ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮ ಅಂತರಂಗ

India Travel | Pictures: Lonely boat river ganga

ವೀಣಾ ರಮೇಶ್

ಮೌನದಲಿ ಅದೆಷ್ಟೋ
ಮಾತುಗಳನು
ಕಟ್ಟಿ ಹಾಕಿದ್ದೇನೆ ಗೆಳತಿ
ಏಕಾಂತದಲ್ಲಿ
ಒಂದಷ್ಟು ಪದಗಳಿಗೆ
ಮೌನದಲ್ಲೆ ತಿವಿದಿದ್ದೇನೆ
ಗೆಳತಿ

ಕಣ್ಣುಗಳು ಹೊಳೆಯಾಗಿವೆ
ಹರಿದು ಬಿಡಲೆ ದೋಣಿ
ನಿನ್ನ ನೆನಪಿನ ಹುಟ್ಟು ಹಾಕಿ
ಉಸಿರು ಕಟ್ಟಿದೆ ಪ್ರೀತಿ
ಎದೆಯ ಪಂಜರದಲಿ,
ಉಸಿರು ಬಿಡಲು ತತ್ವಾರ
ಎದೆಯ ಬಡಿತವೊಂದೇ ಉಳಿದಿದೆ

ಮೌನ ಪರದೆಯ ಹಿಂದೆ
ನಿನ್ನ ತುಂಟ ನಗು ಅಣಕಿಸುತ್ತಿದೆ
ಈ ಕತ್ತಲೆಯ ನೀರಸ ಮೌನ
ಒಂದಷ್ಟು ನಕ್ಷತ್ರಗಳ
ನುಂಗ ಬಾರದೆ

ಒಂದು ಸಿಹಿಮುತ್ತು,
ಒಂದು ಸಿಹಿ ನಗುವಿಗೆ
ಬಾಚಿ ತಬ್ಬಿಕೊಳ್ಳಲು,
ನೆನಪಿನ ಕಂಬಳಿ ಯೊಳಗೆ
ಬಚ್ಚಿಟ್ಟು ಕೊಳ್ಳಲು
ಯಾವ
ಅಂತರದ ಗೊಡವೆಯು ಇದು?

******

About The Author

Leave a Reply

You cannot copy content of this page

Scroll to Top