಹೊರಡುವ ತನಕ ಕಾಯದೇ ಮಾರಾಟವಾಗುವ ಇಡ್ಲಿಯ ಪ್ರಮಾಣದ ಆಧಾರದ ಮೇಲೆ ಜಾಗ ಖಾಲಿ ಮಾಡುತ್ತಿದ್ದನು. ಸ್ವಸಹಾಯ ಪದ್ಧತಿಯ ಎಸ್ ಆರ್ ವಿ ಯ ಮಳಿಗೆಯಲ್ಲಿ ತಿಂಡಿ ಸರಬರಾಜು ಮಾಡುತ್ತಾ ಗಲ್ಲಾಪೆಟ್ಟಿಗೆಯನ್ನೂ ನಿಭಾಯಿಸುವ ನಲವತ್ತು ದಾಟಿರಬಹುದಾದ ಮಧ್ಯವಯಸ್ಸಿನ ಭಟ್ಟರು, ಹಣೆಗೆ ಮಠದ ಚಂದನ, ಕುಂಕುಮವನ್ನು ಹಣೆಗೆ ಧರಿಸಿ, ಒಳಗಿನ ಜನಿವಾರ ಕಾಣುವಂತಹ ತೆಳುವಾದ ಬನಿಯನ್ನು ಧರಿಸಿ ನೀಟಾಗಿರುತ್ತಿದ್ದರು. ಕಪ್ಪಗೆ ಕುಳ್ಳಗೆ ಇದ್ದ, ಇನ್ನೂ ಹೈಸ್ಕೂಲಿಗೆ ಹೋಗುವ ವಯಸ್ಸಿನ ರಾಮುವಿನಿಂದ ಅವರಿಗೇನೂ ಉಪಟಳವಾಗುವಂತಿರಲಿಲ್ಲ. ಆದರೂ ರಾಯರ ಮಠದ ಆವರಣಕ್ಕೆ ತಕ್ಕನಾಗಿದ್ದ ಉಪಹಾರ ಭವನದ ಕಣ್ಣಳತೆಯ ದೂರದಲ್ಲಿ ರಾಮುವಿನ ಗಾಡಿಯನ್ನು ಕಾಣುವುದೆಂದರೆ ಅವರಿಗೆ ಅಷ್ಟಾಗಿ ಸರಿಕಾಣಲಿಲ್ಲ. ಮಠದ ಮೂಲಕ ಪರಿಚಯವಾಗಿದ್ದ ಸ್ಥಳೀಯರೊಬ್ಬರಿಗೆ ಈ ವಿಚಾರವನ್ನು ನಯವಾಗಿ ಹೇಳಿದ ಭಟ್ಟರು ಬೇರೆ ಎಲ್ಲಾದರೂ ಜಾಗ ನೋಡಿಕೊಳ್ಳುವಂತೆ ನೋಟೀಸು ಕಳಿಸಿಕೊಟ್ಟಿದ್ದರು. ರಾಮು ಹೆಚ್ಚೇನೂ ಮಾತನಾಡದೇ ‘ನಾಲ್ಕು ವರ್ಷದಿಂದ ಇಲ್ಲೇ ಬತ್ತೀನಿ, ಇಲ್ಲಿ ತರಕಾರಿ ಮಾರುವ ಕೆಲವರನ್ನು ಬಿಟ್ಟು ಬೇರೆ ಯಾರೂ ಇರಲಿಲ್ಲ. ಬಸ್ ಸ್ಟಾಂಡಿಗೆ ಬರೋವ್ರು ಯಾಪಾರ ಮಾಡ್ತಾರೆ ಅಂತ ಇಲ್ಲಿದಿನಿ; ಈಗ ಒಂದೇ ಸಲ ಬೇರೆ ಜಾಗ ಅಂದರೆ” ಎಂದು ಮೆಲುದನಿಯಲ್ಲೇ ಹೇಳುತ್ತಾ “ಏನ್ ಕೊಡ್ಲಿ ಸಾರ್” ಎಂದು ಕೇಳಿದ. “ನಿನ್ನ ಪುರಾಣ ಕೇಳೋಕೆ ಟೈಮಿಲ್ಲ, ಹೇಳ್ದಷ್ಟು ಮಾಡೋದುಕಲಿ” ಎಂದು ಭಟ್ಟರ ನೋಟೀಸುದಾರರು ಹೊರಟು ಹೋಗಿದ್ದರು. ವ್ಯಾಪಾರದ ಈ ಹೊಸ ಸ್ಪರ್ಧಾತ್ಮಕತೆಯ ಬಗ್ಗೆ ಏನೂ ಮಾತನಾಡದಿದ್ದರಿಂದ, ತಾನಾಗಿಯೇ ಕೆದಕಿ ಕೇಳದೇ ಸಂದೇಶನೂ ತನ್ನಷ್ಟಕ್ಕಿದ್ದು ಮಾಮೂಲಾಗಿ ತಿಂಡಿ ಕಟ್ಟಿಸಿಕೊಂಡು ಹಿಂತಿರುಗುತ್ತಿದ್ದನು. ಅಂತಿಮ ವರ್ಷದಲ್ಲಿ ಪ್ರಾಜೆಕ್ಟ್ ಕೆಲಸಗಳ ಪ್ರಯುಕ್ತ ಕಾಲೇಜಿಗೆ ಲೇಟಾಗಿ ಹೋಗುತ್ತಿದ್ದಾಗ ವಾರದ ಕೆಲವು ದಿನಗಳು, ದಾರಿಯಲ್ಲಿ ರಾಮುವಿನ ಗಾಡಿಯ ಗೈರುಹಾಜರಿಯನ್ನು ಸಂದೇಶ ಗಮನಿಸಿದ್ದ. ಆನಂತರ ಶಾಶ್ವತವೆನಿಸುವಂತೆ, ರಾಮು ಒಂದು ದಿನ ಇದ್ದಕ್ಕಿದ್ದ ಹಾಗೆ ಹೇಳದೇ ಕೇಳದೇ ಮಾಯವಾಗಿಬಿಟ್ಟಿದ್ದ. ಹಾಗಾಗಿ ತಿಂಡಿಗೆ ಅನಿವಾರ್ಯವೆನಿಸಿದಾಗ ಎಸ್ ಆರ್ ಬಿ ಯನ್ನೋ ಅಥವಾ ಕಾಲೇಜು ಕ್ಯಾಂಟೀನನ್ನೋ ಅವಲಂಬಿಸತೊಡಗಿದ. ಮುಖ ನೋಡುತ್ತಲೇ ತಿಂಡಿ ಪ್ಯಾಕ್ ಮಾಡದೇ, ಕೌಂಟರ್ ಗೆ ಹೋಗಿ ಆರ್ಡರ್ ಮಾಡಿ ಹಣಕೊಟ್ಟು, ಮಾಣಿಗೆ ಟೋಕನ್ ತಲುಪಿಸುವಾಗ ಬೆಟ್ಟದ ಹೂವಿನ ನಾಯಕನಂತಹ ಮಹತ್ವಾಕಾಂಕ್ಷಿ ರಾಮು ನೆನಪಾಗುತ್ತಿದ್ದ. ಕಾಲೇಜು ಮುಗಿಸಿ ಕೆಲಸ ಪ್ರಾರಂಭಿಸಿದ್ದ ಸಂದೇಶನು ನಿತ್ಯ ಬಿಳಿಕೆರೆಯಿಂದ ಬನ್ನೇರುಘಟ್ಟ ರಸ್ತೆಗೆ ಪ್ರಯಾಣಿಸುವುದು ದೂರವೆನಿಸಿ, ಆಫೀಸಿನ ಒಂದು ಶಾಖೆ ಜಯನಗರದಲ್ಲೂ ಇದ್ದುದರಿಂದ ಎರಡೂ ಬ್ರಾಂಚುಗಳಿಗೆ ಸಮಾನ ದೂರವೆನಿಸುವಂತೆ ಪುಟ್ಟೇನಹಳ್ಳಿಯಲ್ಲಿ ಬಾಡಿಗೆ ಮನೆ ಹಿಡಿದಿದ್ದ. ಕಾಲೇಜಿಗೆ ಹೋಗುವಾಗಿನ ಸೆಕೆಂಡ್ ಹ್ಯಾಂಡ್ ಸ್ಪ್ಲೆಂಡರ್ ಬೈಕ್ ಬದಲಾಯಿಸಿ ಹೊಸ ಬುಲೆಟ್ಟ್ ಖರೀದಿಸಿದ್ದ. ಒಂದು ದಿನ ಸೌತ್ಎಂಡ್ ಸರ್ಕಲ್ಲಿನ ಟ್ರಾಫಿಕ್ ಲೈಟ್ ಕಾಯುತ್ತಾ ನಿಂತಿದ್ದಾಗ, ಅಚಾನಕ್ಕಾಗಿ ಅಪರಿಚಿತ ದನಿಯೊಂದು “ಸಂದೇಶಣ್ಣ” ಎಂದು ಕೂಗಿದಂತಾಗಿ ಸುತ್ತ ನೋಡುವಾಗ ಆಟೋ ಒಂದರಿಂದ ಮೆಲ್ಲನೆ ತಲೆ ಹೊರಗೆ ಬಂದಿದ್ದು ಕಂಡ. ದೃಷ್ಟಿಯಿಟ್ಟು ಗಮನಿಸಿ ಇಡ್ಲಿರಾಮು ಎಂದು ಗೊತ್ತುಮಾಡಿಕೊಂಡು ಅವನತ್ತ ಬರುವಂತೆ ಸೂಚಿಸಿ ಸಿಗ್ನಲ್ ನೋಡಿದ. ಅಷ್ಟರಲ್ಲಿ ಆಟೋ ಗೆ ಹಣಕೊಟ್ಟು ಇಳಿದುಬಂದ ರಾಮುವನ್ನು ಕೂರಿಸಿಕೊಂಡು ಮುಂದಿನ ರಸ್ತೆಯ ಕ್ಯಾಂಟೀನಿನತ್ತ ನಿಲ್ಲಿಸಿ ವಿಚಾರಿಸತೊಡಗಿದ- “ಏನೋ ರಾಮು, ಧಿಡೀರನೆ ಮಾಯವೂ ಆಗ್ತೀಯ, ಮತ್ತೆ ಹೀಗೇ ಪ್ರತ್ಯಕ್ಷನೂ ಆಗ್ತೀಯಾ, ಹೇಗಿದ್ದೀಯಾ” ಎಂದು ವಿಚಾರಿಸುತ್ತಲೇ ತನ್ನ ಓದು ಮುಗಿಸಿ ಕೆಲಸ ಶುರುಮಾಡಿ ಹೊಸ ಏರಿಯಾದಲ್ಲಿರುವುದನ್ನೂ ಹೇಳಿದ. ಬಿಳಿಕೆರೆಯ ತಳ್ಳುವ ಗಾಡಿಗೆ ಒಂದು ದಿನ ಪೊಲೀಸ್ ಪೇದೆಯೊಬ್ಬರು ಬಂದು ಹೆದರಿಸಿ ಗಾಡಿ ಸೀಝ್ ಮಾಡ್ತೀವಿ ಅಂದಿದ್ದನ್ನೂ, ಅದಾಗಿ ಒಂದು ವಾರದಲ್ಲಿ ಸ್ಥಳೀಯ ದಾಂಡಿಗರಿಬ್ಬರು ಗಾಡಿಯ ಚಕ್ರವನ್ನು ಜಖಂಗೊಳಿಸಿದರೆಂದೂ ನಂತರ ಬಾಡಿಗೆಯ ತಳ್ಳುವ ಗಾಡಿಯೂ
You cannot copy content of this page