ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬೆಳಗಬೇಕಾದರೆ..!

ಸುಮನಸ್ವಿನಿ. ಎಂ

Light Up, Shine Bright - Candle Burning Tips + Tricks – The Good Planet  Company

ನೋವ ನುಂಗಲು ಹಿಂಜರಿಯದೇ
ಘರ್ಷಿಸಿಕೊಳ್ಳಬೇಕು
ಬೆಳಕ ಹೊತ್ತಿಸಬೇಕಾದರೆ…

ಸುಟ್ಟುಕೊಳ್ಳುವ ಅಂಜಿಕೆಯಿಲ್ಲದೇ
ನಿರ್ಭಯ ಗೀರಿಕೊಳ್ಳಬೇಕು
ಬೆಳಗಬೇಕಾದರೆ…

ಕರಗಿಹೋಗಲು ಕಳವಳಗೊಳದೇ
ಪ್ರಾಂಜಲ ದಹಿಸಬೇಕು
ಪ್ರಜ್ವಲಿಸಬೇಕಾದರೆ…

ಬೂದಿಯಾಗಲು ಹೆದರದೇ
ಹೊತ್ತಿ ಉರಿಯಬೇಕು
ಬೆಳಕಾಗಬೇಕಾದರೆ…

ಮಾಯವಾಗೋ ಭಯವ ಮೀರಿ
ನಿರಂತರ ಧಗಧಗಿಸಬೇಕು
ಶಾಶ್ವತ ಮಿನಗುತಿರಬೇಕಾದರೆ…

******************************************

About The Author

Leave a Reply

You cannot copy content of this page

Scroll to Top