ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನಾವು ಕಾರ್ಮಿಕರು ರಾಜು ದರ್ಗಾದವರ ಕಲ್ಲುಬಂಡೆ ತಲೆ ಮೇಲೆ ಹೊತ್ತು ಆಗಸದಗಲ ನಗುವ ಬಯಸಿ ಕಷ್ಟನಸ್ಟ ಪಕ್ಕಕ್ಕಿಟ್ಟು ಜೋಳಿಗೆಯಲ್ಲಿ ಕೂಸುಬಿಟ್ಟು ದೂರದ ಬೆಟ್ಟಕ್ಕೆ ಲಗ್ಗೆ ಜಡಿದು ಹಗಲುಗನಸು ಅದರೊಂದಿಗೆ ಬೆಸೆದು ಇರುಳು ಕಳೆದು, ಹಗಲು ಬರುವ ದಿಕ್ಕಿನಡಿಗೆ ಬಿಸಿಲುಬಾಗಿಲ ಬಡಿದು, ಗಟ-ಗಟ ಗಂಟಲ ಸಪ್ಪಳದಿ ಹೊಟ್ಟೆಯ ಹಸಿವನ್ನು ತಳಕು ಹಾಕಿದವರು ನಾವು ಕಾರ್ಮಿಕರು,ನಾವು ಕಾರ್ಮಿಕರು ಕೊಳಕುಬಟ್ಟೆ ಮೈಮೇಲೆ ಉಟ್ಟು ಮನದ ತುಂಬ ಪಿರುತಿ ಹೊಯ್ದು ಉಪ್ಪುನೀರು ಹರಿಯಲುಬಿಟ್ಟು ಎಚ್ಚತ್ತ ಕಣ್ಣು ಮಲಗದಂತೆ,ಬೆಚ್ಚನೆ ಕಣ್ಣೀರಿಗೆ ಕರಿಗಲ್ಲ ತೊಯ್ದು ಕಾರು,ಬಂಗ್ಲೆ ಆಸೆ ಗಂಟುಮಾಡಿ ಸುಟ್ಟುಬಿಟ್ಟು ಹೊತ್ತುಗಂಜಿ ಆಸೆಪಟ್ಟು ಕುದಿಯುವ ರೋಡಿಗೆ ಬರಿಗಾಲ ಎದೆಯ ಬಡಿದು ಹಳ್ಳಿಯಿಂದ ಮುಖ ತಿರುವಿ,ದುಡಿವ ಮೈಯ ಕೊಡವಿ, ಪಟ್ಟಣದ ಗರ್ಭವ ಸೇರಿ ಎತ್ತೆತ್ತರ ಕಟ್ಟಡದ ಅಂಗಾಲಲಿ ಬಗ್ಗಿ ನಡೆದು ಅಣಿಕಿಸಿಹೋಗುವ ಹೊತ್ತು ಕಳೆದವರು ನಾವು ಕಾರ್ಮಿಕರು, ನಾವು ಕಾರ್ಮಿಕರು *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಖಾಲಿಯಾಗುಳಿಸಿದವನು ಶಿವಲೀಲಾ ಹುಣಸಗಿ ಈಗೆಲ್ಲಿ ಮಾಯವಾದೆ ನಿನ್ನೊಡನಾಟದ ಬಿಸಿಯೊಳಗೆ ಬೀಸಿದಬ್ಬರದ ಬಿರುಗಾಳಿಯಲಿ ಸಿಲುಕಿ ಹೊಯ್ದಾಡುತಿಹೆ ದೇಹದ ಕಣಕಣದಲೂ ಬೆರೆತ ನೀನು ಬಯಸಿದಾಗ ಕೈ ಜಾರುವ ಮೀನು ಹೆಪ್ಪುಗಟ್ಟಿದ ನರಗಳಲಿ ನೆತ್ತರು ಹರಿಸಿ ನೀನಪ್ಪಿದಾಗ ಬಯಕೆ ಕಾಡಿತ್ತು ನಿನ್ನೊಳಗೊಂದಾಗುವ  ಕ್ಷಣದೆ  ಬಟಾಬಯಲು ಗಾಳಿಯ ಹುಯಿಲು ಮರುಚಣ ಮುತ್ತಿದ ಮೌನದ ಹೊರತಾಗೇನು ಉಳಿದಿಲ್ಲವಿಲ್ಲಿ ಕನಸಿಗೆ ಮುನ್ನುಡಿಯಾದವನು ಬೆನ್ನುಡಿಯಾಗಲಿಲ್ಲ ನನಸಿಗೆ ಇಲ್ಲೀಗ ಅದೇ ಕೋಣೆ ಅದೇ ಕನಸುಗಳು ಅದೇ ಹಾಸಿಗೆದಿಂಬುಗಳು ಮತ್ತೆ ಮರಳುವೆಯೇನು ಹಸಿವಾದಾಗ? ಎದೆಗೊರಗಿ ಮಲಗಿದವ ಹೇಳಿ ಹೋಗಬಾರದಿತ್ತೇನು ಪಿಸುಮಾತಿನಲಾದರೂ! *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಏಳನೇ ಅದ್ಯಾಯ ಕನ್ನಡ ಗಜಲ್ ಅಲ್ಲಿ ಉರ್ದು ಪದ ಬಳಕೆ ಕೆಲವೊಂದು ಗಜಲಗಳನ್ನು ಓದಿರುತ್ತೀರಿ… ಅವು ಹೇಗಿರುತ್ತವೆ ಎಂದರೆ ಮೊಹಬ್ಬತ್ತ, ಗೋರಿ, ಜಿಂದಾ,ಜಿಂದಗಿ, ಇಷ್ಕ, ಅವಾಜ್, ಪಿರ್, ಮುದ್ದಾಮ, ಖುದಾ, ಹಕಿಕತ್ ಮೊದಲಾದ ಉರ್ದು ಪದಗಳು ಆ ಕನ್ನಡದ ಗಜಲ್ ಅಲ್ಲಿ ಅಲ್ಲಲ್ಲಿ ನುಸುಳಿರುತ್ತವೆ. ಹೀಗೆ ಉರ್ದು ಮಿಶ್ರಿತ ಗಜಲ್ ಬರೀತಾ ಇದ್ದಿದ್ದು ಆರಂಭದಲ್ಲಿ ಒಬ್ಬರೇ ಖ್ಯಾತ ಗಜಲಕಾರರು. ಈಗ ನೋಡಿದರೆ ಅದೇ ರೀತಿಯ ಗಜಲ್ ಬರೆಯುತ್ತಿರುವವರು ನಮಗೆ ಹತ್ತು ಹನ್ನೆರಡು ಜನ ಸಿಗತಾರೆ, ಈ ಸಂಖ್ಯೆ ಇನ್ನೂ ಹೆಚ್ಚಾದರೂ ಸಹ ಹೆಚ್ಚಾಗಬಹುದು ಮತ್ತು ಅವರಲ್ಲಿ ಬಹುತೇಕರು ಇತ್ತೀಚೆಗೆ ಗಜಲ್ ಬರೆಯಲು ಆರಂಭಿಸಿದವರೇ ಆಗಿದ್ದಾರೆ. ಹಾಗಾದರೆ ಕನ್ನಡ ಗಜಲ್ ಅಲ್ಲಿ ಕೆಲವು ಉರ್ದು ಪದಗಳ ಬಳಕೆ ಸೂಕ್ತವೇ ಎಂಬುದು ತುಂಬಾ ಉದಯೋನ್ಮುಖ ಬರಹಗಾರರ ಪ್ರಶ್ನೆ ಆಗಿದೆ. ಈ ವಿಷಯದ ಉತ್ತರ ಮತ್ತು ಸಾಹಿತ್ಯದಲ್ಲಿ ಹೀಗೆ ಅನ್ಯಭಾಷೆಯ ಪದ ಬಳಕೆಯ ಅರಿವಿದ್ದೂ ನನಗೆ ಆ ಸ್ಪಷ್ಟವಾಗಿದ್ದರೂ ಇದನ್ನು ಹಲವಾರು ಖ್ಯಾತ ಗಜಲಕಾರರ ಬಳಿ ಪ್ರಶ್ನಿಸಿ ಚರ್ಚಿಸಿ ಅವರ ಅಭಿಪ್ರಾಯವನ್ನು ಸಹ ತಿಳಿದು ಸಂತಸವಾಯಿತು ಮತ್ತು ಅದೇ ಸಮಯಕ್ಕೆ ಇಂತಹ ಪದ ಬಳಕೆಯ ಬಗ್ಗೆಯೂ ಸಹ ತುಂಬಾ ಬರಹಗಾರರು ತಮ್ಮ ಬೇಜಾರನ್ನು ವ್ಯಕ್ತಪಡಿಸಿದರು. ಅದೊಂದು ವಿಭಿನ್ನ ಪ್ರಯೋಗವೇ? ಇದರ ವಿಷಯ ಇಷ್ಟೇ, ಇಂತಹ ಬೆಳವಣಿಗೆಗೆ ಕಾರಣ ಏನೆಂದರೆ ಮೊದಮೊದಲು ಹಾಗೆ ಗಜಲ್ ಬರೆಯುತ್ತಿದ್ದ ಆ ಖ್ಯಾತನಾಮರ ಗಜಲ್ ಓದುತ್ತಿದ್ದ ಬರಹಗಾರರು ಓದುತ್ತಾ ಹೋದಂತೆ ಅಂತಹ ಪದ ಬಳಕೆಯ ಕಡೆ ಶುರುವಾದ ಕುತೂಹಲ ಆಕರ್ಷಣೆಯಾಗಿ ಮಾರ್ಪಾಟ್ಟು ಏನೋ ಒಂಥರಾ ಚೆನ್ನಾಗಿ ಇದೆ ಅಲ್ವಾ, ವಿಭಿನ್ನ ಪ್ರಯೋಗ ಎಂದೆನಿಸಿ ನಾವು ಯಾಕೆ ಹಾಗೆ ಬರೆಯಬಾರದು ಅಂದುಕೊಂಡು ಬರೆಯತೊಡಗಿದ್ದಾರೆ. ಇನ್ನೂ ಕೆಲವರು ಹಾಗೆ ಉರ್ದು ಪದಗಳನ್ನು ಬಳಸುವುದೇ ಗಜಲ್ ಎಂದು ಮತ್ತು ಅದೇ ಅದರ ಲಕ್ಷಣ, ಹಾಗೆ ಬರೆಯುವುದೇ ಶ್ರೇಷ್ಠ ಎನ್ನುವ ಭ್ರಮೆಗೊಳಗಾಗಿದ್ದಾರೆ. ಇದಕ್ಕಾಗಿ ಹಿಂದಿ, ಉರ್ದು ಬಾರದಿದ್ದರೂ ಸಹ ಎಲ್ಲೆಲ್ಲಿಂದಲೋ ಯಾವುದೋ ಪದಗಳನ್ನು ಹೆಕ್ಕಿ ತಂದು ಅಲ್ಲಿ ಒಂದು ಕನ್ನಡ ಪದದ ಬದಲಾಗಿ ಇದನ್ನು ತೂರಿಸಿ ಬಿಡುತ್ತಾರೆ. ಹೀಗೆ ಮಾಡಿದ ತಕ್ಷಣ ಆ ಗಜಲ್ ತನ್ನ ಕಾವ್ಯಾತ್ಮಕ ಗುಣಗಳನ್ನು ಕಳೆದುಕೊಳ್ಳುತ್ತದೆ ಎನ್ನುವುದೇ ಅವರಿಗೆ ಗೊತ್ತಿರುವುದಿಲ್ಲ. ಇಂತಹ ಪದಗಳನ್ನು ತೂರಿಸಿರುವುದಲ್ಲದೆ ಆ ಉರ್ದು ಪದಗಳ ಅರ್ಥವನ್ನು ಗಜಲನ ಕೊನೆಯಲ್ಲಿ ಕೆಲವರು ನೀಡಿರುತ್ತಾರೆ. ಅಲ್ಲಿಗೆ ಈ ವಿಷಯ ಸ್ಪಷ್ಟವಾಗುತ್ತೆ ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ಅಭಾಸವಾಗುವ ಅಸಂಗತ ಪದಗಳನ್ನು ತುರುಕಿಸಲಾಗಿದೆ ಎನ್ನುವುದೇ ಅಲ್ಲಿ ಪರೋಕ್ಷ ವಿವರಣೆ ಆಗಿರುತ್ತದೆ. ಹಾಗಿದ್ದರೆ ಈ ತರಹ ಬಳಸುವುದು ಸರಿಯಾದ ಕ್ರಮ ಅಲ್ಲವೇ ಎನ್ನುವ ನಿಮ್ಮ ಪ್ರಶ್ನೆಗೆ ಹೌದು, ಅದು ಖಂಡಿತ ಸಲ್ಲದು ಎನ್ನುವುದೇ ಸಾಹಿತ್ಯದ ಅಂತಿಮ ಉತ್ತರವಾಗಿರುತ್ತದೆ. ಯಾವುದೇ ಭಾಷೆಯ ಯಾವುದೇ ಪ್ರಕಾರದ ಸಾಹಿತ್ಯವನ್ನು ತಗೊಳ್ಳಿ, ಅದು ಸದಾ ತನ್ನ ಭಾಷೆಗೆ ನಿಷ್ಠವಾಗಿರುತ್ತದೆ. ಉರ್ದು ಖವ್ವಾಲಿಗಳಲ್ಲಿ ಇಂಗ್ಲೀಷ್ ಪದಗಳು ಕಂಡು ಬರತಾವಾ, ಖಂಡಿತ ಇಲ್ಲ… ಅಂತೆಯೇ ಹಿಂದಿ ಗಜಲ್ ಅಲ್ಲಿ ತೆಲುಗು ಪದಗಳು ಬರತಾವಾ, ಸಾಧ್ಯವೇ ಇಲ್ಲ… ತಮಿಳು ಕಾವ್ಯದಲ್ಲಿ ಮರಾಠಿ ಪದಗಳು ಸ್ಥಳ ಆಕ್ರಮಿಸಿಕೊಳ್ಳುತ್ತಾವಾ???? ಖಂಡಿತ ಇವು ಯಾವುವು ಎಂದಿಗೂ ಸಾಧ್ಯ ಇಲ್ಲದ ಅಂಶಗಳು. ಯಾವುದೇ ಭಾಷೆಯ ಯಾವುದೇ ಸಾಹಿತ್ಯ ಪ್ರಕಾರವು ಇದನ್ನು ಒಪ್ಪುವುದಿಲ್ಲ. ಒಂದು ವೇಳೆ ಹಾಗಾದರೆ ಅದು ಆ ಸಾಹಿತ್ಯಕ್ಕೆ ಕೊಂಚ ಧಕ್ಕೆಯಾಗದಂತೆ ಮತ್ತು ಆ ಮೂಲಕ ತಡಬಡಾಯಿಸಿದಂತೆ ಅರ್ಥ. ಕಮರ್ಷಿಯಲ್ ಆದ ಚಿತ್ರ ಗೀತೆಗಳಲ್ಲಿ ಯಾವಾಗಲೋ ಎಂದೋ ಯಾವುದರಲ್ಲೋ ಒಮ್ಮೆ ಪ್ರಾಸಕ್ಕೋಸರವೋ ಅಥವಾ ಜನಪ್ರಿಯ ನುಡಿಗಟ್ಟು ಎಂತಲೋ ಬಳಸಬಹುದು. ಅದು ವಾಣಿಜ್ಯತ್ಮಾಕವಾಗಿ ಆ ಸೀಮಿತ ಹಾಡಿನ ಮಟ್ಟಿಗೆ ಮಾತ್ರ ಸರಿ ಎಂದರೂ ಅಷ್ಟು ತಕ್ಕುದಾದಲ್ಲ ಎಂದೇ ಹೇಳಬಹುದು ಪರಿಣಾಮಕಾರಿ ಬಳಕೆ ಯಾವುದು? ಇನ್ನೂ ಹೀಗೆ ಉರ್ದು ಬಳಕೆಯ ಕುರಿತು ಹೇಳುವುದಾದರೆ ಮೊಘಲರ ಕಾಲಘಟ್ಟದಲ್ಲಿ ಅವರ ಆಳ್ವಿಕೆಯ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಉರ್ದು ಜನ ಸಾಮಾನ್ಯರ ಭಾಷೆಯಾಗಿತ್ತೇನೋ ಎನ್ನುವುದು ಸರಿ ಅಷ್ಟೇ. ಆದರೆ ಇಂದು ಉರ್ದು ಎನ್ನುವುದು ಯಾವುದೋ ಪ್ರದೇಶದ ಅಥವಾ ಯಾವುದೋ ಊರಿನ ಹಾಗೂ ಹತ್ತು ಹಲವಾರು ಸಾಮಾನ್ಯ ಜನರು ಆಡುವ ಭಾಷೆಯಾಗಿ ಉಳಿದಿಲ್ಲ. ಅದು ಇಂದು ಒಂದು ಸಮುದಾಯದ ಜನರು ಮಾತ್ರ ಆಡುವ ಭಾಷೆಯಾಗಿ ಮಾತ್ರ ಭಾರತದಲ್ಲಿ ಪ್ರಚಲಿತದಲ್ಲಿದೆ. ಆದ್ದರಿಂದ ಹೀಗೆ ಒಂದು ಪಂಥ, ಮತದ ಭಾಷೆಯನ್ನು ಇನ್ನೊಂದು ಭಾಷೆಯಲ್ಲಿ ಬಳಸುವುದರಿಂದ ಅದನ್ನು ನೋಡುವ ದೃಷ್ಟಿಕೋನವು ಸಹ ಸಾಕಷ್ಟು ಜನರಲ್ಲಿ ಬದಲಾಗುತ್ತದೆ ಮತ್ತು ತನ್ನ ವಿಶಾಲ ವ್ಯಾಪ್ತಿಯನ್ನು ಮೀರಿ ಧೀರ್ಘವಧಿಯಲ್ಲಿ ಸಂಕುಚಿತಗೊಳ್ಳುತ್ತಾ ಹೋಗುತ್ತದೆ. ಸಾಹಿತ್ಯಕ್ಕೆ ಇಂತಹ ಬೇಧ ಎಂದೂ ಸಹ ಸಲ್ಲದು. ಅದಕ್ಕೆ ಅಂತಹ ತಡೆಗೋಡೆ ಹಾಕಕೂಡದು. ಆದ್ದರಿಂದ ಯಾರೋ ಬರೆದ ಹಾಗೆ ಇನ್ನೂ ಯಾರೋ ಅದನ್ನು ಹಿಂದೂ ಮುಂದೂ ನೋಡದೆ ಅನುಸರಿಸುವುದು ತರವಲ್ಲ. ಇಂತಹ ಮಿಶ್ರಿತ ಬರಹಗಳು ಆರಂಭದಲ್ಲಿ ಒಂದಿಷ್ಟು ಪರಿಣಾಮಕಾರಿ ಎನಿಸುವುದಾದರೂ ಅದರ ಪ್ರಭಾವ ಓದುಗರ ಮೇಲೆ ಬಹು ಬೇಗ ಕುಂದಿ ಹೋಗಿ ಬಿಡುತ್ತದೆ. ಭಾಷೆ ಎನ್ನುವ ಸಂವಹನ ಅದರ ವೈಶಾಲ್ಯತೆಯ ಮನೋಭಾವದಲ್ಲಿ ಉತ್ತಮ ಬಳಕೆ, ವಿಧಾನ ಮತ್ತು ತಂತ್ರಗಳನ್ನು ಆ ಒಂದು ಸಾಹಿತ್ಯದಲ್ಲಿ ಅಳವಡಿಸಿಕೊಂಡಿದ್ದರೆ ಅದು ಮನಸ್ಸು ಮುಟ್ಟಲು ಸರಳವಾಗಿರುತ್ತದೆ. ಭಾಷೆಯ ಚತುರತೆಯೊಂದಿಗೆ ಭಾವನೆಗಳ ಚಕಮಕಿಯಾದಾಗಲೇ ಅದರ ಹರಿವು ಸಹ ಸರಾಗವಾಗಿ ಮುಂದುವರಿಯಲು ಅನುಕೂಲ. ಸಾಹಿತ್ಯದ ಧ್ವನಿ ಕೇವಲ ಕನ್ನಡ ಭಾಷೆ ಅಂತಹ ಏನಲ್ಲ, ಅದು ಯಾವುದೇ ಭಾಷೆಯಾದರೂ ಸರಿ ಅದು ಸಾಹಿತ್ಯದ ಧ್ವನಿಯನ್ನು ಕ್ಷೀಣಿಸುವ, ಮೂಲ ಭಾಷೆಯನ್ನೆ ಕುಗ್ಗಿಸುವ ಬರಹವಾಗಿರಬಾರದು. ಒಂದು ಭಾಷೆ ಕೇವಲ ಅದು ಸಂವಹನ ಮಾಧ್ಯಮ ಮಾತ್ರ ಆಗಿರುವುದಿಲ್ಲ. ಪ್ರತಿ ಭಾಷೆಯು ತನ್ನ ಭಾಷೆಯಲ್ಲಿ ತನ್ನದೇ ಆದ ನೆಲ, ಜಲ, ಸಂಸ್ಕೃತಿ, ಸೊಗಡು, ಆಚರಣೆ, ಸಾಮಾಜಿಕ ಶಿಷ್ಟಾಚಾರ, ಕಟ್ಟುಪಾಡುಗಳು, ಆಚಾರ ವಿಚಾರ, ಆಹಾರ, ಜೀವನ ಕ್ರಮ, ಮಾನವೀಯ ಮೌಲ್ಯಗಳೂ ಇತರೆ ಮೊದಲಾದ ಬಹುಮುಖ್ಯ ಲಕ್ಷಣಗಳನ್ನು ಒಳಗೊಂಡು ಸಂಪದ್ಬರಿತವಾಗಿರುತ್ತದೆ. ಜೊತೆಗೆ ಒಂದನ್ನೊಂದು ಅವಲಂಬಿಸಿ ಪ್ರತಿಯೊಂದು ಅದರೊಂದಿಗೆ ತಳುಕು ಹಾಕಿಕೊಂಡು ರಾಗ ತಾಳ ಮೇಳಗಳು ಕೂಡಿಕೊಂಡು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಸಂಪರ್ಕ ಸೇತುವೆಯು ಆಗಿರುತ್ತದೆ. ಆದ್ದರಿಂದ ಆಕ್ರಮಣ ಕನ್ನಡದಂತಹ ವಿಶಾಲ ನುಡಿಗೆ ಮಾರಕವಲ್ಲದಿದ್ದರೂ ಇಲ್ಲಿನ ಸೊಗಡು ಅಂತಹ ಅನ್ಯಭಾಷೆಗಳಿಗೆ ಕಾಣಲು ಸಾಧ್ಯವಿರದ ಕಾರಣ ನಮ್ಮದು ಎನ್ನುವುದು ಸಹಜವಾಗಿಯೇ ಅರಗಿಸಿಕೊಳ್ಳಲು ಆಗಲಾರದಂತದ್ದು. ತಾಯ್ನಾಡಿಯ ಪ್ರೇರಣೆಯೇ ಬೇರೆ ತರಹ ಇರುತ್ತೆ. ಇತರೆ ಯಾವುದೇ ನುಡಿಯ ವರ್ತನೆ ಎಂದಿಗೂ ಅದರ ಮುಂದೆ ಕಳೆಗುಂದುವ ಅಂಶವೇ ಆಗಿದೆ. ಅಂತೆಯೇ ಗಜಲನ ಅಭಿವ್ಯಕ್ತಿ ಸೂಕ್ಷ್ಮ ಸಂವೇದನೆಶೀಲತೆ ಮತ್ತು ಸೃಜನಾತ್ಮಕ ಲಕ್ಷಣಗಳನ್ನು ಹೊಂದಲು ಕನ್ನಡ ಗಜಲಗಳ ಪ್ರತಿ ಪದವೂ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು ಒಂದು ಪದಕ್ಕೆ ಅದೇ ಅರ್ಥವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕಟ್ಟಿ ಕೊಡಬಲ್ಲಂತಹ ಐವತ್ತು ಬೇರೆ ಬೇರೆ ಪದಗಳು ಕನ್ನಡದಲ್ಲಿ ಇವೆ. ಇಷ್ಟು ವಿಸ್ತಾರವಾದ ಶಬ್ದ ಸಂಪತ್ತು ಇನ್ನೊಂದು ಭಾಷೆಯಲ್ಲಿ ಖಂಡಿತವಾಗಿಯೂ ಕಂಡು ಬರುವುದಿಲ್ಲ. ಆದ್ದರಿಂದ ಅಂತಹ ಅನಿವಾರ್ಯವೇ ಉದ್ಭವ ಆಗದ ಕಾರಣ ಕನ್ನಡ ಗಜಲಗಳು ಕನ್ನಡ ಗಜಲ್ ಎಂದೆನಿಸಿಕೊಳ್ಳಲು ಅದರ ಪ್ರತಿ ಪದವೂ ಸಹ ಕನ್ನಡಮಯವೇ ಆಗಿರಬೇಕು. ******** ಬಸವರಾಜ ಕಾಸೆ

ಗಝಲ್ ಲೋಕ Read Post »

ಕಥಾಗುಚ್ಛ

ಕಥಾಯಾನ

ಮಧುವಂತಿ ಅಂಜನಾ ಹೆಗಡೆ “ನೀನ್ಯಾಕೆ ಮದ್ವೆ ಆದೆ?” ರಜನಿ ಅವಿನಾಶನನ್ನು ಭೇಟಿಯಾದಾಗ ಕೇಳಿದ ಮೊದಲನೇ ಪ್ರಶ್ನೆ ಇದು. ಬೆಂಗಳೂರಿನ ಲಾ ಕಾಲೇಜೊಂದರ ಉಪನ್ಯಾಸಕ ಅವಿನಾಶ ಅವನ ಅಸಂಬದ್ಧ ಮಾತುಕತೆಗಳಿಂದ, ನಡೆವಳಿಕೆಯಿಂದ ರಜನಿಗೆ ಉಪನ್ಯಾಸಕ ಅಂತ ಅನ್ನಿಸುತ್ತಲೇ ಇರಲಿಲ್ಲ. ವಾರದ ಐದೂ ದಿನ ಬೆಳಗಿನ ಕ್ಲಾಸು ಮುಗಿಸಿ, ಊಟ ಮಾಡಿ ಮಲಗಿ ಎದ್ದವ ರಜನಿಗೊಂದು ಫೋನ್ ಮಾಡುವುದು ಅವಿನಾಶನ ದಿನಚರಿಗಳಲ್ಲೊಂದು. ಇವತ್ತು ಕ್ಲಾಸಲ್ಲಿ ಹಾಗಾಯ್ತು ಹೀಗಾಯ್ತು , ಹುಡುಗಿಯೊಬ್ಬಳು ಪಾಠ ಮಾಡುವಾಗ ನನ್ನನ್ನೇ ನೋಡ್ತಾ ಇದ್ಲು ಅಂತೆಲ್ಲ ಅವಿನಾಶ ಹೇಳುತ್ತಿದ್ದರೆ, “ಕ್ಲಾಸಿನಲ್ಲಿ ಪಾಠ ಮಾಡುವವನನ್ನ ನೋಡುವುದು ಕ್ಲಾಸ್ ರೂಮಿನ ನಿಯಮ ಮಾರಾಯ; ಅದಕ್ಕೆ ಲ್ಯಾಂಡ್ ಮಾರ್ಕ್ ಕೇಸುಗಳು ಬೇಕಿಲ್ಲ” ಎಂದು ಅವನ ಗರಿಗೆದರಿದ ಕನಸಿಗೆ ಪೂರ್ಣವಿರಾಮ ನೀಡುವುದು ರಜನಿಯ ದಿನಚರಿಯ ಭಾಗವಾಗಿತ್ತು ಕೂಡಾ. ಫ್ಯಾಮಿಲಿ ಲಾ ಅರೆದು ಕುಡಿದವನ ಹಾಗೆ ಮಾತನಾಡುತ್ತಿದ್ದ ಅವಿನಾಶನಿಗೆ ಕುಟುಂಬ ವ್ಯವಸ್ಥೆಯ ಕುರಿತಾಗಲೀ ಅಥವಾ ತಾನು ಪೂಜಿಸುವ ದೇವರ ಮೇಲೇ ಆಗಲಿ ಜಾಸ್ತಿ ಅಭಿಮಾನ-ಗೌರವಗಳು ಇರುವಂತೆ ರಜನಿಗೆ ಯಾವತ್ತೂ ಅನ್ನಿಸದೇ ಇರಲಿಕ್ಕೆ ಕಾರಣ ಅವನ ಮಾತನಾಡುವ ದಾಟಿಯೂ ಇರಬಹುದು. ಅವಳ ಮಾತಿನಲ್ಲಿ ಸ್ವಲ್ಪ ಕುತೂಹಲ ಕಾಣಿಸಿದರೂ “ನೀನೇನಕ್ಕೆ ಎಲ್ಲವನ್ನೂ ಕೆದಕ್ತೀಯಾ, ಹೇಳಿದಷ್ಟು ಅರ್ಥ ಮಾಡಿಕೊಂಡರೆ ಬೇಕಾದಷ್ಟಾಯ್ತು” ಎಂದು ಪ್ರತಿಕ್ರಿಯಿಸುತ್ತಿದ್ದ ಅವಿನಾಶನ ಆಕ್ರಮಣಕಾರಿ ಮನಸ್ಥಿತಿ ರಜನಿಗೆ ಅರ್ಥವೇ ಆಗದೇ ಒಂದು ವರ್ಷ ಕಳೆದಿತ್ತು ಅವರ ಸ್ನೇಹಕ್ಕೆ. ಅವಿನಾಶ ಫೇಸ್ ಬುಕ್ ನಲ್ಲಿ ಮದುವೆಯ ಕುರಿತು ಬರೆದ ಲೇಖನವೊಂದು ಯಾವುದೋ ಗ್ರೂಪ್ ನಲ್ಲಿ ಹರಿದಾಡಿದಾಗ “ನಾವ್ಯಾಕೆ ಕಡುಸಂಪ್ರದಾಯದ ಮನಸ್ಥಿತಿಯಿಂದ ಹೊರಗೆ ಬಂದು ಸಮಕಾಲೀನ ದೃಷ್ಟಿಕೋನದಲ್ಲಿ ಮದುವೆ-ಕುಟುಂಬಗಳ ಬಗ್ಗೆ ಚರ್ಚಿಸಬಾರದು?” ಎಂದು ರಜನಿ ಪ್ರತಿಕ್ರಿಯಿಸಿದ್ದು ಅವಿನಾಶನಿಗೆ ಆಕ್ಷೇಪಾರ್ಹ ಎನ್ನಿಸಿದ್ದು ಇನ್ಯಾರದೋ ಮುಖಾಂತರ ಗೊತ್ತಾಗಿತ್ತು ರಜನಿಗೆ. ಆಗಲೇ ರಜನಿ ಅವಿನಾಶನ ಫೇಸ್ ಬುಕ್ ಪ್ರೊಫೈಲ್ ತೆಗೆದು ನೋಡಿದ್ದು. ಅವನ ಓದಿಗೂ, ಮಾಡುವ ಕೆಲಸಕ್ಕೂ, ಆಸಕ್ತಿ-ಅಭಿರುಚಿಗಳಿಗೂ, ಜೀವನದ ಸ್ಥಿತಿಗತಿಗಳಿಗೂ ಹೊಂದಾಣಿಕೆಯೇ ಆಗದಂತೆ ಚಲ್ಲಾಪಿಲ್ಲಿಯಾಗಿ ಪ್ರೊಫೈಲ್ ತುಂಬಾ ಬಿದ್ದಿದ್ದ ಫೋಟೋಗಳು, ಅಪ್ ಡೇಟ್ ಗಳು ಅವನನ್ನೊಬ್ಬ ವಿಲಕ್ಷಣ ಜೀವಿಯಂತೆ ಚಿತ್ರಿಸುವಲ್ಲಿ ಸಫಲವಾಗಿದ್ದವು. ಅನಾಸಕ್ತಿಯಿಂದ ಕಣ್ಣಾಡಿಸುತ್ತಿದ್ದವಳಿಗೆ ಗಮನ ಸೆಳೆದದ್ದು ಇವೆಲ್ಲವುಗಳ ಮಧ್ಯೆ ಶೇರ್ ಆಗಿದ್ದ ಒಂದು ಭೈರವಿ ಭಜನೆ. ಹತ್ತು ನಿಮಿಷದ ವಿಡಿಯೋ ನೋಡಿದವಳು, ಮೆಸೆಂಜರ್ ನಲ್ಲಿ ಅವಿನಾಶ್ ರಾವ್ ಎಂದು ಹುಡುಕಿ “ನಿಮ್ಮ ಭೈರವಿಯ ವಿಡಿಯೋ ತುಂಬಾ ಇಷ್ಟವಾಯ್ತು; ನಾನು ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದು ನಿಮಗೆ ಇಷ್ಟವಾದಂತಿಲ್ಲ ಕ್ಷಮಿಸಿ” ಎಂದು ಮೆಸೇಜ್ ಕಳಿಸಿ, ಜೊತೆಗೆ ರಿಕ್ವೆಸ್ಟ್ ಕಳಿಸಿ ಹಾಸಿಗೆಯ ಮೇಲೆ ಅಡ್ಡಾದವಳಿಗೆ ಎಚ್ಚರವಾಗಿದ್ದು ಅಮ್ಮನ ಫೋನ್ ಬಂದಾಗ. “ಇವತ್ತು ಮಾರುತಿ ದೇವಸ್ಥಾನದಲ್ಲಿ ನಿನ್ನ ಹೆಸರಿನ ಪೂಜೆ ಇತ್ತು; ಮೂವತ್ತು ವರ್ಷವಾಯಿತು ಕಣಮ್ಮ ನೀನು ಹುಟ್ಟಿ, ಇನ್ನಾದರೂ ಮದುವೆ ಬಗ್ಗೆ ಯೋಚನೆ ಮಾಡಬಾರದಾ?” ಎಂದಳು ಅಮ್ಮ. ಅಮ್ಮ ಕಳೆದ ವರ್ಷ ವೈಶಾಖ ಪಾಡ್ಯಕ್ಕೂ ‘ನಿನಗೆ ಇಪ್ಪತ್ತೊಂಬತ್ತು ತುಂಬಿತು ಇನ್ನಾದರೂ ಮದುವೆ ಆಗು’ ಅಂದಿದ್ದು ನೆನಪಿದೆ ರಜನಿಗೆ. ಓದು ಮುಗಿದ ದಿನದಿಂದ “ಇನ್ನು ರಜನಿಗೆ ಒಂದು ಒಳ್ಳೇ ಗಂಡು ಹುಡುಕಿ ಮದುವೆ ಮಾಡಿದರೆ ಜವಾಬ್ದಾರಿ ಕಳೀತು” ಅಂತ ಹೇಳುತ್ತಲೇ ಬಂದಿರುವ ಅಮ್ಮನಿಗೆ, “ನಾನೆಂದರೆ ಯಾಕೆ ಜವಾಬ್ದಾರಿ ನಿನಗೆ, ಪ್ರೀತಿ ಎಲ್ಲಿಗೆ ಹೋಯಿತು?” ಎಂದು ಕೇಳಿಬಿಡುವ ಮನಸ್ಸು ರಜನಿಗೆ. ಚಿಕ್ಕವಳಿದ್ದಾಗಲೇ ಅಪ್ಪನ ಕಣ್ಣು ತಪ್ಪಿಸಿ ರೊಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತಿದ್ದ ಅವಳಿಗೆ ಮದುವೆ, ಮಕ್ಕಳು, ಸಂಸಾರ ಎಲ್ಲ ಸಲೀಸು ಎಂಬ ಭ್ರಮೆ ತೀರಿದ್ದು ಕೆಲಸಕ್ಕೆ ಸೇರಿದಾಗಲೇ. ಹೊಸ ದಿನಕ್ಕೊಂದು ಹೊಸ ಸುಂದರ ಅನುಭೂತಿ ದೊರಕಿಸುತ್ತಿದ್ದ ಬದುಕು ಅಕ್ಕಪಕ್ಕದ ಬದುಕುಗಳ ಅನುಭವಗಳಿಗೆ ದಕ್ಕುತ್ತ ಜಡವಾಗುತ್ತ ಹೋಗಿದ್ದಕ್ಕೆ ಅವಳಿಗೆ ಬೇಸರವಿದೆ. ಎಂಟು ವರ್ಷಗಳಿಂದ ಅಮ್ಮನ ಅದೇ ಜವಾಬ್ದಾರಿಯ ಮಾತು ಕೇಳುತ್ತಾ ಬಂದಿರುವ ರಜನಿಗೆ ಈಗೀಗ ಸಂಬಂಧಗಳೆಲ್ಲವೂ ಬಣ್ಣ ಬದಲಾಯಿಸಿ, ಜವಾಬ್ದಾರಿಯಾಗಿ ರೂಪವನ್ನೂ ಬದಲಾಯಿಸಿ ಬರಿದಾಗುತ್ತವೆ ಎನ್ನುವ ಯೋಚನೆ ಭಯ ಹುಟ್ಟಿಸುತ್ತದೆ. ನನಗೆ ಮದುವೆ ಆಗುವ ಯಾವುದೇ ಉದ್ದೇಶವಿಲ್ಲ ಎಂದು ಅಮ್ಮನಿಗೆ ಹೇಳಿಬಿಡಬೇಕು ಅಂತ ಯೋಚಿಸುತ್ತಾ ಕುಳಿತಿದ್ದ ಒಂದು ಸಂಜೆ ಅವಿನಾಶನ ಮೆಸೇಜು, “ಬಿಡುವಿದ್ದಾಗ ಫೋನ್ ಮಾಡಿ, ಮಾತನಾಡೋಣ” ಎಂದು ನಂಬರ್ ಕೊಟ್ಟಿದ್ದ. ಹಾಗೆ ಶುರುವಾದ ಅವರಿಬ್ಬರ ಸ್ನೇಹ ವಿಚಿತ್ರವಾಗಿಯೇ ಓಡುತ್ತಿತ್ತು. ಪ್ರೀತಿಯ ಮಾತುಗಳಿಗೆಲ್ಲ ವ್ಯಂಗ್ಯವಾಗಿಯೋ, ಕುಹಕದಿಂದಲೋ ಪ್ರತಿಕ್ರಿಯಿಸುತ್ತಿದ್ದ ಅವಿನಾಶ ಯಾವುದೋ ನಿರಾಶೆ-ತಲ್ಲಣಗಳ ಸ್ಥಿತ್ಯಂತರಕ್ಕಾಗಿ ಹೋರಾಡುತ್ತಿರುವಂತೆ ಭಾಸವಾಗುತ್ತಿದ್ದ. “ಸಾಕು ಎನ್ನಿಸುವಷ್ಟು ಸಿಗದೇ ಇರುವುದರ ಮೇಲೆ ಮನುಷ್ಯನಿಗೆ ಸಾಯುವವರೆಗೂ ಆಸೆ ಇರುತ್ತೆ ಕಣೇ” ಎನ್ನುತ್ತಾ ಎಳೆಪ್ರಾಯದ ಹುಡುಗಿಯರ ಎದೆಯ ಬಗ್ಗೆ ಮಾತಾಡುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ಯಾವುದೋ ಕೇಸ್ ಬಗ್ಗೆ ಮಾಹಿತಿ ಬೇಕೆಂದು ತನ್ನ ಡೆಸ್ಕಿಗೆ ಬಂದಾಗ ತಾನವಳ ಎದೆ ನೋಡಿದ್ದು, ಅವಳಿಗೆ ಅದು ಗೊತ್ತಾಗಿ “ಏನ್ಸಾರ್, ಯಾವ ಬಣ್ಣದ ಬ್ರಾ ಹಾಕಿದೀನಿ ಅಂತ ನೋಡ್ತಾ ಇದೀರಾ ಅಂತ ಕಣ್ಣು ಮಿಟಕಿಸಿದಳು; ಈಗಿನ ಕಾಲದ ಹುಡುಗೀರು ತುಂಬಾ ಫಾಸ್ಟ್” ಅಂತೆಲ್ಲ ಕಿರಿಕಿರಿಯಾಗುವಂತೆ ಮಾತನಾಡುವಾಗ ಇವನಿಗೆ ಕೌನ್ಸೆಲಿಂಗ್ ಅಗತ್ಯವಿದೆ ಎನ್ನಿಸುತ್ತಿತ್ತು ರಜನಿಗೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಐವತ್ತು ವರುಷದ ಗಂಡಸೊಬ್ಬ ಹುಡುಗಿಯರ ಎದೆ, ಬ್ರಾ ಬಗ್ಗೆ ಮಾತನಾಡುವಾಗ ಮದುವೆಯ ಬಗ್ಗೆ ಇರುವ ಆಸಕ್ತಿ ಗೌರವಗಳೆಲ್ಲ ಇನ್ನಷ್ಟು ಕಡಿಮೆಯಾಗುತ್ತಿದ್ದವು. ಒಂದಿನ ಕ್ಲಾಸ್ ಮುಗಿಸಿದವನೇ ಫೋನ್ ಮಾಡಿ, “ಈ ವೀಕೆಂಡ್ ಚೌಡಯ್ಯದಲ್ಲೊಂದು ಒಳ್ಳೆ ಸಂಗೀತ ಕಾರ್ಯಕ್ರಮ ಇದೆ, ಎರಡು ಪಾಸ್ ಇದೆ; ಎಂಟಿಆರ್ ನಲ್ಲಿ ನಿಂಜೊತೆ ಊಟ ಮಾಡಬೇಕು ನಾನು; ಹೇಳೋದು ಮರೆತಿದ್ದೆ, ಆವತ್ತೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ಯಲ್ಲ ಹಳದಿಸೀರೇದು, ಆ ಸೀರೆ ಉಟ್ಕೊಂಡು ಬಾ ಚೆನ್ನಾಗಿ ಒಪ್ಪುತ್ತೆ ನಿಂಗೆ; ಆ ಬಳೆ ಕೂಡಾ ಚೆನ್ನಾಗಿದೆ ಕಣೇ, ನೀ ಬಳೆ ಹಾಕಿದ್ದನ್ನು ನೋಡಿಯೇ ಇರಲಿಲ್ಲ ನಾನು” ಎಂದ. ಪರಿಚಯವಾಗಿ ಒಂದು ವರ್ಷವಾಗಿದ್ದರೂ ಒಮ್ಮೆಯೂ ಭೇಟಿಯಾಗಲು ಆಸಕ್ತಿ ತೋರಿಸದಿದ್ದ ಅವಿನಾಶ ಇದ್ದಕ್ಕಿದ್ದಂತೆ ಸಂಗೀತ ಕಾರ್ಯಕ್ರಮಕ್ಕೆ ಹೋಗೋಣ ಎಂದಿದ್ದು, ನಿಂಜೊತೆ ಊಟ ಮಾಡಬೇಕು ಎಂದಿದ್ದು, ತನ್ನ ಬಗ್ಗೆ ಯಾವತ್ತೂ ಒಳ್ಳೆಯ ಮಾತುಗಳನ್ನೇ ಆಡದ ಮನುಷ್ಯ ಸೀರೆ, ಬಳೆಗಳ ಬಗ್ಗೆ ಮಾತಾಡಿದ್ದು! ತಾನು ಗಮನಿಸಿಯೇ ಇರದ ಅವಿನಾಶನ ಇನ್ನೊಂದು ಮುಖವೆನ್ನಿಸಿತು ರಜನಿಗೆ. ಅಷ್ಟಕ್ಕೂ ನಾವು ಬದುಕಿನಲ್ಲಿ ಕಳೆದುಕೊಳ್ಳುವುದು ಗಮನಕ್ಕೆ ಬಾರದವುಗಳನ್ನೇ ಅಲ್ಲವೇ! ಫೋಟೋಗಳಲ್ಲಿ, ಮಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಸುಂದರವಾಗಿದ್ದಾನೆ ಅನ್ನಿಸಿತು ಭೇಟಿಯಾದಾಗ. ಅಲ್ಲಲ್ಲಿ ಬೆಳ್ಳಗಾದ ಗಡ್ಡದ ಮೇಲೆ ಕೈಯಾಡಿಸುತ್ತ ವಿಶ್ ಮಾಡಿದವನ ಕಣ್ಣುಗಳು ಹೊಳೆದವು. “ಹೋಗ್ಲಿ, ಹೆಂಡತಿ ಮಕ್ಕಳ ಫೋಟೋವನ್ನಾದರೂ ತೋರಿಸು ಮಾರಾಯ” ಎಂದಿದ್ದಕ್ಕೆ, ಮುದ್ದಾಗಿ ನಗುತ್ತ “ಯಾಕೆ ನನ್ನ ಮದ್ವೆ ಹಿಂದೆ ಬಿದ್ದಿದೀಯಾ, ನೀ ಯಾಕೆ ಮದ್ವೆ ಆಗಲಿಲ್ಲ ಅದನ್ನ ಹೇಳು” ಎಂದ. ನಿನ್ನಂಥ ಗಂಡಸು ಸಿಗಲಿಲ್ಲ ಎಂದು ರೇಗಿಸಬೇಕೆಂದುಕೊಂಡ ರಜನಿ, “ಯಾಕೋ ಬಂಧನಗಳ ಬಗ್ಗೆ ಆಸಕ್ತಿ ಉಳಿದಿಲ್ಲ” ಎಂದು ಸುಮ್ಮನಾದಳು. ಫ್ರೆಂಚ್ ಸಿನೇಮಾಗಳಿಂದ ಹಿಡಿದು ಪುರಂದರದಾಸರ ಕೀರ್ತನೆಗಳವರೆಗೆ ನಿರರ್ಗಳವಾಗಿ ಮಾತನಾಡುತ್ತ ಊಟ ಮುಗಿಸಿದ ಅವಿನಾಶ ಸಿಗರೇಟು ಅಂಟಿಸುತ್ತ, “ನಾನು ಮದುವೆಯಾದಾಗ ನನಗೆ ನಲವತ್ತು. ದೇಹಕ್ಕೆ ಒಂದು ಹೆಣ್ಣು ಬೇಕಿತ್ತು ಅದಕ್ಕೇ ಮದುವೆ ಆದೆ” ಎಂದ. ಬಣ್ಣದ ಮಾತುಗಳಿಲ್ಲದ ಅವನ ಕಣ್ಣುಗಳೊಳಗಿನ ಪ್ರಾಮಾಣಿಕತೆ ರಜನಿಯನ್ನು ಕಲಕಿತು; ಯಾರದೋ ಹೃದಯದ ಸತ್ಯದ ತುಣುಕೊಂದು ಇನ್ಯಾರದೋ ಫೇಸ್ ಬುಕ್ ಗೋಡೆಗೆ ಅಂಟಿಕೊಂಡಂತೆ! ಅವಿನಾಶ ಹುಟ್ಟಿದ್ದು ಶಿವಮೊಗ್ಗದ ಹತ್ತಿರದ ಹಳ್ಳಿಯೊಂದರಲ್ಲಿ. ಬಡತನಕ್ಕೆ ದಣಿದು ಅಮ್ಮ ತೀರಿಕೊಂಡಾಗ ಇವನಿನ್ನೂ ಹತ್ತನೇ ಕ್ಲಾಸು ಮುಗಿಸಿದ್ದ. ನಾಲ್ವರು ಹೆಣ್ಣುಮಕ್ಕಳ ಮದುವೆ ಮಾಡಿ ಸೋತಿದ್ದ ಅಪ್ಪ ಅವಿನಾಶನಿಗೂ, ಅವನ ಅಣ್ಣನಿಗೂ ಮುಂದೆ ಓದಿಸಲಾರದಷ್ಟು ಸಾಲದಲ್ಲಿದ್ದ. ಆಗ ಅವಿನಾಶನಿಗೆ ದಾರಿ ತೋರಿಸಿದ್ದು ಹೈಸ್ಕೂಲ್ ಹೆಡ್ ಮಾಸ್ಟರ್ ಅವಧಾನಿಯವರು. ಅವಧಾನಿಯವರ ವಯಸ್ಸಾದ ಅಕ್ಕನನ್ನು ನೋಡಿಕೊಳ್ಳಲೆಂದು ಬೆಂಗಳೂರಿಗೆ ಬಂದವ ಇಲ್ಲೇ ಕಾನೂನು ಪದವಿ ಮುಗಿಸಿ, ಸ್ಕಾಲರ್ ಶಿಪ್ ನಲ್ಲೇ ಮಾಸ್ಟರ್ಸ್ ಮುಗಿಸಿ ಕೆಲಸ ಹಿಡಿಯುವವರೆಗೂ ನೋಡಿದ್ದು ಸಾವು ನೋವುಗಳನ್ನ. ಅವಧಾನಿಯವರ ಅಕ್ಕ ತೀರಿಕೊಂಡಮೇಲೆ ಅಮೆರಿಕಾಲ್ಲಿದ್ದ ಮಗ ಬಂದು ಇಲ್ಲಿಯ ಆಸ್ತಿಗಳನ್ನೆಲ್ಲ ಮಾರಿ ರಾಜಾಜಿನಗರದ ಹಳೆಯ ಮನೆಯೊಂದನ್ನು ಅವಿನಾಶನಿಗೆ ಬಿಟ್ಟು ಹೋಗಿದ್ದ. ವಠಾರದಂತೆ ಅಂಟಿಕೊಂಡ ಮನೆಗಳ ಮಧ್ಯದ ಮನೆಯೊಂದರಲ್ಲಿ ಅವಳ ಅಮ್ಮನೊಂದಿಗೆ ವಾಸಿಸುತ್ತಿದ್ದವಳು ಸುಷ್ಮಾ. ಮೂವರು ಹೆಣ್ಣುಮಕ್ಕಳಲ್ಲಿ ಕೊನೆಯವಳಾಗಿದ್ದ ಸುಷ್ಮಾ ಚಿಕ್ಕಬಳ್ಳಾಪುರದ ಪ್ರಾಥಮಿಕ ಶಾಲೆಯೊಂದರ ಟೀಚರಾಗಿದ್ದವಳು ಮನೆಗೆ ಬರುತ್ತಿದ್ದದ್ದು ಶನಿವಾರದ ಸಂಜೆ. ಎರಡು ಬಿಯರ್ ಕುಡಿದು ಒಬ್ಬನೇ ಕುಳಿತು ಪುಸ್ತಕ ಓದುತ್ತಲೋ, ಸಿನೆಮಾ ನೋಡುತ್ತಲೋ ಕಾಲ ಕಳೆಯುತ್ತಿದ್ದ ಅವಿನಾಶನಿಗೆ ಅವಳಮ್ಮ ಕಳುಹಿಸುತ್ತಿದ್ದ ಒಬ್ಬಟ್ಟನ್ನೋ, ಕಜ್ಜಾಯವನ್ನೋ ಕೊಡಲಿಕ್ಕೆಂದು ಬಂದವಳು ಇವನಲ್ಲಿ ಆಸೆ ಹುಟ್ಟಿಸಲಾರಂಭಿಸಿದಳು. ಸುಷ್ಮಾ ಮೂವತ್ತೈದಾದರೂ ಮದುವೆಯಾಗದೇ ಉಳಿದಿದ್ದು ಅವಳ ಸಾಧಾರಣ ರೂಪದಿಂದಾಗಿ. ಅಕ್ಕಂದಿರ ಮದುವೆಗೆಂದು ಮಾಡಿದ್ದ ಸಾಲ ತೀರಿಸುವಷ್ಟರಲ್ಲಿ ಅವಳ ಅಪ್ಪ ತೀರಿಕೊಂಡಿದ್ದ. “ಅವಳ ಅಮ್ಮನಿಗೆ ನಾನು ಮಗಳಿಗೆ ತಕ್ಕ ವರ ಎನ್ನಿಸಿರಬಹುದು. ಇವಳು ನಮ್ಮನೆಗೆ ಬರುವಾಗ ಬ್ರಾ ಹಾಕ್ತಾನೇ ಇರಲಿಲ್ಲ ಗೊತ್ತಾ. ಒಬ್ಬಟ್ಟಿನ ನೆಪದಲ್ಲಿ ನನ್ನ ಮೈ ಕೈ ಮುಟ್ಟುತ್ತಾ ಅವಳು ನನ್ನ ಕೆರಳಿಸಲಿಕ್ಕೆ ಪ್ರಯತ್ನಿಸಿದ್ದು ನನಗೆ ತಿಳಿದಿಲ್ಲವೆಂದೇ ಈಗಲೂ ಅಂದುಕೊಂಡಿದ್ದಾಳೆ. ನಾನೂ ಹೇಳುವುದಿಲ್ಲ ಬಿಡು. ಸುಳ್ಳುಗಳೇ ಸಂಬಂಧವನ್ನು ಸಲಹುತ್ತವೆ ಒಮ್ಮೊಮ್ಮೆ. ಅವುಗಳಿಂದ ಬಿಡಿಸಿಕೊಂಡ ಕ್ಷಣಕ್ಕೆ ಸಂಬಂಧಗಳೂ ಬಿಡಿಸಿಕೊಂಡು ದೂರಾಗಿಬಿಡಬಹುದು. ಒಮ್ಮೆ ಬಂಧನಕ್ಕೆ ಬಿದ್ದ ಮನುಷ್ಯ ಎದ್ದು ಓಡುವುದಾದರೂ ಎಲ್ಲಿಗೆ ಹೇಳು. ನೀನೂ ಅಷ್ಟೇ ನನ್ನಿಂದ ತಪ್ಪಿಸಿಕೊಳ್ಳಲಾರೆ. ನಿನಗೆ ಮಧುವಂತಿ ಅಂತ ಹೆಸರಿಡಬೇಕಿತ್ತು ಕಣೇ. ಇನ್ನೊಂದಿನ ಹೇಳ್ತೀನಿ ನಿಂಗೆ ಮಧುವಂತಿ ರಾಗದ ಬಗ್ಗೆ. ಬಾ ಹೊರಡೋಣ” ಎನ್ನುತ್ತಾ ಹೆಗಲು ಬಳಸಿದ. ಮುಸ್ಸಂಜೆಯ ರಾಗಗಳೆಲ್ಲ ಒಂದೊಂದಾಗಿ ಹೆಜ್ಜೆಹಿಡಿದವು. ********

ಕಥಾಯಾನ Read Post »

ಇತರೆ

ಸಿನಿಮಾ

ಥಪ್ಪಡ್ ಮಡದೀಯ ಬಡಿದಾನ…   ಮಡದೀಯ ಬಡಿದಾನ…  ಈಚೆಗೆ ‘ಥಪ್ಪಡ್’ ಎಂಬ ಹಿಂದಿ ಸಿನೆಮಾ ನೋಡಿದೆ. ಕೇವಲ ‘ಒಂದು ಏಟು’ ಎಂದು ನಿರ್ಲಕ್ಷ್ಯ ತೋರಿ ಮರೆತುಬಿಡುವ ಪ್ರಸಂಗವನ್ನು ‘ಹೆಣ್ಣಿನ ಆತ್ಮಗೌರವ’ದ ಹೆಸರಿನಲ್ಲಿ ತೆರೆಯ ಮೇಲೆ ತೋರಿಸಿರುವ ರೀತಿ ಸ್ತ್ರೀಕುಲದ ಆತ್ಮಸಾಕ್ಷಿಯಂತಿದೆ. ಸಂಕುಚಿತ ಸಮಾಜಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ. ನಿಜಕ್ಕೂ ಈ ಸಿನೆಮಾ ಸೂಕ್ಷ್ಮವಾಗಿ ಸಮುದಾಯಕ್ಕೆ ದಾಟಿಸುವ ಸಂದೇಶ ಇದೆಯಲ್ಲಾ ಅದು ಅದ್ಭುತ..!   ಜನಪದ ಗೀತೆಯೊಂದಿದೆ,    “ಮಡದೀಯ ಬಡಿದಾನ ಮನದೊಳಗೆ   ಮರುಗ್ಯಾನ, ಒಳಹೋಗಿ ಸೆರಗ ಹಿಡಿದು   ತಾ ಕೇಳಾನ ನಾ ಹೆಚ್ಚೋ ನಿನ್ನ ತವರು ಹೆಚ್ಚೋ…”       ಜನಪದ ಗೀತೆಯ ಮಾತಿಗೇ ಬರೋಣ. ಹೆಂಡತಿಗೆ ಯಾವುದೋ ಮಾತಿಗೋ, ಕಾರಣಕ್ಕೋ ಹೊಡೆದು ಬಿಡುವ ಗಂಡನು ಅನಂತರ ಸಮಜಾಯಿಷಿ ಕೊಡಲಿಕ್ಕೋ ಅಥವಾ ಅವಳನ್ನು ರಮಿಸಲಿಕ್ಕೋ ಆಕೆ ಬಳಿಹೋದಾಗಿನ ಪ್ರಸಂಗದ ವಿವರಣೆ ಇಲ್ಲಿದೆ.    ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಜಾಯಮಾನ ಉಳ್ಳ ಸಮಾಜದವರಾದ ನಾವು, ಹೆಣ್ಣಿನ ಮನದಾಳದ ಭಾವನೆಗಳಿಗೂ ನಮ್ಮದೇ ಬಣ್ಣ ಕಟ್ಟುವವರು. ಈ ಹಾಡೂ ಅಂತೆಯೇ.. ಹೆಂಡತಿಗೆ ಬಡಿದ ಗಂಡನಿಗೆ ತನ್ನ ಬಡಿತದಿಂದ ಆಕೆ ಮುನಿದುಕೊಂಡಿದ್ದರೆ, ಸಿಟ್ಟಿಗೆದ್ದಿದ್ದರೆ ಆಕೆ ತವರನ್ನು ನೆನೆದಿರಬಹುದು ಎಂದು ಯೋಚಿಸುವಂತೆ ಮಾಡಿಸುತ್ತದೆ. ಇದಕ್ಕೇನು ಹೇಳುವುದು? ಇದು ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡಿರುವ ಬಗೆ ಎಂದು ಹೇಳಬಹುದಷ್ಟೇ. ಆದರೆ  ತವರಿನಲ್ಲಿ ಇದಕ್ಕೂ ನಿಕೃಷ್ಟವಾದ ಬದುಕು ಆಕೆಯದಿದ್ದರೆ  ಖಂಡಿತ ತವರನ್ನು ಆಕೆ ನೆನೆದಿರುತ್ತಾಳೆಯೇ..? ಹಾಗೆಯೇ ಮೊದಲ ಸಾಲಿನಲ್ಲಿರುವ ‘ಮಡದೀಯ ಬಡಿದಾನ’ ಎಂಬಲ್ಲಿ ಬಳಕೆಯಾಗಿರುವ ‘ಬಡಿದಾನ’ ಪದವು ಕೇಳಲು ಎಷ್ಟು ಕಠೋರವಾಗಿದೆ. ದನಕ್ಕೆ ಬಡಿದ ಹಾಗೆ.., ಸುತ್ತಿಗೆ ಬಡಿದ ಹಾಗೆ.., ಬಡಿದು ಬಿಸ್ಹಾಕು..,ಇಲ್ಲೆಲ್ಲಾ ಬಡಿದು ಎನ್ನುವುದು ಬಹಳ ಘೋರವಾದ ಅತೀ ಕಠಿಣತಮ ಶಬ್ಧಾರ್ಥವಾಗಿ ಪ್ರಯೋಗವಾಗಿದೆ. ಬಡಿಯುವುದು ಗಂಡಿನ ಜನ್ಮಸಿದ್ಧ ಹಕ್ಕು ಹಾಗೂ ಬಡಿಸಿಕೊಳ್ಳುವುದು ಹೆಣ್ಣಿನ ಹಣೆಬರಹ ಎಂಬುದು ಸಮಾಜದ ಸೃಜನೆಯಾಗಿರುವಾಗ ಗಂಡನಾದವನು ಬಡಿಯದೇ ಮತ್ತೇನು ಮಾಡಿಯಾನು?! ಮಡದಿಯೂ ಸಹ ಒಂದು ಪ್ರಾಣಿಯೋ ವಸ್ತುವೋ ಎಂದು ಭಾವಿಸಿ ಬಡಿದಿರುವ ಆತ ತನ್ನ ಮನದಲ್ಲಿ ತನ್ನ ಕೃತ್ಯಕ್ಕಾಗಿ ಖಂಡಿತ ಮರುಗಿರುತ್ತಾನೆಯೇ..?      ಜನಪದದ ಕಾಲ ನಿರ್ಣಾಯಕವಾಗಿಲ್ಲ. ನೂರಾರು ವರ್ಷಗಳಿಂದಲೂ ಹುಟ್ಟಿ ಹರಿದು ಬಂದಿರುವ ಜನಪದ ತೊರೆಯ ಮೂಲ ಯಾವುದೆಂದು ಕಾಣುವುದು ಅಷ್ಟು ಸುಲಭವಲ್ಲ. ಹಾಗಾದ ಮೇಲೆ ಇಂತಹ ಜನಪದ ಹಾಡುಗಳಿಗೂ ಇಪ್ಪತ್ತೊಂದನೆಯ ಶತಮಾನದ ‘ಥಪ್ಪಡ್’ ನಂತಹ ಸಿನೆಮಾದಲ್ಲಿ ತೋರಿರುವ ಹೆಣ್ಣಿನ ಕುರಿತ ಅಸಡ್ಡೆಯ ಭಾವನೆಗೂ ಅವಿನಾಭಾವ ಸಂಬಂಧವಿದೆ. ಹಾಗಾದರೆ, ಅನಾದಿಯಿಂದ ಇಂದಿನವರೆಗೂ ಹೆಣ್ಣಿನ ಸ್ಥಿತಿಗತಿಯಲ್ಲಿ, ಆಕೆಯ ಕುರಿತ ಸಮಾಜದ ಮನೋಭಾವದಲ್ಲಿ ಬಹಳ ಸುಧಾರಣೆಯೇನೂ ಕಂಡಿಲ್ಲ ಎಂದಾಯಿತಲ್ಲವೇ..?     ಹೀಗೆ ಕೇಳುವ ಪ್ರಶ್ನೆಗಳನ್ನೂ ಅಪಹಾಸ್ಯಕ್ಕೆ ಗುರಿಮಾಡುವ  ಸಮುದಾಯದ ನಡುವೆ ಮಹಿಳೆಯರಿದ್ದಾರೆ. ಅಭಿಮಾನ, ಆತ್ಮಗೌರವ, ಸ್ವಾಭಿಮಾನ, ಸ್ವಾಭಿಪ್ರಾಯ ಮೊದಲಾದ ಪದಗಳಿಗೆ ಮಹಿಳೆಯರ ಪದಕೋಶದಲ್ಲಿ ಸ್ಥಾನ ನೀಡದವರ ನಡುವಲ್ಲಿ ಮಹಿಳೆಯರು ಛಲದಿಂದ ಬದುಕಬೇಕಿದೆ. ಅಂಥ ನಿರ್ಭಾವುಕ ಜನರ ನಿರ್ಲಕ್ಷ್ಯಕ್ಕಿಂತಲೂ ಭಾವುಕ ಮನಸ್ಸಿನ ಮಹಿಳೆಯರ ನಿರೀಕ್ಷೆಗಳು ಮಹತ್ವವಾದವು ಎಂಬುದನ್ನು ಅರಿಯಲು ‘ಥಪ್ಪಡ್’ ನಂತಹ ಸೂಕ್ಷ್ಮ ನಿರ್ದೇಶನದ ಚಿತ್ರವನ್ನು ಎಲ್ಲರೂ ನೋಡಬೇಕು.       ಇನ್ನು ‘ತಾಪ್ಸಿ ಪನ್ನು’ ಎನ್ನುವ ನಟನಾಲೋಕದ ಧ್ರುವತಾರೆ ತನ್ನಕಾಲದ ಇತರೆ ಹೀರೋಯಿನ್ ಗಿಂತ ಹೇಗೆ ಭಿನ್ನ, ಆಕೆ ನಟನೆಗೆ ಆರಿಸಿಕೊಳ್ಳುವ ಸಿನೆಮಾಗಳ ವಸ್ತು ವಿಷಯ ಎಷ್ಟು ಅರ್ಥಪೂರ್ಣ, ವೈವಿಧ್ಯವಾಗಿರುತ್ತವೆ ಮತ್ತು ಆಕೆಯ ನಟನೆ ಎಷ್ಟು ಸಹಜವಾಗಿರುತ್ತದೆ ಎಂಬುದನ್ನು ಆಕೆ ಅಭಿನಯಿಸಿರುವ ಸಿನೆಮಾ, ಕಿರುಚಿತ್ರ ( short films) ಗಳನ್ನು ನೋಡಿಯೇ ತಿಳಿಯಬೇಕು.    ‘ಥಪ್ಪಡ್’ ಕೇವಲ ಒಂದು ಸಿನೆಮಾ ಅಲ್ಲ ಅಥವಾ ‘ಮಡದೀಯ ಬಡಿದಾನ..’ ಎನ್ನುವುದು ಕೇವಲ ಒಂದು ದೈನಂದಿನ ಸಂಗತಿಯಲ್ಲ. ಈ ಲೇಖನದ ಮೂಲಕ ಆ ಕುರಿತ ವಿಚಾರವೊಂದನ್ನು ಆತ್ಮಶೋಧನೆಗೆ ಹಚ್ಚುವ ಪ್ರಯತ್ನ ಮಾಡಲಾಗಿದೆ. ಏಕೆಂದರೆ, ‘ಹೆಣ್ಣಿನ ಘನತೆ ಬಿಟ್ಟಿಬಿದ್ದಿಲ್ಲ…’ 

ಸಿನಿಮಾ Read Post »

ಇತರೆ

ಕಾದಂಬರಿಕಾರರು

ಉತ್ತಮ ಕಾದಂಬರಿಕಾರರು ಚಂದ್ರು ಪಿ.ಹಾಸನ  ಕುಂಬಾರ ಮಾಡಿದ ಕುಡಿಕೆಯಲ್ಲಿ ನಿಷ್ಕಲ್ಮಶ ಮನಸ್ಸಿನ ಎಣ್ಣೆ ತುಂಬಿ ಒಗ್ಗಟ್ಟಿನ ಬತ್ತಿಯನ್ನು ಹಚ್ಚಿದಾಗ ಆ ಕುಂಬಿಕೆಯು ದೀಪವೆಂಬ ಹೆಸರನ್ನು ಪಡೆಯುತ್ತದೆ.ಅದು ಹೊರಹೊಮ್ಮುವ ಪ್ರಶಾಂತ ಕಿರಣಗಳು ಅಡಗಿಸಿ ಕೊಳ್ಳುತ್ತಿರುವ ನಕಾರಾತ್ಮಕತೆಯನ್ನು ಹೊಡೆದೋಡಿಸಿ ಧನಾತ್ಮಕತೆಯನ್ನು ತುಂಬುತ್ತದೆ. ಎಲ್ಲೆಡೆ ಪ್ರಶಾಂತತೆಯನ್ನು ಹೊಮ್ಮುತ್ತದೆ.ಇದರಿಂದ ಜೀವಿಗಳ ಚೈತನ್ಯ ಪ್ರಾಪ್ತಿಯಾಗುವುದಿಲ್ಲದೆ ಬೆಳವಣಿಗೆ ಹೊಸ ಜೀವಿಗಳ ಉದಯ ಹೀಗೆ ಪ್ರತಿಯೊಂದರಲ್ಲೂ ತನ್ನ ಸ್ಥಾನವನ್ನು ಬೆಳೆಸಿ ತನ್ನ ಸುತ್ತಲೂ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇಂತಹ ದೀಪದಂತೆ ಅಲ್ಲಲ್ಲಿ ಕಾದಂಬರಿಕಾರರು ಜನಿಸಿದ್ದು, ಆಧುನಿಕ ಕನ್ನಡ ಸಾಹಿತ್ಯದ ಸೊಗಡನ್ನು ಶ್ರೀಮಂತಗೊಳಿಸಿದಲ್ಲದೆ ಅವರ ಬರವಣಿಗೆಯಿಂದ ಸಮಾಜಕ್ಕೆ ಕನ್ನಡಿ ಹಿಡಿದು ಅದರ ಪ್ರತಿಬಿಂಬವನ್ನು ಎಲ್ಲಡೆ ತೋರಿಸುವಂತ್ತಾ,  ಉತ್ತಮ ಸಮಾಜದ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.          ಒಂದು ಉತ್ತಮ ಸಮಾಜ ರೂಪುಗೊಳ್ಳಬೇಕಾದರೆ ಈ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನ ವಾಗಬೇಕು. ಅವನಲ್ಲಿ ಮಾನಸಿಕ ಸ್ಪೂರ್ತಿಯನ್ನು ಚಿಮ್ಮುವಂತೆ ಮಾಡಿದಾಗ ನಾಗರಿಕ ಮಾನವನ ವಾತಾವರಣ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಮುಂದೆ ಕನ್ನಡಿ ಹಿಡಿದಾಗ ಎಲ್ಲಾ ನೈಜ ಚಿತ್ರಣವನ್ನು ಸಮಾಜಕ್ಕೆ ಪ್ರತಿಬಿಂಬಿಸುತ್ತದೆ. ಇಂತಹ ನಿಟ್ಟಿನಲ್ಲಿ ನಮ್ಮ ಕಾದಂಬರಿಕಾರರು ತಮ್ಮ ಬರವಣಿಗೆಯ ಮೂಲಕ ಸಮಾಜದ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಉತ್ತಮ ಸಮಾಜದ ನಿರ್ಮಿತಿಗೆ ಇವರು ಕಾರಣಕರ್ತರಾಗಿದ್ದಾರೆ. ಅವುಗಳು ಹಳ್ಳಿಯ ಜನರ ಮೂಡ ಆಚಾರ-ವಿಚಾರಗಳನ್ನು ಹೇಳುವುದರ ಜೊತೆಗೆ ಅದರಿಂದಾಗುವ ಕೆಡುಕುಗಳ ಮೇಲೆ ವೈಚಾರಿಕ ಮನೋಭಾವ ಬರುವಂತೆ ತನ್ನ ಕಾದಂಬರಿಗಳಲ್ಲಿ ಚಿತ್ರಸಿದ್ದಾರೆ.            “ರವಿ ಕಾಣದ್ದನ್ನು ಕವಿ ಕಂಡ” ಎನ್ನುವಂತೆ ಕಾದಂಬರಿಕಾರನ ವೈಶಿಷ್ಟ್ಯವೇ ಅಂಥಹದ್ದು ಏಕೆಂದರೆ ಪದರಚನೆಯ ಸಾರಸ್ವತ ಲೋಕವು ವೈಭವೋಪೇತವಾಗಿದೆಯೆಂದರೆ ಅದರಲ್ಲಿ ಕಾದಂಬರಿಗಳ ಪಾತ್ರ ಬಹಳ ಹಿರಿದಾದದ್ದು. ಸಾಹಿತ್ಯದ ಪ್ರಕಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಆಯಾಮಗಳನ್ನು ಪಡೆದು ಕೊಂಡು ವರ್ತಮಾನದಲ್ಲಿ ಅಪ್ರಾಮಾಣಿಕತೆ ವಿರೋಧಿಸಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತವೆ.               ಕಾದಂಬರಿಯು ಉದ್ದವಾದ ನೀಲ ಕಥೆಯ ವಿಸ್ತೃತ ರೂಪ ವಲ್ಲ. ಸಂದೇಶವನ್ನು ನೀಡುವಂತಹ ಮತ್ತು ಮಾನವನ ಅಧ್ಯಯನಕ್ಕೆ ಒಂದು ಕೈಗನ್ನಡಿ. ಕೆಲವು ಪತ್ತೆದಾರಿ ಕಾದಂಬರಿಗಳಲ್ಲಿ ಸಮಾಜಕ್ಕೆ ಸಂದೇಶ ವನ್ನು ನೀಡುವಂತಹ ವಸ್ತುಗಳಿರುತ್ತವೆ.ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳನ್ನು ತುಂಬಿ ಪ್ರತಿಯೊಬ್ಬ ನಾಗರಿಕರಿಗೂ ಬರವಣಿಗೆ ಮೂಲಕ ಉತ್ತಮ ಮೌಲ್ಯವನ್ನು ತುಂಬಿಸುವಲ್ಲಿ ಕಾದಂಬರಿಕಾರ ನೆರವಾಗುತ್ತಾನೆ *ಪೂರ್ಣಚಂದ್ರ ತೇಜಸ್ವಿಯವರ* ‘ಮಹಾಪಲಾಯನ’ ಕಾದಂಬರಿಯು ಕೈದಿಯೊಬ್ಬ ಮಾನಸಿಕವಾಗಿ ಬದಲಾಗಿ ಉತ್ತಮ ಸಮಾಜದಲ್ಲಿ ಬರೆದುಕೊಳ್ಳುವ ಬಗ್ಗೆ, ಮತ್ತು ‘ಕಿರಿಗೂರಿನ ಗಯ್ಯಾಳಿಗಳು’ ಕಾದಂಬರಿಯಮೂಲಕ ರಾಜಕೀಯ ಪಿತೂರಿ ಅನಕ್ಷರಸ್ಥರ ಮೇಲೆ ನಡೆಯುವ ದೌರ್ಜನ್ಯ ಜಾತಿವ್ಯವಸ್ಥೆ ಗಳೆಂಬ ಸಮಾಜದ ಅನಿಷ್ಠ ಪದ್ಧತಿಗಳ ಮೇಲೆ ನಡೆಯುವ ಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಮೂಲಕಉತ್ತಮ ಸಮಾಜಕ್ಕೆ ಬದಲಾವಣೆಯ ಚೌಕಟ್ಟನ್ನು ತಮ್ಮ ಕಾದಂಬರಿಗಳಿಂದ ಓದುಗರಿಗೆ ಸಮಾಜಕ್ಕೆ ಅರಿವಿನ ಮಾರ್ಗವನ್ನು ತಿಳಿಸಿದ್ದಾರೆ.       *ಕುವೆಂಪು* ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಸ್ವತಂತ್ರಪೂರ್ವದಲ್ಲಿ ಮಲೆನಾಡು ವೈಚಾರಿಕತೆ ಮತ್ತು ಅರಿವಿನ ಜನಜೀವನ ಮತ್ತು ಆಲೋಚನೆಗಳ ಬಗ್ಗೆ ಇನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಮಿನಿ ಕಾದಂಬರಿ ಅಂತರ್ಜಾತಿ ವಿವಾಹ ಮತ್ತು ಮಲೆನಾಡಿನ ಧಾರ್ಮಿಕ ಪರಂಪರೆಯ ಮೇಲೆ ಸಾಮಾಜಿಕವಾಗಿ ಬೆಳಕು ಚೆಲ್ಲುತ್ತದೆ.      ಕಾದಂಬರಿಕಾರರಲ್ಲಿ ಸಮಾಜದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ತಂದು ಅಪಾರ ಯಶಸ್ಸು ತಂದವರಲ್ಲಿ *ಅ ನ ಕೃ* ಅವರು ಕೂಡ ಒಬ್ಬರು ‘ಕಾದಂಬರಿಗಳ ಸಾರ್ವಭೌಮ’ ಎಂದು ಖ್ಯಾತಿ ಪಡೆದಿದ್ದವರು. ಅವರ ತೊಂಬತ್ತಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳಾಗಿದ್ದು, ಇವುಗಳಲ್ಲಿ ಸಮಕಾಲೀನ ಜೀವನದ ಬೇರೆ ಬೇರೆ ಮುಖಗಳನ್ನು ತೋರಿಸಿದ್ದಾರೆ. ಕಲಾವಿದರ ಸಮಸ್ಯೆಗಳು, ಆಧುನಿಕ ವಿದ್ಯಾಭ್ಯಾಸದ ಪರಿಣಾಮ, ಭಾರತೀಯ ಸಂಸ್ಕೃತಿಯ ಮೌಲ್ಯಗಳ ಮಹತ್ವ, ಅವಿಭಕ್ತ ಕುಟುಂಬ ಜೀವನ, ಒಡೆಯುತ್ತಿರುವ ಬದುಕು, ವೇಶ್ಯಾ ಸಮಸ್ಯೆ , ಲಂಚಗುಳಿತನ, ಸ್ತ್ರೀ-ಸ್ವಾತಂತ್ರ್ಯ , ಜೈಲುಗಳ ಸುಧಾರಣೆ, ದಾಂಪತ್ಯ ವಿಚ್ಛೇದನ , ಜಾತೀಯತೆಯ ಭೂತ,  ರಾಜಕೀಯ ದೊಂಬರಾಟ, ಪವಿತ್ರ ಪ್ರೇಮ, ಕೊಳಚೆಯ ಕಾಮ, ಪಾನಿರೋಧದ ಸಮಸ್ಯೆ, ಶ್ರೀಮಂತಿಕೆಯ ಡೌಲು, ಬಡತನದ ದಾರುಣತೆ, ಪೂರ್ವ-ಪಶ್ಚಿಮಗಳ ಸಂಗಮ, ಧಾರ್ಮಿಕತೆಯ ಸೋಗು, ಆಡಳಿತದ ಆರ್ಭಟಗಳು, ಸ್ವಾತಂತ್ರ್ಯದ ಕಿಚ್ಚು , ಬದುಕಿನ ಮೇಲೆ ವಿಜ್ಞಾನದ ಪ್ರಭಾವ , ಹೀಗೆ ನಾನಾ ಸಂಗತಿಗಳ ಕುರಿತು ತಮ್ಮ ಕಥನ ಕೌಶಲ, ನಿರರ್ಗಳವಾದಶೈಲಿ ಮತ್ತು ಸಂಭಾಷಣೆಯ ಚಾತುರ್ಯ ಇವುಗಳಿಂದ ಜನಮನಸೆಳೆದ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅವರ ಮೇಲೆ ಅಶ್ಲೀಲತೆಯ ಆರೋಪ ಬಂದಾಗ ದೂರಮಾಡಲು ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಕಾದಂಬರಿಯಲ್ಲಿ ಸೂಳೆಯ ಸುಖದುಃಖಗಳನ್ನು ಮತ್ತು ನಾರಿಯ ಸಂಸ್ಕೃತಿ ಎತ್ತಿಹಿಡಿಯಲು ಇರುವ ನಾರಿ ಪಾತ್ರಗಳನ್ನು ಹಲವಾರು ಕಾದಂಬರಿಗಳಲ್ಲಿ ಅರ್ಥೈಸಿದ್ದಾರೆ.      ತ್ರಿವೇಣಿಯವರ ‘ಶರಪಂಜರ’ ಕಾದಂಬರಿಯಲ್ಲಿ ಇನ್ನೊಬ್ಬಳ ಮಾನಸಿಕ ಗೊಂದಲ ಹಾಗೂ ನೋವುಗಳನ್ನು ಮತ್ತು ಗುಣ ಹೊಂದಿದರು ಸಮಾಜದ ದೃಷ್ಟಿಕೋನವು ಹೇಗಿರುವುದು ತಿಳಿಸಿದ್ದಾರೆ              ಗಿರೀಶ್ ಕಾರ್ನಾಡರ ‘ನಾಗಮಂಡಲ’ ಸಾಮಾಜಿಕ ಜೀವನ ಜನರ ಸ್ಥಿತಿಗತಿ ಮತ್ತು ಕಳಕಳಿಯನ್ನು ಜೀವನವೆಲ್ಲ ಸಮಾಜಕ್ಕೆ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಹಿಸುತ್ತವೆ.         ಅನಂತ    ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಸಾಮಾಜಿಕ ಜಾತಿ ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ನಡೆದಿದೆ.        ಕಾರಂತರ ಸಾಮಾಜಿಕ ಕಾದಂಬರಿಗಳಾದ ‘ಯಕ್ಷಗಾನ ಬಯಲಾಟದಲ್ಲಿ’ ಸಾಮಾಜಿಕ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಾಗುತ್ತದೆ ‘ಬೆಟ್ಟದಜೀವ’ ಇದರಲ್ಲಿ ಮಲೆನಾಡಿನ ವೃದ್ಧ ದಂಪತಿಗಳ ಜೀವನ ಪರಿಸರದ ಮೇಲೆ ಇರುವ ಕಾಳಜಿ ಬಿಂಬಿಸುತ್ತದೆ. ‘ಚೋಮನದುಡಿ’ ಕಾದಂಬರಿಯಲ್ಲಿ ಬರುವ ಪಾತ್ರಗಳು ಜಾತಿ-ಮತ ಮೇಲು-ಕೀಳು ತೊಲಗಲಿ ಎನ್ನುತ್ತಾ ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.  ಹೀಗೆ ಕಾದಂಬರಿಯಲ್ಲಿ ಸೃಷ್ಟಿಸುವ ಪ್ರತಿಯೊಂದು ಪಾತ್ರಗಳು ಆಗಿರಬಹುದು ಸಂದೇಶಗಳ ಆಗಿರಬಹುದು ಪ್ರತಿಯೊಂದು ಅರ್ಥಪೂರ್ಣ. ಇಲ್ಲಿ ಚಿತ್ರಿಸುವ ಘಟನೆ ಸನ್ನಿವೇಶ ಸಂಬಂಧಗಳ ಮೂಲಕ ವಾಸ್ತವ ಸಂಗತಿಗಳನ್ನು ಮರೆಮಾಚದೆ ಸತ್ಯ ನಿಷ್ಠೆಗೆ ಬೆಲೆ ಕೊಟ್ಟಂತಹ ಕಾದಂಬರಿಕಾರರು ಬರಹದ ಮೂಲಕ ಆದರ್ಶ ಕನಸುಗಳನ್ನು ಎತ್ತಿಹಿಡಿದಿದ್ದಾರೆ. ಅದನ್ನು ಸ್ವೀಕರಿಸುವ ಜನರು ಆಧುನಿಕ ಪ್ರಜ್ಞೆಯೂ ಬದುಕಿನಲ್ಲಿ ಸವಾಲಾಗಿ ಮನಸ್ಸಿನ ಆಳಕ್ಕೆ ಧೈರ್ಯ ತುಂಬಬಹುದು. ಮಾನವನ ಸಮಾಜ ಕುಟುಂಬ ವ್ಯಕ್ತಿ ಪರಿಸರ ಶಾಲೆ ಮೈದಾನ ಸಾಹಿತ್ಯ ಕೃಷಿ ಸಂಸ್ಕೃತಿ ಬದುಕು ಸಮಾಜಸೇವೆ ಪ್ರಕೃತಿಯೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಾದಂಬರಿಕಾರರು ಮನದಲ್ಲಿ ನೆಲೆಸುವಂತೆ ಬರೆದು ಸಮಾಜದಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರ, ಮೋಸ ವಂಚನೆ, ದಬ್ಬಾಳಿಕೆ, ಜಾತೀಯತೆ, ಮೂಡನಂಬಿಕೆಗಳು ಹೀಗೆ ಹಲವಾರು ಅಹಿತಕರ ಘಟನೆಗಳನ್ನು ಎದುರಿಸುವ ಬಗೆಯನ್ನು ದಾರದಷ್ಟೇ ಎಳೆಎಳೆಯಾಗಿ ಬರೆದಿರುತ್ತಾರೆ. ಪ್ರೇಮದ ಹಾದಿ, ಮೋಸದ ಹಾದಿ, ಸೋತೋನು ಮುಂದೆ ಗೆದ್ದು ಬಂದ ಹಾದಿ, ಹೆತ್ತು ಹೊತ್ತು ತುತ್ತು ನೀಡಿದವರು ಮತ್ತು ಮುತ್ತುನೀಡಿದವರು ಇವರಿಬ್ಬರಿಗೂ ನ್ಯಾಯ ಒದಗಿಸಿ ಅನುಸರಣೆಯಿಂದ ಕುಟುಂಬದ ಯಶಸ್ಸಿನ ಹಾದಿ ಎಂಬುದನ್ನು ತೋರುವಂತೆ ಇರುತ್ತವೆ. ಇದು ಕೇವಲ ಸಾಹಿತ್ಯ ವಾಗಿರದೆ ಒಂದು ಸಾಮಾಜಿಕ ನೆಲೆಗಟ್ಟಿನಲ್ಲಿ ವಾಸಿಸುವ ಜನರ ಜೀವನ ಭಾಷಾ ಸೊಗಡು ಆಚಾರ-ವಿಚಾರಗಳು ಸಂಸ್ಕೃತಿಗಳ ಇತಿಹಾಸ ಭಾವಗಳು ಹೀಗೆ ಪ್ರತಿಯೊಂದರಲ್ಲೂ ಮನೋಜ್ಞವಾಗಿ ಚಿತ್ರಿಸುವುದರ ಜೊತೆಗೆ, ಆ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದ್ದರಿಂದ ಮೊದಲೇ ತಿಳಿಸಿದಂತೆ ಕಾದಂಬರಿಕಾರರು ಉತ್ತಮ ಸಮಾಜದ ಯುವ ಪೀಳಿಗೆಗೆ ಕನ್ನಡಿ ಎಂದು ಹೇಳಿದರೆ ತಪ್ಪಾಗಲಾರದು.

ಕಾದಂಬರಿಕಾರರು Read Post »

ಕಾವ್ಯಯಾನ

ಕಾವ್ಯಯಾನ

ಜಿಂಕೆಗೆ ಜೀವ ಬರಲು ಧಾಮಿನಿ ಪ್ರಿಯಾ ಜಿಂಕೆಯಂತೆ ಚಿಮ್ಮುತ್ತಿದ್ದೆನು ನಾನು ಕಾರಣ ನೀನು ನನ್ನ ಸಹಕಾರದಿಂದಲೇ ಮುಗಿದಿತ್ತೆಲ್ಲ ಜೀವನ ಪೂರ್ತಿ ನಡೆಯುವಂತದ್ದಲ್ಲ ಮೈಮೇಲೆ ಹರಿದಾಡಿದಂತೆ ಹಾವು ಮುದಗೊಳಿಸುವಂತ ಕಾವು ಹಾವಿನೊಂದಿಗೆ ಸರಸವೇ ನಾಗಮಂಡಲ ನೋಡಿಲ್ಲವೇ ಬೆಣ್ಣೆಯಂತಹ ಮೈ ಕರಗಿತ್ತಲ್ಲಾ ಸೈ ಕೈ ಕಾಲುಗಳಿಗೆ ಎಂತದೋ ಹುರುಪು ಇಲ್ಲಿ ಬಲಾತ್ಕಾರವಿಲ್ಲ ಸಮರ್ಪಣೆಯೇ ಒನಪು ಜಿಂಕೆಯಂತೆಯೇ ಗಾಬರಿಯಾಗಿದ್ದೆನಾ ಕಾರಣ ನೀನೇನಾ ? ಎಂತಾ ಅದ್ರಷ್ಟವಂತೆಯೇ ನೀ ಇವನನ್ನು ಇವನೇ ಎಂದುಕೋ ಬೇಡ ಬಿಡಿ ಇಲ್ಲಿ ಅವನೇತಕೋ ಏನೂ ಕಡಿಮೆಯಿಲ್ಲ ಸಂಭ್ರಮಕೋ ಈಗ ಅವನ ನೆನೆವುದೂ ಬೇಡ ಇವಳ ಹೋಲಿಕೆಯೂ ಬೇಡ ಇಬ್ಬರೂ ಒಬ್ಬರ ಮುಂದೊಬ್ಬರು ಪ್ರತ್ಯಕ್ಷವಾಗಿದ್ದೇವಲ್ಲ ಈಗ ಜೀವಂತ ಜಿಂಕೆ ನಾನು ಜಿಂಕೆಗೆ ಜೀವ ಕೊಟ್ಟ ಉಸಿರು ನೀನು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಾರೆಗಣ್ಣು ಸ್ವಭಾವ ಕೋಳಗುಂದ ಪಾದಗಳು ಬಿರುಕು ಬಿಟ್ಟಿವೆ ನೆರಕೆ ಬಳಿದು ವರ್ಷವಾಗುತ್ತಾ ಬಂತು ದೀಪದ ಕಮಟು ಆರಿಲ್ಲ ಓರೆ ಕದ ಮುಚ್ಚಿಲ್ಲ ಪದೇ ಪದೇ ಗುಯ್ಗುಡುವ ಸೊಳ್ಳೆ ರೇಗಿಸುತ್ತಲೇ ತಾಳ್ಮೆಗೆ ಸವಾಲು ಇನ್ನೂ ಕುದಿ ಬಂದಿಲ್ಲ ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು ಅದರ ಗೊಣ್ಣೆ ಆಗಾಗ ಇಣುಕುತ್ತ ಸ್ವಾರೆಗೂ ಗಂಗ್ಳಕ್ಕೂ ಕಣ್ಣು ಕೊಂಡಿ ಹಾಕುತ್ತಿದೆ ಉರಿಯದ ಹೊಲೆ, ಹಾಲಿಲ್ಲದ ಮೊಲೆ ಹರುಕು ಅಂಗಿ ಹಸಿವಿನ ಜೊತೆ ಕಾದು ಕಾದು ಸೋತಿತ್ತು ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು ಅವನ ಜೇಬೋ ನಕ್ಷತ್ರದೂರು ತಾರೆಯೂರ ಚಂದ್ರಣ್ಣ ಬೆಳಗು ಬಳಿಯೋ.. ಹಟ್ಟಿಯ ಹುಡುಗರ ಚ್ವಾಮಂದೇವರ ಮೆರವಣಿಗೆ ಹರಕೆ ಕುಣಿತ ತಟ್ಟೆಯ ಬಡಿತ ಹಾಳು ಬಾವಿಗೆ ಗಣೇಶ ಸಂಭ್ರಮ ಜೈ ಜೈ ಹೊಗೆ ಕಿಂಡಿಯ ಬೆಳಕಲ್ಲಿ ಜೇಡ ಹೆಣೆದ ಬಲೆಯಲ್ಲಿ ಹಲ್ಲಿಯ ಬೇಟೆ ಬುಡ್ಡಿ ಉರಿದು ಕತ್ತಲಿಗೆ ಕೇಡು ಮಾಡಿತ್ತು ದೂರ ಬೆಟ್ಟದ ಕನಸು ರಂಗೋಲಿಯ ಹಾಸಿತ್ತು ಮೂರು ಪಟ್ಟಿಗೆ ಕೈಲಾಸ ನಾಮಕ್ಕೆ ವೈಕುಂಟ ಕಾಯ್ವ ಊರ ಮಾರಿಗೆ ಕರಿ ಹುಂಜನ ಭೇಟೆಯ ಊಟ ಮಡಿ ಪೂಜಾರಿಯ ಕಾಲಿಗೆ ನಾಯಿ ಉಚ್ಚೆಯ ಮಜ್ಜನ ಮಾಡಿತ್ತು ಬೊಚ್ಚು ಬಾಯ ಅಜ್ಜಿ ಅಂಗಳದ ಕತೆಗೆ ಹೂಂಗುಡುವ ಹುಡುಗರ ಸಾಲು ************

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಮತ್ತೆ ಸಿಕ್ಕಿದ್ದಳು ವಸಂತ ಪ್ರಮೀಳಾ .ಎಸ್.ಪಿ. ನಿತ್ಯವೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಗಂಡನನ್ನು ಬೈದುಕೊಂಡೇ ಹೋಗುತ್ತೇನೆ.ಇವರಿಂದ ನನಗೆ ಸಮಯ ಮೀರಿತು,ಮನೆಗೆ ಬಂದ ಅತಿಥಿಗಳು ಹೊರಡಲು ಸಿದ್ಧರಾದರೂ ಅವರಿಗೆ ತಿಂಡಿ ಕಾಫಿ ಕೊಡಲು ಅದೇಶಿಸುತ್ತಾರೆ.ಇಲ್ಲವೋ ಹೊರಟ ಹೊತ್ತಿಗೆ ಚಹಾ ಕೇಳುತ್ತಾರೆ ಎಂದೆಲ್ಲಾ ಅಂದುಕೊಂಡು ಆತುರದಲ್ಲಿ ಹೋಗುವ ದಾರಿಯಲ್ಲಿ ಸಿಗುವ ಮನೆ ‘ವಸಂತಳದ್ದು’. ಸಂಜೆ ಬರುವ ವೇಳೆಗೆ ಬಾಗಿಲಲ್ಲಿ ನಿಂತು ಮುಗುಳ್ನಗೆ ಬೀರಿ ಮಾತು ಪ್ರಾರಂಭಿಸುತ್ತಾಳೆ.ಒಂದೊಂದು ದಿನಕ್ಕೆ ಒಂದೊಂದು ಘಟನೆ ಹೇಳಿಬಿಡುತ್ತಾಳೆ.ಹಾಗೆಂದು ಎಂದೂ ಸಂಪೂರ್ಣವಾಗಿ ಹೇಳಿದಳು ಎಂದಿಲ್ಲ.ಇಡೀ ಬೀದಿಯಲ್ಲಿ ಯಾರೊಂದಿಗೂ ಅವಳ ಮಾತಿಲ್ಲ.’ಬಜಾರಿ’ ಎಂಬ ಪಟ್ಟ ಅದ್ಯಾವಾಗ ಲೋ ಧಕ್ಕಿ ಬಿಟ್ಟಿದೆ ಅವಳಿಗೆ.ನನ್ನೊಂದಿಗೆ ಮಾತಿಗೆ ನಿಂತಾಗಲು ನಾನು ಕೇವಲ ಶ್ರೋತೃದಾರಳು.ಅವಳು ಹೇಳಿದ್ದನ್ನೆಲ್ಲಾ ಅವಲೋಕಿಸಿದಾಗ … ವಸಂತ ಬಡ ಕುಟುಂಬದ ಹೆಣ್ಣು ಮಗಳು.ಬದುಕು ಕಟ್ಟಿಕೊಳ್ಳಲು ಬೆಂಗಳೂರಿನ ಗಾರ್ಮೆಂಟ್ಸ್ ಸೇರಿದ್ದಳು.ಅಲ್ಲಿಯೇ ಅನ್ಯಜಾತಿಯ ಯುವಕನೊಂದಿಗೆ ವಿವಾಹ ವಾದ ಕಾರಣ ಎರೆಡೂ ಮನೆಯವರಿಗೂ ಬೇಡವಾಗಿದ್ದರು.ಈ ನಡುವೆ ಹುಟ್ಟಿದ ಮೊದಲನೇ ಮಗ ವಿಕಲಚೇತನ ನಾಗಿದ್ದ.ಇದರಿಂದಾಗಿ ಅವಳು ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಕುಟುಂಬ ನಿರ್ವಹಣೆ ಕಷ್ಟವಾಗಿ ಜಿಲ್ಲಾ ಕೇಂದ್ರವೊಂದಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ಜೀವನ ಪ್ರಾರಂಭಿಸಿದ್ದರು.ಮತ್ತೊಬ್ಬ ಮಗಳು ಹುಟ್ಟಿದಳು.ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ಈಗ ನಾಲ್ಕು ಜನರ ಕುಟುಂಬವಾಯ್ತು.ಗಂಡನೊಬ್ಬನೇ ದುಡಿಯಬೇಕಾಯ್ತು.ಹಾಗೂ ಹೀಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ‘ಗೋಬಿ ಮಂಚೂರಿ’ ಮಾರುವ ವ್ಯಾಪಾರ ಆರಂಭಿಸಿದರು. ನಾನು ಅವಳಿಗೆ ಸಿಕ್ಕ ದಿನವೆಲ್ಲಾ ಅದರದ್ದೇ ವಿಷಯ ಅವಳ ಬಾಯಲ್ಲಿ… ನನ್ನ ಗಂಡ ರಾಜನಂಗೆ ಬೆಳೆದವರು, ಅವರಿಗೆ ಕಷ್ಟ ಸುಖ ಏನು ಗೊತ್ತಿಲ್ಲ.ಬೆಳಿಗ್ಗೆ ನಾನೇ ಮನೆಯಲ್ಲಿ ಗೋಬಿ ತಯಾರಿಸಿ,ಬೇಕಾದ ಎಲ್ಲಾ ಸಿದ್ಧತೆ ಮಾಡಿ ಅವರನ್ನು ನೀಟಾಗಿ ಬಟ್ಟೆ ಹಾಕೊಂಡು ಹೋಗಿ ಮಾರಲು ಕಳಿಸ್ತಾ ಇದ್ದೇನೆ.ಅದಕ್ಕೆ ಹೆಚ್ಚು ಜನ ನಮ್ಮ ಅಂಗಡಿಯಲ್ಲಿ ಬಂದು ತಿನ್ನುತ್ತಾರೆ.ಒಂದೊಂದು ದಿನ ಒಂದು ಸಾವಿರ ರೂಪಾಯಿಗಳ ವ್ಯಾಪಾರ ಆಗುತ್ತೆ.ಹೆಂಡತಿ ಮಕ್ಕಳು ಎಂದರೆ ನನ್ನ ಗಂಡನಿಗೆ ಪ್ರಾಣ.ಎರೆಡು ಲೀಟರ್ ಹಾಲು ತಗೊ ಅಂತಾರೆ,ಹಣ್ಣು,ಬ್ರೆಡ್ಡು,ಬಿಸ್ಕತ್ ಇಲ್ಲದೆ ಮನೆಗೆ ಬರಲ್ಲ.ಬೇಕಾದಷ್ಟು ತಂದು ಹಾಕ್ತಾರೆ. ನನ್ನ ಅಪ್ಪ ಅಮ್ಮ ಕೈ ಬಿಟ್ಟರೂ ನನ್ ಗಂಡ ಕೈ ಬಿಡಲಿಲ್ಲ, ನನ್ನ ಎರೆಡೂ ಮಕ್ಕಳು ಹುಟ್ಟಿದಾಗ ಇವರೇ ಬಾಣಂತನ ಮಾಡಿದ್ರು.ಇಷ್ಟೊಂದು ಬಾಡಿಗೆ ಕಟ್ಟಿಕೊಂಡು ಇಂತಹ ಮನೆಯಲ್ಲಿ ಸಾಕಿಕೊಂಡು ಹೋಗ್ತಾ ಅವ್ರೇ….. ಹೀಗೆ ಸಾಲು ಸಾಲುಗಳಲ್ಲಿ ತನ್ನ ಸಂಸಾರದ ಬಗ್ಗೆ ಹೇಳ್ತಾ ಗಂಡನನ್ನು ಹೊಗಳು ತಿದ್ದಳು ವಸಂತ. ಬೆಳಿಗ್ಗೆ ನನ್ನ ಪತಿಯನ್ನು ಬೈಕೊಂಡು ಹೋಗೋ ನಾನು ಸಂಜೆ ಬರುವಾಗ ಅವಳ ಮಾತು ಕೇಳಿ ಸಂತೋಷ ಪಡುತ್ತಾ ಮನೆಗೆ ಬರುತ್ತಿದ್ದೆ. ಅವಳ ಮಕ್ಕಳ ಮುಖ ನೋಡಿ ನಕ್ಕು ಮಾತಾಡಿಸಿ ಮನೆಗೆ ಬಂದರೆ ನನಗೂ ಒಂದು ರೀತಿ ಸಮಾಧಾನ ಆಗುತಿತ್ತು. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ತಂದು ಕೊಡುತ್ತೇನೆ ಎಂದು ಹೇಳಿ ಬಂದಿದ್ದೆ.ಆದರೆ ಅವಧಿಗೆ ಮುಂಚೆಯೇ ಶಾಲೆಯ ಬಾಗಿಲು ಹಾಕಿತ್ತು.ಕರೊನಾ ಕಾರಣದ ಲಾಕ್ ಡೌನ್ ನಿಂದಾಗಿ ನಲವತ್ತು ದಿನಗಳಿಂದ ವಸಂತಳ ಮನೆ ಕಡೆ ಹೋಗಲೇ ಇಲ್ಲ. ನಿನ್ನೆ ಒಮ್ಮೆ ಹೋಗಿ ಮಕ್ಕಳ ನೋಡಿ ಬರೋಣ ಎಂದು ಹೋಗಿದ್ದೆ. ನನ್ನ ಕಂಡ ತಕ್ಷಣವೇ ಮಕ್ಕಳು ನಕ್ಕರು.ವಸಂತ ಮಾತು ಆರಂಭಿಸಿದಳು… . ಎರೆಡು ತಿಂಗಳಾಯ್ತು,ಬೀದಿ ಬದಿ ಅಂಗಡಿ,ಹೋಟೆಲ್ ಬಾಗಿಲು ಹಾಕಿ, ಕೈಲಿ ಒಂದು ರೂಪಾಯಿ ಇಲ್ಲ,ಬಾಡಿಗೆ ಕಟ್ಟಿಲ್ಲ,ಮಕ್ಕಳಿಗೆ ಹಾಲು,ಬ್ರೆಡ್,ಬಿಸ್ಕಿಟ್ ತರಲು ಆಗಿಲ್ಲ.ವಿಕಲಚೇತನ ಮಗನಿಗೆ ಮಾತ್ರೆ ತಂದಿಲ್ಲ.ಅತ್ತ ಅತ್ತೆ ಮನೆಯೂ ಇಲ್ಲ,ಇತ್ತ ತಾಯಿ ಮನೆಯೂ ಇಲ್ಲ. ಗಂಡನಿಗೆ ಕೆಲಸ ಇಲ್ಲ.ಅಕ್ಕಿ ಬೇಳೆ ಬಿಟ್ಟರೆ ಬೇರೇನೂ ಇಲ್ಲ. ನನ್ನ ಗಂಡ ಎಲ್ಲಾ ಕಡೆ ಹೋಗಿ ಕೆಲಸ ಹೋಗಿ ಕೇಳಿದ್ರೂ… ಎಲ್ಲೂ ಕೆಲಸ ಸಿಗಲಿಲ್ಲ. ಮೊನ್ನೆಯಷ್ಟೇ ಹಾಲಿನ ಡೈರಿ ಯ ಲಾರಿಯಲ್ಲಿ ಹಳ್ಳಿ ಹಳ್ಳಿಗೆ ದನಗಳ ಮೇವು ಇಳಿಸಲು ಹೋಗುತ್ತಿದ್ದಾರೆ.ದಿನಕ್ಕೆ ಇನ್ನೂರು ಐವತ್ತು ರೂಪಾಯಿ ಕೊಡ್ತಾ ಇದ್ದಾರೆ. ಬೆನ್ನ ಮೇಲೆ ಮೂಟೆ ಹೊತ್ತು ಬೆನ್ನೆಲ್ಲಾ ಬರೆ ಬಂದಿದೆ ನೋಡಿ ಎಂದು ಕಣ್ಣಲ್ಲಿ ನೀರು ಸುರಿಸುತ್ತಾ ತನ್ನ ಗಂಡನ ಶರ್ಟ್ ಎತ್ತಿ ಬೆನ್ನು ತೋರಿಸಿದಳು.ಮಕ್ಕಳು ಬಡ ವಾಗಿ ಹೋಗಿವೆ ಎಂದು ದುಃಖಿಸಿದಳು. ಇಷ್ಟು ದಿನ ಉಳಿಸಿದ ಹಣ ಎಲ್ಲಿ? ಎಂದೆ. ಚೀಟಿ ಹಾಕಿದ್ದೆವು.ಅವನು ಈಗ ದುಡ್ಡಿಲ್ಲ ಎಂದುಬಿಟ್ಟ ಎಂದಳು.ಬಾಡಿದ ಅವಳ ಮುಖ,ಕತ್ತು ಬಗ್ಗಿಸಿ ಕುಳಿತ ಅವಳ ಗಂಡನ ನೋಡಿ ಮನಸ್ಸು ಭಾರವಾಯಿತು. ಆರಕ್ಕೇರದ,ಮೂರಕ್ಕಿಳಿಯದ ನನ್ನ ಸಂಬಳದಲ್ಲಿ ನಾನಾದರೂ ಏನು ಸಹಾಯ ಮಾಡಲಿ?? ಅವರಿಬ್ಬರ ಮೊಬೈಲ್ ಗೆ ಕರೆನ್ಸಿ ಹಾಕಿಸಿದೆ.ಮಕ್ಕಳಿಗೆ ಬಿಸ್ಕಿಟ್ ತಂದು ಕೊಟ್ಟು ಮನೆ ಕಡೆ ಹೆಜ್ಜೆ ಹಾಕಿದೆ. ರಾತ್ರಿ ನಿದ್ದೆ ಸುಳಿಯಲಿಲ್ಲ. ಕಾಣದ ಜೀವಿಯೊಂದು ಅದೆಷ್ಟು ಜನರ ಜೀವನವನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಬದುಕಿದವರನ್ನು ಬರಿದಾಗಿಸಿದೆ… ಅಲ್ಲವೇ… ******

ಪ್ರಸ್ತುತ Read Post »

ಅನುವಾದ

ಅನುವಾದ ಸಂಗಾತಿ

ಮೂಲ ಕವನ ಡಾ.ಶಿವಕುಮಾರ್ ಮಾಲಿಪಾಟೀಲ,ಗಂಗಾವತಿ ಅವರ “ದೇವರು ಹೇಳುತ್ತಿದ್ದಾನೆ ವಿಶ್ರಾಂತಿ ಪಡೆಯಿರಿ” ಇಂಗ್ಲೀಷಿಗೆ ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಮೂಲ ಮತ್ತು ಅನುವಾದಿತ ಕವಿತೆಗಳೆರಡನ್ನೂ ಇಲ್ಲಿ ನೀಡಿದೆ ದೇವರು ಹೇಳುತ್ತಿದ್ದಾನೆ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಗುಡಿ, ಗುಂಡಾರ, ಮಸೀದಿ, ಚರ್ಚೆಗಳಿಗೆ ಬಹಳಷ್ಟು ಅಲೆದಿದ್ದಿರಿ, ಮನವಿಲ್ಲದೆ ನನ್ನನ್ನು ಬಹಳಷ್ಟು ಹುಡುಕಿದ್ದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ ಕಾಯಕ ಬಿಟ್ಟು ಸಾಮೂಹಿಕ ಭಜನೆ, ಪ್ರಾರ್ಥನೆ ಏನೇನೋ ಜಾತ್ರೆ ,ಉತ್ಸವಗಳನ್ನು ಮಾಡಿದಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಅನ್ನ ,ಆಹಾರವಿದ್ದರೂ ಎಲ್ಲಾ ಪ್ರಾಣಿಗಳನ್ನು ತಿಂದು ತೇಗಿದಿರಿ ,ಅನ್ನ ಚೆಲ್ಲಿದಿರಿ, ಈಗ ಮನೆಯಲ್ಲಿಯೇ ತಿನ್ನುತ ವಿಶ್ರಾಂತಿ ಪಡೆಯಿರಿ. ಒಂದು ನಿಮಿಷವು ಸಮಯವಿಲ್ಲವೆಂದು ಒತ್ತಡದಲ್ಲಿ ಅಲೆಯುತ್ತಿದ್ದಿರಿ, ಅನ್ನ ನಿದ್ದೆ ಇಲ್ಲದೆ ಆಸ್ತಿ ಮಾಡಿದ್ದಿರಿ ಸಾಕೀಗ ನೀವು ವಿಶ್ರಾಂತಿ ಪಡೆಯಿರಿ. ಅತಿ ಆಸೆಗೆ ಬೆನ್ನು ಬಿದ್ದು ಸಜೀವಗಳನ್ನು ಸುಟ್ಟು ಸುಟ್ಟು ನಿರ್ಜೀವಗಳನ್ನು ಗಳಿಸಿ, ಗಳಿಸಿ ಇದ್ದಿದ್ದರಲ್ಲಿ ತೃಪ್ತಿ ಪಡದೆ ಅತೃಪ್ತರಾಗಿ ಅಂತರಂಗವ ಅಶುದ್ಧ ಮಾಡಿ ಬದುಕಿದ ನೀವೀಗ ವಿಶ್ರಾಂತಿ ಪಡೆಯಿರಿ. ಸ್ವಾರ್ಥದ ರಾಜಕಾರಣ, ಲಂಚದ ಉದ್ಯೋಗ, ವ್ಯಾಪಾರದ ಶಿಕ್ಷಣ, Marks ಒತ್ತಡದಲಿ ಮಕ್ಕಳು, ಹೆತ್ತವರು, ಗುರುಗಳು. ನಿರುದ್ಯೋಗ ಉತ್ಪಾದಿಸುವ ವಿಶ್ವ ವಿದ್ಯಾಲಯಗಳು ಸಾಕು ನೀವು ವಿಶ್ರಾಂತಿ ಪಡೆಯಿರಿ. ಪರಿಸರದ ಮೇಲೆ ನಿರಂತರ ದಾಳಿ ಮಾಡಿ, ವನ್ಯಜೀವಿಗಳನ್ನು ಕೊಂದಿರಿ, ಈಗ ನೀವು Zoo ನಲ್ಲಿ ಇದ್ದಿರಿ ಪ್ರಾಣಿ, ಪಕ್ಷಿಗಳನ್ನು ಮನೆಯಿಂದಲೇ ನೋಡುತ್ತ ವಿಶ್ರಾಂತಿ ಪಡೆಯಿರಿ. ಒಂದು ಬಸ್, ಟ್ರೇನ್, ಪ್ಲೈಟ್ Miss ಆದರೆ tension ತೊಗೊಂಡಿರಿ. ಜೀವನ ಮುಗಿದೆ ಹೋಯಿತು ಅಂದುಕೊಂಡಿರಿ ಅವು ಎಲ್ಲವು ಅಲ್ಲೆ ನಿಂತಲ್ಲೇ ನಿಂತಿವೆ ನೀವೀಗ ವಿಶ್ರಾಂತಿ ಪಡೆಯಿರಿ. ಟ್ರಾಫಿಕ್ ನಲ್ಲಿ ಹೆತ್ತವರು , ಪ್ಲೇ ಹೋಂ ನಲ್ಲಿ ಕಂದಮ್ಮಗಳು, ವೃದ್ದಾಶ್ರಮದಲ್ಲಿ ಅನಾಥಾಶ್ರಮದಲ್ಲಿ ಅಜ್ಜ ಅಜ್ಜಿ , ನಿಮ್ಮ ಮುಖ ಒಬ್ಬರನೊಬ್ಬರು ನೋಡುತಾ ನೀವೀಗ ವಿಶ್ರಾಂತಿ ಪಡೆಯಿರಿ. ಧರ್ಮದ ಹೆಸರಲ್ಲಿ ಅಧರ್ಮ, ಅತ್ಯಾಚಾರ ಎಸಗಿದಿರಿ, ನಮ್ಮ ಧರ್ಮವೇ ಶ್ರೇಷ್ಠ ಎಂದು ಕೂಗಾಡಿದಿರಿ ಜಗತ್ತನ್ನೇ ನಮ್ಮ ಧರ್ಮ ಆಳಬೇಕು ಎಂದಿರಿ ಭ್ರಮೆಯಲ್ಲಿ ಚೀರಾಡಿದ್ದು ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೊಟ್ಟಿರಿ ವರದಕ್ಷಿಣೆಗೆ ಹೆಣ್ಣನ್ನು ಸುಟ್ಟಿರಿ ಭ್ರೂಣ ಹತ್ಯೆ ಮಾಡಿದಿರಿ ಹೆಣ್ಣನ್ನು ದೇವರೆನ್ನುತ ಗುಡಿ ಹೊರಗೆ ಇಟ್ಟಿರಿ ಸಾಕು ನೀವೀಗ ವಿಶ್ರಾಂತಿ ಪಡೆಯಿರಿ. ಶ್ರೇಷ್ಠತೆಯ ಮದದಲ್ಲಿ ಜಾತಿ ಧರ್ಮದ ಗೋಡೆ ಕಟ್ಟುತ್ತ ಅಸಮಾನತೆಯಿಂದ ನಡೆದಿರಿ.. ಅಧಿಕಾರದ ಅಹಂಕಾರದಲ್ಲಿ ಅನ್ನದಾತನ ಮರೆತಿರಿ ಈಗ ಅನ್ನಕ್ಕಾಗಿ ಕೈ ಚಾಚುತ ವಿಶ್ರಾಂತಿ ಪಡೆಯಿರಿ. ದೇಶ ಭಕ್ತಿ ಹೆಸರಲ್ಲಿ ಬಡವರ ಮಕ್ಕಳನ್ನು ಗಡಿಯಲ್ಲಿ ನಿಲ್ಲಿಸಿ ಅತ್ತ ಶಾಂತಿ ಮಾತುಕತೆ ಎನ್ನುತ್ತಾ… ಇತ್ತ ಗಡಿಯಲ್ಲಿ ಯುವಕರನ್ನು ‌ಕೊಲ್ಲುತ್ತಾ , ಅವರ ಮಕ್ಕಳನ್ನು , ಹೆಂಡತಿಯನ್ನು ಅನಾಥ ಮಾಡುವ ಆ ಕಟುಕ ಗಡಿಗಳು ನಿಶ್ಯಬ್ದ ವಾಗಿವೆ ನೀವು ವಿಶ್ರಾಂತಿ ಪಡೆಯಿರಿ. ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುತ ಸ್ವರ್ಗ ಸೇರುತ್ತೇನೆ ಎನ್ನುವ ನರಹಂತಕರ ಬಣ್ಣ ಬಯಲಾಗಿದೆ ನಿಮ್ಮ ಮದ್ದು ಗುಂಡುಗಳ ಜೊತೆಗೆ ವಿಶ್ರಾಂತಿ ಪಡೆಯಿರಿ. ಭವಿಷ್ಯ ಹೇಳುವವರ ಭವಿಷ್ಯ ಈಗ ನನ್ನ ಕೈಯಲ್ಲಿದೆ , ದೇವರು, ಧರ್ಮದ ಹೆಸರಲ್ಲಿ ದುಡ್ಡು ಮಾಡಿದವರ ಪಟ್ಟಿ ನನ್ನಲ್ಲಿದೆ… ನನ್ನ ಪಟ್ಟಿ ಈಗ ಬಿಡುಗಡೆ ಮಾಡುತ್ತೇನೆ ನೀವೀಗ ವಿಶ್ರಾಂತಿ ಪಡೆಯಿರಿ. ಎಲ್ಲಾ ಗೆದ್ದೆ ಎನ್ನುತ್ತ ಅಟ್ಟಹಾಸದಿ ಮೆರೆದ ನೀವು ಈಗ ನಿಮ್ಮ ‌ಪ್ರಾಣ ಉಳಿದರೆ ಸಾಕು ಎನ್ನುತ ಅಲ್ಲೆ ನನ್ನನ್ನು ನೆನೆಯುತ್ತ ವಿಶ್ರಾಂತಿ ಪಡೆಯಿರಿ. ******* Now God is telling its enough and relax You have travelled a lot to the temples , mosques and churches searched for me without true devotion Now its enough and relax. Neglected your jobs and engrossed in community bhajans, prayers and in fairs and festivals Now its enough and relax. You butchered the animals even though you have rice and food. spilled the food carelessly. Now stay at home, eat and relax You were wandering under the pressure of not having enough time to earn. sacrificed your food and sleep and earned possession. Now its enough and relax. pursuing your desire you burnt the living and earned the non living things not being contented what you had but you lived a life of dissatisfaction and defiled your inward purity Now its enough and relax Selfish politics bribery in jobs. business like education children, parents and teachers all in the stress of high score . unemployment generating Universities Now its enough and relax You exploited the nature And destroyed the wildlife. Now you are in a zoo. watch the birds and animals through your houses and relax. You got tensed when you missed your bus, train or plight. and thought life almost over. all the things are there where they were So relax now. Parents in traffic kids in a playhome grandparents in an old age home or orphanages so now you both looking only at each other and relax. In the name of religion you commited mistakes and you cried out loud our religion is the greatest’ and preached out ‘our religion must rule the world’ Now stop this screaming in dillusion and relax. You divorced for petty reasons burnt woman alive for dowry. commited Feticide. you claimed ‘women are goddess’ but kept her out of the shrine. now its enough and relax. You built a barrier of caste and creed in a mood of hierarchy and maintained inequality. forgot the farmer with swollen head of power. Now stretch your arms for rice and relax In the name of petriotism the young ones of a poor family at the Borders. Inducing peace talk in one side. But an end to the life of youngsters at the borders on an another side and orphaned their family Those brutal borders are now silent. So you relax. In the name of religion, the pretenders who thought they could go to the heaven through the extermination of innocents, their true colour is demasked Now its enough and with your guns and bullets , you relax. Now the future of the foretellers is in my hand. The con artists who accumulated money in the name of devine, their list is with me. Now I release this list and you relax. You disntict yourself as you’re the conqueror of everything. But now you’re begging for your life. Now stay there where you are and mediate me and relax. ****************

ಅನುವಾದ ಸಂಗಾತಿ Read Post »

You cannot copy content of this page

Scroll to Top