ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಅರುಣಾ ನರೇಂದ್ರ

Spring Bird, Bird, Spring, Robin

ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿ
ಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ

ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆ
ತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ

ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದು
ಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ

ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪು
ಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ

ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾ
ಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ

**************************

About The Author

3 thoughts on “ಗಜಲ್”

  1. ಮೇಡಂ, ಗಜಲ್ ಓದಿದರೆ ಮನಸು ಮುದ ಗೊಳ್ಳುತ್ತದೆ.ನನ್ನೆದೆಯಲಿ ದೀಪ ಹಚ್ಚಿಟ್ಟಿದ್ದಾನೆ
    ಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಎನ್ನುವ ಮಕ್ತಾದ ಸಾಲುಗಳೇ ಜೀವ ಚೈತನ್ಯ ವಾಗಿವೆ.
    ಲೌಕಿಕ ಅಲೌಕಿಕವಾಗಿಯೂ ಪರಿ ಭಾವಿಸಿ ಕೊಳ್ಳಬಹುದು
    ಶುಭಾಶಯಗಳು ಇಂತಹ ಶಕ್ತಿಶಾಲಿ ಗಜಲ್ ತೊರೆ ಹರಿದು ಬರಲಿ
    ಎ ಎಸ್ ಮಕಾನದಾರ

  2. ಮೇಡಂ ಗಜಲ್ ಮನ ಮುಟ್ಟುತ್ತದೆ.ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದು ಸಾಲುಗಳಂತೂ ಸೂಪರ್

Leave a Reply

You cannot copy content of this page

Scroll to Top