ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಕ್ಕವಕ್ಕಿಗಳು

ಕಮಲಾ ಹೆಮ್ಮಿಗೆ

೧. ನೆನಪಿದೆಯೆ ನಿಮಗೆ ಕಣವಿಯವರೆ

     ಜಯನಗರದ ಹಳಿ ದಾಟಿದರೆ

     ಹಳದೀ ಹೂವು ಚೆಲ್ಲಿದ ರಸ್ತೆ

     ‘ ಚೆಂಬೆಳಕು’! ಹಕ್ಕಿ ಗೂಡಂಥ ನಿಮ್ಮ ಮನೆ

     ಆಚೀಚೆ ಕೂತ ನೀವುಗಳು,ನಡುವೆ

     ಬೂದಿ ಮುಚ್ಚಿದ ಕೆಂಡದಂಥ ನಾನು….ಮಧ್ಯೆ ವ್ಯಸ್ತ,ಮೂಸಿನೋಡುವ ನಿಮ್ಮ ‘ಗೂಫಿ’ನಾಯಿ!……….             ಗುಟುಕರಿಸುತ್ತ ಚಹಾ,ಮಾತು,ಬದುಕಿನ ಪಾಡು…………………………         ಜsರ್ ಮಳೆಯಿದ್ದಲ್ಲಿ, ದಾಟಿಸುತ್ತಿದ್ದಿರಿ ಬ್ರಿಡ್ಜು,ಛತ್ರಿ ಹಿಡಿದು…..

೨.  ನಿಮ್ಮ ಅಧ್ಯಕ್ಷತೆಯಲ್ಲಿ ಮೈಸೂರಿನಲ್ಲೊಮ್ಮೆ

      ಓದಬೇಕಿತ್ತು ನಾನೂ,ಒಂದು ಕವಿತೆ

      ರೈಲಲ್ಲಿ ಒಂದೇ ಬೋಗಿ….ಧಡಖ್ ಧಡಖ್

      ಧಡಖ್ ಧಡಖ್….. ಮೆಲ್ಲಗೆ ಬಂದಿರಿ ಲಯಕೆ ತಕ್ಕಂತೆ..‌..

      ‘ ಮನಿಯವರು ನಿಮಗು ಬುತ್ತಿ ಕಟ್ಯಾರೆ’

ಎಂದಾಗ, ಒಣರೊಟ್ಟಿ ಬದಿಗೆ ಸರಿಸಿದ್ದೆ ನಾನು……

ನೀವು ನೀಡಿದಿರಿ ಚಪಾತಿ, ಮೊಸರನ್ನ ಮತ್ತು    ಹೆಚ್ಚಿಟ್ಟ ಹಣ್ಣಿನ

ವಾತ್ಸಲ್ಯದ ಹೋಳು,ಮಿನುಗಿತ್ತು ಕಣ್ಣು……

೩. ಕಳೆದಬಾರಿ,ಕಲ್ಯಾಣನಗರಕ್ಕೆ ಬಂದಾಗ

   ‘ ಕವಿನೆರಳು’! ನೀವೇ ಒಳಹೋಗಿ ಚಹ ತಂದಿರಿ.

    ‘ ಇವರಿಗೆ ಮಂಡೀನೋವು,ಸದ್ಯ ನನಗಿಲ್ಲ’ ….ನಕ್ಕಿರಿ…..

ಹೊರಡುವಾಗ ಅಚಾನಕ ಕಾಲಿಗೆರಗಿದೆ ನಾನು….

ಅಸ್ಪಷ್ಟ ಏನೋ ಉಲಿದಿರಿ,ತುಂಬು ಮನದಿಂದ ನೀವು!

೪. ಈಗ  ‘ಹಾರಿತು ಜಕ್ಕವಕ್ಕಿಗಳಲ್ಲೊಂದು’ ಎಂದಾರು,

 ಆಲಂಕರಿಕವಾಗಿ ಮಂದಿ! ಒಂಟಿಹಕ್ಕಿ ನೆನಪು ಹಾರೀತು

 ಆದರೆ ……..ನೀವು?

—–

   ಜsರ್ — ಒಂದುವೇಳೆ ,  ಕವಿನೆರಳು Twilight

(ಹಿರಿಯ ಲೇಖಕಿ ಶಾತಾದೇವಿ ಕಣವಿಯವರು ತೀರಿದ ಸಂದರ್ಭ)

      

About The Author

Leave a Reply

You cannot copy content of this page

Scroll to Top