ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಕಳೆದವರು Read Post »

ಪುಸ್ತಕ ಸಂಗಾತಿ

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ ಪ್ರಶ್ನೆಗೆ ಹಿಂಸೆಯ ಆಚೆಗೂ ಇರುವ ಬಹಳಷ್ಟು ವರ್ತನೆಗಳನ್ನು ಕಾಣಿಸುವುದು ಮುಖ್ಯವಾಗಿದೆ ಎನ್ನುವುದರ ಮೂಲಕ ನನಗೆ ತುಂಬಾ ಅಚ್ಚರಿ ಮೂಡಿಸಿದವರು. ಕಲೆ ಮತ್ತು ಸಾಹಿತ್ಯಗಳೆರಡನ್ನು ಸಮ ಸಮವಾಗಿ ದುಡಿಸಿಕೊಂಡ ಕ್ರಿಯಾಶೀಲ ಸ್ನೇಹ ಜೀವಿಗಳು. ಇತ್ತೀಚೆಗೆ ಪ್ರಕಟವಾದ ಉಲ್ಟಾ ಅಂಗಿಯ ನಂತರ ಇದೀಗ “ಗಿರಗಿಟ್ಟಿ” ಎನ್ನುವ ೧೫ ಕತೆಗಳನ್ನು ಹೊಂದಿರುವ ಸಂಕಲನದ ಮೂಲಕ ನಮ್ಮ ಮುಂದಿದ್ದಾರೆ. ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯತೆ ಈ ಕತೆಗಳಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದ್ದರೂ ಈ ಬಾರಿ ಭಾವನಾತ್ಮಕ ಅಂಶಗಳೊಂದಿಗೆ ಪುಳಕಿತಗೊಳಿಸುತ್ತಾರೆ. ಇದಕ್ಕೆ ‘ಹಸಿವಾಗಿಲ್ವಾ’ ಕತೆಯಲ್ಲಿ ಹಸಿವನ್ನು ಕುರಿತು ತಾಯಿ ಆಡುವ ಮಾತು ನಡೆದುಕೊಳ್ಳುವ ರೀತಿಯ ಮೂಲಕ ಮಕ್ಕಳಲ್ಲಿ ಹುಟ್ಟುವ ಪ್ರಶ್ನೆಗಳು ಅವರ ಮತ್ತು ಓದುಗರ ಅಂತರಂಗವನ್ನು ಕಲಕುತ್ತವೆ. ನನ್ನ ಒಂದು ಅವಲೋಕನದ ಮೂಲಕ ಕಪ್ಪೆ ಇವರ ಬರವಣಿಗೆಯಲ್ಲಿ ಬಹು ವೈವಿಧ್ಯಮಯವಾಗಿ ಅಭಿವ್ಯಕ್ತಿಗೊಳ್ಳುವ ಬತ್ತದ ಒರತೆಯಾಗಿದೆ. ಇದಕ್ಕೆ “ಕಪ್ಪೆಯ ಕಣ್ಣು” ಕಥೆ ಉದಾಹರಣೆಯಾಗಿದೆ. ಮಕ್ಕಳು ಮತ್ತು ದೊಡ್ಡವರ ನಡುವಿನ ವರ್ತನೆಗಳನ್ನು ಸೂಕ್ಷ್ಮವಾಗಿ ತೌಲನಿಕವೆಂಬಂತೆ “ಕತ್ತಲು” ಕತೆಯ ಮೂಲಕ ಚಿತ್ರಿಸುವ ಇವರು ಮಕ್ಕಳ ಬೆರಗುಗಣ್ಣನ್ನು ಅರವತ್ತೊಂದರ ಹರಯದಲ್ಲೂ ಉಳಿಸಿಕೊಂಡಿದ್ದಾರೆ. “ರೋಹನ ಗಣಪು ಮತ್ತು ನಾನು” ಕತೆ ಆಧುನಿಕತೆಯಿಂದ ದೂರ ಇರುವ ಮಕ್ಕಳಲ್ಲಿ ಪ್ರತಿಭೆ ಹುದುಗಿರುವುದನ್ನು ಅನಾವರಣ ಮಾಡಿದರೆ, “ದೆವ್ವದ ಮರ” ಕತೆಯ ಮೂಲಕ ಮಕ್ಕಳ ಕಲಿಕೆಯ ಹೊಸ ಬಗೆಯ ಪ್ರಯೋಗವನ್ನು ಸೂಚ್ಯವಾಗಿ ಹೇಳುತ್ತಾರೆ. ಅಜ್ಞಾನವು ಭಯ ಹುಟ್ಟಿಸಿದರೆ ವಿಜ್ಞಾನವು ಜ್ಞಾನವನ್ನು ಹೆಚ್ಚಿಸುವುದಲ್ಲದೆ ಧೈರ್ಯವನ್ನೂ ಹೆಚ್ಚಿಸುವುದೆಂಬುದಕ್ಕೆ ಸಾಕ್ಷಿಯಾಗಿದೆ. ಓಇತಿ ರಾಜತಿರಾಜ ಕತೆಯಲ್ಲಿ ಮಕ್ಕಳ ಕುತೂಹಲ ಸೊಗಸಾಗಿ ಚಿತ್ರಿತವಾಗಿದ್ದರೆ ಹಣ್ಣು ತಿನ್ನೋ ಆಸೆ ಕತೆಯಲ್ಲಿ ಮಕ್ಕಳ ಸ್ವಭಾವಗಳ ಬಣ್ಣಗಳು ಪರಿಚಯವಾಗುತ್ತವೆ. “ಅಲ್ಲಿ ಕಂಡಿದ್ದೇನು” ಕತೆಯಲ್ಲಿ ಮಕ್ಕಳ ತುಂಟತನದ ಜೊತೆಗೆ ಹಾವಿನ ಪ್ರಸಂಗದಿಂದ ವಿಚಲಿತರಾಗಿ ಮನೆಗೆ ಬಂದಾಗ ಮನೆಯವರ ಎಲ್ಲ ಮುಖಗಳಲ್ಲಿಯೂ ಹಾವನ್ನೇ ಕಾಣುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಮಕ್ಕಳು ಸೂತ್ರ ಹರಿದ ಗಾಳಿ ಪಟದಂತೆ ಎಲ್ಲೆಂದರಲ್ಲಿ ಗಿರಕಿ ಹೊಡೆವ ಹುಮ್ಮಸ್ಸಿನ ಬುಗ್ಗೆಗಳಾಗಿರುತ್ತಾರೆ. ಇಂತಹ ಮುಕ್ತ ವಾತಾವರಣದ ಹಕ್ಕುದಾರರಿಗೆ ಪಾಲಕರು ಹಾಕುವ ಚೌಕಟ್ಟುಗಳು ವ್ಯಕ್ತಿತ್ವ ನಿರ್ಮಾಣದ ತೊಡಕುಗಳಾಗಬಲ್ಲವೆಂಬುದನ್ನು ಸೂಚ್ಯವಾಗಿ ಸೆರೆಹಿಡಿದಿದ್ದಾರೆ. ಮಣ್ಣಿನ ವಾಸನೆ ಕತೆಯಲ್ಲಿ ನಮ್ಮದಲ್ಲದ ವಸ್ತುವನ್ನು ನಮ್ಮದೆಂದುಕೊಂಡು ಬೀಗುವವರ ಗರ್ವ ಭಂಗ ನೈಜವಾಗಿ ನೈಸರ್ಗಿಕವಾಗಿಯೇ ಆಗುತ್ತದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಂತೆ ರಚಿಸಿದ್ದರೆ, ಹೆಗಲ ಮೇಲೆ ಕುಳಿತು ಕತೆಯ ಮೂಲಕ ಇಡೀ ಸಮಾಜದ ಚಿತ್ರಣವನ್ನೇ ಕಣ್ಣಿಗೆ ಕಟ್ಟುತ್ತಾರೆ. ಹೆಣ್ಣು ನಾಯಿ ಮರಿಯೊಂದು ಬೆಳೆದ ಮೇಲೆ ಸಾಕಷ್ಟು ಮರಿ ಹಾಕುತ್ತದೆ ಎಂಬ ಕಾರಣಕ್ಕೆ ತಾಯಿಯಿಂದ ಅಗಲಿಸುವುದು ಆ ಚಿಕ್ಕ ವಯಸ್ಸಿನಲ್ಲಿಯೇ ಆ ನಾಯಿ ಮರಿ ಹಸಿವೆಯಿಂದ ಬಳಲುವುದು ವೃದ್ಧರ ಮತ್ತು ಮಕ್ಕಳಲ್ಲಿ ಉಳಿದಿರುವ ಅಷ್ಟಿಷ್ಟು ಅಂತಃಕ್ಕರಣದಿಂದ ಜೀವ ಉಳಿಸಿಕೊಳ್ಳುವುದು ಕರುಣಾಜನಕವಾಗಿ ಮೂಡಿಬಂದಿದೆ. ಹೀಗೆ ಇಲ್ಲಿರುವ ಹದಿನೈದು ಕತೆಗಳೂ ವಸ್ತು ವೈವಿಧ್ಯತೆಯ ಮೂಲಕ ಗಮನ ಸೆಳೆಯುತ್ತವೆ . ಒಂದು ಚಂದದ ಮಕ್ಕಳ ಪುಸ್ತಕಕ್ಕೆ ಎಷ್ಟು ಹುಡಕಬೇಕೆಂದು ಪ್ರತಿಷ್ಟಿತ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟವರಿಗೇ ಗೊತ್ತು. ಇಂತಹ ಸೊಗಸಾದ ಪುಸ್ತಕವನ್ನು ಮನೆಗೆ ತಲುಪಿಸಿದ ತಮ್ಮಣ್ಣ ಬೀಗಾರ ಅವರು ಸಾಂಪ್ರದಾಯಕ ಚೌಕಟ್ಟನ್ನು ಮರಿದು ಸೊಗಸಾದ ಮಕ್ಕಳ ಕತೆ ಕಟ್ಟುವುದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.ಮತ್ತು ಇದರಲ್ಲಿ ಯಶಸ್ಸನ್ನು ಕಂಡವರು. ನೀತಿಯನ್ನು ಹೇಳುವುದೇ ಮಕ್ಕಳ ಸಾಹಿತ್ಯವೆಂಬ ತುಂಬಾ ಬಾಲಿಶವಾದ ಹಾಗೂ ನೀರಸವಾದ ಬರವಣಿಗೆ ಕ್ರಮವನ್ನು ಅಲ್ಲಗಳೆದು ನೈಜತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಬಲ್ಲವರಾಗಿದ್ದಾರೆ. ಮತ್ತೊಂದು ಪುಸ್ತಕದ ನಿರೀಕ್ಷೆಯಲ್ಲಿ ಗಿರಿಗಿಟ್ಟಗೆ ಶುಭಕೋರುತ್ತೇನೆ. ಗಿರಿಗಿಟ್ಟಿ ಟೈಟಲ್ ಕತೆ ಅದ್ಭುತ ರಮ್ಯ ಸ್ವರೂಪದ್ದು ಅದನ್ನು ಓದುಗರು ಓದಿಯೇ ಆನಂದಿಸಬೇಕು. ಶುಭವಾಗಲಿ. *************************************** ವಿನಾಯಕ ಕಮತದ.

ಗಿರಗಿಟ್ಟಿ Read Post »

ಕಾವ್ಯಯಾನ

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ಏಕಾಂತ… ಮೌನ… Read Post »

ಅನುವಾದ

ದ್ರೌಪದಿ ಶಸ್ತ್ರಧಾರಿಯಾಗು

ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ ಬಿಕರಿಯಾಗುತ್ತವೆಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ಚದುರಿ ಚಿಂದಿಯಾಗಿರುವ ಈ ಸುದ್ದಿ ಪತ್ರಿಕೆಗಳಿಂದ.ಇನ್ನೂ ಎಷ್ಟು ಕಾಲ ನಿರುಕಿಸುವಿ?ಈ ದುಶ್ಯಾಸನರ ದರ್ಬಾರಿನಲ್ಲಿಎಂಥ ರಕ್ಷಣೆಯ ಅಹವಾಲು?ಈ ದುಶ್ಯಾಸನ ಕಡು ದುಷ್ಟಕಡು ಲಜ್ಜಾಹೀನನೂಅವನಿಂದ ನಿನ್ನ ಶ್ರೀರಕ್ಷೆಯೇ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ನಿನ್ನೆಯ ತನಕ ಕುರುಡಾಗಿದ್ದ ರಾಜಈಗ ಮೂಗನೂ, ಕಿವುಡನೂಪ್ರಜೆಗಳ ತುಟಿಯನ್ನು ಹೊಲಿದಿದ್ದಾನೆಜೊತೆಗೆ ಕಿವಿಯ ಮೇಲೆ ಬಿಗಿ ಪಹರೆನಿನ್ನ ಈ ಕಣ್ಣೀರುಯಾರನ್ನು ತಾನೆ ಕರಗಿಸಬಲ್ಲುದು ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ. *************************

ದ್ರೌಪದಿ ಶಸ್ತ್ರಧಾರಿಯಾಗು Read Post »

ಕಾವ್ಯಯಾನ

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ ಆಡುತ ಆನಂದಿಸುವತಾಮಸವ ತೊಲಗಿಸಿ ತನ್ನರಿವಲಿ ತೇಲುವ// ****************************

ಜೀವನ ಜಲಧಿ Read Post »

ಕಾವ್ಯಯಾನ

ಹಚ್ಚಿಕೊಂಡರೆ

ಕವಿತೆ ಹಚ್ಚಿಕೊಂಡರೆ ನಿರ್ಮಲಾ ಶೆಟ್ಟರ ಸಾಕಿನ್ನು ಹೊರಡುಎನ್ನುವುದೆ ತಡ ಹೊರಡಲಾಗದು ಸರಿ ಇದ್ದುಬಿಡುಎಂದೊಡನೆ ಉಳಿಯಲಾಗದು ನಡೆಯುವ ಮುನ್ನ ನಿನ್ನೊಳಗಿನನನ್ನ ತೊರೆದು ನಡೆ ಎಂದೆನಲುಅದೆಷ್ಟು ಬಾರಿ ಅಂದುಕೊಂಡಿಲ್ಲತೊರೆಯಲಾಗದು ನನ್ನಒಳಗಿನ ನಿನ್ನ ಹೀಗೆ ಒಂದೊಮ್ಮೆ ಹಚ್ಚಿಕೊಂಡರೆರೆಕ್ಕೆ ಮೂಡಿ ನಿಂತ ಹಕ್ಕಿಮುನ್ನುಡಿ ತೀಡಿದ ಮೊದಲ ಪುಟತಾಯೊಡಲು ಸೀಳಿ ಬಂದ ಮೊಳಕೆ ಸಸಿಕಂಡಿಕೆ ಪೋಣಿಸಿಕೊಂಡ ಮಗ್ಗಎಲ್ಲದರಾಚೆ ಪ್ರೀತಿ ಕಾಪಿಟ್ಟುಕೊಂಡ ಹೃದಯ ನಡೆಯುವದು ಸರಳಾತೀ ಸರಳಅಲ್ಲಲ್ಲೆ ಚಾಚಿದ ಬೇರ ಕತ್ತರಿಸಿದಲ್ಲಿಚಿಗುರು ಆವರಿಸಿಕೊಂಡಂತೆ ಮಳೆಗೆಅಳಿದುಳಿದವು ತಮ್ಮಿರುವಿನ ಗುರುತಿನಲಿ ಭೂಮಿ ಬಸಿರ ಧಿಕ್ಕರಿಸಿದರೆಅತ್ತಂತೆ ಭಾನು ಮೋಡ ಸುರಿಸಿಮತ್ತೆ ಕನಸಿಗಾಗಿ ಕತ್ತಲೆ ಹಗಲಬಚ್ಚಿಟ್ಟಂತೆ ದಿನ ದಿನವೂ ಹಚ್ಚಿಕೊಂಡೆನೆಂದು ನೆಚ್ಚಿಕೊಳದ ನೋವುಬಾಳ ಯಂತ್ರಕೆ ಕೀಲೆಣ್ಣೆ ಕೊನೆತನಕರೆಕ್ಕೆಗಳೀಗ ಹಾರಲು ಹವಣಿಸಿವೆಆಗಸದ ಹೊಸ ಹಾದಿಗೆಅಣಿಗೊಂಡ ವಿದಾಯಕೊಂದು ನಗು ಸೇರಲಿನೀರಸವಾಗದಿರಲಿನಿನ್ನ ಹಾದಿ ಮತ್ತೆ ನನ್ನದೂ ********************************

ಹಚ್ಚಿಕೊಂಡರೆ Read Post »

You cannot copy content of this page

Scroll to Top