ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಫಾಲ್ಗುಣ ಗೌಡ ಅಚವೆ

ಫಾಲ್ಗುಣ ಗೌಡ ಅಚವೆ ಕಾವ್ಯಗುಚ್ಛ ಅವ್ಯಕ್ತ ಎದುರಿಗಿದ್ದ ಚಿತ್ರವೊಂದುನೋಡ ನೋಡುತ್ತಿದ್ದಂತೆಪೂರ್ಣಗೊಂಡಿದೆ ಹರಿವ ನೀರಿನಂತಇನ್ನೇನನ್ನೋ ಕೆರಳಿಸುವಕೌತುಕದ ರೂಪಮೂಡಿದಂತೆ ಮೂಡಿ ಮರೆಯಾದಂತೆಆಡಿದಂತೆ ಆಡಿ ಓಡಿ ಹೋದಂತೆಮೈ ಕುಲುಕಿ ಮನಸೆಳೆವ ಹೆಣ್ಣಿನಂತೆಕತ್ತಲಾದರೂ ಅರಳಿಯೇ ಇರುವಅಬ್ಬಲಿ ಹೂವಂತೆಅದರ ಶೋಕಿ ಆಕರ್ಷಣೆಒಳ ಮಿನುಗು ಅಚ್ಚರಿಯೆಂದರೆಅದರ ಹಿಂದೊಂದುಅದರದೇ ರೂಪಸದ್ದಿಲ್ಲದೇ ಅಚ್ಚಾದಂತೆಮಾಡಿದೆಪರಕಾಯ ಪ್ರವೇಶ! ದಂಡೆಯಲ್ಲಿ ಎಲ್ಲ ನೆನಪುಗಳ ಮೂಟೆ ಕಟ್ಟಿಬಾವಿಗೆಸೆದಂತೆಬಾಕಿ ಇರುವ ಲೆಖ್ಖವನ್ನೂಚುಕ್ತಾ ಮಾಡದೇಅಲ್ಲೆಲ್ಲೋ ಮೌನ ದೋಣಿಯಲ್ಲಿಪಯಣ ಹೊರಟೆಒಸರುವುದು ನಿಂತ ನಲ್ಮೆಯೊಸಗೆಯ ಮನಸುನೀರವ ನಿರ್ವಾತ ನಿರ್ವಾಣದೆಡೆಗೆಕೊಂಡೊಯ್ದಿದೆ ದಂಡೆಯಲಿ ಮುಸುಕುವಉಸುಕಿನಲೆಯಲಿ ಕುಳಿತುಕಣ್ಣು ಮುಟ್ಟುವವರೆಗೂ ನೋಟಬರವ ಕಾಯುತ್ತಿದೆನೀ ಸಿಕ್ಕ ಸಂಜೆಯ ರಂಗು ನೋಡುತ್ತ ಅಲ್ಲಿ ನಿನ್ನ ಹೆಜ್ಜೆಗಳು ಅಚ್ಚಾಗಿವೆಯೆಂದುನಾ ಹೆಜ್ಜೆಗಳನಿಡುತ್ತಿರುವೆ ಪ್ರತಿದಿನಅದೇ ಹಳೆಯ ಪ್ರೀತಿ ಗಳಿಗೆಗಳ ಜೊತೆಗೆ ನಡೆವ ಹೆಜ್ಜೆಗಳ ಬೆರಳುಗಳಿಗೆಒಂದು ದೃಷ್ಟಿ ದಿಕ್ಕಿರುತ್ತದಂತೆ?ಮಂದವಾಗಿದೆ ದೃಷ್ಟಿ ಮುಂದೇನು ಕಾಣದೇ?ದಿಕ್ಕೆಟ್ಟ ಒಲವಿನೊಡಲುಕವಲೊಡೆದ ದಾರಿಗಳಲ್ಲಿಮುಸುಗುತ್ತಿದೆ ಪ್ರತಿ ಸಂಜೆ ನನ್ನ ಎದೆ ದಂಡೆಯಲ್ಲಿನೀ ನಡೆದ ಹೆಜ್ಜಗಳ ಹುಡುಕುತ್ತಚಿನ್ನದ ಗೆರೆಗಳ ಅಂಚಿನಲ್ಲಿದೂಡುತ್ತಿದ್ದೇನೆ ದಿನಗಳಬಯಕೆಗಳ ಬದಿಗೊತ್ತಿಉಸಿರು ಬಿಗಿ ಹಿಡಿದು! ನಡೆದಾಡದ ಮರ ಮಾಂಸಲದ ಮೈಯಲ್ಲಿಬಯಕೆ ತೀರದ ತೊಗಲುಹರಿವ ರಕುತದ ಮೇಲ್ತಳಕಿನ ತುಂಬ ಅಸಹ್ಯ ಕೊಳಕು ದೃಷ್ಟಿ ನೇರಾ ನೇರತಾನು ತನ್ನದು ಪಟ್ಟಭದ್ರಕನಸುಗಳ ಗೊಂದಲಪುರ ನಡೆವ ಅಡಿಗಡಿಗೂ ಸ್ವಾರ್ಥದಡಿಗಲ್ಲಿಡುವಮನುಜನಲಿ ಈಗ ಮನಸಿಲ್ಲ ಸುಖದ ನರಳಿಕೆಯ ನಲುಗುವುಸಿರಲ್ಲಿತಿಲಮಾತ್ರವೂ ಧ್ಯಾನದರಿವಿಲ್ಲ!ನೀನು ನಡೆದಾಡೋ ಮರವಲ್ಲ!! ಮರವೋ ನಿಸ್ವಾರ್ಥದಾಗಸಹಸಿರು ಹೂ ಹೀಚು ಕಾಯಿಹಣ್ಣಲ್ಲೂ ನರಳಲ್ಲೂವರ ಕೊಡುವ ಧರ್ಮತಂಪೆರೆವ ಕರ್ಮಎಲ್ಲೋ ಬಿದ್ದ ಮಳೆಯ ಮಣ್ಣ ವಾಸನೆತಂಬೆಲರ ಹಿತ ಸ್ಪರ್ಶಕೆಅಲೆವ ಎಲೆ ಎಲೆಗಳಲಿಸಂತೃಪ್ತ ಬಿಂಬ ಬಯಲು ಬೆಟ್ಟಗಳಲ್ಲಿಜೀವಂತಿಕೆ ಹಿಡಿದಿಟ್ಟುಸದಾ ಉಸಿರೂಡುವ ಮರವೇನೀನು ನಡೆದಾಡದ ಮನುಷ್ಯ!! *****************************

ಫಾಲ್ಗುಣ ಗೌಡ ಅಚವೆ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯೆಂದರೆ.. ವಿಶಾಲಾ ಆರಾಧ್ಯ ಈ ಪ್ರೀತಿಯೆಂದರೆ ಹೀಗೇನೇಒಮ್ಮೆ ಮೂಡಿತೆಂದರೆ ಮನದಿಸರ್ರನೆ ಧಮನಿಯಲಿ ಹರಿದಾಡಿಮನಸ ಕದವ ತೆರೆದುಕನಸ ತೂಗು ಬಲೆಯಲಿಜಮ್ಮನೆ ಜೀಕುವಜೋಕಾಲಿಯಾಗುತ್ತದೆ..!! ಈ ಪ್ರೀತಿಯೆಂದರೆ ಹೀಗೇನೇಹರಿವ ಹೊನಲಂತೆ ಕಲ್ಲೇನುಮುಳ್ಳೇನು ಹಳ್ಳಕೊಳ್ಳವ ದಾಟಿಪರಿಧಿ ಪಹರೆಯ ಕೊತ್ತಲ ದಾಟಿಸೇರಿ ಕುಣಿಯುತ್ತದೆ ಮಾನಸಸರೋವರದ ಅಲೆಗಳ ಮೀಟಿ..!! ಪ್ರೀತಿ ಎಂದರೆ ಹೀಗೇನೇಕಂಗಳ ಬೆಸುಗೆಗೆ ಕಾವಾದ ಹೃದಯದೆಕಾಪಿಟ್ಟು ಹೆಪ್ಪಾದ ಮುಗಿಲಿನಂತೆಕಾದಲಿನ ತುಡಿತಕೆ ಒಮ್ಮೆ ಸ್ಪಂದನಿಸಿಕೂಡಿತುಂಬಿದ ಮುಗಿಲು ಸುರಿವ ವರುಣಧಾರೆಯ ಮುತ್ತ ಹನಿಗಳಂತೆ..!! *****************

ಕಾವ್ಯಯಾನ Read Post »

ಕಾವ್ಯಯಾನ

ವಿಭಾ ಪುರೋಹಿತ ಕಾವ್ಯಗುಚ್ಛ

ವಿಭಾ ಪುರೋಹಿತ ಕಾವ್ಯಗುಚ್ಛ ವೆಂಟಿಲೇಟರ್ ಮತ್ತು ರಕ್ಷೆ ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿಫ್ಯಾಷನ್ ಗಿಫ್ಟುಗಳ ಮೋಹದನೂಲುಆತ್ಮೀಯತೆ ಗೌಣ ಪ್ರದರ್ಶನಕ್ಕೆಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ ತಾಯಿ ಕರುಳ ಬಣ್ಣ ಅಂಟಿದೆಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ ಇತಿಹಾಸ ಗಡಿರೇಖೆಯೆಳೆದಾಗಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲತನ್ನವರೆಂದು ತೆಕ್ಕೆಬಡಿದುಕೊಂಡಳುಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ? ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳುಸುಮ್ಮನಿರದ ಶಕುನಿಗಳ ಕ್ಯಾತೆಗೆಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರುಉಸಿರಾಡಲು ಬಿಡುತ್ತಿಲ್ಲ ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ ‘ನಾವು ಭಾರತೀಯರು’ ಎಂಬ ವೆಂಟಿಲೇಟರ್ಯಾವ ಆಸ್ಪತ್ರೆಯ ಯಂತ್ರ ತಂತ್ರಗಳುಯಾವ ಹಬ್ಬದ ಮಂತ್ರ ಸ್ತೋತ್ರಗಳುಈ ಒಕ್ಕೊರಲಿನ ಭಾರತೀಯತೆಯ ಹೆದ್ದೊರೆ ಹರಿಸಲಿವೆ ? ರಾಷ್ಟ್ರ ನಮನ ಭಾರವಾಗಿದೆಯಿಂದು ಗಾಯವಾಗಿದೆ ಕವಿತೆರಕ್ತಕಾರುವದೊಂದೇ ಬಾಕಿ ಲೇಖನಿಯ ಬಾಯಿಂದಮೂರು ಯುದ್ಧಗಳು ಕೊರೊನಾ ರಣಕೇಕೆಗಡಿನೆಲದ ರಣಹಲಿಗೆ ರಾಜಕಾರಣದಕರ್ಮಕಾಂಡ ನಡುವೆ ನರಳುವ ನರರ ಪ್ರಲಾಪ !ಯಾವ ಭೀತಿ ರೀತಿ ನೀತಿಗೂ ಬಗ್ಗುತ್ತಿಲ್ಲಕಾಡುಪಾಪದ ಕಿಂಕಿಣಿಗಡಿಯಲ್ಲಿ ಸಂಚು ನಿತ್ಯ ಗುಂಡಿನ ಸದ್ದುವೀರಗುಂಡಿಗೆಗಳ ಆಹುತಿ ! ವಿಕೋಪದಲ್ಲೂ ವಿಕೃತವ ಮೆರೆವರಾಜಕೀಯ ತೊಗಲು ಗೊಂಬೆಯಾಟಸಾಮಾನ್ಯರ ಮನೋಭೂಮಿಸೋತು ಅರೆ‌ಸತ್ತು ಕಾದಿದೆ ಅಮೃತಘಳಿಗೆಗಿಂದು……. ಚೀನಿಯಾತ್ರಿಕ ಹೂಯಾನ್ ತ್ಸಾಂಗ್ ಅಲ್ಲ ವಕ್ಕರಿಸಿದವ ಅಣುದಾಳಿಕಾರ ಹೊಡೆದೊಡಿಸುವಸಿಡಿಮದ್ದುಗಳು ಸಿದ್ಧವಾಗುತಿವೆಅಶ್ವಿನಿದೇವತೆಗಳ ಸದಯೆಯಲಿ ********************************

ವಿಭಾ ಪುರೋಹಿತ ಕಾವ್ಯಗುಚ್ಛ Read Post »

ಅನುವಾದ

ಅನುವಾದ ಸಂಗಾತಿ

ಹೆಚ್ಚೆಂದರೇನು ಮಾಡಿಯೇನು? ಕನ್ನಡ ಮೂಲ:ಶೋಭಾ ನಾಯ್ಕ‌ .ಹಿರೇಕೈ ಕಂಡ್ರಾಜಿ.‌ ಇಂಗ್ಲೀಷಿಗೆ:ಸಮತಾ ಆರ್. ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದ‌ವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ ಹಾಲನುಂಡ ನಿನಗೆತಾಯ ಹಾಲ ರುಚಿ ನೋಡುಹುಳಿಯಾಗಿದೆಯೇನೋ ..ಎನ್ನುತ್ತಲೇತೇಗಿಸಲು ಬೆನ್ನ ನೀವಿಯೇನು ದೃಷ್ಟಿ ತೆಗೆದು ನಟಿಗೆ ಮುರಿದುಎದೆಗೊತ್ತಿಕೊಂಡು,ತೆಹಣೆಗೊಂದು ಮುತ್ತಿಕ್ಕಿಥೇಟ್ ನನ್ನ ಮಗನಂತೆ ಎನ್ನುತ್ತಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….ಮತ್ತೊಮ್ಮೆ ಮುಗುದೊಮ್ಮೆ ನಿನ್ನತಿರುತಿರುಗಿ ನೋಡಿಯೇನು ಈಗ ಹೇಳುನನ್ನ ಮುಟ್ಟು ನಿನಗೆ ಮೈಲಿಗೆಯೇನು? What else can I do… I may ,Just like themDipping in cold waterCompleting forty eightDays of abstinence,Crossing those fortressesClimbing up and down the hillocksEscaping all the surveillanceCome trekking to you..But what else can I do there… “You are still a child oh Aiyappa”Listening to this hymn over and overagain and again,later seeingAn old pic of yoursSee,there is no difference leftbetween you and my son. I may ,Ask you to rest in my lapAs you are standing still, since ages,Then I may tell you the stories ofMy menstruation painAnd internal conflicts. I may ,Breast feed the oneWho has tasted the tiger’s milkDoubting, it has turned sourI will massage your backAnd make you burp. I may,After cracking my knucklesTo rid you off all the ill omen,Hugging and kissing you on forehead, Descend the eighteen steps,But will still turn and turnAnd keep on looking at you.. Now tell me,Does my menstruation defile you? *********************************************************

ಅನುವಾದ ಸಂಗಾತಿ Read Post »

ಇತರೆ

ವರ್ಧಮಾನ ಸಾಹಿತ್ಯ ಪ್ರಶಸ್ತಿ

ವರ್ಧಮಾನ ಸಾಹಿತ್ಯ ಪ್ರಶಸ್ತಿ ಡಾಕ್ಟರ್ ಬಾಳಾ ಸಾಹೇಬ ಲೋಕಾಪುರ ಮತ್ತು ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಕಳೆದ ಮೂವತ್ತೊಂಬತ್ತು ವರ್ಷಗಳಿಂದ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಾ ಬಂದಿರುವ ಮೂಡಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ೨೦೧೯ರ ಸಾಲಿನ ಪ್ರಶಸ್ತಿಗಳನ್ನು ನಿರ್ಣಯಿಸಿದ್ದು ಅಥಣಿಯ ಡಾ ಬಾಳಾಸಾಹೇಬ ಲೋಕಾಪುರ ಅವರಿಗೆ ವರ್ಧಮಾನ ಸಾಹಿತ್ಯ ಪ್ರಶಸ್ತಿ ಮತ್ತು ಉಜಿರೆಯ ಡಾ ರಾಜಶೇಖರ ಹಳೆಮನೆ ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಿದೆ . ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ರೂ .ಇಪ್ಪತ್ತೈದು ಸಾವಿರ ಮತ್ತು ವರ್ಧಮಾನ ಉದಯೋನ್ಮುಖ ಪ್ರಶಸ್ತಿಗೆ ರೂ. ಹದಿನೈದು ಸಾವಿರಗಳ ಗೌರವ ಸಂಭಾವನೆ ಇದ್ದು ತಾಮ್ರ ಪತ್ರದ ಜೊತೆ ಸನ್ಮಾನವನ್ನು ಇವು ಒಳಗೊಂಡಿವೆಈಚೆಗೆ ಮೂಡಬಿದ್ರೆಯಲ್ಲಿ ಪೀಠದ ಕಾರ್ಯಾಧ್ಯಕ್ಷರಾದ ಎಸ್.ಡಿ. ಸಂಪತ್ ಸಾಮ್ರಾಜ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಂತದಿಂದ ಬಂದ ಶಿಫಾರಸುಗಳನ್ನು ಆಧರಿಸಿ ಡಾಕ್ಟರ್ ಎಸ್ ಪಿ ಪದ್ಮಪ್ರಸಾದ್ ಡಾಕ್ಟರ್ ಬಿ. ಜನಾರ್ದನ ಭಟ್ ಮತ್ತು ವಿಭಾವರಿ ಭಟ್ ಅವರು ನೀಡಿದ ತೀರ್ಪಿನ ಆಧಾರದ ಮೇರೆಗೆ ಈ ಇಬ್ಬರ ಜೀವಮಾನದ ಸಾಧನೆಯ ಆಧಾರದಲ್ಲಿ ಈ ಪ್ರಶಸ್ತಿಗಳನ್ನು ನಿರ್ಣಯಿಸಲಾಗಿದೆ ಎಂದು ಪೀಠದ ಪ್ರಧಾನ ನಿರ್ದೇಶಕ ಡಾ ನಾ ಮೊಗಸಾಲೆ ತಿಳಿಸಿದ್ದಾರೆ. ಪರಿಚಯಬಾಳಾಸಾಹೇಬ ಲೋಕಾಪುರ ಬೆಳಗಾವಿ ಜಿಲ್ಲೆ ಅಥಣಿಯ ಶಿರಹಟ್ಟಿಯವರಾದ ಬಾಳಾ ಸಾಹೇಬರು ಭೂಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು ಮತ್ತು ಹಂಪಿ ವಿವಿಯಿಂದ ಪಿಎಚ್ ಡಿ ಪಡೆದವರು. ಬಾಗಲಕೋಟೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರು. ಕನ್ನಡದ ಮಹತ್ವದ ಕತೆಗಾರ ಮತ್ತು ಕಾದಂಬರಿಕಾರರು ಮತ್ತು ವಿಮರ್ಶಕರು ಎಂದು ಮಾನ್ಯರು. ಅವರಿಗೆ ಈಗಾಗಲೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ ಗಳಗನಾಥ ಕಾದಂಬರಿ ಪ್ರಶಸ್ತಿ ಮತ್ತು ಮಾಸ್ತಿ ಕಾದಂಬರಿ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ . ಡಾ ರಾಜಶೇಖರ ಹಳೆಮನೆ ಡಾ ರಾಜಶೇಖರ ಹಳೆಮನೆ ಅವರು ಸೂಕ್ಷ್ಮ ಸಂವೇದನೆಯ ಕಥೆಗಾರ. ಅಪರೂಪದ ಒಳನೋಟಗಳುಳ್ಳ ವಿಮರ್ಶಕರೆಂದು ಮಾನ್ಯರು ಅವರು ಈ ತನಕ ಪ್ರಕಟಿಸಿದ ಮೂರು ಕೃತಿಗಳಿಂದ ಭರವಸೆಯ ಲೇಖಕರೆಂದು ಗುರುತಿಸಲ್ಪಟ್ಟಿದ್ದಾರೆ. ವಿಜಯ ಕರ್ನಾಟಕ ಅಕ್ಷಯ ಮತ್ತು ಕರ್ಮವೀರ ಕಥಾ ಸ್ಪರ್ಧೆಗಳಲ್ಲಿ ಅವರು ಬಹುಮಾನಿತರಾಗಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ ಕೇಂದ್ರ ಸಾಹಿತ್ಯ ಅಕಾಡೆಮಿಯು ಸಂಯೋಜಿಸಿದ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

ವರ್ಧಮಾನ ಸಾಹಿತ್ಯ ಪ್ರಶಸ್ತಿ Read Post »

ಕಾವ್ಯಯಾನ

ಮಾಲತಿ ಶಶಿಧರ್ ಕಾವ್ಯಗುಚ್ಛ

ಮಾಲತಿ ಶಶಿಧರ್ ಕಾವ್ಯಗುಚ್ಛ ಥೇಟ್ ನೀನು ಥೇಟ್ನನ್ನ ಕವಿತೆಯಂತೆಗೆಳೆಯ.ಒಮ್ಮೊಮ್ಮೆನಾನೆ ಬರೆದಿದ್ದರೂನನಗೇ ಅರ್ಥವಾಗದಹಾಗೆ.. ನೀನು ಥೇಟ್ನನ್ನ ನಗುವಿನಂತೆಗೆಳೆಯಕಿವಿಗಳೊರೆಗೂತುಟಿಯಗಲಿಸಿದರುನಕ್ಕಂತೆ ಕಾಣದಹಾಗೆ.. ನೀನು ಥೇಟ್ನನ್ನ ಮುಂಗುರುಳಂತೆಗೆಳೆಯಕಂಗಳಿಗೆ ಬಿದ್ದಾಗಲೆಲ್ಲಾಕಣ್ಣೀರು ಬರಿಸುವಹಾಗೆ.. ನೀನು ಥೇಟ್ನನ್ನ ಮೂಗು ನತ್ತಿನಂತೆಗೆಳೆಯಮುಂದೆಯೇಎಷ್ಟೇ ಅತ್ತರುಕೈಚಾಚಿ ಕಣ್ಣೀರುಮಾತ್ರ ಒರೆಸದಹಾಗೆ.. ಅಳಲು ಮುಗಿಲ ಹಿಂದೆ ಅವಿತು ಕುಳಿತಿರುವ ಬೆಳಕೇಸೀಳಿಕೊಂಡು ಬಂದು ನನ್ನನ್ನಾವರಿಸಿಬಿಡು.. ಮೋಡದಲ್ಲಿ ಮರೆಯಾಗಿರುವ ಹನಿಯೇಹೊಡೆದು ಜೇನ ಮಳೆ ಸುರಿಸಿಬಿಡು.. ಆಗಸವನೇ ಬಿಗಿದಪ್ಪಿಕೊಂಡಿರುವ ಚುಕ್ಕಿಯೇಕೈಬಿಟ್ಟು ಅಕ್ಷತೆಯಾಗಿ ಮೇಲೆ ಉದುರಿಬಿಡು… ಅಡವಿಯಲಿ ಅಡಗಿರುವ ಕಾಡ್ಗಿಚ್ಛೇಬಂದು ಚಿಂತೆಗಳ ಸುಟ್ಟುಬಿಡು… ನೀರಿನಲ್ಲಿ ಲೀನವಾಗಿರುವ ಸುನಾಮಿಯೇಬಂದು ನನ್ನಳಲ ನುಂಗಿಬಿಡು.. ಭುವಿಯ ಗರ್ಭದಲ್ಲಿರುವ ಜ್ವಾಲಾಮುಖಿಯೇಉಕ್ಕಿ ನೋವನ್ನೆಲ್ಲಾ ಕರಗಿಸಿಬಿಡು ಗಾಳಿಯಲಿ ನುಸುಳಿರುವ ತುಫಾನೇರಭಸದಲೇ ಕಣ್ಣೀರ ತೂರಿಬಿಡು…. *************** ನೋಡು ನಾ ಬರೆವ ಕವಿತೆಗಳಪಂಕ್ತಿಯ ಹೆಣಿಕೆಯನೋಡದೆ ಪದಗಳಲ್ಲಿಪರವಶವಾಗಿರುವತುಡಿತ ನೋಡು… ನಾ ಬಿಡಿಸುವ ಚಿತ್ರದಬಣ್ಣಗಳ ನೋಡದೆತಿರುವಿನಲ್ಲಿ ಮಗ್ನವಾಗಿರುವಸ್ಪಂದನವ ನೋಡು… ನಾ ಹಾಡುವ ಹಾಡಿನಹಂದರವ ನೋಡದೆಭಾವಾರ್ಥದಲಿ ಬೆರೆತಿರುವಬಂಧವ ನೋಡು.. ನಾ ಮಾಡುವ ನೃತ್ಯದನಾಜೂಕತೆ ನೋಡದೆನಾಟ್ಯದಲ್ಲಿ ಮೂಡುವಅಭಿವ್ಯಕ್ತಿ ನೋಡು… ನಾನಾಡುವ ಆಟಗಳವೀಕ್ಷಕನಾಗಿ ಕೂತು ನೋಡದೆನನ್ನೊಳಗಿನ ಚೈತನ್ಯವಾಗಿಜೊತೆಗಿದ್ದು ನೋಡು… *********************************

ಮಾಲತಿ ಶಶಿಧರ್ ಕಾವ್ಯಗುಚ್ಛ Read Post »

ಕಾವ್ಯಯಾನ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ‌ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ ಹಾಸುಸಿಗದ ಹಾಗೆ ಕರಗಿದೆ ಮನಸು. ಹತ್ತಾರು ವರ್ಷಗಳ ಸವೆದುಒಂದೇ ಸೂರಿನಡಿ ಬಾಳಿದ್ದುಅರೆಕ್ಷಣದಲಿ ದೂರಾದದ್ದುಆಳವಿಲ್ಲದ ನಂಬುಗೆಯೊಂದು. ಅರಿತೆನೆಂದು ಅವನ ಬೆರೆತೆಅರಿಯಗೊಡದವನ ನಡತೆಇಷ್ಟು-ಎಷ್ಟು ಅರಿತರೇನಂತೆಮರೆಯಗೊಡದವನ ಚಿಂತೆ. ದಯವಿಟ್ಟು ಗಮನಿಸಿ… ಸಂಗಾತಿಯಲ್ಲದೇ ಇನ್ಯಾರೋಸುರತವೆಂದೂ ಸುರಕ್ಷಿತವಲ್ಲಬೇಕೆಂದಾಗ ಬಂಜೆತನಬೇಡವಾದಾಗ, ಆಸೆಬಿಟ್ಟಾಗ ಕಟ್ಟುವ ಗರ್ಭಬೆನ್ನಿಗಂಟುವ ರೋಗದಯವಿಟ್ಟು ಗಮನಿಸಿ… ಅಪಘಾತಗಳೆಲ್ಲ ಆಕಸ್ಮಿಕಗಳಲ್ಲಅಲಕ್ಷ್ಯ, ಆತುರ, ಔತ್ಸುಕ್ಯಕೂಡ ಕಾರಣವಿರಬಹುದಲ್ಲಎದುರಾಗುವವನ ಅಚಾತುರ್ಯಕೂಡ ಕಲ್ಪಿಸಿಕೊಳ್ಳಬೇಕಲ್ಲದಯವಿಟ್ಟು ಗಮನಿಸಿ… ಯುಗ ಬದಲಾಗಿದೆಸ್ವರ್ಗ ನರಕಗಳೆಲ್ಲವೂಇಲ್ಲೇ ಸೃಷ್ಟಿಯಾಗಿದೆಬದುಕಿನ ಕಂದಾಯ ಕಟ್ಟುವಕೌಂಟರ್ ಇಲ್ಲಿಯೇ ಇದೆದಯವಿಟ್ಟು ಗಮನಿಸಿ… ದಿವ್ಯದೃಷ್ಟಿ ಸೂರಿಗೆ ಮಾರಿಗೆಎಲ್ಲೆಲ್ಲೂ ಟವರ್ ಲೊಕೇಷನ್ಗೆಸುಲಭದ ಬೇಟೆ ಅಪರಾಧಕ್ಕೆಅಪರಾಧಿಯಾಗದ ಸೂತ್ರಸೀದಾ ಸಾದಾ ಸುಸೂತ್ರನೆಮ್ಮದಿಗೊಂದೇ ಮಂತ್ರದಯವಿಟ್ಟು ಗಮನಿಸಿ…

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ Read Post »

ಕಾವ್ಯಯಾನ

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ

ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ ಹಾರಿದ್ದುಹೂವು ನಕ್ಕಿದ್ದುಗಾಳಿಗಷ್ಟೇ ತಿಳಿದ ಸತ್ಯಸಾಬೀತು ಪಡಿಸುವುದಕ್ಕೆಪುರಾವೆ ಒದಗಿಸುವುದುಎಷ್ಟು ಕಷ್ಟ?! ಭೂಮಿ ತೂಗುವ ಹಕ್ಕಿ ಈ ಬೆಳ್ಳಾನೆ ಬೆಳಗಿನಲ್ಲಿಮುಂಬಾಗಿಲ ಅಂಗಳದಲ್ಲಿಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾಭೂಮಿಯನ್ನೇ ತೂಗುತ್ತಿದೆಯಲ್ಲಾಎಲಾ! ಪುಟಾಣಿ ಚುರುಕು ಹಕ್ಕಿಯಾರಿಟ್ಟರೋ ಹೆಸರು?ಭೂಮಿ ತೂಗುವ ಹಕ್ಕಿ. ಮೇಲಕ್ಕೊಮ್ಮೆ ಕೆಳಕ್ಕೊಮ್ಮೆತೂಗಿದಷ್ಟೂ ತೂಗಿದಷ್ಟೂಮೇಲಕ್ಕೂ ಏರುವುದಿಲ್ಲ;ಕೆಳಕ್ಕೂಇಳಿಯುವುದಿಲ್ಲ.ಸಮತೋಲನದ ಸಮಭಾರವಂತೂಸಧ್ಯಕ್ಕೆ ಸಾಧ್ಯವೇ ಇಲ್ಲವಾ..?ಅತ್ತೊಮ್ಮೆ ಇತ್ತೊಮ್ಮೆ ಮುಗಿಯದಶತಪಥ. ಪಾತಾಳಕ್ಕಿಳಿದ ಇಲ್ಲಿಯ ದು:ಖಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲುಹಿಡಿತಕ್ಕೆ ದಕ್ಕುವುದಿಲ್ಲ. ಹಠಕಟ್ಟಿ ಉಸಿರೊತ್ತಿಬಿರುಸಿನಲ್ಲಿ ಒಯ್ದಷ್ಟೇರಭಸದಲ್ಲಿ ರಪಕ್ಕನೆ ಪ್ರತಿಭಾರಿನೆಲಕ್ಕಾತು ಹೋಗುವ ವಿಫಲ ಪ್ರಯತ್ನನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂಅರೆಗಳಿಗೆ ಕಂಪಿಸಿಕೊಂಡರೂ.. ಹಕ್ಕಿ ಬಾಲ ಕುಣಿಸುತ್ತಲೇ ಇದೆಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿಪುಕ್ಕದಲ್ಲಿಟ್ಟು ತೂಗುತ್ತಲೇ ಇದೆನಿರುಕಿಸುತ್ತಾ ನಿಂತ ಅಂಗಳದೆದೆಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ. ದಕ್ಕಿದ ನಿರಾಳತೆಗೆಅತ್ತ ಇತ್ತ ನುಲಿಯುತ್ತಾಪರ‍್ರನೆ ಹಾರಿದೆ ಹಕ್ಕಿತೂಗಿಕೊಳುವ ಕಾತರತೆಯಲ್ಲಿಮತ್ತೆ ರಚ್ಚೆ ಹಿಡಿದಿದೆ ಭೂಮಿ ಅರಿಕೆಗಳು 1.ಅರಳಿ ಸರಿದ ಹಗಲುಗಳೆಷ್ಟೋಆವರಿಸಿ ಕವಿದು ಕನಲಿದಇರುಳುಗಳೆಷ್ಟೋ..ಒಂದಂತೂ ದಿಟಕವಿತೆಯೇ..ನಿನ್ನ ಅನುಪಸ್ಥಿಯಲ್ಲಿಈ ಎರಡು ಕ್ರಿಯೆಗಳೂಸಂಭವಿಸುತ್ತಿವೆ ನಿರಂತರಹಾಗೂ ಕಾಯುವಿಕೆಯಲ್ಲೇ ನಾ ಕರಗಿಕಳೆದು ಹೋಗುತ್ತಿದ್ದೇನೆ ಸತತ. ಪ್ರಭುವೇ..ಹಗಲು ಇರುಳುಹಾಗೇ ಬಂದು ಹೋಗುತ್ತಿರಲಿಕಾಯುವಿಕೆಯ ಸುಖ ಹೀಗೇಅನಂತವಾಗಿರಲಿ. 2. ಪ್ರಭುವೇ..ನನಗೆಪೂರ್ವ ಜನ್ಮದ ಬಗ್ಗೆ ಅರಿವಿಲ್ಲಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲಅತ್ತ ಇತ್ತ ಸುಳಿದಾಡಿಸತಾಯಿಸುವ ಕವಿತೆಯನ್ನೊಮ್ಮೆಇದೇ ಜನುಮದಲ್ಲಿ ನನ್ನ ಇದಿರುಎಳೆದು ತಂದು ನಿಲ್ಲಿಸಿ ಬಿಡು ಸಾಕು. 3. ಮೊದಲು ಕಣ್ಣು ಬಿಟ್ಟಾಗ ಜೋರಾಗಿಶಬ್ದ ಹೊರಡಿಸಿ ಅತ್ತ ನೆನಪುಈಗಲೂ ಹಾಳು ಅಳು ನಿಲ್ಲುವುದಿಲ್ಲಗುದ್ದಿ ಗುದ್ದಿ ಹೊರ ಬಂದರೂಶಬ್ದ ಮಾತ್ರ ಕೇಳಿಸುತ್ತಿಲ್ಲ. 4. ದಯೆ ತೋರು ಕವಿತೆಯೇ..ಎಲ್ಲಾ ಭಾರವನ್ನು ನಿನ್ನ ಹೆಗಲಿಗೇರಿಸಿರುವೆಶಬ್ದವನ್ನು ನಿಶ್ಯಬ್ದವಾಗಿ ಇಳಿಸಿಬಿಡುಶಬ್ದ ಸ್ಪೋಟದ ಅನಾಹುತಕ್ಕೆ ನೀನೂ ಕೂಡಕಾರಣವಾಗುವುದ ತಪ್ಪಿಸಿಕೋ.. ಅತ್ತಷ್ಟು ಬಾರಿ ನಗಲಿಲ್ಲಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲನಕ್ಕಿದ್ದು ಗುಲ್ಲೋ ಗುಲ್ಲುಕವಿತೆಯೇ..ನೀ ಎಚ್ಚರವಾಗಿರುವುದಷ್ಟೇಮುಖ್ಯ ಇಲ್ಲಿಆಗ ನಾನೂ ನಿಶ್ಚಿಂತೆಯಾಗಿರಬಲ್ಲೆ ****************************************

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಸಮಯಾಂತರ ‘ಮಾನವೀಯ ನೆಲೆ’ಯ ‘ಕಟ್ಟುತ್ತೇವ‌ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..! ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು. ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ. ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ ಎನ್ನದೇ ಈ ಕರೆಂಟ್ ನೊಂದಿಗೆ ಸರಸವಾಡುವ ಮತ್ತು ದುಡಿಯುವ ‘ಲೈನ್ ಮನ್’ ಗಳೆಂದರೆ ಈ ಸತೀಶ್ ಕುಲಕರ್ಣಿ ಅವರಿಗೆ ಅಪಾರ ಪ್ರೀತಿ ಮತ್ತು ಕಾಳಜಿ. ನಾನು ಮೊನ್ನೆ ಈ ಹೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿಯ ಬಗೆಗೆ ಒಂದು ಲೇಖನ ಬರೆದಾಗ, ಅವರು ಕೋಪ ಮಾಡಿಕೊಂಡು ಅಧಿಕಾರಿಗಳು ಇರಲಿ,  ಈ ಸಾವಿನೊಂದಿಗೆ ಸರಸವಾಡುವ ನಮ್ಮ ‘ಲೈನ್ ಮನ್’ ಗಳನ್ನು ಮೊದಲು ಗುರುತಿಸು ಶಿವು ಅಂತ ಹೇಳಿದರು ಇದೇ ಸತೀಶ್ ಕುಲಕರ್ಣಿಯವರು. ಅಧಿಕಾರಿಗಳನ್ನು ಬಿಡಿ, ಮೊದಲು ಈ ನಮ್ಮ ‘ಲೈನ್ ಮನ್’ಗಳ ಬಗೆಗೆ ಮೊದಲು ಬರೆ ಶಿವು ಅಂತ ಹಕ್ಕಿನಿಂದ ಮತ್ತು ಪ್ರೀತಿಯಿಂದ ಪದೇ ಪದೇ ಹೇಳಿದರು. ಅಂದಂತೆಯೇ ಈ ‘ಲೈನ್ ಮನ್’ಗಳು ಮನೆ-ಮಠವನ್ನೆದೇ, ಚಳಿ-ಮಳೆ ಎನ್ನದೇ ದುಡಿಯುವ ಪರಿಯನ್ನು ನನ್ನಿಂದ ಬರೆಸಿದರು. ಇದನ್ನೇಕೆ ಈ ‘ಸಮಯಾಂತರ’ ಕವನ ಸಂಕಲನದ ಬಗೆಗೆ ನನ್ನ ವಿಮರ್ಶೆ(ತೀರಾ ವಯಕ್ತಿಕ ಅಭಿಪ್ರಾಯ) ಬರೆಯುವ ಮೊದಲು ಹೇಳಿದೆನೆಂದರೆ ಇವರು ತಾವು ಕೆಲಸ ಮಾಡುತ್ತಿದ್ದ ಈ ಹೆಸ್ಕಾಂ ಒಟ್ಟಾರೆ ಕೆಇಬಿಯ ಕೆಳ‌ ದರ್ಜೆಯ ನೌಕರರ ಅದರಲ್ಲೂ ಈ ‘ಲೈನ್ ಮನ್’ಗಳ ಬಗೆಗೆ ಸತೀಶ್ ಕುಲಕರ್ಣಿಯವರಿಗೆ ಎಷ್ಟೊಂದು ಪ್ರೀತಿ, ಕಾಳಯ ಮತ್ತು ತಮ್ಮ ಕೆಲಸದಲ್ಲೂ ಶ್ರದ್ಧೆ ಇತ್ತು ಎಂದು ತಿಳುಸಲು ಈ ಪೀಠೀಕೆ ಹಾಕಿದೆ ಅಷ್ಟೇ. ಇನ್ನೂ ‘ಸಮಯಾಂತರ’ ‘ಕವನ ಸಂಕಲನ’ದ ಬಗೆಗೆ ನೋಡೋಣ… ಸಾಹಿತ್ಯಿಕ ದೃಷ್ಟಿಯಿಂದ ತುಂಬಾ ಉತ್ಸಾಹದಾಯಕ ಪರಿಸರ ಹೊಂದಿರುವ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಪಟದಲ್ಲಿ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಸತೀಶ್ ಕುಲಕರ್ಣಿಯವರೂ ಪ್ರಮುಖರು. ಐದು ದಶಕಗಳಿಗೂ ಹೆಚ್ಚು ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವ ಸತೀಶ ಕುಲಕರ್ಣಿ ಅವರು ಸುಮಾರು ಇನ್ನೂರೈವತ್ತಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವರ “ಬೆಂಕಿ ಬೇರು”, “ನೆಲದ ನೆರಳು”, “ಒಡಲಾಳ ಕಿಚ್ಚು”, “ವಿಷಾದಯೋಗ”, “ಗಾಂಧೀಗಿಡ” ಮತ್ತು “ಸತೀಶ ಸಮಗ್ರ ಕವಿತೆಗಳು” ಕವನ ಸಂಕಲನಗಳು. “ಸಮಯಾಂತರ” ಅವರ ಆಯ್ದ ಅರವತ್ತು ಕವಿತೆಗಳ ಸಂಕಲನ. ಮೊಗಸಾಲೆ ಪ್ರಕಾಶನದ ಮೂಲಕ ಸುಂದರವಾಗಿ ಪ್ರಕಟಗೊಂಡಿರುವ ಈ ಕೃತಿಗೆ ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ಅನೇಕ ಒಳನೋಟಗಳಿರುವ ಅಭ್ಯಾಸಪೂರ್ಣ ಮುನ್ನುಡಿ ಬರೆದಿದ್ದಾರೆ. ಸತೀಶರ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದ ವಿಮರ್ಶಿಸಿರುವ ನಂಗಲಿಯವರ ಮುನ್ನುಡಿ ಸತೀಶ ಕುಲಕರ್ಣಿಯರ ಕಾವ್ಯಕ್ಕೆ ಉತ್ತಮ ಪ್ರವೇಶ ಒದಗಿಸುತ್ತದೆ. ಸತೀಶರನ್ನು ಸಾಮಾನ್ಯವಾಗಿ ದಲಿತ–ಬಂಡಾಯ ಚಳುವಳಿಯೊಂದಿಗೆ ಗುರುತಿಸಿಲಾಗುತ್ತದೆ. ಅವರನ್ನು “ಬಂಡಾಯ ಕವಿ”ಯೆಂದೂ ಕರೆಯುವುದು ಅವರ ಕಾವ್ಯದ ಮಹತ್ವವನ್ನು ಸೀಮಿತಗೊಳಿಸುತ್ತದೆ. ಅವರ ಕವಿತೆಗಳು ಅಪಾರ ಜೀವನಾನುಭವದಿಂದ ಮೂಡಿ ಬಂದಿವೆ. ಅವರ ಕವಿತೆಗಳು ಕೃತಕವಾಗಿರದೇ ಸಹಜವಾಗಿರುವುದರಿಂದ ಅವರನ್ನು ‘ಸಹಜ ಮಾನವತಾವಾದಿ ಕವಿಯೆಂದು ಕರೆಯಬಹುದು. ಪ್ರಸ್ತುತ “ಸಮಯಾಂತರ” ಸಂಕಲನದಲ್ಲಿ ಅವರ ಒಲವು ನಿಲುವುಗಳನ್ನು ಪ್ರತಿನಿಧಿಸಬಲ್ಲ ವೈವಿಧ್ಯಮಯ ಕವಿತೆಗಳಿವೆ. “ಅಜ್ಞಾತ ಪರ್ವದಲ್ಲಿ” ಕವಿತೆ ತುರ್ತು ಪರಿಸ್ಥಿತಿ ಉಂಟು ಮಾಡಿದ ಅವಾಂತರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. “ಸ್ಮಶಾನ ಮೌನ ಬಾಗಿಲುಗಳು ಬಂದಾಗಿದ್ದವು. ನಾಲಿಗೆಗಳು ಕತ್ತರಿಸಿ ಹೋಗಿದ್ದವು. ಬೆಳಕಿಲ್ಲ, ಗಾಳಿಯಿಲ್ಲ. ಭದ್ರ ಕೀಲಿಗಳು. ಬಾಯಿ ಬಂದು ಮಾಡಿದ ಚಿಲಕಗಳು. ಜನ ಬರಿ ಸತ್ತ ಜನ……” # ಅಜ್ಞಾತ ಪರ್ವದಲ್ಲಿ… ನೂರಾರು ವರ್ಷಗಳಿಂದ ನೊಂದು ಬೆಂದು ಹೋದ ಶೋಷಿತರ ಅಸಹಾಯಕತೆ ಮತ್ತು ಶೋಷಕರ ಅಟ್ಟಹಾಸವನ್ನು “ಒಡಲಾಳ ಕಿಚ್ಚು” ಕವಿತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. “ಹಟ್ಟಿಯಲ್ಲಿ ಬಟ್ಟೆ ಬಿಚ್ಚಿ ಸಾಹುಕಾರನಿಗೆ ಮೈ ಕೊಟ್ಟವರ, ಗದ್ದೆಯಲ್ಲಿ ಜರತಾರಿ ರುಮಾಲಿನ ರಾಕ್ಷಸರಿಗೆ ಹಮಾಲರಾಗುವವರ……” “ಕಿತ್ತು ತಿನ್ನುವವರ ಕೂತು ತಿನ್ನುವವರ ಕರಾಮತ್ತು ಉರಿ ಹಚ್ಚಿ ಎಲ್ಲ ಸುಟ್ಟು ಹಾಕಿ ಹೊಸ ಹಸಿರು ಚಿಗುರುವ ಮುನ್ನ ದನಿ ಎತ್ತಿ…… ” # ಒಡಲಾಳ ಕಿಚ್ಚು’ವಿನಲ್ಲಿ ಕಾಣಬಹುದು… ಸತೀಶ ಕುಲಕರ್ಣಿ ಅವರ “ಒಂದು ಅತ್ಯಾಚಾರದ ಹಂತಗಳು” ದೈಹಿಕವಾಗಿ ಜರ್ಜರಿತವಾದ ಅತ್ಯಾಚಾರ ಸಂತ್ರಸ್ತೆ ಕಾನೂನಿನ ಮೂಲಕ ಮಾನಸಿಕ ಅತ್ಯಾಚಾರಕ್ಕೊಳಗಾಗುವುದನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಹೀಗೆಯೇ ಮುಂದುವರಿದು… “ಅವರು ಬಂದು ತಡೆದವರಳನ್ನು ಮೇಲೆ ಗಿಡಗಳ ದಳದಳ – ಗಾಳಿಗುಲುಕುವ ಎಲೆಗಳು ಕೀವು ತುಂಬಿ ಸೋರುವ ಹುಣ್ಣು ನಕ್ಷತ್ರಗಳು ಇಷ್ಟು ಅವಳ ಕೊನೆಯ ನೆನಪುಗಳು……” “ಅತ್ಯಾಚಾರವಾಗಿಲ್ಲ – ತೀರ್ಪು ಬಂದಿತ್ತು ಒಂದು ದಿನ ಅವಳು ಹೆರಿಗೆ ನೋವಿಗೆ ನರಳುತ್ತಿದ್ದಳು……” # ಒಂದು ಅತ್ಯಾಚಾರದ ಹಂತಗಳು… “ಕಾಗದ ಕ್ರಾಂತಿಕಾರಿಗಳ ನಡುವೆ”, “ಸಿದ್ಧ ಸವಾರರು” ಹುಸಿ ಕ್ರಾಂತಿಕಾರರ ಕುರಿತ ಕವಿತೆಗಳಾದರೆ, “ಸತ್ತ ಮೇಲೆ” ನಿಜವಾದ ಹೋರಾಟಗಾರರ ಸ್ವಗತದಂತಿದೆ. “ನಾನು ಬೂದಿಯಾಗಿರುವೆ ಈ ನೆಲದ ಮಣ್ಣಾಗಿರುವೆ ನಾನು ಸ್ಮೃತಿಯಾಗಿರುವೆ ಜೀವನದ ಗತಿಯಾಗಿರುವೆ ನಿಲ್ಲದ ಸತ್ಯವಾಗಿರುವೆ ಆಗಿರುವೆ ನಾನು ಬೂದಿ ಎಲ್ಲರೂ ನಡೆದ ಹಾದಿ… ” # ನಾನು ಸತ್ತ ಮೇಲೆ… “ಬಂಡಾಯ” ಮತ್ತು “ಸ್ವಾಭಿಮಾನದ ಹಾಡು” ಬಂಡಾಯ ಚಳುವಳಿಯಿಂದ ಸ್ಫೂರ್ತಿ ಪಡೆದ ಕವಿತೆಗಳು. “ದಮನಕ್ಕೆ ಉತ್ತರ ಧಿಕ್ಕಾರ ಬಂಡಾಯ ದಬ್ಬಾಳಿಕೆಗೆ ಉತ್ತರ…” # ಬಂಡಾಯ… “ನೀ ಚೆಲ್ಲಿದ ಹಾದಿ ಮುಳ್ಳುಗಳ ನಿನ್ನೆಂಜಲ ನಿಗಿನಿಗಿ ಕೆಂಡದುಂಡೆಗಳ ತುಳಿದು ನಾ ದಾಟಬಲ್ಲೆ ನನ್ನ ಗುರಿ ನಾ ಮುಟ್ಟಬಲ್ಲೆ… ” # ಸ್ವಾಭಿಮಾನದ ಹಾಡು… ವಿಷಾದಯೋಗ ಹಿಂಸೆ ಮತ್ತು ಗಲಭೆಯ ದುಷ್ಪರಿಣಾಮದ ಕುರಿತ ಉತ್ತಮ ಕವಿತೆ. “ನಲವತ್ತೇಳರ ನರಕದ ನಾಡು ’ಹೇರಾಮ’ ಆರ್ತನದ ನಾಡು ಪುಡಿ ಪುಡಿಗೊಂಡ ಗೋಪುರದ ನಾಡು… ” # ವಿಷಾದಯೋಗ… “ಅಲಿಖಿತ ಕಾದಂಬರಿ ನಾಯಕನ ಕವಿತೆ” ಮತ್ತು “ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ” ಕವಿತೆಗಳು ಸಾಮಾನ್ಯರ ಅಸಮಾನ್ಯತೆಯನ್ನು ಗುರುತಿಸಿದೆ. ಈ ‘ಲೈನ್ ಮನ್ ಮಡಿವಾಳ ಬೀಮಪ್ಪ’ ಕವಿತೆ ನನಗಂತೂ ಇವರು ತಮ್ಮ ಸಹೋದ್ಯೋಗಿಗಳು ಮತ್ತು ಒಟ್ಟಾರೆ ಕೆಇಬಿಯ ಅಧಿಕಾರ ರಹಿತ ಕೆಲಸಗಾರರ ಬಗೆಗೆ ಸತೀಶ ಕುಲಕರ್ಣಿರಿಗೆ ಇದ್ದ ಮಾನವೀಯ ಮಮಕಾರ ಮತ್ತು ಕೆಇಬಿ ಕೆಲಸಗಾರರ ಮೇಲಿನ ಅಭಿಮಾನವನ್ನು ತೋರಿಸಿತು. “ಮೂಡಿಲ್ಲ ಅಕ್ಷರಕ್ಷರಗಳಲಿ, ಬದುಕಿಲ್ಲ, ಸತ್ತಿಲ್ಲ ಅನನ್ಯದವತಾರವೆ ಓ ಶ್ರೀ ಸಾಮಾನ್ಯ, ಸತ್ಯದ ಸೂತ್ರ ನಾಯಕ ನೀನು… ” # ಅಲಿಖಿತ ಕಾದಂಬರಿಯ ನಾಯಕ… “ಹಾದಿ ಹೆಣವಾದ ಬೀದಿ ದೀಪಗಳ ದೊರೆಯೆ ಬೆಳಕು ಕೊಟ್ಟು, ಕತ್ತಲೆಯ ನೀ ಸೇರಿದಿಯೆ?….. ” # ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ… ಇದು ತಮ್ಮ ಕಾಯಕವನ್ನು ಇಷ್ಟಪಡುವ ಮತ್ತು ಕೆಳಹಂತದ ನೌಕರರ‌ ಬಗೆಗಿನ ಮಾನವೀಯ ಪ್ರೀತಿ, ಕಾಳಜಿ ಮತ್ತು ಸಹಜ ‘ಲೈನ್ ಮನ್’ಗಳ ಕಷ್ಟದ ಕೆಲಸದ ಅನುಕಂಪವನ್ನು ಎತ್ತಿ ತೋರಿಸುತ್ತದೆ. “ನನ್ನಪ್ಪ”, “ಉಳಿದ ನೆನಪು” ಮತ್ತು “ಗುರುಗಳು ಸತ್ತ ಮುಂಜಾನೆ” ಮಾನವೀಯ ಸಂಬಂಧಗಳ ಕುರಿತ ಕವಿತೆಗಳಾಗಿದ್ದು, ಆ ನೆನಪುಗಳೇ ಕವಿತೆಗಳಾಗಿವೆ. “ನಾಲ್ಕು ಮಕ್ಕಳಿಗೆ ನೂರು ಕನಸು ಕೊಟ್ಟ ಸಾವು ಬರುವತನಕ ಬಿಳಿ ಅಂಗಿ ಪೈಜಾಮು ತೊಟ್ಟ ನನ್ನ ಆ ಬಡ ಅಪ್ಪ…” # ನನ್ನಪ್ಪ… “ಕೆಂಬೆಂಕಿ, ಸುಡುವ ಒಲೆಯ ಮುಂದೆ ಕೂತ ಅವ್ವನ, ಅದೆಷ್ಟು ಕನಸುಗಳು ಹಾಗೆಯೆ ಉರಿದು ಬೂದಿಯಾಗಿ ಹೋಗಿರಲಿಕ್ಕಿಲ್ಲ…… ” # ಉಳಿದ ನೆನಪು… “ಛಡಿ ಏಟಕೊಟ್ಟ ಮಾಸ್ತರು, ಹೊಸ ಮಾತು ಕಲಿಸಿ ಕೊಟ್ಟ ಮಾಸ್ತರು, ಸಾಲಿ ಗ್ರೌಂಡಿನ್ಯಾಗ ಮೂಲಿಗೆ ನಿಂತು ನಮ್ಮಾಟಾ ನೋಡಿದ ಮಾಸ್ತರು, ಅಕ್ಷರ ಏಣಿ ಹತ್ತಿಸಿ ಜೀವನದ ದೂರ ತೋರಿಸಿದ ಮಾಸ್ತರು, ಮನಿ ಮರ್ತು, ಮಕ್ಕಳ ಮರತು ನಮ್ಮನ್ನ ಮಕ್ಕಳಂತ ತಿಳಕೊಂಡ ಮಾಸ್ತರು ಎಲ್ಲಾ ನೆನಪಾದವು ದೂರದಿಂದ ನೋಡಿದೆ. ಮಾಸ್ತರ ಮನಿ ತುಂಬ ಮಂದಿ ಬಾಳಿತ್ತು, ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು…” # ಗುರುಗಳು ಸತ್ತ ಮುಂಜಾನೆ… “ನಗರ ಮೈ ಮುರಿಯುತ್ತಿದೆ” ನಗರೀಕರಣದ ಪೈಶಾಚಿಕತೆ ಯಾವ ಮಟ್ಟಕ್ಕೆ ಬದುಕನ್ನು ದುಸ್ತರ ಮಾಡಿದೆಯೆಂಬುದರ ಕುರಿತ ಕವಿತೆ. “ಅಮೇರಿಕಾ” ಬಂಡವಾಳಶಾಹಿ ರಾಷ್ಟ್ರಗಳ ದುರಾಸೆಯನ್ನು ಅಭಿವ್ಯಕ್ತಿಸಿದೆ. “ಕಂಪನಿ ಸವಾಲ್”, “ಎಲ್ಲಿಯೋ ದೂರದಲ್ಲಿ”, “ಮತ್ತೊಂದು ಬೆಳಕು”, “ಬೆಳ್ತನಕಾ” ಮತ್ತು “ಯುದ್ಧ ಶುರು ಆತೇನು? ಇವು ಸತೀಶ ಕುಲಕರ್ಣಿಯವರ ವಿಶಿಷ್ಟವಾದ ಮಾನವೀಯ ಸಹಜ ಕವಿತೆಗಳು. “ಮಹಾಭಾರತದ ಆ ಹಕ್ಕಿ ”ಬಹುಹಿಂದಿನಿಂದ ಬಂದ ಅರ್ಜುನ, ಏಕಲವ್ಯರ ರೂಪಕದೊಂದಿಗೆ ಗೆದ್ದವರ ಕಥೆಯನ್ನು ಸಂಭ್ರಮದಿಂದ ಹೇಳುವುದನ್ನು ಪ್ರಶ್ನಿಸುತ್ತದೆ. “ಕವಿಯಾಗಿ ನಾನೇಕೆ ಒಂದು ಪ್ರಶ್ನೆ ಕೇಳಬಾರದು ಯಾಕೆ, ಆ ಪುಟ್ಟ ಹಕ್ಕಿ ಆಕಾಶಕ್ಕೆ ಗಕ್ಕನೆ ಹಾರಿಹೋಗಬಾರದು ಯಾಕೆ, ಆ ಬಾಣದ ಗುರಿ ತಪ್ಪಬಾರದು ಹೇಳಿ ನೀವೇ ಹೇಳಿ…” # ಮಹಾಭಾರತದ ಆ ಹಕ್ಕಿ… “ಕಟ್ಟತೇವ ನಾವು” ಮತ್ತು “ಗಾಂಧೀಗಿಡ” ಕವಿತೆಗಳಲ್ಲಿ “ಕಟ್ಟತೇವ ನಾವು” ಬಂಡಾಯದ ಕ್ರಾಂತಿಗೀತೆಯಾಗಿದೆ. ಅದರಂತೆಯೇ ಆ ಕ್ರಾಂತಿಯಯನ್ನು ಬಯಸುವ ಕವನವಾಗಿದೆ. “ಕಟ್ಟತೇವ ನಾವು ಕಟ್ಟತೇವ ನಾವು ಕಟ್ಟೇ ಕಟ್ಟತೇವ. ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ ನಾವು ಕನಸ ಕಟ್ಟತೇವ ನಾವು ಮನಸು ಕಟ್ಟತೇವ…” # ಕಟ್ಟತೇವ ನಾವು… “ಈಗ ನೆರಳಿಲ್ಲ ನೆಲಕ್ಕೆ ಅರಳಿಲ್ಲ ಹೂವುಗಳು ಸತ್ತ ನೆಲದ ಸತ್ವ ಕುಡಿದ ಗಿಡ ಹಣ್ಣು ಕೊಟ್ಟಿಲ್ಲ ಮೂಕ ಕಾವ್ಯದ ಪ್ರತೀಕದ ಗಿಡ ನಿತ್ಯ ಕೊಡಲಿಗೆ ಬಡವರಿಗೆ ಚಕ್ಕೆ ಕೊಡುವ ಗಾಂಧೀಗಿಡ ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗುಹುದೆ ಹೇಳು ಗಾಂಧೀಗಿಡ…” # ‘ಗಾಂಧೀಗಿಡ’… ಆಧುನಿಕ ಕನ್ನಡ ಕಾವ್ಯಕ್ಕೆ ಅನೇಕ ವಿಶಿಷ್ಟ ಕವಿತೆಗಳನ್ನು ನೀಡಿರುವ ಸತೀಶ ಕುಲಕರ್ಣಿಯವರ ಕಾವ್ಯಕ್ಕೆ ಈ ವರೆಗೂ ಸೂಕ್ತ ವಿಮರ್ಶೆ ಸಂದಿಲ್ಲ. ಆದರೂ ಅವರ ಕಾವ್ಯ ಜನಮನದಲ್ಲಿ ಹಾಸುಹೊಕ್ಕಾಗಿಯೇ ಇದೆ. ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ತಮ್ಮ ಮುನ್ನುಡಿಯ ಮೂಲಕ ಒಟ್ಟಾರೆ ಈ ಕವನ ಸಂಕಲನವಾದ ‘ಸಮಯಾಂತರ’ ನ್ಯಾಯ ಒದಗಿಸಿದ್ದಾರೆ. ನಂಗಲಿಯವರು ಹೇಳಿದಂತೆ ಸತೀಶ ಕುಲಕರ್ಣಿಯವರು ಹಾವೇರಿಯ ಹೊಕ್ಕುಳಲ್ಲಿ ಅರಳಿದ ಹೂವೇ ಸರಿಯೆಂಬುದು ನನ್ನದೂ ಅಭಿಪ್ರಾಯ..! ********************* ಕೆ.ಶಿವು.ಲಕ್ಕಣ್ಣವರ

ಪುಸ್ತಕ ಸಂಗಾತಿ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್  ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ  ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು.  ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು.  ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ  ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ  ವ್ಯವಸ್ಥೆಯನ್ನು ಒಡೆದು  ಬೇರೆ ದಾರಿ ಹಿಡಿಯುವುದು ಹೇಗೆ  ಮತ್ತು ಅದರ ಪರಿಣಾಮಗಳೇನಾಗಬಹುದು ಎಂಬುದರ ಕುರಿತಾದ ಸಂವಾದವನ್ನು  ಈ ಕಾದಂಬರಿ ಅತ್ಯಂತ ಮಾರ್ಮಿಕವಾಗಿ ನಿರೂಪಿಸುತ್ತದೆ.  ಅದರ ಜತೆಗೆ ಜನಪದ ಬದುಕು  ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ವ್ಯವಸ್ಥೆಯೊಳಗೇನೇ ಕಂಡುಕೊಂಡ ಪರಿಹಾರವೂ ಇಲ್ಲಿದೆ. ಗ್ರಾಮೀಣ ಬದುಕಿನ ಚಿತ್ರಣ, ಗಂಡ-ಹೆಂಡಿರ ನಡುವಣ ಆತ್ಮೀಯ ಸಂಬಂಧದ ಅರ್ಧನಾರೀಶ್ವರ ಪರಿಕಲ್ಪನೆಯನ್ನು ಹೋಲುವ ಸುಂದರ ಚಿತ್ರಣವು ಕೃತಿಯ ಸೌಂದರ್ಯಕ್ಕೆ ಮೆರುಗನ್ನಿತ್ತಿದೆ.  ಕಾಳಿ ಮತ್ತು ಪೊನ್ನಿಯರ ದಾಂಪತ್ಯ ಜೀವನವು ‘ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು’ ಆನಂದಮಯವಾಗಿತ್ತು. ಗಂಡ-ಹೆಂಡಿರು ಒಬ್ಬರನ್ನೊಬ್ಬರು ಎಂದೂ ಬಿಟ್ಟಿರಲಾರದವರೂ ಬಿಟ್ಟು ಕೊಡಲಾರದವರೂ ಆಗಿದ್ದರು.  ಅವರಿಬ್ಬರ ನಡುವಣ ಲೈಂಗಿಕ ಸಂಬಂಧದ ಬಿಸುಪು ಹತ್ತು ವರ್ಷ ಕಳೆದರೂ  ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಆದರೆ ಒಂದೇ ಒಂದು ಕೊರತೆಯೆಂದರೆ ಅವರಿಗೆ ಮಕ್ಕಳಾಗಿರಲಿಲ್ಲ. ಹೆಣ್ಣು ತನ್ನ ವ್ಯಕ್ತಿತ್ವದ ಮೂಲಕ ಎಷ್ಟೇ ಯಶಸ್ವಿಯಾದರೂ  ಆಕೆ ತಾಯಿಯಾಗದಿದ್ದರೆ ಸಮಾಜವು ಆಕೆಯನ್ನು ಸದಾ ಚುಚ್ಚಿ ನೋಯಿಸುತ್ತಿರುತ್ತದೆ.  ಕಾಳಿ-ಪೊನ್ನಿಯರಿಬ್ಬರೂ ಈ ದುಃಖವನ್ನು ಎದುರಿಸುತ್ತಾರೆ.  ಕೊನೆಗೆ ಕಾಳಿಯ ಅಮ್ಮ ಮತ್ತು ಪೊನ್ನಿಯ ಅಮ್ಮ ಇಬ್ಬರೂ ಅವಳನ್ನು ತಿರುಚೆಂಗೋಡು ಜಾತ್ರೆಯ  ಹದಿನಾಲ್ಕನೇ ದಿವಸದಂದು ಊರಿನ ಪದ್ಧತಿಯಂತೆ  ಮದುವೆಯಾದ ಹೆಣ್ಣು ಮಕ್ಕಳನ್ನು ಅವರು ಇಷ್ಟಪಟ್ಟವರ ಜತೆ ಕೂಡಲು ಕಳುಹಿಸುವ ಯೋಜನೆ ಹಾಕುತ್ತಾರೆ.  ತನ್ನ ಪೊನ್ನಿ ತನ್ನ ಕೈಜಾರಿ ಹೋಗುತ್ತಾಳೆಂಬ ಭಯದಿಂದ ಕಾಳಿ ಇದಕ್ಕೆ ಸಮ್ಮತಿಸುವುದಿಲ್ಲ. ಆದರೆ ತಾಯ್ತನದ ಸಹಜ ಬಯಕೆ ಪೊನ್ನಿಯಲಿ ಎಷ್ಟು ಬಲವಾಗುತ್ತದೆ ಅಂದರೆ  ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕಾಳಿಯ ವಿರೋಧವನ್ನು ಲೆಕ್ಕಿಸದೆ ಬೇರೊಬ್ಬ ಯುವಕನನ್ನು ಆರಿಸಿಕೊಂಡು ಪೊನ್ನಿ ಹೋಗುತ್ತಾಳೆ. ಕೊನೆಯಲಿ ಕಾಳಿ ಅವಳ ಮೇಲೆ ಸಿಟ್ಟಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಒಬ್ಬ ಹೆಣ್ಣು ಹೇಗೆ ಸ್ವಾರ್ಥಿ ಪುರುಷನ ಸ್ವಂತ ಸೊತ್ತಾಗಿ ಶೋಷಣೆಗೊಳಗಾಗುತ್ತಾಳೆ ಎಂಬುದನ್ನು ಕಾದಂಬರಿ ನಿರೂಪಿಸುತ್ತದೆ.ಅನುವಾದದ ಭಾಷೆ ಚೆನ್ನಾಗಿದೆ. ಮೂಲದಲ್ಲಿರುವ ಆಡುಭಾಷೆಗೆ ಪರ್ಯಾಯವನ್ನು ಕೊಡಲು ಅನುವಾದಕರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಮತ್ತು ಯಶಶ್ವಿಯಾಗಿದ್ದಾರೆ ************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top