ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ದಿವ್ಯ ಅನಿಕೇತನ

ನೂತನ

Soul. Health beauty body mind red background stock images

ನೂತನಾ ಕಾವ್ಯಗುಚ್ಛ

ದೇಹ ಆತ್ಮಗಳು ಮಾತಾಡಿಕೊಂಡವು
ನನ್ನೊಳಗೆ ನೀನೊ
ನಿನ್ನೊಳಗೆ ನಾನೊ?

ಯಾರೊಳಗೆ ಯಾರಿದ್ದರೇನು
ಇದ್ದೂ ಇರದಂತೆ ಇರುವವರೆಷ್ಟಿಲ್ಲ !
ರೇಷಿಮೆಯ ಸಣ್ಣ ಅಂಚಿನ ಪತ್ತಲ
ನಿಟ್ಟುಸಿರ ಬಿಡುವುದ ಕಾಣದಂತೆ

ನಾವೀರ್ವರು ಒಂದಾದ ಕ್ಷಣಕ್ಕೆ
ಹುಣ್ಣಿಮೆಯೇ ಸಾಕ್ಷಿ
ಛಾಯೆ ಕನವರಿಸುತ್ತಾಳೆ
ನೂರ್ಕಾಲದ ಬಾಳಿಗೆ

ಹೊರನೋಟಕ್ಕೆ ಒಂದಾದರೆ
ಒಳ ಹರಿವಿಗೆ ಒಂದು

ನಾನು ನೀನೆಂಬ
ಗಡಿಯಿರದ ಗೂಡಿನಲಿ
ಜೇನು ಸವಿ ಹೀರಲು
ದೇಹದೊಲುಮೆಯಲಿ
ಆತ್ಮಜ್ಯೋತಿ ಬೆಳಗಬೇಕು ಸದಾ

ಆತ್ಮ ಬಿರಿದು ಕಣಕಣದಲಿ ಬೆಳೆದು
ಮಿಲನವ ಮೀರಿ ನಿಂತು
ಈಗ ಸರ್ವವ್ಯಾಪಿ
ಬೇಧವಿರದ, ಬಂಧವೂ ಇರದ
ದಿವ್ಯ ಅನಿಕೇತನ

**************************

About The Author

3 thoughts on “ದಿವ್ಯ ಅನಿಕೇತನ”

  1. ಮನದ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸಿದ್ದಿ. ನೂತನ ಅಭಿನಂದನೆಗಳು

Leave a Reply

You cannot copy content of this page

Scroll to Top