Day: October 5, 2020
-

ಪ್ರೀತಿಯ ಬಿತ್ತಿ ಬೆಳೆಯಲು
ಕವಿತೆ ಪ್ರೀತಿಯ ಬಿತ್ತಿ ಬೆಳೆಯಲು ನಾಗರಾಜ ಹರಪನಹಳ್ಳಿ ನಾನು ಹೆಣ್ಣಾಗುವೆಗಾಂಧಿಯಂತಹ ಮಗನ ಹೆರಲು ಹೌದು,ಗಾಂಧಿಯಂಥ ಮಗ ಬೇಕುಈ ನೆಲಕ ದಿಕ್ಕು ತೋರಿಸಲು ಸಹನೆ ,ಸತ್ಯ ಅಹಿಂಸೆ ಹಂಚುವಗೋಡ್ಸೆ ಮನದ ಬಂದೂಕುಕಸಿದು, ಭೂಮಿ ಮೇಲಿನ ಗಡಿರೇಖೆ ಅಳಿಸಿಮನುಷ್ಯರೆಲ್ಲಾ ಒಂದೇ ಎಂದು ಮನದಟ್ಟು ಮಾಡಲುಗಾಂಧಿಯಂಥ ಮಗನ ಹೆರಬೇಕು ಗೋಡ್ಸೆ ಮನದ ಗಡಿಗಳ ಅಳಿಸಿಅವನ ಕಣ್ಣಿಗೆ ಕರುಣೆ ತುಂಬಿಅವನ ದೇಹದ ಅಣು ಅಣುವಿನಲಿ ದಯೆಯ ಬಿತ್ತಿಬೆಳೆಯಲು ಗಾಂಧಿಯಂತಹ ಮಗ ಬೇಕು ಹರಿದ ನೋಟು ,ಬೀದಿ ಕಸದ ಸ್ವಚ್ಛತೆಗೆ ಮೀಸಲಿಟ್ಟ ನನ್ನ ದೇಶದ…
-

ಅಷ್ಟೇನೂ ಅಂತರವಿರಲಿಲ್ಲ
ಕವಿತೆ ಅಷ್ಟೇನೂ ಅಂತರವಿರಲಿಲ್ಲ ನಾಗರಾಜ ಮಸೂತಿ ಅಷ್ಟೇನೂ ಅಂತರವಿರಲಿಲ್ಲ,ಆದರೂನೆರಳು ತಾಗುತ್ತಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂಹೋಟೆಲ್ಲಿನ ಚೆಂಬು ಲೋಟಗಳಿಗೆನಮ್ಮ ಸ್ಪರ್ಶದ ಅರಿವಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಕರಗಳು ಕರ್ಪುರದ ಕಾವುಕಂಡಿರಲಿಲ್ಲ ಅಷ್ಟೇನೂ ಅಂತರವಿರಲಿಲ್ಲ,ಆದರೂನಮ್ಮ ಆವಾಸಗಳು ಊರಂಚಿನಲ್ಲಿ ಮಿಂಚುತ್ತಿದ್ದವು ಆದರೆ ಮನಸ್ಸುಗಳುಇದೇ ಅಂತರದ ಅಗ್ನಿಯಸ್ಪರ್ಶದಿಂದ ಕರಕಲಾಗಿದ್ದವು… ************************************
-

ನೀನಾದೆ ನೀನಾದೆ
ಕವಿತೆ ನೀನಾದೆ ನೀನಾದೆ ಶಾಂತಲಾ ಮಧು ನೀನಾದೆ ಜೀವನದದಾತೆ ತಾಯಿಜೀವನದ ದಾತರುಹಲವಾರುಮುಗ್ದ ಮನಸಿಗೆಹಬ್ಬಿ ಆಲಂಗಿಸಿಉತ್ಸಾಹಕೆ ಚಿಲುಮೆ ನೀನಾದೆ ನೀನಾದೆ ನೀನಾದೆಪ್ರೀತಿ -ಪ್ರೇಮ ವಾತ್ಸಲ್ಯದಲಿತಣಿಸಿ ಸಂಕಲ್ಪ ವಿಕಲ್ಪ ನೀನಾದೆ ನೀನಾದೆಭೂಮಿ ಆಕಾಶಜಲ-ಚರ ಪ್ರಕೃತಿನೀಭಾವನೆಗಳ ಕಲಿಸಿಪುಲಕಿಸಿ ಪ್ರಶ್ನಿಸಿಉತ್ತರವೂ ನೀನಾದೆ ನೀನಾದೆ ನೀನಾದೆತಪ್ಪು ಸರಿ ಕೊಂಡಿಗಳಪೋಣಿಸಿ ನಿನ್ನೀ ಪ್ರಿಯಸರವಾಗಿಸಿ ಮೆರಸಿನೀನಾದೆ ಆದೆಅರಿಷ್ಟ್ ವರ್ಗಗಳಿಗೆಶರಣಾಗಿಸಿ ಕಾಡಿಸಿಬಿಟ್ಟು ಬಿಡದೆಕತ್ತಲು ಬೆಳಕಮಾಯೆಯಲಿ ಮೀಯಿಸಿಮನತಟ್ಟಿ .ನೀನಾದೆನೀನಾದೆಸ್ವಾರ್ಥ ವಿಕಲ್ಪಕೆ ಪ್ರಶ್ನೆನೀನಾದೆ ಶೋಧನೆಗೆ ಹುಟ್ಟುಭಾವನೆ ಬದುಕಿಗೆಹುಡುಕಾಟ ,ನೀನಾದೆ ನೀನಾದೆತಪ್ಪಿಗೆ ಹುಸಿ ಹೊಣೆಗಾರ ನೀನಾದೆ ನೀನಾದೆಭಯ-ಭಕ್ತಿಗೆ – ಭ್ರಮೆ,ಅಳಲನಾಲಿಸಿಅಂತರಂಗದ ಮಾತಾಗಿಸತ್ಯ ನಿತ್ಯವೇ…
-

ಅಂಕಣ ಬರಹ ನೈಸು-ಬಿರುಸು ಒಮ್ಮೆ ತೊಗಲುಬೊಂಬೆ ಕಲಾವಿದರಾದ ಬೆಳಗಲ್ಲು ವೀರಣ್ಣನವರ ಜತೆಗೆ ಮಾತಾಡುತ್ತ ಕುಳಿತಿದ್ದೆ. ಮಾತುಕತೆ ನಡುವೆ ಅವರ ಮನೆಯಿಂದ ಫೋನುಕರೆ ಬಂತು. ಅವರು ಎತ್ತಿಕೊಂಡು ಮರಾಠಿಯಲ್ಲಿ ಮಾತಾಡಿದರು. ಮಾತು ಮುಗಿದ ಬಳಿಕ ನನ್ನತ್ತ ಹುಳ್ಳಗೆ ನೋಡಿ `ನಮ್ಮದು ಒರಟು ಮರಾಠಿ’ ಎಂದರು. ಉತ್ತರ ಕರ್ನಾಟಕದ ತಿರುಗಾಟದಲ್ಲಿ ಕೆಲವರು ನನ್ನ ಕನ್ನಡಕ್ಕೆ `ನಿಮ್ಮ ಮಾತು ನೈಸು. ನಮ್ಮದು ಬಿರುಸು’ ಎಂದು ಪ್ರತಿಕ್ರಿಯಿಸುವುದುಂಟು. ವಿಚಾರಿಸಿ ನೋಡಿದರೆ, ಬಿರುಸೆಂದು ಭಾವಿಸಿದವರ ಮಾತಲ್ಲಿ ಆಡುಮಾತಿನ ಪ್ರಾದೇಶಿಕ ರೂಪಗಳು ಹೆಚ್ಚ್ಚಿರುತ್ತವೆ, ನೈಸೆಂದು ಕರೆಯಲಾಗುವ…
