ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಮಿಲನ

ವೀಣಾ ರಮೇಶ್

ಮದುವನದ ಅಂಗಳದಲಿ
ಮಧುರ ಮೌನ ಹಾಸಿದೆ
ಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳು
ಮಧುವಿಹಾರದ ಹಿಗ್ಗಿನಲಿ

ಹಸಿರ ಹಂದರದೊಳಗೆ
ಗಂಧರ್ವರೆ ಧರೆಗಿಳಿದಂತೆ
ಮುದ ನೀಡಿ ಮತ್ತೇರಿಸಿದ
ಆಲಾಪದ ದುಂಬಿಗಳು
ಮಧು ಹನಿಯೊಂದು
ಜಾರಿದೆ,ಕೆನ್ನೆ ಮಾತಾಡಿದೆ
ತುಸು ಬಣ್ಣದಲಿ,
ಅದರುತಿದೆ ಅಧರಗಳು

ಭಾವಗಳ ಅರಮನೆಯಲಿ
ಮಧುಮಂಚದ ಉಯ್ಯಾಲೆ
ಪ್ರೇಮರಾಗದಿ ತೂಗುತಿರೆ
ಸವಿಗನಸುಗಳು ಬಿಗಿದಪ್ಪಿ
ನನ್ನೊಡಲಲಿ ಕೂತಿರೇ

ಮಧುಚಂದಿರನು ಕರೆದಿರೆ
ಮೆಲ್ಲನೆ
ತನುಮನಗಳು ಹೆಣೆದಿದೆ
ಪ್ರೇಮದ ಚಿಲುಮೆ
ಅಧರ ಸುಖದೊಳಗಿನ
ಮದಿರೆ,ಯ ಬೆಚ್ಚನೆಯ
ಹಿತದೊಳಗೆ

ಮಧುಮಿಲನದ ಅರಸಿಗೆ
ಚೈತ್ರವಸಂತನ ಆಗಮನದ ಸಂತಸ
ಮತ್ತದೇ ಪ್ರತಿಪದೆಗೆ
ಸಂಭ್ರಮದ ಮಧುಮಾಸ

*********************

About The Author

Leave a Reply

You cannot copy content of this page

Scroll to Top