ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೇಮವೆಂದೂ ಹೇರಲ್ಪಡುವುದಿಲ್ಲ

Grave, Graveyard, Cemetary, Milan, Italy

ಪೂರ್ಣಿಮಾ ಸುರೇಶ್

ಪ್ರೇಮವೆಂದೂ ಹೇರಲ್ಪಡುವುದಿಲ್ಲ.
ಮತ್ತೆಮತ್ತೆ ನಿನ್ನೆಗಳನು
ಕರೆತಂದು
ಎದುರು ನಿಲ್ಲಿಸಿ
ಯುದ್ಧ ಹೂಡುವೆಯೇಕೆ..

ಒಪ್ಪುವೆ
ಜೊತೆ ಸೇರಿಯೇ
ಬುತ್ತಿ ಕಟ್ಟಿದ್ದೆವು
ನಾಳೆಗೆ

ನಡೆವ ನಡೆ
ಎಡವಿದ ಹೆಜ್ಜೆ
ತಿರುವುಗಳು
ಗಂಧ ಮಾರುತದ
ಸೆಳೆತ
ದಾರಿ ಕವಲಾಗಿ
ನೀನು
ನೀನಾಗಿ ನಾನು ಒಂಟಿಯಾಗಿ
ಅನಿವಾರ್ಯ ಹೆಜ್ಜೆಗಳು

ಅದೆಷ್ಟು ಮಳೆ..
ಸುರಿಸುರಿದು
ಒದ್ದೆ ಒದ್ದೆ

ಒಳಕಂಪನ ಹೊರನಡುಕ
ತೊಯ್ದ ಹಸಿವೆಗೆ
ಹಳಸಿಹೋದ
ತಂಗಳು ಬುತ್ತಿ
ಚಾಚಿದ ಕೈ ಬೊಗಸೆ
ಖಾಲಿ ಖಾಲಿ

ಹೌದು
ಅದು ತಿರುವೊಂದರ ಆಕಸ್ಮಿಕ
ಮನಸುಗಳ ಡಿಕ್ಕಿ
ನಡೆದ ಹಾದಿಯ ಬೆವರಿನ ವಾಸನೆ
ಮುಡಿದ ಹೂವಿನ ಘಮ
ತನ್ಮಯತೆಯನು
ನಮ್ಮೊಳಗೆ ಅರಳಿಸಿತ್ತು

ಬಿಗಿದ ತೆಕ್ಕೆ ಸಡಿಲಿಸಲೇ ಬೇಕು
ಉದುರಿ ಬಿದ್ದ ಹೂ ಎಸಳುಗಳು ಕೊಡವಿಕೊಂಡೆ
ಅಂಟಿದ
ಬೆವರು ಕಳಚುವ ಮಳೆಗೆ
ನಾನೂ ಕಾದೆ

ಬೇಡ. ತಂಗಳು ಬಿಡಿಸದಿರು
ಇರಲಿ ಬಿಡು ಮುದಿಯಾಗದೆ..
ಹಾಗೆ.

ನನಗೆ ನಾಳೆಗಳಲಿ ನಂಬಿಕೆಯಿದೆ
ಹಳಸಿದ ನಿನ್ನೆಗಳನು ತೆರೆಯಲಾರೆ

ಪ್ರೇಮವೆಂದೂ ಹೇರಲ್ಪಡುವುದಿಲ್ಲ

*********

About The Author

4 thoughts on “ಕಾವ್ಯಯಾನ”

  1. Wonderful,ಪ್ರೇಮವೆಂದೂ ಹೇರಲ್ಪಡುವುದೂ ಇಲ್ಲ, ಏರ್ಪಡಿಸಲೂ ಆಗದು, ಅದು ಘಟಿಸಬೇಕಷ್ಟೇ,

  2. ಅಧ್ಬುತ ಕವನದ ಸಾಲುಗಳು…ಪ್ರೇಮವೆಂದೂ ಯಾರ ಒತ್ತಡಕ್ಕೆ ಮಣಿದು ಬಸವಳಿಯಬಾರದು….ಅದು ತಾನಾಗೆ ಅರಳಬೇಕು…ಮನತಟ್ಟಿತು ಮೇಡಂ…..

  3. H. ನಾರಾಯಣ ಕಾಮತ್

    ಪ್ರೇಮ ಪ್ರೀತಿ ಸ್ನೇಹ ಸಲಿಗೆ
    ಹುಡುಕಿದರೆ ಸಿಗದು
    ಬಯಸಿದರೆ ಬರದು
    ಬಯಕೆ ಆದಾಗ
    ತಾನಾಗಿ ಬರುವುದು
    ಬಂದ ದಾರಿ ತಿಳಿಯದು
    ನಾಳೆಯ ಕಡೆಗೆ ನಡೆಸುವುದು

Leave a Reply

You cannot copy content of this page

Scroll to Top