ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಸ್ವಾತ್ಮಗತ

ದೇವನೂರು ಮಹಾದೇವರೂ..! ಮತ್ತವರು ಹುಡುಕಿದ ಹೊಸ ಅಭಿವ್ಯಕ್ತಿ ಕ್ರಮಗಳ ಪ್ರಸ್ತುತತೆಯೂ.!! ದೇವನೂರ ಮಹಾದೇವ ದೇವನೂರ ಮಹಾದೇವ ಅವರು ಹುಟ್ಟಿದ್ದು ಜೂನ್ 10, 1948ರಂದು. ಹಾಗೆಂದು ಅವರ ಬಳಿ ಹೋಗಿ ‘ಹ್ಯಾಪಿ ಬರ್ತ್ ಡೇ ಸಾರ್’ ಅಂತ ಹೇಳಿದರೆ, ‘ಇವನ್ಯಾವನಯ್ಯಾ ಮಿಕ’ ಎಂದು ಗಂಭೀರರಾಗಿಬಿಡುತ್ತಾರೇನೋ ಅನಿಸುತ್ತದೆ. ಅವರು ಮನುಷ್ಯನ ಮೂಲ ಆಳವನ್ನು ತಲುಪದ ಯಾವ ಆಚರಣೆಗಳನ್ನೂ ಒಪ್ಪುವವರಲ್ಲವೇನೋ ಎಂದೆನಿಸುತ್ತಿದೆ. ದೂರದರ್ಶನ ಬಂದ ಪ್ರಾರಂಭದ ದಿನಗಳಲ್ಲಿ ಇರಾನ್, ಇರಾಕ್ ದೇಶಗಳ ಯುದ್ಧಗಳು ಕ್ರಿಕೆಟ್ ಆಟ ನೇರ ಪ್ರಸಾರವಾಗುವಂತೆ ವಾರ್ತೆಗಳಲ್ಲಿ ಪ್ರಸಾರವಾಗುತ್ತಿದ್ದವು. ಯುದ್ಧದಲ್ಲಿನ ಕ್ಷಿಪಣಿ ಪ್ರಯೋಗಗಳು, ಬಾಂಬ್ ಹೇಗೆ ಬೀಳುತ್ತಿವೆ ಎಂದು ಕುತೂಹಲದಿಂದ ಅಲ್ಲಿನ ರಸ್ತೆಗಳಲ್ಲಿ ನೋಡುತ್ತಿದ್ದ ಮಕ್ಕಳು, ಇಂಧನ ಸೋರಿಕೆಯಿಂದ ಕಪ್ಪುಗಟ್ಟಿದ ಸಮುದ್ರ, ಆ ಸಮುದ್ರದ ದಡದಲ್ಲಿ ಬದುಕಲೂ ಆಗದೆ, ಸಾಯಲು ಆಗದೆ ನಲುಗುತ್ತಿದ್ದ ಒಂದು ಪಕ್ಷಿ ಇವೆಲ್ಲಾ ನಮ್ಮ ಮನಸ್ಸಿನಲ್ಲಿ ಮರೆಯಾಗದೆ ನಿಂತಿವೆ. ಅದೇ ದಿನಗಳಲ್ಲಿ ನಮ್ಮ ದೇವನೂರು ಮಹಾದೇವರ ಒಂದು ಸಂದರ್ಶನ ಕೂಡಾ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಅವರನ್ನು ಕೇಳಿದ ಪ್ರಶ್ನೆ, “ಇಂದಿನ ಬದುಕಿನಲ್ಲಿ ತಮ್ಮನ್ನು ಕಾಡುತ್ತಿರುವ ಪ್ರಶ್ನೆ ಯಾವುದು?”. ದೇವನೂರು ಮಹಾದೇವ ಅವರು ಹೇಳಿದ್ದು, “ಗಲ್ಫ್ ಯುದ್ಧದಲ್ಲಿ ತನ್ನ ಬದುಕನ್ನು ಕಳೆದು ಕೊಂಡು ಒದ್ದಾಡುತ್ತಿದೆಯಲ್ಲಾ ಆ ಪಕ್ಷಿ…. ಅದು ನನ್ನನ್ನು ತುಂಬಾ ಕಾಡುತ್ತಿದೆ!” ದೇವನೂರ ಮಹಾದೇವ ಎಂದರೆ ತಕ್ಷಣ ನೆನಪಿಗೆ ಬರುವುದು ಅವರ ಒಡಲಾಳ, ಕುಸುಮಬಾಲೆ, ಅಮಾಸ, ಗ್ರಸ್ತ, ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ, ಮಾರಿಕೊಂಡವರು ಹೀಗೆ ಹಲವು ಕಥೆಗಳು. ನಮ್ಮ ದೇಶದಲ್ಲಿ ನಾವು ಜನರನ್ನು ಪ್ರಾಂತ್ಯ, ಭಾಷೆ, ಜಾತಿ, ಉಪಜಾತಿ, ಮರಿ ಜಾತಿ ಹೀಗೆ ಯಾವ ರೀತಿಯಲ್ಲಿ ಛಿದ್ರ ಛಿದ್ರವಾಗಿ ಒಡೆದುಹಾಕಿದ್ದೇವೆಯೋ ನಮ್ಮ ಬುದ್ಧಿವಂತ ಜನಾಂಗ ಸಾಹಿತ್ಯವನ್ನೂ ಕೂಡ ನವ್ಯ, ದಲಿತ, ಬಂಡಾಯ, ಮರಿ ಬಂಡಾಯ ಹೀಗೆ ಒಡೆದು ಹಾಕಿಬಿಟ್ಟಿದೆಯೇನೋ ಅಂತನಿಸುತ್ತದೆ. ನಾನು ಸಾಹಿತ್ಯದ ಬಗ್ಗೆ ಅಷ್ಟೊಂದು ಬಲ್ಲವನಲ್ಲವಾದದ್ದರಿಂದ ಆ ಬಗ್ಗೆ ಹೇಳಿದರೆ ಇವನೊಬ್ಬ ಶುದ್ಧ ಶುಂಠ, ಅವೈಜ್ಞಾನಿಕ ಎಂದು ಹಲವು ಮಹನೀಯರು ಪ್ರತಿಭಾನ್ವಿತ ವಿಶ್ಲೇಷಣೆಗೆ ಬರುವ ಸರ್ವ ಸಾಧ್ಯತೆಗಳಿವೆ! ಅದು ಏನೇ ಇರಲಿ, ಇಂತಹ ವಾದ ವಿವಾದಗಳು ನಮ್ಮನ್ನು ಮಾನವನ ಆಳದಲ್ಲಿ ಇಳಿಯುವ ಶ್ರೇಷ್ಠ ಅನುಭಾವದಿಂದ ದೂರ ಮಾಡುತ್ತಿವೆಯೇನೋ ಎಂಬುದು ನನ್ನಲ್ಲಿರುವ ವ್ಯಥೆ. ದೇವನೂರ ಮಹಾದೇವ ಅಂತಹ ಅಂತರಾಳಕ್ಕಿಳಿಯುವ ಸಮರ್ಥ ಬರಹಗಾರನನ್ನು ಯಾವುದೋ ದಲಿತ – ಬಂಡಾಯ ಎಂದು ಪ್ರತ್ಯೇಕಿಸ ಹೊರಟಾಗ ಇಡೀ ಮಾನವ ಸಂಕುಲಕ್ಕೆ ಅಗತ್ಯವಾಗಿರುವ ಅವರ ಬರಹಗಳಲ್ಲಿನ ತೀವ್ರವಾದ ಸ್ಪಂದನೆಗಳ ಲಾಭ ಸರಿಯಾಗಿ ಆಗುವುದಿಲ್ಲ. ಅವರ ಬರಹಗಳ ಆಳವನ್ನು ವರ್ಗರಹಿತವಾಗಿ ಪ್ರತಿಯೊಬ್ಬರೂ ತಲುಪಿ ಮಾನವನ ಮೂಲಸ್ಪಂದನೆಗಳನ್ನು ಅರ್ಥೈಸಿ ಅದರಲ್ಲೊಂದಾಗುವ ಅವಶ್ಯಕತೆ ತುಂಬಾ ಇದೆ. ಒಮ್ಮೆ ಅವರು ಮಾನಸ ಗಂಗೋತ್ರಿಯಲ್ಲಿ ಮಾಡಿದ ಭಾಷಣದ ತುಣುಕುಗಳು ಹೀಗಿವೆ ‘ನಾನು ಬರೆಯುತ್ತಾ ಬರೆಯುತ್ತಾ ಬರೆಯುವ ಪ್ರಕ್ರಿಯೆಯಲ್ಲಿ ನನ್ನನ್ನು ನಾನು ಕಳೆದುಕೊಂಡು ಬೇರೆಯವನಾಗಬೇಕು. ಹಾಗೆ ಬೇರೆಯಾದವನು ಯಾರೂ ಆಗಬಹುದು ಆ ಮೂಲಕ ಎಲ್ಲರಂತೂ ಆಗಬಹುದು. ಹೀಗಾದಾಗ ನನ್ನನ್ನು ನಾನು ಕಳೆದುಕೊಳ್ಳಲು ಸಾಧ್ಯ. ನಾನು ಮಹಾದೇವ ಎನ್ನುವುದನ್ನೂ ಬಿಟ್ಟು ಬಿಡಬೇಕು. ನನ್ನ ಜಾತಿಯನ್ನು ಮರೆಯಬೇಕು. ನನ್ನ ಭಾಷೆಯನ್ನು ಮರೆಯಬೇಕು. ಆ ಬರೆಯುವ ಕ್ರಿಯೆಯಲ್ಲಿ ಈ ಎಲ್ಲವುಗಳನ್ನೂ ಮೀರಬೇಕು. ಸಭೆಯ ಮಧ್ಯದ ಸಭಿಕನಾಗಿದ್ದರೆ ಹೇಗೆ ಮಾತನಾಡಲು ಸಾಧ್ಯವಿಲ್ಲವೋ ಹಾಗೆ ಬರೆಯುವ ಕ್ರಿಯೆ ಕೂಡ. ಅಂದರೆ ಬಿಕಮಿಂಗ್ ಅದರ್ ಬೀಯಿಂಗ್ ಎಂದಾಯಿತು. ಬರೆಯುವ ಕ್ರಿಯೆಯಲ್ಲಿ ಕೆಲವು ಬಾರಿ ‘ಆತ್ಮ’ವಾಗಿ ಬರಬಹುದು. ಕೆಲವು ಬಾರಿ ‘ದೇಹ’ವಾಗಿ ಬರಬಹುದು. ಒಟ್ಟಿನಲ್ಲಿ ನೋಡಿದರೆ ನೋವು, ಕಷ್ಟ, ಸಂಕಟ, ದುಃಖ, ಖುಷಿ ಎಲ್ಲವೂ ಒಂದೇ. ಅದು ಒಂದು ಜೀವದಿಂದ ಮತ್ತೊಂದು ಜೀವಕ್ಕೆ ಹೋಗುವಂತೆ ಅಥವಾ ತನ್ನೊಳಗೆ ಜಗತ್ತನ್ನು ಭಾವಿಸುವ, ಜಗತ್ತಿನೊಳಗೆ ತನ್ನನ್ನು ಭಾವಿಸಿಕೊಳ್ಳುವಂತಹ ಪ್ರಕ್ರಿಯೆ. ಹಿಂದೆ ಹೇಳಿದೆನಲ್ಲಾ ರೂಢಿ ಎಂದು ಹಾಗೆ. ಅಂದರೆ ನಾನು ಮುಸ್ಲಿಂ, ದಲಿತ, ಬ್ರಾಹ್ಮಣ, ಮಹಾದೇವ ಎಂಬಲ್ಲಿಗೇ ನಿಂತರೇ ಸಾಯುವವರೆಗೂ ಆ ಸ್ಥಿತಿಯಲ್ಲೇ ನಿಂತು ಬಿಡುತ್ತೇನೆ (ಅರವತ್ತು ವರ್ಷದವನಾದರೂ ಪ್ರೈಮರಿ ಶಾಲೆಯೇ ಫೇಲಾಗಿರುವ ಹುಡುಗನ ಮನಸ್ಥಿತಿಯಲ್ಲಿಯೇ ಉಳಿದಂತೆ ಕಾಣುತ್ತಾನೆ). ಗಿರೀಶ ಕಾರ್ನಾಡ್ ಒಮ್ಮೆ ಹೇಳುತ್ತಿದ್ದರು – ಪಂಜಾಬ್‌ನಲ್ಲಿ ಗಲಭೆ ಆಗಿ ಆಗಿ ಹೆಣ ರಸ್ತೇಲಿ ಬಿದ್ದಿದ್ದರೂ ಮಕ್ಕಳು ಅದನ್ನೂ ನೋಡಿ ಸುಮ್ಮನೆ ಹೋಗುತ್ತಿರುತ್ತಾರೆ – ಅಂದರೆ ಅವರು ಅದಕ್ಕೆಲ್ಲ ಅಡ್ಜೆಸ್ ಆಗಿ ಹೋಗಿರುತ್ತಾರೆ. ಸಾವಿನ ಬಗೆಗಿನ ಸೂಕ್ಷ್ಮತೆ ಕೂಡ ಕಳೆದುಕೊಂಡು ಬಿಟ್ಟಿದ್ದಾರೆ. ಹೀಗೆ ಸೂಕ್ಷ್ಮತೆಯನ್ನು ಕಳೆದುಕೊಂಡರೆ ಅದು ಸೃಜನಶೀಲವಾಗುವುದಿಲ್ಲ”. ದೇವನೂರು ಮಹಾದೇವ ಅವರು ಸೂಕ್ಷ್ಮಜ್ಞತೆಯಲ್ಲಿ ನಮ್ಮನ್ನು ಇಳಿಸುವ ಅವರ ಹಲವು ಲೇಖನಗಳಾದ ಅಂಬೇಡ್ಕರ್, ಗಾಂಧೀ ಮತ್ತು ಹಲವು ವರ್ಗಸಂಹಿತೆಗಳ ವಿರೋಧಗಳು ಇವೆಲ್ಲಾ ವೈಯಕ್ತಿಕತೆಗೆ ಮೀರಿದ ಆಳದಲ್ಲಿ ಮನಸ್ಸು ಈಜುತ್ತಿರುವ, ಏನನ್ನೋ ಗಾಢವಾದದ್ದನ್ನು ಅರಸುತ್ತಿರುವ ಅನುಭಾವವನ್ನು ಕೊಡುತ್ತವೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿ ಜನಿಸಿದ ಮಹಾದೇವರು ತಮ್ಮ ಶಿಕ್ಷಣ-ವಿದ್ಯಾಭ್ಯಾಸವನ್ನು ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಪಡೆದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ ಪದವಿ ಪಡೆದರು. 1975-1989ರ ಅವಧಿಯಲ್ಲಿ ಮೈಸೂರಿನ ಸೆಂಟ್ರಲ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಲ್ಯಾಂಗ್ವೇಜಸ್ ನಲ್ಲಿ ಉದ್ಯೋಗನಿರತರಾಗಿದ್ದ ಇವರು ನಂತರದ ವರ್ಷಗಳಲ್ಲಿ ಪೂರ್ಣಾವಧಿಯ ಕೃಷಿಕರಾಗಿದ್ದಾರೆ. ದ್ಯಾವನೂರು ಸಂಕಲನದ ಕತೆಗಳನ್ನು ಗಮನಿಸಿದರೆ ನವ್ಯ ಸಾಹಿತ್ಯ ಚಳುವಳಿಯ ಪರಿಚಯ ಪ್ರೇರಣೆ ಒಂದು ಹಂತದಲ್ಲಿ ಇವರಿಗೆ ಗಾಢವಾಗಿತ್ತೆಂದು ತಿಳಿದು ಬರುತ್ತದೆ. ಇದರ ಜೊತೆಗೆ ಅರವತ್ತು – ಎಪ್ಪತ್ತರ ದಶಕಗಳಲ್ಲಿ ಕ್ರಿಯಾಶೀಲವಾಗಿದ್ದ ಲೋಹಿಯಾವಾದಿ ಸಮಾಜವಾದಿ ಯುವಜನ ಸಭಾದ ಚಿಂತನ ಚಟುವಟಿಕೆಗಳು, ಮೈಸೂರಿನಲ್ಲಿ ವಾಸವಾಗಿದ್ದ ಯು. ಆರ್. ಅನಂತಮೂರ್ತಿ, ಶ್ರೀ ಕೃಷ್ಣ ಆಲನಹಳ್ಳಿ ಇಂತಹ ಲೇಖಕರೊಡನೆ ಇದ್ದ ಒಡನಾಟ, ಇವೆಲ್ಲವೂ ಮಹಾದೇವರಿಗೆ ಲೇಖಕ ವ್ಯಕ್ತಿತ್ವವನ್ನು ಹುಡುಕಿಕೊಳ್ಳಲು ನೆರವಾಗಿರಬಹುದು. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ‘ನರ’ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕ-ಪ್ರಕಾಶಕರಾಗಿದ್ದರು. 1975ರಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ, ಸಾರ್ವಜನಿಕ ಸಭೆಯೊಂದರ ಅಧ್ಯಕ್ಷರಾಗಿದ್ದುದು ಆ ಕಾಲದ ಇವರ ಆಸಕ್ತಿಯ ಹರವುಗಳನ್ನು ಸೂಚಿಸುತ್ತದೆ. ದೇವನೂರ ಮಹಾದೇವ ಅವರ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ. 1984ರಲ್ಲಿ ಕಲ್ಕತ್ತಾದ ಭಾರತೀಯ ಪರಿಷತ್ ಇವರ ‘ಒಡಲಾಳ’ ವನ್ನು ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ. ಅದೇ ವರ್ಷ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ದೊರೆಯಿತು. 1989ರಲ್ಲಿ ಅಮೆರಿಕಾದಲ್ಲಿ ನಡೆದ “ಇಂಟರ್ನ್ಯಾಷನಲ್ ರೈಟಿಂಗ್ ಪ್ರೋಗ್ರಾಂ”ನಲ್ಲಿ ಮಹಾದೇವ ಭಾಗವಹಿಸಿದರು. 1991ರಲ್ಲಿ ಕುಸುಮ ಬಾಲೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ನಲವತ್ತೊಂದರ ಕಿರಿವಯಸ್ಸಿನಲ್ಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕಾರ ಪಡೆದ ಭಾರತೀಯ ಲೇಖಕರಲ್ಲಿ ಮಹಾದೇವ ಅವರೇ ಮೊದಲನೆಯವರಿರಬೇಕು. ಅವರಿಗೆ ಭಾರತ ಸರ್ಕಾರದ ‘ಪದ್ಮಶ್ರೀ’ ಗೌರವ ಕೂಡಾ ಸಂದಾಯವಾಯಿತು. ಪ್ರಶಸ್ತಿ ಸ್ವೀಕರಿಸಲು ಕೂಡಾ ಅವರು ಹೋಗಿರಲಿಲ್ಲ. ಅವರ ಮನೆ ಬಾಗಿಲಿಗೇ ಅದು ಅರಸಿಕೊಂಡು ಬಂತು. ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕೇಂದ್ರಸರ್ಕಾರದ ವಿರುದ್ಧವಾಗಿ ಹಲವಾರು ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡುತ್ತಿದ್ದ ಅಭಿಯಾನದಲ್ಲಿ ಮಹಾದೇವರೂ ತಮಗೆ ಸಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಮತ್ತ ಪದ್ಮಶ್ರೀ ಗೌರವಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದರು. ಈ ರೀತಿಯ ಸಾಂಸ್ಥಿಕ ಪ್ರಶಸ್ತಿಗಳೇ ಅಲ್ಲದೆ ದೇವನೂರ ಮಹಾದೇವ ಅವರು ಪಡೆದಿರುವ ವಿಮರ್ಶಾ-ಪ್ರೀತಿ ಗೌರವ ಕೂಡಾ ತುಂಬಾ ಅಪೂರ್ವವಾದದ್ದು. ಪುತಿನ, ಜಿ.ಎಚ್.ನಾಯಕ, ಯು.ಆರ್.ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ. ಲಂಕೇಶ್ ಅಂತಹ ಹಿರಿಯರು ಕೂಡಾ ಈ ವಿಮರ್ಶಾ ಚರ್ಚೆಯಲ್ಲಿ ಭಾಗವಹಿಸಿದ್ದಾರೆಂಬುದು ಮುಖ್ಯ. ಒಡಲಾಳ, ಕುಸುಮಬಾಲೆ, ಅಮಾಸ – ಈ ಕೃತಿಗಳೆಲ್ಲಾ ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ. ಹಿಂಸೆ, ದಬ್ಬಾಳಿಕೆ ಕ್ರೌರ್ಯ – ಇವೆಲ್ಲವೂ ನಮ್ಮ ಸಮಾಜದಲ್ಲಿ ಎಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿವೆಯೆಂದರೆ,ಈ ವಿದ್ಯಮಾನಗಳೆಲ್ಲಾ ನಮಗೆ ಸಹಜವಾಗಿ, ಸರಿಯಾಗಿಯೇ ಕಾಣುತ್ತವೆ. ಇಂತಹ ಸಮಾಜದಲ್ಲಿ ಲೇಖಕನಾಗುವವನಿಗೆ ಪ್ರತಿಭಟನೆಯ ಬಂಡಾಯದ ಅನಿವಾರ್ಯತೆ ಮತ್ತು ಸಂದಿಗ್ಧತೆ ತಿಳಿದಿರಬೇಕು. ಇಲ್ಲಿ ಮನುಷ್ಯನಲ್ಲಿ ಪ್ರೀತಿಸುವ ಮತ್ತು ತಿಳಿಯುವ ಶಕ್ತಿಯು ಎಷ್ಟೊಂದು ಮುಕ್ಕಾಗಿ ಹೋಗಿದೆ ಎಂಬುದನ್ನು ಹೇಳುತ್ತಲೇ, ಈ ಜನವೇ ಪೂರ್ಣವಾಗಿ ಮನುಷ್ಯರಾಗಿ ಅನಾವರಣಗೊಂಡಾಗ, ಎಷ್ಟೊಂದು ಪ್ರೀತಿಸಬಲ್ಲರು, ಎಷ್ಟೊಂದು ಗಾಢವಾಗಿ ತಿಳುವಳಿಕೆ ಪಡೆಯಬಲ್ಲರು ಎಂಬುದನ್ನು ಸೂಚಿಸುವ, ಕನವರಿಸುವ ಶಕ್ತಿಯೂ ಇರಬೇಕು. ಮಹಾದೇವರ ಬರವಣಿಗೆ ಪ್ರಾರಂಭಿಕ ಹಂತದಿಂದಲೂ ಈ ಎಲ್ಲ ಗುಣ ಸ್ವಭಾವಗಳನ್ನು ಬೇರೆ ಬೇರೆ ಸ್ತರದಲ್ಲಿ ಪ್ರಕಟಿಸುತ್ತಾ, ವಿಕಾಸಗೊಂಡಿದೆ ಎಂಬುದೇ ಅವರ ಸಾಹಿತ್ಯದ ವೈಶಿಷ್ಟ್ಯ ಮತ್ತು ಮಹತ್ವ. ಈ ಕಾರಣಕ್ಕಾಗಿಯೇ ಮಹಾದೇವ ದಲಿತರ ಬದುಕಿನ ಬಗ್ಗೆ ಬರೆಯುತ್ತಲೇ ಒಟ್ಟು ಸಮಾಜವನ್ನು, ಒಟ್ಟು ಚರಿತ್ರೆಯನ್ನು ಗ್ರಹಿಸಲು ಅಭಿವ್ಯಕ್ತಿಸಲು ಪ್ರಯತ್ನಿಸುತ್ತಾರೆ. ದಲಿತರು ನಮ್ಮಗಳ ಮನಸ್ಸನ್ನು ಪರಿಭಾವಿಸುವಷ್ಟು ಪ್ರತ್ಯೇಕರಲ್ಲ ಎಂದು ಸೂಚಿಸುವ ಕ್ರಮ ಕೂಡಾ ಇದಾಗಿರಬಹುದು. ಈ ರೀತಿಯ ಗ್ರಹಿಕೆಯ ಸೂಚನೆಗಳೆಲ್ಲಾ ಅವರ ಮೊದಲ ಕಥಾ ಸಂಕಲನದಲ್ಲೇ ಇದೆ. ಗ್ರಸ್ತ, ಮಾರಿಕೊಂಡವರು ಇಂಥ ಪುಟ್ಟ ಕತೆಗಳಲ್ಲಿನ ಕಥಾ ವಿನ್ಯಾಸವೇ ದೊಡ್ದದಾಗಿದೆ. ಅವುಗಳು ಒಳಗೊಳ್ಳುವ ಪ್ರಪಂಚದ ವಿಸ್ತಾರ ಮತ್ತು ಸಂಕೀರ್ಣತೆ ಸಾಂಪ್ರದಾಯಕ ಸಣ್ಣಕತೆಯ ಅಳವಿಗೆ ಮೀರಿದ್ದು. ಗ್ರಸ್ತ ಕತೆಯಲ್ಲಿ ನಿರೂಪಕ, ಆತನ ತಾಯಿ, ಆತನನ್ನು ಓದಿಸಿ ಬೆಳೆಸಿದ ಊರ ಗೌಡ-ಎಲ್ಲರೂ ಬರವಣಿಗೆಯಲ್ಲಿ ಸಿಕ್ಕಿಹಾಕಿಕೊಂಡವರೆ, ಅಪೂರ್ಣರೇ, ಅವರೊಳಗೆ ಪ್ರೀತಿಸುವ ಮತ್ತು ಅಷ್ಟೇ ಮುಖ್ಯವಾಗಿ ಸತ್ಯ ಹೇಳುವ ಶಕ್ತಿಯೂ ಇದೆ. ಹೀಗಾಗಿ ದಲಿತನೊಬ್ಬನು ತನ್ನ ಸದ್ಯದ ಅವಸ್ಥೆಯನ್ನು ಮೀರಲು ಪ್ರಯತ್ನಿಸುತ್ತಲೇ, ತನ್ನ ಪ್ರತಿಭಟನೆ ಮತ್ತು ಪ್ರೀತಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನದ ಕತೆಯೂ ಆಗಿದೆ. ಡಾಂಬರು ಬಂದುದು, ಮೂಡಲ ಸೀಮೆಯ ಕೊಲೆಗಿಲೆ ಮುಂತಾಗಿ ಮಾರಿಕೊಂಡವರು ಕತೆಗಳ ಪಾತ್ರ ಮತ್ತು ಕಥಾವಿನ್ಯಾಸವೂ ಇದೆ ರೀತಿಯದು. ‘ಒಡಲಾಳ’ ಕಥಾನಕವನ್ನು ಕನ್ನಡ ಸಾಹಿತ್ಯ ಲೋಕ ಕ್ಲಾಸಿಕ್ ಎಂದು ಗುರುತಿಸಿಬಿಟ್ಟಿದೆ. ಸಾಕವ್ವನ ಪರಿವಾರದ ಸದಸ್ಯರೆಲ್ಲಾ ಒಟ್ಟಿಗೆ ಕುಳಿತು ಕಡಲೇಕಾಯಿ ತಿನ್ನುವುದು, ಪುಟ್ಟಗೌರಿ ನವಿಲು ಬಿಡಿಸುವುದು, ಇಂತಹ ಪ್ರಕರಣಗಳು ಕನ್ನಡ ಓದುಗರ ಸಂವೇದನೆಯಲ್ಲಿ ಶಾಶ್ವತ ಸ್ಥಾನ ಪಡೆದಿವೆ. ನೂರಾರು ಪ್ರತಿಭಟನಾ ಬಂಡಾಯದ ಕತೆಗಳನ್ನು ಬರೆದರೂ, ಒಡಲಾಳದಂತಹ ಶುದ್ಧಮಾನವ ಪ್ರೀತಿಯ ಕತೆಯ ಪ್ರಭಾವ ಮುಕ್ಕಾಗಲಾರದು. ಒಡಲಾಳವು ದಲಿತರ, ಬಂಡಾಯದ, ಪ್ರತಿಭಟನೆಯ ಒಡಲಾಳದ ಕತೆಯೆಂದು ತಿಳಿಯುವ ಮುನ್ನವೇ ಓದುಗ ಸಂವೇದನೆಯ ಸ್ತರದಲ್ಲೇ ದಲಿತರ ಸ್ಥಿತಿಯ ಬಗ್ಗೆ, ಅವರ ಆಸೆ-ಆಕಾಂಕ್ಷೆಗಳ ಬಗ್ಗೆ ಇತ್ಯಾತ್ಮಕ ಧೋರಣೆಯ ಮನುಷ್ಯನಾಗಿ ಪರಿವರ್ತನೆ ಹೊಂದಿರುತ್ತಾನೆ ಎಂಬುದೇ ಈ ಕೃತಿಯ ಸಾಧನೆ. ಇಲ್ಲಿಯ ನಿರೂಪಣೆ ಕನ್ನಡ ಕಥನ ಸಾಹಿತ್ಯದ ಇಬ್ಬರು ಶ್ರೇಷ್ಠಬರಹಗಾರರಾದ ಮಾಸ್ತಿ ಮತ್ತು ಕುವೆಂಪು ಅವರನ್ನು ಮತ್ತೆ ಮತ್ತೆ ನೆನೆಪಿಗೆ ತರುತ್ತದೆ. ಮಹಾದೇವರ ಈ ಕೃತಿಯಲ್ಲಿ ಹಾಸ್ಯ, ತಮಾಷೆಗಳ ಮೆಲುದನಿಯಿದ್ದರೂ ಅದು ಕಥಾವಸ್ತುವಿನಲ್ಲಿ ಅಡಕವಾಗಿರುವ ವಿಷಾದ ಭಾವಕ್ಕೆ ಅಡ್ಡಿ ಬರುವುದಿಲ್ಲ. ಈ ಕೃತಿಯಲ್ಲಿ ಮಹಾದೇವ ಪ್ರತಿಭಟನೆ-ಬಂಡಾಯವೆನ್ನುವುದು ಎಷ್ಟೊಂದು ಪ್ರೀತಿಯ, ಎಷ್ಟೊಂದು ಅಂತಃಕಾರಣದ ಕ್ರಿಯೆಯೆಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ‘ಕುಸುಮ ಬಾಲೆ’ ಒಂದು ದೃಷ್ಟಿಯಿಂದ ಕತೆಯ ಹಂಗನ್ನು ತೊರೆದ ಕಾದಂಬರಿ ಎಂದು ಹೇಳಬಹುದು. ಹಾಗೆಂದರೆ ಕತೆ ಇಲ್ಲವೆಂದಲ್ಲ. ಘಟನೆ ಇಲ್ಲವೆಂದಲ್ಲ. ಲೇಖಕನೇ ಕತೆಯ ಸ್ವಾರಸ್ಯವನ್ನೆಲ್ಲಾ ಕೇವಲ ಏಳೆಂಟು ವಾಕ್ಯಗಳಲ್ಲಿ ನಾಂದಿ ರೂಪದಲ್ಲಿ ಹೇಳಿ, ಕತೆಯನ್ನು ಮೀರಿದ್ದಕ್ಕೆ ಓದುಗನನ್ನು ಸಿದ್ಧಗೊಳಿಸುವಂತಿದೆ. ಅಕ್ಕಮಹಾದೇವಿ, ಆಕೆಗೆ ಜೀತದಾಳಿನಿಂದ ಹುಟ್ಟಿದ ಮಗ ಯಾಡ, ನಂತರ ಅವನು ಬೆಳೆದು ಯಾಡೇಗೌಡನಾಗುವುದು, ಅವನ ಮಗ ಸೋಮಪ್ಪ ಊರಿಗೆ ದೊಡ್ಡವನು, ಅವನ ಮಗಳು ಕುಸುಮ, ಅವಳಿಗೆ ಚನ್ನನ ಮೂಲಕ ಮಗು, ಚೆನ್ನನ

ಸ್ವಾತ್ಮಗತ Read Post »

ಅಂಕಣ ಸಂಗಾತಿ, ಜೀವನ

ದಿಕ್ಸೂಚಿ

ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ. ಜಯಶ್ರೀ ಜೆ.ಅಬ್ಬಿಗೇರಿ ಕಳ್ಳತನ ಮಾಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರು ‘ನಿನ್ನ ಪರವಾಗಿ ಹೇಳುವುದೇನಾದರೂ ಇದ್ದರೆ ಹೇಳಬಹುದು ಎಂದು ಹೇಳಿದಾಗ ಅದಕ್ಕೆ ಆತ “ನ್ಯಾಯಾಧೀಶರೇ, ನನ್ನ ಜೊತೆಗೆ ನನ್ನ ತಂದೆ ತಾಯಿಗೂ ಶಿಕ್ಷೆ ವಿಧಿಸಿ. ಅವರನ್ನೂ ಜೈಲಿಗೆ ಕಳಿಸಿ” ಎಂದ. ನ್ಯಾಯಾಧೀಶರು ಕಾರಣ ಕೇಳಿದಾಗ ಕಳ್ಳ ಹೇಳಿದ “ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಒಂದು ಪೆನ್ಸಿಲ್ ಕದ್ದೆ. ನಮ್ಮ ತಂದೆ ತಾಯಿಗೆ ಗೊತ್ತಾದರೂ ಅವರು ಏನನ್ನೂ ಹೇಳಲಿಲ್ಲ. ನಂತರ ಬೇರೆ ಬೇರೆ ವಸ್ತುಗಳನ್ನು ಕದ್ದು ತರತೊಡಗಿದೆ. ಕಳ್ಳತನದ ವಿಷಯ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಏನೂ ಹೇಳುತ್ತಿರಲಿಲ್ಲ. ನನ್ನ ಕುಕೃತ್ಯವನ್ನು ಅವರು ನಿರ್ಲಕ್ಷಿಸಿದರು. ಬರಬರುತ್ತ ನನಗೆ ಕಳ್ಳತನ ಚಟವಾಯಿತು. ಇಂದು ನಾನು ದೊಡ್ಡ ಪ್ರಮಾಣದ ಕಳ್ಳನಾಗಲು ಅವರೇ ಕಾರಣ. ಹೀಗಾಗಿ ನನ್ನೊಂದಿಗೆ ಅವರನ್ನೂ ಶಿಕ್ಷಿಸಿ.” ಎಂದುತ್ತರಿಸಿದ. ಕಳ್ಳ ಹೇಳಿದ್ದು ಸರಿಯಾಗಿದೆ. ಪಾಲಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದೇ ಇದ್ದುದರಿಂದ ಅಪರಾಧದಲ್ಲಿ ಪಾಲುದಾರರಾದರು. ಈ ದೃಷ್ಟಾಂತವು ಯಾವುದೇ ಕೆಟ್ಟದ್ದನ್ನು ಸಸಿಯಾಗಿದ್ದಾಗ ಚಿವುಟದಿದ್ದರೆ ಹೆಮ್ಮರವಾಗಿ ಬೆಳೆದು ಬಾಳು ಹಾಳು ಮಾಡುತ್ತದೆ ಎಂಬುದಕ್ಕೆ ನಿದರ್ಶನ.. ಸೋಮಾರಿತನವನ್ನು ಸ್ವಲ್ಪದರಲ್ಲಿದ್ದಾಗಲೇ ಚಿವುಟಬೇಕು ಇಲ್ಲದಿದ್ದರೆ ಜೀವನವನ್ನೇ ನಾಶಮಾಡುತ್ತದೆ. ಆಲಸ್ಯತನಕ್ಕೆ ಮೈಗಳ್ಳತನವೆಂಬ ಶಬ್ದವೂ ಚಾಲ್ತಿಯಲ್ಲಿದೆ. ಆಲಸ್ಯತನವೂ ಒಂದು ರೀತಿಯ ಕಳ್ಳತನವೇ. ಮೈಗಳ್ಳತನ ಮಾಡಿದರೆ ಭವಿಷ್ಯ ಮಣ್ಣು ಪಾಲಾದಂತೆಯೇ ಸರಿ. ‘ನಾನು ಆಲಸಿ’ ಎಂದುಕೊಳ್ಳದೇ ಚಟುವಟಿಕೆಯಿಂದಿರುವುದು ನಮ್ಮ ಕೈಯಲ್ಲೇ ಇದೆ. ಆಲಸ್ಯತನವೆಂದರೆ? ಆಲಸ್ಯತನವೆಂಬುದು ಏನೂ ಮಾಡದೇ ಇರುವ ಮನಸ್ಥಿತಿ. ನಮ್ಮನ್ನು ಕೆಳಗೆ ನೂಕುವ ವೈರಿ. ‘ಹತ್ತಕ್ಕೆ ಒಂಭತ್ತು ಪಾಲಿನ ದೂಃಖಕ್ಕೆ ಕಾರಣ ಸೋಮಾರಿತನ.’ ಎಂಬುದು ಕರ‍್ಲೈಲ್ ಅಭಿಮತ. ‘ಹೂವನ್ನು ಒಡನೆಯೇ ಕಿತ್ತು ಸ್ವೀಕರಿಸು.. ಇಲ್ಲದಿದ್ದರೆ ಅದು ಬಾಡಿ ಹೋಗುವುದು.’ ಇದು ಕವಿ ಟ್ಯಾಗೋರ ಮಾತು.. ಎಲ್ಲದಕ್ಕೂ ನಿರಾಸಕ್ತಿಯನ್ನು ತೋರುವ ಸ್ಥಿತಿ. ಸವಾಲೆನಿಸುವ ಕಾರ‍್ಯ ಮಾಡಬೇಕಾದಾಗ ಇಲ್ಲವೇ ಬೋರೆನಿಸಿದಾಗ, ಕೆಲಸದ ಹೊರೆ ಹೆಚ್ಚಾದಾಗಲೂ ಈ ಸ್ಥಿತಿ ಉಂಟಾಗಬಹುದು. ಆಲಸ್ಯತನವೊಂದು ಲಕ್ಷಣವೇ ಹೊರತು ಸಮಸ್ಯೆ ಅಲ್ಲ ಎಂಬುದನ್ನು ಸರಿಯಾಗಿ ನೆನಪಿನಲ್ಲಿಡಿ. ಪ್ರೇರಣೆಯ ಕೊರತೆ, ಭಯ, ದಣಿವು ಕಂಫರ್ಟ್ ಸ್ಥಿತಿಯಲ್ಲಿ ಇರಲು ಇಚ್ಛಿಸುವುದು. ಸಹ ಆಲಸ್ಯತನಕ್ಕೆ ಕಾರಣವಾಗುತ್ತವೆ. ಇದೊಂದು ಜೀವ ಕಳೆಯನ್ನು ಕಳೆದುಕೊಂಡಿರುವ ಸ್ಥಿತಿ. ದೈನಂದಿನ ಚಟುವಟಿಕೆಗಳಲ್ಲೂ ಉಲ್ಲಾಸ ಕಳೆದುಕೊಳ್ಳಬಹುದು.. ಮನಸ್ಸಿನ ಮೇಲೆ ಹಿಡಿತ ಸಾಧಿಸಿದರೆ ಇದರಿಂದ ಹೊರ ಬರುವುದು ಸುಲಭ. ಆಪಾದಿಸಿದ ಸಂಗತಿ ನಿಜ ಮಾಡಬೇಡಿ ‘‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂಬ ಗಾದೆ ಮಾತಿದೆ. ಹೀಗಾಗಿ ನಾವು ಚಟುವಟಿಕೆಯುಳ್ಳವರಾಗಿ ಸದಾ ಕ್ರಿಯಾಶೀಲರಾಗಿ ಸೃಜನಶೀಲರಾಗಿ ಇರಬೇಕೆಂದರೆ ಚಿಕ್ಕವರಿದ್ದಾಗಿನಿಂದಲೇ ಚುರುಕುತನದಿಂದ ಪಾದರಸದಂತೆ ಕೆಲಸ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ಬಗ್ಗೆ ನಮಗಿರುವ ದುರಭಿಪ್ರಾಯಗಳಲ್ಲಿ ಹೆಚ್ಚು ನಮ್ಮ ಮೇಲೆ ಇತರರು ಅಪಾದಿಸಿದ ಸಂಗತಿಗಳೇ ಇರುತ್ತವೆ. ಅವುಗಳನ್ನು ಒಪ್ಪಿಕೊಂಡು ನಿಜ ಮಾಡಬೇಡಿ.”ನೀನು ತುಂಬಾ ಆಲಸಿ. ನಿನ್ನಿಂದ ಕೆಲಸ ಸಾಧ್ಯವಿಲ್ಲ” ಎಂದು ಅವರೆಂದರೆ “ಇಲ್ಲ, ಅದು ನಿಜವಲ್ಲ. ನನಗೆ ಬೇಕೆನಿಸಿದ್ದನ್ನು ಚೆನ್ನಾಗಿ ಉತ್ಸಾಹದಿಂದ ಮಾಡಬಲ್ಲೆ.’ ಎಂದು ಮಾಡಿ ತೋರಿಸಿ. ‘ಮನುಷ್ಯ ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣ ಯಿಸುತ್ತದೆ..’ ಎಂದಿದ್ದಾನೆ ಎಚ್ ಡಿ ಥೋರೇ. ‘ಯಾವಾಗಲೂ ಬಾತುಕೋಳಿಯಂತೆ ನಡೆದುಕೊಳ್ಳಿ–ಮೇಲ್ಮಟ್ಟದಲ್ಲಿ ಶಾಂತವಾಗಿರಿ ಮತ್ತು ತಳ ಮಟ್ಟದಲ್ಲಿ ಜೋರಾಗಿ ಹುಟ್ಟು ಹಾಕಿ..’. ಕಾರಣದ ಮೇಲೆ ಬೆಳಕು ಚೆಲ್ಲಿ ಆಲಸ್ಯತನದ ಮೂಲ ಕಾರಣವೇನೆಂದು ಯೋಚಿಸಿ ಅದರ ಮೇಲೆ ಬೆಳಕು ಚೆಲ್ಲಿ. ದಣಿವಾಗಿದ್ದರೆ ಕೆಲ ಹೊತ್ತು ವಿಶ್ರಮಿಸಿಕೊಳ್ಳಿ. ವಿಶ್ರಾಂತಿಯಿಂದ ದಣಿವಾಗುವಷ್ಟು ವಿಶ್ರಾಂತಿ ತೆಗೆದುಕೊಳ್ಳದಿರಿ. ಕಾರ್ಯದ ಹೊರೆ ಹೆಚ್ಚಾಗಿದ್ದರಿಂದ ಮೈಗಳ್ಳತನ ಉಂಟಾಗಿದ್ದರೆ ಭಾರವೆನಿಸುವ ಕೆಲಸವನ್ನು ಸರಳೀಕರಿಸಿ, ತುಂಡು ತುಂಡಾದ ಭಾಗಗಳಲ್ಲಿ ಹೇಗೆ ಮಾಡುವುದು ಯೋಜಿಸಿ ಕಾರ‍್ಯಕ್ಕಿಳಿಯಿರಿ. ಮಾಡುತ್ತಿರುವ ಕೆಲಸದ ಬಗ್ಗೆ ಭಯವೇ? ‘ಮಾಡುವ ಕೆಲಸದ ಮೇಲೆ ಗಾಢಾಸಕ್ತಿ ಇರುವ ವ್ಯಕ್ತಿಗೆ ಜೀವನದಲ್ಲಿ ಭಯವಾಗಿಸುವ ಅಂಶ ಯಾವುದೂ ಇಲ್ಲ.’ ಎಂದಿದ್ದಾನೆ ಸ್ಯಾಮ್ಯುವೆಲ್ ಗೋಲ್ಡ್ವಿನ್. ನಿಮ್ಮ ಪ್ರತಿಭೆ ಸಾಮರ್ಥ್ಯದ ಬಗ್ಗೆ ನಂಬಿಕೆ ಬೆಳೆಸಿಕೊಂಡರೆ ಭಯ ಮಂಗಮಾಯ. ಸಾಮಾಜಿಕ ಜಾಲತಾಣದಲ್ಲಿ ಅನಗತ್ಯ ಕಾಲ ಹರಣ ಮಾಡುತ್ತಿದ್ದರೆ ಮೊಬೈಲಿನಿಂದ ದೂರವಿರಿ.ದಿನಚರಿ ಬದಲಿಸಿ.ಸಂಗೀತ ಆಹಾರ ಹಾಸ್ಯ ಪ್ರಜ್ಞೆಯಿಂದ ದಿನಚರಿಯನ್ನು ಬದಲಿಸಿ. ಕೆಲವು ವಿಷಯಗಳು ಆಗಬೇಕೆಂದು ನೀವು ನಿರೀಕ್ಷಿಸಿದಾಗ ವಿಚಿತ್ರವಾಗಿ ಹಾಗೇ ಆಗುತ್ತವೆ.’ ಒಂದು ದೊಡ್ಡ ವಿಚಾರವು ನಮ್ಮ ಬದುಕನ್ನು ಮತ್ತು ಸುತ್ತಲಿನ ವಿಶ್ವವನ್ನೇ ಬದಲಿಸಬಹುದು. ಒಂದೇ ಒಂದು ಮೇಧಾವಿ ವಿಚಾರ ಇಡೀ ಪರಿಸ್ಥಿತಿಯನ್ನೇ ಬದಲಿಸಬಲ್ಲದು. ಚೆನ್ನಾಗಿ ಹೇಳುವುದಕ್ಕಿಂತ ಚೆನ್ನಾಗಿ ಮಾಡುವುದು ಉತ್ತಮ.. ಉತ್ಸಾಹ ಕೂಡಗೊಡುವುದಿಲ್ಲ ಆಲಸ್ಯತನ ಎಬ್ಬಿಸಿಗೊಡುವುದಿಲ್ಲ. ಹೀಗಾಗಿ ನಾವು ಪ್ರಯತ್ನ ಪಟ್ಟಾಗ ಮಾತ್ರ ಗೆಲ್ಲುತ್ತೇವೆ. ಹಾಗಂತ ಒಮ್ಮೆಲೇ ಎಲ್ಲ ಕೆಲಸಗಳನ್ನು ಮಾಡಲು ಹೋಗದಿರಿ. ‘ಅನೇಕ ಕೆಲಸಗಳನ್ನು ಮಾಡಲು ಅತಿ ಚಿಕ್ಕ ದಾರಿಯೆಂದರೆ ಒಂದು ಸಲಕ್ಕೆ ಒಂದು ಕೆಲಸ ಮಾತ್ರ ಮಾಡುವುದು.’ಭವಿಷ್ಯದ ಬಗ್ಗೆ ಆಲೋಚಿಸಿಇವತ್ತು ನಾನು ಆರಾಮವಾಗಿದ್ದೇನೆ ಎಂದು ಕಾಲಿನ ಮೇಲೆ ಕಾಲು ಹಾಕಿ ಸೋಮಾರಿತನ ತೋರಿದರೆ ಭವಿಷ್ಯತ್ತಿನಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ‘ಭವಿಷ್ಯತ್ ಬಗ್ಗೆ ಆಲೋಚಿಸುವವನೇ ಸರಿಯಾದ ದೃಷ್ಟಿಕೋನವಿರುವ ವ್ಯಕ್ತಿ.’ಎಂದು ಇನ್ಯೆನ್ ಹೇಳಿದ್ದಾನೆ. .’ಇಬ್ಬರು ವ್ಯಕ್ತಿಗಳು ಕಿಟಕಿಯ ಮೂಲಕ ನೋಡುತ್ತಾರೆ. ಒಬ್ಬನು ಮಣ್ಣನ್ನು ನೋಡುತ್ತಾನೆ. ಇನ್ನೊಬ್ಬನು ನಕ್ಷತ್ರಗಳನ್ನು ನೋಡುತ್ತಾನೆ.’ ನಾವು ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಂಡಿರುವುದರ ಕಡೆಗೆ ಚಲಿಸುತ್ತೇವೆ. ಇಂದು ನಿಮ್ಮಲ್ಲಿರುವ ಶಕ್ತಿ ಪ್ರತಿಭೆಗಳನ್ನು ಗುರಿಯೆಡೆಗೆ ಸರಿಯಾಗಿ ಅಳವಡಿಸಿ.ಇದು ಆಲಸ್ಯತನದಿಂದ ಮುಂದೂಡುವ ಕೆಟ್ಟ ಚಟವನ್ನು ಅದರಿಂದುಂಟಾಗುವ ಕೆಡುಕನ್ನು ನಿವಾರಿಸುತ್ತದೆ ಆಲಸಿಗಳು ಅವಕಾಶದ ಬದಲು ರಕ್ಷಣೆಯ ಕುರಿತಾಗಿ ಚಿಂತಿಸುತ್ತಾರೆ. ಸೋಮಾರಿಗಳಿಗೆ ಸಾವಿಗಿಂತ ಹೆಚ್ಚಾಗಿ ಜೀವನವೆಂದರೆ ಭಯ ಎನಿಸುತ್ತದೆ. ಮನಸ್ಸಿನ ಅಂಗವಿಕಲತೆಗೆ ಸೊಪ್ಪು ಹಾಕದಿರಿ ‘ಒಂದು ಹಾವನ್ನೋ ದುರ್ಜನರನ್ನೋ ಆರಿಸಿಕೊಳ್ಳಬೇಕಾದಾಗ ಹಾವನ್ನೇ ಆರಿಸಿಕೋ. ಹಾವು ಆತ್ಮ ರಕ್ಷಣೆಗಾಗಿ ಮಾತ್ರ ಕಚ್ಚುತ್ತದೆ. ದುರ್ಜನರು ನಿಷ್ಕಾರಣವಾಗಿ ಹೆಜ್ಜೆ ಹೆಜ್ಜೆಗೂ ಕಚ್ಚುತ್ತಾರೆ.’ ಎಂದಿದ್ದಾನೆ ಚಾಣಕ್ಯ. ಇದೇ ರೀತಿಯಲ್ಲಿ ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಸಮರ್ಥನನ್ನೋ ಆಲಸಿಯನ್ನೋ ಆರಿಸಿಕೊಳ್ಳಬೇಕಾದಾಗ ಅಸಮರ್ಥನನ್ನು ಆರಿಸಿಕೋ ಎನ್ನುತ್ತಾರೆ. ಏಕೆಂದರೆ ಅಸಮರ್ಥನಿಗೆ ತಿಳಿ ಹೇಳಿ ತರಬೇತಿ ನೀಡಿ ಕೆಲಸ ತೆಗೆಯಬಹದು. ಆದರೆ ಆಲಸಿ ತನ್ನೊಂದಿಗೆ. ಸಮರ್ಥರನ್ನೂ ಹಾಳು ಮಾಡುತ್ತಾನೆ ‘. ಶರೀರಕ್ಕೆ ಅಂಗವಿಕಲತೆ ಇದ್ದರೂ ಗೆದ್ದು ತೋರಿದ ಮಹನೀಯರು ಹಲವರು. ಅದರಲ್ಲಿ ಕುಂಟನಾದರೂ ಅಮೇರಿಕದಂಥ ದೇಶವನ್ನು ಅತ್ಯದ್ಭುತವಾಗಿ ಮುನ್ನಡೆಸಿದ ರೂಸ್ ವೆಲ್ಟ್ .ವಿವಿಧ ಅಂಗಗಳ ವಿಕಲತೆಯಿಂದ ಕಂಗೆಡದೇ ಗೆದ್ದು ತೋರಿದ ಹೆಲೆನ್ ಕೆಲ್ಲರ್. ಜಗತ್ತು ಕಂಡು ಬೆರಗಾದ ಸ್ಟೀಫನ್ ಹಾಕಿಂಗ್ ಹೀಗೆ ಪಟ್ಟಿ ಬೆಳೆಯುತ್ತದೆ. ಆಲಸ್ಯತನವೊಂದು ಮನಸ್ಸಿನ ಅಂಗವಿಕಲತೆ. ಇದರ ಬಲಿಗೆ ಬಿದ್ದರೆ ಮುಗಿದು ಹೋಯಿತು. ಎಂಥ ಮೇದಾವಿ, ಅಪ್ರತಿಮ ಪ್ರತಿಭಾವಂತನೂ ಹೇಳ ಹೆಸರಿಲ್ಲದಂತಾಗುವುದನ್ನು ಕಣ್ಣಾರೆ ಕಾಣುತ್ತೇವೆ. ನೀವು ನಿಮ್ಮ ಮನಸ್ಸಿನಿಂದ ಆಳಲಾಗುತ್ತಿದ್ದರೆ ಒಬ್ಬ ಅರಸ, ದೇಹದಿಂದಾದರೆ ಗುಲಾಮ. ತನ್ನನ್ನು ತಾನು ಗೆಲ್ಲುವ ಶಕ್ತಿ ಹೊಂದಿರುವವನನ್ನು ತಡೆಯುವಂಥದ್ದು ಯಾವುದೂ ಇಲ್ಲ. ಆಲಸ್ಯತನ ಓಡಿಸಿ ಅಚ್ಚರಿಗಳ ಸಾಧಿಸಿ.

ದಿಕ್ಸೂಚಿ Read Post »

ಇತರೆ, ಪರಿಸರ

ಜೀವನ

ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “ ಪ್ರೊ ಸುಧಾ ಹುಚ್ಚಣ್ಣವರ “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.           ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು ಹೆಚ್ಚು ನೀನು ಕಡಿಮೆ ಎಂಬ ಭಾವವೇ ಬರಲಾರದು ಹಾಗೆಯೇ ಪ್ರತಿಯೊಬ್ಬ ಮನುಷ್ಯ ತನ್ನ ಇತಿಮಿತಿಯೊಳಗೆ ವಿಶಾಲ ದೃಷ್ಟಿಕೋನದಿಂದ ಜೀವನ  ಸಾಗಿದರೆ ಬದುಕು ಕಷ್ಟವೆನಿಸದು ಎಲ್ಲವೂ ಸರಳವಾಗಿ ಸುಲಲಿತವಾಗಿ ಇರುತ್ತದೆ.       “ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ  ಕುದುರೆ ನೀನ್ ಅವನು  ಪೆಳದಂತೆ ಪಯಣಿಗರು ಮದುವೆಗೂ ಮಸಣಕೊ ಹೋಗೆಂದ ಕಡೆ ಹೋಗು ಪದ ಕುಸಿಯೆ ನೆಲವಿಹುದು” ಮಂಕುತಿಮ್ಮ॥ ಎನ್ನುವ ಹಾಗೆ ಈ ಬದುಕಿನ ಪಯಣದಲ್ಲಿ ಎಲ್ಲವೂ ನಾವಂದುಕೊಂಡಂತೆ ಇರಲಾರದು ಕೆಲವೊಮ್ಮೆ ಸನ್ನಿವೇಶಗಳಿಗೆ ನಾವೇ ಹೊಂದಿಕೊಳ್ಳಬೇಕಾಗುತ್ತದೆ ಇದು ಅವಶ್ಯ ಹಾಗೂ ಅನಿವಾರ್ಯವೂ ಕೂಡಾ,ಬರೀ ಮುಂದೇನಾಗುವುದೋ ಎಂಬ ಆತಂಕ ಭಯದಲ್ಲಿ ಜೀವನ ಸಾಗಿಸು ವುದಲ್ಲ ,ಒಳ್ಳೆಯದೇ ಆಗುತ್ತದೆ ಎನ್ನುವ ಸಕಾರಾತ್ಮಕ ಮನೋಭಾವನೆಯಿಂದ ನಮ್ಮ ಕಾರ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. “ಭಾವನೆ ಒಳ್ಳೆಯದಾದರೆ ಭಾಗ್ಯಕ್ಕೆನು ಕಡಿಮೆ” ಎನ್ನುವಂತೆ ನಮ್ಮ ಭಾವನೆಗಳು ಉತ್ತಮವಾಗಿದ್ದಾಗ ಒಳ್ಳೆಯ ದೃಷ್ಟಿಕೋನದಿಂದ ಕೂಡಿದ್ದಾಗ ನಮಗೆ ಸಿಗುವ ಪ್ರತಿಫಲವೂ ಸಹ ಉತ್ತಮವಾಗಿಯೇ ಇರುತ್ತದೆ.ಅನವಶ್ಯಕವಾಗಿ ಇಲ್ಲಸಲ್ಲದ ವಿಚಾರದಲ್ಲಿ ತೊಡಗದೆ ಆದಷ್ಟು ಸಕಾರಾತ್ಮಕವಾಗಿ ವಿಶಾಲ ಮನೋಭಾವನೆಯನ್ನು ಹೊಂದುತ್ತಾ ಪ್ರತಿಯೊಂದು ಸನ್ನಿವೇಶ ವಸ್ತು ವಿಷಯ ವ್ಯಕ್ತಿ ಎಲ್ಲದರಲ್ಲೂ ಒಳ್ಳೆಯದನ್ನು ಮಾತ್ರ ನಾವು ಕಾಣುತ್ತಾ ಸಾಗಿದರೆ ಬಹುಶಃ ನಮ್ಮ ಬದುಕೇ ಒಂದು ಸುಂದರವಾದ ತಾಣವಾಗುತ್ತದೆ.             ಒಂದು ಗುಲಾಬಿ ಹೂವನ್ನು ನೋಡಿದಾಗ ಒಬ್ಬ ವ್ಯಕ್ತಿ ಅದರ ಸೌಂದರ್ಯವನ್ನು ಆಸ್ವಾದಿಸುತ್ತಾನೆ ಇದು ವಿಶಾಲ ದೃಷ್ಟಿಕೋನ, ಬದಲಾಗಿ ಅದೇ ಹೂವನ್ನು ನೋಡಿದ ಮತ್ತೊಬ್ಬ ವ್ಯಕ್ತಿ ಆ ಗುಲಾಬಿ ಹೂವಿನ ಕೆಳಗಿರುವ ಮುಳ್ಳುಗಳನ್ನು ಮಾತ್ರ ಗಮನಿಸುತ್ತಾನೆ ಇದು ಸಂಕುಚಿತ ದೃಷ್ಟಿಕೋನ, ಬರೀ ಮುಳ್ಳಿನ ತಕರಾರುಗಳನ್ನು ಹೇಳುವ ವ್ಯಕ್ತಿಗೆ ಗುಲಾಬಿ ಹೂವಿನ ಸೌಂದರ್ಯದ ಅರಿವಾಗದು ಇಂತಹ ವ್ಯಕ್ತಿ ಗುಲಾಬಿ ಹೂವೇ ಮುಳ್ಳಿನಿಂದ ಕೂಡಿದೆ ಎನ್ನುತ್ತಾನೆ ಆದರೆ ಹೂವಿನ ಸೌಂದರ್ಯವನ್ನು ಮಾತ್ರ ಗಮನಿಸಿದ ವ್ಯಕ್ತಿ ಅದರ ಸುಂದರತೆಯನ್ನು ಸವಿಯುತ್ತಾನೆ.ಹೀಗೆಯೇ ನಮ್ಮ ಬದುಕು ಎಷ್ಟೋ ಸಾರಿ ಒಳ್ಳೆಯದನ್ನು ಬಿಟ್ಟು ಬರೀ ಕೆಟ್ಟದ್ದರ ಕಡೆಗೆ ಮಾತ್ರ ದೃಷ್ಟಿಕೋನ ವಾಲುತ್ತದೆ ಆಗ ಪ್ರಪಂಚದಲ್ಲಿ ಯಾವುದೂ ನಮಗೆ ಸರಿಯಾಗಿ ಕಾಣುವುದಿಲ್ಲ ಬದಲಾಗಿ ಎಷ್ಟೋ ನಕಾರಾತ್ಮಕ ಅಂಶಗಳಿದ್ದರೂ ಕೂಡ ಸಕಾರಾತ್ಮಕವಾಗಿ ರುವುದನ್ನು ಮಾತ್ರ ನಾವು ಗಮನಿಸುತ್ತಾ ಸಾಗಿದರೆ ನಮ್ಮಲ್ಲಿರುವ ದೃಷ್ಟಿಕೋನಗಳು ವಿಶಾಲಗೊಳುತಾ ಸಾಗುತ್ತವೆ ಆಗ ಈ ಬದುಕೇ ಒಂದು ಅದ್ಭುತ ಹಾಗೂ ವಿಶಿಷ್ಟ ಎನಿಸುತ್ತದೆ. ನಮ್ಮ ವಿಶಾಲ ದೃಷ್ಟಿಕೋನಗಳು  ಮಾತ್ರ ನಮ್ಮ ಮನೋಭಾವನೆಗಳನ್ನು ಬಲಗೊಳಿಸ ಬಲ್ಲವು.        “ವಿಶಾಲ ದೃಷ್ಟಿಕೋನಗಳೇ ಸುಂದರ ಬದುಕಿಗೆ ಆಧಾರ “             “ದೃಷ್ಟಿಯಂತೆ ಸೃಷ್ಟಿ “ಎನ್ನುವ ಹಾಗೆ ನಮ್ಮಲ್ಲಿರುವ ವಿಶಾಲ ದೃಷ್ಟಿಕೋನಗಳೇ ನಮ್ಮ ಸುಂದರ ಬದುಕಿಗೆ ಆಧಾರವಾಗುತ್ತದೆ.ಸೃಷ್ಟಿಯಲ್ಲಿ ಇತರ ಜೀವಿಗಳಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ತೀರ್ಮಾನ ಮಾಡುವ ವಿವೇಕ ಇರುವುದಿಲ್ಲ ಆದರೆ ಮನುಷ್ಯನಲ್ಲಿ ಈ ವಿವೇಕವೂ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿದೆ.ಸೃಷ್ಟಿಯ ಆದಿಯಿಂದಲೂ ಮನುಷ್ಯ ತನ್ನ ವಿವೇಕವನ್ನು ಹಲವಾರು ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತ ಬಂದಿದ್ದಾನೆ.ನಮ್ಮ ಸುತ್ತಲಿರುವ ಒಳಿತು ಕೆಡಕುಗಳ ಮಧ್ಯದಲ್ಲಿಯೇ ವಿಭಿನ್ನವಾದ ದೃಷ್ಟಿಕೋನಗಳು ವಿಭಿನ್ನ ರೀತಿಯಲ್ಲಿ ನಮ್ಮನ್ನು ವಿಚಲಿತಗೊಳಿಸುತ್ತವೆ.ಆದರೆ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಸಾಗಿದಾಗ ನಮ್ಮ ಮನೋಭಾವನೆಗಳು ವಿಶಾಲ ಗೊಳ್ಳುತ್ತಾ ಹೋಗುತ್ತವೆ.ನಮ್ಮಲ್ಲಿ ಕೆಲವೊಮ್ಮೆ ಸಂಕುಚಿತ ಮನೋಭಾವನೆಗಳು ಒಡಮೂಡಿದಾಗ ನಾನೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮ ಅವನತಿಗೆ ಕಾರಣವಾಗುತ್ತದೆ.ಎಲ್ಲರಿಗಿಂತ ನಾನೊಬ್ಬನೇ ಶ್ರೇಷ್ಠ ನಾನೇ ವೀರ ಶೂರ ಧೀರ ಸುಂದರ ಸಶಕ್ತ ಸುಶಿಕ್ಷಿತ ಎಂಬ ಸಂಕುಚಿತ ಮನೋಭಾವನೆಗಳೆ ಮೂಡಿದಾಗ ಮನುಷ್ಯ ಜನ್ಮದ ನೈಜ ಬೆಳವಣಿಗೆ ಕುಂಠಿತವಾಗುತ್ತ ಹೋಗುತ್ತದೆ.ಬದಲಾಗಿ “ತನ್ನಂತೆ ಪರರು ನಾನು ಪರರಂತೆ ಸಹಜೀವಿ “ಎಂಬ ವಿಶಾಲ ಮನೋಭಾವನೆ ನಮ್ಮಲ್ಲಿದ್ದಾಗ ಯಾವುದೇ ವ್ಯತ್ಯಾಸಗಳು ನಮ್ಮಲ್ಲಿ ದುಃಖವನ್ನುಂಟು ಮಾಡಲಾರವು.           ನಮ್ಮ ಸುತ್ತಮುತ್ತಲೂ ಸಣ್ಣವರು ದೊಡ್ಡವರು ಬಡವ ಶ್ರೀಮಂತ ಎಂದು ಹೇಳುತ್ತೇವೆ ಆದರೆ ಪರಸ್ಪರ ಹೋಲಿಸಿದಾಗ ಯಾರೂ ಸಣ್ಣವರಲ್ಲ ಯಾರೂ ದೊಡ್ಡವರಲ್ಲ ಈ ಸತ್ಯವನ್ನು ತಿಳಿದಾಗ ಮಾತ್ರ ನಮ್ಮಲ್ಲಿ ವಿಶಾಲ ದೃಷ್ಟಿಕೋನಗಳು ಸುಂದರ ಬದುಕಿಗೆ ಸೋಪಾನವಾಗುತ್ತದೆ.ಒಂದು ಕುಟುಂಬದ ವಾತಾವರಣದಿಂದ ಇಡೀ ವಿಶ್ವದ ವರೆಗೂ ನಾವು ಅವಲೋಕಿಸುತ್ತಾ ಸಾಗಿದಾಗ ಈ ದೊಡ್ಡಸ್ತಿಕೆಯ ಹೋರಾಟ ಸಮಾಜದ ಎಲ್ಲ ರಂಗಗಳಲ್ಲಿ ಇದ್ದೇ ಇದೆ, ಪ್ರತಿಯೊಬ್ಬನೂ ತಾನು ಎಲ್ಲರಿಗಿಂತ ದೊಡ್ಡವನಾಗಬೇಕು ಎಂದು ಭಾವಿಸುತ್ತಾನೆ. ಆದರೆ ಅದು ಹೋರಾಟದ ಸ್ವರೂಪ ಪಡೆದಾಗ ಮಾತ್ರ ಪರಸ್ಪರರಲ್ಲಿ ದ್ವೇಷ ಅಸೂಯೆಗೆ ಕಾರಣವಾಗುತ್ತದೆ. “ಅರಿತು ಸಾಗಿದಾಗ ಬದುಕೇ ಸುಂದರ” ಎನ್ನುವಂತೆ ಇಲ್ಲಿ ಯಾರೂ ಹೆಚ್ಚು ಅಲ್ಲ ಕಡಿಮೆಯೂ ಅಲ್ಲ ಒಬ್ಬರಿಗೊಬ್ಬರು ಸಹಕಾರ ಸಹಬಾಳ್ವೆಯೊಂದಿಗೆ ಸಾಗಿದಾಗ ಮಾತ್ರ ಜೀವನದ ಪಯಣ ಸುಲಭವಾಗುತ್ತದೆ.ಇಲ್ಲವಾದರೆ ಬರೀ ಸಂಕುಚಿತ ಮನೋಭಾವನೆಗಳೆ ನಮ್ಮನ್ನು ಆವರಿಸಿದರೆ ಜೀವನದ ಸಣ್ಣ ಪುಟ್ಟ ವಿಚಾರಗಳೂ ಸಹ ನಮಗೆ ಸಂಕೀರ್ಣವೆನಿಸುತವೆ. ನಮ್ಮ ದೃಷ್ಟಿಕೋನಗಳು ಎಂದಾಗ ಒಂದು ದೃಷ್ಟಾಂತ ನೆನಪಾಗುತ್ತದೆ ಅದೆಂದರೆ ,ದೊಡ್ಡದಾದ ಗುಡ್ಡದ ಕೆಳಗಡೆ ಒಂದು ಕುಟೀರ, ಆ ಕುಟೀರದ ಎದುರುಗಡೆ ಒಂದು ದಷ್ಟಪುಷ್ಟವಾಗಿ ಬೆಳೆದ ಹೆಮ್ಮೆಯನ್ನು ಕಟ್ಟಿರುತ್ತಾರೆ, ಒಂದು ದಿನ ಆ ಹೆಮ್ಮೆಯ ಮಾಲೀಕ ಗುಡ್ಡವನ್ನೇರಿ ವಿಶಾಲ ಆಗಸ ಹಸಿರು ಸೃಷ್ಟಿಯನ್ನು ನೋಡುವುದರಲ್ಲಿ ತನ್ಮಯನಾಗಿದ್ದ, ಹಾಗೆಯೇ ನೋಡುತ್ತಾ ಅಕಸ್ಮಾತಾಗಿ ಅವನ ದೃಷ್ಟಿಕೋನ ಗುಡ್ಡದ ಕೆಳಗಿರುವ ಕುಟೀರದ ಎದುರುಗಡೆ ಕಟ್ಟಿದ ಎಮ್ಮೆ ಅತ್ತ ಹರಿಯಿತು ಆಗ ಎತ್ತರದ ಗುಡ್ಡದ ಮೇಲಿಂದ ತನ್ನ ಎಮ್ಮೆಯನ್ನು ನೋಡಿದ ಮಾಲೀಕ ಅಂದುಕೊಳ್ಳುತ್ತಾನೆ “ಈ ಎಮ್ಮೆ ಎಷ್ಟು ಚಿಕ್ಕದಾಗಿ ಕಾಣುತ್ತಿದೆಎಲ್ಲಾ ” ಎಂದು ಅಂದುಕೊಂಡ.ಹಾಗೆಯೇ ಗುಡ್ಡದ ಕೆಳಗಡೆ ನಿಂತಿರುವಂತಹ ಎಮ್ಮೆ ಅದೇ ಸಮಯಕ್ಕೆ ಸರಿಯಾಗಿ ಗುಡ್ಡದ ಮೇಲೆ ನಿಂತಿದ್ದ ತನ್ನ ಮಾಲೀಕನನ್ನು ನೋಡಿ” ನಮ್ಮ ಮಾಲಿಕ ಎಷ್ಟು ಕುಳ್ಳನಾಗಿ ಕಾಣುತ್ತಾ ನಲ್ಲ” ಎಂದುಕೊಂಡಿತು ಇಲ್ಲಿ ಮಾಲೀಕನ ದೃಷ್ಟಿಯಲ್ಲಿ ಎಮ್ಮೆ ಚಿಕ್ಕದು, ಎಮ್ಮೆಯ ದೃಷ್ಟಿಕೋನದಲ್ಲಿ ಮಾಲೀಕ ಚಿಕ್ಕವನಾಗಿ ಕಂಡ ,ವಾಸ್ತವದಲ್ಲಿ ನಿಜವಾಗಿ ನೋಡಿದರೆ ಯಾರೂ ಚಿಕ್ಕವರು ಅಲ್ಲ ದೊಡ್ಡವರೂ ಅಲ್ಲ ಕೇವಲ ನಮ್ಮ ನಮ್ಮ ದೃಷ್ಟಿಕೋನ ವಷ್ಟೇ.ಇಂತಹದ್ದೇ ಎಷ್ಟೋ ಸಂಗತಿಗಳು ನಮ್ಮ ಸುತ್ತಮುತ್ತಲೂ ನಾವು ಗಮನಿಸುತ್ತಾ ಸಾಗುತ್ತೇವೆ, ದೃಷ್ಟಿಕೋನಕ್ಕೆ ಅನುಸಾರವಾಗಿ ನಮಗಾಗುವ ಅನುಭವಗಳು ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರವೂ ಸಹ ಆಗಿರುತ್ತವೆ.ಒಂದು ಕುಟುಂಬದಲ್ಲಿ ಎಲ್ಲರ ಆಗುಹೋಗುಗಳನ್ನು ನೋಡಿಕೊಳ್ಳುವ ಮನೆಯ ಯಜಮಾನ ನಾನೊಬ್ಬನೇ ಶ್ರೇಷ್ಠ ಎಂದುಕೊಂಡರೆ ಅದು ಅವನ ಸಂಕುಚಿತ ದೃಷ್ಟಿಕೋನ ಹಾಗೆಯೇ ಕುಟುಂಬದಲಿ  ಎಲ್ಲರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ಎಲ್ಲರ ಆರೈಕೆ ಮಾಡುವ ಕುಟುಂಬದ ಒಡತಿ ನಾನೇ ಹೆಚ್ಚು ಎಂದುಕೊಂಡರೆ ಅದು ಅವರ ದೃಷ್ಟಿಕೋನ ಹೀಗೆ ಪ್ರತಿಯೊಬ್ಬರಲ್ಲೂ ಕೇವಲ ನಾನು ಹೆಚ್ಚು ಎನ್ನುವ ದೃಷ್ಟಿಕೋನ ವಿದ್ದರೆ ಪರಸ್ಪರ ಪ್ರೀತಿ ವಿಶ್ವಾಸ ಸಹಕಾರ ನಂಬಿಕೆ ಹೊಂದಾಣಿಕೆ ಇರಲಾರದು. ಈ ಸೃಷ್ಟಿಯಲ್ಲಿ ಒಂದು ತನ್ನ ಉಳಿವಿಗಾಗಿ ಇನ್ನೊಂದು ಜೀವಿಯ ಮೇಲೆ ಅವಲಂಬಿಸಿದೆ ,ಪರಸ್ಪರ ಅವಲಂಬನೆಯ ಸ್ವರೂಪವಾಗಿ ಇಡೀ ಸೃಷ್ಟಿ ಸಾಗುತ್ತಿದೆ ಇಲ್ಲಿ ನಾನು

ಜೀವನ Read Post »

ಕಾವ್ಯಯಾನ

ಕಾವ್ಯಯಾನ

ಸ೦ಜೆ ಇಳಿಬಿಸಿಲು ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಎಷ್ಟು ಚೆ೦ದ ವಿದ್ದೆಯೇ ನೀನು,ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆಲ೦ಗ ದಾವಣಿಯಲ್ಲಿ ನಲಿದಾಡಿದವಳೆ,ಪಡಸಾಲೆಯಲಿ ಓಡಿ ಬ೦ದುಧಿಕ್ಕಿಯ ಹೊಡೆದು ಗಾಭರಿಯ ನೋಟದಲಿಪ್ರೇಮದೆಸಳುಗಳನೆಸೆದು ಓಡಿ ಹೋದವಳೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆತಾವರೆಯ ಮೊಗ್ಗುಗಳ ತೋರಿಸುತನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗಹುಸಿ ಕೋಪದಲಿ ನನ್ನ ನೂಕಿದವಳೆಕೆರೆಯ ನೀರಲಿ ಕೆಡವಿನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂಒದ್ದೆ ಮಾಡಿದವಳೆ! ಈ ಸ೦ಜೆ ಇಳಿ ಬಿಸಿಲುಬಿಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಜಡೆಯೆಳೆದು, ಬರಸೆಳೆದುಬ೦ಧಿಸಿರೆ ತೋಳಲ್ಲಿಕಣ್ಣೊಳಗೆ ಕಣ್ಣಿಟ್ಟುನನ್ನನೊಳಗೊ೦ಡವಳೆನನ್ನೆದೆಯ ಮರು ಭೂಮಿಯಲಿನಿನ್ನ ಹೆಜ್ಜೆಯ ಗುರುತುಬಿಟ್ಟು ನಡೆದವಳೆತ೦ಗಾಳಿಯಲಿ ಸೆರಗ ಪಟ ಪಟನೆ ಹಾರಿಸುತದೂರ ದೂರಕೆ ತೇಲಿ ಹೋದ ಕಿನ್ನರಿಯೆ! ಎಷ್ಟು ದೂರವೇ ನನ್ನ ನಿನ್ನ ನಡುವೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ!******** ಮೇಗರವಳ್ಳಿ ರಮೇಶ್

ಕಾವ್ಯಯಾನ Read Post »

ಇತರೆ

ವರ್ತಮಾನ

ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ ಬೆಳಕು. ವೃತ್ತ, ಕಂದ ಪದ್ಯಗಳ ಕಲರವ. ಕೆಲವುಕಡೆ ನಾಟಕಗಳದ್ದೇ ಜಾತ್ರೆ. ಪುಣ್ಯಕ್ಕೆ ಈಸಲ ಬನಶಂಕರಿಯಲ್ಲಿ ಹನ್ನೊಂದು ನಾಟಕ ಕಂಪನಿಗಳು ಮಹಾಜಾತ್ರೆಯ ಫಲಕಂಡಿದ್ದವು. ಅದೆನೇ ಇರಲಿ ಜನಸಂಸ್ಕೃತಿಯ ಇಂತಹ ಸಮೃದ್ಧ ರಂಗಸುಗ್ಗಿಯನ್ನು ಈಬಾರಿ ಕೊರೊನಾ ಎಂಬ ಕರಾಳ ರಕ್ಕಸ ಸಾರಾಸಗಟಾಗಿ ನುಂಗಿ ನೊಣೆಯಿತು. ಶಿರಸಿಯಂತಹ ಜಾತ್ರೆಗಳ ಕ್ಯಾಂಪ್ ಕಮರಿ ಹೋಗಿ ಹತ್ತಾರು ನಾಟಕ ಕಂಪನಿಗಳು ಮುಚ್ಚಿದವು. ಸ್ಥಳಾಂತರಿಸಲೂ ಹಣದ ಕೊರತೆ. ನೂರಾರು ಕಲಾವಿದರ ಹಸಿವಿನ ಅನ್ನವನ್ನು ಕೊರೊನಾ ಕಸಿದು ಬಿಟ್ಟಿತು. ಹೆಸರು ಮಾಡಿದ, ಪ್ರಸಿದ್ದಿ ಪಡೆದ ಕೆಲವು ಕಲಾವಿದರು ಹೇಗೋ ತಿಂಗಳೊಪ್ಪತ್ತು ಬದುಕುಳಿದಾರು. ಆದರೆ ಸಣ್ಣ ಪುಟ್ಟ ಪೋಷಕ ಪಾತ್ರಮಾಡುವ ನಾಟಕ ಕಂಪನಿಯ ಕಲಾವಿದರು, ಪ್ರೇಕ್ಷಾಂಗಣದ ಗೇಟ್ ಕಾಯುವವ, ಪರದೆ ಎಳೆಯುವ ಸ್ಟೇಜ್ ಮೇಸ್ತ್ರಿ, ಬೆಳಕಿನ ಸಂಯೋಜನೆಯ ವೈರ್ಮ್ಯಾನ್, ರಂಗಪಾರ್ಟಿಯ ಸಹಾಯಕ, ನೆಲ ಅಗೆದು ಸ್ಟೇಜ್ ಕಟ್ಟುವ ರಂಗಕಾರ್ಮಿಕರು… ಹೀಗೆ ನೂರಾರುಮಂದಿ ನೇಪಥ್ಯ ಕಲಾವಿದರು ಕಂಪನಿ ನಾಟಕಗಳಿಲ್ಲದೇ ಅಸಹಾಯಕತೆಯ ಬಿಸಿಯುಸಿರು ಬಿಡುತ್ತಿದ್ದಾರೆ. ಹಾಗೆಯೇ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನೇ ಬದುಕುವ ಸಹಸ್ರಾರು ಸಂಖ್ಯೆಯ ಹವ್ಯಾಸಿ ಕಲಾವಿದರು, ಕ್ಯಾಸಿಯೋ, ರಿದಂಪ್ಯಾಡ್ ನುಡಿಸುವ, ಮೇಲ್ ಮತ್ತು ಫೀಮೇಲ್ ಕಂಠದಲ್ಲಿ ಹಾಡುವ ರಂಗಗೀತೆಗಳ ಗಾಯಕರು ನೋವಿನ ನಿಟ್ಟುಸಿರು ಬಿಡುವಂತಾಗಿದೆ. ನಗರ, ಪಟ್ಟಣ, ಹಳ್ಳಿ, ಹಟ್ಟಿ, ಮೊಹಲ್ಲಾಗಳ ತುಂಬೆಲ್ಲಾ ಲಾಕ್ ಡೌನ್, ಸೀಲ್ ಡೌನ್ ಗಳ ದಿಗ್ಭಂಧನ. ಪ್ರತೀವರ್ಷ ಒಂದೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹತ್ತಾರು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಸರಕಾರದ ನೆರವಿಲ್ಲದೇ ನಮ್ಮ ಗ್ರಾಮೀಣರು ತಾವೇ ನಾಟಕ ರಚಿಸಿ, ತಾವೇ ನಿರ್ದೇಶಿಸಿ, ತಾವೇ ಲಕ್ಷಗಟ್ಟಲೇ ಹಣಹಾಕಿ ಇಂತಹ ಹವ್ಯಾಸಿ ಕಲಾವಿದೆಯರನ್ನು ಆಮಂತ್ರಿಸಿ ತಾವೂ ಪಾತ್ರ ಮಾಡುತ್ತಾ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೃತ್ತಿ ರಂಗಭೂಮಿಯ ಲೋಕ ಮೀಮಾಂಸೆ ಮೆರೆಯುತ್ತಿದ್ದರು. ಏನಿಲ್ಲವೆಂದರೂ ವರ್ಷಕ್ಕೆ ಏಳೆಂಟು ಸಾವಿರಕ್ಕೂ ಹೆಚ್ಚು ನಾಟಕಗಳು ಕನ್ನಡ ನಾಡಿನಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು. ಇವೆಲ್ಲವೂ ವೃತ್ತಿರಂಗಭೂಮಿ ಶೈಲಿಯ ನಾಟಕಗಳೇ. ಇವರು ಯಾರೂ ಅಪ್ಪೀ ತಪ್ಪಿಯೂ ಪ್ರಯೋಗಾತ್ಮಕವಾದ ಕಾರ್ನಾಡ, ಕಾರಂತ, ಕಂಬಾರ, ಲಂಕೇಶರ ಆಧುನಿಕ ಶೈಲಿಯ ನಾಟಕಗಳನ್ನು ಪ್ರದರ್ಶಿಸಿದವರಲ್ಲ. ಹವ್ಯಾಸಿಗಳಾಗಿದ್ದುಕೊಂಡೇ ಕಂಪನಿ ನಾಟಕಗಳ ಕವಡೆ ಲೋಬಾನ ಪೂಜೆಯ ಕಂಪು ಸೂಸುತ್ತಾ ಹಳ್ಳಿಯ ನಾಟಕಗಳಲ್ಲಿ ದುಡಿದು ವರ್ಷದ ಹಸಿವಿನೊಡಲು ತುಂಬಿಕೊಳ್ಳುತ್ತಿದ್ದರು. ಆ ಎಲ್ಲ ಕಲಾವಿದೆಯರ ಅನ್ನದ ಮೇಲೆ ಈವರ್ಷ ಕೊರೊನಾ ಕಾರ್ಗಲ್ಲು ಬಿದ್ದಿದೆ. ******** ಮಲ್ಲಿಕಾರ್ಜುನ ಕಡಕೋಳ

ವರ್ತಮಾನ Read Post »

ಕಾವ್ಯಯಾನ

ಕಾವ್ಯಯಾನ

 ಯಾವತ್ತೂ ಅವರ ಕತೆಯೇ ಉಂಡೆಯಾ ಕೂಸೆ ಎಂದುಅವ್ವಗೆ ಕೇಳುವ ಆಸೆಅಡ್ಡಿ ಮಾಡುವುದದಕೆಅಪ್ಪನ ತೂತುಬಿದ್ದ ಕಿಸೆ ಅವರ ಒಲೆಯ ಮೇಲಿನ ಮಡಕೆಒಡೆದು ಹೋದುದು ಮುದ್ದೆ ಕೋಲಿನಕಾರಣಕ್ಕೇನಲ್ಲಎಸರಿಗೂ ನೀರ ಇಡಲಾರದ ಬರಡುನೋವಿಗೆ ಖಾಲಿ ಮಡಕೆಯೂಬಾಯ್ದೆರೆಯಿತು ನೋಡಲ್ಲ. ನೆಲೆ ನೀಡದ ಸೂರು, ಉರಿವಸೂರ್ಯನ ತೇರು, ಕೆಂಡದುಂಡೆಯಮೇಲೆಯೇ ನಡೆದರು ಅವರೆಲ್ಲ;ಉರಿ ಹಾದಿ ಬರಿಗಾಲಿಗೆ ಊರದಾರಿ ಮರೆಸಿತು, ಹರಿದ ಬೆವರುಕಣ್ತುಂಬಿ, ನೋಟ ಮಂಜಾಯಿತು ಇವನಾರವ ಇವನಾರವಎಂದವರೇ ಎಲ್ಲ ; ಇವ ನಮ್ಮವಅವ ನಮ್ಮವ ಎನ್ನಲ್ಲಿಲ್ಲ. ಕಷ್ಟಸಂಕಷ್ಟವಾಗಿ ಅವರನು ಕಾಡಿತಲ್ಲಕಾಯಕಜೀವಿಗೆ ಯಾವ ಯುಗದಲೂರಕ್ಷಣೆ ಸಿಗದಲ್ಲ.. ***** ವಸುಂದರಾ ಕದಲೂರು

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ‌ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ ‌.ಇದರಲ್ಲಿ‌ ನಾ ಓದೊದ ಮೊದಲ ಕತೆ‌ ಕವಲು ಸಂಕಲನದ‌ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ‌‌ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ.‌ ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ ತೆರೆದಿಡುವ ರೀತಿ ಅದ್ಭುತವಾದುದು. ೧೯೭೬ ರಲ್ಲಿ ಈ ಸಂಕಲನ ಬಂದಿದೆ.‌೧೯೬೮ ರಲ್ಲಿ ಅವರ ಮುಳ್ಳುಗಳು ಕತೆ ಪ್ರಕಟವಾದುದು.ಆಗಲೇ ವೀಣಾ ಶಾಂತೇಶ್ವರ ಅವರ ಕತೆಯ ಶೈಲಿ, ದಿಟ್ಟತನ, ಕತೆ ಕಟ್ಟುವ ರೀತಿಯ ‌, ಹೆಣ್ಣಿನ‌ ಅಂತರಂಗವನ್ನು ಪ್ರಾಮಾಣಿಕವಾಗಿ, ಕಲಾತ್ಮಕವಾಗಿ ಕಟ್ಟುವ ವೀಣಾ ಅವರನ್ನು ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬರಗೂರು ರಾಮಚಂದ್ರ ಅವರು ಮೆಚ್ಚಿ ಬರೆದಿದ್ದಾರೆ.ಅವರ ಕವಲು ಸಂಕಲನದ ಕತೆಗಳನ್ನು ‌ಓದಲು ಎತ್ತಿಕೊಂಡಾಗ, ಇವತ್ತಿನ ಬರಹಗಾರ್ತಿಯರು ಮುದ್ದಾಂ ‌ಓದಬೇಕು. ಅಬ್ಬಾ ವೀಣಾ ಶಾಂತೇಶ್ವರ ಅವರ ಧೈರ್ಯ ನನಗೆ ಇಷ್ಟವಾಯಿತು.‌ ಇವತ್ತಿನ ಕರ್ನಾಟಕಕ್ಕೆ ಅಂತಹ ಶಕ್ತಿಯುತ, ಸತ್ವಯುತು ಬರಹ ಪ್ರಕಟಿಸುವ ಧೈರ್ಯ ಇದೆಯಾ ಅಂತ ಅನ್ನಿಸಿತು ನನಗೆ. ಪ್ರಶ್ನಿಸುವ ಮನೋಭಾವವೇ ಹೊರಟು ಹೋಗುತ್ತಿದೆ. ಇಲ್ಲಿ ಕಾಯಿಲೆ ನೆಪದಲ್ಲಿ ಒಪ್ಪಿತ ಗುಲಾಮಗಿರಿ ಹೇರುವ ಮತ್ತು ಅದನ್ನು ಒಪ್ಪಿಸುವ ಮನಸ್ಥಿತಿಯ ಕರ್ನಾಟಕದಲ್ಲಿ ನಾವಿದ್ದೇವೆ.ಹನುಮಾಪುರದಲ್ಲಿ ಹನುಮ ಜಯಂತಿ ಇವತ್ತಿಗೂ ಪ್ರಸ್ತುತ ಎನಿಸುವ ಕತೆ.ಇನ್ನೂ ” ಹೋಟೆಲ್ ಬ್ಲೂ ” ೧೯೭೬ ರಲ್ಲಿ ಬಂದ ಸಂಕಲನ.‌ಎಮರ್ಜನ್ಸಿ ಪ್ರಾರಂಭದ ಕಾಲ.‌(೧೯೭೬-೭೭). ಬದುಕಿನ ಹತ್ತು ಹಲವು ಆಯಾಮಗಳನ್ನು ಏಕಕಾಲಕ್ಕೆ ಈ ಕತೆ ಹೇಳುತ್ತದೆ. ರಾಜಕೀಯ, ಭ್ರಷ್ಟಾಚಾರ, ಜಾತೀಯತೆ, ಸಾಹಿತ್ಯ, ಪ್ರಶಸ್ತಿಯ ರಾಜಕೀಯ, ಜಾತಿ ಸ್ವಜನ ಪಕ್ಷಪಾತ, ಮದ್ಯ, ಕಳ್ಳಸಾಗಾಟ, ಸೂಳೆಗಾರಿಕೆ ದಂಧೆ, ಗುಂಡು ಪಾರ್ಟಿಗಳು…ಪ್ರತಿಭಟನೆ, ಸ್ತ್ರೀ‌ಶೋಷಣೆ ….ಇಷ್ಟೆಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಕಲಾತ್ಮಕತೆ ವೀಣಾ ಶಾಂತೇಶ್ವರ ಅವರಿಗೆ ಸಾಧ್ಯವಾಗಿದೆ. ಬದುಕಿನ ಬಹುತ್ವವನ್ನು…ಅನೇಕ ಮನಸ್ಥಿತಿಗಳನ್ನು ಕತೆಗಾರ್ತಿ ಪಾತ್ರಗಳ ಡೈಲಾಗ್ಸ ಮೂಲಕ ಹೇಳಿಬಿಡುತ್ತಾಳೆ.ಕತೆ ಓದುತ್ತಲೇ ಒಂದು ನಾಟಕಕೀಯ ದೃಶ್ಯ ನಮ್ಮ‌‌ ಕಣ್ಮುಂದೆ ಚಲಿಸುತ್ತದೆ. ಅವರ ಮುಳ್ಳುಗಳು ಕತೆಯನ್ನು ಕನ್ನಡ ಯುವ ಬರಹಗಾರ್ತಿ ಯರು ಹಾಗೂ ಬರಹಗಾರರು ಓದಬೇಕು.ಅದ್ಭುತ ಕತೆ. ಮನದ ಚಲನೆ ಅಲ್ಲಿದೆ. ೨೪ ತಾಸುಗಳಲ್ಲಿ ಚಲಿಸುವ ಕತೆ ಅದು. ಅವಳ ಸ್ವಾತಂತ್ರ್ಯ ಧ್ವನಿಪೂರ್ಣ ಕತೆ.‌೧೯೯೪ ರಲ್ಲಿ ಬಂದ ಬಿಡುಗಡೆ ಕತೆ ಕನ್ನಡ ಕಥಾ ಸಾಹಿತ್ಯದಲ್ಲಿ ಮೈಲಿಗಲ್ಲು. ಮಹಿಳಾವಾದಿಗಳು, ಸಂಪ್ರದಾಯಸ್ಥ ಪುರುಷರು ಓದಬೇಕು. ಹೆಣ್ಣಿನ ಕನಸು ಮತ್ತು ಪುರುಷ ದೌರ್ಜನ್ಯದ ಈ ಕತೆ ಹೇಳುವ ಶೈಲಿ, ಕಥನದ ಹೊಸ ಮಾದರಿ ಅಲ್ಲಿದೆ. ಕತೆ ಸಾಗುವ ದಾರಿ ನಿಮ್ಮನ್ನ ಅಚ್ಚರಿ‌ ಗೊಳಿಸುತ್ತದೆ. ಅಂತ್ಯ ಬಂಡಾಯವೇ ಆಗಿದೆ. ಓದುಗನನ್ನು ಚಕಿತಗೊಳಿಸುತ್ತದೆ. ಅವರ ಕತೆಗಳಿಗೆ ಮಾಂತ್ರಿಕ ಶಕ್ತಿ ಇದೆ..ಈ ದೃಷ್ಟಿಯಿಂದ ಕತೆ ,ಕತೆಗಾರ್ತಿ ಬಹುತ್ವದ ಸಂಕೇತ. ‌ ಕವಿ ಬಹುತ್ವ‌ ಭಾವನೆಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಸರ್ವಾಧಿಕಾರಿಯಂತೆ, ಶಬ್ದಗಾರುಡಿಗನಂತೆ ಏಕತ್ರನಾಗಿ ಬರೆಯುತ್ತಾ ಸಾಗುತ್ತಾನೆ. ಬಹುತ್ವ ತನ್ನದಾಗಿಸಿಕೊಂಡ ಬೇಂದ್ರೆಯಂತೆ. ಬಹುತ್ವವನ್ನೇ ಮಾತಾಡಲು ಬಿಟ್ಟು ,ತಾನು ಕೃತಿಕಾರನಾಗಿ ಕಾನೂರು‌‌ ಸುಬ್ಬಮ್ಮ ಹೆಗ್ಗಡಿತಿಯಂತೆ ಬಹುತ್ವವೇ ಆಗುತ್ತಾರೆ ಕುವೆಂಪು.‌ ಹಾಗಾಗಿ ಕುವೆಂಪು ನನಗೆ ಬಹುತ್ವದ ಪ್ರತಿನಿಧಿ. ಬೇಂದ್ರೆ ಏಕತ್ವದ ಪ್ರತಿನಿಧಿ. ನನಗೆ ನನ್ನ ಅಪ್ತರರೊಬ್ಬರು ಹೇಳುತ್ತಿದ್ದರು ; ” ಪ್ರಯತ್ನಿಸಿದರೆ ಎಲ್ಲರೂ ಬರಿಯಬಹುದು.‌ಕತೆ ಕಷ್ಟ. ನಿನಗೆ ಕತೆ ಬರೆಯುವ ಶಕ್ತಿಯಿದೆ.‌ನೀ ಕತೆ ಬರೆಯೆಂದುಆ ಮಾತು ನನಗೆ ಈಚೆಗೆ ನಮ್ಮ ಕಥಾ ಪರಂಪರೆಯ ಹಿರಿಯರನ್ನು ಓದುವಾಗ ನಿಜ ಅನ್ನಿಸಿದೆ. ಲಂಕೇಶ್, ದೇವನೂರು, ವೀಣಾ ಶಾಂತೇಶ್ವರ, ಶಾಂತಿನಾಥ ದೇಸಾಯಿ ಅದ್ಭುತ ಕತೆಗಾರರು. ನೀವು ಸಹ ಕತೆ ಓದಿ. ಬಿಡುವಾದಾಗ.‌ ಪ್ರಶ್ನಿಸುವುದ‌ ಈ ಸಮಾಜ ಕಲಿಯುವಂತೆ ಕತೆ ಬರೆಯಿರಿ. ************** ನಾಗರಾಜ ಹರಪನಹಳ್ಳಿ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಏಕಾಂಗಿಯೊಬ್ಬನ ಏಕಾಂತ ಕಣ್ಣೀರು ಖಾಲಿಯಾಗುವುಂತೆತುಂಬಿಕೊಳ್ಳುತ್ತದೆ ಮತ್ತೆ ಮತ್ತೆಏಕಾಂತ ಖಾಲಿಯಾದರೂಏಕಾಂಗಿಯಾಗುವಂತೆಕಣ್ಣೀರು ಕೂಡ ನೀರಾಗುತ್ತದೆಅವಳ ಬಸಿದು ತಾನೇ ಉಳಿದಾಗ ಮೂರುಗಂಟಿನ ಆಚೆ ನೂರುಗಂಟುಗಳಾಚೆತೆರೆದುಕೊಂಡ ಹೊಸಲೋಕಕೆಪಕ್ಷಿಯ ರೆಕ್ಕೆಗಳ ಕಸುವಿನಂತೆಜಿಗಿದ ಕನಸುಗಳನೆಲ್ಲಾ ಗಂಟಿನೊಳಗೆಮನದೊಡೆಯನ ಸಂಗಾತಕೆಇಬ್ಬನಿಯ ಜೀವದಂತೆ ಕಾದುಕೂತವಳು ಅಲೆಯೊಡೆವ ರುಚಿ ತಂಗಾಳಿಗೆ ಸವರಿಕಾಮನ ಬಿಲ್ಲನು ಕಂಡವಳುತೆಂಡೆಯೊಡೆದ ಕಣ್ಣೀರ ಮಾತಿಗೆಗಾಳಿಯನೆ ಸೀಳಿ ಹೊರಟಾಗತಂಗಾಳಿಗೆ ಬಸಿರಾಗಿ ಕನಸುಗಳ ಹೆತ್ತವಳು ಅಕ್ಷರಕ್ಕೆ ಸಿಗದ ಅಕ್ಕರೆಯನುಲಿಪಿಮಾಡಿ ಅವನಿಗೆ ತಲುಪಿಸಲುಹಾರಿ ಹಾರಿ ನೆಲೆ ಕಾಣದೆ ಅಲೆಯುವಳುಆಗೊಮ್ಮೆ ಈಗೊಮ್ಮೆ ಟಿಸಿಲೊಂದು ಕಂಡಾಗಮುಂಗಾಲಿನಲೆ ಜೀವ ಹಿಡಿಯುವಳುನಂಬಿಕೆಯ ಮಾತು ಹೇಳಿದ ಆ ಮರಕೆಅವಳ ಹಳಹಳಿಕೆಗಳನು ಮಳೆಯಂತೆ ಸುರಿಸುವಳು ನಯವಾದ ಖತ್ತಿಗೆ ಮುತ್ತಿಟ್ಟು ಸಾಕಾಗಿದೆಬಂಜೆಯಾದ ಭರವಸೆಗಳ ಹೊತ್ತು ಸಾಕಾಗಿದೆಹೊಸದಾದ ಶ್ಯಬ್ಧ ಯಾರೇ ನುಡಿದರುಎದೆಯ ಸಾಗರದಲ್ಲಿ ತರಂಗಾಂತರಗಳುಮಿಡಿಯುವ ಮಾರ್ಮಲೆತವೇನಲ್ಲ !ಅವು ಭಯದ ಕಂಪನಗಳುನಾಡಿಯನು ನಿರ್ಜೀವ ಗೊಳಿಸುವ ಪ್ರೀತಿಮತ್ತೆ ಬಡಿಯುವನಕ ಅವಳು ಬೆಂದವಳು ನಯವಾದ ಮೊನಚು ಕೆನ್ನೆಗೆಮತ್ತೆ ಮುತ್ತನಿಡು ಎಂದು ಕೇಳಲಾರೆಕಣ್ಣೀರಿಗೆ ತಾಯಿ ಒಬ್ಬಳೇ ತಂದೆಯರು ಬೇರೆಬಸಿದುಕೊಂಡ ಬೇಸರಕ್ಕಿಂತಉಳಿದ ಕಾಳಿನ ಬರಡುತನವೇ ಉಳಿಸುಈ ಬದುಕಿನ ಖಾಲಿತನವನ್ನುಕಂಪನಗಳ ತಗ್ಗಿಸಲು ಆಗದಿರಬಹುದುಮಮತೆಯ ಮಡಿಲಾಗಿಅವಳನ್ನು ಹಡೆಯಲುಫಲವೀವ ಕಾಳುಗಳಾಗಿ ಮೊಳೆಯುವೆ ಮತ್ತೆ ಮತ್ತೆ…. ***** ಸತ್ಯಮಂಗಲ ಮಹಾದೇವ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯಾಗುವ ಹೊತ್ತು ಅಂಜನಾ ಹೆಗಡೆ ಅಲ್ಲಿಕರುಳ ಬಿಸುಪಿಗೆಕದಲಿದ ಕುಡಿಯೊಂದುಕನಸಾಗಿ ಮಡಿಲುತುಂಬಿಬೆಳ್ಳಿಗೆಜ್ಜೆಯ ಭಾರಕ್ಕೆ ಕನಲಿದರೆನಕ್ಷತ್ರವೊಂದುದೃಷ್ಟಿಬೊಟ್ಟು ಸವರಿಹಣೆ ನೇವರಿಸಿ ನಕ್ಕಾಗಸೃಷ್ಟಿ ಸ್ಥಿತಿ ಲಯಗಳಭಾಷ್ಯವಿಲ್ಲದ ಬರೆಹಕ್ಕೆತಂಬೂರಿ ಹಿಡಿದುನಾನಿಲ್ಲಿಅಕ್ಷರವಾಗುತ್ತೇನೆ ಅಲ್ಲೊಂದು ಇಬ್ಬನಿಹಸಿರೆಲೆಯ ಮೋಹಕ್ಕೆಆವಿಯಾಗುವ ಹೊತ್ತಲ್ಲಿಮುಂಗುರುಳೊಂದು ನಾಚಿಕೆಂಪಾಗಿಅರಳಿದ ದಾಸವಾಳದಪ್ರೇಮಕ್ಕೆ ಬಿದ್ದಾಗಅಂಗಳಕ್ಕಿಳಿದ ಬಣ್ಣಗಳಒಂದೊಂದಾಗಿ ಹೆಕ್ಕುತ್ತಜೋಡಿಸುತ್ತಬೆಳಕಾಗಿ ಮೈನೆರೆದುನಾನೊಂದುಚಿತ್ರಕಾವ್ಯವಾಗುತ್ತೇನೆ ಅಲ್ಲಿಜೋಕಾಲಿಯೊಂದುಸ್ವಪ್ನಗಳ ಜೀಕುತ್ತಮುಗಿಲಿಗೆ ಮುಖಕೊಟ್ಟುಹಗುರಾಗುವ ಕ್ಷಣದಲ್ಲಿಗಾಳಿಗಂಟಿದ ಪಾದನೆಲವ ಚುಂಬಿಸುವಾಗಜೀಕಲಾಗದನೆಲದೆದೆಯ ನಿಟ್ಟುಸಿರಗಾಳಿಗೊಪ್ಪಿಸಿನಾನಿಲ್ಲಿಕವಿತೆಯಾಗುತ್ತೇನೆ **********

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಕವಿತೆಯಂತವಳು (ಕವಿತೆಯಂತವಳು ಕವಿತೆಯಾದಾಗ) 1.ಸಹ್ಯಾದ್ರಿಯ ಹಸಿರು ಚಪ್ಪರದೊಳಗಿನೊಂದುಹಳೆಯ ಮನೆಯೊಳಗೆ ಕೂತುಬರೆಯುತ್ತಾಳೆಪ್ರತಿ ಶಬುದವನ್ನೂ ಹೃದಯದೊಳಗಿಂದ ಹೆಕ್ಕಿತಂದುತನ್ನ ಒಂಟಿತನದ ಕಣ್ಣೀರಿನಿಂದ ಅವನ್ನು ತೊಳೆದುಒಣಗಿಸಿತನ್ನ ಲೋಕದ ಕಣ್ಣಿನ ನಗುವಿನ ಬಣ್ಣವನದಕೆ ಲೇಪಿಸಿಕಟ್ಟುತ್ತಾಳೆಕವಿತೆಯ ಹಾರ,ತನ್ನಅವಮಾನಅಸಹಾಯಕತೆಹತಾಶೆಗಳ ಪೋಣಿಸಿ!ಓದುತ್ತೇನೆ. ತಲೆದೂಗುತ್ತೇನೆಅವಳ ಕಾವ್ಯ ಕಟ್ಟುವ ಕಲೆಗಿಂತ ಹೆಚ್ಚಾಗಿನಕ್ಕು ನಕ್ಕೇ ದು:ಖ ಮರೆಸಿಮರುಳು ಮಾಡುವ ಅವಳ ಬದುಕುವ ಕಲೆಗಾರಿಕೆಯನ್ನು! ಅವಳಿಗೂ ಬದುಕೆಂಬುದಿದೆ ಕವಿತೆಯಹೊರತಾಗಿಯೂಎಂಬುದು ನೆನಪಾದಾಗೆಲ್ಲನಾನು ಕಣ್ಣೀರಾಗುತ್ತೇನೆ.=================== 2ಕಂಡೆ:ಶಬುದಗಳ ಒಡನಾಟದೊಳಗೆ ತಾನೇ ಒಂದುಹೊಸ ಶಬುದವಾದವಳ ಹಾಗೆ ಅವಳು ಕಟ್ಟಿದ ಪ್ರತಿ ಶಬುದಗಳ ಪಾದಗಳಲ್ಲೂಗಾಯದ ಗುರುತುಇಟ್ಟ ಹೆಜ್ಜೆಗಳೆಲ್ಲವೂ ಹೂವಿನ ಮೇಲೇನೂ ಆಗಿರಲಿಲ್ಲಬಹಳಷ್ಟು ಸಾರಿ ಗಾಜಿನ ತುಂಡುಗಳುಕಭ್ಭಿಣದ ಮೊಳೆಗಳು! ಹಾಗೆ ಮೆಲ್ಲಗವಳ ಪಾದಗಳನೆತ್ತಿ ನನ್ನತೊಡೆಯ ಮೇಲಿಟ್ಟುಕೊಂಡು ಸವರಬೇಕುಪ್ರೇಮದ ಮುಲಾಮೆಂದು ಕೊಂಡಾಗೆಲ್ಲಅವಳ ಮುಖ ಮಾತ್ರ ಕಾಣುತ್ತದೆಪಾದಗಳನದೆಲ್ಲಿ ಬಿಟ್ಟು ಬರುತ್ತಾಳೋ!==========3ಅವಳ ಮಲ್ಲಿಗೆಯ ಪಾದಗಳಮುಂದೆ ಮಂಡಿಯೂರಿ ಕೂತುನಿವೇಧನೆ ಮಾಡಿಕೊಳ್ಳಬೇಕು. ನಿನ್ನ ಕರುಣಾಳು ಕಂಗಳಿಂದ ನನ್ನನ್ನೊಮ್ಮೆ ನೋಡುನಿನ್ನ ಅಭಯಹಸ್ತದಿಂದ ನನ್ನ ತಲೆಯನ್ನೊಮ್ಮೆ ನೇವರಿಸುನಿನ್ನ ಮಧುರಕಂಠದಿಂದೊಮ್ಮೆ ನನ್ನ ಹೆಸರನುಸಿರಿಸು ನಿನ್ನ ಕಾಣುವವರೆಗೂ ಕಂಡಿರಲಿಲ್ಲನನ್ನೊಳಗಿನ ನಾನು ತಗೋ ನಿನ್ನಾಯುಧಗಳಿಂದೆನ್ನಅಹಂಕಾರದ ರೆಕ್ಕೆ ಕತ್ತರಿಸುನನ್ನ ವಿಷದ ಹಲ್ಲುಗಳನ್ನು ಕಿತ್ತು ಹಾಕುನನ್ನೆಲ್ಲ ಪಾಪಗಳನ್ನೂ ಮನ್ನಿಸು. ಸಾದ್ಯವಾದರೆ ನನ್ನಪ್ರೀತಿಸು! *********** ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

You cannot copy content of this page

Scroll to Top