ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನ ನೆನಪೆಂದರೆ…

Many flying business documents isolated on black background Papers flying in air in business concept

ವಸುಂಧರಾ ಕದಲೂರು

ಆಗ ನಿನ್ನ ನೆನಪೆಂದರೆ,

ಬೇಕಾದ ಮಳೆಯಂತೆ
ತುಂಬಿಕೊಳ್ಳಲು ಹಳ್ಳಕೊಳ್ಳ
ಜಲಾಗರ ಸಾಗರ;
ಮುತ್ತುಹವಳ ಸಂಗ್ರಹಾಗಾರ.

ಅಚ್ಚಬಿಳುಪಿನ ಕಾಗದದಲಿ
ನೆಚ್ಚಿನ ಅರ್ಥ ತುಂಬಿದ ಭಾವಕೋಶ
ಅಚ್ಚುಕಟ್ಟಾಗಿ ಅಚ್ಚು ಮಾಡಿಸಿದ
ಪದಕೋಶ..

ಈಗ ನಿನ್ನ ನೆನಪೆಂದರೆ,

ಅಕಾಲದಲ್ಲಿ ಮಳೆಗರೆದು ಆದ
ರಾಡಿ ರಸ್ತೆ
ಅರ್ಥಕೋಶದಲಿ ಸೇರಿಬಿಟ್ಟ
ಖಾಲಿ ಹಾಳೆ

********

About The Author

Leave a Reply

You cannot copy content of this page

Scroll to Top