ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸಂತೆಬೆನ್ನೂರು ಫೈಜ್ನಟ್ರಾಜ್

ಹಾಡಿದ ಹಾಡನೆ ಮರಳಿ ನಾನು
ಮತ್ತೆ ಮತ್ತೆ ಹೇಗೆ ಹಾಡಲಿ
ಕಡಲೊಳಗೆ ಬೆರೆತ ಆ ನದಿಯ
ಯಾವ ಕಣ್ಣಿನಿಂದ ನಾನು ನೋಡಲಿ
೧

ಬಂದವರು ಹೋದವರು ಇದನೆ ತಾನೆ
ಹಾಡಿ ಹೋದರು ಬಿದಿರ ಸೀಳಿದಂತೆ
ತೂತ ಕೊರೆದು ಎದೆಯ ತೆರೆದು
ಹಾಡಿದರೂ ನಾ ಹೋದರು ಕೇಳದಂತೆ
೨

ಕಾಡ ಕರುಣೆ ಹೂವ ಪ್ರೀತಿ
ಜೋಲಿಯ ಲಾಲಿ ಪಿಸ ಮಾತಿನೊಲುಮೆ
ಒಲ್ಲೆನೆಂದರು ಮತ್ತೆ ಮನಕಿಳಿದು
ತಿದಿಯೊತ್ತೆ ರಾಗ ಚಿಮ್ಮಿ ಭಾವ ಕುಲುಮೆ
೩

ನಮ್ಮವರು ನಿಮ್ಮವರು ಎಂದಿಗೂ
ಹಾಡಿದುದನೆ  ಹಾಡಿ ದಣಿದ ಕಥೆಯೂ
ಹಾಡೊಂದೆ ಇಲ್ಲಿ ಭಾವ ಬೇರೆ
ಇರಲಿ ಮನುಜ ಪ್ರೀತಿ ಬೇಡ ದುಗುಡ ವ್ಯಥೆಯೂ!

**************

About The Author

Leave a Reply

You cannot copy content of this page

Scroll to Top