ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭಾವನೆಗಳು

time lapse photography of river

ತೇಜಾವತಿ ಹೆಚ್.ಡಿ.

ಭಾವನೆಗಳೇ ಹಾಗೆ
ತುಸು ಆಸರೆ ಸಿಕ್ಕರೆ ಸಾಕು
ಲತೆಯಾಗಿ ಹಬ್ಬಲು
ಚೂರು ಸ್ಫೂರ್ತಿ ಸಾಕು
ವಾಹಿನಿಯಾಗಿ ಶರಧಿಯ ಸೇರಲು
ಹನಿಜಲದ ಸೆಲೆ ಸಾಕು
ಬೀಜ ಮೊಳೆತು ಅಂಕುರಿಸಲು

ನಿಖರ ಸ್ಥಳ ವೇಳೆಯ ಹಂಗಿಲ್ಲ
ಆದಿ ಅಂತ್ಯಗಳಿಲ್ಲ
ಬಣ್ಣ ರೂಪಗಳಿಲ್ಲ
ಲಿಂಗ ಭೇದಗಳಿಲ್ಲ…

ಮನಸು ಭಾವಗಡಲು
ಹೃದಯ ಮಿಡಿತದೊಡಲು
ಒರತೆ ಉಕ್ಕೇರಲು
ಹೊಂಗನಸ ಸಿಹಿಹೊನಲು..

ನಿಗ್ರಹಿಸಿದರೆ ಸತ್ತೇ ಹೋಗುವವು
ರೆಕ್ಕೆಬಂದರೆ ಹಾರಿ ಹೋಗುವವು
ಬಂದಷ್ಟು ಸಲೀಸಲ್ಲ ಹೋಗಲು
ಜನಿಸಿ ಮರಣಿಸುವವು ನಗಲು ಅಳಲು

************

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top