ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿಶೆಯನರಿಸಿ

Frozen Wave Against Sunlight

ಶಾಲಿನಿ ಆರ್.

ನಿಶೆಯರಸಿ

ನೇಸರ ಹೊಂಟ್ಯಾನ
ನಿಶೆಯರಸಿ ಬಂದಾಳಾ
ಸಂತೆಯೊಳಗೆ ಸದ್ದಿಲ್ಲದಂತೆ

           ಬದುಕ ಅಡವಿಯಿದು
           ಬೆತ್ತಲಾಗಿಹುದಿಲ್ಲಿಮನದ
           ಭಾವಗಳು ಗುಟ್ಟುರಟ್ಟಾಗಿ
           ಹರಿದಿಹುದಿಲ್ಲಿ ಈ ಹೊತ್ತು

ಸರಸ ವಿರಸಗಳ ಸಮ ರಸ
ಸಮ್ಮಿಳಿತದ ಭಾವ ಆ ಸುಖದ
ನೋವ ಅನುಭವಿಸಿ ಅರಗಿಸಿ
ಕನವರಿಸಿ ಮಾನಿನಿ ಸರಸಿ

            ಅಂಚಿಲ್ಲದ ಸೆರಗಿಲ್ಲದ
            ಸವಿನೆನಪ ಪಾಚಿಯ ಹೊದ್ದು
            ಅಂಟಿಯು ಅಂಟದಿಹ ಬಾಳ
            ಗದ್ದುಗೆಯಲಿ ನೆಮ್ಮದಿಯ  ನಿದಿರೆಗೆ ಮರುಳಾಗಿ ಮಲಗಿಹಳಿಲ್ಲಿ ಸುಖನಾಶಿನಿ…

******

About The Author

Leave a Reply

You cannot copy content of this page

Scroll to Top