ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಾರುವೇಷ

ಕವಿತೆ ಮಾರುವೇಷ ಪ್ರೊ.  ಚಂದ್ರಶೇಖರ ಹೆಗಡೆ ಪಾತಾಳದಿಂದೆದ್ದು ಭೋಂಕನೆಬೇಟೆಯಾಡುವ ವಿಧಿಯೇಶ್ವಾನದಲ್ಲಡಗಿ ಹೊಟ್ಟೆ ಹೊರೆವಹಂಗಿನರಮನೆಯ ವಾಸವೇಕೆ ?ವಾಹನದೊಳಗಿಳಿದು ಬಲಿ ಬೇಡುವಭಿಕ್ಷಾಟನೆಯ ಡಾಂಭಿಕತೆಯೇಕೆ ?ಹೃದಯದೊಳಪೊಕ್ಕು ನಿಲ್ಲಿಸುವಮೋಸದ ಮಾರುವೇಷವೇಕೆ ? ಹೊರಬಂದು ಎದುರಾಗಿಬಿಡು ಒಮ್ಮೆನಿಜರೂಪ ಸತ್ಯ ನಾಮವ ತಳೆದುಕಣ್ತುಂಬಿಕೊಳ್ಳಲಿ ಜಗವು ಮೊರೆದುಪ್ರಾರ್ಥಿಸಿದಣಿವಿಲ್ಲದ ಕಾಯಕಕೆ ಶರಣುಶರಣೆಂದೆನುತ!ಎದೆಯೊಳಗಿನ ದಯೆ ಕರುಣೆಗಳಹುಡುಕಿ ಕೊರಗುತ ಯಾರಿಗೂ ಜಗ್ಗದ ಭೀಮಬಲವೆಲ್ಲಿಯದು ?ವಶ ಮಾಡಿಕೊಳ್ಳುವ ಅವಲೋಕಿನಿಯೆಲ್ಲಿಯದು ?ಬಿಡುವ ಬಾಣದ ತುದಿಗೆಎಂದೂ ನೀಗದ ಹಸಿವಿನೊಡಲುಎಲ್ಲಿ ಬರಿದಾಗುವುದೋ ಇಂದುಯಾವ ತಾಯಿಯ ಮಡಿಲು ಪಯಣ ಹೊರಟವರ ಮನದಲ್ಲೊಂದುನಿತ್ಯ ಅಳುಕುಯಾರಿಗೆ ಗೊತ್ತು ನಿನ್ನೊಳಗಿನವಂಚನೆಯ ಹುಳುಕುಕಾಣದ ಲೋಕದೊಳಗೇಕೆ ಬಯಲಾಟತೊರೆದುಬಿಡಬಾರದೇ ಹೇಗಾದರೂಕೊಂಡೊಯ್ಯುವೆನೆಂಬ ಹಠ ಜೀವನ ಪ್ರೀತಿಯೊಂದಿಗೆ ನಿನ್ನದೆಂದಿಗೂ ವ್ಯರ್ಥ ಕದನಅಸುರರೆಂಬುವರಿಲ್ಲ; ಕಾಣುವುದೆಲ್ಲೆಡೆಗೆನಿನ್ನದೇ ಅಟ್ಟಹಾಸದ ವದನಲೋಕವೆಲ್ಲವೂ ವಿರೋಧಿ ಬಣಹೀಗಳೆಯಬಾರದೆಂದರೂ ನಿನ್ನಬಿಡದು ಹೆಣೆದ ಚಕ್ರವ್ಯೂಹದ ದರ್ಶನ ************************

ಮಾರುವೇಷ Read Post »

ಕಾವ್ಯಯಾನ

ಶಾಯರಿ

ಶಾಯರಿ ಭಾರತಿ ರವೀಂದ್ರ ಕಾಡಿಗೆ ಕಣ್ಣುಗಳನ್ನಮುದ್ದಿಸಲಿ ಹ್ಯಾಗೆ ಹೇಳು, ನನ್ನೊಡತಿಕರಿ ಮೋಡ ಕೋಪಿಸಿಕೊಂಡುಸುರದಾವ ಪ್ರವಾಹ ಬಂದಾಂಗ. ಬಂದರ ಬರಲೇಳುಸಾವಿರ ಸಂಕಟಗಳಸುರಿ ಮಳಿನಿನ್ನ ಪಿರೂತಿ ಸಾಥ್ಇರುವಾಗ ನಂಗ್ಯಾಕೆ ಭೀತಿ ******************************************

ಶಾಯರಿ Read Post »

ವಾರದ ಕತೆ

ಸ್ನೇಹ

ವಾರದ ಕಥೆ ಸ್ನೇಹ ಜ್ಯೋತಿ ಡಿ ಭೊಮ್ಮಾ ಮದುವೆಯಾಗಿ ಮುವತೈದು ವಸಂತಗಳನ್ನು ಜೊತೆಯಲ್ಲಿ ಕಳೆದ ನಿರ್ಮಲಾ ಮತ್ತು ಮೂರ್ತಿ ದಂಪತಿಗಳಿಗೆ ಈಗ ಬದುಕಿನ ಎಲ್ಲಾ ಜವಾಬ್ದಾರಿ ಮುಗಿಸಿ ನಿರಮ್ಮಳವಾಗಿ ಬದುಕು ಸಾಗಿಸುವ ಸಮಯ.ಮಗನ ಮತ್ತು ಮಗಳ ಮದುವೆ ಮಾಡಿ ಅವರನ್ನು ಒಂದು ದಡಕ್ಕೆಸೇರಿಸಬೇಕಾದರೆ ಜೀವನದ ಸಮಯವೆಲ್ಲ ಮುಡುಪಾಗಿಡಬೇಕಾಯಿತು. ಈಗ ನಿವೃತ್ತಿ ಜೀವನ ನಡೆಸುತ್ತಿರುವ ಅವರಿಗೆ ಎಲ್ಲವೂ ಒಮ್ಮೆಲೆ ಖಾಲಿಯಾದ ಅನುಭವ,ಯಾವದರಲ್ಲೂ ಉತ್ಸಾಹವಿಲ್ಲ.ಇಷ್ಟು ದಿನ ನೌಕರಿ ಹಣಗಳಿಕೆ ಪ್ರತಿಷ್ಠೆ ಮಕ್ಕಳ ವಿದ್ಯಾಭ್ಯಾಸ ಮದುವೆಗಳ ಜವಾಬ್ದಾರಿಗಳೆಲ್ಲ ಒಂದೋಂದಾಗಿ ಮುಗಿಯುತ್ತಿದ್ದಂತೆ ಜೀವನದಲ್ಲಿ ನಿರಾಶೆ ಕಾಡತೊಡಗಿತು.ಸಮಕಾಲಿನ ಗೆಳೆಯರಿದ್ದರು ಎಲ್ಲರೂ ಸಮಯ ಮತ್ತು ವಯಸ್ಸಿನ ಹೊಡೆತಕ್ಕೆ ಸಿಲುಕಿದವರೆ ಹೆಚ್ಚು ಕಡಿಮೆ ಎಲ್ಲರ ಪರಿಸ್ಥಿತಿಯು ಇದೆ. ಆದರೆ ನಿರ್ಮಲಾರ ವಿಷಯ ಹಾಗಲ್ಲ ಅವಳು ಯಾವಾಗಲೂ ಚೈತನ್ಯದ ಚಿಲುಮೆಯೆ.ಮಕ್ಕಳು ದೂರ ಇದ್ದರೂ ಕೊರಗದೆ ತನಗಾಗೆ ದೊರೆತ ಸಮಯವನ್ನು ಆನಂದದಿಂದ ಕಳೆಯುವರು.ಇಬ್ಬರೆ ಇರುವ ಮನೆಯಲ್ಲೂ ಕೆಲಸಗಳಿಗೆನು ಕೊರತೆಯೆ ,ಕಸ ಮುಸುರೆ ಪೂಜೆ ಹಬ್ಬಗಳು ವ್ರತ ,ಕಾಲೋನಿಯ ಗೆಳತಿಯರೊಂದಿಗೆ ಕಿಇಟಿ ಪಾರ್ಟಿ ಗಳಲ್ಲೆ ಕಾಲದ ಪರಿವಿಲ್ಲದೆ ಬದುಕುವವರು.ಅವರದು ಉತ್ಸಾಹ ಭರಿತ ಜೀವನ.ಚೈತನ್ಯದ ಇನ್ನೊಂದು ಹೆಸರೆ ಹೆಣ್ಣಲ್ಲವೆ.ಇತ್ತೀಚೆಗೆ ಪತಿ ಮಂಕಾಗುತ್ತಿರುವದನ್ನ ಗಮನಿಸಿದ ನಿರ್ಮಲಾ ,ಅವರನ್ನೂ ಚೇತೋಹಾರಿಯನ್ನಾಗಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೆ ಇದ್ದರು .ಯೌವನದಲ್ಲಿ ಅವರ ರಸಿಕತೆಯ ಅನುಭವವಿದ್ದ ನಿರ್ಮಲಾಗೆ ಪತಿ ಈಗ ಮಂಕಾಗಿರುವದು ಸಹಿಸಲಾಗುತ್ತಿಲ್ಲ. ಒಂದು ದಿನ ಬೆಳಗಿನ ವಾಯುವಿಹಾರ ಮುಗಿಸಿ ಮನೆಗೆ ಬಂದ ದಂಪತಿಗಳಿಗೆ ಮೂರ್ತಿಯ ಮೊಬೈಲ್ ಕರೆ ಬರಮಾಡಿಕೊಂಡಿತು.ಒಳಗಿನ ಫೋನ್ ತಂದು ಪತಿಗೆ ಕೊಟ್ಟ ನಿರ್ಮಾಲರು ಒಳಗಿನ ಉಳಿದ ಕೆಲಸಗಳ ಕಡೆ ಗಮನ ಹರಿಸಿದರು.ಮೊಬೈಲ್ ಮೇಲಿನ ಅನ್ ನೋನ್ ನಂಬರ್ ನೋಡಿ ಹಲೋ ಎಂದ ಮೂರ್ತಿಯವರಿಗೆ ಆ ಕಡೆಯಿಂದ ಹಲೋ ಎಂಬ ಹೆಣ್ಣಿನ ದನಿ ಕೇಳಿಸಿತು. ಗುರುತು ಸಿಗದೆ ಯಾರು..! ಎಂಬ ದನಿಗೆ ಆ ಕಡೆಯಿಂದ ಮೌನವೆ ಉತ್ತರವಾಯಿತು.ಕೇಳಿಸಲಿಕ್ಕಿಲ್ಲ ಎಂದು ಮೂರ್ತಿ ಯವರು ಯಾರು ಎಂದು ಜೋರಾಗಿ ಕೇಳಿದರು. ನಾನು ರೇವತಿ.  ಯಾರು ಎಂಬುದು ನೆನಪಿಗೆ ಬಾರದೆ ಮೂರ್ತಿ ಕ್ಷಣಕಾಲ ಮೌನವಾದರು.ಮತ್ತೆ ಅತ್ತಲಿಂದ ದ್ವನಿ ,ನೆನಪಾಗಲಿಲ್ಲವೆ..ಇಲ್ವಲ್ಲ , ಆ ಹೆಸರಿನವರಾರು ನೆನಪಿಗೆ ಬರುತ್ತಿಲ್ಲ ಎಂಬ ಮೂರ್ತಿ ಯ ಉತ್ತರಕ್ಕೆ ಅತ್ತಲಿಂದ ನಿಟ್ಟುಸಿರೆ ದ್ವನಿಯಾಯುತು.ಸ್ನೇಹ ಚಿರಾಯು ಅಲ್ವೆ ,ಮರೆಯುವದುಂಟೆ ಎಂಬ ದ್ವನಿಯಲ್ಲಿನ ಆರ್ದ್ರತೆ ಗುರುತಿಸಿದ ಮೂರ್ತಿಯವರು ಆಶ್ಚರ್ಯ ಸಂತೋಷದಿಂದ  ರೇವತಿನಾ ..ಎಂಬ ಉದ್ಗಾರ ತೆಗೆದರು. ತಮ್ಮ ಕಾಲೇಜಿನ ದಿನಗಳ ಸಹಪಾಠಿ.ಇಬ್ಬರು ಒಂದೇ ಕಾಲೇಜಿನಲ್ಲಿ ಓದಿದವರು , ಆಕರ್ಷಣೆ ಯು ಪ್ರೇಮವೆಂದೆ ನಂಬುವ ವಯಸ್ಸದು.ಇಬ್ಬರ ಮದ್ಯ ಒಂದು ಆತ್ಮೀಯ ಬಾಂದ್ಯವ್ಯ ಬೆಸೆದಿರುವದು ಇಬ್ಬರು ಅರಿತಿದ್ದರು.ತಮ್ಮ ತಮ್ಮ ಮನೆಯ ಕಟ್ಟುಪಾಡುಗಳ ಅರಿವಿದ್ದ ಇಬ್ಬರೂ ಯಾವದೇ ರೀತಿಯಲ್ಲಿ ಮುಂದುವರೆಯುವ ಧೈರ್ಯ ಮಾಡದೆ ಒಂದು ಮಧುರ ಸ್ನೇಹ ಬಾಂದವ್ಯ ಮುಂದುವರೆಸಿಕೊಂಡು ಹೋಗಿದ್ದರು.ಮನಸ್ಸುಗಳು ಒಂದಾಗಿದ್ದರು ಕುಟುಂಬದ ತೀರ್ಮಾನ ಮೀರುವ ಧೈರ್ಯ ಇಬ್ಬರಿಗೂ ಇರಲಿಲ್ಲ. ಕಾಲೇಜಿನ ದಿನಗಳು ಮುಗಿದು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಕೆಲಸ  ಹುಡುಕಿಕೊಂಡು ಮನೆಯವರು ನಿರ್ದರಿಸಿದವರೊಡನೆ ಮದುವೆಯಾಗಿ ತಮ್ಮ ತಮ್ಮ ಜವಾಬ್ದಾರಿಗಳಿಗೆ ಹೆಗಲು ಕೊಟ್ಟರು.ಜೀವನದ ಜಂಜಡಗಳಲ್ಲಿ ಹಿಂದಿನ ಮಧುರ ಸ್ನೇಹದ ನೆನಪು ಕ್ರಮೇಣವಾಗಿ ಮಾಸಿತ್ತು. ಇಷ್ಟು ವರ್ಷಗಳ ನಂತರ ಹೀಗೆ ಹಠಾತ್ ಅಗಿ ರೇವತಿಯ ಕರೆ ಮೂರ್ತಿಯವರಲ್ಲಿ ಒಂದು ಪುಳುಕ ಮೂಡಿಸದೆ ಇರಲಿಲ್ಲ.ಇಬ್ಬರು ಮಾತಾಡಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಭೆಟಿಯಾಗುವ ತಿರ್ಮಾನದಿಂದ ಪೋನ್ ಡಿಸ್ ಕನೆಕ್ಟ್ ಮಾಡಿದ್ದರು. ಪತಿಗಾಗಿ ಕಾಫಿ ತಂದ ನಿರ್ಮಲಾ ಗಂಡನ ನಗುಮೊಗ ನೋಡಿ ಯಾರೆಂದು ಕೇಳಲು ,ಮೂರ್ತ ಯವರು ತಮ್ಮ ಸಹಪಾಠಿ ರೇವತಿ ಮತ್ತು ಅವಳ ಪ್ರತಿ ಆವಾಗ ತಮಗಿದ್ದ ಆಕರ್ಷಣೆ ಮತ್ತು ಎ‌ರಡು ಕುಟುಂಬಗಳ ಸಂಪದ್ರಾಯಗಳ ಬಗ್ಗೆ ಬಹಳ ಹೊತ್ತು ಮಾತಾಡಿದರು.ತಾವು ಭೆಟಿಯಾಗುವ ವಿಷಯವು ತಿಳಿಸದೆ ಇರಲಿಲ್ಲ. ಜಡತ್ವ ಕಳೆದು ಪತಿಯಲ್ಲಿ ಮೂಡಿದ ಉತ್ಸಾಹ ಕಂಡು ಬೆರಗಾದ ನಿರ್ಮಲಾ ಪತಿಯ  ಸಂತೋಷದಲ್ಲಿ ತಾವು ಭಾಗಿಯಾಗುತ್ತ ಕೀಟಲೆ ಮಾಡದೆ ಇರಲಿಲ್ಲ.ಪತಿಯನ್ನು  ಎಂದೂ  ಅನುಮಾನದ ದೃಷ್ಟಿಯಿಂದ ನೋಡಿದ್ದೆ ಇಲ್ಲ.ಪ್ರೀತಿಯ ಭದ್ರ ಬುನಾದಿಯೆ ನಂಬಿಕೆಯಲ್ಲವೆ..ಆ ನಂಬಿಕೆಯೆ ಅವರಿಬ್ಬರ ಅನ್ಯೋನ್ಯತೆ ಗೆ ಕಾರಣ. ಮನೆಯಿಂದ ಸ್ವಲ್ಪ ದೂರವಿರುವ ಒಂದು ರೆಸ್ಟೋರೆಂಟ್ ನಲ್ಲಿ ಕಾಯುತ್ತ ಕುಳಿತರು ಮೂರ್ತಿ ಯವರು.ದೂರದಲ್ಲಿ ಒಂದು ಸ್ತ್ರೀ ಆಕ್ರತಿ ನಿಧಾನವಾಗಿ ಬರುತ್ತಿರುವದು ಕಾಣಿಸಿತು. ಅವಳು ಅದೆ ರೆಸ್ಟೋರೆಂಟ್ ಗೆ ಬಂದು ಆ ಕಡೆ ಈ ಕಡೆ ನೋಡುವ ನೋಟದಿಂದ ಅವಳೆ ರೇವತಿ ಎಂದರಿತ ಮೂರ್ತಿ ಅವಳನ್ನು ಸಮೀಪಿಸಿದರು. ಎನು! ಇಷ್ಟು ದಪ್ಪ ಆಗಿದ್ದಿಯಾ.ಗುರುತೆ ಸಿಗಲಿಲ್ಲ ಎಂದರು ,ಮುಖದ ತುಂಬಾ ನಗು ತುಂಬಿಕೊಂಡು. ನೀನೆನು ಕಡಿಮೆಯೆ..ಮೂರು ಸುತ್ತು ದಪ್ಪಗಾಗಿದ್ದಿಯಾ..ಆಗದೆ ಎನು ಬಿಸಿ ಬಿಸಿ ಮಾಡಿ ಹಾಕುವ ಹೆಂಡತಿ ಇರುವಾಗ ,ಎಂಬ ಮಾತಿಗೆ ಇಬ್ಬರೂ ಮನದುಂಬಿ ನಕ್ಕರು. ಇಷ್ಟು ವರ್ಷಗಳ ನಂತರ ಅದೇಗೆ ನೆನಪು ಬಂತು ಎಂಬ ಮೂರ್ತಿ ಯ ಮಾತಿಗೆ ,ಮನಸ್ಸು ಮುದಗೊಳಿಸುವ ನೆನಪುಗಳು ಬೆಚ್ಚಗೆ ಎದೆಯಲ್ಲಿ  ಕಾಪಿಟ್ಟುಕೊಂಡರೆ ಮಾತ್ರ ಜೀವನ ಹಗುರ.  ಎಂದಳು ರೇವತಿ. ನಂತರದ ಮಾತುಕತೆಯಲ್ಲ ಅವಳ ಗಂಡ ಮಕ್ಕಳು ಮನೆ  ಎಡೆಗೆ ಹೊರಟಿತು.ಮಕ್ಕಳು ದೊಡ್ಡವರಾಗಿ ಬೇರೆ ದೇಶಗಳಲ್ಲಿ ತಮ್ಮ ನೆಲೆ ಕಂಡುಕೊಂಡ ಮೇಲೆ ತಂದೆ ತಾಯಿಗಳಿಗೆ ಒಂಟಿತನವಲ್ಲದೆ ಮತ್ತೆನು ಕಾಡಲು ಸಾದ್ಯ..ಜೀವನದ ಜಂಜಡಗಳೆಲ್ಲ ಮುಗಿದು ಮೂರ್ತಿ ಯವರು ಅನುಭವಿಸಿದ ಶೂನ್ಯವನ್ನೆ ರೇವತಿಯು ಅನುಭವಿಸಿರುವಳು.ಮೊದಲಿನಿಂದಲೂ ಯಾರೋಂದಿಗೂ ಬೆರೆಯದ ಎಕಾಂತ ಪ್ರೀಯಳವಳು. ಪತಿ ತನ್ನ ಸ್ನೇಹಿತರ ವಲಯದಲ್ಲಿ ಪಾರ್ಟಿ ಟೂರ್ ಗಳಲ್ಲಿ ನಿವ್ರತ್ತಿ ಜೀವನ ಎಂಜಾಯ್ ಮಾಡುವವರು. ಹೀಗಾಗಿ ರೇವತಿ ತನ್ನ ವಲಯದಲ್ಲಿ ಎಕಾಂಗಿಯಾಗಿದ್ದಳು. ಪ್ರತಿಯೊಬ್ಬ ವ್ಯಕ್ತಿಯೂ ಬದುಕಿನ ಜವಾಬ್ದಾರಿಗಳು ಯಾವಾಗ ಮುಗಿಯುವವೊ ಎಂದು ಹಂಬಲಿಸುವನು.ಮುಗಿದ ಮೇಲೆ ಮತ್ತದೆ ಶೂನ್ಯ. ನಮ್ಮ ಅವಶ್ಯಕತೆ ಯಾರಿಗೂ ಇಲ್ಲ ಎಂಬ ಕೊರಗು.ಇಳಿವಯಸ್ಸಿನಲ್ಲಿ ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ  ಅನಿವಾರ್ಯ. ಯಾರೆ ಒಬ್ಬರು ಮುಂದಾದರೂ ಮತ್ತದದೇ ಒಂಟಿತನ.ಮತ್ತು ಮಕ್ಕಳು ಸೊಸೆಯಂದಿರೊಡನೆ ಹೊಂದಾಣಿಕೆ ಬದುಕು.ಜೀವನ ಇಷ್ಟೆ. ಪ್ರತಿಯೊಬ್ಬರೂ ಜೀವನದ ಒಂದಿಲ್ಲೊಂದು ಕಾಲಘಟ್ಟದಲ್ಲಿ ಒಂಟಿತನ ಅನುಭವಿಸುವವರೆ.ಕಳೆದ ಸವಿ ನೆನಪುಗಳು ಮಾತ್ರ ಎಂದುಗೂ ಅಮರ. ಮೂರ್ತಿ ತಮಗರಿವಿಲ್ಲದೆ ಹಿತವಾಗಿ ರೇವತಿಯ ಕೈ ಅದುಮಿದರು.ಸ್ನೇಹದ ಅಭಯ ಹಸ್ತ ಚಾಚುತ್ತ ,ಸವೆಸಬೇಕಾದ ದಾರಿ ಎಲ್ಲಿವರೆಗಿದೆಯೋ ಯಾರಿಗೆ ಗೊತ್ತು.ಬದುಕು ಇರುವವರೆಗೂ ಜಡವಾಗಿ ಬದುಕದೆ ಉತ್ಸಾಹ ಭರಿತವಾಗಿ ಬದುಕೋಣ ಎಂದರು.ಮಂಕು ಸರಿದು ರೇವತಿಯ ಕಣ್ಣಲ್ಲೂ ಹೊಸ ಮಿಂಚು ಮೂಡಿತು.ಮರೆಯಾದ ಸ್ನೇಹ ಮತ್ತೆ ದೊರಕಿದ್ದಕ್ಕೆ ಮನ ಹಗುರವಾಯಿತು.ತನ್ನ ಭಾವನೆಯೊಂದಿಗೆ ಬೆಸೆದಿರುವ ಒಂದು ಜೀವವೂ ತನ್ನಂತೆ ನಿಷ್ಕಲ್ಮಷ ಸ್ನೇಹ ಬಯಸುತ್ತದೆ ಎಂದು ತಿಳಿದು ಮನ ಹಗುರಾಯಿತು. ಅವರು ಎಷ್ಟೋ ಹೊತ್ತು ತಮ್ಮ ಸಂಸಾರದ ಮಾರಾಡಿದರು.ಮೂವತೈದು ವರ್ಷ ಹಿಂದೆ ಹೋಗಿ ಮತ್ತೊಮ್ಮೆ ಕಾಲೇಜಿನ ಸಹಪಾಠಿಗಳಾದರು.ಅಷ್ಟರಲ್ಲಿ ರೇವತಿಯ ಮೊಬೈಲ್ ರಿಂಗಾಯಿತು.ಸ್ಕ್ರೀನ್ ಮೇಲಿನ ಪತಿಯ ಹೆಸರು ನೋಡಿ ಮುಗುಳು ನಗುತ್ತ ,ಇವತ್ತು ನನಗೆ ಬರುವದು ಹೊತ್ತಾಗುತ್ತೆ ,ನೀವು ಊಟ ಮಾಡಿಬಿಡಿ.ಕಾಲೇಜಿನ ಗೆಳೆಯರೊಬ್ಬರು ಸಿಕ್ಕಿದ್ದಾರೆ ಬಹಳ ಮಾಡುವದಿದೆ ಎಂದಳು ನಗುತ್ತ.ಆ ಕಡೆಯಿಂದ ಮಾತುಗಳು ಮುಗಿದ ಮೇಲಾದರೂ ನನ್ನ ನೆನಪಿಸಿಕೋ ನಿನಗಾಗೆ ಕಾಯುತ್ತಿರುವ ಅನಾಥ ಒಬ್ಬನಿದ್ದಾನೆಂದು ಎಂದರು ನಗು ಬೆರೆತ ದನಿಯಲ್ಲಿ. ಸ್ನೇಹದ ಕಡಲು ಮತ್ತೆ ಹರಿಯಿತು.ಜಡತ್ವದ ಬದುಕಲ್ಲಿ ಉತ್ಸಾಹ ಮೂಡಿತು. *********************************************

ಸ್ನೇಹ Read Post »

ಪುಸ್ತಕ ಸಂಗಾತಿ

ಮೌನದಲ್ಲಿ ಮಾತುಗಳ ಮೆರವಣಿಗೆ…

ಪುಸ್ತಕ ಪರಿಚಯ ಮಾತು ಮೌನದ ನಡುವೆ ಸಾಹಿತ್ಯ ಎನ್ನುವುದು ಮಾನವನ ಪಾರದರ್ಶಕ ಅನುಭವಗಳ ಅನುಪಮ ಅಭಿವ್ಯಕ್ತಿ. ಈ ಅನುಭವ ಅನುಭೂತಿಯ ಮೂಲ ಆಕರವೇ ನಮ್ಮ ಸುಂದರ ಸಮಾಜ. ನಮ್ಮ ಸುತ್ತ ಮುತ್ತಲಿನ ಪರಿಸರ, ಪ್ರಕೃತಿ, ಸನ್ನಿವೇಶ, ಘಟನೆಗಳು ಹಾಗೂ ಮಾನವರ ವ್ಯಕ್ತಿತ್ವವು ಪರಸ್ಪರ ವ್ಯಕ್ತಿಗಳ ಅನುಭವವನ್ನು ರೂಪಿಸುತ್ತವೆ. ವ್ಯಕ್ತಿಯ ಈ ಅನನ್ಯ ಅನುಭವಕ್ಕೆ ರೂಪ ಕೊಡುವ ಸಾಧನವೇ ಭಾಷೆ. ಇದು ನಮ್ಮ ಸಾಮಾಜಿಕ ವ್ಯವಸ್ಥೆಯ ಕೂಸು. ಇದನ್ನು ಬಳಸಿಕೊಂಡೆ ಕವಿಯು ತನ್ನ ಅನುಭವಕ್ಕೆ ಚಿತ್ರ ಬಿಡಿಸುವುದು. ಈ ನೆಲೆಯಲ್ಲಿ ಸಾಹಿತ್ಯವು ಬದುಕಿನಂತೆಯೇ ಅಪರಿಮಿತ ಹಾಗೂ ವಿಶಾಲ. ಇದರ ಜಾಡು ಹಿಡಿದು ಹೊರಟಾಗ ಸಾಹಿತ್ಯಕ್ಕೆ ತೀಕ್ಷ್ಣವಾದ ಸಾಮಾಜಿಕ ಸ್ಪಂದನೆ ಹಾಗೂ ಹೃದಯದ ಕದ ತಟ್ಟಲು ಪ್ರಸ್ತುತ ಪಡಿಸುವ ಮಾರ್ಗ ತುಂಬಾ ಮುಖ್ಯವಾಗುತ್ತದೆ. ಸಾಹಿತ್ಯದ ಬಹುದೊಡ್ಡ ಕೊಂಬೆ ಕಾವ್ಯ ಆ ಕಾವ್ಯ ಹಚ್ಚ ಹಸಿರಾಗಿಸಲು ಕವಿಗೆ ಸಾಮಾಜಿಕ ವ್ಯವಸ್ಥೆ, ಸಂಬಂಧಗಳ ಹೂರಣ ಹಾಗೂ ಮಾನಸಿಕ ತಳಮಳಗಳು ಕಾಡಬೇಕು. ಅಂದಾಗ ಮಾತ್ರ ಆ ಕಾವ್ಯ ಸಾರ್ವತ್ರಿಕ ಪೋಷಾಕು ತೊಡಲು ಸಾಧ್ಯ. ಕೂಸು ಹುಟ್ಟಿದ ಮೇಲೆಯೇ ಹೆಣ್ಣಿಗೆ ಹೆಣ್ತನದ ಅನುಭವ ಆಗುವಂತೆ, ಕವಿತೆಗೊಂದು ರೂಪ ಬಂದ ಮೇಲೆಯೇ ವ್ಯಕ್ತಿಯು ಕವಿಯೆನಿಸಿಕೊಳ್ಳಲು ಸಾಧ್ಯ           ಮೇಲಿನ ಈ ಎಲ್ಲ ಅಂಶಗಳನ್ನು ಶಿಲ್ಪಾ ಮ್ಯಾಗೇರಿಯವರ ಮಾತು ಮೌನದ ನಡುವೆ ಕವನ ಸಂಕಲನದಲ್ಲಿ ಕಾಣಬಹುದು. ಇದು ಅವರ ತೃತೀಯ ಕವನ ಸಂಕಲನ. ಸಮಾಜವನ್ನು ಪ್ರೀತಿಸುವ ಕವಯಿತ್ರಿ ಸಮಾಜದಿಂದ ಪಡೆದುಕೊಂಡದ್ದನ್ನು ಪುನಃ ಸಮಾಜಕ್ಕೆ ಹಿಂತಿರುಗಿಸಲು ಬಳಸಿಕೊಂಡಿರುವುದು ಸರಸ್ವತಿಯ ಮಡಿಲನ್ನು….!!           ಈ ಕವನ ಗುಚ್ಛವು  ೬೬+೦೧ ಕವನಗಳನ್ನು ಹೊಂದಿದೆ. ಕವಯಿತ್ರಿ ಅವರಿಗೆ ಸಾಮಾಜಿಕ ವ್ಯವಸ್ಥೆಗಿಂತಲೂ ಆ ವ್ಯವಸ್ಥೆಯ ಪ್ರಮುಖ ಭಾಗವಾದ ಸ್ತ್ರೀ ಸಂವೇದನೆಯು ಹೆಚ್ಚು ಕಾಡಿದೆ. ಎಲ್ಲದರಲ್ಲಿಯೂ ಸ್ತ್ರೀ ಸಂವೇದನೆಯು ಇಣುಕಿರುವುದನ್ನು ಗಮನಿಸಬಹುದು.‌ ಅದು ಹೆತ್ತವರ ಪ್ರೀತಿಯಾಗಿರಬಹುದು ಅಥವಾ ಮನದರಸನ ಪ್ರೀತಿಯಾಗಿರಬಹುದು… ಅಲ್ಲಿ ಸ್ತ್ರೀ ಸಂವೇದನೆಯೇ ಮುನ್ನೆಲೆಗೆ ಬಂದು ನಿಲ್ಲುತ್ತದೆ. ‘ಹೆಣ್ಣು’, ‘ಯಾರಿಗೂ ಕಾಣಲಿಲ್ಲ’, ‘ಸವಾಲು’, ‘ನನ್ನವನಿಗಾಗಿ’, ‘ಭ್ರಮೆ ವಾಸ್ತವ’, ‘ಪುರುಷೋತ್ತಮ’, ‘ಪುತ್ರ ವ್ಯಾಮೋಹ’, …. ಮುಂತಾದ ಕವನಗಳ ತಿರುಳೆ ಹೆಣ್ಣಿನ ಮನಸ್ಸಿನಲ್ಲಿರುವ ಮಾನಸಿಕ ತುಮುಲಗಳು.  “ಅಮ್ಮನ ಗರ್ಭದಿಂದಲೆ ಕಂಡಿರುವೆ ಅಡೆತಡೆಯ ನಂಟು”       ಈ ಅಡೆತಡೆ ಅನ್ನುವುದು ಹೆಣ್ಣಿಗೆ ನಮ್ಮ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆ ನೀಡಿರುವ ಮರೆಯಲಾಗದಂತಹ ಸುಂದರ ಬಳುವಳಿ. ಗಂಡು ಮಗುವಿನ ಮೋಹದಲ್ಲಿ ಹೆಣ್ಣನ್ನು ಬಲಿ ಕೊಡುವ ಅಮಾನುಷ ಪದ್ಧತಿಗೆ ನಾಂದಿ ಹಾಡಿದವನೆ ಈ ಬುದ್ಧಿವಂತ ಮತಿಹೀನ ಮಾನವ. ಈ ಅತಿಯಾದ ಬುದ್ಧಿವಂತಿಕೆಯ ಫಲವಾಗಿಯೇ ಹೆಣ್ಣು ಭ್ರೂಣಾವಸ್ಥೆಯಲ್ಲಿ ಇರುವಾಗಲೇ ಸಾವಿನೊಂದಿಗಿನ ಹೋರಾಟಕ್ಕೆ ಅಣಿಯಾಗುತ್ತಾಳೆ.‌ ಇಲ್ಲಿ ಗಮನಿಸಬಹುದಾದ ಮತ್ತೊಂದು ವಿಷಯವೆಂದರೆ ಸ್ತ್ರೀಯು ತನಗೆ ಅರಿವಿದ್ದೋ, ಅರಿವಿಲ್ಲದೆಯೋ ಪುರುಷ ಪ್ರಧಾನ ಸಮಾಜದ ನಿಲುವುಗಳನ್ನು ಬೆಳೆಸಿಕೊಂಡು ಹೋಗುತ್ತಿರುವುದು. ಹೆಣ್ಣಾದ ತಾಯಿಯೇ ತನ್ನ ಮಕ್ಕಳಲ್ಲಿ ತಾರತಮ್ಯ ಮಾಡುತ್ತಿರುವುದನ್ನು ಇಲ್ಲಿಯ ಕವನವೊಂದು ಪ್ರತಿನಿಧಿಸುತ್ತದೆ. “ಅಮ್ಮ ನಿನ್ನ ತೋಳೆಂದು ಆಗಲೆ ಇಲ್ಲ ನನಗೆ ದಿಂಬು ನಿನ್ನ ಮಡಿಲು ಹಾಸಿಗೆಯಾದದ್ದು ನನಗೆ ನೆನಪಿಗಿಲ್ಲ….!” ಇದು‌ ತಾಯಿಯ ಪ್ರೀತಿಯಿಂದ ವಂಚಿತವಾದ‌ ಹೆಣ್ಣು ಮಗುವಿನ ಮಾನಸಿಕ ತೋಳಲಾಟ…!          ನನ್ನವನಿಗಾಗಿ ಕವನದ ಶೀರ್ಷಿಕೆಯು ಪ್ರೀತಿ, ಪ್ರೇಮವನ್ನು ಸೂಚಿಸಿದರೂ ತನ್ನೊಡಲೊಳಗೆ ಹೆಣ್ಣಿನ ಅಸಹಾಯಕತೆ, ನೋವು, ಅವಮಾನಗಳನ್ನು ಬಚ್ಚಿಟ್ಟುಕೊಂಡಿದೆ. “ನಾನು ಬರೆಯುತ್ತೇನೆ ಕವನ  ನನ್ನವನಿಗಾಗಿ ಹಸುವಂತೆ ತೋರಿದ ಹುಲಿಯಂತ ಕ್ರೌರ್ಯಕ್ಕಾಗಿ ಆಸರೆಯಾಗ ಬೇಕಾದವನಲ್ಲಿ ನಾ ಸೆರೆಯಾಗಿದ್ದಕ್ಕಾಗಿ  !”      ಇಲ್ಲಿ ಹೆಣ್ಣಿನ ತಣ್ಣನೆಯ ಪ್ರತಿಭಟನೆ ಇದೆ. ಪ್ರತಿಯೊಂದು ಹೆಣ್ಣು ನೂರಾರು ಕನಸುಗಳೊಂದಿಗೆ ಗಂಡನ ಮನೆಯನ್ನು ಪ್ರವೇಶಿಸುತ್ತಾಳೆ. ಆದರೆ ತಾನು ಬಂದದ್ದು ಪ್ರೇಮಿಯ ಮನೆಗಲ್ಲ, ಗಂಡಿನ ಸೆರೆಮನೆಗೆ ಎಂದು ಅನುಭವವಾಗುತ್ತಲೇ ಕುಸಿದು ಬೀಳುತ್ತಾಳೆ.         ಹೆತ್ತವರು.. ಹೃದಯದ ಬಂಧ. ಸಂಬಂಧಗಳ ತವರೂರು. ಆದರೆ ಅದೆಕೋ ಅಮ್ಮನ ಮಮತೆಯಲ್ಲಿ ಅಪ್ಪನನ್ನು ನಾವು ಮರೆಯುತ್ತಿರುವುದೆ ಹೆಚ್ಚು…!! ಸಮಾಜದ ಪ್ರತಿಬಿಂಬವಾದ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಯಾರಿಗೂ ಕಾಣಲಿಲ್ಲ ಶೀರ್ಷಿಕೆಯ ಕವನವು ತಾಯಿಯ ವೇದನೆಯನ್ನು ಸಾರುತ್ತ ಹೋಗುತ್ತದೆ. ” ಜಗತ್ತಿಗೆ ಒಂದು ದಾರಿಯಾದರೆ ತನ್ನದೇ ರಾಜಮಾರ್ಗ ಎನ್ನುವ ಒಂದೊಮ್ಮೆ ಕುಡಿತದ ನಶೆಯಲ್ಲಿ ಮಗದೊಮ್ಮೆ ಸ್ವಯಾರ್ಜಿತ ಭ್ರಮೆಯ ಅಮಲಿನಲ್ಲಿ ಇದ್ದ ಅಪ್ಪನ ಬಿಟ್ಟಂತೆ ಹಿಡಿಯುತ ಹಿಡಿದಂತೆ ಬಿಡುತ ಗಂಟು ನಂಟಿನಾಟದಲಿ ಅವ್ವ ಜರ್ಜರಿತವಾದದ್ದು ಯಾರಿಗೂ ಕಾಣಲೇ ಇಲ್ಲ” ‌ ಇಲ್ಲಿ ಅಚ್ಚೊತ್ತಿರುವ ಭಾವ ಸಮಾಜದೆಲ್ಲೆಡೆ, ಕುಟುಂಬದೆಲ್ಲೆಡೆ ಕಾಣುತ್ತೇವೆ. ಮಕ್ಕಳೊಂದಿಗಿನ ತಾಯಿಯ ನಂಟೆ ಅವಳನ್ನು ಕುಟುಂಬದಲ್ಲಿ ಇರುವಂತೆ ಮಾಡುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣಿಗೆ ಕುಟುಂಬ ಮುಖ್ಯವಾದಷ್ಟು ಗಂಡಿಗೆ ಮುಖ್ಯವಾಗಲೇ ಇಲ್ಲ ಎಂಬುದಕ್ಕೆ ನಮ್ಮ ಸಮಾಜವೇ ಸಾಕ್ಷಿ…!!       ಕುಟುಂಬವನ್ನು ಪ್ರೀತಿಸುವ ಶಿಲ್ಪಾ ಮ್ಯಾಗೇರಿಯವರ ಕವನ ಸಂಕಲನದಲ್ಲಿ ಹಲವು ಕವನಗಳು ಕೌಟುಂಬಿಕ ಆಪ್ತತೆಯ ಮುದವನ್ನು ನೀಡುತ್ತವೆ. ತಂದೆ, ತಾಯಿ, ಗಂಡ, ಮಕ್ಕಳು, ಗೆಳತಿ… ಎನ್ನುವ ಹಲವು ಸಂಬಂಧಗಳ ಕುರಿತು ಕವನಗಳು ಆಪ್ತ ಸಮಾಲೋಚನೆ ಮಾಡುತ್ತವೆ. ಸಂಕಲನದ ಮೊದಲ ಕವನವೇ ಅಪ್ಪ ಅಪ್ಪನ ಗುಣಗಾನ ಮಾಡುತ್ತ, ಅಪ್ಪ ನಡೆದು ಬಂದ ರೀತಿ, ಮಕ್ಕಳನ್ನು ಬೆಳೆಸಿದ ಕ್ರಮ, ಕುಟುಂಬವನ್ನು ಮುನ್ನಡೆಸಿದ ಬಗೆ… ಎಲ್ಲವೂ ಕಣ್ಣಿಗೆ ರಾಚುವಂತೆ ವರ್ಣಗಳಲ್ಲಿ ಸೆರೆ ಹಿಡಿದು ನಿಲ್ಲಿಸಿದ್ದಾರೆ. ಆದರೆ ಅಪ್ಪನ ಹೀರೋಯಿಸಂ ನ ಹಿಂದಿರುವ ನೋವು, ತೊಳಲಾಟ, ದುಗುಡಗಳು ಮರೆಯಾಗಿವೆ. ಮೌಲ್ಯಗಳ ಪಾಲನೆ ಸರಳವಾದುದಲ್ಲ. ಆ ದಾರಿಯು ಬರೀ ಕಲ್ಲು ಮುಳ್ಳುಗಳನ್ನೇ ಹೊಂದಿರುತ್ತದೆ. ಆ ಹಾದಿಯಲ್ಲಿ ಸಾಗುವಾಗಿನ ಗಾಯಕ್ಕೆ ಸಾಹಿತ್ಯ ಸಾಕ್ಷಿಯಾಗಬೇಕಿದೆ…! ” ಕಾಯಕವೇ ಕೈಲಾಸವೆಂದು. ಎಂದೂ ಹೇಳದೆ  ಆಚರಣೆಗೆ ತಂದವ”     ಕಣ್ಣಿಗೆ ಕಂಡ ದೃಶ್ಯಗಳಿಗಿಂತಲೂ ಕಾಣದೇ ಇರುವ ಚಿತ್ರಣವನ್ನು ಬಿಡಿಸುವುದೆ ಕವಿ/ಕವಯಿತ್ರಿಗೊಂದು ಸವಾಲು. ಅದು ಇಲ್ಲಿ ಮರೆಯಾಗಿದೆ. ಯಾವ ಗುಣವೂ ಉದ್ಭವಮೂರ್ತಿಯಲ್ಲ. ಗುಣಗಳಿಗಿಂತ ಗುಣಗಳ ಅನುಷ್ಠಾನದ ದಾರಿಯ ಮೇಲೆ ಬೆಳಕು ಚೆಲ್ಲುವ ಅವಶ್ಯಕತೆ ಇದೆ.     ತಾಯಿ, ಮಗುವನ್ನು ಬೆಳೆಸುವ ರೀತಿ ಅನ್ಯೋನ್ಯ. ತಾಯಿಯೇ ಮೊದಲ ಗುರು. ಈ ಕಾರಣಕ್ಕಾಗಿಯೇ ಮಕ್ಕಳ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ಅವಿಸ್ಮರಣೀಯ.. ! ಈ ನೆಲೆಯಲ್ಲಿ ತಾಯಿಯ ಹರಕೆ ಕವನವು ಓದುಗರ ಗಮನವನ್ನು ಸೆಳೆಯುತ್ತದೆ. ಅವಳು ಹೇಳುವ ಬುದ್ಧಿವಾದವು ಸಾರ್ವತ್ರಿಕ ಅನಿಸುವಷ್ಟು ಆಪ್ತವಾಗಿ ಮೂಡಿಬಂದಿವೆ. ” ಹಾಲು ಕುಡಿದರೂ ಬದುಕದ ಕಾಲವಿದು ವಿಷದ ನಶೆಯ ಮಾಡಬೇಡ ಕಂದ ಬದುಕಲಾಗದು ಜಯವ ಗಳಿಸಲಾಗದು  !” ವಾಸ್ತವ ಸಮಾಜದ ಚಿತ್ರಣದೊಂದಿಗೆ ಆತಂಕವನ್ನು ವ್ಯಕ್ತಪಡಿಸುತ್ತಿದೆ ಈ ಕವನವು.       ಈ ಸಂಕಲನದ ಕೊನೆಯ ಕಾವ್ಯ ಕರುಳ ಬಳ್ಳಿ ಆಪ್ತವೆನಿಸುತ್ತದೆ. ಇದು ಕವಯಿತ್ರಿ ಶಿಲ್ಪಾ ರವರ ಮಗ ಚಿ‌. ತುಷಾರ್ ಬರೆದಿರುವುದು..! ತಾಯಿ-ಮಗುವಿನ ಬಾಂಧವ್ಯ ಮನಸ್ಸಿಗೆ ಮುದ ನೀಡುತ್ತದೆ. ಇದರೊಂದಿಗೆ ವಿಶೇಷ ಗಮನ ಸೆಳೆಯುವ ಮತ್ತೊಂದು ಕಾವ್ಯವೆಂದರೆ ಎರಡು ನಕ್ಷತ್ರಗಳು ಇಲ್ಲಿ ತಂದೆಯ ಭಾವ ತನ್ನ ತಾಯಿ ಮತ್ತು ಮಗಳ ರೂಪದಲ್ಲಿ ಅನಾವರಣಗೊಂಡಿದೆ.        ಪ್ರೀತಿ… ಜೀವನದ ಸ್ಥಾಯಿ ಭಾವ. ಸಾಹಿತ್ಯದ ಎಲ್ಲ ಪ್ರಕಾರಗಳ ಮೂಲ ಆಕರವೆ ಈ ನವಿರಾದ ಪ್ರೀತಿ. ಈ ಸಂಕಲನದಲ್ಲಿ ಹಲವು ಕವನಗಳು ಪ್ರೀತಿ, ಪ್ರೇಮ, ಪ್ರಣಯ, ವಿರಹ…. ವನ್ನು ಹೃದಯದ ಕ್ಯಾನ್ವಾಸ್ ನಲ್ಲಿ ಸ್ಥಿರವಾಗಿ ಎರಕಹೊಯ್ಯುವಲ್ಲಿ ಯಶಸ್ವಿಯಾಗಿವೆ. “ನೂರೊಂದನೆಯ ನೋವು ನೀನು” ಎನ್ನುವ ಚರಣವು ಪ್ರೀತಿಯ ಆಳ, ಹರವನ್ನು ಪ್ರತಿಬಿಂಬಿಸುತ್ತದೆ.  “ಗೆಳೆಯ ಎದೆ ಭಾರವಾಗಿದೆ ನಿನ್ನ ಹೆಗಲು ಬೇಕು ಬಿಕ್ಕಳಿಸಿ ಹಗುರಾಗಲು” ಎನ್ನುವ ಪಂಕ್ತಿಗಳು‌ ಪ್ರೀತಿಯ ನಿವೇದನೆಯನ್ನು ಸಿಂಪಡಿಸುತ್ತವೆ. ಪ್ರೀತಿಯೊಂದಿದ್ದರೆ ಸಾಕು ಮನುಷ್ಯ ಏನನ್ನಾದರೂ ಗೆಲ್ಲಬಹುದು ಎಂಬುದನ್ನು ಸಾರುತ್ತದೆ. ‘ತುಂಬಿಕೊಂಡಿತು’, ‘ಒಲವ ಸುಳಿ’, ‘ನಾನು ನನ್ನವನು ಮತ್ತು ಚಂದ್ರ’, ‘ಆತ್ಮ ಸಖ’, ‘ನಿವೇದನೆ’, ‘ಅನುರಣನ’, ಕವನಗಳು ಮೆದುವಾದ ಪ್ರೇಮಲೋಕದಲ್ಲಿ ಓದುಗರನ್ನು ವಿಹರಿಸಲು ಪ್ರೇರೇಪಿಸುತ್ತವೆ. “ವೀಣೆಯಂತೆ ನುಡಿಸಿಬಿಡು ಸಪ್ತ ಸ್ವರವು ಮೇಳೈಸುವಂತೆ” ಈ ಸಾಲುಗಳು ಪ್ರೇಮದ ನಾಕವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಪ್ರೇಮ ರಾಗವನ್ನು ಮೈ ಮನಗಳಲ್ಲಿ ನುಡಿಸುತ್ತದೆ.  ಇದರೊಂದಿಗೆ ಹಲವು ಕವನಗಳು ಜೀವನ ಶ್ರದ್ಧೆಯನ್ನು ಮೂಡಿಸುತ್ತವೆ. ಈ ನೆಲೆಯಲ್ಲಿ ಹಲವು ಸಾಲುಗಳು ಬದುಕಿಗೆ ಪ್ರೇರಣೆ ನೀಡುವಂತೆ ಸಕಾರಾತ್ಮಕವಾಗಿ ಮೂಡಿ ಬಂದಿವೆ. ಕವನಗಳನ್ನು ಓದಿದಾಗ ಸುಭಾಷಿತ, ಸೂಕ್ತಿಗಳ ಅನುಭೂತಿಯನ್ನು ನೀಡುತ್ತವೆ. “ಸುಲಭದಲ್ಲಿ ಗೆಲುವನ್ನು ಎಂದಿಗೂ ಕೊಡಬೇಡ ! ಗೆದ್ದು ಬೀಗುವತನಕ ಉಸಿರು ನಿಲ್ಲಿಸಬೇಡ” “ಸಂಪೂರ್ಣ ಸೋಲಲಾರದ ಮೇಲೆ ಪರಸ್ಪರ ಗೆಲ್ಲುವುದು ಹೇಗೆ” “ಆಮಿಷಗಳಿಂದ ಹೊರಗುಳಿದು ಬದುಕು ಕಟ್ಟಿಕೊಳ್ಳುವ ಶಕ್ತಿ ನೀಡು”      ಬಾಳು ಸ್ಥಾವರವಾಗಬಾರದು, ಜಂಗಮವಾಗಬೇಕು. ಆದರೆ ಬದಲಾವಣೆಯ ಬಿರುಗಾಳಿಯಲ್ಲಿ ಅಸ್ಮಿತೆಯನ್ನು ತೊರೆಯಬಾರದು. ದುರಂತವೆಂದರೆ ಇಂದು ನಾವು ಆಧುನಿಕತೆಯ ಒಡ್ಡೋಲಗದಲ್ಲಿ ನಮ್ಮ ಮೂಲವನ್ನೇ ಮರೆಯುತ್ತಿದ್ದೇವೆ. ಜಾಗತಿಕರಣದ ಜಾಲದಲ್ಲಿ ಮನುಕುಲ ಸಿಲುಕಿಕೊಂಡ ಪರಿಯನ್ನು ಧಾವಂತದ ಬದುಕು ಕವನವು ಮನಮುಟ್ಟುವಂತೆ ಅಭಿವ್ಯಕ್ತಿಸಿದೆ. ದಿನನಿತ್ಯದ ಓಡಾಟ, ಮುಖವಾಡದ ಜೀವನ, ಮಾನಸಿಕ ತಳಮಳ, ಬಿಸಿಲುಕುದುರೆ ಶಾಂತಿಗಾಗಿ ಪರದಾಟ…. ಇವೆಲ್ಲವನ್ನು ಈ ಸಾಲುಗಳು ತುಂಬಾ ಸಶಕ್ತವಾಗಿ ಹಿಡಿದಿಟ್ಟುಕೊಂಡಿವೆ. “ಎಲ್ಲರೊಟ್ಟಾಗಿ ಕುಳಿತು ಹರಟಿದ್ದ ಕಟ್ಟೆ ಈಗ ಖಾಲಿ ಖಾಲಿಯಾಗಿದೆ”       ಸಾಮಾಜಿಕ ಸ್ಪಂದನೆಯ ನೆಲೆಯಲ್ಲಿ ‘ರೈತ’, ‘ಅಸ್ಪೃಶ್ಯರು’, ಕವನಗಳು ಓದಿಸಿಕೊಂಡು ಹೋಗುತ್ತವೆ.        ಇಲ್ಲಿಯ ಕವನಗಳ ವಿಷಯ, ಭಾಷೆ ಹಾಗೂ ಶೈಲಿಯನ್ನು ಗಮನಿಸಿದಾಗ ನವೋದಯದ ವಿಷಯ, ಭಾಷೆ ಹಾಗೂ ನವ್ಯದ ಶೈಲಿಯನ್ನು ಕಾಣುತ್ತೇವೆ. ಕಾವ್ಯ ಮನೆಯಂಗಳದಿಂದ ಸಮಾಜದ ಮೂಲೆ ಮೂಲೆಗಳನ್ನು ಸ್ಪರ್ಶಿಸಿದಾಗ ಅದು ಪರಿಪೂರ್ಣ ಎನಿಸಿಕೊಳ್ಳುತ್ತದೆ. ಕಾವ್ಯವನ್ನು ಪೂರ್ವಾಗ್ರಹ ಪೀಡಿತರಾಗದೆ ಓದಿದಾಗ ಮಾತ್ರ ರಸಸ್ವಾದ ಸಾಧ್ಯವಾಗುತ್ತದೆ, ಇಲ್ಲದಿದ್ದರೆ ರಸಭಂಗವಾಗುತ್ತದೆ ಎಂಬುದನ್ನು ಇಲ್ಲಿಯ ಹಲವು ಕವನಗಳು ಸಾರಿ ತೋರಿಸುತ್ತವೆ. ಈ ಮಾತು ಮೌನದ ನಡುವೆ ಕಲಾಕೃತಿಯು ಪ್ರತಿಯೊಬ್ಬ ಸಹೃದಯ ಓದುಗನ ಮೌನದೊಂದಿಗೆ ಮಾತಾಡಲಿ ಎಂದು ಹಾರೈಸುತ್ತೇನೆ. ************************************************* ಡಾ. ಮಲ್ಲಿನಾಥ ಎಸ್. ತಳವಾರ

ಮೌನದಲ್ಲಿ ಮಾತುಗಳ ಮೆರವಣಿಗೆ… Read Post »

ಕಾವ್ಯಯಾನ

ನೀವು ಎದೆಗೆ ಗುಂಡು ಹೊಡೆದರೆ.

ಕವಿತೆ ನೀವು ಎದೆಗೆ ಗುಂಡು ಹೊಡೆದರೆ ಅಲ್ಲಾಗಿರಿರಾಜ್ ಕನಕಗಿರಿ ನೀವು ಜಲ ಫಿರಂಗಿಸಿಡಿಸಬಹುದು ನಮ್ಮ ಮೈ ಮೇಲೆ.ನಾವು ಮುಂಗಾರು ಮಳೆಯ ಆರ್ಭಟವೆಂದು ಭಾವಿಸುತ್ತೇವೆ.ಏಕೆಂದರೆ ನೀರು ನಮ್ಮ ವೈರಿಯಲ್ಲ. ನೀವು ಲಾಠಿ ಬೂಟುಗಳಿಂದದಾಳಿ ಮಾಡಬಹುದು ನಮ್ಮ ಮೈ ಮೇಲೆ.ನಾವು ನಮ್ಮ ಅನ್ನ ಉಂಡ ಮಕ್ಕಳ ಸಲಿಗೆ,ಪ್ರೀತಿಯೆಂದು ಭಾವಿಸುತ್ತೇವೆ.ಏಕೆಂದರೆ ಮಕ್ಕಳು ನಮ್ಮ ವೈರಿಗಳಲ್ಲ. ನೀವು ಅಶ್ರುವಾಯು ಸಿಡಿಸಿಕಣ್ಣು ಕತ್ತಲು ಮಾಡಬಹುದು ನಮ್ಮ ಕನಸುಗಳ ಮೇಲೆ.ನಾವು ಮಂಜುಕವಿದ ವಾತಾವರಣವೆಂದು ಭಾವಿಸುತ್ತೇವೆ.ಏಕೆಂದರೆ ಪ್ರಕೃತಿ ಎಂದೂ ನಮ್ಮ ವೈರಿಯಲ್ಲ. ಆದರೆ….. ಆದರೆನೀವು ದಲ್ಲಾಳಿಗಳ ಮಾತು ಕೇಳಿ, ಎದೆಗೆ ಗುಂಡು ಒಡೆದರೆನೆತ್ತರು ಕುಡಿದ ನೆಲ, ಬೆಳೆದು ನಿಂತ ಬೆಳೆಹೋರಾಟದ ಹಾಡು ಬರೆಯುತ್ತವೆ ಮರೆಯಬೇಡಿ. ಏಕೆಂದರೆ…….‘ಸರಕಾರ ರೊಕ್ಕ ಮುದ್ರಿಸಬಹುದೆ ಹೊರತುತುಂಡು ರೊಟ್ಟಿಯನ್ನಲ್ಲ ನೆನಪಿರಲಿ’. ******************************************

ನೀವು ಎದೆಗೆ ಗುಂಡು ಹೊಡೆದರೆ. Read Post »

ಕಾವ್ಯಯಾನ

ಮೌನದಲಿ ಕವಿತೆಯಾದವಳು

ಕವಿತೆ ಮೌನದಲಿ ಕವಿತೆಯಾದವಳು ವಿದ್ಯಾಶ್ರೀ ಅಡೂರ್ ಕವಿತೆಯಾದಳು ಆಕೆ ತಿಳಿದವರು ತಿಳಿದ ತರಹುಡುಕ ಹೋಗಲು ಬಗೆಯ ಬೇಗೆ ಬೆಂಬತ್ತಿತುಟಿತುದಿಯ ಕಿರುನಗೆಯ ಅರಿತವನ ಮನದ ಸ್ಥರಜಿಗಿವ ಜಿಂಕೆಯಂತೆ ಕವನವನ್ನು ಬಿತ್ತಿ ಹಣೆ ಮೇಲೆ ಆಕೆಯ ಗೆರೆಗಳನು ಕಂಡಾತಬರೆದಿಹನು ಪುಟಪುಟದ ಸಾಲುಗಳ ಹೆಚ್ಚಿತನ್ನನ್ನೇ ಬಣ್ಣಿಪನು, ಬಂದಿಹೆನು ತಾನೆಂದುಆಕೆಯ ಮನದೊಳಗೆ ದೀಪವನು ಹಚ್ಚಿ ಕಣ್ಣಂಚ ಹನಿಗಳನು ಮುತ್ತಂತೆ ಪೋಣಿಸುತರಂಗುಬಳಿದು ಅದಕೆ ಕಟ್ಟಿಹನು ಬೆಲೆಯಹಾದಿಬೀದಿಯ ಜನರು ಕೊಳ್ಳುವ ಸರಕಾಯ್ತುಅಳಿಸದೇ ಹೋಯ್ತವಳ ಕಣ್ಣೀರ ಸೆಲೆಯ ಮಾತಿನ ಪೇಟೆಯಲಿ ಬೆಲೆಯಿಲ್ಲ ಮೌನಕ್ಕೆಕುಗ್ಗಿಹಳು ಸಾಗರದ ಬಿಂದುವಾಗಿಮಾತಿರದ ಮೌನದಲಿ ಕವಿತೆಯಾದಳು ಅವಳುಕ್ಷಣಕೊಮ್ಮೆ ಕಣಕಣದಿ ಸಿಂಧುವಾಗಿ *******

ಮೌನದಲಿ ಕವಿತೆಯಾದವಳು Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಗಾಯಗೊಂಡ ಹೃದಯದ ಸ್ವಗತ

ಪುಸ್ತಕ ಸಂಗಾತಿ ಗಾಯಗೊಂಡ ಹೃದಯದ ಸ್ವಗತ ಗಾಯಗೊಂಡ ಹೃದಯದ ಸ್ವಗತತೆಲುಗು ಮೂಲ : ಅಯಿನಂಪೂಡಿ ಶ್ರೀಲಕ್ಷ್ಮಿ ಕನ್ನಡಕ್ಕೆ : ರೋಹಿಣಿ ಸತ್ಯಪ್ರ : ಸ್ನೇಹ ಬುಕ್ ಹೌಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೦ಪುಟಗಳು : ೬೪ ಇದು ಒಂದು ನೀಳ್ಗವನ. ತನ್ನ ಗೃಹಕೃತ್ಯದ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ನೆರವೇರಿಸುತ್ತಿದ್ದ ಗೃಹಿಣಿಯೊಬ್ಬಳು ಸ್ತನದ ಕ್ಯಾನ್ಸರಿನಿಂದ ಬಳಲಿ  ಚಿಕಿತ್ಸೆಯ ಅನೇಕ ಯಾತನಾಪೂರ್ಣ ಹಂತಗಳನ್ನು ದಾಟಿ, ಧೈರ್ಯ ಮತ್ತು ಆತ್ಮವಿಶ್ವಾಸಗಳಿಂದ  ಸಾವನ್ನು ಗೆಲ್ಲುವುದು ಈ ಕವಿತೆಯ ವಸ್ತು.  ಇದು ಕವಯಿತ್ರಿ ಅಯಿನಂಪೂಡಿ ಶ್ರೀಲಕ್ಷ್ಮಿಯವರ  ನಿಜ ಕಥೆಯೂ ಹೌದು. ಕವನದ ಉದ್ದಕ್ಕೂ ನಾವು ನಿರೂಪಕಿಯ ಬದುಕು ಹಾಗೂ ಆಕೆಯ ವ್ಯಕ್ತಿತ್ವದ ವಿವಿಧ ಮುಖಗಳನ್ನು ನೋಡುತ್ತ ಹೋಗುತ್ತೇವೆ. ಒಟ್ಟಿನಲ್ಲಿ ಇದು ಓದುಗನ ಮನಸ್ಸನ್ನು ಶುದ್ಧೀಕರಣಕ್ಕೊಳಗಾಗಿಸುವ ಕೆಥಾರ್ಸಿಸ್ ಪರಿಣಾಮವಿರುವ ಕಾವ್ಯ.  ಇದು ಒಂದು ಸ್ವಗತದ ನಿರೂಪಣೆಯಾದರೂ ಸ್ತ್ರೀಯ ಅಗಾಧವಾದ ಜೀವ ಚೈತನ್ಯ  ಮತ್ತು ಧಾರಣ ಶಕ್ತಿಗಳಿಗೆ ಬರೆದ ಭಾಷ್ಯವೇ ಆಗಿದೆ ಅನ್ನಬಹುದು. ಕ್ಯಾನ್ಸರ್ ಅನ್ನುವುದು ಎಲ್ಲರೂ ಹೆದರಿ ನಡುಗುವ ಒಂದು ಭಯಾನಕ ಕಾಯಿಲೆ.  ಬದುಕಿನ ಬಗೆಗಿನ ಭರವಸೆಗಳನ್ನೆಲ್ಲ ಬುಡಮೇಲು ಮಾಡಿ ವ್ಯಕ್ತಿಯನ್ನು ಭಯ-ತಲ್ಲಣಗಳ ಅಂಚಿಗೆ ದೂಡುವ ಒಂದು ಮಹಾಮಾರಿ. ಆದರೆ ಇಲ್ಲಿನ ಕಥಾನಾಯಕಿ ಸಾಮಾನ್ಯಳಲ್ಲ.  ಇಂಥ ಒಂದು ಗದಗುಟ್ಟಿಸುವ ಸನ್ನಿವೇಶ ಎದುರಾದಾಗಲೂ ಅದನ್ನು ಆಕೆ ಲೀಲಾಜಾಲವಾಗಿ ಮುಗುಳ್ನಗೆಯೊಂದಿಗೆ ಅತ್ಯಂತ ಸಹಜವಾಗಿ ನಿಭಾಯಿಸುತ್ತಾಳೆ.  ಮನಸ್ಸಿನ ತುಂಬಾ ಕೋಲಾಹಲವೇ ಆದರೂ  ಅದನ್ನು ತನ್ನೊಳಗೇ ಪರಿಹರಿಸಿಕೊಳ್ಳುತ್ತ, ಹೊರಗೆ ತೋರಗೊಡದೇ ಇರುವುದರಲ್ಲಿ ಆಕೆ ಯಶಸ್ವಿಯಾಗುತ್ತಾಳೆ.  ಯಾಕೆಂದರೆ ಇದೆಲ್ಲವನ್ನೂ ತಾನು ಒಂದು ದಿನ ಗೆದ್ದೇ ಗೆಲ್ಲುತ್ತೇನೆಂಬ ದೃಢವಾದ ನಂಬಿಕೆ ಅವಳಲ್ಲಿದೆ.  ಈ ನೀಳ್ಗವನವನ್ನು ಪ್ರೋಲಾಗ್, ಇಂಟ್ರೋ, ಸ್ಟೇಜ್ ೧, ಸ್ಟೇಜ್ ೨, ಸ್ಟೇಜ್ ೩, ಫ್ಲಾಷ್ಬಾಕ್, ಫ್ಲಾಷ್ ಪ್ರೆಸೆಂಟ್, ಇನ್ ದ ಥಿಯೇಟರ್, ಪಿಂಕ್ ಹೋಪ್,  ಮರಣಾಮರಣ-ಎಂದು ಒಂದು ಪಾಶ್ಚಾತ್ಯ ಪ್ರಾಚೀನ ನಾಟಕದ ರೂಪದಲ್ಲಿ ವಿಭಾಗಿಸಲಾಗಿದೆ. ಪ್ರಾಯಶಃ ಬದುಕು ಆಕಸ್ಮಿಕ ಸನ್ನಿವೇಶಗಳ ನಾಟಕವೆಂಬ ಕವಯಿತ್ರಿಯ ಧೋರಣೆ ಇದಕ್ಕೆ ಕಾರಣವಾಗಿರಬಹುದು. ಕವಯಿತ್ರಿ ತನ್ನ ನೋವುಗಳನ್ನೂ ಭಾವನಾತ್ಮಕ ಸಂವೇದನೆಗಳನ್ನೂ ತಾತ್ವಿಕ ಚಿಂತನೆಗಳನ್ನೂ  ಇಲ್ಲಿ ಸುಂದರವಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅನುವಾದದ ಶೈಲಿಯೂ ಅಷ್ಟೇ ಕಾವ್ಯಾತ್ಮಕವಾಗಿದ್ದು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ.   ಆರಂಭದಲ್ಲಿ ಎಂ.ಎಸ್.ಆಶಾದೇವಿಯವರ ಸೊಗಸಾದ ವಿಮರ್ಶಾತ್ಮಕ ಮುನ್ನುಡಿಯೊಂದಿಗೆ ಕಾವ್ಯವೇ ಒಂದು ಚಿಕಿತ್ಸೆ ಎಂಬ ಅರ್ಥದಲ್ಲಿ ಮಾಮಿಡಿ ಹರಿಕೃಷ್ಣ ಅವರು ಬರೆದ  ‘ಪೋಯಟ್ರಿ ಒಂದು ಫೀಲಿಂಗ್, ಒಂದು ಕೆಥಾರ್ಸಿಸ್ ಒಂದು ಥೆರಪಿ’ ಎಂಬ ಲೇಖನ, ಈ ಕಾವ್ಯದ ಹಿನ್ನೆಲೆಯನ್ನು ವಿವರಿಸಿ ಮೂಲ ಲೇಖಕಿ- ಅನುವಾದಕಿಯರ ಮಾತುಗಳಿವೆ. ************************************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

ಗಾಯಗೊಂಡ ಹೃದಯದ ಸ್ವಗತ Read Post »

You cannot copy content of this page

Scroll to Top