ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅಭಿವ್ಯಕ್ತ

ವೀಣಾ ರಮೇಶ್

Black and white photo of long gray shadows on the white snow of a young couple in love man and woman in winter. A black and white photo of long gray shadows on royalty free stock images

ನೀನು ಅನುಭವ
ನಾನು ಅನುಭಾವವಾಗಿ
ನೀನು ವ್ಯಕ್ತ,
ನಾನು ಅಭಿವ್ಯಕ್ತವಾಗಿ
ನನ್ನ ಏಕಾಂತದಲ್ಲೂ
ನೀ ಕಾಂತವಾಗಿ

ಮಾತು ಬೆತ್ತಲೆಯಾಗಿ
ಮೌನ ಕತ್ತಲೆಯ ಪ್ರತಿ
ಶೂನ್ಯದಲ್ಲೂ ನನ್ನಾವರಿಸಿ
ಮೌನ ಬಗೆದು
ದಿಗಂತ ದೆತ್ತರಕ್ಕೂ
ಸವಿ ಮಾತಿನ ಮೆಟ್ಟಿಲಾಗಿರುವೆ

ಬಿರುಬಿಸಿಲoತೆ ವಿರಹದ
ನಿನ್ನುಸಿರು ಸುಟ್ಟರೂ
ಮಳೆಯಾಗಿ ನಾನು ಇನ್ನಷ್ಟೂ ಸುರಿದು
ಒಂದಿಷ್ಟು ನನ್ನುಸಿರು ಸೇರಿಸಿ

ಕವಿದ ಮೋಡ ದೊಳಗೆ..
ನನ್ನ ಮುಚ್ಚಿದರೂ
ಹಾಲುನಗುವಿಗೂ ಬಿಳಿಮುಗಿಲು ಮೆಚ್ಚಿದರೂ
,ತಿಂಗಳ ಬೆಳಕು
ವಿರಮಿಸದಂತೆ ಚಂದ್ರಮನಂತೆ ನಿನ್ನ ಇಡಿಯಾಗಿ
ತುಂಬಿ ಕೊಳ್ಳುವೆ

ನಿನ್ನೊಲುಮೆಗೆ ಆಲಾಪವಾಗಿ
ಅಧೀತ ಪ್ರೀತಿಗೆ ಅನುರಾಗವಾಗಿ
ನಾ ರಾಗವಾಗಿ
ಅತೀತವಾಗಿರುವೆ

*********************************

About The Author

Leave a Reply

You cannot copy content of this page

Scroll to Top