ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ತಲೆದಿಂಬಿನೊಳಗೆ ಅವಿತ ನಾ

ಕವಿತೆ ತಲೆದಿಂಬಿನೊಳಗೆ ಅವಿತ ನಾ ಡಾ. ರೇಣುಕಾ ಅರುಣ ಕಠಾರಿ ಈಗೀಗ ಸಾಕ್ಷಿಯ ಪ್ರಜ್ಞೆ ಮರೆತ ನಾಸದ್ದಿಲ್ಲದೆ ತಲೆದಿಂಬಿನೊಳಗಿನಿಂದಎದ್ದು ಎದ್ದು ಬರುವ ಕನಸಗಳಿಗೆ ಉತ್ತರ ಕೊಡಬೇಕಿದೆಪ್ರತಿ ಪ್ರಶ್ನೆಗೂ ಅದೇ ಉತ್ತರವೆಂದು ಹೇಳಿದಾಗಲೂ.ಮತ್ತೆ ಅಂತರಾತ್ಮದ ಹೊನಲು ಕೇಕೆ ಹಾಕುತ್ತದೆ. ಕಾಡುವ ಕನಸುಗಳು ಘಳಿಗೆಗೆ ಒಮ್ಮೆನೆನಪಿನ ನೀರುಣಿಸಿ ಈಗೀಗ ಸಾಕುತ್ತಿದ್ದೇನೆ.ಹರಿದು ಬರುವ ನೀರಿಗೆ ಆಣೆಕಟ್ಟು ಕಟ್ಟಿದಂತೆ,ನದಿಯನ್ನು ದಾಟಲು ಸೇತುವೆಯಂತೆ,ಕ್ಷಣಕ್ಷಣವೂ ಉಸಿರು ನುಂಗಿ, ಜೀವಿಸಿ.ಮೊಳಕೆ ಒಡೆದ ಸಸಿಯಂತೆ, ಹೂವು ಅರಳಿಸುವಂತೆಮತ್ತೆ ನನಗೆ ನಾನೇ ಸಾಕ್ಷಿ ರೂಪವಾಗಿ ಬದುಕುತ್ತಿದ್ದೇನೆ ಕನಸಿಗಾಗಿ. ಜೊತೆಯಾಗಿ ಬರುತ್ತೇನೆ,ಉಸಿರಿಗೆ ಉಸಿರಾಗಿ ಇರುತ್ತೇನೆನಿನ್ನ ತಲೆ ಬೆನ್ನಿಗೆ ಬಿಂಬವಾಗಿರುತ್ತೇನೆ, ಎಂದುಬಂದವನು ನಿನ್ನ ಋಣ ತೀರಿತ್ತೆಂದುಬಂದ ದಾರಿಗೆ ನಡೆದು ಬಹುದೂರ ಹೋಗಿದ್ದಾಯಿತು.ಆಗ ಕಟ್ಟಿದೆಲ್ಲವೂ ಬರೀ ಉಳಿದ ಖಾಲಿ ಕನಸುಗಳು. ಬಯಲು ಆಲಯವು ಒಂದಾದಂತೆಆ ಬೇಸುಗೆಯೂ ಬೇಸತ್ತು ಕಂಗಾಲಾಗಿಸಾಗಿ ಸಾಗಿ ಹಾರಿ ಹೋದಿದ್ದಾಯಿತು.ನನ್ನ ಪ್ರಜ್ಞಾಪೂರಿತ ಸಾಕ್ಷಿಯ ಕನಸು,ವಾಸ್ತವಿಕತೆಯೂ ಮನಸುನನ್ನ ತಲೆದಿಂಬಿನೊಳಗೆ ಜೋಪಾನವಾಗಿಯೇ ಮಲಗಿತ್ತು. *****************************************

ತಲೆದಿಂಬಿನೊಳಗೆ ಅವಿತ ನಾ Read Post »

ಕಾವ್ಯಯಾನ

ಮರ್ದಿನಿ ಆಗಲಿಲ್ಲ

ಕವಿತೆ ಮರ್ದಿನಿ ಆಗಲಿಲ್ಲ ಡಾ.ಶಿವಕುಮಾರ್ ಮಾಲಿಪಾಟೀಲ ನಾಲ್ಕಾರು ಜನರು ಅತ್ಯಾಚಾರಕ್ಕೆ ಮುಂದಾದಾಗಮನಿಷಾ,ಮಹಿಷಾಸುರ ಮರ್ದಿನಿ ಆಗಲಿಲ್ಲ ನಿನ್ನ ಗರ್ಭದಲ್ಲಿ ಹುಟ್ಟಿದರೂನಿನ್ನನ್ನು ಗರ್ಭಗುಡಿಗೆ ನಿಷೇಧಿಸಿದಾಗ ಹೆಣ್ಣುಕಾಳಿಯಾಗಲಿಲ್ಲ ವರದಕ್ಷಿಣೆಗಾಗಿ ಅವಮಾನಿಸಿಹಿಂಸೆ ಕೊಟ್ಟುಕೊಲೆ ಮಾಡುವಾಗ ಹೆಣ್ಣುದುರ್ಗೆ ಆಗಲಿಲ್ಲ ಹೆಣ್ಣು ಬೇಡವೆಂದುಭ್ರೂಣವನ್ನು ಗರ್ಭದಲ್ಲೇಕತ್ತರಿಸಲು ಬಂದಾಗ ಹೆಣ್ಣು ಚಾಮುಂಡಿ ಆಗಲಿಲ್ಲ ಮಹಾ ಗ್ರಂಥಗಳಲ್ಲಿ ಮರುಳಾಗಿಕಲೆ ,ಶಿಲೆಗಳಲ್ಲಿ ಗೊಂಬೆಯಾಗಿಗುಡಿ ಗುಂಡಾರದಲ್ಲಿ ಕುಂಕುಮ ಭಂಡಾರವಾಗಿ ಹೆಸರಿಗೆಅರ್ಧ ನಾರೇಶ್ವರಿ…ಆಗಿದ್ದು ಮಾತ್ರ ದೇವದಾಸಿ. ಕಾಡು ಮೇಡುಗಳಲ್ಲಿಚೆಲ್ಲಿದ ಹೆಣ್ಣಿನ ರಕ್ತದ ಕಲೆಗಳನ್ನು ನೋಡಿಭೂ ತಾಯಿ ಬಿರುಕೊಡೆಯಲಿಲ್ಲಗಂಗೆ,ತುಂಗೆ,ಕಾವೇರಿ,ಗೋದಾವರಿ ಎಲ್ಲಾ ಹೆಣ್ಣುಹೆಸರಿನ ನದಿಗಳು ಬರಿದಾಗಲಿಲ್ಲ ಸಾಕ್ಷಿಗಳಿದ್ದರೂಅಪರಾಧಿಗಳಿಗೆ ಶಿಕ್ಷೆ ಇಲ್ಲ..ನಿರಪರಾಧಿಯಾಗಿ ಬಂದವರನ್ನುನೋಡಿ ಓಡುತ್ತಿವೆ ಪ್ರಾಣಿಗಳುಮೃಗಗಳು ಬಂದವೆಂದು… ಮಹಾಭಾರತದಲ್ಲಿ ಅವಮಾನರಾಮಾಯಣದಲ್ಲಿ ಅನುಮಾನನವಭಾರತದಲ್ಲಿ ಅತ್ಯಾಚಾರದ ಬಹುಮಾನ ? ನಾಗರೀಕರಾಗದೆಎಷ್ಟು ಮುಂದುವರಿದರೇನು?ಮನುಷ್ಯತ್ವ ಇರದಯಾವ ರಾಜ್ಯ ಕಟ್ಟಿದರೇನು? ಹೆಣ್ಣು ನಿಜ ದುರ್ಗೆ,ಚಾಮುಂಡಿ,ಕಾಳಿ,ಮರ್ದಿನಿಯಾಗದೆಶತ ಶತಮಾನದ ಈ ಅನ್ಯಾಯ ತಪ್ಪಿದ್ದಲ್ಲ.. **********************************

ಮರ್ದಿನಿ ಆಗಲಿಲ್ಲ Read Post »

ಇತರೆ

‘ಜೈ ಜವಾನ್, ಜೈ ಕಿಸಾನ್’

ಲೇಖನ ‘ಜೈ ಜವಾನ್, ಜೈ ಕಿಸಾನ್’ ಜಯಘೋಷದ ಲಾಲ್ ಬಹಾದ್ದೂರ್ ಶಾಸ್ತ್ರಿ ಇಂದು ಮಹಾತ್ಮ ಗಾಂಧಿ ಹುಟ್ಟಿದ ದಿನವೂ ಹೌದು. ಹಾಗೆಯೇ ಲಾಲ್ ಬಹಾದ್ದೂರ್ ಶಾಸ್ತ್ರೀಯ ಹುಟ್ಟು ಹಬ್ಬವೂ ಹೌದು. ಗಾಂಧಿ ಸ್ಮರೀಸಿ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡದೇ ಬಿಟ್ಟರೆ ಅದು ಮಹಾ ತಪ್ಪಾಗುತ್ತದೆ. ಇಬ್ಬರೂ ರಾಷ್ಟ್ರದ ಹಿತ ಚಿಂತಕರು, ಆ ಕಾರಣಕ್ಕೆ ಈ ಇಬ್ಬರ ಒಂದೇ ದಿನದ ಹುಟ್ಟು ಹಬ್ಬದ ಸ್ಮರಣೆಯನ್ನು ಮಾಡೋಣ… ಇತರರಿಗೆ ಹೋಲಿಸಿದರೆ, ರಾಷ್ಟ್ರದ ಅತ್ಯುನ್ನತ ಹುದ್ದೆಗೆ ಹೊಸಬರಾಗಿದ್ದರೂ ಸಹ, 1965ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಜರುಗಿದ ಯುದ್ಧದಂತಹ ವಿಷಮ ಪರಿಸ್ಥಿತಿಯಲ್ಲಿಯೂ ಶಾಸ್ತ್ರೀಯವರು ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿದವರು. ದೇಶದ ಪ್ರಧಾನಿಯಾಗಿದ್ದರೂ ಕೂಡ ಜನಸಾಮಾನ್ಯನಂತೆ ಇರುತ್ತಿದ್ದರು. ಜೀವನುದುದ್ದಕ್ಕೂ ಗಾಂಧೀ ಅನುಯಾಯಿಯಾಗಿ ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿ “ಶಾಂತಿದೂತ’ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಇಂದಿನ ಯುವಕರಿಗೆ ಐಕಾನ್‌ ಆಗಬಲ್ಲ ಬದುಕು ಶಾಸ್ತ್ರೀಜಿ ಅವರದು. ಸರಳತೆ, ನೇರ ನಡೆನುಡಿ, ಶಿಸ್ತು, ಕರ್ತವ್ಯ ನಿಷ್ಠೆ ಹೀಗೆ ಮುಂತಾದ ಅವರ ಸನ್ಮಾರ್ಗಗಳು ನಮ್ಮ ಜೀವನಕ್ಕೆ ದಾರಿದೀಪವಾಗುತ್ತವೆ. ಒಂದು ಸದೃಢ ರಾಷ್ಟ್ರ ನಿರ್ಮಾಣದ ದಿಶೆಯಲ್ಲಿ, ಸ್ವಪೋಷಣೆ ಮತ್ತು ಸ್ವಾವಲಂಬನೆಗಳನ್ನು ಆಧಾರಸ್ತಂಭಗಳೆಂದು ಭಾವಿಸುವ ಆವಶ್ಯಕತೆಯನ್ನು ಮನಗಂಡು ಶಾಸ್ತ್ರೀಯವರು ಜೈ ಜವಾನ್‌ ಜೈ ಕಿಸಾನ್‌ಎಂಬ ಘೋಷವಾಕ್ಯವನ್ನು ಜನಪ್ರಿಯಗೊಳಿಸಿದರು. ಶಾಸ್ತ್ರೀಜಿ ಅವರ ಇಡೀ ಜೀವನವೇ ನಮಗೆ ಪ್ರೇರಣೆ. ಬಾಲ್ಯದಿಂದಲೇ ಸ್ವಾಭಿಮಾನ ಮತ್ತು ಅಚಲ ವ್ಯಕ್ತಿತ್ವದ ಶಿಖರವೆನಿಸಿದ ಶಾಸ್ತ್ರೀಜಿ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಹಿಡಿದು, ರಾಷ್ಟ್ರ ರಾಜಕೀಯದಲ್ಲಿ ವಿವಿಧ ಸ್ತರದ ಜವಾಬ್ದಾರಿಗಳನ್ನು ನಿರ್ವಹಿಸುವವರೆಗೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ನಿರಾಡಂಬರವಾದ ಅವರ ನಿಲುವುಗಳ ಮೂಲಕ ಜನರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಶಾಸ್ತ್ರೀಜಿ ಅವರು ಕೇಂದ್ರ ರೈಲ್ವೇ ಸಚಿವರಾದ ಸಂದರ್ಭ ತೋರಿದ ನೈತಿಕ ಜವಾಬ್ದಾರಿ ಪ್ರಸ್ತುತದ ವರೆಗೂ ರಾಜಕಾರಣಿಗಳಿಗೆ ಆದರ್ಶವಾಗುವಂತದ್ದು. 1956ರಲ್ಲಿ ಆಗಿನ ಆಂಧ್ರ ಪ್ರದೇಶದ ಅರಿಯಳೂರಲ್ಲಿ ಜರುಗಿದ ರೈಲ್ವೆ ಅಪಘಾತದಿಂದಾಗಿ 144 ಜನ ಸಾವನ್ನಪ್ಪಿದರು. ಇದರಿಂದ ಹತಾಶರಾದ ಶಾಸ್ತ್ರೀಜಿ ನೈತಿಕ ಜವಾಬ್ದಾರಿಯ ಕಾರಣ ನೀಡಿ ರಾಜೀನಾಮೆ ನೀಡಿದರು. ಇಂತಹ ಆದರ್ಶವನ್ನು ಮೆರೆದ ಅಪರೂಪದ ವ್ಯಕ್ತಿತ್ವ ಅವರದು. ಆದರೆ ಈಗಿನವರಲ್ಲಿ ಇಂತಹ ನಿರ್ಧಾರಗಳನ್ನು ನಾವು ಎದುರು ನೋಡಬಹುದೆ? ರಕ್ಷಣಾ ನಿಧಿಗೆ ವೈಯಕ್ತಿಕ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆ ಸಾಕ್ಷಿ– ಪ್ರಧಾನಿಯಾದ ಅನಂತರ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ, ಭಾರತೀಯ ಸೇನೆಯನ್ನು ಸಶಕ್ತಗೊಳಿಸುವ ಮತ್ತು ಕೃಷಿ ಕ್ಷೇತ್ರವನ್ನು ಸ್ವಾವಬಂಭಿಯನ್ನಾಗಿಸುವ ಕಾರ್ಯದಲ್ಲಿ ನಿರತರಾದರು. ಕ್ಷೀರ ಕ್ರಾಂತಿ ಮತ್ತು ಹಸುರು ಕ್ರಾಂತಿಗೆ ಮುನ್ನುಡಿ ಬರೆದರು. ಸೇನಾ ಅಭಿವೃದ್ಧಿಗಾಗಿ ಹಗಲಿರುಳು ದುಡಿದರಲ್ಲದೆ ಹೈದರಾಬಾದ್‌ನ ನಿಜಾಮನ ಬಳಿ ಸಹಾಯ ಕೇಳಿದಾಗ ಆತ 5 ಸಾವಿರ ಕೆ.ಜಿ. ಚಿನ್ನವನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡುತ್ತಾನೆ. ಇಲ್ಲಿಯವರೆಗೂ ಇದು ರಾಷ್ಟ್ರೀಯ ರಕ್ಷಣಾ ನಿಧಿಗೆ ವ್ಯಕ್ತಿಯೋರ್ವನ ಅತ್ಯಧಿಕ ಕೊಡುಗೆಯಾಗಿದೆ ಎನ್ನುವುದು ವಿಶೇಷ. ಇದು ರಾಷ್ಟ್ರದ ಹಿತಕ್ಕಾಗಿ ನೀಡಿದ ದೇಣಿಗೆ ಮಾತ್ರವಲ್ಲದೆ ಪ್ರಧಾನಿಯ ಮಾತಿಗೆ ಕೊಟ್ಟ ಗೌರವವಲ್ಲದೆ ಮತ್ತೇನು. ಶಾಂತ ಸ್ವರೂಪಿ ಶಾಸ್ತ್ರೀಜಿ ಜನತೆಗೆ ಹೆಚ್ಚು ಆಪ್ತವಾದದ್ದು ತಮ್ಮ ಕಾರ್ಯವೈಖರಿಯ ಮೂಲಕ ಮಾತನಾಡಿದಾಗ! ಜಗತ್ತು ನಿಬ್ಬೆರಗಾಗುವಂತಹ ನಿರ್ಣಯಗಳನ್ನು ಕೈಗೊಂಡಾಗ! 1962ರಲ್ಲಿ ಚೀನ ವಿರುದ್ಧದ ಯುದ್ಧದಲ್ಲಿ ಭಾರತ ಸೋಲಬೇಕಾಯಿತು. 1947-48ರ ಯುದ್ಧದಲ್ಲಾದ ಮುಖಭಂಗಕ್ಕೆ ಪರಿಹಾರವನ್ನು ಪಡೆದುಕೊಳ್ಳಲೋ ಅಥವಾ ಶಾಂತ ಮತ್ತು ವಾಮನಾಕಾರನಾದ ಪ್ರಧಾನಿ ಇರುವುದನ್ನು ಕಂಡೋ ಪಾಕಿಸ್ಥಾನ ಭಾರತದ ಮೇಲೆ 1965ರಲ್ಲಿ ಯುದ್ಧ ಸಾರಿತು. ಜಮ್ಮು-ಕಾಶ್ಮೀರಕ್ಕೆ ಮುತ್ತಿಗೆ ಹಾಕಿದ ಪಾಕಿಸ್ಥಾನಕ್ಕೆ ಅಚ್ಚರಿಯ ರೀತಿಯಲ್ಲಿ ಲಾಹೋರ್‌ ಅತಿಕ್ರಮಣದ ಮೂಲಕ ಉತ್ತರಿಸಿದರು. ಅಷ್ಟೇ ಅಲ್ಲದೆ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿ, ಗಡಿ ದಾಟುವ ಆವಶ್ಯಕತೆ ಬಿದ್ದರೆ ಹಿಂಜರಿಯದೆ ಒಳನುಗ್ಗಿ, ಅಂತಾರಾಷ್ಟ್ರೀಯ ಸಂಬಂಧದ ಕುರಿತು ಚಿಂತಿಸಬೇಡಿ ಎಂದು ಧೈರ್ಯ ತುಂಬಿದರು. ಅದರ ಪರಿಣಾಮವಾಗಿ ಲಾಹೋರ್‌, ಹಾಜಿ ಪಿರ್‌ ಪಾಸ್‌ ಮತ್ತು ಸಿಯಾಲ್‌ ಕೋಟ್‌ನಲ್ಲಿ ನಮ್ಮ ಸೇನೆ ಪಾಕಿಸ್ಥಾನವನ್ನು ಹಿಮ್ಮೆಟ್ಟಿಸಿತ್ತು. ಅಮೆರಿಕದಿಂದ ಗೋಧಿಯ ಸರಬರಾಜು ನಿಂತಿತು ಈ ಯುದ್ಧದ ಸಂದರ್ಭ ಶಾಸ್ತ್ರೀಜಿಗೆ ಎದುರಾದ ಸವಾಲುಗಳು ಒಂದೆರಡಲ್ಲ. ಪಾಕಿಸ್ಥಾನದ ವಿರುದ್ಧ ತಿರುಗಿಬಿದ್ದ ಕಾರಣಕ್ಕಾಗಿ ಅಮೆರಿಕದಿಂದ ಬರಬೇಕಾದ ಗೋಧಿಯ ಸರಬರಾಜು ನಿಂತಿತು. ಶಾಸ್ತ್ರೀಜಿ ಹಸುರು ಕ್ರಾಂತಿಗೆ ಕರೆಕೊಟ್ಟಿದ್ದು ಆಗಲೇ. ಅಲ್ಲಿಯವರೆಗೂ ಆಹಾರದ ಕೊರತೆಯನ್ನು ನೀಗಿಸುವುದಕ್ಕಾಗಿ ರಾಷ್ಟ್ರದ ಜನತೆಗೆ ಸೋಮವಾರದ ಉಪವಾಸವನ್ನು ಆಚರಿಸುವಂತೆ ಭಿನ್ನಹ ಮಾಡಿದರು. ಅದಕ್ಕೆ ಇಡೀ ರಾಷ್ಟ್ರ ಸ್ಪಂದಿಸುವುದರ ಹಿಂದಿದ್ದ ಆ ವ್ಯಕ್ತಿಯ ನೈತಿಕ ಮೌಲ್ಯ ಎಂಥಹದು ಯೋಚಿಸಿ. ಕೇವಲ ನುಡಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಬದಲಾಗಿ ಹೇಳಿದ್ದನ್ನು ಪಾಲಿಸಿದ್ದರಿಂದ ರಾಷ್ಟ್ರವ್ಯಾಪಿ ಬೆಂಬಲ ವ್ಯಕ್ತವಾಯಿತು. ಶಾಸ್ತ್ರೀಜಿ ಎಲ್ಲರಿಗೂ ಹತ್ತಿರವಾಗುವುದು ಏಕೆ?– ಈ ಪ್ರಶ್ನೆಗೆ ಉತ್ತರ ಅವರ ಸರಳತೆ ಎನ್ನುವ ಪ್ರಭಾವಲಯ ಎಲ್ಲರನ್ನು ಸರಳವಾಗಿಯೇ ಆಕರ್ಷಿಸುತ್ತದೆ ಎನ್ನುವುದು. ಭಾರತದ ಅತ್ಯಂತ ಹೆಚ್ಚು ಜನಸಂಖ್ಯೆವುಳ್ಳ ರಾಜ್ಯದ ಗೃಹಮಂತ್ರಿಯಾಗಿದ್ದರೂ ಅವರಿಗೆ ಸ್ವಂತ ಮನೆ ಇರಲಿಲ್ಲ! ಆದ್ದರಿಂದಲೇ ಅವರನ್ನು Homeless Home Minister ಎಂದೂ ಇತರೆ ನಾಯಕರು ಕರೆಯುತ್ತಿದ್ದರು. ರಾಷ್ಟ್ರದ ಪ್ರಧಾನಿಯಾದಾಗಲೂ ಸ್ವಂತದೊಂದು ವಾಹನ ಇರಲಿಲ್ಲ! ಸರಕಾರಿ ವಾಹನವನ್ನು ಮನೆಯ ಕೆಲಸಕ್ಕಾಗಿ ಬಳಸುತ್ತಿರಲಿಲ್ಲ! ಮನೆಯವರೆಲ್ಲರ ಒತ್ತಾಯದಿಂದಾಗಿ ಕಾರು ಖರೀದಿಸಲು ನಿರ್ಧರಿಸಿದ ಶಾಸ್ತ್ರೀಜಿ ಪಿ.ಎನ್‌.ಬಿ. ಬ್ಯಾಂಕ್‌ನಲ್ಲಿ 5,000 ರೂ. ಲೋನ್‌ ಮಾಡಬೇಕಾಯಿತು! ಆದರೆ ದುರ್ದೈವದ ಸಂಗತಿ ಎಂದರೆ ಆ ಲೋನ್‌ ತೀರಿಸುವ ಮುಂಚೆಯೇ ಶಾಸ್ತ್ರೀಜಿ ಸಾವನ್ನಪ್ಪಿ ರಾಷ್ಟ್ರವನ್ನು ಅಗಲಿದರು. ನದಿ ಈಜಿದ್ದ ಶಾಸ್ತ್ರೀಜಿ– ಲಾಲ್‌ ಬಹದ್ದೂರ್‌ ಶಾಸ್ತ್ರೀಜಿ ಅವರು ಹುಟ್ಟು ಧೈರ್ಯವಂತ. ಇದೇ ಧೈರ್ಯದೊಂದಿಗೆ ಪಾಕಿಸ್ಥಾನದೊಂದಿಗೆ ಯುದ್ಧಕ್ಕಿಳಿದಿದ್ದರು. ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ಸ್ನೇಹಿತನ ಮನೆಗೆ ನದಿ ದಾಟಿ ಹೋಗಬೇಕಾಗಿರುತ್ತದೆ. ದೋಣಿಯಲ್ಲಿ ಹೋಗಿದ್ದ ಅವರು ವಾಪಸು ಆಗುವಾಗ ದೋಣಿಯಲ್ಲಿ ಬರಲು ಅವರಲ್ಲಿ ದುಡ್ಡು ಇರುವುದಿಲ್ಲ. ಆಗ ಅವರು ದೋಣಿಗಾಗಿ ಕಾಯದೇ, ದುಡ್ಡಿಗಾಗಿ ಇನ್ನೊಬ್ಬರನ್ನು ಕೇಳದೇ ತುಂಬಿ ಹರಿಯುತ್ತಿದ್ದ ನದಿಗೆ ಧುಮುಕುತ್ತಾರೆ. ನದಿಯನ್ನು ಈಜಿ ದಡ ಸೇರುತ್ತಾರೆ. ಸೆಳೆತ, ಸುಳಿ, ನೀರಿನ ರಭಸ ಯಾವುದನ್ನು ಲೆಕ್ಕಿಸದೇ ಧೈರ್ಯದಿಂದ ನದಿ ದಾಟಿದ್ದರು. ಪರಿಸ್ಥಿತಿಯಲ್ಲಿ ಒದಗಿಬರುವ ಸಮಸ್ಯೆಗಳಿಗೆ ನಮ್ಮ ಅಚಲ ಧೈರ್ಯವೇ ಉತ್ತರ ನೀಡುತ್ತದೆ ಎಂಬುದಕ್ಕೆ ಶಾಸ್ತ್ರೀಜಿ ಅವರ ಈ ಘಟನೆ ನಮಗೆ ಸ್ಫೂರ್ತಿಯಾಗಬಲ್ಲದು. ನೇರ ನಡೆತೆ, ನಿಷ್ಠೆ– ಶಾಸ್ತ್ರೀಜಿ ಅವರು ಪ್ರಧಾನಿಯಾದರು ಉಡುಗೆ, ನಡೆಯಲ್ಲೂ ಸರಳವಾಗಿರುತ್ತಿದ್ದರು. ಒಮ್ಮೆ ಅವರ ಹೆಂಡತಿಗೆಂದು ಸೀರೆ ತರಲು ಅಂಗಡಿಗೆ ಹೋದಾಗ ಅಂಗಡಿಯವರು ಸೀರೆಯನ್ನು ಉಚಿತವಾಗಿ ಕೊಡಲು ಬಂದಾಗ ಅದನ್ನು ತೆಗೆದುಕೊಳ್ಳದೇ ದುಡ್ಡು ನೀಡಿ, ಹೆಂಡತಿಗೆ ಸೀರೆ ತೆಗೆದುಕೊಂಡು ಕೊಡುತ್ತಾರೆ. ಎಂದಿಗೂ ತಾನು ಪ್ರಧಾನಿ ಎಂಬ ಹಮ್ಮು-ಬಿಮ್ಮು ಇಲ್ಲದೇ, ಅಧಿಕಾರ ದುರುಪಯೋಗ ಮಾಡಿಕೊಳ್ಳದೇ ನೇರ, ನಿಷ್ಠೆಯಿಂದ ಇದ್ದವರು ಶಾಸ್ತ್ರೀಜಿ. ****************************************** ಕೆ.ಶಿವು.ಲಕ್ಕಣ್ಣವರ

‘ಜೈ ಜವಾನ್, ಜೈ ಕಿಸಾನ್’ Read Post »

ಇತರೆ

ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ :

ಲೇಖನ ಮಹಾತ್ಮಾಗಾಂಧೀಜಿಯವರ  ಚಿಂತನೆಗಳ ಪ್ರಸ್ತುತತೆ : “ಹಸಿದ ಹೊಟ್ಟೆಯವನಿಗೆ ಯಾವ ಉಪದೇಶವೂ ಮುಖ್ಯವಲ್ಲ” ಪಾಪವನ್ನು ದ್ವೇಷಿಸಿ ಪಾಪಿಯನ್ನಲ್ಲ” ಇವು ನಮ್ಮ ನೆಚ್ಚಿನ ಬಾಪೂಜಿಯವರ ನುಡಿಮುತ್ತುಗಳು.”ಅಯ್ಯಾ ನೀನೇನು ದೇವರಲ್ಲ, ಆದರೆ ದೇವರನ್ನು ಬಲವಾಗಿ ನಂಬಿದವನು, ದಂತವಿಲ್ಲದಿದ್ದರೂ ಬದುಕಿದ್ದ ಕಾಲದಲ್ಲೇ ದಂತಕಥೆಯಾದವನು” ಇವು  ಮಹಾತ್ಮಾ ಗಾಂಧೀಜಿಯವರ ಕುರಿತು ಕವಿ ಸಿ.ಪಿ.ಕೆ.ತಮ್ಮ ವಂದನೆ ಕವಿತೆಯಲ್ಲಿ ಮನೋಜ್ಞವಾಗಿ ಮೂಡಿಸಿದ ಸಾಲುಗಳು. ಮೋಹನದಾಸ ಕರಮಚಂದ ಗಾಂಧಿ ಎಂಬ ಬಾಲಕ ಯಾರಿಗೂ ನಿಲುಕದ ಅತಿಮಾನವನೇನೂ ಆಗಿರಲಿಲ್ಲ. ಎಲ್ಲರಂತೆಯೇ ಹುಟ್ಟಿ ಬೆಳೆದ ಒಬ್ಬ ಸಾಮಾನ್ಯ ಮಗು. ಅವರ ಬಾಲ್ಯ ಕೂಡ ಎಲ್ಲ ಮಕ್ಕಳ ಬಾಲ್ಯದಂತೆಯೇ ಇತ್ತು.ಗುಜರಾತಿನ ಕಾಥೇವಾಡ ಪ್ರಾಂತ್ಯದ ಪೋರ್ ಬಂದರ್ ನಲ್ಲಿ ೧೮೬೯ ರ ಅಕ್ಟೋಬರ್ ೨ ರಂದು ಸಹೃದಯ ಕರಮಚಂದ ಗಾಂಧಿ ಹಾಗೂ ದೈವ ಭಕ್ತೆ ಪುತಲೀಬಾಯಿಯವರಿಗೆ ಭಾವೀ ದಂತಕಥೆಯಾದ ಮೋಹನದಾಸನ ಜನನವಾಯಿತು. ಮೋಹನದಾಸರನ್ನು ಬಾಲ್ಯದಲ್ಲಿ ಮನೆಯವರು ಪ್ರೀತಿಯಿಂದ ಮೋನಿಯಾ ಎಂದು  ಕರೆಯುತ್ತಿದ್ದರಂತೆ .ಮೋನಿಯಾ ಕೂಡ ಎಲ್ಲರಂತೆ ತಂಟೆ ಮಾಡುತ್ತಿದ್ದನಂತೆ, ಹಠವಾದಿಯಾಗಿದ್ದನಂತೆ ಸುಳ್ಳು ಹೇಳಿದ್ದ, ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದ.ಒಮ್ಮೆ ಸ್ನೇಹಿತರ ಒತ್ತಾಯಕ್ಕೆ ಮಣಿದು ಧೂಮಪಾನ ಮಾಡಿದ್ದನಂತೆ , ಮಾಂಸ ಸೇವಿಸಿದ್ದನಂತೆ.  ಆದರೆ ಮಾಡಿದ ತಪ್ಪುಗಳಿಗೆ ಪಶ್ಚಾತಾಪ ಪಟ್ಟು ಶ್ರವಣಕುಮಾರ, ಸತ್ಯ ಹರಿಶ್ಚಂದ್ರರ ಕಥೆಗಳಿಂದ ಪ್ರಭಾವಿತರಾಗಿ ತನ್ನ ಬದುಕನ್ನೇ ಬದಲಿಸಿಕೊಂಡು ಮಹಾನ್ ಚೇತನವಾಗಿ ಹೊಮ್ಮಿ ದಂತಕಥೆಯಾದ. ಗಾಂಧೀಜಿ ಚಿಂತನೆಗಳ ಬಗ್ಗೆ ಅವಲೋಕಿಸಿದಾಗ ,  ಗಾಂಧೀಜಿ ಜೀವನವೇ ಅವರ ಚಿಂತನೆ, ಅವರ ಚಿಂತನೆಯೇ ಅವರ ಜೀವನ.ಅವುಗಳಲ್ಲಿ ವ್ಯತ್ಯಾಸವಿಲ್ಲ..ಗಾಂಧೀಜಿಯವರು ಸತ್ಯ ಅಹಿಂಸೆ ಹಾಗೂ ಸೇವೆಯಲ್ಲಿ ಅಪಾರ ಶೃದ್ಧೆ ಇಟ್ಟಿದ್ದರು.ಸತ್ಯವೇ ಅವರ ಉಸಿರಾಗಿತ್ತು.ಅಹಿಂಸೆ ಹಾಗೂ ಸತ್ಯದ ನಡೆಯಿಂದ ಗಾಂಧೀಜಿ ಬದುಕಿ ತೋರಿಸಿದ್ದರು.ಅವುಗಳಿಂದಲೇ ಬ್ರಿಟಿಷರನ್ನು ಮಣಿಸಿ ಸ್ವಾತಂತ್ರ್ಯ ನೀಡುವಂತೆ ಮಾಡಿದ್ದರು.ಪಾರದರ್ಶಕತೆ ಗಾಂಧೀಜಿಯವರ ಬಹುಮುಖ್ಯಗುಣ.ಈ ವಿಶಿಷ್ಟ ಗುಣದಿಂದಲೇ ಜನಮನಗೆದ್ದ ನಾಯಕರಾದರು.ಗಾಂಧೀಜಿಯವರು ಮೂಲ ಶಿಕ್ಷಣಕ್ಕೆ ಹಚ್ಚಿನ ಒತ್ತು ನೀಡಿದ್ದರು.ಶೀಲವಿಲ್ಲದ ಶಿಕ್ಷಣ ತಪ್ಪು ಎಂದು ಭಾವಿಸಿದ್ದಅಂಗನೈತಿಕತೆಯ ನೆಲೆಗಟ್ಟಿಲ್ಲದ ಶಿಕ್ಷಣ ವಿನಾಶಕ್ಕೆ ಹಾದಿ ಎಂಬುದು ಗಾಂಧೀಜಿಯವರ ತತ್ವವಾಗಿತ್ತು. ಸರಳತೆ: ಸರಳತೆ ಗಾಂಧೀಜಿ ಜೀವನದ ಅವಿಭಾಜ್ಯ ಅಂಗವಾಗಿತ್ತು.ತೊಡುವ ಬಟ್ಟೆ, ಆಹಾರ ಪದ್ಧತಿ ಎಲ್ಲವೂ ಸರಳವಾಗಿದ್ದವು.” Simplicity is the Essence of Universality” ಎಂಬುದು ಅವರ ತತ್ವವಾಗಿತ್ತು.ಸಮಾಜ ಸೇವೆಯಲ್ಲಿ ನಿರತನಾದ ವ್ಯಕ್ತಿ ಸರಳತೆ ಹಾಗೂ ಸ್ವಾವಲಂನೆಯನ್ನು ಅನುಸರಿಸಬೇಕೆಂದು ನಂಬಿದ್ದರು ಗಾಂಧೀಜಿ.ದಕ್ಷಿಣ ಆಫ್ರಿಕೆಯಿಂದ ಹಿಂದಿರುಗಿದ ಭಾರತಕ್ಕೆ ಮರಳಿ ನಮಗೆ ಸ್ವಾತಂತ್ರ್ಯ ತಂದುಕೊಡುವ ಹೊತ್ತಿಗೆ ಅವರ ಉಡುಗೆ ಒಂದು ತುಂಡಿನ ಮುಂಡ(ಲುಂಗಿ) ಕೈ ಯಲ್ಲೊಂದು ಕೋಲು ಇದಕ್ಕಿಂತ ಸರಳವಾಗಿರಲು ಒಬ್ಬ ಮನುಷ್ಯನಿಗೆ ಸಾಧ್ಯವೆ?ಸರಳತೆ ಹಾಗೂ ಸ್ವವಲಂಬನೆಗೆ ಕಲಶವಿಟ್ಟಂತೆ ತಾವೇ ಸ್ವತಃ ಬಡಗಿ, ಕ್ಷೌರಿಕ, ಚಮ್ಮಾರ, ನೇಕಾರ, ಸೇವಕ, ಬಾಣಸಿಗರಾದರು.ಈ ಮೂಲಕ ನೈತಿಕತೆಯಿಂದ ಕೂಡಿದ ಯಾವ ಕೆಲಸವೂ ಮೇಲಲ್ಲ , ಕೀಳಲ್ಲ ಎಂದು ತೋರಿಸಿದರು . “ಇರುವ ಕೆಲಸವ ಮಾಡು ಕಿರಿದೆನದೆ ಮಾಡು” ಎಂಬ ಶರಣವಾಣಿಗನುಸಾರವಾಗಿ ಗಾಂಧೀಜಿ ಬದುಕಿದರು. ದುಬಾರಿಯಾದ ಆಡಂಬರದ ಜೀವನ ನಡೆಸಿ ದುಂದುವೆಚ್ಚ ಮಾಡುವ ಇಂದಿನ ಜನಾಂಗಕ್ಕೆ ಗಾಂಧೀಜಿ ಹೆಚ್ಚು ಪ್ರಸ್ತುತ.ಇಂದು ಕೊರೊನಾದಂತಹ ಮಹಾಪಿಡುಗಿನ ಈ ಸಂದರ್ಭದಲ್ಲಿ ಗಾಂಧಿಜೀಯವರ ಸರಳಜೀವನ, ಸ್ವಾವಲಂಬನೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಸರಳ ಮದುವೆ, ಸರಳಸಭೆಸಮಾರಂಭಗಳು,  ಸರಳ ಆಹಾರ, ಸರಳ ಜೀವನದ ಪಾಲನೆಯ ಅವಶ್ಯಕತೆ ಗಾಂಧಿ ಕಾಲಕ್ಕಿಂತ ಈಗ ಅನಿವಾರ್ಯ ಹಾಗೂ ಅವಶ್ಯಕ.ಅವರ ಸರಳತೆ ಹಾಗೂ ಸ್ವಾವಲಂಬನೆ ಸಾರ್ವತ್ರಿಕತೆ ಹಾಗೂ ಸರ್ವೋದಯದ ಮೂಲ ತತ್ವವಾಗಿದೆ.ಎಲ್ಲವನ್ನು ಯಂತ್ರ ಅಥವಾ ಕೆಲಸದಾಳುಗಳ ಮೂಲಕ ಮಾಡಿ ಶ್ರಮಕಡಿಮೆಮಾಡಿಕೊಂಡು ಆಲಸಿಗಳಾಗುತ್ತಿರುವ ಇಂದಿನ ಜನಾಂಗಕ್ಕೆ ಗಂಧಿ ವಿಚಾರಗಳು ಹೆಚ್ಚು ಪ್ರಸ್ತುತ. ಧರ್ಮ ಸಹಿಷ್ಣುತೆ : ಧರ್ಮ ಸಹಿಷ್ಣುತೆ ಯು ಬಾಪೂಜಿ ಜೀವನದ ಅವಿಭಾಜ್ಯ ಅಂಗ.ಅವರೇ ತಮ್ಮ ಕಥೆಯಲ್ಲಿ ಹೇಳಿರುವಂತೆ “ನನಗೆ ಸ್ಕೂಲಿನಲ್ಲಿ ಯಾವ ಧರ್ಮಿಕ ಶಿಕ್ಷಣವೂ ದೊರೆಯಲಿಲ್ಲ, ಸುತ್ತಲಿನ ವಾತಾವರಣದಿಂದಲೇ ನಾನು ಅಷ್ಟು ಇಷ್ಟು ಧರ್ಮ ಭಾವನೆ ಹೊಂದಿದ್ದೆ.ನನ್ನ ಪ್ರಕಾರ ಧರ್ಮ ಎಂದರೆ, ಆತ್ಮ ಸಾಕ್ಷಾತ್ಕಾರ, ಆತ್ಮಜ್ಞಾನ.” ಗಾಂಧೀಜಿ ಎಲ್ಲ ಧರ್ಮವನ್ನು ಪ್ರೀತಿಸಲು , ಗೌರವಿಸಲು ಅವರ ಬಾಲ್ಯದ ಪರಿಸರವೂ ಕಾರಣವಾಗಿತ್ತು.ಅವರ ದೆಕರಮಚಂದರಿಗೆ ಎಲ್ಲ ಧರ್ಮದ ಮಿತ್ರರೂ ಇದ್ದರಂತೆ. ಭಗವದ್ಗೀತೆ, ಬುದ್ಧಚರಿತೆ, ಬೈಬಲ್, ಪೈಗಂಬರ್ ಚರಿತ್ರೆಮೊದಲಾದ ಧರ್ಮಗ್ರಂಥಗಳ ಆಳವಾದ ಅಧ್ಯಯನದಿಂದ ಎಲ್ಲ ಧರ್ಮಗಳ ಮೂಲತತ್ವಗಳೂ ಒಂದೇ ಎಂದು ತಿಳಿದು ಧರ್ಮಸಹಿಷ್ಣುವಾದರು. ಜಾತಿ ,ಮತ, ಧರ್ಮ ಕುಲ ವೆಂದು ಹೊಡೆದಾಡಿಕೊಳ್ಳುವ , ಮನುಷ್ಯ ಮನುಷ್ಯರನ್ನು ಶತ್ರುಗಳಂತೆ ಕಾಣುವ ಈ ಅಣ್ವಸ್ತ್ರ ಯುಗದಲ್ಲಿ ರಾಮ,ರಹೀಮ, ಏಸಶಿಕ್ಷಣದ್ಧ ಎಲ್ಲರೂ ಒಂದೇ ಎನ್ನುವ ಸರ್ವ ಧರ್ಮ ಸಹಿಷ್ಣುತಾ ಭಾವವು ಏಕತೆಯನ್ನು ಬೆಳೆಸಬಲ್ಲುದು. ಇಂದು ಎಷ್ಟೋ ಧರ್ಮಸಂಘರ್ಷಗಳನ್ನು ಕಣ್ಣಾರೆ ಕಂಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ.ಅದನ್ನೆಲ್ಲ ಮರೆತು ಬದುಕುವ ಕಾಲವನ್ನು ಕೊರೊನಾ ತಂದಿದೆ. ಎಲ್ಲರೂ ಒಂದೇ ಎಂಬ ಭಾವ ಹಿಂದಿಗಿಂತ ಇಂದು ಪ್ರಸ್ತುತ. ಸಮಗ್ರ ಶಿಕ್ಷಣ : ಗಾಂಧಿಜೀಯವರು ಸಮಗ್ರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಪ್ರಕಾರ ಶಿಕ್ಷಣವೆಂದರೆ ಮಗುವನ್ನು ಮಾನವನನ್ನಾಗಿಸುವ ಸರ್ವತ್ರ ಸಾಧನ.ದೇಹ ಮೆದುಳು ಚೈತನ್ಯ ಎಲ್ಲವನ್ನು ರೂಪಿಸುವುದೇ ಆಗಿದೆ.ಸಮಾಜದ ಸಪ್ತ ಮಹಾಪಾತಕಗಳಲ್ಲಿ ಒಂದಾದ ” ಶೀಲವಿಲ್ಲದ ಶಿಕ್ಷಣ ” ದಿಂದ ಸಮಾಜದ ಪತನವಾಗುತ್ತದೆ. ಎಂದು ನಂಬಿದ್ದರು ಗಾಂಧಿ.ಸಮಗ್ರತೆ, ಕಠಿಣ ಪರಿಶ್ರಮ ಹಾಗೂ ಇಚ್ಛಾಶಕ್ತಿ ಇಲ್ಲದ ಮಕ್ಕಳು ಉಪ್ಪಿಲ್ಲದ ಆಹಾರದಂತೆ. ಇಂದು ನಾವುಕಾಣುವುದು ಇಂಥ ಉಪ್ಪಿನ ಕೊರತೆಯಿರುವ ವಿದ್ಯಾರ್ಥಿಗಳನ್ನು.ಗಾಂಧೀಜಿಯವರು ಕಸುಬು ಆಧಾರಿತ ಕರಕುಶಲ ಕಲೆಯ ಕಲಿಕೆಗೆ ಹೆಚ್ಚು ಒತ್ತನೀಡಿದ್ದರು ಅವುಗಳಲ್ಲಿ ತೋಟಗಾರಿಕೆ, ನೇಕಾರಿಕೆ, ಕೃಷಿ ಮರದ ಕೆಲಸ ಮಡಕೆ ಮಾಡುವಂತಹ ಸ್ವಾವಲಂಬನೆಯ ಕೆಲಸಗಳು ಸೇರಿದ್ದವು . ಇದರಿಂದ ಶಾರೀರಿಕ ಶಿಕ್ಷಣ  ಸ್ವಾಭಾವಿಕವಾಗಿಯೇ ಸಿಗುತ್ತಿತ್ತು  ಅಲ್ಲದೇ ಸ್ವಾವಲಂಬನೆಯನ್ನೂ ಸಾಧಿಸಿದಂತಾಗುತ್ತಿತ್ತು.  ಸಾಕಷ್ಟು ದೂರ ದರ್ಶಿತ್ವವುಳ್ಳ ಗಾಂಧೀಜಿ ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಹೊಂದಿದ್ದರು.೭ ರಿಂದ ೧೪ ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವುದು ಇದರ ಉದ್ದೇಶವಾಗಿತ್ತು.ಇದರಿಂದ ಬಾಲ ಕಾರ್ಮಿಕ ಪದ್ದತಿ ಸ್ವಾಭಾವಿಕವಾಗಿಯೇ ಕಡಿಮೆಯಾಗುವುದೆಂಬ ಧೋರಣೆ ಇತ್ತು.  ಅಲ್ಲದೇ ಇಂದು ನಾವು ನೀಡುವ ಶಿಕ್ಷಣ  ನೈತಿಕತೆಯ ಅಡಿಪಾಯದ ಮೇಲೆ ಸಚ್ಚಾರಿತ್ರ್ಯವನ್ನು ಬೆಳೆಸಿದಾಗ ಮಾತ್ರ ಗಾಂಧೀಜಿಯವರ ಸಮಗ್ರ ಶಿಕ್ಷಣದ ಕನಸು ನನಸಾದೀತು. ನೈರ್ಮಲ್ಯ: ಗಾಂಧೀಜಿಯವರು ಆಂತರಿಕ ಹಾಗೂ ಬಾಹ್ಯ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು.ದಕ್ಷಿಣ ಆಫ್ರಿಕಾದಲ್ಲಿರುವಾಗ ಅಲ್ಲಿನ ಭಾರತೀಯರಿಗೆ  ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದ್ದರು ನಂತರ ಭಾರತದಲ್ಲಿ  ಕೊಳೆಗೇರಿಗಳನ್ನು ತಾವೇ ಸ್ವತಃ ಸ್ವಚ್ಛ ಗೊಳಿಸಿದರು.ಆದರೆ ಬಾಪೂಜಿ ಹಾಕಿಕೊಟ್ಟ ನೈರ್ಮಲ್ಯೀಕರಣದ ಕನಸು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಬೇಕಾದರೆ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಆರೋಗ್ಯದ ಬಗ್ಗೆ ಕಾಳಜಿ ಬರಬೇಕು.ಎಲ್ಲೆಂದರಲ್ಲಿ ಉಗುಳುವ, ಪರಿಪಾಠ ನಿಲ್ಲಬೇಕು.ಪ್ಲಾಸ್ಟಿಕ್ ನ್ನು ಎಸೆಯುವ,  ತೇಲಿಬಿಡುವ, ಸುಡುವ ಪ್ರಕ್ರಿಯೆ  ನಿಲ್ಲಬೇಕು.ಇಂದಿನ ಸ್ವಚ್ಛ ಭಾರತ್ ಮಿಷನ್ ನ ಉದ್ದೇಶಗಳಾದ ಬಯಲು ಶೌಚ ನಿರ್ಮೂಲನೆ, ಸಾರ್ವಜನಿಕರಲ್ಲಿ ನೈರ್ಮಲ್ಯಕ್ಕಾಗಿ ಮಾನಸಿಕ ಬದಲಾವಣೆ ಕೊಳೆಗೇರಿಗಳ ಸಂಪೂರ್ಣ ನಿರ್ಮೂಲನೆ, ಸಾಮಾಜಿಕ ಸ್ವಾಸ್ತ್ಯದ ಕುರಿತು ಜನಜಾಗೃತಿ ಇವೆಲ್ಲ ಗಾಂಧೀಜಿ ಅಂದು ಹಾಕಿಕೊಟ್ಟ ಅಡಿಪಾಯಗಳು. ಅದನ್ನು ನೆಲೆಗೊಳಿಸಬೇಕಾದ ಜವಾಬ್ಧಾರಿ ನಮ್ಮ ಮೇಲಿದೆ. ನೈರ್ಮಲ್ಯದ ವಿಷಯದಲ್ಲಿ ಕೊರೊನಾ ನಮಗೆ ಪಾಠವನ್ನು ಕಲಿಸುತ್ತಿದೆ .ಗಾಂಧೀಜಿಯವರ ನೈರ್ಮಲ್ಯೀಕರಣ ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ.ವೈಯ್ಯಕ್ತಿಕ ಸ್ವಚ್ಛತೆಯ ಜೊತೆಗೆ ಸಾಮಾಜಿಕ ಸ್ವಚ್ಛತೆಯ ಕಲ್ಪನೆ ಈಗ ಜನರಲ್ಲಿ ಮೂಡಬೇಕಾದ ಅವಶ್ಯಕತೆಯಿದೆ. ಹೀಗೆ ಗಾಂಧೀಜಿಯವರು ನುಡಿದಂತೆ ನಡೆದರು, ನಡೆಯಲ್ಲಿಯೇ ನುಡಿಯನ್ನು ಪ್ರತ್ಯಕ್ಷವಾಗಿ ತೋರಿಸಿದರು. ಅವರ ಚಿಂತನೆಗಳು , ಅಹಿಂಸೆ , ಸತ್ಯಗಳು, ಸಹಕಾರ ಮನೋಧರ್ಮ, ಸರಳತೆ, ಧರ್ಮಸಹಿಷ್ಣುತೆ, ಸ್ವಚ್ಛತೆ ,ಸ್ವಾವಲಂಬನೆ ಮೂಲಶಿಕ್ಷಣ ಇವೆಲ್ಲ ಈಗ ಹೆಚ್ಚು ಪ್ರಸ್ತುತವಾಗಿವೆ.ಕೊರೊನಾದಂತಹ ಈ ಸಾಂಕ್ರಾಮಿಕ ಪಿಡುಗಿನ ಈ ಕಠಿಣ ಪರಿಸ್ಥಿತಿಯಲ್ಲಿ ಗಾಂಧೀಜಿಯವರ ಒಂದೊಂದು ಚಿಂತನೆಯೂ ಅತ್ಯಮೂಲ್ಯವಾಗಿವೆ.ಅವರ ಚಿಂತನೆಗಳು ಎಂದಿಗೂ ಪ್ರಸ್ತುತ. ***************************** . ಶುಭಲಕ್ಷ್ಮಿ ಆರ್ ನಾಯಕ

ಮಹಾತ್ಮಾಗಾಂಧೀಜಿಯವರ ಚಿಂತನೆಗಳ ಪ್ರಸ್ತುತತೆ : Read Post »

ಕಾವ್ಯಯಾನ

ಮನಿಷಾ

ಕವಿತೆ ಮನಿಷಾ ವೀಣಾ ನಿರಂಜನ್ ಮೊದಲೇ ಕುರುಡಿಯಾಗಿದ್ದನ್ಯಾಯ ದೇವತೆಯಮೂಗಿಯನ್ನಾಗಿಸಿದರು ಮಗಳೇನಿನ್ನ ನಾಲಿಗೆ ಕತ್ತರಿಸಿಅವರ ಗಂಡಸುತನಕ್ಕೆ ಧಿಕ್ಕಾರವಿರಲಿ ಅವರ ಬೆಚ್ಚನೆಯ ಮನೆಗಳಲ್ಲಿಬಚ್ಚಿಟ್ಟ ನಿಧಿಯಂತೆ ನೀನೂ ಕೂಡಅರಿತಿದ್ದರೆ ಸಾಕಿತ್ತು ಅವರುಹತ್ತೂ ಕಡೆ ಚಾಚಿದ ವಿಷ ಸರ್ಪಗಳಹೆಡೆ ಮುರಿದು ಕಟ್ಟುತ್ತಿದ್ದರು ಅರಿಯದಾದರೆ ಅವರುನಿನ್ನೊಳಗಿನ ಕುಡಿಯನ್ನುಹೊರಲಾರದಷ್ಟು ಪಾಪದಮೂಟೆ ಹೊತ್ತು ನಡೆದರುಸಾವೂ ಕೂಡ ಸಹಜವಾಗಿಸುಳಿಯಲಾರದಿನ್ನು ಅವರ ಬಳಿ ಇಲ್ಲಿ ವಿಲ ವಿಲ ಒದ್ದಾಡುತ್ತಿದ್ದಾಳೆನ್ಯಾಯ ದೇವತೆನಿನ್ನ ನೆತ್ತರ ಬಿಸಿಯ ಸೋಕಿಉರಿಯುತ್ತಿದ್ದಾಳೆ ನಖಶಿಖಾಂತಸತ್ಯದ ನಾಲಿಗೆಯು ನೇತಾಡುತ್ತಿದೆನಿನ್ನ ನಾಲಿಗೆಯ ಹಾಗೇ ತೀರ್ಪು ಏನಾದರೇನು ಮಗಳೇನಿನ್ನ ಜೀವಕ್ಕೆ ಬೆಲೆ ಕಟ್ಟಲಾದಿತೇಬೇಡ ಮಗಳೇನಿನ್ನ ಪಾಡು, ನಿನ್ನ ನೋವು ಮುಂದೆಂದೂಬಾರದಿರಲಿ ನಿನ್ನಕ್ಕ ತಂಗಿಯರ ಪಾಲಿಗೆ ಎಲ್ಲರೊಳಗಿನ ತಾಯಿ, ತಂಗಿ, ಅಕ್ಕ, ಮಗಳುಪ್ರಜ್ವಲಿಸುತಿರಲಿ ಸದಾಅವರ ಎದೆಯೊಳಗೊಂದು ಸೂಜಿಇರಿಯುತಿರಲಿ ಮೊನಚಾಗಿಕಳಚಿ ಬೀಳಲಿ ಪಾಪದ ಕೊಂಡಿಹರೇ ರಾಮ್ ಹರೇ ರಾಮ್ ******************************                

ಮನಿಷಾ Read Post »

ಕಾವ್ಯಯಾನ

ಹೊತ್ತು ಬಂದಿದೆ

ಕವಿತೆ ಹೊತ್ತು ಬಂದಿದೆ ಗಾಂಧಿ ನೀನುದಿಸಿದನಾಡಿನಲೀ… ತೊನೆವ ತರುಗಳಕತ್ತು ಹಿಚುಕಿಜಲದ ಕಣ್ಣಿಗಿರಿವ ಹೊತ್ತು ಬಂದಿದೆ ಹರಿವರಿವ ನದಿಯದಿಕ್ಕು ದಿವಾಳಿಯಾಗಿಸಿಬರಿದಾಗಿಸುವ ಹೊತ್ತು ಬಂದಿದೆ ಖಗ ಮೃಗ ಹುಳ ಹುಪ್ಪಟೆಗಳನ್ನು ಬಿಡದೇ ಹುರಿದುರಿದು ಮುಕ್ಕುವ ಹೊತ್ತು ಬಂದಿದೆ ಸಾವಿರಾರು ವರುಷಗಳ ತಪೋನಿರತ ಶಿಲಾತಪಸಿಗಳಎದೆಗೆ ಮದ್ದಿಕ್ಕುವ ಹೊತ್ತು ಬಂದಿದೆ ಕಿವಿಗಡಚಿಕ್ಕುವಬೈರಿಗೆಗಳನ್ನಿಕ್ಕಿನೆಲದೊಡಲ ರಕ್ತ ಬಸಿವ ಹೊತ್ತು ಬಂದಿದೆ ಹೊತ್ತಿಗೊತ್ತಿಗೆ ಉರಿವ ದಿನಕರನ ಸಖ ಓಜೋನನ ಛಿದ್ರವಾಗಿಸುವ ಹೊತ್ತು ಬಂದಿದೆ ಚಂದಿರನ ಅಂಗಳದಲ್ಲಿಳಿವಮಂಗಳನ ಕೇರಿಯಲ್ಲಿಸುತ್ತುವ ಹೊತ್ತು ಬಂದರೂ… ವಿಜ್ಞಾನ ಜ್ಞಾನವೋ,ಅಜ್ಞಾನವೋ ಮಂಕುಗವಿದ ಬುದ್ದಿಗೆ ಲದ್ದಿ ಮೇಯುವ ಹೊತ್ತು ಬಂದಿದೆ ನಿನ್ನ ಮೂರು ಮಂಗಗಳು ಖಾದಿ ವೇಷತೊಟ್ಟುಅಧಿಕಾರದ ದರ್ಪದಲ್ಲಿದಿಮಿ ದಿಮಿ ಕುಣಿದುಮಾನವೀಯತೆಯನ್ನುನುಂಗಿ ನೊಣೆಯುವ ಹೊತ್ತ್ತು ಬಂದಿದೆ ಮಂದಿರವಿತ್ತೆಂಬ ಸಾಕ್ಷ್ಯ ಹುಡುಕಿದವರಿಗೆಗುಮ್ಮಟ ಉರುಳಿಸಿದವರ ನಿರ್ದೋಷದ ಹುಸಿನಗೆಯು ಕಾಣದಹೊತ್ತು ಬಂದಿದೆ ಬಾಪೂಜಿ ನೀ ಕೊನೆಯುಸಿರೆಳೆಯುವಾಗಹೇ ರಾಮ್ ಎಂದು ಉಸಿರು ಚೆಲ್ಲಿದೆಯೋ ನಾ ಕಾಣೆಇದೀಗಅಯ್ಯೋ ರಾಮ ಎಂದೆನುತ ಗೋರಿಯಲ್ಲಿ ನಿಡುಸುಯುವಹೊತ್ತಂತು ಬಂದಿದೆ…ಬಂದೇ ಇದೆ.. *****************************

ಹೊತ್ತು ಬಂದಿದೆ Read Post »

ಕಾವ್ಯಯಾನ

ಫಿವಟ್ ಕವಿತೆ…

ಕವಿತೆ ಫಿವಟ್ ಕವಿತೆ…. ಹುಳಿಯಾರ್ ಷಬ್ಬೀರ್ 01 ಬರೆಯಲೆಂದುಕುಳಿತಾಗಅವಳನ್ನು ಬರೆದೆನನ್ನನ್ನು ನಾನೇಮರೆತೆ….! 02 ಕಣ್ಣಲ್ಲಿ ಕದ್ದುಮನಸ್ಸಲ್ಲಿಇಳಿಯುವ ಮುನ್ನಗಂಟಲಿಗೆಇಳಿಸಿದ್ದೆನೀ ಕೊಟ್ಟದೊಡ್ಡ ವರ…! 03 ಗುಂಡು ಅವಳುಇಬ್ಬರೂ ನಶೆಯೇಗುಂಡು ತಾತ್ಕಾಲಿಕ ನಶೆಅವಳು ನಶೆಯಪರಾಕಾಷ್ಠೆ….! 04 ಮನಸ್ಸಿಗೆನೈವೇದ್ಯ ಎಣ್ಣೆಯಲ್ಲಿಆಗಬೇಕಂತೆನೋವುನಿರಾಳವಾಗಲುಲೋಟ ಚಿಯರ್ಸ್ಎನ್ನಲು…! 05 ಕುಡಿದಷ್ಟುಮಾತು ಜಾಸ್ತಿ ಆಯಿತುಪದೇ ಪದೇಅವಳ ನೆನಪುಆಯಿತು…! **************************

ಫಿವಟ್ ಕವಿತೆ… Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೈನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ

Read Post »

You cannot copy content of this page

Scroll to Top