ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ

ನಾಗರಾಜ್ ಹರಪನಹಳ್ಳಿ

Water Lily, Nuphar Lutea, Aquatic Plant

ಯಾಕೆ ಪ್ರೀತಿ ಬಿತ್ತಿದೆ ನನ್ನೆದೆಯ ಹೊಲದಲ್ಲಿ ; ಅದಕೆ ನಾ
ಮಗುವಿನಂತೆ ‌ನಿನ್ನ ಎದೆಗೊತ್ತಿಕೊಂಡೇ ಇರುವೆ

ಜಗದ ತುಂಬಾ ಮುಗಿಲ ಬೆಳಕ ಯಾಕೆ ತುಂಬಿದೆ ಒಲವೇ
ಅದಕೆ ನಾ
ಅವಳ ಜಗದ ಕತ್ತಲೆಯಲ್ಲೂ ದೂರ ಇರುವ ಅವಳ
ಹುಡುಕುತಿರುವೆ

ನೂರಾರು ಬಣ್ಣಬಣ್ಣದ ಹೂಗಳ ಯಾಕೆ ಈ ಭೂಮಿಗೆ ಕಳಿಸಿದೆ ಒಲವೇ
ಅದಕೆ ನಾ ; ಅವಳ ಕನಸುಗಳಿಗೆ ಬಣ್ಣ ತುಂಬಿದೆ

ಯಾಕೆ ಪ್ರತಿ ಉಸಿರಿಗೂ ನಿನ್ನ ಹೆಸರ ಬರೆದೆ ಒಲವೇ
ಅದಕೆ ನಾ
ನಿನ್ನ ಧ್ಯಾನಿಸುವೆ

ಯಾಕೆ ದನಿಗೆ ದನಿ ಸೇರಿಸಿ ತಕರಾರು ತೆಗೆದು ಮುದ್ದಿಸಿ ಪ್ರೀತಿಸಿದೆ ಒಲವೇ
ಅದಕೆ ನಾ
ಪ್ರೀತಿಯ ಪ್ರೀತಿಯಾಗುರುವೆ

ಒಲವು ಬಿತ್ತಿದ ಮೇಲೆ ಒಲವನ್ನೇ ಬೆಳೆಯುವುದು
ಎಲ್ಲಿಂದ ಕಡ ತರಲಿ ದ್ವೇಷವ
ಅದನಿಡಲು ಎದೆಯಲ್ಲಿ ಜಾಗವೇ ಇಲ್ಲ
ಹಾಗಾಗಿ ವೈರಿ ಕೈಗೂ ಪ್ರೀತಿ ಇಟ್ಟು ಬಂದೆ ಒಲವೇ
*********************

About The Author

Leave a Reply

You cannot copy content of this page

Scroll to Top