ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Assorted-color Star Decor on Maroon Textile

ಮಾಲತಿ ಹೆಗಡೆ

ನೂರು ಆಸೆ ನೂರು ಕನಸ ಹತ್ತಿಕ್ಕುತ ನಡೆದೆಯೇಕೆ?
ಕೋಪತಾಪದಲ್ಲಿ ಬಳಲಿ ಬಿಕ್ಕುತ್ತ ನಡೆದೆಯೇಕೆ?

ಹೆತ್ತ ಕೂಸಿನ ವಾತ್ಸಲ್ಯವ ಕಳಚಿ ನಿರ್ಮೋಹ ಮೆರೆದೆ
ಉತ್ತರ ಕೊಡದ ಮೌನ ಕಕ್ಕುತ್ತ ನಡೆದೆಯೇಕೆ?

ಸಿಕ್ಕ ಬದುಕ ಕಟ್ಟಲರಿಯದೇ ಸಿಕ್ಕು ಸಿಕ್ಕಾಗಿಸಿ ಸೊರಗಿದೆ
ನಕಾರಾತ್ಮಕ ವಿಚಾರದಲ್ಲೇ ಸೊಕ್ಕುತ್ತ ನಡೆದೆಯೇಕೆ?

ಹುಟ್ಟಿದವರಿಗೆಲ್ಲ ಒಂದು ದಿನ ಬರುವುದು ಸಾವು ನಿಶ್ಚಿತ
ಅರೆ ಆಯುಷ್ಯದಲ್ಲೇ ಸೋಲು ಮುಕ್ಕುತ್ತ ನಡೆದೆಯೇಕೆ?

ಮುದ್ದುಕಂದನಿಗೆ ಅಮ್ಮನಾಗಿ ಹೆಮ್ಮೆಯ ದೇವತೆಯಾಗಿದ್ದೆ
ನಕ್ಷತ್ರವಾಗುವ ಹುಚ್ಚಿನಲಿ ನೋಯುತ್ತ ನಡೆದೆಯೇಕೆ?

************

About The Author

1 thought on “ಕಾವ್ಯಯಾನ”

  1. Chendaju kavana,,,,
    Swlpa dina gyap aagittu,,duguda hanhikolada mooka mouna anstu,,tumba like aatunange

Leave a Reply

You cannot copy content of this page

Scroll to Top