ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕೊನೆ ಆಗುವ ಮೊದಲು

ಅಕ್ಷತಾ‌ ಜಗದೀಶ

Oasis in the desert. Oasis in the middle of the Bardenas Reales desert stock photos

ಬಿಸಿಲು‌‌ ಕುದುರೆ ಬೆನ್ನತ್ತಿ
ಓಡಿದೆ ಮನವು ಕಾಲ್ಕಿತ್ತಿ
ಬಯಸಿದ್ದು‌ ಎಲ್ಲಿಯು ಸಿಗದೆ ಹೋಯ್ತು
ಕಾದ ಜೀವಕೆ ಈಗ ಸುಸ್ತಾಯ್ತು…

ಕಾಲವದು‌ ಕಣ್ಮುಂದೆ ಕರಗುತಿದೆ
ಕೈಗೆ ಸಿಲುಕದೆ ಮರೆಯಾಗುತಿದೆ
ಎಲ್ಲವೂ ‌ಬಹುಬೇಗ ಸಾಗುತಿದೆ
ನಾನೇಕೋ ನಿಧಾನವಾದೆನೋ ಎನಿಸುತಿದೆ…….

ಎಲ್ಲೋ ಒಂದು ಸಣ್ಣ ‌ಹೊಳಪು
ಪದೇ ಪದೇ ಅದೇ ಹಳೆ ನೆನಪು
ಬಾಡಿ ಹೊಗುವ ಮೊದಲೆ ಹೂ..
ಮುಡಿ ಸೇರಲಾರದ ನೋವು..

ಮರುಭೂಮಿಯಲ್ಲಿ ಕಾಣಬಹುದೇ ಒರತೆ…
ಸಣ್ಣ ಆಸೆ ಇಟ್ಟು‌ ಬರೆದೆ ಈ ಕವಿತೆ
ಕಳಿಸಿ‌ಕೊಡುವೆ ದೇವ ಈ ಬರಹ‌ ನಿನಗೆ
ಹೊಸ‌ ಚಿಲುಮೆ ‌ಉಕ್ಕಲಿ‌
ಬಾಳಿಗೆ‌ ಪೂರ್ಣವಿರಾಮ ಇಡುವ ಮೊದಲು………

*********************************************

About The Author

Leave a Reply

You cannot copy content of this page

Scroll to Top