ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕವಿತೆಯಾಗುವ ಹೊತ್ತು ಅಂಜನಾ ಹೆಗಡೆ ಅಲ್ಲಿಕರುಳ ಬಿಸುಪಿಗೆಕದಲಿದ ಕುಡಿಯೊಂದುಕನಸಾಗಿ ಮಡಿಲುತುಂಬಿಬೆಳ್ಳಿಗೆಜ್ಜೆಯ ಭಾರಕ್ಕೆ ಕನಲಿದರೆನಕ್ಷತ್ರವೊಂದುದೃಷ್ಟಿಬೊಟ್ಟು ಸವರಿಹಣೆ ನೇವರಿಸಿ ನಕ್ಕಾಗಸೃಷ್ಟಿ ಸ್ಥಿತಿ ಲಯಗಳಭಾಷ್ಯವಿಲ್ಲದ ಬರೆಹಕ್ಕೆತಂಬೂರಿ ಹಿಡಿದುನಾನಿಲ್ಲಿಅಕ್ಷರವಾಗುತ್ತೇನೆ ಅಲ್ಲೊಂದು ಇಬ್ಬನಿಹಸಿರೆಲೆಯ ಮೋಹಕ್ಕೆಆವಿಯಾಗುವ ಹೊತ್ತಲ್ಲಿಮುಂಗುರುಳೊಂದು ನಾಚಿಕೆಂಪಾಗಿಅರಳಿದ ದಾಸವಾಳದಪ್ರೇಮಕ್ಕೆ ಬಿದ್ದಾಗಅಂಗಳಕ್ಕಿಳಿದ ಬಣ್ಣಗಳಒಂದೊಂದಾಗಿ ಹೆಕ್ಕುತ್ತಜೋಡಿಸುತ್ತಬೆಳಕಾಗಿ ಮೈನೆರೆದುನಾನೊಂದುಚಿತ್ರಕಾವ್ಯವಾಗುತ್ತೇನೆ ಅಲ್ಲಿಜೋಕಾಲಿಯೊಂದುಸ್ವಪ್ನಗಳ ಜೀಕುತ್ತಮುಗಿಲಿಗೆ ಮುಖಕೊಟ್ಟುಹಗುರಾಗುವ ಕ್ಷಣದಲ್ಲಿಗಾಳಿಗಂಟಿದ ಪಾದನೆಲವ ಚುಂಬಿಸುವಾಗಜೀಕಲಾಗದನೆಲದೆದೆಯ ನಿಟ್ಟುಸಿರಗಾಳಿಗೊಪ್ಪಿಸಿನಾನಿಲ್ಲಿಕವಿತೆಯಾಗುತ್ತೇನೆ **********

ಕಾವ್ಯಯಾನ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಕವಿತೆಯಂತವಳು (ಕವಿತೆಯಂತವಳು ಕವಿತೆಯಾದಾಗ) 1.ಸಹ್ಯಾದ್ರಿಯ ಹಸಿರು ಚಪ್ಪರದೊಳಗಿನೊಂದುಹಳೆಯ ಮನೆಯೊಳಗೆ ಕೂತುಬರೆಯುತ್ತಾಳೆಪ್ರತಿ ಶಬುದವನ್ನೂ ಹೃದಯದೊಳಗಿಂದ ಹೆಕ್ಕಿತಂದುತನ್ನ ಒಂಟಿತನದ ಕಣ್ಣೀರಿನಿಂದ ಅವನ್ನು ತೊಳೆದುಒಣಗಿಸಿತನ್ನ ಲೋಕದ ಕಣ್ಣಿನ ನಗುವಿನ ಬಣ್ಣವನದಕೆ ಲೇಪಿಸಿಕಟ್ಟುತ್ತಾಳೆಕವಿತೆಯ ಹಾರ,ತನ್ನಅವಮಾನಅಸಹಾಯಕತೆಹತಾಶೆಗಳ ಪೋಣಿಸಿ!ಓದುತ್ತೇನೆ. ತಲೆದೂಗುತ್ತೇನೆಅವಳ ಕಾವ್ಯ ಕಟ್ಟುವ ಕಲೆಗಿಂತ ಹೆಚ್ಚಾಗಿನಕ್ಕು ನಕ್ಕೇ ದು:ಖ ಮರೆಸಿಮರುಳು ಮಾಡುವ ಅವಳ ಬದುಕುವ ಕಲೆಗಾರಿಕೆಯನ್ನು! ಅವಳಿಗೂ ಬದುಕೆಂಬುದಿದೆ ಕವಿತೆಯಹೊರತಾಗಿಯೂಎಂಬುದು ನೆನಪಾದಾಗೆಲ್ಲನಾನು ಕಣ್ಣೀರಾಗುತ್ತೇನೆ.=================== 2ಕಂಡೆ:ಶಬುದಗಳ ಒಡನಾಟದೊಳಗೆ ತಾನೇ ಒಂದುಹೊಸ ಶಬುದವಾದವಳ ಹಾಗೆ ಅವಳು ಕಟ್ಟಿದ ಪ್ರತಿ ಶಬುದಗಳ ಪಾದಗಳಲ್ಲೂಗಾಯದ ಗುರುತುಇಟ್ಟ ಹೆಜ್ಜೆಗಳೆಲ್ಲವೂ ಹೂವಿನ ಮೇಲೇನೂ ಆಗಿರಲಿಲ್ಲಬಹಳಷ್ಟು ಸಾರಿ ಗಾಜಿನ ತುಂಡುಗಳುಕಭ್ಭಿಣದ ಮೊಳೆಗಳು! ಹಾಗೆ ಮೆಲ್ಲಗವಳ ಪಾದಗಳನೆತ್ತಿ ನನ್ನತೊಡೆಯ ಮೇಲಿಟ್ಟುಕೊಂಡು ಸವರಬೇಕುಪ್ರೇಮದ ಮುಲಾಮೆಂದು ಕೊಂಡಾಗೆಲ್ಲಅವಳ ಮುಖ ಮಾತ್ರ ಕಾಣುತ್ತದೆಪಾದಗಳನದೆಲ್ಲಿ ಬಿಟ್ಟು ಬರುತ್ತಾಳೋ!==========3ಅವಳ ಮಲ್ಲಿಗೆಯ ಪಾದಗಳಮುಂದೆ ಮಂಡಿಯೂರಿ ಕೂತುನಿವೇಧನೆ ಮಾಡಿಕೊಳ್ಳಬೇಕು. ನಿನ್ನ ಕರುಣಾಳು ಕಂಗಳಿಂದ ನನ್ನನ್ನೊಮ್ಮೆ ನೋಡುನಿನ್ನ ಅಭಯಹಸ್ತದಿಂದ ನನ್ನ ತಲೆಯನ್ನೊಮ್ಮೆ ನೇವರಿಸುನಿನ್ನ ಮಧುರಕಂಠದಿಂದೊಮ್ಮೆ ನನ್ನ ಹೆಸರನುಸಿರಿಸು ನಿನ್ನ ಕಾಣುವವರೆಗೂ ಕಂಡಿರಲಿಲ್ಲನನ್ನೊಳಗಿನ ನಾನು ತಗೋ ನಿನ್ನಾಯುಧಗಳಿಂದೆನ್ನಅಹಂಕಾರದ ರೆಕ್ಕೆ ಕತ್ತರಿಸುನನ್ನ ವಿಷದ ಹಲ್ಲುಗಳನ್ನು ಕಿತ್ತು ಹಾಕುನನ್ನೆಲ್ಲ ಪಾಪಗಳನ್ನೂ ಮನ್ನಿಸು. ಸಾದ್ಯವಾದರೆ ನನ್ನಪ್ರೀತಿಸು! *********** ಕು.ಸ.ಮಧುಸೂದನ

ಕವಿತೆ ಕಾರ್ನರ್ Read Post »

ಕಾವ್ಯಯಾನ

ಕಾವ್ಯಯಾನ

ತುಡಿತ ವಿಜಯ್ ಶೆಟ್ಟಿ ಎಲ್ಲ ಮರೆತ ಒಂದು ಹಳೆಯಊರಕೇರಿಯ ದಾರಿಗುಂಟಸತತಸೈಕಲ್ ತುಳಿಯುವ ತುಡಿತನನಗೆ. ಇನ್ನೇನು ದಿನ ಕಳೆದು,ಉದಯಕ್ಕೆ ಸಿದ್ದವಾದ ರಾತ್ರಿಗೆ,ಸಂಜೆಯ ಹುಂಜದ ಹಂಗಿಲ್ಲಅಪರಿಚಿತ ಊರಕೇರಿಯ ದಿಕ್ಕುಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು! ತುಸುವೇ ಹೊತ್ತಿನ ಬಳಿಕನಾನು ತಲುಪುವ ಕೇರಿಯಾದರೂ ಎಂಥದು? ಮುದಿ ಲಾಟೀನಿನ ಮಂದ ಬೆಳಕಲ್ಲಿಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋಆ ಊರಿನಲ್ಲಿ?ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋಆ ಊರಿನಲ್ಲಿ?ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋಆ ಊರಿನಲ್ಲಿ? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆಒಂದೋಅಪರಿಚಿತ ಗುಡಿಸಲೊಂದರಲ್ಲಿಮಂಕು ದೀಪದ ಸುತ್ತ ಕೆಲವರ ಮುಂದೆಪ್ರಕಟಗೊಳ್ಳುವೆ ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿಗಹ ಗಹಿಸಿ ನಗುವೆ, ಪವಡಿಸುವೆಇಲ್ಲವೋ ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದುಅತ್ತಿಂದಿತ್ತ ಅಲೆವೆ,ಸವೆಯುವೆ ಒಂದೇ ಸಮನೆಮಟ ಮಟ ರಾತ್ರಿಯು ನೆತ್ತಿಗೇರುವ ತನಕ ಹಳತು ಮರೆತ ಕೇರಿಯದಾರಿಗುಂಟ ಸತತ ಸೈಕಲ್ ತುಳಿವ ತುಡಿತ ಎದುರು ಸಪೂರ ಕಾಲುಗಳ ಮೇಲೆಬಂದ ಎಷ್ಟೋಂದು ಗಂಟುಗಳೂ, ಮೂಟೆಗಳು,ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ?ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ. ಹಳತು, ಮರೆತ ಕೇರಿಯ ದಾರಿಗುಂಟಸತತ ಸೈಕಲ್ ತುಳಿವ ತುಡಿತ. ***********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ ಕವಿ ಅಸಮಾನ್ಯನೇ ಸರಿ. ಆದರೂ ಎಲ್ಲರಿಗೂ ಪ್ರಕೃತಿಯೊಡನೆ ಒಂದಾಗುವುದು, ವರ್ಷಾನುಗಟ್ಟಲೆ ಮಾತಿಗಿಳಿಯುವುದು ಕಷ್ಟಕರವೇ. ಅಂತಹ ಕಷ್ಟಪರರ ಆಚೆ ನಿಂತು ತನ್ನ ಐಚ್ಛಿಕದ ಪ್ರಪಂಚದಲ್ಲಿ ಆಪ್ತ ಭಾವಗಳ ಬಲೆಯೊಳಗೆ ತನ್ನನ್ನೂ, ತನ್ನದನ್ನೂ ಹಾಗೂ ತನ್ನವರನ್ನು ಬರಸೆಳೆದ ಕವಿ ನಾಗರಾಜ ಹರಪನಹಳ್ಳಿಯವರು. ಅವರ ಎರಡನೇ ಕವನ ಸಂಕಲನ ವಾದ “ವಿರಹಿ ದಂಡೆ” ಯೊಂದಿಗೆ ವಿಹಾರದ ವಿವರಗಳ ಹೊತ್ತು ನಲಿದ ಸಂತ್ರಪ್ತ ಕ್ಷಣವಿದು ಚಂದ. ಕವನ ಸಂಕಲನದ ” ವಿರಹಿ ದಂಡೆ” ಶೀರ್ಷಿಕೆಯೇ ಆಕರ್ಷಣೀಯ. ‘ವಿರಹ ನೂರು ತರಹ’ ಎಂಬ ಸಿನಿಮಾದ ಹಾಡಿನ ಸಾಲಿನಂತೆ ಜಗದ ಎಲ್ಲರನ್ನೂ ಬೆಂಬಿಡದೆ ಒಮ್ಮೆಯಾದರೂ ಕಾಡುವ ವಿರಹಿತನದ ಸುಂದರವಾದ ಗುಟುಕನ್ನು ಮೆದುವಾಗಿ ಗಂಟಲಿಗಿಳಿಸಿಕೊಂಡಿದ್ದಾನೆ ಕವಿ. ಪ್ರಕೃತಿಯನ್ನೇ ಹೆಣ್ಣಾಗಿಸಿ, ಹೆಣ್ಣನ್ನೇ ಪ್ರಪಂಚದ ಸುಂದರ ಜೀವರೂಪಿಯಾಗಿ ಆರಾಧಿಸುವ ಕವಿತ್ವಕ್ಕೊಂದು ಸಲಾಂ ಸಲ್ಲಿಸಲೇಬೇಕು. ಆ ಮಗ್ಗಲು ಬದಲಿಸಿ ಪ್ರಕೃತಿಯನ್ನು ಬೊಗಸೆಯಲ್ಲಿ ಹಿಡಿದು ಗಾಳಿ, ಮಳೆ, ಬೆಳಕು, ಸಮುದ್ರದ ದಂಡೆಗಳೆಲ್ಲವನ್ನೂ ಆಟಿಕೆಯಂತೆ ಅನುಭವಿಸುವ ಕವಿಯ ತುಂಟತನ, ಪ್ರೀತಿಯನ್ನು ಬರೀ ಕಣ್ಣುಗಳಿಗೆ ಮಾತ್ರ ಸೀಮಿತವಾಗಿಸದೆ, ಕನಸುಗಳಲ್ಲಿ ಮಾತಾಡುವ ಪ್ರೀತಿ, ಪ್ರಣಯವನ್ನು ಪಕ್ಕಕ್ಕಿಟ್ಟು, ನಿಸರ್ಗ ಸಿದ್ಧವಾದ ಮಿಲನ ಮೈಥುನವನ್ನು ಬರೀ ಹೆಣ್ಣು-ಗಂಡಿಗೆ ಮಾತ್ರ ಸೀಮಿತವಾಗಿಸದೇ ಗಿಡ- ಮರಗಳಿಗೂ, ದಂಡೆ -ಕಡಲಿಗೂ ಕಂಡಲ್ಲಿ ಕಂಡಷ್ಟು ಪ್ರಕೃತಿಗೆ ಮಿಲನದ ಕಾತುರವಾಗುವ ಪುಣ್ಯಕಾಲವನ್ನು ಕವಿ ಎದೆಯೊಳಗೆ ತುಂಬಿಕೊಂಡಿದ್ದಾನೆ. ತನ್ನ ಪ್ರೀತಿಯ ಪರಾಕಾಷ್ಠೆಯನ್ನು ತುಂಬಾ ವಿಸ್ತಾರವಾಗಿ, ಬಾಹ್ಯವಾಗಿ ಅವಲತ್ತು ಕೊಂಡಿದ್ದು ಪ್ರೀತಿಯನ್ನು ಸದಾ ರಸಿಕತೆಯಲ್ಲಿ ಕಂಡ ಕವಿಗೆ ವಿರಹವನ್ನ ಸರಳ ಸುಲಭವಾಗಿ ಅನುಭವಿಸಲಾಗದು. ಸಾನಿಧ್ಯಕ್ಕೆ ಮುದ್ದಾಡಿದ, ಹೊರಳಾಡಿದ ಸುಖದ ತುತ್ತ ತುದಿಯ ಕೂಗಾಟ, ಬಿಸಿಯುಸಿರ ಉನ್ಮಾದದ ಯಾವುದೋ ಸುಖದಲ್ಲಿ ಕಳೆದುಹೋಗುವ ಕವಿಗೆ ವಿರಹ ಎಂಬುದೊಂದು ಮರೀಚಿಕೆಯೇ ಆಗಿರುವಾಗ ಒಮ್ಮೊಮ್ಮೆ ಕ್ಷಣಿಕ ವಿರಹವನ್ನು ಎದುರಿಸುವುದು ಕೂಡಾ ಅಸಾಧ್ಯವಾದ ಮಾತೇ ಆಗಿದೆ. “ಭೂಮಿಯ ಬಿರುಕಿಗೆ ಬೆರಳಿಡುವೆ” ಕವಿತೆ ಸಾಕೆನಿಸುವಷ್ಟು ಶೃಂಗಾರವನ್ನು ತುಂಬಿಕೊಂಡಿದ್ದು, ರಸಿಕತೆಯ ಅನುಭವಿಸಿದ ಅವಕಾಶವಾದಿಗಳಿಗೆ ಏನೇನನ್ನೋ ಒಳಗೊಳಗೆ ಅನಿಸುವಷ್ಟು , ನಿರೀಕ್ಷಿಸುತ್ತಿರುವವರಿಗೆ ಆಸೆ ಹುಟ್ಟಿಸುವಂತಹ ಗಟ್ಟಿತನದ ಕವಿತೆ. ಸೃಷ್ಟಿಯ ಒಂದು ಮಿಲನದ ನೋಟವನ್ನು ಆಪ್ತ ಪದಗಳಿಂದ ಔಚಿತ್ಯ ಪೂರ್ಣವಾಗಿ ಓದುವವರಿಗೆ ಉಣಬಡಿಸುವ ಕಲೆಯೊಂದು ಕವಿಗೆ ಕರಗತವಾದಂತಿದೆ. ಕವಿತೆಯ ಕೊನೆಯಲ್ಲಿ “ಭೂಮಿಯ ಬಿರುಕಿಗೆ ಬೆರಳಿಡುವುದೆಂದರೆಗೆಲ್ಲುವುದು ಸೋಲುವುದು ಶರಣಾಗುವುದು ಒಂದಾಗುವುದುಉಳಿದದ್ದು?ಉಳಿದದ್ದು ಏನು ಇಲ್ಲ…!!ಭೂಮಿಯ ಎದುರು ಮತ್ತೆ ಮತ್ತೆ ಧ್ಯಾನಿಸುವುದು….” ಕವಿಯ ಈ ಕಲ್ಪನೆಯು ತೀರಾ ಆಪ್ತವಾಗಿ ಮನತಟ್ಟುತ್ತದೆ. ದೈನಿಕದಲ್ಲಿ ಬಹುತೇಕರು ರಾತ್ರಿ ಕನಸಿನಲ್ಲಿ ಕಾಣುವ ವಾಸ್ತವವಲ್ಲದಾದರೂ ಕ್ಷಣಿಕ ವಾಸ್ತವ ಎನಿಸುವ, ಆಪ್ತವೂ ದೂರವೂ ಆದಂತಹ ಕನಸು ಮತ್ತು ಮನಸ್ಸಿನ ತೊಯ್ದಾಟಗಳು, ಮಲಗಿದ್ದಾಗ ಕನಸು ಅನಾವರಣವಾಗುವ ಬಗೆ, ಅದರಲ್ಲಿ ದನಿಯೊಂದು, ಮುಖವೊಂದು, ಸ್ಥಳ ಇನ್ನೊಂದು ಆದರೆ ಆ ಕನಸಿನಲ್ಲಿ ನಾವು ಮಾತ್ರ ಪಕ್ಕಾ. ಕನಸೇ ಹೀಗೆ ಎಂಬುದು ನನ್ನ ವಾಸ್ತವಕ್ಕೂ ಬರುವಹಾಗೆ ಕಟ್ಟಿಕೊಟ್ಟ ಕವಿತೆಯು ಸಹ ಆಪ್ತವಾಗಿ ಕೈ ಹಿಡಿದುಬಿಡುತ್ತದೆ. “ಕಣಿವೆ ತೋಳುಗಳಲಿರಭಸದಿ ಹರಿವ ನದಿಗೆಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತಕಾಮೋನ್ಮಾದದಿ ಮಿಂದ ನಗ್ನ ಭೂಮಿನಗುನಗುತ್ತಾ ನಿದ್ದೆ ಹೋಗಿರಲು” ರಾತ್ರಿ ಸುರಿದ ಮಳೆ ಕವಿಯ ಕಾವ್ಯ ಪ್ರಪಂಚಕ್ಕೆ ವಿಶಿಷ್ಟವಾಗಿದೆ. ಮಳೆ ಮತ್ತು ಪ್ರಥ್ವಿಯ ಬರಪೂರಿ ಮಿಲನವನ್ನು ಕವಿ ಕಂಡು ಉಂಡು ತೇಗಿದ್ದಾನೆ ತೇಗುತ್ತಿದ್ದಾನೆ. ಭೂಮಿ ಮತ್ತು ಮಳೆಯ ನಡುವಿನ ನಂಟು ಭೂಮಂಡಲದ ಚರಾಚರ ಜೀವರಾಶಿಗಳಿಗೆ ಅವಶ್ಯಕ. ಅದಕ್ಕೆ ಗಂಡು ಹೆಣ್ಣಿನ ಮಿಲನದಂತೆ ಹೋಲಿಕೆ ನೀಡಿ ಕವಿತೆಯ ಕೊನೆಯಲ್ಲಿ “ಬೆವರುಂಡ ಗದ್ದೆಗಳು ಹಸಿರಾದವು” ಎಂದು ಸತ್ಯವನ್ನೇ ಅರುಹಿದರೂ ಆ ತುಂಟತನದ ಸಾಲುಗೊಂದು ಸೋಜಿಗದ ಚಪ್ಪಾಳೆ ಸೇರಲೇ ಬೇಕು. “ಸುಳಿವ ಗಾಳಿ ಯಲಿಎರಡು ನಿಟ್ಟಿಸಿರುಗಳಿವೆಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ “ ಈ ಸಾಲುಗಳು “ಮೌನ” ಕವಿತೆಯಲ್ಲಿ ಮಿಂದೆಳುವಾಗ ವಿರಹದ ಆಳ ಅನುಭವಕ್ಕೆ ಬರುತ್ತದೆ.” ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆಯ ಸಮಯ” ಹೀಗೆ ವಿರಹದ ವಾರ್ತೆ ಎದೆಯೊಳಗೆ ಆರಿದ ಕೆಂಡದಲಿ ಹಸಿ ಜೋಳದ ತೆನೆಗಳನಿಟ್ಟು ಬಿಸಿ ಜೋಳದ ತೆನೆಯ ತಿನ್ನಲಾಗದ ನಿರಾಶೆಯಂತೆ ವಿರಹ ಹಾದುಹೋಗುತ್ತದೆ. ಕವನ ಸಂಕಲನದ ಪುಟಗಳಿಗೆ ಮೈಗಂಟಿಕೊಂಡ ರಾಶಿರಾಶಿ ಹನಿಗಳು ಓದುಗನ ಎದೆಯಮೇಲೆ ಇಬ್ಬನಿಯಂತೆ ಭಾಸವಾಗುತ್ತವೆ. ಅವು ಪದಕ್ಕೆ ಪದ ಸೇರಿ ಎದೆ ತಾಕಿಸಿ ಮೆಲ್ಲಗೆ ಮಾಯವಾದರೂ ಮತ್ತೆ ಬೇಕೆನಿಸುವಷ್ಟು ಸಂಜೆಯ ಕಾಂದಾ ಬಜಿಗಳಂತೆ ಅನಿಸುವವು. “ಬಯಲ ಗಾಳಿಮನೆ-ಮನಗಳ ಸುಖ-ದುಃಖ ಮಾತಾಡಿಸಿ ಹೋಯಿತು” ಯಾರದೋ ಮನೆವಾರ್ತೆಗೆ ಸಾಕ್ಷಿಯಾಗುವ ಗಾಳಿ ಕವಿಯೊಳಗೆ ಸಜೀವ ಸಹೃದಯ ವ್ಯಕ್ತಿಯಂತೆ ಭಾಸವಾಗುವ ಪರಿ ಅದ್ಭುತವಾದದ್ದು. ಒಂದು ತುಂಟತನ, ಅವ್ಯಕ್ತ ಭಾವ, ಸೂಕ್ಷ್ಮತೆಯ ಅನಾವರಣಗಳ ಅಭಿವ್ಯಕ್ತತೆಯನ್ನು ಕ್ಷಣದಲ್ಲೇ ಮೈಮನಕ್ಕೆ ಹಾಯಿಸಿ ನಿರಾಳವಾಗುವ ನಾಗರಾಜರವರ ಹನಿಗಳು ಮೋಡಿ ಮಾಡುವಂಥವುಗಳಾಗಿವೆ. “ಚಂದ್ರ ಮೈತುಂಬಿ ಬಳುಕಿದ ನಿನ್ನ ನೆನಪಾಯಿತು” ” ಬಣ್ಣದ ಸೀರೆ ತೊಟ್ಟು ಮಧುಮಗಳಂತೆ ಕಾದದ್ದೇ ಆತು ವಿರಹ ವಿರಹಕ್ಕೆ ಪ್ರೇಮ ಬರೆಯುವುದುಂಟೇ? “ ಪ್ರೇಮದ ಫಲಿತಾಂಶಗಳಲ್ಲಿ ವಿರಹವು ಒಂದು ಭಾಗ. ಕೆಲವೊಮ್ಮೆ ಅದು ಸಂಪೂರ್ಣವಾಗುವುದೂ ಕೂಡ ಇದೆ. ಆದರೆ ಇಂತಹದೇ ವಿರಹಗಳ ಒಳಗೆ ಮತ್ತೆ ಪ್ರೇಮ ವಾಗಬೇಕೆಂದು ಕಾಯುವುದು ಹೊಸತನ. ಹೀಗೆ ‘ವಿರಹಿ ದಂಡೆ’ ಕವನ ಸಂಕಲನದುದ್ದಕ್ಕೂ ಪ್ರಕೃತಿ, ಪ್ರೇಮ, ವಿರಹ, ಕನಸು, ನಿರೀಕ್ಷೆ , ಆಸೆ-ಆಕಾಂಕ್ಷೆ , ಅಮಲು, ತುಮುಲ, ಬಲ,ಸಕಲಗಳನ್ನು ತನ್ನದಾಗಿಸಿಕೊಂಡು ವಿಶೇಷ ಪದಪುಂಜದಲಿ ಅವುಗಳನ್ನು ಅಚ್ಚಾಗಿಸಿ ತನ್ನೆದೆಯ ಒಳಗೆ ವಿಶೇಷ ಇತಿಹಾಸವನ್ನೇ ಸೃಷ್ಟಿ ಮಾಡಿಕೊಂಡು ಜಾಗೃತವಾದ ಸಾಹಿತ್ಯ ಆಸಕ್ತಿಯನ್ನು ಬೆಳೆಕಾಗಿಸಬೇಕೆಂಬ ಕವಿಯ ಪ್ರಯತ್ನ ಸಫಲವಾಗಿದೆ. ತೀರಾ ಗಂಭೀರ ಶೈಲಿಯಲ್ಲಿ ಓದಿದಾಗ ಕವಿತೆಗಳು ಮುಖ ಊದಿಸಿಕೊಂಡು ಸಿಟ್ಟುಗೊಳ್ಳುತ್ತವೆ. ತೀರಾ ಒಳಗಣ್ಣಿನಿಂದ ಬಾಲ್ಯ, ಹರೆಯಗಳ ತುಂಟಾಟಗಳಿಗೆ ಅವಕಾಶವಿತ್ತು ಕವಿತೆಗಳನ್ನು ಆಸ್ವಾದಿಸುವಾಗ ಹೊಸ ತರದ ಪ್ರೇಮ, ವಿರಹ, ಪ್ರಣಯ ಇತ್ಯಾದಿಗಳ ಹಿತವಾದ ಪರಿಧಿಯೊಂದು ಮನಸ್ಸಿನ ಪರದೆ ಸರಿಸಿ ನಸುನಗುತ್ತದೆ. ಒಟ್ಟಾರೆಯಾಗಿ ಕಾವ್ಯ ಪ್ರಪಂಚಕ್ಕೆ ವಿರಹವನ್ನೂ ಸಲಿಗೆಯಾಗಿ ಒಲವಾಗಿ ಉಣಬಡಿಸುವ ಕವಿಯ ಪ್ರಯತ್ನ ಅದ್ಬುತವಾದಂತದ್ದು. ******* ಮೋಹನ್ ಗೌಡ ಹೆಗ್ರೆ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ವಿಮರ್ಶೆ

ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ‌ ಮುಂದ (ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ) ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ‌ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿ‌ಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ ದಾಂಪತ್ಯ, ಗಂಡನನ್ನು ಬಿಟ್ಟು ತವರಿಗೆ ಬಂದ ಹೆಣ್ಣುಮಗಳ ವಿರಹ,ಗಂಡನ‌ ಪ್ರೀತಿ‌, ಇನ್ನಿತರ ಹೆಂಗಳೆಯರ ಗಂಡ ಬೆನ್ನು ಹತ್ತಿದಾಗ ಹೆಣ್ಣುಮಗಳು ಪಡುವ ನೋವು,ಹಳ್ಳಿಯ ಹಬ್ಬ ಜಾತ್ರೆಗಳ ಚಿತ್ರ,ತಮ್ಮ ಊರನ್ನು ಜನಪದ ಹೆಣ್ಣುಮಗಳು ಚಿತ್ರಿಸುವ ವೈಭವ ಹೀಗೆ ಅಪ್ಪಟ ಜಾನಪದಿಯ ಲೋಕವೊಂದನ್ನು ಕಟ್ಟಿಕೊಡುವ ಈ ಸಂಕಲನ ಕನ್ನಡದ ಒಂದು ಅಪರೂಪದ ಸಂಕಲನವಾಗಿದೆ.ಈ ಸಂಕಲನದೊಳಗಿನ ಒಂದು‌ಪದ್ಯ ‘ದೇವರ ದೇವರು ‘ ಎಂಬುದು. ದೇವರ ದೇವರು ಎಂದರೆ ದೇವರಿಗೇ ದೇವರು ಎಂದರ್ಥ. ಯಾವುದೇ ಗರತಿ ತನ್ನ ಗಂಡ ತನ್ನ‌ ಪ್ರೀತಿಯನ್ನು ಇನ್ನೊಂದು ಹೆಣ್ಣಿಗೆ ಹಂಚುವದನ್ನು ಸಹಿಸಲಾರಳು.ಗಂಡನ‌ ಅಖಂಡ ಪ್ರೀತಿಯ ಮುಂದೆ ಲೋಕದ ಯಾವ ಸಿರಿವಂತಿಕೆಯೂ ದೊಡ್ಡದಲ್ಲ.ಬಹುಶಃ ‘ನಿನ್ನ ಗಂಡ ಅಲ್ಲೊಬ್ಬಳ ಕೂಡ ನಗತಿದ್ದ ‘ ಎಂಬ ಹಿರಿಯಳೊಬ್ಬಳ ಮಾತಿಗೆ ನಕ್ಕರೆ ನಗಲೆವ್ವ ನಗಿ‌ಮುಖದ ಕ್ಯಾದಿಗಿ‌ನಾ ಮುಡಿದ ಹೂವು ಅವಳೊಂದುಗಳಿಗಿ ಮುಡಿಯಲಿ ಎಂದಿರುವ ಮಾತು ಗರತಿಯೊಬ್ಬಳ‌ ಮಾತಾಗಿರದೆ ಯಾರೋ ಪುರುಷರೇ ಬರೆದು ಸೇರಿಸಿದ ಪದ್ಯ ವಾಗಿರಬೇಕು. ಏಕೆಂದರೆ ಮದುವೆಯಾದ ಯಾವ ಹೆಣ್ಣು ತನ್ನ ಗಂಡನ ಪ್ರೇಮ ಇನ್ನೊಂದು‌ ಹಂಚಿಕೆಯಾಗುವದನ್ನು ಸಹಿಸಲಾರಳು. ದೇವರ ದೇವರು ಕವಿತೆ ಹೀಗೆ ಆರಂಭವಾಗುತ್ತದೆ. ದೇವರದೆಂತಾ ದೊಡ್ಡಸ್ತಿಕೆ ಬಿಡು‌ನನ್ನ ಗಂಡನ ಮ್ಯಾಲನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾಲಿಲ್ಲ ಅವಗ ಖ್ಯಾಲ ಹೀಗೆ ತನ್ನಗಂಡನೇ ಶ್ರೇಷ್ಠ ಎನ್ನುವ ಹೆಣ್ಷುಮಗಳು ಆತ ಏಕೆ ಶ್ರೇಷ್ಠ ಎನ್ನುವದನ್ನು ಮುಂದಿನ ಪದ್ಯ ಭಾಗದಲ್ಕಿ ವಿವರಿಸುವದು ಬಹು ಸುಂದರವಾಗಿದೆ. ಬ್ರಹ್ಮ‌ ನಮ್ಮ ಪರಂಪರೆಯ ಕಥೆಗಳ ಪ್ರಕಾರ ಲೋಕದ ಸೃಷ್ಟಿಕರ್ತ.ಆದರೆ ಆತನಿಗೆ ಸರಸ್ವತಿಯೊಬ್ಬಳೇ ಹೆಂಡತಿಯಲ್ಲ,ಮೂವರೊಂದಿಗೆ ತನ್ನ ಪ್ರೀತಿಯನ್ನು ಆತ ಹಂಚಿಕೊಂಡವನೆಂದು ಜನಪದ ಗರತಿಗೆ ಕೋಪ.ಅಂತೆಯೇ ಆಕೆ ಬ್ರಹ್ಮದೇವನು ಬಹಳ ಹಿರಿಯನಂತಬುದ್ದಿ ಐತೆ ಅವಗ?ಮೂರುಜನಾ ಹೆಂಡರು ಬೇಕಾತ್ಯಾಕಪ್ರೀತಿಯ ಬಗಿ ಹ್ಯಾಂಗ? ಮೂರು‌ ಜನರೊಂದಿಗೆ ಹಂಚಿಕೊಂಡ ಪ್ರೀತಿ ಪ್ರೀತಿಯೇ? ಇದು ಅವಳ ಪ್ರಶ್ನೆ.ಹೃದಯದಲ್ಲಿ ಜಾಗ ಇರುವದೇ ಒಬ್ಬಳಿಗೆ. ಹೆಚ್ಚು ಜನ ಹೇಗೆ ನಿಂತಾರು? ಒಬ್ನಳು ಹೃದಯದಲ್ಲಿ ನೆಲೆಸಿದ ಮೇಲೆ ಇನ್ನಿಬ್ಬರು ನಿಟ್ಟುಸಿರು ಹಾಕುತ್ತಾ ಇರಲೇಬೇಕಲ್ಲವೆ? ತುಂಬ ವಾಸ್ತವಿಕ ಪ್ರಶ್ನೆ ಎತ್ತುವ ಗರತಿಯ ಪ್ರಶ್ನೆ ವೈಜ್ಞಾನಿಕವಾಗಿದೆ.ಒಂದೇ ಸಮಯಕ್ಕೆ ಇಬ್ಬಿಬ್ಬರಿಗೆ ಹೃದಯದಲ್ಲಿ ಜಾಗ ಕೊಡುವ ಗಂಡು ಇರಬಹುದೇ? ರಾಮ ರಾಮನಂತ ಹೊಗಳೆ ಹೊಗಳತಾರರಾಮನೇನು ಸುದ್ದಯಾರಮಾತ ಕೇಳಿ ಪ್ರೀತಿಯ ಸತಿಯನಅಡವಿಗೆ ಅಟ್ಟಿದ್ದ ವಾವ್ ! ಗರತಿಯ ಪ್ರಶ್ನೆಗೆ ವಾಲ್ಮಿಕಿಯೂ ನಿರುತ್ತರ! ಹೌದು, ತುಂಬು ಬಸಿರಿ ಸೀತಯನ್ನು ಕಾಡಿಗೆ ಕಳಿಸಿದ್ದು ಎಂಥ ಮಾನವೀಯ ನಡೆ? .ಅದಕ್ಜೆ ಲಕ್ಷ್ಮೀಶ ಕವಿ ” ಕರುಣಾಳು ರಾಘವ ನಲಿ ತಪ್ಪಿಲ್ಲ” ಎಂದು ವ್ಯಂಗ್ಯವಾಡಿದ್ದು! ಆದರೆ ಸೀತೆ ಬಿಸಿಲು ಬಿಸಿಲು ಎಂದು ಕಾಡಲಿ ಬಳಲುವಾಗ ವಾಲ್ಮೀಕಿ ತಂದೆಯಾಗಿ ಕಾಯ್ದಿದ್ದನ್ನು ಸ್ಮರಿಸುತ್ತಾಳೆ. ಕೃಷ್ಣನಂತೂ ಹದಿನಾರು ಸಾವಿರ ಹೆಂಡಿರ ! ಅವನ ಬಗೆಗಂತೂ ಗರತಿಗೆ ಗೌರವ ವಿರಲು ಸಾಧ್ಯವಿಲ್ಲ. ಅಂತೆಯೇ ಕೃಷ್ಣನನ್ನು ಖೊಟ್ಟಿ ಎಂತಲೇ ಆರಂಬಿಸುತ್ತಾಳೆ. ಕೃಷ್ಣನದಂತೂ ಖೊಟ್ಟಿತನವು ನೋಡೆಷ್ಟು ಹೆಂಡರವಗ?ಹೊಟ್ಟಿ ಉರಿದ ನಾರಿಯರು ಸುಮ್ಮನ$ಬಿಟ್ಟಾರೆನು ಹಾಂಗ? ಅವರ ಹೊಟ್ಟೆಯುರಿಯೇ ಅವನ ಸುಖವನ್ನು ಸುಟ್ಟಿರಬೇಕು ಎಂದವಳ ಊಹೆ. ಶಿವನದಂತೂ ಲೋಕವೇ ಬಲ್ಲ ಕಥೆ.ತಲಿ ಮ್ಯಾಲೊ ಬ್ಬಳು,ತೊಡಿ‌ಮ್ಯಾಲೊಬ್ಬಳು! ಗೌರಿ ಎಂಥ ಚಲುವಿ! ಆದರೂ ಗಂಗೆಯನ್ನು ಶಿವ ತಂದಿಟ್ಟುಕೊಂಡದ್ದು ಗರತಿಗೆ ಅಕ್ಷಮ್ಯ ಅಪರಾಧ .ಅದಕ್ಜೇ ಆಕೆ- ಹೇಳಬ್ಯಾಡ ಶಿವನೇಳಿಗಿ ಗೌರಿಯಗೋಳು ಗೋಳಿಸಿ ಬಿಟ್ಟಾಹೇಳದೆ ಕೇಳದೇ ತನ್ಬ ಜಡಿಯೊಳಗಗಂಗಿಯ ತಂದಿಟ್ಟಾ ಗೌರಿಯ ದುರ್ದೈವಕ್ಕೆ ಮರುಗುವ ಜನಪದ ಗರತಿ ಅಂತಹ ಹೆಣ್ಣಿಗೂ ಸವತಿಯನ್ನು ತಂದ ಶಿವನನ್ನು ಜಾಲಾಡಿಸುತ್ತಾಳೆ..ಇನ್ನು ಇಂದ್ರ ನಂತೂ ದೇವಲೋಕದ ಸುಂದರಿಯರನೆಕರನ್ನು ಉಪಪತ್ನಿಯಾಗಿಸಿಕೊಂಡಿದ್ದ.ಆತನದು ಗರತಿಯ ಮಾತಿನಲ್ಲಿ “ಸೂಳೆಯರ ಮ್ಯಾಳ” ! ದೇವೆಂದ್ರನ‌ ಲೋಕಕ್ಕೆ ಗರತಿ ಕೊಟ್ಟ ಹೆಸರು! ಚಂದ್ರನ ಹಾದರದಾಟಕ್ಜೆ ಅವನ ಹೆಂಡತಿ ನಿತ್ಯ ಕಣ್ಣಿರಿಡತಿರಬೇಕು !ಎನ್ನುತ್ತಾಳೆ. ಇವರೆಲ್ಲ ದೇವರುಗಳು! ಪಾಪ ಅವರ ಹೆಂಡತಿಉರ ಬವಣೆ ಎಂತಹದು ! ಅವರಿಗಿಂತ ತಾನೇ ಪರಮ ಸುಖಿ! ಏಕೆಂದರೆ ತನ್ನ‌ಗಂಡ ಅವರ ಮುಂದೆ ಅಪ್ಪಟ ಚಿನ್ನ. ಗರತಿಯ ಮಾತು ಕೇಳಿ. ದೇವರಂತ ದೇವರ ಹೆಂಡರಿಗೂಯಾವ ಬವಣೆ ಗೆಳತೀಅವರಿಗೆಲ್ಲ ದೊರೆತಿಲ್ಲ ನನ್ಹಾಂಗಪತಿಯ ಪೂರ್ಣ ಪ್ರೀತಿ! ಆದ್ದರಿಂದಲೇ ಆಕೆಯ ಗಂಡ ದೇವರಿಗೂ‌ ಮಿಗಿಲು! ನನ್ನ ರಾಯ ಸರಿ ದೇವರ ದೇವರುನಾನು ಅವನ ಗರತಿ –ನಮ್ಮ ಬಾಳಿನಲಿ ಸ್ವರ್ಗವನ್ನು ಇಳಿಸೇತಿಅವನ ಪ್ರೀತಿ! ದೇವರಂತಹ ರಾಯನಿಗೇ ತಾನು‌ಗರತಿಯಂಬುದು ಅವಳ ಹೆಮ್ಮೆ! ಆಕೆ ಹೆಮ್ನೆ ಪಡುವದರಲ್ಲೂ ತಪ್ಪಿಲ್ಲ. ಅಂತೆಯೇ ಆಕೆ ಪ್ರಶ್ನಿಸುವದು’ ದೇವರದೆಂತಹ ದೊಡಗಡಸ್ತಿಕೆ ಬಿಡು ನನ್ನ ಗಂಡನ ಮುಂದ’ ಎಂದು! ಇಂತಹ ಅಖಂಡ ಪ್ರೀತಿಯನ್ನು ತಾವಿಬ್ಬರೇ ಹಂಚುಣ್ಣುವ ದಂಪತಿ ಜೋಡಿಗಳ ಸಂತತಿ ಸಾವಿರವಾಗಲೆಂಬುದು ಅವಳ. ಆಶಯ! ಹೆಣ್ಣಿನ ನಲಿವಿನ‌ ಜೊತೆಜೊತೆಗೆ ಗಂಡಂದಿರ ಪ್ರೀತಿಯನ್ನು ಮತ್ತೊಂದು ಹೆಣ್ಣಿನೊಂದಿಗೆ ಹಂಚಿಕೊಳ್ಳಬೇಕಾಗಿ ಬಂದ ದುರ್ದೈವಿ ಹೆಣ್ಣುಮಕ್ಕಳ ನೋವನ್ನು ಪದ್ಯ ಸೂಕ್ಷ್ಮವಾಗಿ ವಿವರಿಸಿದೆ. ಮುಂಜಾನೆ ಪ್ರೀತಿಸಿ,ಸಂಜೆ ಮದುವೆಯಾಗಿ,ಮರುದಿನ ಡೈವೊರ್ಸಗೆ ನಿಲ್ಲುವ ,ಇಂದಿನ ಅತ್ಯಾಧುನಿಕ ಮನಸುಗಳು ಇಂಥಹ ಕವಿತೆಯನ್ನು ಓದಬೇಕು.ನಲ್ವಾಡುಗಳಲ್ಲೇ ಇರುವ ಗೌಡರ ಸೊಸೆ ಎಂಬ‌ ಪದ್ಯದಲ್ಲಿ ಹೆಣ್ಣಿಗೆ ಗಂಡನ‌ ಪ್ರೀತಿಯೇ ಹಂಚಿಕೆಯಾದ ಮೇಲೆ ಯಾವ ಸಿರಿವಂತಿಕೆ ಇದ್ದರೇನು ? ಎಂದು ಪ್ರಶ್ನಿಸುವ ಸಾಲುಗಳಿವೆ.ಹೆಣ್ಣಿಗೆಗಂಡಿನ ,ಗಂಡಿಗೆ ಹೆಣ್ಣಿನ ಸಂಪೂರ್ಣ ಪ್ರೀತಿಯೊಂದೇ ಆಸರೆ ಎಂದು ಸಾರುವ ಇಂತಹ ಅಪರೂಪದ ಪದ್ಯ ಮತ್ತೆ ಮತ್ತೆ ಓದಬೇಕಲ್ಲವೇ? ********** ಡಾ ವೈ.ಎಂ.ಯಾಕೊಳ್ಳಿ

ವಿಮರ್ಶೆ Read Post »

ಕಾವ್ಯಯಾನ

ಕಾವ್ಯಯಾನ

ಕಣ್ಣೀರು ಜಗದೀಶ್ ಬನವಾಸಿ ಕಣ್ಣೀರು ಬರುವಷ್ಟು ಬರಲಿಎದೆಯ ನೋವು ತೊಳೆದುನೆನಪುಗಳ ಪುಟ ಓದ್ದೆಯಾಗುವಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳು ಬರುವಷ್ಟು ಅತ್ತು ಬಿಡುನೆನಪುಗಳು ನೇಪಥ್ಯಕ್ಕೆ ಮರಳಿಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳುವ ಹರಿವಿಗೆ ತಡೆಯಾಗುವಗೊಡ್ಡು ನೆಪಗಳ ಒಡ್ಡದಿರುಒಡೆದ ಕಟ್ಟೆ ಬರಿದಾಗಲಿ ಬಿಡುಮತ್ತೆಂದು ಅವು ತಿರುಗಿ ಬಾರದಂತೆ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಂಕೋಲೆ ಸಾಯಬಣ್ಣ ಮಾದರ ಬಿಟ್ಟು ಬಿಡಿಬಿಟ್ಟು ಬಿಡಿಕೈ ಕಟ್ಟಿ ನೆಲಕ್ಕೆ ಹಾಕಿಮಂಡಿಯೂರಿ ಕುಳಿತಿರುವರೆಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ ಮನುಷ್ಯರು ನಾವುನೀವು ಕ್ರೂರಿ ಮೃಗಗಳೆ? ಚರ್ಮದೊಳಗೆ ರಕ್ತ ಉಂಟುಅದರಲ್ಲಿ ವರ್ಣ ಜಾತಿ ಉಂಟೆ?ಬೇರೆ ಬೀಜಕ್ಕೆ ಹುಟ್ಟಿದ ಮರ ನೀವುತಯಾರಾಗಿದೆ ಕಾಲವೇ ಕಡಿಯಲು ಮಸಣದಲ್ಲಿ ಮಾನವೀಯತೆ ಹೂತ್ತುಮನುಷ್ಯತ್ವವೆ ಮೂಲೆಗೊತ್ತಿಜಾತಿ ಎಂಬ ಶಿಖರ ಏರಿವರ್ಣದ ಗಿರಿ ಮುಟ್ಟಿಅರ್ಚುವ ಮೂರ್ಖರೇಯಾವ ಜೀವಿ ನೀವು ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನುಕಟ್ಟಿ ಬಡಿದು ಕೇಕೆ ಹಾಕಿದವರು ನೀವುನೀರು ಬೆಳಕು ಗಾಳಿ ಕೇಳಿದೀಯಾ ಜಾತಿಬಣಕ್ಕೆ ಬೇದ ಮೊದಲೇ ಇಲ್ಲ ಧರ್ಮದ ಹೆಂಡ ಕುಡಿದುಜಾತಿ ಮತ್ತೆರಿಸಿಕೊಂಡುಎಷ್ಟು ದಿನ ಕುಣಿಯುವಿರಿದೇವರೇ ಹೆಣವಾಗಿ ಹೆಗಲೇರಿರುವಾಗಎಷ್ಟು ದಿನ ಅಡಗಿವಿರಿ ಬಂಕರಿನಲ್ಲಿ ಎಷ್ಟಂತ ಆಡುವಿರಿ ನಲಿ-ಕಲಿ ಆಟಸನಿಹದಲ್ಲಿದೆ ಅಂತ್ಯಮನುಷ್ಯರಾಗಲು ಮರೆಯದಿರಿಇಲ್ಲವೆ ಭೂಮಿಯಿಂದ ನಿರ್ಗಮೀಸಲು ಸಿದ್ದರಾಗಿ !!

ಕಾವ್ಯಯಾನ Read Post »

ಇತರೆ

ಹಾಸ್ಯ

ಮನೆಯೇ ಮಂತ್ರಾಲಯ? ಜ್ಯೋತಿ ಡಿ .ಬೊಮ್ಮಾ ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ ಉಗುಳಿ ಮತ್ತೆ ಮಾಸ್ಕ ಹಾಕಿಕೊಂಡರು.ಅಲ್ರಿ ಅಕ್ಕೊರು ಮೊದಲ ನಾವು ಮತ್ತ ನಮ್ಮನಿ ಅಕ್ಕಪಕ್ಕ ಸ್ವಚ್ಚ ಇಟಗೊಬೇಕು ,ಹಾಗೆಲ್ಲ ಅಲ್ಲಿ ಇಲ್ಲಿ ಉಗಳಬಾರದ್ರಿ ಎಂದು ತಿಳಿಸಲು ಪ್ರಯತ್ನಿಸಿದೆ.ಅದಕ್ಕವರು ಛಲೊ ಹೆಳತ್ರಿ..ಉಗಳ ಬಂದ್ರ ಬಾಯಾಗ ಇಟಗೊಂಡ ಕೂಡಬೇಕಾ.ಉಗಳೆನು ಹೇಳಿ ಕೇಳಿ ಬರತದೇನು ಎಂದು ಮತ್ತೊಮ್ಮೆ ತಪ್ಪಕ್ಕನೆ ಉಗುಳಿ ಮತ್ತ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ಅಲ್ರಿ ಈ ಸರ್ಕಾರದೊರು ಎಟೊಂದು ಕಂಪಿಸ್ ಮಾಡಲತಾರಿ ಒಮ್ಮಿ ಎಲ್ಲಾ ಚಾಲೂ ಮಾಡತಿವಿ ಅಂತಾರ ,ಒಮ್ಮಿಇನ್ನೂ ಸ್ವಲ್ಪ ದಿನ ಮುಂದೂಡತೀವಿ ಅಂತಾರ,ಸಾಲಿ ಸುರು ಮಾಡತೀವಿ ಅಂತಾರ ,ಒಮ್ಮೆ ಇನ್ನೂ ಎರಡು ತಿಂಗಳ ತೆರೆಲ್ಲ ಅಂತಾರ ,ಹೊರಗ ಬರಬ್ಯಾಡರ್ರಿ ಅಂತಾರ ಮತ್ತ ಕರೋನಾ ಜತಿಗೆ ಬದುಕೊದು ಕಲಿರಿ ಅಂತಾರ ನನಗರ ಟೊಟಲ್ ಕಂಪೂಸ್ ಆಗಲತದ ನೋಡ್ರಿ..ಯಾವದು ಕೇಳಬೇಕು ಯಾರದು ಕೇಳಬೇಕು ಒಂದು ತಿಳಿವಲ್ದು ಎಂದರು.ಯಾಕ ಅಷ್ಟು ಟೆನ್ಷನ್ ಮಾಡಕೋತಿರಿ ಈಗ ಯಾರದ ಎನ ನಿಂತದ ,ಮಾಡಲತಿವಿ ಉಣ್ಣಲತಿವಿ ,ಆವಾಗೀಟು ಹೊರಗ ಓಡಾಡತಿದ್ವಿ ಈಗ ಅದೆಲ್ಲ ಕಟ್ ಆಗ್ಯಾದ, ಎನಿದ್ರೂ ನಮಗೇನು ಅಡುಗಿ ಮಾಡಾದೂ ತೊಳೆದು ತಪ್ಪತದೆನು ಅಂದೆ.ಐ,,,ಮೂರು ತಿಂಗಳಾತು ಒಂದು ಸೀರಿ ತಗೊಂಡಿಲ್ಲ ,ಒಂದು ಬೌಲ್ವ್ಸಹೊಲಿಸಿಲ್ಲ ,ಬ್ಯೂಟಿ ಪಾರ್ಲರ ಮಾರಿ ನೊಡಲಾರದಕ್ಕ ನನ್ನ ಮಾರಿ ನೊಡಕೊಳ್ಳಲಾರದಂಗ ಆಗೇದ. ಈ ಕರೋನಾ ಎನಾರ ನನ್ನ ಕೈಯಾಗ ಸಿಕ್ಕರ ನಾ ಸುಮ್ಮನ ಬಿಡಾಕಿ ಅಲ್ಲ ನೋಡ್ರಿ , ಎಂದು ರಾಂಗಾದರು .ಅಯ್ಯೊ ಅಕ್ಕೊರೆ ,ಸಿಟ್ಟಿಲೆ ಅದಕ್ಕ ಹಿಡಿಲಾಕ ಹೊಗಿರಿ ಮತ್ತ ,, ನಿಮಗ ಹಿಡದು ಕ್ವಾರಂಟೈನ್ ಮಾಡತಾರ ಮತ್ತ ಎಂದೆ.ಮಾಡ್ಲಿ ಬಿಡ್ರಿ..ಅಲ್ಲೆನ್ ತಕಲಿಫ ಇಲ್ಲ.ಪೇಪರನಾಗ ನೋಡಿರಿಲ್ಲ..ಊಟ ಬಿಸಿಲೇರಿ ನೀರು ಮೊಟ್ಟೆ ಡ್ರೈಪ್ರೂಟ್ಸ ಎಲ್ಲ ಕೊಡತಾರಂತ ಟೈಮ ಟೈಮಿಗೆ , ಹೇಗೋ ಈ ಬ್ಯಾಸಗಿ ಮನ್ಯಾಗೆ ಕಳದೀವಿ ,ಒಂದು ಟೂರ್ ಇಲ್ಲ , ಪಿಕ್ ನಿಕ್ ಇಲ್ಲ ,ಸುಮ್ಮ ಅಲ್ಲೆರ ಹೋಗಿ ಇದ್ದರ ಒಂದಷ್ಟೂ ದಿನ ಔಟಿಂಗ ಆದಂಗ ಆಗತದ ,,ಈ ಅಡಗಿ ಮನಿ ಕಾಟ ತಪ್ಪತದ ,ಹೌದಿಲ್ಲ ಎಂದರು . ಮಾತಾಡಿ ಗಂಟಲು ಕರ ಕರ ಎಂದಿಬೇಕು ,ಮಾಸ್ಕ ತೆಗೆದು ಮತ್ತೊಮ್ಮೆ ಉಗುಳಿ ಬಂದರು.ಹಾಗಲ್ಲರಿ ಅಕ್ಕೊರೆ , ಕ್ವಾರಂಟೈನ್ ದಾಗ ನಮ್ಮ ಮನಿ ಮಂದಿಗೆಲ್ಲ ಒಂದೆ ಕಡೆ ಇಡತಾರೊ ಬೇರೆ ಬೇರೆ ಕಡಿ ಇಡತಾರಿ ಎಂದು ಕೇಳಿದೆ.ಬ್ಯಾರೆನೆ ಇಡಲಿ ಬಿಡ್ರಿ ,ಯಾಕ ಇಷ್ಟು ದಿನ ಒಳಗೆ ಒಂದೆ ಕಡಿ ಉಳದು ಸಾಕಾಗಿಲ್ಲೆನು , ನನಗಂತೂ ಸಾಕಾಗೇದ ದೀನಾ ಅವೆ ಮಾರಿ ನೋಡಿ ಎಂದು ಬೇಜಾರಾದರು.ಮತ್ತೆ ಅಕ್ಕೊರೆ ,,ಪೇಪರನಾಗ ನೋಡ್ದೆ , ಅಲ್ಲಿ ಕ್ವಾರಂಟೈನದಾಗ ಇರೋರು ದಂಗೆ ಏಳಕಹತ್ಯಾರಂತ ,ಓಡಿಹೊಗತಿದಾರಂತ ಎಂದೆ. ಅಯ್‌..ಅವರೆಲ್ಲ ಗಂಡಮಕ್ಕಳೆರಿ,, ಅವರಿಗೆ ಗುಟಕ ಶರಿ ಸಿಗಲಾರದಕ್ಕ ಹಾಗ ಮಾಡಲತಿರಬೇಕು..ಹೆಣ್ಣು ಮಕ್ಕಳ ಯಾರಾರ ಮನಿಗ ಕಳಸ್ರಿ ಎಂದು ದಂಗೆ ಎದ್ದಿದು ಪೇಪರನಾಗ ಬಂದಂದ ಎನು ಎಂದರು. ಕ್ವಾರಂಟೈನ್ ಎಂದರೆ ಭಯಂಕರ ಭಯ ಪಟ್ಟುಕೊಂಡಿದ್ದ ನನಗೆ ಬಾಜು ಮನಿ ಅಕ್ಕೊರ ಮಾತು ಕೇಳಿ ಸ್ವಲ್ಪ ನಿರಾಳವಾಯಿತು.ಬರತಿನ್ರಿ ,ಜ್ವಾಳದ ಹಿಟ್ಟು ಮುಗದಾದ ,ಬೀಸಕೊಂಡು ಬರಬೇಕು , ಬಾಜು ಓಣ್ಯಾಗ ಕರೋನಾ ಬಂದೋರು ಯಾರ್ಯಾರು ಈ ರಸ್ತೆದಾಗ ಓಡ್ಯಾಡೋರೊ ಎನೊ ಎಂದು ರಸ್ತೆ ಮೇಲೆ ಮತ್ತೊಮ್ಮೆ ಉಗಿದು ಹೊದರು.ಅವರು ಹೋದ ಮೇಲೂ ಕ್ವಾರಂಟೈನ್ ಗಂಗುನಲ್ಲೆ ಇದ್ದ ನಾನು ಪತಿ ಮನೆಗೆ ಬಂದ ಮೇಲೆ ಕೇಳಿದೆ. ಅಲ್ಲಿ ಕ್ವಾರಂಟೈನದಾಗ ಇರೋರು ಭಾಳ ಆರಾಮ ಇರತಾರಂತರಿ..ಕೆಲಸ ಇಲ್ಲ ಬೊಗಸಿ ಇಲ್ಲ..ಎಂದೆ. ಹೌದಾ ,ಬೆಕಾರೆ ನಿಂಗೂ ಬಿಟ್ಟು ಬರತೆನಿ ನಡಿ.ಹೇಂಗೂ ಸರ್ಕಾರದ ಜೀಪು ರೆಡಿನೆ ಅದಾವ , ಎಂದಾಗ ದಿಗಿಲು ಬಿದ್ದು ತೆಪ್ಪಗಾದೆ , ಮನೆಯೆ ಮಂತ್ರಾಲಯ ಎಂದುಕೊಳ್ಳುತ್ತ. ********

ಹಾಸ್ಯ Read Post »

ಕಾವ್ಯಯಾನ

ಕಾವ್ಯಯಾನ

ಗೆ ರಾಮಸ್ವಾಮಿ ಡಿ.ಎಸ್. ನೀನು ನಡೆಸಿಕೊಡಬಹುದಾದ ಒಂದು ಮಾತುನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋಆ ಉಳಿದು ಹೋದ ಮಾತನ್ನ ನೀನುಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದುಹಣೆಯ ಚುಂಬಿಸಿ ಹೇಳಿದ್ದೆಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದುಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದುಭವದ ಸಂಬಂಧಗಳ ಬಿಡುಗಡೆಗೆ ಪ್ರಾರ್ಥಿಸಿದ್ದು. ಈ ಸಂಜೆ, ಹೊರಗೆ ಮಳೆಯ ಸೂಚನೆಒಳಗೆ ತಡೆಯಲಾರದಷ್ಟು ವಿಪರೀತ ಸೆಖೆ.ಜೋರಾಗಿ ಬಾಗಿಲು ಬಡಿದ ಸದ್ದು.ತೆರೆದರೆ ಹೊರಗೆ, ಯಾರೂ ಗೊತ್ತಾಗದ ಗಾಳಿಯಲೆ ಚಿಲಕ ಅಲ್ಲಾಡುತ್ತಿದೆ, ಮೆಟ್ಟಿಲಿಳಿದ ಅಸ್ಪಷ್ಟ ಸದ್ದುನೀನು ಈವರೆಗೂ ನಡೆಸಿ ಕೊಡದ ಮಾತೇ ಬಂದುಮತ್ತೆ ಬಂದ ದಾರಿಯಲೇ ಮರಳಿರಬೇಕು,ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ. ಈ ಸರಿ ರಾತ್ರಿಯಲ್ಲಿ ಶುಭ್ರ ಆಕಾಶ ನೋಡುತ್ತತಾರಸಿಯಲ್ಲಿ ಅಂಗಾತ ಮಲಗಿ ನಕ್ಷತ್ರವೆಣಿಸುತ್ತಜೊತೆಗೇ ನಿನ್ನಲ್ಲೇ ಉಳಿದ ಮಾತ ನೆನೆಯುತ್ತಾಅವಕಾಶದಲ್ಲಿ ಎಷ್ಟೊಂದು ತಾರೆ ನೀಹಾರಿಕೆಗಳುಕ್ಷೀರ ಪಥದ ನಡುವೆ ಎಣಿಕೆಗೂ ಸಿಗದ ಲೋಕಗಳುಭ್ರಮೆ ವಿಭ್ರಮೆ ಸಂಕಟಗಳಿಗೆಲ್ಲ ಸಮಾಧಾನದ ಮಾತುಹೇಳುತ್ತಿವೆಯೇನೋ ಎಂಬಂತೆ ಸ್ಪೋಟಿಸುತ್ತಲೇಒಂದರ ಹಿಂದೊಂದು ಉರಿಯುತ್ತ ಬೀಳುತ್ತಲಿಹವು. ಈ ಎಲ್ಲ ಸಂಕೀರ್ಣ ಪ್ರತಿಮೆ ರೂಪಕಗಳ ನಡುವೆಬಿಟ್ಟೂ ಬಿಡದೆ ಕಾಡುತ್ತಿದೆ ನಿನ್ನ ಮಾತಿನ ನೆನಪುಧೋ ಎಂದು ಸುರಿಯದಿದ್ದರೂ ಹಿತ ಹನಿಯ ಸೇಕಒಡಲೊಳಗೇ ಉಳಿದು ಹೂತು ಹೋಗಬಾರದ ಮಾತುಮತ್ತೆ ಮತ್ತೆ ನಮ್ಮಿಬ್ಬರೊಳಗೇ ಗಿರಕಿ ಹೊಡೆಯುತ್ತಲೇಕಾಡುತ್ತಿದೆ ಅನವರತ ಸಂಭ್ರಮವ ಎಳೆದು ತಂದು.ಹೌದು, ಸಾವಿನ ನಂತರವಾದರೂ ಮತ್ತೆ ಕೂಡಬೇಕು! ********

ಕಾವ್ಯಯಾನ Read Post »

You cannot copy content of this page

Scroll to Top