ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಶ್ರೀಲಕ್ಷ್ಮೀ ಅದ್ಯಪಾಡಿ

The girl looks through the catcher`s ring of dreams with her beautiful and wide-open eyes. With her hands she holds feathers that hang from the catcher dreams royalty free stock images

ಕಣ್ಣ ಹನಿ ಜಾರುವ ಮುನ್ನ ಬೊಗಸೆಯೊಡ್ಡುವ ಭರವಸೆಯನ್ನು ಇತ್ತವನುನೀನಲ್ಲವೇ

ಮುಚ್ಚಿಟ್ಟ ನೂರಾರು ಕನಸುಗಳಿಗೆಚಂದದ ಮರು ಜೀವವನ್ನುಇತ್ತವನುನೀನಲ್ಲವೇ

ಸಾಮಾನ್ಯಳಾದ ನನ್ನಲ್ಲಿ ಅಸಾಮಾನ್ಯಳೆಂಬ ಆತ್ಮ ವಿಶ್ವಾಸವನ್ನುತುಂಬಿದವನೇ ನೀನು

ನಿನಗಾಗಿ ಏನಾದರೂ ಮಾಡಬಲ್ಲೆ ಎಂಬ ಭರವಸೆಯನ್ನು ಇತ್ತವನುನೀನಲ್ಲವೇ

ಸಾವಿರ ಹಸಿದ ಕಣ್ಣುಗಳ ನಡುವೆಯೂ ಪ್ರೇಮದ ಬೆಳಕು ಹೊತ್ತ ಕಣ್ಣಿನವನು ನೀನು

ಎದೆಯ ಕತ್ತಲ ನೋವುಗಳನೆಲ್ಲಮರೆಸಿ ನಗುವಿನ ಮಿಂಚನ್ನುಇತ್ತವನುನೀನಲ್ಲವೇ

ಬರಿದೆಬಯಲಮರೀಚಿಕೆಯಂತಿದ್ದಭವಿತವ್ಯದಬದುಕಿನಲಿಹೊಂಗನಸತುಂಬಿದೆ ನೀನು

ಸುಡುವ ಬೆಂಗಾಡಾಗಿದ್ದಮರುಭೂಮಿಯಲಿತಣ್ಣನೆಯನೆಳಲನ್ನುಇತ್ತವನುನೀನಲ್ಲವೇ

ನನ್ನೆದೆಯಕ್ಯಾನ್ವಾಸ್ ಮೇಲೆ ಬಣ್ಣ ಬಣ್ಣದ ಕಾಮನಬಿಲ್ಲನುಮೂಡಿಸಿದವನು ನೀನು

ಶ್ರೀಯನೋವಿನ ಭಾವಗಳ ಮರೆಸಿಸಂತಸದಿಂದಿರುವಮುತ್ತುಗಳನ್ನುಇತ್ತವನುನೀನಲ್ಲವೇ

**************************************************************

About The Author

1 thought on “ಗಜಲ್‌”

Leave a Reply

You cannot copy content of this page

Scroll to Top