ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸ೦ಜೆ ಇಳಿಬಿಸಿಲು ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಎಷ್ಟು ಚೆ೦ದ ವಿದ್ದೆಯೇ ನೀನು,ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆಲ೦ಗ ದಾವಣಿಯಲ್ಲಿ ನಲಿದಾಡಿದವಳೆ,ಪಡಸಾಲೆಯಲಿ ಓಡಿ ಬ೦ದುಧಿಕ್ಕಿಯ ಹೊಡೆದು ಗಾಭರಿಯ ನೋಟದಲಿಪ್ರೇಮದೆಸಳುಗಳನೆಸೆದು ಓಡಿ ಹೋದವಳೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆತಾವರೆಯ ಮೊಗ್ಗುಗಳ ತೋರಿಸುತನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗಹುಸಿ ಕೋಪದಲಿ ನನ್ನ ನೂಕಿದವಳೆಕೆರೆಯ ನೀರಲಿ ಕೆಡವಿನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂಒದ್ದೆ ಮಾಡಿದವಳೆ! ಈ ಸ೦ಜೆ ಇಳಿ ಬಿಸಿಲುಬಿಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಜಡೆಯೆಳೆದು, ಬರಸೆಳೆದುಬ೦ಧಿಸಿರೆ ತೋಳಲ್ಲಿಕಣ್ಣೊಳಗೆ ಕಣ್ಣಿಟ್ಟುನನ್ನನೊಳಗೊ೦ಡವಳೆನನ್ನೆದೆಯ ಮರು ಭೂಮಿಯಲಿನಿನ್ನ ಹೆಜ್ಜೆಯ ಗುರುತುಬಿಟ್ಟು ನಡೆದವಳೆತ೦ಗಾಳಿಯಲಿ ಸೆರಗ ಪಟ ಪಟನೆ ಹಾರಿಸುತದೂರ ದೂರಕೆ ತೇಲಿ ಹೋದ ಕಿನ್ನರಿಯೆ! ಎಷ್ಟು ದೂರವೇ ನನ್ನ ನಿನ್ನ ನಡುವೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ!******** ಮೇಗರವಳ್ಳಿ ರಮೇಶ್

ಕಾವ್ಯಯಾನ Read Post »

ಇತರೆ

ವರ್ತಮಾನ

ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ ಬೆಳಕು. ವೃತ್ತ, ಕಂದ ಪದ್ಯಗಳ ಕಲರವ. ಕೆಲವುಕಡೆ ನಾಟಕಗಳದ್ದೇ ಜಾತ್ರೆ. ಪುಣ್ಯಕ್ಕೆ ಈಸಲ ಬನಶಂಕರಿಯಲ್ಲಿ ಹನ್ನೊಂದು ನಾಟಕ ಕಂಪನಿಗಳು ಮಹಾಜಾತ್ರೆಯ ಫಲಕಂಡಿದ್ದವು. ಅದೆನೇ ಇರಲಿ ಜನಸಂಸ್ಕೃತಿಯ ಇಂತಹ ಸಮೃದ್ಧ ರಂಗಸುಗ್ಗಿಯನ್ನು ಈಬಾರಿ ಕೊರೊನಾ ಎಂಬ ಕರಾಳ ರಕ್ಕಸ ಸಾರಾಸಗಟಾಗಿ ನುಂಗಿ ನೊಣೆಯಿತು. ಶಿರಸಿಯಂತಹ ಜಾತ್ರೆಗಳ ಕ್ಯಾಂಪ್ ಕಮರಿ ಹೋಗಿ ಹತ್ತಾರು ನಾಟಕ ಕಂಪನಿಗಳು ಮುಚ್ಚಿದವು. ಸ್ಥಳಾಂತರಿಸಲೂ ಹಣದ ಕೊರತೆ. ನೂರಾರು ಕಲಾವಿದರ ಹಸಿವಿನ ಅನ್ನವನ್ನು ಕೊರೊನಾ ಕಸಿದು ಬಿಟ್ಟಿತು. ಹೆಸರು ಮಾಡಿದ, ಪ್ರಸಿದ್ದಿ ಪಡೆದ ಕೆಲವು ಕಲಾವಿದರು ಹೇಗೋ ತಿಂಗಳೊಪ್ಪತ್ತು ಬದುಕುಳಿದಾರು. ಆದರೆ ಸಣ್ಣ ಪುಟ್ಟ ಪೋಷಕ ಪಾತ್ರಮಾಡುವ ನಾಟಕ ಕಂಪನಿಯ ಕಲಾವಿದರು, ಪ್ರೇಕ್ಷಾಂಗಣದ ಗೇಟ್ ಕಾಯುವವ, ಪರದೆ ಎಳೆಯುವ ಸ್ಟೇಜ್ ಮೇಸ್ತ್ರಿ, ಬೆಳಕಿನ ಸಂಯೋಜನೆಯ ವೈರ್ಮ್ಯಾನ್, ರಂಗಪಾರ್ಟಿಯ ಸಹಾಯಕ, ನೆಲ ಅಗೆದು ಸ್ಟೇಜ್ ಕಟ್ಟುವ ರಂಗಕಾರ್ಮಿಕರು… ಹೀಗೆ ನೂರಾರುಮಂದಿ ನೇಪಥ್ಯ ಕಲಾವಿದರು ಕಂಪನಿ ನಾಟಕಗಳಿಲ್ಲದೇ ಅಸಹಾಯಕತೆಯ ಬಿಸಿಯುಸಿರು ಬಿಡುತ್ತಿದ್ದಾರೆ. ಹಾಗೆಯೇ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನೇ ಬದುಕುವ ಸಹಸ್ರಾರು ಸಂಖ್ಯೆಯ ಹವ್ಯಾಸಿ ಕಲಾವಿದರು, ಕ್ಯಾಸಿಯೋ, ರಿದಂಪ್ಯಾಡ್ ನುಡಿಸುವ, ಮೇಲ್ ಮತ್ತು ಫೀಮೇಲ್ ಕಂಠದಲ್ಲಿ ಹಾಡುವ ರಂಗಗೀತೆಗಳ ಗಾಯಕರು ನೋವಿನ ನಿಟ್ಟುಸಿರು ಬಿಡುವಂತಾಗಿದೆ. ನಗರ, ಪಟ್ಟಣ, ಹಳ್ಳಿ, ಹಟ್ಟಿ, ಮೊಹಲ್ಲಾಗಳ ತುಂಬೆಲ್ಲಾ ಲಾಕ್ ಡೌನ್, ಸೀಲ್ ಡೌನ್ ಗಳ ದಿಗ್ಭಂಧನ. ಪ್ರತೀವರ್ಷ ಒಂದೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹತ್ತಾರು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಸರಕಾರದ ನೆರವಿಲ್ಲದೇ ನಮ್ಮ ಗ್ರಾಮೀಣರು ತಾವೇ ನಾಟಕ ರಚಿಸಿ, ತಾವೇ ನಿರ್ದೇಶಿಸಿ, ತಾವೇ ಲಕ್ಷಗಟ್ಟಲೇ ಹಣಹಾಕಿ ಇಂತಹ ಹವ್ಯಾಸಿ ಕಲಾವಿದೆಯರನ್ನು ಆಮಂತ್ರಿಸಿ ತಾವೂ ಪಾತ್ರ ಮಾಡುತ್ತಾ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೃತ್ತಿ ರಂಗಭೂಮಿಯ ಲೋಕ ಮೀಮಾಂಸೆ ಮೆರೆಯುತ್ತಿದ್ದರು. ಏನಿಲ್ಲವೆಂದರೂ ವರ್ಷಕ್ಕೆ ಏಳೆಂಟು ಸಾವಿರಕ್ಕೂ ಹೆಚ್ಚು ನಾಟಕಗಳು ಕನ್ನಡ ನಾಡಿನಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು. ಇವೆಲ್ಲವೂ ವೃತ್ತಿರಂಗಭೂಮಿ ಶೈಲಿಯ ನಾಟಕಗಳೇ. ಇವರು ಯಾರೂ ಅಪ್ಪೀ ತಪ್ಪಿಯೂ ಪ್ರಯೋಗಾತ್ಮಕವಾದ ಕಾರ್ನಾಡ, ಕಾರಂತ, ಕಂಬಾರ, ಲಂಕೇಶರ ಆಧುನಿಕ ಶೈಲಿಯ ನಾಟಕಗಳನ್ನು ಪ್ರದರ್ಶಿಸಿದವರಲ್ಲ. ಹವ್ಯಾಸಿಗಳಾಗಿದ್ದುಕೊಂಡೇ ಕಂಪನಿ ನಾಟಕಗಳ ಕವಡೆ ಲೋಬಾನ ಪೂಜೆಯ ಕಂಪು ಸೂಸುತ್ತಾ ಹಳ್ಳಿಯ ನಾಟಕಗಳಲ್ಲಿ ದುಡಿದು ವರ್ಷದ ಹಸಿವಿನೊಡಲು ತುಂಬಿಕೊಳ್ಳುತ್ತಿದ್ದರು. ಆ ಎಲ್ಲ ಕಲಾವಿದೆಯರ ಅನ್ನದ ಮೇಲೆ ಈವರ್ಷ ಕೊರೊನಾ ಕಾರ್ಗಲ್ಲು ಬಿದ್ದಿದೆ. ******** ಮಲ್ಲಿಕಾರ್ಜುನ ಕಡಕೋಳ

ವರ್ತಮಾನ Read Post »

ಕಾವ್ಯಯಾನ

ಕಾವ್ಯಯಾನ

 ಯಾವತ್ತೂ ಅವರ ಕತೆಯೇ ಉಂಡೆಯಾ ಕೂಸೆ ಎಂದುಅವ್ವಗೆ ಕೇಳುವ ಆಸೆಅಡ್ಡಿ ಮಾಡುವುದದಕೆಅಪ್ಪನ ತೂತುಬಿದ್ದ ಕಿಸೆ ಅವರ ಒಲೆಯ ಮೇಲಿನ ಮಡಕೆಒಡೆದು ಹೋದುದು ಮುದ್ದೆ ಕೋಲಿನಕಾರಣಕ್ಕೇನಲ್ಲಎಸರಿಗೂ ನೀರ ಇಡಲಾರದ ಬರಡುನೋವಿಗೆ ಖಾಲಿ ಮಡಕೆಯೂಬಾಯ್ದೆರೆಯಿತು ನೋಡಲ್ಲ. ನೆಲೆ ನೀಡದ ಸೂರು, ಉರಿವಸೂರ್ಯನ ತೇರು, ಕೆಂಡದುಂಡೆಯಮೇಲೆಯೇ ನಡೆದರು ಅವರೆಲ್ಲ;ಉರಿ ಹಾದಿ ಬರಿಗಾಲಿಗೆ ಊರದಾರಿ ಮರೆಸಿತು, ಹರಿದ ಬೆವರುಕಣ್ತುಂಬಿ, ನೋಟ ಮಂಜಾಯಿತು ಇವನಾರವ ಇವನಾರವಎಂದವರೇ ಎಲ್ಲ ; ಇವ ನಮ್ಮವಅವ ನಮ್ಮವ ಎನ್ನಲ್ಲಿಲ್ಲ. ಕಷ್ಟಸಂಕಷ್ಟವಾಗಿ ಅವರನು ಕಾಡಿತಲ್ಲಕಾಯಕಜೀವಿಗೆ ಯಾವ ಯುಗದಲೂರಕ್ಷಣೆ ಸಿಗದಲ್ಲ.. ***** ವಸುಂದರಾ ಕದಲೂರು

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ‌ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ ‌.ಇದರಲ್ಲಿ‌ ನಾ ಓದೊದ ಮೊದಲ ಕತೆ‌ ಕವಲು ಸಂಕಲನದ‌ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ‌‌ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ.‌ ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ ತೆರೆದಿಡುವ ರೀತಿ ಅದ್ಭುತವಾದುದು. ೧೯೭೬ ರಲ್ಲಿ ಈ ಸಂಕಲನ ಬಂದಿದೆ.‌೧೯೬೮ ರಲ್ಲಿ ಅವರ ಮುಳ್ಳುಗಳು ಕತೆ ಪ್ರಕಟವಾದುದು.ಆಗಲೇ ವೀಣಾ ಶಾಂತೇಶ್ವರ ಅವರ ಕತೆಯ ಶೈಲಿ, ದಿಟ್ಟತನ, ಕತೆ ಕಟ್ಟುವ ರೀತಿಯ ‌, ಹೆಣ್ಣಿನ‌ ಅಂತರಂಗವನ್ನು ಪ್ರಾಮಾಣಿಕವಾಗಿ, ಕಲಾತ್ಮಕವಾಗಿ ಕಟ್ಟುವ ವೀಣಾ ಅವರನ್ನು ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬರಗೂರು ರಾಮಚಂದ್ರ ಅವರು ಮೆಚ್ಚಿ ಬರೆದಿದ್ದಾರೆ.ಅವರ ಕವಲು ಸಂಕಲನದ ಕತೆಗಳನ್ನು ‌ಓದಲು ಎತ್ತಿಕೊಂಡಾಗ, ಇವತ್ತಿನ ಬರಹಗಾರ್ತಿಯರು ಮುದ್ದಾಂ ‌ಓದಬೇಕು. ಅಬ್ಬಾ ವೀಣಾ ಶಾಂತೇಶ್ವರ ಅವರ ಧೈರ್ಯ ನನಗೆ ಇಷ್ಟವಾಯಿತು.‌ ಇವತ್ತಿನ ಕರ್ನಾಟಕಕ್ಕೆ ಅಂತಹ ಶಕ್ತಿಯುತ, ಸತ್ವಯುತು ಬರಹ ಪ್ರಕಟಿಸುವ ಧೈರ್ಯ ಇದೆಯಾ ಅಂತ ಅನ್ನಿಸಿತು ನನಗೆ. ಪ್ರಶ್ನಿಸುವ ಮನೋಭಾವವೇ ಹೊರಟು ಹೋಗುತ್ತಿದೆ. ಇಲ್ಲಿ ಕಾಯಿಲೆ ನೆಪದಲ್ಲಿ ಒಪ್ಪಿತ ಗುಲಾಮಗಿರಿ ಹೇರುವ ಮತ್ತು ಅದನ್ನು ಒಪ್ಪಿಸುವ ಮನಸ್ಥಿತಿಯ ಕರ್ನಾಟಕದಲ್ಲಿ ನಾವಿದ್ದೇವೆ.ಹನುಮಾಪುರದಲ್ಲಿ ಹನುಮ ಜಯಂತಿ ಇವತ್ತಿಗೂ ಪ್ರಸ್ತುತ ಎನಿಸುವ ಕತೆ.ಇನ್ನೂ ” ಹೋಟೆಲ್ ಬ್ಲೂ ” ೧೯೭೬ ರಲ್ಲಿ ಬಂದ ಸಂಕಲನ.‌ಎಮರ್ಜನ್ಸಿ ಪ್ರಾರಂಭದ ಕಾಲ.‌(೧೯೭೬-೭೭). ಬದುಕಿನ ಹತ್ತು ಹಲವು ಆಯಾಮಗಳನ್ನು ಏಕಕಾಲಕ್ಕೆ ಈ ಕತೆ ಹೇಳುತ್ತದೆ. ರಾಜಕೀಯ, ಭ್ರಷ್ಟಾಚಾರ, ಜಾತೀಯತೆ, ಸಾಹಿತ್ಯ, ಪ್ರಶಸ್ತಿಯ ರಾಜಕೀಯ, ಜಾತಿ ಸ್ವಜನ ಪಕ್ಷಪಾತ, ಮದ್ಯ, ಕಳ್ಳಸಾಗಾಟ, ಸೂಳೆಗಾರಿಕೆ ದಂಧೆ, ಗುಂಡು ಪಾರ್ಟಿಗಳು…ಪ್ರತಿಭಟನೆ, ಸ್ತ್ರೀ‌ಶೋಷಣೆ ….ಇಷ್ಟೆಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಕಲಾತ್ಮಕತೆ ವೀಣಾ ಶಾಂತೇಶ್ವರ ಅವರಿಗೆ ಸಾಧ್ಯವಾಗಿದೆ. ಬದುಕಿನ ಬಹುತ್ವವನ್ನು…ಅನೇಕ ಮನಸ್ಥಿತಿಗಳನ್ನು ಕತೆಗಾರ್ತಿ ಪಾತ್ರಗಳ ಡೈಲಾಗ್ಸ ಮೂಲಕ ಹೇಳಿಬಿಡುತ್ತಾಳೆ.ಕತೆ ಓದುತ್ತಲೇ ಒಂದು ನಾಟಕಕೀಯ ದೃಶ್ಯ ನಮ್ಮ‌‌ ಕಣ್ಮುಂದೆ ಚಲಿಸುತ್ತದೆ. ಅವರ ಮುಳ್ಳುಗಳು ಕತೆಯನ್ನು ಕನ್ನಡ ಯುವ ಬರಹಗಾರ್ತಿ ಯರು ಹಾಗೂ ಬರಹಗಾರರು ಓದಬೇಕು.ಅದ್ಭುತ ಕತೆ. ಮನದ ಚಲನೆ ಅಲ್ಲಿದೆ. ೨೪ ತಾಸುಗಳಲ್ಲಿ ಚಲಿಸುವ ಕತೆ ಅದು. ಅವಳ ಸ್ವಾತಂತ್ರ್ಯ ಧ್ವನಿಪೂರ್ಣ ಕತೆ.‌೧೯೯೪ ರಲ್ಲಿ ಬಂದ ಬಿಡುಗಡೆ ಕತೆ ಕನ್ನಡ ಕಥಾ ಸಾಹಿತ್ಯದಲ್ಲಿ ಮೈಲಿಗಲ್ಲು. ಮಹಿಳಾವಾದಿಗಳು, ಸಂಪ್ರದಾಯಸ್ಥ ಪುರುಷರು ಓದಬೇಕು. ಹೆಣ್ಣಿನ ಕನಸು ಮತ್ತು ಪುರುಷ ದೌರ್ಜನ್ಯದ ಈ ಕತೆ ಹೇಳುವ ಶೈಲಿ, ಕಥನದ ಹೊಸ ಮಾದರಿ ಅಲ್ಲಿದೆ. ಕತೆ ಸಾಗುವ ದಾರಿ ನಿಮ್ಮನ್ನ ಅಚ್ಚರಿ‌ ಗೊಳಿಸುತ್ತದೆ. ಅಂತ್ಯ ಬಂಡಾಯವೇ ಆಗಿದೆ. ಓದುಗನನ್ನು ಚಕಿತಗೊಳಿಸುತ್ತದೆ. ಅವರ ಕತೆಗಳಿಗೆ ಮಾಂತ್ರಿಕ ಶಕ್ತಿ ಇದೆ..ಈ ದೃಷ್ಟಿಯಿಂದ ಕತೆ ,ಕತೆಗಾರ್ತಿ ಬಹುತ್ವದ ಸಂಕೇತ. ‌ ಕವಿ ಬಹುತ್ವ‌ ಭಾವನೆಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಸರ್ವಾಧಿಕಾರಿಯಂತೆ, ಶಬ್ದಗಾರುಡಿಗನಂತೆ ಏಕತ್ರನಾಗಿ ಬರೆಯುತ್ತಾ ಸಾಗುತ್ತಾನೆ. ಬಹುತ್ವ ತನ್ನದಾಗಿಸಿಕೊಂಡ ಬೇಂದ್ರೆಯಂತೆ. ಬಹುತ್ವವನ್ನೇ ಮಾತಾಡಲು ಬಿಟ್ಟು ,ತಾನು ಕೃತಿಕಾರನಾಗಿ ಕಾನೂರು‌‌ ಸುಬ್ಬಮ್ಮ ಹೆಗ್ಗಡಿತಿಯಂತೆ ಬಹುತ್ವವೇ ಆಗುತ್ತಾರೆ ಕುವೆಂಪು.‌ ಹಾಗಾಗಿ ಕುವೆಂಪು ನನಗೆ ಬಹುತ್ವದ ಪ್ರತಿನಿಧಿ. ಬೇಂದ್ರೆ ಏಕತ್ವದ ಪ್ರತಿನಿಧಿ. ನನಗೆ ನನ್ನ ಅಪ್ತರರೊಬ್ಬರು ಹೇಳುತ್ತಿದ್ದರು ; ” ಪ್ರಯತ್ನಿಸಿದರೆ ಎಲ್ಲರೂ ಬರಿಯಬಹುದು.‌ಕತೆ ಕಷ್ಟ. ನಿನಗೆ ಕತೆ ಬರೆಯುವ ಶಕ್ತಿಯಿದೆ.‌ನೀ ಕತೆ ಬರೆಯೆಂದುಆ ಮಾತು ನನಗೆ ಈಚೆಗೆ ನಮ್ಮ ಕಥಾ ಪರಂಪರೆಯ ಹಿರಿಯರನ್ನು ಓದುವಾಗ ನಿಜ ಅನ್ನಿಸಿದೆ. ಲಂಕೇಶ್, ದೇವನೂರು, ವೀಣಾ ಶಾಂತೇಶ್ವರ, ಶಾಂತಿನಾಥ ದೇಸಾಯಿ ಅದ್ಭುತ ಕತೆಗಾರರು. ನೀವು ಸಹ ಕತೆ ಓದಿ. ಬಿಡುವಾದಾಗ.‌ ಪ್ರಶ್ನಿಸುವುದ‌ ಈ ಸಮಾಜ ಕಲಿಯುವಂತೆ ಕತೆ ಬರೆಯಿರಿ. ************** ನಾಗರಾಜ ಹರಪನಹಳ್ಳಿ

ಪುಸ್ತಕ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಏಕಾಂಗಿಯೊಬ್ಬನ ಏಕಾಂತ ಕಣ್ಣೀರು ಖಾಲಿಯಾಗುವುಂತೆತುಂಬಿಕೊಳ್ಳುತ್ತದೆ ಮತ್ತೆ ಮತ್ತೆಏಕಾಂತ ಖಾಲಿಯಾದರೂಏಕಾಂಗಿಯಾಗುವಂತೆಕಣ್ಣೀರು ಕೂಡ ನೀರಾಗುತ್ತದೆಅವಳ ಬಸಿದು ತಾನೇ ಉಳಿದಾಗ ಮೂರುಗಂಟಿನ ಆಚೆ ನೂರುಗಂಟುಗಳಾಚೆತೆರೆದುಕೊಂಡ ಹೊಸಲೋಕಕೆಪಕ್ಷಿಯ ರೆಕ್ಕೆಗಳ ಕಸುವಿನಂತೆಜಿಗಿದ ಕನಸುಗಳನೆಲ್ಲಾ ಗಂಟಿನೊಳಗೆಮನದೊಡೆಯನ ಸಂಗಾತಕೆಇಬ್ಬನಿಯ ಜೀವದಂತೆ ಕಾದುಕೂತವಳು ಅಲೆಯೊಡೆವ ರುಚಿ ತಂಗಾಳಿಗೆ ಸವರಿಕಾಮನ ಬಿಲ್ಲನು ಕಂಡವಳುತೆಂಡೆಯೊಡೆದ ಕಣ್ಣೀರ ಮಾತಿಗೆಗಾಳಿಯನೆ ಸೀಳಿ ಹೊರಟಾಗತಂಗಾಳಿಗೆ ಬಸಿರಾಗಿ ಕನಸುಗಳ ಹೆತ್ತವಳು ಅಕ್ಷರಕ್ಕೆ ಸಿಗದ ಅಕ್ಕರೆಯನುಲಿಪಿಮಾಡಿ ಅವನಿಗೆ ತಲುಪಿಸಲುಹಾರಿ ಹಾರಿ ನೆಲೆ ಕಾಣದೆ ಅಲೆಯುವಳುಆಗೊಮ್ಮೆ ಈಗೊಮ್ಮೆ ಟಿಸಿಲೊಂದು ಕಂಡಾಗಮುಂಗಾಲಿನಲೆ ಜೀವ ಹಿಡಿಯುವಳುನಂಬಿಕೆಯ ಮಾತು ಹೇಳಿದ ಆ ಮರಕೆಅವಳ ಹಳಹಳಿಕೆಗಳನು ಮಳೆಯಂತೆ ಸುರಿಸುವಳು ನಯವಾದ ಖತ್ತಿಗೆ ಮುತ್ತಿಟ್ಟು ಸಾಕಾಗಿದೆಬಂಜೆಯಾದ ಭರವಸೆಗಳ ಹೊತ್ತು ಸಾಕಾಗಿದೆಹೊಸದಾದ ಶ್ಯಬ್ಧ ಯಾರೇ ನುಡಿದರುಎದೆಯ ಸಾಗರದಲ್ಲಿ ತರಂಗಾಂತರಗಳುಮಿಡಿಯುವ ಮಾರ್ಮಲೆತವೇನಲ್ಲ !ಅವು ಭಯದ ಕಂಪನಗಳುನಾಡಿಯನು ನಿರ್ಜೀವ ಗೊಳಿಸುವ ಪ್ರೀತಿಮತ್ತೆ ಬಡಿಯುವನಕ ಅವಳು ಬೆಂದವಳು ನಯವಾದ ಮೊನಚು ಕೆನ್ನೆಗೆಮತ್ತೆ ಮುತ್ತನಿಡು ಎಂದು ಕೇಳಲಾರೆಕಣ್ಣೀರಿಗೆ ತಾಯಿ ಒಬ್ಬಳೇ ತಂದೆಯರು ಬೇರೆಬಸಿದುಕೊಂಡ ಬೇಸರಕ್ಕಿಂತಉಳಿದ ಕಾಳಿನ ಬರಡುತನವೇ ಉಳಿಸುಈ ಬದುಕಿನ ಖಾಲಿತನವನ್ನುಕಂಪನಗಳ ತಗ್ಗಿಸಲು ಆಗದಿರಬಹುದುಮಮತೆಯ ಮಡಿಲಾಗಿಅವಳನ್ನು ಹಡೆಯಲುಫಲವೀವ ಕಾಳುಗಳಾಗಿ ಮೊಳೆಯುವೆ ಮತ್ತೆ ಮತ್ತೆ…. ***** ಸತ್ಯಮಂಗಲ ಮಹಾದೇವ

ಕಾವ್ಯಯಾನ Read Post »

You cannot copy content of this page

Scroll to Top