ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಸಂಪಾದಕೀಯ-ಗಾಂಧಿ ವಿಶೇಷ

ಸಂಪಾದಕೀಯ-ಗಾಂಧಿ ವಿಶೇಷ ಗಾಂಧಿ ವಿಶೇಷ ನಿಮ್ಮ ಮುಂದಿದೆಬಹಳಷ್ಟು ಬರಹಗಳುಬಂದ ಸಂತೋಷ ಒಂದೆಡೆಯಾದರೆ, ಗಾಂದಿಯನ್ನು ಹಾಡಿಹೊಗಳುವುದಕ್ಕಷ್ಟೇ ಬಹುತೇಕ ಬರಹಗಳು ಸೀಮಿತವಾದವೆಂಬ ವಿಷಾದವೂ ನನಗಿದೆ.ಗಾಂಧಿ ಪ್ರತಿಪಾದಿಸಿದ ಸಿದ್ದಾಂತಗಳ ಬಗ್ಗೆ ಮತ್ತಷ್ಟ ಗಂಭೀರ ಅದ್ಯಯನ ಚರ್ಚೆ ನಡೆಯಬೇಕಿದೆ. ಗಾಂಧಿಯ ಬಗ್ಗೆತೂಕವಾಗಿ ಬರೆಯುವಷ್ಟು ಓದಿ ಕೊಂಡವರು ಬರೆಯಲಿಲ್ಲವೆಂಬ ಬೇಸರವಿದೆ.ಸಾರ್ವಜನಿಕವಾಗಿ ಗಾಂಧಿಯ ಬಗ್ಗೆಒಳ್ಳೆಯ ಮಾತುಗಳನ್ನಾಡುತ್ತಲೇ ಾಂತರೀಕವಾಗಿ ಅಸಹನೆ ಬೆಳೆಸಿಕೊಂಡ ಬಹುತೇಕರಿಗೆ ಗಾಂದಿ ಅರ್ಥವೇ ಆಗಿಲ್ಲವೆನ್ನಬಹುದು. ಗಾಂಧಿಯನ್ನು ದ್ವೇಷಿಸುವ ಮನಸುಗಳ ಜೊತೆಯೇ ಬದುಕಬೇಕಾದ ಅನಿವಾರ್ಯತೆಯ ಈ ದಿನಗಳಲ್ಲಿ ಸಂಗಾತಿಗೆ ಬರೆಯುವ ಮೂಲಕ ಗಾಂಧಿಯನ್ನು ಸ್ಮರಿಸಿಕೊಂಡನಿಮಗೆ ದನ್ಯವಾದಗಳುಏನೇ ಇರಲಿ-ಬರಹಗಳನ್ನು ಕಳಿಸಿದ ತಮಗೆಲ್ಲರಿಗೂ ದನ್ಯವಾದಗಳು ನಿಮ್ಮವ ಕು.ಸ.ಮಧುಸೂದನ ರಂಗೇನಹಳ್ಳಿ

ಸಂಪಾದಕೀಯ-ಗಾಂಧಿ ವಿಶೇಷ Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ರಾಮಭಕ್ತ ಗಾಂಧೀಜಿ-– ಭಾರತವ ಬೆಳಗಿಸಲು ತತ್ವಗಳ ಮಾಡಿ, ದೇಶವನುಳಿಸಲು ಅಹಿರ್ನಿಶಿ ದುಡಿದರು….ಕಾಲುನಡಿಗೆಯೇ ಮುದ್ರೆಯಾಗಿಸಿ, ನಿದ್ರೆ ಮರೆತು ದೇಹದಂಡಿಸಿ ಸಾಗಿದರು…. ಊರೂರು ಅಲೆದರು, ಜನಗಳ ಒಟ್ಟಾಗಿಸಿ ತಾನೊಬ್ಬನೇ ಎಂದು ಮೆರೆಯದವರು….ದಂಡಿನೊಡನೆ ನಡಿಗೆ ಹೊರಟು, ಉಪ್ಪಿಗೆ ತೆರ ತೆರಲಾಗದೆಂದು ಸತ್ಯಾಗ್ರಹವ ಘೋಷಿಸಿದವರು…. ಹೋರಾಟಕ್ಕಾಗಿಯೇ ಹುಟ್ಟಿಬಂದು ಹೊಡೆದಾಟವ ಒಪ್ಪದಾತ್ಮ, ಶಾಂತಿಯನ್ನಪ್ಪಿ ನಡೆಯಿತು…ಇಷ್ಟಪಟ್ಟ ಕಡಲೆಕಾಯಿ, ನಿತ್ಯ ಪ್ರಯೋಗದ ಜೀವನ ಈ ಒಣದೇಹಿಯ ಮುಂದೆ ಮಂಡಿಯೂರಿತು…. ಹುಡುಕಿಬಂದ ಕಷ್ಟಗಳನು ಇಷ್ಟಪಟ್ಟು ಮೆಟ್ಟಿನಡೆದು, ಗದ್ದುಗೆಯಾಸೆ ಪಡದವರು….ದೇಶವೊಂದೇ ಗಮನದಲ್ಲಿ, ಸೇವೆಯೊಂದೇ ಕಾರ್ಯದಲೆಂದು ತೋರಲು ಮುಂದಾಳಾಗಿ ನಡೆದವರು….. ದೇಶವ ಒಗ್ಗೂಡಿಸಿ, ಆಂಗ್ಲರ ಬೆಚ್ಚಿಸಿದ ಸತ್ಯವಂತ ಮಹಾತ್ಮನ ಅಸಹಕಾರ ಚಳುವಳಿ….ಕನ್ನಡಕಧಾರಿಯ ಉಪವಾಸ ಸತ್ಯಾಗ್ರಹಕೆ, ನೀಡಿ ತೊಲಗಿದರು ಭಾರತಕ್ಕೆ ಸ್ವಾತಂತ್ರ್ಯದ ಬಳುವಳಿ…. ಕೋಲನು ಹಿಡಿದು ದೇಶವಿದೇಶ ಅಲೆದ, ಸ್ವಚ್ಛತಾ ಕಾರ್ಯದ ರೂವಾರಿ ಇವರು….ದೇಹ ಸವೆಸಿ, ಅಹಿಂಸೆಯ ಪಸರಿಸಿ, ಗುಂಡೇಟನುಂಡು ಅಸುನೀಗಿದವರು…. ಗುಜರಾತಿನಲ್ಲಿ ಜನಿಸಿ, ಮೊಳಗಿಸಿ, ಎಚ್ಚರಿಸಿ, ಹಾಕಿದರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಬುನಾದಿ….ಅಂದಿಗೂ, ಇಂದಿಗೂ, ಎಂದೆಂದಿಗೂ ಧರ್ಮ, ಅಹಿಂಸೆಯ ಜಗಕೆ ತೋರಿ ಅಮರರಾದರು ರಾಮಭಕ್ತ ನಮ್ಮ ಕರಮಚಂದ ಗಾಂಧಿ…. ****************************** ಶಾಂತಿವಾಸು

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಕನ್ನಡ ಶಾಯರಿಗಳು 01 ಅಜ್ಜ… ರೇಛಲೋ ಇತ್ತು ನೋಡ್ರೀನಿಮ್ಮ ಕಾಲ್ದಗಾಸತ್ಯ, ನ್ಯಾಯ, ನೀತಿ, ಧರ್ಮಕಾಲು ಮುಕ್ಕಡೋ ಇದ್ದವ್ರೀಈಗಲೂ ಇದ್ದಾವ್… ರೀಕಿಮ್ಮತ್ ಇಲ್ರೀಅವೇ..!ಹಿಕ್ಮತ್ ಮಾಡ್ಯಾರ್ರೀ !! 02 ಬಾಪುಸ್ವಾತಂತ್ರ್ಯ ಪೂರ್ವದಾಗನಿಮ್ಮಾತು ತಣ್ಣಗಿತ್ತುಬೆಚ್ಚಗಾತು ರಕ್ತಹರಿಲಿಲ್ಲ ಮತ್ತೆ..?ಅದೇ ಮಹಾತ್ಮನತಾಕತ್ತು ಅಲ್ವೇನ್ರೀ…? 03 ಮಹಾತ್ಮ ಅಂಥಜಗತ್ತಿನಾಗ್ಕ್ಯಾಮೆರಾದೊಳಗಕೂಡಲಿಲ್ಲ ನೋಡ್ರೀ..!ನಮ್ಮ ಎದಿಯಾಗನಿಮ್ಮ ಇಟಗೊಂಡಿವ್ರೀಹಂಗಾ ಬದುಕ್ದ್ರೀ ನೀವು…!! 04 ಬ್ರಿಟಿಷರಿಗೆದಂಡಿಗೆ ಹೋದ್ರುಚಳುವಳಿಗೆ ಹೋದ್ರುನಿಮ್ಮ ನಡಿಗೆಹಾವು ಹರದ್ಹಂಗಸಾಯ್ ಹೊಡದ್ಹಂಗರೀ…! 05 ಖರೇ ಹೇಳಾವ್ರೇನೀವು ಒಬ್ಬರೇನೋಡ್ರಲ್ಲಾ..!ರಾಮ್ ರಹೀಮ್ಮನ್ ಮೇ ಹೈಸಬ್ಕಾ ಭಗವಾನ್ ಏಕ್ಹೈ ಅಂದೋರೂ..!! *************************** ಹುಳಿಯಾರ್ ಷಬ್ಬೀರ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಗಾಂಧೀಗೆ, ಗಾಂಧೀ ಎಂದಾಗ,ಅದಾರು ಈ ಗಾಂಧೀಎಂಬ ಪ್ರಶ್ನೆ ಭುಗಿಲೆನ್ನುತ್ತದೆ.ಹೀಗೀಗೆ ಹೀಗೀಗೆ ಎಂದು ಬಿಡಿಸಿಟ್ಟಾಗ,ಓ ಅದಾ,ಲಂಗೋಟಿ ಅಜ್ಜ ಎನ್ನದವರಿಲ್ಲ.ಮೂರ್ಖ ಮುದುಕ,ಸತ್ತ ಅಹಿಂಸೆಯ ಫಾರ್ಮಲಾ ಬಳಸಿಬ್ರಟಿಷರನ್ನೇನೋ ನಡುಗಿಸಿದ ಆದರೆಭಾರತೀಯನಿಂದೇ ಮುಳುಗಿದ.ಎಷ್ಟೆಲ್ಲಾ ಇತ್ತು,ಕುರ್ಚಿಯ ಗಟ್ಟಿ ತಾಕತ್ತುಇರಲಿಲ್ಲವೆಂದ ಮೇಲೆಅವನದೇನು ಆದರ್ಶ.ಹಗರಣದಿ ಸಿಲುಕಿಜೇಲಿನಲ್ಲಿದ್ದೂ ಮಂತ್ರಿಯಾಗುವಈಗಿನ ಬಿಳಿ ಟೋಪಿಯವರಲ್ಲಿಇವನ್ಯಾವ ಲೆಕ್ಕ.ನಿಜವಾಗಿಯೂ ತನ್ನಫ್ಯೂಚರ್ ಹಾಳು ಮಾಡಿಕೊಂಡ.ಸ್ವತಂತ್ರ ಭಾರತ,ಸ್ವತಂತ್ರ ನಾಡೆಂದುದಿಕ್ಕು ದಿವಾಳಿಯಿಲ್ಲದೇ ಅಡ್ಡಾಡಿಬದುಕ ಕೊನೆ ಮಾಡಿಕೊಂಡ.ಆದರೂ ಅಜ್ಜಮತ್ತೆ ಹುಟ್ಟಿ ಬರುವಯತ್ನ ಮಾತ್ರ ಬೇಡ.ಬಂದರೂ ನಾ ಗಾಂಧೀಎನ್ನಬೇಡ.ಪಕ್ಷ,ಓಟು,ಕುರ್ಚಿಯಲಿನಿನ್ನ ಎಳದಾಡಿಕ್ಷಣ ಕ್ಷಣವೂ ಕೊಲ್ಲುತ್ತಾರೆ‌ಅಷ್ಟೊಂದು ಮುಂದುವರೆದಿದೆನೀ ಕಟ್ಟಿದ ನಿನ್ನ ಭಾರತ. ************************************ ರಜಿಯಾ ಬಳಬಟ್ಟಿ

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಗಾಂಧಿ ದಿಗ್ದರ್ಶನ ಕಲಿಸಿಕೊಟ್ಟ ಪಾಠ ಶೂನ್ಯಹಣದಾಹ, ಅಧಿಕಾರ ಮೋಹಕ್ಕೆ ನಾಗಾಲೋಟಬೆಟ್ಟದಷ್ಟು ಪಾಪಕ್ಕೆಕ್ಷಮೆಯೂ ಸಿಗಲಿಕ್ಕಿಲ್ಲ !ವಿದ್ಯೆ ವಂಚಿತ ಬಾಲಕರಶೋಷಿತ ಕಿಶೋರಿಯರಹಸಿದ ಕಣ್ಬೆಳಕಲ್ಲಿ ಜಗದ ಹೆಣವೇ ಕಾಣುತಿದೆ;ಗಾಳಿಯಲ್ಲಾದರೂ ಗಾಂಧಿವಾದ ತೀಡಬಾರದೇನೆರಳು ಬಿಸಿಲಿನ ನಡುವೆದಣಿದ ದೀನರಿಗೆ ಭಾಗ್ಯ ಯೋಜನೆಮರಿಚಿಕೆಯಾಗಿ, ಮಸಲತ್ತು ನಡೆದಿದೆಇನ್ಯಾರದೊ ಜೇಬಿಗೆ ತುತ್ತಾಗಿದೆ.ಭ್ರಷ್ಟ ನೋಡುವುದೇ ಕಷ್ಟಹಗಲಿನಲ್ಲೇ ಒಂಟಿ ಹೆಣ್ಣು ತಿರುಗಾಡುವಂತಿಲ್ಲಇನ್ನೆಲ್ಲಿ ರಾಮರಾಜ್ಯ! ಕನಸೇ ಅದುಭಗ್ನ ರಾಜಕಾರಣ,ಸೊರಗು ದೇಶಪ್ರೇಮಸಾವಿಗೆ ಶರಣಾಗುವ ಅನ್ನದಾತರುವ್ಯಸನಿ ಯುವಕರು, ಢೊಂಗಿ ದಾನಿಗಳುಅಮಾನವೀಯ ಅಂಧಾನುಕರಣೆಗೆಚೂರಾದರೂ ಗಾಂಧಿತತ್ವ ನೆನಪಾಗಲಿ…ಶ್ವೇತಕಾಯ,ನಡುವಲ್ಲಿ ಕೆಂಪುಬತ್ತಿ ತಿರುಗುತ್ತಕೇ ಕೇ ಹಾಕುತ್ತ ರಥಗಳ ಹಿಂಡುದೊರಗು ಖಾದಿ,ಅಲ್ಲ ಮೆರಗು,ಪೊಗರುಧರಿಸಿದ ನಾಯಕರು !ಸಿಂಹಾಸನಕ್ಕೆ ವರಗಿ,ಹಾರಕ್ಕೆ ಕೊರಳೊಡ್ಡಿಮೈಕಾಸುರನ ಮೇಲೆರಗಿಭಾಷಣಶೂರರು,ಹೊಗಳುಭಟ್ಟರುಮಹಾತ್ಮನೆಂದು ಜಪಿಸುತ್ತಾರೆ.ಗಾಂಧಿನಿಯಮ ಯಾರಿಗೂ ಬೇಕಿಲ್ಲನಡೆಯುವುದೆಲ್ಲ ನಿಯಮಬಾಹಿರವೇ !ಇತ್ತೀಚೆಗೆ ಹೊಸ ಚಹಾದ ಪರಿಮಳ ಸೂಸಿದೆಸ್ವಚ್ಛಭಾರತದ ಪೊರಕೆಗಳು ಅಲ್ಲಲ್ಲಿ ಸೆಳೆಯುತ್ತಿವೆಕೊಳೆಯಾಗಿದ್ದ ನನ್ನ ಚಿತ್ರ ಈಗ ಗರಿಗರಿನವರಂಗುಗಳಲ್ಲಿ ಓಡಾಡುತ್ತಿವೆ.ನಕಲಿ ಫೋಟೊಗಳು ಇದ್ದಂತಿಲ್ಲಒಂದೇಕಡೆ ಬೀಗಜಡಿದು ಕೂತಿಲ್ಲವೆಂದುಸ್ವಲ್ಪ ನಿಟ್ಟುಸಿರು ಬಿಟ್ರೇ…‌…ಹಗರಣಗಳು, ಪ್ರಕರಣಗಳು ಚಳುವಳಿ ರೂಪತಾಳಿಮೀ ..ಟೂ ಮೆನ್ ಟೂ ಗಳ ಕೂಗಾಟಧರ್ಮದ ಮೆಟ್ಟಿಲಿಗೆ ಕ್ರಾಂತಿಹೆಜ್ಜೆಯ ಹುನ್ನಾರಸಂಸ್ಕೃತಿ, ಸಂಪ್ರದಾಯ, ಸಂಸ್ಕಾರಗಳು ಗಾಳಿಗೆ ತೂರಿವೆಶಿಕ್ಷಣದಲ್ಲಿ ಸಮಾನತೆ,ದುರ್ಬಲರ ಸಂರಕ್ಷಣೆ,ಗಡಿಕಾಯ್ವ ಯೋಧರ ಸ್ಥಿತಿಗತಿಗಳ ಚಿಂತನೆಯಿಲ್ಲ.ಭಾರತೀಯತೆ, ಮಾನವೀಯತೆಯನ್ನೇ…ಮರೆತಿದ್ದಾರೆ !!! ಹೇ ರಾಮ ಹೇ ರಾಮ ************************************* ವಿಭಾ ಪುರೋಹಿತ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಮತ್ತೆ ಹುಟ್ಟಿ ಬನ್ನಿ ಗಾಂಧಿ ಮತ್ತೆ ಹುಟ್ಟಿ ಬನ್ನಿ ಓ ಪರಮಪೂಜ್ಯ ಗಾಂಧಿಅಹಿಂಸೆ ಏರಲೇಬೇಕಿದೆ ಎಲ್ಲರೆದೆಯ ಗಾದಿಸತ್ಯ ಸ್ವಾವಲಂಬನೆ ನೀವು ನಡೆದ ಹಾದಿಆತ್ಮನಿರ್ಭರ ನಡೆಗೆ ಅದುವೆ ತಾನೇ ಬುನಾದಿ ಬಿತ್ತುತ್ತಲೇ ಸಾಗಿದಿರಿ ಅಹಿಂಸೆಯ ಬೀಜಅವು ಮೇಲೆದ್ದು ಚಿಗುರಿ ಮರವಾದದ್ದು ನಿಜಅಲ್ಲಲ್ಲಿ ತೂಗುತಿವೆ ಪ್ರೀತಿ ಗೂಡುಗಳ ಸಾಲುಗೆದ್ದಲು,ವಿಷ ಸರ್ಪಗಳೂ ಕೇಳುತಿವೆ ಪಾಲು ಸತ್ಯವೆಂದರೆ ನೀವು ಮಹಾತ್ಮರೆಂದರೆ ನೀವುನಿತ್ಯ ನಿಮ್ಮ ಭಜನೆ ಭಾಷಣಗಳು ಹಲವುನಿಮ್ಮ ಜೀವನಸಾರ ನುಡಿಗೆ ಮೀಸಲು ಮಾಡಿನಿಮ್ಮಂತೆ ಬಾಳುವುದನು ಮರೆತೆವು ನೋಡಿ ನೀವು ಹಚ್ಚಿಟ್ಟ ದೀಪ ಕಾಣದು ಹೊರಗಣ್ಣಿಗೆಒಳಗಣ್ಣ ರೆಪ್ಪೆ ಬಿಡಿಸೊ ಕಲೆ ಸಿದ್ದಿಸಿಲ್ಲ ನಮಗೆಬೇಡುವೆವು ಮತ್ತೆ ಬನ್ನಿ ಪರಮ ಪೂಜ್ಯ ಗಾಂಧಿಎಲ್ಲ ಹೃದಯದೊಳಗೆ ಮತ್ತೆ ಜನಿಸಿ ಬನ್ನಿ ಗಾಂಧಿ ****************************************** ರೇಖಾ ಭಟ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಎರಡು ಕವಿತೆಗಳು ಸ್ಮಾರಕ ಅಂದು ಸ್ವತಂತ್ರ ಪೂರ್ವದಂದು ತನು ಮನ ತೊರೆದು ಕುಡಿ ಕುಟುಂಬ ಬಿಟ್ಟು ಬಂಧು ಬಳಗ ಮರೆತು ಸ್ವತಂತ್ರಕ್ಕಾಗಿ ಪಣ್ಣ ತೊಟ್ಟು ನಿಂತೆ. ಇಂದಿನ ರಾಜಕಾರಣಿಗಳು ಅಂತರಾತ್ಮಕ್ಕೆ ಹೆದರಿ ಭದ್ರತಾ ಸಿಬ್ಬಂದಿಯಾಗಿ ನಿನ್ನನು ಸೌಧದ ಹೊರಗೆ ಇಟ್ಟಿದ್ದಾರೆ ಆದರೆ, ಬೆವರು ಹರಿಸುವ ಕಾರ್ಮಿಕರು ಗೌರವಾರ್ಥಕವಾಗಿ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಿ ಸ್ಮರಿಸಿ ಮೆರೆಸಿದ್ದಾರೆ ಜನಸಂದಣಿಯ ನಡುವೆ ಮೌನವಾಗಿ ನೀನು ಸ್ಮಾರಕವಾಗಿ ನಿಂತಿದ್ದೀಯಾ ಗಾಂದಿ (ಆಂಗ್ಲದ ಮೌನಿಮೆಂಟ್ ಅನುವಾದ) ಪರಿಮಳ ಗಾಂಧಿಯ ಕಸ್ತೂರಿ ಭಾರತದ ಕಸ್ತೂರಿ ಗುಜುರಾತಿನ ಕುವರಿ ದೇಶದ ಉದ್ದಗಲಕ್ಕೂ ನಿನ್ನ ನಾಮ ಸ್ಮರಣೆ ವಿವಿಧ ಸಂಘ ಸಂಸ್ಥೆಗಳಲ್ಲಿ ಹಾದಿ ಬೀದಿಗಳಲ್ಲಿ ಬಾಪುವಿನ ಹೆಜ್ಜೆಗೆ ಹೆಜ್ಜೆ ಹಾಕಿ ಬಾಪುವಿನ ನೆರಳಾದಾಕ್ಕೆ ಬಾಪುವಿನ ಭಾವಕ್ಕೆ ಲಹರಿಯಾದಾದ್ದಕ್ಕೆ ಭಾರತದ ಸಂಸ್ಕೃತಿ ಸಂಕೇತವಾದಾದ್ದಕ್ಕೆ ನಿನ್ನ ತ್ಯಾಗಕ್ಕೆ ಎಲ್ಲೆಯುಂಟೆ ಕುಟುಂಬ ದೇಶಕ್ಕೆ ಗಾಂಧಿ ನೆನಪಾದರೆ ಕಸ್ತೂರಿ ಬಾಯಿ ಮರೆಯಾಗದು ಗಾಂಧಿ ಪರಿಮಳ ಕಸ್ತೂರಿ ಭಾರತದ ಕಸ್ತೂರಿ ಬಾಯಿ ********************************************* ರತ್ನಾ ನಾಗರಾಜ್

Read Post »

ಇತರೆ, ಗಾಂಧಿ ವಿಶೇಷ

ಗಾಂಧಿ ವಿಶೇಷ ಮಹಾತ್ಮ ಮಹಾತ್ಮನಾಗಿದ್ದು ಗಾಂಧೀಜಿಸಾಮಾನ್ಯರಲ್ಲಿ ಅಸಾಮಾನ್ಯನಾಗಿದ್ದಕ್ಕೆ !ದೇವರ ಅಪರಾವತಾರವೆಂದೇನೂ ಅಲ್ಲಅನುಸರಣೆಯಿರಲಿ ಆರಾಧನೆ ಬೇಕಿಲ್ಲ ನಿನ್ನೊಳಗಿನ ನಿನ್ನ ಕಂಡುಕೊಂಡೆಪತಿತನಾಗಿಯೂ ಪಾವನನಾದೆಮಾರಲಿಲ್ಲ ನಿನ್ನಾತ್ಮಸಾಕ್ಷಿಯಕಕ್ಷಿದಾರರ ವಕಾಲತ್ತಿನ ತಕ್ಕಡಿಯಲ್ಲಿಟ್ಟುನಿಯತ್ತಿನದೇ ಮೇಲುಗೈ ! ಘನತೆಯಿತ್ತೆ ಶ್ರಮಿಕನ ಬೆವರಿಗೆದುಡಿವ ತನುವಿನ ಬೆವರ ಹನಿಸುಖದ ವ್ಯಾಧಿಗಳ ಮದ್ದೆಂಬ ಮತಿಯಿದ್ದವದುಡಿಮೆಯ ಹಿರಿಮೆಯರಿತ ಬಹುರೂಪಿತನ್ನುಡುಗೆಯ ತಾನೆ ಹೊಲಿದ ಸಿಂಪಿಗಗೋಖಲೆಯೇ ಮೆಚ್ಚಿದ ಮಡಿವಾಳಸಮಗಾರನ ವೈದ್ಯನಂತೆ ಕಂಡ ಅಸ್ಪೃಶ್ಯತಾ ವಿರೋಧಿಭಂಗಿಗಳ ಹೀನಾಯಕೆ ಮರುಗಿದ ಮಾನವತಾವಾದಿಜೈಲಿಗಟ್ಟಿದವಗೆ ಮೆಟ್ಟು ಹೊಲಿದ ಮೋಚಿಸಹಕಾರ ಕೃಷಿಯ ಲಾಭವರಿತ ಸಾವಯವ ಕೃಷಿಕಬಡವರಿಗಾಗಿ ಚಂದಾ ಎತ್ತಿದ ತಿರುಕಆಹಾರವೇ ರೋಗಕೆ ಮದ್ದೆಂದ ಧನ್ವಂತರಿಉನ್ನತಿಗಾಗಿ ಕಲೆಯೆಂದರಿತ ಲೇಖಕಸಮಾನತೆಗೆ ಹೋರಾಡಿದ ದ.ಆಫ್ರಿಕಾದ ದಳಪತಿಸಿದ್ಧಾಂತಗಳಿಗೆ ಸೆರೆಯಾದ ಜೈಲು ಹಕ್ಕಿ ದಾಂಪತ್ಯವು ಸೊಗದ ಸಾಂಗತ್ಯವೆಂದುದೌರ್ಜನ್ಯವ ದೂರವಿಟ್ಟ ಸಂಸಾರಿಗಯಂತ್ರಕ್ಕಲ್ಲ ಯಂತ್ರ ವ್ಯಾಮೋಹ ದ್ವೇಷಿಧರ್ಮವಾಗಲಿಲ್ಲ ನಿನಗೆ ರಾಮನಾಮಅದೊಂದು ಭರವಸೆಯ ಮಂತ್ರ!ನೋಡಿದೆವು ‘ಹರಿಶ್ಚಂದ್ರ ನಾಟಕ’ ನಿನ್ನಂತೆತೊಡಲಿಲ್ಲ ಸತ್ಯವ್ರತದ ದೀಕ್ಷೆ ನಿನ್ನಂತೆಸ್ವಾತಂತ್ರ ಗಳಿಕೆಗೆ ಅಹಿಂಸೆಯೇ ಆಯುಧಬ್ರಿಟಿಷರ ನಡುಗಿಸಿದ ಸತ್ಯಾಗ್ರಹದ ಪ್ರವರ್ತಕಸತ್ಯಾನ್ವೇಷಣೆಯೆ ನಿನ್ನ ಬದುಕಿನ ಪ್ರಯೋಗಅರೆಬೆತ್ತಲೆಯೆ ಅರಮನೆಗೆ ಹೋದ ಫಕೀರನಡೆನುಡಿಗಳೊಂದಾದ ದಿಟ್ಟತನದ ಬದುಕುಧಿಕ್ಕರಿಸಿ ಅಧಿಕಾರವ ದೂರ ಸರಿದ ಸಂತ ಮಹಾತ್ಮನ ಸಂಕೀರ್ಣ ಬದುಕಿನಒಳನೋಟಕ್ಕಷ್ಟೆ ದಕ್ಕುವುದು ಕಾಣ್ಕೆಪಕ್ಷಿನೋಟಕ್ಕೆ ಅವರವರ ಎಣಿಕೆ ******************************* ಎಂ. ಆರ್. ಅನಸೂಯ

Read Post »

ಇತರೆ, ಗಾಂಧಿ ವಿಶೇಷ

ಗಜಲ್

ಗಾಂಧಿ ವಿಶೇಷ ಗಾಂಧಿ ವಿಶೇಷ ಬೇಳೆ ಬೇಯಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿಹೊಟ್ಟೆ ತುಂಬಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ಹೊಗಳಿಕೆ-ತೆಗಳಿಕೆ ನಡೆಯುತಿವೆ ಅಂಧಭಕ್ತಿಯಲ್ಲಿಚಪಲ ತೀರಿಸಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ನಿನ್ನ ಆದರ್ಶಗಳು ಪುಸ್ತಕಗಳಲ್ಲಿ ಮರಿ ಹಾಕುತಿವೆಮೌಲ್ಯಗಳನ್ನು ಕೊಲ್ಲುತಿರುವರು ನಿನ್ನ ಹೆಸರಿನಲ್ಲಿ ಪೂಜಿಸುತಿರುವರು ನಿನ್ನ ಸುಂದರ ಭಾವಚಿತ್ರಗಳನ್ನುವ್ಯಕ್ತಿತ್ವವನ್ನು ಮಾರಿಕೊಳ್ಳುತಿರುವರು ನಿನ್ನ ಹೆಸರಿನಲ್ಲಿ ಗಾಂಧಿಯನ್ನು ಮನುಷ್ಯನೆಂದು ತಿಳಿಯಲಿಲ್ಲ ಮಲ್ಲಿಸಂಪತ್ತನ್ನು ಲೂಟಿ ಮಾಡುತಿರುವರು ನಿನ್ನ ಹೆಸರಿನಲ್ಲಿ ******************************** ರತ್ನರಾಯ ಮಲ್ಲ

ಗಜಲ್ Read Post »

ಇತರೆ, ಗಾಂಧಿ ವಿಶೇಷ

ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ

ಗಾಂಧಿ ವಿಶೇಷ ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ ಮೋಹನ್‌ದಾಸ್ ಕರಮಚಂದ ಗಾಂಧಿ ರಾಷ್ಟ್ರೀಯ  ಚಳುವಳಿಯ ನಾಯಕರಾಗಿ ಮಾನ್ಯತೆ ಪಡೆದಾಗ, ೧೯೧೬ರ ಸುಮಾರಿಗೆ ಆಂಧ್ರದ ಮುಸಲಿಪಟ್ಟಣಂನ ಪಿಂಗ್ಲೆ ವೆಂಕಯ್ಯ, ಗಾಂಧೀಜಿಯವರಲ್ಲಿ ತಮ್ಮ ಕಾರ್ಯದ ಬಗ್ಗೆ ಉತ್ಸಾಹ ಮೂಡಿಸಲು ಯತ್ನಿಸಿದರು ಹಾಗೂ ಒಂದು ವಿನ್ಯಾಸ ಸೂಚಿಸಿದರು. ಆದರೆ ಅದು ಗಾಂಧೀಜಿಯವರಿಗೆ ಇಷ್ಟವಾಗಲಿಲ್ಲ. ಅವರು ರಾಷ್ಟ್ರ ಧ್ವಜ ಹೊಂದುವ ಅಭಿಪ್ರಾಯಕ್ಕೆ ವಿರುದ್ಧವಾಗಿರಲಿಲ್ಲ. ಆದರೆ ಅವರಿಗೆ ವೆಂಕಯ್ಯನವರ ಧ್ವಜ ವಿನ್ಯಾಸದಲ್ಲಿ ಸಂಪೂರ್ಣ ದೇಶದ ಅಂತರಾತ್ಮ ಕಲಕುವ ವೈಶಿಷ್ಟ್ಯವೇನೂ ಕಾಣಲಿಲ್ಲ.             ಒಮ್ಮೆ ಗಾಂಧೀಜಿಯವರ ಜೊತೆ ಮಾತನಾಡುತ್ತಿದ್ದಾಗ, ಗುರುದಾಸ್‌ಪುರ್‌ನ ಲಾಲಾಹನ್ಸ್ ರಾಜ್‌ಸೋಂಧಿ ಅವರು ನಮ್ಮ ಸ್ವಾವಲಂಬನೆಯ ಪ್ರತೀಕವಾಗಿ, ಭಾರತದ ರಾಷ್ಟçಧ್ವಜದಲ್ಲಿ ಚರಕ ಇರಬೇಕೆಂದು ಸಲಹೆ ಮಾಡಿದರು. ಈ ಪ್ರಸ್ತಾವ ಗಾಂಧೀಜಿಯವರಿಗೆ ಬಹಳ ಇಷ್ಟವಾಯಿತು. ಗಾಂಧೀಜಿ ೧೯೨೧ರ ಏಪ್ರಿಲ್‌ನಲ್ಲಿ ವಿಜಯವಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಗೆ ವೆಂಕಯ್ಯ ಅವರನ್ನು ಕರೆಸಿ, ಹಿಂದೂ ಧರ್ಮವನ್ನು ಸಂಕೇತಿಸುವ ಕೇಸರಿ ಬಣ್ಣದಲ್ಲಿ ಚರಕವನ್ನು ಚಿತ್ರಿಸುವಂತೆಯೆ ಹಾಗೂ ಇಸ್ಲಾಂ ಧರ್ಮವನ್ನು ಸಂಕೇತಿಸುವ  ಹಸಿರು ಬಣ್ಣದ ಪಟ್ಟಿಯನ್ನೊಳಗೊಂಡ ರಾಷ್ಟ್ರೀಯ  ಧ್ವಜ ರಚಿಸಬೇಕೆಂದು ತಿಳಿಸಿದರು.             ಗಾಂಧೀಜಿಯವರ ಮುಂದೆ ಮೂರುತಾಸಿನೊಳಗೆ ವೆಂಕಯ್ಯ ಒಂದು ಧ್ವಜ ತಯಾರಿಸಿ ಇಟ್ಟರು. ಅದರಲ್ಲಿ ಕೇಸರಿ ಮತ್ತು ಹಸಿರಿನ ಎರಡು ಪಟ್ಟಿಗಳ ಮೇಲೆ ಸಮಾನವಾಗಿ ಮೂಡುವಂತೆ ದೊಡ್ಡ ಚರಕವಿತ್ತು. ಆದರೆ ಅದು ಗಾಂಧೀಜಿಯವರ ಕೈ ಸೇರುವಾಗ ಸ್ವಲ್ಪ ತಡವಾದುದರಿಂದ, ಅದನ್ನು ಕಾಂಗ್ರೆಸ್ ಸಮಿತಿಯ ಅನುಮೋದನೆಗಾಗಿ ಸಲ್ಲಿಸಲಾಗಲಿಲ್ಲ. ಆದರೆ ಅದರಿಂದ ಒಳ್ಳೆಯದೇ ಆಯಿತು. ದ್ವಿವರ್ಣದ ಧ್ವಜದಲ್ಲಿ ಇತರೆ ಅಲ್ಪಸಂಖ್ಯಾತರನ್ನು ಪ್ರತಿನಿಧಿಸುವ ಸಂಕೇತ ಇಲ್ಲದಿರುವುದು ಸಮಸ್ಯೆಗೀಡು ಮಾಡುತ್ತಿತ್ತು.             ಧ್ವಜವನ್ನು ಪಕ್ಷ ಪರಿಶೀಲಿಸಿದ ನಂತರ ಅದರಲ್ಲಿ ಹಿಂದು, ಮುಸ್ಲಿಂ ಮತ್ತು ಇತರ ಧರ್ಮಗಳನ್ನು ಪ್ರತಿನಿಧಿಸುವ ಮೂರು ವರ್ಣಗಳಿರಬೇಕೆಂದು ಗಾಂಧೀಜಿ ಕಂಡುಕೊಂಡರು. ಆದ್ದರಿಂದ ಧ್ವಜಕ್ಕಾಗಿ ಅವರು ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳನ್ನು ಪರಿಗಣಿಸಿದ್ದರು.             ಭಾರತೀಯ ಧ್ವಜದ ಹಿಂದಿನ ತತ್ವವನ್ನು ಮತ್ತು ಅದರ ವಿನ್ಯಾಸವನ್ನು ಕಂಡುಕೊಂಡ ಮೇಲೆ, ಗಾಂಧೀಜಿಯವರು ಮತ್ತೆ ವೆಂಕಯ್ಯ ಅವರನ್ನು ಕರೆಸಿ, ಮುಂಚಿನ ಧ್ವಜದ ವಿನ್ಯಾಸದಲ್ಲಿ ಬಿಳಿ ಪಟ್ಟಿಯನ್ನು ಸೇರಿಸಿ ಧ್ವಜ ನಿರ್ಮಿಸುವಂತೆ ತಿಳಿಸಿದರು. ಧ್ವಜದಲ್ಲಿ ಮೇಲಿನಿಂದ ಅನುಕ್ರಮವಾಗಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿದ್ದು ಮೂರು ಪಟ್ಟೆಗಳ ಮೇಲೂ ಬರುವಂತೆ ಮಧ್ಯದಲ್ಲಿ ಚರಕವಿರಬೇಕೆಂದು ಅವರು ನಿರ್ದೇಶನವಿತ್ತರು. ಗಾಂಧೀಜಿಯವರ ಇಚ್ಛೆಯಂತೆಯೇ ವೆಂಕಯ್ಯನವರು ಒಟ್ಟು ೩೦ ದೇಶಗಳ ರಾಷ್ಟ್ರ ಧ್ವಜಗಳನ್ನು ೫ ವರ್ಷಗಳ ಕಾಲ ಅಭ್ಯಸಿಸಿ, ಕೊನೆಗೆ ತ್ಯಾಗ, ಶಾಂತಿ ಸಮೃದ್ಧಿಯ ಸಂಕೇತವಾದ ಕೇಸರಿ, ಬಿಳಿ, ಹಸಿರಿನ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದರು. ಈ ರೀತಿ ಅಖಿಲ ಭಾರತ ಕಾಂಗ್ರೆಸ್‌ನ ಪ್ರಥಮ ಧ್ವಜ ರೂಪುಗೊಂಡಿತು.             ಧ್ವಜದಲ್ಲಿ ಎಲ್ಲಾ ವರ್ಗಗಳ ಪ್ರಾತಿನಿಧ್ಯ ತೋರಿ, ಗಾಂಧೀಜಿ ವಿವಿಧ ಧರ್ಮಗಳ ನಡುವೆ ವಿಭಜನೆ ಉಂಟುಮಾಡಲಿಲ್ಲ. ಮೊದಲಬಾರಿಗೆ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಪಾರ್ಸಿಗಳೆನ್ನದೆ ಪ್ರಾಣತ್ಯಾಗ ಮಾಡಲು ಪ್ರೇರೇಪಿಸುವಂತಹ ಧ್ವಜವನ್ನು ಅವರು ನೀಡಿದರು. ಗಾಂಧೀಜಿಯವರೇ (ಎಂ.ಕೆ.ಗಾಂಧಿ, ಯಂಗ್ ಇಂಡಿಯಾ, ದಿ ನ್ಯಾಶನಲ್ ಫ್ಲಾಗ್, ೧೩ ಎಪ್ರಿಲ್ ,೧೯೨೧)  ಹೇಳಿದಂತೆ:             “ದೀರ್ಘವಾಗಿ ಪರಿಶೀಲನೆ ನಡೆಸಿದ ನಂತರ, ಹಿನ್ನೆಲೆಯಲ್ಲಿ ಇತರ ಧರ್ಮಗಳಿಗೂ ಪ್ರಾತಿನಿಧ್ಯ ಇರಬೇಕೆಂದು ನಾನು ಕಂಡುಕೊಂಡೆ. ಹಿಂದೂ, ಮುಸ್ಲಿಂ ಏಕತೆ ಕೇವಲ ಅವರಿಗೆ ಮಾತ್ರವಲ್ಲ. ಎಲ್ಲರಿಗೂ ಅನ್ವಯವಾಗುವಂತಹುದು. ಭಾರತದಲ್ಲಿ ವಾಸವಾಗುವ ಎಲ್ಲಾ ಧರ್ಮಗಳವರ ಏಕತೆಯ ಪ್ರತೀಕ ಹಿಂದೂ ಮತ್ತು ಮುಸ್ಲಿಂಮರು ಪರಸ್ಪರ ಸಹಿಷ್ಣುತೆ ತೋರಿದರೆ, ಅವರಿಬ್ಬರೂ ಇತರ ಧರ್ಮಗಳ ಬಗ್ಗೆಯೂ ಸಹಿಷ್ಣುತೆ ತೋರಬಹುದು. ಅವರ ಏಕತೆ ಭಾರತದಲ್ಲಿನ ಅಥವಾ ವಿಶ್ವದಲ್ಲಿನ ಇತರ ಧರ್ಮಗಳಿಗೆ ಭಾದಕವಾಗಲಾರದು. ಆದ್ದರಿಂದ ಧ್ವಜದ ಹಿನ್ನೆಲೆಯಲ್ಲಿ ಬಿಳಿ, ಹಸಿರು ಮತ್ತು ಕೇಸರಿ ಬಣ್ಣಗಳಿರಬೇಕೆಂದು ನನ್ನ ಅಭಿಪ್ರಾಯ.        ಬಣ್ಣಗಳನ್ನು ವ್ಯವಸ್ಥೆಗೊಳಿಸಿದ ಕ್ರಮವೂ ಅರ್ಥಪೂರ್ಣವಾಗಿತ್ತು. ಗಾಂಧೀಜಿ ಹೀಗೆ ಹೇಳಿದ್ದರು:             “ದುರ್ಬಲರು ಎಲ್ಲರಿಗಿಂತ ಮೇಲೆ ಇರುತ್ತಾರೆ. ನಂತರ ಮುಸ್ಲಿಮರು ಮತ್ತು ಕೊನೆಯಲ್ಲಿ ಹಿಂದುಗಳ ಬಣ್ಣ ಎಲ್ಲಕ್ಕಿಂತ ಶಕ್ತಿಶಾಲಿ ದುರ್ಬಲರಿಗೆ ಆಧಾರವಾಗಿ ಕೆಳಗಿರಬೇಕು”. ಪ್ರತಿಯೊಂದು ಬಣ್ಣದ ಪಟ್ಟಿಯ ಗಾತ್ರವೂ ಸಮಾನವಾಗಿತ್ತು. ಅದರ ಮಹತ್ವವೇನೆಂದರೆ :             “ದುರ್ಬಲರೂ ಅತ್ಯಂತ ಶಕ್ತಿಶಾಲಿಗಳೂ ಸಮಾನರೆಂದು ತೋರಿಸಲು ಎಲ್ಲಾ ವರ್ಣಗಳಿಗೂ ಸಮಾನ ಗಾತ್ರ ನೀಡಲಾಯಿತು.” ರಾಷ್ಟ್ರೀಯ  ಧ್ವಜದಲ್ಲಿ ಪೂರ್ಣ ಪ್ರಮಾಣದ ಚರಕ ಇರಬೇಕೆಂದು ನಿಗದಿಯಾಗಿತ್ತು.             ಗಾಂಧೀಜಿಯವರ ಧ್ವಜವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ ಅಂಗೀಕರಿಸದಿದ್ದರೂ ಗಾಂಧೀಜಿಯವರು ಅದನ್ನು ಅನುಮೋದಿಸಿದ್ದರಿಂದ ಅದು ಎಲ್ಲರಿಗೂ ಒಪ್ಪಿಗೆಯಾಯಿತು. ಅದನ್ನು ಕಾಂಗ್ರೆಸ್‌ನ ಎಲ್ಲಾ ಸಮಾರಂಭಗಳಲ್ಲಿ ಹಾರಿಸಲಾಗುತ್ತಿತ್ತು. ಸಮಯ ಕಳೆದಂತೆ ಅದು ರಾಷ್ಟ್ರೀಯ  ಧ್ವಜವೆಂದು ಪ್ರಸಿದ್ಧವಾಯಿತು. ೧೯೨೧ ರಲ್ಲಿ ಅಹ್ಮದಾಬಾದಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮೊದಲಬಾರಿಗೆ ದೊಡ್ಡ ಗಾತ್ರದ ಈ ಚರಕ ಧ್ವಜದ ಆರೋಹಣೆ ನಡೆಯಿತು. ಆನಂತರ ಅದು, ಬೇರೆ ಯಾವುದೇ ಅಧಿಕೃತ ನಿರ್ಣಯವಿಲ್ಲದೇ ಭಾರತದ ರಾಷ್ಟ್ರೀಯ  ಧ್ವಜವೆಂದು ಮಾನ್ಯತೆ ಪಡೆಯಿತು. ೧೯೨೯ರ ಡಿಸೆಂಬರ್ ೩೧ ರಂದು ರಾವಿ ನದಿ ತಟದಲ್ಲಿ ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಮಧ್ಯರಾತ್ರಿ ಈ ಧ್ವಜದ ಆರೋಹಣೆ ನಡೆಯಿತು. ಈ ಅಧಿವೇಶನ ಪೂರ್ಣ ಸ್ವರಾಜ್ಯ ಕಾಂಗ್ರೆಸ್‌ನ ಗುರಿಯೆಂದು ಸಾರಿತು. ೨೬ ಜನವರಿ ೧೯೩೦ ರಂದು, ಇದೇ ಧ್ವಜದ ನೆರಳಿನಲ್ಲಿ ಸಾವಿರಗಟ್ಟಲೇ ಭಾರತೀಯರು ಪ್ರತಿಜ್ಞೆ ತೊಟ್ಟರು. ಅಸಹಕಾರ ಚಳುವಳಿಯೊಂದಿಗೆ ಚರಕಧ್ವಜ ನಿಧಾನವಾಗಿ ಜನಪ್ರಿಯವಾಯಿತು.             ೧೯೩೦ ರ ಮಾರ್ಚ್ ೧೨ ರಂದು ಗಾಂಧೀಜಿ, ಅಸಹಕಾರ ಚಳುವಳಿ ಆರಂಭಿಸಿದರು. ಅವರು ೭೮ ಅನುಯಾಯಿಗಳೊಂದಿಗೆ ಸಾಬರ್‌ಮತಿಯಿಂದ ಗುಜರಾತ್‌ನ ಕರಾವಳಿಯಲ್ಲಿರುವ ದಾಂಡಿ ಎಂಬ ಒಂದು ಹಳ್ಳಿಗೆ ಉಪ್ಪಿನ ಕಾಯ್ದೆ ಮುರಿಯಲು ಯಾತ್ರೆ ನಡೆಸಿದರು. ತಂಡ ೨೫ ದಿನಗಳಲ್ಲಿ ೨೦೦ ಮೈಲು ದೂರ ಕ್ರಮಿಸಿ, ಏಪ್ರಿಲ್ ೫, ೧೯೩೦ ರಂದು ದಾಂಡಿ ತಲುಪಿತು. ಏಪ್ರಿಲ್ ೬ ರಂದು ಉಪ್ಪಿನ ಕಾಯ್ದೆಗೆ ವಿರುದ್ಧವಾಗಿ ಉಪ್ಪು ತಯಾರಿಸಿದರು. ಗುಜರಾತ್‌ನ ಧರಸಾನದಲ್ಲಿರುವ, ಸರ್ಕಾರದ ಉಪ್ಪಿನ ಗೋದಾಮುಗಳ ಮೇಲೆ ದಾಳಿ ಮಾಡುವುದು ಅವರ ಮುಂದಿನ ಹೆಜ್ಜೆಯಾಗಿತ್ತು. ಆದರೆ ಅವರು ಈ ರೀತಿ ಮಾಡುವ ಮುಂಚೆಯೇ ಅವರನ್ನು ಸೆರೆ ಹಿಡಿಯಲಾಯಿತು.             ಅಗಷ್ಟ ೧೪ ರ ಮಧ್ಯರಾತ್ರಿ ಬ್ರಿಟಿಷ್ ಧ್ವಜ ಕೆಳಗಿಳಿಯುತ್ತಲೇ ಕೆಂಪುಕೋಟೆಯಲ್ಲಿ ಮೇಲೆರಿದ್ದು ಭಾರತದ ತ್ರಿವರ್ಣ ಧ್ವಜ. ಈ ಧ್ವಜ ಸ್ವಾತಂತ್ರö್ಯಕ್ಕೆ ಮುನ್ನ ಭಾರತೀಯ ರಾಷ್ಟಿçÃಯ ಚಳುವಳಿಯ ಅರ್ಥಾತ್ ಭಾರತೀಯ ರಾಷ್ಟ್ರೀಯ  ಕಾಂಗ್ರೆಸ್ಸಿನ ಧ್ವಜದ ಪರಿಷ್ಕೃತ ರೂಪ. ಮೂಲ ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕಚಕ್ರವನ್ನು ಸೇರಿಸಿದ್ದು. ಮೂಲ ಧ್ವಜದಲ್ಲಿ ಇದ್ದದ್ದು ಚರಕದ ಚಿತ್ರ. ಮಹಾತ್ಮ ಗಾಂಧಿ ಇಡೀ ರಾಷ್ಟ್ರೀಯ  ಚಳುವಳಿಯಲ್ಲಿ ಬಳಸಿದ ಬಹುಮುಖ್ಯ ದೇಶಿಯ ಸಂಕೇತವಾಗಿದ್ದು, ಚರಕವನ್ನು ರಾಷ್ಟ್ರಧ್ವಜದಲ್ಲಿ ಮುಂದುವರಿಸುವುದಕ್ಕೆ ಸಂವಿಧಾನ ಸಭೆಯಲ್ಲಿ ಹಲವಾರು ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದಕ್ಕೆ ಒಂದು ಕಾರಣ-ರಾಜಕೀಯ ಪಕ್ಷದ ಧ್ವಜವನ್ನು ಇದ್ದಕ್ಕಿದ್ದ ಹಾಗೆ ರಾಷ್ಟ್ರ  ಧ್ವಜವನ್ನಾಗಿ ಒಪ್ಪಿಕೊಳ್ಳುವುದು ಸರಿಯಲ್ಲ ಎನ್ನುವುದು. ಅದಕ್ಕಿಂತಲೂ ಮುಖ್ಯವಾಗಿ ಅಂದಿನ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವರಿಗೆ ಚರಕ ಪ್ರಾಚೀನತೆಯ, ಅವೈಜ್ಞಾನಿಕತೆಯ, ಸ್ತ್ರೀಯರ ಕೆಲಸದ ಸಂಕೇತವಾಗಿ ಕಂಡುಬಂದಿತು. ಸ್ವಾತಂತ್ರಕ್ಕೆ ಮೂಹೂರ್ತ ನಿರ್ಣಯವಾದ ವೇಳೆ ಮುನ್ನೆಲೆಗೆ ಬಂದ ವೈಜ್ಞಾನಿಕತೆಯ ಪ್ರಶ್ನೆ ಚರಕದ ವಿಷಯವಾಗಿ ಪ್ರಶ್ನೆಯೆತ್ತಿದ್ದು ಕುತೂಹಲದ ವಿಷಯ.             ಕೊನೆಗೆ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿ ಕೆತ್ತಲಾದ ಚಕ್ರವರ್ತಿ ಅಶೋಕನ ಧರ್ಮಚಕ್ರವನ್ನೇ ಧ್ವಜದಲ್ಲಿ ಸೇರಿಸುವುದು ಎಂದು ಸಂವಿಧಾನ ಸಭೆ ೧೯೪೭ ರ ಜುಲೈ ೨೨ ರಂದು ನಿರ್ಣಯಿಸುತ್ತದೆ.  ರಾಷ್ಟ್ರ ಧ್ವಜದ ಕುರಿತು ಒಂದೆರಡು ವಿಷಯ ಪಂಡಿತ ಜವಾಹರಲಾಲ್ ನೆಹರು ಹೇಳ ಬಯಸುತ್ತಾರೆ: “ನಾವು ಕಳೆದ ಕೆಲವು ವರ್ಷಗಳಲ್ಲಿ ಬಳಸಿದ ಧ್ವಜದಲ್ಲಿ ಮತ್ತು ಇದರಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನು ನೀವು ಕಾಣಬಹುದು. ಬಣ್ಣಗಳು ಅವೇ ಕಡು ಕೇಸರಿ, ಬಿಳಿ ಮತ್ತು ಕಡು ಹಸಿರು. ಬಿಳಿಯ ಬಣ್ಣದಲ್ಲಿ ಹಿಂದೆ ಭಾರತದ ಜನಸಾಮಾನ್ಯನ ಪ್ರತೀಕವಾದ ಅವರ ಪರಿಶ್ರಮದ ಪ್ರತೀಕವಾದ ಮತ್ತು ಗಾಂಧೀಜಿಯವರು ನಮಗೆ ಸಂದೇಶದ ಮೂಲಕ ತಿಳಿಸಿದ ಚರಕವೊಂದಿತ್ತು. ಈಗಿನ ಧ್ವಜದಲ್ಲಿ ಈ ಚರಕದ ಲಾಂಛನವನ್ನು ಸ್ವಲ್ಪ ಬದಲಾಯಿಸಲಾಗಿದೆ. ಸಂಪೂರ್ಣ ತೆಗೆದಿಲ್ಲ. ಅದನ್ನು ಏಕೆ ಬದಲಾಯಿಸಲಾಗಿದೆ? ಸಾಧಾರಣವಾಗಿ ಧ್ವಜದ ಒಂದು ಬದಿಯಲ್ಲಿ ಇರುವ ವಿನ್ಯಾಸವೇ ಇನ್ನೊಂದು ಬದಿಯಲ್ಲೂ ಇರಬೇಕು. ಇಲ್ಲವಾದರೆ ಅದು ಪರಂಪರೆಗೆ ವಿರುದ್ಧವಾಗುತ್ತದೆ. ಧ್ವಜದ ಮೇಲಿರುವ ಚರಕದ  ಎರಡು ತುದಿಗಳು, ಇಬ್ಬದಿಗಳಲ್ಲಿ ಬೇರೆ ಬೇರೆಯಾಗಿ ಕಾಣುತ್ತವೆ. ಇದು ಒಂದು ಸಮಸ್ಯೆಯಾಗಿತ್ತು. ಆದ್ದರಿಂದ ಬಹಳಷ್ಟು ಗಹನವಾಗಿ ಪರಿಶೀಲಿಸಿದ ನಂತರ, ಜನಸಾಮಾನ್ಯನ ಭಾವನೆಗಳನ್ನು ಬಿಂಬಿಸುವ ಈ ಲಾಂಛನದಲ್ಲಿ ಬದಲಾವಣೆ ಮಾಡಬೇಕಾಯಿತು. ಅದರ ಚಕ್ರ ಮುಖ್ಯ ಭಾಗವನ್ನು ಉಳಿಸಿಕೊಂಡು, ಇತರ ಭಾಗವನ್ನು ತ್ಯಜಿಸಬೇಕಾಯಿತು. ಚರಕದ ಮುಖ್ಯ ಭಾಗವಾದ ಚಕ್ರ ಇರಿಸಿಕೊಂಡೆವು. ಈ ರೀತಿ ಚರಕದ ಪರಂಪರೆಯನ್ನು ಚಕ್ರವನ್ನು ಉಳಿಸಿಕೊಳ್ಳಲಾಯಿತ…”             ಈ ವಿಷಯ ಗಾಂಧೀಜಿ ಗಮನಕ್ಕೆ ಬರುತ್ತಲೇ ಅವರಿಗೆ ಅಸಮಾಧಾನ ಉಂಟಾಗುತ್ತದೆ. `ಚರಕವಿಲ್ಲದ ಧ್ವಜಕ್ಕೆ ನಾನು ವಂದಿಸಲಾರೆ’ ಎನ್ನುತ್ತಾರೆ. ಚರಕ ಅವರ ಪಾಲಿಗೆ ಬರೀ ನೂಲುವ ಸಾಧನವಾಗಿರಲಿಲ್ಲ. ಅವರ ಕಲ್ಪನೆಯ ಭಾರತದ ಅಸದೃಶ ಸಂಕೇತವಾಗಿತ್ತು. ಗಾಂಧೀಜಿಯನ್ನು ಸಮಾಧಾನಪಡಿಸಲು ನೆಹರೂ ಯತ್ನಿಸುತ್ತಾರೆ. ಚರಕದ ಚಕ್ರವೂ ಚಕ್ರ, ಅಶೋಕಚಕ್ರವೂ ಚಕ್ರ. ಈ ಚಕ್ರವನ್ನು ಚರಕದ ಚಕ್ರ ಅಂತಲೇ ತಾವು ಭಾವಿಸಬೇಕು ಎಂದು ಗಾಂಧೀಜಿಯವರಲ್ಲಿ ಕೇಳಿಕೊಳ್ಳುತ್ತಾರೆ. ಇದನ್ನು ಮನಸ್ಸಿಲ್ಲದೆ ಗಾಂಧೀಜಿ ಒಪ್ಪಿಕೊಳ್ಳುತ್ತಾರೆ. ಧ್ವಜದ ವಿಷಯದಲ್ಲಿ ವಾದಿಸುವ ಸಮಯ ಅದಾಗಿರಲಿಲ್ಲ. ವಿಭಜನೆಯ ಕಾರ್ಮೋಡ ದೇಶವನ್ನು ಮತ್ತು ಅವರ ಮನಸ್ಸನ್ನು ಆವರಿಸಿತ್ತು. ಎಲ್ಲೆಡೆ ರಕ್ತ ಹರಿಯುತ್ತಿತ್ತು.             ಮುಂದಿನ ದಿನಗಳಲ್ಲಿ ಧ್ವಜ ವಿನ್ಯಾಸದ ಕುರಿತಾದ ತನ್ನ ಬಿಗಿನಿಲುವನ್ನು ಗಾಂಧೀಜಿ ಸಡಿಲಿಸುತ್ತಾರೆ. ೧೯೪೭ ರ ಅಗಸ್ಟ್ ೩ ರಂದು `ಹರಿಜನ ಬಂಧು’ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಗಾಂಧೀಜಿ ಧ್ವಜದ ಕುರಿತು ಹೀಗೆ ಬರೆಯುತ್ತಾರೆ. “… ಧ್ವಜದ ನಡುವಣ ಆ ಚಕ್ರವನ್ನು ನೋಡಿ ಕೆಲವರಾದರೂ ಅಶೋಕ ಚಕ್ರವರ್ತಿ ಅಧಿಕಾರ ತ್ಯಜಿಸಿ ಶಾಂತಿ ದೂತನಾದದ್ದನ್ನು ನೆನಪಿಸಿಕೊಳ್ಳಬಹುದು.  ಕೆಲವರಾದರೂ ಅಶೋಕನ ದಯಾಮಯ ಹೃದಯವನ್ನು ನೆನಪಿಸಿಕೊಳ್ಳಬಹುದು. ಆ ಚಕ್ರದಲ್ಲಿ ಚರಕವನ್ನು ಕಾಣುತ್ತಿದ್ದರೆ ಚರಕದ ಮಹಿಮೆ ಇನ್ನೂ ಒಂದು ತೂಕ ಹೆಚ್ಚಿಗೆ ಅಂತ ನಾನು ಭಾವಿಸುತ್ತೇನೆ.”             ಆದರೆ ಧ್ವಜಕ್ಕೆ ವಂದಿಸುವ ವಿಷಯದಲ್ಲಿ ಗಾಂಧೀಜಿ ಬಯಸಿದಂತೆಯೇ ಆಯಿತು. ಕೆಂಪುಕೋಟೆಯಲ್ಲಿ ಮೇಲೇರಿದ ತ್ರಿವರ್ಣ ಪತಾಕೆಗೆ ಧ್ವಜವಂದನೆ ಮಾಡುವ ಪ್ರಮೇಯ ಅವರಿಗೆ ಬರಲಿಲ್ಲ. ಆ ರಾತ್ರಿ ಅವರು ಕಲ್ಕತ್ತದಲ್ಲಿದ್ದರು. `ಇಡೀ ಜಗತ್ತು ಮಲಗಿ ನಿದ್ರಿಸುತ್ತಿರುವ ಈ ಹೊತ್ತು ಭಾರತದ ಜೀವಸ್ವಾತಂತ್ರ್ಯ ಎಚ್ಚೆತ್ತುಕೊಳ್ಳುತ್ತಿದೆ’ ಎಂದು ಧ್ವಜಾರೋಹಣ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ನೆಹರೂ ಭಾವಾವೇಶದಿಂದ ಹೇಳುತ್ತಾರೆ. ಆದರೆ ಅಷ್ಟೊತ್ತಿಗೆ ಜಗತ್ತು ಮಲಗಿರುವುದಿಲ್ಲ. ನಿಜಕ್ಕೂ ಆ ಹೊತ್ತಿಗೆ ಮಲಗಿ ನಿದ್ರಿಸುತ್ತಿದ್ದದ್ದು ಭಾರತ. ಸ್ವಾತಂತ್ರಕ್ಕಾಗಿ ಹೋರಾಡಿ ದಣಿದ ದೇಶ ಬಾಂಧವರು ಲಕ್ಷ ಲಕ್ಷ ಹಳ್ಳಿಗಳಲ್ಲಿ ಗಾಢ ನಿದ್ದೆಯಲ್ಲಿದ್ದಾಗ ನಾಯಕರ ಗಣ ದೆಹಲಿಯಲ್ಲಿ ಸ್ವಾತಂತ್ರ್ಯ ಆಚರಿಸಿತು. ದೇಶದ ಜನರೊಂದಿಗೆ ಗಾಂಧೀಜಿ ಕೂಡಾ ಮಲಗಿ ನಿದ್ರಿಸುತ್ತಿದ್ದರು.             ಆ ಚಾರಿತ್ರಿಕ ರಾತ್ರಿ ಗಾಂಧೀಜಿ ಮಾಮೂಲಿಗಿಂತ ಒಂದು ತಾಸು ಮುಂಚಿತವಾಗಿ ಅಂದರೆ ರಾತ್ರಿ ಸುಮಾರು ಎರಡು ಗಂಟೆಗೆ ಎದ್ದೇಳುತ್ತಾರೆ. ಅದೇನು ಕಾಕತಾಳಿಯವೋ ಸ್ವಾತಂತ್ರದ ಅದೇ ದಿನ ಗಾಂಧೀಜಿ ಪಾಲಿಗೆ ತನ್ನ ಪರಮಾಪ್ತರೊಬ್ಬರನ್ನು ಕಳೆದುಕೊಂಡ ದಿನವೂ ಆಗಿತ್ತು. ಬಹುಕಾಲ ಗಾಂಧಿಯವರ ಕಾರ್ಯದರ್ಶಿ ಮತ್ತು

ಮಹಾತ್ಮಾ ಗಾಂಧೀಜಿ ಮತ್ತು ರಾಷ್ಟ್ರಧ್ವಜ Read Post »

You cannot copy content of this page

Scroll to Top