ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಆಪ್ತ ಗೆಳೆಯನ ಸಾವು ವೆಂಕಟೇಶ್ ಚಾಗಿ ಅವನು ನನ್ನೊಂದಿಗೆ ಪ್ರತಿದಿನವೂಶಾಲೆಗೆ ಬರುತ್ತಿದ್ದನನ್ನ ಆಟ ಪಾಠ ಕೀಟಲೆಗಳಿಗೆಅವನು ಸಾಕ್ಷಿಯಾಗಿದ್ದಪಾಪ, ಅವನು ಮೂಗನನ್ನೊಂದಿಗೆ ಮಾತನಾಡದಿದ್ದರೂಭಾವನೆಗಳನ್ನುಅರ್ಥಮಾಡಿಕೊಳ್ಳುವಆತ್ಮಬಾಂಧವನನ್ನಿಂದ ಬಯಸುವುದುನನ್ನ ತುಳಿತವಷ್ಟೇಪ್ರತಿದಿನವೂ ತುಳಿತಕ್ಕೊಳಗಾದರೂಅವನು ಬದುಕಿದ್ದು ನನಗಾಗಿಯೇಅವನ ಕಾಲುಗಳಿಗೆನೋವುಗಳು ಚುಚ್ಚಿದಾಗಅವನೇ ಉಸಿರೇ ಹೋಗುತ್ತಿತ್ತುಆಗಾಗ ಉಸಿರು ನೀಡಿದಾಗಮತ್ತೆ ಬದುಕುತ್ತಿದ್ದಪ್ರತಿದಿನದ ನನ್ನ ಸೇವೆಗಾಗಿ;ನನ್ನ ಭಾರವನ್ನೆಲ್ಲ ಅವನುನಿರಾಕರಿಸದೇ ಹೊರುತ್ತಿದ್ದಮತ್ತೆ ನನ್ನ ಭಾರವನ್ನೂ ಸಹ.ಅವನೊಂದಿಗೆ ನಾನು ಹಂಚಿಕೊಂಡಮಾತುಗಳು ಸಾವಿರಾರುನೀಡಿದ ಮುತ್ತುಗಳೂ ಸಾವಿರಾರುತಾನು ಕಷ್ಟಗಳ ಅಪ್ಪಿದರೂಕ್ಷಣಕ್ಷಣವೂ ನೋವನ್ನುಂಡರೂನನ್ನ ಗಾಳಿಯಲ್ಲಿ ತೇಲಿಸುತ್ತಿದ್ದನಾನೇ ಮಾಡಿದ ಗಾಳಿಪಟದಂತೆ.ಅವನುಂಡ ಬಿಸಿಲುಆ ರೈತನಿಗೂ ದಕ್ಕಿಲ್ಲಮಳೆಯ ಹನಿಗಳ ಸುಖವನ್ನುಪ್ರತಿಭಾರಿಯೂಅನುಭವಿಸುವವನು ಅವನೇಚಂದ್ರ ರಜೆ ಹಾಕಿದಾಗಗೆಳೆಯನ ಹಣೆಯ ಮೇಲೆಅಲ್ಲಲ್ಲಿ ಮೈಮೇಲೆಬಂದು ಕುಳಿತುಕೊಳ್ಳುತ್ತಿದ್ದಸತ್ತ ಹೂವುಗಳುಅವನ ಮುಡಿ ಏರಿದರೂಮಣ್ಣಿಗೆ ಕೆಡವಿ ಮತ್ತೆಬದುಕಿಸುವ ಸಾಹಸ ಅವನದುಅವನು ಉದಾರಿ ನಿಸ್ವಾರ್ಥಿಸ್ವಾಭಿಮಾನಿ ಮತ್ತೆ ಆತ್ಮೀಯ ಸೇವಕದಿನಗಳು ಕಳೆದಂತೆನಾನು ಮಾತ್ರ ಬದಲಾದೆ ಅವನಲ್ಲಆ ವಿರಹವೇದನೆಯೇನೋಅವನನ್ನು ಮಣ್ಣಾಗಿಸಿತು ಆಗುಜರಿ ಅಂಗಡಿಅವನನ್ನು ಸೈಕಲ್ ಎನ್ನಲಾದೀತೇಅದು ನನ್ನ ಗೆಳೆಯನ ಸಾವು ಅಷ್ಟೇ. => ವೆಂಕಟೇಶ ಚಾಗಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೋಧಿ ಭಾವ ರೇಮಾಸಂ ಕರವ ಕೊಡವಿ ಕುಳಿತ ಮನಕೆಹಸಿರು ಹಾಸುವ ತವಕದಲಿಮುಗಿಲಿಗೆ ನೋಟವ ಚೆಲ್ಲಿಕೆಚ್ಚನು ತೋರಿದಿ ನೀನಲ್ಲಿ // ಬೊಗಸೆ ಬೆಳಕು ಹಿಡಿದುಕಲ್ಲ ಮುಳ್ಳ ಬೇಲಿಯ ಹಾರಿಭರವಸೆಯ ಬಂಡೆ ಹೊದ್ದುಸಂದಿನಲಿ ಬಿತ್ತು ಬೀಜ ಹಾರಿ// ವಜ್ರದೇಹಿ ಕಲ್ಲೆದೆಯ ಸೀಳಿಮೆದು ಮೇಣವಾಗಿಸಿ ಅರಳಿಪ್ರಯತ್ನಿಸಿದೆ ಮರಳಿ ಮರಳಿನೋಡುವಂತಾದೆಲ್ಲ ಹೊರಳಿ// ಬುದ್ಧನ ಬೋಧಿ ಭಾವವಾಗಿತಪವ ಗೈಯುತ ಮರೆಯಲಿಸರಿದಾರಿ ದೋರಿದೆ ಸರೀಕರಿಗೆಗೆಲುವಿದೆ ಛಲದ ಬಲದಲಿ// ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

“ನಲಿಯೋಣ ಬನ್ನಿ ಸಾತುಗೌಡ ಬಡಗೇರಿ ನಲಿವಾ ಎಲ್ಲರೂ ಸರಸದಿ ಬೆರೆತುವಿರಸವ ಮರೆತು ಒಂದಾಗಿ.ಈ ಧರೆ ಸ್ವರ್ಗದಿ ಹಾಡಿ ಕುಣಿಯುವಾಐಕ್ಯದಿ ನಲಿದು ಚೆಂದಾಗಿ. ದ್ವೇಷ,ಅಸೂಯೆ, ಸೇಡಿನ ಬೆಂಕಿಮನುಜನ ನೆಮ್ಮದಿ ಕೆಡಿಸುವದು.ಅಶಾಂತಿ ಮನದಲಿ ನೆಲೆಸಿ ದೇಹವರೋಗದ ಭಾದೆಗೆ ತಳ್ಳುವುದು. ಏತಕೆ ಸುಮ್ಮನೆ ಚಿಂತೆಯ ಬಾಳುಮರೆತು ಬಾಳುವ ಚಿಂತೆಯನು.ಈ ಇಳೆ ಸೊಬಗು ಸವಿದು ಉಳಿಸುತಸ್ವಾಗತ ಮಾಡುವ ನಾಳೆಯನು. ವೈರಿಯ ಸ್ನೇಹದ ಮಾತಿನ ಒಳಗಡೆಅಡಗಿದೆ ಬೇರೆಯ ಮಸಲತ್ತು.ಎಚ್ಚರ ನಡೆಯ ಇಡಲು ನಮಗೆಬಾರದು ಕೇಡು ಯಾವತ್ತೂ. ಬನ್ನಿ!ಗೆಳೆಯರೇ ಸಂತಸದಿ ತೇಲುವಾಪ್ರತಿಕ್ಷಣ ಹರುಷದ ಹೊಳೆಯಲ್ಲಿ.ಒಂದೇ ಕುಟುಂಬದ ಸದಸ್ಯರಾಗಿನಲಿವಾ ಭಾರತಮಾತೆ ಮಡಿಲಲ್ಲಿ. *****

ಕಾವ್ಯಯಾನ Read Post »

ಇತರೆ

ಲಹರಿ

ನೆನಪುಗಳೇ ಮಧುರ. ಶೀಲಾ ಭಂಡಾರ್ಕರ್ ನೆನಪುಗಳೇ ವಿಚಿತ್ರ. ಒಂದಕ್ಕೊಂದು ಸಂಬಂಧ ಕೂಡಿಸಿ ಎಲ್ಲಿಂದೆಲ್ಲಿಗೋ ಎಳಕೊಂಡು ಹೋಗುವ ಪರಿಯಂತೂ ಅದ್ಭುತ. ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ವಾರಾಂತ್ಯದಲ್ಲಿ ನಮ್ಮನೆಗೆ ಬರುವುದಿತ್ತು. ನಾವು ಚಿಕ್ಕವರಿದ್ದಾಗ ಶನಿವಾರವನ್ನು ಬಹಳ ಕಾತರದಿಂದ ಕಾಯುತಿದ್ದೆವು.ಚಿಕ್ಕಮ್ಮ ಭಾನುವಾರದ ತಿಂಡಿ, ಇಡ್ಲಿ ಅಥವಾ ಖೊಟ್ಟೆಯ ಹಿಟ್ಟನ್ನು ರುಬ್ಬುವ ಕಲ್ಲಿನಲ್ಲಿ ರುಬ್ಬಿ ಕೊಡುತಿದ್ದರು. ಆ ಉದ್ದಿನ ಹಿಟ್ಟು ರುಬ್ಬುತ್ತಾ ಅವರು ನಮಗೆ ಚಂದ ಚಂದದ ರೋಮಾಂಚಕಾರಿ ಕಥೆಗಳನ್ನು ಸೃಷ್ಠಿ ಮಾಡಿ ಹೇಳುವುದಿತ್ತು. ನಮಗದುವೇ ದೊಡ್ಡ ಫ್ಯಾಂಟಸಿಯಾಗಿತ್ತು.ಈಗಲೂ ಚಿಕ್ಕಮ್ಮನ ನೆನಪಾದ ಕೂಡಲೇ, ಹಿಂದೆಯೇ ಅವರು ಹೇಳುವ ಕಥೆಗಳು, ಉದ್ದಿನ ಹಿಟ್ಟಿನ ವಾಸನೆ, ಆ ಅಡುಗೆ ಮನೆ. ಅಲ್ಲಿ ಕೂತ ನಾವು ಎಲ್ಲವೂ ಸಿನೆಮಾ ರೀಲಿನ ಹಾಗೆ. ಹಾಡುಗಳ ಜತೆಯ ನೆನಪುಗಳಂತೂ ನಮ್ಮನ್ನು ಯಾವುದೋ ಲೋಕಕ್ಕೆ ಎಳಕೊಂಡು ಹೋಗುವುದು ಸುಳ್ಳಲ್ಲ. ಹಾಡುಗಳೆಂದರೆ ಜೀವ ನನಗೆ. ಕನ್ನಡ, ಹಿಂದಿ, ಚಿತ್ರಗೀತೆ, ಭಾವಗೀತೆ, ಶಾಸ್ತ್ರೀಯ, ಹಿಂದುಸ್ಥಾನಿ, ಕರ್ನಾಟಕಿ, ಗಜ಼ಲ್, ಠುಮ್ರಿ, ಠಪ್ಪಾ, ಸೂಫಿ, ಖವ್ವಾಲಿ ..ಯಾವುದಾದರೂ ಸರಿ. ಇಡೀ ದಿನ ರೇಡಿಯೋ ಹಾಡುತ್ತಲೇ ಇರುತಿತ್ತು. ಆಮೇಲೆ ಟೇಪ್ ರೆಕಾರ್ಡರ್ ಬಂತಲ್ಲ. ಅದನ್ನು ಹೊತ್ತುಕೊಂಡೇ ತಿರುಗುತಿದ್ದೆ. ನಾನೆಲ್ಲಿ ಹೋಗ್ತೇನೋ ಅಲ್ಲಿ. ಮತ್ತೆ.. ಯಾವುದಾದರೂ ಹಾಡು ಹಾಕುವುದಷ್ಟೇ.. ನಮ್ಮ ಮನೆಯಲ್ಲಿ ಎಲ್ಲರೂ ಸೇರಿ ನಮ್ಮ ನಮ್ಮ ರಾಗದಲ್ಲಿ ಅದಕ್ಕಿಂತ ಜೋರಾಗಿ ಹಾಡುತಿದ್ದೆವು. ಆದರೆ, ಯಾರೊಬ್ಬರೂ, ಯಾರಿಗೂ ಬಾಯಿ ಮುಚ್ಚು ಅಂತಿರಲಿಲ್ಲ. ಅದೇ ಅಭ್ಯಾಸದಂತೆ, ಈಗಲೂ.. ಮಕ್ಕಳು ಯಾವುದಾದರೂ ಹಾಡು ಹಾಕಿದರೆ, ನಾನು ಹಾಡಲು ಹೋಗಿ ಬೈಯಿಸಿಕೊಳ್ಳುತ್ತೇನೆ. ಸಿನ್ಮಾ ಹಾಡನ್ನು ಭಜನೆಯ ಹಾಗೆ ಹಾಡ್ತೇನೆ ಅಂತ ಅವರ ಕಂಪ್ಲೇಂಟ್.ಹಾಗಾಗಿ, ಕಷ್ಟ ಪಟ್ಟು ತಡೆದುಕೊಳ್ಳುತ್ತೇನೆ. ಹಾಡುಗಳ ಜತೆಗಿನ ನೆನಪಿನ ಬಗ್ಗೆ ಹೇಳುವುದಾದರೆ ತುಂಬಾ ಇದೆ. ನಮ್ಮ ಪಕ್ಕದ ಮನೆಯಲ್ಲಿದ್ದ ಲಿಲ್ಲಿಮಾಯಿ.. ಕೆಲಸ ಮಾಡಿ ದಣಿದಾಗ, ನಮ್ಮೂರ ಸೆಕೆಯ ಬೆವರಿಗೆ.. ಅವರ ಹಣೆಯ ಕುಂಕುಮ ಕರಗಿ ಮೂಗಿನ ಮೇಲೆ ಇಳಿಯುತಿತ್ತು. ಹಾಡುಗಳನ್ನು ಕೇಳಿ ಮಾತ್ರ ಗೊತ್ತಿತ್ತು. ಸಿನೆಮಾದ ದೃಶ್ಯ ಹೇಗಿತ್ತೋ ಗೊತ್ತಿಲ್ಲ. “ಕುಂಕುಮ ಹಣೆಯಲಿ ಕರಗಿದೆ” ಎನ್ನುವ ಹಾಡು ರೇಡಿಯೋದಲ್ಲಿ ಬರುವಾಗ.. ನನಗೆ ನೆನಪಾಗುವುದು ಲಿಲ್ಲಿ ಮಾಯಿ. ಮೊನ್ನೆ ತುಂಬಾ ವರ್ಷದ ನಂತರ ಆ ಹಾಡನ್ನು ಕೇಳಿದಾಗ, ಮತ್ತೆ ಲಿಲ್ಲಿ ಮಾಯಿ, ಅವರ ಬಿಡುವಿರದ ಕೆಲಸಗಳು, ಅವರ ಮಕ್ಕಳು, ಅವರ ಅಮ್ಮ. ಎಲ್ಲರೂ ಬಂದರು ಹಿಂದೆ ಹಿಂದೆ. “ಬೆಸುಗೆ .. ಲಲಲಲಾ,… ಬೆಸುಗೆ” ಹಾಡು ತುಂಬಾ ಚಂದ.ಇಷ್ಟದ ಹಾಡು.ಆದರೆ ಒಮ್ಮೆ ಯಾವುದೊ ಪಾತ್ರೆ ತೂತಾಗಿದೆ ಎಂದು ಅಮ್ಮ ಇದಕ್ಕೆ ಬೆಸುಗೆ ಹಾಕಿ ತರಬೇಕು ಅಂದಿದ್ರು.ದೊಡ್ಡ ಹಿತ್ತಾಳೆಯದೋ, ತಾಮ್ರದ ಪಾತ್ರೆ ಅದು‌.ಅಲ್ಲಿಂದ ಆಮೇಲೆ.. ಬೆಸುಗೆ ಹಾಡು ಬಂದರೆ ಸಾಕು.. ನನಗೆ ರಾಶಿ ರಾಶಿ, ದೊಡ್ಡ, ಸಣ್ಣ ಹಿತ್ತಾಳೆ, ತಾಮ್ರ, ಎಲ್ಯೂಮಿನಿಯಮ್ ಪಾತ್ರೆಗಳ ನಡುವೆ ಬೆಸುಗೆ ಹಾಕಲು ಚಿಕ್ಕದೊಂದು ಸ್ಟೂಲ್ ಮೇಲೆ ಕೂತ ಸೋಜ಼ಾ ಮತ್ತು ಅವರ ಅಂಗಡಿಯೇ ಕಣ್ಣ ಮುಂದೆ ಬರುವುದು. ಇನ್ನೊಂದು, ಹಿಂದಿ ಹಾಡು.“ತೇರೆ ಘರ್ ಕೆ ಸಾಮನೆ, ಎಕ್ ಘರ್ ಬನಾವುಂಗಾ..” ನನಗಾಗ ಪ್ರತೀ ಸಲ ಅನಿಸುವುದು. ಯಾರಾದರೂ ಇದೇ ರೀತಿ ನನಗಾಗಿ ಹಾಡಿದರೆ, ನಮ್ಮ ಮನೆಯ ಮುಂದೆ ಎಲ್ಲಿ ಮನೆ ಕಟ್ಟಿಸಬಹುದು? ನಮ್ಮ ಅಂಗಳದೊಳಗೋ?ಎದುರಿಗಿದ್ದಿದ್ದು, ರೈಲ್ವೇ ಹಳಿ. ಏನು ಮಾಡ್ತಾನಪ್ಪಾ ಅವನು?..ಅಥವಾ ಈ ಹಾಡೇ ಬೇಡ ಅಂತ ಬೇರೆ ಯಾವುದನ್ನು ಹುಡುಕಬಹುದು.? ಇತ್ತೀಚೆಗೆ ಊರಿಗೆ ಹೋಗುವಾಗ ಹಳೆ ಹಾಡುಗಳನ್ನು ಒಂದಿಷ್ಟು, ಪೆನ್ ಡ್ರೈವ್‍ಗೆ ಹಾಕಿ ತಗೊಂಡು ಹೋಗಿದ್ದೆ. ಪ್ರತಿಯೊಂದು ಹಾಡು ಕೇಳುವಾಗಲೂ ಹಳೆಯ ನೆನಪುಗಳು ಬಂದು ಆ ಕಾಲಕ್ಕೆ ಕೊಂಡೊಯ್ದವು. **********

ಲಹರಿ Read Post »

ಅಂಕಣ ಸಂಗಾತಿ

ಮೂರನೆ ಆಯಾಮ

ಕೈರಳಿಯ ದೇವನಾಡಿನಲ್ಲಿ ರಂಗಪಯಣ ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಪುಸ್ತಕದ ಹೆಸರು- ರಂಗ ಕೈರಳಿಲೇಖಕರು- ಶ್ರೀ ಕಿರಣ ಭಟ್ಬೆಲೆ- ೧೫೦/- ಕೂಸೆ ಅಡ್ರೆಸ್ ಹೇಳು… ಕಿರಣ ಭಟ್ಟರ ಫೋನ್.ಶ್ರೀದೇವಿ ಕೆರೆಮನೆ, ಹಬ್ಬುವಾಡ, ಕಾರವಾರ ಬರೆದುಹಾಕು ಸಾಕು. ಬರ್‍ತು.ಅಷ್ಟೇ ಸಾಕೇನೆ? ಕೆ.ಎಚ್.ಬಿ ಹಾಕದು ಬ್ಯಾಡ್ದಾ? ರೋಡ್ ನಂಬರ ಹೇಳ್ಬಿಡೆ…ನಿಂಗೆ ಬೇಕರೆ ಕೆ.ಎಚ್.ಬಿ. ಡಿ-೬ ರಸ್ತೆ ಎಲ್ಲ ಹಾಕು. ಹಾಕದಿದ್ರು ಬರ್‍ತು. ಚಿಂತೆ ಮಾಡಡ… ನಾನು ನಗುತ್ತ ಹೇಳಿದೆ.ವರ್ಲ್ಡ್ ಫೇಮಸ್ಸು ಮಾರಾಯ್ತಿ ನೀನು… ನಕ್ಕಿದ್ದರು.ಎಂತಕ್ಕೋ… ಪುಸ್ತಕ ಕಳಸ್ತ್ಯಾ? ಯಾವುದು? ನಾನು ಮಾಮೂಲಿಯಾಗಿ ಕೇಳಿದೆ. ನನ್ನ ಕೆಲವು ಸ್ನೇಹಿತರಿಗೆ, ಹಿರಿಯರಿಗೆ ತಾವು ಓದಿದ ಒಳ್ಳೆಯ ಪುಸ್ತಕಗಳನ್ನು ನನಗೆ ಕಳುಹಿಸಿ ಓದು ಎನ್ನುವ ರೂಢಿಯಿದೆ.ಹಾಂ ನನ್ನ ಪುಸ್ತಕ ಕಳಸ್ತೆ. ಅದೇ ಅವಧಿಲಿ ಬತ್ತಿತ್ತಲೇ…        ಒಂದು ಕ್ಷಣ ಹೊಟ್ಟೆಕಿಚ್ಚಾಯಿತು. ಅವಧಿಯ ನನ್ನ ಪುಸ್ತಕ ಆಗಲೇ ಇಲ್ಲ, ಅದರ ಬಗ್ಗೆ ಯಾವ ಮಾತುಕತೆಯೂ ಆಗ್ತಿಲ್ಲ ಎನ್ನುವ ಬೇಸರ. ಆದರೆ ಮರುಕ್ಷಣವೇ ಖುಷಿ. ಬಹುಶಃ ಕಿರಣ ಭಟ್ಟರ ಪರಿಚಯ ಇದ್ದವರು ಯಾರೂ ಅವರ ಬಗ್ಗೆ ಹೊಟ್ಟೆಕಿಚ್ಚು ಕೋಪ ಮಾಡಿಕೊಳ್ಳುವುದಿಲ್ಲ. ಅಷ್ಟೊಂದು ಪ್ರೀತಿ ತುಂಬಿದ ಜೀವ ಅದು. ಎದುರಿಗಿರುವ ಯಾರೇ ಆದರೂ ಪ್ರೀತಿ ತುಂಬಿದ ಕಳಶವನ್ನು ಕಂಡಂತೆ ತಮ್ಮೆಲ್ಲ ನೋವನ್ನು ಮರೆತು ಬಿಡುವಷ್ಟು ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.  ಕಿರಣ ಭಟ್ಟರ ಬಗ್ಗೆ ಹೇಳಹೊರಟರೆ ನನಗೆ ನೆನಪಾಗುವುದು ನನ್ನ ಅಮ್ಮನೇ. ಅದೇ ತಾಯಿ ಪ್ರೀತಿಯ ಕಿರಣರ ಬಗ್ಗೆ ಹೇಳುತ್ತ ಹೋದರೆ ಹೇಳುತ್ತಲೇ ಹೋಗಬಹುದು. ಅವರ ಪುಸ್ತಕ ರಂಗ ಕೈರಳಿ ಕೂಡ ಹಾಗೇ. ಥೇಟ್ ತಾಯಿ ಪ್ರೀತಿಯನ್ನೇ ಹೊದ್ದುಕೊಂಡು ನಿಂತಷ್ಟೇ ಆತ್ಮೀಯವೆನಿಸಿತು ನನಗೆ.       ಕಿರಣ ಮತ್ತು ಶ್ರೀಪಾದ ಎಂದರೆ ನೆನಪಾಗುವುದು ನಾಟಕ.  ಚಿಕ್ಕ ಮಕ್ಕಳೊಡನೆ ಅವರಿಬ್ಬರೂ ಮಕ್ಕಳಾಗುವ ಪರಿ. ಅದರಲ್ಲೂ ಕಿರಣನೆಂದರೆ ಮಕ್ಕಳ ನಾಟಕ, ಮಕ್ಕಳ ಬೇಸಿಗೆ ಶಿಬಿರ. ಹಿಂದೊಮ್ಮೆ ಬೇಸಿಗೆ ಶಿಬಿರಕ್ಕೆ ನನ್ನ ಮಗನನ್ನು ಸೇರಿಸಿಕೊಳ್ಳಲು ಕೇಳಿದ್ದೆ. ಆಗ ನನ್ನ ಮಗನಿಗೆ ನಾಲ್ಕೋ ಐದೋ ವಯಸ್ಸು. ಈಗ ಬ್ಯಾಡ್ದೆ. ಒಂಚೂರೂ ದೊಡ್ಡಾಗಲಿ. ತನ್ನ ಕೆಲಸ ಆದ್ರೂ ಮಾಡ್ಕಳ್ಳಂಗಿದ್ರೆ ಛಲೋ ಆಗ್ತು. ಎಂದಿದ್ದರು. ತನ್ನ ಕೆಲಸ ಮಾಡ್ಕತ್ತಾ. ಆದ್ರೆ ರಾಶಿ ತುಂಟ. ಎಂದಿದ್ದೆ. ತುಂಟ ಅಲ್ದಿರೆ ಶ್ರೀದೇವಿ ಮಗ ಹೇಳಿ ಗೊತ್ತಾಪುದರೂ ಹ್ಯಾಂಗೆ ಮಾರಾಯ್ತಿ..? ಎಂದು ನಕ್ಕಿದ್ದರು. ಆದರೆ ನನ್ನ ಅಭಿಪ್ರಾಯದಲ್ಲಿ ಕಿರಣ ಭಟ್ ಇದ್ದಾರೆಂದರೆ ಮಕ್ಕಳನ್ನು ನಿಶ್ಚಿಂತೆಯಿಂದ ಬಿಟ್ಟುಹೋಗಬಹುದು ಎಂಬ ನಂಬಿಕೆ. ರಂಗ ಕೈರಳಿಯ ಪ್ರತಿ ಲೇಖನದಲ್ಲೂ ಇಂತಹುದ್ದೊಂದು ನಂಬಿಕೆಯ ಕಥೆಯನ್ನೇ ಕಿರಣ ಭಟ್ ಹೇಳಹೊರಟಿದ್ದಾರೆ. ಸಾಧಾರಣವಾಗಿ ಓದಿದವರಿಗೆಲ್ಲ ರಂಗ ಕೈರಳಿ ಎಂಬುದು ನಾಟಕದ ಕುರಿತಾದ ಮಾಹಿತಿ ಎನ್ನಿಸಬಹುದು. ಲಘು ಪ್ರಬಂಧ ಎನ್ನಿಸಬಹುದು. ಅಥವಾ ಕೇರಳದ ರಂಗ ಪ್ರವಾಸ ಎಂದೂ ಕಾಣಿಸಬಹುದು. ಆದರೆ ನನಗೆ ಮಾತ್ರ ಇಲ್ಲಿಯ ಪ್ರತಿ ಲೇಖನದಲ್ಲೂ ಕಂಡಿದ್ದು ಕಿರಣ ಭಟ್ಟರ ನಂಬಿಕೆ ಮತ್ತು ಪ್ರೀತಿ, ಅದೂ ತಾಯಪ್ರೀತಿ.              ಇಂತಹುದ್ದೊಂದು ನಂಬಿಕೆಯಿಂದಾಗಿಯೇ ಕಿರಣ ಭಟ್ಟರು ಕೇರಳಕ್ಕೆ ಹೊರಡುತ್ತಾರೆ. ನಮ್ಮ ಕಡೆ ಮಲೆಯಾಳಿ ಮಾಂತ್ರಿಕರು ಎಂದರೆ ಭಯಂಕರ ಎಂಬುದೊಂದು ಮಾತಿದೆ. ಹೀಗಿರುವಾಗ ಮಲೆಯಾಳಿ ಮಾಂತ್ರಿಕರ ಬಾಯಿಗೆ ನೇರವಾಗಿ ಹೋಗಿ ಬೀಳುವುದೆಂದರೆ ಅದಕ್ಕೆ ನಂಬಿಕೆಯೆನ್ನದೇ ಬೇರೇನು ಹೇಳಲು ಸಾಧ್ಯ? ಅದೇ ನಂಬಿಕೆಯಿಂದಲೇ ಉನ್ನಿಕುಟ್ಟಿ, ಬಾಬು ಮುಂತಾದವರು ಸ್ನೇಹಿತರಾಗುತ್ತಾರೆ. ಮತ್ತದೇ ನಂಬಿಕೆಯೇ ಪಾರ್ವತಿ ಅಜ್ಜಿಯನ್ನು ಆರೇಳು ದಶಕಗಳ ನಂತರ ತನ್ನ ತವರಿನೊಂದಿಗೆ ಬೆಸೆಯುವಂತೆ ಮಾಡುತ್ತದೆ. ಮತ್ತು ಹಾಗೆ ಜನರ ಮೇಲೆ ನಂಬಿಕೆಯನ್ನಿಡುವ ಕಿರಣ ಭಟ್ಟರ ಗುಣವೇ ಪಾರ್ವತಿ ಅಜ್ಜಿ ತವರನ್ನು ಬಿಟ್ಟು ಬರುವಾಗ ಆರೇಳು ವರ್ಷದವರಾಗಿದ್ದ ಅವರ ತಮ್ಮ ದಾಮೋದರ ಭಟ್ಟರನ್ನು ಹುಡುಕಿಸುತ್ತದೆ. ಹೀಗಾಗಿಯೇ ಇಲ್ಲಿನ ಪ್ರತಿ ಲೇಖನದಲ್ಲೂ ಕಿರಣ ನಂಬಿಕೆಯ ಪಾಠ ಹೇಳುತ್ತಾ ಹೋಗುತ್ತಾರೆ.                   ಕೇರಳಕ್ಕೆ ಹೋಗುವುದು ಕಿರಣನಿಗೆ ಕೇವಲ ನೌಕರಿಗಾಗಿ ಮಾತ್ರವಾಗಿರಲಿಲ್ಲ. ಅದೊಂದು ರಂಗಯಾತ್ರೆ ಎಂದುಕೊಂಡೇ ಹೊರಟಿದ್ದು. ಈ ಪುಸ್ತಕ ಎಂದರೆ ನಾಟಕದ ಮಾತುಕತೆ ಎಂದುಕೊಂಡರೂ ಇದು ಬದುಕಿನ ಪಯಣದ ಕಥೆಗಳೇ ಆಗಿರುವುದು ವಿಶೇಷ. ಹೀಗಾಗಿ ಇಲ್ಲಿನ ಮಾತುಗಳು, ಘಟನೆಗಳು ಕೇವಲ ಅವರ ಜೀವನಕ್ಕಷ್ಟೇ ಅಲ್ಲ, ಎಲ್ಲರ ಜೀವನಕ್ಕೂ ಕನೆಕ್ಟ್ ಆಗುತ್ತವೆ. ಈ ಕಾರಣದಿಂದಾಗಿಯೇ ರಂಗ ಕೈರಳಿ ನಮ್ಮೆಲ್ಲರ ಬದುಕಿನ ಘಟನೆಗಳಂತೆಯೇ ಗೋಚರಿಸುತ್ತದೆ. ಎಲ್ಲೋ ಹೋದಲ್ಲಿ ನಮ್ಮದೇ ಆಸಕ್ತಿಯ ಉಣ್ಣಿಯಂತಹ ಸ್ನೇಹಿತ ಸಿಕ್ಕಿಬಿಡುವುದು ಅದೆಷ್ಟು ಖುಷಿಯ ವಿಷಯ. ಹಾಗಾದಾಗ ಸಿಕ್ಕಿಕೊಂಡ ಉಸಿರು ಸರಾಗವಾಗಿ ಹೊರಬಂದಂತೆನಿಸುತ್ತದೆ. ಕುಮಟಾದಲ್ಲಿ ಆಗತಾನೆ ಬಿಇಡಿ ಮುಗಿಸಿದ್ದೆ. ರಿಸಲ್ಟ್ ಬರಲು ಇನ್ನೂ ತಡವಿತ್ತು. ಅಲ್ಲೇ ಸಮೀಪದ ಆಂಗ್ಲ ಮಾಧ್ಯಮ ಶಾಲೆಯೊಂದು ಇಂಗ್ಲೀಷ್ ಭಾಷಾ ಶಿಕ್ಷಕರು ಬೇಕು ಎಂದಿದ್ದರಂತೆ. ನಮ್ಮ ಇಂಗ್ಲೀಷ್ ಮೆಥಡ್‌ನ ಪ್ರೊಫೆಸರ್ ಬಳಿ. ಅವರೋ ನನ್ನ ಪ್ರೀತಿಯ ಗುರುಗಳು, ಕಥೆಗಾರರಾದ ಶ್ರೀಧರ ಬಳಗಾರರು. ಒಂದು ನಾನವರ ಪ್ರೀತಿಯ ಶಿಷ್ಯೆ. ಜೊತೆಗೆ ಇಂಗ್ಲೀಷ್ ಭಾಷೆ ಮತ್ತು ಮಾಧ್ಯಮದ ವಿದ್ಯಾರ್ಥಿಗಳಲ್ಲಿ ನಾನು ತುಸು ಮುಂದಿದ್ದೆ ಎಂಬ ಕಾರಣಕ್ಕಾಗಿ ಸಹಜವಾಗಿಯೇ ನನ್ನ ಹೆಸರನ್ನು ಸೂಚಿಸಿದ್ದರು. ಆದರೆ ಅಲ್ಲಿ ಹೋದ ಮೇಲೆ ನಾನು ನೀರಿಂದ ತೆಗೆದ ಮೀನಿನಂತಾಗಿದ್ದೆ. ಅಲ್ಲಿ ಯಾರೆಂದರೆ ಯಾರಿಗೂ ಸಾಹಿತ್ಯದ ಕುರಿತಾಗಿ ಒಂದಿಷ್ಟೂ ಆಸಕ್ತಿ ಇರಲಿಲ್ಲ. ನಾನಂತೂ ಖಿನ್ನತೆಯಲ್ಲಿ ಕಳದೇ ಹೋಗುತ್ತೇನೆ ಎನ್ನುವಂತಾಗಿದ್ದೆ. ಅದೇ ಸಮಯದಲ್ಲಿ ಅಲ್ಲಿ ಲಕ್ಷ್ಮಿ ಹೆಗಡೆ ಜೊತೆಯಾಗಿದ್ದರು. ಒಂದಿಷ್ಟು ಪುಸ್ತಕಗಳ ಮಾತು ಪ್ರಾರಂಭವಾಗಿತ್ತು. ಕಿರಣ ತನ್ನ ನಾಟಕದ ಆಸಕ್ತಿಯ ಉನ್ನಿಕೃಷ್ಣನ್ ದೊರೆತಾಗ ಬರೆದ ಖುಷಿ ಓದುವಾಗ ಇದೆಲ್ಲ ನೆನಪಾಗಿತ್ತು. ಇಂತಹ ಹಲವಾರು ನಮ್ಮ ಜೀವನಕ್ಕೂ ಅನ್ವಯಿಸುವ ಸ್ನೇಹಿತರನ್ನು ನಾವಿಲ್ಲಿ ಕಾಣಬಹುದು. ಅದಕ್ಕೆಂದೆ ಮುನ್ನುಡಿಯಲ್ಲಿ ಶ್ರೀಪಾದ ಭಟ್ಟ  ‘ನನ್ನ ಬೆರಳಿನಗಾಯಗಳ ಕುರಿತು ಮಾತನಾಡುವ ಅಂದುಕೊಂಡರೂ ಅದು ಏಕಲವ್ಯನ ಬೆರಳಿನ ಗಾಯದ ಕಥೆಯಾಗಿ ಮಾರ್ಪಡುತ್ತದೆ. ಸಮಾಜದ ಗಾಯದ ಮಾತಾಗಿಬಿಡುತ್ತದೆ.’ ಎಂದು ಬರೆದುದು ನಿಜವಾದರೂ ಅದು ಉಲ್ಟಾ ಕೂಡ ಆಗಬಹುದು. ಏಕಲವ್ಯ ನಾಟಕ ನೋಡುತ್ತಿದ್ದರೆ ನಮ್ಮದೇ ಜೀವನದ ಘಟನೆಯೂ ಅದಕ್ಕೆ ರಿಲೇಟ್ ಆಗಿಬಿಡಬಹುದು ಎಂಬುದೂ ಅಷ್ಟೇ ಸತ್ಯ.                ‘ಅದೃಷ್ಟಾನಾ, ನೋಡಿ ಅದೇ ನನ್ನ ಹುಡುಕಿಕೊಂಡು ಬರ್ತದೆ’ ಎಂದು ‘ಕಿಳವನುಂ ಕಡಲುಂ’ ನಾಟಕದ ಕೊನೆಯಲ್ಲಿ ಯುವ ಮೀನುಗಾರ ಹುಡುಗನೊಬ್ಬ ಆಶಾವಾದಿಯಾಗಿ ಹೇಳುತ್ತಾನೆ. ಬಹುಶಃ ನಾಟಕಗಳ ವಿಷಯದಲ್ಲಷ್ಟೇ ಅಲ್ಲ, ಜೀವನದಲ್ಲೂ ಈ ಅದೃಷ್ಟ ಕಿರಣರನ್ನು ಹುಡುಕಿಕೊಂಡೇ ಬಂದಿದೆ. ಇಲ್ಲವೆಂದರೆ ಪಾರ್ವತಿ ಅಜ್ಜಿಯ ತವರುಮನೆಯನ್ನು ಎಷ್ಟೋ ದಶಕಗಳ ನಂತರ ಹುಡುಕಿಕೊಡುವ ಸೌಭಾಗ್ಯ ಒದಗುವುದು ಸುಲಭದ ವಿಷಯವಲ್ಲ. ಸುಮಾರು ಅರವತ್ತೈದು ವರ್ಷಗಳ ಹಿಂದೆ ಕುಮಟಾದ ಮುರೂರಿಗೆ ಕೇರಳದ ಪಯ್ಯನೂರಿನಿಂದ ಮದುವೆಯಾಗಿ ಬಂದ ಪಾರ್ವತಿ ಅಜ್ಜಿ ನಂತರ ಒಮ್ಮೆಯೂ ತವರಿಗೆ ಹೋಗಿದ್ದೇ ಇಲ್ಲ. ಸಂಪರ್ಕವೂ ಇರಲಿಲ್ಲ. ಅವರು ಮದುವೆಯಾಗಿ ಬರುವಾಗ ಅವರ ಸಹೋದರ ದಾಮೋದರ ಇನ್ನೂ ತೀರಾ ಚಿಕ್ಕವ. ಉಳ್ಳಾಲತಿಟ್ಟ, ಪಯ್ಯನೂರು, ಶಿವ ದೇಗುಲದ ಹೊರತಾಗಿ ಅವರಿಗೆ ಬೇರಾವ ನೆನಪೂ ಇರಲಿಲ್ಲ. ಅಲ್ಲಿ ಹೋಗಿ ನೋಡಿದರೆ ಉಳ್ಳಾಲತಿಟ್ಟ ಎಂಬ ಹೆಸರಿನ ಊರೇ ಇರಲಿಲ್ಲ. ಹೀಗಿರುವಾಗ ಒಬ್ಬ ಲೈನ್‌ಮನ್ ವಿಲಿಯಂಕೋಡ್‌ದಲ್ಲಿ ಶಿವ ದೇಗುಲದಲ್ಲಿ ದಾಮೋದರ ಭಟ್ಟರು ಇರುವ ಬಗ್ಗೆ ತಿಳಿಸಿದ್ದ. ನೋಡಿದರೆ ನೆನಪಿಟ್ಟುಕೊಳ್ಳುವ ವಯಸ್ಸಿಗೆ ಬರುವ ಮುನ್ನವೇ ಪಾರ್ವತಿ ಎಂಬ ಚೇಚಿಯನ್ನು ಕಳೆದುಕೊಂಡ ಅದೇ ದಾಮೋದರ. ಒಂದು ತಾಯಿಗೆ ತವರನ್ನು, ಮಕ್ಕಳಿಗೆ ಅಜ್ಜಿಮನೆಯನ್ನು ದೊರಕಿಸಿಕೊಡುವುದು ಅದೃಷ್ಟ ಒಂದು ಚೂರು ಕೊಟ್ಟಿಯಾದರೂ ಅವಕಾಶ ಸಿಗುವುದಿಲ್ಲ. ಹೀಗಿರುವಾಗ ಕಿರಣ ಭಟ್ಟರಿಗೆ ಈ ಅದೃಷ್ಟ ಅನಾಯಾಸವಾಗಿ ಒದಗಿಬಂದಿದೆ. ಇಂತಹ ಮನಕಲಕುವ ಬಹಳಷ್ಟು ಕಥೆಗಳು ಇಲ್ಲಿವೆ. ಹೀಗಾಗಿಯೇ ಇದು ಮನುಕುಲದ ಕಥೆ.    ನಾನು ನಾಟಕ ಮತ್ತು ಸಿನೇಮಾ ನೋಡುವುದೇ ಕಡಿಮೆ. ಮೂರು ತಾಸು ಕುಳಿತು ನೋಡುವ ತಾಳ್ಮೆ ನನ್ನಲ್ಲಿ ಇಲ್ಲ ಎನ್ನುವುದು ಮೊದಲ ಕಾರಣವಾದರೆ ಒಮ್ಮೆ ನೋಡಿದರೆ ಎರಡು ದಿನ ಅದರಲ್ಲೇ ಮನಸ್ಸು ಮುಳುಗಿ ಬೇರೇನೂ ಮಾಡಲಾಗುವುದಿಲ್ಲ ಎನ್ನುವುದು ಇನ್ನೊಂದು ಕಾರಣ.  ಹೀಗಾಗಿ ನನ್ನ ಮತ್ತು ನಾಟಕದ ಸಂಪರ್ಕ ಇತ್ತೀಚಿನ ದಿನಗಳವರೆಗೂ ಕಡಿಮೆಯೇ. ಚಿಕ್ಕವಳಿರುವಾಗ ಒಮ್ಮೆ ಶಿರಸಿ ಜಾತ್ರೆಯಲ್ಲಿ ಯಾವುದೋ ನಾಟಕಕ್ಕೆ ಹೋಗಿದ್ದೆ. ಕಂಪನಿ ನಾಟಕ ಅದು. ಹೆಸರಾಂತ ಕಂಪನಿಯದ್ದೇ. ಆದರೂ ಅಲ್ಲಿನ ಡಾನ್ಸು, ಅಭಿನಯ ಹಾಗೂ ಡಬಲ್ ಮೀನಿಂಗ್ ಮಾತುಗಳು ಬೇಸರ ಹುಟ್ಟಿಸಿ ನಾಟಕವೆಂದರೆ ಇಷ್ಟೇ ಎಂಬ ಭಾವನೆ ಹುಟ್ಟಿಸಿಬಿಟ್ಟಿತ್ತು. ಇನ್ನೊಮ್ಮೆ ಊರಲ್ಲಿಯೇ ನಡೆದ ನಾಟಕವೊಂದಕ್ಕೆ ಹೋಗಿದ್ದೆ. ಅದೂ ನನ್ನೂರಿನ ವೆಂಕಟೇಶಣ್ಣ ಅದರಲ್ಲಿ ಪಾತ್ರ ಮಾಡಿದ್ದ ಮತ್ತು ಪ್ರತಿಸಲ ಎದುರಿಗೆ ಸಿಕ್ಕಾಗಲೂ ‘ತಂಗಿ, ನನ್ನ ನಾಟಕ ನೋಡಲು ಬಾರೆ..’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಎಂಬ ಕಾರಣಕ್ಕಾಗಿ. ಶಾಲೆಯ ಆಟದ ಮೈದಾನದಲ್ಲಿ ಕುಳಿತು ನೋಡುವ ನಾಟಕ ಅದು. ಯಾಕೋ ಅಲ್ಲಿ ನಡೆದ ಅಹಿತಕರ ಸನ್ನಿವೇಶ ಇನ್ಯಾವತ್ತೂ ನಾಟಕವನ್ನೇ ನೋಡಬಾರದು ಎಂಬಷ್ಟು ಬೇಸರ ಹುಟ್ಟಿಸಿತ್ತು. ರಘು ಅಣ್ಣನವರ ತುಮುರಿ ಕಾರ್‍ಯಕ್ರಮದಲ್ಲಿ  ತುಮುರಿಯ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಗೆಳೆಯ ಜಿ. ಟಿ ಸತ್ಯನಾರಾಯಣ ಲಂಕೇಶರ ಜೀವನವನ್ನು ಆಧರಿಸಿದ ನಾಟಕನ್ನು ಮಾಡಿದ್ದರು. ‘ಅರೆ, ನಾಟಕ ಇಷ್ಟು  ಚಂದನೂ ಇರ್ತದಲ್ಲ’ ಎಂದು ಅಂದುಕೊಂಡಿದ್ದೆ. ಹಿಂದಿನ ವರ್ಷ ಅದ್ಭುತ ರಂಗಪ್ರಯೋಗಗಳ ಮೂಲಕ ಮನೆಮಾತಾಗಿರುವ ಕೆ ಆರ್ ಪ್ರಕಾಶರವರು ‘ಕಾರವಾರದ ರಾಕ್ ಗಾರ್ಡನ್‌ನಲ್ಲಿರುವ ತೂಗುಸೇತುವೆಯ ಮೇಲೆ ಒಂದು ನಾಟಕ ಮಾಡೋಣ. ಬರೆಯಿರಿ’ ಎಂದಿದ್ದರು. ನಾಟಕಗಳನ್ನು ಹೆಚ್ಚು ನೋಡಿಲ್ಲದ ಕಾರಣ ಮೊದಲೊಂದಿಷ್ಟು ಗಡಿಬಿಡಿಯಲ್ಲಿ ಬರೆದೆನಾದರೂ ನಂತರ ಕುಳಿತು ಅದನ್ನು ಮತ್ತೆ ತಿದ್ದಿ ಬರೆದಿದ್ದೆ. ಆದರೆ ನನ್ನಿಂದ ಅದಕ್ಕೆ ರಂಗಗೀತೆ ಬರೆಯಲಾಗಲಿಲ್ಲ. ಅಷ್ಟರಲ್ಲಿ ಮಳೆಯೂ ಪ್ರಾರಂಭವಾಯಿತಾದ್ದರಿಂದ ನಮ್ಮ ನಾಟಕದ ಪ್ರೋಗ್ರಾಂ ಅಲ್ಲಿಗೇ ಮುಗಿಯಿತು. ಮುಂದೆ ಪ್ರಕಾಶ ನಾಟಕ ಅಕಾಡೆಮಿಯ ಸದಸ್ಯರಾಗಿ ಬ್ಯೂಸಿ ಆಗಿಬಿಟ್ಟರು. ಹೀಗಾಗಿ ನಾಟಕದೊಡನೆ ನನ್ನ ಒಡನಾಟ ತೀರಾ ಕಡಿಮೆಯೆ. ಆದರೆ ಕಿರಣ ಭಟ್ಟರ ‘ರಂಗ ಕೈರಳಿ’ಯನ್ನು ಓದಿದ ಮೇಲೆ ಇನ್ನು ಮುಂದೆ ನಾಟಕ ನೋಡಲೇಬೇಕು ಎಂದು ನಿರ್ಧರಿಸಿಬಿಟ್ಟಿದ್ದೇನೆ. ನೀವೂ ಓದಿನೋಡಿ. ಖಂಡಿತಾ ನೀವೂ ನಾಟಕ ಹುಡುಕಿಕೊಂಡು ಹೋಗಿ ನೋಡಬೇಕು ಎಂದುಕೊಳ್ಳುತ್ತೀರಿ.                              ******* ಲೇಖಕರ ಬಗ್ಗೆ ಎರಡು ಮಾತು: ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ  ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಮೂರನೆ ಆಯಾಮ Read Post »

ಅಂಕಣ ಸಂಗಾತಿ

ಸಂಪ್ರೋಕ್ಷಣ

ಕನಸಿನ ಚಾದರ ಬರಹ-02 ಬಣ್ಣಗಳಂತೆಯೇ ಕನಸುಗಳದ್ದೂ ಒಂದು ಮೋಹಕ ಲೋಕ. ಕನಸು ಕಾಣದ ಅಥವಾ ಕನಸುಗಳೇ ಬೀಳದ ಮನುಷ್ಯರಿಲ್ಲ. ಕನಸು ಬೀಳುವುದು ವಿಜ್ಞಾನ ಅಥವಾ ವೈದ್ಯಕೀಯಕ್ಕೆ ಸಂಬಂಧಪಟ್ಟ ಸಂಗತಿಯಾದರೆ, ಕನಸು ಕಾಣುವುದೊಂದು ಮನಸ್ಥಿತಿ ಅಥವಾ ಭಾವನೆಗಳಿಗೆ ಸಂಬಂಧಪಟ್ಟಿದ್ದು. ರಾತ್ರಿ ಬಿದ್ದ ಕನಸೊಂದು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ಮರೆತುಹೋಗುವುದುಂಟು; ಬಾಲ್ಯದ ಅವೆಷ್ಟೋ ಕನಸುಗಳು ಯೌವನಾವಸ್ಥೆಯಲ್ಲಿ ಅಥವಾ ಯೌವನದ ಅವೆಷ್ಟೋ ಕನಸುಗಳು ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಮರೆಯಾಗುವುದುಂಟು. ಆದರೆ ಈ ಕನಸಿನ ಪ್ರಕ್ರಿಯೆ ಮಾತ್ರ ನಿರಂತರ. ಕಾಲೇಜಿನ ದಿನಗಳಲ್ಲಿ ಕುಡಿಮೀಸೆಯಂಚಿನಲ್ಲಿ ಸೊಗಸಾಗಿ ನಕ್ಕು ಕನಸಿನಂತೆ ಮರೆಯಾಗುತ್ತಿದ್ದ ಹುಡುಗನೊಬ್ಬ ಎರಡು ಮಕ್ಕಳ ತಂದೆಯಾಗಿ ಮಾರ್ಕೆಟ್ಟಿನಲ್ಲೆಲ್ಲೋ ಎದುರಾಗಿಬಿಡಬಹುದು. ಹಳೆಯ ಕನಸೊಂದು ಇಂದಿನ ವಾಸ್ತವವಾಗಿ, ಇವತ್ತಿನ ಸುಂದರ ಬದುಕೊಂದು ನಾಳೆಯ ಕನಸಾಗಿ, ಏನೆಲ್ಲವೂ ಆಗಿಬಿಡಬಹುದು. ಮನುಷ್ಯ ದಾಖಲೆಗಳನ್ನು ಸೃಷ್ಟಿಸುವುದರಲ್ಲಿ ನಿಸ್ಸೀಮ. ಜನ್ಮದಾಖಲೆಯಿಂದ ಶುರುವಾಗುವ ಮನುಷ್ಯಜನ್ಮದ ಯಶಸ್ಸೆಲ್ಲವೂ ದಾಖಲೆಗಳ ಸುತ್ತಲೇ ಸುತ್ತುವಂಥದ್ದು. ಆದರೆ ಕನಸುಗಳೊಂದಿಗಿನ ನಮ್ಮ ಪಯಣ ಮಾತ್ರ ಇಂಥದ್ದೇ ದಿನದಂದು ಇದೇ ಸಮಯದಲ್ಲಿ ಪ್ರಾರಂಭವಾಯಿತೆಂದು ನಿಖರವಾಗಿ ದಾಖಲಿಸಲಾಗದು. ಬಾಳೆಮರದಲ್ಲಿ ತೆಂಗಿನಕಾಯಿ ಬಿಟ್ಟಂತೆ ನಿದ್ದೆಯಲ್ಲೊಮ್ಮೆ ಕನಸು ಬಿದ್ದಿರಬಹುದು ಅಥವಾ ಮುಸ್ಸಂಜೆಯಲ್ಲೊಮ್ಮೆ ಕಾಫಿ ಕುಡಿಯುತ್ತಾ ಅಂಥ ವಿಲಕ್ಷಣ ಯೋಚನೆಯೊಂದು ಕನಸಿನಂತೆ ಹಾದುಹೋಗಿರಬಹುದು. ಅಂಥದ್ದೊಂದು ಕನಸಿಗೆ ಪ್ರತಿಕ್ರಿಯೆಯಾಗಿ ಒಮ್ಮೆ ನಕ್ಕು ಸುಮ್ಮನಾಗಿಬಿಡುತ್ತೇವೆಯೇ ಹೊರತು ವಿಲಕ್ಷಣ ಕನಸುಗಳದ್ದೊಂದು, ಸುಂದರ ಕನಸುಗಳದ್ದೊಂದು ಅಥವಾ ಕನಸುಗಳೇ ಮುಗಿದುಹೋದ ಬದುಕಿನದೊಂದು ದಾಖಲೆಗಳನ್ನು ಸೃಷ್ಟಿ ಮಾಡಲಾಗದು. ನಮ್ಮೊಳಗೇ ಹುಟ್ಟಿ, ಕಸುವಿಗನುಸಾರವಾಗಿ ಬೆಳೆದು, ಒಮ್ಮೊಮ್ಮೆ ಸಂಭವಿಸಿ, ಮತ್ತೆಲ್ಲೋ ಮುಗಿದುಹೋಗುವ ಕನಸುಗಳೆಲ್ಲವೂ ಮುಖಪುಟ-ಮುನ್ನುಡಿಗಳಿಲ್ಲದ ಸ್ವಚ್ಛಂದ ಆತ್ಮಕಥನಗಳು. ಈ ಆತ್ಮಕಥನಗಳಲ್ಲೊಂದಿಷ್ಟು ವಿವರಗಳು ಕಥೆಗಳಾಗಿ ಅವರಿವರ ಕಿವಿಗಳನ್ನು ತಲುಪಿದರೆ, ಇನ್ನೆಷ್ಟೋ ಅನುಭವಗಳು ನಮ್ಮೊಳಗೇ ಉಳಿದು ಬದುಕಿಗೊಂದು ದಿವ್ಯತೆಯನ್ನು ಒದಗಿಸುತ್ತವೆ. ನಡುವೆ ಕನವರಿಸುವ ಕನಸುಗಳು ಮಾತ್ರ ಆಗಾಗ ಬಣ್ಣಗಳನ್ನು ಬದಲಾಯಿಸುತ್ತ, ತಾವೇ ಸೃಷ್ಟಿಸಿದ ತಲ್ಲಣಗಳನ್ನೆಲ್ಲ ತಮ್ಮದೇ ಜವಾಬ್ದಾರಿಯೆನ್ನುವಂತೆ ತಣ್ಣಗಾಗಿಸುತ್ತ ತಪಸ್ಸಿಗೆ ಕುಳಿತ ಆತ್ಮವೊಂದರಂತೆ ನಮ್ಮೊಳಗೊಂದು ನೆಲೆ ಕಂಡುಕೊಳ್ಳುತ್ತವೆ. ಒಳ್ಳೊಳ್ಳೆಯ ಕನಸುಗಳು ಸಂಭವಿಸಿದಾಗಲೆಲ್ಲ ಮುದಗೊಳ್ಳುವ ನಾವು, ಕೆಟ್ಟ ಕನಸುಗಳಿಗೆಲ್ಲ ಸಮಾಧಾನ ಹುಡುಕಲಿಕ್ಕೆಂದು ಆಶ್ರಯ ಹುಡುಕುವುದು ಕೂಡಾ ಇನ್ನೊಂದು ಕನಸಿನ ಮಡಿಲಿನಲ್ಲಿಯೇ. ಕೆಟ್ಟಕನಸು ಬಿತ್ತೆಂದು ಅಮ್ಮನ ಮಡಿಲು ಹುಡುಕುವ ಪುಟ್ಟ ಮಗುವಿಗೆ ಮುಂದೊಂದು ದಿನ ಅಮ್ಮನ ಮಡಿಲು ಕೂಡಾ ಕನಸಾಗಿಬಿಡುವ ಕಲ್ಪನೆ ಇದ್ದೀತೇ! ಪರ್ಯಾಯ ಕನಸೆನ್ನುವ ಪರಿಕಲ್ಪನೆಯೊಂದು ಇದ್ದಿದ್ದರೆ ಬದುಕಿನುದ್ದಕ್ಕೂ ಒಳ್ಳೊಳ್ಳೆಯ ಕನಸುಗಳು ಹೂವರಳಿ ನಿಂತ ಪಾರಿಜಾತ ಮರವೊಂದರ ನೆರಳಿನಂತೆ ನಮ್ಮನ್ನು ಪೊರೆಯುತ್ತಿದ್ದವೇನೋ; ಬಾಲ್ಯವೊಂದು ಮುಗಿದುಹೋಗುವ ದುಃಖ ಯಾರ ಎದೆಗೂ ಇಳಿಯುತ್ತಿರಲಿಲ್ಲವೇನೋ! ಬಾಲ್ಯ ಎನ್ನುವ ಸುಂದರ ಸಮಯವೊಂದು ಮುಗಿದೇ ಹೋಗಿದ್ದರೂ ಬಾಲ್ಯದ ನೆನಪುಗಳನ್ನೆಲ್ಲ ಜೋಪಾನವಾಗಿ ಗಳಿಗೆ ಮಾಡಿ ಮೂಲೆಯ ಕಪಾಟೊಂದರಲ್ಲಿ ಭದ್ರವಾಗಿ ಇಟ್ಟುಕೊಂಡಿರುತ್ತೇವೆ. ಆ ನೆನಪಿನ ನವಿಲುಗರಿಯ ನೂಲೊಂದರಲ್ಲಿ ಬಾಲ್ಯದ ಗೆಳೆಯನೊಬ್ಬನ ಚಕ್ರವೊಂದು ಕನಸಾಗಿ ಸುತ್ತುತ್ತಿರಬಹುದು; ಹೈಸ್ಕೂಲಿನ ಯೂನಿಫಾರ್ಮಿನಲ್ಲಿ ಟೀಚರಾಗಬೇಕೆಂದಿದ್ದ ಕನಸೊಂದು ಇನ್ನೂ ಹಸಿರಾಗಿದ್ದಿರಬಹುದು; ಗ್ರೀಟಿಂಗ್ ಕಾರ್ಡ್ ಒಂದು ಹೊಸವರುಷದ ಕನಸು ಕಾಣುತ್ತಿರಬಹುದು. ಒಟ್ಟಿನಲ್ಲಿ ನೆನಪುಗಳನ್ನು ನೇವರಿಸುವ ಕನಸೊಂದು ನಮ್ಮೊಳಗನ್ನು ಸದಾ ಕಾಯುತ್ತಿರುತ್ತದೆ. ಅಂಥದ್ದೇ ಒಂದು ಕನಸಿನಂತಹ ನೆನಪಲ್ಲಿ ಅಪ್ಪನ ಕೆಂಪು ಚಾದರವೊಂದು ಬೆಚ್ಚಗೆ ಕುಳಿತಿದೆ. ಆ ಚಾದರದ ಮೇಲೆ ನೀಲಿಕಣ್ಣಿನ ನವಿಲುಗರಿಯ ಚಿತ್ರವಾಗಲೀ, ಮಾವಿನ ಎಲೆಯ ಪೇಂಟಿಂಗ್ ಆಗಲೀ ಯಾವುದೂ ಇರಲಿಲ್ಲ; ಮಬ್ಬುಬಿಳುಪು ದಾರಗಳ ನೇಯ್ಗೆಗಳು ಕೆಂಪುಬಣ್ಣವೇ ತಮ್ಮದೆನ್ನುವಂತೆ ಚಾದರವನ್ನೆಲ್ಲ ಆವರಿಸಿಕೊಂಡಿದ್ದವು. ಅಪ್ಪ ನಿದ್ರೆಹೋಗಿ ಅದೆಷ್ಟೋ ಸಮಯದ ನಂತರ ಮಲಗುವ ಅಭ್ಯಾಸವಿದ್ದ ನಾನು ಗುಬ್ಬಚ್ಚಿಯೊಂದು ಗೂಡು ಸೇರಿಕೊಳ್ಳುವಂತೆ ಚಾದರದೊಳಗೆ ಸೇರಿಕೊಳ್ಳುತ್ತಿದ್ದೆ. ನಾನು ಎದ್ದೇಳುವಷ್ಟರಲ್ಲಿ ಅಪ್ಪ ತನ್ನ ದಿನನಿತ್ಯದ ಕೆಲಸದಲ್ಲಿ ನಿರತನಾಗಿರುತ್ತಿದ್ದನಾದರೂ ಚಾದರ ಮಾತ್ರ ಬೆಳಗಿನ ಜಾವದ ಕನಸುಗಳನ್ನೆಲ್ಲ ಸಲಹುತ್ತಿತ್ತು. ಕೆಟ್ಟ ಕನಸುಗಳನ್ನೆಂದಿಗೂ ತನ್ನೊಳಗೆ ಬಿಟ್ಟುಕೊಳ್ಳದ ಕೆಂಪು ಚಾದರ ಬಾಲ್ಯವನ್ನು ಸೊಗಸಾಗಿ ಪೊರೆದ ಪರಿಗೆ ಈಗಲೂ ಬೆರಗಾಗುತ್ತೇನೆ; ಅಗತ್ಯಗಳನ್ನೆಲ್ಲ ಪರಿಮಿತಿಗನುಗುಣವಾಗಿ ಒದಗಿಸುವ ಪ್ರಕೃತಿಯ ಚಮತ್ಕಾರಕ್ಕೆ ಅಚ್ಚರಿಗೊಳ್ಳುತ್ತೇನೆ. ಈ ಕನಸುಗಳ ಸಾಂಗತ್ಯದಲ್ಲಿ ಅಪ್ಪನಷ್ಟೇ ಅಲ್ಲದೇ ಅಜ್ಜನ ಪಾತ್ರವೂ ಇದೆ. ಬೇರೆಯವರಿಗೆ ತೊಂದರೆಯಾಗದ ಚಟುವಟಿಕೆಗಳೆಲ್ಲವನ್ನೂ ಕಾನೂನುಬದ್ಧವೆಂದು ಪರಿಗಣಿಸುತ್ತಿದ್ದ ಹಳ್ಳಿಗಳಲ್ಲಿ ಓಸಿ ಎನ್ನುವ ಜೂಜಾಟವೊಂದು ಪ್ರಚಲಿತದಲ್ಲಿದ್ದ ಕಾಲವದು. ನಂಬರುಗಳ ಮೇಲೆ ದುಡ್ಡು ಕಟ್ಟುವ ಈ ಆಟದಲ್ಲಿ ಕನಸಿನ ಆಧಾರದ ಮೇಲೂ ನಂಬರುಗಳನ್ನು ಹುಡುಕಿ ತೆಗೆಯುತ್ತಿದ್ದರು. ಕನಸಿನಲ್ಲಿ ಕಾಣುವ ನದಿಗೆ ಒಂದು ನಂಬರಾದರೆ, ನಾಯಿಗೆ ಇನ್ನೊಂದು, ಹಾವಿಗೊಂದು ಹೀಗೆ. ಹದಿನೈದು ಇಪ್ಪತ್ತು ಜನರು ಒಟ್ಟಿಗೇ ವಾಸಿಸುತ್ತಿದ್ದ ಹಳ್ಳಿಗಳ ಮನೆ ಜಗಲಿಗಳೆಲ್ಲ ಮಕ್ಕಳಿಂದ ತುಂಬಿರುತ್ತಿದ್ದವು. ಬೇಸಿಗೆರಜೆಗಳಲ್ಲಂತೂ ಮೊಮ್ಮಕ್ಕಳಿಂದ ತುಂಬಿಹೋಗುವ ಮನೆಯಲ್ಲೊಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಶಿಸ್ತಿನ ಮನುಷ್ಯ ಅಜ್ಜ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿದವನೇ ನಮ್ಮೆಲ್ಲರನ್ನೂ ಕೇಳುತ್ತಿದ್ದ ಮೊದಲ ಪ್ರಶ್ನೆಯೆಂದರೆ ರಾತ್ರಿಯೇನಾದರೂ ಕನಸು ಬಿದ್ದಿತ್ತಾ ಎಂದು. ನಮ್ಮ ಕನಸುಗಳ ಆಧಾರದ ಮೇಲೆ ಅವನ ಓಸಿ ನಂಬರೊಂದು ರೆಡಿಯಾಗುತ್ತಿತ್ತು. ಅಡುಗೆಮನೆಯಲ್ಲಿ ತಿಂಡಿಯ ತಯಾರಿಯಲ್ಲಿರುತ್ತಿದ್ದ ಅಮ್ಮ-ದೊಡ್ಡಮ್ಮಂದಿರೆಲ್ಲ ಅವರವರ ಕನಸುಗಳನ್ನು ಮಕ್ಕಳ ಮೂಲಕ ಜಗಲಿಗೆ ಕಳಿಸುತ್ತಿದ್ದರು. ಒಮ್ಮೊಮ್ಮೆ ಮನೆಯವರ್ಯಾರಿಗೂ ಕನಸೇ ಬೀಳದೇ ಅಜ್ಜ ನಂಬರಿಗಾಗಿ ಪರದಾಡುವ ಪರಿಸ್ಥಿತಿಯೂ ಎದುರಾಗುತ್ತಿತ್ತು. ಆಮೇಲಾಮೇಲೆ ಈ ಓಸಿ ಎನ್ನುವುದು ಒಂದು ಕನಸಿನ ಆಟದಂತಾಗಿ, ಮಲಗುವ ಮೊದಲು ದೇವರಿಗೆ ನಮಸ್ಕರಿಸುವ ಪರಿಪಾಠವಿದ್ದ ನಾವೆಲ್ಲರೂ ರಾತ್ರಿ ಕನಸು ಬೀಳುವಂತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವು. ಈಗಲೂ ಲಿಂಬೆಹಣ್ಣಿನ ಗೊಂಚಲೊಂದು ಕನಸಿನಲ್ಲಿ ತೂಗಿತೊನೆದಾಡಿದರೆ, ಹಾರರ್ ಸಿನೆಮಾದ ಪಾತ್ರವೊಂದು ಕನಸಿಗೆ ಬಂದು ಭಯಹುಟ್ಟಿಸಿದರೆ, ಓಸಿಪಟ್ಟಿಯ ನಂಬರುಗಳೊಂದಿಗೆ ಸಂತೋಷದಿಂದ ಬದುಕಿದ ಅಜ್ಜನ ನೆನಪೊಂದು ಸುಂದರವಾದ ಕನಸಾಗಿ ಮನಸ್ಸನ್ನೆಲ್ಲ ಆವರಿಸಿಕೊಳ್ಳುತ್ತದೆ. ಕ್ವಿಲ್ಟ್ ಗಳನ್ನು ಕೊಳ್ಳಲೆಂದು ಅಂಗಡಿಗೆ ಹೋದಾಗಲೆಲ್ಲ ಅಲ್ಲೆಲ್ಲಾದರೂ ಕೆಂಪುಚಾದರವೊಂದು ಮೈತುಂಬ ನೇಯ್ಗೆ ಹೊತ್ತು ಎದುರಾಗಬಾರದೇ ಎಂದುಕೊಳ್ಳುತ್ತೇನೆ. ಹುಟ್ಟಿದದಿನದಂದು ನೆಟ್ಟ ಸಂಪಿಗೆಗಿಡ ಒಂದಿಂಚು ಚಿಗುರಿದರೂ ಮೈತುಂಬ ಹೂವರಳಿಸಿ ನಿಂತ ಸಂಪಿಗೆಮರವೊಂದು ಅರಳಿಸಬಹುದಾದ ಹೊಸಹೊಸ ಕನಸುಗಳಿಗಾಗಿ ಪ್ರತಿನಿತ್ಯ ಕಾಯುತ್ತೇನೆ. ಸದಾ ಮುಗುಳ್ನಗುತ್ತ ಚಿಗುರುವ ಹೊಸ ಕನಸುಗಳೆಲ್ಲವನ್ನೂ ಅಪ್ಪನ ಕೆಂಪು ಚಾದರ ಪೊರೆಯುತ್ತಿರಬಹುದು! ************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಸಂಪ್ರೋಕ್ಷಣ Read Post »

You cannot copy content of this page

Scroll to Top