ಕಾರ್ಟೂನ್ ಕಾರ್ನರ್
ನಟರಾಜ್ ಅರಳಸುರಳಿ
ಕಥೆ ಕೊರೊನಾ ಮತ್ತು ಕಲಾವಿದೆ ಬೇಗಂ… ಮಲ್ಲಿಕಾರ್ಜುನ ಕಡಕೋಳ ಕೈ ಕಾಲುಗಳಲ್ಲಿ ಥರ್ಕೀ ಹುಟ್ಟಿದಂಗಾಗಿ ನಡುಗ ತೊಡಗಿದವು. ಮೈಯೆಲ್ಲ ಜಲ ಜಲ ಬೆವೆತು ಹೋಯ್ತು. ಎದೆಗುಂಡಿಗೆ ಹಿಂಡಿದಂಗಾಯ್ತು. ಎದ್ದು ಹೋಗಿ ನೀರಿನ ತಂಬಿಗೆ ತುಂಬಿಕೊಳ್ಳಬೇಕೆಂದು ರಗಡ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಲಿಲ್ಲ. ಯಾರಿಗಾದರೂ ಫೋನ್ ಮಾಡಬೇಕೆಂದ್ರೆ ಅವಳ ಡಬ್ಬಾ ಫೋನಲ್ಲಿ ದುಡ್ಡಿಲ್ಲ. ಎರಡು ತಿಂಗಳಿಂದ ಅದು ಬರೀ ಇನ್ಕಮಿಂಗ್ ಸೆಟ್ ಆಗಿತ್ತು. ” ದೈವಹೀನರಿಗೆ ದೇವರೇಗತಿ ” ಎಂಬ ಸಾಳುಂಕೆ ಕವಿಗಳ ನಾಟಕವೊಂದರ ಡೈಲಾಗ್ ನೆನಪಾಗಿ, ದೇವರನ್ನೇ ನೆನೆಯುತ್ತ ಹೋಳುಮೈಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಅಲ್ಲಾಡದಂತೆ ಮಲಗಿದಳು ಚಾಂದಬೇಗಂ. ಮನುಷ್ಯರ ಬದುಕಿನ ಏನೆಲ್ಲವನ್ನೂ ಕಸಗೊಂಡು ಮೂರಾಬಟ್ಟೆ ಮಾಡುವ ಕರಾಳ ಕೊರೊನಾ ಉಪಟಳ ಕೇಳಿ, ಕೇಳಿ ಎದೆಝಲ್ ಎನಿಸಿಕೊಂಡಿದ್ದಳು. ಜೀವ ಕಾಠರಸಿ ಹೋಗಿತ್ತು. ನಿತ್ಯವೂ ಉಪವಾಸ, ವನವಾಸದಿಂದ ನೆಳ್ಳಿ ನೆಳ್ಳಿ ಸಾಯುವ ಬದಲು ಕೊರೊನಾ ಬಂದು ಪಟಕ್ಕಂತ ತನ್ನ ಪ್ರಾಣ ಕಸಗೊಂಡು ಹೋದರೆ ಸಾಕೆಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಳು. ಹೀಂಗೆ ಎರಡು ತಿಂಗಳಕಾಲ ಆಕೆ ಒಂಟಿಯಾಗಿ ಮನೆಯಲ್ಲೇ ಇರುವಾಗ ಕೊರೊನಾ ಬರುವುದಾದರೂ ಹೇಗೆ.? ಇದೀಗ ತನಗೆ ಆಗುತ್ತಿರುವ ಹೃದಯ ಸಂಬಂಧಿ ದೈಹಿಕ ವೈಪರೀತ್ಯ ಕುರಿತು ಎಳ್ಳರ್ಧ ಕಾಳಿನಷ್ಟೂ ತಿಳಿವಳಿಕೆ ಅವಳದಲ್ಲ. ಜನಸಂಪರ್ಕವಿಲ್ಲದೇ ಹೀಗೆ ವಾರಗಟ್ಟಲೇ ಮನೆಯಲ್ಲಿ ಏಕಾಂಗಿಯಾಗಿ ನರಳುತ್ತಿರುವ ಆಕೆಗೆ ಹೊಟ್ಟೆತುಂಬಾ ಉಂಡ ನೆನಪಿಲ್ಲ. ಮಾರಿಕಾಂಬೆ ಜಾತ್ರೆ ಕ್ಯಾಂಪಿನ ನಾಟಕ ಶುರುವಾಗಿ ನಾಲ್ಕನೇ ದಿನಕ್ಕೆ ” ಕಂಪನಿ ಬಂದ್ “ಮಾಡಬೇಕೆಂಬ ಕೊರೊನಾ ಮಾರಿಯ ಲಾಕ್ ಡೌನ್ ಆರ್ಡರ್ ಬಂತು. ” ನೀವೆಲ್ಲ ನಿಮ್ನಿಮ್ಮ ಊರಿಗೆ ಹೋಗ್ರೀ ನಾಟ್ಕ ಚಾಲೂ ಆಗೋ ಮುಂದ ಹೇಳಿ ಕಳಿಸ್ತೀವಂತ ” ಜಂಭಯ್ಯ ಮಾಲೀಕರು ಮುಖದ ಮಾಸ್ಕ್ ಸರಿಸಿ, ಒಂದೇ ಉಸುರಲ್ಲಿ ಆದೇಶ ಹೊರಡಿಸಿ ಕಾರುಗಾಡಿಹತ್ತಿ ಹೊಂಟುಹೋದರು. ಲೈಟಿಂಗ್ ಹುಡುಗ ಸಾಜಿದ್ ಹತ್ತಿರ ಬಸ್ ಚಾರ್ಜ್ ಇಸ್ಗೊಂಡು ಊರಿಗೆ ಬಂದಳು ಬೇಗಮ್. ಹೌದು ನಾಟಕ ಕಂಪನಿ ಮಾಲೀಕರ ಬಳಿ ಮನವಿಮಾಡಿ ಹಣ ಪಡೆಯಲು ತಾನೇನು ಹೀರೊಯಿನ್, ಇಲ್ಲವೇ ಹಾಸ್ಯ ಕಲಾವಿದೆ ಅಲ್ಲವಲ್ಲ, ಎಂದು ತನ್ನೊಳಗೆ ತಾನೇ ಮಾತಾಡಿ ಕೊಂಡಳು. ಅಷ್ಟಕ್ಕೂ ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಕಂಪನಿ ಮಾಲೀಕ ಜಂಭಯ್ಯ, ಕಲಾವಿದರಿಂದ ಯಾವತ್ತೂ ಅಂತರ ಕಾಪಾಡಿಕೊಳ್ಳುತ್ತಿದ್ದರು. ಮಾಲೀಕರ ಹತ್ತಿರ ಸಲುಗೆಯಿಂದ ಮಾತಾಡುವ ಧೈರ್ಯ, ಕಂಪನಿ ಮ್ಯಾನೇಜರ್ ಯಡ್ರಾಮಿ ಮಲಕಣ್ಣರಿಗೆ ಮಾತ್ರ. ಅರವತ್ತರ ಆಸುಪಾಸಿನಲ್ಲಿರುವ ಚಾಂದಬೇಗಂ, ತಾಯಿ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದೆ. ಅದರಲ್ಲೂ ಕೌಟುಂಬಿಕ ನಾಟಕಗಳ ದುಃಖದ ಪಾತ್ರಗಳೆಂದರೆ ಆಕೆಗೆ ಖಂಡುಗ ಖುಷಿ. ಭಲೇ, ಭಲೇ ಕಟುಕರ ಕರುಳು ಚುರುಕೆನಿಸಿ ಕಣ್ಣೀರು ತರಿಸುವ ಅಭಿಜಾತ ಅಭಿನೇತ್ರಿ. ಹರೆಯದಲ್ಲಿ ಆಕೆ ಮಾಡಿದ ಹಿರೋಯಿನ್ ಪಾತ್ರ ನೋಡಿದವರಲ್ಲಿ ಇವತ್ತಿಗೂ ನೆನಪಿನ ಮಹಾಪುಳಕ. ಅಭಿಮಾನಿಗಳು ಆಕೆಯನ್ನು “ಚಾಂದನಿ” ಅಂತಲೇ ಕರೀತಿದ್ರು. ಹತ್ತಾರು ಟೀವಿ ಧಾರಾವಾಹಿಗಳಲ್ಲಿ, ಶತ ದಿನೋತ್ಸವ ಕಂಡ ನಾಕೈದು ಸಿನೆಮಾಗಳಲ್ಲೂ ಆಕೆಗೆ ಉತ್ತಮ ಅವಕಾಶಗಳೇ ಸಿಕ್ಕಿದ್ದವು. ದೂರದ ಬೆಂಗಳೂರಿನ ಟೀವಿ, ಸಿನೆಮಾ ಲೋಕದಿಂದ ಕೈತುಂಬಾ ರೊಕ್ಕ ಸಿಗಲಿಲ್ಲ. ಆದರೆ ಸಾರ್ವಜನಿಕವಾಗಿ ಆಕೆಗೆ ದೊಡ್ಡ ಹೆಸರು ಮಾತ್ರ ಸಿಕ್ಕಿತ್ತು. ಆ ಹೆಸರಿನಿಂದಾಗಿಯೇ ನಾಟಕ ಕಂಪನಿಗಳಲ್ಲಿ ಆಕೆಗೆ ಹೆಚ್ಚು ಅವಕಾಶ. ಟೀವಿ, ಸಿನೆಮಾ ತಾರೆಯೆಂಬ ಹೆಗ್ಗಳಿಕೆ ಕಂಪನಿ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ. ಅವಳ ಪತಿ ಕುಮಾರಣ್ಣ ಸಹಿತ ಹೆಸರಾಂತ ರಂಗನಟ. ಆತ ಕುಡಿದು, ಕುಡಿದು, ಕುಡಿದೇ ಪ್ರಾಣ ಬಿಟ್ಟಿದ್ದ. ಸಾಯುವ ದಿನವೂ ಕುಮಾರಣ್ಣ ಸೊಗಸಾಗಿ ವಿಲನ್ ರೋಲ್ ಮಾಡಿದ್ದ. ಇನ್ನೇನು ಊಟಕ್ಕೆ ಕುಳಿತು ಕೊಳ್ಳಬೇಕೆನ್ನುವಾಗ ಎದೆಗುಂಡಿಗೆ ಹಿಂಡಿ, ಜಲಜಲ ಬೆವೆತು ಹೃದಯಾಘಾತದಿಂದ ಒಂದೇ ಏಟಿಗೆ ತೀರಿಹೋಗಿದ್ದ. ಸಾಯುವ ಮುನ್ನ ಅವನು ಮಾಲೀಕರಲ್ಲಿ…” ನನ್ನ ಬೇಗಮ್ ಬದುಕಿರೋವರೆಗೂ ಪಾತ್ರ ಮಾಡ್ತಾಳೆ. ಕಂಪ್ನಿ ಬಿಡಿಸಬೇಡಿರೆಂದು ” ಅಂಗಲಾಚಿ ಬೇಡಿಕೊಂಡಿದ್ದ. ಹೆಂಡತಿಯ ತೊಡೆಯ ಮೇಲೆ ಪ್ರಾಣ ಬಿಟ್ಟಾಗ ಬೇಗಮ್ ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಕಂಡವರಿಗೆಲ್ಲ ಕರುಳು ಚುರುಕ್ಕೆಂದು ” ಪಾಪ ಇಬ್ಬರದು ಜಾತಿ ಬ್ಯಾರೇ ಬ್ಯಾರೇ ಆಗಿದ್ರು ಕುಮಾರಣ್ಣ ಪುಣ್ಯಮಾಡಿದ್ದ ಹಂಗ ನೋಡಕೊಂಡಳು ” ಅಂತ ಕಂಪನಿ ಕಲಾವಿದರೆಲ್ಲರೂ ಕಣ್ಣೀರು ಸುರಿಸಿದ್ರು. ಶಹರ ಮಾತ್ರವಲ್ಲ ದೇಶದ ತುಂಬೆಲ್ಲ ಲಾಕ್ಡೌನ್ ಘೋಷಣೆ ಆದಮೇಲಂತೂ ಬೇಗಮ್ಮಳದು ತುಂಬಾನೇ ಸಂಕಟದ ಬದುಕು. ವಾರವೊಪ್ಪತ್ತು ಅಕ್ಕಪಕ್ಕದವರು ನೆರವಾದರು. ಆಮೇಲೆ ಎದುರಾದುದು ಅವಳ ಕಣ್ಣೀರೂ ಬತ್ತಿ ಹೋಗುವಂಥ ಸಂಕಷ್ಟಗಳು. ಯಾವ ನಾಟಕದಲ್ಲೂ ಕಂಡೂ ಕೇಳರಿಯದ, ಯಾವ ಕವಿಕಲ್ಪನೆಗೂ ನಿಲುಕದ, ಊಹಿಸಲೂ ಸಾಧ್ಯವಾಗದ ನರಕಯಾತನೆ. ದೇವರುಕೊಟ್ಟ ಗಾಳಿ, ನಗರಸಭೆಯವರು ಬಿಡುತ್ತಿದ್ದ ಕೊಳಾಯಿ ನೀರೇ ಅವಳ ಪಾಲಿಗೆ ಅನ್ನ ಆಹಾರ ಏನೆಲ್ಲ ಆಗಿತ್ತು. ಮನೆ ಹೊರಗಡೆ ಹೋಗುವಂತಿಲ್ಲ. ಎಷ್ಟು ದಿನಾಂತ ನೀರು ಕುಡಿದು ಬದುಕಲು ಸಾಧ್ಯ.? ಬೀಪಿ, ಸಕ್ಕರೆ ಕಾಯಿಲೆಗೆ ಅವಳು ಸೇವಿಸುತ್ತಿದ್ದ ಗುಳಿಗೆಗಳು ಮುಗಿದು ತಿಂಗಳು ಮೇಲಾಯ್ತು. ಗುಳಿಗೆಗಳಿದ್ದರೂ ಉಪವಾಸದ ಖಾಲಿ ಹೊಟ್ಟೆಯಲ್ಲಿ ಗುಳಿಗೆ ನುಂಗುವುದು ದುಃಸಾಧ್ಯ. ಹೀಗೇ ಉಪವಾಸದಿಂದ ತಾನು ಸತ್ತು ಹೋಗುವುದು ಖಚಿತವೆಂದು, ಗಂಡನನ್ನು ಮನದಲ್ಲೇ ಮತ್ತೆ, ಮತ್ತೆ ನೆನೆದು ಕೊಂಡಳು. ಇದ್ದಕ್ಕಿದ್ದಂತೆ ರಾತ್ರಿ ಅವಳ ಫೋನ್ ರಿಂಗಾಯ್ತು. ಸಾವಿನ ಅಂಚಿನಲ್ಲಿರುವ ತನಗ್ಯಾರು ಫೋನ್ ಮಾಡ್ತಾರೆ ಅದು ಮೊಬೈಲ್ ಕಂಪನಿ ಕಾಲ್ ಇರಬಹುದೆಂದು ನಿರಾಸೆಯಿಂದ ಬೇಗ ಎತ್ತಿಕೊಳ್ಳಲಿಲ್ಲ. ” ಹಲೋ ನಾವು ಸಂಘದವರು ಮಾತಾಡ್ತಿದ್ದೀವಿ ನೀವು ಕಲಾವಿದೆ ಚಾಂದ್ ಬೇಗಮ್ ಹೌದಲ್ರೀ ? ” ಅದೆಷ್ಟೋ ದಿನಗಳ ನಂತರ ಆ ಕಡೆಯಿಂದ ಮೊದಲ ಬಾರಿಗೆ ಮನುಷ್ಯನ ಧ್ವನಿ ಕೇಳಿ, ಕಳೆದುಹೋದ ಪ್ರಾಣಪಕ್ಷಿ ಮರಳಿ ಬಂದಂಗಾಯ್ತು. ಹಾಸಿಗೆಯಿಂದ ಎದ್ದು ಕುಂತು ” ಹೌದ್ರೀ ನಾನೇ, ನಾನೇ ಬೇಗಮ್., ತಾವ್ಯಾರು ? ” ಕಣ್ತುಂಬಿ ಕೇಳಿದಳು.” ನಾವು ನಿಮ್ಮ ಅಭಿಮಾನಿಗಳು. ನಾಳೆ ನಿಮಗೆ ರೇಷನ್ ಕಿಟ್, ಚಪಾತಿ ಊಟ ತಗೊಂಡ ಬರ್ತಿದಿವಿ ನಿಮ್ಮನಿ ಅಡ್ರೆಸ್ ಹೇಳ್ರಿ”. ಕೇಳುತ್ತಿದ್ದಂತೆ, ಅಪರಿಮಿತ ಸಂತಸದ ಧ್ವನಿಯಲ್ಲಿ ವಿಳಾಸ ತಿಳಿಸಿದಳು.” ಅಬ್ಬಾ!! ದೇವರು ಇದ್ದಾನೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ” ತನಗೆ ತಾನೇ ಸಾಂತ್ವನ ಹೇಳಿಕೊಂಡಳು. ಬೆಳಕು ಹರಿಯುವುದನ್ನೇ ತದೇಕ ಚಿತ್ತದಿಂದ ಕಾಯತೊಡಗಿದಳು. ಊಟ, ನಿದ್ರೆ ಎಂಬೋದು ಕನಸಿನಲ್ಲೂ ಕಂಡಿರಲಿಲ್ಲ. ಯಾವ ಯಾವುದೋ ನಾಟಕಗಳ ಹತ್ತಾರು ನೃತ್ಯಗಳು, ಕಥನಗಳು, ಸಂಭಾಷಣೆಗಳು ಅವಳೆದುರು ಫ್ಲ್ಯಾಶ್ಬ್ಯಾಕ್ ತರಹ ಸುರುಳಿ ಸುರುಳಿಯಾಗಿ ಸುಳಿಯತೊಡಗಿದವು. ಹಸಿವಿನ ಪಾತ್ರಗಳನ್ನು ಅಭಿನಯಿಸಿ ತೋರಿಸಿದ ತನಗೆ ಹಸಿವನ್ನು ಸಾಕ್ಷಾತ್ ಬದುಕುತ್ತಿರುವ ಅಗ್ನಿಪರೀಕ್ಷೆಯ, ಕಟುಸತ್ಯದ ಅನುಭವ. ಅದ್ಯಾಕೋ ಜೋಂಪು ಹತ್ತಿದಂಗಾಯ್ತು. ಆ ಜೋಂಪಿನಲ್ಲೇ ಚಪಾತಿ ಊಟ, ರೇಷನ್ ಕಿಟ್ ಕಣ್ಮುಂದೆ ಬಂದು ನಿಂತವು. ಕೋಲ್ಮಿಂಚು ಹೊಡೆದಂಗಾಗಿ ಗಾಬರಿಯಿಂದ ಸವಂಡು ಮಾಡಿ ಎದ್ದುಕುಂತಳು. ಕಣ್ಣೊರೆಸಿಕೊಂಡು, ಹಾಳಾದದ್ದು ಹಾಳಪ್ಪುಗೆ, ಕನಸಿರಬೇಕು. ಇನ್ನೂ ಹೊತ್ತು ಹೊಂಟಿಲ್ಲ. ಆದರೂ ನಿದ್ದೆ ಮಾಡೋದೇ ಬ್ಯಾಡಂತ ನಾಟಕದ ಚೋಪಡಿಯೊಂದನ್ನು ಹಿಡಕೊಂಡು ಓದುತ್ತಾ ಕುಂತಳು. ಸಣ್ಣದೊಂದು ಸಪ್ಪಳಾದರೂ ಸಾಕು, ಸಂಘದವರು ಬಂದರೇನೋ ಎಂದು ಶಾಂತಳಾಗಿ ಕುಂತು ಬಾಗಿಲು ಬಡಿತದ ಸವುಂಡಿಗಾಗಿ ಕಾಯತೊಡಗಿದಳು. ಸಂಘದವರಿಗೆ, ಯಾವಾಗ ಬರ್ತೀರಂತ ಮತ್ತೊಮ್ಮೆ ಕೇಳಿ ಖಚಿತ ಪಡಿಸಿಕೊಳ್ಳಲು ಅವಳ ಡಬ್ಬಾ ಫೋನಲ್ಲಿ ರೊಕ್ಕಾ ಇಲ್ಲ. ಹೇಗಿದ್ದರೂ ನಾಳೆ ಸಂಘದವರು ಬರ್ತಾರೆ ಅವರ ಕಡೆಯಿಂದ ಮಿಸ್ ಕಾಲ್ ಕೊಡುವಷ್ಟಾದರೂ ಫೋನಿಗೆ ರೊಕ್ಕ ಹಾಕಿಸಿಕೊಂಡರಾಯಿತೆಂದು ಲೆಕ್ಕ ಹಾಕಿಕೊಂಡಳು. ಮುಂಜಾನೆ ಹತ್ತುಗಂಟೆಯಾದರೂ ಸಂಘದವರ ಸುಳಿವಿಲ್ಲ. ನನ್ನ ಹಣೆಬರಹ ಇಷ್ಟೇ. ನನಗೆ ಸಾವೇಗತಿ ಎಂದುಕೊಂಡು ಹಾಸಿಗೆ ಮೇಲೆ ಉರುಳಿ ಕೊಳ್ಳಬೇಕೆನ್ನುವಷ್ಟರಲ್ಲಿ ಜೀಪು, ಕಾರುಗಳ ಸವಂಡು, ಆಮೇಲೆ ಬಾಗಿಲು ಬಡಿದ ಸಪ್ಪಳಾಯಿತು. ” ಬೇಗಮ್ಮರೇ..ಚಾಂದಬೇಗಮ್ಮರೇ..” ದನಿ ಕೇಳಿದಾಗ ” ನನಗಿನ್ನು ನೂರು ವರ್ಷ ಆಯಸ್ಸು. ನಾನು ಸಾಯಲಾರೆ ” ಸಂತಸದ ನಿಟ್ಟುಸಿರು ಬಿಟ್ಟಳು. ಹೇರ್ ಡೈ ಇಲ್ಲದೇ ಪೂರ್ತಿ ಬೆಳ್ಳಗಾಗಿದ್ದ ತಲೆಗೂದಲು, ಅಸ್ತವ್ಯಸ್ತವಾಗಿದ್ದ ಸೀರೆ ಸರಿಪಡಿಸಿಕೊಂಡಳು. ಕನ್ನಡಕ ಧರಿಸಿ ಎದ್ದೇಳಬೇಕೆನ್ನುವಷ್ಟರಲ್ಲಿ ಕಣ್ಣಿಗೆ ಬವಳಿ ಬಂದಂಗಾಗಿ, ಒಂದರಗಳಿಗೆ ತಡೆದು ಬಾಗಿಲು ತೆರೆದು ಹೊರಬಂದಳು. ಮುರ್ನಾಲ್ಕು ಮಂದಿ ಮಹಿಳೆಯರು ಸೇರಿದಂತೆ ಏಳೆಂಟು ಮಂದಿ ಸಂಘದ ಕಾರ್ಯಕರ್ತರು, ಹತ್ತೊಂಬತ್ತನೇ ವಾರ್ಡಿನ ಮಾಜಿ ಕಾರ್ಪೋರೇಟರ್ ಕಟ್ಟೀಮನಿ, ಅವರ ಅನುಯಾಯಿಗಳು . ಅವರನ್ನೆಲ್ಲ ನೋಡಿದ ಅವಳಿಗೆ ಸಂಜೀವಿನಿ ಪರ್ವತವನ್ನೇ ನೋಡಿದಷ್ಟು ಸಂತಸ, ಸಂಭ್ರಮ ಪಟ್ಟಳು. ಅವರೆಲ್ಲ ಮುಖಕ್ಕೆ ಕಟ್ಟಿಕೊಂಡಿದ್ದ ಮಾಸ್ಕ್ ತೆಗೆದು ಎಲ್ಲರೂ ಸಾಲಾಗಿ ನಿಂತರು. ನಡುವೆ ನಿಲ್ಲಿಸಿದ್ದ ಕಲಾವಿದೆ ಚಾಂದಬೇಗಮ್ಮಳ ಕೈಗೆ ಚಪಾತಿ ಊಟದ ಬಾಕ್ಸ್, ಮುಂದೆ ರೇಷನ್ ಕಿಟ್ ಇಟ್ಟರು. ಫೋಟೋಗ್ರಾಫರ್ ಗಣೇಶನಿಗೆ ಫೋನ್ ಮೇಲೆ ಫೋನ್ ಮಾಡುತ್ತಲೇ ಇದ್ದರು. ಅರ್ಧಗಂಟೆ ಕಾಯ್ದು ಕಾಯ್ದು ಸುಸ್ತಾಗಿ ಮೊಬೈಲ್ ಫೋಟೋಗಳೇ ಗತಿಯಾದವು ಅನ್ನೋವಾಗ ಫೋಟೋಗ್ರಾಫರ್ ಬಂದ. ಬಗೆ ಬಗೆಯ ಏಳೆಂಟು ಫೋಟೊ ತೆಗೆಸಿಕೊಂಡರು. ಮಾಜಿ ಕಾರ್ಪೊರೇಟರ್ ಕಟ್ಟೀಮನಿ, ಬೇಗಮ್ ಅಭಿನಯಿಸಿದ ಸಿನೆಮಾ, ನಾಟಕಗಳ ಪಾತ್ರಗಳನ್ನು ಕೊಂಡಾಡಿದ. ಕಲಾವಿದೆಗೆ ಸಂತಸದ ಸಮುದ್ರದಲ್ಲಿ ತೇಲಿಹೋದ ಪರಮಾನಂದ. ಕೊರೊನಾ ಸಂತ್ರಸ್ತರಿಗೆ ಪ್ಯಾಕೇಜ್ ತಲುಪಿಸಲು ಕೊಟ್ಟ ಕಾರ್ಪೊರೇಟ್ ಕಂಪನಿಗೆ ನೆರವಿನ ವಿಡಿಯೋ ಮತ್ತು ಫೋಟೋ ತಲುಪಿಸಿದರೆ ಸಾಕಿತ್ತು. ಕಟ್ಟೀಮನಿ ಟೀಮ್ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿತ್ತು. ಸಂಘದವರೆಲ್ಲರೂ ತಮ್ಮ ಕಾರು, ಜೀಪುಗಳತ್ತ ಚಲಿಸುತ್ತಿದ್ದರು. ಇನ್ನೇನು ಬೇಗಮ್ ಮನೆಯೊಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಅವರಲ್ಲೊಬ್ಬ ಓಡೋಡಿ ಬಂದು ಕಾರ್ಪೊರೇಟರಣ್ಣ ಹೇಳಿ ಕಳಿಸಿದ್ದು ” ಅಮ್ಮಾ ತಪ್ಪು ತಿಳ್ಕೊಬೇಡ್ರಿ, ಮುಂದಿನ ಓಣಿಯಲ್ಲಿ ಇನ್ನೊಬ್ಬ ಕಲಾವಿದೆ ಇದ್ದಾರೆ. ಅವರಿಗೂ ಚಪಾತಿ ಊಟದ ಬಾಕ್ಸ್ , ರೇಷನ್ ಕಿಟ್, ಕೊಟ್ಟಂಗ ಮಾಡಿ ಫೋಟೋ ತೆಗೆಸಿಕೊಂಡು ವಾಪಸ್ ನಿಮಗೇ ತಂದು ಕೊಡುವುದಾಗಿ” ಹೇಳಿ ಇಸ್ಗೊಂಡು ಹೋದ. ಹಾಗೆ ಹೋದವರು ಸಂಜೆ, ರಾತ್ರಿಯಾದರೂ ಮರಳಿ ಬರಲೇ ಇಲ್ಲ. ಊಟದ ಬಾಕ್ಸ್, ರೇಷನ್ ಕಿಟ್ ತರಲಿಲ್ಲ. ಕಲಾವಿದೆಯ ಉಪವಾಸಕ್ಕೆ ಅಂತ್ಯವಿಲ್ಲದಂತಾಯಿತು. ಹಿರಿಯ ರಂಗಚೇತನ ಚಾಂದಬೇಗಮ್ ತನ್ನೊಳಗಿನ ಎಲ್ಲ ಚೈತನ್ಯಗಳನ್ನು ಅಕ್ಷರಶಃ ಕಳಕೊಂಡಳು. ಸಂತ್ರಸ್ತ ಕಲಾವಿದೆಗೆ ನಕಲಿ ನೆರವಿನ ಪ್ರಕ್ರಿಯೆಯ ಮೊಬೈಲ್ ವಿಡಿಯೋ ಮಾಡಿಕೊಂಡಿದ್ದ ಸಂಘದ ಸದಸ್ಯನೊಬ್ಬನಿಂದ ವಿಡಿಯೋ ವೈರಲ್ಲಾಗಿ ಮರುದಿನ ಪತ್ರಿಕೆ, ಟೀವಿಗಳಲ್ಲಿ ಸಂತ್ರಸ್ತ ಹಿರಿಯ ಕಲಾವಿದೆಗೆ ಆಗಿರುವ ಅವಮಾನದ ಸಚಿತ್ರ ಕಥೆ, ಮೋಸದ ಜಾಲ ಬಯಲಾಯಿತು. ರಾಜ್ಯಾದ್ಯಂತ ದೊಡ್ಡ ಸುದ್ದಿಯಾಯಿತು. ಹಿರಿಯ ಕಲಾವಿದೆಗೆ ಆಗಿರುವ ಅನ್ಯಾಯ, ಅವಮಾನ ಖಂಡಿಸಿ ಹೇಳಿಕೆಗಳ ಮೇಲೆ ಹೇಳಿಕೆಗಳು ಕೇಳಿಬಂದವು. ಅದೆಲ್ಲವನ್ನು ಮೂಕವಿಸ್ಮಿತಳಾಗಿ ಗಮನಿಸಿದ ಕಿರುತೆರೆಯ ಹೆಸರಾಂತ ತಾರೆ ಮಹಾನಂದಾ ಒಂದುಲಕ್ಷ ಹಣದೊಂದಿಗೆ ಬಗೆ, ಬಗೆಯ ಊಟ, ತಿಂಡಿ, ತಿನಿಸು ಸಿದ್ದಪಡಿಸಿಕೊಂಡು, ಬೀಪಿ, ಶುಗರ್ ಕಾಯಿಲೆಗೆ ಸಂಬಂಧಿಸಿದ ಹತ್ತಾರು ಬಗೆಯ ಗುಳಿಗೆ ಪೊಟ್ಟಣಗಳ ಕಟ್ಟುಗಳು, ಒಂದು ಬಾಕ್ಸ್ ಕೊರೊನಾ ರಕ್ಷಾಕವಚದ ಮಾಸ್ಕ್ ಸಮೇತ ಕಾರಲ್ಲಿ ತನ್ನ ಗೆಳತಿಯರೊಂದಿಗೆ ಕಲಾವಿದೆ ಚಾಂದಬೇಗಮ್ಮಳನ್ನು ಹುಡುಕಿಕೊಂಡು ಗಣೇಶ ಪೇಟೆಯ ಅವರ ಮನೆ ಬಾಗಿಲಿಗೆ ಬಂದರು. ತನ್ನ ಜೀವಮಾನದಲ್ಲಿ ರಂಗಭೂಮಿಯ ಹಿರಿಯ ಕಲಾವಿದೆಗೆ ನೆರವಾಗುವ ಅವಕಾಶ, ಸಂತಸ, ಸಂಭ್ರಮ ಮಹಾನಂದಾಗೆ. ಮಹಾನಂದಾ ಮತ್ತು ಆಕೆಯ ಗೆಳತಿಯರು ನಾಕೈದು ಬಾರಿ ಜೋರಾಗೇ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ. ಅನುಮಾನಪಟ್ಟು ಅಕ್ಕಪಕ್ಕದ ಜನರನ್ನು ಕೇಳಿದರೂ ಅವರು ಸರಿಯಾದ ಮಾಹಿತಿ ಹೇಳಲಿಲ್ಲ. ಅಷ್ಟೊತ್ತಿಗೆ ಮಾಧ್ಯಮದವರು ಬಂದರು. ಆಗ ನೋಡಿ ಜನ ಒಬ್ಬೊಬ್ಬರೇ ಕ್ಯಾಮರಾ ಮುಂದೆ ಬರಲು ನಾಮುಂದು ತಾಮುಂದು ಎಂದು ಸೀರೆಯ ಸೆರಗು, ಅಂಗಿಯ ಕಾಲರು, ತಲೆಯ ಕ್ರಾಪು
ಕೊರೊನಾ ಮತ್ತು ಕಲಾವಿದೆ ಬೇಗಂ… Read Post »
ಪ್ರಕೃತಿ ಪಾರ್ವತಿ ಸಪ್ನಾ ಶತಮಾನಗಳ ಲೆಕ್ಕವಿಲ್ಲದೇಇದ್ದಲ್ಲೇ ಇದ್ದು ಸತತವಾಗಿಮಾನವನ ಕೈಯಲ್ಲಿನಾಶವಾಗುತ್ತಿರುವ ಪ್ರಕೃತಿಕೇಳಲಿಲ್ಲನಾನು ಯಾರೆಂದು ! ಕರಿಮೋಡ ಸುತ್ತುತ್ತಲೇ ಇದೆನೀಲಿ ಬಾನು ಇದ್ದಲ್ಲೇ ಇದೆಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲಆದರೂ ನಮ್ಮನೆಂದು ಕೇಳಲಿಲ್ಲ.ನಾನು ಯಾರೆಂದು ! ಕೋಟಿ ಜೀವ ರಾಶಿಗೆಜಲವೇ ಬೇಕು ಭೂಮಿಗೆದಾಹ ನೀಗಿ ಬದುಕ ಕೊಟ್ಟುಕಡಲ ಸೇರುವ ನೀರಿಗೆಈಗಲೂ ಅರಿವಿಲ್ಲ ನೋಡುನಾನು ಯಾರೆಂದು ! ಏನೇನೂ ಅಲ್ಲದತನ್ನ ಮೂಲ ತಿಳಿಯದಮಾನವೀಯತೆ ಮರೆತುಯಾರೊಂದಿಗೂ ಬೆರೆಯದಮಾನವ ಜನ್ಮವೇಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ ನಾನು ಯಾರೆಂದು ! *********************
ಓಲೆ ಮರೆತರೆ ನಿನ್ನ ಮಡಿವೆನು ಚಿನ್ನ! ಜಯಶ್ರೀ.ಜೆ. ಅಬ್ಬಿಗೇರಿ ಬೆಳದಿಂಗಳ ರಾತ್ರಿಯ ಪೂರ್ಣ ಚಂದಿರನ ಮೊಗ ನೋಡಿದಾಗೊಮ್ಮೆ ನಿನ್ನ ಮುಖವನ್ನೇ ನೋಡಿದಂತೆ ಅನಿಸುತ್ತದೆ. ನೀನೇನು ಚಂದಿರನ ಮಗಳಾ ಎನ್ನುವ ಸಂಶಯ ಮನದಲ್ಲಿ ಕಾಡುತ್ತದೆ. ನಿನ್ನ ಹತ್ತಿರ ಅದೇನೋ ಮಾಯಾ ಶಕ್ತಿ ಇದೆ ನಿನ್ನನ್ನೇ ನೋಡೋಕೆ ಮನಸ್ಸು ಕಾತರಿಸುತ್ತದೆ. ಈ ಹಿಂದೆ ನೂರು ನೂರು ಸುಂದರಿಯರನ್ನು ಕಂಡ ಕಣ್ಣು ಹೀಗೆ ಹಟ ಹಿಡಿದಿರಲಿಲ್ಲ. ಸ್ವಭಾವದಲ್ಲಿ ತುಂಬಾ ಮೌನಿ ನಾನು. ಮರುಭೂಮಿಯಲ್ಲಿ ಗುಲಾಬಿ ಹೂ ಅರಳಿದಂತೆ ಅರಳಿದ ನಿನ್ನ ಕೆಂದುಟಿಗಳ ಕಂಡಾಗಿನಿಂದ ಅರಳು ಹುರಿದಂತೆ ಮಾತಾಡ್ತಿದೀನಿ. ಇದನ್ನು ಕಂಡು ನನ್ನ ಗೆಳೆಯರೆಲ್ಲ ನನಗೆ ಏನೋ ಆಗಿದೆ ಅಂತ ಚುಡಾಯಿಸ್ತಿದಾರೆ. ನೀನು ಕೈಗೆ ಸಿಗುತ್ತಿಯೋ ಇಲ್ಲವೋ ಎನ್ನುವ ಚಿಂತೆಯ ನೂರಾರು ಹಕ್ಕಿಗಳು ಮೊಟ್ಟೆಯಿಡತೊಡಗಿವೆ. ಪ್ರೀತಿಯ ಗಾಳಕ್ಕೆ ಬಿದ್ದಿದ್ದೇನೆ. ಹಾಗಂತ ಮೊದಲ ಪ್ರಯತ್ನದಲ್ಲೇ ಪ್ರೀತಿ ಫಲಿಸುತ್ತದೆ ಅನ್ನೋ ಖಾತ್ರಿ ಇರಲಿಲ್ಲ. ಎಷ್ಟು ಕೋಟಿ ಕ್ಷಣಗಳನ್ನು ನಿನ್ನ ಒಲವಿನ ಕೊಳದಲ್ಲಿ ಎಸೆಯಬೇಕೋ ಗೊತ್ತಿಲ್ಲ. ನಾನೀಗ ಮತ್ತಷ್ಟು ಒಲವಿನ ಬಲೆಯಲ್ಲಿ ಬೀಳಲಿದ್ದೇನೆ ಎನ್ನುವುದಷ್ಟೇ ಸದ್ಯಕ್ಕೆ ಖಾತ್ರಿಯಿರುವ ಏಕ ಮಾತ್ರ ಸಂಗತಿ. ನಿನಗಾಗಿ ಕಾಯುವ ಈ ಸಮಯದಲ್ಲಿ ಗಡಿಯಾರ ಯಾರು ಕಂಡು ಹಿಡಿದರು ಅಂತ ಕೋಪಿಸಿಕೊಳ್ಳುತ್ತೇನೆ. ಅದಾವುದೋ ಗಳಿಗೆಯಲ್ಲಿ ಸೋಕಿದ ನಿನ್ನ ನವಿರಾದ ಬೆರಳುಗಳ, ತಾಕಿದ ಭುಜಗಳ ದೃಶ್ಯ ಕಣ್ರಪ್ಪೆಯಲ್ಲಿ ಜೋಕಾಲಿಯಂತೆ ಇಂದಿಗೂ ಓಲಾಡುತ್ತಿದೆ. ಮಳೆಗಾಲದ ಒಂದು ದಿನ ತುಂಬಾ ಚಳಿಯಿತ್ತು. ಚಿಕ್ಕ ಮಲ್ಲಿಗೆ ಮಾಲೆಯ ನೀಳ ಜಡೆಯೊಡತಿ ನೀನು ಎದುರಾಗಿ ಕಾಲೇಜಿನ ಪಾರ‍್ಕಿನಲ್ಲಿ ಕುಳಿತಿದ್ದೆ. ಮೊದಲ ನೋಟದಲ್ಲೇ ನಿನ್ನ ಮೇಲೆ ಒಲವಿನ ಭಾವಕೋಶದ ಅಂಶವೊಂದು ಅಂಕುರಿಸಿತು. ಕಲ್ಪನೆಯ ಸುಂದರಿ ಒಮ್ಮೆಲೇ ಎದುರಾದರೆ ಈ ಬಡ ಹೃದಯದ ಗತಿ ಏನಾಗಬೇಡ? ಜಡಿ ಮಳೆಯ ಮುನ್ಸೂಚನೆಯಂತೆ ಒಂದೊಂದೇ ತುಂತುರು ಹನಿ ಶುರುವಾಗಿತ್ತು.ಪಕ್ಕದಲ್ಲಿಯೇ ಇದ್ದ ಗೆಳೆಯನನ್ನು ಆತುರದಿಂದ ತಿವಿಯ ತೊಡಗಿದೆ. ನಾನು ತುಂಬಾ ತಳಮಳಕ್ಕೆ ದುಗುಡಕ್ಕೆ ಯೋಚನೆಗೆ ಒಳಗಾಗಿದ್ದೇನೆ ಎಂದು ತಿಳಿದ ಗೆಳೆಯ,’ಈ ಹಿಂದೆ ಎಂದೂ ನೀ ಹೀಗೆ ಆಡಿರಲಿಲ್ಲ. ನಿನಗೂ.. . . .’ ಎಂದು ಕಿಚಾಯಿಸಿ ಅಲ್ಲಿಂದ ಕಾಲ್ಕಿತ್ತ. ಮಲ್ಲಿಗೆ ಗಂಧ ಒಂದೆಡೆ ಬೆರೆಯಲು ಸಿಹಿ ಜೇನು ಮನಸ್ಸುಗಳು ಮಿಡಿಯಲು ಅನುವು ಮಾಡಿ ಹೋದನೇನೋ ಎನಿಸಿತು.ಈಗಲೇ ವಯಸ್ಸು ಇಪ್ಪತ್ತೈದಕ್ಕೆ ಮೂರು ಮೆಟ್ಟಿಲು ದೂರದಲ್ಲಿದೆ. ಇದೇ ಒಲವಿನ ಗಾನಕೆ ತಲೆದೂಗುವ ವಸಂತಕಾಲ ಎಂದು ನಕ್ಕಿತು ಒಳ ಮನಸ್ಸು. ಮೊದ ಮೊದಲು ನೋಟ್ಸ್ಗಾಗಿ ಮಾತು ಕತೆ ನಡೆಯುತ್ತಿತ್ತು. ನಂತರ ಅದು ಇದು ಮಾತು ಬೆಳೆಯಿತು. ಸಂಕೋಚವಿಲ್ಲದ ಮಾತುಗಳು ಶುರುವಾದವು. ಗೆಳತನವಾದ ಮೇಲೆ ಇಬ್ಬರೂ ಸಾಕಷ್ಟು ಆತ್ಮೀಯರಾಗ ತೊಡಗಿದೆವು. ತಂಪಾದ ದಿನವೊಂದರಲ್ಲಿ ಅನುರಾಗದ ಕೋರಿಕೆ ಮುಂದಿತ್ತಾಗ ನಗುವಿನಲ್ಲೇ ಒಪ್ಪಿಗೆ ಸೂಚಿಸಿದ್ದೆ. ಮನವು ಒಲವಿನ ಕಡಲಲ್ಲಿ ತೇಲಿದಂತೆನಿಸಿತು. ಬಾನೆತ್ತರಕ್ಕೆ ಹೃದಯ. ಹಾರಿತು ಆನಂದ ಕಂಬನಿ ಸುರಿಯಿತು. ‘ಬಿಡದಿರು ಎಂದೆಂದೂ ಈ ಕೈಯನು ಹೃದಯದ ಹಸಿರು ತೋಟದಲ್ಲಿ ಒಲವಿನ ವಿನಿಮಯಕೆ ಕಾಯುವೆ.’ ಎಂದೆ ನೀನು. ಯಾವ ಕೋನದಲ್ಲೂ ನೀನಾಡಿದ ಮಾತು ನಾಟಕೀಯ ಅನಿಸಲೇ ಇಲ್ಲ. ಅಂದಿನಿಂದ ನನ್ನೆದೆಯ ತೋಟದ ಹೂವಾದೆ. ಉಸಿರನು ನಿನ್ನ ಹೆಸರಿಗೆ ಬರೆದೆ. ಅಕ್ಕನ ಮದುವೆಗಾಗಿ ಅಪ್ಪ ಮಾಡಿಟ್ಟ ಸಾಲ ತೀರಿಸುವುದು ನನ್ನ ತಲೆ ಮೇಲೆ ಬಿದ್ದಿತ್ತು. ಯಾರನ್ನು ಕೇಳುವುದು? ಗೆಳೆಯರ‍್ಯಾರು ಅಷ್ಟು ಹಣ ಕೊಡುವಷ್ಟು ಸ್ಥಿತಿವಂತರಲ್ಲ. ಸ್ಥಿತಿವಂತ ಬಂಧುಗಳನ್ನು ಕೇಳಬೇಕೆಂದರೆ ಹಣಕ್ಕಾಗಿ ಹಲ್ಲು ಗಿಂಜುತ್ತಾನೆ ಎನ್ನುತ್ತಾರೇನೋ ಎಂಬ ಸ್ವಾಭಿಮಾನ. ಬಾಯ್ತೆರೆದು ಕೇಳುವಂಥ ಆತ್ಮೀಯರೆದರು ನಿಲ್ಲಲು ಧರ‍್ಯ ಸಾಲುತ್ತಿಲ್ಲ.ಇನ್ನು ಬ್ಯಾಂಕ್ ಕೌಂಟರ್‌ಗಳಿಗೋ ಇಲ್ಲ ಫೈನಾನ್ಸ್ ಬಾಗಿಲಿಗೆ ಎಡತಾಕೋಣವೆಂದರೆ ಆ ಪಾಟಿ ಬಡ್ಡಿ ನನ್ನಿಂದ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಈ ಚಿಂತೆಯ ಹೊದಿಕೆಯನ್ನು ಸರಿಸಿ ಹೊರ ಬರುವುದು ಹೇಗೆ ಎಂಬುದು ತಲೆಯಲ್ಲಿ ಕಟ್ಟಿಗೆ ಹುಳುವಿನಂತೆ ಕೊರೆಯುತ್ತಿತ್ತು. ಅಪ್ಪ ಕೊಡುತ್ತಿದ್ದ ಹಣದಲ್ಲಿ ಬದುಕುತ್ತಿದ್ದ ದಿನಗಳಿಗೆ ಕೊನೆಗೊಂಡು ಪೈಸೆ ಪೈಸೆಗೂ ಲೆಕ್ಕಾಚಾರ ಹಾಕುವ ಬದುಕು ಕಣ್ಮುಂದಿತ್ತು.ಕಾಡಿನಲ್ಲಿ ಕಳೆದು ಹೋದ ಒಂಟಿ ಸಣ್ಣ ಮಗುವಿನಂತಾಗಿತ್ತು ನನ್ನ ಸ್ಥಿತಿ. ಇದನ್ನೆಲ್ಲ ಸಣ್ಣನೆಯ ದನಿಯಲ್ಲಿ ಪರಿಹಾರಕ್ಕಾಗಿ ಕೊನೆಯ ಪ್ರಯತ್ನವೆಂಬಂತೆ ನಿನ್ನ ಮುಂದೆ ಒಂದೇ ಉಸಿರಲ್ಲಿ ಉಸಿರಿದೆ. ‘ಸಂಯಮ ಮೀರಿದವನು ಜಡ ವಸ್ತುವಿಗೆ ಸಮ.’ ನನ್ನ ಮಾತಿನಿಂದ ನಿನಗೆ ಕೊಂಚ ನೋವಾಗಬಹುದು. ಅದನ್ನು ಭರಿಸುವ ಶಕ್ತಿ ನಿನ್ನಲ್ಲಿದೆ ಎಂದು ನನಗೆ ಗೊತ್ತು. ಆರ‍್ಥಿಕವಾಗಿ ಸುಭದ್ರವಾಗಿದ್ದರೆ ಸಂತಸದಲ್ಲಿರುತ್ತೇವೆ ಎನ್ನುವುದನ್ನು ಮನಸ್ಸಿನಿಂದ ತೆಗೆದು ಹಾಕು. ‘ಕಷ್ಟಗಳೇ ಮನುಷ್ಯನನ್ನು ಸಂತಸದ ಕಡಲಿಗೆ ನೂಕುತ್ತವೆ.’ಆರ‍್ಥಿಕ ಸಮಸ್ಯೆಗಳಿಗೆ ದುಡಿಮೆ ಬಿಟ್ಟು ಬೇರೆ ದಾರಿ ಯಾವುದೂ ಫಲಿಸುವುದಿಲ್ಲ. ಕಾಲೇಜು ಹೇಗಿದ್ದರೂ ಮಧ್ಯಾಹ್ನ ಒಂದು ಗಂಟೆಗೆ ಮುಗಿಯುತ್ತದೆ.ಅದರಾಚೆಗೆ ಅಲ್ಲಿ ಇಲ್ಲಿ ಹಾಳು ಹರಟೆ ಬಿಟ್ಟು ಪಾರ‍್ಟ್ ಟೈಂ ಕೆಲಸಕ್ಕೆ ಸೇರಿಕೋ.ನಿನ್ನಲ್ಲಿರೋ ಬುದ್ಧಿವಂತಿಕೆಗೆ ಒಳ್ಳೆಯ ಕೆಲಸ ಸಿಕ್ಕೇ ಸಿಗುತ್ತದೆಂದು ನನ್ನ ಮನಸ್ಸಿನ ಗೊಂಬೆಗೆ ಕೀಲಿ ಕೊಟ್ಟೆ. ಕೆಲಸ ಹುಡುಕುವ ಕೆಲ ಪ್ರಯತ್ನಗಳು ವಿಫಲವಾದಾಗ ಧೈರ‍್ಯವನ್ನೂ ತುಂಬಿದೆ.ಒಂದು ಶುಭ ದಿನ ಕೆಲಸ ಕೈಯಲ್ಲಿತ್ತು. ಪ್ರತಿಷ್ಟಿತ ಸಂಸ್ಥೆಯಾದ್ದರಿಂದ ಸಂಬಳವೂ ಚೆನ್ನಾಗಿಯೇ ಇತ್ತು. ಸಾಲ ಬರಬರುತ್ತ ಕರಗತೊಡಗಿತು. ನನ್ನ ಶ್ರದ್ಧೆಯ ದುಡಿಮೆಗೆ ಸಂಸ್ಥೆಯ ಯಜಮಾನರು ನೌಕರಿ ಖಾಯಂಗೊಳಿಸಿದರು. ಪ್ರೀತಿಸಿದವಳು ಬರೆದ ಜೀವನದ ಕಥೆಯಲ್ಲಿ ಮೂರು ವರ‍್ಷದಲ್ಲಿ ಬದುಕು ನಡೆಸುವ ನಾವಿಕನಾದೆ ಎನ್ನೋದೇ ಹೆಮ್ಮೆ.ಭದ್ರತೆ ಸಾಧಿಸಿದ ಬದುಕಿನ ಪ್ರತಿಬಿಂಬದಂತೆ ಬೀಗುತ್ತಿದ್ದೇನೆ. ಬಾಳ ದೀವಿಗೆ ಹಚ್ಚಿದ ಪ್ರೀತಿ ದೇವತೆ ನೀನು ಎಂದು ಉಲಿಯುತ್ತಿದ್ದೇನೆ. ಆ ಮೊಹಕ ಮುಸ್ಸಂಜೆ ನನಗಿನ್ನೂ ನೆನಪಿದೆ. ನಮ್ಮ ಮಾಮೂಲಿ ಪಾರ‍್ಕಿನಲ್ಲಿ ನಿನಗಾಗಿ ಕಾಯುತ್ತಿದ್ದೆ. ಕರಿ ಮೋಡಗಳು ವಿಚಿತ್ರ ಶಾಖದಲ್ಲಿ ಹನಿ ಹನಿ ಮಳೆ ಸುರಿಸತೊಡಗಿದ್ದವು.ಇದ್ದಕ್ಕಿದ್ದಂತೆ ಸುಮಧುರ ಘಮ ಸೂಸುತಿರುವಂತೆ ಭಾಸವಾಯಿತು.ಗಿಡದಂಚಿನಲ್ಲಿ ಮೈಬಿರಿಯಲು ಸಿದ್ಧವಾಗಿರುವ ಮೊಗ್ಗಿನಂತೆ ದೂರದಲ್ಲೇ ನಿಂತಿದ್ದ ನಿನ್ನ ಪಕ್ಕ ಬಂದು ನಿಂತೆ. ಇಷ್ಟು ಹೊತ್ತಿನಿಂದ ತಯಾರಿ ಮಾಡಿಕೊಂಡ ಮಾತೊಂದನ್ನು ನನಗಷ್ಟೇ ಕೇಳುವಂತೆ ‘ಮನೆಯಲ್ಲಿ ನನಗೆ ಗಂಡು ನೋಡುತ್ತಿದ್ದಾರೆ.’ ಎಂದು ಪಿಸುಗುಟ್ಟಿ ನನ್ನ ಕೈ ಹಿಡಿದೆ. ನಿನ್ನ ಹಿತವಾದ ಸ್ಪರ್ಶ ಮೈಗೆ ವಿದ್ಯತ್ ಪುಳಕವನ್ನು ಕೊಟ್ಟಿತು. ಸಟ್ಟನೆ ಹೆಗಲ ಮೇಲೆ ಕೈ ಹಾಕಿ ಇನ್ನೊಂದು ಕೈಯಿಂದ ಬಳಸಿದೆ. ಕೊರಳಿಗೆ ಎರಡೂ ಕೈಗಳನ್ನು ಜೋತು ಹಾಕಿದೆ. ಸ್ನೇಹದಿ ಸಮ್ಮೋಹಿಸಲು ಮುದ್ದಾಡಲು ಮುಂದಾದಾಗ ‘ತಂಟೆ ಮಾಡುವ ತುಂಟ ನೀನು.’ ಮನಸ್ಸು ಹೇಗೇಗೋ ಜಾರುವುದು ಅದರ ಕೈಗೊಂಬೆ ಆಗುವುದು ಬೇಡ ಚೆಲುವ. ಆತುರ ಬೇಡ ಅವಸರ ಬೇಡ ಪ್ರೀತಿಗೆ. ತುಟಿಗಳೆರಡು ಭಯದಲ್ಲಿ ನಿಂತು ಹೆಚ್ಚಿಸಲಿ ಹೃದಯಗಳ ವೇಗ ಎಂಬ ಕನಸಿನ ಚಿಗುರು ನನ್ನಲ್ಲೂ ಇದೆ. ಒಲವಿನ ಹೊನ್ನ ಹೊಳೆ ನನ್ನೆದೆಯಲ್ಲೂ ಹರಿಯುತಿದೆ. ಎನ್ನುತ್ತ ಕೈ ಬಿಡಿಸಿಕೊಂಡು ಓಡಿದೆ. ‘ಎಷ್ಟಾದರೂ ಹೆಣ್ಣು ಜೀವವಲ್ಲವೇ ನಾಚಿಕೆಯೇ ಆಭರಣ ಈ ಜೀವಕೆ.’ ಎಂದುಕೊಂಡೆ. ದೇವರ ಕೃಪೆಯಿರಬಹುದು ನೀ ನನಗಾಗಿ ಮೀಸಲಿರುವೆ. ನನ್ನತ್ತೆ ಮಾವನೊಂದಿಗೆ ಮಾತು ಕತೆ ಆಗಿದೆ. ಹಸಿರು ನಿಶಾನೆಯೂ ದೊರೆತಾಗಿದೆ. ಸಿಗುವೆ ಮದುವೆ ಮಂಟಪದಲ್ಲೇ ‘ಜನುಮದ ಗೆಳತಿ ಉಸಿರಿನಾ ಒಡತಿ ಮರೆತರೆ ನಿನ್ನ ಮಡಿವೆನು ಚಿನ್ನ.’ ಎಂಬುದು ಮನದ ಹಾಡಾಗಿದೆ. ನಿನ್ನ ಸ್ನಿಗ್ದ ಸೌಂದರ‍್ಯದ ಸುಮಧುರ ಪರಿಮಳದ ತನುವಿನೊಂದಿಗೆ ಪ್ರತಿ ಇರುಳು ಬಿಡದೇ ಒಲವಿನಾಟದಲಿ ಬೆರೆಯುವೆ.ಆ ಖುಷಿಯಲಿ ಒಂದಾಗಲು ನೀನೂ ಸಿದ್ಧಳಾಗಿರು ಚೆಲ್ವಿ. ****************************************
ಹುಡುಗ ನೀ ಸಾಯಬೇಕಿತ್ತು ಲಕ್ಷ್ಮೀ ಪಾಟೀಲ್ (ಶ್ರೀ ಕೆ ವಿ ಅಯ್ಯರ್ ಬರೆದಿರುವ “ರೂಪದರ್ಶಿ “ಕಾದಂಬರಿಯಲ್ಲಿ ಬರುವ ” ಆರ್ನೆಸ್ಟ್” ನನ್ನು ಕುರಿತ ಕವಿತೆಯಿದು) ಹೊಟ್ಟೆಯಲ್ಲೇ ಅಪ್ಪ ಅಮ್ಮರಿಗಾಗಿಗೋರಿಗರಸ ಎಬ್ಬುವಾಗ ಹಾಳಮಣ್ಣ ಹಾಸಿನಲ್ಲಿಭ್ರಮೆಯ ಬದುಕು ಬಿಕ್ಕುವ ಮುನ್ನಹುಡುಗ ನೀ ಸಾಯಬೇಕಿತ್ತು ಅಜ್ಜಿಯ ಪೊರೆವ ಬಾಂಧವ್ಯದಲ್ಲಿಬದುಕನ್ನು ಒದ್ದೆಯಾಗಿಸಿಕೊಳ್ಳುವಾಗಅವಳ ನೋವಿಗೆ ಬಾಲ ಕನಸುಗಳತೇಪೆ ಜೋಡಿಸುವಾಗ ದೂರ ದುರಂತ ಕಾಣದ ಮುನ್ನಹುಡುಗ ನೀ ಸಾಯಬೇಕಿತ್ತು ಕೈಯಾಡಿಸಿದ ಕೈಗೆ ಬಾಲ ಭಾವದ ಹಾಲು ಗೆಣ್ಣೆಅಪರೂಪದ ಬಾಲ ಯೇಸುವಿನ ವಿರಾಜತೆಮೈಕಲ್ ಏಂಜಲೋನ ದಿವ್ಯ ಅಪ್ಪುಗೆಯ ತಂಪೇಅಮರ ಶಿಲ್ಪಿಯ ನಿರೀಕ್ಷೆಯ ಕಕ್ಷೆ ಯಲ್ಲಿ ಅಪರಂಜಿಯಾದ ಪ್ಲಾರೆನ್ಸ್ ಪಟ್ಟಣದ ಜಾಜಿಯೇಸಂದ ಭಾಗ್ಯ ಸರಿದು ಹೋಗುವ ಮುನ್ನಹುಡುಗ ನೀ ಸಾಯಬೇಕಿತ್ತು ಒಡೆಯನರಮನೆಯಲ್ಲಿ ಸರ್ಪ ಪೀಠದ ಉತ್ತರಾದಿಕಾರ ವಿಸಂಚಿನ ಮಜಭೂತ ಅಮಲಿನಲ್ಲಿ ನಿನ್ನ ಕೌಮಾರ್ಯಯೌವ್ವನವೆಲ್ಲ ಜಾದುವಾಗುವ ಮುನ್ನಹುಡುಗ ನೀ ಸಾಯಬೇಕಿತ್ತು ಲೀಸಾ ನನ್ನೆಟ್ಟಿ ದಂಪತಿಗಳ ಆಸರೆಯಲ್ಲಿಹದುಳಿದ್ದೆ ಆ ಕ್ಷಣ ಕಾಲೋಂದು ಕೈಯೊಂದು ಕಡೆಎಳೆದು ಭೀಕರ ಆವಾಂತರಗಳಲ್ಲಿ ಸಿಗಿತಅದೇ ದಿವಾಳಿಯನ್ನು ಪಥ್ಯವೆಂದು ನುಂಗುವ ಮುನ್ನ ಹುಡುಗ ನೀ ಸಾಯಬೇಕಿತ್ತು ಹೆಗ್ಹೇಗೋ ತಿರುಗಾಡಿ ಗ್ಯಾರಿಬಾಲ್ಡಿಯ ವ್ಯಂಗ್ಯನಾಗಿ ಬದುಕ ಪರದೇಶಿಯಾದ ಹುಡುಗಜಗತ್ತು ಪ್ರೀತಿಸದ ನತದೃಷ್ಟ ತಲೆ ಎದೆ ಸೀಳಿದಜುದಾಸನ ಭಂಗಿಯಲ್ಲಿ ಮತ್ತದೇ ಮೈಕಲ್ ನಅಪೇಕ್ಷಿತ ಅನುವರ್ತಿ ಬಾಲಯೇಸುವಿಗೆ ರೂಪದರ್ಶಿ ಅರ್ನೆಸ್ಟ ಈಗ ಜುದಾಸನತಲೆಹಿಡುಕಕ್ಕೂ ಮಾದರಿ !ಜುದಾಸ್ ಅಲ್ಲನೆಂಬ ನಿರ್ಲಿಪ್ತತೆಮತ್ತದೇ ಹಸುಗೂಸಿನ ಮುಗ್ಧತೆನಿಂತ ನೆಲ ಬಿರಿದಂತೆ ಅಟ್ಟವೇ ಕುಸಿದಂತೆದೇವಶಿಲ್ಪಿಯ ಅಂಗೈಯಲ್ಲಿ ಜೀವಬಿಟ್ಟ ಮಗು“ಪಾಪದಿಂದ ದೂರವಿರು ಪಾಪಿಯಿಂದಲ್ಲ “ಏಸುವಿನ ದಿವ್ಯಧ್ವನಿ ಮೊಳಗುವ ಕಾಲ“ತಂದೆಯೇ ಈತ ಪಾಪದಿಂದ ದೂರ ನಿಷ್ಪಾಪಿ ಮುಗ್ದ ನಿನ್ನದೇ ರೂಪ ” ಅಮರಶಿಲ್ಪಿಯ ಪ್ರಾರ್ಥನೆ ಮೈಕಲ್ ತೊಡೆಯಲ್ಲೀಗ” ಶಿಲುಬೆಯ ಯೇಸು” ಸಮಾನರು ಸಾವಿನಲ್ಲೀಗಅದೆಂತಹುದೋ ಅಮರತ್ವ ದಿವ್ಯತ್ವದ ಸೆಳೆತ ಇತ್ತಿತ್ತಲಾಗಿ ಸಾಯಬಾರದೆಂದುಕೊಂಡಿದ್ದಹುಡುಗ ನೀ ಏನೇ ಹೇಳು…..ಸಾಯುವುದಕ್ಕಾಗಿಯೇ ಹುಟ್ಟಿದ್ದ ನೀನು ಸಾಯಲೇಬೇಕಾಗಿತ್ತು ಹುಡುಗ ನೀಸಾಯಲೇ ಬೇಕಾಗಿತ್ತುಘನಘೋರ ಬದುಕಿನಿದಿರಲ್ಲಿಸಾವೆಂಬುದೆಷ್ಟು ಘನ ಅರ್ನೆಸ್ಟ್ಏಸುವಿನಂತೆ ಮೈಕಲ್ ನಂತೆ ದಿವ್ಯಾತ್ಮನಾಗಲಿಲ್ಲಿಸಾಯಬೇಕಾಗಿತ್ತು ನೀನೀಗಅಮರನಾಗಬೇಕಾಗಿತ್ತು ************************
ನನ್ನ ಇಷ್ಟದ ಕವಿತೆ ದ.ರಾ.ಬೇಂದ್ರೆ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರಸರತಿ ಬಂದು ಹೋದಾಂವಾ ||ಪಲ್ಲ ೧) ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬು-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ ಮಾತು ಮಾತಿಗೆ ನಕ್ಕ ನಗಿಸಿ ಆಡಿಸ್ಯಾಡಾಂವಾ ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ ಇನ್ನೂ ಯಾಕ………. ೨) ತಾಳೀಮಣೀಗೆ ಬ್ಯಾಳಿಮಣಿ ನಿನಗ ಬೇಕೆನಂದಾಂವಾ ಬಂಗಾರ-ಹುಡೀಲೇ ಭಂಡಾರಾನ ಬೆಳೆಸೇನಂದಾಂವಾ ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ ೩) ಇರು ಅಂದರ ಬರತೇನಂತ ಎದ್ದು ಹೊರಡಾಂವಾ ಮಾರೀ ತೆಳಗ ಹಾಕಿತಂದರ ಇದ್ದು ಬಿಡಾಂವಾ ಹಿಡಿ ಹಿಡೀಲೆ ರೊಕ್ಕಾ ತಗದು ಹಿಡಿ ಹಿಡಿ ಅನ್ನಾಂವಾ ಖರೇ ಅಂತ ಕೈಮಾಡಿದರ ಹಿಡsದ ಬಿಡಾಂವಾ ಇನ್ನೂ ಯಾಕ………. ೫) ಹುಟ್ಟಾ ಯಾಂವಾ ನಗಿಕ್ಯಾದಗೀ ಮುಡಿಸಿಕೊಂಡಾಂವಾ ಕಂಡ ಹೆಣ್ಣಿಲೆ ಪ್ರೀತಿ ವೀಳ್ಯೆ ಮಡಿಚಿಕೊಂಡಾಂವಾ ಜಲ್ಮ ಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ ಎದಿ ಮ್ಯಾಗಿನ ಗೆಣತೀನ ಮಾಡಿ ಇಟ್ಟಕೊಂಡಾಂವಾ ಇನ್ನೂ (೬) ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀಂವಾ ಹಾದಿ ಬೀದಿ ಹುಡುಕತೈತ್ರೇ ಬಿಟ್ಟು ಎಲ್ಲ ಹ್ಯಾಂವಾ ಎಲ್ಲೀ ! ಮಲ್ಲೀ ! ತಾರೀ ! ಪಾರೀ ! ನೋಡೀರೇನವ್ವಾ? ನಿಂಗೀ ! ಸಂಗೀ ! ಸಾವಂತರೀ ! ಎಲ್ಹಾನ ನನ್ನಾಂವಾ ? ಇನ್ನೂ ಯಾಕ ಬರಲಿಲ್ಲಾ ? ಇನ್ನೂ ಯಾಕೆ ಬರಲಿಲ್ಲಾವಾ ಹುಬ್ಬಳ್ಳಿಯಂವಾ ಕಾವ್ಯ ಗಾರುಡಿಗ ಬೇಂದ್ರೆಯವರ ಕವಿ ದೃಷ್ಟಿ ಬರೀ ಪ್ರಕೃತಿಯ ಬೆಡಗಿನ ಬಗ್ಗೆ ಅಷ್ಟೇ ಅಲ್ಲ ಸಾಮಾಜಿಕ ಸ್ಥಿತ್ಯಂತರಗಳನ್ನು ಸೂಕ್ಷ್ಮ ದೃಷ್ಟಿಯಿಂದ ಪರಿಕಿಸುತ್ತಿತ್ತು ಎನ್ನುವುದಕ್ಕೆ ನಿದರ್ಶನ ಈ ಕವನ “ಇನ್ನೂ ಯಾಕೆ ಬರಲಿಲ್ಲಾ ಹುಬ್ಬಳ್ಳಿಯಂವಾ” ಅಂದಿನ ದಿನಮಾನದಲ್ಲಿ ಪ್ರಚಲಿತವಿದ್ದುದು ಜೋಗತಿ ಪದ್ಧತಿ . ಅಂತಹ ಜೋಗತಿ ಹೆಣ್ಣುಮಗಳಿಬ್ಬಳು ತನ್ನ ಗೆಣೆಕಾರನನ್ನು ನೆನೆಸಿ ಅವನು ಬಾರದಿರಲು ಹಲುಬುವ ಪ್ರಸಂಗವನ್ನು ಕವಿ ಇಲ್ಲಿ ಕವಿತೆಯಾಗಿಸಿದ್ದಾರೆ . ಹೆಣ್ಣೊಬ್ಬಳ ಅಂತರಂಗದ ಧ್ವನಿ ಹಾಗೆಯೇ ಅಂದಿನ ಸಾಮಾಜಿಕ ಸ್ಥಿತಿಯ ಕನ್ನಡಿ ಯಾಗಿಯೂ ಹೊರಹೊಮ್ಮಿರುವ ಈ ಕವನ ರಾಧೆ ಕೃಷ್ಣನಿಗಾಗಿ ಪರಿತಪಿಸುವ ಸಂದರ್ಭವನ್ನು ನೆನಪಿಸುತ್ತದೆ. ಹೋಲಿಕೆ ಅಸಮಂಜಸವೂ ಅನುಚಿತವೂ ಇರಬಹುದು. ಆದರೆ ಬೇರೆಲ್ಲವನ್ನೂ ಒತ್ತಟ್ಟಿಗಿಟ್ಟು ಪ್ರೇಮಿಕೆಯೊಬ್ಬಳು ಪ್ರೇಮಿಗಾಗಿ ತನ್ನ ಆಂತರ್ಯ ತೆಗೆದಿಡುವ ಭಾವವನ್ನೇ ತೆಗೆದುಕೊಂಡಿದ್ದೇನೆ ತಪ್ಪಿದ್ದರೆ ಕ್ಷಮೆ ಇರಲಿ ಆ ಜೋಗತಿಯ ಮನೆಗೆ ಸಾಮಾನ್ಯವಾಗಿ ವಾರಕ್ಕೆ ಮೂರು ಸಾರಿ ಭೇಟಿ ಕೊಡುವ ಅಭ್ಯಾಸವಿಟ್ಟುಕೊಂಡಿದ್ದ ಗೆಳೆಯ ಈ ಬಾರಿ ಬಂದೇ ಇಲ್ಲ ಎಂದು ದುಃಖಿಸುತ್ತಿದ್ದಾಳೆ. ಏನೋ ಮುನಿಸು ಅಸಮಾಧಾನದಿಂದ ಅವನು ಬಾರದಿರಲು ಇವಳಿಗೆ ದುಮ್ಮಾನ. ಮುಂದೆ ಅವನನ್ನು ಅವನ ವೇಷಭೂಷಣವನ್ನು ವರ್ಣಿಸುತ್ತಾ ಜರಿಯ ರುಮಾಲು ಸುತ್ತಿ ಕೊಂಡವನು ತುಂಬು ಮೀಸೆಯನ್ನು ತೀಡಿಕೊಳ್ಳುತ್ತಾ ನಗುನಗುತ್ತ ಹಾಸ್ಯ ಮಾಡಿ ನಗಿಸುತ್ತಾ ಮಾತಿಗೆ ಮಾತು ಸೇರಿಸುತ್ತಾ ಹಾಡು ಕಟ್ಟುವವನು ಎನ್ನುತ್ತಾಳೆ. ಜರದ ರುಮಾಲಿನ ಶ್ರೀಮಂತ ಅಷ್ಟೇ ಅಲ್ಲ ಸ್ನೇಹಮಯಿ ರೂಪವಂತ ಹಸನ್ಮುಖಿ ಎಂದೆಲ್ಲಾ ಅವನ ವರ್ಣನೆ. ಜೋಗತಿಯರು ಮದುವೆಯಾಗಿ ತಾಳಿ ಧರಿಸುವಂತಿಲ್ಲ ದೇವರ ಹೆಸರಲ್ಲಿ ಮುತ್ತು ಕಟ್ಟಿಕೊಳ್ಳುವ ಪದ್ಧತಿ ಆದರೆ ಅವನು ಅವಳಿಗೆ ಮದುವೆಯಾಗುವ ಆಹ್ವಾನವನ್ನಿತ್ತಿದ್ದಾನೆ. ಹಾಗೆಯೇ ಜೋಗತಿಗೆ ಭಂಡಾರ ಅರಿಸಿನ ಕುಂಕುಮ ತುಂಬಾ ಅಮೂಲ್ಯ ಬಂಗಾರದ ಹುಡಿಯಲ್ಲಿ ಭಂಡಾರ ಮಾಡಿಸುವೆ ಎಂದು ಹೇಳಿದ್ದನಂತೆ ಮತ್ತೆ ಮೂರನೆಯ ಸಾಲಿನಲ್ಲಿ ಅಂದಿನ ಕಾಲದ ಗಣಿಕೆಯರ ಸ್ತರವನ್ನು ಹೇಳುತ್ತಾರೆ . ಕಸಬೇರು ಒಂದು ಕೆಳಗಿನ ಸ್ತರ ಅದಕ್ಕಿಂತ ಮೇಲಿನದು ಬಸವಿ್ರು ಅದಕ್ಕೂ ಮೇಲಿನದ್ದು ಜೋಗತಿಯರು. ಈಕೆ ಅಂತಹ ಜೋಗತಿ ಆ ಜೋಗತಿಯರಲ್ಲಿ ನೀನು ನನಗೆ ಮೂಗುತಿ ಅಂದರೆ ಶ್ರೇಷ್ಠ ಎಂದು ಅವಳನ್ನು ಹೊಗಳುತ್ತಾನೆ . ಅವನು ಹೊರಟಾಗ ಬೇಡ ಎಂದು ತಡೆದರೂ ಕೇಳುವುದಿಲ್ಲ. ಆದರೆ ಮುಖ ಸಪ್ಪಗೆ ಮಾಡಿಕೊಂಡರೆ ಮತ್ತೆ ಉಳಿಯುತ್ತಾನೆ. ಕೈತುಂಬಾ ರೊಕ್ಕ ಕೊಡಲು ಬಂದು ಕೈಚಾಚಿದರೆ ಹಣ ಕೊಡದೇ ಕೈ ಹಿಡಿದೆಳೆದು ರಸಿಕತನ ತೋರಿಸುತ್ತಾನೆ ಎಂದು ನೆನೆಸುತ್ತಾಳೆ ಏನಾದರೂ ಅಲ್ಲಿ ಸಾಮಾಜಿಕ ಔಚಿತ್ಯವನ್ನು ಮೀರದ ರೂಪಕ ಕಟ್ಟಿಕೊಡುತ್ತಾರೆ. ಚಹಾಕ್ಕೆ ಚೂಡಾ ಧಾರವಾಡದವರ ನೆಚ್ಚಿನ ಜೋಡಿ. ನೀನು ನನಗೆ ಹಾಗೆ ಎನ್ನುತ್ತಾನೆ .ಅವಳನ್ನು ರಮಿಸಲು ನೀನು ಚೂಡಾಮಣಿ ಚೌಡಿ ಯಲ್ಲ ಎಂದು ಮೆರೆಸುತ್ತಾ ನೆ. ಅವಳಿಗೆ ಬೆರಳುಂಗುರ ಮೂಗಿನ ಬಟ್ಟು ಕೊಡಿಸುತ್ತಾನಂತೆ. ಅವೆರಡೂ ಮದುವೆಯಾಗುವ ಸೂಚನೆಗಳು ಆಭರಣಕ್ಕಿಂತ ಪ್ರೀತಿಯ ಮೆಚ್ಚುಗೆಯ ದ್ಯೋತಕವಾಗಿರು ತ್ತದೆ ಇಲ್ಲಿ . ಅಂತಹವನು ಬಾರದಿದ್ದರೆ ಸಂತಾಪವಲ್ಲದೆ ಇನ್ನೇನು? (ನು ಹುಟ್ಟಿನಿಂದಲೇ ನಗುವೆಂಬ ಕೇದಗೆಯ ಗಂಧ ವಿರುವ ಸ್ನೇಹಮಯಿ .ಇವನ ಹಿಂದೆ ಹೆಣ್ಣುಗಳು ತಾವಾಗಿ ಬೀಳುತ್ತಾರೆ. ಆದರೆ ಇವನು ಮಾತ್ರ ನಿನ್ನ ಜನ್ಮ ಜನ್ಮಕ್ಕೂ ನಾನೇ ಗೆಳೆಯ ಎನ್ನುತ್ತಾನೆ .(ಇಲ್ಲಿಯೂ ಗಮನಿಸಿ ಗಂಡ ಪ್ರತಿ ಎನ್ನದೆ ಗೆಳೆಯ ಎಂದಿದ್ದಾರೆ) ನನ್ನನ್ನು ತನ್ನ ಎದೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನುವುದೇ ಸಂತಸ ಅವಳಿಗೆ . ಕಡೆಯ ಪ್ಯಾರಾದಲ್ಲಿ ಹಾದಿ ಬೀದಿಗಳಲ್ಲಿ ಅವನನ್ನು ಹುಡುಕುತ್ತಾ ಮಲ್ಲಿ ತಾರಿ ಪಾರಿ ನಿಂಗಿ ಸಂಗೀ ಸಾವಂತರಿ ಅಂತ ಕಂಡವರನ್ನೆಲ್ಲ ತನ್ನ ಗೆಳೆಯನ ಕಂಡಿರಾ ಎಂದು ಕೇಳುತ್ತಾ ಹುಡುಕುವ ಚಿತ್ರಣ. ಸಿಟ್ಟು ಮಾಡಿಕೊಂಡು ಹೋದ ಆ ಶೆಟ್ಟರ ಹುಡುಗನ್ನು ಅರಸುವ ಈ ಕ್ರಿಯೆಯಲ್ಲಿ ಪ್ರೀತಿಯೊಂದಿಗೆ ಅನಿವಾರ್ಯತೆಯ ಎಳೆಯನ್ನು ಕಾಣಬಹುದು . ಕವಿ ಇಲ್ಲಿ ಹತಾಶೆ ಅನಿವಾರ್ಯತೆ ಪ್ರೀತಿ ಎಲ್ಲವನ್ನೂ ಒಳಗೊಂಡ ಆರ್ಥಿಕವಾಗಿಯೂ ಮಾನಸಿಕವಾಗಿಯೂ ವ್ಯಕ್ತಿಯೊಬ್ಬನ ಮೇಲೆ ಭಾವುಕಳಾಗಿ ಅವಲಂಬಿತಳಾದ ಜೋಗತಿಯೊಬ್ಬಳ ಮನದಾಳದ ಮಾತುಗಳನ್ನು ಆಂತರ್ಯದ ಧ್ವನಿಯನ್ನು ಅಭಿವ್ಯಕ್ತಿಸಿದ್ದಾರೆ. ಆ ಹುಡುಕುವಿಕೆಯ ತೀವ್ರತೆಯನ್ನು ಭಾವವಿಷಾದವನ್ನು ಕಟ್ಟಿಕೊಡಲು ಸಮರ್ಥರಾಗಿದ್ದಾರೆ .ಒಂದು ರೀತಿಯ ಸಂತಾಪವನ್ನು ಹುಟ್ಟಿಸುವ ಕವಿತೆ . ** ಸುಜಾತಾ ರವೀಶ್
ಇತರೆ ಹಿರಿಯ ಕವಿಗಳಹಳೆಯ ಕವಿತೆಗಳು ಡಾ.ಎಂ.ಗೋಪಾಲಕೃಷ್ಣ ಅಡಿಗ ಪ್ರಾರ್ಥನೆ ಪ್ರಭೂ,ಪರಾಕುಪಂಪನ್ನೊತ್ತಿಯೊತ್ತಿ ನಡ ಬಗ್ಗಿರುವಬೊಗಳುಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ;ಬಾಲವಾಡಿಸಿ ಹೊಸೆದು ಹೊಟ್ಟಿ ಡೊಗ್ಗುಸಲಾಮುಬಗ್ಗಿ ಮಿಡುಕುವ ಸಂಧಿವಾತ ಪೀಡಿತನಲ್ಲ;ತನ್ನ ಮೋಂಬತ್ತಿ ನಂದಿಸಿ ಸಂದಿಬೆಳಕಲ್ಲಿಜುಮ್ಮನರಸುವ ಷಂಡ ಜಿಗಣೆಯಲ್ಲ;ಕಾಲಪುಷ್ಟರ ಪೃಷ್ಠಕೊಡ್ಡಿ ಬೆನ್ನ, ಕಠಾರಿಒರೆಗೆ ತುರುಕಿರುವ ಹೆಂಬೇಡಿಯಲ್ಲ. ಈ ಸಣ್ಣ ದೊಂದಿಯನ್ನೆತ್ತಿ ಹೊತ್ತಿನ ಮುಖಕ್ಕೆಬೆಳಕು ಹರಿದದ್ದು ತನ್ನಿಂದಲೇ ಎಂದು ತನ್ನೊಳಗೆಮುಖ ಕಿರಿವ, ನೆಣ ಬಿರಿವ, ಬಗ್ಗಲಾರದ ಬೊಜ್ಜ,ಕೋಲುನಡಿಗೆಕವಾತು ಕಲಿತ ಕೊಬ್ಬಿದ ಹುಂಜ:ವಾಸಿಮಾಡಯ್ಯ ಈ ಜಲೋದರದ ಭಾರದ ಜಡ್ಡ.ಕುಮರುತೇಗಿನ ಕಪಿಲೆಹೊಡೆದು ಹಗಲೂ ಇರುಳುತೇಗಿಗೊಂದು ಅಮೋಘ ಸ್ಫೂರ್ತಿಗೀತವ ಕರೆವರೋಗದ ಫಸಲನಾದಷ್ಟು ಸವರೋ ತಂದೆ!ತಿಂದದ್ದು ಸರಿಯಾಗಿ ರಕ್ತವಾಗುವ ಹಾಗೆಅನುಗ್ರಹಿಸು; ಅರಗದಂಥ ಕಚ್ಚಾ ಗಾಳಿಗೀಳುಗಳಕಾಗದದ ಮೇಲೆಲ್ಲ ಕಾರಿಕೊಳ್ಳದ ಹಾಗೆಏರ್ಪಡಿಸು ಸಹಜ ಹೊರದಾರಿಗಳ; ರಹದಾರಿಗಳಕೊಡು ಎಲ್ಲರಿಗು ತಮ್ಮ ತಮ್ಮ ಖಾಸಗಿ ಮನೆಗೆ.ಎಲ್ಲಕ್ಕಿಂತ ಹೆಚ್ಚಾಗಿಒಂದು ತುತ್ತನ್ನು ಮೂವತ್ತೆರಡು ಸಲ ಜಗಿದು, ನುರಿಸಿಜೊಲ್ಲಿಗೆ ಮಿಲಾಯಿಸುವಷ್ಟು ಆರೋಗ್ಯಶಾಸ್ತ್ರದ ಮೊದಲ ಪಾಠ ಕಲಿಸು. ಕಲಿಸದಿದ್ದರು ಕೂಡಕಲಿತಿಲ್ಲ ಎಂಬ ನೆನಪುಳಿಸು. ಉಳ್ಳಾಗಡ್ಡೆತಿಂದು ಕೊರಳೆಲ್ಲ ಕಸ್ತೂರಿಯಾಗುವುದೆಂಬಭ್ರಮೆಯ ಕಳೆ. ದೊಡ್ಡ ದೊಡ್ಡ ಮಾತು ಬೆಲೂನುಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ ತೆಕ್ಕೆಗೊಗ್ಗದ ಹಗಲುಗನಸಿನ ದಢೂತಿ ತೊಡೆಸಿಕ್ಕದೇ ಸಿಕ್ಕಿದಂತಾಗಿ ತೂಬನು ತೆಗೆವಸ್ವಪ್ನೇಂದ್ರಿಯದ ಸ್ವಯಂಚಾಲಕಕೆ ತಡೆಹಾಕು;ಅಲ್ಲದೇ, ಗಾಳಿಯಲ್ಲಿ ಬತ್ತಲೆ ಸುಳಿವಅಪ್ಸರೆಯರ ಅನಂಗಸಂಘಟ್ಟನೆಗೆ ವೃಥಾಮಲುಷ್ಟಿಮೈಥುನದಹಂಕಾರ ಕೆರಳಿಸಬೇಡ.ಕಳುಹಿಸಯ್ಯಾ ಬಳಿಗೆ ಕೃಪೆತಳೆದು ಆಗಾಗ್ಗೆವಾಸ್ತವದ ಹೆಣ್ಣುಗಳ, ನಿಜದ ತೊಡೆಗಳ, ಆತ್ಮಹೊಕ್ಕು ತಿಕ್ಕಲು ತಕ್ಕ ಸುಕ್ಕಿರದ ಹೊಸ ತೊಗಲುಗಳ.ಹೊರಗೆ ಬೀಸಲದೊಳಕ್ಕೆ ಹಿಮ್ಮೆಟ್ಟಿದಾಗೆಲ್ಲ ಬರಿಪ್ರೇತಾತ್ಮಗಳ ಗೆರಿಲ್ಲಾಪಡೆಯ ಕಳಿಸದಿರುಇ.ಬೆಳೆಸಿಕೊಂಡೇ ತಮಗೆ ತಕ್ಕ ಮಾಂಸವ, ತೊಗಲಬರಲಿ ಅತಿಥಿಗಳೆಲ್ಲ ಮನೆಗೆ, ಬಂದವರಲ್ಲಿತೊಗಲನೊಲ್ಲದ ಅತಿಥಿತುರಿಕೆ ಕಳೆಯೋ ತಂದೆ.ಹಡಗ ತಾಗಿಸು ಪ್ರತೀ ಬಂದರಿಗು, ಯಾವೊಂದುತಿಮಿಂಗಿಲ ತೊಡೆಯು ಕೂಡ ನುಂಗಿ ಕೊಳಸದ ಹಾಗೆನಡಸು ಬಂದರಿನಿಂದ ಬಂದರಿಗೆ. ಆಮದು ರಫ್ತುಸಾಗುತ್ತಲಿರಲಿ ಕೊನೆವರೆಗೆ. ಆದರುಫರಂಗಿರೋಗ ತಗಲದ ಹಾಗೆಉಳಿಸು ಪೂರ್ವಾರ್ಜಿತದ ರತಿವಿವೇಕದ ಶಿಖೆಯ. ಗಾಳಿಗಲ್ಲಾಡುವುದು ದೊಂದಿ, ವಿದ್ಯುದ್ದೀಪವಾದರೂಬೀಸುದೊಣ್ಣೆಗೆ ಬಂದಿ. ನಿನ್ನ ಗಾಳಿಯ ಬೆಟ್ಟಘನಿಸಿ ಆಗುವ ಧಾತು ದುಡುಕಿ ಬಗೆವುದು ನೆಲದತೊಡೆಯ; ಚೆಲ್ಲುವುದೆಲ್ಲ ಕಡೆಯು. ದ್ರಾವಣಸುಖಕ್ಕೆವಿವಶ ಮುಳ್ಳೂ ಹುಲ್ಲು. ಕ್ಷಣದ ಸಾರ್ಥಕ ರತಿಗೆಮಾಸಗಳ, ವರ್ಷ ವರ್ಷ ಶತಮಾನಗಳವಿರತಿ, ಸಮರತಿ, ವಿಕೃತ ರತಿ. ತುಂಬಿ ನವಮಾಸಬರುವ ಜೀವಪವಾಡ ಕೆಲಸ ಕಲಿಸೋ ತಂದೆ. ಕಲಿಸು ಬಾಗದೆ ಸೆಟೆವುದನ್ನು, ಬಾಗುವುದನ್ನು;ಹೊತ್ತಿನ ಮುಖಕ್ಕೆ ಶಿಖೆ ತಿವಿವುದನ್ನೂ ಹಾಗೆಗಾಳಿಗಲ್ಲಾಡಿ ಬಳುಕಾಡಿ ತಾಳುವುದನ್ನು;ಕಲಿಸು ಸವಾರಿಕುದುರೆಯಾಗದ ಹಾಗೆಕಾಡುಕುದುರೆಯ ಕೆನೆತಕೊಬ್ಬನ್ನು, ಹಾಗೆಯೇಜಗಭಾರಗಾಳಿತೊಡೆ ತಾಳಿ ಹೊರುವಭ್ಯಾಸಕುದುರಿಸು; ನಿನ್ನಂತೆ ಊರ್ಧ್ವರೇತಸ್ಕನಾಗೊಬ್ಬಂಟಿಮೇಲುಮಾಳಿಗೆಯ ಕಿರುಕೋಣೆ ಮೈಮರೆವನ್ನು;ತಕ್ಕ ತೊಡೆನಡುವೆ ಧಾತುಸ್ಖಲನದೆಚ್ಚರವ. ಈ ಅರಿವು ಅರೆಹೊರೆದ ಮೊಟ್ಟೆ, ದೊರೆ; ಚಿಪ್ಪೊಡೆದುಬರಲಿ ಪರಿಪೂರ್ಣಾವತಾರಿ ವಿನತಾಪುತ್ರ –ಗಾಳಿ ಕಡೆಯಲು ಸೆಟಿದ ಬೆಳ್ಳಿ ಮಂತು,ನಿನ್ನ ತೊಡೆಹೊರೆ ಕೆಳಗೆ ಮೆತ್ತೆ – ಸಡಿಲು. **********************
ಹಿರಿಯ ಕವಿಗಳಹಳೆಯ ಕವಿತೆಗಳು Read Post »
ಪುಸ್ತಕ ಪರಿಚಯ ಅಲೆಮಾರಿಯ ದಿನದ ಮಾತುಗಳು ಪುಸ್ತಕ : ಅಲೆಮಾರಿಯ ದಿನದ ಮಾತುಗಳು ( ಪದ್ಯ – ಗದ್ಯಗಂಧಿ ಚಿಂತನ ಬರಹಗಳು ) ಲೇಖಕ: ಗಂಗಾಧರ ಅವಟೇರ ಪ್ರಕಾಶನ: ಪ್ರತೀ(ಕ)ಕ್ಷಾ ಪ್ರಕಾಶನ, ಕುಕನೂರ ಜಿ|| ಕೊಪ್ಪಳ ಪುಟಗಳು: 96 ಬೆಲೆ: 100/- ಪ್ರಕಟಿತ ವರ್ಷ: 2019 ಲೇಖಕರ ದೂರವಾಣಿ: 9449416270 ಮಾನವ ಸಮಾಜಜೀವಿ. ಅವನು ಸಮಾಜವನ್ನು ಬಿಟ್ಟು ಬಾಳಲಾರ-ಬದುಕಲಾರ. ಅರಿಸ್ಟಾಟಲ್ ಹೇಳುವಂತೆ ‘ಸಮಾಜವನ್ನು ಬಿಟ್ಟು ಬದುಕುವ ಮಾನವ ದೇವರು ಇಲ್ಲವೇ ಪಶು ಆಗಿರುತ್ತಾನೆ’. ಮಾನವ ಭಾಗಶಃ ಸಹಕಾರಿಯಾದಂತೆ ಭಾಗಶಃ ಸಂಘರ್ಷಮಯಿ. ಸಂಘರ್ಷದ ಫಲವಾಗಿ ದಂಗೆ, ಬಂಡಾಯ, ಯುದ್ಧ ಸಂಭವಿಸಿದರೆ ಸಹಕಾರದ ಫಲವಾಗಿ ಕುಟುಂಬ, ಸಮಾಜ, ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ಕುಟುಂಬವೊಂದರಲ್ಲಿ ಜನಿಸಿ ಸಮಾಜದಲ್ಲಿ ತನ್ನ ವಿಕಾಸ ಕಂಡುಕೊಳ್ಳುವ ವ್ಯಕ್ತಿಯು ಸಾಮಾಜಿಕ ರೂಢಿ-ಸಂಪ್ರದಾಯ, ಕಟ್ಟುಪಾಡು, ನೀತಿ-ನಿಯಮಗಳಿಗೆ ಬದ್ಧನಾಗಿ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ಜೀವನವನ್ನು ಸುಂದರವಾಗಿಸಲು ಹಲವು ಅನುಭಾವಿಗಳು, ಶರಣರು-ಸಂತರು, ದಾರ್ಶನಿಕರು ತಮ್ಮ ಜೀವನಾನುಭವದ ಸತ್ಯಗಳನ್ನು ನುಡಿಮುತ್ತುಗಳಲ್ಲಿ, ಅನುಭವಾಮೃತಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ನುಡಿಮುತ್ತುಗಳು ನಮ್ಮ ಅಜ್ಞಾನ, ಅಂಧಕಾರದ ಬದುಕಿಗೆ ಬೆಳಕು ತೋರಲು ಹಚ್ಚಿಟ್ಟ ಸಾಲು ಹಣತೆಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಿನ ಶುಭೋದಯದಲ್ಲಿ ‘ದಿನಕ್ಕೊಂದು ಮಾತು’ ಎನ್ನುವ ಚಿಂತನಶೀಲ ಬರಹಗಳನ್ನು ಬರೆಯುವ ಮೂಲಕ ತಮ್ಮ ಜೀವನಾನುಭವದ ಸಂಗತಿಗಳನ್ನು, ಜೀವನ ಮೌಲ್ಯಗಳನ್ನು ಕೆಲವೇ ಸಾಲುಗಳಲ್ಲಿ ಹೆಣೆದು ಅರ್ಥಪೂರ್ಣವಾದ ಪದ್ಯ-ಗದ್ಯಗಂಧಿಯಾದ ಚಿಂತನ ಬರಹಗಳನ್ನು ಬರೆಯುವುದರಲ್ಲಿ ಕವಿ, ಲೇಖಕ ಗಂಗಾಧರ ಅವಟೇರ ಅವರು ಪರೀಣತರು. ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿ ಪ್ರವೃತ್ತಿಯಿಂದ ಸಾಹಿತಿಯಾಗಿರುವ ಗಂಗಾಧರ ಅವರು ಮೂಲತಃ ನಂದವಾಡಗಿಯವರು. ಈಗಾಗಲೇ “ನನ್ನೊಳಗಿನ ಪ್ರೀತಿ” ಹಾಗೂ “ನಿಬ್ಬಣ” ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ. “ಅಲೆಮಾರಿಯ ದಿನದ ಮಾತುಗಳು” ಕೃತಿಗೆ ಪತ್ರಿಕೊದ್ಯಮಿ ಮಹೇಶ್ ಮನ್ನಯ್ಯನವರಮಠ ಅವರ ಮಾರ್ಮಿಕ ಮುನ್ನುಡಿ ಹಾಗೂ ಹಿರಿಯ ಕವಿ ಡಾ|| ಗುಂಡಣ್ಣ ಕಲಬುರಗಿಯವರ ಸ್ನೇಹಪರ ಬೆನ್ನುಡಿ ಇದೆ. “ಅಲೆಮಾರಿಯ ದಿನದ ಮಾತುಗಳು” ಕೃತಿಯಲ್ಲಿ ಒಟ್ಟು 125ಕ್ಕೂ ಹೆಚ್ಚು ಚಿಂತನಶೀಲ ಬರಹಗಳಿವೆ. ಇವು ಗಾತ್ರದಲ್ಲಿ ಚಿಕ್ಕದಾದರೂ ಅವುಗಳ ಹರವು ವ್ಯಾಪಕವಾಗಿದೆ. ಜೀವನದಲ್ಲಿ ಎದುರಾಗುವ ಸೋಲು-ಗೆಲುವು, ನೋವು-ನಲಿವು, ಅಡ್ಡಿ-ಆತಂಕಗಳನ್ನು ಸಮಚಿತ್ತದಿಂದ ಎದುರಿಸಿ ಜೀವನದ ಆಟವನ್ನು ಗೆಲ್ಲಲು ಲೇಖಕರ ವಿಚಾರಗಳು ಇಲ್ಲಿ ಮಾರ್ಗದರ್ಶಿಯಾಗಿವೆ. “ಗೆಲುವು ಹೂವಿನ ಹಾಸಿಗೆಯಲ್ಲ, ಅದು ಕೆಸರುಗದ್ದೆಯ ಓಟ. ಯಾರು ಕೊಸರಿಕೊಂಡು ಹೋಗಿ ದಡ ಮುಟ್ಟುತ್ತಾರೊ ಅವರು ಗೆಲ್ಲುತ್ತಾರೆ” ಎನ್ನುವ ಮಾತು ನಮ್ಮ ಸತತ ಪರಿಶ್ರಮ ಹಾಗೂ ಪ್ರಯತ್ನಶೀಲತೆಯ ಸಂಕೇತವಾಗಿದೆ. ‘ನಮಗೆ ದ್ವೇಷ ಮಾಡಲು ಆಯುಷ್ಯ ಬಹಳಷ್ಟು ಇಲ್ಲ. ಇರುವಷ್ಟು ಕಾಲ ಎಲ್ಲರನ್ನು ಪ್ರೀತಿಸೋಣ’ ಎನ್ನುವ ಮಾತು ಓದುಗರಿಗೆ ಜೀವನದ ಸತ್ಯ ದರ್ಶನ ಮಾಡಿಸುತ್ತದೆ. ‘ಮಾತು ಮೌನವಾದಾಗ ಅಂತರಂಗದಲ್ಲಿ ಅರಿವಿನ ಗುರು ಕಾಣಿಸಿಕೊಳ್ಳುತ್ತಾನೆ’ ಎನ್ನುವ ಮಾತು ಅರಿವೇ ಗುರುವಾಗಿ, ನುಡಿ ಜ್ಯೋತಿರ್ಲಿಂಗವಾಗಿ ಗೋಚರಿಸುತ್ತದೆ. ‘ಪುಸ್ತಕದ ಓದು ಮಸ್ತಕದಲ್ಲಿರಬೇಕು. ಜೀವನದ ಅನುಭವ ಅನುಭಾವವಾಗಬೇಕು. ಓದು ಅನುಭವ ಒಂದಾದಾಗ ವ್ಯಕ್ತಿತ್ವಕ್ಕೊಂದು ಘನತೆ ಬರುತ್ತದೆ’ ಎನ್ನುವ ವಿಚಾರ ಮನೋಜ್ಞವಾಗಿದೆ. ‘ದಾರಿ ಇಲ್ಲವೆಂದು ನಡೆಯುವುದನ್ನು ನಿಲ್ಲಿಸಬಾರದು. ನಾವು ನಡೆದದ್ದೇ ದಾರಿ ಆಗಬೇಕು ಆ ದಾರಿ ನಾಲ್ಕು ಜನರಿಗೆ ಸ್ಪೂರ್ತಿಯಾಗಬೇಕು’ ಎಂಬ ಲೇಖಕರ ಆಶಯ ಶ್ಲಾಘನೀಯ. ‘ಯಾರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡುವರು ಅಂತವರನ್ನು ನಿರ್ಲಕ್ಷಿಸಬೇಕು ಆದರೆ ದ್ವೇಷ ಮಾಡಬಾರದು’ ಎಂಬ ವಿಚಾರ ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣಕ್ಕೆ ಕೈಗನ್ನಡಿಯಾಗಿದೆ. ಹೀಗೆ “ಅಲೆಮಾರಿಯ ದಿನದ ಮಾತುಗಳು” ಕೃತಿಯು ಮುಳುಗಿದಷ್ಟು ಮುತ್ತನ್ನು ಕೊಡುವ ಶಬ್ಧಶರಧಿಯಾಗಿದೆ. ಓದುಗರ ಅಜ್ಞಾನದ ಹಾದಿಗೆ ಬೆಳಕು ತೋರುವ ದೀವಟಿಗೆಯಾಗಿದೆ. ವಿದ್ಯಾರ್ಥಿ ಸಮುದಾಯದೊಂದಿಗೆ ನಿರಂತರ ಒಡನಾಟದಲ್ಲಿರುವ ಲೇಖಕ ಗಂಗಾಧರ ಅವಟೇರ ಅವರು ಮಕ್ಕಳಲ್ಲಿ ನೈತಿಕ, ಸಾಮಾಜಿಕ ಪ್ರಜ್ಞೆ ಬೆಳೆಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಈ ಕೃತಿಯನ್ನು ತಮ್ಮ ಮನೆಯ ಪುಸ್ತಕ ಭಂಡಾರದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಓದಲು, ತಮ್ಮ ಮನೋವಿಕಾಸ ವಿಸ್ತರಿಸಿಕೊಳ್ಳಲು ಇದೊಂದು ಯೋಗ್ಯ ಕೃತಿಯಾಗಿದೆ. ****************************************** ಬಾಪು ಖಾಡೆ
ಲಲಿತ ಪ್ರಬಂಧ ನನ್ನ ಲಿಯೋ ಸಮತಾ ಆರ್. ಒಂದು ದಿನ ಎಂದಿನಂತೆ ಶಾಲೆಗೆ ಹೊರಟು ಸಿದ್ದಳಾಗಿ ಹೊರಬಂದು ಕಣ್ಣಾಡಿಸಿದರೆ, ಲಿಯೋ ಅವನಿರುವ ಜಾಗದಲ್ಲಿ ಇಲ್ಲ!”ಲಿಯೋ ರೆಡಿ ಏನೋ, ಎಲ್ಲಿದ್ದೀಯೋ’?”ಎಂದಾಕ್ಷಣ”ನಾನಾಗಲೇ ರೆಡಿಯಾಗಿ ನಿಂತಿದ್ದೀನಿ ಬಾರಕ್ಕ”ಎಂಬ ಉತ್ತರ ಕೇಳಿಸಿತು, ಆದರೆ ಕಾಣಲಿಲ್ಲ. “ಲೋ, ಎಲ್ಲೋ ಇದಿಯಾ, ಇರೋ ಜಾಗದಲ್ಲಿರೋಕೆ ನಿಂಗೇನೋ ಕಾಯಿಲೆ! ಈಗ್ಲೇ ಲೇಟಾಗಿದೆ ,ಇನ್ನು ನಿನ್ನನ್ನು ಹುಡುಕಿಕೊಂಡು ಬೇರೆ ಸಾಯ್ಬೇಕು” ಎಂದು ಸಿಟ್ಟಿನಿಂದ ಕಿರುಚಿದಾಗ,” ಅಕ್ಕ ಒಂಚೂರು ಈ ಕಡೆ ನೋಡು”ಎಂದು ನನ್ನ ಬಲಬದಿಯ ಹತ್ತು ಮಾರು ದೂರದಿಂದ ಉತ್ತರ ಬಂತು.”ಅಯ್ಯೋ ದೇವರೇ! ಯಾಕೆ ನಿಂತಿದ್ದೀಯ ಮರದ ಕೆಳಗೆ? ಯಾವುದಾದರೂ ಕಾಗೆ ನಿನ್ನ ಮೇಲೆ ಹೇತರೆ ಅದನ್ನು ತೆಗೆಯಲು ಇನ್ನೂ ಐದು ನಿಮಿಷ ಹಾಳು, ಈಗ್ಲೇ ಲೇಟಾಗಿದೆ, ಬಸ್ ಹೊರಟು ಹೋದರೆ ಸ್ಕೂಲಿಗೆ ಲೇಟಾಗ ಲ್ವೇನೋ? ಒಂದಿಷ್ಟಾದರೂ ಕಾಮನ್ ಸೆನ್ಸ್ ಇದೆಯಾ ನಿನಗೆ”, ಎಂದು ಗೊಣಗುತ್ತಾ ಅವನನ್ನು ಎಳೆದುಕೊಂಡು ಧಾವಿಸಿದೆ. “ಅಕ್ಕ, ನಾನೇನ್ ಮಾಡ್ಲಿ, ನಿನ್ನ ಗಂಡನೇ ನನ್ನ ಸುಮ್ಮನೆ ಇರೋ ಜಾಗದಲ್ಲಿ ಇರಲು ಬಿಡದೆ,’ ನಿಮ್ಮಕ್ಕ ಬರೋ ಗಂಟ ಬಿಸಿಲಲ್ಲಿ ಯಾಕೋ ಒಣಗುತ್ತಿಯಾ? ಮರದ ಕೆಳಗೆ ನೆರಳಿನಲ್ಲಿ ಇರಬಾರದ’ ಅಂತ ಅಲ್ಲಿ ನಿಲ್ಲಿಸಿದ, ನಂಗ್ಯಾಕೆ ಸುಮ್ಮನೆ ಬೈದೆ ನೀನು”, ಎಂದು ಗುರ್ ಗುಟ್ಟಿದ. “ಲೋ, ಮೊದಲು ಸರಿಯಾಗಿ ರಸ್ತೆ ನೋಡಿಕೊಂಡು ಹೋಗೋದು ಕಲಿ, ಎಷ್ಟೊಂದು ಟ್ರಾಫಿಕ್ ಇದೆ, ನಿನ್ನತಂಟೆಗೆ ಹೋಗಬೇಡ ಅಂತ ನನ್ ಗಂಡಂಗೆ ನಾನು ಹೇಳಿಕೊಳ್ಳುತ್ತೇನೆ, ಈಗ ನನಗೆ ತೊಂದರೆ ಆಗದ ಹಾಗೆ ಸುಮ್ನೆ ಬಾ,” ಎಂದಿದ್ದಕ್ಕೆ” ಅಕ್ಕ ಇದೇನು ನಾನು ಕಾಣದೇ ಇರೋ ಟ್ರಾಫಿಕ್ ಅಲ್ಲ, ಹೆದುರ್ಕೋಬೇಡಾ ಬಾ, ನಾನೆಲ್ಲ ಮ್ಯಾನೇಜ್ ಮಾಡ್ತೀನಿ “ಎಂದು ನನ್ನನ್ನು ತನ್ನ ಹೆಗಲಿನಲ್ಲಿ ಹೇರಿಕೊಂಡು ಮುನ್ನುಗ್ಗಿದ. ಬಸ್ ಸೇರುವ ಮುನ್ನ ಲಿಯೋನನ್ನ ಮಾಮೂಲಿನಂತೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಅವನ ಬಾಯಿಗೆ ಬೀಗ ಹಾಕಿ, ಓಡೋಡುತ್ತ ,ಆಗಲೇ ಹೊರಟು ನಿಂತಿದ್ದ ಬಸ್ ಹತ್ತಿದ್ದಾಯಿತು. ಬಸ್ನಲ್ಲಿ ಕುಳಿತು ಒಂದಿಷ್ಟು ಸುಧಾರಿಸಿಕೊಂಡು ಯೋಚಿಸುತ್ತಿರುವಾಗ ಒಮ್ಮೆಗೆ ಲಿಯೋನ ಬಗ್ಗೆ ಅಪಾರ ಪ್ರೀತಿ ಉಕ್ಕಿಬಂತು .”ಅಯ್ಯೋ ಪಾಪ ಅವನಿಲ್ಲದೇ ಹೋಗಿದ್ದರೆ ನನ್ನ ಕಥೆ ಏನಾಗುತ್ತಿತ್ತು ?ಎಲ್ಲಿಗೆ ಕರೆದರೂ ಜೊತೆಯಲ್ಲಿ ಬರ್ತಾನೆ ,ಎಷ್ಟು ಭಾರ ಹೇರಿ ದರೂಸುಮ್ನೆ ಹೊರುತ್ತಾನೆ ,ಆಗಾಗ ಚೆನ್ನಾಗಿ ಹೊಟ್ಟೆ ತುಂಬಿಸಿ ,ಮೈತೊಳೆದು ಕೊಟ್ಟರೆ ಅದೇ ಅವನಿಗೆ ಸ್ವರ್ಗ. ಈ ಶನಿವಾರ ಅವನಿಗೊಂದು ಒಳ್ಳೆ ಸರ್ವಿಸ್ ಕೊಡಿಸ ಬೇಕು” ಅಂದುಕೊಂಡೆ. ಅದರಂತೆ ಆ ಶನಿವಾರ ಲಿಯೋನನ್ನು ಹೊರಡಿಸಿ ಕೊಂಡು, ಗರಾಜಿಗೆ ಹೋಗಿ ಅಲ್ಲಿಯ ಮೆಕ್ಯಾನಿಕ್ ಕೈಗೆ ಒಪ್ಪಿಸಿದಾಗ ಆತ ,”ಪರ್ವಾಗಿಲ್ಲ ಮೇಡಂ ,ಸ್ಕೂಟಿ ಚೆನ್ನಾಗಿ ಇಟ್ಟುಕೊಂಡಿದ್ದೀರಾ, ಅಂತ ಏನು ತೊಂದರೆ ಕಾಣಿಸ್ತಿಲ್ಲ ,ನಾಳೆ ಬಂದ್ ತಗೊಂಡು ಹೋಗಿ ,ಸರ್ವಿಸ್ ಮಾಡಿ ಇಟ್ಟಿರುತ್ತೇನೆ ,ಇನ್ನೊಂದು ವರ್ಷ ಯಾವ ಯೋಚನೆ ಇರಲ್ಲ “ಎಂದ. ಅಲ್ಲಿಂದ ಹೊರಟು ಮನೆಯ ಕಡೆಗೆ ಕಾಲೆಳೆದುಕೊಂಡು ಹೋಗುವಾಗಲೂ ಲಿಯೋನದೇ ಯೋಚನೆ. ನನ್ನ ಲಿಯೋನನ್ನು ಯಾರಾದರೂ ಸ್ಕೂಟಿ ಗೀಟಿ ಎಂದರೆ ನನಗೆಕೆಟ್ಟ ಕೋಪ ಬರುತ್ತದೆ. ಆತ ನನ್ನ ತಮ್ಮ ,ನನ್ನ ಆತ್ಮಬಂಧು, ನನ್ನೆಲ್ಲಾ ಗುಟ್ಟುಗಳ ಕಿವಿ, ಎಲ್ಲಿಗೆ ಬೇಕಾದರೂ ಯಾವಾಗ ಬೇಕಾದರೂ ಕರೆದೊಯ್ಯುವ ವೀರ ,ಎಲ್ಲದಕ್ಕಿಂತ ಮುಖ್ಯವಾಗಿ ಪತಿಯ ಅವಲಂಬನೆಯನ್ನು ತಪ್ಪಿಸಿ ರುವ ಪರದೈವ. ಈಗ ಒಂದೈದು ವರ್ಷಗಳ ಹಿಂದೆ, ಕೆಲಸಕ್ಕೆ ಸೇರಿ ಎಂಟು ವರ್ಷ ಸೇವೆ ಸಲ್ಲಿಸಿದ್ದ ಶಾಲೆಯಿಂದ ವರ್ಗವಾಗಿ ಮನೆಗೆ ಸಮೀಪದಲ್ಲಿದ್ದ ಶಾಲೆಗೆ ಬಂದದ್ದಾಯಿತು. ಮೊದಲಿದ್ದ ಶಾಲೆ ಮನೆಯಿಂದ ದೂರ ಎಂದು ದಿನವೂ ಬಸ್ಸಿನಲ್ಲೇ ಅಲೆದಾಡಿದ್ದೆ. ಈಗಿನ ಹೊಸ ಶಾಲೆ ಮನೆಗೆ ಕಿಲೋಮೀಟರ್ ಗಳ ಲೆಕ್ಕದಲ್ಲಿ ಹತ್ತಿರವಿದ್ದರೂ , ಮನೆಯಿಂದ ದೂರವಾಗಿದ್ದ ಆಟೋ ನಿಲ್ದಾಣಕ್ಕೆ ನಡೆದುಹೋಗಿ ,ಅಲ್ಲಿ ನಿಮಿಷ ಗಟ್ಟಳೆ ಶಾಲೆ ಇರುವ ಏರಿಯಾಗೆ ಹೋಗುವ ಆಟೋವನ್ನು ಕಾಯಬೇಕಿತ್ತು. ಆಟೋ ಸಿಕ್ಕರೂ ಶಾಲೆಯಿಂದ 2 ಪರ್ಲಾಂಗು ದೂರದಲ್ಲಿ ಇಳಿದುಕೊಂಡು, ನಡೆದುಕೊಂಡು ಶಾಲೆ ತಲುಪುವಷ್ಟರಲ್ಲಿ ಸಾಕಾಗುತ್ತಿತ್ತು.ಇದೆಲ್ಲಾ ರಗಳೆಯೇ ಬೇಡವೆಂದು ಸಹೋದ್ಯೋಗಿಗಳಲ್ಲಿ ಇಬ್ಬರುತಮ್ಮ ತಮ್ಮ ಸ್ಕೂಟಿ ಗಳನ್ನು ಏರಿ ಆರಾಮಾಗಿ ಓಡಾಡುತ್ತಿದ್ದರು. ಸ್ವಲ್ಪ ದಿನ ಆಟೋದಲ್ಲಿ ಹೈರಾಣಾದ ನಂತರ ನನಗೂ ನಾನ್ಯಾಕೆ ಸ್ಕೂಟಿ ತಗೊಂಡು ಆರಾಮಾಗಿ ಸುಯ್ ಎಂದು ಶಾಲೆಗೆ ಬರಬಾರದು ಎನಿಸಿತು. ಜೊತೆಗೆ ಎಲ್ಲಿಗೆ ಹೋಗಬೇಕಾದರೂ ನನ್ನ ಗಂಡನನ್ನು” ರೀ “ಎನ್ನುತ್ತಾ ಅವನ ಹಿಂದೆಯೇ ಸುತ್ತ ಬೇಕಿತ್ತು. ಈಗ ನಾನೇ ನಾನಾಗಿ ,ನನಗೆ ಬೇಕಾದ ಕಡೆಗೆಲ್ಲ ಸುತ್ತುವ ಸಲುವಾಗಿ ಲೋನ್ ಮಾಡಿಸಿಕೊಂಡು ಸ್ಕೂಟಿ ಖರೀದಿಸಲು ನಿರ್ಧರಿಸಿದೆ. ” ಇದೊಂದು ಅವತಾರ ಬೇರೆ ಬಾಕಿ ಇತ್ತು” ಎಂದ ಮಾತು ಕೇಳಿಸಲಿಲ್ಲ ನಂತರ ಎದುರಾದದ್ದು ಆಯ್ಕೆಯ ಪ್ರಶ್ನೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ತರಹೇವಾರಿ ಮಾದರಿಯ, ಬೆಲೆಯ ,ಸ್ಕೂಟಿ ಗಳ ಲೋಕದಿಂದ ಯಾವುದನ್ನು ಮನೆಗೆ ತರುವುದು? ಶೋರೂಮ್ ನಿಂದ ಶೋ ರೂಂಗೆ ಅಲೆದಾಡಿ ,ನನ್ನ ಬಜೆಟ್ ಗೆ ಹೊಂದಬೇಕು, ಓಡಿಸಲು ಹಗುರವಾಗಿ ಇರಬೇಕು ಎಂದು ಹುಡುಕಾಡಿದೆ. ಆಗ ನನಗೆ ಶೋ ರೂಂ ಒಂದರಲ್ಲಿ ಹಳದಿ ಬಣ್ಣದ ಸುಂದರಾಂಗ ವಿದೇಶಿ ಸ್ಕೂಟಿ ಒಬ್ಬನ ಮೇಲೆ ಕಣ್ಣುಬಿತ್ತು. ಟೆಸ್ಟ್ ರೈಡ್ ಎಂದು ಓಡಿಸಿಯೂ ನೋಡಿಯಾಯಿತು. ಎಷ್ಟು ಹಗುರ !ಎಂತಹ ರೋಡ್ ಗ್ರಿಪ್! ಎಂತಹ ಚೆಲುವ! ಎಂದು ಅವನ ಮೇಲೆ ಆಸೆಯಾಯಿತು. ಆದರೆ ಅವನ ದರ ಕೇಳಿದಾಗ ಧರೆಗಿಳಿದು ಹೋಗಿ ,ಅವನೊಬ್ಬ ಕೈಗೆಟುಕದ ನಕ್ಷತ್ರ ಎಂದುಕೊಂಡು ಸುಮ್ಮನಾದೆ. ಹಾಗೆ ಹುಡುಕಿದಾಗ ಕಪ್ಪು ಬಣ್ಣದ, ಸಾಕಷ್ಟು ಸ್ಟೈಲಿಶ್ ಆಗಿದ್ದ ,ಹಗುರವಾಗಿ ತೇಲುವ ಹಾಗೆ ಓಡುವ, ಜೊತೆಗೆ ನನ್ನ ಪರ್ಸುನಲ್ಲೂ ಹಿಡಿಯುವಂತಹ ನನ್ನ ಲಿಯೋ ಒಂದು ಹೊಸ ಶೋರೂಂನಲ್ಲಿ ಸಿಕ್ಕ. ಸರಿ ,ಖರೀದಿಸಿ ಮನೆಗೆ ತಂದ ದಿನವೇ ಮಕ್ಕಳಿಬ್ಬರನ್ನು ಕೂರಿಸಿಕೊಂಡು ನಮ್ಮ ಬಡಾವಣೆಯಲ್ಲಿ ನಾಲ್ಕು ಐದು ಸುತ್ತುಸುತ್ತಿಸಿ ಖುಷಿ ಪಟ್ಟಿದ್ದಾಯಿತು. ಚಿಕ್ಕಂದಿನಲ್ಲಿ ಶಾಲೆಗೆ ವರುಷಗಟ್ಟಲೆ ಸೈಕಲ್ ಹೊಡೆದದ್ದು ಈಗ ಬಳಕೆಗೆ ಬಂತು. ನೀರಿಗಿಳಿದ ಮೀನಿನಂತೆ ಸಲೀಸಾಗಿ ಲಿಯೋ ಎರಡೇ ದಿನಗಳಲ್ಲಿ ನನ್ನ ಹಿಡಿತಕ್ಕೆ ಬಂದ.ಸರಿ, ಮೊದಮೊದಲು ಇಪ್ಪತ್ತು ಮೂವತ್ತು ಕಿಲೋಮೀಟರ್ ಪ್ರತಿ ಗಂಟೆಗೆ ಸ್ಪೀಡಿನಲ್ಲಿಓಡಿಸಿದ್ದಾಯಿತು.ಸಹೋದ್ಯೋಗಿಗಳು ,”ಮೇಡಂ ನಿನ್ನೆ 1 ಸೈಕಲ್ ನಿಮ್ಮನ್ನು ಓವರ್ಟೇಕ್ ಮಾಡಿದ್ದು ನೋಡಿದೆ ಎಂದು ಕಿಚಾಯಿಸಿದರೂ “ಅರೆ, ಸ್ಪೀಡಾಗಿ ಓಡಿಸಿ ಎಲ್ಲೋ ಸೇರಿಕೊಳ್ಳುವ ಬದಲು, ನಿಧಾನವಾಗಿ ಓಡಿಸಿಮನೆಸೇರಿಕೊಳ್ಳುತ್ತೇನೆ ಬಿಡ್ರಿ” ಎಂಬ ಭಂಡತನದ ಉತ್ತರ ನನ್ನಿಂದ. ಲಿಯೋ ನನ್ನು ಏರಿದ ಬಳಿಕ ನನ್ನ ಮತ್ತು ಅವನ ಇಬ್ಬರ ಬೇರೊಂದು ಲೋಕತೆರೆದುಕೊಳ್ಳುತ್ತದೆ .ಮೊದಮೊದಲು ಮಾತನಾಡಲು ಹಿಂಜರಿದರೂ, ನಂತರ ನಿಧ ನಿಧಾನವಾಗಿ ನನ್ನನ್ನು ಕೇಳಲಾರಂಭಿಸಿದ. ಮನದಲ್ಲಿರುವ ಎಲ್ಲವೂ ,ಹೇಳಲಾಗದ್ದು ಹೇಳಬಾರದ್ದು,ಎಲ್ಲವನ್ನು ಲಿಯೋನ ಕಿವಿಗೆ ತುಂಬಿ ನಿರಾಳವಾಗುತ್ತೇನೆ. ದಿನವೂ ಶಾಲೆಗೆ ಸರಿಯಾದ ಸಮಯಕ್ಕೆ ಹೋಗಬೇಕ? ಮಕ್ಕಳನ್ನು ಶಾಲೆಗೆ ಬಿಡಬೇಕ? ಡ್ಯಾನ್ಸ್ ಕ್ಲಾಸಿಂದ ಕರೆತರಬೇಕ? ಸುಮ್ಮನೆ ಊರು ಸುತ್ತಬೇಕ? ಆಸ್ಪತ್ರೆಯಲ್ಲಿರುವ ನೆಂಟರನ್ನು ನೋಡಬೇಕ?ಎಟಿಎಂನಿಂದ ಹಣ ತರಬೇಕ? ಎಲ್ಲದಕ್ಕೂ”ನಡಿಯಕ್ಕ” ಎಂದು ಈತ ಸಿದ್ಧ.ಒಂದು ದಿನ ಸಿಗ್ನಲ್ ನಲ್ಲಿ ಕೆಂಪುದೀಪ ಹಸಿರಾಗಿ ಇನ್ನೇನು ನುಗ್ಗಲು ಸಿದ್ಧರಾದಾಗ ಪಕ್ಕದ ಬೈಕ್ ನ ಪಿಲಿಯನ್ ನಲ್ಲಿದ್ದವ “ಗಾಡಿ ಒಳ್ಳೆ ಸಕ್ಕತ್ತಾಗಿದೆ”ಎನ್ನುತ್ತಾ ಹೋಗಬೇಕ!”ಲಿಯೋ ನಡಿಯೋ, ಆ ನನ್ ಮಗನ್ನ ಗುದ್ದಿ ಬೀಳಿಸಿ ,ಸರ್ಯಾಕ್ಬುದ್ಧಿ ಕಲಿಸೋಣ” ಎಂದರೆ “ಹೋಗ್ಲಿ ಬಿಡಕ್ಕ, ಹುಡುಗರೇ ಹಂಗೆ ,ಯಾಕೆ ನೀನೇನು ಚೆನ್ನಾಗಿಲ್ವಾ ?”ಎಂದು ರೇಗಿಸಬೇಕೆ? ಮತ್ತೊಂದು ದಿನ ರಾತ್ರಿ ಗಂಡನೊಂದಿಗೆ ಸಿಕ್ಕಾಪಟ್ಟೆಜಗಳವಾಡಿ ,”ಇನ್ನು,ನಾನಿರಲಾರೆ” ಎಂದು ಕೂಗಾಡಿ ಲಿಯೋಜೊತೆರಾತ್ರಿಯ ತಂಗಾಳಿಯಲ್ಲಿ ಮೈ ನೆನೆ ಸುತ್ತ ಹೋಗುತ್ತಿರುವಾಗ,” ಅಕ್ಕ ,ಮಕ್ಕಳಿಗೆ ಎನ್ ಅಡಿಗೆ ಮಾಡಿದ್ದೀಯ”ಎಂದ ಮಾತಿಗೆ ಮನೆಗೆ ಹಿಂದಿರುಗಿ ಮಕ್ಕಳನ್ನು ತಬ್ಬಿ ಕೊಂಡಿದ್ದಾಯಿತು. ಹೀಗಿರುವಾಗ ಒಂದು ದಿನ ಹೋಗುವಾಗ “ಅಕ್ಕ ಒಂದು ಹಾಡು ಹೇಳಕ್ಕ” ಎಂದು ಕೇಳಿಕೊಂಡಾಗ ,ನನ್ನ ಕತ್ತೆರಾಗವನ್ನು ನಾನೇ ಮೆಚ್ಚಿಕೊಳ್ಳುತ್ತಾ, ಹಾಡುತ್ತ ,ತೇಲುತ್ತಾ ಹೋಗುತ್ತಿರುವಾಗ ಅದ್ಯಾವ ಮಾಯದಲ್ಲೋ ಹಿಂದಿನಿಂದ ಒಂದುಹೊಟ್ಟೆ ಡುಮ್ಮ ,ಕುಂಡಿ ಎತ್ತರದ ಬೈಕೊಂದು ಬಂದು, ಗುದ್ಧಿ ,ಮಿಂಚಿನಂತೆ ಪಕ್ಕದಲ್ಲೇ ಸುಳಿದು, ಕ್ಷಣಾರ್ಧದಲ್ಲಿ ನುಗ್ಗಿ ನುಸುಳಿ ಓಡಿ ಮಾಯವಾದ. ಗುದ್ದಿದ ಕ್ಷಣವೇ “ಅಯ್ಯೋ, ಅಕ್ಕ ಮೊದಲು ನನ್ನಿಂದ ದೂರ ನೆಗೆಯೇ” ಎನ್ನುತ್ತಾ ನನ್ನ ಲಿಯೋ ಹಾರಿ ಬಿದ್ದು ನೆಲಕಚ್ಚಿದ .ಅವನು ಹೇಳಿದಾಕ್ಷಣವೇನೆಗೆದಿದ್ದಕ್ಕೆನಾನುಬದುಕಿದೆ. ಆದರೆ ಅವನು ತನ್ನ ಕೈಕಾಲುಮುರಿದುಕೊಂಡು, ದೀಪದ ಕಣ್ಣೋಡಕೊಂಡು ಬಿದ್ದಿದ್ದನ್ನು ನೋಡಿದಾಗ ನನಗೆ ಅಳುವೋ ಅಳು.ಅಷ್ಟರಲ್ಲಿ ಸುತ್ತಮುತ್ತ ನೆರೆದ ಜನ ನಮ್ಮಿಬ್ಬರನ್ನು ಎತ್ತಿ ನಿಲ್ಲಿಸಿ ಸಾಂತ್ವನ ಹೇಳಿದರು.ನನಗೇನು ಹೆಚ್ಚು ಪೆಟ್ಟಾಗಿರಲಿಲ್ಲ. ಆದರೆ ತೀವ್ರವಾಗಿ ಜಖಂಗೊಂಡಿದ್ದ ಲಿಯೋ ರಿಪೇರಿಯಾಗಿ ಮನೆಗೆ ಬರುವಷ್ಟರಲ್ಲಿ ತಿಂಗಳು ಕಳೆದಿತ್ತು. ನಂತರವೂ ಅಪಘಾತದ ನೆನಪಿನಿಂದ ಹೊರಬರದ ನಾನು, ಲಿಯೋ ಎಷ್ಟೇ ಕರುಣಾಜನಕ ನೋಟವನ್ನು ನನ್ನತ್ತ ಬೀರಿದರೂ, ಅವನೆಡೆಗೆ ನೋಡದೆ, ನನ್ನ ಕಣ್ಣೀರು ಅವನಿಗೆ ಕಾಣದಂತೆ ಮುಖತಿರುಗಿಸಿ, ಹಲ್ಲು ಕಚ್ಚಿ, ನನ್ನ ನೋವು ನಾನು ನುಂಗಿದೆ. ಗಂಡನ ಸುಪರ್ದಿಗೆ ಅವನನ್ನು ಒಪ್ಪಿಸಿ ,ದಿನವೂ ಆಟೋದಲ್ಲಿ ಶಾಲೆಗೆ ತಿರುಗ ತೊಡಗಿದೆ. ಹಾಗಿದ್ದಾಗ ನನ್ನ ಗಂಡ ಹೊಸ ಕಾರ್ ಖರೀದಿಸಿ ಝುಮ್ಮೆಂದು ತಿರುಗಲು ಶುರುಮಾಡಿದರು.”ಸ್ಕೂಟಿಗಿಂತ ಕಾರ್ ಸೇಫ್ ಅಲ್ವಾ ,ಒಳಗೆ ಕುತ್ಕೊಂಡು ಓಡಿಸುವುದಲ್ಲ, ಏನು ಆಗಲ್ಲ’ ಎಂದುಕೊಂಡು, ಕಾರ್ ಓಡಿಸಲು ಕಲಿಯುವ ಹಂಬಲದಿಂದ ಡ್ರೈವಿಂಗ್ ಕ್ಲಾಸ್ ಗೆ ಸೇರಿದ್ದಾಯ್ತು.ಡ್ರೈವಿಂಗ್ ಕ್ಲಾಸ್ ನಲ್ಲಿ ನನ್ನ ಟೀಚರ್ ಇನ್ನೂ ಚಿಕ್ಕ ವಯಸ್ಸಿನ ಒಬ್ಬ ಹುಡುಗ. ಡ್ರೈವಿಂಗ್ ಕಲಿಸುವುದರ ಜೊತೆಗೆ ಆತನ ಕುತೂಹಲದ 108 ಪ್ರಶ್ನೆಗಳ ಬಾಣ ಬೇರೆ! “ಮೇಡಂ ಏನ್ ಮಾಡ್ಕೊಂಡಿದ್ದೀರಾ? ಓಹ್ ಟೀಚರ! ಸ್ಕೂಲಿಗೆ ದಿನ ಹೇಗೆ ಹೋಗ್ತೀರಾ? ಸ್ಕೂಟಿ ಇಲ್ವಾ ಮನೇಲಿ? ಆಟೋದಲ್ಲಿ ಯಾಕೆ? ಕಾರ್ನಲ್ಲಿ ಸ್ಕೂಲಿಗೆ ಹೋಗ್ಬೇಕು ಅನ್ನೋ ಆಸೆನಾ?” ಇತ್ಯಾದಿ, ಇತ್ಯಾದಿ, ಕೇಳಿ ಕೇಳಿ ನಾನು ಸಾಕಾಗಿ ಲಿಯೋ ಮತ್ತು ನನ್ನ ಅಪಘಾತದ ಸುದ್ದಿಯನ್ನೆಲ್ಲ ಬಿಚ್ಚಿಟ್ಟೆ. ನಮ್ಮ ಕಥೆ ಕೇಳಿ ಅವನಿಗೆ ನಗುವೋ ನಗು.”ಅಲ್ಲಾ ಮೇಡಂ ಒಂದ್ಸಾರಿ ಬಿದ್ದಿದ್ದಕ್ಕೆ ಸ್ಕೂಟಿ ಓಡ್ಸೋದೆ ಬಿಟ್ ಬಿಡೋದೇ?ಎಡವಿ ಬೀಳ್ತಿವಿ ಅಂತ ನಡೆಯೋದೆನ್ ನಿಲ್ಲಿಸ್ತಿವ? ರಸ್ತೇಲಿ ಹೋಗೋ ವೆಹಿಕಲ್ ನವ್ರೆಲ್ಲ ‘ ಇವತ್ತು ಮೇಡಂ ಸ್ಕೂಟಿಏರಿ ಹೋಗ್ತಿರುವಾಗ ನಾವು ಅವ್ರನ್ನ ಗುದ್ದಿ ಬಿಳಿಸ್ಬೇಕು’ಅಂತ ಸ್ಕೆಚ್ ಏನಾದ್ರೂ ಹಾಕ್ಕೊಂಡು ಬರ್ತಾರ? ಸುಮ್ನೆ ಸ್ಕೂಟಿ ಆಚೆ ತಗೀರಿ “ಅಂತ ಧೈರ್ಯ ಕೊಟ್ಟ. ಮತ್ತೆ ಮನೆಗೆ ಬಂದು” ಲಿಯೋ “ಎಂದು ಕರೆದಾಗ ಒಂದೇ ಕಿಕ್ ಗೆ ಹಾರಿ ನೆಗೆದು “ಅಕ್ಕ” ಎಂದ ಅವನನ್ನು ನೋಡಿ ಕಣ್ಣೀರು ಉಕ್ಕಿ ಬಂತು.ಹಲವು ದಿನಗಳಿಂದ ನೀರು ನಿಡಿ ಕಾಣದೇ,ತಲೆಕೂದಲುಕೆದರಿಕೊಂಡು, ಗೊಣ್ಣೇ ಸುರಿಸಿಕೊಂಡು ದಿಕ್ಕೆಟ್ಟು ನಿಂತಿರುವ ತಬ್ಬಲಿ ಮಗುವಿನಂತೆ ಕಂಡ ಆತನನ್ನು ನೋಡಿ ನನ್ನ ಹೃದಯ ಬಾಯಿಗೆ ಬಂತು.ಆತನನ್ನು ಚೆನ್ನಾಗಿ ತೊಳೆದು ಒಂದು ಒಳ್ಳೆ ಸರ್ವಿಸ್ ಮಾಡಿಸಿ, ಹೊಟ್ಟೆ ತುಂಬಾ ಪೆಟ್ರೋಲ್ ಹಾಕಿಸಿ ಒಂದು ದಾರಿಗೆ ತಂದೆ. ಅಲ್ಲಿಂದ ಮತ್ತೆ ಶುರುವಾದ ನನ್ನ ಮತ್ತು ಅವನಒಡನಾಟಇನ್ನೂಮುಂದುವರೆದಿದೆ.ಅನಿವಾರ್ಯ ಕಾರಣಗಳಿಂದ ಶಾಲೆಯಿಂದ ಮನೆಗೆ ದೂರವಾಗಿ ,ದಿನವೂ ಬಸ್ ನಲ್ಲಿ ತಿರುಗುವ ಹಾಗಾದರೂ, ಬಸ್ ನಿಲ್ದಾಣದ ವರೆಗಾದರೂ ಜೊತೆಯಲ್ಲೇ ಬರುತ್ತಾನೆ.ಹೇಗಿದ್ದರೂ ಬೇರೆಲ್ಲೆಡೆಗೆ ತಿರುಗಾಡುವುದು ಇದ್ದೇ ಇದೆಯಲ್ಲ.ಆಗಾಗ್ಗೆ ದಾರಿಯಲ್ಲಿ ಕಾಣ ಸಿಗುವ ಆ ಹಳದಿ ಬಣ್ಣದ ಸುಂದರಾಂಗ
ಕಥೆ ಸ್ವಾತಂತ್ರ್ಯ ಡಾ.ಪ್ರೇಮಲತ ಬಿ. ನನಗೀಗ ೧೯ ವರ್ಷ. ಕೆಲವೊಮ್ಮೆ ಆಲೋಚನಾ ಲಹರಿಯಿಂದ ನಾನು ಇತರರಿಗಿಂತ ವಿಭಿನ್ನ ಮಿಡಿತಗಳನ್ನು ಹೊಂದಿರುವಂತೆ ಅನಿಸಿದರೂ ತಾರುಣ್ಯದ ದಿನಗಳ ಎಲ್ಲ ಭಾವನೆಗಳ ಉಗಮದ ಪ್ರತಿ ಅನುಭವ ನನಗಾಗಿದೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಕಾರಣದಿಂದಲೋ ಏನೋ, ಪ್ರೀತಿ-ಪ್ರೇಮದ ಅಲೆಗಳಲ್ಲಿ, ಡಿಸ್ಕೋ-ಕುಡಿತಗಳ ಅಮಲಿನಲ್ಲಿ ಕೊಚ್ಚಿಹೋಗುವ ಉನ್ಮಾದಕ್ಕಾಗಿ ಮನಸ್ಸು ತೀವ್ರವಾಗಿ ಮಿಡಿದಿಲ್ಲ. ಬದಲು ಸಮಾಜದಲ್ಲಿ ಮುಕ್ತತೆಯನ್ನು ಕಾಣುವ, ಸ್ವಾತಂತ್ರದ ಸಂಪೂರ್ಣ ಸ್ವೇಚ್ಚೆಗಾಗಿ ನನ್ನ ಮನಸ್ಸು ತುಮಲಗೊಳ್ಳುತ್ತದೆ. ಧೀಮಂತ ಯುವ ಶಕ್ತಿಯನ್ನು ಬಳಸಿ ಈ ಸಂಕುಚಿತ ಸಮಾಜವನ್ನು ಬದಲು ಮಾಡಬೇಕೆಂಬ ಉತ್ಕಟೇಚ್ಛೆ ನನ್ನಲ್ಲಿ ಯಥೇಚ್ಚವಾಗಿದೆ. ಒಬ್ಬ ಸುಂದರ ಯುವತಿಯನ್ನು ಕಂಡರೆ ಮನಸ್ಸು ಪುಳಕಗೊಳ್ಳುಷ್ಟೇ ಸಹಜವಾಗಿ ಸಮಾಜದಲ್ಲಿನ, ಅನೀತಿ, ಅಧರ್ಮ, ಲಂಚಕೋರತನ, ಶಿಕ್ಷಣದಲ್ಲಿರುವ ರಾಜಕೀಯ ಇವುಗಳನ್ನು ಕಂಡಾಗ ಕೆಡುಕೆನಿಸುತ್ತದೆ.ಧಮನಿ, ಧಮನಿಗಳಲ್ಲಿ ಹರಿವ ರಕ್ತ ಬಿಸಿಯಾಗಿ ಅಸಹಾಯಕತೆಯ ನಿಟ್ಟಿಸುರಾಗಿ ಹೊರಬಂದು ಆತ್ಮಸಾಕ್ಷಿ ನನ್ನನ್ನು ಹಿಂಸಿಸುತ್ತದೆ.ಬೆಟ್ಟಗಳನ್ನು ಹತ್ತಲು, ನದಿಗಳನ್ನು ಈಜಲು,ಬಯಲಿನಲ್ಲಿ ನಿರ್ಭಿಡೆಯಾಗಿ ಓಡಲು, ಕಾಡಿನಲ್ಲಿ ಒಂಟಿಯಾಗಿ ಅಲೆಯಲು ಅದಮ್ಯ ಉತ್ಸಾಹ ಹೊಂದಿರುವ ನನ್ನಂತಹವರ ಮಿಡಿತಗಳು, ರಸ್ತೆಯಲ್ಲಿ ಸಂಕೋಚಪಡದೆ, ಹೆದರದೆ ನಡೆಯಲೂ ಆಗದಿರುವ ಈ ವ್ಯವಸ್ಥೆಯಲ್ಲಿ ಹಾಗೇ ತಣ್ಣಗಾಗಿಬಿಡುತ್ತವೆ. ಇದು ನಿರಾಶಾವಾದವಲ್ಲ. ಬದುಕಿನ ಕ್ರೂರ ಸತ್ಯ! ಇದಕ್ಕೆ ವಿರುದ್ಧವಾಗಿ ಸೊಲ್ಲೆತ್ತಿದರೆ ಆತ್ಮಹತ್ಯೆಯ ಹೆಸರಲ್ಲಿ ಅವರ ಹತ್ಯೆ. ಹಾಡುಹಗಲಲ್ಲೇ ಗುಂಡು. ವ್ಯವಸ್ಠಿತ ಜಾಲದ ಮಾಯೆಯಲ್ಲಿ ಎಲ್ಲ ಮಾಹಿತಿ,ಪರಿಣತಿಗಳ ವಿಪರ್ಯಾಸ. ಮಾಧ್ಯಮಗಳ ಹುಟ್ಟಡಗಿಸಿ, ಪರ-ವಿರೋಧಗಳ ಮಾರುಕಟ್ಟೆಯನ್ನು ಸೃಷ್ಟಿಸಿ ಅಪಹಾಸ್ಯವಾಗುತ್ತಿರುವ ಈ ದೇಶದ ಯುವ ತರುಣನಾಗಿ ನಾನೇನು ಮಾಡಬಲ್ಲೆ?? ಅಖಂಡವಾಗಿ ನಿಂತಿರುವ ದೊಡ್ಡ ದೇಶ ನನ್ನದು. ಆದರೆ ಇಲ್ಲಿ ಬದಲಾವಣೆಯ ಹರಿಕಾರರು ಯಾರದರೂ ಇದ್ದಾರೆಯೇ? ಅಂತವರಿಗಾಗಿ ನಾನು ಹುಡುಕಿ ಅಲೆಯಲೇ? ಈ ವ್ಯವಸ್ಥಿತ ಭ್ರಷ್ಟಾಚಾರ ನನ್ನ ಮನಸ್ಸುನ್ನು ಆಲೆಗಳೇ ಇಲ್ಲದಸಮುದ್ರವಾಗಿ ಯಾಂತ್ರಿಕತೆಯನ್ನು ರೂಢಿಸಿಕುಳ್ಳುವಂತೆ ಮಾಡುವ ಮೊದಲು, ನನ್ನ ಭವಿಷ್ಯವನ್ನು ಹೇಗೆ ತಿರುಗಿಸಲಿ? ಇಂದಿನ ಸ್ವತಂತ್ರ ದಿನಾಚರಣೆಯ ಯಾವ ಭಾಷಣಕಾರರಲ್ಲೂ ನಾನು ಬದಲಾವಣೆಯ ಕಿಡಿಯಿರಲಿ, ಕಾವನ್ನೂ ಕಾಣಲಿಲ್ಲ.ಕಳೆದ ಹತ್ತು ವರ್ಷಗಳಲ್ಲಿ ಸ್ವಾತಂತ್ರ ದಿನಾಚರಣೆಯ ಬಗ್ಗೆ ಪುಳಕಿತಗೊಳ್ಳುವ ದಿನಗಳಿಂದ ಬದಲಾಗಿ, ನಿರಾಶಗೊಳ್ಳುವ ಆತಂಕಕ್ಕೆ ಸಿಲುಕಿಕುಳ್ಳುತ್ತಿದ್ದೇನೆ. ದೇವರೇ ರಕ್ಷಿಸು.”.. “ಹತ್ತಾರು ವರ್ಷದ ಅವೇ ಹಳೇ ಬಟ್ಟೆಗಳನ್ನು ಅದೇನಂತ ಹಾಕ್ಕೋತಿಯೋ?ಬಿಸಾಕಿ,ಬೇರೆ ಹೊಲಿಸಿಕೋ…. “ನಡುಮನೆಯಲ್ಲಿ ಬಟ್ಟೆ ಮಡಿಚಿಡುತ್ತಿದ್ದ ಅಮ್ಮ ಕೂಗಿದಳು. “ಅವೇನು ಹರಿದಿಲ್ಲವಲ್ಲಮ್ಮ..? ಹೊಸದ್ಯಾಕೆ ಬೇಕು?”-ಹರೆಯದ ದಿನಗಳನನ್ನ ಹಳೇ ದಿನಚರಿ ಪುಸ್ತಕದಲ್ಲಿ ಸ್ವತಂತ್ರ ದಿನಾಚರಣೆಯ ದಿನ ಬರೆದದ್ದನ್ನು ಓದುವುದನ್ನು ನಿಲ್ಲಿಸಿ, ತಲೆ ಎತ್ತಿ ಕೂಗಿ ದಬಕ್ಕನೆ ಇಹಲೋಕಕ್ಕೆ ಬಂದೆ.ಇವತ್ತು ಕೂಡ ಇನ್ನೊಂದು ಸ್ವತಂತ್ರ ದಿನಾಚರಣೆ. ಹಾಗೆಂದೇ ನನ್ನಲ್ಲಿ ಈ ತಾದಾನ್ಮ್ಯತೆ. ಅಮ್ಮ ಹೇಳುತ್ತಿದ್ದುದು ಸರಿಯೆಂದು ಗೊತ್ತಿದ್ದರೂ ಹತ್ತು ವರ್ಷಗಳಿಂದ ಹೇಳುತ್ತಿದ್ದ ಅದೇ ಉತ್ತರ ಹೇಳಿದೆ.ಅಮ್ಮನಲ್ಲವೇ…..ದಬಾಯಿಸಿಬಿಡಬಹುದು! “ಈಗೆಲ್ಲ ಈ ತರದವನ್ನು ಜನ ಹಾಕ್ಕೊಳಲ್ಲ.ಫ್ಯಾಷನ್ ಬದಲಾಗಿದೆ. ಜನ ಆಡ್ಕೊಂಡ್ ನಗ್ತಾರೆ….” ಅಮ್ಮನೇನು ಬಿಡುವವಳಲ್ಲ. “ಆಡ್ಕೊಂಡ್ ನಗಲಿ ಬಿಡು.ನಾನು ಯಾರಿಗೇನು ತೊಂದರೆ ಮಾಡ್ತಿಲ್ವಲ್ಲ.ಈ ಜನರಿಗೆ ಯಾರು ಅವರಿಗೆ ಹಾನಿ ಮಾಡ್ತಿದ್ದಾರೆ ಅನ್ನೋ ಅರಿವಿದ್ರೆ ತಾನೆ..” “ಏನೋಪ್ಪ..,ಬೇಕಾದಷ್ಟು ದುಡೀತೀಯ.ವಯಸ್ಸಿದೆ,ಎಲ್ಲರಂಗಿರು ಅಂತ ಹೇಳಿದೆ… “ಅಮ್ಮ ಅಲ್ಲಿಗೆ ಸುಮ್ಮನಾದಳು. ಮನಸ್ಸಲ್ಲಿ ಏನೆಂದುಕೊಂಡಳೋ ಯಾರಿಗೆ ಗೊತ್ತು? ಭಾರತ ಬಿಟ್ಟು ೧೫ ವರ್ಷವಾಯ್ತು.ಇಪ್ಪತ್ತೈದು ವರ್ಷದ ವಯಸ್ಸಿನಲ್ಲಿ ಇದ್ದ ಆಕಾರದಲ್ಲೇ ಈಗಲೂ ಇದ್ದೇನೆ.ಮನಸ್ಥಿತಿ, ಕಾಲಗತಿಯಲ್ಲೂ….. ಹರಿಯದ ಬಟ್ಟೆಗಳನ್ನು ಎಸೆಯದೆ,ಬೆಳೆಸಿಕೊಂಡ ಭಾವನೆಗಳನ್ನು ಹರಿದುಕೊಳ್ಳದೆ ಗಡಿಯಾರದಂತೆ ಪ್ರತಿ ಆಗಷ್ಟ್ ಗೆ ಸರಿಯಾಗಿ ಭಾರತಕ್ಕೆ ಮರಳಿದ್ದೇನೆ. ಅದೇ ಹಳೆಯ ಬಟ್ಟೆಗಳನ್ನು ಅಲೆಮಾರಿನಿಂದ ತೆಗೆದು ಉಟ್ಟು, ಪರಕಾಯ ಪ್ರವೇಶ ಮಾಡಿದಂತೆ ಹುದುಗಿಕೊಂಡಿದ್ದೇನೆ.ಕಾಲಕ್ರಮದಲ್ಲಿ ನಾನೊಂದಾಗಿದ್ದಾಗ ನನಗನಿಸಿದ್ದ ಎಲ್ಲ ಭಾವನೆಗಳಿಗೆ ಮರುಜೀವ ನೀಡಿ ಅಪ್ಯಾಯಕರವಾದ ಹಲವು ಭಾವನೆಗಳನ್ನು ಮೆಲುಕು ಹಾಕಲು ತವಕಿಸುತ್ತೇನೆ. ೨ ನಡುಮನೆಯಲ್ಲಿ ಅಮ್ಮ ಮಾತನಾಡುತ್ತಿದ್ದಳು. “ಚೆನ್ನಾಗಿದ್ದೀರ? …ಹೌದು.. ಮಗ-ಸೊಸೆ ಬಂದು ಒಂದು ವಾರ ಆಯ್ತು. ಇಲ್ಲ. ಸೊಸೆ ಮಕ್ಕಳನ್ನು ಕರ್ಕೊಂಡು ಅವರಮ್ಮನಮನೆಗೆ ಹೋಗಿದ್ದಾಳೆ….ಇಂಗ್ಲೆಂಡಿನಲ್ಲೇ ಇರಲ್ವಂತೆ. ಬರ್ತೀನಿ ಅಂತಾನೆ ಇರ್ತಾನೆ..ಅದೇನು ಮಾಡ್ತಾನೋ ಗೊತ್ತಿಲ್ಲ… ನನಗೇನೋ ಬರ್ತಾನೆ ಅನ್ನಿಸುತ್ತೆ.ಅದ್ರೂ ಹೇಳಕ್ಕಾಗಲ್ಲ…ದೇವರಿಟ್ಟಂತೆ ಅಗ್ಲಿ ಬಿಡಿ ಗಂಗ, ನನ್ನ ಕೈ ಲೇನಿದೆ ಹೇಳಿ…” ಅಮ್ಮ ತನ್ನ ಗೆಳತಿ ಗಂಗಾಂಬಿಕೆಯ ದೂರವಾಣಿ ಕರೆಗೆ ಕಿವಿಯೊಡ್ಡಿದ್ದಳು. ನನ್ನ ಅಕ್ಕ ಮತ್ತು ಭಾವ ಇದೇ ದೇಶದಲ್ಲಿದ್ದು ಅಮ್ಮನನ್ನು ನೋಡಿಕೊಳ್ಳುತ್ತಿರುವುದರಿಂದ ಅಮ್ಮನ ಬಗ್ಗೆ ಆತಂಕವಿಲ್ಲ, ಭಾವ ಅಮ್ಮನ ಕೊನೆಯ ತಮ್ಮನೂ ಆಗಿರುವುದರಿಂದ ಅಳಿಯ ಎಂಬ ಹಂಗಿಲ್ಲ. ಗಂಡುಮಗ ಜೊತೆಯಲ್ಲಿಲ್ಲದ ಕೊರತೆ ಅಮ್ಮನ ಮಾತಲ್ಲಿ ಕಾಣಿಸುತ್ತಿತ್ತು. ಆದರೆ, ನಿರಾಸೆಯನ್ನು ಹತ್ತಿಕ್ಕಿ, ನಿರುಮ್ಮಳವಾಗಿ ಗೆಳತಿಯ ಜೊತೆ ಅಮ್ಮ ಮಾತು ಮುಂದುವರಿಸಿದಳು. “ಬೆಂಗಳೂರಲ್ಲಿ ಬೇಕದಷ್ಟು ಆಸ್ತಿ ಮಾಡಿದ್ದಾರಲ್ಲ…ಹೌದು… ಒಂದು ಫ್ಲಾಟ್ ಇದೆ, ಮನೆ ಇದೆ.ಎರಡನ್ನೂ ಬಾಡಿಗೆಗೆ ಕೊಟ್ಟಿದ್ದಾನೆ.ಬೇಕಾದಷ್ಟು ಬಾಡಿಗೆ ಬರುತ್ತೆ.ಲಂಡನ್ನಿನಲ್ಲೇನು…ಅವರಿಗೆ ಬೇಕಾದಂತೆ ಸಂಬಳ…ಕೈಗೊಂದು,ಕಾಲಿಗೊಂದು ಆಳು…ಎರಡೆರಡು ಕಾರು…ಗೊತ್ತಲ್ಲ, ಆ ದೇಶದ ದುಡ್ಡಿಗೆ ಡಾಲರಿಗಿಂತ ಭಾರೀ ಬೆಲೆಯಂತಲ್ಲ……?“ ನಾಲ್ಕನೇ ತರಗತಿಗೆ ಓದು ನಿಲ್ಲಿಸಿ, ೧೬ ಕ್ಕೆಲ್ಲ ಮದುವೆಯಾದ ಅಮ್ಮನಿಗೆ ಯಾವ ಕೊರತೆಯೂ ಇರಲಿಲ್ಲ. ಕೈ ತುತ್ತು ನೀಡಿ ಬೆಳೆಸಿದ ಮಗನ ಅಗಲಿಕೆಯ ನೋವನ್ನು ಅವನ ದುಡ್ಡಿನ ಬಗೆಗಿನ ಬೊಗಳೆಯಲ್ಲಿ ಮುಳುಗಿಸಿ.ಗೆಳತಿಯ ಮುಂದೆ ತೇಲಿಬಿಡುತ್ತಿದ್ದಾಳೆ. ಸಂಬಂಧಗಳು ಸಮುದ್ರದ ಎರಡೆರಡು ದಿಕ್ಕಿನಲ್ಲಿ ಹರಡಿಕೊಂಡರೂ ಹಣದ ಮೇಲ್ಮೈ ಅಡಿ ಅಗಲಿಕೆಯ ನೋವನ್ನು ಬಚ್ಚಿಟ್ಟು ಸಮಾಜದಲ್ಲಿ ಮೂಗೆತ್ತಿ ನಡೆವ ಅಮ್ಮನ ಕುಶಲತೆಗೆ ತಲೆಬಾಗಬೇಕೇನೋ……! ಅಮ್ಮನನ್ನು ಬಿಗಿದಪ್ಪಿ ಬಾಚಿ ಕೂರಬೇಕೆಂದು ಎಷ್ಟೋ ಸಾರಿ ಅನ್ನಿಸುತ್ತದೆ,ತಂದೆ ತೀರಿದ ಮೇಲೆ ಮೊಮ್ಮಕ್ಕಳ ಸ್ಪರ್ಷ ಬಿಟ್ಟರೆ ಅವಳಿಗೆ ಬೇರಿಲ್ಲ. ಹಾಗೆ ಮಾಡಿದರೆ ಅವಳು ಕೊಸರಿಕೊಂಡರೂ ಒಳಗೊಳಗೆ ಸಂತಸ ಪಡುತ್ತಾಳೆಂದೂ ನನಗನಿಸಿದೆ. ಆದರೆ ಪರಸ್ಪರ ವರ್ಷಕ್ಕೊಮ್ಮೆ ಎದುರಾದಾಗ ಹಸ್ತವನ್ನು ಅದುಮಿಕ್ಕಿದ್ದಕ್ಕಿಂತ ಹೆಚ್ಚು ಮಾಡಿಲ್ಲ. ಪರದೇಶಿಯಾದ ನಾನು ಒಂದಿಷ್ಟೂ ಸ್ವದೇಶಿತನವನ್ನು ಬಿಟ್ಟಿಲ್ಲ. “ ಅಯ್ಯೋ ನೀನೇನೋ…ನೀನು, ನಿನ್ನ ಮಕ್ಳು ಎಲ್ಲ ಹೋಟೆಲಿನಲ್ಲಿ ನಮ್ಮ ತರಾನೇ ತಿಂದಿರಲ್ಲೋ…ಶಾರದಮ್ಮನ ಮಗಳು- ಗಂಡ ಅಮೆರಿಕದಿಂದ ಬಂದಾಗ ನೀನು ನೋಡಬೇಕಿತ್ತು…. ಅವರ ಊಟದ ಕಟ್ಟುಪಾಡೇನು… ನೀರಿನ ವ್ಯವಸ್ಠೆಯೇನು…ಇಡೀ ಮೂರು ವಾರ ಅವರ ಮನೆಯಲ್ಲಿ ನಡೆದದ್ದು ಮುಂದಿನ ಮೂರು ತಿಂಗಳ ಕಾಲ ನಮ್ಮ ಮಹಿಳಾ ಸಂಘದಲ್ಲಿ ಚರ್ಚೆಯಾಯ್ತು…” ಅಂತ ಅಮ್ಮ ಒಮ್ಮೆ ಹೇಳಿದ್ದಳು.ಅಮ್ಮನ ಈ ಮಾತಲ್ಲಿ ನಿರಾಶೆಯ ಸುಳಿವಿತ್ತು ಎನ್ನುವಲ್ಲಿ ನನಗೆ ಸಂಶಯವಿರಲಿಲ್ಲ. ಅಮ್ಮ ನನ್ನ ಬಗ್ಗೆ ಏನು ತಾನೇ ಹೇಳಿಕೊಳ್ಳಲು ಸಾಧ್ಯವಿತ್ತು? ನನ್ನಲ್ಲಿ ಪರದೇಶದ ದುಡ್ಡಿನ ಯಾವ ಗತ್ತುಗಳೂ ಇರಲಿಲ್ಲ. ಒಮ್ಮೊಮ್ಮೆ ಈ ಜಟಿಲ ಸಮಾಜ ಪರದೇಶದಿಂದ ಬಂದ ಭಾರತೀಯರು ಪಾಸ್ಚಿಮಾತ್ಯರ ರೀತಿಯೇ ವರ್ತಿಸಲಿ ಎಂದು ನಿರೀಕ್ಷಿಸುತ್ತದೆ. ಅದನ್ನು ನೋಡುವ ಅರೆಕ್ಷಣದ ಮನರಂಜನೆಯನ್ನು ಬಿಟ್ಟರೆ ಅದರಿಂದ ಇವರಿಗೆ ಗಿಟ್ಟುವುದಾದರೂ ಏನು?ಭಾರತೀಯತೆಯಲ್ಲಿ ಮೀಯಲು ಸಾವಿರಾರು ಮೈಲಿ ಹಾರಿಬರುವ ನಮಗೆ ಕೆಲವೊಮ್ಮೆ ನಿರಾಶೆ ಕಟ್ಟಿಟ್ಟ ಬುತ್ತಿ.ಪರದೇಶದಲ್ಲಿ ಭಾರತೀಯರಂತಿರುವ ನಮಗೆ,ಭಾರತಕ್ಕೆ ಮರಳಿದಾಗ ಪಾಶ್ಚಾತ್ಯರಂತೆ ವರ್ತಿಸಬೇಕಾದ ಹಿಂಸೆ ! ವಿದೇಶದಲ್ಲಿರುವಾಗ ಭಾರತೀಯರು ಎಂಬುದನ್ನು ಮರೆತು ಬಿಳಿಯರಿಗಿಂತ ಬೆಳ್ಳಗೆ ವರ್ತಿಸಿ,ಭಾರತದಲ್ಲೂ ಅದೇ ಚಮಕ್ ತೋರಿಸುವ ಭಾರತೀಯರು ಇವರಿಗೆ ಮಾದರಿ? ಭಾರತದ ಇಂದಿನ ಸಮಾಜದಲ್ಲಿ ಪಾಶ್ಚಾತ್ಯರ ಅಂಧ ಅನುಕರಣೆ ಊಟ, ಉಡಿಗೆ, ತೊಡಿಗೆಗಳಲ್ಲಿ ಹಾಸು ಹೊಕ್ಕಿದೆ. ಇತ್ತೀಚೆಗೆ ಗೆಳೆಯರ ಸಮಾವೇಶದಲ್ಲಿ ಅಮೆರಿಕಾದ ಉಡುಗೆ ತೊಟ್ಟು, ಸಂಜೆಯಲ್ಲಿ ಕರಿಕಪ್ಪು ಕನ್ನಡಕ ತೊಟ್ಟು, ಹೆಂಡತಿಗೆ ತುಂಡುಲಂಗ ಉಡಿಸಿಕೊಂಡು ಬಂದಿಳಿದ ಗೆಳೆಯ ರವಿಯ ಸಂಸಾರದ ಜೊತೆ ಫೊಟೋ ಕ್ಲಿಕ್ಕಿಸಿಕೊಳ್ಳಲು ಸಾಲುಗಟ್ಟಿ ಸರತಿಗೆ ಕಾದ ನನ್ನ ಭಾರತೀಯ ಮಿತ್ರರ ಬಗ್ಗೆ ಕನಿಕರವಾಯ್ತು, ಮರುಕ್ಷಣ ಫೇಸ್ಬುಕ್ಕಿನಲ್ಲಿ, ವ್ಹಾಟ್ಸಪ್ಪಿನಲ್ಲಿ ಅಮೆರಿಕಾದ ತಮ್ಮ ಮಿತ್ರರ ಜೊತೆ ತೆಗೆಸಿಕೊಂಡ ಚಿತ್ರಗಳ ರವಾನೆ ಮಾಡುತ್ತಿದ್ದರು.ಭಾರತದಲ್ಲಾದರೂ ಭಾರತೀಯ ಉಡುಗೆ ಉಡುವ ಅವಕಾಶ ಇದೆ ಎಂದು ತಿಳಿದು ಅಪ್ಪಟ ಭಾರತೀಯ ತೊಡುಗೆಯಲ್ಲಿದ್ದ ನಮ್ಮನ್ನು ಕೇಳುವವರಿರಲಿಲ್ಲ. ಕನ್ನಡದಲ್ಲಿ ಮಾತಾಡುತ್ತಿದ್ದವರು ಬಹುಶಃ ನಾವಿಬ್ಬರೇ! ಊಟಕ್ಕೆ ಫ್ರೆಂಚ್ ಮೆನ್ಯು. ಜೊತೆಗೆ ಪಿಜ್ಜ, ಬರ್ಗರ್ರು ಗಳೇ…. ಮನೆ ಬಿಟ್ಟು ಹೊರಹೋದರೆ ಇಂಗ್ಲೆಂಡಿನಲ್ಲಿ ಇಂತವೇ ಊಟಗಳ ಹೊರತು ಇನ್ನೊಂದು ಸಿಗುವುದಿಲ್ಲ. ಭಾರತದಕ್ಕೆ ಬಂದಾಗಲೂ ಫ್ರೆಂಚ್,ಇಟಲಿಯ ಊಟ ಮಾಡಲು ನನಗೂ-ಸುಮಿಗೂ ಬೋರು ಹೊಡೆದಿತ್ತು. ತಮ್ಮ ಜಾನಿ –ವಾಕರ್ ಬಾಟಲ್ ಗಳನ್ನು ಮುಖದ ಮುಂದೆ ಹಿಡಿದುಕೊಂಡು ಫ್ಹೋಟೊ ಕ್ಲಿಕ್ಕಿಸಿಕೊಂಡು ರೊಯ್ಯನೆ ವಾಟ್ಸಪ್ಪಿಗೆ ರವಾನಿಸುವುದನ್ನು ಮಾತ್ರ ಮರೆಯದ ಗೆಳೆಯರು ಸಂತೋಷವಾಗಿರುವುದನ್ನು ಬಿಟ್ಟು ತೋರಿಕೆಯ ಆಟಗಳಲ್ಲಿ ಸಂತೋಷ ಕಾಣುವುದನ್ನು ಕಂಡೆವು. ಬಾಯಿ ತುಂಬಾ ಮನಸ್ಪೂರ್ವಕವಾಗಿ ಮಾತಾಡಿ , ಹಳೆಯ ದಿನಗಳನ್ನು ನೆನೆದು ಮನಸಾರೆ ನಗೋಣ ಅಂತ ಬಂದ ನನಗೆ ಪೆಚ್ಚಾದದ್ದು ಸುಮಿಗೂ ತಿಳಿಯಿತೇನೋ. ಅವಳು ಅದನ್ನು ತೋರಿಸಲಿಲ್ಲ. ನೂರಾರು ವರ್ಷಗಳ ತಮ್ಮ ಸಾಮಾಜಿಕ ದಿನಚರಿಯಲ್ಲಿ ಸಹಜವಾಗಿ ಮುಳುಗಿರುವ ಪಾಶ್ಚಿಮಾತ್ಯರು…ಅವರ ಅಂಧ ಅನುಕರಣೆಯಲ್ಲಿ ಅಂತಹಃಕರಣ ಕಳೆದುಕೊಳ್ಳುತ್ತಿರುವ ಭಾರತೀಯ ಸಮಾಜಕ್ಕೆ ಏನಾಗಿದೆ…?ಪ್ರತಿ ಆಂಗ್ಲನಲ್ಲಿ ತಾನು ಆಂಗ್ಲನೆಂದು ಇರುವ ಹೆಮ್ಮೆ,ಭಾರತೀಯನಲ್ಲಿ ಆಳವಾಗಿ ಬೇರು ಬಿಟ್ಟಿರುವ ಕೀಳಿರಿಮೆಗಳ ವ್ಯತ್ಯಾಸ ಡಣಾಡಾಳಾಗಿ ಕಾಣುತ್ತದೆ.ಇದನ್ನೇ ಬಳಸಿಕೊಂಡು ಕಳೆದ ಹತ್ತು ವರ್ಷಗಳಲ್ಲಿ ಕುಸಿಯುತ್ತಿರುವ ತಮ್ಮ ದೇಶದ ಮಾರುಕಟ್ಟೆಗಳನ್ನು ಮತ್ತೆ ಬೆಳೆಸಿಕೊಳ್ಳಲು ಭಾರತದಂತಹ ದೇಶಗಳಿಗೆ ಬರುತ್ತಿರುವ ಮಾರುಕಟ್ಟೆಯ ಸರದಾರರು ಭಾರತೀಯರಿಗೆ ಮೂಗುದಾರ ಹಾಕಿ ಗುಲಾಮಗಿರಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಕತ್ತೆಗಳಿಗೆ ಕೋಲಿದ್ದವನೇ ಮಾಲೀಕ…. ಮನಸ್ಸು ಹಿಂದಕ್ಕೆ ಓಡಿತು…. ಗಾಂಧೀಜಿಯ ಆತ್ಮ ಚರಿತ್ರೆ ನನ್ನ ಮೆಲೆ ಗಾಢ ಪರಿಣಾಮ ಬೀರಿತ್ತು. ಇಂಗ್ಲೆಂಡಿಗೆ ಹೊರಟಾಗ ಯಾವ ಪರಿಸ್ಥಿ ತಿಯಲ್ಲೂ ಬದಲಾಗದ ಹಠಮಾರಿ ಸ್ವಭಾವದ ಗಾಂಧಿಗೆ ಇಂಗ್ಲೆಂಡಿನಲ್ಲಿ ಓದಿನ ಬಳಿಕವೇ ಭಾರತದ ಸ್ವತಂತ್ರದ ಅರಿವು ಮೂಡಿತೆಂಬ ಸಮಜಾಯಷಿ ಹೇಳಿಕೊಂಡಿದ್ದೆ.ತರಭೇತಿಯ ನೆಪದಲ್ಲಿ ಹೊರಟು, ಹೊಟ್ಟೆ ಪಾಡಿನ ಹೆಸರಲ್ಲಿ ಇನ್ನೂ ಪರದೇಶದಲ್ಲೇಇದ್ದೇನೆ.ಯಾವ ಗಿಂಬಳವೂ ಇಲ್ಲದೆ, ತೆರಿಗೆ ವಂಚಿಸದೆ ಕೂಡಿಟ್ಟ ಪ್ರತಿ ಪೌಂಡನ್ನು ಭಾರತದ ರೂಪಾಯಿಯಾಗಿಸಿ ಭಾರತದಲ್ಲಿ ನೆಲವನ್ನು ಕೊಂಡು ಭಾರತೀಯನಾಗಿ ಹಿಂತಿರುಗುವ ಕನಸನ್ನು ಮುಂದುವರಿಸಿದ್ದೇನೆ.ಆದರೆ ಕಾರಣವೇ ಇಲ್ಲದೆ ಸಾವಿರಾರು ಪಟ್ಟು ಜಿಗಿದ ಭಾರತದ ಕರಾಳ ಮಾರುಕಟ್ಟೆಗೆ ನನ್ನ ದುಡಿಮೆ ಸಾಕಾಗಲಿಲ್ಲ.ತೆಗೆದ ಸಾಲಗಳಿಗೆ ಈಗಲೂ ಹಣ ತುಂಬುತ್ತಿದ್ದೇನೆ… ಮನೆಯಿಂದ ನಡೆದು ಹತ್ತಿರದಲ್ಲಿರುವ ಸ್ಟೇಡಿಯಂ ತಲುಪಿದೆ. ಜನಜಂಗುಳಿ ಸೇರಿತ್ತು. ಹಲವಾರು ಪೋಷಕ ವೃಂದದ ಜೊತೆ ಇದ್ದವರೆಲ್ಲ ಬರೀ ಪಡ್ಡೆ ಹುಡುಗರು. ಸ್ವಯಂ ಸೇವಕರು, ನಿವೃತ್ತರಾದ ಶಿಕ್ಷಕರು, ಬಿಳೀ ಟೋಪಿ ತೊಟ್ಟ ದೇಶ ಭಕ್ತರು ನಿಧಾನವಾಗಿ ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೇನೋ? “ಎಕ್, ದೋ,ತೀನ್..ಚಾ..ರ್…” ರಂಗು ರಂಗಿನ ಬಣ್ಣದ ಬಟ್ಟೆ ತೊಟ್ಟ ವಿವಿಧ ಶಾಲೆಗಳ ಮಕ್ಕಳು ಸ್ವತಂತ್ರ ದಿನಾಚರಣೆಯ ಕವಾಯತಿನಲ್ಲಿ ತೊಡಗಿಕೊಂಡಿದ್ದರು. ಈ ದಿನ ನಾನು ಪ್ರತಿ ವರ್ಷದಂತೆ ಸ್ಟೇಡಿಯಂನಲ್ಲಿ ತಪ್ಪದೆ ಹಾಜರ್. ಒಂದೊಮ್ಮೆ ನಾನು ಈ ಮಕ್ಕಳಲ್ಲಿ ಒಬ್ಬನಾಗಿದ್ದೆ. ಹೀಗೇ ಕವಾಯತು ಮಾಡಿ, ನಮ್ಮ ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದೆ. “ನಿಮಗೇಕೆ ಕೊಡಬೇಕು ಕಪ್ಪ…., ನೀವೇನು ಇಷ್ಟರಾ..ಒಡೆಯರಾ…” -ಎಂದು ಕೇಳುವ ಕಿತ್ತೂರು ರಾಣಿಯ ಪಾಠವನ್ನು ಓದುವಾಗ ಕಣ್ಣೀರು ಹಾಕಿದ್ದೆ. ಈಗ ಪ್ರತಿ ವರ್ಷಕ್ಕೊಮ್ಮೆ ಇಂಗ್ಲೆಂಡಿನ ಜನತೆಗೆ ಸೇವೆ ಸಲ್ಲಿಸಿ ಗಳಿಸಿದ ದುಡ್ಡಿನಲ್ಲಿ ಸ್ವತಂತ್ರ ಭಾರತದ ಮಾರುಕಟ್ಟೆಯಲ್ಲಿ ಸಿಗದ ಸೌಲಭ್ಯಗಳಿಗಾಗಿ, ನಿಯತ್ತಿಗಾಗಿ, ಸಮಾನತೆಗಾಗಿ ತಪ್ಪದೆ ಕಪ್ಪವನ್ನು(ತೆರಿಗೆ) ಕಟ್ಟಿ ಧನ್ಯನಾಗುತ್ತಿದ್ದೇನೆ.ಇದು ನಾನು ಭಾರತದ ಪಟ್ಟಭದ್ರ ಹಿತಾಸಕ್ತಿಗಳಿಂದ ಗಳಿಸಿದ ಮುಕ್ತಿಗಾಗಿಯೂ ಇರಬಹುದು! ಎಲ್ಲರೂ ಆಶೆಗಳನ್ನು ಕೈಬಿಟ್ಟಿದ್ದಾರೆ. ಮಾಧ್ಯಮಗಳು ರಾಜಕೀಯದ ಉಧ್ಯಮಿಗಳ ಕೈ ವಶವಾಗಿದೆ! ನ್ಯಾಯಾಲಯಗಳು ಕಣ್ಣಿಲ್ಲದೆ ಕೆಲಸ ಮಾಡುತ್ತಿವೆ.ಪೋಲಿಸರು ತಮಗೇ ದಕ್ಕಿರದ ನ್ಯಾಯ, ಸ್ವಾತಂತ್ರಗಳಿಗೆ ಹೋರಾಡುವಲ್ಲಿ ಕೂಡ ಹತಾಶರಾಗಿ ರಾಜೀನಾಮೆ ಕೊಡುತ್ತಿದ್ದಾರೆ.ಶಿಕ್ಷಣ ಖರೀದಿಗಿದೆ.ಹೊಸದಾಗಿ ಹರಿದಾಡುತ್ತಿರುವ ವಾಣಿಜ್ಯ ಬೆಳವಣಿಗೆಗೆ ಪ್ರತಿಯಾಗಿ ಬೆಳೆಯದ ಸೌಲಭ್ಯಗಳಿಂದ ಇಡೀ ವ್ಯವಸ್ಥೆ ನಲುಗಿದೆ. ಇವರ ಮಧ್ಯೆ ದೇವರ ಹೆಸರಿನ ದೊಡ್ಡ ದಂಧೆ ನಡೆದಿದೆ.
You cannot copy content of this page