ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಶಸ್ತಿ ಘೋಷಣೆ

ಪ್ರಶಸ್ತಿ ಘೋಷಣೆ ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಪ್ರಶಸ್ತಿಗಳು ಉತ್ತರ ಸಾಹಿತ್ಯ ವೇದಿಕೆ ಶಿಗ್ಗಾಂವ ಇವರ ವತಿಯಿಂದ ಪ್ರತಿ ವರ್ಷ ಸಾಹಿತ್ಯ,ಶಿಕ್ಷಣ,ಸಮಾಜಸೇವೆಯಲ್ಲಿ ಸೇವೆ ಸಲ್ಲಿಸಿದ ನಾಡಿನ ಹಿರಿಯ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಿಕೊಂಡು ಬರಲಾಗುತ್ತಿದೆ 2019-20 ನೇ ಸಾಲಿನಲ್ಲಿಕನಕ ಶರೀಫ ಪುರಸ್ಕಾರ 1-ಬಿ.ಶ್ರೀನಿವಾಸ-2019 ದಾವಣಗೆರೆ2-ಅಲ್ಲಾಗಿರಿರಾಜ-2020 ಕೊಪ್ಪಳ ಡಾ.ಹಿರೇಮಲ್ಲೂರ ಈಶ್ವರನ್ ಶಿಕ್ಷಕ ಪುರಸ್ಕಾರ 1-ಡಾ.ವಾಯ್.ಎಂ.ಯಾಕೊಳ್ಳಿ-2019 ಬೆಳಗಾವಿ2-ಜಿ.ಎಸ್.ಬಿಜಾಪುರ-2020 ಬಾಗಲಕೋಟೆ ಡಾ.ಅರಟಾಳ ರುದ್ರಗೌಡರ ಸಾಮಾಜಿಕ ಸೇವಾ ಪುರಸ್ಕಾರ 1-ಡಾ.ಹನುಮಂತಪ್ಪ ಪಿ.ಎಚ್.2019 ಶಿಗ್ಗಾಂವ2-ಅಕ್ಷತಾ ಕೆ.ಸಿ.2020 ಹಾವೇರಿ. ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜನೇವರಿ 2021 ನೇ ಮಾಹೆಯಲ್ಲಿ ನಡೆಸುವುದಾಗಿ ಉತ್ತರ ಸಾಹಿತ್ಯ ವೇದಿಕೆಯ ರಂಜಾನ ಕಿಲ್ಲೆದಾರ ಅವರು ತಿಳಿಸಿದ್ದಾರೆ.

ಪ್ರಶಸ್ತಿ ಘೋಷಣೆ Read Post »

ಕಾವ್ಯಯಾನ

ಕಾರ್ತಿಕದ ಮುಸ್ಸಂಜೆ

ಕವಿತೆ ಕಾರ್ತಿಕದ ಮುಸ್ಸಂಜೆ ಅಕ್ಷತಾ ರಾಜ್ ಕಾರ್ತಿಕದ ಸಂಜೆಯಲಿ ಹಚ್ಚಿಟ್ಟ ದೀಪದಲಿನಿಂತಿದ್ದೆ ನೀ ಬಂದು ಬಾಗಿಲಿನ ಹೊಸಿಲಿನಲಿಬೀಸುಗಾಳಿಗೆ ಹೊನ್ನಬಣ್ಣದ ಮುಂಗುರುಳುಮೆಲ್ಲುಸಿರ ಲೇಖನಿಯಲಿ ಗೀಚಿತ್ತು ನಿನ್ನ ಹೆಸರು || ಕತ್ತಲೆಯು ಆವರಿಸೆ ಬೆಳಕ ದೀವಿಗೆ ಎಲ್ಲೋಅರೆಕ್ಷಣದ ಮಬ್ಬಿಗೆ ಮಂದಬೆಳಕಿನ ಛಾಯೆಬೆಳಕು ಹೊತ್ತಿಹ ತೇರು ಸಾಗುತಿಹ ಬೀದಿಯಲಿನೀನು ನಿಂತಿಹುದಹುದೇ ಮುಂದಿದ್ದ ಸಾಲಿನಲಿ || ಹಾಡು ಕೂಜಣದ ಆ ದನಿಯ ಇಂಪಿನಲಿನಿನ್ನ ಮಾತಿನ ಒನಪು ಒಲ್ಲೆನೆನ್ನಲೇ ನಾನುಇಂದೇಕೋ ಕಾಡುತಿಹ ರಾಗ ತಾಳದ ಮೈತ್ರಿಮುನಿಸ ಸರಿಸಿ ಒಂದಿನಿತು ಬಹುದೇ ಬಳಿಗೆ || ಈ ಬೆಳಕು ಸಂಜೆಯಲಿ ಕಾಣದಿಹ ಇರುಳಿನಲಿಆ ಕನಸ ರಥವೊಂದು ಹೊರಟಿಹುದೆ ದಿಬ್ಬಣವುಬರೆದುಬಿಡು ಮೌನದಲಿ ಮುಚ್ಚಿಟ್ಟ ಭಾವವನುತಿರುವಿ ಓದುವೆನೊಮ್ಮೆ ಹಚ್ಚಿಟ್ಟ ಬೆಳಕಿನಲಿ || ***********************************

ಕಾರ್ತಿಕದ ಮುಸ್ಸಂಜೆ Read Post »

ಕಾವ್ಯಯಾನ

ನೇಗಿಲಿನ ಒಂದು ಸಾಲು

ಕವಿತೆ ನೇಗಿಲಿನ ಒಂದು ಸಾಲು ವಿಠ್ಠಲ ದಳವಾಯಿ ಶತಮಾನಗಳ ಇತಿಹಾಸ ಹೊಸೆದಿದೆ ನೇಗಿಲಿನ ಒಂದು ಸಾಲುಆತುಮಗಳ ಆಲಿಂಗನ ಬೆಸೆದಿದೆ ನೇಗಿಲಿನ ಒಂದು ಸಾಲು ಜೀವಜಾತ್ರೆಯ ಜಾಡಿನಲಿ ಅಡಿಗಡಿಗೂ ಸವಾಲಿನ ಹೊನಲುಹೂವಕಂಪನೆ ಹರಡುತ ಸಾಗಿದೆ ನೇಗಿಲಿನ ಒಂದು ಸಾಲು. ಹರಕುವಸ್ತ್ರ, ಮುರುಕು ಗುಡಿಸಲು, ಹಸಿದ ತೊಟ್ಟಿಲುಜಗದ ಕಣ್ಣೀರಿಗೆ ಮರುಗಿದೆ ನೇಗಿಲಿನ ಒಂದು ಸಾಲು. ಬೆವರು, ನೆತ್ತರು ಬಿತ್ತಿ ಅನ್ನವನು ಉಣಿಸಿದೆ ಲೋಕದ ಹಸಿವಿಗೆ.ತಣ್ಣೀರುಪಟ್ಟಿ ಕಟ್ಟಿ ಮಲಗಿದೆ ನೇಗಿಲಿನ ಒಂದು ಸಾಲು. ಹೆದ್ದಾರಿಯ ಹಿರಿಯಾಸೆ, ಸುಂದರ ನಗರಿಯ ಕನಸಿಗೆಒದ್ದೆಮನದಲೆ ಕನಿಕರಿಸಿದೆ ನೇಗಿಲಿನ ಒಂದು ಸಾಲು. ಅನ್ನದ ಬಟ್ಟಲಿನಲಿ ಮಣ್ಣು ಸುರಿಯಬೇಡ ‘ದೊರೆ’ಮಣ್ಣು, ಅನ್ನ ಕೊಟ್ಟೇ ಸಾಗುತ್ತದೆ ನೇಗಿಲಿನ ಒಂದು ಸಾಲು. *****************************************

ನೇಗಿಲಿನ ಒಂದು ಸಾಲು Read Post »

ನಿಮ್ಮೊಂದಿಗೆ

ಗಜಲ್

ಗಜಲ್ ಸ್ಮಿತಾ ಭಟ್ ಬೇಕೋ ಬೇಡವೋ ಈ ಬದುಕನ್ನು ನಡೆದೇ ಮುಗಿಸಬೇಕಿದೆ.ಕಾಲದ ಕಡುದಾರಿಯ ಕಳವಳಿಸದೇ ಮುಗಿಸಬೇಕಿದೆ ಉಯ್ಯಾಲೆ ಕಟ್ಟಿದ ರೆಂಬೆಯ ಮೇಲೆ ಅದೆಷ್ಟು ನಂಬಿಕೆಎರಗುವ ನಸೀಬನ್ನು ಎದೆಗುಂದದೇ ಮುಗಿಸಬೇಕಿದೆ. ಸುತ್ತಿ ಬಳಸುವ ದಾರಿಯಲಿ ಕಾಲಕಸುವು ಕಳೆಯದೇ ಇರದುಸಿಗದ ನೂರು ಬಯಕೆ ಕನಸನು ಕೊರಗದೇ ಮುಗಿಸಬೇಕಿದೆ. ಮೋಡ ಎಲ್ಲವನ್ನೂ ಶೂನ್ಯಗೊಳಿಸುವುದು ಕೆಲವೊಮ್ಮೆಮೆತ್ತಿಕೊಳ್ಳುವ ನೋವನು ಅಳುಕದೇ ಮುಗಿಸಬೇಕಿದೆ. ಹಿಂತಿರುಗಿದಾಗ ಎಷ್ಟೊಂದು ಏರಿಳಿತಗಳು ಬದುಕಿಗೆಯಾವ ಕಹಿಯನೂ ಉಳಿಸಿಕೊಳ್ಳದೇ ಮುಗಿಸಬೇಕಿದೆ. ರೆಕ್ಕೆ ಕಟ್ಟಿಕೊಂಡಾಗ ಜಗವದೆಷ್ಟು ಸೋಜಿಗ “ಮಾಧವ”ಈ ಖುಷಿಗೆ ಯಾರ ಹಂಗು,ವಿಷಾದವಿರದೇ ಮುಗಿಸಬೇಕಿದೆ *******************************

ಗಜಲ್ Read Post »

ಕಾವ್ಯಯಾನ

ದೂರ ದೂರದತೀರ

ಕವಿತೆ ದೂರ ದೂರದತೀರ ಶಾಂತಲಾ ಮಧು ದೂರ ದೂರದ ತೀರತೀರದೀದೂರಹಾಲ ಬೆಳದಿಂಗಳುನಕ್ಷತ್ರದಾ ಸರತಬ್ಬಿಮುದ್ದಾಡಿದಾ ನೆಲಬರ ಸಿಡಿಲು ಗುಡುಗುಮಳೆ ಅಪ್ಪಳಸಿ ಆಲಂಗಿಸಿ…ನಲಿದು ಹರಿದಾಡಿ ನೆಲ ದೂರ ದೂರದ ತೀರತೀರದೀ ದೂರ ತೆಂಗು ಅಡಕೆ ಮರತಬ್ಬಿದಾ ಬಳ್ಳಿಗಳುಹೂವಾಗಿ ಹಣ್ಣು ಕಾಯಾಗಿಮಣ್ಣಿನವಾಸನೆಗೆಮರುಳಾಗಿ ಸುಕಿಸಿದಾ ನೆಲ ದೂರ ದೂರದ ತೀರತೀರದೀ ದೂರ ಹಸಿರಿನಂಗಳಕೆ ಅದೆಕನಸಿನ ಚಾವಡಿ ಹೊದೆಸಿಲಕ್ಷಣ ವಿತ್ತ ಮೂರ್ತಿಕೆತ್ತಿಟ್ಟು ಜೀವದಾಳದಪ್ರಿತಿ ಸಂಸ್ಕೃುತಿಯಬೆೇರನಾಳದಲಿಹೂತ್ತಿಟ್ಟ ಆ ನೆಲ ದೂರ ದೂರದ ತೀರತೀರದೀ ದೂರ ಗುಡ್ಡ ಬೆಟ್ಟದಸಾಲುಪಶು ಪಕ್ಷಿ ಇಂಚರಒಡನಾಟ, .ಹಳ್ಳ ಕೊಳ್ಳದ ಸ್ಪರ್ಷಜೀವ ಚೇತನವಾಗಿಪಾಠ ಕಲಿಸಿದ ನೆಲ ದೂರ ದೂರದ ತೀರತೀರದೀ ದೂರ ಹಸುಳೆಯಾಗಿಸಿಮತ್ತೆ ಸಿಹಿ ಕಹಿಯನೆನಪಿಸುತ ಜೀವ ನಾಡಿಯಮೀಟಿ ಮಯ್ ಮರೆಸುತಕತ್ತಲ ಕವಡೆ ಯಾಟದಲಿಸೋಲು ಗೆಲುವಲಿಮಿಂದೆಂದಾ ನೆಲ ದೂರ ದೂರದ ತೀರತೀರದೀ ದೂರ ಕಾನನದ ಕಪ್ಪೆಯಾಟದಕೊಳದಲ್ಲಿನೀರ ನೆರಿಗೆಯಲಿಪ್ರತಿಬಿಂಬ ಹೆಣೆದುದಿನಒಂದು ಕ್ಷಣವಾಗಿಕ್ಷಣಿಕತೆಯನೆ ಮರೆತ ನೆಲ ದೂರ ದೂರದ ತೀರತೀರದೀ ದೂರ ಸಂಭ್ರಮದ ಕಡಲಲ್ಲಿನೆನಪ ದೋಣಿಯ ನಡೆಸಿಅಲೆಯ ಏರಿಳಿತಕೆಚೀರಿ ಚೀತ್ಕರಿಸಿನೀರ ದಾರಿಯಲಲ್ಲಲ್ಲಿಪ್ರತಿಬಿಂಬ ಹುಡುಕಿತಡಕಾಡಿ ದಾ ನೆಲ ದೂರ ದೂರದ ತೀರತೀರದೀ ದೂರ ಅವಳ ಮಾಸಿದಸೆರಗುಬಿದ್ದಿಹುದು ನೆಲದಲ್ಲಿಕೆಂಪು ಮಣ್ಣನು ತಬ್ಬಿಅಲ್ಲಿ ಮಾಗಿದ ಪ್ರೀತಿಹಸಿರಿನ ಹುಲ್ಲುಅವಳುಸಿರ ಬಸಿರನಲೆಯನೆಲ ದೂರ ದೂರದ ತೀರತೀರದೀ ದೂರ ***********************

ದೂರ ದೂರದತೀರ Read Post »

ಇತರೆ, ಲಹರಿ

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು. ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್‌.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.) ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ. ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್‌ಮಾನ್‌ಸೆ ಕ್ಯಾ ಆಪ್‌ಕೊ ಅಲ್ಲಾತಾಲಾ ನೆ ಜವಾಬ್‌ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು. ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು. ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು. ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು. ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’ ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು. ‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ. ‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’. ‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’ ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್‌ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು. ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ. ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ. ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ. ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ. ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ. ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ. ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ. ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..! …*******************************************************

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಕರುಳು ಹಿಂಡುವ ಬಡಪಾಯಿಯೊಬ್ಬನ ಕರುಣ ಕಥೆ ‘ಆಡು ಜೀವನ’ ‘ಆಡು ಜೀವನ’ಮೂಲ : ಬೆನ್ಯಾಮಿನ್ಕನ್ನಡಕ್ಕೆ : ಡಾ.ಅಶೋಕ ಕುಮಾರ್ಪ್ರಕಾಶಕರು : ಹೇಮಂತ ಸಾಹಿತ್ಯಪ್ರಕಟಣೆಯ ವರ್ಷ: ೨೦೧೨ಬೆಲೆ : ರೂ.೧೦೦ಪುಟಗಳು : ೧೮೪ ಬಡತನದ ಬೇಗೆಯನ್ನು ತಾಳಲಾರದೆ ಉತ್ತಮ ಭವಿಷ್ಯದ ಕನಸು ಕಾಣುತ್ತ ಕೊಲ್ಲಿ ರಾಷ್ಟçಕ್ಕೆ ಹೋಗಿ ಅಲ್ಲೂ  ದುರಾದೃಷ್ಟದ ಅನಿರೀಕ್ಷಿತ ಹೊಡೆತದಿಂದ ಅಸಹನೀಯ ವೇದನೆಯನ್ನನುಭವಿಸಿದ ಬಡಪಾಯಿಯ ಕರುಣ ಕತೆ ‘ಆಡು ಜೀವನ’. ಅಶಿಕ್ಷಿತನಾದ ಆತನ ಬಾಯಿಯಿಂದ ಕೇಳಿದ ಕತೆಗೆ ಲೇಖಕ ಬೆನ್ಯಾಮಿನ್ ಅವರು ಕಾದಂಬರಿಯ ರೂಪ ಕೊಟ್ಟಿದ್ದಾರೆ. ಈ ಕಾದಂಬರಿಯು ಬೆನ್ಯಾಮಿನ್ ಅವರಿಗೆ ಅಪಾರ ಜನಪ್ರಿಯತೆ – ಕೀರ್ತಿಗಳನ್ನು ತಂದು ಕೊಟ್ಟಿದೆ.  ಕೇರಳದಲ್ಲಿ ಮರಳುಗಾರಿಕೆಯ ಕಾರ‍್ಮಿಕನಾಗಿ ದುಡಿಯುತ್ತಿದ್ದ ನಜೀಬ್ ಎಂಬ ಬಡ ಯುವಕ, ತನ್ನ ಸ್ನೇಹಿತನ ಸಂಬಂಧಿಯ ಮೂಲಕ ಸಿಕ್ಕಿದ ವೀಸಾದ ಸಹಾಯದಿಂದ ಸಂಪಾದನೆ ಮಾಡುವ ಕನಸು ಕಾಣುತ್ತ ಸೌದಿ ಅರೇಬಿಯಕ್ಕೆ ಹೊಗುತ್ತಾನೆ.  ಅವನ ಜತೆಗೆ ಅಲ್ಲಿಗೆ ಹೋಗಲು ಆಗಲೇ ವೀಸಾ ಪಡೆದುಕೊಂಡಿದ್ದ ಹಕೀಮ್ ಎಂಬ ಜತೆಗಾರನೂ ಸಿಗುತ್ತಾನೆ.  ರಿಯಾದ್‌ನಲ್ಲಿ ವಿಮಾನದಿಂದಿಳಿದ ಅವರಿಬ್ಬರೂ ವಿಮಾನ ನಿಲ್ದಾಣದಲ್ಲಿ ಯಾರಿಗಾಗಿಯೋ ಕಾಯುತ್ತಿರುವಂತೆ ಕಂಡ ಅರಬಿಯನ್ನು ಕಂಡು ಆತನೇ ತಮ್ಮನ್ನು ಸ್ಪಾನ್ಸರ್ ಮಾಡಿದ ವ್ಯಕ್ತಿಯೆಂದು ತಪ್ಪಾಗಿ ತಿಳಿಯುತ್ತಾರೆ. ಭಾಷೆ ಗೊತ್ತಿಲ್ಲದ್ದರಿಂದ ಸಂವಹನ ಮಾಡಲಾಗದೆ ಇಬ್ಬರೂ ಆ ಅರಾಬ್ ( ಸಾಹುಕಾರ) ಜತೆಗೆ ಹೋಗಿಯೇ ಬಿಡುತ್ತಾರೆ. ಆದರೆ ಅವರು ಹೋಗಿ ತಲುಪಿದ್ದು ಎರಡು ಭಿನ್ನ ‘ಮಸ್ರಾ’( ತೋಟ) ಗಳಿಗಾಗಿತ್ತು.  ತೀರಾ ದುರ್ಗಂಧಗಳಿಂದ ತುಂಬಿದ್ದ ಕೊಳಕು ಪರಿಸರದಲ್ಲಿ ಅವರಿಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ಆಡುಗಳನ್ನೂ ಒಂಟೆಗಳನ್ನೂ ನೋಡಿಕೊಳ್ಳುವ ಕೆಲಸ ಮಾಡ ಬೇಕಾಗಿತ್ತು. ಕ್ರೂರ ಅರಬಾಬ್ ಅವರನ್ನು ಕತ್ತೆಗಳಂತೆ ದುಡಿಸಿಕೊಂಡು, ವಿರೋಧಿಸಿದರೆ ಹೊಡೆದು ಬಡಿದು ಮಾಡಿ ಶೋಷಿಸುತ್ತಾನೆ. ನಜೀಬ್ ಅಲ್ಲಿಗೆ ಹೋದಾಗ ಅಲ್ಲಿ ಇನ್ನೊಬ್ಬ ಕೆಲಸಗಾರನೂ ಇದ್ದ.  ವರ್ಷಗಟ್ಟಲೆ ಧೀರ್ಘ ಕಾಲದ ಗುಲಾಮಗಿರಿಯು ಅವನನ್ನು ಒಂದು ಭೀಕರ ರೂಪಿಯನ್ನಾಗಿ ಮಾಡಿತ್ತು.  ನಜೀಬ್ ಬಂದು ಕೆಲವು ಕಾಲವಾದ ನಂತರ  ಅವನು ಕಾಣದಾದ.  ಮುಂದೆ ಮಸ್ರಾದ ಎಲ್ಲ ಕೆಲಸಗಳೂ ನಜೀಬ್‌ನ ಮೇಲೆ ಬಿದ್ದವು. ಭಾಷೆಯೂ ಗೊತ್ತಿಲ್ಲದೆ ಅವನು ಏಕಾಂಗಿಯಾಗಿ ದಿನಗಳನ್ನು ಕಷ್ಟದಿಂದ ಕಳೆಯುತ್ತಾನೆ.  ಹಸಿಹಾಲು ಮತ್ತು ಕುಬೂಸ್ ಅನ್ನುವ ಅರಬಿ ರೊಟ್ಟಿಯೂ ಸ್ವಲ್ಪವೇ ಸ್ವಲ್ಪ ನೀರೂ ಆಗಿದ್ದವು ಅವನಿಗೆ ಸಿಕ್ಕುತ್ತಿದ್ದ ಆಹಾರ.. ವಾಸಿಸಲು ಕೋಣೆಯಾಗಲಿ, ಸ್ನಾನಕ್ಕಾಗಲಿ, ಬದಲಿಸಲು ಬಟ್ಟೆಯಾಗಲಿ ಏನೂ ಸಿಗದ ಪರಿಸ್ಥಿತಿಯಲ್ಲಿ ಅವನ ಸ್ಥಿತಿ ಮೃಗಗಳಿಗಿಂತ ಕಡೆಯಾಗಿತ್ತು.  ಹೆಚ್ಚು ದೂರವಿಲ್ಲದ ಇನ್ನೊಂದು ಮಸ್ರಾದಲ್ಲಿ  ಅಂಥದೇ ಸ್ಥಿತಿಯಲ್ಲಿದ್ದ ಹಕೀಮನನ್ನು ನಜೀಬ್ ಕೆಲವೊಮ್ಮೆ ಭೇಟಿಯಾಗಲು ಹೋಗುವುದನ್ನು ಅರಬಾಬ್ ಯಾವಾಗಲೂ ತಡೆಯುತ್ತಿದ್ದ.   ಆಡುಗಳಿಗೆ ಊರಿನ ಕಥಾಪಾತ್ರಗಳನ್ನೂ ತನ್ನವರ ಹೆಸರುಗಳನ್ನೂ ಇಟ್ಟು ಅವುಗಳೊಂದಿಗೆ ಮಾತನಾಡುತ್ತ ನಜೀಬ್ ತನ್ನ ಒಂಟಿತನದ ನೋವಿಗೆ ಸಮಾಧಾನ ಹೇಳಿಕೊಳ್ಳುತ್ತಾನೆ.  ಈ ನಡುವೆ ಹಕೀಮ್ ಕೆಲಸ ಮಾಡುತ್ತಿದ್ದ ಮಸ್ರಾದಲ್ಲಿ ಇಬ್ರಾಹಿಮ್ ಖಾದರಿ ಎಂಬ ಸೋಮಾಲಿಯದ ಒಬ್ಬ ಪ್ರಜೆ ಕೂಡಾ ಕೆಲಸಕ್ಕೆ ಸೇರುತ್ತಾನೆ.  ಹೇಗಾದರೂ ತಪ್ಪಿಸಿಕೊಂಡು ಹೋಗಬೇಕೆಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದ  ಹಕೀಮ್ , ಖಾದರಿ ಮತ್ತು ನಜೀಬರಿಗೆ ಒಂದು ಸಣ್ಣ ಸಂಧರ‍್ಭವೊದಗಿ ಬರುತ್ತದೆ. ಮಸ್ರಾದ ಅರಬಾಬ್ ತನ್ನ ಸಂಬಂಧಿಕರ ಮಗಳ ಮದುವೆಯ ಕೆಲಸಗಳಿಗೆ ಹೋಗುತ್ತಿದ್ದ ಅವಕಾಶವನ್ನು ಬಳಸಿಕೊಂಡು ಅವರು ತಪ್ಪಿಸಿಕೊಂಡು ಓಡತೊಡಗುತ್ತಾರೆ.  ಮರುಭೂಮಿಯಲ್ಲಿ ಧೀರ್ಘ ದೂರದ ತನಕ ಓಡಿ ಓಡಿ, ಹಸಿವು ನೀರಡಿಕೆಗಳಿಂದ ಹೈರಾಣಾದ ಅವರಿಗೆ ಒಂದೆಡೆ  ದಾರಿಯೂ ತಪ್ಪಿ ಹೋಗುತ್ತದೆ.   ಓಟದ ನಡುವೆ ಹಕೀಮ್ ದಾಹ ತಡೆಯಲಾರದೆ ಸಾಯುತ್ತಾನೆ. ಮುಂದೆ ಖಾದರ್-ನಜೀಬರಿಗೆ ಒಂದು ಓಯಸಿಸ್ ಕಾಣಸಿಕ್ಕಿ  ಅಲ್ಲಿ ದಾಹ ತೀರಿಸಿಕೊಂಡು ಅವರು ಓಟ ಮುಂದುವರೆಸುತ್ತಾರೆ.  ಕೊನೆಗೆ ಒಂದು ಹೈವೇಗೆ ಬಂದು ತಲುಪುವಷ್ಟರಲ್ಲಿ ಇಬ್ರಾಹಿಮ್ ಕೂಡಾ ಕಾಣೆಯಾಗಿರುತ್ತಾನೆ. ಹೈವೇಯಲ್ಲಿ ಒಬ್ಬ ಸಭ್ಯ ಅರಬಿ ನಜೀಬ್‌ನನ್ನು ತನ್ನ ಕಾರಿನಲ್ಲಿ ಹತ್ತಿಸಿಕೊಂಡು ಮುಂದಿನ ಪಟ್ಟಣವಾದ ರಿಯಾದ್‌ನ ಬತ್‌ಹಕ್ಕೆ ತಲುಪಿಸುತ್ತಾನೆ.  ಬತ್‌ಹ ತಲುಪಿದ ನಜೀಬ್ ಕುಞಕ್ಕ ಎಂಬವನಲ್ಲಿ  ಚಾಕರಿಗೆ ನಿಂತು ಧೀರ್ಘ ಕಾಲದ ಬಳಿಕ ತನ್ನ ಹಿಂದಿನ ಮನುಷ್ಯರೂಪ ಮತ್ತು ಆರೋಗ್ಯವನ್ನು ಮರಳಿ ಪಡೆಯುತ್ತಾನೆ. ಊರಿಗೆ ಹಿಂದಿರುಗಲು ಪೋಲಿಸರಿಗೆ ವಿಷಯ ತಿಳಿಸಲಾಗುತ್ತದೆ. ಹಾಗೆ ಷುಮೇಸಿಯ ಸೆರೆಮನೆಯಲ್ಲಿ ಕೆಲವು ತಿಂಗಳುಗಳು ಕಳೆದ ನಂತರ ಒಂದು ದಿನ ನಜೀಬನ ಅರಬಾಬ್ ಕಳೆದು  ಹೋದ ತನ್ನ ಗುಲಾಮರನ್ನು ಅರಸಿಕೊಂಡು ಬರುತ್ತಾನಾದರೂ ನಜೀಬನನ್ನು ಹಿಡಿದೊಯ್ಯುವುದಿಲ್ಲ, ಯಾಕೆಂದರೆ ಅವನ ವೀಸಾದಲ್ಲಿದ್ದ ವ್ಯಕ್ತಿ ನಜೀಬ್ ಆಗಿರಲಿಲ್ಲ. ಮುಂದೆ ಭಾರತೀಯ ದೂತಾವಾಸವು ಕೊಟ್ಟ ಔಟ್ ಪಾಸಿನ ಮೂಲಕ ನಜೀಬ ಊರಿಗೆ ತಲುಪುತ್ತಾನೆ. ವ್ಯಕ್ತಿಯೊಬ್ಬನ ನಿಜ ಅನುಭವವನ್ನು ಆಧರಿಸಿ ಬರೆದದ್ದಾದರೂ ಇದು ಬರೇ ಒಂದು ಜೀವನ ಕಥೆಯಲ್ಲ. ಕಾದಂಬರಿಯ ನಜೀಬ ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕನ್ನು ಮುಂದುವರಿಸಬೇಕೆಂಬ ಇಚ್ಛಾಶಕ್ತಿ ಇದ್ದವನಾಗಿದ್ದರೆ  ನಿಜ ಬದುಕಿನ ನಜೀಬ್ ಮರುಭೂಮಿಯಲ್ಲಿದ್ದಾಗ  ಹಲವು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದವನೇ ಆಗಿದ್ದ.   ಬದುಕಿನ ಬಗ್ಗೆ ಜುಗುಪ್ಸೆ ಹೊಂದಿದ್ದ. ರಿಯಾದಿನಲ್ಲಿ ಕಾಲೂರಿದ ದಿವಸದಿಂದ ಕಾದಂಬರಿಯಲ್ಲಿ ನಮೂದಿಸಿರುವ ೧೯೯೨ ಏಪ್ರಿಲ್ ೪ರಂದೇ ತಾನು ಅಲ್ಲಿಗೆ ಹೋಗಿ ತನ್ನ ವಲಸೆ ಬದುಕನ್ನು ಆರಂಭಿಸಿದ್ದೆಂದೂ ಲೇಖಕರು ಹೇಳುತ್ತಾರೆ. ಸೊಗಸಾದ ನಿರೂಪಣೆ,  ಓದುಗರ ಕಣ್ಣುಗಳನ್ನು ಹನಿಗೂಡಿಸುವ ಸಂಕಟ ಮತ್ತು ಸಂಕಷ್ಟಗಳ ವಿವರಗಳು, ಅನುಭವ ಸಾಂದ್ರವಾದ ಕಥಾವಸ್ತು, ತನಿಮಲೆಯಾಳದ ಸೊಗಡುಗಳು ಮೇಳೈಸಿ ನಿಂತ ಕಾದಂಬರಿ ಇದು. ಡಾ.ಅಶೋಕ ಕುಮಾರ್ ಅವರ ಅನುವಾದ ಮೂಲಕ್ಕೆ ನಿಷ್ಠವಾಗಿದೆ. ******************************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top