ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

man and woman holding hands in silhouette photography

ಅಮೃತ ಎಂ ಡಿ

ಕಣ್ಮುಚ್ಚಿ ನೋವುಗಳನ್ನೇ ಸಹಿಸಿಕೊಳ್ಳುವೆ ಗೆಳೆಯ
ನಿನ್ನ ಹೆಸರಲ್ಲಿ ನನ್ನಯ ಉಸಿರುಂಟು ಗೆಳೆಯ

ಆಗಾಗ ಉಸಿರಾಡೋ ಗಾಳಿಯಲ್ಲಿ ನಿನ್ನಯ ಹೆಸರನ್ನೇ
ಹುಡುಕುವ ಹುಚ್ಚಾಟದ ಅತಿರೇಕವುಂಟು ಗೆಳೆಯ

ಶ್ರೀಗಂಧದ ಘಮಲು ಕೂಡ ಪೈಪೋಟಿ ನೀಡುತ್ತಿರುವಾಗ
ಚಂದದ ಮೋರೆಗೆ ಎಲ್ಲಿಲ್ಲದ ಅಂದವುಂಟು ಗೆಳೆಯ

ನಿನ್ನೊಲವ ನೆರಳಲ್ಲಿ ಮುಳ್ಳು ಹಾದಿಯು ಕೂಡ
ಹೂವಿನ ಹಾಸಿಗೆ ಆಗುವುದೆಂಬ ಆಸೆವುಂಟು ಗೆಳೆಯ

“ಅಮ್ಮು”ವಿನ ಸಂತೋಷದ ಪರಿಛಾಯೆಯು ನಿನ್ನ
ಸಂಪ್ರೀತಿಯ ಸಾಂಗತ್ಯದಲ್ಲೇ ಉಂಟು ಗೆಳೆಯ

************

About The Author

Leave a Reply

You cannot copy content of this page

Scroll to Top