ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ವಿಲ್ಸನ್ ಕಟೀಲ್ ವಿಲ್ಸನ್ ಕಟೀಲ್ ಕಾವ್ಯನಾಮದಿಂದ ಬರೆಯುವ ವಿಲ್ಸನ್ ರೋಶನ್ ಸಿಕ್ವೇರಾ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನವರು. ಹುಟ್ಟಿದ ದಿನಾಂಕ – 31.08.1980. ತಂದೆಯ ಹೆಸರು ಗ್ರೆಗರಿ ಸಿಕ್ವೇರಾ, ತಾಯಿ ಬೆನೆಡಿಕ್ಟ ಸಿಕ್ವೇರಾ. ಕಾರಣಾಂತರಗಳಿಂದ ಇಂಜಿನಿಯರಿಂಗ್ ವ್ಯಾಸಂಗವನ್ನು ತ್ಯಜಿಸಿ ಸಾಹಿತ್ಯದತ್ತ ಆಕರ್ಷಣೆ. ತಮಿಳು ಹಾಡುಗಳಿಂದ ಸ್ಪೂರ್ಥಿಗೊಂಡು ಕಾವ್ಯದತ್ತ ಒಲವು. ತನ್ನ ತಾಯಿಭಾಷೆ ಕೊಂಕಣಿಯಲ್ಲಿ ಕತೆ, ಕವಿತೆ, ಗೀತೆ ಹಾಗೂ ಇನ್ನಿತರ ಸಾಹಿತ್ಯ ಕೃಷಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಂಕಣಿಯಲ್ಲಿ ಇದುವರೆಗೆ ’ದೀಕ್ ಆನಿ ಪೀಕ್’’, ’ಪಾವ್ಳೆ’, ’ಎನ್‍ಕೌಂಟರ್’ ಕವನ ಸಂಕಲನಗಳು ಪ್ರಕಟವಾಗಿವೆ. ದೂರದರ್ಶನ, ಆಕಾಶವಾಣಿ. ದಸರಾ ಕವಿಗೋಶ್ಟಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕವಿಗೋಷ್ಟಿಗಳಲ್ಲಿ ಭಾಗವಹಿಸಿದ್ದಾರೆ. ಮೂರು ಬಾರಿ ಅತ್ಯುತ್ತಮ ಗೀತರಚನೆಗಾಗಿ, ಮಾಂಡ್ ಸೊಭಾಣ್ ಸಂಸ್ಥೆ ಕೊಡಮಾಡುವ ಜಾಗತಿಕ ಸಂಗೀತ ಪುರಸ್ಕಾರಕ್ಕೆ ಭಾಜನರಾಗಿದ್ಡಾರೆ. ಇವರಿಗೆ ’ಕಿಟಾಳ್ ಯುವ ಪುರಸ್ಕಾರ’ವೂ  ಪ್ರಾಪ್ತಿಯಾಗಿದೆ. “ಎನ್ ಕೌಂಟರ್” ಕವನ ಸಂಕಲನಕ್ಕೆ 2017 ರ ಪ್ರತಿಷ್ಠಿತ ವಿಮಲಾ ವಿ ಪೈ ಕಾವ್ಯ ಪುರಸ್ಕಾರ ಪ್ರಾಪ್ತಿಯಾಗಿದೆ. ಕನ್ನಡದಲ್ಲೂ ಅಪರೂಪಕ್ಕೆ ಬರೆಯುತ್ತಿದ್ದ ಇವರ ಕವಿತೆಗಳು, ಪಂಜು ಅಂತರ್ಜಾಲ ಪತ್ರಿಕೆ, ಗೌರಿ ಲಂಕೇಶ್, ಹೊಸತು, ಸುಧಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಗಿರೀಶ್ ಹಂದಲಗೆರೆ ಸಂಪಾದಕತ್ವದ ಅರಿವೇ ಅಂಬೇಡ್ಕರ್, ಕಾವ್ಯಮನೆ ಪ್ರಕಾಶನದ ಕಾವ್ಯಕದಳಿ ಸಂಕಲನಗಳಲ್ಲಿ ಇವರ ಕವಿತೆಗಳು ಸೇರಿವೆ. ಕೈದಿಗಳ ಒಳಿತಿಗಾಗಿ ಶ್ರಮಿಸುವ PRISON MINISTRY OF INDIA ಪುರವಣಿಯಲ್ಲಿ ಇವರ ಕವಿತೆ ಪ್ರಕಟಗೊಂಡಿದೆ. ಟಿ.ಎಸ್. ಗೊರವರ್ ಸಂಪಾದಕತ್ವದ ’ಸಂಗಾತ’ ಪತ್ರಿಕೆಯ ಮೊದಲ ಸಂಚಿಕೆಯಲ್ಲಿ ಇವರ ಕವಿತೆಗಳು ಪ್ರಕಟಗೊಂಡು ಕಾವ್ಯಾಸಕ್ತರ ಗಮನ ಸೆಳೆದವು. ನಂತರ ’ಸಂಗಾತ ಪತ್ರಿಕೆ’ ಪ್ರಕಾಶನದಿಂದಲೇ ಇವರ ಮೊದಲ ಸಂಕಲನ ’ನಿಷೇಧಕ್ಕೊಳಪಟ್ಟ ಒಂದು ನೋಟು’ ಪ್ರಕಟಗೊಂಡಿತು. ಈ ಸಂಕಲನಕ್ಕೆ ಆರಿಫ್ ರಾಜಾ ಇವರ ಮುನ್ನುಡಿಯಿದೆ. ಈ ಸಂಕಲನಕ್ಕೆ ’ಯುವಕವಿಗಳ ಪ್ರಥಮ ಸಂಕಲನ’ ವಿಭಾಗದ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ. ಪ್ರಸ್ತುತ “ಆರ್ಸೊ’ ಕೊಂಕಣಿ ಮಾಸಿಕ ಪತ್ರಿಕೆಯ ಸಂಪಾದಕ ಹಾಗೂ ’ಕಿಟಾಳ್’ ಸಾಹಿತ್ಯ ಜಾಲತಾಣದ ಉಪ ಸಂಪಾದಕಾರಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ, ಪತ್ನಿ ಪ್ರಿಯಾ ಹಾಗೂ ಇಬ್ಬರು ಮಕ್ಕಳೊಂದಿಗೆ ಕಟೀಲಿನಲ್ಲಿ ವಾಸ. ಸಾಹಿತ್ಯವಲ್ಲದೆ ಕೃಷಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಅವರ ಎರಡು ಕೊಂಕಣಿ ಕವಿತೆಗಳು ನಿಮ್ಮ ಓದಿಗಾಗಿ. ಕೊಂಕಣಿ, ಕನ್ನಡ ಎರಡೂ ಭಾಷೆಯಲ್ಲಿ ವಿಲ್ಸನ್ ಕಟೀಲ್ ಅವರೇ ಬರೆದಿದ್ದಾರೆ. ಸಾಂತ್ ಭುರ್ಗ್ಯಾನ್ ಎದೊಳ್ ಚ್ ಬೊಂಬ್ಯಾಕ್ ಪೊಟ್ಲುನ್ ಧರುನ್ ಏಕ್ ದೋನ್ ಉಮೆಯ್ ದೀವ್ನ್ ಜಾಲ್ಯಾತ್… ಪುಣ್ ವ್ಹಡಾಂಚಿ ವಾರ್ಜಿಕ್ ಆಜೂನ್ ಸಂಪೊಂಕ್ ನಾ! ** ಉಮ್ಕಳ್ಚಿಂ ವಸ್ತುರಾಂ ವಿಂಚ್ತೇ ಆಸಾತ್- ಆಪಾಪ್ಲ್ಯಾ ರಂಗ್ ಜೋಕ್ ಗಿರೇಸ್ತ್ ಕಾಯೆಕ್ ಜೊಕ್ತ್ಯಾ ಕುಡಿಂಕ್! ** ನವ್ಯೊ ವ್ಹಾಣೊ ಕಟೀಣ್ ತೊಪ್ತಾತ್… ದುಬ್ಳ್ಯಾ ವ್ಯಾರಾಗಾರಾನ್ ಮಾತ್ಯಾರ್ ಘೆವ್ನ್ ಗಾಂವಾನ್ ಗಾಂವ್ ಭೊಂವ್ಡಾಯಿಲ್ಲ್ಯಾ ತಾಂಕಾಂ ಥೊಡೊ ವೇಳ್ ಲಾಗ್ತಾ- ಗಿರಾಯ್ಕಾಚ್ಯಾ ಪಾಂಯಾಂಕ್ ಹೊಂದೊಂಕ್! * ಪಾತ್ಳಾಯ್ಲ್ಯಾಂತ್ ಆಯ್ದಾನಾಂ.. ಪುಣ್ ಥೊಡ್ಯಾಂಕ್ ಮಾತ್ರ್ ತಿಚ್ಯೆ ಬುತಿಯೆಚೆರ್ ಚ್ ದೊಳೊ! * ಕೊಣಾಚ್ಯಾಗೀ ಹಾತಾ-ಗಿಟಾಚೆರ್ ಆಪ್ಲೊ ಫುಡಾರ್ ಸೊಧ್ತಾತ್ ಭವಿಶ್ಯ್ ಸಾಂಗ್ಚೆ! * ಭಾಜ್ ಲ್ಲೆ ಚಣೆಂ ಗುಟ್ಲಾಯಿಲ್ಲ್ಯಾ ಕಾಗ್ದಾಂನಿ ಪರತ್ ಉಬೆಲ್ಯಾತ್ ಪರ್ನ್ಯೊ ಖಬ್ರೊ! * ಹಾತ್ ಒಡ್ಡಾಯ್ಲಾ ಭಿಕಾರ್ಯಾನ್… ಹರ್ದೆಂ ಉಸವ್ನ್ ಪಡ್ಲ್ಯಾತ್ ವಿಕುನ್ ವಚನಾತ್ ಲ್ಲಿಂ ರಿತಿಂ ಪರ್ಸಾಂ! **************** ಸಂತೆಯ ಬಿಡಿ ಚಿತ್ರಗಳು * ಮಗು ಈಗಾಗಲೇ ಗೊಂಬೆಯನ್ನು ಎದೆಗಪ್ಪಿ ಒಂದೆರಡು ಮುತ್ತುಗಳನ್ನೂ ಕೊಟ್ಟಾಗಿದೆ… ದೊಡ್ಡವರ ಚಿಲ್ಲರೆ ಚೌಕಾಸಿಯಿನ್ನೂ ಮುಗಿದಿಲ್ಲ! * ಜೋಡಿಸಿಟ್ಟ ಬಟ್ಟೆಗಳು ಹುಡುಕುತ್ತಿವೆ- ತಂತಮ್ಮ ಬಣ್ಣ, ಅಳತೆ, ಶ್ರೀಮಂತಿಕೆಗೆ ತಕ್ಕ ದೇಹಗಳನ್ನು! * ಹೊಸ ಚಪ್ಪಲಿಗಳು ವಿಪರೀತ ಚುಚ್ಚುತ್ತಿವೆ… ಬಡ ವ್ಯಾಪಾರಿ ತಲೆಮೇಲೆ ಹೊತ್ತು  ಊರೂರು ಸುತ್ತಿದ ಅವುಗಳಿಗೆ ಕೆಲಕಾಲ ಹಿಡಿಯುತ್ತೆ… ಗಿರಾಕಿಯ ಪಾದಗಳಿಗೆ ಹೊಂದಿಕೊಳ್ಳಲು! * ಹರಡಿಕೊಂಡಿವೆ ಪಾತ್ರೆಗಳು… ಕೆಲವರಿಗಂತೂ ಅವಳ ಬುತ್ತಿಯ ಮೇಲೆಯೇ ಕಣ್ಣು! * ಯಾರದೋ ಕೈರೇಖೆಗಳಲ್ಲಿ ತಮ್ಮ ಬದುಕು ಹುಡುಕುತ್ತಿದ್ದಾರೆ ಭವಿಷ್ಯ ಹೇಳುವವರು! * ಹುರಿದ ಕಡಲೆ ಕಟ್ಟಿದ ಪತ್ರದಲ್ಲಿ ಮತ್ತೆ ಬೆಚ್ಚಗಾಗಿವೆ ಹಳೆಯ ಸುದ್ದಿಗಳು! * ಕೈಚಾಚಿದ್ದಾನೆ ಭಿಕ್ಷುಕ… ಎದೆತೆರೆದು ಬಿದ್ದುಕೊಂಡಿವೆ ಮಾರಿ ಹೋಗದ ಖಾಲಿ ಪರ್ಸುಗಳು! ** ಪತ್ರ್ ಕೊಯ್ತೆಚೆ ವೋಂಟ್ ಪುಸ್‌ಲ್ಲೆಂ ಕಾಗತ್ ಭಾಯ್ರ್ ಉಡಯ್ತಚ್ ಸುಟಿ ಕೆಲ್ಲ್ಯೆ ಮಾಸ್ಳೆಚ್ಯೆ ಹಿಮ್ಸಣೆಕ್ ಸೆಜ್ರಾಮಾಜ್ರಾಂಮದೆಂ ಝುಜ್! ಪಳೆವ್ನ್ ಬೊಟಾಂ ವಾಡನಾತ್ಲ್ಯಾ ಪೊರಾಂಕ್‌ಯೀ ತಲ್ವಾರ್ ಧರ‍್ಚೆಂ ಧಯ್ರ್! ಚಿಮ್ಣೆಚಿ ಜೀಬ್ ಲಾಗಯಿಲ್ಲೆಂ ಕಾಗತ್ ರಾಂದ್ಣಿಕ್ ಪಾವಯ್ತಚ್ ಸುಕ್ಯಾ ಲಾಂಕ್ಡಾಂಕ್ ಭಗ್ಗ್ ಕರ‍್ನ್ ಧರ‍್ಚೊ ಉಜೊ! ಪಳೆವ್ನ್ ಆಂಗ್ ನಿಂವ್‌ಲ್ಲ್ಯಾ ಮ್ಹಾತಾರ‍್ಯಾಂಕ್‌ಯೀ ಧಗ್ ಘೆಂವ್ಚಿ ವೊಡ್ಣಿ! ಮ್ಹಜ್ಯಾ ಗಾಂವಾಂತ್ ಪತ್ರ್ ಕೊಣೀ ವಾಚಿನಾಂತ್ ಫಕತ್ ವಾಪಾರುನ್ ಉಡಯ್ತಾತ್! ******** ಪತ್ರಿಕೆ ಕತ್ತಿಯ ತುಟಿ ಒರೆಸಿದ ಕಾಗದ ಹೊರಕ್ಕೆಸೆದಾಗ ಕತ್ತರಿಸಿದ ಮೀನಿನ ವಾಸನೆಗೆ ನೆರೆಕರೆಯ ಬೆಕ್ಕುಗಳ ಮಧ್ಯೆ ಮಹಾ ಯುದ್ಧ! ನೋಡುತ್ತಿದ್ದಂತೆಯೇ – ಬೆರಳು ಮೊಳೆಯದ ಪೋರರಿಗೂ ತಲವಾರು ಹಿಡಿಯುವ ಧೈರ್ಯ! ಚಿಮಣಿಯ ನಾಲಗೆ ಸ್ಪರ್ಷಿಸಿದ ಕಾಗದ ಒಲೆಯ ಒಳ ಹೊಕ್ಕಾಗ ಒಣ ಕಟ್ಟಿಗೆಗೆ ಭಗ್ಗನೆ ಹತ್ತಿಕೊಳ್ಳುವ ಜ್ವಾಲೆ! ನೋಡುತ್ತಿದ್ದಂತೆಯೇ ಕಾವು ಆರಿದ ಮುದುಕರಿಗೂ ಬೆಂಕಿ ನೆಕ್ಕುವ ಹುಚ್ಚು! ನನ್ನ ಊರಿನಲ್ಲಿ ಪತ್ರಿಕೆಯನ್ನು ಯಾರೂ ಓದುವುದಿಲ್ಲ…. ಬಳಸಿ ಎಸೆಯುತ್ತಾರೆ ಅಷ್ಟೆ! ************************************************* ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಇತರೆ

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ ‘ಸಂಗಾತಿ’ಯ ಮೂರನೇ ಆಯಾಮ ಅಂಕಣಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ ಶ್ರೀ ವಿಜಯ ಪ್ರಶಸ್ತಿ ದೊರಕಿದ್ದು ಪತ್ರಿಕೆಅವರನ್ನು ಅಭಿನಂದಿಸುತ್ತದೆ ಶ್ರೀದೇವಿ ಕೆರೆಮನೆಗೆ ಶ್ರೀವಿಜಯ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ನಾಡಿನ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ‌ ಶ್ರೀ ವಿಜಯ ಪ್ರಶಸ್ತಿಗೆ ಜಿಲ್ಲೆಯ ಕವಿಯತ್ರಿ, ಕಥೆಗಾರ್ತಿ, ಅಂಕಣಗಾರ್ತಿ ಶ್ರೀದೇವಿ ಕೆರೆಮನೆ ಭಾಜನರಾಗಿದ್ದಾರೆ. ಈಗಾಗಲೇ ತಮ್ಮ ಕಥೆ ಕವನ ಅಂಕಣಗಳಿಂದ ಮನೆಮಾತಾಗಿರುವ ಶ್ರೀದೇವಿ ಕೆರೆಮನೆಯವರು ಐದು ಕವನ ಸಂಕಲನ, ಐದು ಅಂಕಣ ಬರಹ ಸಂಕಲನ, ಎರಡು ಗಜಲ್ ಸಂಕಲನ ಒಂದು ಕಥಾ ಸಂಕಲನ ಹಾಗೇಯೇ ಒಂದು ವಿಮರ್ಶಾ ಸಂಕಲನ‌ ಹೀಗೆ ಒಟ್ಟೂ ಹದಿನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇನ್ನೂ ನಾಲ್ಕು ಪುಸ್ತಕಗಳು ಅಚ್ಚಿನ ಮನೆಯಲ್ಲಿವೆ. (ಎರಡು ಕವನ ಸಂಕಲನಗಳು, ಒಂದು ಕಥಾ ಸಂಕಲನ ಒಂದು ಇಂಗ್ಲಿಷ್ ಲೇಖಕರ ವಿಮರ್ಶಾ ಕೃತಿ) ೪೫ ವರ್ಷದ ಒಳಗಿನ ಹಾಗೂ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಗಳ ಮೊತ್ತದ ಈ ಪ್ರಶಸ್ತಿಯನ್ನು ಈ ವರ್ಷ ಇಬ್ಬರಿಗೆ ನೀಡಲಾಗುತ್ತಿದ್ದು ಇನ್ನೊಬ್ಬರು ರಾಯಚೂರಿನ ಕವಿ ಚಿದಾನಂದ ಸಾಲಿಯವರಾಗಿದ್ದು ಇಬ್ಬರಿಗೂ ಪ್ರಶಸ್ತಿಯ ಮೊತ್ತವನ್ನು ತಲಾ ಅರವತ್ತು ಸಾವಿರ ರೂಪಾಯಿಯಂತೆ ನೀಡಲಾಗುವುದು ಎಂದು ಕಸಾಪ ಅಧ್ಯಕ್ಷರು, ಇಬ್ಬರು ಕಾರ್ಯದರ್ಶಿಗಳು ಹಾಗೂ ಕಸಾಪದ ಮಾಧ್ಯಮ ವಕ್ತಾರರಾಗಿರುವ ಪದ್ಮರಾಜ ದಂಡಾವತಿಯವರನ್ನು ಒಳಗೊಂಡ ಸಮಿತಿ ತೀರ್ಮಾನಿಸಿದೆ ಎಂದು ಕಸಾಪ ಅಧ್ಯಕ್ಷರಾದ ಶ್ರೀ ಮನು ಬಳಿಗಾರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ತಾವು ಬರೆಯುತ್ತಿರುವ ಅಂಕಣಗಳ ಮೂಲಕ ಜನಸಾಮಾನ್ಯರಲ್ಲಿ ಮನೆಮಾತಾಗಿದ್ದಾರೆ. ಇತ್ತೀಚೆಗೆ ಹಲವಾರು ವೆಬ್ ಪತ್ರಿಕೆಗಳಲ್ಲಿ ಪುಸ್ತಕ ವಿಮರ್ಶೆಯನ್ನು ಬರೆಯುತ್ತಿರುವ ಶ್ರೀದೇವಿ ಕೆರೆಮನೆಯವರಿಗೆ ಈಗಾಗಲೇ ನಾಡಿನ ಹತ್ತಾರು ಪ್ರಶಸ್ತಿಗಳು ಸಂದಿದ್ದು ಈ ಪ್ರತಿಷ್ಟಿತ ಪ್ರಶಸ್ತಿಯು ಇನ್ನೊಂದು ಹೆಮ್ಮೆಯ ಗರಿಯನ್ನು ಮೂಡಿಸಿದೆ. *******************************************

ಶ್ರೀದೇವಿಗೆ ಶ್ರೀ ವಿಜಯ ಪ್ರಶಸ್ತಿ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ–12  ಬಸರೀಕಟ್ಟೆ ಮತ್ತು ಬೂದಿಕಟ್ಟೆ ನಡುವಿನ ಈ ವಿಸ್ಮಯ ಆ ಇಬ್ಬರು ಆಗಲೇ ೨೭೦೦೦ ಅಡಿಗಳಷ್ಟು ಎತ್ತರ ಏರಿದ್ದರು. ಅದುವರೆಗೂ ಯಾರೂ ಏರದ ಎತ್ತರ ಅದು. ಹಿಮದ ಗಡ್ಡೆಗಳ ಇಳಿಜಾರು ಒಂದು ಕಡೆ, ದೂರ ದೂರದತ್ತ ಕಣ್ಣು ಹಾಯಿಸಿದರೆ ಕಾಣುವುದು ಬರೇ ಬಿಳಿ ಬಿಳೀ ಹಿಮ. ಅದರಡಿಯಲ್ಲಿ ಅದೆಷ್ಟು ಸಾಹಸೀ ದೇಹಗಳು ದಫನವಾಗಿವೆ ಎಂದು ಯೋಚಿಸಿ ಆತ ನಡುಗುತ್ತಾನೆ. ಬದುಕೇ ಹಾಗೆ, ಕಾಣದ ಕಾಣ್ಕೆಗೆ ಹಂಬಲಿಸುತ್ತೆ. ಎತ್ತರೆತ್ತರ ಏರಲು, ಏನೋ ಹೊಸತು..ಹೊಸ ದಿಕ್ಕು, ಹೊಸ ಗಮ್ಯದತ್ತ ಗಮನ. ಐದಡಿ ಎತ್ತರದ ಆ ಯುವಕ ಬರೇ ತನ್ನ ಹೊರೆ ಮಾತ್ರವಲ್ಲ, ತನಗೆ ಸಂಬಳ ಕೊಡುವ ಒಡೆಯನದ್ದೂ, ಪಾತ್ರೆ ಪಗಡಿ, ಆಹಾರ ಅಷ್ಟನ್ನೂ ಹೊತ್ತು ಇನ್ನೂ ಎತ್ತರಕ್ಕೆ, ಪರ್ವತದ ತುದಿಗೆ ಏರುವ ಕನಸು. ಇನ್ನೊಂದು ದಿನ ನಡೆದರೆ ಜಗತ್ತಿನ ಅತ್ಯಂತ ಎತ್ತರದ ಶಿಖರ ಹತ್ತಿದ ಖ್ಯಾತಿ ಅವರಿಗೆ. ರಾತ್ರಿಯಿಡೀ ಗೌರೀ ಶಂಕರ ಶಿಖರದ ಕನಸು. ಬಾಲ್ಯದಲ್ಲಿ ಅಮ್ಮ ಕಂಡ ಕನಸಿನ ನೆನಪು.  ಹೌದು ! ಆತನ ಹೆಸರು ತೇನ್ ಸಿಂಗ್ !  ತೇನ್ ಸಿಂಗ್ ನೋರ್ಗೆ. ವಾತಾವರಣ ವಿಪರೀತವಾದರೆ ಹತ್ತಲೂ ಕಷ್ಟ,ಇಳಿಯಲೂ ಕಷ್ಟ. ಆದರೆ ಆ ಬೆಳಗ್ಗೆ  ಆಕಾಶ ಶುಭ್ರವಾಗಿತ್ತು. ನೀಲಾಕಾಶ ಕೊಡುವ ಹುರುಪು ಜಗತ್ತಿನ ಇನ್ನಾವುದೂ ಕೊಡದು. ಶುದ್ಧವಾದ ಹಿಮಗಡ್ಡೆ ಕರಗಿಸಿ,ಚಹಾ ಮಾಡಿ ಒಡೆಯ ಎಡ್ಮಂಡ್ ಹಿಲರಿಗೆ ಬ್ರೆಡ್ ಜತೆಗೆ ಕುಡಿಸಿ, ತಾನೂ ಸೇವಿಸಿ, ಪುನಃ ಒಂದೊಂದಾಗಿ ಹೆಜ್ಜೆಯಿಡುತ್ತಾ ಸಾಗಬೇಕು. ಆಕ್ಸೀಜನ್ ನ ಕೊರತೆಯಿಂದ ಅರ್ಧ ಹೆಜ್ಜೆಗೇ ಏದುಸಿರು ಬರುತ್ತೆ. ಮಧ್ಯಾಹ್ನದ ಹೊತ್ತಿಗೆ ಒಂದು ಎತ್ತರದ ಹಿಮದ ಕೋಡುಗಲ್ಲು ಶಿಖರದ ತುದಿಗೆ ಅಡ್ಡವಾಗಿ. ತೇನ್ ಸಿಂಗ್ ಕೊಡಲಿಯಿಂದ ಅದರಲ್ಲಿ ಮೆಟ್ಟಿಲು ಕಡಿಯುತ್ತಾನೆ. ಕೊನೆಯ ಒಂದಾಳೆತ್ತರದ ಏರು ಮೆಟ್ಟಿಲು ಕಡಿಯಲಾಗದಷ್ಟು ಕಡಿದಾಗಿತ್ತು . ತೇನ್ ಸಿಂಗ್, ತನ್ನ ಭುಜವನ್ನೇ ಮೆಟ್ಟಿಲಾಗಿಸಿ ನಿಲ್ಲುತ್ತಾನೆ. ಹಿಲರಿ ಹೆಗಲಿಗೆ ಪಾದ ಇಟ್ಟು ಮೇಲೆ ಹತ್ತಿ ಕೇಕೇ ಹಾಕುತ್ತಾನೆ. ತೇನ್ ಸಿಂಗ್ ನನ್ನು ಕೈ ಹಿಡಿದು ಮೇಲೆ ಹತ್ತಲು ಸಹಾಯ ಮಾಡುತ್ತಾನೆ. ಅದುವರೆಗೆ ಯಾರೂ ಮಾಡದ ಸಾಹಸ ಅವರಿಬ್ಬರೂ ಮಾಡಿದ್ದರು! ಅದು ತುದಿಯ ತುದಿ. ಜಗತ್ತಿನ ಸಹಸ್ರಾರ ಚಕ್ರ. ನಂಬಲಾಗದ ಸಾಧನೆಯ ಶಿಖರ ಏರಿದ ಕ್ಷಣವದು. ತೇನ್ ಸಿಂಗ್ ನ ಮೊದಲ ಪ್ರಯತ್ನವೇ ಅದು?. ಅಲ್ಲ. ಅದು ಆತನ ಹನ್ನೊಂದನೇ ಪ್ರಯತ್ನ. ಯಾಕೆ ಮನುಷ್ಯ ಹೀಗೇ ಸೋತು,ಪುನಃ ಸೋತು, ಮತ್ತೆ ಸೋತು,ಛಲ ಬಿಡದೆ ಪ್ರಯತ್ನ ಮಾಡುತ್ತಾನೆ?. ಬದುಕಲ್ಲಿ ಏನಿದೆ? ಬದುಕು ಎಂದರೆ ಏನು?. ಆ ರಾಜಕುಮಾರರು ಇಬ್ಬರೂ ಹಲವು ದಿನಗಳ ಕಾಲ ಕಾದಿದರು, ಇಬ್ಬರೂ ಭರತ ಭೂಖಂಡ ಕಂಡ ಅತ್ಯಂತ ಶಕ್ತಿಶಾಲಿ, ನಿಪುಣ ಯೋಧರು. ಮಲ್ಲ ಯುದ್ಧದಿಂದ ಹಿಡಿದು, ದೃಷ್ಟಿ ಯುದ್ಧದ ವರೆಗೆ. ದಿನಗಳು ತಿಂಗಳುಗಳು ಕಳೆದವು.  ಯುದ್ಧ ಮುಗಿದಾಗ, ಬಾಹುಬಲಿ ಎಲ್ಲಾ ಯುದ್ಧದಲ್ಲೂ ಗೆದ್ದಿದ್ದ. ಅಣ್ಣ ಭರತ,ಸೋತಿದ್ದ. ಇನ್ನೇನು ಸಿಂಹಾಸನದಲ್ಲಿ ಕೂರಬೇಕು ಅನ್ನುವಾಗ,ಆತ ಕೊನೆಯದೊಂದು ಯುದ್ಧ ಮಾಡಿದ. ಆ ಯುದ್ಧ ತನ್ನೊಳಗಿನ ಯುದ್ದ. ಅದರಲ್ಲಿ ಆತ ಗೆದ್ದು, ತನ್ನ ರಾಜ ಪೋಷಾಕು,ಕಿರೀಟಗಳನ್ನು ಕಳಚಿ ರಾಜಮಹಲಿನಿಂದ ಗೋಮಟನಾಗಿ ಹೊರನಡೆದ. ಆತನನ್ನು ಗೋಮಟೇಶ್ವರ ಅಂತ ಕರೆದರು. ಆತ ಇಂದಿಗೂ ಲಕ್ಷ ಮನಸ್ಸುಗಳ ರಾಜ್ಯವನ್ನು ಆಳುತ್ತಾನೆ! ಯಾಕೆ ನಡೆದ ಹೀಗೆ?. ಬದುಕು ಎಂದರೆ ಹೀಗಾ? ರಾಮೇಶ್ವರದ ಜಲಾಲುದ್ದೀನ್ ನ ಮಗ ಅಬ್ದುಲ್ ಕಲಾಂ, ಕಠಿಣ ಪರಿಶ್ರಮ ಮಾಡಿ, ಎಂಜಿನಿಯರ್ ಆಗಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಯಾದಾಗ, ಅಮ್ಮ ಕರೆದು ಹೇಳುತ್ತಾರೆ, “ಮಗನೇ, ನಿನಗೆ ಮದುವೆ ಮಾಡೋಣವೇ?”  ಕಲಾಂ,ಒಪ್ಪದೇ,ವಿಜ್ಞಾನ ಮತ್ತು ಸಂಶೋಧನೆಗೆ ಜೀವನವನ್ನು ಅರ್ಪಿಸುತ್ತಾರೆ. ಇದು ಬದುಕಿನ ಯಾವ ಆಯಾಮ?. ಅದು ಎಪ್ರಿಲ್ ತಿಂಗಳು. ಕಾರ್ಗಿಲ್ ಶಿಖರಗಳ ತುದಿಯಲ್ಲಿ ಪಾಕಿಸ್ತಾನದ ಸೈನಿಕರು ಡೇರೆ ಹೊಡೆದು ಗನ್ ಹಿಡಿದು ನಿಂತ ಹೊತ್ತು, ಕರ್ನಾಟಕದ ವೀರ ಯೋಧ, ಮೇಜರ್ ಅಶೋಕ್, ಹುಟ್ಟೂರಿನಿಂದ ೩೦೦೦ ಕಿಲೋಮೀಟರ್ ದೂರ ತನ್ನ ಸೈನಿಕ ಟುಕಡಿಯ ಜತೆಗೆ ಅಂತಹ ಒಂದು ಶಿಖರವನ್ನು ಹತ್ತುವ ಸಾಹಸ ಮಾಡುತ್ತಾರೆ. ಸೇನೆಯಲ್ಲಿ ಒಂದು ನಿಯಮವಿದೆ. ತಂಡವನ್ನು ಮುನ್ನಡೆಸುವಾಗ, ನಾಯಕ ಮುಂಚೂಣಿಯಲ್ಲಿರಬೇಕು. ಹಾಗೆಯೇ ಮೇಜರ್ ಅಶೋಕ್ ಮುಂದೆ,ಸಿಪಾಯಿಗಳು ಹಿಂದೆ, ಶಿಖರದ ಕಲ್ಲು ಬಂಡೆಗಳನ್ನು ಏರುವಾಗ,ಪಾಕಿಸ್ತಾನದ ಸೈನಿಕರ ಕಣ್ಣು ತಪ್ಪಿಸಿ ಏರ ಬೇಕು. ಅದೂ ರಾತ್ರೆಯ ಕತ್ತಲಲ್ಲಿ. ನಾವೆಲ್ಲಾ, ಎ.ಸಿ. ರೂಂ ನಲ್ಲಿ ಬೆಚ್ಚಗೆ ನಿದ್ರಿಸುವಾಗ, ಅಶೋಕ್, ಕಲ್ಲುಗಳ ತರಚುಗಾಯದಿಂದ ಸೋರುವ ನೆತ್ತರು, ಲೆಕ್ಕಿಸದೆ ಎದೆಯೂರಿ, ಹಲ್ಲಿಯಂತೆ ಪರ್ವತದ ಎಲ್ಲೆಗೆ ಕಚ್ಚಿಹಿಡಿದ ಹಲ್ಲಿಯಂತೆ ಹತ್ತಿದರು. ಮೇಲೇರಿ, ಮುಖಕ್ಕೆ ಮುಖ ಕೊಟ್ಟ ಯುದ್ಧದಲ್ಲಿ ತನ್ನ ತಂಡದ ಹಲವು ಸೈನಿಕರನ್ನು ಕಳೆದು ಕೊಂಡರೂ ಧೈರ್ಯದಿಂದ ಕಾದಿ, ವೈರಿ ಸೈನಿಕರನ್ನು ಸದೆಬಡಿದು ಭಾರತದ ಪತಾಕೆಯನ್ನು ಹಾರಿಸುತ್ತಾರೆ.  ಬದುಕು ಹೀಗಿರಬೇಕು ಎಂಬ ವಜ್ರಕಠೋರ ಸಂಕಲ್ಪದ ಬದುಕು ಅದು. ದೇಶ ಮತ್ತು ದೇಶದ ಪ್ರಜೆಗಳಾದ ನಮ್ಮ ನಿಮ್ಮ ರಕ್ಷಣೆಗೋಸುಗ ತನ್ನ ಪ್ರಾಣ ತ್ಯಾಗ ಮಾಡುವ ಅತ್ಯಂತ ಕಠಿಣ ನಿರ್ಧಾರದ ಬದುಕು. ಹಾಗಿದ್ದರೆ ಬದುಕಿನ ವ್ಯಾಖ್ಯೆ ಏನು?. ಬೇಂದ್ರೆ ಅವರು ಬದುಕು ಮಾಯೆಯ ಮಾಟ ಅಂತ ಹೀಗೆ ಬರೀತಾರೆ. “ಬದುಕು ಮಾಯೆಯ ಮಾಟ ಮಾತು ನೊರೆ-ತೆರೆಯಾಟ ಜೀವ ಮೌನದ ತುಂಬ ಗುಂಬ ಮುನ್ನೀರು ಕರುಣೋದಯದ ಕೂಡ ಅರುಣೋದಯವು ಇರಲು ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು” ಕವಯಿತ್ರಿ ವಿಜಯಲಕ್ಷ್ಮಿ ಅವರ ಕವಿತೆ ಬದುಕಿನ ಇಂತಹ ಗಹನ ವಿಷಯದತ್ತ ತೆರೆಯುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತೆ. ***    ***   ****  ಬದುಕು ಕಲೆ ಬದುಕೇ ಒಂದು ಪಾಠ. ಬದುಕುವುದೇ ಒಂದು ಕಲೆ. ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಓದಿ ಕಲಿಯುವ ಕಲೆಯೇ…. ಬದುಕು? ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು. ಬದುಕುತ್ತಾ ಹೋದಂತೆ ಬದುಕುವುದ ಕಳಿಸುವುದು ಬದುಕು ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು  ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕು ವುದ ಕಲಿಸುವುದು ಬದುಕು . ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು. ಓದಿ ಕಲಿಯುವ ಕಲೆಯೇ..ಬದುಕು? **     ***     *** ನಿತ್ಯಸತ್ಯದ ಪಾಠವೇ ಬದುಕು ಎನ್ನುವಾಗ, ಕ್ಷಣಕ್ಷಣಗಳೂ ಅನುಭವ ಮೇಷ್ಟ್ರಾಗಿ, ಕಲಿಸುತ್ತವೆ. ಬದುಕುವುದು ಕಲೆ ಎನ್ನುವಾಗ, ಮನುಷ್ಯನ ಕ್ರಿಯೇಟಿವಿಟಿ ಮತ್ತು ರಾಚನಿಕ ಸೌಂದರ್ಯದತ್ತ ಮನಸ್ಸು ಕೇಂದ್ರಿಸುತ್ತೆ. ‘ಬದುಕುತ್ತಾ ಹೋದಂತೆ ಬದುಕ ಕಲಿಸುವುದು ಬದುಕು’ ! ಬದುಕು ಅನುಭವವೂ ಹೌದು, ಆ ಅನುಭವ ಭವಿಷ್ಯದ ದಾರಿದೀಪವೂ ಹೌದು.ವರ್ತಮಾನದಲ್ಲಿ ನಿಂತಾಗ, ಭೂತಕಾಲದ ಬದುಕು ಜ್ಞಾನ, ಭವಿಷ್ಯಕಾಲಕ್ಕೆ ಅದೇ ದಿಗ್ದರ್ಶಕ. ವಿಜಯಲಕ್ಷ್ಮಿ ಅವರ ಈ ಕವಿತೆ ಒಂದು ತತ್ವ ಪದದಂತಹ ಕವಿತೆ. ತತ್ವಶಾಸ್ತ್ರದ ಬಿಂದುಗಳನ್ನು ಒಂದೊಂದಾಗಿ ಅಳುವ ಮಗುವಿನ ನಾಲಿಗೆಗೆ ಹಚ್ಚುವ ಜೇನಿನಂತೆ ಹೇಳ್ತಾ ಹೋಗುತ್ತಾರೆ.  ಓದಿ ಕಲಿಯುವ ಕಲೆಯೇ ಬದುಕು? ಎಂಬುದು ಪ್ರಶ್ನೆ ಅಂತ ಅನಿಸುವುದಿಲ್ಲ. ಅದು ಕವಯಿತ್ರಿಯ ಧೃಡವಾದ ನುಡಿ. “ಆ ಬಸರೀಕಟ್ಟೆಯಲ್ಲಿ ಹುಟ್ಟಿ, ಬೂದಿಕಟ್ಟೆಯಲ್ಲಿ ಮುಗಿಯುವ ಮೊದಲು, ನಾವು ಓಡಾಡಿಕೊಂಡಿರುವ ಕಟ್ಟೆ ಬಾಳಿನ ಕಟ್ಟೆಯಲ್ಲವೇ? “ “ಬಾಳ್ವೆ ಇರುವುದು ಕಲಿಯುವುದಕ್ಕೆ, ಕಲಿತು ತಿದ್ದಿಕೊಳ್ಳುವುದಕ್ಕೆ, ತಿದ್ದಿ ತೃಪ್ತಿ ಪಡುವುದಕ್ಕೆ. ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿನಿಂದ ಬೆಳೆಯುವುದಕ್ಕಾಗಿ.” ( ಶಿವರಾಮ ಕಾರಂತ) ಹೀಗೆ, ಬದುಕಿನ ಬಗ್ಗೆ ಶಿವರಾಮ ಕಾರಂತರು ಹೇಳುವ ಮಾತೂ ಈ ಕವಿತೆಯ ಆಶಯಕ್ಕೆ ಪೂರಕ. “ನಡೆದರೆ ಓಡುವುದ… ಓಡಿದರೆ ಜಿಗಿಯುವುದ… ಜಿಗಿದರೆ ಹಾರುವುದ… ಕಲಿಸುವುದು ಬದುಕು ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು “ ನಡೆ, ಓಡು, ಜಿಗಿ, ಹಾರು, ಇವುಗಳೆಲ್ಲ ಕ್ರೊನೊಲಾಜಿಕಲ್ ಕ್ರಿಯೆಗಳು. ಒಂದರ ಕಲಿಕೆ ನಂತರದ್ದಕ್ಕೆ ಆವಶ್ಯಕ. ಮೊದಲ ಪ್ಯಾರಾದ ಬದುಕು ಕಲಿಸುವ ಬದುಕು ಎಂಬ ಕಲಿಕೆಯ ನಿರಂತರತೆಯನ್ನು ಇಲ್ಲಿ ಉದಾಹರಣೆ ಕೊಟ್ಟು ಪಾಠ ಮಾಡಿದ್ದಾರೆ, ಕವಯಿತ್ರಿ ಟೀಚರ್.  ಗೋಪಾಲಕೃಷ್ಣ ಅಡಿಗರು ತಮ್ಮ ‘ಯಾವ ಮೋಹನ ಮುರಳಿ ಕರೆಯಿತೋ’ ಕವಿತೆಯ ಪ್ರಸಿದ್ಧ ಸಾಲುಗಳಿವು ” ವಿವಶವಾಯಿತು ಪ್ರಾಣ; ಹಾ ಪರವಶವು ನಿನ್ನೀ ಚೇತನ; ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?” ಮನುಷ್ಯ ಪ್ರಜ್ಞೆಗೆ a exploration ಅನ್ನುವುದು ಮೂಲಸ್ವಭಾವ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?’  ಅನ್ನುವಾಗ ಬದುಕಿನ ದಿಶೆ ನಿರ್ಧರಿಸುವ ಚಾಲಕಶಕ್ತಿಯನ್ನು ಅವರು ದರ್ಶಿಸುತ್ತಾರೆ. ಪುನಃ ಕವಿತೆಗೆ ಬರೋಣ. ” ಜಡತ್ವಕ್ಕೆ ಕ್ರಿಯಾಶೀಲತೆ…. ಕ್ರಿಯಾಶೀಲತೆಗೆ ದಿಶೆ….. ದಿಶೆಗೆ ಗುರಿಯತ್ತ… ಸಾಗಿಸುವುದು ಬದುಕು”. ದಿಶೆ ಮತ್ತು ಗುರಿಯನ್ನೂ ದಾರಿಯಲ್ಲಿ ತಂದಿರಿಸುವಾಗ, ಅನುಭವದ ಜತೆಗೇ ವ್ಯವಸ್ಥಿತ ಚಿಂತನೆ ಮತ್ತು ಪ್ಲಾನಿಂಗ್, ಭವಿಷ್ಯದತ್ತ ಮನಸ್ಸಿನ ಪ್ರೊಜೆಕ್ಷನ್ ಗಳ ಜತೆಯಾಟ ಕಾಣುತ್ತೇವೆ. ಮನುಷ್ಯನ ಯುನಿಕ್ ಸಾಮರ್ಥ್ಯ ಇದು. ಬದುಕು ಕಲಿಸುವ ಬದುಕಿನಲ್ಲಿ, ಸಮಯಪ್ರಜ್ಞೆಯಿಂದ ಬದುಕಿನ ಭವಿಷ್ಯದ ಪ್ರತೀ ಹೆಜ್ಜೆಯನ್ನೂ, ಭೂತಕಾಲದ ಹೆಜ್ಜೆಗಳು ಅನಾವರಣಗೊಳಿಸಿದ ಅರಿವಿನ ಮಾರ್ಗದರ್ಶನದಲ್ಲಿ ಇಡಬೇಕೆಂಬ ಈ ಸಾಲುಗಳನ್ನು ಗಮನಿಸಿ ” ತೊಡರುಗಳಲ್ಲಿ ಚೇತರಿಕೆ.. ಏರುಪೇರುಗಳಲ್ಲಿ ಎಚ್ಚರಿಕೆ.. ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು “ ಕ್ಷಣ ಕ್ಷಣವೂ ಅರಿವನ್ನು ಎಚ್ಚರದಲ್ಲಿ ಇರಿಸಬೇಕು ( being aware every moment) ಅಂತಲೂ ಭಾವವಿದೆ. ” ದೇಹಕ್ಕೆ ಕರ್ಮದ ಬೆಲೆ.. ಮೋಹಕ್ಕೆ ಭಕ್ತಿಯ ಅಲೆ.. ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು” ಕರ್ಮ ಯೋಗದ ಪ್ರಕಾರ, ನಿಷ್ಕಾಮ ಕರ್ಮವೂ ಮೋಕ್ಷ ಸಾಧನ ಅನ್ನುತ್ತಾನೆ ಕೃಷ್ಣ. ಸಾಮಾನ್ಯವಾಗಿ ನೋಡಿದರೆ, ದೇಹ,ಕೆಲಸ ಮಾಡುತ್ತಾ ಕಲಿಯುತ್ತೆ. ಜಡತ್ವದಿಂದ ದೇಹ ಹೊರಬರಲು ಸದಾ ದೇಹವನ್ನು ಕ್ರಿಯಾಶೀಲ ವಾಗಿರಿಸುವುದು ಅಗತ್ಯ ಅನ್ನುವ ಧ್ವನಿ ಕವಿತೆಯದ್ದು. ಮೋಹಕ್ಕೆ ಭಕ್ತಿಯ ಅಲೆ ಅನ್ನುತ್ತಾ ಕವಯಿತ್ರಿ, .  ಮೋಹ ಒಂದು ದ್ರವದ ಹಾಗೆ. ಸ್ವತಂತ್ರವಾಗಿ ಬಿಟ್ಟರೆ ದಿಕ್ಕು ದೆಸೆಯಿಲ್ಲದೆ ಹರಿಯುತ್ತೆ. ಅನಿಯಂತ್ರಿತವಾಗಿ ಹರಿಯುತ್ತೆ. ಮೋಹವನ್ನು ಭಕ್ತಿಯಾಗಿ ಚಾನಲೈಸ್ ಮಾಡಿದರೆ ಅದು ಏಕಮುಖಿಯಾಗಿ ಪಾಠ ಕಲಿಸುತ್ತೆ ಅನ್ಸುತ್ತೆ. “ಮೌನದಲಿ ಅಡಗಿದ ಪ್ರೀತಿಯ ಸದ್ದು ‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು “ ಪ್ರೀತಿ, ಬದುಕಿನ ಪುಟಗಳಿಗೆ ಬಣ್ಣ ತುಂಬಿದರೆ,  ಜಿದ್ದು, ಸೋಲಿನಿಂದ ಪುನಃ ಪ್ರಯತ್ನದತ್ತ ಗುರುವಾಗುತ್ತೆ. ಹಿತ್ತಲ ಗಿಡದಲ್ಲೂ ಮದ್ದು ಹುಡುಕುವ ಸಂಶೋಧನಾ ಮನೋಭಾವ ಬದುಕಿನ ಬಹುಮುಖ್ಯ ಮೇಷ್ಟ್ರು. ತತ್ವ ಶಾಸ್ತ್ರ ಅಧ್ಯಾತ್ಮ ದಲ್ಲಿ ಕೊನೆಯಾಗುವ ಮುಂದಿನ ಸಾಲುಗಳನ್ನು ನೋಡಿ ” ಜನ-ಜನದಲಿ ಜನಾರ್ಧನನ, ಕಣ-ಕಣದಲಿ ಮುಕ್ಕಣ್ಣನ, ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು” ದೇಹ,ಬದುಕು ನಶ್ವರ, ಈಶ್ವರ ಜ್ಞಾನವೇ

Read Post »

You cannot copy content of this page

Scroll to Top