ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಮೂಗುತಿ ಸುಂದರಿ

ಅನುವಾದಿತ ಕವಿತೆ ಕನ್ನಡ ಮೂಲ:ಸ್ಮಿತಾ ಅಮೃತರಾಜ್.ಸಂಪಾಜೆ. ಇಂಗ್ಲೀಷಿಗೆ: ಸಮತಾ ಆರ್ ಮೂಗುತಿ ಎಂದರೆಮೂಗು ಮುರಿಯುತ್ತಿದ್ದವಳುಪರಮಾಶ್ಚರ್ಯವೆಂಬಂತೆ ಇತ್ತೀಚೆಗೆಮೂಗು ಚುಚ್ಚಿಸಿಕೊಂಡಳು.ಕಣ್ಣರಳಿಸಿದ್ದಕ್ಕೆ, ಬದುಕು ಶುರುವಾಗುವುದೇನಡು ಹರಯದಲ್ಲಿ ಕಣೇ ಅಂತಹಗುರವಾಗಿ ನಕ್ಕಿದ್ದಳು. ಮೊನ್ನೆ ಮೊನ್ನೆ ನಡುರಾತ್ರಿಯಲ್ಲಿಫೋನಾಯಿಸಿ ಮೂಗು ವಿಪರೀತ ನೋವುತಡೆಯೋಕಾಗಲ್ವೇ ಅಂತ ಕಣ್ಣೀರಾಗಿದ್ದಕ್ಕೆ.. ಯಾಕೆ ತ್ರಾಸ ತೆಗೆದುಬಿಡು ಎಂದಿದ್ದೆಕಲೆ ಉಳಿಯಬಾರದಲ್ಲವಲ್ಲ ಕನಲಿದ್ದಳು. ಮೊನ್ನೆ ಬಸ್ಸಿನಲ್ಲಿ ಸಿಕ್ಕವಳುಮೂಗುತಿಯಲ್ಲಿ ಚೆಂದಕ್ಕೆ ಕಂಡಿದ್ದಳುನಾನೂ ಚುಚ್ಚಿಸಿಕೊಳ್ಳಲಾ…?ಮೂಗು ಸವರಿಕೊಂಡೆ. ಎದೆಯೊಳಗೊಂದು ಚುಚ್ಚುವ ನೋವಿದ್ದರೆಮೂಗು ಚುಚ್ಚಿಸಿಕೋ…ಎಂದಿನಂತೆ ನಕ್ಕಳು.ಈಗ ಮೂಗಿನ ಕಡೆಗೇ ನನ್ನ ಗಮನಸ್ವಗತಕ್ಕೆಂಬಂತೆ ನುಡಿದಳು. Nosepin of a beauty. “A nose pin ! Oh ! no,never”She always used to sneer.But amused all with one. Question in my eyes,And a reply came,“Blossoms of mid life”Said her smile. At a midnight,“This pain,who will bear?”Her voice drenched in tearsWoke me up for an answer. “Why to bear?take it out”My yawn replied.“Will the scar heal?”She burst aloud. Someday in a busMet the beauty shining her nose.“Shall I too….”asked my noseWith the touching fingers. ” If your heart is aching,With a pricking thorn,Then get a nosepin”As usual she said smiling. “All that keeps me awake nowIs my nose pin”Said she as a monologue. **********************

ಮೂಗುತಿ ಸುಂದರಿ Read Post »

ಕಾವ್ಯಯಾನ

ನಡುಗಡ್ಡೆಯ ಹುಡುಗಿ

ಕವಿತೆ ಎಂ.ಜಿ .ತಿಲೋತ್ತಮೆ ನಾನು ಹರವಿನ ಜಲವ ಈಜಿ,ದಾಟಿಆ ದಡವ ಸೇರುವ ಬಯಕೆಕೋಟೆಯೊಳಗೊಂದು ಕೋಟೆಕಟ್ಟಿಕೊಂಡು ಕರೆದರೂ ನೀನು ಕೇಳುತ್ತಿಲ್ಲಸೇರಲಾಗುತ್ತಿಲ್ಲ… ದಿನಕ್ಕೆ ದೃಷ್ಟಿ ತಗುಲುವಅನಂತ ಕಣ್ಣು ,ಹುಚ್ಚು ಮನಸ್ಸುಗಳಲ್ಲಿನನ್ನದು ಒಂದುಅವಳ ಮೈಸಿರಿ,ಸೊಬುಗು ವರ್ಣನೆಗೆಸುತ್ತ ಹರಿಯುವ ಉದಕಕ್ಕೂ ಎಟಕದು ಈ ದಡಕ್ಕೂ ಆ ದಡಕ್ಕೂ ಅಂತರಅಳತೆಯಮಾಪನದಲ್ಲಿ ಅಗಮ್ಯಈ ಮನಕ್ಕೂ ಆ ಮನಕ್ಕೂ ಅಂತರವಿಲ್ಲಹಾಲಿನೊಳಗೆ ಸೇರಿಕೊಂಡ ಜೇನಂತೆಅಷ್ಟೇ ಹತ್ತಿರ ಇರಬಹುದು ಯಾವ ದಾರಿ ಹಿಡಿದು ಬರಲಿದಿನ ನಿತ್ಯ ಅರಳುವ ಪ್ರೀತಿಗೆಕಟ್ಟೆ ಕಟ್ಟಿದ್ದರೆ ಜೀವ ಹೇಗೆ ಉಳಿಯುವುದು ನೀನು ನಾನಾಗಿ ನಾನು ನೀನೇ ಎಂದುಹೀಗೆ ಬರೆದಿಟ್ಟ ಪ್ರೀತಿ ಭಾಷೆಯ ನುಡಿಗಳಹಾಳೆಗಳು ತೂರಿ ಬಿಟ್ಟರೆ ಓಡೋಡಿ ಬರುವೆಯಾ? ವಿನಾಕಾರಣ ಕಾಯಿಸಿ,ಬೇಯಿಸಿ,ನಿಂದಿಸಿಕೊನೆಗೆ ಸೋಲಬೇಕೆನ್ನುವ ಹಟಬೇಕೆಮೊದಲ ಬೇಟೆಗೆ ಒಪ್ಪಬಹುದಲ್ಲವೇ ಮತ್ತೆ ಅದನ್ನೇ ಹೇಳುವೆಎಷ್ಟು ದೂರ ನಿನ್ನ ನನ್ನ ನಡುವೆಮಧ್ಯ ಮುಳುಗಿಸುವವಿರೋಧ ಭಾವ ವಿಲ್ಲವಾದರೆಅಂತದೇನು ಭಿನ್ನತೆ ಇಲ್ಲ ***************

ನಡುಗಡ್ಡೆಯ ಹುಡುಗಿ Read Post »

ಅನುವಾದ

ಒಂದು ಖಾಲಿ ಜಾಗ

ಅನುವಾದಿತ ಕವಿತೆ ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ ಇಂಗ್ಲೀಷಿಗೆ: ನಾಗರೇಖಾ ಗಾಂವಕರ್ An empty space Each and every one might be owed an empty space.at the backyard? or frontyard?or else a room, inside the homeor may be at some unseen placestotally as being personal. Everyone atleast once a whiledefinitely think about this empty spacewhat would be sown,let it be a lady finger? or to spread over ivy gourdor to grow paddy crop?or else if it is quite spaciousto keep it for saleby constructing a building?as according to their capacity and neccessity In an utter helplessnessthis empty space won’t point outthat he is the owner,all the time it moves on from hand to hand.and this bussiness brisk in auction. If it is a building,can stay for long without breathingtime to.time all the sown, grownoften change underthe cycle of life, death, and rebirth So ashow easily these empty spaces become vacantas being filled.Always stand swayingon the scale of sale and purchase. I, observing for long timehere is an invisible empty spaceremained so long as itself,only the exquisite perfume thatthe shapeless wind carriessauntering across. A quiet sensationseen, unseen and never be aquiredthat is only fillingthe space inside.Still it is remained hollow and unoccupied If you are eager thenTouch it with eyes wide openWho knows..that empty space might also be yours… Translated into English–Nagarekha Gaonkar ಒಂದು ಖಾಲಿ ಜಾಗ ಎಲ್ಲರ ಬಳಿಯೂ ಎಲ್ಲರೊಳಗೂಇರಬಹುದು ಒಂದೊಂದು ಖಾಲಿ ಜಾಗ. ಹಿತ್ತಲಿನಲ್ಲಿಯೋ? ಮುಂದಣ ಆಂಗಳದಲ್ಲಿಯೋ?ಒಳಕೋಣೆಯೊಳಗೋ? ಅಥವಾ ಯಾವುದೋಅದೃಶ್ಯ ಎಡೆಯಲ್ಲಿ ತೀರಾ ಖಾಸಗಿಯಾಗಿ. ಒಂದೊಮ್ಮೆ ಎಲ್ಲರೂ ಈ ಖಾಲಿ ಜಾಗದಕುರಿತು ಯೋಚಿಸಿಯೇ ಇರುತ್ತಾರೆ. ಬೆಂಡೆ ಬಿತ್ತುವುದಾ? ತೊಂಡೆ ಹಬ್ಬಿಸುವುದಾ?ಭತ್ತ ಬೆಳೆಯುವುದಾ?ತುಸು ಹೆಚ್ಚೇ ಇದ್ದರೆ ಕಟ್ಟಡ ಕಟ್ಟಿಸಿಬಿಕರಿಗಿಡುವುದಾ?ಅವರವರ ಅನುಕೂಲಕ್ಕೆ ತಕ್ಕ ಹಾಗೆಅಗತ್ಯಕ್ಕೆ ತಕ್ಕ ಹಾಗೆ. ಇವರೇ ವಾರಸುದಾರರು ಅಂತಬೆಟ್ಟು ಮಾಡಿ ತೋರಿಸಲಾಗದ ಅಸಹಾಯಕತೆಯಲ್ಲಿಖಾಲಿ ಜಾಗವೊಂದು ಅವರಿವರ ಕೈಗೂಸಾಗುತ್ತಲೇಸಾಗುತ್ತದೆ.ವ್ಯಾಪಾರ _ ವಹಿವಾಟು ಭರದಲ್ಲಿ ಕುದುರುತ್ತದೆ. ಕಟ್ಟಡವಾದರೆ ಉಸಿರಾಡದೆಯೂಹಲವು ಕಾಲ ಹಾಗೇ ಉಳಿದುಕೊಂಡು ಬಿಡುತ್ತದೆ.ಬಿತ್ತಿದ್ದು ಬೆಳೆದದ್ದು ಕಾಲಕಾಲಕ್ಕೆಹುಟ್ಟಿ,ಸತ್ತು,ಮರುಹುಟ್ಟು ಪಡೆದುಬದಲಾಗುತ್ತಲೇ ಇರುತ್ತದೆ. ಹಾಗೇ..ಎಷ್ಟು ಸುಲಭದಲ್ಲಿ ಈ ಖಾಲಿ ಜಾಗಗಳುತುಂಬಿಕೊಳ್ಳುತ್ತಲೇ ಬರಿದಾಗುತ್ತವೆ.ಕ್ರಯ_ ವಿಕ್ರಯಗಳ ತಕ್ಕಡಿಯೊಳಗೆತೂಗಿಸಿಕೊಂಡೇ ನಿಲ್ಲುತ್ತವೆ. ಬಹುಕಾಲದಿಂದ ನೋಡುತ್ತಲೇ ಇರುವೆಇಲ್ಲೊಂದು ಅಗೋಚರ ಖಾಲಿ ಸ್ಥಳಹಾಗೇ ಉಳಿದುಕೊಂಡು ಬಿಟ್ಟಿದೆ.ನಿರಾಕಾರ ಗಾಳಿ ಹೊತ್ತು ತರುವ ಅಪರೂಪದಪರಿಮಳವಷ್ಟೇ ಅಲ್ಲಿ ಸುಳಿದಾಡುತ್ತದೆ. ಒಂದು ನಿಶ್ಯಬ್ಧ ಮಿಡುಕಾಟಕಂಡದ್ದೂ ಕಾಣದ್ದೂ ಎಂದಿಗೂ ದೊರಕದ್ದು ಮಾತ್ರಆ ಖಾಲಿಯೊಳಗೆ ತುಂಬಿಕೊಳ್ಳುತ್ತಲೇ ಇದೆ.ಆದರೂ ಆ ಖಾಲಿ ಖಾಲಿಯಾಗಿಯೇ ಉಳಿದಿದೆ. ಕುತೂಹಲವಿದ್ದರೆ,ಒಮ್ಮೆ ಮುಟ್ಟಿಕಣ್ಬಿಟ್ಟು ನೋಡಿಕೊಳ್ಳಿ.ಆ ಒಂದು ಖಾಲಿ ಜಾಗ ಬಹುಶಃನಿಮ್ಮದೇ ಇರಬಹುದೇನೋ..? ********

ಒಂದು ಖಾಲಿ ಜಾಗ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಪಾಯ ಎದುರಿಸುವ ಬಗೆ ಹೀಗೆ . ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ  ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು.  ಕಾಡಿನ ದಾರಿಯನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ ಕರಡಿ ಕಾಣಿಸಿಕೊಂಡಿತು.ಕರಡಿ ಇನ್ನೂ ದೂರದಲ್ಲಿತ್ತು. ಹಾಗಾಗಿ ಹೇಗಾದರೂ ಅದರಿಂದ ಬಚಾವಾಗಬೇಕೆಂದು ಉಪಾಯ ಮಾಡಲು ಅವರಿಬ್ಬರಿಗೂ ಕೆಲ ಕ್ಷಣಗಳು ಉಳಿದಿದ್ದವು. ಅಷ್ಟರಲ್ಲಿ ಇಬ್ಬರಲ್ಲಿ ಒಬ್ಬ ಸರಸರನೆ ಮರ ಹತ್ತಿ ಮರದ ಕೊಂಬೆಯ ಮೇಲೆ ಕುಳಿತು ಬಿಟ್ಟ. ಆದರೆ ಇನ್ನೊಬ್ಬನಿಗೆ ಮರ ಹತ್ತಲು ಬರದು. ಮತ್ತೊಬ್ಬರು ಸಹಾಯ ಸಿಕ್ಕಿದ್ದರೆ ಹತ್ತಿರುತ್ತಿದ್ದನೇನೋ! ಆದರೆ ಅವನ ಗೆಳೆಯ ಅದಾಗಲೇ ಮರದ ತುದಿಯನ್ನೇರಿ ಬಿಟ್ಟಿದ್ದರಿಂದ ಇವನೀಗ ನೆಲದಲ್ಲಿ ಒಬ್ಬಂಟಿಯಾಗಿದ್ದ. ಕರಡಿ ಇನ್ನೇನು ಹತ್ತಿರವೇ ಬಂತು. ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಒಂದು ಉಪಾಯ ಹೊಳೆದಂತಾಯ್ತು.  ಕರಡಿ ಸಮೀಪಕ್ಕೆ ಬಂತು ಎನ್ನುವಷ್ಟರಲ್ಲಿ ನೆಲದ ಮೇಲೆ ಸತ್ತಂತೆ ಮಲಗಿ ಬಿಟ್ಟ. ಕರಡಿ ತೀರಾ ಹತ್ತಿರಕ್ಕೆ ಬಂತು. ಯುವಕನನ್ನು ಮೂಸಿತು. ಸಾವು ಎದೆಯ ಮೇಲೆ ನಿಂತಿರುವಾಗ ಯಾರಿಗಾದರೂ ಉಸಿರು ಬಂದೀತೆ? ಯುವಕನಿಗೆ ಭಯದಲ್ಲಿ ಉಸಿರೇ ನಿಂತು ಹೋದಂತಾಗಿತ್ತು! ಕರಡಿ ಆತನು ಸತ್ತಿರುವನೆಂದು ತಿಳಿದು ತನ್ನ ಪಾಡಿಗೆ ತಾನು ಮುಂದೆ ಸಾಗಿತು. ಕರಡಿ ಕಣ್ಮರೆಯಾಗುವವರೆಗೂ ಮರದ ಮೇಲೆ ಕುಳಿತಿದ್ದ ಯುವಕ ಇನ್ನೇನು ಅಪಾಯವಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕೆಳಗಿಳಿದ. ಸತ್ತಂತೆ ನಟಿಸಿ ಮಲಗಿದ್ದವನೂ ಅಬ್ಬಾ! ಅಂತೂ ಇಂತೂ ಬಚಾವಾದೆ ಎಂದು ಎದ್ದು ಕೂತ. ಮರದಿಂದ ಇಳಿದ ಯುವಕ ‘ಏನು ಹೇಳಿತು ಗೆಳೆಯ, ಕರಡಿ ನಿನ್ನ ಕಿವಿಯಲ್ಲಿ? ಎಂದು ನಗುತ್ತ ಕೇಳಿದ. ಸತ್ತಂತೆ ಮಲಗಿದ್ದ ಯುವಕ ಉತ್ತರಿಸಿದ ‘ಅಪಾಯದ ಸಮಯದಲ್ಲಿ ಕೈ ಬಿಟ್ಟು ಹೋಗುವವರನ್ನು ಎಂದೂ ನಂಬಬೇಡ ಎಂದು ಹೇಳಿತು. ಅಪಾಯವೆಂದರೆ. . . . .?      ದೈನಂದಿನ ಬದುಕಿಗೆ ಅಕಸ್ಮಾತ್ತಾಗಿ ಭೇಟಿ ಕೊಡುವಂಥ ಆಗಂತುಕನೇ ಅಪಾಯ. ಆಂತರಿಕ ಅಗ್ನಿಯನ್ನು ಉದ್ದೀಪನಗೊಳಿಸುತ್ತದೆ. ನಮ್ಮೊಳಗಿನ ಅತ್ಯುನ್ನತವಾದುದನ್ನು ಅತ್ಯುತ್ತಮವಾದುದನ್ನು ಹೊರಗೆಳೆಯಲು ಪ್ರೇರೇಪಿಸುತ್ತದೆ. ಬಹುತೇಕರು ಅಪಾಯವನ್ನು ಅಪಾಯಕಾರಿ ಎಂದು ದೂರ ಸರಿಯುತ್ತಾರೆ ಹೊರತು ಅದು ಹೊತ್ತು ತಂದ ಅವಕಾಶಗಳ ಮೂಟೆಗಳನ್ನು ತೆರೆದು ನೋಡುವುದೇ ಇಲ್ಲ. ಸಣ್ಣ ಪುಟ್ಟ ಅಪಾಯಗಳಿಗೂ ಹೆದರಿ ಜೀವನ ಪ್ರೀತಿ ಕಳೆದುಕೊಳ್ಳುವವರು ಅಪಾಯಗಳ ಮಡಿಲಲ್ಲಿ ಬಿದ್ದು ಗಗನಚುಂಬಿ ಹಿಮ ಪರ‍್ವತಗಳ ನೆತ್ತಿಯ ಮೇಲೆ ನಿಂತವರನ್ನು, ಉದ್ದುದ್ದ ಸಾಗರಗಳನ್ನು ಈಸಿ  ಗೆದ್ದವರನ್ನು ಹಗ್ಗದ ಮೇಲೆ ನಡೆಯುವವರನ್ನು ನೋಡಿ ಕಲಿಯಬೇಕು. ಅಪಾಯಗಳು ಮನುಷ್ಯನಿಗೆ ಹೇಳಿ ಕೇಳಿ ಬರುವುದಿಲ್ಲ. ಅಪಾಯದ ಸ್ಥಿತಿಯಲ್ಲಿ ಯಾರಾದರೂ ನಮ್ಮನ್ನು ಬಚಾವು ಮಾಡುತ್ತಾರೆಂದು ನಂಬಿಕೊಂಡು ಕುಳಿತುಕೊಳ್ಳುವುದು ತರವಲ್ಲ. ಸಮಯ ನಿರ‍್ವಹಣೆಯಂತೆ ಅಪಾಯ ನಿರ‍್ವಹಣೆಯೂ ಒಂದು ಕಲಿಯಬೇಕಾದ ಕಲೆ. ಅಪಾಯ ಎದುರಿಸುವ ಬಗೆ ಹೇಗೆ ಎನ್ನುವುದನ್ನು ನೋಡೋಣ ಬನ್ನಿ. ಮೇಲಿನ ಕಥೆಯ ಸಂದೇಶವನ್ನು ಮಾನವರೆಲ್ಲ ಬಯಸುವುದು ಸಹಜ. ಆಪತ್ತಿನಲ್ಲಿ ಉದ್ದೇಶಪೂರ‍್ವಕವಾಗಿ ನಮ್ಮನ್ನು ಕೈ ಬಿಟ್ಟು ಹೋಗುವವರನ್ನು ನಾವು ನಂಬಲೇ ಬಾರದು. ಆದರೆ ಆ ಸಮಯದಲ್ಲಿ ಏನು ಮಾಡಬೇಕೆಂದು ಹೊಳೆಯದೇ ಹಾಗೆ ನಡೆದುಕೊಂಡಿದ್ದರೆ ಅಂಥವರನ್ನು ಕ್ಷಮಿಸುವುದು ಒಳಿತು. ‘ಕ್ಷಮಾ ಗುಣದ ಬಗ್ಗೆ ಖಂಡಿತ ಕಡಿಮೆ ಎಣಿಕೆ ಬೇಡ.’ ಯಾವುದೇ ಕೆಟ್ಟ ಕಾರ‍್ಯ ಶಿಕ್ಷೆಯಿಂದ ತಪ್ಪಿಸಿಕೊಳ್ಳದು. ಎಂಬುದನ್ನು ನೆನಪಿನಲ್ಲಿಡಬೇಕು. ಗೊಂದಲದ ಗೂಡಾದ ಮನಸ್ಸಿಗೆ ಎಲ್ಲವೂ ವಿಪರೀತಾರ‍್ಥಗಳೇ! ಸಮಯ ಸನ್ನಿವೇಶವನ್ನು ಅರ‍್ಥೈಸಿಕೊಂಡು ಆಪತ್ಕಾಲದಲ್ಲಿ ನಮ್ಮೊಂದಿಗಿದ್ದವರು ನಡೆದುಕೊಳ್ಳುವ ರೀತಿಯನ್ನು ಪರಿಶೀಲಿಸಿ ದೂರ ಸರಿಯುವುದೋ ಇಲ್ಲ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕೋ ಎನ್ನುವುದನ್ನು ನಿರ‍್ಧರಿಸುವುದು ಉಚಿತ ಮನಸ್ಥಿತಿ.  ಹಾಗೆ ನೋಡಿದರೆ ಅಪಾಯದ ಸ್ಥಿತಿಯಲ್ಲಿ ನಮ್ಮ ಮನಸ್ಥಿತಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಮಗೆ ಘಟಿಸುವ ಅನೇಕ ವಿಷಯಗಳು ಮತ್ತು ಅವು ನಮಗೆ ಎಂಥ ಫಲಗಳನ್ನು ನೀಡುತ್ತವೆ ಎಂಬುದು ನಮ್ಮ ಮನಸ್ಥಿತಿಯ ಮೇಲೆ ಆಧಾರ ಪಡುತ್ತದೆ. ಭಯಗೊಂಡರೆ ಏನು ಮಾಡಬೇಕೆಂದು ತಲೆಗೆ ತೋಚುವುದೇ ಇಲ್ಲ. ಹೀಗಾಗಿ ‘ಧೈರ‍್ಯದಿಂದ ಇದ್ದರೆ  ಅರ‍್ಧ ಅಪಾಯವನ್ನು ಗೆದ್ದಂತೆ.’ಆಶಾವಾದಿ ಭಾವ ಶಕ್ತಿಯನ್ನು ತುಂಬುತ್ತದೆ. ಪ್ರಯತ್ನವೆನ್ನುವುದು ಎಲ್ಲದಕ್ಕೂ ಮೂಲ ಕೇಂದ್ರ ಬಿಂದು. ಅಪಾಯದಲ್ಲಿ ಪ್ರಯತ್ನ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವೆನ್ನುವುದು ಕೇವಲ ಪಠ್ಯ ಬೋಧನೆಯಲ್ಲ. ಆಗಾಗ ಎದುರಾಗುವ ಅಪಾಯಗಳನ್ನು ಎದುರಿಸಲು ಸಿದ್ಧರಾಗುವುದನ್ನು ಕಲಿಸುವುದೂ ಆಗಿದೆ. ವಿದ್ಯಾರ‍್ಥಿ ದೆಸೆಯಲ್ಲಿ ಅಪಾಯದ ಅಡಿಪಾಯ ಅಲ್ಲಾಡಿಸುವ ಬಗೆ ತಿಳಿದುಕೊಳ್ಳಬೇಕು. ಅನುಭವದ ತಿಳುವಳಿಕೆ ನಾವು ಯಾವುದೇ ಕ್ಷೇತ್ರದಲ್ಲಿರಲಿ ಅಪಾಯ ನಿರ‍್ವಹಣೆಯನ್ನು ಕಲಿಯದ ಹೊರತು ಆ ಕ್ಷೇತ್ರದಲ್ಲಿಯ ವ್ಯಕ್ತಿ ಮತ್ತು ವಸ್ತುಗಳ ಮೌಲ್ಯವನ್ನು ನಿಖರವಾಗಿ ಅಳೆಯದ ಹೊರತು ಕ್ಷೇಮಕರ ಎಂದು ಹೇಳಲಾಗದು. ಅಪಾಯದ ಬಗೆಗಿನ ನಮ್ಮ ಹಿಂದಿನ ಅನುಭವಗಳು ಒಳ್ಳೆಯ ನಿರ‍್ಧಾರಗಳಿಗೆ ದಾರಿ ಮಾಡುವುದಾದರೆ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ‘ನಾವು ಒಂದು ಅನುಭವದ ತಿಳುವಳಿಕೆಯನ್ನು ಬಿಟ್ಟರೆ ಮಿಕ್ಕೆಲ್ಲದ್ದರಿಂದ ಹೊರ ಬರುವ ಜಾಗರೂಕತೆಯನ್ನು ವಹಿಸಬೇಕು. ಅಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಬಿಸಿ ಒಲೆಯ ಬಾಣಲೆಯ ಮೇಲೆ ಕುಳಿತ ಬೆಕ್ಕಂತಾಗುತ್ತೇವೆ. ಅದು ಮತ್ತೆ ಬಿಸಿ ಒಲೆಯ ಬಾಣಲೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಇದು ಒಳ್ಳೆಯದೇ, ಆದರೆ ಅದು ತಂಪಾದ ಒಲೆಯ ಮೇಲೂ ಕುಳಿತುಕೊಳ್ಳುವುದಿಲ್ಲ ಎಂದಿದ್ದಾನೆ ಮಾರ‍್ಕ್ ಟ್ವೇನ್. ಧನಾತ್ಮಕ ಆಲೋಚನೆ ಅಪಾಯದ ಸ್ಥಿತಿಯಲ್ಲಿ ಕೈ ಬಿಟ್ಟು ಹೋಗುವವರನ್ನು ಕುರಿತು ನಕಾರಾತ್ಮಕವಾಗಿ ಯೋಚಿಸತೊಡಗಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅವರ ಉಳಿದೆಲ್ಲ ಉತ್ತಮ ಗುಣಗಳು ಗೌಣವೆನಿಸುತ್ತವೆ. ಅವರಿಂದ ದೂರವಾಗಬೇಕೆಂಬ ಭಾವನೆಯೂ ಬಲವಾಗುತ್ತದೆ.ಕೈ ಬಿಟ್ಟವರು ಸ್ವಯಂ ರಕ್ಷಣೆ ಮಾಡಲು ಕಲಿಸಿದರು ಎಂದುಕೊಂಡರೆ ಜೀವನಕ್ಕೊಂದು ಹೊಸ ಪಾಠ ಸಿಕ್ಕಂತಾಗುತ್ತದಲ್ಲವೇ? ಇಂಥವರು ನಮಗೆ ಭಿನ್ನ ದಾರಿಯಲ್ಲಿ ನಡೆಯುವುದನ್ನು ಕಲಿಸುತ್ತಾರೆ ಎಂದುಕೊಳ್ಳಬಹುದಲ್ಲವೇ? ಈ ಆಲೋಚನೆ ರೀತಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ ಎನಿಸುತ್ತದೆ ಅಲ್ಲವೇ? ಈ ಅಂಶ ಅವರು ಜೀವ ಪರರಾಗಿಲ್ಲವೆನ್ನುವುದಕ್ಕಿಂತ ನಾವೆಷ್ಟು ಸಂಬಂಧ ಪರತೆಯನ್ನು ಹೊಂದಿದ್ದೇವೆ ಎಂಬುದನ್ನು ನಮಗೆ ಮನಗಾಣಿಸುತ್ತದೆ. ಅಷ್ಟಕ್ಕೂ ಇಂಥವರು ನಮಗಾಗಿ ಅಪಾಯವನ್ನು ತಂದೊಡ್ಡುವುದಿಲ್ಲ ಎಂಬುದು ದೊಡ್ಡ ನಿರುಮ್ಮಳ ವಿಷಯ. ಅಪಾಯವನ್ನು ಎದುರಿಸುವ ಸಂಧರ‍್ಭದಲ್ಲಿ ಹೇಗೆ ವರ‍್ತಿಸುವುದು ಗೊತ್ತಿಲ್ಲ ಅಷ್ಟೇ.ಆಪತ್ತು ನಿರ‍್ವಹಣೆಯಲ್ಲಿರುವ ಕೊರತೆಗಾಗಿ ಸಂಬಂಧವನ್ನು ಕಳೆದುಕೊಳ್ಳುವುದು ಮೂರ‍್ಖತನ. ಆದ್ದರಿಂದ ಧನಾತ್ಮಕವಾಗಿ ಆಲೋಚಿಸಬೇಕು. ವಿವೇಚನೆ ಅಪಾಯಗಳಿಂದ ಸಾಕಷ್ಟು ಕಲಿಯುತ್ತೇವೆ. ಅವು ಜೀವನದ ಪಾಠಗಳೇ ಸರಿ.ಅಪಾಯಗಳು ಆತ್ಮಶೋಧನೆಗೆ ವಿಶ್ಲೇಷಣೆಗೆ ಹಚ್ಚುತ್ತವೆ.ಅಪಾಯಗಳು ಯಾವಾಗಲೋ ಬರುತ್ತವೆ ಆಗ ಏನಾದರೊಂದು ಮಾಡಿದರಾಯಿತು ಎಂಬ ನಿರ‍್ಲಕ್ಷ್ಯವು ಸಲ್ಲದು. ಬದುಕು ಆತ್ಮಶೋಧನೆ, ವೈಯಕ್ತಿಕ ಬೆಳವಣಿಗೆ ಮತ್ತು ಜೀವನ ಪರ‍್ಯಂತದ ಕಲಿಕೆಯ ಒಂದು ಪಥವಾಗಿದೆ. ಅಪಾಯಗಳು ಜೀವನದ ಅವಿಭಾಜ್ಯ ಅಂಗಗಳು ಎಂಬ ವಿಷಯ ತಿಳಿಯುವುದು ಸಮಾಧಾನಕರ ಸಂಗತಿ. ಹಾಗಾದಾಗ ಅಪಾಯಗಳನ್ನು ವಿವೇಚನೆಯ ರೀತಿಯಿಂದ ನೋಡುವುದನ್ನು ಕಲಿಯಬಹುದು. ಅನೇಕರು ಅಪಾಯದಲ್ಲಿ ಗೆಲುವಿನ ಹಂತ ಮುಟ್ಟುವ ಸಂಧರ‍್ಭದಲ್ಲಿಯೇ ಕೈ ಚೆಲ್ಲಿ ಬಿಡುತ್ತಾರೆ. ಇದರಿಂದ ಆಂತರಿಕ ಬಲ ಅಪಾರ ದೃಢಶಕ್ತಿಗೆ ನಷ್ಟವುಂಟಾಗುತ್ತದೆ.  ಭಿನ್ನಧಾರೆ ಹಾಗೆ ನೋಡಿದರೆ ಆ ದೇವರು ಪ್ರತಿ ಜೀವಿಗೂ ಅಪಾಯ ನಿರ‍್ವಹಿಸುವ ಕಲೆಯನ್ನು ದಯಪಾಲಿಸಿದ್ದಾನೆ. ಅತಿ ಚಿಕ್ಕದೆನಿಸುವ ಇರುವೆಗೆ ನೋವಾಗಿಸಿದರೆ ನಮ್ಮನ್ನು ಕಚ್ಚುತ್ತದೆ. ಊಸರವಳ್ಳಿ ತನ್ನ ಬೇಟೆಯಾಡುವ ಪ್ರಾಣಿಗಳಿಂದ ಬಚಾವಾಗಲು ಬಣ್ಣ ಬದಲಿಸುತ್ತದೆ. ಹೀಗೆ ಎಲ್ಲ ಜೀವಿಗಳಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ುರ‍್ತು ಅನಿವಾರ‍್ಯತೆ ಇರುತ್ತದೆ. ಅಪಾಯದಲ್ಲಿರುವಾಗ ಇತರರು ನಮ್ಮನ್ನು ಉಳಿಸುವರೆಂದು ತಿಳಿದರೆ ನಾವು ಅವರ ತೆಕ್ಕೆಗೆ ಬೀಳುತ್ತೇವೆ.ಬೇರೆ ಪ್ರಯತ್ನಗಳತ್ತ ಗಮನ ಹರಿಸುವುದು ಕಡಿಮೆ. ಭಿನ್ನಧಾರೆಯತ್ತ ಹೊರಳುವುದು ಜೀವನ ಪ್ರೀತಿಗೆ ತೆರುವ ಬೆಲೆ ಎನ್ನಬಹುದು. ಇದೆಲ್ಲ ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾದದ್ದು ಎನ್ನುವಂತಿಲ್ಲ. ಆಪತ್ತಿನಲ್ಲಿ ಸಹಕರಿಸಲಿಲ್ಲವೆಂದು ಆಪ್ತಬಾಂಧವರಲ್ಲಿ ಮುನಿಸಿಕೊಳ್ಳುತ್ತೇವೆ. ನಿಜವಾದ ಅವರ ಸ್ಥಿತಿಯನ್ನು ಅರಿಯದೇ ನಮ್ಮ ಮೂಗಿಗೆ ನಾವು ಯೊಚಿಸಿ ಆ ಸಂಬಂಧವನ್ನು ಕಾಟು ಒಗೆಯುತ್ತೇವೆ. ಆತ್ಮೀಯರಲ್ಲಿ ಹಿತೈಷಿಗಳಲ್ಲೂ ಇಂಥ ವಿಷಯಗಳು ಮುನ್ನೆಲೆಗೆ ಬರುವುದುಂಟು. ಅನಗತ್ಯ ಪ್ರಾಮುಖ್ಯತೆಯನ್ನು ಪಡೆಯುವುದುಂಟು. ಆದರೆ ಕಾಲ ಒಂದು ದಿನ ಎಲ್ಲವನ್ನೂ ಹಿಂದಕ್ಕೆ ತಳ್ಳುತ್ತದೆ. ಆಗ ಅಪಾಯ ನಿರ‍್ವಹಣೆ ಗೊತ್ತಿಲ್ಲದವರು ಪ್ರಪಾತಕ್ಕೆ ಬೀಳುತ್ತಾರೆ.  ಕೊನೆ ಹನಿ ಗೆಳೆಯರು ಹಿತೈಷಿಗಳು ಅಪಾಯದ ಸ್ಥಿತಿಯಲ್ಲಿ ಕೈ ಹಿಡಿಯಬೇಕೆಂದು ಬಯಸುವುದು ಸಹಜಗುಣ. ಆದರೆ ಒಂದೊಂದು ಸಂಧರ‍್ಭದಲ್ಲಿ ನಾವು ಬಯಸಿದಂತೆ ನಮಗೆ ಇರಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಮಧುರ ಬಾಂಧವ್ಯಗಳ ತಾಳವನ್ನು ತಪ್ಪಿಸುವ ಘಟನೆಗಳನ್ನು ನಿಂದಿಸುವ ರೀತಿಯಲ್ಲಿ ತೆಗೆದುಕೊಳ್ಳದೇ, ನಮ್ಮ ಶಕ್ತಿಯನ್ನು ಗುರುತಿಸಿಕೊಳ್ಳಲು ಸಹಕರಿಸಿದವರೆಂದು ತಿಳಿದು ವಂದಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸೂಕ್ತ. ಇದೆಲ್ಲ ನಮ್ಮ ದೃಷ್ಟಿ ಸಂಬಂಧಿಯಾದುದು. ಮನುಷ್ಯನ ಅನೇಕಾನೇಕ ಅಪೇಕ್ಷಿತ ಗುಣಗಳಲ್ಲಿ ಅಪಾಯ ಕಾಲದಲ್ಲಿ ಆಗಬೇಕು ಎನ್ನುವುದೂ ಒಂದು.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೀಜವೊಂದು ಸಂಪೂರ‍್ಣವಾಗಿ ಯಾವಾಗ ತನ್ನನ್ನು ಮಣ್ಣಲ್ಲಿ ಕಳೆದುಕೊಳ್ಳುತ್ತದೆಯೋ ಆಗ ಮಾತ್ರ ಅದು ಚಿಗುರೊಡೆದು ಮರವಾಗಿ ಬೆಳೆಯುವುದು. ಅಂತೆಯೇ ನಾವು ಮಾನವೀಯ ತುಡಿತಗಳಿಗೆ ಬೆಲೆ ಕೊಡಬೇಕು.ಗೊತ್ತಿಲ್ಲದೇ ಮಾಡಿದ ತಪ್ಪುಗಳನ್ನು ಕ್ಷಮಿಸಬೇಕು. ವಿಸ್ತಾರ ಚಿಂತನೆಗೆ ಹೊಸ ರೂಪ ಹೊಸ ಭಾಷ್ಯ ಬರೆಯಬೇಕು. ಹೊಸ ಅರ‍್ಥ ಬಿಟ್ಟು ಕೊಡುವ ಜೀವನದ ಹಲವಾರು ಘಟನೆಗಳ ಮೂಲಕ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ನಡೆದರೆ ಅಪಾಯದ ಮಡಿಲನ್ನು ಬಿಟ್ಟು ಸುಂದರ ಜೀವನದ ತೆಕ್ಕೆಯಲ್ಲಿ ನಾವಿರಲು ಸಾಧ್ಯ. ********************** ಲೇಖಕರ ಬಗ್ಗೆ ಎರಡು ಮಾತು ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ

ಮಹಾಂತೇಶ್ ಪಲದಿನ್ನಿ ಮಿಥುನ ಶಿಲ್ಪಗಳ ಮೂಲಕ ಸಾಮಾಜಿಕ ಎಚ್ಚರಿಕೆ ನೀಡುವ  ಸಂದೇಶವೂ ಇದೆ ‘ * ಕಲಾವಿದ ಡಾ.ಮಹಾಂತೇಶ್ ಎಂ.ಪಲದಿನ್ನಿ . ವಿಜಾಪುರ ಇವರ ಊರು. ಹುಟ್ಟಿದ್ದು ೧೯೮೪. ಕಲಾ ಶಿಕ್ಷಣ ಕಲಿತದ್ದು ಹಂಪಿ ಕನ್ನಡ ವಿವಿ ಶಿಲ್ಪಕಲಾ ವಿಭಾಗದಲ್ಲಿ. ಬಿಎಫ್‌ಎ ಶಿಲ್ಪಕಲೆ ಕಲಿತ ಅವರು ಮೈಸೂರಿನ ಕಾವಾದಲ್ಲಿ ಮಾಸ್ಟರ್ ಆಫ್ ಆರ್ಟ ಕಲಿತರು. ನಂತರ ಶಿಲ್ಪಕಲೆಯಲ್ಲಿ ಎಂ.ಫಿಲ್.ಪದವಿ ಹಾಗೂ ಡಾಕ್ಟರೇಟ್ ಪದವಿಗಳನ್ನು ಹಂಪಿ ಕನ್ನಡ ವಿ.ವಿ.ಯಿಂದ ಪಡೆದರು. ಹಂಪಿ ವಿಶ್ವ ವಿದ್ಯಾಲಯದ ಶಿಲ್ಪಕಲಾ ವಿಭಾಗ ಬದಾಮಿ ಶಾಖೆಯಲ್ಲಿ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಲೆಗಳನ್ನು ಕೆತ್ತಿ ಕಲೆ ಅರಳಿಸುವ ಅವರು ಈವರೆಗೆ ರೂಪಿಸಿದ ಶಿಲ್ಪಗಳನ್ನು ೨೦೧೮ರಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಹೈದರಾಬಾದ್‌ನಲ್ಲಿ ಏರ್ಪಡಿಸಿದ್ದರು. ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಆಂಡ್ ಫೈನ್ ಆರ್ಟ ಯುನಿವರ್ಸಿಟಿಯಲ್ಲಿ ಅವರ ಶಿಲ್ಪಕಲಾ ಪ್ರದರ್ಶನ ನಡೆದಿದೆ. ೨೦೦೭, ೨೦೦೮,೨೦೦೯,೨೦೧೦ ರಲ್ಲಿ ಕ್ರಮವಾಗಿ ಕೇರಳ, ಚೆನ್ನೆöÊ, ವಿಜಾಪುರ, ಧಾರವಾಡ,  ಹಾಗೂ ೨೦೧೧ರಲ್ಲಿ ಬೆಂಗಳೂರು, ಕುಂದಾಪುರದಲ್ಲಿ ಅವರ ಶಿಲ್ಪಕಲಾ ಕೃತಿಗಳ ಪ್ರದರ್ಶನ ನಡೆದಿದೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೧೯೯೯ ರಿಂದ ೨೦೧೭ರವರೆಗೆ ೨೬ ಕಡೆ ಅವರ ಶಿಲ್ಪಗಳ ಪ್ರದರ್ಶನಗಳು ನಡೆದಿವೆ. ೨೦೦೯ ರಿಂದ ೨೦೧೩ರವರೆಗೆ ಅವರು ರಾಜ್ಯದ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಸಹ ಡಾ. ಮಹಾಂತೇಶ್ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಹಾಗೂ ದೇಶದ ವಿವಿದೆಡೆ ೨೨ ಕಲಾ ಶಿಬಿರಗಳಲ್ಲಿ ಅವರು ಭಾಗವಹಿಸಿ ಶಿಲ್ಪಗಳನ್ನು ರೂಪಿಸಿದ್ದಾರೆ. ಅವರ ಅತ್ಯುತ್ತಮ ಶಿಲ್ಪಗಳನ್ನು ಕಾರವಾರದ ರಾಕ್ ಗಾರ್ಡನ್ ಸೇರಿದಂತೆ ಹಂಪಿ ಕನ್ನಡ ವಿವಿಯಲ್ಲಿ, ಪಂಜಾಬದ ಪಟಿಯಾಲಾ ಕಲಾಗ್ರಾಮದಲ್ಲಿ, ಇಳಕಲ್ ಚಿತ್ರಕಲಾ ವಿದ್ಯಾಲಯ, ಬಾಗಲಕೋಟೆ ಜಿಲ್ಲಾ ಆಡಳಿತ ಭವನ, ಮಧ್ಯಪ್ರದೇಶದ ಖುಜರಾಹೋ ಶಿಲ್ಪಗ್ರಾಮದಲ್ಲಿ, ಬೆಂಗಳೂರು ಕಲಾ ಗ್ರಾಮದಲ್ಲಿ ,ದಾವಣಗೆರೆ ಕುವೆಂಪು ವಿವಿ ಆವರಣದಲ್ಲಿ, ಕುಪ್ಪಳ್ಳಿಯಲ್ಲಿ, ಬಳ್ಳಾರಿಯಲ್ಲಿ , ಸತ್ತೂರು ಮಠದಲ್ಲಿ, ಹೂವಿನಹಡಗಲಿ ರಂಗಭಾರತಿಯಲ್ಲಿ ಕಾಣಬಹುದಾಗಿದೆ. ………………………………………………………………………….. ನಾಗರಾಜ ಹರಪನಹಳ್ಳಿ : ಬಣ್ಣಗಳ ಜೊತೆ ,ಶಿಲೆಗಳ ಜೊತೆ ಕುಂಚ ಮತ್ತು ಉಳಿಯ ಜೊತೆ ಕಳೆದ ರೋಚಕ ಕ್ಷಣ ಯಾವುದು ? ನೆನಪಲ್ಲಿ ಉಳಿದ ಒಂದು ಪ್ರಸಂಗ ಕುರಿತು ವಿವರಿಸಿ ….  ಮಹಾಂತೇಶ್ ಪಲದಿನ್ನಿ : ವಿದ್ಯಾರ್ಥಿಗಳ ಜೊತೆಗೆ ನಿಸರ್ಗ ಚಿತ್ರ ಬಿಡಿಸಲು ಹೋದಾಗ ಅವರ ಜೊತೆ ಸೇರಿ ಒಂದು ವರ್ಣಚಿತ್ರ ಬಿಡಿಸಿರುವುದು ಸ್ಮರಣೀಯ ಕ್ಷಣ.  ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? *ಉತ್ತರ :* ಕಲೆ ಯಾವ ಕ್ಷಣದಲ್ಲಿಯಾದರು ಹುಟ್ಟಬಹುದು ಕಲೆಗೆ ನಿರ್ದಿಷ್ಟತೆ ಇಲ್ಲ.  ಪ್ರಶ್ನೆ :  ನಿಮ್ಮ ಶಿಲ್ಪಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಬಾದಾಮಿಯಲ್ಲಿರುವ ಏಕಶಿಲಾ ಬೆಟ್ಟದಲ್ಲಿ ನಿರ್ಮಾಣವಾಗಿರುವ ಗುಹಾಂತರ ಶಿಲ್ಪಗಳು, ಅದರ ವಸ್ತು ವಿನ್ಯಾಸಗಳು, ಕಥಾನಕ ಶಿಲ್ಪಗಳು, ಸಾಲಭಂಜಿಕೆ ಶಿಲ್ಪಗಳು, ನನಗೆ ಹೆಚ್ಚು ಇಷ್ಟವಾಗಿವೆ. ಲಜ್ಜಾಗೌರಿ ಶಿಲ್ಪಗಳು ನನಗೆ ಬಹಳ ಕಾಡುವ ವಿಷಯ.  ಪ್ರಶ್ನೆ :  ನಿಮ್ಮ ಶಿಲ್ಪಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ : ನಮ್ಮ ಸುತ್ತಲಿನ ಪರಿಸರವು ಕಾರಣವಾಗುತ್ತದೆ. ನಾವು ಕಳೆದ ಬಾಲ್ಯದ ನೆನಪುಗಳು ನಮಗೆ ಅರಿಯದೆ ಶಿಲ್ಪಗಳನ್ನು ರಚಿಸುವಾಗ ಅದರಲ್ಲಿ ಮೂಡುತ್ತದೆ. ಹಾಗೂ ಕೆಲವು ನಮ್ಮಲ್ಲಿರುವಂತಹ ಹೇಳಿಕೊಳ್ಳಲಾಗದ ವಿಷಯವನ್ನು ಶಿಲ್ಪಗಳ ಮೂಲಕ ತೋರಿಸುವುದು. ನಮ್ಮ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಸಹ ಯಾವುದೇ ಮಾಧ್ಯಮದ ಮೂಲಕ ಅದನ್ನು ತೋರ್ಪಡಿಸಲು ಇಲ್ಲಿ ಅವಕಾಶವಿರುತ್ತದೆ.  ಪ್ರಶ್ನೆ :  ಪ್ರೀತಿಯ ಅಭಿವ್ಯಕ್ತಿ ನಿಮ್ಮ ಶಿಲ್ಪಗಳಲ್ಲಿ ಹೆಚ್ಚು …ಅಲ್ವಾ ? ಉತ್ತರ : ಅಭಿವ್ಯಕ್ತಿ ಎಂಬ ಪದವನ್ನು ಸರಳವಾಗಿ ವಿವರಿಸುವುದಾದರೆ, ನಮ್ಮ ಭಾವನೆಗಳನ್ನು ದೃಶ್ಯದ ಮೂಲಕ ಹೊರಹಾಕುವುದು. ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಅಭಿವ್ಯಕ್ತಿ ಎಂಬ ಸಾಧನದ ಮೂಲಕ ಚಿತ್ರ, ಶಿಲ್ಪದ ಮೂಲಕವೂ ವ್ಯಕ್ತಪಡಿಸಬಹುದು. ಈ ಎಲ್ಲ ದಾರಿಗಳ ಮೂಲಕ ಪ್ರಕಟಪಡಿಸುವುದೇ ಅಭಿವ್ಯಕ್ತಿ ಅನ್ನಿಸಿಕೊಳ್ಳುತ್ತದೆ. ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ.  ಪ್ರಶ್ನೆ :  ಮಿಥುನ ಶಿಲ್ಪ ಗಳನ್ನು ಆಧುನಿಕ ಕಲಾ ಶೈಲಿಯಲ್ಲಿ ಹೆಚ್ಚು  ರೂಪಿಸಿದ್ದೀರಿ… ಹೇಗೆ ಇದರ ಪ್ರಭಾವ ಆಯಿತು. ಏನು ಉದ್ದೇಶ ? ಉತ್ತರ : ಮಿಥುನ ಶಿಲ್ಪಗಳು ಕ್ರಿ.ಶ.೨ ನೇ ಶತಮಾನದಷ್ಟು ಪ್ರಾಚೀನವಾದುದು. ಕೆಲವು ಶಿಲ್ಪಗಳು ದೇವಾಲಯದ ಗೋಪುರದ ಮೇಲೆ, ದೇವಾಲಯದ ಭಿತ್ತಿಯ ಮೇಲೆ ರಚಿಸಲಾಗಿದೆ. ಅವುಗಳ ಹಿಂದಿನ ಆಶಯ ಬೇರೆ.  ಹಿಂದಿನ ಕಾಲದಲ್ಲಿ ಲೈಂಗಿಕತೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಉದ್ದೇಶವಾಗಿತ್ತು. ನಾನು ರಚಿಸಿದ ಶಿಲ್ಪಗಳಲ್ಲಿ ಮಿಥುನ ಶಿಲ್ಪಗಳನ್ನು ಪ್ರಸ್ತುತ ಸನ್ನಿವೇಶ ನಡೆದಿರುವ ಘಟನೆ ಮತ್ತು ಲೈಂಗಿಕ ಕಿರುಕುಳ, ಸಮಾಜಕ್ಕೆ ಒಳಿತಾಗುವ ದೃಶ್ಯವನ್ನು ನನ್ನ ಶಿಲ್ಪಗಳಲ್ಲಿ ಕಾಣಬಹುದು.  ಪ್ರಶ್ನೆ :  ನಾಡಿನ ದೇವಾಲಯದಲ್ಲಿನ ಶೃಂಗಾರ ಮತ್ತು ಮಿಥುನ ಶಿಲ್ಪಗಳ ಪ್ರಭಾವ ನಿಮ್ಮ ಮೇಲಿದೆಯೇ? ಉತ್ತರ : ದೇವಾಲಯದಲ್ಲಿರುವ ಕಥಾನಕ, ದೇವತಾ ಶಿಲ್ಪಗಳು, ಮಿಥುನ ಶಿಲ್ಪಗಳು, ಮತ್ತು ಆ ಕಾಲದಲ್ಲಿ ರಚಿತವಾದ ಶಿಲ್ಪಶಾಸ್ತ್ರಗಳು ಗ್ರಂಥಗಳು ದೇವಾಲಯಗಳ ನಿರ್ಮಾಣ ಇವೆಲ್ಲ ಪ್ರಭಾವ ನನ್ನ ಕೃತಿಗಳ ಮೇಲಾಗಿದೆ.  ಪ್ರಶ್ನೆ :  ಕಲಾ ಪ್ರಕಾರದಲ್ಲಿ ಯಾವ ಮಾಧ್ಯಮ ನಿಮಗೆ ಇಷ್ಟ? ಉತ್ತರ : ಶಿಲಾ ಮಾಧ್ಯಮ  ಪ್ರಶ್ನೆ :  ಬದಾಮಿ , ಪಟ್ಟದಕಲ್ಲು ಶಿಲಾ ಬಾಲಕಿಯರಿಗೂ, ಹಳೇಬೀಡು, ಬೇಲೂರು ಶಿಲಾ ಬಾಲಕಿಯರಲ್ಲಿ ಯಾರು ಚೆಂದ? ಆ ಶಿಲ್ಪಗಳ ವಿಶೇಷತೆ ಏನು ? ಉತ್ತರ : ಚೆಂದ ಪ್ರಶ್ನೆಯ ಬರುವುದಿಲ್ಲ ಆಯಾ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿರುವ ಕೆಲವು ಉಡುಗೆ ತೊಡುಗೆಗಳನ್ನು ಧರಿಸಿರುತ್ತಾರೆ. ಬಾದಾಮಿ ಚಾಲುಕ್ಯ ಶಿಲ್ಪಗಳಲ್ಲಿ ಉದ್ದ ನೀಳವಾಗಿ ವಸ್ತ್ರವಿನ್ಯಾಸಗಳು,  ಅಂದಿನ ಕಾಲದಲ್ಲಿ ಪ್ರಚಲಿತವಿದ್ದ ವೇಷಭೂಷಣಗಳು ಇಲ್ಲಿ ರಚನೆಯಾಗಿವೆ. ವಿವಿಧ ಭಾವನಾತ್ಮಕ ಸಂಬAಧವನ್ನು ಹೊಂದಿರುವ ಜೋಡಿ ಶಿಲ್ಪ, ಕೆಲವು ಸಂದರ್ಭಗಳಲ್ಲಿ ಒಂದು ಹೊಸ ರೀತಿಯ ಶಿಲ್ಪಗಳು ಇಂದಿಗೂ ನಾವು ಕಾಣುತ್ತೇವೆ. ಬೇಲೂರಿನ ಶಿಲ್ಪಗಳು ಪ್ರತ್ಯೇಕವಾದ ಶಿಲೆಯನ್ನು ಬಳಸಿ ರಚಿಸಿದ ಶಿಲ್ಪಗಳನ್ನು ತಂದು ಜೋಡಿಸಲಾಗಿದೆ. ಆದರೆ ಬಾದಾಮಿಯಲ್ಲಿ ಏಕಶಿಲಾ ಬೆಟ್ಟದಲ್ಲಿ ಅಖಂಡ ಶಿಲೆಯಲ್ಲಿ ಕೆತ್ತಿರುವುದು ವಿಶೇಷವಾಗಿದೆ. ಅಲ್ಲದೆ ಕಠಿಣವಾದ ಮರಳು ಶಿಲೆಯನ್ನು ಇಲ್ಲಿ ಶಿಲ್ಪಕ್ಕೆ ಬಳಸಿರುವುದು ಮಹತ್ವದ್ದು. ಇದು ಶಿಲ್ಪಕಾರನ ನೈಪುಣ್ಯ, ಕಠಿಣ ಪರಿಶ್ರಮ, ವಿಷಯ ಹಾಗೂ ಮಾಧ್ಯಮದ ಬಗ್ಗೆ ಇರುವ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ.  ಪ್ರಶ್ನೆ :  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಜಾತಿಯಿಂದ ತುಂಬಾ ಹದಗೆಟ್ಟಿದೆ. ಕಲಾವಿದರಿಗೆ ಇಂದಿನ ಪರಿಸ್ಥಿತಿಯಲ್ಲಿ ಬೆಲೆ ಇಲ್ಲದಂತಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಕಲಾವಿದರನ್ನು ಬಲಿಪಶು ಮಾಡುತ್ತಿದ್ದಾರೆ. ರಾಜಕೀಯ ಅನ್ನೋದೆ ಇರಬಾರದು ನನ್ನ ಪ್ರಕಾರ  ಪ್ರಶ್ನೆ :  ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ, ದೇವರು ಅಂದರೆ ಯಾವುದು ನಂಬಿಕೆ ಅನ್ನುವುದೆ ದೇವರು ನನ್ನ ಪ್ರಕಾರ. ಧರ್ಮವು ಮಾನವ ಸಮಾಜವನ್ನು ಸಂರಕ್ಷಿಸುವ ಒಂದು ಪ್ರಮುಖ ಸಾಧನವಾಗಿದೆ. ಧರ್ಮೋ ರಕ್ಷತಿ ರಕ್ಷತಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮನಾಶವಾದಲ್ಲಿ ಜನಾಂಗವೇ ನಾಶವಾಗುವುದು. ಒಳ್ಳೆಯ ರೀತಿಯಲ್ಲಿ ಬದುಕುವುದೆ ಧರ್ಮ. ದಯಯೇ ಧರ್ಮದ ಮೂಲ. ದೇವನೊಬ್ಬ ನಾಮ ಹಲವು.  ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ,  ಅಕಾಡೆಮಿಗಳಲ್ಲಿಯೂ ಕೂಡ ರಾಜಕೀಯದಿಂದ ಹೊರತಾಗಿಲ್ಲ.  ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಗಳಲ್ಲಿ ರಾಜಕೀಯ ಮುಖ್ಯ ಪಾತ್ರ ವಹಿಸುತ್ತಿದೆ.  ಪ್ರಶ್ನೆ :  ಚಿತ್ರ , ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಕಲಾ ಲೋಕದಲ್ಲಿಯೂ ಕೂಡ ರಾಜಕೀಯ ಮಧ್ಯಸ್ಥಿಕೆ ವಹಿಸುತ್ತಿದೆ. ರಾಜಕೀಯ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರನ್ನು ಗುರುತಿಸುವುದು ಕಷ್ಟವಾಗಿದೆ.  ಪ್ರಶ್ನೆ :  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಮನುಜ ಜನ್ಮವು ಒಂದೆ ಎಂದು ತಿಳಿದುಕೊಂಡು ಧರ್ಮ ದಿಂದ ನಡೆಯಬೇಕು.  ಪ್ರಶ್ನೆ : ಕನ್ನಡ ಹಾಗೂ ಆಂಗ್ಲ ಭಾಷೆಯ ಕಲಾಪ್ರಕಾರದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕಲಾವಿದ ಯಾರು ? ಉತ್ತರ : ಕರ್ನಾಟಕದ ಶಿಲ್ಪಿ. ದೇವಲಕುಂದ ವಾದಿರಾಜ ಹಾಗೂ ಪಾಶ್ಚಿಮಾತ್ಯ ಕಲಾವಿದ  ಹೆನ್ರಿ ಮೋರ್. ********************** ************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ Read Post »

You cannot copy content of this page

Scroll to Top