ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೈಕುಗಳು

ಕೆ.ಸುನಂದಾ.

Bird Feeder, House, Feed, Nest, Live

ಬಾನಲ್ಲಿ ನಕ್ಕ
ಶಶಿ ; ಕಂಡು ತಂಪಾಯ್ತು
ನೊಂದ ಮನಕ್ಕೆ
*

ತಳಮಳವ
ತಾಳೆನಾ ; ಕೇಳು ಸಖಿ
ಯಾರಿ ಸುಂದರಿ
*

ಅಡವಿಯಲ್ಲಿ
ಬಿರಿದ ಮಲ್ಲೆ ಕಾಯ್ವೆ
ನೀ ಯಾರಿಗಿಲ್ಲಿ
*

ವೃಕ್ಷಗಳಲ್ಲಿ
ಸಾಕ್ಷಾತ್ ದೇವನಿಹನು
ಎಲ್ಲರ ಭಾಗ್ಯ

*

ಕಾಣೋ ಕಣ್ಣಿಗೆ
ಸಂಭ್ರಮ ; ಈ ನಿಸರ್ಗ
ಬೇಕು ಜೀವಿಗೆ
*

ಸೃಷ್ಟಿಯೇ ದೈವ
ತಿಳಿದಂತೆ ಇರುವ
ನಮ್ಮಂತೆ ಅವ
*

ಪ್ರೀತಿಯ ಗೂಡು
ಅನುಭವಿಸಿ ಹಾಡು
ಎನಿಲ್ಲ ನೋಡು

************************************

About The Author

Leave a Reply

You cannot copy content of this page

Scroll to Top