ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಬತ್ತಿದೆದೆ ರೇಷ್ಮಾ ಕಂದಕೂರ ಬತ್ತಿದೆದೆಯಲಿ ಬಿತ್ತದಿರು ಕನಸುಸುತ್ತಲೆಲ್ಲ ಕವಿದ ಕತ್ತಲೆಮುತ್ತಿದೆ ಭರವಸೆಯ ಬೆಳಕನುಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ ಸತ್ಯದ ಹೊನಲಿಗೂ ಸಂಚಕಾರಮಿತ್ಯದ ಝೇಂಕಾರದ ಸಲಿಗೆಅಪತ್ಯದ ನಡೆ ನುಡಿಯುವವರೆ ಹೆಚ್ಚುನಿತ್ಯ ನೇಮವು ದೂರ ತೀರದಲಿ ತೇಲಿ ಕೋಪ ತಾಪದ ಆರ್ಭಟಕೂಪದಲಿ ಸೇರಿದೆ ಮಾನವೀಯತೆಊಹಾಪೋಹದ ಸುಳಿಗೆವಾಸ್ತವವ ಮರೆ ಮಾಚಿದೆ.

ಕಾವ್ಯಯಾನ Read Post »

ಕಾವ್ಯಯಾನ

ನಿರುತ್ತರ

ಕವಿತೆ ನಿರುತ್ತರ ಮಧುಸೂದನ ಮದ್ದೂರು ನಿನ್ನ ತುದಿ ಬೆರಳುಎದೆ ತಾಕಲುನೂರು ನವಿರು ಪುಳಕ ನಿನ್ನ ಮುಂಗುರುಳುಗಾಳಿ ಗಂಧ ತೀಡಲುಸಾವಿರದ ಸಂಭ್ರಮದ ಘಮಲು ನಿನ್ನ ಕೆಂದುಟಿಅರಳಿ ನಾಚಲುಲಕ್ಷದ ಲಕ್ಷ್ಯವುಅಲಕ್ಷ್ಯವು ನಿನ್ನ ಕಟಿಕುಲುಕಿ ಬಳಕಲುಕೋಟ್ಯನುಕೋಟಿಅಪ್ಸರೆಯರಿಗೂ ಮತ್ಸರ ನಾ…..ನಿರುತ್ತರನಿರಂತರ****************************************

ನಿರುತ್ತರ Read Post »

ಕಾವ್ಯಯಾನ

ದಂಡೆಯಲ್ಲಿ ಒಮ್ಮೆ ನಡೆದು..

ಕವಿತೆ ದಂಡೆಯಲ್ಲಿ ಒಮ್ಮೆ ನಡೆದು.. ಫಾಲ್ಗುಣ ಗೌಡ ಅಚವೆ ಕಾರವಾರದ ದಂಡೆಯೆಂದರೆ ನನಗೆಅದೆಂಥದೋ ಪ್ರೀತಿಸಂಜೆ ಮುಂಜಾವೆನ್ನದೇಸದಾ ಗಿಜುಗುಡುವ ಜನರುಈ ದಂಡೆಯಲ್ಲಿ ನಡೆದುಅದರ ಜೊತೆ ಒಬ್ಬೊಬ್ಬರೇಸಂಭಾಷಿಸಿಸುತ್ತಾರೆ ಮತ್ತುಹಗುರಾಗುತ್ತಾರೆ. ದಿಗಂತದಿಂದೋಡಿ ಬರುವ ಅಲೆಗಳುನಡೆವ ಪಾದಗಳ ತಂಪುಗೊಳಿಸಿಎಂತೆಂಥದೋ ಒತ್ತಡಗಳಿಂದ ವ್ಯಗ್ರವಾದವರಿಗೆಸಾಂತ್ವನ ನೀಡುತ್ತವೆ. ದಂಡೆಯಲ್ಲಿ ಸಿಗುವ ಪರಿಚಿತ ಕೊಂಕಣಿಗರು‘ ನಂಗೆ ಅಷ್ಟಾಗಿ ಕನ್ನಡ್ ಬರುದಿಲ್ಲ ಹಾಂ’ಎಂದು ಕನ್ನಡದಲ್ಲಿಯೇ ಮಾತಿಗಿಳಿಯುತ್ತಾರೆಕನ್ನಡ ದ್ವೇಶಿಸದ ಆ ಕೊಂಕಣಿಗರ ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ.ಯಾಕೆಂದರೆ, ಯಾರ ಸುದ್ದಿಗೂ ಹೋಗದ ಅವರು‘ತಾವಾಯಿತು ತಮ್ಮ ಕೆಲಸಾಯಿತು’ ಅಷ್ಟೇ! ನೀವು ಎಲ್ಲಿಂದಲೇ ಬಂದು ಕೆಲಸ ಮಾಡಿದರೆ ನೀವು ಅಲ್ಲೇ ನೆಲೆಗೊಳ್ಳುತ್ತೀರಿಅಲ್ಲಿಯವರೇ ಆಗಿಬಿಡುತ್ತೀರಿಅದಕ್ಕೆ ಕಾರಣ ಅವರ ಪ್ರೀತಿಪ್ರತಿ ಸಂಜೆ ಎದುರಾಗುವ ಈದಂಡೆಯ ಮಮತೆ! ದಂಡೆಯ ಉಸುಕು ಸದಾ ಗಾಳಿಯೊಂದಿಗೆಗಾಳಿ ಮರದ ಮೇಲೆ ಕೂತು ಪಿಸುಗುಡುವ ಬೆಳ್ಳಕ್ಕಿಗಳುಮೀನು ಕಂಡಲ್ಲಿ ತೇಲುವ ಕಡಲ ಹಕ್ಕಿಗಳುಆಗಾಗ ದಂಡೆಯ ಸಮೀಪ ಬಂದು ಪಾನಿಪುರಿಗೆ ಆಸೆಪಟ್ಟುಮುಳುಗೇಳುವ ಡಾಲ್ಫಿನ್ ಬಗ್ಗೆಯೇ ಗಂಟೆಗಟ್ಟಲೆಮಾತಾಡುತ್ತಿರುತ್ತವೆ. ಬೆಳದಿಂಗಳು ಬಂತೆಂದರೆ ಉಕ್ಕೇರುವ ಅಲೆಗಳುಬೇರೆ ಸಮಯದಲ್ಲಿ ಮಂದ್ರಸ್ಥಾಯಿಯಲ್ಲಿ ಮಿಂದಂತಿರುತ್ತದೆ. ಈ ದಂಡೆಯ ಉಸುಕಿನಲ್ಲಿ ಹಬ್ಬಿದ ಗಿಡಗಳು ಹೂ ಬಿಟ್ಟರೆಸಿಕ್ಕಾಪಟ್ಟೆ ಬಂಗಡೆ ಬೀಳುವುದಂತೆ! ಸಮುದ್ರದ ಮಧ್ಯೆ ನಿಂತ ಒಂಟಿ ದೀಪ ಸ್ಥಂಭಇಡೀ ಕಾರವಾರಿಗರ ಮನಸ್ಸನ್ನುಪ್ರತಿನಿಧಿಸುತ್ತದೆ!ಸಂಜೆ ಆರಾದರೆ ಕಿಲೋಮೀಟರುಗಳ ದೂರದ ಮೀನು ಹಡಗುಗಳ ಕಾಯುತ್ತಸುರಕ್ಷಿತ ದಡ ಸೇರಿಸುತ್ತದೆ.! ಸಂಜೆಯಾದರೆ ಮೀನ ಖಂಡಗಳ ಹೊಳೆಸುವಹುಡುಗಿಯರನ್ನು ಸಾಲು ಹೊರಟ ಬೆಳ್ಳಕ್ಕಿಗಳು ಒಮ್ಮೆ ಇಣುಕಿ ನಡುವ ಬಳಸಿದಂತೆಸುಳಿದು ಹೋಗುತ್ತವೆ. ಎಂದೋ ಈ ದಂಡೆಯಲ್ಲಿ ನಡೆದು ಹೋದ ಕವಿ ರವೀಂದ್ರರು ಈಗಲೂ ಇಲ್ಲೆಲ್ಲೋ ಸುತ್ತುತ್ತಿರುವಂತೆ ಭಾಸವಾಗುತ್ತದೆ.ಅವರು ಕಂಡ ಸಂಜೆ ಇನ್ನೂ ಎನೂ ಬದಲಾಗಿಲ್ಲ! ಲಂಗರು ಹಾಕಿದ ಹಡಗುಗಳು ಸಂಜೆಆಕಾಶವಾಣಿಯಲ್ಲಿ ಬಿತ್ತರಗೊಳ್ಳುವ ಚಿತ್ರಗೀತೆಗಳ ಆಲಿಸಿ ತಲೆಯಾಡಿಸುತ್ತಿವೆ! ಇಲ್ಲಿನ ಆಹ್ಲಾದಕರ ಸಂಜೆಅಲೆವ ಅಲೆಗಳ ಹೃದಯದ ಮಿಡಿತದಂಡೆಯ ಮರಳ ಮಧುರ ಸಂಗೀತಬೆಳ್ಳಕ್ಕಿ ಹೂ ಮುಡಿದ ಬೈತ್ಖೋಲಿನ ಮರ ನೋಡುತ್ತಲೆನನಗೂ ದಂಡೆಗೆ ಮತ್ತೆ ವಾಪಾಸಾಗಬೇಕೆಂಬ ಅಸೆ ಹುಟ್ಟುತ್ತದೆದಂಡೆಯ ವಿರಹ ನನ್ನೆದೆ ದಿಗಂತದಲ್ಲಿ ಮಡುಗಟ್ಟುತ್ತದೆ! *************************************

ದಂಡೆಯಲ್ಲಿ ಒಮ್ಮೆ ನಡೆದು.. Read Post »

ಕಾವ್ಯಯಾನ

ಗೋವು ಮತ್ತು ರೈತ

ಕವಿತೆ ಗೋವು ಮತ್ತು ರೈತ ಡಾ.ಶಿವಕುಮಾರ್ ಮಾಲಿಪಾಟೀಲ ಗೋವು ಪುಣ್ಯಕೋಟಿರೈತ ಪುಣ್ಯಾತ್ಮಗೋವು ತ್ಯಾಗಿರೈತ ಯೋಗಿ ಗೋವು ಬೀದಿಪಾಲಾಗಿದೆರೈತ ಗುಳೆ ಹೊರಟಿದ್ದಾನೆ ಇಬ್ಬರೂ ಮೂಖರೆಇಬ್ಬರೂ ಅಮಾಯಕರೆ ರೈತ ಕಷ್ಟ ಪಡುತ್ತಾನೆಹಗಲು ರಾತ್ರಿ ಎನ್ನದೆಜಗಕೆ ಅನ್ನ ಕೊಡಲುಜಾತಿ ಧರ್ಮ ನೋಡದೆ ಎತ್ತು ಕಷ್ಟ ಪಡುತ್ತದೆರೈತ ಮಿತ್ರನಾಗಿ ಉಳಿಮೆಮಾಡುತ ಮಳೆ ಬಿಸಿಲು ಲೆಕ್ಕಿಸದೆ, ಬಾರಕೊಲು ಏಟುತಿಂದರೂ ಒಮ್ಮೆಯೂ ಎದುರಾಡದೆ ಗೋವಿನ ಹಾಲು ಮೊಸರುತುಪ್ಪ ನೀಡುತ್ತದೆ ಮಕ್ಕಳಿಂದಮುದುಕರವರೆಗೆಜಾತಿ ಧರ್ಮ ಕೇಳದೆ ಹೌದುಗೋವಿನ ಹೊಟ್ಟೆಯಲ್ಲಿ ಬಂಗಾರವಿದೆರೈತನ ಬೆನ್ನಿನ ಮೇಲೆದೇಶ ನಿಂತಿದೆ ಗೋವಿನ ಹೊಟ್ಟೆ ಕೊಯ್ಯತ್ತಿದ್ದಾರೆ ಬಂಗಾರ ಹುಡುಕಲು ರೈತನ ಬೆನ್ನು ಮುರಿಯುತ್ತಿದ್ದಾರೆ ಅಧಿಕಾರ ಪಡೆಯಲು ಯಾರು ರಾಜನಾದರೂಬಡವನಿಗೆ ಹೊಡೆಯುವುದೆ ಕಾಯಕಇದು ಶತ ಶತಮಾನದ ಬಳುವಳಿ ಪ್ರತಿ ಚುನಾವಣೆಯಲ್ಲಷ್ಟೆರೈತನ ಮೂಳೆಗಳುಗೋವಿನ ಮಾಂಸಕಾಣುತ್ತದೆನಂತರ ಮತ್ತೆರೈತಮಾರಾಟವಾಗುತ್ತಾನೆಗೋವು ರಪ್ತಾಗುತ್ತದೆ ಜನರಿಗೂ ಗೋವು ಬೇಕುಗೃಹ ಪ್ರವೇಶಕ್ಕೆ ಹೋಮ ಹವನಕ್ಕೆ ನಂತರ ಬೀದಿಪಾಲು ರೈತನೂ ಬೇಕು ಸಭೆ ಸಮಾರಂಭಗಳಿಗೆ ,ನಾಯಕರಭಾಷಣಕ್ಕೆ ನಂತರ ಸಾಲದ ಪಾಲು ಪ್ರಕೃತಿ ,ಸಮಾಜದ ಜೊತೆಗೆಹೋರಾಡಿ ಸೋತು ಗೋವಿನಹಗ್ಗ ರೈತನ ಕೊರಳಲಿ ಅಂತ್ಯ ಆಗುತ್ತಿದೆ ಹೌದು ,ಈಗೀಗ ಹಳ್ಳಿಗಳಲ್ಲಿಗೋವು ಅಂಬಾ ಅನ್ನುತ್ತಿಲ್ಲರೈತ ಉಳಿಮೆ ಮಾಡುತ್ತಿಲ್ಲ ರೈತ ,ಗೋವಿನ ಬೆಲೆ ಬಾರಿ ಕುಸಿದಿದೆಆದರೆ ಮಣ್ಣಿಗೆ ,ಮರಳಿಗೆಭೂಮಿಯ ಬೆಲೆ ಏರುತ್ತಿದೆ ಗೋವಿನ ಹಾಲು ಕುಡಿದವರುವಿಷ ಕಕ್ಕುತ್ತಿದ್ದಾರೆರೈತನ ಅನ್ನ ತಿಂದವರುರೈತನಿಗೆ ,ರೈತನ ಬೆಳೆದ ಬೆಳೆಗೆಬೆಲೆ ನಿಗದಿ ಪಡಿಸುತ್ತಿದ್ದಾರೆ ಹಾಲಿನ ಡೈರಿಯ ಹಾಲುಕುಡಿಯುವವರಿಗೆಪುಡ್ ಬಜಾರ್ ನಲ್ಲಿ ಪುಡ್ತಿನ್ನುವವರಿಗೆ ರೈತ ,ಗೋವು ಯಾಕೆ ಬೇಕು??? **********************************************

ಗೋವು ಮತ್ತು ರೈತ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವೀರಅಮರಸುತೆ ಮನದೊಳಗಿನ ಕಿಚ್ಚಿನಿಂದ ದೀಪ ಹೊತ್ತಿಸಬೇಡ ಗೆಳೆಯನಿರ್ಮಲ ಜ್ಯೋತಿ ಬೆಳಗಿಸು ಅಶಾಂತಿಯ ಕದವ ತಟ್ಟಬೇಡ ಗೆಳೆಯ ಇನ್ನೆಷ್ಟು ದಿನ ಹಗೆಯ ಸಾಧಿಸುವೆ ಹೊಗೆಯ ಹೊತ್ತಿಸುವೆಶರಣಾಗು ಸ್ನೇಹಕೆ ‌ಕರಿನೆರಳ ಗತವನು ಮರುಕಳಿಸಬೇಡ ಗೆಳೆಯ ಇರುವ ಸೇತುವೆಯ ಬೀಳಿಸುವೆ ಮನಸ್ಸು ದೂರ ಮಾಡುವೆ ಏಕೆಬಂಧ ಬೆಸೆಯುವ ನಾವು ಅಡ್ಡಗೋಡೆ ಕಟ್ಟಬೇಡ ಗೆಳೆಯ ತೋರಿಕೆಗೆ ಹಣತೆ ಎಣ್ಣೆಯಾಗೋಣ ಎಂಬ ಜಂಭವೇಕೆಶಮಭಾವಬತ್ತಿಯಾಗಿ ಬೆಳಕ ಬೆಳಗುವ ಬಿರುಗಾಳಿ ಬೀಸಬೇಡ ಗೆಳೆಯ ಸಕಲರ ಬಾಳಿಗೆ ಭಾಗ್ಯಜ್ಯೋತಿಯಾಗುವ ಬಯಕೆ ಎನಗೆ ಸಾಕಿನಂದಾದೀಪಕೆ ತೈಲವಾಗುವ ಪ್ರೀತಿ ಪ್ರಣತಿಯ ಒಡೆದು ಹಾಕಬೇಡ ಗೆಳೆಯ ************************************************************************

ಗಜಲ್ Read Post »

ಅಂಕಣ ಸಂಗಾತಿ

ಅಂಕಣ ಬರಹ ಕಗ್ಗಗಳ ಲೋಕ ಆದರಣೀಯ ಡಾII ಡಿ. ವಿ. ಗುಂಡಪ್ಪನವರು ರಚಿಸಿದ ‘ಮಂಕುತಿಮ್ಮನ ಕಗ್ಗ’ ಒಂದು ಮೇರುಕೃತಿ. ಅವರ ಒಂದೊಂದು ಮುಕ್ತಕವೂ ಕೂಡ ಸಾರ್ವಕಾಲಿಕ ಸತ್ಯ! ಜೀವನದಲ್ಲಿ ಎದುರಾಗುವ ಸಾವಿರಾರು ಪ್ರಶ್ನೆಗಳಿಗೆ ತತ್ವಶಾಸ್ತ್ರ,ಸ್ವಾನುಭವ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಉತ್ತರ ನೀಡುವ ಕಗ್ಗಗಳು ಓದುಗರಿಗೆ ಆಪ್ತವಾಗಿ ಬಿಡುತ್ತವೆ. ಒಬ್ಬ ಸಾಮಾನ್ಯ ಮನುಷ್ಯನಂತೆ ಮೈತ್ರಿಭಾವದಿಂದ ಬರೆದ ಈ ಕಗ್ಗಗಳು ಅಸಂಖ್ಯ ಮಂದಿಗೆ ಸಾಂತ್ವನ ನೀಡುತ್ತವೆ. “ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಕಂಡು , ಜೀವನದ ಸೊಬಗನ್ನು ಸವಿಯಬೇಕು” ಎಂದು ದಾರಿತೋರುವ ದಿವ್ಯಚೇತನ ನಮ್ಮ ಗುಂಡಪ್ಪನವರು. ಹೊಸ ಪೀಳಿಗೆಯ ಓದುಗರಿಗೆ ಡಿ.ವಿ.ಜಿ.ಯವರ ಕಗ್ಗಗಳ ಪರಿಚಯಿಸುವುದು ನನ್ನೀ ಬರಹಗಳ ಉದ್ದೇಶವಾಗಿದೆ. ಮುಕ್ತಕ- 239 ಸಮವಿಲ್ಲ ಸೃಷ್ಟಿಯಲಿ ನರನಂತೆ ನರನಿಲ್ಲ I ಕ್ಷಮೆಯುಮವಳೊಳಗಿಲ್ಲ , ಕರ್ಮದಂತೆ ಫಲII ಕ್ರಮವೊಂದ ನೀಮಾಗಿಸಿರಿ ನೋಳ್ಪೆನಾನೆನುತI ನಮಗವಳ್ ಪ್ರಸ್ಪರ್ಧಿ ಮಂಕುತಿಮ್ಮII ಭಾವಾರ್ಥ: ಈ ಸೃಷ್ಟಿಯನ್ನೊಮ್ಮೆ ಗಮನಿಸಿ. ಎಷ್ಟೊಂದು ಭಿನ್ನತೆಗಳಿವೆ ಇಲ್ಲಿ!! ಒಬ್ಬ ಮನುಷ್ಯನಂತೆ ಇನ್ನೊಬ್ಬನಿಲ್ಲ. ಪ್ರತಿಯೊಂದು ಪ್ರಾಣಿ, ಪಕ್ಷಿ, ವಸ್ತುವಿನ ರೂಪ, ಯೋಚನೆ, ಗುಣ ಸ್ವಭಾವ – ಇವೆಲ್ಲಾ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಅಸಮತೆ ಭಗವಂತನ ಲೀಲೆ! ‘ಏಕ’ನಾಗಿದ್ದ ಭಗವಂತನು ಪ್ರಾಣಿ, ಪಕ್ಷಿ , ಗಿಡಮರಗಳು ಹೀಗೆ ಎಲ್ಲದರ ರೂಪ ಪಡೆದು ‘ಅನೇಕ’ ನಾಗಿದ್ದಾನೆ. ಅವನದೇ ಆದ ನಿಯಮವನ್ನು ಅವನು ರೂಪಿಸಿಕೊಂಡಿದ್ದಾನೆ. ಪ್ರಕೃತಿಯ ಆ ನಿಯಮಗಳನ್ನು ನಾವು ಕಡ್ಡಾಯವಾಗಿ ಪಾಲಿಸಲೇ ಬೇಕು. ನಾವು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಕರ್ಮಫಲವನ್ನು ಅನುಭವಿಸಲೇ ಬೇಕು. ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಹೋದರೆ , ಪ್ರಕೃತಿಯೇ ನಮಗೆ ಬುದ್ದಿ ಕಲಿಸುತ್ತದೆ ಎನ್ನುವುದು ಈ ಮುಕ್ತಕದ ಆಶಯವಾಗಿದೆ. ಮುಕ್ತಕ – 241 ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು I ಅಸಮಂಜಸದಿ ಸಮನ್ವಯ ಸೂತ್ರನಯವ II ವೆಸನಮಯ ಸಂಸಾರದಲಿ ವಿನೋದವ ಕಾಣ್ಬ I ರಸಿಕತೆಯೇ ಯೋಗವೆಲೋ ಮಂಕುತಿಮ್ಮ II ಭಾವಾರ್ಥ: ಈ ಮುಕ್ತಕದಲ್ಲಿ ನಿಜವಾದ ಯೋಗಿ ಎಂದರೆ ಯಾರು ಎಂದು ಪೂಜ್ಯ ಗುಂಡಪ್ಪನವರು ತಿಳಿಸಿದ್ದಾರೆ. ಯೋಗಿಯಾಗಲು ಪಾಲಿಸಬೇಕಾದ ಆ ನಾಲ್ಕು ಯೋಗಗಳು ಹೀಗಿವೆ: ೧) ಮೊದಲನೆಯದಾಗಿ , ಅಸಮದಲಿ ಸಮತೆಯನು ಕಾಣುವುದು. ಭಗವಂತನ ಈ ಸೃಷ್ಟಿಯಲ್ಲಿ ಒಬ್ಬರಂತೆ ಇನ್ನೊಬ್ಬರಿಲ್ಲ . ಎಲ್ಲಾ ಮನುಷ್ಯರು, ಪ್ರಾಣಿ, ಪಕ್ಷಿ, ಹೂ, ಹಣ್ಣುಗಳು ಒಂದೇ ರೀತಿ ಇದ್ದಿದ್ದರೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಲು ನಮಗೆ ಸಾಧ್ಯವಾಗುತ್ತಿರಲಿಲ್ಲ. ಭಗವಂತನು ಸೃಷ್ಟಿಸಿದ ಈ ವೈವಿಧ್ಯತೆಯನ್ನು ಗೌರವಿಸಿ ಆನಂದಿಸಬೇಕು ಎನ್ನುವುದು ಇದರ ಅರ್ಥ. ೨) ಎರಡನೆಯದು, ವಿಷಮದಲಿ ಮೈತ್ರಿಯನು ಕಾಣುವುದು. ಅಂದರೆ ನಮ್ಮ ಶತ್ರುಗಳನ್ನು ಕೂಡ ದ್ವೇಷಿಸದೆ ಅವರನ್ನು ಸ್ನೇಹದಿಂದ ಕಾಣುವುದು. ೩) ಒಂದಕ್ಕೊಂದು ಹೊಂದಿಕೊಳ್ಳದ ವಿಷಯಗಳನ್ನು ತಮ್ಮ ಭಿನ್ನತೆ ಮರೆತು ಹೊಂದಿಕೊಂಡು ಹೋಗುವಂತೆ ಮಾಡುವುದು. ೪) ನಾಲ್ಕನೆಯದು: ನಮ್ಮ ಕಷ್ಟ ನೋವುಗಳನ್ನು ನಮ್ಮ ಮನಸ್ಸಿನಲ್ಲಿಯೇ ಇರಿಸಿ ಇತರರೊಂದಿಗೆ ನಗುನಗುತ್ತಾ ಬಾಳುವುದು. ಈ ನಾಲ್ಕು ಗುಣಗಳನ್ನು ಹೊಂದಿದವನೇ ನಿಜವಾದ ಯೋಗಿ. ಎಲ್ಲರಲ್ಲೂ , ಎಲ್ಲದರಲ್ಲೂ ಒಳ್ಳೆಯದನ್ನೇ ನೋಡುವ ಪ್ರಯತ್ನ ಮಾಡಬೇಕು ಎನ್ನುವುದು ಈ ಮುಕ್ತಕದ ಆಶಯ. **************************************** ವಾಣಿ ಸುರೇಶ್ ಕಾಮತ್ ವಾಣಿ ಸುರೇಶ್ ಕಾಮತ್ , ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಬೆಂಗಳೂರು ವಾಸಿ. ಓದು ಮತ್ತು ತೋಟಗಾರಿಕೆ ಇವರ ಹವ್ಯಾಸ.

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಂಕಣ ಬರಹ ನಾಗರಾಜ ಎಂ ಹುಡೇದ       ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಂಗೋಡ ಹುಟ್ಟೂರು. ಬಡತನದಲ್ಲಿ ಬೆಳೆದು, ಪರಿಶ್ರಮದಿಂದ ಶಿಕ್ಷಣವನ್ನು ಪಡೆದು ೨೦೦೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೈಲಂದೂರು ಗೌಳಿವಾಡದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹದಿನೇಳು ವರ್ಷಗಳಿಂದ ಅದೇ ಕುಗ್ರಾಮದಲ್ಲಿ ಅಚ್ಚುಮೆಚ್ಚಿನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಗುಣಮಟ್ಟದ ಉತ್ತಮ ಶಾಲೆಯನ್ನಾಗಿಸಿದ್ದಾರೆ.      ಬೋಧನೆಯನ್ನು ವೃತ್ತಿಯಾಗಿಸಿಕೊಂಡು ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ನಿರಂತರ ಅಭ್ಯಾಸ, ಸಾಹಿತ್ಯಿಕ ಕಾರ್ಯಕ್ರಮಗಳ ಸಂಘಟನೆ ಮಾಡುವ ಮೂಲಕ ಹಿಂದುಳಿದ ಪ್ರದೇಶದಲ್ಲಿಯೂ ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ್ದಾರೆ.     ಮಕ್ಕಳಿಗಾಗಿ ‘ಅರಳುವ ಮೊಗ್ಗು’ ದೈಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದಾರೆ. ಶಿಕ್ಷಕರ ತಂಡವನ್ನು ಕಟ್ಟಿಕೊಂಡು ಉತ್ಸವ, ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಹಲವಾರು ಸಂಘಟನೆಗಳ ಪದಾಧಿಕಾರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿ, ಪುರಸ್ಕಾರ: •          ವಾ.ಕ.ರ.ಸಾ ಸಂಸ್ಥೆ ಯಲ್ಲಾಪುರ ಘಟಕದ ಕನ್ನಡ ಕ್ರಿಯಾ ಸಮಿತಿಯವರ ಅಭಿನಂದನಾ ಸನ್ಮಾನ. •          ಉತ್ತರ ಕನ್ನಡ ಜಿಲ್ಲಾ ಕ.ಸಾ.ಪ ನೀಡುವ ‘ರಾಜ್ಯೋತ್ಸವ ಯುವ ಕೃತಿ’ ಪುರಸ್ಕಾರ. •          ಜಿಲ್ಲಾ, ರಾಜ್ಯಮಟ್ಟದ ಹಲವಾರು ಕವಿಗೋಷ್ಠಿ, ಕಾವ್ಯ ಕಮ್ಮಟಗಳಲ್ಲಿ ಭಾಗವಹಿಸಿ ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದಾರೆ. ಪ್ರಕಟಿತ ಕೃತಿಗಳು: •          ನಗುವ ತುಟಿಗಳಲ್ಲಿ – ಕವನ ಸಂಕಲನ •          ಸುವರ್ಣ ಜ್ಞಾನ – ಕರ್ನಾಟಕ ಸಂಬAಧಿತ ರಸಪ್ರಶ್ನೆಗಳು. •          ಕಿರುಗೊಂಚಲು – ಸಂಪಾದಿತ. •          ಸೇಡಿನ ಹುಲಿಗಳು – ಸಾಮಾಜಿಕ ನಾಟಕ. •          ಭರವಸೆ    – ಕವನ ಸಂಕಲನ. •          ಶಬ್ದಕೋಶ   – ಕನ್ನಡ, ಗೌಳಿ,ಇಂಗ್ಲೀಷ ಭಾಷೆಯಲ್ಲಿ. •          ಅವತಾರ್ ಮತ್ತು ಹಾರುವ ಕುದುರೆ – ಮಕ್ಕಳ ಕಥಾ ಸಂಕಲನ  ಈ ವಾರದ ಮುಖಾಮುಖಿಯಲ್ಲಿ ಶಿಕ್ಷಕ, ಕವಿ ನಾಗರಾಜ ಹುಡೇದ ಅವರನ್ನು ಮಾತಾಡಿಸಿದ್ದಾರೆ ನಾಗರಾಜ ಹರಪನಹಳ್ಳಿ ” ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು “             ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಮನದ ಭಾವನೆಗಳನ್ನು ಮಲ್ಲಿಗೆಯಾಗಿಸಿ ನನಗೆ ನಾನು ಹಗುರಾಗಲು ಬರೆಯುವುದು ಒಂದು ಕಾರಣವಾದರೆ, ಸಮಾಜದ ಸಂಕಟ, ಸಮಸ್ಯೆಗಳಿಗೆ ಸ್ಪಂಧಿಸುವ ಒಬ್ಬ ಜವಾಬ್ಧಾರಿಯುತ  ವ್ಯಕ್ತಿಯಾಗಿ ಕವನಗಳನ್ನು ಬರೆಯುತ್ತೇನೆ. ಕವಿತೆ ಹುಟ್ಟುವುದು ಯಾವಾಗ? ಯಾವುದೋ ಒಂದು ವಿಷಯ ಮನಸ್ಸಿಗೆ ತಾಗಿ ಸಂತೋಷ, ಸಂಕಟ, ದುಃಖ ದುಮ್ಮಾನ, ಪ್ರೀತಿ , ಪ್ರಕೃತಿ ಸೌಂದರ್ಯ ಮುಂತಾದ ವಿಷಯಗಳ ಮನಸ್ಸಿನಲ್ಲಿ ಒಂದು ರೀತಿಯ ತುಡಿತ ಹೆಚ್ಚಾಗಿ ಕವಿತೆ ಹುಟ್ಟುತ್ತದೆ. ಆ ಸಮಯದಲ್ಲಿ ಏಕಾಂತ ಮತ್ತು ಪ್ರಶಾಂತವಾದ ಸ್ಥಳ ಬೇಕೆನಿಸುತ್ತದೆ.             ನಿಮ್ಮ ಕವಿತೆಗಳಲ್ಲಿ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಪ್ರೀತಿ ಮತ್ತು ಪ್ರಕೃತಿ,  ಸೌಂದರ್ಯ ಗಳಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೇನೆ. ವಯೋ ಸಹಜವಾಗಿ ಮತ್ತು ಸರ್ವಕಾಲಕ್ಕೂ ಪ್ರೀತಿ- ಪ್ರೇಮ ಎವರ್ ಗ್ರೀನ್. ಈ ಮಲೆನಾಡಿನ ಮಳೆ – ಹಸಿರ ಕಾಡು ಹೆಚ್ಚು ಪ್ರಭಾವಿಸಿವೆ ಮತ್ತು ಕವನವಾಗಿವೆ. ದೇಶಪ್ರೇಮ, ನಾಡು-ನುಡಿ ಬಗ್ಗೆಯೂ ಅಗಾಧ ಪ್ರೀತಿ ಇದೆ.      ನಾನು ನಮ್ಮ ವ್ಯಕ್ತಿಗಳ ಸ್ವಭಾವಗಳನ್ನು ಬಹಳ ಕುತೂಹಲದಿಂದ ನೋಡುತ್ತೇನೆ. ಕೆಲವರಿಗೆ ನಿಜ-ಸುಳ್ಳುಗಳನ್ನು ನಿರ್ಧರಿಸುವಷ್ಟು ಬುದ್ಧಿವಂತರಿಲ್ಲದೆ ಇರೋದು. ದ್ವೇಷ , ಸ್ವಾರ್ಥ, ಭ್ರಷ್ಟಾಚಾರಗಳಂಥ ವಿಷಯಗಳು ಬಹಳ ಕಾಡುವಂತವುಗಳಾಗಿವೆ. ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಬಾಲ್ಯ ಎಲ್ಲರ ಜೀವನದಲ್ಲಿಯೂ ಬಹಳ ಪ್ರಭಾವ ಬೀರುವಂತದು. ಆ ಬಾಲ್ಯದ ಘಟನೆಗಳು ನೆನಪಾದಾಗ ಮತ್ತೆ ಮತ್ತೆ ಬಾಲ್ಯಕ್ಕೀಳಿಯುತ್ತೇವೆ. ಗೆಳೆಯರೆಲ್ಲ ಕೂಡಿ ಆಡಂಭರವಿಲ್ಲದ ಅಂದಿನ ಆಟಗಳು ಈಗಲೂ ನೆನಪಾಗುತ್ತವೆ. ನಾನು ಸಾಕಿದ್ದ ಪಾರಿವಾಳಗಳನ್ನು ಬೆಕ್ಕೊಂದು ಕದ್ದೊಯ್ದಿತ್ತು. ಆಗ ನಾನು ಅತ್ತಿದ್ದೇನೆ. ಅದೇ ಕವನವೂ ಆಯಿತು. “ಪ್ರೀತಿಯ ಹಕ್ಕಿ ನನ್ನೆದೆಯ ಕುಕ್ಕಿ ಅಳುತಿದೆ ಬಿಕ್ಕಿ.” ನಾನು ನನ್ನ ಗೆಳೆಯ ಸುಮ್ಮನೆ ಮಾತು ಬಿಟ್ಟಾಗಿನ ಸಂದರ್ಭವನ್ನು ಪಾಕಿಸ್ತಾನ ಮತ್ತು ಭಾರತದ ಬಾಂಧವ್ಯ ವೃದ್ಧಿಸುವಂತೆ ಬರೆದೆ. ಅದೊಂದು ಪ್ರಸಿದ್ಧ ಕವನವೂ ಆಯಿತು. ಬಾಲ್ಯದ ಕ್ಷಣಗಳನ್ನು ನೆನಪಿಸಿ ಅನೇಕ ಮಕ್ಕಳ ಕವನಗಳನ್ನೂ ರಚಿಸಿದ್ದೇನೆ. ಹರೆಯವಂತೂ ಕಲ್ಪನೆ, ಕನಸುಗಳಿಂದ ತುಂಬಿರುತ್ತದೆ. ಯಾವಾಗಬೇಕಾದರೂ ಕವನವಾಗಿ ಬಿಡುತ್ತೆ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು?  ಮಹಾಕವಿ ಪಂಪ ಅವರ ಹೇಳಿಕೆಯಂತೆ ‘ಮಾನವ ಕುಲಂ ತಾನೊಂದೇ ವಲಂ’ ಎಂಬ ನಿಲುವು ನನ್ನದು. ಅವರವರ ಧರ್ಮ, ದೇವರನ್ನು ಪೂಜಿಸಲು ಯಾರೂ ಯಾರ ಮೇಲೂ ಒತ್ತಡ ಹೇರಬಾರದು. ಒಬ್ಬರನ್ನೊಬ್ಬರು ಪ್ರೀತಿ ಗೌರವಿಸಬೇಕು. ಅದು ಎಲ್ಲ ಧರ್ಮ ,ಜಾತಿಗಳಿಂದಲೂ ಆಗಬೇಕು. ನಮ್ಮ ನಮ್ಮ ಜಾತಿ, ಧರ್ಮದಲ್ಲಿ ನಂಬಿಕೆ, ಅಭಿಮಾನವಿರಲಿ. ಅಂಧಾನುಕರಣೆ, ದುರಭಿಮಾನ ಬೇಡ ಎಂಬುದು ನನ್ನ ವಿಚಾರ. ದಯವೇ ಧರ್ಮದ ಮೂಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ? ಕಲೆ, ಸಾಹಿತ್ಯ, ಜನಪದ ಕಲೆಗಳು ಆಧುನಿಕ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ಬರುತ್ತಿರುವುದು ಖುಷಿಯ ವಿಚಾರ. ಅವಕಾಶಗಳು ಸಾಕಷ್ಟಿವೆ. ಭರಾಟೆಯ ಮಧ್ಯ ಜೊಳ್ಳು ಹೆಚ್ಚು ವಿಜೃಂಭಿಸುವ ಸಾಧ್ಯತೆಯಿದೆ. ಸತ್ವಯುತವಾದ ಸಾಹಿತ್ಯ, ಸಾಂಸ್ಕೃತಿಕ  ವಾತಾವರಣ ನಿರ್ಮಾಣವಾಗಬೇಕಿದೆ.           ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಪ್ರದೇಶವಾರು ಬೇಧಭಾವವನ್ನು ನಮ್ಮ ಸಾಹಿತಿಗಳು ಮಾಡತ್ತಾರೆ. ಮೊದಲು ನಮ್ಮ ಹಿರಿಯರು ನಾಡು-ನುಡಿ ಮೇಲಿನ ಅಭಿಮಾನದಿಂದ ಸಾಹಿತ್ಯ ರಚಿಸಿ ತಲೆಮೇಲೆ ಹೊತ್ತು ಮಾರುತ್ತಿದ್ದರು. ಸರ್ಕಾರಗಳು ಅನುದಾನ ನೀಡೊದು ಶುರುಮಾಡಿದಾಗಿನಿಂದ ಏನೂ ಗಂಧವಿಲ್ಲದವರು,  ರಾಜಕಾರಣ ಬಳಸಿ ಚುಕ್ಕಾಣಿ ಹಿಡಿಯಲಿಕ್ಕೆ ಬರುತ್ತಿದ್ದಾರೆ. ಅವರಿಗೆ ಸಾಹಿತ್ಯ ತಿಳಿದಿಲ್ಲ, ಸಾಹಿತಿಗಳ ಮೇಲಂತೂ ಗೌರವವೇ ಇಲ್ಲ. ಹಣ ಚೆಲ್ಲಿ ಹಣ ಮಾಡೋ ಕಾಯಕಕ್ಕಿಳಿದಿದ್ದಾರೆ. ಬಂಡಾಯ ಸಾಹಿತ್ಯ ಪ್ರಾರಂಭವಾದಾಗಿನಿಂದ ಎಲ್ಲ ಜನಾಂಗದವರಿಗೂ ಅವಕಾಶಗಳು ದೊರೆಯುತ್ತಿರುವುದು ಸಮಾಧಾನ ತಂದಿದೆ.         ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ದೇಶ ಅಂದ್ರೆ ನಾವೂ. ಪ್ರತಿಯೊಬ್ಬ ಪ್ರಜೆಯ ಮನಸ್ಥಿತಿಯೂ ಬದಲಾಗಬೇಕಿದೆ. ಪ್ರಾಮಾಣಿಕತೆ, ಮಾನವೀಯತೆಯತ್ತ ನಮ್ಮ ಮನಸ್ಸು ತುಡಿಯಬೇಕಿದೆ. ತುಳಿತಕ್ಕೊಳಗಾದ, ಹಿಂದುಳಿದವರನ್ನು ಮೇಲೆತ್ತುವ ಕಾರ್ಯಯೋಜನೆಗಳು ಜಾರಿಯಾಗಬೇಕಿದೆ.         ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಕನ್ನಡ ಹಾಗೂ ಆಂಗ್ಲಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು? ಸಾಹಿತ್ಯ ಪ್ರತಿ ಭಾಷೆಗೂ ಜೀವ ಇದ್ದಂತೆ. ಆ ಭಾಷೆಯ ಮೌಲ್ಯವು ಹೆಚ್ಚಾಗಬೇಕಾದರೆ ಭಾಷೆಯಲ್ಲಿ ವಿಭಿನ್ನ ಪ್ರಯೋಗವುಳ್ಳ ಸಾಹಿತ್ಯ ಕೃಷಿಯಾಗಬೇಕು. ನಮ್ಮ ಕನ್ನಡ ಭಾಷೆಯೂ ಸಹಿತ ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾಷೆಯಾಗಿದೆ. ಸಂಪದ್ಭರಿತವಾದ ಭಾಷೆಯಾಗಿರುವುದು ನಾವೆಲ್ಲ ಹೆಮ್ಮೆಪಡುವಂತೆ ಮಾಡಿದೆ. ಕನ್ನಡದಲ್ಲಿ ಕಾವ್ಯಕ್ಕೆ  ದ.ರಾ.ಬೇಂದ್ರೆಯವರು ನನ್ನಿಷ್ಟದ ಕವಿ. ಕಾವ್ಯವು ಎಷ್ಟು ಸಾರಿ ಓದಿದರೂ ಹೊಸ ಹೊಳಹನ್ನುಂಟು ಮಾಡುತ್ತದೆ. ಹಾಗೆಯೇ ಕುವೆಂಪು, ದಿನಕರ ದೇಸಾಯಿ, ಬರಗೂರು ರಾಮಚಂದ್ರಪ್ಪ ಅವರು ಇಷ್ಟವಾಗುತ್ತಾರೆ.          ಈಚೆಗೆ ಓದಿದ ಕೃತಿಗಳು ಯಾವುವು? ಗಂಗಾಧರ ನಾಯ್ಕ ಅವರ ‘ಡೋಂಟ್ ಗಿವ್ ಅಫ್ ಮುಂದಕ್ಕೆ ಸಾಗೋಣ’, ನಾಗರಾಜ ಹರಪನಹಳ್ಳಿಯವರ ‘ವಿರಹಿ ದಂಡೆ’, ಗಂಗಾಧರ ಎಸ್.ಎಲ್ ಅವರ ‘ನಮ್ಮ ಪಯಣ’ ನಿಮಗೆ ಇಷ್ಟವಾದ ಕೆಲಸ ಯಾವುದು? ಮಕ್ಕಳಿಗೆ ಪಾಠ ಹೇಳಿಕೊಡೋದು ನನಗೆ ಬಹಳ ಇಷ್ಟ. ನಿಮ್ಮ ಪ್ರೀತಿಯ , ತುಂಬಾ ಇಷ್ಟಪಡುವ ಸಿನೇಮಾ ಯಾವುದು? ನಾನು ವಿಷ್ಣುವರ್ಧನ್ ಅವರ ಅಭಿಮಾನಿ. ‘ಅವರ ಯಜಮಾನ’ ಸಿನೆಮಾ ನನಗೆ ಬಹಳ ಇಷ್ಟ. ನೀವು ಮರೆಯಲಾರದ ಘಟನೆ ಯಾವುದು? ಮರೆಯಲಾರದ ಅನೇಕ ಘಟನೆಗಳಿವೆ. ಅದರಲ್ಲಿ ಸಿಹಿ-ಕಹಿಗಳಿವೆ. ಬಡತನದಲ್ಲಿ ಬೆಳೆದು ಕವನ ಸಂಕಲನ ಬಿಡುಗಡೆಯ ಕ್ಷಣ. ರಾಜ್ಯಮಟ್ಟದ ಉತ್ತಮ ಪ್ರಶಸ್ತಿ ಪಡೆದು ನಮ್ಮ ಗೌಳಿವಾಡದ ಜನ ಸನ್ಮಾನಿಸಿದ್ದು, ಮತ್ತು ನನ್ನ ತಾಯಿ ತೀರಿಕೊಂಡಾಗಿನ ದುಃಖದ ಘಟನೆ ಮರೆಯಲಾಗದು.    ತೀರಾ ಕಡು ಬಡತನದಲ್ಲಿ ನಮ್ಮನ್ನು ಓದಿಸಿ ಬೆಳೆಸಿದ ನನ್ನ ತಂದೆ-ತಾಯಿಗಳನ್ನು, ನನ್ನ ಸಹೋದರರನ್ನು ಸ್ಮರಿಸುವೆ. ******************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

Read Post »

ಇತರೆ

ಪ್ರಶಸ್ತಿ ಘೋಷಣೆ

ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 ನೇ ಮಾಹೆಯಲ್ಲಿ ನಡೆಸುವುದಾಗಿ ಉತ್ತರ ಸಾಹಿತ್ಯ ವೇದಿಕೆಯ ರಂಜಾನ ಕಿಲ್ಲೆದಾರ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಘೋಷಣೆ Read Post »

ಕಾವ್ಯಯಾನ

ಕಾರ್ತಿಕದ ಮುಸ್ಸಂಜೆ

ಕವಿತೆ ಕಾರ್ತಿಕದ ಮುಸ್ಸಂಜೆ ಅಕ್ಷತಾ ರಾಜ್ ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳುಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು || ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ || ಹಾಡು ಕೂಜಣದ ಆ ದನಿಯ ಇಂಪಿನಲಿನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನುಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ || ಈ ಬೆಳಕು ಸಂಜೆಯಲಿ ಕಾಣದಿಹ ಇರುಳಿನಲಿಆ ಕನಸ ರಥವೊಂದು ಹೊರಟಿಹುದೆ ದಿಬ್ಬಣವುಬರೆದುಬಿಡು ಮೌನದಲಿ ಮುಚ್ಚಿಟ್ಟ ಭಾವವನುತಿರುವಿ ಓದುವೆನೊಮ್ಮೆ ಹಚ್ಚಿಟ್ಟ ಬೆಳಕಿನಲಿ || ***********************************

ಕಾರ್ತಿಕದ ಮುಸ್ಸಂಜೆ Read Post »

ಕಾವ್ಯಯಾನ

ನೇಗಿಲಿನ ಒಂದು ಸಾಲು

ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು. ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು. *****************************************

ನೇಗಿಲಿನ ಒಂದು ಸಾಲು Read Post »

You cannot copy content of this page

Scroll to Top