ಗಜಲ್ ರೇಖಾ ಭಟ್ ಗುಡಿಸಲುಗಳ ಹೊಸ್ತಿಲಲಿ ಹಣತೆಗಳು ಬೆಳಗಿದರೆ ಅಂದು ದೀಪಾವಳಿಹಬ್ಬಿದ ಗೆದ್ದಲುಬಳ್ಳಿ ಉದುರಿ ಹಸೆಚಿತ್ರ ಮೂಡಿದರೆ ಅಂದು ದೀಪಾವಳಿ ಹಬ್ಬವೆಂದರೆ ಹೊಸ ಬಟ್ಟೆ ಹೊಸ ವೇಷ ಹೊಸ ನೋಟ ಇಷ್ಟೇ ಅಲ್ಲಹರಿದ ಅಂಗಿಯ ತುದಿಯಲಿ ಪಾಯಸವು ಅಂಟಿದ್ದರೆ ಅಂದು ದೀಪಾವಳಿ ರಂಗು ಬೆಳಕಿನಲಿ ನಡೆವ ನಶೆಯ ಕೂಟಗಳಿಗೆ ದೀಪಾವಳಿಯೇ ಆಗಬೇಕೆ‘ಮದ್ಯ’ದಲಿ ಕರಗುವ ಪುಡಿಗಾಸು ಕೂಸಿನ ಕಾಲ್ಗೆಜ್ಜೆಗಾದರೆ ಅಂದು ದೀಪಾವಳಿ ನೊಂದ ಜೀವಗಳಲಿ ಆಶಾಭಾವದ ಮಿಣುಕು ಮೊದಲು ಉದಿಸಬೇಕಿದೆ ಇಲ್ಲಿಕಸಮುಸುರೆಯಲಿ ಕನಸರಳಿಸುವ ಕೈಗಳಿಗೆ ಬಿಡುವಾದರೆ ಅಂದು ದೀಪಾವಳಿ ಬದುಕೇ ಹಬ್ಬವಾದವರಿಗೆ ಈ ಹಬ್ಬಗಳ ಸಾಲು ನಾಮಾಂಕಿತ ‘ರೇಖೆ’ಗಳುಸೋತ ಕಂಗಳ ಆಳವನು ಬೆಳಕೊಂದು ತಡವಿ ತಬ್ಬಿದರೆ ಅಂದು ದೀಪಾವಳಿ ನಿನ್ನೊಲವ ಅರಿತ ಮೇಲೆ ಪ್ರೀತಿಯ ವ್ಯಾಖ್ಯಾನವನು ಹುಡುಕಲಿಲ್ಲಜೀವಭಾವ ಬೆರೆತ ಮೇಲೆ ಅನುಸಂಧಾನದ ಅರ್ಥವನು ಹುಡುಕಲಿಲ್ಲ ನಿನ್ನ ಮೇಲೆ ಮುನಿಸು ಹೆಚ್ಚಿದಂತೆಲ್ಲಾ ಕುದಿಯುವುದು ನನ್ನದೇ ಹೃದಯನೀ ನನ್ನೊಳಗಿರುವೆ ಎಂದರಿತ ಮೇಲೆ ಸಲ್ಲದ ನೆಪಗಳನು ಹುಡುಕಲಿಲ್ಲ ಎಂಟು ದಿಕ್ಕಿಂದ ತೂರಿಬರುತಿವೆ ರಾಗಗಳು ಯಾವುದಕ್ಕೆ ಕಿವಿ ತೆರೆಯಲಿಅನುರಾಗದ ಅಲೆಗಳು ಎದೆಯ ತುಂಬಿದ ಮೇಲೆ ವಿರಹದ ಹಾಡುಗಳನು ಹುಡುಕಲಿಲ್ಲ ಈ ಪ್ರೀತಿಯು ಮಧುರ ಮಾಯೆಯಂತೆ ಆದರೂ ಮೊದಲ ಆದ್ಯತೆ ನಿನಗೆನಿನ್ನ ಸನಿಹ ನನ್ನ ಸ್ವರ್ಗ ಎಂದು ತಿಳಿದ ಮೇಲೆ ಯಾವ ಆಕರ್ಷಣೆಗಳನು ಹುಡುಕಲಿಲ್ಲ ಬರಿದೇ ಇನ್ನೇನು ಹುಡುಕಲಿ ತೃಪ್ತಿಯಾಳದಲಿ ‘ರೇಖೆ’ಯ ಮನವು ನೆಲೆನಿಂತಾಗಆತ್ಮಕ್ಕೆ ಪ್ರೇಮ ದರ್ಶನವಾದ ಮೇಲೆ ಕಾಣದ ದೇವರನು ಹುಡುಕಲಿಲ್ಲ *****************************************
ಗಜಲ್ ಮುತ್ತು ಬಳ್ಳಾ ಕಮತಪುರ ನಿಮಗೆ ಮುಳ್ಳಂತೆ ಚುಚ್ಚುವುದು ಗೊತ್ತು |ಪ್ರೀತಿಸಿದರೆ ಹೂ ಹಣ್ಣಾಗುವುದು ಗೊತ್ತು || ಕಂಗಳಿಗೆ ಸೋಲದವರು ಯಾರು ಹೇಳಿ |ಅಂದಕೆ ಮೋಸ ಮಾಡುವುದು ಗೊತ್ತು || ನೋವುಗಳು ನುಂಗಿದ ಮೌನ ಸಾಗರದಷ್ಟು |ಒಂದು ತಪ್ಪು ಬದುಕೇ ಬದಲಿಸುವುದು ಗೊತ್ತು || ಅಲೆವ ಜೀವ ನದಿ ಕೊನೆಗೆ ಅಂತ್ಯವಾಗುದೆ |ಬೆಣ್ಣೆಯಂತ ಸ್ನೇಹ ಬೆಸೆಯುವುದು ಗೊತ್ತು || ಒಂಟಿ ಚಂದ್ರನು ಬಣ್ಣ ಬದಲಿಸಿದ ಮುತ್ತು|ಬೆವರ ಹನಿ ನೆಲವ ತಣಿಸಿರುವುದು ಗೊತ್ತು | ಕದಡಿದ ಮನದಲಿ ಆಸೆಯ ನಶೆಯನು ತುಂಬಿ ಉಸಿರಿಗೆ ಉಸಿರಾದವಳೇ ಆಲಿಸು |ಹರಿಯುವ ಕೊಳದ ನೀರಲಿ ಬಿಂಬವ ತೋರಿ ಕ್ಷಣದಲಿ ಮಾಯವಾದವಳೇ ಆಲಿಸು || ಬನದಲಿ ಹಾರುವ ಪತಂಗ ಮುಟ್ಟಿದರೆ ಮುನಿಯುವ ನಾಜೂಕಿನ ಬಣ್ಣದವಳು |ಊರ ಹೊರಗಿನ ಹನುಮದೇವರಿಗೆ ಹರಕೆಯ ಕಟ್ಟಿ ಕಾಯುತ್ತಿರುವಳೇ ಆಲಿಸು | ಬೆರಳ ತುದಿಯಲಿ ನೆಲವ ತೀಡುತ್ತಾ ನಾಚಿ ತುಟಿಯನು ಕಚ್ಚಿ ಮರೆಯಾದವಳು|ಊರ ಮುಂದಿನ ಬಾವಿಯಲಿ ನೀರನ್ನು ಸೇದುವಾಗ ಜೊತೆಯಾದವಳೇ ಆಲಿಸು || ಕಣ್ಣ ಸನ್ನೆ ಮಾಡಿ ಮೌನವಾಗಿ ಪಿಸುನಕ್ಕರು ಅರಿಯದ ಮಡ್ಡಿ ಮಣ್ಣಿನವಳು |ಆಟದ ನೆಪದಲಿ ನಿನ್ನ ಕೈಗೆ ಸಿಕ್ಕರು ಮುಟ್ಟದೆ ಗಾಬರಿಯಾದವಳೇ ಆಲಿಸು || ಆಚೆ ಬೀದಿಯ ಸಂದಿಯಲಿ ಕದ್ದು ಮುಚ್ಚಿ ಭೇಟಿಯಾದ ಸಂಗತಿಯೆ ಮುತ್ತುದುಂಬಿಯ ಗೆಳತನ ಬಯಸಿದ ಸುಮಸ್ಪರ್ಶಕೆ ನಾಚಿ ನೀರಾಗಿ ಸಾರ್ಥಕವಾದವಳೇ ಆಲಿಸು ||
ಗಜಲ್ ವೀಣಾ .ಎನ್. ರಾವ್. ಎದೆಯ ನದಿಯಲಿ ಹರಿಯಲಿ ಒಲವ ಭಾವಗಂಗೆ ಅನುದಿನ ಗೆಳೆಯಾಸುಧೆಯ ಸುಳಿಯಲಿ ಜಿನುಗಲಿ ನಾದದ ಜೀವಬಂಧ ಹೊಸದಿನ ಗೆಳೆಯಾ. ನಿಯಂತ್ರಣ ತಪ್ಪದ ಬದುಕಲಿ ಹುಡುಕಬೇಕಿದೆ ನಿನ್ನಯ ಸಾಂಗತ್ಯ ಸವಿಯಲುಆಮಂತ್ರಣ ನೀಡದೆ ಬರೆದೆ ನನ್ನೆದೆಯಲಿ ಕಾವ್ಯಕುಸುರಿ ಸುರಿದದಿನ ಗೆಳೆಯಾ. ನಿಲ್ಲದ ಅಭಿಲಾಷೆ ನೋಟದಲಿ ಬಂಧಿಸಿ ಮಧುರ ನುಡಿ ಮರೆಸಿದೆಸಲ್ಲದ ನೆಪದಲಿ ಹಗಲು ಕನಸಿಗೆ ಸ್ಪೂರ್ತಿಯು ಮರೆಯದದಿನ ಗೆಳೆಯಾ. ಕಿರುನಗೆಯನು ಕೆಣಕುತ ಸೆಳೆದ ಮನಕೆ ಪುಳಕದ ಸವಿರಸ ಉಣಿಸಿಹೊಸಬಗೆಯನು ತೋರುತ ಬಳಿಬಂದು ನೋವ ಮರೆತು ಸರಿದದಿನ ಗೆಳೆಯಾ. ಬೆಳಗಿದನು ರವಿಯು ಜಗದೊಡಲಿಗೆ ಹರುಷದ ಕಿರಣಗಳ ಚಿಲುಮೆ ಧಾರೆಯಲಿಸುರಿಸಿದನು ಮಧುರ ಪ್ರೇಮವ ವೀಣಾಳ ಬಾಳಿನಲ್ಲಿ ಸುದಿನ ಹಳೆಯ ದಿನಗಳ ಸವಿಯ ಸವಿಯುತ ಮನವು ನಲಿಯುತಿದೆ ಗೆಳತಿಮಳೆಯ ಸೂಚನೆಗೆ ಮೋಡವು ಕವಿಯುತ ಗಗನ ನಲುಗುತಿದೆ ಗೆಳತಿ. ಮಸುಕು ಕನ್ನಡಿಯಲಿ ಕಂಡ ಅಸ್ಪಷ್ಟ ನನ್ನದೇ ಪ್ರತಿಬಿಂಬವಿದೆ ಅಲ್ಲಿನಸುಕು ಇಬ್ಬನಿಯಲಿ ಕಾಣದ ಪರದೆ ಸಿಗದೆ ಮರೆಯಾಗುತಿದೆ ಗೆಳತಿ. ಉರಿವ ಸೂರ್ಯನಿಗೂ ಬರುವುದು ಒಮ್ಮೊಮ್ಮೆ ಗ್ರಹಣವೆಂಬ ಕರಿಯ ಛಾಯೆಜರಿವ ಜನರಲ್ಲಿ ಕುಟಿಲ ಅಂತರಂಗ ಅರಿತು ನೋವಾಗುತಿದೆ ಗೆಳತಿ. ದುಡಿವ ಕೈಗಳ ಹಿಂದಿರುವ ಬೆವರ ಶ್ರಮವು ಯಾರಿಗೂ ತೋರದುಮಿಡಿವ ಹೃದಯವು ಕಾಯುತ ನಿಂತರೂ ಉಸಿರು ಬೆದರುತಿದೆ ಗೆಳತಿ. ಮನಕೆ ಸಾಂತ್ವನ ಹೇಳಲು ವೀಣಾಳು ಜೊತೆಯಿರಲು ಭಯವೇಕೆ ನಿನಗೆಒನಕೆ ಕುಟ್ಟುತ ಹಾಡಿದ ಹೊಸರಾಗ ಎಲ್ಲರ ಒಂದಾಗಿಸುತಿದೆ ಗೆಳತಿ. ***********************
ಗಜಲ್ ಶಂಕರಾನಂದ ಹೆಬ್ಬಾಳ ಮಳೆಯ ಹನಿಗಳು ಇಳಿಯುತ ಇಳೆಗೆ ಎದೆಗಳ ತಂಪಾಗಿಸಲಿ ಸಖಿ|ಮನದಲಿ ಪ್ರೀತಿಯು ಚಿಮ್ಮುತ ತಾನಿಂದು ಭಾವಗಳ ಇಂಪಾಗಿಸಲಿ ಸಖಿ|| ಜೀವಗಳ ಬಾಂಧವ್ಯ ಬೆಸೆಯುವ ನಲ್ಮೆಯ ಸುಮಧುರ ಸ್ನೇಹವದು|ಭಾನುಭೂಮಿಗಳು ಜೊತೆಯಲಿ ಬೆರೆಯುತ ತನುಗಳ ಒಂದಾಗಿಸಲಿ ಸಖಿ|| ಒಲವಿನಲಿ ಕೂಡುವ ಸವಿ ಸ್ವಪ್ನಗಳು ಕಂಗಳಲಿ ನಲಿಯುತಿವೆ|ಚೆಲುವಿನ ಸಿರಿಯು ಧರಣಿಯ ಮೆಲ್ಗಡೆ ಹಸಿರಿನು ಸೊಂಪಾಗಿಸಲಿ ಸಖಿ|| ಇಬ್ಬನಿಯಲಿ ಕಿರಣಗಳು ರವಿಯ ಕಾಂತಿ ತೋಷದಲ್ಲಿ ಚಲ್ಲುತಿವೆ|ಕಾರ್ಮೋಡ ಆಗಸದಲಿ ಶರಧಿಯ ಸೇರುತ ವರುಣನ ಸ್ವಾಗತಿಸಲಿ ಸಖಿ|| ನೀಲಾಕಾಶವು ಚಣದಲ್ಲಿ ರವಿಯನ್ನು ಹೊಳೆಸಿ ಅಭಿನವನ ಮೆರೆಸುತಿದೆ|ಧರೆಯಲ್ಲಿ ಕಲ್ಮಷಗಳ ದೂರವಿರಿಸಿ ಬರುತಿರುವ ಭಾಸ್ಕರನ ಬೆಳಗಿಸಲಿ ಸಖಿ|| ನೂರು ರಾಗದಲಿ ಸಾವಿರ ಹಾಡುಗಳ ಹಾಡುವೆನು ನನ್ನೊಡತಿ||ಸಾಗುವ ಹಾದಿಯಲಿ ಕಲ್ಲುಮುಳ್ಳುಗಳ ದಾಟುವೆನು ನನ್ನೊಡತಿ|| ಒಲಿದ ಜೀವಗಳಲಿ ಒಲುಮೆಯ ಸಂಗೀತ ಕೇಳುತಿದೆ|ಮೇಘಗಳ ಮಾಲೆಯಲಿ ಪ್ರೇಮತೇರನು ಎಳೆವೆನು ನನ್ನೊಡತಿ|| ಕೌಮುದಿಯ ಬೆಳಕಿನಲಿ ತಮವನ್ನು ಓಡಿಸುತ ಬಂದಿರುವೆ|ತೂರ್ಯವನು ಊದುತಲಿ ಮನವನ್ನು ಗೆಲ್ಲುವೆನು ನನ್ನೊಡತಿ|| ರೇಷ್ಮೆಯ ತನುವಿಂದು ತೋಳನ್ನು ಬಳಸುತ್ತ ಬರುತಲಿದೆ|ಶುದ್ದಾಂತದ ಮನೆಯಲಿ ಹಿಡಿದು ತಬ್ಬುವೆನು ನನ್ನೊಡತಿ|| ಅಭಿನವನ ನಲ್ನುಡಿಯ ಶುಕ್ತಿಯಲಿ ಮುತ್ತಾಗಿ ಹೊಳೆದಿರುವೆ |ಶೈಲೂಷಿಯ ನೃತ್ಯಕ್ಕೆ ಕಂಗಳಲಿ ಸೋಲುವೆನು ನನ್ನೊಡತಿ|| *************************************
ಗಜಲ್ ಸಿದ್ದರಾಮ ಹೊನ್ಕಲ್ ತೆರೆಯಬಾರದೇನೇ ನಿನ್ನ ಹೃದಯಕ್ಕೆ ಹಾಕಿದ ಬೀಗವನುತೋರಬಾರದೇ ದೇಹ ಮನದೊಳಗಿನ ಚೆಲುವ ಸಿರಿಯನು ಒಲವು ತುಂಬಿಟ್ಟಿರುವಿ ಯಾರೂ ಕದಿಯದಂತೆ ಕಾಪಿಟ್ಟುಮುದದಿ ಸಿಹಿ ಮುತ್ತಿಕ್ಕಿ ನೀ ತಬ್ಬದೇ ಹಬ್ಬಲು ಅರಿಯನು ಜಗದಿ ಕಳ್ಳ ಸುಳ್ಳ ಖದೀಮರೇ ಜಾಸ್ತಿ ದೋಚ ಬಲ್ಲವರುಎಚ್ಚರದಿ ದೂರವಿಡು ನಾಯಿ ನರಿ ಕಾಡು ಕೋಣಗಳನು ಹುಷಾರ್ ಕಣೇ ಬಹುದೂರ ಬಂದಿರುವಿ ಬೇಲಿ ಮರೆಯಲಿಎಲ್ಲೆಂದರಲ್ಲಿ ಕುಂತು ಹಾಕಲು ಮರೆಯದಿರು ಚಿಲುಕವನು ಹೊನ್ನಸಿರಿ’ಮೆಚ್ಚಿಹನು ನಿಸ್ವಾರ್ಥ ಸ್ವಾಭಿಮಾನ ಸಂಪತ್ತನುಜೋಪಾನದಿ ಕಾಪಾಡಿಕೋ ಮುಳ್ಳ ಮೇಲಿನ ಸೀರೆಯನು ಕಲ್ಲು ಬಂಡೆಯಂತವ ಕರಗಿ ಹಿಮದಂತಾದೆ ನಾನೇಕೆ ಹೀಗೆರಾಗಾನುರಾಗದಿ ಮುಳುಗುತ್ತಾ ಹೂವಂತಾದೆ ನಾನೇಕೆ ಹೀಗೆ ಕನಸಲಿ ಎದ್ದು ಬೆಂಬತ್ತಿ ಹೋಗುವಂತದು ಏನಿರಬಹುದುಕನಸು ನನಸು ವ್ಯತ್ಯಾಸ ಅರಿಯದಂತಾದೆ ನಾನೇಕೆ ಹೀಗೆ ಬಾಂದಳದಿ ಚಕೋರಂಗೆ ಸದಾ ಚಂದ್ರಮನ ಚಿಂತೆಯಂತೆಮಾತು ಮೌನದಿ ತಣಿದು ಮೂಕನಂತಾದೆ ನಾನೇಕೆ ಹೀಗೆ ನಟ್ಟ ನಡು ರಾತ್ರಿಯಲಿ ಧಿಗ್ಗನೆದ್ದು ಬಾಯಾರಿದ ಬವಣೆಯುಸಿದ್ದಾರ್ಥನು ಧೇನಿಸಿ ಎದ್ದುಹೋದಂತಾದೆ ನಾನೇಕೆ ಹೀಗೆ ಬಾರದ ದುಂಬಿಗಾಗಿ ಮಧು ಎತ್ತಿಟ್ಟು ಕಾದ ಗುಲಾಬಿಯಂತೆಆ ಕಾರ್ಮೋಡ ಮುಸುಕಿದ ಶಶಿಯಂತಾದೆ ನಾನೇಕೆ ಹೀಗೆ ಬರುವಾಗ ಅಳುತಾ ಬಂದೆ ಹೋಗುವಾಗಲು ನಗು ಬೇಡವೇಹೊನ್ನಸಿರಿ’ಸ್ವಾರ್ಥ ಮನಸಿಗೆ ಕಮರಿದಂತಾದೆ ನಾನೇಕೆ ಹೀಗೆ **********************************
ಗಜಲ್ ಪ್ರಭುಲಿಂಗ ನೀಲೂರೆ ಬಿಗಿ ಸಾಮೀಪ್ಯ ಇಲ್ಲದೆಯೂ ನೀ ನನ್ನ ಪ್ರಾರ್ಥನೆಯೊಳಗೆ ಅಡಗಿರುವೆ ಮುದ್ದುದೇಹ ಬೇರೆಯಾದರೂ ನೀ ನನ್ನ ಉಸಿರೊಳಗೆ ಬೆರೆತಿರುವೆ ಮುದ್ದು ಎಲ್ಲಿ ನೋಡಿದರಲ್ಲಿ ನಿನ್ನದೆ ಬಿಂಬ ನಾ ಕಾಣುತಿರುವೆ ನನಗೇನಾಗಿದೆ ಹೇಳುನಿನ್ನ ಕಂಡಂದಿನಿಂದ ಶಾಶ್ವತವಾಗಿ ನೀ ನನ್ನ ಕಣ್ಣೊಳಗೆ ನೆಲೆಸಿರುವೆ ಮುದ್ದು ನಮ್ಮ ದೇಹಗಳು ಹತ್ತಿರವಿಲ್ಲದಿದ್ದರೂ ಹೃದಯಗಳು ಎಂದೋ ಒಂದಾಗಿವೆದೂರವಿದ್ದರೂ ಪ್ರತಿಕ್ಷಣ ಮನಸ್ಸಿನೊಳಗೆ ಓಡಾಡುತಿರುವೆ ಮುದ್ದು ತಲೆ ಬಾಚಿದಾಗಲೆಲ್ಲ ನಿನ್ನ ಬೆರಳುಗಳ ಓಡಾಟ ಕಂಡು ನಾಚಿ ನೀರಾಗುತ್ತೇನೆಬೆಳದಿಂಗಳಲಿ ನೀ ನೀಡಿದ ಮುತ್ತಿಗೆ ಸಾಕ್ಷಿಗೆ ಚಂದಿರನಿಗೆ ಹೇಳಿರುವೆ ಮುದ್ದು ನಿನ್ನ ಬೆರಳ ತುದಿಯಲಿರುವ ಜಾದುವಿಗೆ ನಾನೇ ಮೈಮರೆತು ಹೋದೆನಲ್ಲಬದುಕುಪೂರ್ತಿ ಹೀಗೆ ಇದ್ದು ಬಿಡು ನಿನ್ನ ಪ್ರೀತಿಗೆ ಸೋತಿರುವೆ ಮುದ್ದು ಸಮುದ್ರದ ಅಲೆಗಳಂತೆ ಎಡೆಬಿಡದೆ ಎದೆ ಮಿಡಿತ ನಿನ್ನದೇ ಹೆಸರಲ್ಲಿದೆಅದ ಕೇಳಲು ನನ್ನೆದೆಗೆ ತಲೆಯಿಟ್ಟು ಮಲಗಲು ನೀನೆಂದಿಗೆ ಬರುವೆ ಮುದ್ದು ಎಂದೂ ಪ್ರಭುವಿನ ಕನಸಲ್ಲಿ ಬರಬೇಡ ಎದ್ದ ಕೂಡಲೇ ನೀ ದೂರಾಗುವ ಭಯಸಾವಿರ ಜನುಮಕೂ ನೆನಪುಗಳ ಹೊತ್ತೇ ನಿನಗೆ ಕಾಯುತಿರುವೆ ಮುದ್ದು ನಾ ಮರೆತರೂ ಆ ನಿನ್ನ ಸಾಲು ಮರೆಯಲು ಬಿಡುತ್ತಿಲ್ಲ ಸಾಕಿಬರೆಯುವ ಪ್ರತಿ ಅಕ್ಷರದಲ್ಲೂ ನೀನೇ ಇಣುಕುವೆಯಲ್ಲ ಸಾಕಿ ನಡೆದ ದಾರಿಯಲಿ ಜೋಡಿ ಹೆಜ್ಜೆ ಗುರುತು ಕಥೆ ಹೇಳುತಿದೆ ಕೇಳುಆಡಿದ ಪ್ರತಿ ಮಾತು ಪ್ರತಿಧ್ವನಿಯಾಗಿ ರಿಂಗಣಿಸುತಿದೆಯಲ್ಲ ಸಾಕಿ ಅದರಕೆ ಜೇನಿನ ರುಚಿ ತೋರಿ ಮತ್ತೇರಿಸಿದ ಕ್ಷಣ ಕಾಡುತಿದೆ ನೋಡುನಿನ್ನ ಕೈ ಕುಂಚವಾಗಿ ಶೃಂಗಾರದ ಚಿತ್ರ ಬಿಡಿಸುವಾಗ ಮೈಮರೆತೆನಲ್ಲ ಸಾಕಿ ಕನಸಲೂ ನಿನ್ನದೆ ದರ್ಶನ ಹಗಲಿಗಿಂತ ಇರುಳು ಹಿತವೆನಿಸುತಿದೆಮತ್ತೆ ಒಂದಾಗುವ ಕ್ಷಣಕೆ ಕಾಯುತಿರುವೆ ಕೊಟ್ಟ ಭಾಷೆ ಮರೆತಿಲ್ಲ ಸಾಕಿ ಬದುಕಿನ ಕಾದಂಬರಿಯಲಿ ಪ್ರೀತಿಯ ಅಧ್ಯಾಯ ನೀನಾಗಬೇಕಿದೆ ಒಲವೇಪ್ರಭುವಿನ ಜೊತೆ ಜೀವನಪೂರ್ತಿ ಹೀಗೆಯೇ ಇದ್ದು ಬಿಡು ಪ್ರೀತಿಗೆ ಸಾವಿಲ್ಲ ಸಾಕಿ ***************************
ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ಒಮ್ಮೆ ಯೋಚಿಸು ನೋಡು ಗಂಟು ಬಿದ್ದರೆ ಬಿಚ್ಚುವುದಿಲ್ಲ ಬದುಕು.ಒಮ್ಮೆ ಮನಸ್ಸಿಗೆ ಕೇಳಿ ನೋಡು ಮೈಗೆ ಮೈ ಉಂಡರೆ ಅಗಲುವುದಿಲ್ಲ ಬದುಕು. ಈ ಸುಖ ದುಃಖಗಳ ಆಟವೇ ಹೀಗೆ ಕಾಡಿಸಿ ಕೂಡಿಸಿ ಜೀವನ ಮುಗಿಸುತ್ತವೆ.ಒಮ್ಮೆ ಕನಸಿ ಕರೆದು ನೋಡು ಕತ್ತಲಿಗೂ ಸುಳಿವು ನೀಡುವುದಿಲ್ಲ ಬದುಕು. ದಿನಗಳು ಕಳೆದಂತೆ ಭಾರವಾಗುತ್ತದೆ ಜೀವನ ಸಾವಿನ ಎದುರು.ಒಮ್ಮೆ ಆತ್ಮ ಹೊರಗಿಟ್ಟು ನೋಡು ಹಗಲಿಗೆ ಅರ್ಥವಾಗುವುದಿಲ್ಲ ಬದುಕು. ಎಲ್ಲ ಸುಳ್ಳು ಮನೆ ಮಾತು ಬಂಧು ಬಳಗ ಮರಣ ಒಂದೇ ದಾಖಲೆ.ಒಮ್ಮೆ ಹೆಣವಾಗಿ ನೋಡು ಯಾರ ಹೆಗಲಿಗೂ ಭಯವಾಗುವುದಿಲ್ಲ ಬದುಕು. ಒಮ್ಮೆ ಯೋಚಿಸಿ ನೋಡು ಮನಸು ತಳುಕು ಬಿದ್ದ ಮೇಲೆ ಬಿಡುವುದಿಲ್ಲ ಬದುಕುಒಮ್ಮೆ “ಗಿರಿರಾಜ”ನ ಒಳಗೆ ಬಂದು ನೋಡು ಎದ್ದು ಹೋಗಲು ದಾರಿ ಬಿಡುವುದಿಲ್ಲ ಬದುಕು. ನೀವು ಮುಳ್ಳಿನ ಗಿಡ ನೆಟ್ಟು ಖುಷಿ ಪಡಬೇಡಿ.ಅಲ್ಲಿ ಒಂದು ಹೂ ಸುಗಂಧ ಬೀರುತ್ತದೆ ಮರೆಯಬೇಡಿ. ನೀವು ಪ್ರೇಮವನ್ನು ದೇಹದೊಡನೆ ಸೇರಿಸಿಕೊಂಡು ಸುಖ ಪಡಬೇಡಿ.ಅಲ್ಲಿ ಒಂದು ಆತ್ಮ ತೊಟ್ಟು ಪ್ರೀತಿ ಬಯಸುತ್ತದೆ ಮರೆಯಬೇಡಿ. ನೀವು ಶೃಂಗಾರವನ್ನು ಹೆಣ್ಣಿಗೆ ಮೀಸಲೆಂದು ಆಡಿಕೊಳ್ಳಬೇಡಿ.ಅಲ್ಲಿ ಒಂದೊಂದು ಕಣ್ಣುಗಳು ನಿಮ್ಮ ಮನಸ್ಸಿನೊಳಗೇ ಕದ್ದು ನೋಡುತ್ತವೆ ಮರೆಯಬೇಡಿ. ನೀವು ಪ್ರೇಮಿಯಾಗಲು ಹೋಗಿ ವಿರಹದ ಮಧುಶಾಲಾ ಸೇರಬೇಡಿ.ಅಲ್ಲಿ ಒಂದು ಮತ್ಲಾ ಸಾವಿರ ಗಜಲ್ ಆಗುತ್ತದೆ ಮರೆಯಬೇಡಿ. ನೀವು ಸಾವಿಗಂಜಿ ಬಯಲ ಮುಂದೆ ಕಥೆ ಕಟ್ಟಬೇಡಿ.ಅಲ್ಲಿ ಒಂದು ಜೀವ “ಗಿರಿರಾಜ”ನಿಗಾಗಿ ಮುಪ್ಪಾಗಿ ಹೆಪ್ಪಾಗಿ ಉಪ್ಪಾಗುತ್ತದೆ ಮರೆಯಬೇಡಿ. ***********************************
ಗಜಲ್ ಶಶಿಕಾಂತೆ ತಂಗಾಳಿಗೆ ಮೈ ಮರಗಟ್ಟಿ ನಿನ್ನ ನೆನಪು ಅತಿಯಾಗುತಿದೆ ನೀ ಬಳಿ ಬರಲಾರೆಯಾನಿನ್ನ ತೋಳೊಳಗೆ ಬಿಗಿಯಾಗಿ ಬಂಧಿಸಿ ಮಧುಚಂದ್ರದ ಸುಖ ನೀಡಲಾರೆಯಾ. ನನ್ನ ನಿನ್ನ ಹೃದಯಗಳು ಒಂದಾದಾಗ ಆದ ಅನುಭವದ ಬಯಕೆ ಆಗುತಿದೆನಮ್ಮೊಲವ ಬಗ್ಗೆ ನಾ ಕಂಡ ಕನಸುಗಳನು ನನಸು ಮಾಡಲಾರೆಯಾ ನಿನ್ನನ್ನಪ್ಪಿ ಎದೆಗೊರಗಿ ದೊರೆ ಎನ್ನುವಾಗ ಅದೇನೋ ಸಂತಸ ನನ್ನೊಳಗೆನೀ ಬಂದು ಕುರುಳ ಸವರಿ ರಾಣಿ ಎಂದು ಮನಸ್ಪೂರ್ತಿಯಾಗಿ ಕರೆಯಲಾರೆಯಾ. ಪ್ರೇಮ ಕಾನನದೊಳಗೆ ನಿನ್ನೊಡನೆ ಕೈಕೈ ಬೆಸೆದು ವಿಹರಿಸುವ ಹುಚ್ಚು ಆಸೆನೀನಿದ್ದರೆ ಅದೆಷ್ಟು ಸೊಗಸು,ನನ್ನ ಬೇಸರ,ಒಂಟಿತನವ ನೀಗಲಾರೆಯಾ ಇರುಳು ಶಶಿಯ ಬೆಳಕಲ್ಲಿ ಮನಸೊಳಗೇ ನಿನ್ನೊಡನೆ ಮೌನ ಸಂಭಾಷಣೆ ನನ್ನದುಮನದೊಳಗೆ ಸೇರಿಕೊಂಡು ನಿದಿರೆ ಕದ್ದವನು ತನುವ ತಂಪಾಗಿಸಲಾರೆಯಾ ಅಧರಗಳಲಿ ಜಿನುಗುವ ಮಧು ಹೀರಬೇಕಲ್ಲವೆ ಅನುಮತಿ ನೀಡು ಸಖಿಹೃದಯ ವೀಣೆಯಲಿ ಪ್ರೇಮರಾಗ ನುಡಿಸಬೇಕಲ್ಲವೆ ಅನುಮತಿ ನೀಡು ಸಖಿ ಮಿಂಚಿನಂತೆ ಹೊಳೆವ ಕಣ್ಣ ಕಾಂತಿ ಅಯಸ್ಕಾಂತದಂತೆ ಎಳೆಯುತಿದೆ ನನ್ನನುನನ್ನ ನಿನ್ನ ಸ್ನೇಹಸಲಿಗೆಗೆ ಕಣ್ಣುಗಳು ಸೇರಬೇಕಲ್ಲವೆ ಅನುಮತಿ ನೀಡು ಸಖಿ ಮದ್ದು ಮುದ್ದೆಂದು ಮಾತಾಡುವ ನಿನ್ನ ರೀತಿ ಚಂದ ಮರೆಯಲುಂಟೇ ಅದನುನನ್ನೆದೆಗೊರಗಿಸಿಕೊಂಡು ನಿನ್ನ ಹೆಸರನಲ್ಲಿ ಕೇಳಿಸಬೇಕಲ್ಲವೆ ಅನುಮತಿ ನೀಡು ಸಖಿ ಹಾಲಲಿ ಮಿಂದು ಬಂದಂತೆ ಮೃದುವಾದ ತನುವಿನೊಡತಿ ನೀನು ಸದಾ ಷೋಡಶಿಕಿಬೊಟ್ಟೆಯಲ್ಲಿ ಮುತ್ತಿನ ಚಿತ್ತಾರ ಬಿಡಿಸಬೇಕಲ್ಲವೆ ಅನುಮತಿ ನೀಡು ಸಖಿ ನಮ್ಮ ಸರಸವ ಮೋಡದ ಮರೆಯಿಂದ ನೋಡುವ ಶಶಿಗಿಲ್ಲದ ನಾಚಿಕೆ ನಿನಗೇತಕೆಕನಸಲಿ ಕಾಣುತ್ತಿದ್ದ ನಮ್ಮಾಸೆ ತೀರಿಸಿ ಕೊಳ್ಳಬೇಕಲ್ಲವೆ ಅನುಮತಿ ನೀಡು ಸಖಿ ******************************************
ಗಜಲ್ ರತ್ನರಾಯ ಮಲ್ಲ ಎಣ್ಣೆ, ಬತ್ತಿಗಳು ಬಜಾರಿನಲ್ಲಿ ಬಿಕರಿಯಾಗುತ್ತಿವೆ ಗಾಲಿಬ್ದೀಪ ಹಚ್ಚುವ ಮನಸ್ಸುಗಳು ಮರೆಯಾಗುತ್ತಿವೆ ಗಾಲಿಬ್ . ನಮ್ಮ ಮನೆಗಳು ಕಂಗೊಳಿಸುತ್ತಿವೆ ಬಣ್ಣ ಬಣ್ಣದ ಬೆಳಕಿನಲ್ಲಿಮನಗಳು ಕತ್ತಲೆಯ ಗೂಡಾಗಿ ಕೊಳೆಯಾಗುತ್ತಿವೆ ಗಾಲಿಬ್ ಬುದ್ಧಿವಂತಿಕೆಯ ನೆರಳಲ್ಲಿ ಗುಲಾಮಿಯು ಚಿಗುರೊಡೆಯುತಿದೆಭವ್ಯ ಚಿಂತನೆಯ ಆಪ್ತ ಕನಸುಗಳು ಪರಾರಿಯಾಗುತ್ತಿವೆ ಗಾಲಿಬ್ ಆಡಂಬರದ ಆಲಯವೇ ಈ ಸಮಾಜವನ್ನು ನಿಯಂತ್ರಿಸುತಿದೆಸಂತೃಪ್ತಿ-ಸರಳತೆಯ ದಿನಗಳು ಮರಿಚೀಕೆಯಾಗುತ್ತಿವೆ ಗಾಲಿಬ್ ‘ಮಲ್ಲಿ’ ಯ ಮನವು ಆರದ ಬೆಳಕಿಗಾಗಿ ಕನವರಿಸುತಿದೆ ಇಂದುಪರಸ್ಪರ ಪ್ರೀತಿಸುವ ಹೃದಯಗಳು ಒಂಟಿಯಾಗುತ್ತಿವೆ ಗಾಲಿಬ್.. ನಿನ್ನೊಂದಿಗೆ ಮಾತನಾಡುತ ಮಸಣವನ್ನು ಚುಂಬಿಸುವ ಆಸೆನಿನ್ನಯ ಹೆಗಲ ಮೇಲೆ ಅರೆ ಘಳಿಗೆಯಾದರೂ ಮಲಗುವ ಆಸೆ ಸ್ಮಶಾನಕ್ಕೂ ಭವ್ಯವಾದ ಪರಂಪರೆಯಿದೆ ನಮ್ಮ ಈ ನಾಡಿನಲ್ಲಿನನ್ನ ನೋಡುವ ನಿನ್ನ ಕಂಗಳಲ್ಲಿ ಸಂತೋಷವನ್ನು ಅರಸುವ ಆಸೆ ನಾನು ತಲೆ ಇಡುವ ನೆಲವು ಸಮತಟ್ಟಾಗಿದೆ ನಿನ್ನಯ ದೆಸೆಯಿಂದಪ್ರೇಮಗೀತೆಯನ್ನು ಕೇಳದ ಕಿವಿಗಳಿಗೆ ಚರಮಗೀತೆ ಆಲಿಸುವ ಆಸೆ ಮಣ್ಣಿನ ಹೆಂಟೆಗಳನ್ನು ಎಸೆಯದೆ ನನ್ನೆದೆಯ ಮೇಲೆ ಜೋಡಿಸುಮಣ್ಣು ಮುಚ್ಚುವವರೆಗೆ ನಿನ್ನ ಸಾಂಗತ್ಯದ ಸವಿ ಪಡೆಯುವ ಆಸೆ ದಪ್ಪ ಕಲ್ಲುಗಳಿಂದ ‘ಮಲ್ಲಿ’ ಗೆ ಗೋರಿ ಕಟ್ಟಬೇಡ ನೋವಾಗುವುದುಸಸಿಯನ್ನಾದರೂ ನೆಡು ನೆರಳಲ್ಲಿ ನಿನ್ನ ನೆನೆಸುತ್ತ ಜೀವಿಸುವ ಆಸೆ *************************************
ಅವಳ ಬದುಕಿನ ಪುಟಗಳಲ್ಲೊಂದು ಇಣುಕು…
ವಾರದ ಕಥೆ ಅವಳ ಬದುಕಿನ ಪುಟಗಳಲ್ಲೊಂದು ಇಣುಕು… ಟಿ.ಎಸ್.ಶ್ರವಣಕುಮಾರಿ ಆರನೆಯ ನಂಬರಿನ ಡಬಲ್ ಡೆಕರ್ ಬಸ್ ಹೊರಡುತ್ತಿದ್ದುದು ಜಯನಗರ ನಾಲ್ಕನೇ ಬ್ಲಾಕಿನ ಬಸ್ ಸ್ಟಾಪಿನಿಂದ. 9.30ಕ್ಕೆ ನಿಲ್ದಾಣಕ್ಕೆ ಬರುವ ಬಸ್ಸು 9.40ಕ್ಕೆ ಸರಿಯಾಗಿ ಅಲ್ಲಿಂದ ಹೊರಟು ಶಿವಾಜಿನಗರಕ್ಕೆ ಹೋಗುತ್ತಿದ್ದ ಆ ಬಸ್ಸಿಗೆ ವೀಣಾ ದಿನನಿತ್ಯದ ಪಯಣಿಗಳು. ಸ್ಟ್ಯಾಂಡಿಗ್ ಸೀಟಿನ ಕಚಿಪಿಚಿ ಇರುವುದಿಲ್ಲವಾದ್ದರಿಂದ ಅವಳಿಗೆ ಮಹಡಿಯೇ ಹಿತವೆನ್ನಿಸುತ್ತಿತ್ತು. ಬಸ್ ಹತ್ತಿದ ತಕ್ಷಣ ಮಹಡಿಯನ್ನೇರಿ ಮುಂದಿನಿಂದ ಎಡಭಾಗದ ಮೂರನೆಯ ಸೀಟಿನ ಕಿಟಕಿಯ ಬಳಿ ಖಾಯಮ್ಮಾಗಿ ಕುಳಿತು ಟಿಕೇಟು ಪಡೆದುಕೊಂಡ ತಕ್ಷಣವೇ, ತನ್ನ ಬ್ಯಾಗಿನಲ್ಲಿದ್ದ ಯಾವುದಾದರೊಂದು ಪುಸ್ತಕವನ್ನು ತೆರೆದು ಕುಳಿತರೆ ಮುಂದಿನ ಅರ್ಧ ಗಂಟೆ ಅದರಲ್ಲೇ ಮುಳುಗಿರುತ್ತಿದ್ದಳು. ಮತ್ತೆ ಇಹಕ್ಕೆ ಮರಳುತ್ತಿದ್ದುದು ಕ್ಯಾಶ್ ಫಾರ್ಮಸಿ ಸ್ಟಾಪಿಗೆ ಬಂದಾಗಲೇ. ಅವಳು ಉದ್ಯೋಗ ಮಾಡುತ್ತಿದ್ದದ್ದು ಸ್ಟೇಟ್ ಬ್ಯಾಂಕಿನಲ್ಲಿ. ಹಾಗಾಗಿ ಅಲ್ಲೆದ್ದು ಮಹಡಿಯಿಳಿದು ಮುಂದಿನ ಸ್ಟಾಪಿನಲ್ಲಿಳಿಯಲು ಅನುವಾಗುತ್ತಿದ್ದಳು. ಇಷ್ಟೆಲ್ಲಾ ವಿವರ ಏಕೆ ಹೇಳುತ್ತಿದ್ದೀನೆಂದರೆ ಅವಳಷ್ಟೇ ಖರಾರುವಾಕ್ಕಾಗಿ ಮಹಡಿಯಲ್ಲಿ ಮುಂದಿನಿಂದ ಬಲಬಾಗದ ಮೊದಲನೆಯ ಸೀಟಿನಲ್ಲಿ ಕಿಟಕಿಯ ಪಕ್ಕವನ್ನು ಕಾಯ್ದಿರಿಸಿಕೊಂಡು ಸುಮಾರು ಇಪ್ಪತ್ತೇಳು, ಇಪ್ಪತ್ತೆಂಟು ವರ್ಷದ ಒಬ್ಬಾಕೆ ಕುಳಿತಿರುತ್ತಿದ್ದಳು. ಉದ್ಯೋಗಸ್ಥೆಯಾದರೂ ನಾಗರೀಕತೆ ಅವಳನ್ನು ತಬ್ಬಿದಂತೆ ಕಾಣುತ್ತಿರಲಿಲ್ಲ. ಹಳೆಯ ಕಾಲದವರಂತೆ ಅಂಚು ಸೆರಗಿನ ಸೀರೆಯನ್ನುಟ್ಟು, ಮೈತುಂಬಾ ಸೆರಗನ್ನು ಹೊದ್ದು, ಹಣೆಗೆ ಪುಡಿ ಕುಂಕುಮ, ಅರಿಶಿನ ಬಳಿದ ಕೆನ್ನೆ, ಮುಡಿಯಲ್ಲಿರುತ್ತಿದ್ದ ಹೂವು, ಗಂಭೀರ ವದನದಿಂದ ಅವಳು ತನ್ನ ವಯಸ್ಸಿಗಿಂತ ಹಿರಿಯಳಂತೆ ಕಾಣುತ್ತಿದ್ದಳು. ಯಾರು ಮಹಡಿ ಹತ್ತಿದ ಸದ್ದಾದರೂ ತಿರುಗಿ ನೋಡುತ್ತಿದ್ದ ಅವಳ ಕಣ್ಣುಗಳನ್ನು ವೀಣಾ ದಿನವೂ ಸಂಧಿಸುತ್ತಿದ್ದರೂ, ಅವಳಿಂದ ಸ್ನೇಹ ಸೂಸುವ ಪ್ರತಿನಗೆಯಿರುತ್ತಿರಲಿಲ್ಲ. ಅವಳು ಕಾಯುತ್ತಿದ್ದದ್ದು ಅವನೊಬ್ಬನಿಗಾಗಿ… ಅವನಿಗಾಗಿ ಮಾತ್ರಾ… ಅವನು ಗಂಡನೆಂದು ಅನ್ನಿಸುತ್ತಿರಲಿಲ್ಲ. ಗಂಡನಾಗಿದ್ದರೆ ಒಟ್ಟಿಗೇ ಬರುತ್ತಿದ್ದರಲ್ಲ! ಅವನು ಬರುವವರೆಗೂ ಘಳಿಗೆಘಳಿಗೆಗೂ ತಿರುತಿರುಗಿ ನೋಡುತ್ತಾ, ಅವನನ್ನು ಕಂಡ ತಕ್ಷಣ ಅವಳ ದುಂಡನೆಯ ಮುಖ ಹಿಗ್ಗಿನಿಂದ ಉಬ್ಬಿ, ಅರಿಶಿನ ಬೆರೆತ ಕೆನ್ನೆಗೆ ಒಂದಿಷ್ಟು ಕುಂಕುಮವೂ ಸವರಿದಂತೆ ಕೆಂಪಾಗಿ, ಪಕ್ಕಕ್ಕೆ ಸರಿದು ತನ್ನ ಜಾಗವನ್ನು ಅವನಿಗೆ ಬಿಟ್ಟುಕೊಟ್ಟು ಕಿಟಕಿಯ ಪಕ್ಕಕ್ಕೆ ಸರಿಯುತ್ತಿದ್ದಳು. ತಕ್ಷಣವೇ ಅವರಿಬ್ಬರದೂ ಅದೇನು ನಗು, ಹರಟೆ… ಅವಳನ್ನು ನೋಡಿದರೆ ಅವಳಿಷ್ಟು ನಗಬಹುದೆಂದಾಗಲೀ, ಮಾತನಾಡಬಹುದೆಂದಾಗಲೀ ಅನ್ನಿಸುತ್ತಲೇ ಇರಲಿಲ್ಲ. ವೀಣಾ ಇಳಿಯುವವರೆಗೂ ಅವರಿಬ್ಬರೂ ಹೆಚ್ಚುಕಡಿಮೆ ಅದೇ ಲೋಕದಲ್ಲೇ ಇರುತ್ತಿದ್ದರು. ಪ್ರಾಯಶಃ ಇಬ್ಬರದೂ ಶಿವಾಜಿನಗರದ ಬಸ್ ನಿಲ್ದಾಣವಿರಬೇಕೇನೋ… ಅಥವಾ ಎಂ.ಜಿ.ರೋಡ್ ಸ್ಟಾಪೋ… ವೀಣಾ ವಾಪಸ್ಸಾಗುವಾಗಲೂ ಒಂದೊಂದು ದಿನ ತುಂಬಿದ ಬಸ್ಸಿನಲ್ಲಿ ಸಿಗುತ್ತಿದ್ದ ಅವಳು ಒಂದು ದಿನವೂ ಸಹಪ್ರಯಾಣಿಕರಲ್ಲಿ ವಿನಿಮಯವಾಗಬಹುದಿದ್ದ ಒಂದು ಪರಿಚಿತ ನಗೆಯನ್ನೂ ಬೀರದೆ, ತನ್ನ ಲೋಕದಲ್ಲೇ ಮುಳುಗಿದಂತೆ ಕುಳಿತಿದ್ದು ನಾಲ್ಕನೇ ಬ್ಲಾಕಿನ ಸ್ಟಾಪಿನಲ್ಲಿ ಇಳಿದು ಯಾರನ್ನೂ ನೋಡದೆ ತನ್ನ ಪಾಡಿಗೆ ತಲೆತಗ್ಗಿಸಿಕೊಂಡು ನಡೆದುಬಿಡುತ್ತಿದ್ದಳು. ಇಷ್ಟು ವಿರಾಗಿಯಂತಿರುವ ಇವಳು ಯಾರನ್ನಾದರೂ (ಅವನನ್ನು?) ಅಥವಾ ಇವಳನ್ನು ಯಾರಾದರೂ ಪ್ರೀತಿಸಲು ಸಾಧ್ಯವೇ?! ಹಾಗಾದರೆ ಪ್ರೀತಿಯಲ್ಲಿರುವ ಆಕರ್ಷಣೆ ಇನ್ನೆಂತಹುದು ಎಂದು ಎಷ್ಟೋ ವೇಳೆ ವೀಣಾಳಿಗೆ ಅಚ್ಚರಿಯಾಗುತ್ತಿತ್ತು. ಏಕೆಂದರೆ ವೀಣಾ ಪ್ರೀತಿಸಿದ್ದು ಮದುವೆಯಾದ ಮೇಲೆ ಗಂಡನನ್ನು. ಇಂತಹ ಪ್ರೀತಿ, ಪ್ರೇಮ ಅನುಭವಕ್ಕೆ ಬರುವ ಮೊದಲೇ ಮದುವೆಯಾಗಿತ್ತು ಹಾಗೆಯೇ ಅವಳ ಈ ನಡತೆ ಅವಳಿಗೊಂದು ನಮೂನೆಯ ಕುತೂಹಲವನ್ನು ಹುಟ್ಟಿಸುತ್ತಿತ್ತು. ಒಂದಷ್ಟು ದಿನಗಳ ನಂತರ ವೀಣಾಗೆ ಅದೇ ಬಸ್ಸಿನಲ್ಲಿ ಹೊಸತಾಗಿ ತನ್ನದೇ ಕಾಂಪೌಡಿನ ಬ್ರ್ಯಾಂಚ್ ಆಫೀಸಿಗೆ ವರ್ಗವಾಗಿ ಬಂದ ಮೀರಾಳ ಪರಿಚಯವಾಗಿ ಅಂದಿನಿಂದ ಇಬ್ಬರೂ ಆ ಮೂರನೆಯ ಸೀಟಿನ ಖಾಯಂ ಪ್ರವಾಸಿಗರಾದರು. ಮುಂದಿನ ಸೀಟಿನವಳು ಗೆಳೆಯನಿಗಾಗಿ ಜಾಗ ಕಾದಿರಿಸುತ್ತಿದ್ದಂತೆ ಇವಳೂ ಪಕ್ಕದ ಜಾಗವನ್ನು ಕಾದಿರಿಸಲಾರಂಭಿಸಿದಳು. ಮೀರಾ ಒಳ್ಳೆಯ ಮಾತುಗಾರಳು, ಜೀವನೋತ್ಸಾಹದಿಂದ ಪುಟಿಯುತ್ತಿದ್ದ ಚುರುಕುಗಣ್ಣಿನ ಹುಡುಗಿ. ಒಂದೇ ಕಾಂಪೌಡಿನಲ್ಲಿ ಕೆಲಸ ಮಾಡುತ್ತಿದ್ದರೆಂದ ಮೇಲೆ ಮಾತಿನ ಸರಕಿಗೇನು ಕಡಿಮೆ? ಅವಳಿಗಿನ್ನೂ ಮದುವೆಯಾಗಿರಲಿಲ್ಲ. ಹೀಗಾಗಿ ತನ್ನ ಶಾಖೆಯಲ್ಲಿ ನಡೆಯುತ್ತಿದ್ದ ಹಲವಾರು ಲವ್ ಪ್ರಕರಣಗಳ ಬಗ್ಗೆ ಅವಳಿಗೆ ಏನೋ ಆಕರ್ಷಣೆ. ಅವರ ಚಲನವಲನಗಳನ್ನು ಆಸಕ್ತಿಯಿಂದ ಗಮನಿಸುತ್ತಿದ್ದು ತುಂಬು ಉತ್ಸಾಹದಿಂದ ದಿನಕ್ಕೊಂದು ಕತೆಯನ್ನು ಸ್ವಾರಸ್ಯಕರವಾಗಿ ಹೇಳುತ್ತಿದ್ದಳು. ʻಮದುವೆಯಾದʼ ʻಆಗದಿರುವʼ ಫರಕು ಅವರಿಬ್ಬರ ನಡುವೆ ಹೊರಟುಹೋಗಿ ಅರ್ಧ ಗಂಟೆಯ ಪ್ರಯಾಣವನ್ನು ಇಬ್ಬರೂ ಖುಷಿಯಿಂದ ಕಳೆಯುತ್ತಿದ್ದರು. ಸಂಜೆ ವಾಪಸ್ಸು ಬರುವ ವೇಳೆ ದಿನವೂ ಹೊಂದಾಣಿಕೆಯಾಗದೆ ಮೀರಾ ಒಮ್ಮೊಮ್ಮೆ ಮಾತ್ರಾ ಸಿಗುತ್ತಿದ್ದಳು. ಆದರೆ ಸಂಜೆಯ ಬಸ್ಸಿನಲ್ಲಿ ನಿಲ್ಲಲು ಜಾಗ ಸಿಕ್ಕುವುದೇ ಕಷ್ಟವಾಗಿದ್ದಾಗ ಮಾತಿಗೆ ಜಾಗವೆಲ್ಲಿ? ಅದೇನಿದ್ದರೂ ಬೆಳಗಿನ ಸರಕು! ಒಂದು ದಿನ ಇದ್ದಕ್ಕಿದ್ದ ಹಾಗೆ ಮೀರಾ ವೀಣಾಳ ಗಮನವನ್ನು ಮುಂದಿನ ಸೀಟಿನ ಜೋಡಿಯೆಡೆ ಸೆಳೆದು “ಅವರಿಬ್ಬರನ್ನು ನೋಡಿದ್ರೆ ಆಶ್ಚರ್ಯ ಆಗತ್ತಲ್ವಾ?” ಅಂದಳು “ಬಿತ್ತಾ ನಿನ್ನ ಕಣ್ಣು ಅವರ ಮೇಲೂ?” ಎಂದಳು ವೀಣಾ ನಗುತ್ತಾ. “ನನಗೊಬ್ಬಳಿಗೇ ಏನು, ಈ ಮಹಡಿಗೆ ದಿನವೂ ಹತ್ತಿ ಬರೋ ಎಲ್ಲರ ಕಣ್ಣೂ ಅವರ ಮೇಲೇ ಇರತ್ತೆ. ಇಂಟರೆಸ್ಟಿಂಗ್ ವಿಷ್ಯ ಏನೂಂದ್ರೆ ಬ್ಯಾಂಕಲ್ಲಿ ಅವರವರ ಪಾರ್ಟ್ನರ್‌ಗಳನ್ನ ಖುಷಿ ಪಡ್ಸೋಕೆ ದಿನಕ್ಕೊಂದು ಥರಾ ವೇಷ, ಮೇಕಪ್ಪು ಮಾಡ್ಕೊಂಡು ಬಂದು ಒಬ್ಬರ ಮುಂದೊಬ್ಬರು ಸುಳಿದಾಡಿ, ಕಣ್ಣಲ್ಲೇ ಮುದ್ದಾಡೋದಾದ್ಮೇಲೆ ಅವರ ದಿನ ಶುರುವಾಗತ್ತೆ. ಆದ್ರೆ ಇವಳನ್ನ ನೋಡಿದ್ರೆ ಗೌರಮ್ಮನ ತರಹ ಅವರಮ್ಮಂದೋ, ಅಜ್ಜೀದೋ ಸೀರೆ ಉಟ್ಕೊಂಡು ಉರುಳು ಹಾಕ್ಕೊಳೋ ಹಾಗೆ ಸೆರಗು ಹೊದ್ಗೊಂಡು, ಎಣ್ಣೆ ಮೆತ್ಕೊಂಡು ಬಿಗಿಯಾಗಿ ಜಡೆ ಹಾಕ್ಕೊಂಡು, ಬುಡ್ಡಮ್ಮನ ತರಹ ಮಲ್ಲಿಗೆ ಬಿಡು, ಶಾವಂತಿಗೆ, ಡೇರಾ ಬೇಕಾದ್ರೂ ಮುಡ್ಕೊಂಡು ನಮ್ಮೂರಲ್ಲಿ ಶುಕ್ರವಾರದ ಮುತ್ತೈದೇರು ಅಂತ ಪ್ರತಿ ಮಂಗಳವಾರ, ಶುಕ್ರವಾರ ಸಾಯಂಕಾಲ ದೀಪ ಹಚ್ಚೋ ಹೊತ್ಗೆ ಮನೆಮನೆಗೆ ಬುಟ್ಟಿ ಎತ್ಕೊಂಡು ಕೆಲವು ಹೆಂಗಸ್ರು ಬರೋವ್ರು… ಒಂಥರಾ ಮರ‍್ಯಾದೆಯಿಂದ ಅಕ್ಕಿ ಬೇಡೋ ರೀತಿ ಅದು, ಅವರ ಜ್ಞಾಪಕ ಬರತ್ತೆ ನೋಡು. ಅವ್ನು ಪರ‍್ವಾಗಿಲ್ಲ ತಕ್ಕಮಟ್ಟಿಗೆ ಬರ‍್ತಾನೆ. ಆದ್ರೆ ಈ ಲವ್ ಹೇಗೇಂತ” ಅಂದಳು. “ಹೌದು ಅವಳಿರೋ ರೀತಿಗೂ, ಈ ಲವ್ವಿನ ರೀತಿಗೂ ಯಾಕೋ ಹೊಂದಾಣಿಕೆಯಾಗಲ್ಲ ಅಂತ ನಂಗೂ ಅನ್ಸತ್ತೆ” ವೀಣಾನೂ ಒಪ್ಪಿಕೊಂಡಳು. “ಅವಳು ಅಲ್ಲಿ ಓರಿಯೆಂಟಲ್ ಬಿಲ್ಡಿಂಗ್ ಪಕ್ಕದ ಕ್ರಾಸಲ್ಲಿ ಒಂದು ಸಣ್ಣ ಸ್ಕೂಲಿದೆ ನೋಡು, ಅಲ್ಲಿ ಟೀಚರ್ ಅನ್ಸತ್ತೆ, ಮೊನ್ನೆ ಕೆ. ಸಿ. ದಾಸ್‌ಗೆ ಹೋಗಿದ್ದಾಗ ಅವ್ಳನ್ನ ಆ ಸ್ಕೂಲಿನ ಕಾಂಪೌಂಡಲ್ಲಿ ಮಕ್ಕಳ ಜೊತೆ ನೋಡ್ದೆ. ಅವ್ನು ಎಲ್.ಐ.ಸಿ. ಆಫೀಸಲ್ಲಿದಾನೆ. ಹೋದ್ವಾರ ನಮ್ಮ ರಂಜನಿ ಮೇಡಂ ಅಲ್ಲಿ ಏನೋ ಕೆಲ್ಸ ಇದೆ, ಸ್ವಲ್ಪ ಜೊತೆಗೆ ಬಾ ಅಂತ ಕರ‍್ಕೊಂಡು ಹೋಗಿದ್ರು. ಡಿಸ್ಪ್ಯಾಚ್ ಸೆಕ್ಷನ್‌ನಲ್ಲಿ ಇದಾನೆ. ಮೇಡಂ ಅವ್ರಿಗೆ ಬೇಕಾಗಿದ್ದ ಲೆಟರ‍್ನ ಅವನತ್ರಾನೆ ಎಂಟರ್ ಮಾಡಿಸ್ಕೊಂಡು ತಂದ್ರು” ಎಂದು ಅವರಿಬ್ಬರ ಉದ್ಯೋಗ ಚರಿತ್ರೆಯನ್ನೂ ಒಂದು ದಿನ ಬಿಚ್ಚಿಟ್ಟಳು ಮೀರಾ. ಮಧ್ಯಾಹ್ನದ ಲಂಚ್ ಅವರ್‌ನಲ್ಲಿ ಆಗೀಗ ಏನೋ ಕೆಲಸದ ಮೇಲೆ ಚರ್ಚ್ ಸ್ಟ್ರೀಟಿನ ಕಡೆಗೆ ಹೋದಾಗ ಅವರಿಬ್ಬರೂ ಪೆಟ್ರೋಲ್ ಬಂಕಿನ ಪಕ್ಕದಲ್ಲಿರುವ ಕುಲ್ಫಿ ಕಾರ್ನರಿನಲ್ಲಿ ಕುಲ್ಫಿಯನ್ನು ಮೆಲ್ಲುತ್ತಿರುವುದನ್ನೋ, ಮೂಲೆಯ ಗಣೇಶ ಭವನದಲ್ಲಿ ಮಸಾಲೆದೋಸೆಯನ್ನು ತಿನ್ನುತ್ತಿರುವುದನ್ನೋ, ಈ ಮೂಲೆಯಲ್ಲಿ ಎಳೆನೀರು ಹೀರುವುದನ್ನೋ, ಬಾಳೆಹಣ್ಣನ್ನು ಗುಳುಂ ಮಾಡುತ್ತಿರುವುದನ್ನೋ ಇಬ್ಬರೂ ಯಾವಾಗಲಾದರೂ ನೋಡಿದ್ದನ್ನು, ಮರೆಯದೆ ಮರುದಿನ ಬೆಳಗ್ಗೆ ಅದನ್ನು ಹಂಚಿಕೊಂಡಿದ್ದರು. ಪ್ರಾಯಶಃ ಮೊದಲ ಸೀಟಿನಲ್ಲೇ ಕುಳಿತಿರುತ್ತಿದ್ದುದರಿಂದ ಇರಬಹುದು, ಬೇರೆಯವರು ತಮ್ಮನ್ನು ಹೀಗೆ ಗಮನಿಸುತ್ತಿರುತ್ತಾರೆ ಅನ್ನುವುದು ಅವರ ಗಮನಕ್ಕೆ ಬಂದಿರಲಿಲ್ಲವೇನೋ… ಪ್ರೀತಿಯಲ್ಲಿ ಮುಳುಗಿರುವವರಿಗೆ ಜಗತ್ತಿನ ಬಗ್ಗೆ ಗಮನವೇಕೆ?! ಪ್ರಿಯ ಓದುಗ, ಇದು ಹೀಗೇ ನಡೆದಿದ್ದರೆ ನಾನು ಈ ಕತೆ ಹೇಳುವ ಅಗತ್ಯವೇ ಇರಲಿಲ್ಲವೇನೋ. ಹೀಗೆ ಏನೋ ಒಂದು ರೀತಿ ವಿಚಿತ್ರವಾಗಿ ನಮಗೆ ಅನ್ನಿಸುತ್ತಿದ್ದರೂ, ಅವರಿಬ್ಬರೂ ಮದುವೆಯಾಗಿ ಸುಖವಾಗಿ ಬಾಳನ್ನು ನಡೆಸಿದರು ಎಂದು ಕತೆ ಮುಗಿಯುತ್ತಿತ್ತಷ್ಟೇ. ಹೀಗೇ ಎಷ್ಟೋ ತಿಂಗಳುಗಳು ಕಳೆದ ಮೇಲೆ ಒಂದಷ್ಟು ದಿನ ಅವರಿಬ್ಬರೂ ಕಾಣಲೇ ಇಲ್ಲ. ದಸರಾ ರಜೆಯಿಂದ ಸ್ಕೂಲಿಲ್ಲವೇನೋ, ಹಾಗೇ ಕಂಡಿಲ್ಲ ಎಂದು ಇಬ್ಬರೂ ಗೆಳತಿಯರೂ ಅಂದುಕೊಂಡರು. ಆದರೆ ಹಬ್ಬ ಮುಗಿದು ವಾರವಾದರೂ ಪತ್ತೆಯಿಲ್ಲ. ʻಏನಾಯಿತು ಈ ಪ್ರೇಮ ಪಕ್ಷಿಗಳಿಗೆ?ʼ ಎಂದು ಇಬ್ಬರೂ ಅಂದುಕೊಳ್ಳುತ್ತಿರುವಾಗಲೇ ಒಂದು ಬೆಳಗ್ಗೆ ಆಕೆ ಮೊದಲ ಸೀಟಿನಲ್ಲಿ ಕಾಣಿಸಿಕೊಂಡಳು. ತಕ್ಷಣ ಮೀರಾ “ಆಹಾ… ಲವ್ ಬರ್ಡ್ಸ್ ಆರ್ ಬ್ಯಾಕ್ ಅಗೇನ್” ಎಂದು ಖುಷಿಪಟ್ಟಳು. ಆದರೆ ಆಕೆ ಯಾಕೋ ತಿರುತಿರುಗಿ ನೋಡುತ್ತಾ ಅವನನ್ನು ಕಾಯುತ್ತಿರಲಿಲ್ಲ. ಬಸ್ ಹೊರಟರೂ ಅವನ ಪತ್ತೆಯಿಲ್ಲ. “ಏನಿದು, ಯಾಕೆ ಬಂದಿಲ್ಲ?” ಎಂದ ಮೀರಾನಿಗೆ “ಅವನಿಗೇನಾದ್ರೂ ಹುಷಾರಿಲ್ಲವೇನೋ. ಅವಳೂ ಸಪ್ಪಗಿದ್ದ ಹಾಗಿದೆ. ಒಂದೆರಡು ಸಲ ಕಣ್ಣೊರೆಸಿಕೊಂಡಳು ಕೂಡಾ, ಕಿಟಕಿಯತ್ತಲೇ ನೋಡುತ್ತಿದ್ದಾಳೆ ನೋಡು” ಅಂದಳು ವೀಣಾ. “ಹಾಗಂತೀಯಾ, ಪಾಪ ಲವ್ ಬ್ರೇಕಾಗಿಲ್ದಿದ್ರೆ ಸಾಕು. ಅವ್ನು ಬೇಗ ಹುಷಾರಾಗಿ ಬರಲಿ” ಎಂದಳು ಮೀರಾ. ಒಪ್ಪಿ ತಲೆಯಾಡಿಸಿದಳು ವೀಣಾ. ಒಂದು ವಾರವಾಯಿತೇನೋ… ಇದೇ ಕತೆ ಮುಂದುವರೆಯಿತು. ಗೆಳತಿಯರಿಬ್ಬರೂ ಪಾಪ ಅವನು ಬೇಗ ಬರಲಿ, ಇವಳ ದುಃಖ ನೋಡಕ್ಕಾಗಲ್ಲ ಎಂದು ದಿನದಿನವೂ ಹಾರೈಸಿದರು. ಅದೊಂದು ದಿನ ಇನ್ನೇನು ಬಸ್ಸು ಹೊರಡುವ ಹೊತ್ತಿಗೆ “ಇಲ್ಲಿ ಸೀಟಿದೆ ಬಾ” ಎನ್ನುತ್ತಾ ಮೆಟ್ಟಿಲನ್ನು ಹತ್ತಿದ ಗಂಡಸಿನ ದನಿ ಕೇಳಿತು. ಪರಿಚಿತವೆನಿಸಿದ ದನಿ ಕೇಳಿದ ತಕ್ಷಣ ಇಬ್ಬರೂ ತಿರುಗಿದರು. ಅದೇ ಅವನೇ! ಮದುವೆಯಾಗಿರಬೇಕು… ಯಾರೋ ತರುಣಿಯ ಕೈಹಿಡಿದುಕೊಂಡು ಹತ್ತಿಬಂದು ಎರಡು ಸೀಟಿನ ಹಿಂದೆ ಖಾಲಿಯಿದ್ದ ಸೀಟಿನಲ್ಲಿ ಕುಳಿತ. ಅವನ ಕತ್ತಿನಲ್ಲಿ ಮಿಂಚುತ್ತಿದ್ದ ಹೊಸ ಚೈನು, ಬೆರಳಲ್ಲಿದ್ದ ಹೊಸ ಚಿನ್ನದುಂಗುರ, ಅವಳ ಕತ್ತಿನಲ್ಲಿದ್ದ ಮಾಂಗಲ್ಯದ ಸರ, ಅಂತೆಯೇ ಬೆಳಗುತ್ತಿದ್ದ ಅವಳ ಮುಖ ಅವನ ಹೊಸ ಕತೆಯನ್ನು ತಾನೇ ಹೇಳಿತು. ಅವರ ಸಲ್ಲಾಪ ಆರಂಭವಾಯಿತು. ವೀಣನಿಗೆ ಕೋಪವುಕ್ಕಿ “ಹೀಗ್ಮಾಡೋಕೆ ಹೇಗ್‌ಮನಸ್ಬರತ್ತೆ? ಆ ಮುಠ್ಠಾಳಂಗೆ ಮುಂದಿನ ಸೀಟಿನಲ್ಲಿ ಅವ್ಳು ಕೂತಿದಾಳೇಂತಾನೂ ಅನ್ನಿಸ್ತಿಲ್ವಲ್ಲ” ಎಂದಳು ಮೆಲುದನಿಯಲ್ಲಿ. “ಪಾಪಿ, ಕಟುಕ ಅವ್ನು” ಮೀರಾನೂ ಜೊತೆಗೂಡಿದಳು. ಯಾವುದೇ ರೀತಿಯಲ್ಲಿ ಅವರಿಬ್ಬರ ಕತೆಯಲ್ಲಿ ಇವರಿಬ್ಬರ ಪಾತ್ರವಿರದಿದ್ದರೂ, ಇಬ್ಬರ ಮನಸ್ಸೂ ವ್ಯಗ್ರವಾಗಿತ್ತು. ಕೆಲವು ದಿನಗಳ ನಂತರ ಆ ಹೆಂಗಸು ಬರುವುದನ್ನೇ ಬಿಟ್ಟಳು… ಇವನು ತನ್ನ ಹೊಸ ಹೆಂಡತಿಯೊಡನೆ ಯಾವಾಗಲಾದರೂ ಬಸ್ಸಿನಲ್ಲಿ ಕಂಡು ಮೀರಾ, ವೀಣಾರಿಗೆ ಅವಳನ್ನು ನೆನಪಿಸುತ್ತಿದ್ದ ಅಷ್ಟೇ. ಇಲ್ಲವಾದರೆ ಇಬ್ಬರಿಗೂ ʻಅವಳʼ ನೆನಪು ಮಾಸಿದೆ. * ಹೀಗೇ ಒಂದೆರಡು ವರ್ಷಗಳೇ ಕಳೆದಿತ್ತೇನೋ. ಮೀರಾಗೂ ಮದುವೆಯಾಗಿ ಅವಳು ಕೃಷ್ಣರಾಜಪುರಕ್ಕೆ ವರ್ಗ ತೆಗೆದುಕೊಂಡಿದ್ದಾಳೆ. ವೀಣಾಗೆ ಫೋನಿನಲ್ಲಿ ಮಾತ್ರಾ ಆಗೀಗ ಸಿಗುತ್ತಾಳೆ. ವೀಣನಿಗೂ ಮಗುವಾಗಿ ಅವಳು ಮೊದಲಿನಂತೆ ಅದೇ ಬಸ್ಸನ್ನು ಹಿಡಿಯುವುದಿಲ್ಲ. ಸಿಕ್ಕಿದ ಬಸ್ ಹಿಡಿದು ಮಗುವನ್ನು ಬೇಬಿ ಸಿಟಿಂಗಿಗೆ ಬಿಟ್ಟು ಅಲ್ಲಿಂದ ಇನ್ನೊಂದು ಬಸ್ಸನ್ನು ಹಿಡಿದು ಆಫೀಸು ತಲಪುತ್ತಾಳೆ. ಇದೇ ದಿನಚರಿಯಲ್ಲಿ ಒಂದು ದಿನ ಅವಳ ಮದುವೆಯ ನಾಲ್ಕನೆಯ ವಾರ್ಷಿಕೋತ್ಸವ ಬಂದು, ಮಗುವಿರುವುದರಿಂದ ದೂರವೆಲ್ಲೂ ಹೋಗದೆ ಘಾಟಿ ಸುಬ್ರಹ್ಮಣ್ಯಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದರಾಯಿತೆಂದು ಗಂಡ ಹೆಂಡಿರಿಬ್ಬರೂ ಹೋದರು. ಅಂದು ಒಳ್ಳೆಯ ಮದುವೆ ಮುಹೂರ್ತವೇನೋ ದೇವಸ್ಥಾನದಲ್ಲಿ ಮೂರ‍್ನಾಲ್ಕು ಮದುವೆಗಳು ನಡೆಯುತ್ತಿದ್ದು ದೇವಸ್ಥಾನ ಗಿಜಿಗಿಜಿಯೆನ್ನುತ್ತಿತ್ತು. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಹೇಗೋ ದರ್ಶನ ಮುಗಿಸಿಕೊಂಡು ಬಂದು ಮೆಟ್ಟಿಲಿನ ಮೇಲೆ ಸುಧಾರಿಸಿಕೊಳ್ಳಲು ಕುಳಿತರು. ಮದುವೆಯಾದ ಜೋಡಿಗಳು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಾ ದೇವರ ದರ್ಶನಕ್ಕೆ ಸಾಗುತ್ತಿದ್ದರು. ಅದರಲ್ಲೊಂದು ಜೋಡಿಯನ್ನು ನೋಡಿದ ತಕ್ಷಣ ವೀಣಾ “ಅರೇ ಅವಳು…” ಎಂದಳು ಜೋರಾಗಿ. “ಅವಳು ಅಂದ್ರೆ ಯಾರು? ನಿಂಗೊತ್ತಾ?” ಗಂಡ ಮಹೇಶ ಕೇಳಿದ. ಉತ್ತರಿಸದೆ ಆ ಜೋಡಿಯನ್ನು ನೋಡುತ್ತಿದ್ದ ವೀಣಾಳ ಕಣ್ಣುಗಳು ತಂತಾನೇ ತುಂಬಿಕೊಂಡವು. ವರ ಖಂಡಿತವಾಗಿ ಐವತ್ತು ವರ್ಷ ದಾಟಿದವನು. ಪೇಟದ ಅಂಚಿನಿಂದ
ಅವಳ ಬದುಕಿನ ಪುಟಗಳಲ್ಲೊಂದು ಇಣುಕು… Read Post »









